Tag: ಡೆಂಗ್ಯೂ ಪ್ರಕರಣ

  • ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 91 ಹೊಸ ಡೆಂಗ್ಯೂ ಪ್ರಕರಣ ದಾಖಲು

    ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 91 ಹೊಸ ಡೆಂಗ್ಯೂ ಪ್ರಕರಣ ದಾಖಲು

    ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಡೆಂಗ್ಯೂ ಪ್ರಕರಣಗಳ (Dengue Case) ಸಂಖ್ಯೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 91 ಹೊಸ ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.

    ರಾಜ್ಯದಲ್ಲಿ ಈವರೆಗೆ ಒಟ್ಟು 29,611 ಪ್ರಕರಣಗಳು ದಾಖಲಾಗಿದ್ದು, 683 ಪ್ರಕರಣಗಳು ಸಕ್ರಿಯವಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಯಲ್ಲಿ 38 ಡೆಂಗ್ಯೂ ಪ್ರಕರಣ ವರದಿಯಾಗಿದೆ ಎಂದು ಆರೋಗ್ಯ ಇಲಾಖೆ (Health Department) ಮಾಹಿತಿ ನೀಡಿದೆ.ಇದನ್ನೂ ಓದಿ: ಉಡುಪಿಯಲ್ಲಿ ಮೇಘಸ್ಪೋಟ – ನಾಪತ್ತೆಯಾದ ವೃದ್ಧೆ ಶವವಾಗಿ ಪತ್ತೆ

    ಬೆಂಗಳೂರಲ್ಲಿ ಡೆಂಗ್ಯೂ ಸ್ಥಿತಿ ಹೇಗಿದೆ?
    ಬೆಂಗಳೂರಲ್ಲಿ ಜನವರಿಯಿಂದ ಇಲ್ಲಿಯವರೆಗೆ 9,035 ಡೆಂಗ್ಯೂ ಕೇಸ್‌ಗಳು ವರದಿಯಾಗಿವೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿದ ಸೊಳ್ಳೆಗಳ ಲಾರ್ವಾಗಳು ಕೊಚ್ಚಿಕೊಂಡು ಹೋಗುತ್ತಿದೆ. ಹೀಗಾಗಿ ದೈನಂದಿನ ಸರಾಸರಿ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿವೆ ಎಂದು ಹೇಳಿದ್ದಾರೆ.

    ಜೂನ್ ತಿಂಗಳಿನಲ್ಲಿ ಪ್ರತಿ ನಿತ್ಯ 200 ಪಾಸಿಟಿವ್ ಕೇಸ್‌ಗಳು ವರದಿಯಾಗುತ್ತಿದ್ದವು. ಆದರೆ ಆಗಸ್ಟ್ 1 ರಿಂದ 6ರ ನಡುವೆ 771 ಪ್ರಕರಣಗಳು ವರದಿಯಾಗಿವೆ. ಕಳೆದ ವಾರ ದೈನಂದಿನ ಸರಾಸರಿ 130ಕ್ಕೆ ಇಳಿದಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ಕರಾಚಿಯಲ್ಲಿ ಸ್ಫೋಟ| ಇಬ್ಬರು ಚೀನಿ ಪ್ರಜೆಗಳು ಬಲಿ – 8 ಮಂದಿಗೆ ಗಾಯ

    ಈ ವರ್ಷದ ಅಗಸ್ಟ್‌ವರೆಗೆ ಜಾಗತಿಕವಾಗಿ 1.2 ಕೋಟಿಗೂ ಹೆಚ್ಚು ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಂಡಿವೆ. 6,991 ಜನ ಡೆಂಗ್ಯೂ ಪ್ರಕರಣದಿಂದ ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ  (WHO) ವರದಿ ಅಂಕಿಅಂಶಗಳು ತಿಳಿಸಿವೆ.

  • ಡೆಂಗ್ಯೂ ನಿಯಂತ್ರಣಕ್ಕೆ ಕ್ರಮ | ಸೊಳ್ಳೆ ಉತ್ಪತ್ತಿಯಾದ್ರೆ ಬೀಳುತ್ತೆ ದಂಡ – ಮನೆ, ಹೋಟೆಲ್ ಮಾಲೀಕರಿಗೆ ಎಷ್ಟು?

    ಡೆಂಗ್ಯೂ ನಿಯಂತ್ರಣಕ್ಕೆ ಕ್ರಮ | ಸೊಳ್ಳೆ ಉತ್ಪತ್ತಿಯಾದ್ರೆ ಬೀಳುತ್ತೆ ದಂಡ – ಮನೆ, ಹೋಟೆಲ್ ಮಾಲೀಕರಿಗೆ ಎಷ್ಟು?

    ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳ (Dengue Cases) ಹಿನ್ನೆಲೆ ಡೆಂಗ್ಯೂ ಆರ್ಭಟವನ್ನು ನಿಯಂತ್ರಿಸಲು ದಂಡಾಸ್ತ್ರಕ್ಕೆ ಸರ್ಕಾರ ಮುಂದಾಗಿದೆ. ಸೊಳ್ಳೆಯನ್ನು ನಿಯಂತ್ರಿಸದಿದ್ದರೆ ದಂಡ ಹಾಕಿ ಎಂದು ಜಿಲ್ಲಾಧಿಕಾರಿಗಳಿಗೆ ಅಧಿಕಾರಿ ನೀಡಿ ಗೆಜೆಟ್ ನೋಟಿಫಿಕೇಷನ್ (Gazette Notification) ಹೊರಡಿಸಿದೆ.ಇದನ್ನೂ ಓದಿ: ಧನ್ನೆಗಾಂವ್ ಜಲಾಶಯದಿಂದ 1,300 ಕ್ಯುಸೆಕ್ ನೀರು ಬಿಡುಗಡೆ – ಮಾಂಜ್ರಾ ನದಿಪಾತ್ರದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣ

    ಆರೋಗ್ಯ ಇಲಾಖೆ (Health Deaprtment) ಡೆಂಗ್ಯೂ ಕಾಯಿಲೆಯನ್ನು ಸಾಂಕ್ರಾಮಿಕ ಕಾಯಿಲೆ ಎಂದು ಘೋಷಣೆ ಮಾಡಿದೆ. ರಾಜ್ಯದಲ್ಲಿ ದಿನೇ ದಿನೇ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ನಿಯಂತ್ರಣಕ್ಕಾಗಿ ಮಾರ್ಗಸೂಚಿ ಬಿಡುಗಡೆಗೊಳಿಸಿದೆ. ಮಾರ್ಗಸೂಚಿ (Guidelines)ಉಲ್ಲಂಘಿಸಿದವರ ಮೇಲೆ ದಂಡ ಪ್ರಯೋಗ ನಡೆಸಲಾಗುವುದು ಸರ್ಕಾರ ತಿಳಿಸಿದೆ. ಜೊತೆಗೆ ದಂಡದ ಮೊತ್ತವನ್ನು ನಿಗದಿ ಮಾಡಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಒಮ್ಮೆ ದಂಡ ಹಾಕಿ ಮತ್ತೆ ನಿಯಮ ಉಲ್ಲಂಘನೆ ಮಾಡಿದರೆ, ಪ್ರತಿ ವಾರ ದಂಡದ 50% ರಷ್ಟನ್ನು ದಂಡ ಹಾಕುವುದಾಗಿ ಆದೇಶ ಹೊರಡಿಸಿದೆ.

    ಮಾರ್ಗಸೂಚಿ:
    1. ಮನೆ ಮಾಲೀಕರು ಕಟ್ಟಡ ನಿರ್ಮಾಣ ಸ್ಥಳದಲ್ಲಿ ನೀರನ್ನು ಶೇಖರಿಸಿ ಇಡುವ ಸೊಂಪು ಮತ್ತು ಟ್ಯಾಂಕ್‌ಗಳನ್ನು ಸ್ವಚ್ಛವಾಗಿ ಇಡಬೇಕು ಮತ್ತು ಸೊಳ್ಳೆ ಉತ್ಪತ್ತಿಯಾಗದಂತೆ ಕ್ರಮ ವಹಿಸಬೇಕು.
    2. ಮನೆ ಮಾಲೀಕರು, ಸಾರ್ವಜನಿಕರು ಮನೆಯ ಸುತ್ತಮುತ್ತ ಮಳೆ ನೀರು ನಿಲ್ಲದಂತೆ, ಟೈರ್‌ಗಳಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು.
    3. ಶಿಕ್ಷಣ ಸಂಸ್ಥೆಗಳು, ಶಾಲಾ ಕಾಲೇಜುಗಳು, ಕಟ್ಟಡ ಮಾಲೀಕರು ಸೊಳ್ಳೆ ಉತ್ಪತ್ತಿ ತಾಣಗಳನ್ನು ನಿಯಂತ್ರಿಸಬೇಕು.ಇದನ್ನೂ ಓದಿ: ಛತ್ತೀಸ್‍ಗಢದಲ್ಲಿ ಎನ್‍ಕೌಂಟರ್ – 9 ನಕ್ಸಲರನ್ನು ಬೇಟೆಯಾಡಿದ ಭದ್ರತಾ ಪಡೆ

    ಯಾರ್ಯಾರಿಗೆ ಎಷ್ಟೆಷ್ಟು ದಂಡ?
    1. ಮನೆ ಮಾಲೀಕರಿಗೆ
    ನಗರ ಪ್ರದೇಶದಲ್ಲಿ 400 ರೂ.
    ಗ್ರಾಮಾಂತರ ಪ್ರದೇಶಗಳಲ್ಲಿ – 200 ರೂ.

    2.ವಾಣಿಜ್ಯ ಮಳಿಗೆಗಳು, ಸ್ಕೂಲ್, ಕಾಲೇಜು, ರೆಸ್ಟೊರೆಂಟ್, ಹೋಟೆಲ್, ಮಾಲ್, ಸೂಪರ್ ಮಾರ್ಕೆಟ್, ಹೋಂ ಸ್ಟೇ
    ನಗರದ ಪ್ರದೇಶದಲ್ಲಿ – 1000 ರೂ.
    ಗ್ರಾಮಾಂತರ ಪ್ರದೇಶದಲ್ಲಿ – 500 ರೂ.

    3.ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ
    ನಗರ ಪ್ರದೇಶದಲ್ಲಿ – 2000 ರೂ.
    ಗ್ರಾಮಾಂತರ ಪ್ರದೇಶಗಳಲ್ಲಿ – 1000 ರೂ.

  • Dengue Alert: ರಾಜ್ಯದಲ್ಲಿ ಒಂದೇ ದಿನ 400ಕ್ಕೂ ಹೆಚ್ಚು ಕೇಸ್‌ ಪತ್ತೆ!

    Dengue Alert: ರಾಜ್ಯದಲ್ಲಿ ಒಂದೇ ದಿನ 400ಕ್ಕೂ ಹೆಚ್ಚು ಕೇಸ್‌ ಪತ್ತೆ!

    ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 437 ಡೆಂಗ್ಯೂ ಪ್ರಕರಣಗಳು (Dengue Case) ವರದಿಯಾಗಿದ್ದು, ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 388ಕ್ಕೇರಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 8,658ಕ್ಕೆ ಏರಿಕೆಯಾಗಿದೆ.

    ಬೆಂಗಳೂರು ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ 165 ಹೊಸ ಕೇಸ್‌ಗಳು ದಾಖಲಾಗಿದ್ದು, ಸದ್ಯ 91 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ಹಂಚಿಕೊಂಡಿದೆ. ಕಳೆದ 24 ಗಂಟೆಗಳಲ್ಲಿ 2,704 ಡೆಂಗ್ಯೂ ಟೆಸ್ಟ್‌ ನಡೆಸಲಾಗಿದ್ದು, ಈ ಪೈಕಿ 437 ಜನರಿಗೆ ಪ್ರಕರಣ ಧೃಢವಾಗಿದೆ. ಈವರೆಗೆ ಒಟ್ಟು 63,741 ಮಂದಿಗೆ ಡೆಂಗ್ಯೂ ಪರೀಕ್ಷೆ ನಡೆಸಲಾಗಿದೆ. ಇದನ್ನೂ ಓದಿ: ಪ್ರತಿವರ್ಷ ಜೂನ್‌ 25ರಂದು ʻಸಂವಿಧಾನ ಹತ್ಯಾ ದಿವಸ್‌ʼ ಆಚರಣೆ – ಅಮಿತ್‌ ಶಾ ಘೋಷಣೆ

    ಯಾವ ವಯಸ್ಸಿನವರಲ್ಲಿ ಹೆಚ್ಚಿ ಕೇಸ್‌ ಪತ್ತೆ?
    ಕಳೆದ 24 ಗಂಟೆಯಲ್ಲಿ 2,704 ಮಂದಿಗೆ ಡೆಂಗ್ಯೂ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 1 ವರ್ಷದೊಳಗಿನ 7 ಮಕ್ಕಳು, 1 ರಿಂದ 18 ವರ್ಷ ವಯಸ್ಸಿನ 154 ಮಕ್ಕಳು ಹಾಗೂ 18 ವರ್ಷ ಮೇಲ್ಪಟ್ಟ 276 ಮಂದಿ ಸೇರಿದಂತೆ ಒಟ್ಟು 437 ಕೇಸ್‌ ಪತ್ತೆಯಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಒಬ್ಬ ಭಯಂಕರ ಸರ್ವಾಧಿಕಾರಿ, ಭ್ರಷ್ಟಾಚಾರಿ -‌ ಸಿಎಂ ಸ್ಥಾನದಿಂದ ಕೆಳಗಿಳಿಸಲು ಹೈಕಮಾಂಡ್‍ಗೆ ಸಾಧ್ಯವೇ?: ಜೋಶಿ

    ಎಲ್ಲೆಲ್ಲಿ ಎಷ್ಟು ಕೇಸ್‌?
    ಬಿಎಂಪಿ ವ್ಯಾಪಿಯಲ್ಲಿ 165, ಬೆಂಗಳೂರು ನಗರ 10, ಬೆಂಗಳೂರು ಗ್ರಾಮಾಂತರ 5, ರಾಮನಗರ 14, ಕೋಲಾರ 19, ಚಿಕ್ಕಬಳ್ಳಾಪುರ 7, ತುಮಕೂರು 5, ಚಿತ್ರದುರ್ಗ 3, ದಾವಣಗೆರೆ 24, ಬೆಳಗಾವಿ 32, ಗದಗ 15, ಉತ್ತರ ಕನ್ನಡ 1, ಕಲಬುರಗಿ 20, ಬೀದರ್‌ 10, ಬಳ್ಳಾರಿ 4, ವಿಜಯನಗರ 1, ಕೊಪ್ಪಳ 3, ಮೈಸೂರು 17, ಮಂಡ್ಯ 47, ಹಾಸನ 6, ಉಡುಪಿ 10, ಚಿಕ್ಕಮಗಳೂರು 10, ಕೊಡಗು 9 ಕೇಸ್‌ ಪತ್ತೆಯಾಗಿವೆ. ಶುಕ್ರವಾರ ಯಾವುದೇ ಮರಣ ಪ್ರಕರಣ ದಾಖಲಾಗಿಲ್ಲ. ಒಟ್ಟು ಮರಣ ಸಂಖ್ಯೆ 7 ಇದೆ.

  • ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ – ಮೇ ತಿಂಗಳಲ್ಲೇ 172 ಕೇಸ್‌ ದಾಖಲು!

    ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ – ಮೇ ತಿಂಗಳಲ್ಲೇ 172 ಕೇಸ್‌ ದಾಖಲು!

    – ಡೆಂಗ್ಯೂ ನಿಯಂತ್ರಣಕ್ಕೆ ಬಿಬಿಎಂಪಿ ಹಲವು ಮುನ್ನೆಚ್ಚರಿಕೆ ಕ್ರಮ

    ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಬಿಬಿಎಂಪಿ ಮುಂದಾಗಿದೆ. ಡೆಂಗ್ಯೂ ಪ್ರಕರಣ ನಿಯಂತ್ರಿಸುವ ನಿಟ್ಟಿನಲ್ಲಿ ಬೃಹತ್‌ ಬೆಂಗಳೂರು ಮಹಾನರ ಪಾಲಿಕೆ (BBMP) ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲಿ ಸೊಳ್ಳೆ ನಿಯಂತ್ರಣ ಕುರಿತು ಅರಿವು ಮೂಡಿಸುವ ಹಾಗೂ ಔಷಧಿ ಸಿಂಪಡಣೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ.

    ಗುರುವಾರವೂ ಸಹ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆಯ (National Dengue Day) ಅಂಗವಾಗಿ ಬೆಂಗಳೂರು ಪೂರ್ವ ವಲಯದ ರಾಮಸ್ವಾಮಿ ಪಾಳ್ಯದಲ್ಲಿ ಜಾಗೃತಿ ಅಭಿಯಾನ ನಡೆಸಲಾಗಿದೆ. ಬಿಬಿಎಂಪಿ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ಅವರು ಸಹ ಈ ಅಭಿಯಾನದಲ್ಲಿ ಸಾರ್ವಜನಿಕರು ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸಲಹೆ ನೀಡಿದ್ದಾರೆ.

    ಮಳೆ ಬಂದಾಗ ನೀರು ಸಂಗ್ರಹವಾಗಿ ಸೊಳ್ಳೆಗಳ (Mosquito) ಸಂತತಿ ಹೆಚ್ಚಾಗಲಿದ್ದು, ಅದನ್ನು ಫಾಗಿಂಗ್ ಮತ್ತು ಔಷಧಿ ಸಿಂಪಡಿಸುವ ಮೂಲಕ ತಡೆಯಬೇಕು. ಹೂವಿನ ಕುಂಡ, ಬಿಸಾಕಿದ ಟೈರ್, ನೀರು ಸಂಗ್ರಹಿಸುವ ತೊಟ್ಟಿ, ನೀರಿನ ಬಾಟಲ್ ಸೇರಿದಂತೆ ಇನ್ನಿತರ ಕಡೆಯಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಅಂತಹ ಸ್ಥಳಗಳಲ್ಲಿ ಎಚ್ಚರಿಕೆ ಕೊಳಚೆ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.

    ಆಯಾ ವಲಯದ ವಾರ್ಡ್ ಮಟ್ಟದಲ್ಲಿ ಒಂದು ವಾರ್ಡ್‌ಗೆ 4 ಔಷಧಿ ಸಿಂಪಡಣೆ ಮಾಡುವ ತಂಡಗಳನ್ನು ನಿಯೋಜನೆ ಮಾಡಿದ್ದು, ತಾತ್ಕಾಲಿಕವಾಗಿ ನೀರು ನಿಲ್ಲುವ ಸ್ಥಳ ಹಾಗೂ ಶಾಶ್ವತವಾಗಿ ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ ಫಾಗಿಂಗ್ ಮತ್ತು ಔಷಧಿ ಸಿಂಪಡಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

    ಲಾರ್ವಾ ಸಮೀಕ್ಷೆ ಪ್ರಾರಂಭ:
    ಈಡೀಸ್, ಈಜಿಪ್ಟೈ ಎಂಬ ಸೊಳ್ಳೆಗಳಿಂದ ಡೆಂಗ್ಯೂ ರೋಗ ಹರಡುತ್ತದೆ. ಆ ಸೊಳ್ಳೆಗಳು ತೆರೆದಿಟ್ಟ ನೀರಿನ ತೊಟ್ಟಿಗಳು, ಏರ್ ಕೂಲರ್ ಗಳು, ಹೂವಿನ ಕುಂಡದ ತಟ್ಟೆಗಳು, ಬಕೆಟ್‌ಗಳು, ಸಿಮೆಂಟ್ ತೊಟ್ಟಿಗಳು, ತೆಂಗಿನ ಚಿಪ್ಪುಗಳು, ಒಡೆದ ಟೈರ್‌ಗಳಲ್ಲಿ ಉತ್ಪತ್ತಿಯಾಗುತ್ತವೆ. ಈ ಸಂಬಂಧ ಪ್ರಾರಂಭಿಕ ಹಂತದಲ್ಲೇ ಸೊಳ್ಳೆ ನಿಯಂತ್ರಣ ಮಾಡಲು ಲಾರ್ವಾ ಉತ್ಪಿತ್ತಿಯಾಗುವ ತಾಣಗಳನ್ನು‌ ಗುರುತಿಸಿ ನಾಶಪಡಿಸಲಾಗುತ್ತದೆ.

    ಕೊಳಚೆ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಣಾ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ನಮ್ಮ ಕ್ಲಿನಿಕ್ ವೈದ್ಯರ ತಂಡ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ತಂಡಗಳನ್ನು ರಚಿಸಿಕೊಂಡು ಮನೆ-ಮನೆ ಭೇಟಿ ನೀಡಿ ಡೆಂಗ್ಯೂ ಪ್ರಕರಣಗಳ ಪತ್ತೆ ಹಚ್ಚುವ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಸಹ ಹೇಳಿದ್ದಾರೆ.

    ಜಾಥಾ, ಧ್ವನಿವರ್ಧಕಗಳ ಮೂಲಕ ಜಾಗೃತಿ ಅಭಿಯಾನ:
    ನಗರದಲ್ಲಿ ಡೆಂಗ್ಯೂ ನಿಯಂತ್ರಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣ, ಆಯಾ ವಲಯಗಳ ವಾರ್ಡ್ ಮಟ್ಟದಲ್ಲಿ ಜಾಗೃತಿ ಜಾಥಾ ಹಾಗೂ ಪಾಲಿಕೆಯ ಕಸದ ವಾಹನಗಳಲ್ಲಿ ಧ್ವನಿವರ್ಧಕಗಳ ಮೂಲಕ ಡೆಂಗ್ಯೂ ಬಗ್ಗೆ ನಾಗರೀಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿಸಲಾಗುತ್ತಿದೆ. ಜೊತೆಗೆ ಮನೆ-ಮನೆಗೆ ತೆರಳಿ ಡೆಂಗ್ಯೂ ನಿಯಂತ್ರಣದ ಕುರಿತು ಭಿತ್ತಿಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ನುಡಿದಿದ್ದಾರೆ.

    ಈ ವೇಳೆ ಮುಖ್ಯ ಆರೋಗ್ಯಾಧಿಕಾರಿ ಡಾ.ಮದನಿ, ಪೂರ್ವ ವಲಯ ಆರೋಗ್ಯಾಧಿಕಾರಿ ಡಾ.ಭಾಗ್ಯಲಕ್ಷ್ಮಿ, ಡೆಂಗ್ಯೂ ನೋಡಲ್ ಅಧಿಕಾರಿ ಸುಜಾತಾ ಸೇರಿದಂತೆ ಇನ್ನಿತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.

    ಮೇ 1 ರಿಂದ 13ರ ವರೆಗೆ ದಾಖಲಾದ ಡೆಂಗ್ಯೂ ಪ್ರಕರಣಗಳು – ಯಾವ ವಲಯದಲ್ಲಿ ಎಷ್ಟು ಕೇಸ್‌?
    ಬೊಮ್ಮನಹಳ್ಳಿ: 23
    ಪೂರ್ವ: 41
    ಮಹದೇವಪುರ: 44
    ಆರ್.ಆರ್ ನಗರ: 08
    ದಕ್ಷಿಣ: 34
    ಪಶ್ಚಿಮ: 16
    ಯಲಹಂಕ: 06
    ದಾಸರಹಳ್ಳಿ: 00
    ಒಟ್ಟು: 172 ಪ್ರಕರಣ

  • ಡೆಂಗ್ಯೂ ಭೀತಿ; ಬಿಳಿರಕ್ತ ಕಣಗಳಿಗೆ ಹೆಚ್ಚಿದ ಬೇಡಿಕೆ!

    ಡೆಂಗ್ಯೂ ಭೀತಿ; ಬಿಳಿರಕ್ತ ಕಣಗಳಿಗೆ ಹೆಚ್ಚಿದ ಬೇಡಿಕೆ!

    – ರಕ್ತದಾನ ಶಿಬಿರಕ್ಕೆ ಮುಂದಾದ ಬ್ಲಡ್ ಬ್ಯಾಂಕ್‍ಗಳು..!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಡೆಂಗ್ಯೂ ಪ್ರಕರಣಗಳ (Dengue Fever) ಏರಿಕೆ ಬೆನ್ನಲ್ಲೆ, ಆಸ್ಪತ್ರೆಗಳಿಗೆ ಇದೀಗ ಮತ್ತೊಂದು ರೀತಿಯ ಟೆನ್ಷನ್ ಶುರುವಾಗಿದೆ. ಡೆಂಗ್ಯೂ ಹೊಡೆತದಿಂದ ನಲುಗಿದ ರೋಗಿಗಳಲ್ಲಿ ಬಿಳಿರಕ್ತ ಕಣಗಳ ಕೊರತೆ ಉಂಟಾಗ್ತಿದ್ದು, ಇತ್ತ ಬ್ಲಡ್ ಬ್ಯಾಂಕ್‍ಗಳಿಗೂ (Blood Bank) ಸಂಕಷ್ಟ ಎದುರಾಗಿದೆ.

    ಮಳೆ ನಿಂತರೂ ಮರದ ಹನಿ ನಿಲ್ಲಲ್ಲ ಅನ್ನೋ ಹಾಗೇ ರಾಜ್ಯದಲ್ಲಿ ಮಳೆ ಇಲ್ಲದಿದ್ರೂ ರಾಜಧಾನಿ ಬೆಂಗಳೂರಲ್ಲಿ ಡೆಂಗ್ಯೂ ಪ್ರಕರಣಗಳು ಏರಿಕೆಯಾಗ್ತಾಲೇ ಇದೆ. ಡೆಂಗ್ಯು ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗ್ತಿದ್ರೂ ಕೂಡ, ಕೆಲ ರೋಗಿಗಳಿಗೆ ಬಿಳಿರಕ್ತಕಣಗಳ ಕೊರತೆ ಇರೋದರಿಂದ ಸಮಸ್ಯೆ ಎದುರಾಗ್ತಿದೆ. ಚಿಕಿತ್ಸೆ ವೇಳೆ ವೈಟ್ ಬ್ಲಡ್ ಸೆಲ್ಸ್ ಕಡಿಮೆ ಇರೋ ರೋಗಿಗಳಿಗೆ ಚಿಕಿತ್ಸೆ ನೀಡಲಾಗದೇ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಹೈರಾಣಾಗ್ತಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿಂದು ಗಣೇಶ ಪ್ರತಿಷ್ಠಾಪನೆ- ಮೆರವಣಿಗೆ, ವಿಶೇಷ ಪೂಜೆಗೆ ಸಿದ್ಧತೆ

    ಈ ಹಿಂದೆ ದಿನಕ್ಕೆ 10-12ರಷ್ಟು ರ್‍ಯಾಂಡಮ್ ಡೋನರ್ ಪ್ಲೇಟ್ಲೆಟ್ಸ್ ಅವಶ್ಯಕತೆ ಇತ್ತು, ಇದೀಗ ದಿನಕ್ಕೆ 150 ಯುನಿಟ್ ನಷ್ಟು ರ್‍ಯಾಂಡಮ್ ಡೋನರ್ ಪ್ಲೇಟ್ಲೆಟ್ಸ್ ಗಳ ಅವಶ್ಯಕತೆ ಎದುರಾಗಿದ್ದು, ಇದರಿಂದ ರೋಗಿಗಳಿಗೆ ಚಿಕಿತ್ಸೆ ನೀಡೋಕೆ ಸಮಸ್ಯೆ ಉದ್ಭವಿಸಿದೆ. ಅತ್ತ, ಬ್ಲಡ್ ಬ್ಯಾಂಕ್‍ಗಳಲ್ಲೂ ಬಿಳಿ ರಕ್ತದಾನಿಗಳ ಕೊರತೆ ಎದುರಾಗಿದ್ದು, ಬ್ಲಡ್ ಬಾಂಕ್‍ಗಳು ರಕ್ತದಾನ ಶಿಬಿರಗಳನ್ನ ಹೆಚ್ಚಳ ಮಾಡೋಕೆ ಸಜ್ಜಾಗಿವೆ.

    ವರ್ಷದಿಂದ ವರ್ಷಕ್ಕೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರಲ್ಲೂ ಈ ಬಾರಿ ಡೆಂಗ್ಯೂ ಸಿಲಿಕಾನ್ ಸಿಟಿ ಮಂದಿಯನ್ನೇ ಹೆಚ್ಚು ಕಾಡಲು ಶುರು ಮಾಡಿದೆ. ಡೆಂಗ್ಯೂ ಕಾಣಿಸಿಕೊಂಡ ಕೆಲ ರೋಗಿಗಳಲ್ಲಿ ಮೂಗಿನಿಂದ ರಕ್ತ ಸೋರುವುದು, ಹಲ್ಲಿನ ವಸಡುಗಳಲ್ಲಿ ರಕ್ತ ಕಾಣಿಸುವುದು, ವಾಂತಿಯಲ್ಲಿ ರಕ್ತ ಬರುವುದು ಈ ರೀತಿ ಹಲವು ಲಕ್ಷಣ ಕಂಡುಬರ್ತಿದ್ದು, ಇದರಿಂದ ವೈಟ್ ಪ್ಲೇಟ್‍ಲೇಟ್ಸ್ ಕಡಿಮೆ ಇರೋ ರೋಗಿಗಳಿಗೆ ಚಿಕಿತ್ಸೆ ನೀಡೋ ಅವಶ್ಯಕತೆ ಎದುರಾಗ್ತಿದೆ.

    ಡೆಂಗಿ ಕೇಸ್‍ನ ಅಂಕಿ ಅಂಶ:
    ವರ್ಷ – ಕೇಸ್‍ಗಳು
    2020 – 1127
    2021 – 1629
    2022 – 2335
    2023 – 4979

    ಸದ್ಯ ಕಳೆದ ವರ್ಷಗಳಿಗೆ ಹೋಲಿಕೆ ಮಾಡಿದ್ರೆ ಈ ಬಾರೀ ಬೆಂಗಳೂರಲ್ಲಿ ಡೆಂಗ್ಯೂ ಪ್ರಕರಣಗಳು ಏರಿಕೆಯಾಗಿರೋದು ಆತಂಕ ಸೃಷ್ಟಿಸಿದೆ. ಇತ್ತ ಡೆಂಗ್ಯೂ ರೋಗಿಗಳಿಗೆ ಪ್ಲೇಟ್ ಲೇಟ್ಸ್ ಕೊರತೆ ಕೂಡ ಎದುರಾಗ್ತಿರೋದು ಆಸ್ಪತ್ರೆಗಳ ಸಿಬ್ಬಂದಿಗೆ ತಲೆನೋವು ತಂದಿಟ್ಟಿದೆ. ಸದ್ಯ ಬ್ಲಡ್ ಬ್ಯಾಂಕ್‍ಗಳು ಕೂಡ ರಕ್ತದಾನ ಶಿಬಿರಗಳ ಮೂಲಕ ಜಾಗೃತಿಗೆ ಮುಂದಾಗ್ತಿದ್ದು, ಡೆಂಗ್ಯೂ ಅಬ್ಬರ ಯಾವಾಗ ತಗ್ಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]