Tag: ಡೆಲಿವರಿ ಬಾಯ್

  • ಬ್ರೆಜಿಲ್ ಮೂಲದ ಮಾಡೆಲ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಡೆಲಿವರಿ ಬಾಯ್ ಅರೆಸ್ಟ್

    ಬ್ರೆಜಿಲ್ ಮೂಲದ ಮಾಡೆಲ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಡೆಲಿವರಿ ಬಾಯ್ ಅರೆಸ್ಟ್

    ಬೆಂಗಳೂರು: ಬ್ರೆಜಿಲ್ (Brazil) ಮೂಲದ ಮಾಡೆಲ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪ ಮೇಲೆ ಡೆಲಿವರಿ ಬಾಯ್‌ನನ್ನು (Delivery Boy) ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಬಂಧಿತ ಆರೋಪಿಯನ್ನು ಕುಮಾರ್ ರಾವ್ ಎಂದು ಗುರುತಿಸಲಾಗಿದ್ದು, ಖಾಸಗಿ ಕಾಲೇಜಿನಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡ್ತಿದ್ದ ಎಂದು ತಿಳಿದುಬಂದಿದೆ.ಇದನ್ನೂ ಓದಿ:ಪಶ್ಚಿಮ ಟರ್ಕಿಯಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪ: ಕಟ್ಟಡಗಳು ನೆಲಸಮ

    ಈ ಸಂಬಂಧ ಸಂತ್ರಸ್ತೆ ಆರ್‌ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮನೆಯಲ್ಲಿ ಒಬ್ಬಂಟಿಯಾಗಿರುವುದನ್ನು ಗಮನಿಸಿದ ನಂತರ ಡೆಲಿವರಿ ಬಾಯ್ ತನ್ನೊಂದಿಗೆ ಕೆಟ್ಟದಾಗಿ ವರ್ತಿಸಿ, ಅನುಚಿತವಾಗಿ ಮುಟ್ಟಿದ್ದಾನೆ ಎಂದು ಆರೋಪಿಸಿದ್ದಾರೆ.

    ಅ.17ರಂದು ಬ್ರೆಜಿಲ್ ಮೂಲದ ಮಾಡೆಲ್ ಆ್ಯಪ್ ಒಂದರಲ್ಲಿ ದಿನಸಿ ವಸ್ತುಗಳನ್ನು ಆರ್ಡರ್ ಮಾಡಿದ್ದರು. ಈ ವೇಳೆ ದಿನಸಿ ತಂದ ಡೆಲಿವರಿ ಬಾಯ್ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ, ಮಾಡೆಲ್ ಜೊತೆ ಅನುಚಿತ ವರ್ತನೆ ತೋರಿದ್ದಾನೆ. ಆಕೆಯನ್ನು ಮಾತಿಗೆಳೆದು ಆಕೆಯ ಮೈ ಮುಟ್ಟಲು ಯತ್ನಿಸಿದ್ದಾನೆ. ಇದರಿಂದ ಆತಂಕಕ್ಕೀಡಾದ ಮಾಡೆಲ್ ಕಿರುಚಿಕೊಂಡು ಬಾಗಿಲು ಲಾಕ್ ಮಾಡಿದ್ದಾರೆ. ಕೂಡಲೇ ಡೆಲಿವರಿ ಬಾಯ್ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಮಾಡೆಲ್ ತಾನು ಕೆಲಸ ಮಾಡುವ ಕಂಪನಿಗೆ ಮಾಹಿತಿ ನೀಡಿದ್ದು, ಅವರ ಸಹಾಯದಿಂದ ಆರ್‌ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆತ ಕೆಲಸ ಮಾಡುತ್ತಿದ್ದ ಕಂಪನಿ ಕೂಡ ಆತನನ್ನು ಕೆಲಸದಿಂದ ವಜಾಗೊಳಿಸಿರುವುದಾಗಿ ಹೇಳಿದ್ದು, ತನಿಖೆಗೆ ಸಹಕರಿಸುವುದಾಗಿ ಹೇಳಿದೆ ಎನ್ನಲಾಗಿದೆ.ಇದನ್ನೂ ಓದಿ:ಗೋವಾ-ಮಾಜಾಳಿ ಗಡಿಯಲ್ಲಿ ತಪಾಸಣೆ ವೇಳೆ ಸಿಕ್ಕಿಬಿತ್ತು ಕೋಟಿ ಹಣ; ಇಬ್ಬರು ಪೊಲೀಸರ ವಶಕ್ಕೆ

  • ಗ್ರಾಹಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಡೆಲಿವರಿ ಬಾಯ್ – ಕ್ಷಮೆಯಾಚಿಸಿದ ಕಂಪನಿ

    ಗ್ರಾಹಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಡೆಲಿವರಿ ಬಾಯ್ – ಕ್ಷಮೆಯಾಚಿಸಿದ ಕಂಪನಿ

    ಬೆಂಗಳೂರು: ಅಡ್ರೆಸ್‌ನಲ್ಲಿ ಸಿಂಗಲ್ ಡಿಜಿಟ್ ತಪ್ಪಾಗಿದ್ದಕ್ಕೆ ಗ್ರಾಹಕನ ಮೇಲೆ ಡೆಲಿವರಿ ಬಾಯ್ (Delivery Boy) ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಡೆಲಿವರಿ ಕಂಪನಿ ಗ್ರಾಹಕನಿಗೆ ಕ್ಷಮೆಯಾಚಿಸಿದೆ.

    ಡೆಲಿವರಿ ಬಾಯ್ ವಿಷ್ಣುವರ್ಧನ್ ಎಂಬಾತ ಗ್ರಾಹಕ ಶಶಾಂಕ್ ಅವರ ಮೇಲೆ ಹಲ್ಲೆ ನಡೆಸಿದ್ದ. ಬೆಂಗಳೂರಿನ (Bengaluru)ಬಸವೇಶ್ವರ ನಗರದಲ್ಲಿ (Basaveshwar Nagar) ಈ ಘಟನೆ ನಡೆದಿತ್ತು. ಮೇ 21ರಂದು ಆ್ಯಪ್‌ವೊಂದರಲ್ಲಿ ಶಶಾಂಕ್ ಪತ್ನಿ ಆರ್ಡರ್ ಮಾಡಿದ್ದರು. ಇದನ್ನೂ ಓದಿ: ಅಡ್ರೆಸ್ ತಪ್ಪಾಗಿದ್ದಕ್ಕೆ ಗಲಾಟೆ – ಗ್ರಾಹಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಡೆಲಿವರಿ ಬಾಯ್!

    ಡೆಲಿವರಿ ಬಾಯ್ ಬಂದಾಗ ಶಶಾಂಕ್ ನಾದಿನಿ ಸಾಮಗ್ರಿ ತೆಗೆದುಕೊಳ್ಳಲು ಹೋದಾಗ ಅಡ್ರೆಸ್ ವಿಚಾರವಾಗಿ ಬಾಯಿಗೆ ಬಂದಹಾಗೇ ಮಾತಾಡುತ್ತಿದ್ದ. ಇದನ್ನು ಕೇಳಿಸಿಕೊಂಡು ಶಶಾಂಕ್ ಹೊರಗಡೆ ಹೋಗಿ ಆತನೊಂದಿಗೆ ಸ್ವಲ್ಪ ಜೋರಾಗಿ ಮಾತನಾಡಿದ್ದರು. ಆಗ ಒಮ್ಮೆಲೆ ಡೆಲಿವರಿ ಬಾಯ್ ಹಲ್ಲೆ ನಡೆಸಿದ್ದು, ಕಣ್ಣಿಗೆ ಗಾಯವಾಗಿದೆ. ಹಲ್ಲೆ ನಡೆಸಿದ ದೃಶ್ಯಗಳು ಅದೇ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಸದ್ಯ ಈ ಘಟನೆ ಕುರಿತು ಶಶಾಂಕ್ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ. ಇದೀಗ ಡೆಲಿವರಿ ಕಂಪನಿ ಶಶಾಂಕ್ ಅವರಿಗೆ ಕ್ಷಮೆ ಕೇಳಿದೆ.

    ಈ ಕುರಿತು ಶಶಾಂಕ್ ಮಾತನಾಡಿದ್ದು, ಹಲ್ಲೆಯಿಂದಾಗಿ ನನ್ನ ಕಣ್ಣಿನ ಕೆಳಗಿನ ಮೂಳೆ ಕಟ್ ಆಗಿದೆ. ಹೀಗಾಗಿ ಡಾಕ್ಟರ್ ಇನ್ನೊಮ್ಮೆ ಚೆಕ್ ಮಾಡುತ್ತೇನೆ ಎಂದಿದ್ದು, ಒಂದು ವೇಳೆ ಸರಿಹೋಗದಿದ್ದರೆ ಆಪರೇಷನ್ ಮಾಡಬೇಕು ಎಂದು ಹೇಳಿದ್ದಾರೆ. ಸಂಬಂಧಪಟ್ಟ ಕಂಪನಿಯವರು, ಪೊಲೀಸರು ನನಗೆ ನ್ಯಾಯಕೊಡಿಸಬೇಕು ಎಂದು ಕೇಳಿಕೊಂಡಿದ್ದರು.ಇದನ್ನೂ ಓದಿ: `ಯುವನಿಧಿ’ ಗ್ಯಾರಂಟಿ ಹಣದಿಂದ ಲ್ಯಾಪ್‌ಟಾಪ್‌ ಖರೀದಿಸಿದ ವಿದ್ಯಾರ್ಥಿನಿ ಇಶಾ ಆಸಿಫ್‌

  • ಅಡ್ರೆಸ್ ತಪ್ಪಾಗಿದ್ದಕ್ಕೆ ಗಲಾಟೆ – ಗ್ರಾಹಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಡೆಲಿವರಿ ಬಾಯ್!

    ಅಡ್ರೆಸ್ ತಪ್ಪಾಗಿದ್ದಕ್ಕೆ ಗಲಾಟೆ – ಗ್ರಾಹಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಡೆಲಿವರಿ ಬಾಯ್!

    ಬೆಂಗಳೂರು: ಅಡ್ರೆಸ್‌ನಲ್ಲಿ ಸಿಂಗಲ್ ಡಿಜಿಟ್ ತಪ್ಪಾಗಿದ್ದಕ್ಕೆ ಗ್ರಾಹಕನ ಮೇಲೆ ಡೆಲಿವರಿ ಬಾಯ್ (Delivery Boy) ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ (Bengaluru) ಬಸವೇಶ್ವರ ನಗರದಲ್ಲಿ (Basaveshwar Nagar) ನಡೆದಿದೆ.

    ಹಲ್ಲೆಗೊಳಗಾದ ಗ್ರಾಹಕ ಶಶಾಂಕ್ ಹಾಗೂ ಡೆಲಿವರಿ ಬಾಯ್‌ನ್ನು ವಿಷ್ಣುವರ್ಧನ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಗಡಿಯಲ್ಲಿ ಭಾರತಕ್ಕೆ ನುಸುಳಲು ಯತ್ನ – ಶಂಕಿತ ಪಾಕಿಸ್ತಾನಿ ಹೊಡೆದುರುಳಿಸಿದ ಬಿಎಸ್‌ಎಫ್‌

     ಮೇ 21ರಂದು ಆ್ಯಪ್‌ವೊಂದರಲ್ಲಿ ಶಶಾಂಕ್ ಪತ್ನಿ ಆರ್ಡರ್ ಮಾಡಿದ್ದರು. ಡೆಲಿವರಿ ಬಾಯ್ ಬಂದಾಗ ಶಶಾಂಕ್ ನಾದಿನಿ ಸಾಮಗ್ರಿ ತೆಗೆದುಕೊಳ್ಳಲು ಹೋದಾಗ ಅಡ್ರೆಸ್ ವಿಚಾರವಾಗಿ ಬಾಯಿಗೆ ಬಂದಹಾಗೇ ಮಾತಾಡುತ್ತಿದ್ದ. ಇದನ್ನು ಕೇಳಿಸಿಕೊಂಡು ಶಶಾಂಕ್ ಹೊರಗಡೆ ಹೋಗಿ ಆತನೊಂದಿಗೆ ಸ್ವಲ್ಪ ಜೋರಾಗಿ ಮಾತನಾಡಿದ್ದರು. ಆಗ ಒಮ್ಮೆಲೆ ಡೆಲಿವರಿ ಬಾಯ್ ಹಲ್ಲೆ ನಡೆಸಿದ್ದು, ಕಣ್ಣಿಗೆ ಗಾಯವಾಗಿದೆ. ಹಲ್ಲೆ ನಡೆಸಿದ ದೃಶ್ಯಗಳು ಅದೇ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಸದ್ಯ ಈ ಘಟನೆ ಕುರಿತು ಶಶಾಂಕ್ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ.

    ಈ ಕುರಿತು ಶಶಾಂಕ್ ಮಾತನಾಡಿ, ಹಲ್ಲೆಯಿಂದಾಗಿ ನನ್ನ ಕಣ್ಣಿನ ಕೆಳಗಿನ ಮೂಳೆ ಕಟ್ ಆಗಿದೆ. ಹೀಗಾಗಿ ಡಾಕ್ಟರ್ ಇನ್ನೊಮ್ಮೆ ಚೆಕ್ ಮಾಡುತ್ತೇನೆ ಎಂದಿದ್ದು, ಒಂದು ವೇಳೆ ಸರಿಹೋಗದಿದ್ದರೆ ಆಪರೇಷನ್ ಮಾಡಬೇಕು ಎಂದು ಹೇಳಿದ್ದಾರೆ. ಸಂಬಂಧಪಟ್ಟ ಕಂಪನಿಯವರು, ಪೊಲೀಸರು ನನಗೆ ನ್ಯಾಯಕೊಡಿಸಬೇಕು ಎಂದು ಕೇಳಿಕೊಂಡಿದ್ದಾರೆ.ಇದನ್ನೂ ಓದಿ: Ramanagara | ಸರ್ಕಾರದ ಇ ಸ್ವತ್ತು ಸಾಫ್ಟ್‌ವೇರ್ ಹ್ಯಾಕ್ ಮಾಡಿ ದಾಖಲೆಗಳ ತಿದ್ದುಪಡಿ – ಮೂವರ ಬಂಧನ

     

  • ಬೆಂಗಳೂರಿಗರೇ ಹುಷಾರಾಗಿರಿ, ಮಾತನಾಡಿಕೊಂಡು ಹೋಗ್ತಿದ್ದಾಗಲೇ ಮೊಬೈಲ್‌ ಕಳ್ಳತನ – ರಸ್ತೆಗೆ ಬಿದ್ದ ಡೆಲಿವರಿ ಬಾಯ್‌

    ಬೆಂಗಳೂರಿಗರೇ ಹುಷಾರಾಗಿರಿ, ಮಾತನಾಡಿಕೊಂಡು ಹೋಗ್ತಿದ್ದಾಗಲೇ ಮೊಬೈಲ್‌ ಕಳ್ಳತನ – ರಸ್ತೆಗೆ ಬಿದ್ದ ಡೆಲಿವರಿ ಬಾಯ್‌

    ಬೆಂಗಳೂರು: ಬೈಕ್‌ನಲ್ಲಿ ಹೋಗುವಾಗ ಫೋನ್‌ (Phone) ಹಿಡಿದು ಮಾತನಾಡುವ ಮುನ್ನ ಎಚ್ಚರವಾಗಿರಿ. ಬೆಂಗಳೂರಿನಲ್ಲಿ (Bengaluru) ಹಿಂಬದಿಯಿಂದ ಬಂದು ಫೋನನ್ನು ಕದಿಯುವ ಕಳ್ಳರ ಹಾವಳಿ ಆರಂಭವಾಗಿದೆ.

    ಹೆಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಫೋನ್ ಹಿಡಿದು ಮಾತಾಡುತ್ತಾ ಡೆಲಿವರಿ ಬಾಯ್ (Delivery Boy) ಬೈಕಿನಲ್ಲಿ ಹೊರಟಿದ್ದರು. ಈ ವೇಳೆ ಹಿಂದಿನಿಂದ ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ಮೊಬೈಲ್ ಕದ್ದು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಇಂದಿನಿಂದ ಸಿಎಂ ವಿರುದ್ಧ ಮುಡಾ ತನಿಖೆ ಆರಂಭ

     

    ಮೊಬೈಲ್ ಕಿತ್ತ ರಭಸಕ್ಕೆ ಡೆಲಿವರಿ ಬಾಯ್ ಆಯತಪ್ಪಿ ರಸ್ತೆಯಲ್ಲೇ ಬಿದ್ದಿದ್ದಾರೆ. ಹಿಂದೆ ಬರುತ್ತಿದ್ದ ಕಾರಿನ ಮಧ್ಯೆ ಸ್ವಲ್ಪ ಅಂತರ ಇದ್ದ ಕಾರಣ ಡೆಲಿವರಿ ಬಾಯ್‌ ಅವರಿಗೆ ಯಾವುದೇ ಸಮಸ್ಯೆಯಾಗಿಲ್ಲ.

    ಡೆಲಿವರಿ ಬಾಯ್‌ ಹಿಂದಿನಿಂದ ಬರುತ್ತಿದ್ದ ಕಾರಿನ ಡ್ಯಾಶ್‌ ಕ್ಯಾಮೆರಾದಲ್ಲಿ ಈ ದೃಶ್ಯಗಳು ಸೆರೆಯಾಗಿದೆ. ಸೆ.27 ರ ರಾತ್ರಿ ಒಂದು ಗಂಟೆ ಸುಮಾರಿಗೆ ಹೆಚ್ ಎಸ್ ಆರ್ ಲೇಔಟ್ 29ನೇ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

     

  • ಶೂ ಕದ್ದವನ ಪರ ನಿಂತ ನಟ ಸೋನು ಸೂದ್: ಹೊಸ ಶೂ ನೀಡುವಂತೆ ಮನವಿ

    ಶೂ ಕದ್ದವನ ಪರ ನಿಂತ ನಟ ಸೋನು ಸೂದ್: ಹೊಸ ಶೂ ನೀಡುವಂತೆ ಮನವಿ

    ಸಾಕಷ್ಟು ಜನಪರ ಕೆಲಸಗಳ ಮೂಲಕ ನಿಜವಾದ ಹೀರೋ ಅನಿಸಿಕೊಂಡಿರುವ ಬಾಲಿವುಡ್ ನಟ ಸೋನು ಸೂದ್ (Sonu Sood), ಈ ಬಾರಿ ವಿಲನ್ ರೀತಿಯಲ್ಲಿ ಬಿಂಬಿತರಾಗಿದ್ದಾರೆ. ಶೂ ಕದ್ದವನ ಪರವಾಗಿ ಮಾತನಾಡಿದ್ದಕ್ಕೆ ಸೋನು ಅವರನ್ನು ಅನೇಕರು ಟೀಕಿಸಿದ್ದಾರೆ.

    ಗುರುಗ್ರಾಮ್ ದಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ಪಾರ್ಸಲ್ ಕೊಡಲು ಬಂದ ಮನೆಯಿಂದ ಶೂ ಕದ್ದಿದ್ದಾನೆ. ಆ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಡೆಲಿವರಿ ಬಾಯ್ ವಿರುದ್ಧ ಕ್ರಮ ತಗೆದುಕೊಳ್ಳಿ ಎಂದು ಹಲವರು ಕಾಮೆಂಟ್ ಮಾಡಿದ್ದರು. ಈ ವಿಡಿಯೋಗೆ ಸಂಬಂಧಿಸಿದಂತೆ ಸೋನು ಕಾಮೆಂಟ್ ಮಾಡಿದ್ದಾರೆ.

     

    ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಸೋನು, ‘ಆ ಹುಡುಗನ ಮೇಲೆ ಯಾವುದೇ ಕ್ರಮ ಬೇಡ. ಕನಿಕರ ತೋರಿ. ಹಾಗೂ ಅವನಿಗೆ ಹೊಸ ಶೂ ಕೊಡಿಸಿ’ ಎಂದು ಅವರು ಬರೆದುಕೊಂಡಿದ್ದಾರೆ. ಕದ್ದವನ ಪರವಾಗಿ ಸೋನು ನಿಲ್ಲಬಾರದು ಎಂದು ಕೆಲವರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

  • ಐಫೋನ್‌ಗೆ ಕೊಡಲು ಹಣವಿಲ್ಲದೇ ಡೆಲಿವರಿ ಬಾಯ್ ಕತ್ತು ಕೊಯ್ದು ಕೊಲೆ

    ಐಫೋನ್‌ಗೆ ಕೊಡಲು ಹಣವಿಲ್ಲದೇ ಡೆಲಿವರಿ ಬಾಯ್ ಕತ್ತು ಕೊಯ್ದು ಕೊಲೆ

    ಹಾಸನ: ಬುಕ್ ಮಾಡಿದ್ದ ಐಫೋನ್‌ಗೆ (iPhone) ಕೊಡಲು ಹಣವಿಲ್ಲದೆ ಡೆಲಿವೆರಿ ಬಾಯ್‌ನ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಹಾಸನ (Hassan) ಜಿಲ್ಲೆ ಅರಸೀಕೆರೆ ಪಟ್ಟಣದ ಅಂಚೆಕೊಪ್ಪಲಿನಲ್ಲಿ ನಡೆದಿದೆ.

    ಫೆಬ್ರವರಿ 11 ರಂದು ಅಂಚೆಕೊಪ್ಪಲು ಸಮೀಪದ ರೈಲ್ವೆ ಟ್ರ‍್ಯಾಕ್ ಬಳಿ ಸುಟ್ಟ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಅರಸೀಕೆರೆ ನಗರ ಪೊಲೀಸರು (Arsikere City Police) ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಆಸ್ತಿ ವಿಷಯಕ್ಕೆ ರೈತನ ಮೇಲೆ ಮಾರಣಾಂತಿಕ ಹಲ್ಲೆ – ಸ್ವಾಮೀಜಿ, ಬೆಂಬಲಿಗರ ಮೇಲೆ ಎಫ್‌ಐಆರ್

    ಕೊಲೆ ಆರೋಪಿ ಹೇಮಂತ್ ದತ್ತ (20) ಸಿಕ್ಕಿಬಿದ್ದಿದ್ದು, ಹೇಮಂತ್ ನಾಯ್ಕ (23) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಆರೋಪಿ ಹೇಮಂತ್ ದತ್ತ ಕೊಲೆ ಮಾಡಿ ಮೃತದೇಹವನ್ನು ನಾಲ್ಕು ದಿನ ಮನೆಯಲ್ಲೇ ಇಟ್ಟುಕೊಂಡಿದ್ದ. ಸದ್ಯ ಈ ಘಟನೆ ಅರಸೀಕೆರೆ ಪಟ್ಟಣದ ಜನರನ್ನು ಬೆಚ್ಚಿಬೀಳಿಸಿದೆ.

    ಏನಿದು ಘಟನೆ?
    ಮೃತ ಹೇಮಂತ್ ನಾಯ್ಕ ಇ-ಕಾರ್ಟ್ ಎಕ್ಸ್‌ಪ್ರೆಸ್‌ ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಆರೋಪಿ ಹೇಮಂತ್ ದತ್ತ ಇತ್ತೀಚೆಗೆ ಫ್ಲಿಪ್‌ಕಾರ್ಟ್‌ನಲ್ಲಿ (Flipkart) 46 ಸಾವಿರ ಮೌಲ್ಯದ ಸೆಕೆಂಡ್ ಹ್ಯಾಂಡ್ ಐಫೋನ್ ಬುಕ್ ಮಾಡಿದ್ದ. ಇದರಿಂದ ಹೇಮಂತ್ ನಾಯ್ಕ ಫೆಬ್ರವರಿ 7ರಂದು ಅರಸೀಕೆರೆ ಪಟ್ಟಣದ, ಲಕ್ಷ್ಮೀಪುರ ಬಡಾವಣೆಯಲ್ಲಿರುವ ಹೇಮಂತ್ ದತ್ತ ಮನೆಗೆ ಐಫೋನ್ ಡೆಲಿವರಿ ಕೊಡಲು ಬಂದಿದ್ದ. ಅಲ್ಲಿಗೆ ಬಂದೊಡನೆ ಹೇಮಂತ್ ದತ್ತ ಐಫೋನ್ ಬಾಕ್ಸ್‌ ಅನ್ನು ಪನ್ ಮಾಡುವಂತೆ ಹೇಳಿದ್ದ. ಅದಕ್ಕೆ ನಾಯ್ಕ ಓಪನ್ ಮಾಡಲು ಆಗಲ್ಲ. ಮಾಡಿದ್ರೆ ಹಿಂದಿರುಗಿಸಿಲು ಸಾಧ್ಯವಿಲ್ಲ, 46 ಸಾವಿರ ಹಣ ಕೊಡಿ ಎಂದು ಕೇಳಿದ್ದ.

    ನಂತರ ಹೇಮಂತ್ ದತ್ತ ಇಲ್ಲೇ ಕುಳಿತುಕೊ ಹಣ ಕೊಡುತ್ತೇನೆ ಎಂದು ಹೇಳಿ ಹೋಗಿದ್ದ. ಬಳಿಕ ಕೊಡಲು ಹಣವಿಲ್ಲದೇ ಮನೆಯೊಳಗೆ ಕುಳಿತು ಮೊಬೈಲ್ ನೋಡುತ್ತಿದ್ದ ಹೇಮಂತ್ ನಾಯ್ಕನನ್ನ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ. ನಾಲ್ಕು ದಿನಗಳಾದರೂ ಮೃತದೇಹವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ. ಫೆ.11 ರಂದು ಗೋಣಿಚೀಲದಲ್ಲಿ ಹೆಣ ತುಂಬಿಕೊಂಡು ಬೈಕ್‌ನಲ್ಲಿ ತೆಗೆದುಕೊಂಡು ಹೋಗಿ ಅಂಚೆಕೊಪ್ಪಲು ರೈಲ್ವೆ ಬ್ರಿಡ್ಜ್ ಬಳಿ ಪೆಟ್ರೋಲ್, ಸೀಮೆಎಣ್ಣೆ ಸುರಿದು ಮೃತದೇಹ ಸುಟ್ಟು ಹಾಕಿದ್ದ. ಈ ಸಂಬಂಧ ಅರಸೀಕೆರೆ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

    ಇದೇ ವೇಳೆ ಫೆ.7 ರಂದು ಕೆಲಸಕ್ಕೆ ಹೋಗಿದ್ದ ಸಹೋದರ ಮನೆ ಬಾರದ ಹಿನ್ನೆಲೆಯಲ್ಲಿ ಫೆ.8 ರಂದು ಹೇಮಂತ್ ನಾಯ್ಕ ಸಹೋದರ ಮಂಜ ನಾಯ್ಕ ಅರಸೀಕೆರೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ತನಿಖೆ ಆರಂಭಿಸಿದ ಪೊಲೀಸರು ಕೊನೆಗೂ ಪ್ರಕರಣ ಭೇದಿಸಿ, ಬೆಚ್ಚಿಬೀಳಿಸುವ ಸಂಗತಿಯನ್ನು ಬಯಲಿಗೆಳೆದಿದ್ದಾರೆ. ಇದನ್ನೂ ಓದಿ: ಕಾರಿನಲ್ಲಿ ಹೋಗುತ್ತಿದ್ದಾಗ ತನ್ನ ಅಜ್ಜಿಗೆ ಗುಂಡು ಹಾರಿಸಿದ 6ರ ಬಾಲಕಿ – ವೃದ್ಧೆ ಸಾವು

    ಆರೋಪಿ ಹೇಮಂತ್ ದತ್ತನನ್ನ ಬಂಧಿಸಿ ವಿಚಾರಣೆ ನಡೆಸಿದಾಗ, ಐಫೋನ್‌ಗೆ ಕೊಡಲು ಹಣವಿಲ್ಲದೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆರ್ಡರ್ ತಲುಪಿಸಲು ಹೋದ ಡೆಲಿವರಿ ಬಾಯ್‌ಗೆ ಮಹಿಳೆ ಚಪ್ಪಲಿ ಏಟು!

    ಆರ್ಡರ್ ತಲುಪಿಸಲು ಹೋದ ಡೆಲಿವರಿ ಬಾಯ್‌ಗೆ ಮಹಿಳೆ ಚಪ್ಪಲಿ ಏಟು!

    ಬೆಂಗಳೂರು: ಆರ್ಡರ್ ಮಾಡಿದ ವಸ್ತುಗಳನ್ನು ತಲುಪಿಸಲು ಹೋದಾಗ ತನಗೆ ಚಪ್ಪಲಿಯಿಂದ ಹೊಡೆದು ಅವಮಾನ ಮಾಡಿರುವುದಾಗಿ ಡೆಲಿವರಿ ಬಾಯ್ (Delivery Boy) ಒಬ್ಬರಿಂದ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಮಹಿಳೆ ವರ್ತನೆ ಖಂಡಿಸಿ ಡೆಲಿವರಿ ಬಾಯ್‌ಗಳು ಪ್ರತಿಭಟನೆ (Protest) ನಡೆಸಿದ್ದಾರೆ.

    ಹೆಬ್ಬುಗೋಡಿ ಪೊಲೀಸ್ ಠಾಣಾ (Hebbagodi Police Station) ವ್ಯಾಪ್ತಿಯ ಪ್ರೆಸ್ಟಿಜ್ ಸನ್‌ರೈಸ್ ಪಾರ್ಕ್ ನಾರ್ವುಡ್ ಅಪಾರ್ಟ್ಮೆಂಟ್ ನಲ್ಲಿ ಘಟನೆ ನಡೆದಿದೆ. ಆರ್ಡರ್ ಮಾಡಿದ ವಸ್ತುಗಳಿಗೆ ಹಣ ಕೊಡದೇ ಮಹಿಳೆ ಕ್ಯಾತೆ ತೆಗೆದಿದ್ದಾಳೆ. ಇದನ್ನ ಪ್ರಶ್ನೆ ಮಾಡಿದ್ದಕ್ಕೆ ಉತ್ತರ ಭಾರತ ಮೂಲದ ಮಹಿಳೆ (North India Women) ನನ್ನ ಮೇಲೆ ಹಲ್ಲೆ ಮಾಡಿದ್ರು ಎಂದು ಡೆಲಿವರಿ ಬಾಯ್ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ – ವಿಷ ಸೇವಿಸಿ ಟೆಕ್ಕಿ ಗೃಹಿಣಿ ಆತ್ಮಹತ್ಯೆ 

    ಅಪಾರ್ಟ್ಮೆಂಟ್‌ನ ಶ್ರೀನಿ ಎಂಬ ಮಹಿಳೆ ಗೃಹಪಯೋಗಿ ಸಾಮಾಗ್ರಿಗಳನ್ನ ಆರ್ಡರ್ ಮಾಡಿದ್ದರು. ಬುಕ್ ಮಾಡಿದ 8 ಸಾಮಾಗ್ರಿಗಳನ್ನ ಡೆಲಿವರಿ ಬಾಯ್ ತಲುಪಿಸಿದ್ದ. ಆದ್ರೆ ಮಹಿಳೆ ಆತನ ಮುಂದೆಯೇ ವಸ್ತುಗಳನ್ನ ಪರಿಶೀಲನೆ ಮಾಡಿಕೊಳ್ಳದೇ ಮನೆಯೊಳಗೆ ತೆಗೆದುಕೊಂಡು ಹೋಗಿ ಪರಿಶೀಲಿಸಿದ್ದಾಳೆ. ಬಳಿಕ 2 ವಸ್ತು ಕಡಿಮೆಯಾಗಿದೆ ಎಂದು ಖ್ಯಾತೆ ತೆಗೆದಿದ್ದಾಳೆ. ಆದ್ರೆ ಡೆಲಿವರಿ ಬಾಯ್ ವಸ್ತುಗಳನ್ನು ತಲುಪಿಸಿದ್ದೇನೆ ಎಂದು ಹೇಳಿದಾಗ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾಳೆ.

    ಆ ಮಹಿಳೆಯಿಂದ ಕ್ಷಮೆಗೆ ಆಗ್ರಹಿಸಿ ಡೆಲಿವರಿ ಬಾಯ್ ಗಳು ಅಪಾರ್ಟ್ಮೆಂಟ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮಹಿಳೆ ಅಪಾರ್ಟ್ಮೆಂಟ್‌ನಿಂದ ಎಸ್ಕೇಪ್ ಆಗಿದ್ದಾಳೆ. ಇದನ್ನೂ ಓದಿ: ಯುವತಿ ಕೈಕೊಟ್ಟಳೆಂದು ಹಾಸನ ಯುವಕ ಆತ್ಮಹತ್ಯೆ – ಅವನು ಸತ್ರೆ ನಾನೂ ಸಾಯೋಕಾಗುತ್ತಾ ಅಂದ್ಳು ಸುಂದರಿ

    ಹಲ್ಲೆಗೊಳಗಾದ ಡೆಲಿವರಿ ಬಾಯ್ ನೀಡಿದ ದೂರು ದಾಖಲಿಸಿಕೊಳ್ಳಲು ಹೆಬ್ಬುಗೋಡಿ ಪೊಲೀಸರು ಹಿಂದೇಟು ಹಾಕಿದ್ದಾರೆ. ಡೆಲಿವರಿ ಬಾಯ್ ಗೆ ಹೆದರಿಸಿ, ಸಂಧಾನ ಮಾಡಿ ಕಳಿಸಿದ್ದಾರೆ ಎನ್ನಲಾಗಿದೆ. ಕನ್ನಡಪರ ಸಂಘಟನೆಗಳು ಠಾಣೆಯ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿವೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪತ್ನಿ ಮಹಾಲಕ್ಷ್ಮಿಗಾಗಿ ‘ಡೆಲಿವರಿ ಬಾಯ್’ ಆದರಂತೆ ರವೀಂದರ್: ಮನದಾಳ ಬಿಚ್ಚಿಟ್ಟ ಮನ್ಮಥ

    ಪತ್ನಿ ಮಹಾಲಕ್ಷ್ಮಿಗಾಗಿ ‘ಡೆಲಿವರಿ ಬಾಯ್’ ಆದರಂತೆ ರವೀಂದರ್: ಮನದಾಳ ಬಿಚ್ಚಿಟ್ಟ ಮನ್ಮಥ

    ಟಿ ಮಹಾಲಕ್ಷ್ಮಿ (Mahalakshmi) ಅವರನ್ನು ಮದುವೆಯಾದ ನಂತರ ನಿರ್ಮಾಪಕ ರವೀಂದರ್ (Ravinder Chandrasekaran) ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ತಾವು ಅನುಭವಿಸುತ್ತಿರುವ ಒಂದೊಂದೇ ಮಧುರ ಕ್ಷಣಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಮಹಾಲಕ್ಷ್ಮಿ ಅವರನ್ನು ಮದುವೆಯಾದ ನಂತರ ಅವರ ಬದುಕಿನಲ್ಲಿ ಆದ ಬದಲಾವಣೆಗಳನ್ನೂ ಅವರು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ.

    ಈ ಹಿಂದೆ ಹೆಂಡತಿಯನ್ನು ತಮ್ಮ ಮನೆದೇವರಿಗೆ ಕರೆದುಕೊಂಡು ಹೋಗಿದ್ದರು. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಲ್ಲದೇ, ಹೆಂಡತಿಯೊಂದಿಗೆ ರೆಸಾರ್ಟ್ ನಲ್ಲಿ ಕಳೆದ ಕ್ಷಣಗಳನ್ನೂ ಅವರು ಫೋಟೋಗಳ ಸಮೇತ ತಿಳಿಸಿದ್ದರು. ಹೀಗೆ ತಮ್ಮ ಸುಖ ದಾಂಪತ್ಯ (Marriage) ಜೀವನದ ರಸಗಳಿಗೆಯನ್ನು ಗಂಭೀರವಾಗಿ ಒಂದೊಂದು ಸಲ ತಮಾಷೆಯಾಗಿ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಈ ಬಾರಿ ತಮಾಷೆಯ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಅನುಭವ ಬಿಚ್ಚಿಟ್ಟ ನಟಿ ಶಮಾ ಸಿಕಂದರ್

    ಪತಿ ಮಹಾಲಕ್ಷ್ಮಿ ಈ ರವಿವಾರದಂದು ಶೂಟಿಂಗ್ ಗಾಗಿ ತೆರಳಿದ್ದರಂತೆ. ಅಲ್ಲದೇ, ಏನೆಲ್ಲ ತಮಗೆ ಊಟ ಬೇಕು ಎಂದು ಹೇಳಿಕೊಟ್ಟಿದ್ದರಂತೆ. ಊಟ ಆರ್ಡರ್ ಮಾಡಿ ಕಳುಹಿಸಬಹುದಿತ್ತು. ಆದರೆ, ನಾನೇ ಶೂಟಿಂಗ್ ಸ್ಪಾಟ್ ಗೆ ಅಡುಗೆ ತಗೆದುಕೊಂಡು ಹೋಗಿದ್ದೆ. ಅದೊಂದು ರೀತಿಯಲ್ಲಿ ಅನುಭವ ವಿಭಿನ್ನವಾಗಿತ್ತು. ರವಿವಾರದಂದು ಸಾಮಾನ್ಯವಾಗಿ ನಾನ್ ವೆಜ್ ಇರತ್ತೆ. ನನ್ನ ತಾಯಿ ಹೆಂಡತಿಗಾಗಿ ವೆಜ್ ಮಾಡಿದ್ದಳು ಎಂದು ಬರೆದುಕೊಂಡಿದ್ದಾರೆ.

    ಅಲ್ಲದೇ, ಊಟ ತಗೆದುಕೊಂಡು ಹೋದ ಬಟ್ಟಲು, ಡಬ್ಬಿಗಳನ್ನು ವಾಪಸ್ಸು ತರುವಂತೆ ಹೆಂಡತಿಗೆ ಕೇಳಿಕೊಂಡಿದ್ದಾರೆ. ಅವುಗಳಿಗಾಗಿ ಅತ್ತೆ ಕಾಯುತ್ತಿರುತ್ತಾರೆ. ಯಾವುದೇ ಕಾರಣಕ್ಕೂ ಮಿಸ್ ಮಾಡದೇ ಎಲ್ಲವನ್ನೂ ತಗೆದುಕೊಂಡು ಬಾ ಎಂದು ಸೋಷಿಯಲ್ ಮೀಡಿಯಾ ಮೂಲಕವೇ ಹೆಂಡತಿಗೆ ಹೇಳಿದ್ದಾರೆ. ಆ ಒಂದು ದಿನ ಫುಡ್ ಡೆಲಿವರಿ ಬಾಯ್ (Delivery Boy) ಆದ ಅನುಭವನ್ನು ರವೀಂದರ್ ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇನ್-ಸ್ಟಂಟ್ ಡೆಲಿವರಿ ಇಲ್ಲ: 1,300 ಫುಡ್ ಡೆಲಿವರಿ ಬಾಯ್‍ಗಳಿಗೆ ದಂಡ

    ಇನ್-ಸ್ಟಂಟ್ ಡೆಲಿವರಿ ಇಲ್ಲ: 1,300 ಫುಡ್ ಡೆಲಿವರಿ ಬಾಯ್‍ಗಳಿಗೆ ದಂಡ

    ಮುಂಬೈ: ಟ್ರಾಫಿಕ್ ನಿಯಮಗಳನ್ನು ನಿರ್ಲಕ್ಷಿಸಿ ಅಪಾಯಕಾರಿಯಾಗಿ ಬೈಕ್ ಓಡಿಸುತ್ತಿರುವುದ್ದಕ್ಕಾಗಿ ಮುಂಬೈ ಪೊಲೀಸರು ಸುಮಾರು ಹದಿನೈದು ದಿನಗಳಲ್ಲಿ 1,300ಕ್ಕೂ ಹೆಚ್ಚು ಡೆಲಿವರಿ ಬಾಯ್‍ಗಳಿಗೆ ದಂಡ ವಿಧಿಸಿದ್ದಾರೆ.

    ಇನ್‍ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಪೊಲೀಸರು, ದಯವಿಟ್ಟು ‘ಇನ್-ಸ್ಟಂಟ್’ ಡೆಲಿವರಿ ಬೇಡ! ಏಪ್ರಿಲ್ 5 ರಿಂದ 18 ರ ನಡುವೆ ಟ್ರಾಫಿಕ್ ನಿಯಮಗಳನ್ನು ನಿರ್ಲಕ್ಷಿಸಿ ಸವಾರಿ ಮಾಡಿದ್ದ 1,366 ಡೆಲಿವರಿ ರೈಡರ್‌ಗಳಿಗೆ ದಂಡ ವಿಧಿಸಲಾಗಿದೆ. ದಯವಿಟ್ಟು ಗಮನಿಸಿ, ಆಹಾರಕ್ಕಾಗಿ ಕಾಯಬಹುದು ಆದರೆ ಜೀವನ ಅದೇ ರೀತಿ ಇರುವುದಿಲ್ಲ ಎಂದು ಸಂದೇಶ ಸಾರಿದ್ದಾರೆ. ಇದನ್ನೂ ಓದಿ: ಸೈನಿಕರಿಗಾಗಿ ವೈದ್ಯಕೀಯ ಸಲಕರಣೆ ರವಾನೆ ಮಾಡಿದ ಇನ್ಫೋಸಿಸ್ ಕಂಪನಿ ಸಹ-ಸಂಸ್ಥಾಪಕ ಕೆ.ದಿನೇಶ್ 

     

    View this post on Instagram

     

    A post shared by Mumbai Police (@mumbaipolice)

    ಪೋಸ್ಟ್ ಜೊತೆಗೆ, ರಾಂಗ್ ಸೈಡ್ ಅಥವಾ ಹೆಲ್ಮೆಟ್ ಇಲ್ಲದೆ ಚಾಲನೆ ಅಪಾಯಕಾರಿ ಎಂದು ಹೇಳುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಹೆಲ್ಮೆಟ್ ಕಂಪನಿಗಳು ಬಳಸುವ ಬಣ್ಣಗಳಾದ ಕೆಂಪು, ಕಿತ್ತಳೆ, ನೀಲಿ ಮತ್ತು ಹಸಿರು ಹೆಲ್ಮೆಟ್ ಫೋಟೋ ಹಾಕಿಕೊಂಡು ಸಂದೇಶ ಕೊಟ್ಟಿದ್ದಾರೆ.

    ಮುಂಬೈ ಪೊಲೀಸರ ಇನ್‍ಸ್ಟಾಗ್ರಾಮ್ ಪೋಸ್ಟ್‌ ಪ್ರಕಾರ ಏಪ್ರಿಲ್ 5 ಮತ್ತು 18 ರ ನಡುವೆ ಡೆಲಿವರಿ ರೈಡರ್‌ಗಳಿಗೆ ದಂಡವನ್ನು ಹಾಕಲಾಗಿದೆ. ಇವರ ಮಾಹಿತಿ ಪ್ರಕಾರ, ಒಟ್ಟು 1,124 ಸವಾರರು ಸರಿಯಾದ ಸಮಯಕ್ಕೆ ಆಹಾರವನ್ನು ತಲುಪಿಸಲು ತಪ್ಪಾದ ರಸ್ತೆಯಲ್ಲಿ ವಾಹನವನ್ನು ಓಡಿಸುತ್ತಿದ್ದರು. ಮತ್ತೆ ಕೆಲವರು 242 ಜನರು ಹೆಲ್ಮೆಟ್ ಧರಿಸಿರಲಿಲ್ಲ ಎಂದು ಬರೆದು ಕೊಂಡಿದ್ದಾರೆ.

    ಈ ಪೋಸ್ಟ್ ನೋಡಿದ ನೆಟ್ಟಿಗರು, ಅನೇಕರು ಪ್ರಯಾಣದ ಸಮಯವನ್ನು ಉಳಿಸಲು ಮತ್ತು ಡೆಲಿವರಿಗೆ ಕೊಟ್ಟಿರುವ ಸಮಯವನ್ನು ಪೂರೈಸಲು ತಪ್ಪು ರಸ್ತೆಗಳಲ್ಲಿ ವಾಹನವನ್ನು ಓಡಿಸುತ್ತಾರೆ. ಇದರಿಂದಾಗಿ ಗ್ರಾಹಕರು ಸಹ ಈ ಕುರಿತು ದೂರು ನೀಡುವುದಿಲ್ಲ. ಇದನ್ನು ತಡೆಯಬೇಕಾದ್ರೆ ಆಯಾಯ ಕಂಪನಿಗಳಿಗೆ ಟ್ರಾಫಿಕ್ ಪೆನಾಲ್ಟಿ ವಿಧಿಸಬೇಕು. ಇದರಿಂದ ಡೆಲಿವರಿ ಬಾಯ್‍ಗಳ ಮೇಲೆ ವಿಧಿಸಿರುವ ಒತ್ತಡಗಳು ಕಡಿಮೆಯಾಗುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಆಪ್ತರೆನ್ನಲಾದ ಕಾಂಗ್ರೆಸ್ ನಾಯಕರನ್ನ ಬಂಧಿಸಲಾಗಿದೆ: ಆರಗ 

  • ಆ್ಯಪ್ ಬಂದ್ ಮಾಡಿ ಝೊಮ್ಯಾಟೋ ಸಿಬ್ಬಂದಿ ಪ್ರತಿಭಟನೆ

    ಆ್ಯಪ್ ಬಂದ್ ಮಾಡಿ ಝೊಮ್ಯಾಟೋ ಸಿಬ್ಬಂದಿ ಪ್ರತಿಭಟನೆ

    ಧಾರವಾಡ: ಕಳೆದ ರಾತ್ರಿಯಿಂದ ಧಾರವಾಡದಲ್ಲಿ ಮನೆ ಮನೆಗೆ ಫುಡ್ ಡಿಲೆವರಿ ಕೊಡುವ ಝೊಮ್ಯಾಟೋ ಆ್ಯಪ್ ಬಂದ್ ಆಗಿದೆ. ಝೊಮ್ಯಾಟೋದಲ್ಲಿ ಡೆಲಿವರಿ ಕೆಲಸ ಮಾಡುವ ಧಾರವಾಡದ ಎಲ್ಲ ಸಿಬ್ಬಂದಿ ಆ್ಯಪ್ ಬಂದ್ ಮಾಡಿ ಪ್ರತಿಭಟನೆ ಮಾಡುತಿದ್ದಾರೆ.

    ಅತ್ಯಂತ ದೂರದಲ್ಲಿರುವ ಮನೆಗಳಿಗೆ ಫುಡ್ ಡೆಲಿವರಿ ಮಾಡಲು ಆಗುವುದಿಲ್ಲ. ಪೆಟ್ರೋಲ್ ದರ ಹೆಚ್ಚಳವಾಗಿದ್ದರಿಂದ ನಮಗೆ ಏನೂ ಹಣ ಉಳಿಯುತ್ತಿಲ್ಲ, ಹೀಗಾಗಿ ಡೆಲಿವರಿ ಹಣ ಹೆಚ್ಚು ಮಾಡಿ ಎಂದು ಬೇಡಿಕೆ ಇಟ್ಟಿದ್ದಾರೆ.  ಇದನ್ನೂ ಓದಿ: ಫೋಟೋ ಪಾಲಿಟಿಕ್ಸ್-ಮೋದಿ ಭಾವಚಿತ್ರ ಅಳವಡಿಕೆಗೆ ಜೆಡಿಎಸ್ ವಿರೋಧ

    ಪ್ರತಿ ದಿನ 200 ರೂಪಾಯಿ ಪೆಟ್ರೋಲಿಗೆ ಹೋಗುತ್ತಿದ್ದು, ನಮಗೆ ಕೇವಲ 100 ರೂಪಾಯಿ ಮಾತ್ರ ಉಳಿಯುತ್ತಿದೆ ಎಂದು ಸಿಬ್ಬಂದಿ ಹೇಳಿದ್ದಾರೆ. ಅಲ್ಲದೇ ಹೊಸದಾಗಿ ಝೊಮ್ಯಾಟೋಗೆ ಡೆಲಿವರಿ ಬಾಯ್ ಆಗಿ ಕೆಲಸಕ್ಕೆ ಸೇರಿರುವವರು ನಮಗೆ ಹೆಚ್ಚಿನ ಡೆಲಿವರಿ ಮಾಡಲು ಆಗುತ್ತಿಲ್ಲ ಎನ್ನುತ್ತಿದ್ದಾರೆ. ಕಂಪನಿ ಹೆಚ್ಚಿನ ಹಣ ಕೊಟ್ಟರೆ ಮಾತ್ರ ಫುಡ್ ಡೆಲಿವರಿ ಮಾಡುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.