Tag: ಡೆಪ್ಯೂಟಿ ಸ್ಪೀಕರ್

  • ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ – ಮಗ ಸರ್ಕಾರಿ ಕಾರಲ್ಲಿ ದರ್ಬಾರ್

    ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ – ಮಗ ಸರ್ಕಾರಿ ಕಾರಲ್ಲಿ ದರ್ಬಾರ್

    ಹಾವೇರಿ: ಡೆಪ್ಯೂಟಿ ಸ್ಪೀಕರ್ (Deputy Speaker) ರುದ್ರಪ್ಪ ಲಮಾಣಿ (Rudrappa Lamani) ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರೆ ಇತ್ತ ಕಡೆ ರುದ್ರಪ್ಪ ಲಮಾಣಿ ಪುತ್ರ ಸರ್ಕಾರಿ ಕಾರಲ್ಲಿ ಸುತ್ತಾಡುತ್ತಾ ದರ್ಬಾರ್ ನಡೆಸುತ್ತಿದ್ದಾರೆ.

    ಅಪಘಾತದಲ್ಲಿ ಗಾಯಗೊಂಡು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿ (Darshan Lamani) ಬೆಂಗಳೂರಿನಿಂದ ಹಾವೇರಿಗೆ (Haveri) ಸರ್ಕಾರಿ ಕಾರಿನಲ್ಲಿ ಆಗಮಿಸಿದ್ದು, ಸರ್ಕಾರ ಡೆಪ್ಯೂಟಿ ಸ್ಪೀಕರ್‌ಗೆ ನೀಡಿರುವ ಕಾರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಬಿಜೆಪಿಗೆ ದೇಣಿಗೆ ಜಾಸ್ತಿ

    ಪ್ರವಾಸಿ ಮಂದಿರಕ್ಕೆ ಆಗಮಿಸುತ್ತಿದ್ದಂತೆ ಅಧಿಕಾರಿಗಳು ಹಾಗೂ ಕಾರ್ಯಕರ್ತರು ರುದ್ರಪ್ಪ ಲಮಾಣಿ ಅವರೇ ಬಂದರೂ ಎಂದು ಕಾರು ಕಡೆ ಬಂದರು. ಬಂದಿದ್ದು ಅವರ ಪುತ್ರ ಅಂತಾ ಗೊತ್ತಾಗುತ್ತಿದ್ದಂತೆ ರುದ್ರಪ್ಪ ಲಮಾಣಿ ಅವರ ಆರೋಗ್ಯದ ಕುರಿತು ವಿಚಾರಣೆ ಮಾಡಿದರು. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯ ನಾಲ್ವರಿಗೆ ಕೆಎಫ್‍ಡಿ ಸೋಂಕು – ಕಾಡಿಗೆ ತೆರಳದಂತೆ ಆರೋಗ್ಯ ಇಲಾಖೆ ಎಚ್ಚರಿಕೆ

    ದರ್ಶನ್ ಲಮಾಣಿ ತಮ್ಮ ಬೆಂಬಲಿಗರ ಜೊತೆ ನಗರ ಸಂಚಾರ ಮಾಡಿದ್ದು, ಕೆಎಂ05, ಜಿ6000 ನಂಬರಿನ ಸರ್ಕಾರಿ ವಾಹನದಲ್ಲಿ ಓಡಾಡುವ ಮೂಲಕ ದರ್ಬಾರ್ ನಡೆಸಿದ್ದಾರೆ. ಈ ಘಟನೆಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

  • ಸ್ಪೀಕರ್‌ ಹುದ್ದೆ ಬಿಜೆಪಿಗೆ, ಡೆಪ್ಯೂಟಿ ಸ್ಪೀಕರ್‌ ಹುದ್ದೆ ಎನ್‌ಡಿಎ ಮಿತ್ರ ಪಕ್ಷಕ್ಕೆ?

    ಸ್ಪೀಕರ್‌ ಹುದ್ದೆ ಬಿಜೆಪಿಗೆ, ಡೆಪ್ಯೂಟಿ ಸ್ಪೀಕರ್‌ ಹುದ್ದೆ ಎನ್‌ಡಿಎ ಮಿತ್ರ ಪಕ್ಷಕ್ಕೆ?

    ನವದೆಹಲಿ: ಲೋಕಸಭೆಯ ಸ್ಪೀಕರ್‌ (Lok Sabha Speaker) ಹುದ್ದೆಯನ್ನು ಬಿಜೆಪಿ (BJP) ತನ್ನ ಬಳಿಯೇ ಇಟ್ಟುಕೊಳ್ಳಲು ಮುಂದಾಗಿದೆ ಎಂದು ವರದಿಯಾಗಿದೆ.

    ಹೌದು. ಎರಡೂ ಅವಧಿಯಲ್ಲಿ ಬಿಜೆಪಿ ಸ್ಪೀಕರ್‌ ಹುದ್ದೆಯನ್ನು ತನ್ನ ಬಳಿಯೇ ಇಟ್ಟುಕೊಂಡಿತ್ತು. ಈಗ ಮೂರನೇ ಅವಧಿಯಲ್ಲೂ ಬಿಜೆಪಿ ಸ್ಪೀಕರ್‌ ಹುದ್ದೆಯನ್ನು ತನ್ನ ಬಳಿಯೇ ಇಟ್ಟುಕೊಂಡು, ಡೆಪ್ಯೂಟಿ ಸ್ಪೀಕರ್‌ ಹುದ್ದೆಯನ್ನು ಎನ್‌ಡಿಎ (NDA) ಮಿತ್ರಕೂಟಕ್ಕೆ ನೀಡಲು ಮುಂದಾಗಿದೆ.‌

    ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ (Rajnath Singh) ಅವರಿಗೆ ಸ್ಪೀಕರ್‌ ಹುದ್ದೆ ಆಯ್ಕೆ ಸಂಬಂಧ ಮಿತ್ರ ಪಕ್ಷಗಳ ಜೊತೆ ಮಾತುಕತೆ ನಡೆಸಿ ತೀರ್ಮಾನಕ್ಕೆ ಬರಲು ಸೂಚಿಸಲಾಗಿದೆ.

    ಬಿಜೆಪಿ (BJP) ಬಹುಮತ ಹೊಂದಿದ್ದ ಎರಡು ಅವಧಿಯಲ್ಲಿ ಕ್ರಮವಾಗಿ ಸುಮಿತ್ರಾ ಮಹಾಜನ್ ಮತ್ತು ಓಂ ಬಿರ್ಲಾ ಅವರು ಸ್ಪೀಕರ್ ಆಗಿದ್ದರು. ಆದರೆ ಈ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ ಇಲ್ಲದೇ ಇದ್ದಾಗ ಸ್ಪೀಕರ್‌ ಯಾರಾಗುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಇದನ್ನೂ ಓದಿ: ಆಂಧ್ರ ಬಿಜೆಪಿ ಅಧ್ಯಕ್ಷೆ ಪುರಂದೇಶ್ವರಿ ಲೋಕಸಭೆಯ ಸ್ಪೀಕರ್‌?

    ಸಮ್ಮಿಶ್ರ ಸರ್ಕಾರದಲ್ಲಿ ಸ್ಪೀಕರ್‌ ಹುದ್ದೆಗೆ ಭಾರೀ ಮಹತ್ವವಿದೆ. ಸಂಸದರು ಪಕ್ಷಾಂತರ ನಡೆಸಿದ ಸಂದರ್ಭದಲ್ಲಿ ಆ ಸಂಸದರನ್ನು ಅನರ್ಹ ಮಾಡಬೇಕೇ? ಬೇಡವೇ ಎಂಬ ಮಹತ್ವದ ತೀರ್ಮಾನವನ್ನು ಸ್ಪೀಕರ್‌ ತೆಗೆದುಕೊಳ್ಳುತ್ತಾರೆ.

    ಈ ಹಿಂದೆ ವರದಿ ಪ್ರಕಾರ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ, ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಸ್ಪೀಕರ್‌ ಹುದ್ದೆಗೆ ಬೇಡಿಕೆ ಇಟ್ಟಿತ್ತು ಎಂದು ವರದಿಯಾಗಿತ್ತು. ಜೂನ್‌ 24 ರಿಂದ ಲೋಕಸಭಾ ಅಧಿವೇಶನ ನಡೆಯಲಿದ್ದು ಜುಲೈ 3ರವರೆಗೆ ನಡೆಯಲಿದೆ. ಈ ಅಧಿವೇಶನದ ಅವಧಿಯಲ್ಲಿ ನೂತನವಾಗಿ ಆಯ್ಕೆಯಾದ ಸದಸ್ಯರು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

     

  • ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನಕ್ಕೆ ಕೃಷ್ಣಾರೆಡ್ಡಿ ರಾಜೀನಾಮೆ

    ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನಕ್ಕೆ ಕೃಷ್ಣಾರೆಡ್ಡಿ ರಾಜೀನಾಮೆ

    -ಆನಂದ್ ಸಿ.ಮಾಮನಿ ಹೊಸ ಡೆಪ್ಯೂಟಿ ಸ್ಪೀಕರ್?

    ಬೆಂಗಳೂರು: ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನಕ್ಕೆ ಜೆ.ಕೆ.ಕೃಷ್ಣಾರೆಡ್ಡಿ ರಾಜೀನಾಮೆ ನೀಡಿದ್ದಾರೆ. ಇಂದು ಬೆಳಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ರೇಸ್ ಕೋರ್ಸ್ ನಿವಾಸದಲ್ಲಿ ಭೇಟಿಯಾದ ಜೆ.ಕೆ. ಕೃಷ್ಣಾರೆಡ್ಡಿ, ಉಪಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

    ಇವತ್ತು ಸದನದಲ್ಲಿ ಬಿಜೆಪಿಯು ಕೃಷ್ಣಾರೆಡ್ಡಿ ವಿರುದ್ಧ ನಿಯಮ 169ರಡಿಯಲ್ಲಿ ಅವಿಶ್ವಾಸ ನಿರ್ಣಯದ ಪ್ರಸ್ತಾವ ಮಂಡಿಸಲಿತ್ತು. ಆದರೆ ಮುಜುಗರದಿಂದ ಪಾರಾಗಲು ಅವಿಶ್ವಾಸ ನಿರ್ಣಯ ಮಂಡನೆಗೂ ಮುನ್ನವೇ ಕೃಷ್ಣಾರೆಡ್ಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಆ ಮೂಲಕ ಡೆಪ್ಯೂಟಿ ಸ್ಪೀಕರ್ ಸ್ಥಾನದ ಮೇಲೆ ಕಣ್ಣೀಟ್ಟಿರುವ ಸವದತ್ತಿಯ ಬಿಜೆಪಿ ಶಾಸಕ ಆನಂದ್ ಸಿ. ಮಾಮನಿ ಅವರ ಹಾದಿ ಸುಗಮವಾದಂತಾಗಿದೆ. ಸದ್ಯದಲ್ಲೇ ಉಪಸಭಾಧ್ಯಕ್ಷರಾಗಿ ಶಾಸಕ ಆನಂದ್ ಸಿ. ಮಾಮನಿ ಆಯ್ಕೆಯಾಗುವ ಸಾಧ್ಯತೆಗಳಿವೆ.

    ಮೈತ್ರಿ ಸರ್ಕಾರದ ಅವಧಿಯಲ್ಲಿ ಡೆಪ್ಯೂಟಿ ಸ್ಪೀಕರ್ ಆಗಿ ಚಿಂತಾಮಣಿ ಕ್ಷೇತ್ರದ ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಆಯ್ಕೆ ಆಗಿದ್ದರು. ಬಳಿಕ ರಾಜ್ಯದಲ್ಲಿ ನಡೆದ ರಾಜಕೀಯ ಸ್ಥಿತ್ಯಂತರ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರ ಬಿದ್ದು ಬಿಜೆಪಿ ಸರ್ಕಾರ ಅಧಿಕಾರ ಹಿಡಿಯಿತು. ಬಜೆಟ್ ಅಧಿವೇಶನದ ಮೊದಲ ದಿನವೇ ಕೃಷ್ಣಾರೆಡ್ಡಿ ವಿರುದ್ಧ ಬಿಜೆಪಿಯ 25 ಕ್ಕೂ ಹೆಚ್ಚು ಶಾಸಕರು ಸ್ಪೀಕರ್ ಕಾಗೇರಿ ಅವರಿಗೆ ಅವಿಶ್ವಾಸ ನಿರ್ಣಯ ನೊಟೀಸ್ ನೀಡಿದ್ದರು. ಬಿಜೆಪಿಯುಂದ ಡೆಪ್ಯೂಟಿ ಸ್ಪೀಕರ್ ಸ್ಥಾನಕ್ಕೆ ಸವದತ್ತಿ ಆನಂದ್ ಸಿ. ಮಾಮನಿ ಪ್ರಬಲ ಬೇಡಿಕೆ ಇಟ್ಟಿದ್ದು, ಬಹುತೇಕ ಬಿಜೆಪಿ ಶಾಸಕರು ಇದಕ್ಕೆ ಒಪ್ಪಿಕೊಂಡಿದ್ದಾರೆ. ಹಾಗಾಗಿ ಹೊಸ ಡೆಪ್ಯೂಟಿ ಸ್ಪೀಕರ್ ಆಗಿ ಬಿಜೆಪಿ ಶಾಸಕ ಆನಂದ್ ಸಿ. ಮಾಮನಿ ಆಯ್ಕೆ ನಿಶ್ಚಿತ ಎನ್ನಲಾಗಿದೆ.