Tag: ಡಿ.ಸಿ.ತಮ್ಮಣ್ಣ

  • ಸಚಿವ ತಮ್ಮಣ್ಣ ಮನೆಗೆ ಮುತ್ತಿಗೆ ಹಾಕಿ ಮದ್ದೂರು ಜನ ಎಚ್ಚರಿಕೆ

    ಸಚಿವ ತಮ್ಮಣ್ಣ ಮನೆಗೆ ಮುತ್ತಿಗೆ ಹಾಕಿ ಮದ್ದೂರು ಜನ ಎಚ್ಚರಿಕೆ

    ಮಂಡ್ಯ: ಒಂದು ಕಡೆ ಮಂಡ್ಯದಲ್ಲಿ ಚುನಾವಣೆಯ ರಂಗು ದಿನದಿಂದ ದಿನಕ್ಕೆ ಏರುತ್ತಿದ್ದು, ಮತ್ತೊಂದು ಕಡೆ ಚುನಾವಣೆ ಘೋಷಣೆಗೂ ಮುನ್ನವೇ ರೈತರಿಂದ ಮತದಾನಕ್ಕೆ ಬಹಿಷ್ಕಾರಕ್ಕೆ ನಿರ್ಧರಿಸಲಾಗಿದೆ.

    ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಸಾರಿಗೆ ಸಚಿವ ಡಿಸಿ.ತಮ್ಮಣ್ಣ ಮನೆಗೆ ಮುತ್ತಿಗೆ ಹಾಕಿ ಚುನಾವಣೆ ಬಹಿಷ್ಕಾರ ಮಾಡುವ ಎಚ್ಚರಿಕೆಯನ್ನು ರೈತರು ನೀಡಿದ್ದಾರೆ. ಮದ್ದೂರು ತಾಲೂಕಿನ ಕಡೆಯ ಭಾಗಕ್ಕೆ ವ್ಯವಸಾಯಕ್ಕೆ ನೀರು ಬಿಡದ ಹಿನ್ನೆಲೆಯಲ್ಲಿ ಸಚಿವರ ಮನೆಗೆ ರೈತರು ಮುತ್ತಿಗೆ ಹಾಕಿದ್ದಾರೆ.

    ಅಜ್ಜಹಳ್ಳಿ, ಮಾರ್ಗೇನಹಳ್ಳಿ, ಉಪ್ಪಾರದೊಡ್ಡಿ ಗ್ರಾಮಸ್ಥರಿಂದ ಸಚಿವರ ಮನೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಭಾಗದ ಜಮೀನಿಗೆ ವ್ಯವಸಾಯಕ್ಕೆ ನೀರಿಲ್ಲ. ಹೀಗಿರುವಾಗ ನಮಗೆ ಚುನಾವಣೆ ಯಾಕೆ? ಮತಪೆಟ್ಟಿಗೆ ನಮ್ಮ ಊರಿಗೆ ಬರಲು ಬಿಡಲ್ಲ ಎಂದು ಗ್ರಾಮಸ್ಥರು ಸಚಿವರ ಮನೆಗೆ ಮುತ್ತಿಗೆ ಹಾಕಿ ಸಚಿವರ ವಿರುದ್ಧ ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸಂಬಂಧಿಕರ ನಡುವೆಯೇ ಅಸಮಾಧಾನಕ್ಕೆ ಕಾರಣವಾಯ್ತು ಮಂಡ್ಯ ರಾಜಕೀಯ..!

    ಸಂಬಂಧಿಕರ ನಡುವೆಯೇ ಅಸಮಾಧಾನಕ್ಕೆ ಕಾರಣವಾಯ್ತು ಮಂಡ್ಯ ರಾಜಕೀಯ..!

    ಮಂಡ್ಯ: ಮನೆಗೆ ಬಂದವರಿಗೆ ಸುಮಲತಾ ಒಂದು ಲೋಟ ನೀರು ಕೊಟ್ಟಿಲ್ಲ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ಹೇಳಿಕೆಗೆ ರೆಬೆಲ್ ಸ್ಟಾರ್ ಅಂಬರೀಶ್ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಯ ರಾಜಕೀಯ ಸಂಬಂಧಿಕರ ನಡುವೆ ಅಸಮಾಧಾನಕ್ಕೆ ಕಾರಣವಾಗಿದೆ.

    ಸಾರಿಗೆ ಸಚಿವ ಡಿಸಿ.ತಮ್ಮಣ್ಣ ಮತ್ತು ಅಂಬರೀಶ್ ಇಬ್ಬರು ಸಂಬಂಧಿಕರಾಗಬೇಕು. ಇಬ್ಬರೂ ಜಿಲ್ಲೆ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದವರಾಗಿದ್ದಾರೆ. ಈಗ ತಮ್ಮಣ್ಣ ಹೇಳಿಕೆಗೆ ಡೊಡ್ಡರಸಿನಕೆರೆ ಗ್ರಾಮದ ಅಂಬಿ ಸಂಬಂಧಿಕರು ನಾವು ನೀವು ಎಲ್ಲ ಸಂಬಂಧಿಕರು ಎಂದು ಹೇಳಿ ಆಕ್ರೋಶ ಹೊರಹಾಕುತ್ತಿದ್ದಾರೆ.

    ಅಂಬರೀಶ್ ಮನೆಗೆ ಹೋದಾಗ ನಿಮಗೆ ನೀರು ಕೊಡದೆ ಊಟ ಕೊಡದೆ ಕಳುಹಿಸಿದ್ದಾರ..? ನಾವೆಲ್ಲ ಸಂಬಂಧಿಕರು, ಸಂಬಂಧವನ್ನು ಉಳಿಸಿಕೊಂಡು ಹೋಗಬೇಕು. ವಯಸ್ಸಾಯ್ತ ತಾಳ್ಮೆಯಿಂದ ಮಾತನಾಡಬೇಕು. ಗೆಲ್ಲೋದು ಸೋಲೋದು ಮುಖ್ಯವಲ್ಲ. ನಮ್ಮ ಅತ್ತಿಗೆ ಬಳಿ ಜನ ಬೆಂಬಲ ಇದೆ. ನೇರವಾಗಿ ಫೇಸ್ ಮಾಡಿ. ಚಿತ್ರರಂಗದವರನ್ನು ಕೆಟ್ಟದಾಗಿ ಮಾತನಾಡಬೇಕಾಗಿಲ್ಲ. ಯಾಕೆಂದರೆ ನಿಖಿಲ್, ಕುಮಾರಸ್ವಾಮಿ ಇಬ್ಬರು ಚಿತ್ರರಂಗದಿಂದ ಬಂದವರಾಗಿದ್ದಾರೆ. ನಮ್ಮ ಸಂಬಂಧಿಕರು ಎಂದು ನಾವು ನಿಮ್ಮ ಪರವಾಗಿ ಓಡಾಡಿದ್ದು ಎಂದು ಅಂಬರೀಶ್ ಚಿಕ್ಕಪ್ಪನ ಮಗ ಅಮರ್ ಕಿಡಿಕಾರಿದ್ದಾರೆ.

    ತಂದೆ ಸಮಾನರಾದ ಡಿ.ಸಿ.ತಮಣ್ಣ ನೀವು ಸುಮಕ್ಕನ ಬಗ್ಗೆ ಇಷ್ಟು ಕೀಳಾಗಿ ಮಾತನಾಡುತ್ತೀರಿ ಎಂದು ಅಂದುಕೊಂಡಿರಲಿಲ್ಲ. ಸುಮಕ್ಕ ನಿಮ್ಮ ಮಗಳ ಸಮಾನ. ತಪ್ಪು ಮಾಡಿದ್ದರೆ ತಿದ್ದಿ ಹೇಳಬೇಕಿತ್ತು. ನಮ್ಮ ಮನೆ ಸೇರಿದಂತೆ, ಎಷ್ಟು ಜನ ಸಚಿವರ ಮನೆಯಲ್ಲಿ ಅವರ ಹೆಂಡತಿಯರು ನೀರು, ಊಟ ಕೊಡುತ್ತಾರೆ. ಆಂಟಿ ಗೊತ್ತಿಲ್ಲದವರನ್ನು ಮಾತನಾಡಿಸುತ್ತಾರ..?. ಸಂಬಂಧದಲ್ಲಿ ನಾನು ನಿಮ್ಮ ಮಗಳಾಗಬೇಕು. ಸುಮಕ್ಕನೂ ನಿಮ್ಮ ಮಗಳಾಗಬೇಕು. ಅಪ್ಪನೇ ಮಗಳ ಬಗ್ಗೆ ಮಾತಾಡಿದರೆ ನೋವಾಗುತ್ತದೆ. ಕ್ಷಮೆ ಕೇಳಿದರೂ ನೋವನ್ನು ಮರೆಯಲು ಆಗಲ್ಲ. ಸಂಬಂಧ ಬೇರೆ, ಪಕ್ಷ ಬೇರೆ ಅದನ್ನು ತಿಳಿಯಿರಿ ಎಂದು ಅಂಬರೀಶ್ ಸಂಬಂಧಿ ವಸಂತ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಷ್ಟು ಜನಕ್ಕೆ ಒಂದು ಲೋಟ ಕುಡಿಯಲು ನೀರು ಕೊಟ್ಟಿದ್ದಾರೆ – ಸುಮಲತಾ ವಿರುದ್ಧ ತಮ್ಮಣ್ಣ ವಾಗ್ದಾಳಿ

    ಎಷ್ಟು ಜನಕ್ಕೆ ಒಂದು ಲೋಟ ಕುಡಿಯಲು ನೀರು ಕೊಟ್ಟಿದ್ದಾರೆ – ಸುಮಲತಾ ವಿರುದ್ಧ ತಮ್ಮಣ್ಣ ವಾಗ್ದಾಳಿ

    ಮಂಡ್ಯ: ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಕಣಕ್ಕೆ ನಿಲ್ಲಲು ಮುಂದಾಗಿರುವ ಸುಮಲತಾ ವಿರುದ್ಧ ಸಚಿವ ಡಿ.ಸಿ ತಮ್ಮಣ್ಣ ವಾಗ್ದಾಳಿ ನಡೆಸಿದ್ದಾರೆ.

    ಜಿಲ್ಲೆಯ ಮದ್ದೂರು ತಾಲೂಕಿನ ಕೂಳಗೆರೆ ಗ್ರಾಮದಲ್ಲಿ ಮಾತನಾಡಿದ ತಮ್ಮಣ್ಣ, ಅಂಬರೀಶ್ ಶಾಸಕರು, ಸಚಿವರು ಆಗಿದ್ದಾಗ ಅವರ ಮನೆಗೆ ಹೋದಾಗ ಎಷ್ಟು ಜನ ಸಾಮಾನ್ಯರನ್ನ ಈಯಮ್ಮ ಮಾತಾಡಿಸಿದ್ದಾರೆ. ಎಷ್ಟು ಜನಕ್ಕೆ ಒಂದು ಲೋಟ ಕುಡಿಯಲು ನೀರು ಕೊಟ್ಟಿದ್ದಾರೆ. ನೀನು ಯಾವೂರಪ್ಪ? ಏನಪ್ಪ ನಿಮ್ಮ ಸಮಸ್ಯೆ ಅಂತ ಕೇಳಿದ್ದಾರ ಎಂದು ಪ್ರಶ್ನೆ ಮಾಡಿದ್ದಾರೆ.

    ಇವತ್ತು ಅವರ ಹೆಸರು ಹೇಳಿಕೊಂಡು ಬಂದು ನಾನೇನೋ ಉದ್ಧಾರ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಈ ಹಿಂದೆ ಒಬ್ಬ ಹೆಣ್ಣು ಮಗಳು ಬಂದು ಹೋದಳು, ಏನ್ ಮಾಡಿದ್ಲು ಎಂದು ರಮ್ಮಾ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಣ್ಣದವರ ಮಾತಿಗೆ ಜಿಲ್ಲೆಯ ಜನರು ಬೆರಗು ಆಗೋದು ಬೇಡ. ಯಾರಿಗೆ ಈ ಸಮಾಜದ ಬಗ್ಗೆ ಚಿಂತನೆ ಮಾಡುತ್ತಾರೆ. ಸದಾ ರೈತರ ಬಗ್ಗೆ ಚಿಂತಿಸುತ್ತಾರೆ, ಯಾರು ನಮ್ಮ ನೋವಿಗೆ ಕಷ್ಟಕ್ಕೆ ಸ್ಪಂದಿಸಿ ನಮ್ಮ ಜೊತೆಗೆ ನಿಲ್ಲುತ್ತಾರೆ ಅಂತಹವರನ್ನು ಆಯ್ಕೆ ಮಾಡಿ ಎಂದರು.

    ಬಣ್ಣದ ಮಾತಿಗೆ ಬೆರಗಾಗಿ ನಮ್ಮ ಯುವಕರು ದಾರಿ ತಪ್ಪಿದರೆ, ನಮ್ಮ ಸರ್ವನಾಶಕ್ಕೆ ನಾವೇ ಕಾರಣರಾಗುತ್ತೇವೆ. ಯಾಕೆಂದರೆ ಮತದಾರರು ತಮ್ಮ ಕ್ಷೇತ್ರದ ಹಣೆ ಬರಹವನ್ನು ಬರೆಯುವಂತರು ನೀವು. ರೈತರ ಮಗನಾದ ನಿಖಿಲ್‍ರನ್ನು ಈ ಬಾರಿ ಆಯ್ಕೆ ಮಾಡುವಂತೆ ಕ್ಷೇತ್ರದ ಮತದಾರಿಗೆ ಸಚಿವ ತಮ್ಮಣ್ಣ ಮನವಿ ಮಾಡಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲಕ್ಷ್ಮಿ ಅಶ್ವಿನ್ ಗೌಡರಿಗಿಂತ ನಿಖಿಲ್ ಅರ್ಹ ಅಭ್ಯರ್ಥಿ – ಸಚಿವ ಡಿ.ಸಿ ತಮ್ಮಣ್ಣ

    ಲಕ್ಷ್ಮಿ ಅಶ್ವಿನ್ ಗೌಡರಿಗಿಂತ ನಿಖಿಲ್ ಅರ್ಹ ಅಭ್ಯರ್ಥಿ – ಸಚಿವ ಡಿ.ಸಿ ತಮ್ಮಣ್ಣ

    ಬೆಂಗಳೂರು: ಮಂಡ್ಯಕ್ಕೆ ಹಾಲಿ ಸಂಸದ ಶಿವರಾಮೇಗೌಡ, ಟಿಕೆಟ್ ಆಕಾಂಕ್ಷಿ ಲಕ್ಷ್ಮಿ ಅಶ್ವಿನ್ ಗೌಡರಿಗಿಂತ ನಿಖಿಲ್ ಅರ್ಹ ಅಭ್ಯರ್ಥಿ. ನಮ್ಮ ಮನೆಯವರು ನಿಂತುಕೊಳ್ಳೋದು ತಪ್ಪಲ್ಲ ಅಂತ ಸಾರಿಗೆ ಸಚಿವ ಡಿಸಿ ತಮ್ಮಣ್ಣ, ನಿಖಿಲ್ ಕುಮಾರಸ್ವಾಮಿ ಪರ ಬ್ಯಾಟ್ ಬೀಸಿದ್ದಾರೆ.

    ಮಂಡ್ಯದಲ್ಲಿ ನಿಖಿಲ್ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ನಿಖಿಲ್ ಅಭ್ಯರ್ಥಿ ಎಂದು ದೇವೇಗೌಡರೇ ಘೋಷಣೆ ಮಾಡಿದ್ದಾರೆ. ಸೂಕ್ತ ಅಭ್ಯರ್ಥಿ ಇದ್ದರೆ ಕುಟುಂಬದಲ್ಲೇ ಯಾಕೆ ಟಿಕೆಟ್ ಕೊಡಬಾರದು ಎಂದು ಪ್ರಶ್ನಿಸಿದ ಅವರು, ನಮ್ಮ ರಾಜ್ಯದಲ್ಲಿ ಬೇರೆ ಅವರನ್ನು ಕರೆದುಕೊಂಡು ಬಂದು ಗೆಲ್ಲಿಸಿಲ್ವಾ, ಸುಷ್ಮಾ ಸ್ವರಾಜ್, ಸೋನಿಯಾ ಗಾಂಧಿ ಹೀಗೆ ಬೇರೆ ರಾಜ್ಯದವರನ್ನ ಗೆಲ್ಲಿಸಿಲ್ವಾ ಅಂತ ಪ್ರಶ್ನೆ ಮಾಡಿದ್ರು.

    ಹಾಲಿ ಸಂಸದ ಶಿವರಾಮೇಗೌಡ, ಆಶ್ವಿನಿಗೌಡ ಗಿಂತ ನಿಖಿಲ್ ಅವರೇ ಅರ್ಹ ಅಭ್ಯರ್ಥಿ. ನಿಖಿಲ್ ನಿಲ್ಲೋದು ತಪ್ಪಲ್ಲ. ಹಾಸನ, ಮಂಡ್ಯ, ಮೈಸೂರು ನಮ್ಮ ಮನೆ ಇದ್ದ ಹಾಗೆ. ನಮ್ಮ ಮನೆಯಲ್ಲಿ ನಾವು ಅಭ್ಯರ್ಥಿ ಹಾಕಿಕೊಳ್ತೀವಿ. ಉತ್ತರ ಕರ್ನಾಟಕಕ್ಕೆ ನಾವು ಹೋದ್ರೆ ಪ್ರಶ್ನೆ ಮಾಡಬೇಕು. ನಮ್ಮ ಮನೆಯಲ್ಲಿ ನಿಂತ್ರೆ ಏನು ಸಮಸ್ಯೆ ಅಂತ ನಿಖಿಲ್ ಸ್ಪರ್ಧೆಯನ್ನ ಸಮರ್ಥನೆ ಮಾಡಿಕೊಂಡರು

    ಸುಮಲತಾ ಅಂಬರೀಶ್ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರು ಬೇಕಾದ್ರೂ ಸ್ಪರ್ಧೆ ಮಾಡಬಹುದು. ಅರ್ಹತೆ ಇರೋರು ಸ್ಪರ್ಧೆ ಮಾಡಬಹುದು. ಬೇಡ ಅನ್ನೋಕೆ ಆಗುತ್ತಾ ಎಂದು ಪ್ರಶ್ನಿಸಿ ಸುಮಲತಾಗೆ ಟಾಂಗ್ ಕೊಟ್ರು.

    ನಮ್ಮದು ಆರಂಭದಿಂದಲೂ ಕುಟುಂಬ ರಾಜಕಾರಣ ಇದೆ. ಅನೇಕರು ವಿರೋಧ ಮಾಡ್ತಾನೆ ಇದ್ದಾರೆ. ಇಷ್ಟೆಲ್ಲ ಆದ್ರೂ ನಾವು ಗೆದ್ದು ಬರುತ್ತಿಲ್ವಾ ಎಂದು ಕುಟುಂಬ ರಾಜಕಾರಣವನ್ನು ಸಮರ್ಥನೆ ಮಾಡಿಕೊಂಡ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂದು ಹುತಾತ್ಮ ಯೋಧ ಗುರು ತಿಥಿ ಕಾರ್ಯ – ಇಂದೇ ಪಾಕ್ ಉಗ್ರರು ಮಟಾಷ್

    ಇಂದು ಹುತಾತ್ಮ ಯೋಧ ಗುರು ತಿಥಿ ಕಾರ್ಯ – ಇಂದೇ ಪಾಕ್ ಉಗ್ರರು ಮಟಾಷ್

    ಮಂಡ್ಯ: ಇಂದು ಹುತಾತ್ಮ ಯೋಧ ಗುರು ಅವರ ಹನ್ನೊಂದನೆ ದಿನದ ತಿಥಿ ಕಾರ್ಯವಿದ್ದು, ಗುರು ಅಂತ್ಯಕ್ರಿಯೆ ನಡೆದ ಸ್ಥಳದಲ್ಲೇ ಕಾರ್ಯ ನಡೆಯುತ್ತಿದೆ.

    ಜಿಲ್ಲೆಯ ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದ ಯೋಧ ಗುರು ಅವರ ತಿಥಿ ಕಾರ್ಯಕ್ಕೆ ಸಾವಿರಾರು ಜನರು ಆಗಮಿಸಿ ನಮನ ಸಲ್ಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗುರು ಅಂತ್ಯ ಸಂಸ್ಕಾರ ಮಾಡಿದ ಜಾಗದಲ್ಲಿ ಜೆಸಿಬಿ, ಬುಲ್ಡೋಜರ್‍ನಿಂದ ಜಾಗ ಸಮತಟ್ಟು ಮಾಡಿಸಿ ವ್ಯವಸ್ಥೆ ಮಾಡಲಾಗಿದೆ. ಗುರು ಅವರ ತಿಥಿ ಕಾರ್ಯದ ಸಂಪೂರ್ಣ ಜವಬ್ದಾರಿಯನ್ನು ಸಾರಿಗೆ ಸಚಿವ ಡಿಸಿ.ತಮ್ಮಣ್ಣ ಹೊತ್ತಿದ್ದಾರೆ.

    ಹುತಾತ್ಮ ಯೋಧ ಗುರು ಅವರ ಸಮಾಧಿ ಸ್ಥಳದಲ್ಲಿ ಶಾಮಿಯಾನ ಹಾಕಲಾಗಿದೆ. ಒಂದು ಬಾರಿಗೆ ಒಂದೂವರೆ ಸಾವಿರ ಜನ ಕುಳಿತು ಊಟ ಮಾಡಲು ವ್ಯವಸ್ಥೆ ಮಾಡಲಾಗಿದೆ. ಇನ್ನೂ ಹುತಾತ್ಮ ಗುರುವಿನ ಸಮಾಧಿ ಪಕ್ಕದಲ್ಲೆ ಪುಟ್ಟದಾದ ವೇದಿಕೆಯನ್ನು ನಿರ್ಮಿಸಲಾಗಿದೆ. ಈ ವೇದಿಕೆಯಲ್ಲಿ ಮಳವಳ್ಳಿ ಮಹಾದೇವ ಸ್ವಾಮಿ ಅವರ ತಂಡದಿಂದ ಭಜನೆಯನ್ನು ಮಾಡಲಾಗುತ್ತದೆ.

    ಹುತಾತ್ಮ ಗುರು ಅವರ ಸಮಾಧಿಯನ್ನ ಅಭಿಮಾನಿಗಳು ಹೂಗಳಿಂದ ಅಲಂಕಾರ ಮಾಡಿದ್ದು, ಸಮಾಧಿ ಸ್ಥಳದಲ್ಲಿ 4/4 ಅಡಿ ಅಳತೆಯ ಭಾವಚಿತ್ರ ಇಡಲೂ ವ್ಯವಸ್ಥೆ ಮಾಡಲಾಗಿದೆ. ಅನ್ನ ಸಾಂಬಾರ್, ಸಿಹಿ ಬೂಂದಿ, ಪಾಯಸ, ಮಸಾಲೆ ವಡೆ, ಜಾಂಗೀರು, ಅವರೇಕಾಳಿನ ಕೂಟು, ಮೊಸರು, ಹಪ್ಪಳ ಉಪ್ಪಿನ ಕಾಯಿ, ತಿಥಿ ಊಟಕ್ಕೆ ಅಡುಗೆ ತಯಾರಿ ಮಾಡಲಾಗಿದೆ.

    ತಿಥಿ ಕಾರ್ಯದ ಊಟದ ವ್ಯವಸ್ಥೆ ಸೇರಿದಂತೆ ಇನ್ನಿತರ ಕಾರ್ಯ ಸಂಪೂರ್ಣವಾಗಿ ಡಿ.ಸಿ.ತಮ್ಮಣ್ಣ ಅವರ ನೇತೃತ್ವದಲ್ಲಿ ನಡೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇದು ರಾಜ್ಯದ ಪ್ರತಿಷ್ಠಿತ ಕುಟುಂಬವೊಂದರ ಬಿಗ್ ಇಂಟ್ರೆಸ್ಟಿಂಗ್ ಕಹಾನಿ

    ಇದು ರಾಜ್ಯದ ಪ್ರತಿಷ್ಠಿತ ಕುಟುಂಬವೊಂದರ ಬಿಗ್ ಇಂಟ್ರೆಸ್ಟಿಂಗ್ ಕಹಾನಿ

    ಬೆಂಗಳೂರು: ಇದು ರಾಜ್ಯದ ಪ್ರತಿಷ್ಠಿತ ಕುಟುಂಬವೊಂದರ ಬಿಗ್ ಇಂಟ್ರೆಸ್ಟಿಂಗ್ ಕಹಾನಿ. ಸಮ್ಮಿಶ್ರ ಸರ್ಕಾರದ ಸಚಿವರಾಗಿರುವ ಪುತ್ರಿ ರಾಜಕಾರಣಕ್ಕೆ ಎಂಟ್ರಿ ಆಗುತ್ತಿದ್ದಾರೆ. ಇಷ್ಟು ದಿನ ರಾಜಕೀಯದಿಂದ ದೂರು ಉಳಿದುಕೊಂಡಿದ್ದ ಸಚಿವರ ಪುತ್ರಿ ರಾಜ್ಯ ರಾಜಕಾರಣದತ್ತ ಮುಖ ಮಾಡುತ್ತಿದ್ದಾರೆ.

    ಸಚಿವ ಡಿ.ಸಿ.ತಮ್ಮಣ್ಣ ಅವರ ಪುತ್ರಿ ಸೌಮ್ಯ ರಮೇಶ್ ರಾಜಕೀಯ ರಂಗ ತಾಲೀಮು ನಡೆಸಿದ್ದಾರೆ. ಪತಿ ರಮೇಶ್ ಹೆಸರಲ್ಲಿ ರಾಜಕಾರಣಕ್ಕೆ ಬಂದರೆ ಗೆಲುವು ಸಿಗುವುದು ಕಠಿಣ. ಹೀಗಾಗಿ ತವರು ಮನೆಯ ಆಶ್ರಯದಲ್ಲಿ ರಾಜಕಾರಣಕ್ಕೆ ಬರಲು ನಿರ್ಧರಿಸಿದ್ದಾರಂತೆ. ತವರು ಮನೆಯಲ್ಲಿ ಅಪ್ಪ, ಮಾವ ಎಲ್ಲರು ಸಕ್ರೀಯ ರಾಜಕಾರಣದಲ್ಲಿದ್ದಾರೆ. ಹಾಗಾಗಿ ಸೌಮ್ಯ ರಮೇಶ್ ತವರು ಮನೆಯ ಸಹಾಯದಿಂದ ರಾಜಕೀಯಕ್ಕೆ ಬರೋದು ಬಹುತೇಕ ಖಚಿತವಾಗುತ್ತಿದೆ.

    ಮುಂದಿನ ದಿನಗಳಲ್ಲಿ ಚುನಾವಣಾ ರಾಜಕಾರಣದಿಂದ ದೂರ ಉಳಿಯಲು ಸಚಿವ ತಮ್ಮಣ್ಣ ಈಗಾಗಲೆ ನಿರ್ಧರಿಸಿದ್ದಾರೆ. ರಾಜಕೀಯ ಮಹತ್ವಕಾಂಕ್ಷೆ ಇರುವ ಡಾ.ಸೌಮ್ಯ ತಂದೆಯಿಂದ ಖಾಲಿಯಾಗುವ ಮಂಡ್ಯ ಜಿಲ್ಲೆಯ ಮದ್ದೂರು ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ. ಮದ್ದೂರಿನಲ್ಲಿ ಜೆಡಿಎಸ್ ಪಾಳಯದಲ್ಲು ಡಾ.ಸೌಮ್ಯರವರ ಹೆಸರು ದೊಡ್ಡ ಮಟ್ಟದಲ್ಲಿ ಚರ್ಚೆಯಾಗತೊಡಗಿದೆ. ದೇವೇಗೌಡರ ಕುಟುಂಬದ ಸೊಸೆ ಅಂತ ರಾಜಕೀಯ ಎಂಟ್ರಿ ಕಷ್ಟ ಅನ್ನೋ ಕಾರಣಕ್ಕೆ ಡಿ.ಸಿ.ತಮ್ನಣ್ಣರ ಪುತ್ರಿ ಅನ್ನುವುದನ್ನೆ ಟ್ರಂಪ್ ಕಾರ್ಡ್ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬ ಮಾತು ಜೆಡಿಎಸ್ ವಲಯದಲ್ಲಿ ಜೋರಾಗೆ ಕೇಳಿ ಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾವನಿಗೆ ಕುಮಾರಸ್ವಾಮಿ ಫುಲ್ ಕ್ಲಾಸ್!

    ಮಾವನಿಗೆ ಕುಮಾರಸ್ವಾಮಿ ಫುಲ್ ಕ್ಲಾಸ್!

    ಬೆಂಗಳೂರು: ಸಾರಿಗೆ ಅಧಿಕಾರಿಗಳ ಸಭೆಯಲ್ಲಿ ಸಂಬಂಧದಲ್ಲಿ ಮಾವನಾದ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣಗೆ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಅವರು ಬಿಎಂಟಿಸಿ ಎಂಡಿ ಪೊನ್ನುರಾಜ್ ಪರ ನಿಂತು ಡಿ.ಸಿ ತಮ್ಮಣ್ಣಗೆ ಅವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಪೊನ್ನುರಾಜ್ ಪ್ರಾಮಾಣಿಕತೆ ಬಗ್ಗೆ ಪ್ರಶ್ನೆ ಎತ್ತುವರು ಇಲ್ಲ, ಅವರ ಬಗ್ಗೆ ನನಗೆ ವಿಶ್ವಾಸ ಇದೆ. ಪೊನ್ನುರಾಜ್ ಮೇಲೆ ಸುಖಾಸುಮ್ಮನೆ ಆರೋಪ ಮಾಡಬೇಡಿ. ನಿಮ್ಮ ಕೆಲಸ ನೀವು ಮಾಡಿ ಸಾಕು ಎಂದು ಸಿಎಂ ಎಚ್‍ಡಿಕೆ ಹೇಳಿದ್ದಾರೆ ಎನ್ನಲಾಗಿದೆ.

    ಎಲೆಕ್ಟ್ರಿಕ್ ಬಸ್ ಖರೀದಿಯಲ್ಲಿ ತಮಣ್ಣ ಪುತ್ರನ ಪಾತ್ರದ ಬಗ್ಗೆ ಸಿಎಂಗೆ ಸಾರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ಡಿ.ಸಿ ತಮ್ಮಣ್ಣ ತಮ್ಮ ಮಗನ ಪರ ವಹಿಸಿಕೊಂಡು ಪೊನ್ನುರಾಜ್ ವಿರುದ್ಧ ಅಕ್ರಮ ಆರೋಪ ಮಾಡುತ್ತಿದ್ದರು. ಈ ವೇಳೆ ಸಿಎಂ ಕುಮಾರಸ್ವಾಮಿ ಪೊನ್ನುರಾಜ್ ಪ್ರಾಮಾಣಿಕತೆ ಹೊಗಳಿ ತಮ್ಮಣ್ಣಗೆ ಕ್ಲಾಸ್ ತೆಗೆದುಕೊಂಡಿದ್ದರು ಎಂದು ತಿಳಿದುಬಂದಿದೆ.

    ಡಿ.ಸಿ ತಮ್ಮಣ್ಣ ಅವರು ಎಚ್‍ಡಿ ದೇವೇಗೌಡರಿಗೆ ಬೀಗರಾಗಬೇಕು. ಆದ್ದರಿಂದ ತಮ್ಮಣ್ಣ ಅವರು ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮಾವನಾಗುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಜ್ಯದ ಎಲ್ಲಾ ಬಸ್ ನಿಲ್ದಾಣಗಳಲ್ಲೂ ಬೇಬಿ ಕೇರ್ ಕೊಠಡಿ ನಿರ್ಮಾಣ: ಡಿ.ಸಿ ತಮ್ಮಣ್ಣ

    ರಾಜ್ಯದ ಎಲ್ಲಾ ಬಸ್ ನಿಲ್ದಾಣಗಳಲ್ಲೂ ಬೇಬಿ ಕೇರ್ ಕೊಠಡಿ ನಿರ್ಮಾಣ: ಡಿ.ಸಿ ತಮ್ಮಣ್ಣ

    ಶಿವಮೊಗ್ಗ: ಮಹಿಳೆಯರು ಮಕ್ಕಳಿಗೆ ಬಸ್ ನಿಲ್ದಾಣದಲ್ಲಿ ಹೊರಗಡೆ ಹಾಲುಣಿಸಬೇಕಾಗುತ್ತದೆ. ಹೀಗಾಗಿ ಅವರಿಗೆ ಸಹಾಯವಾಗಲೇಂದು ರಾಜ್ಯದ ಎಲ್ಲಾ ಬಸ್ ನಿಲ್ದಾಣಗಳಲ್ಲೂ ತಾಯಿ ಮಡಿಲ (ಬೇಬಿ ಕೇರ್) ಕೊಠಡಿಯನ್ನು ನಿರ್ಮಾಣ ಮಾಡುವುದಾಗಿ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಹೇಳಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕೆಎಸ್ಆರ್‌ಟಿಸಿ ಸೇರಿ ಯಾವುದೇ ಸಾರಿಗೆ ಸಂಸ್ಥೆ ಖಾಸಗೀಕರಣ ಇಲ್ಲ. 1.16 ಲಕ್ಷ ಕನ್ನಡಿಗರಿಗೆ ಅದರಲ್ಲೂ ಗ್ರಾಮೀಣ ಜನರಿಗೆ ಉದ್ಯೋಗ ನೀಡಿರುವ ಸಂಸ್ಥೆ ಇದು. ಇಂಥ ಸಂಸ್ಥೆಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡುವುದಿಲ್ಲ. ರಾಜ್ಯದ ಸಾರಿಗೆ ಸಂಸ್ಥೆಗಳು ವಾರ್ಷಿಕ 500 ಕೋಟಿ ರೂ. ನಷ್ಟದಲ್ಲಿವೆ. ಈ ನಷ್ಟ ಸರಿದೂಗಿಸಲು ಹಲವು ಯೋಜನೆ ಹಮ್ಮಿಕೊಳ್ಳಲಾಗಿದೆ. ಸುಸ್ಥಿತಿಯಲ್ಲಿರುವ ಹಳೇ ಚಾಸಿಗಳಿಗೆ ಹೊಸ ಬಾಡಿ ಕಟ್ಟಿಸಿ ಓಡಿಸಲಾಗುವುದು. ಬಸ್ ನಿಲ್ದಾಣಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಹೆಚ್ಚು ಅವಕಾಶ ನೀಡಲಾಗುವುದು ಎಂದು ಹೇಳಿದರು.

    ಎಂಎಸ್‍ಐಎಲ್ ಅವರ ಸಹಯೋಗದೊಂದಿಗೆ ಎಲ್ಲಾ ಬಸ್ ನಿಲ್ದಾಣದಲ್ಲೂ ಅವರದೊಂದು ಸಣ್ಣ ಮಳಿಗೆ ಇರಿಸಲಾಗುತ್ತದೆ. ಅದರಲ್ಲಿ ಪುಸ್ತಕ ಇತರ ವಸ್ತುಗಳ ಮಾರಾಟ ಮಾಡುವ ವ್ಯವಸ್ಥೆ ಇದೆ. ಯಾರು ಬಸ್ಸಿನಲ್ಲಿ ಪ್ರಯಾಣ ಮಾಡುತ್ತಾರೋ ಆ ಬಸ್ಸಿನ ಟಿಕೆಟ್ ತೋರಿಸಿದರೆ ಅವರಿಗೆ 35 ರಿಂದ 40% ಡಿಸ್ಕೌಂಟ್‍ನಲ್ಲಿ ಎಂಎಸ್‍ಐಎಲ್ ಪದಾರ್ಥಗಳು ದೊರಕುತ್ತವೆ. ಅದರೊಂದಿಗೆ ಮಹಿಳೆಯರಿಗಾಗಿ ನ್ಯಾಪ್‍ಕಿನ್ ವ್ಯವಸ್ಥೆ ಕೂಡ ಮಾಡಲಾಗುತ್ತದೆ. ಮಹಿಳೆಯ ಶೌಚಾಲಯದಲ್ಲಿ ನ್ಯಾಪ್‍ಕಿನ್ ಬರ್ನಿಂಗ್ ಸೆಂಟರ್ ಅನ್ನು ಇಡಲಾಗುತ್ತದೆ. ಮುಂದಿನ ದಿನಗಳಲ್ಲಿ ಹೈಟೆಕ್ ನಿಲ್ದಾಣಗಳನ್ನು ಮಾಡುತ್ತೇವೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭಾರತ್ ಬಂದ್‍ನಿಂದಾಗಿ 1 ದಿನಕ್ಕೆ ಸಾರಿಗೆ ಇಲಾಖೆಗೆ ನೂರಾರು ಕೋಟಿ ನಷ್ಟ: ಡಿ.ಸಿ ತಮ್ಮಣ್ಣ

    ಭಾರತ್ ಬಂದ್‍ನಿಂದಾಗಿ 1 ದಿನಕ್ಕೆ ಸಾರಿಗೆ ಇಲಾಖೆಗೆ ನೂರಾರು ಕೋಟಿ ನಷ್ಟ: ಡಿ.ಸಿ ತಮ್ಮಣ್ಣ

    ಮಂಡ್ಯ: ಎಲ್ಲ ಸಾರಿಗೆ ಸಂಸ್ಥೆಗಳಿಂದ ವರ್ಷಕ್ಕೆ ಆರುನೂರು ಕೋಟಿ ನಷ್ಟ ಉಂಟಾಗುತ್ತಿದೆ. ಹೀಗಾಗಿ ಇದೇ ತಿಂಗಳು 16ರ ನಂತರ ಬಸ್ ದರ ಏರಿಕೆಯಾಗಲಿದೆ ಎಂದು ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಹೇಳಿದ್ದಾರೆ.

    ಮಾಧ್ಯಮದೊಂದಿಗೆ ಮಾತನಾಡಿದ ಅವರು ನಾಲ್ಕು ವಿಭಾಗಗಳಿಂದ 25 ಸಾವಿರ ಬಸ್‍ಗಳಿದ್ದು, ಸಾರಿಗೆ ಇಲಾಖೆಗೆ ನೂರಾರು ಕೋಟಿ ನಷ್ಟ ಉಂಟಾಗಿದೆ. ಆದರೆ ಒಳ್ಳೆಯ ಉದ್ದೇಶಕ್ಕಾಗಿ ಬಂದ್ ಮಾಡಲಾಗುತ್ತಿರುವುದರಿಂದ ಬಂದ್‍ಗೆ ಬೆಂಬಲ ನೀಡಿದ್ದೇವೆ. ಈ ಹಿಂದೆ ಮೋದಿ ಸರ್ಕಾರ ಬರುವ ಮುನ್ನ ವರ್ಷದ ಒಂದು ಬಾರಿ ಇಲ್ಲ ಎರಡು ಬಾರಿ ದರ ಏರಿಕೆಯಾಗುತಿತ್ತು. ಕೇಂದ್ರ ಸರ್ಕಾರ ಪ್ರತಿ ದಿನ ಪೈಸೆ ಲೆಕ್ಕದಲ್ಲಿ ತೈಲ ಬೆಲೆ ಏರಿಸುತ್ತಿದೆ. ಹೀಗಾಗಿ ಬಸ್ ದರ ಏರಿಕೆ ಮಾಡಬೇಕಾಗಿದೆ ಎಂದು ತಿಳಿಸಿದರು. ನಾನು ಅಧಿಕಾರಕ್ಕೆ ಬಂದ ತಕ್ಷಣ ಬಸ್ ದರ ಏರಿಸೋದು ಬೇಡ ಎಂದು ತಡೆದಿದ್ದೆ. ಆದರೆ ಮೂರು ತಿಂಗಳಲ್ಲಿ ಐದರಿಂದ ಆರು ರೂಪಾಯಿ ಹೆಚ್ಚಳವಾಗಿದೆ. ಹೀಗಾಗಿ ಬಸ್ ದರ ಏರಿಸಲೇಬೇಕಾಗಿದೆ ಎಂದರು.

    ಬಸ್ ದರ ಹೆಚ್ಚಳವನ್ನು ಶೇ.18 ಕ್ಕಿಂತ ಕಡಿಮೆ ಮಾಡುವ ಬಗ್ಗೆ ಈಗಲೇ ಏನು ಹೇಳಲು ಆಗಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಅಧಿಕಾರಿಗಳ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸಚಿವರು ಹೇಳಿದ್ದಾರೆ.

    ಬಸ್ ದರ ಏರಿಕೆ ಬಗ್ಗೆ ಮಾಜಿ ಸಾರಿಗೆ ಸಚಿವ ಚಲುವರಾಯಸ್ವಾಮಿ ಕಾಂಗ್ರೆಸ್ ಮುಖಂಡರೊಂದಿಗೆ ಮಾತನಾಡುವುದಾಗಿ ಹೇಳಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸಿನಲ್ಲಿ ಯಾರೂ ಅಸಮಾಧಾನ ಹೊರಹಾಕಿಲ್ಲ. ಮಾಜಿ ಸಾರಿಗೆ ಸಚಿವ ಚಲುವರಾಯಸ್ವಾಮಿ ಅಸಮಾಧಾನ ಹೊರಹಾಕಿದರೆ ಅದು ಕಾಂಗ್ರೆಸ್ ಪಕ್ಷದ ಹೇಳಿಕೆಯಲ್ಲ. ಹಾಗೇ ಹೇಳುವುದಾದರೆ ಯಾರಾದರೂ ಕಾಂಗ್ರೆಸ್ ಪಕ್ಷದ ವಕ್ತಾರರು ಹೇಳಬೇಕು. ಚಲುವರಾಯಸ್ವಾಮಿ ಸಾರಿಗೆ ಸಚಿವರಾಗಿದ್ದಾಗ ಇದ್ದ ಕಾಲಕ್ಕೂ ನಮ್ಮ ಕಾಲದ ಡಿಸೇಲ್ ಬೆಲೆಗೂ ಬಹಳ ವ್ಯತ್ಯಾಸವಿದೆ ಎಂದು ವ್ಯಂಗ್ಯವಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಸಚಿವ ಡಿ.ಸಿ.ತಮ್ಮಣ್ಣ ವಿರುದ್ಧ ಭೂಕಬಳಿಕೆ ಆರೋಪ

    ಸಚಿವ ಡಿ.ಸಿ.ತಮ್ಮಣ್ಣ ವಿರುದ್ಧ ಭೂಕಬಳಿಕೆ ಆರೋಪ

    ರಾಮನಗರ: ನಗರದ ಬಿಡದಿ ಸಮೀಪದಲ್ಲಿನ ಸ್ಮಶಾನ ಜಾಗವನ್ನು ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಭೂಕಬಳಿಕೆ ಮಾಡಿರುವ ಆರೋಪ ಕೇಳಿ ಬಂದಿದೆ.

    ಸರ್ಕಾರಿ ಜಮೀನನ್ನ ಖರೀದಿ ಮಾಡಿದ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಇದೀಗ ಗೋಮಾಳದ ಜಮೀನನ್ನು ಕಬಳಿಕೆ ಮಾಡಿದ್ದಾರೆ. ಸ್ಮಶಾನಕ್ಕೆ ಸೇರಿದ 4 ಎಕರೆ 33 ಗುಂಟೆ ಜಮೀನನ್ನ ಫೆನ್ಸಿಂಗ್ ಹಾಕಿ ಡಿ.ಸಿ ತಮ್ಮಣ್ಣ ಕುಟುಂಬ ಒತ್ತುವರಿ ಮಾಡಿಕೊಂಡಿದ್ದಾರೆಂದು ಆರ್‍ಟಿಐ ಕಾರ್ಯಕರ್ತ ಸಂಪತ್ ಆರೋಪಿಸಿದ್ದಾರೆ. ಬಿಡದಿ ಸ್ಮಶಾನಕ್ಕೆ ಸೇರಿದ ಜಮೀನನ್ನು ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

    ಏನಿದು ಪ್ರಕರಣ?
    2006 ರಲ್ಲಿ ಬಿಡದಿ ಹಾಗೂ ಕೇತಿಗಾನಹಳ್ಳಿಯ ಸರ್ವೇ ನಂಬರ್ 10 ರಿಂದ 16 ರ ವರೆಗಿನ ಜಾಗವನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸಿತ್ತು. ಈ ವೇಳೆ ಹರಾಜು ಪ್ರಕ್ರಿಯೆಯನ್ನ ವಿರೋಧಿಸಿ ಆರ್ ಟಿಐ ಕಾರ್ಯಕರ್ತ ಸಂಪತ್ ಹೈ ಕೋರ್ಟ್ ಮೆಟ್ಟಿಲೇರಿ ಕೇತಿಗಾನಹಳ್ಳಿ ಹಾಗೂ ಬಿಡದಿಗೆ ಸರ್ವೇ ನಂಬರ್ 10 ರಲ್ಲಿನ 6 ಎಕರೆ 8 ಗುಂಟೆ ಗೋಮಾಳವನ್ನ ಸ್ಮಶಾನದ ಜಾಗವನ್ನಾಗಿ ನೀಡುವಂತೆ ಮನವಿ ಮಾಡಿದ್ರು. ಅದರಂತೆ ಹೈಕೋರ್ಟ್ ಸಹ 2011 ರಲ್ಲಿ ಕೇತಿಗಾನಹಳ್ಳಿಗೆ 2 ಎಕರೆ ಹಾಗೂ ಬಿಡದಿಗೆ 4 ಎಕರೆ 33 ಗುಂಟೆ ಜಾಗವನ್ನ ಸ್ಮಶಾನಕ್ಕೆ ನೀಡುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿತ್ತು.

    ಕೇತಿಗಾನಹಳ್ಳಿಗೆ ಸೇರಿದ 2 ಎಕರೆ ಸ್ಮಶಾನದ ಜಾಗದಲ್ಲಿ 1 ಎಕರೆ 15 ಗುಂಟೆ ಜಾಗವನ್ನ ಬೇನಾಮಿ ಹೆಸರಿನಲ್ಲಿ ಸಚಿವ ಡಿ.ಸಿ ತಮ್ಮಣ್ಣ ಕಬಳಿಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ನಂತರ ಸರ್ವೇ ಕಾರ್ಯ ನಡೆಸಿ 2 ಎಕರೆ ಜಾಗವನ್ನ ಕೇತಿಗಾನಹಳ್ಳಿ ಸ್ಮಶಾನಕ್ಕೆ ನೀಡಲಾಯ್ತು. ಇನ್ನೂ ಬಿಡದಿ ಸ್ಮಶಾನಕ್ಕೆ ಸೇರಿದ ಜಾಗವನ್ನ ತಂತಿಬೇಲಿ ಹಾಕಿ ಸಚಿವ ಡಿ.ಸಿ ತಮ್ಮಣ್ಣನವರ ಕುಟುಂಬದವರು ತಮ್ಮ ಅನುಭೋಗದಲ್ಲೇ ಇಟ್ಟುಕೊಂಡಿದ್ದಾರೆ ಎಂದು ಆರೋಪಗಳು ಕೇಳಿ ಬರುತ್ತಿವೆ.

    ಒಟ್ಟಾರೆ ಸಿಎಂ ಎಚ್‍ಡಿಕೆಯವರ ಸಂಬಂಧಿ, ಮಾಜಿ ಪ್ರಧಾನಿಗಳ ಬೀಗರೆಂಬ ಕಾರಣಕ್ಕೆ ಅಧಿಕಾರಿಗಳು ಸಹ ಹೆದರಿ ಕೂತಿದ್ದಾರೆ. ಅಲ್ಲದೆ ಮೇಲಾಧಿಕಾರಿಗಳ, ರಾಜಕಾರಣಿಗಳ ಒತ್ತಡಕ್ಕೆ ಮಣಿದು ಸ್ಮಶಾನದ ಜಾಗವನ್ನ ಬಿಡಿಸುವಂತಹ ಕೆಲಸಕ್ಕೆ ಕೈ ಹಾಕಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.