Tag: ಡಿ ರೂಪಾ

  • ಮೌನವಾಗಿರಲು ಸಾಧ್ಯವಿಲ್ಲ, ರೂಪಾ ಕ್ಷಮೆ ಕೇಳಬೇಕು- ಸುಪ್ರೀಂಕೋರ್ಟ್ ವಿಚಾರಣೆಯಲ್ಲಿ ಸಿಂಧೂರಿ ಬಿಗಿಪಟ್ಟು

    ಮೌನವಾಗಿರಲು ಸಾಧ್ಯವಿಲ್ಲ, ರೂಪಾ ಕ್ಷಮೆ ಕೇಳಬೇಕು- ಸುಪ್ರೀಂಕೋರ್ಟ್ ವಿಚಾರಣೆಯಲ್ಲಿ ಸಿಂಧೂರಿ ಬಿಗಿಪಟ್ಟು

    ನವದೆಹಲಿ: ನನ್ನ ವಿರುದ್ಧ ಮಾಡಿರುವ ಅವಹೇಳನಕಾರಿ ಪೋಸ್ಟ್ ಗಳನ್ನು ಸೋಶಿಯಲ್ ಮೀಡಿಯಾದಿಂದ ಡಿಲೀಟ್ ಮಾಡಬಹುದು. ಆದರೆ ಇಂತಹ ಪೋಸ್ಟ್ ಗಳಿಂದ ನನ್ನ ಕುಟುಂಬಕ್ಕೆ ಘಾಸಿಯಾಗಿದೆ, ನಾನು ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುವುದು ಹೇಗೆ? ಹೀಗಾಗಿ ಐಪಿಎಸ್ ಡಿ.ರೂಪಾ ಬೇಷರತ್ ಕ್ಷಮೆ ಕೇಳಬೇಕು ಎಂದು ಐಎಎಸ್ ರೋಹಿಣಿ ಸಿಂಧೂರಿ (IAS  Rohini Sinduri) ಪಟ್ಟು ಹಿಡಿದಿದ್ದಾರೆ.

    ಡಿ.ರೂಪಾ ವಿರುದ್ಧ ಸಲ್ಲಿಸಿದ್ದ ಕ್ರಿಮಿನಲ್ ಮಾನನಷ್ಟ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ವಾದ ಮಂಡಿಸಿದ ರೋಹಿಣಿ ಸಿಂಧೂರಿ ಪರ ವಕೀಲರು, ಮಾನಹಾನಿಯಾಗುವ ರೀತಿಯಲ್ಲಿ ಪೋಸ್ಟ್ ಗಳನ್ನು ಮಾಡಲಾಗಿದೆ ಈ ಹಿನ್ನಲೆಯಲ್ಲಿ ಡಿ.ರೂಪಾ ಬೇಷರತ್ ಕ್ಷಮೆ ಕೋರುವಂತೆ ಒತ್ತಾಯಿಸಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಡಿ.ರೂಪಾ (D. Roopa) ಪರ ವಕೀಲರು, ರೋಹಿಣಿ ಸಿಂಧೂರಿ ಕೂಡಾ ಆರೋಪ ಮಾಡಿದ್ದಾರೆ. ಬುದ್ಧಿ ಭ್ರಮಣೆಯಾಗಿದೆ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ ಎಂದು ವಾದಿಸಿದರು. ಇದಕ್ಕೆ ಪ್ರತಿವಾದ ಮಂಡಿಸಿದ ಸಿಂಧೂರಿ ಪರ ವಕೀಲರು, ಹೌದು ಬುದ್ಧಿ ಭ್ರಮಣೆಯಾದವರು ಈ ರೀತಿ ಪೊಸ್ಟ್ ಮಾಡುತ್ತಾರೆ. ಆದರೆ ಅವರಿಗೆ ಬುದ್ಧಿಭ್ರಮಣೆಯಾಗಿದೆ ಎಂದು ಹೇಳಿಲ್ಲ ಅಂದ್ರು. ಇದನ್ನೂ ಓದಿ: ಅನ್ನಪೂರ್ಣಿ ಸಿನಿಮಾ: ನಯನತಾರಾ ವಿರುದ್ಧ ಪ್ರಕರಣ ದಾಖಲು

    ವಾದ-ಪ್ರತಿವಾದ ವೇಳೆ ಮಧ್ಯಪ್ರವೇಶ ಮಾಡಿದ ನ್ಯಾ.ಎ.ಎಸ್ ಓಕಾ (S Oka), ನೀವು ಒಂದು ನಿರ್ಧಾರಕ್ಕೆ ಬರಬೇಕು ಒಂದು ತಿಂಗಳ ಸಮಯ ನೀಡಲಾಗುವುದು, ಸೋಶಿಯಲ್ ಮೀಡಿಯಾದಿಂದ ಎಲ್ಲ ಪೋಸ್ಟ್ ಡಿಲೀಟ್ ಮಾಡಬೇಕು. ನಿಮಗೆ ಒಳ್ಳೆಯ ಭವಿಷ್ಯವಿದೆ. ಉಜ್ವಲ ಭವಿಷ್ಯದ ಕಾರಣದಿಂದ ಪ್ರಕರಣ ಇತ್ಯರ್ಥಕ್ಕೆ ಯೋಚಿಸಿದ್ದೇವೆ. ಆದರೆ ಭಾವನೆಗಳು ಅಧಿಕವಾಗಿದ್ದರೆ ನಾವು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಇಬ್ಬರೂ ಅಧಿಕಾರಿಗಳಿಗೆ ಬುದ್ಧಿ ಮಾತು ಹೇಳಿದರು.

    ನ್ಯಾಯಧೀಶರ ಮಾತಿಗೆ ಒಪ್ಪದ ರೋಹಿಣಿ ಸಿಂಧೂರಿ ಪರ ವಕೀಲರು, ನಮಗೆ ಉಜ್ವಲ ಭವಿಷ್ಯವಿರಬಹುದು. ಆದರೆ ಈ ರೀತಿಯ ಮಾನಹಾನಿ ಮಾಡಿದರೆ ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುವುದು ಹೇಗೆ?. ನಮ್ಮನ್ನು ಜನರು ಬೇರೆ ರೀತಿಯಲ್ಲೇ ನೋಡುತ್ತಾರೆ. ಈ ಹಂತದಲ್ಲಿ ಮೌನವಾಗಿರಲು ಸಾಧ್ಯವಿಲ್ಲ ಎಂದು ಹೇಳಿದರು.

    ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ ಎ.ಎಸ್ ಓಕಾ, ಮೌನವಾಗಿರಲು ಅಥವಾ ಅರ್ಜಿ ಹಿಂತೆಗೆದುಕೊಳ್ಳುವಂತೆ ನಾವು ನಿಮ್ಮನ್ನು ಒತ್ತಾಯಿಸುತ್ತಿಲ್ಲ. ಒಂದು ತಿಂಗಳು ಸಮಯ ನೀಡಲಾಗುವುದು ಫೆ.16ಕ್ಕೆ ಮುಂದಿನ ವಿಚಾರಣೆಗೆ ಪಟ್ಟಿ ಮಾಡಲಾಗುವುದು. ಅಲ್ಲಿಯ ತನಕ ಮಧ್ಯಂತರ ಆದೇಶ ಆದೇಶ ಮುಂದುವರಿಯಲಿದೆ. ಯಾರು ಯಾರ ವಿರುದ್ಧವೂ ಆರೋಪ ಪ್ರತ್ಯಾರೋಪ ಮಾಡಬಾರದು. ಸೋಶಿಯಲ್ ಮೀಡಿಯಾದಲ್ಲಿಯೂ ಪೋಸ್ಟ್ ಮಾಡುವಂತಿಲ್ಲ ಎಂದು ನ್ಯಾಯಾಧೀಶರು ಸೂಚಿಸಿದರು.

  • ಮಾನಹಾನಿ ಕೇಸ್ ರದ್ದು ಕೋರಿ ಡಿ.ರೂಪಾ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

    ಮಾನಹಾನಿ ಕೇಸ್ ರದ್ದು ಕೋರಿ ಡಿ.ರೂಪಾ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

    ಬೆಂಗಳೂರು: ತಮ್ಮ ವಿರುದ್ಧ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಹೂಡಿದ್ದ ಮಾನಹಾನಿ ಕೇಸ್‌ ರದ್ದುಗೊಳಿಸುವಂತೆ ಕೋರಿದ್ದ ಡಿ. ರೂಪಾ ಮೌದ್ಗಿಲ್ (Roopa Moudgil) ಅವರ ಅರ್ಜಿಯನ್ನ ಹೈಕೋರ್ಟ್‌ ವಜಾಗೊಳಿಸಿದೆ.

    ಐಪಿಎಸ್‌ ಅಧಿಕಾರಿ ಡಿ. ರೂಪಾ ವಿರುದ್ಧ ರೋಹಿಣಿ ಸಿಂಧೂರಿ ಅವರು ದಾಖಲಿಸಿದ್ದ ಮಾನಹಾನಿ ಪ್ರಕರಣದ ಅರ್ಜಿಯನ್ನು ಹೈಕೋರ್ಟ್‌ ಸೋಮವಾರ (ಆ.21) ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಆದರೆ ಪ್ರಕರಣ ರದ್ದು ಕೋರಿದ್ದ ಡಿ.ರೂಪಾ‌ ಮೌದ್ಗಿಲ್ ಅರ್ಜಿ ವಜಾಗೊಳಿಸಿದೆ. ಈ ಮೂಲಕ ಹೈಕೋರ್ಟ್ ನಲ್ಲಿ ರೂಪಾ ಮೌದ್ಗಿಲ್ ಗೆ ಹಿನ್ನಡೆ ಉಂಟಾಗಿದ್ದು, ಮತ್ತೆ ಸಂಕಷ್ಟ ಎದುರಾಗಿದೆ. ಮಾನನಷ್ಟ ಮೊಕದ್ದಮೆ ರದ್ದುಪಡಿಸಲು ಹೈಕೋರ್ಟ್ ನಕಾರ ಮಾಡಿದೆ.

    ಪ್ರಕರಣದ ಹಿನ್ನೆಲೆ ಏನು?
    ರೂಪಾ ಮೌದ್ಗಿಲ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ನನ್ನ ವಿರುದ್ಧ ಕೀಳು ಅಭಿರುಚಿಯಿಂದ ಕೂಡಿದ ಆರೋಪ ಮಾಡಿದ್ದಾರೆ. ವಿದ್ಯುನ್ಮಾನ ಮಾಧ್ಯಮದಲ್ಲೂ ಹೇಳಿಕೆ ನೀಡಿದ್ದಾರೆ. ಆ ಆರೋಪಗಳು ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡುವಂತಿವೆ. ನನ್ನ ತೇಜೋವಧೆ ಮಾಡುವ ದುರದ್ದೇಶದಿಂದಲೇ ರೂಪ ಈ ಕೃತ್ಯ ಎಸಗಿದೆ. ಅದು ನನ್ನ ಖಾಸಗಿ, ಸಾಮಾಜಿಕ ಮತ್ತು ವೃತ್ತಿ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿ, ಮಾನಸಿಕ ಯಾತನೆ ಉಂಟು ಮಾಡಿವೆ ಎಂದು ಆರೋಪಿಸಿ ರೋಹಿಣಿ ಸಿಂಧೂರಿ (Rohini Sindhuri) ಅವರು ಐಪಿಎಸ್‌ ಅಧಿಕಾರಿ ಡಿ.ರೂಪಾ ಮೌದ್ಗಿಲ್‌ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಕೋರ್ಟ್ ರೂಪಾ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು, ಆ ನಂತರ ಕೋರ್ಟ್‌ಗೆ ಹಾಜರಾಗಿ ರೂಪಾ ಜಾಮೀನು ಪಡೆದಿದ್ದರು. ಇದನ್ನೂ ಓದಿ: ಇಬ್ಬರು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸರ್ಕಾರ- ಐಪಿಎಸ್ ರೂಪಾ, ಐಎಎಸ್ ರೋಹಿಣಿ ಸಿಂಧೂರಿ ವರ್ಗಾವಣೆ

    ಏನಿದು ವಿವಾದ?
    ಸೋಷಿಯಲ್‌ ಮೀಡಿಯಾ ಮತ್ತು ಮಾಧ್ಯಮಗಳ ಮೂಲಕ ಐಎಎಸ್‌ ಅಧಿಕಾರಿ (IAS Officer) ರೋಹಿಣಿ ಸಿಂಧೂರಿ ಮತ್ತು ಐಪಿಎಸ್‌ ಅಧಿಕಾರಿ ರೂಪಾ ಮೌದ್ಗಿಲ್‌ ಅವರು ಬಹಿರಂಗವಾಗಿ ಕಿತ್ತಾಟಕ್ಕೆ ಇಳಿದಿದ್ದರು. ರೋಹಿಣಿ ವಿರುದ್ಧ ರೂಪಾ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪ ಮಾಡಿದ್ದರು. ಬಳಿಕ ಇಬ್ಬರ ನಡುವೆ ಕಿತ್ತಾಟ ಜೋರಾಗಿತ್ತು. ಮುನೀಶ್‌ ಮೌದ್ಗಿಲ್‌ ಹೆಸರನ್ನೂ ರೂಪಾ ಆರೋಪಗಳಲ್ಲಿ ಉಲ್ಲೇಖಿಸಿದ್ದರು. ಅಧಿಕಾರಿಗಳು ಹೀಗೆ ಬಹಿರಂಗವಾಗಿ ಕಿತ್ತಾಡಬಾರದು ಎಂದು ಹಿರಿಯ ಅಧಿಕಾರಿಗಳು, ಸಚಿವರು ಸಲಹೆ ನೀಡಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಇಬ್ಬರಿಗೂ ಯಾವುದೇ ಹುದ್ದೆ ತೋರಿಸದೇ ವರ್ಗಾವಣೆ ಮಾಡಲಾಗಿತ್ತು. ಇದನ್ನೂ ಓದಿ: ಡಿ.ರೂಪಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ರೋಹಿಣಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರೋಹಿಣಿ ಜೊತೆ ಕಿತ್ತಾಟ – ಮಾತನಾಡದಂತೆ ರೂಪಾಗೆ ನೀಡಿದ್ದ ತಡೆ ತೆರವು

    ರೋಹಿಣಿ ಜೊತೆ ಕಿತ್ತಾಟ – ಮಾತನಾಡದಂತೆ ರೂಪಾಗೆ ನೀಡಿದ್ದ ತಡೆ ತೆರವು

    ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ವಿರುದ್ಧ ಐಪಿಎಸ್ ಅಧಿಕಾರಿ ಡಿ ರೂಪಾ (D roopa) ಮಾತನಾಡದಂತೆ ವಿಧಿಸಲಾಗಿದ್ದ ತಡೆಯನ್ನು ತೆರವುಗೊಳಿಸಲಾಗಿದೆ.

    ಕಳೆದೆರಡು ತಿಂಗಳ ಹಿಂದೆ ಇಬ್ಬರು ಉನ್ನತ ಮಹಿಳಾ ಅಧಿಕಾರಿಗಳ ನಡುವಿನ ಜಟಾಪಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಹಿಣಿ ವಿರುದ್ಧ ಮಾತನಾಡದಂತೆ ರೂಪಾಗೆ ನ್ಯಾಯಾಲಯ ಮಧ್ಯಂತರ ಆದೇಶ ನೀಡಿತ್ತು. ಈ ಮಧ್ಯಂತರ ಆದೇಶವನ್ನು ರೂಪಾ ಪ್ರಶ್ನಿಸಿದ್ದು, ಇದೀಗ ನ್ಯಾಯಾಲಯ ಪ್ರತಿಬಂಧಕಾಜ್ಞೆಯನ್ನು ತೆರವುಗೊಳಿಸಿದೆ. ಇದನ್ನೂ ಓದಿ: ರಾಜ್ಯ ನಾಯಕರು ತಂದ ಪಟ್ಟಿ ನೋಡಿ ಮೋದಿ ಕೆಂಡ : ಬಿಜೆಪಿ ಸಭೆಯಲ್ಲಿ ಏನಾಯ್ತು?

    ಈ ಹಿಂದೆ ರೋಹಿಣಿ ಸಿಂಧೂರಿ ವಿರುದ್ಧ ರೂಪಾ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ದೂರು ಸಲ್ಲಿಸಿದ್ದರು. ರೋಹಿಣಿ ವಿರುದ್ಧ ಇರುವ ಆರೋಪ ಪ್ರಕರಣಗಳಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಈ ವೇಳೆ ರೂಪಾ ಅವರಿಂದ ವೈಯಕ್ತಿಕ ಮಟ್ಟದಲ್ಲಿ ವಾಗ್ದಾಳಿಗೆ ತುತ್ತಾಗಿದ್ದ ರೋಹಿಣಿಗೆ ಕೋರ್ಟ್ ಮೂಲಕ ಬಿಗ್ ರಿಲೀಫ್ ಸಿಕ್ಕಿತ್ತು.

    ರೂಪಾಗೆ ಸೋಷಿಯಲ್ ಮೀಡಿಯಾ ಸೇರಿದಂತೆ ಯಾವುದೇ ರೀತಿಯ ಮಾಧ್ಯಮಗಳಲ್ಲಿ ರೋಹಿಣಿ ವಿರುದ್ಧ ಮಾನಹಾನಿಕರ ಹೇಳಿಕೆ, ಬರಹಗಳನ್ನು ಪೋಸ್ಟ್ ಮಾಡದಂತೆ ಕೋರ್ಟ್ ಮಧ್ಯಂತರ ತಡೆಯಾಜ್ಞೆ ವಿಧಿಸಿತ್ತು. ಇದನ್ನೂ ಓದಿ: ಹಾಸನದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡಿದರೆ ಯಾವುದೇ ಕಾರಣಕ್ಕೂ ಗೆಲ್ಲಲ್ಲ: HDK

  • ರೂಪಾ ವಿರುದ್ಧ ಮತ್ತೊಂದು ಅಸ್ತ್ರ ಪ್ರಯೋಗಿಸಿದ ರೋಹಿಣಿ

    ರೂಪಾ ವಿರುದ್ಧ ಮತ್ತೊಂದು ಅಸ್ತ್ರ ಪ್ರಯೋಗಿಸಿದ ರೋಹಿಣಿ

    ಬೆಂಗಳೂರು: ಐಪಿಎಸ್ ಅಧಿಕಾರಿ ರೂಪಾ (D Roopa) ವಿರುದ್ಧ ಐಎಎಸ್ ಅಧಿಕಾರ ರೋಹಿಣಿ ಸಿಂಧೂರಿ (Rohini Sindhuri) ಒಂದರ ಮೇಲೊಂದು ಕಾನೂನು ಸಮರ ಮಾಡುತ್ತಿದ್ದಾರೆ. ಈಗಾಗಲೇ ಮಾನನಷ್ಟ ಮೊಕದ್ದಮೆ ದಾಖಲು ಮಾಡಿರುವ ರೋಹಿಣಿ ಈಗ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದಾರೆ.

    ಈಗಾಗಲೇ ಸಿಟಿ ಸಿವಿಲ್ ಕೋರ್ಟ್ ರೋಹಿಣಿ ಸಿಂಧೂರಿ ವಿರುದ್ಧ ಯಾವುದೇ ಹೇಳಿಕೆ ನೀಡಬಾರದು, ತಮ್ಮ ಫೇಸ್‌ಬುಕ್ ಅಲ್ಲಿಯೂ ಯಾವುದೇ ಪೋಸ್ಟ್ ಹಾಕಬಾರದು ಎಂದು ಐಪಿಎಸ್ ರೂಪಾ ಅವರಿಗೆ ಆದೇಶ ನೀಡಿತ್ತು. ಆದರೆ ರೂಪಾ ಅವರು ರೋಹಿಣಿ ಸಿಂಧೂರಿ ವಿರುದ್ಧ ಮತ್ತೆ ಪೋಸ್ಟ್‌ಗಳನ್ನು ಮಾಡಿದ್ದು, ಈ ಹಿನ್ನೆಲೆಯಲ್ಲಿ ರೋಹಿಣಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಮಧ್ಯಂತರ ರಿಲೀಫ್‌ – ಷರತ್ತು ಏನು?

    ಬುಧವಾರ ರೋಹಿಣಿ ಸಿಂಧೂರಿ ಅರ್ಜಿ ಸಲ್ಲಿಸಿದ್ದು, ಗುರುವಾರ ಈ ಬಗ್ಗೆ ವಿಚಾರಣೆ ನಡೆಯಲಿದೆ. ರೂಪಾ ವಿರುದ್ಧ ಸಿಂಧೂರಿ ಮತ್ತೊಂದು ಕಾನೂನು ಹೋರಾಟ ಮಾಡುತ್ತಿದ್ದು, ಇದು ಎಲ್ಲಿವರೆಗೆ ಹೋಗಿ ತಲುಪಲಿದೆಯೋ ನೋಡಬೇಕಿದೆ. ಇದನ್ನೂ ಓದಿ: ದುಡ್ಡು ಕೊಟ್ಟು ಮೋದಿ ರೋಡ್ ಶೋಗೆ ಜನ ಕರೆಸುತ್ತಾರೆ – ಸಿದ್ದರಾಮಯ್ಯ ಕಿಡಿ

  • ರೂಪಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಕೇಸ್ – ಕೋರ್ಟ್‌ನಲ್ಲಿ ಇಂದು ಏನಾಯ್ತು?

    ರೂಪಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಕೇಸ್ – ಕೋರ್ಟ್‌ನಲ್ಲಿ ಇಂದು ಏನಾಯ್ತು?

    ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri), ಐಪಿಎಸ್ ಅಧಿಕಾರಿ ಡಿ. ರೂಪಾ (D Roopa) ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

    ಪತಿ ಸುಧೀರ್ ರೆಡ್ಡಿ (Sudhir Reddy) ಜೊತೆ ಖುದ್ದು 24ನೇ ಎಸಿಎಂಎಂ ಕೋರ್ಟ್‌ಗೆ (ACMM Court) ಹಾಜರಾಗಿದ್ದ ರೋಹಿಣಿ ಸಿಂಧೂರಿ, ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದರು. ಇದನ್ನೂ ಓದಿ: ರಾಜ್ಯ ಭ್ರಷ್ಟಾಚಾರದ ರಾಜಧಾನಿಯಾಗಿರೋ ಬಗ್ಗೆ ಮೋದಿ ಏಕೆ ಮಾತಾಡ್ತಿಲ್ಲ?: ಡಿಕೆಶಿ

    `ತಡೆಯಾಜ್ಞೆ ಇದ್ದರೂ, ರೂಪಾ ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಹಾಕುತ್ತಲೇ ಇದ್ದಾರೆ. ಅವಹೇಳನ ಬರವಣಿಗೆ ಪೋಸ್ಟ್ ಮಾಡುತ್ತಿದ್ದಾರೆ. ಕೆಲವೊಮ್ಮೆ ಮಾತನಾಡಿದ್ರೆ ಪರವಾಗಿಲ್ಲ, ಪದೇ ಪದೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಯಡಿಯೂರಪ್ಪರಿಗೆ ಕಣ್ಣೀರು ಹಾಕಿಸಿದ ಬಗ್ಗೆ ಮೋದಿ ಉತ್ತರ ಕೊಡಲಿ- ಡಿಕೆಶಿ

    ಚಾಮರಾಜನಗರದ ಅಮ್ಲಜನಕ ಸಿಲಿಂಡರ್ ದುರಂತ ಪ್ರಕರಣದಲ್ಲಿ ಈಗಾಗಲೇ ಸರ್ಕಾರ ತನಿಖೆ ನಡೆಸಿದೆ. ಸರ್ಕಾರ ವರದಿ ನೀಡಿದ್ದರೂ ಉದ್ದೇಶ ಪೂರ್ವಕವಾಗಿ ಅವಮಾನ ಮಾಡುತ್ತಿದ್ದಾರೆ ಎಂದು ಜಡ್ಜ್ ಗಮನಕ್ಕೆ ತಂದರು.

    ರೋಹಿಣಿ ಹೇಳಿಕೆ ಆಧರಿಸಿ, ಡಿ.ರೂಪಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ ಕೋರ್ಟ್ ಮಾರ್ಚ್ 3ಕ್ಕೆ ವಿಚಾರಣೆ ಮುಂದೂಡಿದೆ.

  • ಕೋರ್ಟ್ ಎಚ್ಚರಿಕೆ ಬಳಿಕವೂ ಸಿಂಧೂರಿ ವಿರುದ್ಧ ಗುಡುಗಿದ ರೂಪಾ

    ಕೋರ್ಟ್ ಎಚ್ಚರಿಕೆ ಬಳಿಕವೂ ಸಿಂಧೂರಿ ವಿರುದ್ಧ ಗುಡುಗಿದ ರೂಪಾ

    ಬೆಂಗಳೂರು/ಮೈಸೂರು: ಕಳೆದ ಮೂರು ದಿನಗಳ ಹಿಂದೆಯಷ್ಟೇ ಸಿಟಿ ಸಿವಿಲ್ ಕೋರ್ಟ್ (City Civil Court) ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ವಿರುದ್ಧ ಮಾತನಾಡದಂತೆ ಎಚ್ಚರಿಕೆ ಕೊಟ್ಟಿತ್ತು. ಇದಾದ ಬಳಿಕವೂ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ (D Roopa), ಸಿಂಧೂರಿ ವಿರುದ್ಧ ಗುಡುಗಿದ್ದಾರೆ.

    ರೋಹಿಣಿ ವಿರುದ್ಧ ಸಾಲು ಸಾಲು ಆರೋಪಗಳನ್ನ ಮಾಡಿ ಮತ್ತೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರೋಹಿಣಿ ವಿರುದ್ಧ ರೂಪಾ ಮಾತನಾಡಬಾರದು- ಕೋರ್ಟ್ ಆದೇಶ

    Roopa Rohini Sindhuri

    ರೂಪಾ ಫೇಸ್‌ಬುಕ್ ಪುಟದಲ್ಲೇನಿದೆ?
    ಮಾನ್ಯ ಎಂಪಿ ಅವರ ಪ್ರಕಾರ ಡಿಸಿಯಾಗಿದ್ದ ರೋಹಿಣಿ ಸಿಂಧೂರಿ ಕೋವಿಡ್ ಸಮಯದಲ್ಲಿ ಮರಣದ ಸಂಖ್ಯೆ ಮುಚ್ಚಿಟ್ಟವರು ಯಾರು? ಯಾಕೆ? ಮತ್ತೆ ಇದರ ಮೇಲೆ ಕ್ರಮ ಆಯಿತೇ? ಇದನ್ನೂ ಓದಿ: ಕ್ಷಮೆ ಕೇಳದಿದ್ದರೆ 1 ಕೋಟಿ ರೂ. ಮಾನನಷ್ಟ ಕೇಸ್ – ರೂಪಾಗೆ ರೋಹಿಣಿ ಎಚ್ಚರಿಕೆ

    ROHINI SINDURI

    ಮೈಸೂರು ಎಟಿಐ (Mysuru ATI) ನಿಂದ ರೋಹಿಣಿ ಸಿಂಧೂರಿ ಅವರು ಸರ್ಕಾರಿ ಸಾಮಾನುಗಳನ್ನ ತಗೆದುಕೊಂಡು ಹೋದದ್ದು, ಅವುಗಳು ಡಿಸಿ ಮನೆಯಲ್ಲಿ ಕೂಡ ಇಲ್ಲ ಎಲ್ಲಿ ಹೋದವು? ಸಿಂಧೂರಿ ಅವರಿಗೆ ನೋಟಿಸ್ ಜಾರಿ ಮಾಡಿದ್ದು ವರದಿಯಾಗಿದೆ. ಇದರ ಮೇಲೆ ಕ್ರಮ ಆಯಿತೇ? ಸರ್ಕಾರಿ ವಸ್ತು 50 ರೂಪಾಯಿ ಇರಲಿ 50 ಕೋಟಿ ಇರಲಿ ತಪ್ಪು ತಪ್ಪೇ. 1,000 ರೂ. ಲಂಚ ತಗೆದುಕೊಂಡವರೂ ಕೂಡ ಲೋಕಾಯುಕ್ತ ವಿಚಾರಣೆಗೆ ಒಳಗಾಗಿದ್ದಾರೆ. ಕಾನೂನು ಡಿಸಿಗೂ ಗುಮಾಸ್ತನಿಗೂ ಒಂದೇ ಎಂದು ಬರೆದುಕೊಂಡಿದ್ದಾರೆ.

  • `ಸತ್ಯ ಮೇವ ಜಯತೆ’ ಎಂದ ರೂಪಾ

    `ಸತ್ಯ ಮೇವ ಜಯತೆ’ ಎಂದ ರೂಪಾ

    ಬೆಂಗಳೂರು: ಐಪಿಎಸ್ ಅಧಿಕಾರಿ ಡಿ. ರೂಪಾ (D Roopa) ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಅವರ ನಡುವಿನ ಜಟಾಪಟಿಗೆ ಸಿಟಿ ಸಿವಿಲ್ ಕೋರ್ಟ್ (City Civil Court) ಬ್ರೇಕ್ ಹಾಕಿತ್ತು.

    ಡಿ. ರೂಪಾ ವಿರುದ್ಧ ಮಾಡಿದ್ದ ಆರೋಪಗಳನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಕೋರ್ಟ್ ಮೆಟ್ಟಿಲೇರಿದ್ದರು. ವಿನಾಕಾರಣ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರೋ ರೂಪಾ ಅವರು ಮಾತನಾಡದಂತೆ ತಡೆಯಾಜ್ಞೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ರೋಹಿಣಿ ಸಿಂಧೂರಿ ಅವರ ವಾದ ಆಲಿಸಿದ ಕೋರ್ಟ್ ರೋಹಿಣಿ ಸಿಂಧೂರಿ ಅವರ ವಿರುದ್ಧ ರೂಪಾ ಮಾತನಾಡದಂತೆ ತಡೆಯಾಜ್ಞೆ ನೀಡಿತ್ತು. ಇದನ್ನೂ ಓದಿ: ರೋಹಿಣಿ ವಿರುದ್ಧ ರೂಪಾ ಮಾತನಾಡಬಾರದು- ಕೋರ್ಟ್ ಆದೇಶ

    Roopa Rohini Sindhuri

    ನಂತರ ಐಪಿಎಸ್ (IPS) ಅಧಿಕಾರಿ ಡಿ.ರೂಪಾ ಪರ ವಕೀಲರು ತಮ್ಮ ಮನವಿ ಪುರಸ್ಕರಿಸುವಂತೆ ಮನವಿ ಮಾಡಿಕೊಂಡರು. ಈ ಹಿನ್ನೆಲೆಯಲ್ಲಿ ಕೋರ್ಟ್ ರೂಪಾ ಪರ ವಕೀಲರ ಮನವಿಯನ್ನೂ ಪುರಸ್ಕರಿಸಿದೆ. ಹಾಗಾಗಿ ರೂಪಾ ಫೇಸ್‌ಬುಕ್ (Facebook) ವಾಲ್‌ನಲ್ಲಿ ತಮ್ಮ ವಾದ ಕೇಳಲು ಅವಕಾಶ ನೀಡಿದ ಕೋರ್ಟ್‌ಗೆ ನಾನು ಅಬಾರಿಯಾಗಿದ್ದೇನೆ. ಜೊತೆಗೆ ನನ್ನ ಬೆಂಬಲಕ್ಕೆ ನಿಂತವರಿಗೆ ನಾನು ಧನ್ಯವಾದಗಳನ್ನ ತಿಳಿಸಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕ್ಷಮೆ ಕೇಳದಿದ್ದರೆ 1 ಕೋಟಿ ರೂ. ಮಾನನಷ್ಟ ಕೇಸ್ – ರೂಪಾಗೆ ರೋಹಿಣಿ ಎಚ್ಚರಿಕೆ

    ROHINI SINDURI

    ನನಗೆ ಬೆಂಬಲ ಕೋರಿ ಮಾಡಿದ ಸಂದೇಶಗಳಿಂದ ನನ್ನ ಮೆಸೇಜ್‌ ಬಾಕ್ಸ್ ಪ್ರವಾಹದಂತೆ ತುಂಬಿ ಹೋಗಿದೆ, ನನಗೆ ಅತೀವ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದು ಕೊನೆಯಲ್ಲಿ `ಸತ್ಯ ಮೇವ ಜಯತೆ’ ಎಂದು ಪೋಸ್ಟ್ ಕೊನೆಗೊಳಿಸಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • IAS vs IPSː ರೋಹಿಣಿ ಸಿಂಧೂರಿಗೆ ಬಿಗ್‌ ರಿಲೀಫ್‌

    IAS vs IPSː ರೋಹಿಣಿ ಸಿಂಧೂರಿಗೆ ಬಿಗ್‌ ರಿಲೀಫ್‌

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರೂಪಾ ವಿರುದ್ಧ ರೋಹಿಣಿ ಸಿಂಧೂರಿ ಮತ್ತೊಂದು ದೂರು

    ರೂಪಾ ವಿರುದ್ಧ ರೋಹಿಣಿ ಸಿಂಧೂರಿ ಮತ್ತೊಂದು ದೂರು

    ಬೆಂಗಳೂರು: ಸಿಟಿ ಸಿವಿಲ್ ಕೋರ್ಟ್ ನಿಂದ ರಿಲೀಫ್ ಸಿಕ್ಕ ಬೆನ್ನಲ್ಲೇ ಇದೀಗ ಮತ್ತೆ ಐಪಿಎಸ್ ಅಧಿಕಾರಿ ಡಿ. ರೂಪಾ (D Roopa) ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ದೂರು ನೀಡಿದ್ದಾರೆ.

    ರೂಪ ವಿರುದ್ಧ ನಾನು ನೀಡಿದ್ದ ದೂರಿನ ಸಂಬಂಧ ಎಫ್‍ಐಆರ್ (FIR) ದಾಖಲಿಸಿಲ್ಲ. ಹೀಗಾಗಿ ಸೆಕ್ಷನ್ 354ಸಿ, 463 ಅಡಿ ಪ್ರಕರಣ ದಾಖಲಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ರೋಹಿಣಿ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರೋಹಿಣಿ ವಿರುದ್ಧ ರೂಪಾ ಮಾತನಾಡಬಾರದು- ಕೋರ್ಟ್ ಆದೇಶ

    ಸಿಂಧೂರಿಗೆ ರಿಲೀಫ್: ಕಳೆದ ಮೂರ್ನಾಲ್ಕು ದಿನಗಳಿಂದ ವೈಯಕ್ತಿಕ ಮಟ್ಟದಲ್ಲಿ ವಾಗ್ದಾಳಿಗೆ ತುತ್ತಾಗಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಕೋರ್ಟ್ ಮೂಲಕ ಬಿಗ್ ರಿಲೀಫ್ ಸಿಕ್ಕಿದೆ. ಸರ್ಕಾರದ ಆದೇಶ ಮೀರಿ ರೋಹಿಣಿ ವಿರುದ್ಧ ಆರೋಪಗಳನ್ನು ಮುಂದುವರೆಸಿದ್ದ ಐಪಿಎಸ್ ಅಧಿಕಾರಿ ಡಿ ರೂಪಾ ಅವರಿಗೆ ಯಾವುದೇ ಮಾನಹಾನಿಕರ ಹೇಳಿಕೆ ನೀಡದಂತೆ ಕೋರ್ಟ್ ನಿರ್ಬಂಧ ಹೇರಿ ಮಧ್ಯಂತರ ತಡೆಯಾಜ್ಞೆ ನೀಡಿದೆ.

    ಸೋಷಿಯಲ್ ಮೀಡಿಯಾ ಸೇರಿ ಯಾವುದೇ ರೀತಿಯ ಮಾಧ್ಯಮಗಳಲ್ಲಿ ಮಾನಹಾನಿಕರ ಹೇಳಿಕೆ, ಬರಹಗಳಿಗೆ ಕೋರ್ಟ್ ಮಧ್ಯಂತರ ತಡೆಯಾಜ್ಞೆ ವಿಧಿಸಿದೆ. ಡಿ ರೂಪಾಗೆ ಆಕ್ಷೇಪಣೆ ಸಲ್ಲಿಸು ಕೋರ್ಟ್ ಮಾರ್ಚ್ ಏಳರವರೆಗೂ ಅವಕಾಶ ನೀಡಿದೆ. ನಿನ್ನೆಯಷ್ಟೇ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಮೊರೆ ಹೋಗಿದ್ರು. ಬುಧವಾರ 1 ಕೋಟಿ ಮೊತ್ತದ ಮಾನನಷ್ಟ ಕೇಸ್ ಹಾಕೋದಾಗಿ ಡಿ ರೂಪಾಗೆ ರೋಹಿಣಿ ಸಿಂಧೂರಿ ಲೀಗಲ್ ನೊಟೀಸ್ ಕಳಿಸಿದ್ರು. ಇದಕ್ಕೆ ಡಿ ರೂಪಾ ಇನ್ನೂ ಉತ್ತರಿಸಿಲ್ಲ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರೋಹಿಣಿ ವಿರುದ್ಧ ರೂಪಾ ಮಾತನಾಡಬಾರದು- ಕೋರ್ಟ್ ಆದೇಶ

    ರೋಹಿಣಿ ವಿರುದ್ಧ ರೂಪಾ ಮಾತನಾಡಬಾರದು- ಕೋರ್ಟ್ ಆದೇಶ

    ಬೆಂಗಳೂರು: ಕಳೆದ 5 ದಿನದಿಂದ ರೋಹಿಣಿ ಸಿಂಧೂರಿ (Rohini Sindhuri) ಹಾಗೂ ರೂಪಾ (D. Roopa) ಮಧ್ಯೆ ನಡೆಯುತ್ತಾ ಇದ್ದ ದೊಡ್ಡ ಪ್ರಹಸನಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ.

    ಸಾಮಾಜಿಕ ಜಾಲತಾಣ (Social Media) ದಲ್ಲಿ ಬಡಿದಾಡಿಕೊಳ್ತಾ ಇದ್ದ ರೋಹಿಣಿ-ರೂಪಾ ಇಬ್ಬರೂ ಪರಸ್ಪರ ಮಾತನಾಡದಂತೆ ತಡೆಯಾಜ್ಞೆ ನೀಡಿದೆ. ರೋಹಿಣಿ ವಿರುದ್ಧ ರೂಪಾ ಮಾತನಾಡದಂತೆ ನಿರ್ಬಂಧ ಹೇರಿ ಕೋರ್ಟ್ ಆದೇಶ ನೀಡಿದೆ. ಶನಿವಾರ ರಾತ್ರಿ ಪ್ರಾರಂಭವಾಗಿದ್ದ ರೂಪಾ ಮತ್ತು ರೋಹಿಣಿ ಸಿಂಧೂರಿ ನಡುವಿನ ಕಾದಾಟಕ್ಕೆ ಕೊನೆಗೆ ಬ್ರೇಕ್ ಬಿದ್ದಂತೆ ಆಗಿದೆ.

    ಹೌದು, ರೂಪಾ ತನ್ನ ಫೇಸ್ ಬುಕ್ (Facebook) ಅಕೌಂಟ್ ಅಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಗಲಾಟೆ ಶುರುಮಾಡಿಕೊಂಡಿದ್ರು. ಈ ಪ್ರಕರಣ ಆರೋಪ ಪ್ರತ್ಯಾರೋಪದೊಂದಿಗೆ ಬರೋಬ್ಬರಿ 5 ದಿನಗಳ ಕಾಲ ಕಾದಾಟವೇ ನಡೆದುಹೋಗಿತ್ತು. ಇದನ್ನೆಲ್ಲಾ ನೋಡಿದ ಸರ್ಕಾರ ಇಬ್ಬರನ್ನು ವರ್ಗಾವಣೆ ಮಾಡಿದ್ರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಇದನ್ನೂ ಓದಿ: ಕ್ಷಮೆ ಕೇಳದಿದ್ದರೆ 1 ಕೋಟಿ ರೂ. ಮಾನನಷ್ಟ ಕೇಸ್ – ರೂಪಾಗೆ ರೋಹಿಣಿ ಎಚ್ಚರಿಕೆ

    ಇಬ್ಬರು ಎಂದಿನಂತೆ ಬಡಿದಾಟ ಮುಂದುವರಿಸಿ ಕೊನೆಗೆ ರೂಪಾ ವಿರುದ್ಧ ರೋಹಿಣಿ ಕೋರ್ಟ್ ಮೆಟ್ಟಿಲೇರಿದ್ರು. ನನ್ನ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ನಿರ್ಬಂಧ ಹೇರಬೇಕು ಎಂದಿದ್ರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ (Court) ಕೊನೆಗೂ ರೂಪಾಗೆ ಬ್ರೇಕ್ ಹಾಕಿದ್ದು ಬಹಿರಂಗವಾಗಿ ಎಲ್ಲೂ ಮಾತನಾಡದಂತೆ ತಡೆಯಾಜ್ಞೆಯನ್ನು ನೀಡಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k