Tag: ಡೆಲ್ಟಾ ಪ್ಲಸ್

  • ಗೋವಾದಲ್ಲಿ ಮೊದಲ ಡೆಲ್ಟಾ ಪ್ಲಸ್ ಸೋಂಕು ಪತ್ತೆ

    ಗೋವಾದಲ್ಲಿ ಮೊದಲ ಡೆಲ್ಟಾ ಪ್ಲಸ್ ಸೋಂಕು ಪತ್ತೆ

    ಪಣಜಿ: ದಕ್ಷಿಣ ಗೋವಾದಲ್ಲಿ ಕೋವಿಡ್ ರೂಪಾಂತರಿ ಡೆಲ್ಟಾ ಪ್ಲಸ್ ಮೊದಲ ಪ್ರಕರಣ ಪತ್ತೆಯಾಗಿದ್ದು, ಮತ್ತೆ ಕೊವೀಡ್ ಆತಂಕ ಹೆಚ್ಚಾಗಿದೆ.

    ಗೋವಾದಲ್ಲಿ ಕೋವಿಡ್ ಸೋಂಕು ದೃಢಪಟ್ಟ ಹಾಗೂ ರೂಪಾಂತರಿ ಕೋವಿಡ್ ಸೋಂಕಿನ ಶಂಕಿತರ ಮಾದರಿಯನ್ನ ತಪಾಸಣೆಗಾಗಿ ಗೋವಾ ಆರೋಗ್ಯ ಇಲಾಖೆಯು ಪುಣೆಯ ಲ್ಯಾಬ್‍ಗೆ ಕಳುಹಿಸಿತ್ತು. ಈ ಪೈಕಿ ದಕ್ಷಿಣ ಗೋವಾದಿಂದ ಪುಣೆಗೆ ಕಳುಹಿಸಲಾಗಿದ್ದ, ಕೋವಿಡ್ ಸೋಂಕಿತ ವ್ಯಕ್ತಿಗೆ ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕು ತಗುಲಿರೋದು ದೃಢಪಟ್ಟಿದೆ. ರಾಜ್ಯದಲ್ಲಿ ಕೋವಿಡ್ ಸೋಂಕು ಇಳಿಕೆಯಾಗಿದೆಯಾದರೂ ಸದ್ಯ ಪತ್ತೆಯಾಗಿರುವ ಕೋವಿಡ್ ಸೋಂಕಿನ ರೂಪಾಂತರಿಯಿಂದಾಗಿ ಆತಂಕ ಸೃಷ್ಟಿ ಮಾಡಿದೆ.

    ಕೋವಿಡ್ ರೂಪಾಂತರಿ ಸೋಂಕು ತಪಾಸಣೆಗಾಗಿ ಗೋವಾದಲ್ಲಿ ಸೋಂಕಿತರ ಮಾದರಿ ಸಂಗ್ರಹಿಸಿ ಪುಣೆಯ ಲ್ಯಾಬ್ ಗೆ ಕಳುಹಿಸಿ ಅಲ್ಲಿಂದ ತಪಾಸಣಾ ವರದಿ ಬರಲು ಹೆಚ್ಚಿನ ಸಮಯ ಹಿಡಿಯುತ್ತದೆ. ಅಷ್ಟು ದಿನಗಳಲ್ಲಿ ಸೋಂಕಿತ ವ್ಯಕ್ತಿಯಿಂದ ಸೋಂಕು ಬೇರೆಯವರಿಗೆ ಹರಡುವ ಸಾಧ್ಯತೆಯಿರುತ್ತದೆ. ಗೋವಾದಲ್ಲಿ ಪತ್ತೆಯಾಗಿರುವ ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕಿತ ವ್ಯಕ್ತಿ ಹಲವರಿಗೆ ಹರಡಿರುವ ಆತಂಕ ಸಹ ಎದುರಾಗಿದೆ. ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸೂಚನೆ – ಮೇಕೆದಾಟು ಯೋಜನೆಗೆ ಕೇರಳ, ಪುದುಚೆರಿಯಿಂದಲೂ ಕ್ಯಾತೆ

  • ಡೆಲ್ಟಾ ಪ್ಲಸ್ ವಿರುದ್ಧ ಕೊವ್ಯಾಕ್ಸಿನ್ ಪರಿಣಾಮಕಾರಿ: ಐಸಿಎಂಆರ್

    ಡೆಲ್ಟಾ ಪ್ಲಸ್ ವಿರುದ್ಧ ಕೊವ್ಯಾಕ್ಸಿನ್ ಪರಿಣಾಮಕಾರಿ: ಐಸಿಎಂಆರ್

    ನವದೆಹಲಿ: ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆ, ಡೆಲ್ಟಾ ಪ್ಲಸ್ ರೂಪಾಂತರಿ ವೈರಾಣು ವಿರುದ್ಧ ಪರಿಣಾಮಕಾರಿ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ಯ ಇತ್ತೀಚಿನ ಅಧ್ಯಯನ ತಿಳಿಸಿದೆ.

    ಕೊವ್ಯಾಕ್ಸಿನ್ ಲಸಿಕೆಯನ್ನು ಐಸಿಎಂಆರ್ ಮತ್ತು ರಾಷ್ಟ್ರೀಯ ವೈರಾಲಜಿ ಇನ್‍ಸ್ಟಿಟ್ಯೂಟ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಇದು ಕೋವಿಡ್-19 ವೈರಸ್ ವಿರುದ್ಧ ಶೇ.77.8ರಷ್ಟು ಮತ್ತು ಡೆಲ್ಟಾ ವೈರಾಣು ವಿರುದ್ಧ ಶೇ.65.2ರಷ್ಟು ಪರಿಣಾಮಕಾರಿ ಎಂದು ಹೇಳಲಾಗಿತ್ತು. ಆದರೆ ಕೊವೀಡ್-19 ರೂಪಾಂತರಿ ತಳಿಯಾದ, ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲ್ಪಟ್ಟಿರುವ ಡೆಲ್ಟಾ ಪ್ಲಸ್ ವೈರಾಣು ವಿರುದ್ಧವೂ ಇದು ಪರಿಣಾಮಕಾರಿಯಾಗಿ ಹೋರಾಡಬಲ್ಲದು ಎಂದು ಐಸಿಎಂಆರ್‍ ನ ಸದ್ಯದ ಅಧ್ಯಯನದಿಂದ ತಿಳಿದುಬಂದಿದೆ. ಇದನ್ನೂ ಓದಿ: ವುಹಾನ್‌ ಲ್ಯಾಬ್‌ನಿಂದ ಕೊರೊನಾ ವೈರಸ್‌ ಸೋರಿಕೆಯಾಗಿಲ್ಲ – ಡಬ್ಲ್ಯುಎಚ್‌ಒ ನಿಯೋಗ

    ಕೊವ್ಯಾಕ್ಸಿನ್ ಮೂರು ಹಂತದ ಕ್ಲಿನಿಕಲ್ ಪ್ರಯೋಗ ಆಗದಿದ್ದರೂ ಭಾರತದಲ್ಲಿ ತುರ್ತು ಬಳಕೆಗೆ ಅವಕಾಶ ನೀಡಲಾಗಿತ್ತು. ಇತ್ತೀಚೆಗಷ್ಟೇ ಭಾರತ್ ಬಯೋಟೆಕ್ ಸಂಸ್ಥೆ, ಕೊವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗದ ಫಲಿತಾಂಶ ಘೋಷಿಸಿತ್ತು. ಅದರ ಅನ್ವಯ ಈ ಲಸಿಕೆ ಲಕ್ಷಣ ಸಹಿತ ಕೊವೀಡ್-19 ಸೋಂಕಿನ ವಿರುದ್ಧ ಶೇ.77.8ರಷ್ಟು ಪರಿಣಾಮಕಾರಿ ಎಂದು ತಿಳಿಸಿತ್ತು. ಇದೀಗ ಡೆಲ್ಟಾ ಪ್ಲಸ್ ವಿರುದ್ಧವು ಪರಿಣಾಮಕಾರಿ ಎಂದು ವರದಿಯಾಗಿದೆ.

  • ಮಹಾರಾಷ್ಟ್ರದಿಂದ ರಾಯಚೂರಿಗೆ ಡೆಲ್ಟಾ ಆತಂಕ – ರೈಲು ನಿಲ್ದಾಣದಲ್ಲಿ ತೀವ್ರ ತಪಾಸಣೆ

    ಮಹಾರಾಷ್ಟ್ರದಿಂದ ರಾಯಚೂರಿಗೆ ಡೆಲ್ಟಾ ಆತಂಕ – ರೈಲು ನಿಲ್ದಾಣದಲ್ಲಿ ತೀವ್ರ ತಪಾಸಣೆ

    ರಾಯಚೂರು: ಡೆಲ್ಟಾ ಆತಂಕ ಹಿನ್ನೆಲೆಯಲ್ಲಿ ನಗರದ ರೈಲ್ವೇ ನಿಲ್ದಾಣದಲ್ಲಿ ಅಧಿಕಾರಿಗಳು ಕೊರೊನಾ ತಪಾಸಣೆಗೆ ಮುಂದಾಗಿದ್ದಾರೆ.

    ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಪ್ರಯಾಣಿಕರ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳು ಆದೇಶಕ್ಕೆ ಕೊನೆಗೂ ಎಚ್ಚೆತ್ತು ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರಿಗೆ ಕಡ್ಡಾಯವಾಗಿ ಕೊರೊನಾ ಟೆಸ್ಟ್ ಮಾಡುತ್ತಿದ್ದಾರೆ.

    72 ಗಂಟೆಯೊಳಗಿನ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಇದ್ದರೆ ಮಾತ್ರ ತಪಾಸಣೆಯಿಂದ ವಿನಾಯಿತಿಯಿದೆ. ನೆಗೆಟಿವ್ ವರದಿ ಇರದ ಎಲ್ಲಾ ಪ್ರಯಾಣಿಕರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ರೈಲ್ವೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದರಿಂದ ಮುಗಿಬಿದ್ದು ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದಾರೆ. ಮಹಾರಾಷ್ಟದಿಂದ ಬರುವ ರೈಲ್ವೆ ಪ್ರಯಾಣಿಕರನ್ನ ಮಾತ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಆರ್‌ಟಿಪಿಸಿಆರ್ ನೆಗೆಟಿವ್ ವರದಿ, 1 ಲಸಿಕೆ ಪಡೆದ ದಾಖಲೆ ಪರಿಶೀಲನೆ ಮಾಡಿ ಪ್ರಯಾಣಿಕರನ್ನ ಜಿಲ್ಲೆಯ ಒಳಗೆ ಬಿಡಲಾಗುತ್ತಿದೆ. ಇದನ್ನೂ ಓದಿ: ಫಿಲಿಪೈನ್ಸ್ ಮಿಲಿಟರಿ ವಿಮಾನ ದುರಂತ – 29 ಜನ ಸಾವು, 40ಕ್ಕೂ ಹೆಚ್ಚು ಜನರಿಗೆ ಗಾಯ

  • ಡೆಲ್ಟಾ ಪ್ರಕರಣದ ಬಗ್ಗೆ ಬಿಬಿಎಂಪಿ ಕಮಿಷನರ್ ಆತಂಕ

    ಡೆಲ್ಟಾ ಪ್ರಕರಣದ ಬಗ್ಗೆ ಬಿಬಿಎಂಪಿ ಕಮಿಷನರ್ ಆತಂಕ

    ಬೆಂಗಳೂರು: ನಗರದಲ್ಲಿ ಡೆಲ್ಟಾ ಪ್ರಕರಣಗಳು ಮಹಾ ಸ್ಫೋಟ ಆಗುತ್ತಿರುವ ಹೊತ್ತಲ್ಲೇ ಬಿಬಿಎಂ ಕಮಿಷನರ್ ಗೌರವ್ ಗುಪ್ತಾ ಆತಂಕಕಾರಿ ಹೇಳಿಕೆಯನ್ನು ನೀಡಿದ್ದಾರೆ. ಡೆಲ್ಟಾ ವೇರಿಯಂಟ್ ವೈರಾಣು ತಳಿ, 10 ಕೇಸ್ ಗಳು ದೃಢವಾದ್ರೆ, ಅದ್ರಲ್ಲಿ 6-7 ಕೇಸ್ ಗಳು ಡೆಲ್ಟಾ ಕೇಸ್ ಗಳು ಪತ್ತೆಯಾಗುತ್ತಿವೆ. ಎರಡನೇ ಅಲೆಯಲ್ಲಾದ ಸಾವು ನೋವುಗಳಿಗೆ ಇದರ ಹಬ್ಬುವಿಕೆಯೇ ಕಾರಣ ಎಂದು ಆತಂಕವನ್ನು ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ, ಡೆಲ್ಟಾ ವೆರಿಯಂಟ್ ಕೇಸ್ ಗಳ ಬಗ್ಗೆ ಮಾಹಿತಿಯನ್ನು ನೀಡಿದ್ದು, ಪ್ರತಿನಿತ್ಯದ ಕೊರೊನಾ ಸೋಂಕಿನ ಪ್ರಕರಣಗಳಲ್ಲಿ ಡೆಲ್ಟಾ ರೂಪಾಂತರ ವೈರಸ್‍ನ ಪ್ರಕರಣಗಳು ಪತ್ತೆಯಾಗುತ್ತಿವೆ. ಡೆಲ್ಟಾ ವೇರಿಯಂಟ್‍ನ ಮತ್ತೊಂದು ರೂಪವೇ ಡೆಲ್ಟಾ ಪ್ಲಸ್. ಜನರ ಕೈಯಲ್ಲಿಯೇ ಎಲ್ಲವೂ. ಜನರ ಸುರಕ್ಷತೆ ಮುಖ್ಯ. ಜನ ಗಾಬರಿ ಪಡುವಂತಹ ಅವಶ್ಯಕತೆಯಿಲ್ಲ ಎಂದರು. ಇದನ್ನೂ ಓದಿ: ಮೈಸೂರಲ್ಲಿ ಶೀಘ್ರವೇ ಡೆಲ್ಟಾ ಪ್ಲಸ್ ಪರೀಕ್ಷಾ ಲ್ಯಾಬ್ ಆರಂಭ

    ಬೆಂಗಳೂರಿನಲ್ಲಿ ಒಟ್ಟು 525 ಡೆಲ್ಟಾ ವೆರಿಯಂಟ್ ಪ್ರಕರಣಗಳು ಪತ್ತೆಯಾಗಿದ್ದು, ಸ್ಯಾಂಪಲ್ಸ್ ನ್ನು ನಿಮಾನ್ಸ್ ಹಾಗೂ ಎನ್‍ಸಿಬಿಎಸ್‍ಗೆ ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ ಜನರು ಆದಷ್ಟು ಸುರಕ್ಷತೆಯಿಂದ ಇರಬೇಕೆಂದು ಸಲಹೆ ನೀಡಿದರು.

  • ರಾಯಚೂರಿಗೂ ಡೆಲ್ಟಾ ಪ್ಲಸ್ ಆಂತಕ: ಪಾಲನೆಯಾಗದ ಜಿಲ್ಲಾಧಿಕಾರಿ ಆದೇಶ

    ರಾಯಚೂರಿಗೂ ಡೆಲ್ಟಾ ಪ್ಲಸ್ ಆಂತಕ: ಪಾಲನೆಯಾಗದ ಜಿಲ್ಲಾಧಿಕಾರಿ ಆದೇಶ

    ರಾಯಚೂರು: ಜಿಲ್ಲೆಗೂ ಈಗ ಡೆಲ್ಟಾ ಪ್ಲಸ್‍ನ ಆತಂಕ ಶುರುವಾಗಿದೆ. ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳಿಂದ ನಿತ್ಯ ಜನರ ಓಡಾಟ ಜೋರಾಗಿದೆ. ಅಲ್ಲದೆ ಮಹಾರಾಷ್ಟ್ರದಿಂದಲೂ ನೇರವಾಗಿ ಜಿಲ್ಲೆಗೆ ಜನ ಬರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಹೀಗಾಗಿ ಜಿಲ್ಲಾಧಿಕಾರಿಗಳೇನೋ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಆದ್ರೆ ಆದೇಶಗಳು ಮಾತ್ರ ಜಿಲ್ಲೆಯಲ್ಲಿ ಪಾಲನೆಯಾಗುತ್ತಿಲ್ಲ.

    ಮಹಾರಾಷ್ಟ್ರದ ಹಲವೆಡೆ ಡೆಲ್ಟಾ ಪ್ಲಸ್ ಕಾಣಿಸಿಕೊಂಡಿರುವುದರಿಂದ ರಾಯಚೂರಿನಲ್ಲಿ ಭಯ ಶುರುವಾಗಿದೆ. ಕೂಲಿ ಕಾರ್ಮಿಕರು ಸೇರಿದಂತೆ ಸಾಕಷ್ಟು ಜನ ಮಹಾರಾಷ್ಟ್ರದಿಂದ ಜಿಲ್ಲೆಗೆ ಬರುತ್ತಿರುವುದರಿಂದ ಜಿಲ್ಲಾಡಳಿತ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆಗೆ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದೆ. ಆದ್ರೆ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಅವರ ಆದೇಶ ಕೇವಲ ಕಾಗದದಲ್ಲೇ ಉಳಿದಿದ್ದು ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ ಹಾಗೂ ಅಂತರರಾಜ್ಯ ಗಡಿ ಚೆಕ್ ಪೋಸ್ಟ್ ಗಳಲ್ಲಿ ಯಾವುದೇ ತಪಾಸಣೆ ನಡೆದಿಲ್ಲ.

    ಬೆಳಗಾವಿ, ಬೀದರ್, ವಿಜಯಪುರ, ಕಲಬುರಗಿಯಿಂದ ಪ್ರತಿನಿತ್ಯ ಸಾಕಷ್ಟು ಜನ ಓಡಾಡುವುದು ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ. ಅಲ್ಲದೆ ಮಹಾರಾಷ್ಟ್ರದ ಮುಂಬೈ, ಪೂನಾ, ಸೊಲ್ಲಾಪುರ ಸೇರಿದಂತೆ ವಿವಿಧೆಡೆಯಿಂದ ನೇರವಾಗಿ ಜಿಲ್ಲೆಗೆ ಸಾಕಷ್ಟು ಜನ ಪ್ರತಿನಿತ್ಯ ಬರುತ್ತಾರೆ. ಹೀಗಾಗಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಚೆಕ್ ಪೋಸ್ಟ್ ಗಳಲ್ಲಿ ಕಾರ್ಯ ನಿರ್ವಹಿಸಲು ಜಿಲ್ಲಾಡಳಿತ ನೋಡಲ್ ಅಧಿಕಾರಿಗಳನ್ನ ನೇಮಕ ಮಾಡಿದೆ.

    ಗಿಲ್ಲೆಸುಗೂರು, ಶಕ್ತಿನಗರ, ರೈಲ್ವೇ ನಿಲ್ದಾಣ ಬಸ್ ನಿಲ್ದಾಣ ಸೇರಿದಂತೆ ಒಟ್ಟು ಜಿಲ್ಲೆಯ 11 ಚೆಕ್ ಪೋಸ್ಟ್ ಗಳಿಗೆ 22 ಜನ ನೋಡಲ್ ಅಧಿಕಾರಿಗಳನ್ನ ನೇಮಿಸಲಾಗಿದ್ದು, ಬೆಳಗ್ಗೆ 8 ರಿಂದ ರಾತ್ರಿ 8 ರ ವರೆಗೆ ಪ್ರತಿ ದಿನ ಕಾರ್ಯನಿರ್ವಹಿಸಲು ಜಿಲ್ಲಾಡಳಿತ ಸೂಚಿಸಿದೆ. 72 ಗಂಟೆಗಳ ಒಳಗೆ ಮಾಡಿಸಿರುವ ಆರ್ ಟಿ ಪಿ ಸಿ ಆರ್ ನೆಗೆಟಿವ್ ವರದಿ ಅಥವಾ ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ಪಡೆದಿರುವ ಪ್ರಮಾಣ ಪತ್ರವನ್ನ ಪ್ರಯಾಣಿಕರು ಹೊಂದಿರಬೇಕು. ಪೊಲೀಸ್ ಹಾಗೂ ಆರೋಗ್ಯ ಇಲಾಖೆಗೆ ವೈದ್ಯಕೀಯ ತಪಾಸಣೆ ಹಾಗೂ ದಾಖಲೆಗಳ ತಪಾಸಣೆ ನಡೆಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಆದ್ರೆ ಅಧಿಕಾರಿಗಳು ಮಾತ್ರ ಜಿಲ್ಲಾಧಿಕಾರಿಗಳ ಆದೇಶಕ್ಕೆ ಯಾಕೋ ಕಿಮ್ಮತ್ತು ನೀಡಿಲ್ಲ. ಇದನ್ನೂ ಓದಿ: ಬದುಕು ಕೊಡೋಕಾದ್ರೆ ಬನ್ನಿ, ಆಶ್ವಾಸನೆ ನೀಡೋಕಾದ್ರೆ ಬರಲೇಬೇಡಿ : ಸಚಿವ, ಶಾಸಕರಿಗೆ ಮಲೆನಾಡಿಗರ ಕ್ಲಾಸ್

    ಚೆಕ್ ಪೋಸ್ಟ್ ನಲ್ಲಿ ಮಹಾರಾಷ್ಟ್ರ ಗಡಿ ಜಿಲ್ಲೆಗಳಿಂದ ಬರುವವರ ದಾಖಲೆ ತಪಾಸಣೆ ಮಾಡುವುದಲ್ಲದೆ, ತುರ್ತು ಸಂದರ್ಭದಲ್ಲಿ ಪ್ರಯಾಣಿಕರ ಸ್ವ್ಯಾಬ್ ತೆಗೆದುಕೊಂಡು ಪರೀಕ್ಷೆಗೆ ಕಳುಹಿಸಲು ಸಿಬ್ಬಂದಿ ನಿಯೋಜಿಸಲು ಸೂಚಿಸಲಾಗಿದೆ. ಕನಿಷ್ಟ ಈಗಲಾದ್ರೂ ಅಧಿಕಾರಿಗಳು ಎಚ್ಚೆತ್ತು ಮುಂಜಾಗ್ರತೆ ತೆಗೆದುಕೊಂಡರೆ ಮುಂದಾಗುವ ಅನಾಹುತಗಳನ್ನ ಈಗಲೇ ತಪ್ಪಿಸಬಹುದಾಗಿದೆ. ಇದನ್ನೂ ಓದಿ: ಅಂದುಕೊಂಡಂತೆ ಮಾಡಿದ ದಿವ್ಯಾ – ಕ್ಯಾಪ್ಟನ್ ಆಗಿ ಹೊಸ ದಾಖಲೆ

  • ಕೇರಳ ಗಡಿಗೆ ಚಾಮರಾಜನಗರ ಡಿಸಿ ದಿಢೀರ್ ಭೇಟಿ

    ಕೇರಳ ಗಡಿಗೆ ಚಾಮರಾಜನಗರ ಡಿಸಿ ದಿಢೀರ್ ಭೇಟಿ

    ಚಾಮರಾಜನಗರ: ಕೇರಳ ರಾಜ್ಯದಿಂದ ಬರುತ್ತಿರುವ ಸರಕು ಸಾಗಾಣಿಕೆ, ಸಾರ್ವಜನಿಕರ ವಾಹನಗಳು ಸೇರಿದಂತೆ ಎಲ್ಲಾ ಬಗೆಯ ವಾಹನ ತಪಾಸಣೆಯನ್ನು ವೀಕ್ಷಿಸಿದ ಚಾಮರಾಜನಗರ ಡಿ.ಸಿ ಡಾ.ಎಂ.ಆರ್.ರವಿ ರಾಜ್ಯಕ್ಕೆ ಬರುವವರು ಕೋವಿಡ್ ಟೆಸ್ಟ್ ವರದಿ ತರಬೇಕು. ಎಲ್ಲಾ ವಾಹನಗಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕು ಎಂದು ಚೆಕ್‍ ಪೋಸ್ಟ್ ಸಿಬ್ಬಂದಿಗೆ ಸೂಚಿಸಿದ್ದಾರೆ.

    ಕೊರೊನಾ ಡೆಲ್ಟಾ ಪ್ಲಸ್ ಕಟ್ಟೆಚ್ಚರದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕೇರಳ ಗಡಿ ಮೂಲೆಹೊಳೆ ಚೆಕ್‍ ಪೋಸ್ಟ್ ಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದರು.

    ಕೇರಳದಿಂದ ಬರುವವರು ಕಡ್ಡಾಯವಾಗಿ 72 ಗಂಟೆಯ ಒಳಗಡೆ ಮಾಡಿಸಿರುವ ಕೋವಿಡ್ ಟೆಸ್ಟ್ ರಿಪೋರ್ಟ್ ಅಥವಾ 1 ಡೋಸ್ ಲಸಿಕೆ ಪಡೆದಿರುವ ಪ್ರಮಾಣ ಪತ್ರವನ್ನು ತರುವವರಿಗೆ ಮಾತ್ರ ರಾಜ್ಯ ಪ್ರವೇಶಕ್ಕೆ ಅವಕಾಶ ಕೊಡಿ, ಯಾವುದೇ ಕಾರಣಕ್ಕೂ ವರದಿ ಇಲ್ಲದವರನ್ನು ಬಿಡಬೇಡಿ. ಆರ್‌ಟಿ-​ಪಿಸಿಆರ್ ಪರೀಕ್ಷೆಯ ವರದಿಯನ್ನು ವಾಹನಗಳ ದಾಖಲಾತಿ ಪುಸ್ತಕದಲ್ಲಿ ನಮೂದಿಸಬೇಕು. ವರದಿ ಇಲ್ಲದೇ ಬಂದವರನ್ನು ವಾಪಸ್ ಕಳುಹಿಸಿದ ಮಾಹಿತಿಯನ್ನೂ ಬರೆಯಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಂಗಳ ಮುಖಿಯರಿಂದ ಗ್ರಾ.ಪಂ ಸದಸ್ಯನ ಮೇಲೆ ಹಲ್ಲೆ

  • ಇಂದು ಡೆಲ್ಟಾ ಪ್ಲಸ್ ಶಂಕಿತ ಸೋಂಕಿತರ ವರದಿ ಪ್ರಕಟ

    ಇಂದು ಡೆಲ್ಟಾ ಪ್ಲಸ್ ಶಂಕಿತ ಸೋಂಕಿತರ ವರದಿ ಪ್ರಕಟ

    ಬೆಂಗಳೂರು: ಇಂದು ರಾಜ್ಯಕ್ಕೆ ಮಹತ್ವದ ದಿನ. 500ಕ್ಕೂ ಹೆಚ್ಚು ಡೆಲ್ಟಾ ಪ್ಲಸ್ ಸಂಪರ್ಕದಲ್ಲಿದ್ದವರು ಹಾಗೂ ಶಂಕಿತ ಸೋಂಕಿತರ ಜಿನೋಮಿಕ್ ಸಿಕ್ವೆನ್ಸಿಂಗ್ ವರದಿ ಇಂದು ಬರಲಿದ್ದು, ಆತಂಕ ಹೆಚ್ಚಾಗಿದೆ.

    ಮೂರು ದಿನಗಳ ಹಿಂದೆ ಸ್ಯಾಂಪಲ್ಸ್ ಸಂಗ್ರಹ ಮಾಡಿ, ನಿಮಾನ್ಸ್ ಹಾಗೂ NCBS ಲ್ಯಾಬ್‍ಗೆ ಕಳುಹಿಸಲಾಗಿತ್ತು. 500 ಜನರಲ್ಲಿ ಎಷ್ಟು ಜನರಿಗೆ ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ಅಟ್ಯಾಕ್ ಆಗಿದೆ ಎಂಬುದು ಇಂದು ದೃಢವಾಗಲಿದೆ. ಸದ್ಯ ಬೆಂಗಳೂರಿನಲ್ಲಿ ಒಂದು ಪ್ರಕರಣ, ಮೈಸೂರಿನಲ್ಲಿ ಒಂದು ಡೆಲ್ಟಾ ಪ್ಲಸ್ ಸೋಂಕಿನ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಡೆಲ್ಟಾ ಪ್ಲಸ್ ಸೋಂಕಿತನ ಸಂಪರ್ಕದಲ್ಲಿದ್ದ ಐವರ ಪೈಕಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಆಗಿದ್ದು, ಈ ವ್ಯಕ್ತಿಯ ಜಿನೋಮ್ ಸ್ವೀಕ್ವೆನ್ಸಿಂಗ್ ನ್ನು ಕೂಡ ಲ್ಯಾಬ್‍ಗೆ ಕಳುಹಿಸಲಾಗಿದೆ.

    ಸದ್ಯ ಆರೋಗ್ಯ ಇಲಾಖೆಗೂ ಢವಢವ ಶುರುವಾಗಿದ್ದು, 500ಕ್ಕೂ ಹೆಚ್ಚು ಜನರ ರಿಪೋರ್ಟ್ ಏನಾಗಲಿದೆ ಎಂಬ ಆತಂಕದಲ್ಲಿದೆ. 500 ಜನರ ಪೈಕಿ 10 ಜನರಿಗೆ ಸೋಂಕು ಹಬ್ಬಿದ್ರೂ, ಪರಿಸ್ಥಿತಿ ಕಠೋರತೆಗೆ ತಲುಪಲಿದೆ ಎಂಬ ಭಯವನ್ನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳ ಸಂಖ್ಯೆ ಏರಿಕೆ

    ಇವರೆಗೆ ಮಹಾರಾಷ್ಟ್ರದಲ್ಲಿ 21, ಮಧ್ಯಪ್ರದೇಶ 8, ಕೇರಳ 3, ತಮಿಳುನಾಡು 9, ಪಂಜಾಬ್ 2, ಆಂದ್ರಪ್ರದೇಶ 1, ಜಮ್ಮು ಕಾಶ್ಮೀರ 1, ಗುಜರಾತ್ 2 ಹಾಗೂ ಕರ್ನಾಟಕದಲ್ಲಿ ಎರಡು ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಇದನ್ನೂ ಓದಿ: AOMSI ನಿಂದ UK ಉತ್ಪಾದಿತ ಬ್ಲ್ಯಾಕ್ ಫಂಗಸ್ ಔಷಧ ಮಂಗಳೂರಿಗೆ

  • ಮೈಸೂರಲ್ಲಿ ಶೀಘ್ರವೇ ಡೆಲ್ಟಾ ಪ್ಲಸ್ ಪರೀಕ್ಷಾ ಲ್ಯಾಬ್ ಆರಂಭ

    ಮೈಸೂರಲ್ಲಿ ಶೀಘ್ರವೇ ಡೆಲ್ಟಾ ಪ್ಲಸ್ ಪರೀಕ್ಷಾ ಲ್ಯಾಬ್ ಆರಂಭ

    – ಬೆಂಗಳೂರಿನಿಂದ ಮೈಸೂರಿಗೆ ಹೊರಟ ಬಸ್

    ಮೈಸೂರು: ಮೈಸೂರಲ್ಲಿ ಈಗ ಕೊರೊನಾ ರೂಪಾಂತರಿ ಡೆಲ್ಟಾ ಪ್ಲಸ್ ವೈರಸ್ ಪ್ರಕರಣ ಹೆಚ್ಚಾಗುತ್ತಿವೆ. ಮೈಸೂರು ಸೇರಿದಂತೆ ರಾಜ್ಯದಲ್ಲೂ ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ವೈರಸ್ ಪತ್ತೆ ಹಚ್ಚಲು ರಾಜ್ಯಾದ್ಯಂತ 6 ಪ್ರಯೋಗಾಲಯಗಳು ಸ್ಥಾಪನೆಯಾಗುತ್ತಿದ್ದು, ಈ ಪೈಕಿ ಶೀಘ್ರವೇ ಮೈಸೂರು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ‘ಡೆಲ್ಟಾ ಪ್ಲಸ್’ ವೈರಾಣು ಪತ್ತೆಗೆ ಪ್ರತ್ಯೇಕ ಲ್ಯಾಬ್ ಆರಂಭವಾಗಲಿದೆ.

    ಕೊರೊನಾ ರೂಪಾಂತರಿ ಡೆಲ್ಟಾ ಪ್ಲಸ್ ವೈರಸ್ ಈಗಾಗಲೇ ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ಮಹಾರಾಷ್ಟ್ರ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲೂ ಕಾಣಿಸಿಕೊಂಡಿದೆ. ಈ ರೂಪಾಂತರಿ ವೇಗವಾಗಿ ಹರಡುವುದರೊಂದಿಗೆ ಸೋಂಕಿಗೆ ತುತ್ತಾದವರ ಸಾವಿಗೂ ಕಾರಣವಾಗುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳ ಮಾದರಿಗಳನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಇದರಿಂದ ಫಲಿತಾಂಶ ಬರುವುದು ತಡವಾಗುತ್ತಿದೆ. ಇದನ್ನೂ ಓದಿ: ಹೊಸ ಡೆಲ್ಟಾ ಪ್ಲಸ್ ವೈರಾಣು ಪತ್ತೆಗೆ ಜೀನೋಮ್ ಸೀಕ್ವೆನ್ಸ್: ಸುಧಾಕರ್

    ಈ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯದ ಮೈಸೂರು, ಬೆಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಮಂಗಳೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಜಿಲ್ಲಾ ಪ್ಲಸ್ ಜೀನೋಮ್ ಸೀಕೆನ್ಸಿಂಗ್ ಲ್ಯಾಬ್‍ಗಳನ್ನು ಸ್ಥಾಪಿಸುವುದಕ್ಕೂ ಚಿಂತಿಸಿದೆ. ಮೈಸೂರಿನ ಕೆ.ಆರ್.ಆಸತ್ರೆಯ ಮೈಕ್ರೋಬಯಾಲಜಿ ವಿಭಾಗದಲ್ಲಿ ಅತ್ಯಾಧುನಿಕ ವೈರಲ್ ರೀಸರ್ಚ್ ಮತ್ತು ಡಯಾಗೋಸ್ಟಿಕ್‍ಲ್ಯಾಬೊರೇಟರಿ (ವಿಆರ್ ಡಿಎಲ್) ಪಕ್ಕದಲ್ಲಿ ಡೆಲ್ಟಾ ವೈರಸ್ ಪತ್ತೆಗಾಗಿ ಹೊಸ ಪ್ರಯೋಗಾಲಯವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದರಿಂದ ಮೈಸೂರು, ಕೊಡಗು, ಚಾಮರಾಜ ನಗರ, ಮಂಡ್ಯ ಸೇರಿದಂತೆ ನೆರೆಯ ಜಿಲ್ಲೆಗಳ ಸೋಂಕಿತರ ಸ್ವಾಬ್ ಪರೀಕ್ಷೆ ನಡೆಸಲೂ ಸಹಕಾರಿಯಾಗಲಿದೆ. ಇದನ್ನೂ ಓದಿ: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳ ಸಂಖ್ಯೆ ಏರಿಕೆ

    ಬೆಂಗಳೂರಿನಿಂದ ಮೈಸೂರಿಗೆ ಬಸ್: ಕೊರೊನಾ ಸೋಂಕಿನ ಪ್ರಮಾಣ ಇಳಿಕೆಯಾಗದ ಹಿನ್ನೆಲೆ ಕಳೆದ ಎರಡು ತಿಂಗಳಿನಿಂದ ಮೈಸೂರಿನಿಂದ ಬೆಂಗಳೂರು, ಬೆಂಗಳೂರು ನಿಂದ ಮೈಸೂರಿಗೆ ಬಸ್ ಸಂಚಾರ ಬಂದ್ ಆಗಿತ್ತು. ಸದ್ಯ ಸೋಂಕು ನಿಯಂತ್ರಣಕ್ಕೆ ಬಂದಿದ್ದರಿಂದ ಬಸ್ ಸಂಚಾರ ಆರಂಭವಾಗಿದೆ. ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ, ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿದೆ. ಮೈಸೂರು, ಚಾಮರಾಜನಗರ, ವಿರಾಜಪೇಟೆ , ಭಾಗಕ್ಕೆ ಹಂತ ಹಂತವಾಗಿ ಬಸ್ ಗಳು ಏರಿಕೆಯಾಗ್ತಿದ್ರೂ, ಪ್ರಯಾಣಿಕರು ಮಾತ್ರ ಬಸ್ ನಿಲ್ದಾಣದತ್ತ ಮುಖಮಾಡಿಲ್ಲ. ಅನಿವಾರ್ಯವಾಗಿ ಪ್ರಯಾಣಿಕರಿಗಾಗಿ ಚಾಲಕ, ನಿರ್ವಾಹಕರು ಮೊದಲ ದಿನವೇ ಕಾಯುವಂತಾಗಿದೆ

    ಮೈಸೂರಿನಲ್ಲಿ ಪ್ರಯಾಣಿಕರೇ ಇಲ್ಲ: ಮೈಸೂರಿನಿಂದ ಕೆಎಸ್‍ಆರ್ ಟಿಸಿ ಬಸ್ ಸಂಚಾರ ಇಂದಿನಿಂದ ಆರಂಭವಾಗಿದೆ. ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲಾ ಕೇಂದ್ರಗಳಿಗೂ ಬಸ್ ಸಂಚಾರ ಆರಂಭವಾಗಿದೆ. ಅದರೆ, ಪ್ರಯಾಣಿಕರೆ ಬಹಳ ಕಡಿಮೆ ಸಂಖ್ಯೆಯಲ್ಲಿ ಬಸ್ ನಿಲ್ದಾಣಕ್ಕೆ ಬರುತ್ತಿದ್ದಾರೆ. ಮೊದಲು ಬೆಂಗಳೂರು ಮಾರ್ಗವಾಗಿ ಪ್ರತಿ ಐದು ನಿಮಿಷಕ್ಕೆ ಒಂದು ಬಸ್ ಸಂಚರಿಸುತ್ತಿತ್ತು. ಆದರೆ ಇವತ್ತು ಅರ್ಧ ಗಂಟೆಗೂ ಒಂದು ಬಸ್ ಪ್ರಯಾಣಿಕರಿಂದ ಭರ್ತಿಯಾಗುತ್ತಿಲ್ಲ. ಇಷ್ಟು ಪ್ರಮಾಣದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಿದೆ.

  • ಕೇರಳದಲ್ಲಿ ಹೆಚ್ಚುತ್ತಿವೆ ಡೆಲ್ಟಾ ಪ್ಲಸ್ ಕೇಸ್- ಮಂಗಳೂರಿಗರಲ್ಲಿ ಆತಂಕ

    ಕೇರಳದಲ್ಲಿ ಹೆಚ್ಚುತ್ತಿವೆ ಡೆಲ್ಟಾ ಪ್ಲಸ್ ಕೇಸ್- ಮಂಗಳೂರಿಗರಲ್ಲಿ ಆತಂಕ

    ಮಂಗಳೂರು: ಕೇರಳದಲ್ಲಿ ಕೊರೊನಾ ಡೆಲ್ಟಾ ಪ್ಲಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನೆರೆಯ ದಕ್ಷಿಣ ಕನ್ನಡ ಜಿಲ್ಲೆಗೂ ಭೀತಿ ಹೆಚ್ಚಾಗಿದೆ.

    ಕೇರಳದಿಂದ ಪ್ರತಿನಿತ್ಯ ಸಾವಿರಾರು ಮಂದಿ ದಕ್ಷಿಣ ಕನ್ನಡ ಜಿಲ್ಲೆಗೆ ವ್ಯಾಪಾರ, ಉದ್ಯೋಗಕ್ಕಾಗಿ ಬಂದು ಹೋಗುತ್ತಾರೆ. ಹೀಗಾಗಿ ಜಿಲ್ಲೆಯ ಜನತೆಗೆ ಭೀತಿ ಹೆಚ್ಚಾಗಿದ್ದು, ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಇಂದು ಜಿಲ್ಲೆಯಲ್ಲಿ ವೀಕೆಂಡ್ ಕಫ್ರ್ಯೂ ಜಾರಿ ಇರುವ ಹಿನ್ನಲೆಯಲ್ಲಿ ಗಡಿ ಭಾಗದಲ್ಲಿ ಹೆಚ್ಚಿನ ವಾಹನ ಓಡಾಟ ಇಲ್ಲ. ಜೊತೆಗೆ ತಪಾಸಣೆಯೂ ಇಲ್ಲ. ಆದರೆ ಸೋಮವಾರದ ಬಳಿಕ ಮತ್ತೆ ಅನ್‍ಲಾಕ್ ಆಗುವುದರಿಂದ ಗಡಿಯಲ್ಲಿ ಜನರ ಓಡಾಟ ಹೆಚ್ಚಾಗುತ್ತದೆ. ಡೆಲ್ಟಾ ಪ್ಲಸ್ ಸೋಂಕಿನ ಸಂಖ್ಯೆಯೂ ಹೆಚ್ಚಾಗುತ್ತಿರುವುದರಿಂದ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

  • ರಾಜ್ಯದಲ್ಲಿ ಎರಡು ಡೆಲ್ಟಾ ಪ್ಲಸ್ ಕೇಸ್ ದಾಖಲು – ಸುಧಾಕರ್

    ರಾಜ್ಯದಲ್ಲಿ ಎರಡು ಡೆಲ್ಟಾ ಪ್ಲಸ್ ಕೇಸ್ ದಾಖಲು – ಸುಧಾಕರ್

    ಬೆಂಗಳೂರು : ಕರ್ನಾಟಕದಲ್ಲಿ ಅಧಿಕೃತವಾಗಿ ಎರಡು ಡೆಲ್ಟಾ ಪ್ಲಸ್ ಕೇಸ್ ದಾಖಲಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ಮಾತಾನಾಡಿದ ಅವರು, ನಿನ್ನೆ ಮೈಸೂರಿನಲ್ಲಿ ಒಂದು ಕೇಸ್ ಮತ್ತೆ ಆಗಿತ್ತು. ಈಗ ಬೆಂಗಳೂರಿನಲ್ಲಿ ಹಿರಿಯ ವ್ಯಕ್ತಿಯೊಬ್ಬರಿಗೆ ಡೆಲ್ಟಾ ಪ್ಲಸ್ ಸೋಂಕು ಕಂಡು ಬಂದಿದೆ. ಅವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಅವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದವರನ್ನ ಪರೀಕ್ಷೆ ಮಾಡಲಾಗಿದ್ದು, ಇಂದು ವರದಿ ಬರಲಿದೆ ಎಂದು ತಿಳಿಸಿದರು.

    ಡೆಲ್ಟಾ ಪ್ಲಸ್ ವೈರಸ್ ಕುರಿತು ಯಾರು ಹೆಚ್ಚು ಆತಂಕ ಪಡುವ ಅವಶ್ಯಕತೆ ಇಲ್ಲ. ಡೆಲ್ಟಾ ಪ್ಲಸ್ ಮತ್ತು ಡೆಲ್ಟಾ ವೈರಸ್ ಒಂದೇ ಗುಣಲಕ್ಷಣ ಹೊಂದಿದೆ. ಆದರೆ ಚಿಕಿತ್ಸೆ ವಿಧಾನ ಸ್ವಲ್ಪ ಬೇರೆ ಇದೆ ಎಂದು ಸ್ಪಷ್ಟಪಡಿಸಿದರು.


    ಲಸಿಕೆ ಪರಿಣಾಮಕಾರಿ
    ಡೆಲ್ಟಾ ಪ್ಲಸ್ ವೈರಸ್ ಸೇರಿದಂತೆ ಎಲ್ಲಾ ರೂಪಾಂತರ ವೈರಸ್ ಗೆ ನಮ್ಮ ಲಸಿಕೆಗಳು ಪರಿಣಾಮಕಾರಿಯಾಗಿದೆ. ಈಗಾಗಲೇ 2 ಸಾವಿರ ಸ್ಯಾಂಪಲ್ ಗಳ ಟೆಸ್ಟ್ ಆಗಿದ್ದು, ಮತ್ತಷ್ಟು ಹೆಚ್ಚಳ ಮಾಡಲಾಗುತ್ತದೆ. ಈಗಾಗಲೇ 6 ಜೀನೋಮ್ ಲ್ಯಾಬ್ ಪ್ರಾರಂಭಕ್ಕೆ ನಿರ್ಧಾರ ಮಾಡಲಾಗಿದ್ದು, ಮತ್ತಷ್ಟು ಸ್ಯಾಂಪಲ್ ಗಳನ್ನ ಹೆಚ್ಚಳ ಮಾಡುತ್ತೇವೆ ಎಂದು ತಿಳಿಸಿದರು.

    ಕೇರಳದಲ್ಲಿ ಸೋಂಕು ಹೆಚ್ಚಾಗಿದ್ದು, ಇದರ ಬಗ್ಗೆ ನಮಗೆ ಸ್ವಲ್ಪ ಆತಂಕ ಇದೆ. 4-5% ಸೋಂಕು ಕೇಸ್ ಕೇರಳದಲ್ಲಿ ಬರುತ್ತಿದೆ. ಕೇರಳ ಗಡಿ ಭಾಗದ ಜಿಲ್ಲೆಗಳಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.  ಇದನ್ನೂ ಓದಿ: ನೆರೆಯ ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ವೈರಾಣು ಪತ್ತೆ – ಸರ್ಕಾರಕ್ಕೆ ತಜ್ಞರ ಎಚ್ಚರಿಕೆ

    ಮಕ್ಕಳಿಗೆ ಲಸಿಕೆ ಅವಶ್ಯಕತೆ ಇಲ್ಲ ಎಂಬ ಐಸಿಎಂಆರ್ ಮುಖ್ಯಸ್ಥರ ಹೇಳಿಕೆ ಅಧಿಕೃತವಾಗಿ ನಮಗೆ ಮಾಹಿತಿ ಬಂದಿಲ್ಲ. ಆದರೆ ಮಕ್ಕಳಿಗೆ ತೀವ್ರತರವಾದ ಸಮಸ್ಯೆ ಉಂಟಾಗುವುದಿಲ್ಲ ಎನ್ನುವುದು ವಿಶ್ವ ಮಟ್ಟದ ವಾದ. ತಜ್ಞರು, ಸಂಶೋಧಕರು ಮಕ್ಕಳಿಗೆ ಭೀಕರ ಪರಿಣಾಮ ಬೀರುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದು ಉತ್ತಮವಾದ ಅಂಶ. ಅ ನಿಟ್ಟಿನಲ್ಲಿ ನಾವು ವಿಚಾರ ಮಾಡಿದ್ದು, ನಾವು ಮಕ್ಕಳ ಬಗ್ಗೆ ವಿಶೇಷ ಕಾಳಜಿವಹಿಸುವ ಕೆಲಸ ಮಾಡುತ್ತೇವೆ. ಯಾಕೆಂದರೆ ಇದರ ಸ್ವರೂಪ, ಈ ವೈರಸ್ ಗುಣ, ಸ್ವಭಾವ ಹೊಸದಾಗಿ ಇರುವುದರಿಂದ ನಾವು ಹೆಚ್ಚು ನಿಗಾ ಇಟ್ಟಿದ್ದೇವೆ ಎಂದರು.