Tag: ಡೀನ್

  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಂಸ್ಕೃತದಲ್ಲಿ ʼಚರಕ ಶಪಥʼ ಪ್ರಮಾಣ ವಚನ ನೀಡಿದ್ದಕ್ಕೆ ಕಾಲೇಜು ಡೀನ್‌ ವಜಾ

    ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಂಸ್ಕೃತದಲ್ಲಿ ʼಚರಕ ಶಪಥʼ ಪ್ರಮಾಣ ವಚನ ನೀಡಿದ್ದಕ್ಕೆ ಕಾಲೇಜು ಡೀನ್‌ ವಜಾ

    ಚೆನ್ನೈ: ಕಾಲೇಜಿನ ನೂತನ ವಿದ್ಯಾರ್ಥಿಗಳಿಗೆ ಸಂಸ್ಕೃತದಲ್ಲಿ ಮಹರ್ಷಿ ʻಚರಕ ಶಪಥʼ ಪ್ರಮಾಣ ವಚನ ನೀಡಿದ್ದಕ್ಕೆ ವೈದ್ಯಕೀಯ ಕಾಲೇಜಿನ ಡೀನ್‌ರನ್ನು ತಮಿಳುನಾಡು ಸರ್ಕಾರ ವಜಾಗೊಳಿಸಿದೆ.

    ಹಿಂದಿ ಹೇರಿಕೆ ವಿವಾದ, ಕೇಂದ್ರದೊಂದಿಗಿನ ರಾಜ್ಯ ಸರ್ಕಾರದ ಉದ್ವಿಗ್ನತೆ ನಡುವೆ ಈ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ಹಣಕಾಸು ಸಚಿವ ಪಳನಿವೇಲ್‌ ತ್ಯಾಗ ರಾಜನ್‌ ಮತ್ತು ವಾಣಿಜ್ಯ ತೆರಿಗೆ ಸಚಿವ ಪಿ.ಮೂರ್ತಿ ಭಾಗವಹಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಮೋದಿ ಮುಟ್ಟಿದ್ರೆ, ಗುಜರಾತ್ ಹೋಗುತ್ತೆ – ಅಡ್ವಾಣಿಗೆ ಅಂದು ಠಾಕ್ರೆ ನೀಡಿದ್ದ ಸಲಹೆಯ ಬಗ್ಗೆ ಉದ್ಧವ್‌ ಮಾತು

    ವಿದ್ಯಾರ್ಥಿಗಳು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ದೃಶ್ಯಗಳಿರುವ ವೀಡಿಯೋ ವೈರಲ್‌ ಆಗಿತ್ತು. ಪರಿಣಾಮವಾಗಿ ಡೀನ್ ಎ.ರತ್ನವೇಲ್ ಅವರನ್ನು ಪದಚ್ಯುತಗೊಳಿಸುವಂತೆ ರಾಜ್ಯ ಸರ್ಕಾರ ಆದೇಶಿಸಿತ್ತು.

    ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತ ತನಿಖೆ ನಡೆಸಬೇಕು ಎಂದು ಸರ್ಕಾರ ಆದೇಶಿಸಿದೆ. ಕಾಲೇಜಿನ ನಿಯಮ ಹಾಗೂ ಆಚರಣೆಗಳನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಮಾ.ಸುಬ್ರಮಣಿಯನ್‌ ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಬಾಬರಿ ಮಸೀದಿ ಧ್ವಂಸದಲ್ಲಿ ಭಾಗಿಯಾಗಿದ್ದೆ, ಶಿವಸೇನೆ ನಾಯಕರು ಯಾರೂ ಇರಲಿಲ್ಲ : ಫಡ್ನವೀಸ್

    ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಇತ್ತೀಚೆಗೆ, ವೈದ್ಯಕೀಯ ಕಾಲೇಜುಗಳು ತಮ್ಮ ವಿದ್ಯಾರ್ಥಿಗಳಿಗೆ ʼಹಿಪೊಕ್ರೆಟಿಕ್ ಪ್ರಮಾಣʼಕ್ಕೆ ಬದಲಾಗಿ ‘ಚರಕ ಶಪಥ’ವನ್ನು ನೀಡುವಂತೆ ಸೂಚಿಸಿತ್ತು. ಬಿಜೆಪಿ ನೇತೃತ್ವದ ಸರ್ಕಾರದ ಹಿಂದುತ್ವದ ಅಜೆಂಡಾದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಕ್ಷೇಪಗಳು ಸಹ ವ್ಯಕ್ತವಾಗಿದ್ದವು.

    ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು, ಚರಕ ಶಪಥ ಐಚ್ಛಿಕವಾದದ್ದು. ʻಚರಕ ಶಪಥʼ ಪ್ರಮಾಣ ವಚನಕ್ಕೆ ವೈದ್ಯಕೀಯ ವಿದ್ಯಾರ್ಥಿಗಳನ್ನು ಬಲವಂತಪಡಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಚರಕ ಶಪಥವು ಪುರಾತನ ವೈದ್ಯಕೀಯ ಪದ್ಧತಿಗಳ ಆಯುರ್ವೇದ ಗ್ರಂಥಗಳಲ್ಲಿ ಒಂದಾದ ‘ಚರಕ ಸಂಹಿತಾ’ದಿಂದ ಬಂದಿದೆ. ಹಿಪೊಕ್ರೆಟಿಕ್ ಪ್ರಮಾಣವು ಗ್ರೀಕ್ ವೈದ್ಯಕೀಯ ಪಠ್ಯದ ಮೂಲದ್ದಾಗಿದೆ. ಇದನ್ನೂ ಓದಿ: ಎರಡೂವರೆ ಗಂಟೆ ಸಭೆ – ರಾಜ್ಯದಲ್ಲೂ ಯುವ ಮುಖಗಳಿಗೆ ಮಣೆ?

  • ಇಎಸ್‍ಐ ಆಸ್ಪತ್ರೆಯ ಡೀನ್ ಕಾಮದಾಟ – ಪಾಠ ಹೇಳುವ ಬದಲು ಲೈಂಗಿಕ ಕಿರುಕುಳ

    ಇಎಸ್‍ಐ ಆಸ್ಪತ್ರೆಯ ಡೀನ್ ಕಾಮದಾಟ – ಪಾಠ ಹೇಳುವ ಬದಲು ಲೈಂಗಿಕ ಕಿರುಕುಳ

    –  ಮಹಿಳಾ ಭದ್ರತಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ
    –  ಕೆಲಸದಿಂದ ತೆಗೆದ ಮೇಲೆ ದೂರು ದಾಖಲು

    ಕಲಬುರಗಿ: ಇಎಸ್‍ಐ ಆಸ್ಪತ್ರೆಯ ಡೀನ್ ಸೆಕ್ಯೂರಿಟಿ ಗಾರ್ಡ್ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ  ಎಂಬ ಆರೋಪ ಕೇಳಿ ಬಂದಿದೆ.

    ಕಲಬುರಗಿಯ ಇಎಸ್‍ಐ ಆಸ್ಪತ್ರೆಯ ಡೀನ್ ಡಾ. ನಾಗರಾಜ್, ವಿದ್ಯಾರ್ಥಿಗಳಿಗೆ ಪಾಠ ಹೇಳುವ ಬದಲು ಬಿಹಾರ ಮೂಲದ ಇಲ್ಲಿನ ಸೆಕ್ಯೂರಿಟಿ ಗಾರ್ಡ್‌ಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ನೀನು ಇಲ್ಲಿ ಕೆಲಸ ಮಾಡಬೇಕು ಎಂದರೆ, ನನ್ನ ಜೊತೆ ಸಹಕರಿಸಬೇಕು ಇಲ್ಲ ಕೆಲಸದಿಂದ ತೆಗೆಯುವುದ್ದಾಗಿ ಹೇಳಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

    ನೊಂದ ಮಹಿಳೆ ಈ ಕುರಿತು ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಈ ವೈದ್ಯ ನಾಗರಾಜ್ ಕನ್ನಡದ ಖ್ಯಾತ ನಟನ ಸಹೋದರಾನಾಗಿದ್ದು, ಹೀಗಾಗಿ ಪೊಲೀಸರು ಬಂಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಡಾ. ನಾಗರಾಜ್  ಸಂಪರ್ಕ ಮಾಡಿದರೆ, ನಾನು ರಿಯಾಕ್ಟ್ ಮಾಡಲ್ಲ ಎಂದು ಹೇಳಿ ಕಾಲ್ ಕಟ್ ಮಾಡಿದ್ದಾರೆ. ಸಂತ್ರಸ್ತೆ ಕೆಲಸದಿಂದ ತೆಗೆದ ಮೇಲೆ ಡೀನ್ ಡಾ.ನಾಗರಾಜ್ ಮೇಲೆ ಕಿರುಕುಳದ ಆರೋಪ ಮಾಡಿದ್ದು ಹಲವು ಅನುಮಾನ ಮೂಡಿಸಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಸಂತ್ರಸ್ತೆ, ನಾನು ಬಿಹಾರ ಮೂಲದವಳಾಗಿದ್ದು, 2017ರಿಂದ ಕಲಬುರಗಿ ಇಎಸ್‍ಐ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿಗೆ ಡಾ. ನಾಗರಾಜ್ ಡೀನ್ ಆಗಿ 2017-18ರಲ್ಲಿ ಬಂದಿದ್ದಾರೆ. ಆಗ ಪಿಆರ್ ಕಟ್ಟಡದಲ್ಲಿ ನಾನು ರಾತ್ರಿ ಪಾಳೆಯದಲ್ಲಿ ಕೆಲಸ ಮಾಡುತ್ತಿದ್ದೆ. ಆಗ ಇವರು ಅಲ್ಲಿಗೆ ಬಂದು ನನಗೆ ಅನೈತಿಕ ಸಂಬಂಧ ಮಾಡುವಂತೆ ಹೇಳುತ್ತಿದ್ದರು. ಅದಕ್ಕೆ ನಾನು ಒಪಲಿಲ್ಲ ಹೀಗಾಗಿ ಮೇ 15ಕ್ಕೆ ನೌಕರಿಯಿಂದ ತೆಗೆದಿದ್ದಾರೆ.

    ನಾಗರಾಜ್ ನನಗೆ ಅನೈತಿಕ ಸಂಬಂಧ ಮಾಡುವಂತೆ ಬೆದರಿಕೆ ಹಾಕುತ್ತಿದ್ದರು. ಆದರೆ ನಾನು ಒಪ್ಪದೇ ಇಲ್ಲಿ ಹೊಟ್ಟೆ ಪಾಡಿಗಾಗಿ ಕೆಲಸ ಮಾಡಲು ಇಲ್ಲಿಗೆ ಬಂದಿದ್ದೇನೆ. ಹೀಗಾಗಿ ಇದೀಗ ಅವರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದೇನೆ. ಆದರೆ ಇಲ್ಲಿಯವರೆಗೆ ಯಾವುದೇ ಫಲಿತಾಂಶ ಬಂದಿಲ್ಲ. ಹೀಗಾಗಿ ನ್ಯಾಯ ಯಾವಾಗ ಸಿಗುತ್ತೆ ಎಲ್ಲಿ ಸಿಗುತ್ತೆ ಎಂದು ಗೊತ್ತಾಗುತ್ತಿಲ್ಲ. ಮಹಿಳೆಯರ ಮೇಲೆ ಎಲ್ಲಿಯವರೆಗೆ ಅತ್ಯಾಚಾರ ನಡೆಯುತ್ತೆ, ಏಕೆಂದರೆ ನಾವು ಬಿಹಾರದವರಾಗಿದ್ದು, ತಪ್ಪು ಕೆಲಸ ಮಾಡಲು ಬಂದಿಲ್ಲ ಎಂದು ಸಂತ್ರಸ್ತೆ ದೂರಿದ್ದಾರೆ.

  • ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಔಷಧಿ ಚೀಟಿಗೆ ಬರ – ನಾಲ್ಕಾಣೆ ಪೇಪರ್ ಗೆ ಕಾಸಿಲ್ವ ಅಂತ ಜನಾಕ್ರೋಶ

    ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಔಷಧಿ ಚೀಟಿಗೆ ಬರ – ನಾಲ್ಕಾಣೆ ಪೇಪರ್ ಗೆ ಕಾಸಿಲ್ವ ಅಂತ ಜನಾಕ್ರೋಶ

    ಚಾಮರಾಜನಗರ: ಜಿಲ್ಲಾಸ್ಪತ್ರೆ ಎಂದರೆ ಸಕಲ ಸವಲತ್ತು ಸಿಕ್ಕಿ ತಮಗೆ ಬಂದಿರುವ ರೋಗಗಳು ವಾಸಿ ಆಗುತ್ತವೆ ಎಂದು ರೋಗಿಗಳು ಹೋಗುತ್ತಾರೆ. ಆದರೆ ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ನೀಡುವ ಔಷಧಿ ಚೀಟಿಗೂ ಹಣವಿಲ್ಲವೇನೋ ಎನ್ನುವ ಹಾಗಿದೆ.

    ಅರೇ, ಇವರು ಯಾಕಪ್ಪ ಹೀಗೆ ತುಂಡು ಚೀಟಿಗಳನ್ನು ಹಿಡಿದುಕೊಂಡು ನಿಂತಿದ್ದಾರೆ ಎಂದು ನೀವು ಅಂದುಕೊಂಡಿದ್ದೀರ? ಇದು ವೇಸ್ಟ್ ಪೇಪರ್ ಅಲ್ಲಾ ರೀ. ಔಷಧಿ ಬರೆಯೋಕೆ ಬಳಸುವ ಚೀಟಿ. ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಔಷಧಿ ಚೀಟಿಗಳಿಗೆ ಬರ ಬಂದಿದೆ. ಆಸ್ಪತ್ರೆಯಲ್ಲಿ ಕಳೆದ 3 ತಿಂಗಳಿಂದ ಔಷಧಿಗಳ ಹೆಸರು ಬರೆಯೋಕೆ ಚೀಟಿ ಇಲ್ಲದೇ ವೈದ್ಯರು ಚಿಕ್ಕ ಚಿಕ್ಕ ಬಿಳಿ ಹಾಳೆಗಳ ಮೇಲೆ ಔಷಧಿಗಳ ಹೆಸರನ್ನು ಬರೆದುಕೊಡುತ್ತಿದ್ದಾರೆ. ಅಷ್ಟೇ ಅಲ್ಲ ವೈದ್ಯರು ಬರೆಯೋ ನೋಟ್ ಬುಕ್‍ ಗಳು ಖಾಲಿಯಾಗಿ ಗಾಳಿ ತೂರುವ ಹಾಳೆಗಳ ಮೇಲೆ ನೋಟ್ಸ್ ಬರೆದುಕೊಳುತ್ತಿದ್ದಾರೆ. ನಾಲ್ಕಾಣೆ ಪೇಪರ್ ತರಲು ಇವರ ಹತ್ತಿರ ದುಡ್ಡಿಲ್ವಾ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಇದಕ್ಕೆಲ್ಲಾ ಕಾರಣ ಡೀನ್ ಚಂದ್ರಶೇಖರ್. ಏಕೆಂದರೆ ಕಳೆದ ನಾಲ್ಕೈದು ತಿಂಗಳಿಂದ ಬಿಲ್ ಬುಕ್ ಗಳಿಗೆ ಸಹಿ ಹಾಕದ ಕಾರಣ ಇಲ್ಲಿಗೆ ಔಷಧಿ ಚೀಟಿಗಳು ಸೇರಿದಂತೆ ಮೊದಲಾದ ಸಾಮಾಗ್ರಿಗಳು ಗುತ್ತಿಗೆದಾರರಿಂದ ಬಂದಿಲ್ಲ. ಹೀಗಾಗಿ ವೈದ್ಯರಿಗೆ ಹರುಕು ಮುರುಕು ಚೀಟಿಯೇ ಗತಿ. ರೋಗಿಗಳು ಈ ಚೀಟಿನ ತಗೊಂಡು ಮೆಡಿಕಲ್ ಶಾಪ್ ಗೆ ಹೋದರೆ ಶಾಪ್ ನ ಸಿಬ್ಬಂದಿ ಔಷಧಿ ಕೊಡೋಕೆ ಹಿಂದು ಮುಂದು ನೋಡುತ್ತಾರೆ. ಇದು ವೈದ್ಯರು ಬರೆದಿರೋದಲ್ಲ ನೀವೆ ಬರೆದು ತಂದಿದ್ದೀರಾ ಎಂದು ರೋಗಿಗಳಿಗೆ ಬೈದು ಕಳುಹಿಸುತ್ತಿದ್ದಾರೆ.

    ಇನ್ನಾದ್ದರೂ ಡೀನ್ ಈ ಬಗ್ಗೆ ಎಚ್ಚೆತ್ತುಕೊಂಡು ಬಿಲ್ ಗಳಿಗೆ ಸಹಿ ಹಾಕಿ ಆಸ್ಪತ್ರೆಗೆ ಬೇಕಾಗಿರುವ ಆಗತ್ಯ ವಸ್ತುಗಳನ್ನು ತರಿಸಿಕೊಳ್ಳಬೇಕೆನ್ನುವುದು ಸಾರ್ವಜನಿಕರ ಆಗ್ರಹ.