Tag: ಡೀಪ್ ಫೇಕ್

  • ಡೀಪ್‍ ಫೇಕ್‍  ಸುಳಿಯಲ್ಲಿ ಮತ್ತೆ ರಶ್ಮಿಕಾ ಮಂದಣ್ಣ

    ಡೀಪ್‍ ಫೇಕ್‍ ಸುಳಿಯಲ್ಲಿ ಮತ್ತೆ ರಶ್ಮಿಕಾ ಮಂದಣ್ಣ

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತೆ ಮತ್ತೆ ಡೀಪ್‍ ಫೇಕ್‍ಗೆ ಒಳಗಾಗುತ್ತಿದ್ದಾರೆ. ಈಗಾಗಲೇ ಡಿಪ್ ಫೇಕ್‍ ಗೆ ಸಂಬಂಧಿಸಿದಂತೆ ಕೆಲವರನ್ನು ಅರೆಸ್ಟ್ ಮಾಡಿದ್ದರೂ, ಮತ್ತೆ ರಶ್ಮಿಕಾರನ್ನು ಈ ಸುಳಿಯಲ್ಲಿ ಸಿಲುಕಿಸಲಾಗಿದೆ. ಮಾಡೆಲ್ ಕಂ ಕಂಟೆಂಟ್ ಕ್ರಿಯೇಟರ್ ಡೇನಿಯಾಲ ವಿಲ್ಲಾರ್ರಿಯಲ್ (Daniela Villarreal) ಅವರ ವಿಡಿಯೋಗೆ ರಶ್ಮಿಕಾರ ಮುಖವನ್ನು ಅಂಟಿಸಲಾಗಿದೆ.

    ಡೀಪ್ ಫೇಕ್‍ ಅನ್ನು ಸೀರಿಯಸ್ ಆಗಿ ತೆಗೆದುಕೊಂಡಿದೆ ಕರ್ನಾಟಕ ಸರಕಾರ. ರಾಜ್ಯ ಸರ್ಕಾರದ 2024-25ನೇ ಸಾಲಿನ ಬಜೆಟ್ (Karnataka Budget 2024) ಮಂಡನೆ ಆಗಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ, ತಮ್ಮ ಬಜೆಟ್ ನಲ್ಲಿ ಡೀಪ್ ಫೇಕ್ ವಿರುದ್ಧ ಸಮರ ಸಾರಿದ್ದಾರೆ. ಡೀಪ್ ಫೇಕ್ ನಂತ ಸೈಬರ್ ಅಪರಾಧಗಳ ವಿರುದ್ದ ಕ್ರಮಕ್ಕೆ 43 ಸಿಇಎನ್ ಪೊಲೀಸ್ ಠಾಣೆ ಉನ್ನತಿಕರಣಕ್ಕೆ ನಿರ್ಧಾರ ಮಾಡಲಾಗಿದೆ. ಈ ಮೂಲಕ ಕನ್ನಡತಿ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವರಿಗೆ ಕಾಡುತ್ತಿದ್ದ ಡೀಪ್ ಫೇಕ್ ಭೂತಕ್ಕೆ ಕಡಿವಾಣ ಹಾಕಲು ಮುಂದಾಗಿದೆ.

    ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್ ಫೇಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಕುರಿತಂತೆ ಅನೇಕ ಕಲಾವಿದರು ಮತ್ತು ರಶ್ಮಿಕಾ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಸ್ವತಃ ರಶ್ಮಿಕಾ ಮಂದಣ್ಣ ಅವರೇ ಪ್ರತಿಕ್ರಿಯೆ ನೀಡಿ, ಈ ಘಟನೆಯಿಂದಾಗಿ ನನಗೆ ತುಂಬಾ ನೋವಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಡೀಪ್‍ ಫೇಕ್ (DeepFake) ವಿಡಿಯೋ ಬಗ್ಗೆ ಮಾತನಾಡಲೇಬೇಕಾದ ಅನಿವಾರ್ಯತೆ ಬಗ್ಗೆಯೂ ರಶ್ಮಿಕಾ ಮಾತನಾಡಿದ್ದರು. ತಂತ್ರಜ್ಞಾನವನ್ನು ದುರುಪಯೋಗವು ಅತ್ಯಂತ ಭಯಾನಕವಾಗಿದೆ. ನಾನು ಮಹಿಳೆಯಾಗಿ ಮತ್ತು ನಟಿಯಾಗಿ ನನ್ನನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎನ್ನುವುದರ ಅರಿವಿದೆ. ನನ್ನ ಕುಟುಂಬ ಮತ್ತು ಸ್ನೇಹಿತರು ಹಾಗೂ ಹಿತೈಷಿಗಳು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಆದರೆ, ನಾನು ಶಾಲೆ ಅಥವಾ ಕಾಲೇಜಿನಲ್ಲಿ ಇದ್ದಾಗ ಈ ರೀತಿ ಆಗಿದ್ದರೆ ಅದನ್ನು ಹೇಗೆ ನಿಭಾಯಿಸುತ್ತಿದ್ದೆ ಎಂದು ಊಹಿಸಲೂ ಅಸಾಧ್ಯ. ಡೀಪ್ ಫೇಕ್ ಮಾಡುವವರು ಇತರರ ಮೇಲೆ ಪ್ರಭಾವ ಬೀರುವುದಕ್ಕಿಂತ ಮುಂಚೆ ಅಂಥದ್ದನ್ನು ತಡೆಗಟ್ಟಬೇಕಿದೆ ಎಂದು ಹೇಳಿದ್ದರು ರಶ್ಮಿಕಾ.

    ಡೀಪ್ ಫೇಕ್ ಪ್ರಕರಣ ಭಾರೀ ಸದ್ದು ಮಾಡುತ್ತಿದ್ದಂತೆಯೇ, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿನ ಡೀಪ್‌ಫೇಕ್ (Deepfake) ಹಾವಳಿಯನ್ನು ಪರಿಶೀಲಿಸಲು ಮತ್ತು ಆನ್‌ಲೈನ್‌ನಲ್ಲಿ ನಕಲಿ ವಿಷಯವನ್ನು ಪತ್ತೆಹಚ್ಚಿದಾಗ ನಾಗರಿಕರು ದೂರು ದಾಖಲಿಸಲು ಸಹಾಯ ಮಾಡಲು ಸರ್ಕಾರವು ವಿಶೇಷ ಅಧಿಕಾರಿಗಳ ತಂಡವನ್ನು ನಿಯೋಜಿಸಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಶುಕ್ರವಾರ ಹೇಳಿದ್ದರು. ಈಗ ರಾಜ್ಯ ಸರ್ಕಾರ ಕೂಡ ಬಜೆಟ್ ನಲ್ಲಿ ಡೀಪ್ ಫೇಕ್ ವಿರುದ್ಧ ಸಮರ ಸಾರಿದೆ.

  • ಸಮಂತಾ ಬೆತ್ತಲೆ ಫೋಟೋ: ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ ನಟಿ ಸಮಂತಾ

    ಸಮಂತಾ ಬೆತ್ತಲೆ ಫೋಟೋ: ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ ನಟಿ ಸಮಂತಾ

    ಒಂದಿಲ್ಲೊಂದು ಕಾರಣಕ್ಕಾಗಿ ಸಮಂತಾ ಸದಾ ಸುದ್ದಿಯಲ್ಲಿರುತ್ತಾರೆ. ತಾವು ಮಾಡಿದ ತಪ್ಪಿಗೆ ಸುದ್ದಿ ಆಗೋದು ಸಹಜ. ಮಾಡದೇ ಇರೋ ತಪ್ಪಿಗೂ ಬಲಿಯಾಗುತ್ತಾರೆ. ಅಂಥದ್ದೇ ಒಂದು ಬಲಿಪಶು ಸ್ಟೋರಿ ಬೆತ್ತಲೇ ಫೋಟೋದ್ದು. ಸಮಂತಾ (Samantha) ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬೆತ್ತಲೆ ಫೋಟೋ ಹಾಕಿದ್ದಾರೆ ಎನ್ನುವ ವಿಚಾರ ನಿನ್ನೆಯಿಂದ ಭರ್ಜರಿ ಸೇಲ್ ಆಗಿತ್ತು.

    ಡಿವೋರ್ಸ್ ನಂತರ ಸಮಂತಾ ಯಾಕೆ ಹೀಗೆ ಆದರು ಎನ್ನುವ ಪ್ರಶ್ನೆಯನ್ನೂ ಹಲವರು ಮಾಡಿದ್ದರು. ಬೆತ್ತಲೇ ಫೋಟೋ ಹಾಕಿ, ಯಾಕೆ ಡಿಲಿಟ್ ಮಾಡಿದರು ಎನ್ನುವ ಕುತೂಹಲ ಕೂಡ ಹಲವರದ್ದಾಗಿತ್ತು. ಅದು ಅವರೇ ಮಾಡಿದ್ದಾರಾ? ಅಥವಾ ಬೇರೆ ಯಾರಾದರೂ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎನ್ನುವ ಚರ್ಚೆ ಕೂಡ ಮಾಡಲಾಯಿತು.

     

    ಈಗ ಸಮಂತಾ ಈ ಕುರಿತಂತೆ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮದಲ್ಲದ ತಪ್ಪಿಗೆ ಅಥವಾ ಪ್ರತಿಕ್ರಿಯೆ ನೀಡಲು ಯೋಗ್ಯವಲ್ಲದಕ್ಕೆ ಪ್ರತಿಕ್ರಿಯೆ ನೀಡಬಾರದು ಎಂದು ಬರೆದುಕೊಂಡಿದ್ದಾರೆ. ಅಂದರೆ, ಅದು ತಮ್ಮಿಂದ ಆಗಿರುವ ತಪ್ಪಲ್ಲ. ಹಾಗಾಗಿ ಪ್ರತಿಕ್ರಿಯೆ ಅನಗತ್ಯ ಎಂದಿದ್ದಾರೆ.

  • ದೆಹಲಿ ಪೊಲೀಸರ ಮುಂದೆ ಹಾಜರಾದ ರಶ್ಮಿಕಾ ಮಂದಣ್ಣ

    ದೆಹಲಿ ಪೊಲೀಸರ ಮುಂದೆ ಹಾಜರಾದ ರಶ್ಮಿಕಾ ಮಂದಣ್ಣ

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ದೆಹಲಿ (Delhi) ಪೊಲೀಸರ ಮುಂದೆ ಹಾಜರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ತಮ್ಮ ಹೇಳಿಕೆಯನ್ನು ನೀಡಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳ ವರದಿ ಮಾಡಿವೆ. ಡೀಪ್ ಫೇಕ್ ವಿಡಿಯೋಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನಟಿಯ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ.

    ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಸಾಕಷ್ಟು ಸದ್ದು ಮಾಡಿತ್ತು. ದೇಶದಾದ್ಯಂತ ಈ ನಡೆಯನ್ನು ಖಂಡಿಸಿ, ಅನೇಕರು ಮಾತನಾಡಿದ್ದಾರೆ. ಅಮಿತಾಭ್ ಬಚ್ಚನ್ ಸೇರಿದಂತೆ ಸಾಕಷ್ಟು ಕಲಾವಿದರು ಇದರ ವಿರುದ್ದದ ಕ್ರಮಕ್ಕೆ ಒತ್ತಾಯ ಮಾಡಿದ್ದರು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೂಡ ಕ್ರಮಕ್ಕೆ ಮುಂದಾಗಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರನ್ನು ಪೊಲೀಸರು (Police) ಅರೆಸ್ಟ್ ಕೂಡ ಮಾಡಿದ್ದಾರೆ.

    ರಶ್ಮಿಕಾಗೆ (Rashmika Mandanna) ಈ ಡೀಪ್‌ಫೇಕ್ ವಿಡಿಯೋ ಕಾಟ ನಿದ್ದೆಗೆಡಿಸಿತ್ತು. ಡೀಪ್‌ಫೇಕ್ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕಾಗಿ ಸಾಕಷ್ಟು ಜನರು ಒತ್ತಾಯಿಸಿದ್ದರು. ಒತ್ತಡ ಹೆಚ್ಚಾಗುತ್ತಿದ್ದಂತೆಯೇ ಪೊಲೀಸರು ಆಸಾಮಿಗಳಿಗೆ ಬಲೆ ಬೀಸಿದ್ದರು. ಕೊನೆಗೂ ವ್ಯಕ್ತಿಯೊಬ್ಬನ ಬಂಧನವಾಗಿತ್ತು. ರಶ್ಮಿಕಾ ಸೇರಿದಂತೆ ಹಲವರ ಡೀಪ್‌ಫೇಕ್ ವಿಡಿಯೋ (Deep Fake Video) ಮಾಡಿದ್ದ ಆಂಧ್ರ ಪ್ರದೇಶದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಆರೋಪಿ ಬಂಧನದ ಬಳಿಕ ರಶ್ಮಿಕಾ ಪ್ರತಿಕ್ರಿಯೆ ಕೂಡ ನೀಡಿದ್ದರು.

    ಆಂಧ್ರ ಪ್ರದೇಶದ ಗುಂಟೂರು ಮೂಲದ ನವೀನ್ ಈಮಾನಿ (24) ಬಂಧಿತ ಆರೋಪಿಯಾಗಿದ್ದು, ವೃತ್ತಿಯಲ್ಲಿ ಡಿಜಿಟಲ್ ಮಾರ್ಕೆಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಫ್ಯಾನ್ ಪೇಜ್ ಅನ್ನು ನಿರ್ವಹಣೆ ಮಾಡುತ್ತಿದ್ದರು.

    ಬಂಧಣದ ಬಳಿಕ ದೆಹಲಿ ಪೊಲೀಸರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ. ಕೃತ್ಯದ ಜವಾಬ್ದಾರರನ್ನು ಬಂಧಿಸಿದ್ದಕ್ಕಾಗಿ ಧನ್ಯವಾದಗಳು. ಹುಡುಗಿಯೇ ಮತ್ತು ಹುಡುಗರೇ- ನಿಮ್ಮ ಒಪ್ಪಿಗೆಯಿಲ್ಲದೇ ನಿಮ್ಮ ಚಿತ್ರವನ್ನು ಎಲ್ಲಿಯಾದರೂ ಬಳಸಿದರೆ ಅಥವಾ ಮಾರ್ಫ್ ಮಾಡಿದ್ದರೆ. ಅದು ತಪ್ಪು, ನಿಮ್ಮನ್ನು ಬೆಂಬಲಿಸುವ ಜನರಿಂದ ನೀವು ಸುತ್ತುವರೆದಿರುವಿರಿ ಮತ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ಇದು ನೆನಪಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ನಟಿ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದರು.

     

    ಡೀಪ್‌ಫೇಕ್ ವಿಡಿಯೋ ಮಾಡುತ್ತಿದ್ದ ಆರೋಪಿ ಬಂಧನವಾಗಿದ್ದಕ್ಕೆ ದೆಹಲಿ ಪೊಲೀಸರಿಗೆ ಅಭಿಮಾನಿಗಳು ಕೂಡ ಧನ್ಯವಾದಗಳನ್ನು ತಿಳಿಸಿದ್ದರು. ಈಗ ಪೊಲೀಸರ ಕರೆಯ ಮೇರೆ ಹಾಜರಾಗಿ ತಮ್ಮ ಪ್ರತಿಕ್ರಿಯೆ ದಾಖಲಿಸಿದ್ದಾರೆ.

  • ಡೀಪ್‌ ಫೇಕ್‌ ವಿಡಿಯೋ – ಕಾಂಗ್ರೆಸ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಅಮೀರ್‌ ಖಾನ್‌

    ಡೀಪ್‌ ಫೇಕ್‌ ವಿಡಿಯೋ – ಕಾಂಗ್ರೆಸ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಅಮೀರ್‌ ಖಾನ್‌

    ಮುಂಬೈ: ಲೋಕಸಭಾ ಚುನಾವಣೆಯ (Lok Sabha Election) ಸಮಯದಲ್ಲಿ ನಟ ಅಮೀರ್‌ ಖಾನ್‌ (Aamir Khan) ಅವರ ಡೀಪ್‌ ಫೇಕ್‌ (Deep Fake) ವಿಡಿಯೋವನ್ನು ಬಳಸಿದ್ದಕ್ಕೆ ಕಾಂಗ್ರೆಸ್‌ (Congress) ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ

    ಅಮೀರ್ ಖಾನ್‌ ಅವರ ಅಧಿಕೃತ ವಕ್ತಾರರು ನಿರ್ದಿಷ್ಟ ವಿಡಿಯೋವನ್ನು ನಕಲಿ (Fake) ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಮುಂಬೈ ಪೊಲೀಸ್‌ ಠಾಣೆಯಲ್ಲಿ (Mumbai Police Station) ದೂರು ನೀಡಿದ್ದು ಎಫ್‌ಐಆರ್‌ ದಾಖಲಾಗಿದೆ.  ಇದನ್ನೂ ಓದಿ: ಮಾಲ್ಡೀವ್ಸ್‌ಗೆ ಅಗತ್ಯ ವಸ್ತುಗಳ ರಫ್ತಿಗೆ ಭಾರತ ಬಂದರು ನಿರ್ಬಂಧ

     

    ವಿಡಿಯೋದಲ್ಲಿ ಏನಿದೆ?
    ಅಮೀರ್‌ ಖಾನ್‌ ಈ ಹಿಂದೆ ದೂರದರ್ಶನದಲ್ಲಿ ಸತ್ಯಮೇವ ಜಯತೆ ಕಾರ್ಯಕ್ರಮ ನಡೆಸುತ್ತಿದ್ದರು. ಈ ದೃಶ್ಯವನ್ನು ಇಟ್ಟುಕೊಂಡು ಬಿಜೆಪಿಯನ್ನು ಗುರಿಯಾಗಿಸಿಕೊಂಡು ಡೀಪ್‌ ಫೇಕ್‌ ವಿಡಿಯೋವನ್ನು ಹರಿ ಬಿಡಲಾಗಿತ್ತು.

    ಅಮೀರ್ ಖಾನ್ ತಮ್ಮ 35 ವರ್ಷಗಳ ವೃತ್ತಿಜೀವನದುದ್ದಕ್ಕೂ ಯಾವುದೇ ರಾಜಕೀಯ ಪಕ್ಷವನ್ನು ಅನುಮೋದಿಸಿಲ್ಲ ಎಂದು ನಾವು ಈ ಮೂಲಕ ಸ್ಪಷ್ಟಪಡಿಸುತ್ತೇವೆ. ಈ ಹಿಂದೆ ಅವರು ಹಿಂದಿನ ಹಲವು ಚುನಾವಣೆಗಳಲ್ಲಿ ಚುನಾವಣಾ ಆಯೋಗದ ಸಾರ್ವಜನಿಕ ಜಾಗೃತಿ ಅಭಿಯಾನಗಳ ಮೂಲಕ ಸಾರ್ವಜನಿಕ ಜಾಗೃತಿ ಮೂಡಿಸಲು ತಮ್ಮ ಪ್ರಯತ್ನ ನಡೆಸಿದ್ದಾರೆ. ಅಮೀರ್ ಖಾನ್ ಅವರು ಒಂದು ನಿರ್ದಿಷ್ಟ ರಾಜಕೀಯ ಪಕ್ಷವನ್ನು ಪ್ರಚಾರ ಮಾಡುತ್ತಿರುವ ವಿಡಿಯೋ ನೋಡಿ ನಾವು ಗಾಬರಿಯಾಗಿದ್ದೇವೆ. ಇದು ನಕಲಿ ವಿಡಿಯೋವಾಗಿದ್ದು ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದೇವೆ ಎಂದು ಅಮೀರ್‌ ಖಾನ್‌ ಅವರ ವಕ್ತಾರರು ತಿಳಿಸಿದ್ದಾರೆ.

     

  • ಬಿಟ್ಟೆನೆಂದರೂ ಬಿಡದು ರಶ್ಮಿಕಾಗೆ ಡೀಪ್ ಫೇಕ್ ಕಾಟ: ಮತ್ತೊಂದು ವಿಡಿಯೋ ವೈರಲ್

    ದೇ ಪದೇ ರಶ್ಮಿಕಾ ಮಂದಣ್ಣಗೆ ಡೀಪ್ ಫೇಕ್ ಭೂತ ಕಾಡುತ್ತಿದೆ. ಈಗಾಗಲೇ ಎರಡು ಬಾರಿ ಡೀಪ್ ಫೇಕ್ ಮಸಲತ್ತಿಗೆ ರಶ್ಮಿಕಾ ಬಲಿಯಾಗಿದ್ದಾರೆ. ಎರಡೂ ಬಾರಿಯೂ ಈಕೆಯ ಬೆಂಬಲಕ್ಕೆ ಹಲವಾರು ಸೆಲೆಬ್ರಿಟಿಗಳು ನಿಂತಿದ್ದಾರೆ. ಈಗಾಗಲೇ ಒಬ್ಬರನ್ನು ಈ ಕುರಿತಂತೆ ಬಂಧಿಸಲಾಗಿದೆ. ಆದರೂ, ಡೀಪ್ ಫೇಕ್ ಕಾಟ ಅವರನ್ನು ಬಿಡುತ್ತಿಲ್ಲ. ಈಗ ಅವರದ್ದೇ ಎನ್ನಲಾದ ಡೀಪ್ ಫೇಕ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಡೀಪ್ ಫೇಕ್ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಮತ್ತೆ ವಿರೋಧದ ಮಾತುಗಳು ಕೇಳಿ ಬರುತ್ತಿವೆ. ಕೂಡಲೇ ಕ್ರಮಕ್ಕಾಗಿ ಹಲವರು ಒತ್ತಾಯಿಸಿದ್ದಾರೆ. ಮೊನ್ನೆಯಷ್ಟೇ ಕರ್ನಾಟಕ ಸರಕಾರ ಕೂಡ ಈ ಕುರಿತಂತೆ ಗಂಭೀರ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ಮುಂದಾಗಿದೆ.

    ರಾಜ್ಯ ಸರ್ಕಾರದ 2024-25ನೇ ಸಾಲಿನ ಬಜೆಟ್ (Karnataka Budget 2024) ಮಂಡನೆ ಆಗಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ, ತಮ್ಮ ಬಜೆಟ್ ನಲ್ಲಿ ಡೀಪ್ ಫೇಕ್ ವಿರುದ್ಧ ಸಮರ ಸಾರಿದ್ದಾರೆ. ಡೀಪ್ ಫೇಕ್ ನಂತ ಸೈಬರ್ ಅಪರಾಧಗಳ ವಿರುದ್ದ ಕ್ರಮಕ್ಕೆ 43 ಸಿಇಎನ್ ಪೊಲೀಸ್ ಠಾಣೆ ಉನ್ನತಿಕರಣಕ್ಕೆ ನಿರ್ಧಾರ ಮಾಡಲಾಗಿದೆ. ಈ ಮೂಲಕ ಕನ್ನಡತಿ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವರಿಗೆ ಕಾಡುತ್ತಿದ್ದ ಡೀಪ್ ಫೇಕ್ ಭೂತಕ್ಕೆ ಕಡಿವಾಣ ಹಾಕಲು ಮುಂದಾಗಿದೆ.

    ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್ ಫೇಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಕುರಿತಂತೆ ಅನೇಕ ಕಲಾವಿದರು ಮತ್ತು ರಶ್ಮಿಕಾ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಸ್ವತಃ ರಶ್ಮಿಕಾ ಮಂದಣ್ಣ ಅವರೇ ಪ್ರತಿಕ್ರಿಯೆ ನೀಡಿ, ಈ ಘಟನೆಯಿಂದಾಗಿ ನನಗೆ ತುಂಬಾ ನೋವಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

    ಡೀಪ್‍ ಫೇಕ್ (DeepFake) ವಿಡಿಯೋ ಬಗ್ಗೆ ಮಾತನಾಡಲೇಬೇಕಾದ ಅನಿವಾರ್ಯತೆ ಬಗ್ಗೆಯೂ ರಶ್ಮಿಕಾ ಮಾತನಾಡಿದ್ದರು. ತಂತ್ರಜ್ಞಾನವನ್ನು ದುರುಪಯೋಗವು ಅತ್ಯಂತ ಭಯಾನಕವಾಗಿದೆ. ನಾನು ಮಹಿಳೆಯಾಗಿ ಮತ್ತು ನಟಿಯಾಗಿ ನನ್ನನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎನ್ನುವುದರ ಅರಿವಿದೆ. ನನ್ನ ಕುಟುಂಬ ಮತ್ತು ಸ್ನೇಹಿತರು ಹಾಗೂ ಹಿತೈಷಿಗಳು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಆದರೆ, ನಾನು ಶಾಲೆ ಅಥವಾ ಕಾಲೇಜಿನಲ್ಲಿ ಇದ್ದಾಗ ಈ ರೀತಿ ಆಗಿದ್ದರೆ ಅದನ್ನು ಹೇಗೆ ನಿಭಾಯಿಸುತ್ತಿದ್ದೆ ಎಂದು ಊಹಿಸಲೂ ಅಸಾಧ್ಯ. ಡೀಪ್ ಫೇಕ್ ಮಾಡುವವರು ಇತರರ ಮೇಲೆ ಪ್ರಭಾವ ಬೀರುವುದಕ್ಕಿಂತ ಮುಂಚೆ ಅಂಥದ್ದನ್ನು ತಡೆಗಟ್ಟಬೇಕಿದೆ ಎಂದು ಹೇಳಿದ್ದರು ರಶ್ಮಿಕಾ.

     

    ಡೀಪ್ ಫೇಕ್ ಪ್ರಕರಣ ಭಾರೀ ಸದ್ದು ಮಾಡುತ್ತಿದ್ದಂತೆಯೇ, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿನ ಡೀಪ್‌ಫೇಕ್ (Deepfake) ಹಾವಳಿಯನ್ನು ಪರಿಶೀಲಿಸಲು ಮತ್ತು ಆನ್‌ಲೈನ್‌ನಲ್ಲಿ ನಕಲಿ ವಿಷಯವನ್ನು ಪತ್ತೆಹಚ್ಚಿದಾಗ ನಾಗರಿಕರು ದೂರು ದಾಖಲಿಸಲು ಸಹಾಯ ಮಾಡಲು ಸರ್ಕಾರವು ವಿಶೇಷ ಅಧಿಕಾರಿಗಳ ತಂಡವನ್ನು ನಿಯೋಜಿಸಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಶುಕ್ರವಾರ ಹೇಳಿದ್ದರು. ಈಗ ರಾಜ್ಯ ಸರ್ಕಾರ ಕೂಡ ಬಜೆಟ್ ನಲ್ಲಿ ಡೀಪ್ ಫೇಕ್ ವಿರುದ್ಧ ಸಮರ ಸಾರಿದೆ.

  • Karnataka Budget 2024- ರಶ್ಮಿಕಾ ನೋವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ:  ಡೀಪ್‍ ಫೇಕ್ ವಿರುದ್ಧ ಕ್ರಮಕ್ಕೆ ನಿರ್ಧಾರ

    Karnataka Budget 2024- ರಶ್ಮಿಕಾ ನೋವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ: ಡೀಪ್‍ ಫೇಕ್ ವಿರುದ್ಧ ಕ್ರಮಕ್ಕೆ ನಿರ್ಧಾರ

    ರಾಜ್ಯ ಸರ್ಕಾರದ 2024-25ನೇ ಸಾಲಿನ ಬಜೆಟ್ (Karnataka Budget 2024) ಮಂಡನೆ ಆಗಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ, ತಮ್ಮ ಬಜೆಟ್ ನಲ್ಲಿ ಡೀಪ್ ಫೇಕ್ ವಿರುದ್ಧ ಸಮರ ಸಾರಿದ್ದಾರೆ. ಡೀಪ್ ಫೇಕ್ ನಂತ ಸೈಬರ್ ಅಪರಾಧಗಳ ವಿರುದ್ದ ಕ್ರಮಕ್ಕೆ 43 ಸಿಇಎನ್ ಪೊಲೀಸ್ ಠಾಣೆ ಉನ್ನತಿಕರಣಕ್ಕೆ ನಿರ್ಧಾರ ಮಾಡಲಾಗಿದೆ. ಈ ಮೂಲಕ ಕನ್ನಡತಿ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವರಿಗೆ ಕಾಡುತ್ತಿದ್ದ ಡೀಪ್ ಫೇಕ್ ಭೂತಕ್ಕೆ ಕಡಿವಾಣ ಹಾಕಲು ಮುಂದಾಗಿದೆ.

    ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್ ಫೇಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಕುರಿತಂತೆ ಅನೇಕ ಕಲಾವಿದರು ಮತ್ತು ರಶ್ಮಿಕಾ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಸ್ವತಃ ರಶ್ಮಿಕಾ ಮಂದಣ್ಣ ಅವರೇ ಪ್ರತಿಕ್ರಿಯೆ ನೀಡಿ, ಈ ಘಟನೆಯಿಂದಾಗಿ ನನಗೆ ತುಂಬಾ ನೋವಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

    ಡೀಪ್‍ ಫೇಕ್ (DeepFake) ವಿಡಿಯೋ ಬಗ್ಗೆ ಮಾತನಾಡಲೇಬೇಕಾದ ಅನಿವಾರ್ಯತೆ ಬಗ್ಗೆಯೂ ರಶ್ಮಿಕಾ ಮಾತನಾಡಿದ್ದರು. ತಂತ್ರಜ್ಞಾನವನ್ನು ದುರುಪಯೋಗವು ಅತ್ಯಂತ ಭಯಾನಕವಾಗಿದೆ. ನಾನು ಮಹಿಳೆಯಾಗಿ ಮತ್ತು ನಟಿಯಾಗಿ ನನ್ನನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎನ್ನುವುದರ ಅರಿವಿದೆ. ನನ್ನ ಕುಟುಂಬ ಮತ್ತು ಸ್ನೇಹಿತರು ಹಾಗೂ ಹಿತೈಷಿಗಳು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಆದರೆ, ನಾನು ಶಾಲೆ ಅಥವಾ ಕಾಲೇಜಿನಲ್ಲಿ ಇದ್ದಾಗ ಈ ರೀತಿ ಆಗಿದ್ದರೆ ಅದನ್ನು ಹೇಗೆ ನಿಭಾಯಿಸುತ್ತಿದ್ದೆ ಎಂದು ಊಹಿಸಲೂ ಅಸಾಧ್ಯ. ಡೀಪ್ ಫೇಕ್ ಮಾಡುವವರು ಇತರರ ಮೇಲೆ ಪ್ರಭಾವ ಬೀರುವುದಕ್ಕಿಂತ ಮುಂಚೆ ಅಂಥದ್ದನ್ನು ತಡೆಗಟ್ಟಬೇಕಿದೆ ಎಂದು ಹೇಳಿದ್ದರು ರಶ್ಮಿಕಾ.

     

    ಡೀಪ್ ಫೇಕ್ ಪ್ರಕರಣ ಭಾರೀ ಸದ್ದು ಮಾಡುತ್ತಿದ್ದಂತೆಯೇ, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿನ ಡೀಪ್‌ಫೇಕ್ (Deepfake) ಹಾವಳಿಯನ್ನು ಪರಿಶೀಲಿಸಲು ಮತ್ತು ಆನ್‌ಲೈನ್‌ನಲ್ಲಿ ನಕಲಿ ವಿಷಯವನ್ನು ಪತ್ತೆಹಚ್ಚಿದಾಗ ನಾಗರಿಕರು ದೂರು ದಾಖಲಿಸಲು ಸಹಾಯ ಮಾಡಲು ಸರ್ಕಾರವು ವಿಶೇಷ ಅಧಿಕಾರಿಗಳ ತಂಡವನ್ನು ನಿಯೋಜಿಸಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಶುಕ್ರವಾರ ಹೇಳಿದ್ದರು. ಈಗ ರಾಜ್ಯ ಸರ್ಕಾರ ಕೂಡ ಬಜೆಟ್ ನಲ್ಲಿ ಡೀಪ್ ಫೇಕ್ ವಿರುದ್ಧ ಸಮರ ಸಾರಿದೆ.

  • ರಶ್ಮಿಕಾ ಮಂದಣ್ಣರ ಮತ್ತೊಂದು ಡೀಪ್‌ಫೇಕ್  ವಿಡಿಯೋ

    ರಶ್ಮಿಕಾ ಮಂದಣ್ಣರ ಮತ್ತೊಂದು ಡೀಪ್‌ಫೇಕ್ ವಿಡಿಯೋ

    ಹೆಸರಾಂತ ನಟಿ ರಶ್ಮಿಕಾ ಮಂದಣ್ಣ ಅವರ ಮತ್ತೊಂದು ಡೀಪ್‌ಫೇಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಿಂಗಳ ಹಿಂದೆಯಷ್ಟೇ ಇವರ ಡೀಪ್‌ಫೇಕ್ ವಿಡಿಯೋ ಸಾಕಷ್ಟು ಸದ್ದು ಮಾಡಿತ್ತು. ಸರಕಾರದ ಮಟ್ಟದಲ್ಲಿ ಚರ್ಚೆಗೂ ಕಾರಣವಾಗಿತ್ತು. ಆದರೂ, ಅದನ್ನು ತಡೆಯಲು ಸಾಧ್ಯವಾಗಿಲ್ಲ ಎನ್ನುವುದಕ್ಕೆ ಹರಿಬಿಟ್ಟ ಮತ್ತೊಂದು ವಿಡಿಯೋ ಸಾಕ್ಷಿಯಾಗಿದೆ.

    ತಿಂಗಳ ಹಿಂದೆಯಷ್ಟೇ ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್‌ಫೇಕ್ ವಿಡಿಯೋ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ರಶ್ಮಿಕಾ ಪರ ಅನೇಕರು ಮಾತನಾಡಿದ್ದರು. ದುರುಳರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಕೇಂದ್ರ ಸರಕಾರ ಕೂಡ ಇದನ್ನು ಗಂಭೀರವಾಗಿ ತೆಗೆದುಕೊಂಡು, ಡೀಪ್‌ಫೇಕ್ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುವುದಾಗಿ ಹೇಳಿತ್ತು. ಆದರೂ, ಡೀಪ್‌ಫೇಕ್ ಕಾಟ ಮುಂದುವರೆದಿದೆ.

    ಡೀಪ್‌ನೆಕ್ ಬ್ಲಾಕ್ ಡ್ರೆಸ್‌ನಲ್ಲಿದ್ದ ಯುವತಿಯೊಬ್ಬರ ವಿಡಿಯೋವನ್ನು ಥೇಟ್ ರಶ್ಮಿಕಾ ಮಂದಣ್ಣ ಅವರಂತೆ ಮಾರ್ಫ್ ವಿಡಿಯೋ ಸೃಷ್ಟಿಸಿದ್ದರು. ವಿಡಿಯೋದಲ್ಲಿರುವುದು ರಶ್ಮಿಕಾ ಅಲ್ಲ, ಜರಾ ಪಟೇಲ್ ಎನ್ನುವುದು ಗೊತ್ತಾಗಿತ್ತು. ಡೀಪ್‌ಫೇಕ್ ತಂತ್ರಜ್ಞಾನ (Deepfake Technology) ಬಳಸಿ ರಶ್ಮಿಕಾ ಹೆಸರಿಗೆ ಮಸಿ ಬಳಿಯಲು ಕಿಡಿಗೇಡಿಗಳು ಯತ್ನಿಸಿದ್ದಕ್ಕೆ ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು

    ಸೂಪರ್ ಸ್ಟಾರ್, ನಟ ಅಮಿತಾಬ್ ಕೂಡ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ಬೆನ್ನಲ್ಲೇ ಈ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದೊಂದು ಅತ್ಯಂತ ಅಪಾಯಕಾರಿ ಕೃತ್ಯ. ಇಂತಹ ಮಾರ್ಫಿಂಗ್ ವಿಡಿಯೋಗಳ ನಿಯಂತ್ರಣ ಸಾಮಾಜಿಕ ಜಾಲತಾಣಗಳ (Social Media) ಹೊಣೆ. ಅಪ್‌ಲೋಡ್ ಆದ 36 ಗಂಟೆಗಳಲ್ಲಿ ಇವುಗಳನ್ನು ತೊಲಗಿಸದಿದ್ದರೆ ಅಂತಹ ಸಾಮಾಜಿಕ ಜಾಲತಾಣವನ್ನು ಕೋರ್ಟ್‌ಗೆ ಎಳೆಯಬಹುದು ಎಂದು ಸ್ಪಷ್ಟಪಡಿಸಿದೆ.

    ಏನಿದು ಡೀಪ್‌ಫೇಕ್?

    ಯಾರದ್ದೋ ದೇಹಕ್ಕೆ ಯಾರದ್ದೋ ತಲೆಯನ್ನು ಫೋಟೋ ಎಡಿಟಿಂಗ್‌ ಟೂಲ್‌ ಮೂಲಕ ಜೋಡಿಸುವುದು ಹಳೇಯ ವಿಚಾರ. ಈ ಫೋಟೋಗಳನ್ನು ನೋಡುವಾಗ ಸ್ವಲ್ಪವಾದರೂ ಅನುಮಾನ ಬರುತ್ತದೆ. ಆದರೆ ಡೀಪ್‌ ಫೇಕ್‌ ತಂತ್ರಜ್ಞಾನದಲ್ಲಿ ಯಾವುದೇ ಅನುಮಾನ ಬಾರದಂತೆ ಫೋಟೋ ಅಲ್ಲ ವಿಡಿಯೋವನ್ನೇ ಸೃಷ್ಟಿ ಮಾಡಲಾಗುತ್ತದೆ. ವಿಡಿಯೋ ಎಷ್ಟು ನೈಜತೆ ಇರುತ್ತದೆ ಅಂದರೆ ವ್ಯಕ್ತಿಯ ದೇಹಕ್ಕೂ ಮತ್ತು ಮುಖಕ್ಕೆ ನೇರ ಸಂಬಂಧ ಇದ್ದಂತೆ ಇರುತ್ತದೆ. ಮೂಲ ವಿಡಿಯೋ ಬೇರೆ ಆಗಿದ್ದರೂ ಈ ವ್ಯಕ್ತಿಯೇ ವಿಡಿಯೋದಲ್ಲಿ ನಟಿಸುತ್ತಿದ್ದಂತೆ ಬಿಂಬಿಸಲಾಗುತ್ತದೆ.

    ಆರ್ಟಿಫಿಷಿಯಲ್ ಇಂಟೆಲಿಜೆನ್ಸ್+ಮೆಷಿನ್ ಲರ್ನಿಂಗ್ ಸಹಾಯದಿಂದ ಮಾರ್ಫಿಂಗ್ ವಿಡಿಯೋ, ಫೋಟೋಗಳು ಸೃಷ್ಟಿ ಮಾಡುವುದಕ್ಕೆ ಡೀಪ್‌ಫೇಕ್‌ ಎಂದು ಕರೆಯಲಾಗುತ್ತದೆ. ಒಬ್ಬ ಒಬ್ಬ ವ್ಯಕ್ತಿಯಂತೆಯೇ ಸೇಮ್ ಟು ಸೇಮ್ ಡೂಪ್ ಸೃಷ್ಟಿಸಬಹುದು. ಥಟ್ಟನೇ ನೋಡಿದಾಗ ಯಾವುದೇ ವ್ಯತ್ಯಾಸವೇ ಗೊತ್ತಗುವುದಿಲ್ಲ. ಮೃತ ನಟನನ್ನು ಮತ್ತೆ ಸ್ಕ್ರೀನ್‌ ಮೇಲೆ ಮೇಲೆ ಈ ತಂತ್ರಜ್ಞಾನದ ಸಹಾಯದಿಂದ ತೋರಿಸಬಹುದು.

     

    ಹಿಂದಿ, ಇಂಗ್ಲೀಷ್ ಮಾತ್ರ ಬರುವ ವ್ಯಕ್ತಿಗೆ ಕನ್ನಡದಲ್ಲಿ ಮಾತನಾಡಿದಂತೆಯೂ ತೋರಿಸಬಹುದು. ಈ ತಂತ್ರಜ್ಞಾನದಿಂದ ಎಷ್ಟು ಲಾಭ ಇದೆಯೋ ಅಷ್ಟೇ ನಷ್ಟವಿದೆ. ದುರ್ಬಳಕೆ ಕೂಡ ಹೆಚ್ಚಾಗುತ್ತಿದೆ. ಈ ಹಿಂದೆ ಡೀಪ್ ಫೇಕ್ ಹಾವಳಿಗೆ ಹಾಲಿವುಡ್ ನಟ ಟಾಮ್ ಹ್ಯಾಂಕ್ಸ್ ತುತ್ತಾಗಿದ್ದರು. ಡೀಪ್‌ಫೇಕ್ ಬಳಸಿ ಟಾಮ್ ಹ್ಯಾಂಕ್ಸ್ ಯಾವುದೇ ಜಾಹೀರಾತಿನಲ್ಲಿ ನಟಿಸಿದಂತೆ ಮಾಡಲಾಗಿತ್ತು.

  • ಮೋದಿ ಡೀಪ್‌ ಫೇಕ್‌ ವಿಡಿಯೋ ವೈರಲ್‌ – ಗರ್ಬಾ ನೃತ್ಯ ಮಾಡಿದ್ದು ನಾನೇ ಎಂದ ವ್ಯಕ್ತಿ

    ಮೋದಿ ಡೀಪ್‌ ಫೇಕ್‌ ವಿಡಿಯೋ ವೈರಲ್‌ – ಗರ್ಬಾ ನೃತ್ಯ ಮಾಡಿದ್ದು ನಾನೇ ಎಂದ ವ್ಯಕ್ತಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಆ ವಿಡಿಯೋದಲ್ಲಿರುವ ವ್ಯಕ್ತಿ ಪ್ರತಿಕ್ರಿಯೆ ನೀಡಿದ್ದಾರೆ.

    ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸೇರಿದಂತೆ ಬಾಲಿವುಡ್‌ನ ಹಲವು ನಟಿಯರ ಡೀಪ್‌ ಫೇಕ್‌ (Deep Fake) ವಿಡಿಯೊಗಳು ವೈರಲ್‌ ಆದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಡೀಪ್‌ ಫೇಕ್‌ ತಂತ್ರಜ್ಞಾನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

    ನಾನು ಗರ್ಬಾ ನೃತ್ಯ ಮಾಡುವ ರೀತಿ ಬಿಂಬಿಸಿದ್ದ ಡೀಪ್‌ಫೇಕ್‌ ವಿಡಿಯೊವನ್ನು ನಾನೇ ನೋಡಿದ್ದೆ ಎಂದು ಹೇಳಿದ್ದರು. ಈ ಹೇಳಿಕೆಯ ನಂತರ ಸಾಮಾಜಿಕ ಜಾಲತಾಣದಲ್ಲಿ ಗರ್ಬಾ ನೃತ್ಯದ (Garba Dance) ವಿಡಿಯೋ ವೈರಲ್‌ ಆಗಿತ್ತು.

    ಈಗ ವಿಡಿಯೋದಲ್ಲಿರುವ ವ್ಯಕ್ತಿ ಪ್ರತಿಕ್ರಿಯೆ ನೀಡಿದ್ದಾರೆ. ನರೇಂದ್ರ ಮೋದಿ ಅವರನ್ನೇ ಹೋಲುವ ವಿಕಾಸ್‌ ಮಹಾಂತೆ (Vikas Mahante) ಪ್ರತಿಕ್ರಿಯಿಸಿ, ಗರ್ಬಾ ನೃತ್ಯದಲ್ಲಿ ಕಾಣಿಸಿಕೊಂಡಿರುವುದು ನಾನೇ. ಅದು ಡೀಪ್‌ ಫೇಕ್‌ ವಿಡಿಯೊ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ನರೇಂದ್ರ ಮೋದಿ ಅವರಂತೆ ನಾನು ಕಾಣುತ್ತಿರುವುದರಿಂದ ದೇಶ-ವಿದೇಶಗಳಿಂದ ನನಗೆ ಆಹ್ವಾನ ಬರುತ್ತದೆ. ನಾನು ಮೋದಿ ಅವರ ಆಲೋಚನೆಗಳು ತಿಳಿಸಲು ಪ್ರಯತ್ನಿಸುತ್ತೇನೆ. ಅದು ಡೀಪ್‌ ಫೇಕ್‌ ವಿಡಿಯೋ ಅಲ್ಲ. ಗರ್ಬಾ ನೃತ್ಯ ಮಾಡಿದ್ದು ನಾನೇ ಎಂದಿದ್ದಾರೆ.  ಇದನ್ನೂ ಓದಿ: ಖಲಿಸ್ತಾನಿಗಳಿಂದ ಹಿಂದೂ ದೇವಾಲಯಗಳ ಟಾರ್ಗೆಟ್: ಕ್ರಮಕ್ಕೆ ಕೆನಡಾ ಸಂಸದ ಒತ್ತಾಯ

    ಮಹಾರಾಷ್ಟ್ರದ ಮಲಾಡ್‌ನಲ್ಲಿ ಉದ್ಯಮಿಯಾಗಿರುವ ವಿಕಾಸ್‌ ಮಹಾಂತೆ ಅವರು ನರೇಂದ್ರ ಮೋದಿ ಅವರನ್ನೇ ಹೋಲುತ್ತಾರೆ. ಈ ಕಾರಣದಲ್ಲಿ ಹಲವು ಬಾರಿ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರವನ್ನೂ ಮಾಡಿದ್ದಾರೆ. ಬಿಜೆಪಿ ಬೆಂಬಲಿಗರು ಆಯೋಜಿಸುವ ಹಲವು ಕಾರ್ಯಕ್ರದ ಉದ್ಘಾಟನೆಯನ್ನು ಇವರೇ ಮಾಡುತ್ತಿದ್ದಾರೆ. ನವೆಂಬರ್‌ ತಿಂಗಳಿನಲ್ಲಿ ಲಂಡನ್‌ ಸೇರಿದಂತೆ 8 ಕಾರ್ಯಕ್ರಮದಲ್ಲಿ ಇವರು ಭಾಗವಹಿಸಿದ್ದಾರೆ.

    ಮೋದಿ ಬಯೋಪಿಕ್‌ನಲ್ಲಿ ಇವರು ಅಭಿನಯಸಿದ್ದಾರೆ. ಪ್ರಧಾನಿ ಅನುಮತಿ ನೀಡಿದ ಬಳಿಕ ಮುಂದಿನ ವರ್ಷದ ಆರಂಭದಲ್ಲಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಯಿದೆ. ನಾನು ಮೋದಿ ಅವರ ಹಲವು ವಿಡಿಯೋಗಳನ್ನು ವೀಕ್ಷಣೆ ಮಾಡಿ ಮಾತನಾಡಲು ಪ್ರಯತ್ನಿಸಿದರೂ ಅವರ ಧ್ವನಿಯಂತೆ ಮಾತನಾಡಲು ಯಶಸ್ವಿಯಾಗಿಲ್ಲ ಎಂದು ತಿಳಿಸಿದರು.

     

  • ಡೀಪ್‌ಫೇಕ್ ಎಫೆಕ್ಟ್ : ಸಹಾಯವಾಣಿ ತೆರೆದ ಬೆಂಗಳೂರು ಪೊಲೀಸರು

    ಡೀಪ್‌ಫೇಕ್ ಎಫೆಕ್ಟ್ : ಸಹಾಯವಾಣಿ ತೆರೆದ ಬೆಂಗಳೂರು ಪೊಲೀಸರು

    ಟಿಯರಾದ ರಶ್ಮಿಕಾ ಮಂದಣ್ಣ (Rashmika Mandanna), ಕತ್ರಿನಾ ಕೈಫ್‍, ಕಾಜೋಲ್ ಸೇರಿದಂತೆ ಅನೇಕ ಕಲಾವಿದರ ಮತ್ತು ಸಾಮಾನ್ಯ ಮಹಿಳೆಯರ ಡೀಪ್‌ಫೇಕ್ (DeepFake)  ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ಡೀಪ್‌ಫೇಕ್ ಕಾಟಕ್ಕೆ ಬೇಸತ್ತ ಪ್ರತಿಯೊಬ್ಬರೂ ದುರುಳರಿಗೆ ಅತೀ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇದನ್ನು ಕೂಡಲೇ ತಡೆಗಟ್ಟಬೇಕು ಎನ್ನುವ ಆಗ್ರಹ ಕೂಡ ಮಾಡಿದ್ದರು.

    ಇದೀಗ ಬೆಂಗಳೂರು (Bangalore) ಪೊಲೀಸರು (Police) ಡೀಪ್‌ಫೇಕ್ ವಿರುದ್ಧ ತೊಡೆತಟ್ಟಿದ್ದಾರೆ. ಇಂತಹ ವಿಡಿಯೋಗಳಿಂದ ನೀವು ಸಂಕಷ್ಟಕ್ಕೆ ಸಿಲುಕಿದ್ದರೆ, ಸಹಾಯವಾಣಿಗೆ (Help Line) ಕರೆ ಮಾಡುವಂತೆ ಮನವಿ ಮಾಡಿದ್ದಾರೆ. ಕರೆ ಮಾಡಬೇಕಾದ ಹೆಲ್ಪ್ ಲೈನ್ ನಂಬರ್ ಕೂಡ ನೀಡಿದ್ದಾರೆ. ಯಾರಾದರೂ ಅಂತಹ ವಿಡಿಯೋಗಳಿಂದ ನೊಂದಿದ್ದೀರಾ? 1930 ಸಂಖ್ಯೆಗೆ ಕರೆ ಮಾಡಬಹುದು.

    ಏನಿದು ಡೀಪ್‌ಫೇಕ್‌ ತಂತ್ರಜ್ಞಾನ?

    ಒಬ್ಬರ ದೇಹಕ್ಕೆ ಇನ್ನೊಬ್ಬರ ತಲೆಯನ್ನು ಜೋಡಿಸಿ ಎಡಿಟಿಂಗ್‌ ಮಾಡುತ್ತಿದ್ದ ಫೋಟೋ, ವೀಡಿಯೋಗಳು ಸಾಮಾನ್ಯವಾಗಿದ್ದವು. ಇವು ಎಡಿಟಿಂಗ್‌ ಆಗಿರುವ ಫೋಟೋ/ವೀಡಿಯೋ ಎಂಬುದು ನೋಡಿದಾಕ್ಷಣ ತಿಳಿಯುತ್ತಿತ್ತು. ಇಲ್ಲವೇ ಸ್ವಲ್ಪವಾದರೂ ಅನುಮಾನ ಮೂಡುತ್ತದೆ. ಆದರೆ ಡೀಪ್‌ಫೇಕ್‌ ತಂತ್ರಜ್ಞಾನದಲ್ಲಿ ಆ ಯಾವುದೇ ಅನುಮಾನ ಬರುವುದಿಲ್ಲ. ಆ ರೀತಿ ಫೋಟೋ/ವೀಡಿಯೋ ಎಡಿಟ್‌ ಮಾಡಲಾಗುತ್ತದೆ. ವ್ಯಕ್ತಿಯ ದೇಹ ಮತ್ತು ಮುಖಕ್ಕೆ ಕೊಂಚವೂ ವ್ಯತ್ಯಾಸ ಇಲ್ಲದಂತೆ ವೀಡಿಯೋಗಳನ್ನ ಸೃಷ್ಟಿಸಲಾಗುತ್ತದೆ. ವೀಡಿಯೋ ನೋಡಿದರೆ ‘ಇದು ಬೇರೆ ಯಾರೂ ಅಲ್ಲ.. ಅವರೇ’ ಎನ್ನುವಷ್ಟು ನಿಖರತೆಯಿಂದ ಕೂಡಿರುತ್ತದೆ.

     

    ಎಐ (ಕೃತಕ ಬುದ್ದಿಮತ್ತೆ) ಮಷಿನ್‌ ಲರ್ನಿಂಗ್‌ ಸಹಾಯದಿಂದ ಮಾರ್ಫಿಂಗ್‌ ವೀಡಿಯೋ, ಫೋಟೋ ಸೃಷ್ಟಿಸುವುದಕ್ಕೆ ಡೀಪ್‌ಫೇಕ್‌ ಎಂದು ಕರೆಯಲಾಗುತ್ತದೆ. ಒಬ್ಬ ವ್ಯಕ್ತಿಯಂತೆಯೇ ಸೇಮ್‌ ಟು ಸೇಮ್‌ ಡೂಪ್‌ ಸೃಷ್ಟಿಸಬಹುದು. ವೀಡಿಯೋ/ಫೋಟೋ ನೋಡಿದಾಗ ಇದು ಅಸಲಿಯೇ ಅಥವಾ ನಕಲಿಯೇ ಎಂಬುದು ತಿಳಿಯುವುದೇ ಇಲ್ಲ. ಈ ತಂತ್ರಜ್ಞಾನ ಬಳಸಿ ಯಾರನ್ನು ಬೇಕಾದರೂ ಸ್ಕ್ರೀನ್‌ ಮೇಲೆ ತೋರಿಸಬಹುದು. ಹಿಂದಿ, ಇಂಗ್ಲಿಷ್‌ ಅಷ್ಟೇ ಬರುವ ವ್ಯಕ್ತಿ ಕನ್ನಡದಲ್ಲಿ ಮಾತನಾಡಿದಂತೆಯೂ, ಹಾಡಿದಂತೆಯೂ ತೋರಿಸಬಹುದು. ಕೆಲವೊಮ್ಮೆ ಈ ತಂತ್ರಜ್ಞಾನ ಲಾಭದಾಯಕ ಎನಿಸುತ್ತದೆ. ಆದರೆ ಅಷ್ಟೇ ದುರ್ಬಳಕೆ ಕೂಡ ಆಗುತ್ತಿದೆ. ಅದಕ್ಕೆ ಉತ್ತಮ ಉದಾಹರಣೆ ರಶ್ಮಿಕಾ ಮಂದಣ್ಣ ಪ್ರಕರಣ.

    ಈ ತಂತ್ರಜ್ಞಾನ ಉಚಿತ, ವ್ಯಾಪಕವಾಗಿ ಲಭ್ಯವಿದೆ. ಯಾವುದೇ ತಾಂತ್ರಿಕ ಪರಿಣತಿಯ ಅಗತ್ಯವಿಲ್ಲ. ಈ ಅಪ್ಲಿಕೇಶನ್‌ಗಳು ಬಳಕೆದಾರರಿಗೆ, ಚಿತ್ರಗಳನ್ನು ಡಿಜಿಟಲ್‌ ಸಹಾಯದಿಂದ ತೆಗೆದುಹಾಕಲು ಅಥವಾ ಅಶ್ಲೀಲ ವೀಡಿಯೊಗಳಲ್ಲಿ ಅವರ ಮುಖಗಳನ್ನು ಸೇರಿಸಲು ಅನುಮತಿಸುತ್ತದೆ. ಗಾಯಕ ಟೇಲರ್ ಸ್ವಿಫ್ಟ್ ಮತ್ತು ನಟಿ ಎಮ್ಮಾ ವ್ಯಾಟ್ಸನ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಡೀಪ್‌ಫೇಕ್ ತಂತ್ರಜ್ಞಾನದ ಸಂತ್ರಸ್ತರಾಗಿದ್ದಾರೆ. ಡಚ್ ಎಐ ಕಂಪನಿ ಸೆನ್ಸಿಟಿಯ ಅಧ್ಯಯನದ ಪ್ರಕಾರ, ಆನ್‌ಲೈನ್‌ನಲ್ಲಿ ಸುಮಾರು 96% ಡೀಪ್‌ಫೇಕ್ ವೀಡಿಯೋಗಳು ಅಶ್ಲೀಲತೆಯಿಂದ ಕೂಡಿವೆ. ಅವುಗಳಲ್ಲಿ ಹೆಚ್ಚಿನವು ಮಹಿಳೆಯರನ್ನೇ ಚಿತ್ರಿಸಿವೆ ಎಂದಿದೆ.

    ಡೀಪ್‌ಫೇಕ್‌ ಅಪರಾಧಕ್ಕೆ ಶಿಕ್ಷೆ ಏನು?
    ಡೀಪ್‌ಫೇಕ್ ಸೈಬರ್‌ ಅಪರಾಧಕ್ಕೆ ಸಂಬಂಧಿಸಿದಂತೆ ಭಾರತ ಕಾನೂನಿನಲ್ಲಿ ಸ್ಪಷ್ಟವಾದ ವ್ಯಾಖ್ಯಾನ ಇಲ್ಲ. ಆದರೆ ಈ ಅಪರಾಧದ ವಿರುದ್ಧ ಇತರ ಹಲವಾರು ಕಾನೂನು ಕ್ರಮಗಳನ್ನು ಬಳಸಿಕೊಳ್ಳಬಹುದು.

    * ಐಟಿ ಕಾಯಿದೆ: ಮಾಹಿತಿ ತಂತ್ರಜ್ಞಾನ ಕಾಯಿದೆ 2000 ಸೆಕ್ಷನ್‌ 66ರ ಪ್ರಕಾರ, ಐಡೆಂಟಿಫಿಕೇಷನ್‌ ಥೆಫ್ಟ್‌ (ಗುರುತು ಕಳವು) ಮಾಡಿ ಅದನ್ನು ಅನ್ಯ ಉದ್ದೇಶಗಳಿಗೆ ಬಳಸಿದರೆ ಅದಕ್ಕೆ 3 ವರ್ಷ ಜೈಲು ಶಿಕ್ಷೆ. ಜೊತೆಗೆ 1 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ.

    * ಐಟಿ ಕಾಯಿದೆ ಸೆಕ್ಷನ್‌ 66ಇ ಪ್ರಕಾರ, ಖಾಸಗಿ ಹಕ್ಕು ಉಲ್ಲಂಘನೆಗಾಗಿ 3 ವರ್ಷ ಜೈಲು ಮತ್ತು 2 ಲಕ್ಷದ ವರೆಗೆ ದಂಡ ವಿಧಿಸಲಾಗುವುದು.

    * ಹಕ್ಕುಸ್ವಾಮ್ಯ ಕಾಯಿದೆ, 1957: ಕಾಯಿದೆಯ ಸೆಕ್ಷನ್ 51 ವಿಶೇಷ ಹಕ್ಕನ್ನು ಹೊಂದಿರುವ ಇನ್ನೊಬ್ಬ ವ್ಯಕ್ತಿಗೆ ಸೇರಿದ ಯಾವುದೇ ಆಸ್ತಿಯನ್ನು ಬಳಸಿದಾಗ ಹಕ್ಕುಸ್ವಾಮ್ಯ ಕಾಯಿದೆಯ ಉಲ್ಲಂಘನೆಯಾಗಿದೆ.

    * ಭಾರತೀಯ ದಂಡ ಸಂಹಿತೆ ಸೆಕ್ಷನ್‌ 153ಎ (ಧರ್ಮ, ಜಾತಿ ಮತ್ತಿತರ ಹೆಸರಿನಲ್ಲಿ ನಿಂದನೆ) ಮತ್ತು 295ಎ (ಉದ್ದೇಶಪೂರ್ವಕವಾಗಿ ಅಪಮಾನಗೊಳಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಬಹುದು.

    * ಕಾಪಿ ರೈಟ್‌ ಕಾಯಿದೆ 1957ರ ಸೆಕ್ಷನ್‌ 16ರ ಪ್ರಕಾರ ವೀಡಿಯೋ ದುರ್ಬಳಕೆ ಮಾಡಿಕೊಂಡರೆ 3 ವರ್ಷ ಜೈಲು, 2 ಲಕ್ಷ ರೂ. ದಂಡ ವಿಧಿಸಬಹುದು.

  • ರಶ್ಮಿಕಾ ಡೀಪ್‌ಫೇಕ್ : ರಕ್ಷಿತ್ ಶೆಟ್ಟಿ ಖಡಕ್ ಪ್ರತಿಕ್ರಿಯೆ

    ರಶ್ಮಿಕಾ ಡೀಪ್‌ಫೇಕ್ : ರಕ್ಷಿತ್ ಶೆಟ್ಟಿ ಖಡಕ್ ಪ್ರತಿಕ್ರಿಯೆ

    ಖ್ಯಾತ ನಟಿ ರಶ್ಮಿಕಾ ಮಂದಣ್ಣ  ಡೀಪ್‌ಫೇಕ್ ವಿಡಿಯೋಗೆ ಸಂಬಂಧಿಸಿದಂತೆ ನಟ ರಕ್ಷಿತ್ ಶೆಟ್ಟಿ (Rakshit Shetty) ಪ್ರತಿಕ್ರಿಯೆ ನೀಡಿದ್ದಾರೆ. ಯೂಟ್ಯೂಬ್ ಚಾನೆಲ್ ವೊಂದರ ಜೊತೆ ಮಾತನಾಡಿರುವ ಅವರು, ‘ಯಾವ ನಟಿಯದ್ದೂ ಹಾಗೆ ಆಗಬಾರದು. ಇಂತಹ ಪ್ರಕರಣಗಳಿಗೆ ಸರಕಾರ ಬೇಗ ಸ್ಪಂದಿಸಿ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ. ವಿಡಿಯೋ ವೈರಲ್ ಆಗುವ ಮುಂಚೆಯೇ ಕ್ರಮಕ್ಕೆ ಮುಂದಾಗಬೇಕು ಎಂದು ರಕ್ಷಿತ್ ಪ್ರತಿಕ್ರಿಯೆ ನೀಡಿದ್ದಾರೆ.

    ಮೊನ್ನೆಯಷ್ಟೇ ರಶ್ಮಿಕಾ ಮಂದಣ್ಣ ಅವರ ಮತ್ತೊಂದು ಡೀಪ್‌ಫೇಕ್ ವಿಡಿಯೋ ವೈರಲ್ ಆಗಿದೆ. ಈ ಹಿಂದೆಯೂ ಇವರ ಇಂಥದ್ದೇ ವಿಡಿಯೋ ಶೇರ್ ಆಗಿ ಸಾಕಷ್ಟು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಡಿಯೋ ಕುರಿತು ದೂರು ದಾಖಲಾಗಿದ್ದರೂ, ದುರುಳರು ಅಂಜದೇ ಮತ್ತೊಂದು  ಡೀಪ್‌ಫೇಕ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಕುರಿತು ಅನೇಕರು ವಿರೋಧ ವ್ಯಕ್ತ ಪಡಿಸಿದ್ದಾರೆ.

    ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್‌ಫೇಕ್ (Deepfake) ಎಐ-ರಚಿಸಿದ ವೀಡಿಯೋಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕಳೆದ ಶುಕ್ರವಾರ ಎಫ್‌ಐಆರ್‌ ದಾಖಲಿಸಿದ್ದಾರೆ. ವಿಶೇಷ ಸೆಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.

    ದೆಹಲಿ ಪೊಲೀಸರು (Delhi Police) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. “ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್‌ ವೀಡಿಯೋಗೆ ಸಂಬಂಧಿಸಿದಂತೆ, ಐಪಿಸಿಯ ಎಫ್‌ಐಆರ್ ಯು/ಎಸ್ 465 ಮತ್ತು 469, 1860 ಮತ್ತು ಐಟಿ ಆಕ್ಟ್, 2000 ರ ಸೆಕ್ಷನ್ 66 ಸಿ ಮತ್ತು 66 ಇ ಅನ್ನು ದೆಹಲಿ ಪೊಲೀಸ್ ಸ್ಪೆಷಲ್‌ ಸೆಲ್‌ನಲ್ಲಿ ದಾಖಲಿಸಲಾಗಿದೆ. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

    ಅರೆಬೆತ್ತಲಾಗಿದ್ದ ಮಹಿಳೆಯೊಬ್ಬರ ವೀಡಿಯೋಗೆ ನಟಿ ರಶ್ಮಿಕಾ ಅವರ ಮುಖ ಸೇರಿಸಿ ಡೀಪ್‌ಫೇಕ್‌ ವೀಡಿಯೋ ಮಾಡಲಾಗಿತ್ತು. ಇದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದಕ್ಕೆ ರಶ್ಮಿಕಾ ಮಂದಣ್ಣ ಸೇರಿ ಖ್ಯಾತ ನಟರು ಸಹ ಆಕ್ರೋಶ ವ್ಯಕ್ತಪಡಿಸಿದ್ದರು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ದೆಹಲಿ ಮಹಿಳಾ ಆಯೋಗ ಕೂಡ ಕ್ರಮಕೈಗೊಳ್ಳುವಂತೆ ಒತ್ತಾಯಿಸಿತ್ತು.

    ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವೀಡಿಯೋ ಹಲವಾರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ ಎಂಬ ಮಾಧ್ಯಮ ವರದಿಗಳ ಕುರಿತು ದೆಹಲಿ ಮಹಿಳಾ ಆಯೋಗವು ಸುಮೊಟೊ ಅರಿವು ತೆಗೆದುಕೊಂಡಿದೆ. ವರದಿಯ ಪ್ರಕಾರ, ನಟಿ ಈ ವಿಷಯದಲ್ಲಿ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ವೀಡಿಯೋದಲ್ಲಿ ಆಕೆಯ ಚಿತ್ರವನ್ನು ಅಕ್ರಮವಾಗಿ ಮಾರ್ಫಿಂಗ್ ಮಾಡಲಾಗಿದೆ ಎಂದು ಆಯೋಗ ತಿಳಿಸಿತ್ತು.

     

    ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಯಾವುದೇ ಬಂಧನವಾಗಿಲ್ಲ. ನವೆಂಬರ್ 17 ರೊಳಗೆ ಆರೋಪಿಗಳ ವಿವರಗಳೊಂದಿಗೆ ಎಫ್‌ಐಆರ್ ಪ್ರತಿಯನ್ನು ನೀಡಬೇಕು. ಇದು ಅತ್ಯಂತ ಗಂಭೀರವಾದ ವಿಷಯವಾಗಿದೆ. ದಯವಿಟ್ಟು ಈ ವಿಷಯದಲ್ಲಿ ದಾಖಲಾಗಿರುವ ಎಫ್‌ಐಆರ್‌ನ ಪ್ರತಿಯನ್ನು ಒದಗಿಸಿ ಎಂದು ಆಯೋಗ ಕೇಳಿದೆ.