Tag: ಡೆಡ್‌ಲೈನ್

  • ಸಿಲಿಕಾನ್ ಸಿಟಿಯಲ್ಲಿ ಡೆಡ್‌ಲೈನ್ ಅಂತ್ಯ ಕಂಡರೂ ಮುಗಿಯದ ವೈಟ್ ಟಾಪಿಂಗ್ ಕಾಮಗಾರಿ

    ಸಿಲಿಕಾನ್ ಸಿಟಿಯಲ್ಲಿ ಡೆಡ್‌ಲೈನ್ ಅಂತ್ಯ ಕಂಡರೂ ಮುಗಿಯದ ವೈಟ್ ಟಾಪಿಂಗ್ ಕಾಮಗಾರಿ

    ಬೆಂಗಳೂರು: ನಗರದಲ್ಲಿ ಗುಂಡಿ ಮುಚ್ಚಳಕ್ಕೆ ಡೆಡ್‌ಲೈನ್ ಮುಗಿದಿದ್ದರೂ ವೈಟ್ ಟಾಪಿಂಗ್ (White Topping) ಕಾಮಗಾರಿ ಮುಕ್ತಾಯ ಆಗುತ್ತಿಲ್ಲ ಎಂದು ಸೌರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ವೈಟ್ ಟಾಪಿಂಗ್ ಕಾಮಗಾರಿ ತಡ ಆಗುವುದಕ್ಕೆ ಪೊಲೀಸ್ ಇಲಾಖೆ, ಬೆಸ್ಕಾಂ (BESCOM), ಜಲಮಂಡಳಿ (BWSSB) ಮೇಲೆ ಬಿಬಿಎಂಪಿಯವರು (BBMP) ಗೂಬೆ ಕೂರಿಸುತ್ತಿದ್ದಾರೆ. ಈ ಕಾಮಗಾರಿ ತಡ ಆಗುವುದಕ್ಕೆ ಸಾರ್ವಜನಿಕರ ಸಮಸ್ಯೆ ಆಗುತ್ತಿದೆ. ಈ ಹಿನ್ನೆಲೆ ಇಲಾಖೆಗಳ ಜೊತೆ ಸಮನ್ವಯ ಸಾಧಿಸಲು ಮನೀಷ್ ಮೌದ್ಗಿಲ್ (Manish Mudgal) ನೇತೃತ್ವದಲ್ಲಿ ತಂಡ ರಚನೆ ಮಾಡಿದ್ದು, ಮುಂದಿನ ವಾರದಲ್ಲಿ ಮತ್ತೆ ಏಳು ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಆರಂಭಿಸಲಿದೆ.ಇದನ್ನೂ ಓದಿ: ಪ್ರಪಂಚದಾದ್ಯಂತ ಈ ವರ್ಷ ಡೆಂಗ್ಯೂ ಪ್ರಕರಣ ಹೆಚ್ಚಳ – ಕಾರಣವೇನು? 

    ಒಟ್ಟು 90ಕ್ಕೂ ಹೆಚ್ಚು ರಸ್ತೆಗಳಲ್ಲಿ ಬಿಬಿಎಂಪಿ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಮಾಡಲು ಮುಂದಾಗಿದೆ. ಈಗಾಗಲೇ ಚಿಕ್ಕಪೇಟೆ, ರಾಜ್‌ಕುಮಾರ್ ರಸ್ತೆ ಸೇರಿದಂತೆ ಹಲವು ಕಡೆ ವೈಟ್ ಟಾಪಿಂಗ್ ಆರಂಭ ಮಾಡಿ 100 ದಿನ ಕಳೆದರೂ ಕಾಮಗಾರಿ ಮುಕ್ತಾಯ ಆಗಿಲ್ಲ. ನೀಡಿದ್ದ ಕಾಲಾವಕಾಶ ಮುಗಿದರೂ ಇನ್ನು ಕಾಮಗಾರಿ ಕೆಲಸ ಮುಗಿದಿಲ್ಲ. ಇದರಿಂದಾಗಿ ಚಿಕ್ಕಪೇಟೆಯಲ್ಲಿ ಟ್ರಾಫಿಕ್ ಸಮಸ್ಯೆ, ವ್ಯಾಪಾರಕ್ಕೆ ಸಮಸ್ಯೆ, ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆ ಆಗುತ್ತಿದೆ.

    ಬಿಬಿಎಂಪಿ ಮುಖ್ಯ ಮಾತನಾಡಿ, ಆಯುಕ್ತರು ವೈಟ್ ಟಾಪಿಂಗ್ ಕಾಮಗಾರಿ ತಡ ಆಗುವುದಕ್ಕೆ ಪೊಲೀಸ್ ಇಲಾಖೆ, ಜಲಮಂಡಳಿ ಹಾಗೂ ಬೆಸ್ಕಾಂ ಕಾರಣ ಎಂದು ತಿಳಿಸಿದ್ದಾರೆ. ಪೊಲೀಸ್ ಇಲಾಖೆ ಬದಲಿ ಮಾರ್ಗ ನೀಡಲ್ಲ, ಜಲಮಂಡಳಿ ಪೈಪ್ ಮಾಹಿತಿ ನೀಡಲ್ಲ ಈ ಕಾರಣದಿಂದಾಗಿ ತಡ ಆಗುತ್ತಿದೆ. ಇಲಾಖೆಗಳ ಜೊತೆ ಸಮನ್ವಯ ಸಾದಿಸಲು ಬಿಬಿಎಂಪಿ ವಿಶೇಷ ಆಯುಕ್ತ ಮನೀಷ್ ಮೌದ್ಗಿಲ್ ನೇತೃತ್ವದಲ್ಲಿ ತಂಡ ರಚನೆ ಮಾಡಿದ್ದಾರೆ.

    ಹೆಣ್ಣೂರು ಜಂಕ್ಷನ್, ತುಮಕೂರು ರಸ್ತೆಯ (Tumkuru Road) ಎಂಇಎ ಮುಖ್ಯ ರಸ್ತೆ, ರಾಜ್‌ಕುಮಾರ್ ರಸ್ತೆಯ (Rajkumar Road) ಒಳಭಾಗದ ರಸ್ತೆಗಳು, ಮಹಾದೇವಪುರ, ಪಶ್ಚಿಮ ವಲಯದ ಹಲವು ಪ್ರದೇಶದ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಆರಂಭ ಆಗಲಿದ್ದು, ಟ್ರಾಫಿಕ್ ಸಮಸ್ಯೆ ಆಗುವ ಸಾಧ್ಯತೆ ಇದೆ. ಹೀಗಾಗಿ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

    ಒಟ್ಟಾರೆ ವೈಟ್ ಟಾಪಿಂಗ್ ರಸ್ತೆ ಮಾಡುವುದು ಒಳ್ಳೆಯದೇ ಆದರೆ ಕೊಟ್ಟಿರುವ ಸಮಯದ ಒಳಗಡೆ ಮುಗಿಸಬೇಕು. ಇಲ್ಲದೇ ಇದ್ದರೆ ಸಾರ್ವಜನಿಕರಿಗೆ ಸಮಸ್ಯೆ ಆಗಲಿದೆ. ಈಗಾಗಿ ಡೆಡ್‌ಲೈನ್ (DeadLine) ಒಳಗಡೆ ವೈಟ್ ಟಾಪಿಂಗ್ ಕಾಮಗಾರಿ ಮುಗಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿ ಮಾಡಿಕೊಡುತ್ತಾರಾ ಎನ್ನುವುದು ಕಾದು ನೋಡಬೇಕಿದೆ.ಇದನ್ನೂ ಓದಿ: ಇರಾನ್‌ನಿಂದ ಕ್ಷಿಪಣಿ ದಾಳಿ – ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು, ಟರ್ಕಿಯಲ್ಲಿ ಲ್ಯಾಂಡಿಂಗ್‌

  • ದಾಸರಹಳ್ಳಿಯಲ್ಲಿ ತಲೆಯೆತ್ತಿದ್ದ ಗುಂಡಿ ಸಮಸ್ಯೆ – ಡೆಡ್‌ಲೈನ್ ಮುಗಿದರೂ ದುರಸ್ತಿಯಿಲ್ಲ

    ದಾಸರಹಳ್ಳಿಯಲ್ಲಿ ತಲೆಯೆತ್ತಿದ್ದ ಗುಂಡಿ ಸಮಸ್ಯೆ – ಡೆಡ್‌ಲೈನ್ ಮುಗಿದರೂ ದುರಸ್ತಿಯಿಲ್ಲ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Silicon City) ಇತ್ತೀಚಿಗಷ್ಟೇ ಗುಂಡಿಯನ್ನು ಮುಚ್ಚಬೇಕು ಎನ್ನುವ ಡೆಡ್‌ಲೈನ್ (DeadLine) ಮುಗಿದಿದ್ದು, ನಗರದ ಹೊರವಲಯದಲ್ಲಿರುವ ಚಿಕ್ಕಸಂದ್ರ (Chikkasandra) ಮುಖ್ಯ ರಸ್ತೆಯಿಂದ ಹೆಸರುಘಟ್ಟ (Hesaraghatta) ರಸ್ತೆಯ ಸಾಕಷ್ಟು ಮುಖ್ಯ ರಸ್ತೆಗಳ ಗುಂಡಿಗಳು ಮುಚ್ಚದೇ ಹಾಗೇ ಉಳಿದಿವೆ.

    ಡಿಸಿಎಂ ಡಿ.ಕೆ.ಶಿವಕುಮಾರ್‌ರವರು (DCM DKShivakumar) ಬೆಂಗಳೂರು ನಗರವನ್ನು ಬ್ರಾಂಡ್ ಬೆಂಗಳೂರು (Brand Bengaluru) ಮಾಡಲು ಮುಂದಾಗಿದ್ದಾರೆ. ಹೀಗಾಗಿ ಈ ನಡುವೆ ಬಿಬಿಎಂಪಿ (BBMP) ಅಧಿಕಾರಿಗಳಿಗೆ ನಗರದ ಗುಂಡಿಗಳನ್ನು ಮುಚ್ಚಲು ಗಡುವು ನೀಡಿದ್ದರು. ಈಗಾಗಲೇ ಗಡುವು ಮುಗಿದು ಹಲವು ದಿನಗಳು ಕಳೆದಿವೆ. ಆದರೆ ಟಿ.ದಾಸರಹಳ್ಳಿ (T Dasarahalli) ವಿಧಾನಸಭಾ ಕ್ಷೇತ್ರದ ಚಿಕ್ಕಸಂದ್ರ ಮುಖ್ಯ ರಸ್ತೆಯಿಂದ ಹೆಸರುಘಟ್ಟ ರಸ್ತೆಯ ಸಾಕಷ್ಟು ಮುಖ್ಯ ರಸ್ತೆಗಳು ಗುಂಡಿ ಗಂಡಾಂತರಗಳಿಂದ ಕೂಡಿದ್ದು, ಅವ್ಯವಸ್ಥೆಯಾಗಿ ಉಳಿದಿದೆ.ಇದನ್ನೂ ಓದಿ: 2027ರ ವೇಳೆಗೆ ಚಂದ್ರಯಾನ-4ರ ಸುಳಿವು ಕೊಟ್ಟ ಇಸ್ರೋ; ಚಂದ್ರನಲ್ಲಿಗೆ ಗಗನಯಾತ್ರಿಗಳು ಹೆಜ್ಜೆ ಇಡಲು ಹೇಗೆ ಸಹಕಾರಿ?

    ಗಡುವು ನೀಡಿದ್ದರೂ ಈ ವಿಧಾನಸಭಾ ಕ್ಷೇತ್ರದಲ್ಲಿ ಜನರ ಪಾಡು ಕೇಳುವವರೇ ಇಲ್ಲದಂತಾಗಿದೆ. ಸಾಕಷ್ಟು ಬಾರಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಈ ಸಮಸ್ಯೆ ಹಾಗೆಯೇ ಉಳಿದಿದೆ. ಹೀಗಾಗಿ ರಸ್ತೆ ದುರಸ್ತಿಗಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.

    ಮಂಡಿಯುದ್ದದ ಗುಂಡಿಗಳು ವಾಹನ ಸವಾರರಲ್ಲಿ ಮೃತ್ಯು ಕೂಪವಾಗಿ ಪರಿಣಮಿಸಿವೆ. ಯಮಸ್ವರೂಪಿ ಗುಂಡಿ ಗಂಡಾಂತರದಿಂದ ಎದ್ದು ಬಿದ್ದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರು ತಮ್ಮ ಮಕ್ಕಳನ್ನು ಶಾಲೆಗೆ, ಶಾಲೆಯಿಂದ ಮನೆಗೆ ಕರೆತರಬೇಕಾದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಇನ್ನೂ ಮಳೆಗಾಲದಲ್ಲಿ ಎಲ್ಲಿ ಗುಂಡಿ ಇದೆಯೋ, ಎಲ್ಲಿ ಮಳೆಯ ನೀರು ಇದೆಯೋ ಎಂಬುದು ತಿಳಿಯದ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ತಮ್ಮ ಅಳಲನ್ನು ಆಕ್ರೋಶದ ರೀತಿಯಲ್ಲಿ ದುರಸ್ತಿ ಮಾಡಲು ಮನವಿ ಮಾಡಿದ್ದಾರೆ.

    ಒಟ್ಟಾರೆ ಬೃಹತ್ ಮಹಾನಗರ ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆಗಳು ಈ ವರ್ಷದಲ್ಲಿ ದುರಸ್ತಿಯಾಗುತ್ತದೆಯಾ? ಎಂಬ ಅನುಮಾನವಿದ್ದು, ಬಿಬಿಎಂಪಿ ಅಧಿಕಾರಿಗಳು ಡಿಸಿಎಂ ಆದೇಶಕ್ಕೆ ದುರಸ್ತಿ ಮಾಡುತ್ತಾರಾ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.ಇದನ್ನೂ ಓದಿ: ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋ ತೋರಿಸಿ ಕಿರುಕುಳ – ಕಾಮುಕ ಶಿಕ್ಷಕ ಅರೆಸ್ಟ್‌

    &