Tag: ಡಿ.ಸಿ. ನಾಗೇಶ್

  • ಡಿ.ಸಿ. ನಾಗೇಶ್ ನೆನಪಿನ ಪುಸ್ತಕ ರಿಲೀಸ್ ಮಾಡಲಿದ್ದಾರೆ ನಿರ್ದೇಶಕ ನಾಗಾಭರಣ

    ಡಿ.ಸಿ. ನಾಗೇಶ್ ನೆನಪಿನ ಪುಸ್ತಕ ರಿಲೀಸ್ ಮಾಡಲಿದ್ದಾರೆ ನಿರ್ದೇಶಕ ನಾಗಾಭರಣ

    ರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಾಳೆ ಸಿನಿಮಾ ಪತ್ರಿಕಾ ಛಾಯಾಗ್ರಾಹಕ ಡಿ.ಸಿ ನಾಗೇಶ್ ಹೆಸರಿನಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಪತ್ರಕರ್ತ ಚೇತನ್ ನಾಡಿಗೇರ ಸಂಪಾದನೆ ಮಾಡಿರುವ ‘ಜೀವಬಿಂಬ’ ಪುಸ್ತಕ (Book)  ಲೋಕಾರ್ಪಣೆ ಆಗಲಿದೆ. ಡಿ.ಸಿ ನಾಗೇಶ್ (DC Nagesh) ಕುರಿತಾದ ಪುಸ್ತಕ ಇದಾಗಿದ್ದು, ನಾಗೇಶ್ ಒಡನಾಡಿಗಳು ಅವರೊಂದಿಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.

    ಹಲವು ದಶಕಗಳ ಕಾಲ ಸಿನಿಮಾ ಪತ್ರಿಕೋದ್ಯಮದಲ್ಲಿ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದವರು ಡಿ.ಸಿ ನಾಗೇಶ್. ಕನ್ನಡದ ಬಹುತೇಕ ನಟ, ನಟಿಯರ ಫೋಟೋಗಳನ್ನು ಸೆರೆ ಹಿಡಿದ ಹೆಗ್ಗಳಿಕೆ ಇವರದ್ದು. ಹಲವಾರು ಪತ್ರಿಕೆಗಳಲ್ಲಿ ಕೆಲಸ ಮಾಡಿದ ನಾಗೇಶ್, ಹಿರಿಯ ಕಲಾವಿದರ ಜೊತೆ ಒಂದೊಳ್ಳೆ ಬಾಂಧವ್ಯವನ್ನು ಹೊಂದಿದ್ದವರು. ಅಲ್ಲದೇ, ಕಿರಿಯ ಸಿನಿಮಾ ಪತ್ರಕರ್ತರಿಗೆ ಮಾರ್ಗದರ್ಶಕರು ಆಗಿದ್ದವರು. ಕಳೆದ ವರ್ಷವಷ್ಟೇ ಅಗಲಿರುವ ಅವರ ನೆನಪಿನಲ್ಲಿ ಕಾರ್ಯಕ್ರಮ ಆಯೋಜನೆಯಾಗಿದೆ. ಇದನ್ನೂ ಓದಿ: ಕನ್ನಡಕ್ಕೆ ವಿಜಯ್ ಸೇತುಪತಿ: ಇನ್ನೂ ಕನ್ಫರ್ಮ್ ಆಗಿಲ್ಲ ಅಂತಿದೆ ಟೀಮ್

    ನಾಳೆ ಬೆಳಗ್ಗೆ 10.30ಕ್ಕೆ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅತಿಥಿಗಳಾಗಿ ಖ್ಯಾತ ನಿರ್ದೇಶಕ ಟಿ.ಎಸ್.ನಾಗಾಭರಣ (Nagabharana), ಹಿರಿಯ ನಟ ದೇವರಾಜ್ (Devaraj), ನಟಿ ಭಾವನಾ ರಾಮಣ್ಣ (Bhavana Ramanna) ಮತ್ತು ಪ್ರೆಸ್ ಕ್ಲಬ್ ಅಧ್ಯಕ್ಷ ಆರ್. ಶ್ರೀಧರ್ ಆಗಮಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ವೆಬ್ ಸೈಟ್ ಕೂಡ ಲೋಕಾರ್ಪಣೆ ಆಗಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಿರಿಯ ಛಾಯಾಗ್ರಾಹಕ ಡಿ.ಸಿ.ನಾಗೇಶ್ ಇನ್ನಿಲ್ಲ

    ಹಿರಿಯ ಛಾಯಾಗ್ರಾಹಕ ಡಿ.ಸಿ.ನಾಗೇಶ್ ಇನ್ನಿಲ್ಲ

    ಬೆಂಗಳೂರು: ಕನ್ನಡ ಸಿನಿಮಾ ಪತ್ರಿಕೋದ್ಯಮದ ಹಿರಿಯ ಛಾಯಾಗ್ರಾಹಕ ಡಿಸಿ ನಾಗೇಶ್ (66) ನಿಧನರಾಗಿದ್ದಾರೆ.

    ಹಲವು ದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಡಿ.ಸಿ. ನಾಗೇಶ್ ಅವರು ಇಂದು ಬೆಳಗ್ಗೆ 5.30ಕ್ಕೆ ವಿಧಿವಶರಾಗಿದ್ದಾರೆ. ಸುಮಾರು 40ಕ್ಕಿಂತಲೂ ಹೆಚ್ಚು ವರ್ಷಗಳಿಂದ ಡಿ.ಸಿ.ನಾಗೇಶ್ ಅವರು ಸಿನಿಮಾ/ಸಾಂಸ್ಕೃತಿಕ ವಿಭಾಗದ ಫೋಟೋಗ್ರಾಫರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಇದನ್ನೂ ಓದಿ: ದೀಪಿಕಾ ಪಡುಕೋಣೆಯನ್ನು ಸಮರ್ಥಿಸಲು ಬಂದಿಲ್ಲ: ಕಂಗನಾ ರಣಾವತ್

    ಸಿನಿಮಾ ಪತ್ರಿಕಾ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಡಿ.ಸಿ.ನಾಗೇಶ್ ಅವರ ನಿಧನಕ್ಕೆ ಇದೀಗ ಸಂಸದೆ ಸುಮಲತಾ ಸೇರಿದಂತೆ ಚಿತ್ರರಂಗದ ಕಲಾವಿದರು ಸೇರಿದಂತೆ ನಾಡಿದ ಪತ್ರಕರ್ತರು ಸಹ ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ: ನಮ್ಮಲ್ಲೇ ಒಳ್ಳೊಳ್ಳೆಯ ನಟಿಯರಿದ್ದಾರೆ, ಕನ್ನಡ ಪ್ರತಿಭೆಗಳಿಗೆ ಅವಕಾಶ ಕೊಡಿ: ಶಿವಣ್ಣ

    ಇಂದು ಸಂಜೆ 4 ಗಂಟೆ ಸುಮಾರಿಗೆ ವಿಲ್ಸನ್ ಗಾರ್ಡನ್ ಕ್ರಿಮಿಟೋರಿಯಂನಲ್ಲಿ ಡಿ.ಸಿ.ನಾಗೇಶ್ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದೀಗ ನಾಗೇಶ್ ಅವರ ಅಂತಿಮ ದರ್ಶನ ಪಡೆಯಲು ಸಿನಿಮಾ ಗಣ್ಯರ ದಂಡೇ ಹರಿದು ಬರುತ್ತಿದೆ.