– ಧರ್ಮಸ್ಥಳ ವಿರುದ್ಧದ ಪಿತೂರಿಯಲ್ಲಿ ಎಡಪಂಥೀಯರ ಕೈವಾಡ ಇದೆ ಅಂತ ಆರೋಪ
ಬೆಂಗಳೂರು: ಧರ್ಮಸ್ಥಳ ವಿರುದ್ಧ ನಡೆದಿರುವ ಷಡ್ಯಂತ್ರ ಪ್ರಕರಣವನ್ನು (Dharmasthala Case) ಎನ್ಐಎ ಸೂಮೋಟೋ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಲು ಅವಕಾಶ ಇದೆ ಎಂದು ಮಾಜಿ ಸಿಎಂ ಡಿ.ವಿ ಸದಾನಂದ ಗೌಡ (DV Sadananda Gowda) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾತಾಡಿದ ಸದಾನಂದ ಗೌಡ್ರು, ಧರ್ಮಸ್ಥಳ ವಿರುದ್ಧ ಭವಿಷ್ಯದಲ್ಲಿ ಇಂಥ ಅಪಪ್ರಚಾರ, ಪಿತೂರಿಗಳಿಗೆ ಫುಲ್ ಸ್ಟಾಪ್ ಹಾಕುವ ಅಗತ್ಯ ಇದೆ. ಇದು ಎಸ್ಐಟಿಯಿಂದ ಸಾಧ್ಯವಿಲ್ಲ, ಎನ್ಐಎ ತನಿಖೆ (NIA Investigation) ನಡೆದರೆ ಮಾತ್ರ ಸಾಧ್ಯ. ಎನ್ಐಎಗೆ ಸೂಮೋಟೋ ಪ್ರಕರಣ ದಾಖಲಿಸಿಕೊಳ್ಳಲು ಅವಕಾಶ ಇದೆ. ಎನ್ಐಎ ಸೂಮೋಟೋ ದಾಖಲಿಸಿಕೊಂಡು ಈ ಪ್ರಕರಣದ ತನಿಖೆ ಮಾಡಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: SITಯಿಂದ ತಿಮರೋಡಿ, ಚಿನ್ನಯ್ಯ ವಿಚಾರಣೆ – ಸಮೀರ್ ಆದಾಯ ಮೂಲ ಕೆದಕಿದ ಖಾಕಿ, ಇನ್ನಷ್ಟು ರಹಸ್ಯ ಬಯಲು!
ಧರ್ಮಸ್ಥಳ ವಿರುದ್ಧದ ಪಿತೂರಿಯಲ್ಲಿ ಎಡಪಂಥೀಯರ ಕೈವಾಡ ಇದೆ ಅನ್ನೋ ಅನುಮಾನಗಳಿವೆ. ಎಡಪಂಥೀಯರು ಈಗ ಸ್ವಲ್ಪ ಮಟ್ಟಿಗೆ ಇರುವುದು ಕೇರಳದಲ್ಲಿ ಹಾಗಾಗಿ ಎನ್ಐಎ ಇದನ್ನು ತೆಗೆದುಕೊಳ್ಳಲು ಸೂಕ್ತ ಕಾರಣ ಇದೆ ಎಂದು ಡಿವಿಎಸ್ ಹೇಳಿದ್ರು.
ಬೆಂಗಳೂರು: ಈಶ್ವರಪ್ಪನವರು (KS Eshwarappa) ನಮ್ಮ ಪಕ್ಷದಲ್ಲಿ ಸ್ವಲ್ಪ ಉಗ್ರವಾದಿ. ಯಾವುದೇ ವಿಚಾರ ಬಂದಾಗ ಆಕ್ರೋಶಭರಿತರಾದ್ರೆ ಏನಾದರೂ ಮಾತನಾಡಿಬಿಡ್ತಾರೆ. ಹಾಗೇಯೇ ಬಾಯಿತಪ್ಪಿ ಹೇಳಿರಬಹುದು ಎಂದು ನಾನು ಭಾವಿಸುತ್ತೇನೆ. ಆದ್ರೆ ಒಬ್ಬ ಹಿರಿಯ ರಾಜಕಾರಣಿಯಾಗಿ ಹಾಗೆ ಹೇಳಬಾರದಿತ್ತು ಎಂದು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ (DV Sadananda Gowda) ಹೇಳಿದ್ದಾರೆ.
ʻದೇಶದ್ರೋಹ ಹೇಳಿಕೆ ನೀಡುವವರನ್ನು ಗುಂಡಿಕ್ಕಿಕೊಲ್ಲುವ ಕಾನೂನು (Law) ತನ್ನಿʼ ಎಂಬ ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಈಶ್ವರಪ್ಪ ಅವರು ಹಾಗೆ ಹೇಳಬಾರದಿತ್ತು. ಸ್ವಲ್ಪ ವ್ಯತ್ಯಾಸವಾಗಿದೆ. ಆದ್ರೆ ಅವರು ಗುಂಡು ಹಾರಿಸುವಷ್ಟು ಉಗ್ರರಲ್ಲ. ದೇಶ ವಿಭಜನೆ ಬಂದಾಗ ಕ್ರೋದ ಬರುತ್ತದೆ. ಆದ್ದರಿಂದ ಉದ್ವೇಗದಲ್ಲಿ ಮಾತನಾಡಿದ್ದಾರೆ. ಇದನ್ನು ಡಿ.ಕೆ ಸುರೇಶ್ ಅವರು ಬಿಡಬೇಕು. ಅದೇ ರೀತಿ ಏನೂ ಸಿಗದೇ ಇದ್ದಾಗ ಈ ರೀತಿ ಹಿಡಿದುಕೊಂಡು ನೇತಾಡುವುದನ್ನು ಬಿಡಬೇಕು ಎಂದು ನಾನು ಆಗ್ರಹಿಸುತ್ತೇನೆ ಎಂದಿದ್ದಾರೆ. ಈ ಕುರಿತ ವೀಡಿಯೋ ಇಲ್ಲಿದೆ… ಇದನ್ನೂ ಓದಿ: ಧರ್ಮದ ಕವಚದ ಒಳಗೆ ಪಾಪ, ಅನ್ಯಾಯದ ಕೆಲಸ ಬಿಜೆಪಿ ಮಾಡುತ್ತಿದೆ: ದಿನೇಶ್ ಗುಂಡೂರಾವ್
ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡಲ್ಲ ಅಂತ ಹೈಕಮಾಂಡ್ ನೇರವಾಗಿ ತಿಳಿಸಿತ್ತು ಎಂದು ಡಿ.ವಿ.ಸದಾನಂದಗೌಡ ಚುನಾವಣಾ ರಾಜಕೀಯ ನಿವೃತ್ತಿ ಬಗ್ಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (Yediyurappa) ಪ್ರತಿಕ್ರಿಯೆ ನೀಡಿದರು.
ನಗರದಲ್ಲಿ ಮಾತನಾಡಿದ ಅವರು, ಡಿವಿಎಸ್ (Sadananda Gowda) ಅವರು ಚುನಾವಣಾ ರಾಜಕೀಯದಿಂದ ನಿವೃತ್ತರಾಗಿದ್ದಾರೆ. ಆದರೆ ಸಕ್ರಿಯ ರಾಜಕೀಯದಲ್ಲಿ ಇರ್ತಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಕೊಡಲ್ಲ ಅಂತ ಹೈಕಮಾಂಡ್ ನೇರವಾಗಿ ತಿಳಿಸಿತ್ತು. ಅವರು ಚುನಾವಣೆಗೆ ನಿಲ್ಲಲ್ಲ. ಪಕ್ಷದ ಕಾರ್ಯಕ್ರಮದಲ್ಲಿ ಸಕ್ರಿಯರಾಗಿ ಇರಲು ಹೇಳಿದೆ. ಚುನಾವಣೆಗೆ ನಿಲ್ಲದಂತೆ ಹೈಕಮಾಂಡ್ ನೇರವಾಗಿ ಸೂಚಿಸಿದೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಆಪರೇಷನ್ ಶಾಪಿಂಗ್ ಹಬ್ – ತೆರವು ಖಂಡಿಸಿ ಬೀದಿಬದಿ ವ್ಯಾಪಾರಿಗಳಿಂದ ಪ್ರತಿಭಟನೆ
ಪಕ್ಷದ ಬಗ್ಗೆ ಎಸ್.ಟಿ.ಸೋಮಶೇಖರ್ ಹೇಳಿಕೆ ಕುರಿತು ಮಾತನಾಡಿ, ಸೋಮಶೇಖರ್ ಬಳಿ ಮಾತಾಡಿದ್ದೇನೆ. ಅವರು ಪಕ್ಷ ಬಿಟ್ಟು ಹೋಗಲ್ಲ. ಅಸಮಾಧಾನ ಇದ್ದರೆ ಮಾತಾಡಿ ಸರಿಪಡಿಸ್ತೇನೆ ಎಂದು ತಿಳಿಸಿದರು.
ಶಾಸಕ ಅಶ್ವಥ್ ನಾರಾಯಣ್ ಮಾತನಾಡಿ, ನಮ್ಮ ಸ್ನೇಹಿತ ಸೋಮಶೇಖರ್ ಯಾವ ಹಿನ್ನೆಲೆಯಲ್ಲಿ ಹೇಳಿಕೆ ಕೊಟ್ಟಿದ್ದಾರೆ ಗೊತ್ತಿಲ್ಲ. ಅವರಿಗೆ ಬಿಜೆಪಿ ಎಲ್ಲಾ ಸ್ಥಾನಮಾನ ಕೊಟ್ಟು ಗೌರವಿಸಿದೆ. ಪಕ್ಷ ಅವರನ್ನು ಒಂದು ದಿನವೂ ಕಡೆಗಣಿಸಿಲ್ಲ. ಅವರಿಗೆ ಅಳುಕು ಬೇಡ. ಜಾಮೂನು, ವಿಷ ಎಲ್ಲಾ ಕಾಂಗ್ರೆಸ್‌ನಲ್ಲಿ ಕೊಡೋದು. ಅವರ ಹೆಗಲ ಮೇಲೆ ನಾವು ಯಾವುದೇ ಬಾರ ಹಾಕಿಲ್ಲ. ಸೋಮಶೇಖರ್ ಮೇಲೆ ಅನ್ಯಾಯ ಜರುಗಿಲ್ಲ. ಏನೇ ಮಾತು ಹೇಳಿದರೂ ವಾಪಸ್ ಪಡೆಯಲಿ. ಮನೆಯಲ್ಲೇ ಇದ್ದು ಮನೆ ಯಜಮಾನರ ಬಗ್ಗೆ ಮಾತಾಡೋದು, ವಿರುದ್ಧ ಹೇಳಿಕೆ ನೀಡುವುದು ಸೂಕ್ತವಲ್ಲ. ಅವರ ವ್ಯಕ್ತಿತ್ವಕ್ಕೂ ಸರಿಯಲ್ಲ. ಸೋಮಶೇಖರ್ ಅವರು ಸಿದ್ದರಾಮಯ್ಯ, ಡಿಕೆಶಿ ಮೆಚ್ಚಿಸಲು ಮಾತಾಡ್ತಿದ್ದಾರೆ. ಅವರೇ ಮುಳುಗುತ್ತಿದ್ದಾರೆ. ಯಾಕೆ ಆ ಹಡಗು ಹತ್ತುತ್ತಿದ್ದಾರೆ ಸೋಮಶೇಖರ್ ಗೊತ್ತಿಲ್ಲ ಎಂದರು. ಇದನ್ನೂ ಓದಿ: ಚೆಕ್‍ನಲ್ಲಿ 3.5 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ದಾಳಿ – ಅಧಿಕಾರಿ ಅರೆಸ್ಟ್
ಸದಾನಂದಗೌಡರು ಬಹುಕಾಲ ರಾಜಕೀಯದಲ್ಲಿ ಇದ್ದವರು. ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈಗ ಅವರ ಆಲೋಚನೆ ತಿಳಿಸಿದ್ದಾರೆ. ಯಾವ ರೀತಿ ಪಕ್ಷ ಹೇಳುತ್ತೆ ನೋಡೋಣ. ಅವರಿಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ. ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಪಕ್ಷ ಯಾರನ್ನೂ ಅಗೌರವದಿಂದ ನಡೆಸಿಕೊಳ್ಳಲ್ಲ ಎಂದು ತಿಳಿಸಿದರು.
ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಬ್ರ್ಯಾಂಡ್ ಸಿಎಂ, ಬ್ರ್ಯಾಂಡ್ ಡಿಸಿಎಂ ಹೇಗೆ ಮಾಡಬೇಕೆಂಬುದಕ್ಕೆ ಇವತ್ತು ರಾಜ್ಯದಲ್ಲಿ ನಡೆಯುತ್ತಿರುವ ಎಟಿಎಂ ಸರ್ಕಾರದ ಆಡಳಿತವೇ ಒಂದು ಉದಾಹರಣೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ (D.V.Sadananda Gowda) ವಿಶ್ಲೇಷಣೆ ಮಾಡಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು (ಶುಕ್ರವಾರ) ‘ಎಟಿಎಂ ಸರ್ಕಾರದ ಕಲೆಕ್ಷನ್ ಟ್ರೀ’ ಸಂಬಂಧ ಪೋಸ್ಟರ್ ಬಿಡುಗಡೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಲೆಕ್ಷನ್ ಸರ್ಕಾರವಿದೆ. ಅದನ್ನು ಸಾಮಾನ್ಯ ಜನರೂ ತಿಳಿದುಕೊಂಡು ಅದನ್ನು ಅನುಭವಿಸುವಂತಾಗಿದೆ. ಅಭಿವೃದ್ಧಿ ಇಲ್ಲದೆ, ರಸ್ತೆಯ ಹೊಂಡ ಗುಂಡಿಗಳನ್ನೂ ತುಂಬಿಸಲಾಗದ ದುಸ್ಥಿತಿ ರಾಜ್ಯದ್ದು ಎಂದು ಟೀಕಿಸಿದರು. ಇದನ್ನೂ ಓದಿ: ಮೈಸೂರಿನಲ್ಲೂ ಮೆಟ್ರೋ ವಿಸ್ತರಣೆ, ರಾಜ್ಯಕ್ಕೆ 1200 ಎಲೆಕ್ಟ್ರಿಕ್ ಬಸ್: ಮೋದಿ ಭರವಸೆ
ದೆಹಲಿ ಕಲೆಕ್ಷನ್ ಕೇಂದ್ರ ಬಿಂದು. ರಾಹುಲ್ ಗಾಂಧಿ ಇದರ ಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ. ಕಲೆಕ್ಷನ್‍ನಲ್ಲೂ ಸಿಎಂ, ಡಿಸಿಎಂ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಸಿಎಂ ತಮ್ಮ ಕುರ್ಚಿ ಉಳಿಸಿಕೊಳ್ಳಲು ಡಿಸಿಎಂಗಿಂತ ಹೆಚ್ಚು ಕಲೆಕ್ಷನ್‍ಗೆ ಇಳಿದಿದ್ದಾರೆ. ಸಿಎಂ ಕುರ್ಚಿ ಎಳೆದುಕೊಳ್ಳಲು ಹೆಚ್ಚು ಹಣ ಸಂಗ್ರಹಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು. ಇದೊಂದು ಗಂಭೀರ- ಶೋಚನೀಯ ವಿಚಾರ ಎಂದು ಟೀಕಿಸಿದರು. ಇಲ್ಲಿ ಕಲೆಕ್ಷನ್ ವಂಶವೃಕ್ಷವನ್ನು ಅನಾವರಣ ಮಾಡಲಾಗಿದೆ. ರಾಷ್ಟ್ರೀಯ ಕಾಂಗ್ರೆಸ್ಸಿನ ಕಲೆಕ್ಷನ್ ನೇತೃತ್ವವನ್ನು ಸುರ್ಜೇವಾಲಾ, ವೇಣುಗೋಪಾಲ್ ವಹಿಸಿದ್ದಾರೆ. ಲೂಟಿ ಹೊಡೆಯುವ ಕಾರ್ಯಯೋಜನೆ ಅಚ್ಚರಿ ತರುವಂತಿದೆ ಎಂದು ವ್ಯಂಗ್ಯವಾಗಿ ತಿಳಿಸಿದರು.
ಸಿದ್ದರಾಮಯ್ಯರ ಹಣ ಸಂಗ್ರಹ ಅವರ ಮಗ ಯತೀಂದ್ರ ಮತ್ತು ಸ್ವಜಾತಿಯ ಬೈರತಿ ಸುರೇಶ್ ಮೂಲಕ ನಡೆಯುತ್ತದೆ ಎಂದು ವಿವರಿಸಿದರು. ಗುತ್ತಿಗೆದಾರರಲ್ಲೂ 2 ಗುಂಪುಗಳಾಗಿವೆ. ಕೆಂಪಣ್ಣ, ಸಿದ್ದರಾಮಯ್ಯರ ಗುಂಪು. ಇನ್ನೊಂದೆಡೆ ತಂಡ ದೊಡ್ಡದಿದೆ. ಉಪಾಧ್ಯಕ್ಷ ಅಂಬಿಕಾಪತಿ ನೇತೃತ್ವದ ತಂಡವಿದು. ಅವರ ಮನೆಯಲ್ಲೇ ಹಣ ಸಿಕ್ಕಿದೆ. ಪ್ರದೀಪ್, ಪ್ರಹ್ಲಾದ್, ಪ್ರಮೋದ್ ನೇತೃತ್ವದಲ್ಲಿ ಹಣ ಸಂಗ್ರಹ ನಡೆದಿದೆ. ಇವೆಲ್ಲವೂ ರಾಹುಲ್ ಗಾಂಧಿಯವರಿಗೆ ಹೋಗುತ್ತದೆ ಎಂದು ಆರೋಪಿಸಿದರು. ಐಟಿ ಇಲಾಖೆಯಿಂದ ಮಾತ್ರ ಇದರ ತನಿಖೆ ನಡೆದರೆ ಸಾಲದು. ಇದರ ಬೇರು ಆಳವಾಗಿದೆ. ಕ್ರಿಮಿನಲ್ ಉದ್ದೇಶವನ್ನು ಹೊರಕ್ಕೆ ತರಲು ಸಿಬಿಐ ತನಿಖೆ ಅನಿವಾರ್ಯ ಎಂದು ವಿವರಿಸಿದರು. ಇದು ಖಜಾನೆ ಲೂಟಿಯ ವ್ಯವಸ್ಥೆಯಾಗಿದ್ದು, ಇದನ್ನು ಸಿದ್ದರಾಮಯ್ಯನವರು ಸಿಬಿಐ ತನಿಖೆಗೆ ಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಕೆಲಸ ಮಾಡಿಸಿಕೊಳ್ಳೋಕೆ ಅಧಿಕಾರಿಗಳಿಗೆ ದುಡ್ಡು ಕೊಡ್ತೀನಿ- ಶಾಸಕ ರಾಜೇಗೌಡ ಹೇಳಿಕೆ ವೈರಲ್
ಅಭಿವೃದ್ಧಿ ಆಧರಿತ ಯೋಜನೆಗಳನ್ನು ನೀಡಿಲ್ಲ. ಶಿವಕುಮಾರರು ನಿನ್ನೆ ಕಲೆಕ್ಷನ್ ಮೇಲ್ವಿಚಾರಣೆಗಾಗಿ ಬೆಳಗಾವಿಗೆ ತೆರಳಿದ್ದಾಗಿ ಜನಸಾಮಾನ್ಯರು ಮಾತನಾಡುತ್ತಿದ್ದಾರೆ. ಎರಡೂ ಗುಂಪುಗಳು ರಾಜ್ಯದ ಬೊಕ್ಕಸವನ್ನು ಪೂರ್ತಿಯಾಗಿ ಲೂಟಿ ಹೊಡೆದಿವೆ ಎಂದು ಆರೋಪಿಸಿದರ. .ರಾಜ್ಯದಲ್ಲಿ ಒಳ್ಳೆಯ ಗುತ್ತಿಗೆದಾರರಿಗೆ ಅವಕಾಶವಿಲ್ಲ. ನಯಾಪೈಸೆಯೂ ಅಭಿವೃದ್ಧಿಗೆ ಹೋಗುವ ಸಾಧ್ಯತೆ ಇಲ್ಲ. ಇದನ್ನು ಸಾಮಾನ್ಯ ಜನರಿಗೆ ತಿಳಿಸುವ ಕೆಲಸ ಮಾಡಲಿದ್ದೇವೆ. ಹಿಂದೆ ಸುಳ್ಳು ಆರೋಪಗಳನ್ನು ಬಿಜೆಪಿ ವಿರುದ್ಧ ಮಾಡಿದ್ದರು. ಇದರ ಸಮಗ್ರ ತನಿಖೆ ಆಗಲಿ ಎಂದು ಹೇಳಿದರು.
ಬಿಲ್ ಕೊಡದೆ ಹಾವೇರಿ ಮತ್ತಿತರ ಕಡೆ ಇಂದಿರಾ ಕ್ಯಾಂಟೀನ್ ಬಂದ್ ಆಗಿದೆ. ಹಣ ಪಾವತಿ ಇಲ್ಲ. ಕಮಿಷನ್ ಕೇಳುತ್ತಾರೆಂದು ಆರೋಪ ಕೇಳಿಸಿದೆ. ಕಲಾವಿದರ ಕೈಯಲ್ಲಿ ಕಮಿಷನ್ ಕೇಳುವುದಕ್ಕಿಂತ ಕೆಟ್ಟ ಕೆಲಸ ಇನ್ನೇನಿದೆ ಎಂದು ಪ್ರಶ್ನಿಸಿದರು. ಐಟಿ ರೇಡ್ ಆದೊಡನೆ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಬೆಂಗಳೂರಿಗೆ ಓಡಿ ಬರುವ ದಯನೀಯ ಪರಿಸ್ಥಿತಿ ಯಾಕೆ ಬಂತು ಎಂದು ಕೇಳಿದರು. ಎಲ್ಲ ಇಲಾಖೆಗಳಲ್ಲಿ ಕಿಂಗ್‍ಪಿನ್ ನೇಮಕ ಆಗಿದೆ. ಅಪಘಾತಗಳು ಹೆಚ್ಚಾಗಿವೆ. ಅಭಿವೃದ್ಧಿ ಕೆಲಸಗಳು ಆರಂಭವಾಗಬೇಕಿದೆ. ಹೈಕೋರ್ಟ್ ಆದೇಶದ ಬಳಿಕ ಡಿಸಿಎಂಗೆ ಆ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು. ಸಿಎಂ ಮತ್ತು ಎಐಸಿಸಿ ವರಿಷ್ಠರು ಅವರನ್ನು ಆ ಸ್ಥಾನದಿಂದ ಕೆಳಕ್ಕಿಳಿಸಿ ಸಮರ್ಪಕ ತನಿಖೆಗೆ ಅವಕಾಶ ಮಾಡಿಕೊಡಲಿ ಎಂದು ಆಗ್ರಹಿಸಿದರು. ಇವತ್ತು ರಾಜ್ಯದಲ್ಲಿ ಸ್ಪರ್ಧಾತ್ಮಕ ಭ್ರಷ್ಟಾಚಾರವಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಡಿಕೆಶಿ ಬೆಳಗಾವಿ ಮಾತ್ರವಲ್ಲ ರಾಜ್ಯ, ರಾಷ್ಟ್ರ ರಾಜಕಾರಣವನ್ನೂ ಮಾಡ್ತಾರೆ: ಅಶೋಕ್ ಪಟ್ಟಣ
ರಾಜ್ಯದ ಎಲ್ಲ ಕಡೆ ಭ್ರಷ್ಟಾಚಾರ ಪರಿಚಯಿಸುವ ಪೋಸ್ಟರ್ ಅಂಟಿಸುವ ಕಾರ್ಯ ನಡೆಯಲಿದೆ. ಇದು ಸಿನಿಮಾ ಪ್ರಾರಂಭದ ಟ್ರೈಲರ್ ಅಷ್ಟೇ ಎಂದು ತಿಳಿಸಿದರು. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಶಾಸಕ ರವಿ ಸುಬ್ರಹ್ಮಣ್ಯ, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಮಡಿಕೇರಿ: ಕಾಂಗ್ರೆಸ್ ಹಡಗು ಸಮುದ್ರದ ಮಧ್ಯದಲ್ಲಿ ಸಿಲುಕಿ ಗಿರಗಿರನೇ ತಿರುಗುತ್ತಿದೆ. ಹೀಗಾಗಿ ಸಿದ್ದರಾಯಮ್ಮನವರ ತಲೆ ತಿರುಗುತ್ತಿದೆ ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ಕೊಡಗು ಜಿಲ್ಲೆಯ ಕುಶಾಲನಗರಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಖಾತೆಗಳ ಕ್ಯಾತೆಯಿಂದಾಗಿ ಬೊಮ್ಮಾಯಿ ಅವರ ಸರ್ಕಾರ ಹೆಚ್ಚುದಿನ ಉಳಿಯುವುದಿಲ್ಲ ಎಂದಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯನವರಿಗೆ ಗೂಟದ ಕಾರು ಬೇಕಾಗಿತ್ತು. ಇದಕ್ಕಿಂತ ದೊಡ್ಡ ಹುದ್ದೆ ಸಿಗುವುದಿಲ್ಲ ಎಂಬುದು ಸಿದ್ದರಾಮಯ್ಯನವರಿಗೆ ಗೊತ್ತಾಗಿತ್ತು. ಹೀಗಾಗಿ ಅವರ ಮನಸ್ಸಿನಲ್ಲಿದ್ದ ಕೆಲಸಗಳೆಲ್ಲವೂ ಈಡೇರುತ್ತಿದ್ದಂತೆ ಕುಮಾರಸ್ವಾಮಿ ಅವರ ರಾಜೀನಾಮೆ ಕೊಡಿಸಿದರು ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಅಸಮಾಧಾನಗೊಂಡವರೆಲ್ಲ ರಾಜೀನಾಮೆ ನೀಡಿ, ಬಿಜೆಪಿಗೆ ಬಂದು ಸಪೋರ್ಟ್ ಮಾಡಿದರು. ಆದರೆ ಬೊಮ್ಮಾಯಿ ಅವರ ಸರ್ಕಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಖಾತೆ ವಿಚಾರಕ್ಕೆ ಮುನಿಸು ಇದ್ದಿದ್ದೆಲ್ಲವೂ ಸರಿಯಾಗಿದೆ. ಹೀಗಾಗಿ ಸರ್ಕಾರ ಅವಧಿಯನ್ನು ಪೂರ್ಣಗೊಳಿಸುತ್ತದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಅದನ್ನು ಮತ್ತಷ್ಟು ಬಲಗೊಳಿಸುವ ಕೆಲಸವಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಬೆಲೆ ಏರಿಕೆಗೆ ಬಿಜೆಪಿ ಕಾರ್ಯಕರ್ತನಿಂದಲೇ ಆಕ್ರೋಶ- ಬೂತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ
ಕಾನೂನಿನ ನಿಜ ಸ್ವರೂಪ ಗೊತ್ತಾಗಲಿ
ಸ್ಯಾಂಡಲ್‍ವುಡ್ ನಟಿಯಾರದ ಸಂಜನಾ ಗರ್ಲಾನಿ ಮತ್ತು ರಾಗಿಣಿ ದ್ವಿವೇದಿ ಡ್ರಗ್ಸ್ ಪ್ರಕರಣದಲ್ಲಿ ಕಾನೂನು ತನ್ನ ನಿಜ ಸ್ವರೂಪ ಏನೆಂದು ತೋರಿಸಲಿ. ಕೋರ್ಟ್ ಯಾವ ಸೆಕ್ಷನ್ ಗಳ ಮೇಲೆ ಕ್ರಮ ಕೈಗೊಳ್ಳುವುದೋ ಕೈಗೊಳ್ಳಲಿ. ಇದರಿಂದ ಉಳಿದವರಿಗೂ ಒಂದು ಎಚ್ಚರಿಕೆ ಗಂಟೆಯಾಗುತ್ತದೆ. ಡ್ರಗ್ಸ್ ಜಾಲದಲ್ಲಿ ಸಿಲುಕಿದರೆ ಎಂತಹ ಶಿಕ್ಷೆ ಆಗುತ್ತದೆ ಎನ್ನುವ ಅರಿವು ಮೂಡಲಿ. ಹೀಗಾಗಿ ಕಾನೂನು ಸರಿಯಾದ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದ್ದಾರೆ.
ಡ್ರಗ್ಸ್ ದಂಧೆ ಸಾಮಾಜಿಕ ಪಿಡುಗಾಗಿ ಮಾರ್ಪಟ್ಟಿದೆ. ಯುವಶಕ್ತಿ ದೇಶದ ಅಭಿವೃದ್ಧಿಗೆ ಬಳಕೆಯಾಗಬೇಕು ಎನ್ನೋದು ಪ್ರಧಾನಿ ಮೋದಿಯವರ ಆಶಯವಾಗಿತ್ತು. ಆದರೆ ಈ ರೀತಿ ತಪ್ಪು ದಾರಿಗಳನ್ನು ಹಿಡಿಯುತ್ತಿರುವುದು ಸರಿಯಲ್ಲ. ಇಂದು ಆಫ್ರಿಕನ್ ಪ್ರಜೆಗಳು ದೊಡ್ಡ ಪ್ರಮಾಣದಲ್ಲಿ ಭಾರತಕ್ಕೆ ಡ್ರಗ್ಸ್ ಸಾಗಾಟ ಮಾಡುತ್ತಿದ್ದಾರೆ. ಸರಿಯಾದ ಕಾನೂನು ಕ್ರಮ ಕೈಗೊಂಡರೆ ಯುವ ಸಮೂಹಕ್ಕೂ ಅರಿವು ಮೂಡಿದಂತೆ ಆಗುತ್ತದೆ ಎಂದು ಸದಾನಂದಗೌಡ ಹೇಳಿದ್ದಾರೆ.
ಇಂದು ನವದೆಹಲಿಯಲ್ಲಿ ಮಾಜಿ ಕೇಂದ್ರ ಸಚಿವ ದಿವಂಗತ ಶ್ರೀ ಸುರೇಶ್ ಅಂಗಡಿ ಅವರ ಸಮಾಧಿ ಸ್ಥಳದಲ್ಲಿ ಶ್ರೀ ಸುರೇಶ್ ಅಂಗಡಿ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ನಳೀನ್ ಕುಮಾರ್ ಕಟೀಲ್, ಸಂಸದರು ಹಾಗೂ ಶ್ರೀ ಸುರೇಶ್ ಅಂಗಡಿ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು ಎಂದು ಸಂಸದರಾದ ಡಿ.ವಿ.ಸದಾನಂದಗೌಡ ತಮ್ಮ ಫೇಸ್ಬುಕ್ ಖಾತೆಯಲ್ಲಿ ಮಹಿತಿ ಹಂಚಿಕೊಂಡಿದ್ದಾರೆ.
– ವಿರೋಧಿಗಳ ತೇಜೋವಧೆ ತಪ್ಪಿಸಿಕೊಳ್ಳಲು ತಡೆ ಎಂದು ಸ್ಪಷ್ಟನೆ
ಬೆಂಗಳೂರು: ನಕಲಿ ಸಿಡಿ ಭೀತಿ ಹಿನ್ನೆಲೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರು ಕೋರ್ಟ್ ನಿಂದ ತಡೆಯಾಜ್ಞೆ ತಂದಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಶುಕ್ರವಾರ ಮಾನಹಾನಿ ಸುದ್ದಿ ಪ್ರಸಾರಕ್ಕೆ ನಿರ್ಬಂಧಕಾಜ್ಞೆ ಅಡಿಯಲ್ಲಿ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಿಂದ ಕೇಂದ್ರ ಸಚಿವರು ತಡೆಯಾಜ್ಞೆ ತಂದಿದ್ದರು. ಚುನಾವಣೆ, ಸಂಪುಟ ರಚನೆ ಸಂದರ್ಭದಲ್ಲಿ ವಿರೋಧಿಗಳು ಈ ಮುಂಚೆಯೂ ನನ್ನ ವಯಕ್ತಿಕ ತೇಜೋವಧೆಗೆ ಪ್ರಯತ್ನಸಿದ್ದರು.
ಚುನಾವಣೆ, ಸಂಪುಟ ರಚನೆ ಸಂದರ್ಭದಲ್ಲಿ ವಿರೋಧಿಗಳು ಈ ಮುಂಚೆಯೂ ನನ್ನ ವಯಕ್ತಿಕ ತೇಜೋವಧೆಗೆ ಪ್ರಯತ್ನಸಿದ್ದರು. ಮಾಧ್ಯಮ ಸ್ವಾತಂತ್ರ್ಯವನ್ನು ನಾನು ಸಂಪೂರ್ಣ ಗೌರವಿಸುತ್ತೇನೆ. ಆದರೆ ವಿರೋಧಿಗಳ ಸಂಚಿಗೆ ಬಲಿಯಾಗಿ ತಪ್ಪುಮಾಹಿತಿ ಪ್ರಸರಣದಲ್ಲಿ ತೊಡಗಬಾರದೆಂಬ ಉದ್ದೇಶದಿಂದ ನಿರ್ಬಂಧ ಆದೇಶ ತರಬೇಕಾಗಿ ಬಂತು. ದಯವಿಟ್ಟು ಯಾರೂ ಅನ್ಯತಾ ಭಾವಿಸಬಾರದು
ಮಾಧ್ಯಮ ಸ್ವಾತಂತ್ರ್ಯವನ್ನು ನಾನು ಸಂಪೂರ್ಣ ಗೌರವಿಸುತ್ತೇನೆ. ಆದರೆ ವಿರೋಧಿಗಳ ಸಂಚಿಗೆ ಬಲಿಯಾಗಿ ತಪ್ಪುಮಾಹಿತಿ ಪ್ರಸರಣದಲ್ಲಿ ತೊಡಗಬಾರದೆಂಬ ಉದ್ದೇಶದಿಂದ ನಿರ್ಬಂಧ ಆದೇಶ ತರಬೇಕಾಗಿ ಬಂತು. ದಯವಿಟ್ಟು ಯಾರೂ ಅನ್ಯತಾ ಭಾವಿಸಬಾರದು ಎಂದು ಹೇಳಿದ್ದಾರೆ.
ಬೆಂಗಳೂರು: ಗುಜರಾತಿನ ಕಲೋಲ್’ನಲ್ಲಿರುವ ಇಫ್ಕೋ ನ್ಯಾನೋ ಯುರೀಯಾ ಕಾರ್ಖಾನೆಯಿಂದ 500-ಎಂ.ಎಲ್. ಸಾಮಥ್ರ್ಯದ 16,600 ನ್ಯಾನೋ ಯೂರಿಯಾ ಬಾಟಲಿಗಳನ್ನು ಹೊತ್ತ ಮೊದಲ ವಾಹನ ಇಂದು ಕರ್ನಾಟಕದತ್ತ ಪಯಣ ಬೆಳೆಸಿತು. ನ್ಯಾನೋ ಯೂರಿಯಾ ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಉಂಟುಮಾಡುವುದು ಎಂದು ನಿರೀಕ್ಷಿಸಲಾಗಿದೆ. 500- ಎಂ.ಎಲ್. ನ್ಯಾನೋ ಯೂರಿಯಾ 45 ಕೆಜಿ ಮಾಮೂಲಿ ಯೂರಿಯಾಕ್ಕೆ ಸಮನಾಗಿದೆ. ಬೆಲೆ ಒಂದು ಬಾಟಲಿಗೆ 240 ರೂಪಾಯಿ. ಸಹಕಾರಿ ವಲಯದ ಇಫ್ಕೋ ಕಂಪನಿಯು ಗುಜರಾತಿನ ಕಲೋಲ್ ಸೇರಿದಂತೆ ದೇಶದಲ್ಲಿ ಈಗಾಗಲೇ 3 ಕಡೆ ನ್ಯಾನೋ ಯೂರಿಯಾ ಘಟಕ ಸ್ಥಾಪಿಸಿದ್ದು ಇನ್ನೂ ನಾಲ್ಕು ಕಡೆ ಹೊಸ ಘಟಕಗಳನ್ನು ತೆರೆಯಲಿದೆ. ಇಫ್ಕೋ ಈ ಹಂಗಾಮಿನಲ್ಲಿ 28 ಕೋಟಿ ಬಾಟಲಿ (500 ಎಂಎಲ್) ನ್ಯಾನೋ ಯೂರಿಯಾ ಉತ್ಪಾದಿಸಲಿದೆ.
ಬೆಂಗಳೂರಿನಲ್ಲಿ ಇಂದು ಸಾಯಂಕಾಲ ವಚ್ರ್ವಲ್ ಸಭೆ ಮೂಲಕ ಕಲೋಲ್’ನಿಂದ ಹೊರಟ ನ್ಯಾನೋ ಯೂರಿಯಾ ವಾಹನಕ್ಕೆ ಹಸಿರು ನಿಶಾನೆ ತೋರಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ಜಗತ್ತಿನಲ್ಲಿಯೇ ಪ್ರಪ್ರಥಮವಾಗಿ ನ್ಯಾನೋ ಯೂರಿಯಾ ಅಭಿವೃದ್ಧಿಪಡಿಸಿರುವ ಇಫ್ಕೋ ಕಂಪನಿಯನ್ನು ಅಭಿನಂದಿಸಿದರು.
ಕರ್ನಾಟಕದಲ್ಲಿಯೂ ನ್ಯಾನೋ ಯೂರಿಯಾ ಕಾರ್ಖಾನೆ ಸ್ಥಾಪಿಸಲು ಇಫ್ಕೋ ಆಸಕ್ತಿ ತೋರಿದ್ದು ಇನ್ನು 10 ದಿನದೊಳಗಾಗಿ ಬೆಂಗಳೂರು ವಿಮಾನ ನಿಲ್ದಾಣದ ಸಮೀಪ ಸೂಕ್ತವಾಗದ ಜಾಗವನ್ನು ಗುರುತಿಸಲಾಗುವುದು ಎಂದು ಕೇಂದ್ರ ಸಚಿವ ಸದಾನಂದ ಗೌಡ ಪ್ರಕಟಿಸಿದರು.
ನ್ಯಾನೋಗೊಬ್ಬರ ರೈತರಿಗೆ ವರವಾಗಲಿದೆ. ಪರಿಸರ ಸ್ನೇಹಿಯಾಗಿದ್ದು ಮಣ್ಣಿನ ಫಲವತ್ತದೆ ಉಳಿಸಿಕೊಳ್ಳಲು ಸಹಾಯಕವಾಗಲಿದೆ. ಒಂದೆಡೆ ಶೇಕಡಾ 8ರಿಂದ 15ರಷ್ಟು ಖರ್ಚು ಕಡಿಮೆಯಾಗಲಿದೆ. ಇನ್ನೊಂದೆಡೆ ಇಳುವರಿಯು 15ರಿಂದ 20 ಪ್ರತಿಶತ ಹೆಚ್ಚಾಗಲಿದೆ. ಇದರಿಂದ ದೇಶದ ರೈತರಿಗೆ ಈ ಸಲ ಸುಮಾರು 28 ಸಾವಿರ ಕೋಟಿ ಹೆಚ್ಚುವರಿ ಆದಾಯ ದೊರೆಯುವುದು ಎಂದು ಅಂದಾಜಿಸಲಾಗಿದೆ ಎಂದರು.
ದೇಶದಲ್ಲಿ ಪ್ರತಿವರ್ಷ ಸರಾಸರಿ 330 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಬಳಕೆಯಾಗುತ್ತದೆ. ಇದರಲ್ಲಿ ಸುಮಾರು 90 ಲಕ್ಷ ಟನ್ ಆಮದು ಮಾಡಿಕೊಳ್ಳುತ್ತೇವೆ. ನ್ಯಾನೋ ಯೂರಿಯಾ ಪ್ರವೇಶದಿಂದಾಗಿ ಈ ಸಲ ಮಾಮೂಲಿ ಯೂರಿಯಾ ಬಳಕೆಯಲ್ಲಿ ಶೇಕಡಾ 20ರಷ್ಟು ಕಡಿಮೆಯಾಗಬಹುದು ಎಂದು ಅಂದಾಜು ಮಾಡಲಾಗಿದೆ. ಇದರಿಂದ ಕೇಂದ್ರ ಸರ್ಕಾರಕ್ಕೆ ಸುಮಾರು 16,000 ಕೋಟಿ ರೂ ಯೂರಿಯಾ ಸಬ್ಸಿಡಿ ಉಳಿತಾಯವಾಗಬಹುದು ಎಂದು ಲೆಕ್ಕಹಾಕಲಾಗಿದೆ. ಇನ್ನು ಕರ್ನಾಟದಲ್ಲಿ, ನ್ಯಾನೋ ಯುರಿಯಾ ಬಂದಿರುವುದರಿಂದ ಮಾಮೂಲಿ ಯೂರಿಯಾ ಬಳಕೆ ಸುಮಾರು 5 ಲಕ್ಷ ಟನ್ ಕಡಿಮೆಯಾಗಬಹುದು ಎಂದು ಅಂದಾಜು ಮಾಡಲಾಗಿದೆ ಎಂದರು.
ನಾಯಕತ್ವ ಬದಲಾವಣೆ ಇಲ್ಲ:
ನಂತರ ವರದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಸದಾನಂದ ಗೌಡ ಅವರು ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಸಾಧ್ಯತೆಯನ್ನು ತಳ್ಳಿಹಾಕಿದರು. ನಮ್ಮ ಪಕ್ಷದಲ್ಲಿ ಪ್ರತಿ ರಾಜ್ಯಕ್ಕೆ ಉಸ್ತುವಾರಿ ಇರ್ತಾರೆ. ಕೇಂದ್ರದ ವರಿಷ್ಠರ ಸಂದೇಶವನ್ನು ಅವರು ನೀಡ್ತಾರೆ. ಹಾಗೆಯೇ ನಮ್ಮ ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ಅವರು – ಮುಂದಿನ ಎರಡು ವರ್ಷಗಳು ಕೂಡ ಬಿಎಸ್‍ವೈ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದರು.
#IFFCO ಉತ್ಪಾದಿತ ನ್ಯಾನೋ ಯೂರಿಯಾದ ಮೊದಲ ಕಂತು ಗುಜರಾತಿನ ಕಲೋಲ್ ಸ್ಥಾವರದಿಂದ ಕರ್ನಾಟಕಕ್ಕೆ ಹೊರಟಿತು. ಇಂದು ಬೆಂಗಳೂರಿನಲ್ಲಿ ವರ್ಚ್ವಲ್ ಸಭೆಯ ಮೂಲಕ ಈ ನ್ಯಾನೋ ಗೊಬ್ಬರ ಹೊತ್ತ ವಾಹನಗಳಿಗೆ ಹಸಿರು ನಿಶಾನೆ ತೋರಿದೆ. 500-ML ನ್ಯಾನೋ ಯೂರಿಯಾ 45-KG ಮಾಮೂಲಿ ಯೂರಿಯಾಕ್ಕೆ ಸಮ. ಇದು ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಉಂಟುಮಾಡಲಿದೆ pic.twitter.com/8nSnQiyUhq
ಪೆಟ್ರೋಲ್ ದರ ಏರಿಕೆ ವಿಚಾರವಾಗಿ ಕೇಳಲಾದ ಪ್ರಶ್ನಗೆ ಪ್ರತಿಕ್ರಿಯಿಸಿದ ಸದಾನಂದ ಗೌಡರು – ಪೆಟ್ರೋಲ್ ದರ ಅಂತಾರಾಷ್ಟ್ರೀಯ ಮಟ್ಟ ಮೇಲೆ ಅವಲಂಬಿಸಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ಅದರ ಮೇಲೆ ವಿವಿಧ ರೀತಿ ತೆರಿಗೆ ವಿಧಿಸಿಸುತ್ತದೆ. ಇದನ್ನು ಜಿಎಸ್‍ಟಿ ವ್ಯಾಪ್ತಿಗೆ ತರುವುದು ಸೂಕ್ತ ಎಂಬುದು ನನ್ನ ಭಾವನೆ. ಆದರೆ ಜಿಎಸ್ಟಿ ಸ್ವಾಯತ್ತ ಸಂಸ್ಥೆ ಆಗಿದೆ. ಕೇಂದ್ರ ಹಾಗೂ ಎಲ್ಲ ರಾಜ್ಯಗಳ ವಿತ್ತ ಸಚಿವರು ಅದರಲ್ಲಿ ಇರುತ್ತಾರೆ. ಅವರು ಅದನ್ನು ನಿರ್ಧರಿಸಬೇಕು ಎಂದರು.
ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ಬಿಇಎಲ್ ತೆಗೆದುಕೊಂಡ ಕಾರ್ಯಕ್ಕೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರು ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಇಎಲ್ ನ ಲಸಿಕಾ ಕೇಂದ್ರಕ್ಕೆ ಇವತ್ತು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಭೇಟಿ ನೀಡಿದ್ರು. ಸುವ್ಯವಸ್ಥಿತವಾಗಿ ನಡೆಯುತ್ತಿರೋ, ಕೋವಿಡ್ ಲಸಿಕಾ ಕೇಂದ್ರವನ್ನು ಕಂಡು ಅತ್ಯಂತ ಸಂತಸ ವ್ಯಕ್ತಪಡಿಸಿದ್ರು. ಜೊತೆಗೆ ಕೋವಿಡ್ ನಿಯಂತ್ರಣಕ್ಕೆ ಬಿಇಎಲ್ ಕೈಗೊಂಡ ಕೋವಿಡ್ ಕೇರ್ ಸೆಂಟರ್, ಕೋವಿಡ್ ಟಾಸ್ಕ್ ಫೋರ್ಸ್ ಟೀಮ್ ರಚನೆ ಸೇರಿದಂತೆ ಹಲವು ಕಾರ್ಯವೈಖರಿಯ ಬಗ್ಗೆ ಮುಕ್ತ ಕಂಠದಿಂದ ಪ್ರಶಂಸಿದರು.
ಸಂಸ್ಥೆಯು ನೌಕರರ ಕೊರೊನಾ ಚಿಕಿತ್ಸೆಗೆ ನೀಡುತ್ತಿರೋ ಆರ್ಥಿಕ ಸಹಾಯದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಭೇಟಿಯ ಸವಿನೆನಪಿಗಾಗಿ ಗಿಡನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಹಾಗೆಯೇ ಅಗತ್ಯವಾದ ಲಸಿಕೆಗಳನ್ನು ಬಿಇಎಲ್ ಗೆ ಸರಬರಾಜು ಮಾಡಲು ಸಂಬಂಧಪಟ್ಟವರಿಗೆ ಆದೇಶಿಸಲಾಗುವುದೆಂಬ ಆಶ್ವಾಸನೆ ನೀಡಿದರು.
ಕೊರೊನಾ ಸಂಕಷ್ಟದ ಸಮಯದಲ್ಲಿ ತನ್ನ ನೌಕರರಿಗೆ ಬಿಇಎಲ್ ಬೆನ್ನುಲುಬಾಗಿ ನಿಂತಿದೆ. ನಗರದ ಜಾಲಹಳ್ಳಿಯಲ್ಲಿರೋ ಬಿಇಎಲ್ ಸಂಸ್ಥೆಯು ಕೊರೊನಾ ಲಾಕ್‍ಡೌನ್ ಸಮಯದಲ್ಲೂ ಕಾರ್ಯನಿರ್ವಹಿಸುತ್ತಿದೆ. ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಸುಮಾರು 10,500 ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಎಲ್ಲ ನೌಕರರನ್ನು ಸರ್ಕಾರ ಫ್ರಂಟ್ ಲೈನ್ ವಾರಿಯರ್ಸ್ ಅಥವಾ ಆದ್ಯತಾ ಗುಂಪಿನಲ್ಲಿ ಸೇರಿಸಲಾಗಿದ್ದು, ಬಿಇಎಲ್ ನೌಕರರಿಗೆ ಲಸಿಕೆ ನೀಡಲಾಗುತ್ತಿದೆ.
ಈ ವೇಳೆ ಬಿಇಎಲ್ ಡೈರೆಕ್ಟರ್ ವಿನಯ್ ಕುಮಾರ್ ಕಟಿಯಾಲ್, ಬಿಇಎಲ್ ನ ಜನರಲ್ ಮ್ಯಾನೇಜರ್ ಆರ್ ಪಿ ಮೋಹನ್, ಎಜಿಎಂ ಸುರೇಶ್ ಮೈಚಿಲ್ ಹಾಗೂ ಕಾರ್ಮಿಕರ ಕ್ಷೇಮಾಭಿವೃದ್ಧಿ ವಿಭಾಗದ ಡಿಜಿಎಂ ಗುರುರಾಜ್ ಎಂ ಸೇರಿದಂತೆ ಅನೇಕ ಅಧಿಕಾರಿಗಳು ಹಾಜರಿದ್ದರು.
ಬೆಂಗಳೂರಿನಲ್ಲಿರುವ ಬಿಇಎಲ್ ಆವರಣದಲ್ಲಿ ಇಂದು ಸಸಿಗಳನ್ನು ನೆಡಲಾಯಿತು. ಬಿಇಎಲ್ ತನ್ನ ಕ್ಯಾಂಪಸ್ಸಿನಲ್ಲಿ ಸಾಕಷ್ಟು ಗಿಡಮರಗಳನ್ನು ಬೆಳೆಸಿದೆ. ಸುತ್ತಮುತ್ತಲಿನ ಪರಿಸರ ರಕ್ಷಣೆಗೂ ಕಾಳಜಿ ತೋರಿದೆ. ಸಮೀಪದ ದೊಡ್ಡಬೊಮ್ಮಸಂದ್ರ ಕೆರೆ ಆವರಣದಲ್ಲಿ STP ಘಟಕ ಸ್ಥಾಪಿಸಿ ಕೆರೆನೀರು ಶುದ್ಧಗೊಳಿಸುತ್ತಿದೆ.#ಹಸಿರಿದ್ದಲ್ಲಿ_ಮೊಸರಿದೆ#ಹಸಿರೇ_ಉಸಿರುpic.twitter.com/kc26YzRefZ
ಬೆಂಗಳೂರು: ಕೊರೋನಾ ಸಂಕಷ್ಟದ ಕಾಲದಲ್ಲಿ ಬಡವರ ಕಷ್ಟಕ್ಕೆ ಸ್ಪಂದಿಸಿ, ಹೃದಯವಂತಿಕೆಯನ್ನು ಮೆರೆಯುತ್ತಿದ್ದಾರೆ. ಕೆಲವರು ರೇಶನ್ ಕಿಟ್ ಗಳನ್ನು ವಿತರಿಸುತ್ತಿದ್ದಾರೆ. ಮತ್ತೆ ಕೆಲವರು ಪುಡ್ ಪ್ಯಾಕೆಟ್ ಗಳನ್ನು ಹಂಚುತ್ತಿದ್ದಾರೆ. ಇವತ್ತು ಭಾನುವಾರವಾಗಿದ್ದರಿಂದ ನಾನ್ ವೆಜ್ ಬಿರಿಯಾನಿಯನ್ನು ವಿತರಿಸಲಾಯಿತು.
ಬ್ಯಾಟರಾಯನಪುರದ ಸಮಾಜ ಸೇವಕರಾದ ಎಂ ಸುರೇಶ್ ನೇತೃತ್ವದಲ್ಲಿ ಕೇಂದ್ರಸಚಿವ ಡಿ.ವಿ.ಸದಾನಂದಗೌಡ, ಎ.ರವಿ ಸುಮಾರು 200 ಜನಕ್ಕೆ ಬಿರಿಯಾನಿ ವಿತರಿಸಿದರು. ಬ್ಯಾಟರಾಯನಪುರದ ಪೌರಕಾರ್ಮಿಕರಿಗೆ ಬಿರಿಯಾನಿ ಪ್ಯಾಕೆಟ್ ಗಳನ್ನು ಹಂಚಿದರು.
ಹಾಗೆಯೇ ನಾಗರಬಾವಿಯ ಯತೀಶ್ ಆ್ಯಂಡ್ ಫ್ರೆಂಡ್ಸ್ ಟೀಮ್, ಇವತ್ತು ಸಾವಿರಾರು ಜನಕ್ಕೆ ಉಚಿತವಾಗಿ ಬಿರಿಯಾನಿಯನ್ನು ವಿತರಣೆ ಮಾಡಿದ್ರು. ಕಳೆದ ಒಂದು ತಿಂಗಳಿನಿಂದ ಪ್ರತಿದಿನ ಯತೀಶ್ ಹಾಗೂ ಅವರ ಸ್ನೇಹಿತರ ಬಳಗ 3000 ಫುಡ್ ಪ್ಯಾಕೆಟ್ ಗಳನ್ನು ಹಂಚುತ್ತಿದ್ದಾರೆ. ಭಾನುವಾರ ಹಾಗೂ ಬುಧವಾರ ಎರಡು ದಿನ ನಾನ್ ವೆಜ್ ನೀಡುತ್ತಿದ್ದು, ಉಳಿದ ದಿನ ವೆಜ್ ಊಟ ಹಂಚುತ್ತಾರೆ.
ಈ ಮೂಲಕ ಸಾವಿರಾರು ಬಡವರು, ಕೂಲಿ ಕಾರ್ಮಿಕರು ಹಾಗೂ ಅನಾಥರ ಹೊಟ್ಟೆ ತುಂಬಿಸುತ್ತಿದ್ದಾರೆ. ಕಳೆದ ಬಾರಿ ಲಾಕ್‍ಡೌನ್ ಆದಾಗ ಈ ಸ್ನೇಹಿತರ ಬಳಗ ಎರಡು ತಿಂಗಳುಗಳ ಕಾಲ ರೇಶನ್ ಕಿಟ್ ವಿತರಿಸಿದ್ರು. ಲಾಕ್‍ಡೌನ್ ಮುಗಿಯುವವರೆಗೂ ಈ ಆಹಾರ ಸೇವೆ ಮುಂದುವರಿಯಲಿದೆ.