Tag: ಡಿ ಬಾಸ್

  • ದರ್ಶನ್ ಸಿನಿ ಜರ್ನಿಗೆ 28 ವರ್ಷ: ‘ಡಿ’ ಫ್ಯಾನ್ಸ್ ಸಂಭ್ರಮ

    ದರ್ಶನ್ ಸಿನಿ ಜರ್ನಿಗೆ 28 ವರ್ಷ: ‘ಡಿ’ ಫ್ಯಾನ್ಸ್ ಸಂಭ್ರಮ

    ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಕನ್ನಡ ಇಂಡಸ್ಟ್ರಿಗೆ ಕಾಲಿಟ್ಟು 28 ವರ್ಷ. ಈ ಜರ್ನಿಯನ್ನ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸಂಭ್ರಮ ಪಡುತ್ತಿದ್ದಾರೆ. 1997ರಲ್ಲಿ ಮಹಾಭಾರತ ಸಿನಿಮಾ ಮೂಲಕ ಬಣ್ಣ ಹಚ್ಚಿದ ನಟ ದರ್ಶನ್ ಸುದೀರ್ಘ 28 ವರ್ಷಗಳನ್ನ ಚಿತ್ರರಂಗದಲ್ಲಿ ಪೂರೈಸಿದ್ದಾರೆ. ನಟ ದರ್ಶನ್ ಈ ಜರ್ನಿಯಲ್ಲಿ ಮಾಡಿದ ಭಿನ್ನ ವಿಭಿನ್ನ ಪಾತ್ರಗಳಿಂದ ಅಭಿಮಾನಿಗಳಿಂದ ‘ಡಿ’ ಬಾಸ್ ಎಂದು ಕರೆಸಿಕೊಂಡಿದ್ದಾರೆ.‌

    28 ವರ್ಷಗಳಿಂದ ನಿಯತ್ತಿನಿಂದ ಕಟ್ಟಿರುವ ಸ್ವಂತ್ ಬ್ರ್ಯಾಂಡ್ ಇದು. ಯಾರಿಂದಲೂ ಸುಲಭವಾಗಿ ಕೆಡವಲು ಸಾಧ್ಯವಿಲ್ಲ ಎಂದು ಬರೆದುಕೊಂಡು ದರ್ಶನ್ ಅವರ ಅಭಿಮಾನಿಗಳ ಅಧಿಕೃತ ಡಿ ಕಂಪನಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಸದ್ಯ ದರ್ಶನ್ ಡೆವಿಲ್ ಸಿನಿಮಾವನ್ನ ಮುಗಿಸಿದ್ದಾರೆ. ಡೆವಿಲ್ ಸಿನಿಮಾದ ಒಂದೊಂದೇ ಅಪ್‌ಡೇಟ್ ನೀಡ್ತಿದ್ದಾರೆ. ಇದೇ ಆ.15 ಕ್ಕೆ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಲಿದೆ. ಇದನ್ನೂ ಓದಿ: ವಿಷ್ಣು ಸರ್‌ ನನ್ನಂಥ ಅಭಿಮಾನಿಗಳ ಹೃದಯದಲ್ಲಿ ಎಂದೆಂದಿಗೂ ಶಾಶ್ವತ – ನಟ ಉಪೇಂದ್ರ

    ಮತ್ತೊಂದು ಕಡೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ 7 ಜನ ಆರೋಪಿಗಳಿಗೆ ಸುಪ್ರೀಂ ಸಂಕಷ್ಟ ಎದುರಾಗಿದೆ. ಸುಪ್ರೀಂ ಕೋರ್ಟ್ ಆದೇಶ ಕಾಯ್ದಿರಿಸಿರೋದು ದರ್ಶನ್ & ಗ್ಯಾಂಗ್‌ಗೆ ಟೆನ್ಷನ್ ಉಂಟು ಮಾಡಿದೆ. ಬೇಲ್ ಭವಿಷ್ಯ ಏನಾಗಲಿದೆ ಅಂತಾ ದರ್ಶನ್ & ಗ್ಯಾಂಗ್ ಎದುರು ನೋಡುತ್ತಿದೆ.

  • Exclusive | ರೇಣುಕಾಸ್ವಾಮಿ ಕೇಸ್‌ – ʻಡಿ ಬಾಸ್‌ʼ ಫ್ಯಾನ್ಸ್‌ ವಿರುದ್ಧ ನಟಿ ರಮ್ಯಾ ಕೆಂಡ

    Exclusive | ರೇಣುಕಾಸ್ವಾಮಿ ಕೇಸ್‌ – ʻಡಿ ಬಾಸ್‌ʼ ಫ್ಯಾನ್ಸ್‌ ವಿರುದ್ಧ ನಟಿ ರಮ್ಯಾ ಕೆಂಡ

    ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಕುಟುಂಬಕ್ಕೆ ನ್ಯಾಯ ಸಿಗುತ್ತದೆ ಎಂದು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದ ನಟಿ ರಮ್ಯಾ (Ramya) ಇದೀಗ ದರ್ಶನ್‌ ಅಭಿಮಾನಿಗಳ ವಿರುದ್ಧ ತಿರುಗಿಬಿದ್ದಿದ್ದಾರೆ.

    ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿಯೊಂದನ್ನು ಹಂಚಿಕೊಂಡಿರುವ ನಟಿ, ಎಲ್ಲಾ ಡಿಬಾಸ್ ಅಭಿಮಾನಿಗಳಿಗೆ ನನ್ನ ಇನ್ ಸ್ಟಾಗ್ರಾಂಗೆ ಸ್ವಾಗತ ಅಂತಲೂ ಬರೆದುಕೊಂಡಿದ್ದಾರೆ. ಇದಕ್ಕೆ ಕಾರಣವೂ ಇದೆ. ಇತ್ತೀಚೆಗೆ ʻಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬಹುದು ಎಂದು ನಾನು ನಂಬಿದ್ದೇನೆ. ಭಾರತದ ಸಾಮಾನ್ಯ ಪ್ರಜೆಗೂ ಸುಪ್ರೀಂ ಕೋರ್ಟ್ ಆಶಾಕಿರಣʼ ಎಂದು ತಮ್ಮ ಇನ್‌ಸ್ಟಾ ಸ್ಟೇಟಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು. ನಟಿ ರಮ್ಯಾ ಪೋಸ್ಟ್ ವೈರಲ್ ಆಗ್ತಿದ್ದಂತೆ ದರ್ಶನ್ ಅಭಿಮಾನಿಗಳು ಕೆಟ್ಟ ಪದಗಳಿಂದ ರಮ್ಯಾ ವಿರುದ್ದ ಸೋಶಿಯಲ್ ಮಿಡಿಯಾದಲ್ಲಿ ಕಾಮೆಂಟ್ಸ್ ಮಾಡೋದ್ರ ಜೊತೆಗೆ ಟ್ರೋಲ್ ಮಾಡಿದ್ರು. ಇದೀಗ ನಟಿ ರಮ್ಯಾ ಖಡಕ್ ಆಗಿ ತಿರುಗೇಟು ಕೊಟ್ಟಿದ್ದಾರೆ.

    ರಮ್ಯಾ ಇನ್‌ಸ್ಟಾ ಸ್ಟೋರಿಯಲ್ಲಿ ಏನಿದೆ?
    ಮೊದಲ ಪೋಸ್ಟ್‌ನಲ್ಲಿ ʻಕೇಸ್‌ ಯಾವುದೇ ಇರಲಿ, ಯಾರದ್ದೇ ಇರಲಿ, ಸದಾ ನ್ಯಾಯದ ಪರʼ ಎನ್ನುವ ʻತೆರೆಯಮೇಲಷ್ಟೇ ಅಲ್ಲ ನಿಜ ಜೀವನದಲ್ಲೂ HIROIN ರಮ್ಯಾ ಎಂದು ಬರೆಯಲಾಗಿದೆ. ಅಲ್ಲದೇ ರಮ್ಯಾ ಎರಡು ದಿನಗಳ ಹಿಂದೆ ಮಾಡಿದ ಪೋಸ್ಟ್‌ ಇದೆ. ಇದರೊಂದಿಗೆ ʻಎಲ್ಲಾ ಡಿಬಾಸ್ ಅಭಿಮಾನಿಗಳಿಗೆ ನನ್ನ ಇನ್ ಸ್ಟಾಗ್ರಾಂಗೆ ಸ್ವಾಗತ… ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ಯಾಕೆ ನ್ಯಾಯ ಸಿಗಬೇಕು ಅನ್ನೋದಕ್ಕೇ ನಿಮ್ಮ ಕಾಮೆಂಟ್ಸ್‌ಗಳೇ ಸಾಕ್ಷಿʼ ಅಂತ ಮತ್ತೊಂದು ಪೋಸ್ಟ್‌ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ದರ್ಶನ್‌ ಜಾಮೀನು ಭವಿಷ್ಯ | ನಾವು ಹೈಕೋರ್ಟ್ ಮಾಡಿದ ತಪ್ಪು ಮಾಡಲ್ಲ, ತರಾತುರಿಯಲ್ಲಿ ಆದೇಶ ಕೊಡಲ್ಲ – ಸುಪ್ರೀಂ

    ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್, ಪವಿತ್ರಾಗೌಡ ಸೇರಿ 17 ಆರೋಪಿಗಳು ಬಂಧನವಾಗಿದ್ದರು. ಜೈಲುವಾಸದ ನಂತರ ಎಲ್ಲಾ ಆರೋಪಿಗಳು ಜಾಮೀನು ಪಡೆದು ಆಚೆ ಬಂದಿದ್ದರು. ಇದೀಗ ದರ್ಶನ್‌ಗೆ ರಾಜ್ಯ ಹೈಕೋರ್ಟ್‌ (Karnataka High Court) ನೀಡಿ‌ದ್ದ ಜಾಮೀನು ಆದೇಶ ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಗಿದಿದೆ. ನ್ಯಾ.ಪಾರ್ದಿವಾಲಾ ನೇತೃತ್ವದ ದ್ವಿ-ಸದಸ್ಯ ಪೀಠದಲ್ಲಿ ನಡೆಸಿದ್ದು, ಆದೇಶ ಕಾಯ್ದಿರಿಸಲಾಗಿದೆ. ಇದನ್ನೂ ಓದಿ: ದರ್ಶನ್‌-ಪವಿತ್ರಾ ಲಿವ್‌ ಇನ್‌ ರಿಲೇಷನ್‌ ಶಿಪ್‌ನಲ್ಲಿದ್ದರು: ಸರ್ಕಾರ ಪರ ವಕೀಲ

    ಹೈಕೋರ್ಟ್‌ ರೀತಿ ತರಾತುರಿಯಲ್ಲಿ ಆದೇಶ ನೀಡುವುದಿಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್‌ ಒಂದು ವಾರದಲ್ಲಿ ಆದೇಶ ಪ್ರಕಟಿಸುವುದಾಗಿ ಹೇಳಿದೆ. ಒಂದೂವರೆ ಗಂಟೆಗಳ ಕಾಲ ವಾದ-ಪ್ರತಿವಾದ ಆಲಿಸಿ ಕಡೆಯಲ್ಲಿ ಇತರೇ ಆರೋಪಿಗಳ ಪರ ವಕೀಲರ ಮಾಹಿತಿ ಕೇಳಿದೆ. ಎಲ್ಲ ಆರೋಪಿಗಳ ಪರ ವಕೀಲರು ಲಿಖಿತ ವಾದ ಮಂಡಿಸಬಹುದು. ಒಂದು ವಾರದಲ್ಲಿ ಮೂರು ಪುಟಗಳ ಮಾಹಿತಿ ನೀಡಬೇಕು. ಬಳಿಕ ಆದೇಶ ನೀಡುವುದಾಗಿ ಕೋರ್ಟ್‌ ಹೇಳಿದೆ. ಇದನ್ನೂ ಓದಿ: ಥಾಯ್ಲೆಂಡ್‌ನಲ್ಲಿ ಮ್ಯಾಂಗೋ ಸ್ಟಿಕ್ಕಿ ರೈಸ್ ಸವಿದ ದರ್ಶನ್ ವಿಜಯಲಕ್ಷ್ಮಿ

  • ಕಾರ ಹುಣ್ಣಿಮೆ ನಿಮಿತ್ತ ಎತ್ತುಗಳ ಮೇಲೆ ಡಿ ಬಾಸ್ ಚಿತ್ರ ಬಿಡಿಸಿ ರೈತರ ಸಂಭ್ರಮ

    ಕಾರ ಹುಣ್ಣಿಮೆ ನಿಮಿತ್ತ ಎತ್ತುಗಳ ಮೇಲೆ ಡಿ ಬಾಸ್ ಚಿತ್ರ ಬಿಡಿಸಿ ರೈತರ ಸಂಭ್ರಮ

    ಚಿಕ್ಕೋಡಿ(ಬೆಳಗಾವಿ): ಚಾಲೆಂಜಿಗ್ ಸ್ಟಾರ್ ದರ್ಶನ ಅಭಿಮಾನಿಗಳು ಅವರ ಮೇಲಿನ ಪ್ರೀತಿಯಿಂದಾಗಿ ವಿಶಿಷ್ಟವಾಗಿ ತಮ್ಮ ಅಭಿಮಾನವನ್ನ ಪ್ರದರ್ಶನ ಮಾಡುತ್ತಾರೆ. ಅದೇ ರೀತಿ ಉತ್ತರ ಕರ್ನಾಟಕದಲ್ಲಿ ಆಚರಣೆ ಮಾಡುವ ಕಾರ ಹುಣ್ಣಿಮೆಯಲ್ಲೂ ಡಿ ಬಾಸ್ ಅಭಿಮಾನಿಗಳು ವಿಭಿನ್ನವಾಗಿ ತಮ್ಮ ಬಾಸ್ ಮೇಲೆ ಪ್ರೀತಿ ತೋರಿಸಿದ್ದಾರೆ.

    ಉತ್ತರ ಕರ್ನಾಟಕದಲ್ಲಿ ಆಚರಣೆ ಮಾಡುವ ರೈತರ ಹಬ್ಬ ಕಾರ ಹುಣ್ಣಿಮೆಯ ನಿಮಿತ್ತ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಮನೇವಾಡಿ ಗ್ರಾಮದಲ್ಲಿ ಎತ್ತುಗಳ ಮೇಲೆ ದರ್ಶನ ಚಿತ್ರ ಬಿಡಿಸಿ ಅವರ ಅಭಿಮಾನಿಗಳು ಡಿ ಬಾಸ್ ಮೇಲಿನ ಅಭಿಮಾನ ತೋರಿದ್ದಾರೆ. ಕಾರ ಹುಣ್ಣಿಮೆ ಸಂದರ್ಭದಲ್ಲಿ ಎತ್ತುಗಳನ್ನ ಬಣ್ಣದಿಂದ ಶೃಂಗರಿಸುವದು ಮೊದಲಿನಿಂದ ವಾಡಿಕೆ ಆದರೆ ಈ ಬಾರಿ ಶಮನೇವಾಡಿ ಗ್ರಾಮದ ಪ್ರದೀಪ ಖೋತ ಎನ್ನುವರ ಎತ್ತುಗಳ ಮೇಲೆ ಡಿ ಬಾಸ್ ಭಾವಚಿತ್ರ ಹಾಗೂ ಅವರ ಅಭಿನಯದ ಚಿತ್ರಗಳ ಟೈಟಲ್ ಹೆಸರುಗಳನ್ನ ಬಿಡಿಸಿದ್ದಾರೆ. ಡಿ ಬಾಸ್ ಅಭಿಮಾನಿಯಾಗಿರುವ ನಾಗರಾಜ ಮಾಲಗತ್ತಿ ಎಂಬ ಕಲಾವಿದ ಎತ್ತುಗಳ ಮೇಲೆ ಚಿತ್ರ ಬಿಡಿಸಿದ್ದಾರೆ. ಗ್ರಾಮದ ಡಿ ಬಾಸ್ ಅಭಿಮಾನಿಗಳು ಈ ರೀತಿ ಹೊಸ ಪ್ರಯತ್ನ ಮಾಡಿ ದರ್ಶನ ಅವರ ಮೇಲಿನ ಅಭಿಮಾನವನ್ನ ವ್ಯಕ್ತಪಡಿಸಿದ್ದಾರೆ.

    ಪ್ರಾಣಿಗಳ ಮೇಲೆ ವಿಶೇಷ ಕಾಳಜಿ ಇರುವ ಚಾಲೆಂಜಿಗ್ ಸ್ಟಾರ್ ದರ್ಶನ ಅವರಿಗೆ ಈ ರೀತಿ ಎತ್ತುಗಳ ಚಿತ್ರ ಬಿಡಿಸಿ ದರ್ಶನ ಅವರಿಗೆ ಅರ್ಪಿಸಲಾಗಿದೆ. ಮರಾಠಿ ಪ್ರಾಬಲ್ಯವಿರುವ ಗಡಿ ಭಾಗದಲ್ಲಿ ಕನ್ನಡ ಚಿತ್ರ ನಟನಿಗೆ ಈ ರೀತಿ ಅಭಿಮಾನ ತೋರುತ್ತಿರುವದು ವಿಶೇಷವೇ ಸರಿ. ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಈ ಗ್ರಾಮದಲ್ಲಿ ಡಿ ಬಾಸ್ ಅಭಿಮಾನಿಗಳು ಕಾರಹುಣ್ಣಿಮೆ ನಿಮಿತ್ತ ಎತ್ತುಗಳ ಮೇಲೆ ದರ್ಶನ ಅವರ ಭಾವಚಿತ್ರದ ಜೊತೆಗೆ ಅವರು ಅಭಿನಯಿಸಿರುವ ಐರಾವತ, ರಾಬರ್ಟ ಚಲನಚಿತ್ರದ ಟೈಟಲ್ ಬಿಡಿಸಿರುವ ವಿಡಿಯೋಗಳು ಈಗ ಎಲ್ಲೆಡೆ ವೈರಲ್ ಆಗುತ್ತಿವೆ.  ಇದನ್ನೂ ಓದಿ: ರೋಹಿಣಿ ಸಿಂಧೂರಿ ಕಾರ್ಯವೈಖರಿ ಬಗ್ಗೆ ಡಿ.ರೂಪ ಮತ್ತೆ ಅಸಮಧಾನ

    ಒಟ್ಟಿನಲ್ಲಿ ಉತ್ತರ ಕರ್ನಾಟಕದ ರೈತರ ಹಬ್ಬ ಕಾರ ಹುಣ್ಣಿಮೆಯಲ್ಲೂ ಡಿ ಬಾಸ್ ದರ್ಶನ ಮಿಂಚುತ್ತಿದ್ದಾರೆ. ಗಡಿ ಭಾಗದಲ್ಲೂ ಡಿ ಬಾಸ್ ಬಗ್ಗೆ ಅವರ ಅಭಿಮಾನಿಗಳು ತೋರುತ್ತಿರುವ ಅಭಿಮಾನವನ್ನ ಮೆಚ್ಚಲೇಬೇಕು.

  • ಗಂಡು ಮೆಟ್ಟಿದ ನಾಡಲ್ಲಿ ರಾಬರ್ಟ್ ಅಬ್ಬರ – ಪ್ರಿ-ರಿಲೀಸ್‍ನಲ್ಲಿ ದರ್ಶನ್ ಡೈಲಾಗ್‍ಗಳ ಆರ್ಭಟ

    ಗಂಡು ಮೆಟ್ಟಿದ ನಾಡಲ್ಲಿ ರಾಬರ್ಟ್ ಅಬ್ಬರ – ಪ್ರಿ-ರಿಲೀಸ್‍ನಲ್ಲಿ ದರ್ಶನ್ ಡೈಲಾಗ್‍ಗಳ ಆರ್ಭಟ

    ಹುಬ್ಬಳ್ಳಿ: ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಕಳೆದ ರಾತ್ರಿ ‘ರಾಬರ್ಟ್’ ಅಬ್ಬರಿಸಿದ್ದಾನೆ.

    ಹೌದು. ಡಿ ಬಾಸ್ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಡೆಯಿತು. ಲಕ್ಷಾಂತರ ಅಭಿಮಾನಿಗಳು ಡಿ ಬಾಸ್ ದರ್ಶನ ಪಡೆದ್ರು. ನಗರದ ರೈಲ್ವೆ ಮೈದಾನದಲ್ಲಿ ನಡೆದ ರಾಬರ್ಟ್’ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಲಕ್ಷದಷ್ಟು ಅಭಿಮಾನಿಗಳು ಜಮಾಯಿಸಿದ್ರು.

    ದರ್ಶನ್ ಆಗಮಿಸುತ್ತಿದ್ದಂತೆ ಅಭಿಮಾನಿಗಳ ಶಿಳ್ಳೆ, ಕೇಕೆ ಮುಗಿಲುಮುಟ್ಟಿತ್ತು. ಸಮಾರಂಭದಲ್ಲಿ ನಾಯಕಿ ನಟಿ ಆಶಾ ಭಟ್, ದೇವರಾಜ್, ಅಭಿಷೇಕ್ ಅಂಬರೀಶ್, ಚಿಕ್ಕಣ್ಣ, ರವಿಶಂಕರ್, ವಿನೋದ್ ಪ್ರಭಾಕರ್, ತರುಣ್ ಸುಧೀರ್ ಸೇರಿದಂತೆ ಇಡೀ ಚಿತ್ರ ತಂಡ ಭಾಗವಹಿಸಿತ್ತು.

    ಈ ವೇಳೆ ದರ್ಶನ್ ಡೈಲಾಗ್ ಹೊಡೆದ್ರು. ತಮ್ಮ ನೆನಪುಗಳನ್ನ ಹಚ್ಚಿಕೊಂಡರು. ಹಾಡು-ಡ್ಯಾನ್ಸ್‍ನಿಂದ ವೇದಿಕೆ ರಂಗೇರಿತ್ತು. ಸಮಾರಂಭದಲ್ಲಿ ಸಚಿವರಾದ ಜಗದೀಶ್ ಶೆಟ್ಟರ್, ಬಿ.ಸಿ.ಪಾಟೀಲ್ ಕೂಡ ಭಾಗವಹಿಸಿದ್ರು.

  • ಬಾ, ಬಾ, ಬಾ ನಾ ರೆಡಿ-ಹಡಗು ಹಿಡಿದು ಪಡೆಯೇ ಬರಲಿ ಹೊಸಕಿ ಬಿಡುವೆ ಕಾಲಡಿ

    ಬಾ, ಬಾ, ಬಾ ನಾ ರೆಡಿ-ಹಡಗು ಹಿಡಿದು ಪಡೆಯೇ ಬರಲಿ ಹೊಸಕಿ ಬಿಡುವೆ ಕಾಲಡಿ

    -ರಾಬರ್ಟ್ ಲಿರಿಕಲ್ ಸಾಂಗ್ ರಿಲೀಸ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿ ತಂಡ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ. ಇಂದು ಮಾಸ್ ಅಭಿಮಾನಿಗಳಿಗೆ ಬಾ, ಬಾ, ಬಾ ನಾ ರೆಡಿ ಹಾಡನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ.

    ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ತಮ್ಮ ಸಂಗೀತ ಮೂಲಕವೇ ಕೇಳುಗರನ್ನ ಹಿಡಿದಿಡುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಹಾಡಿನ ಸಾಹಿತ್ಯ ಮಾಸ್ ಹೀರೋ ದರ್ಶನ್ ಅವರಿಗಾಗಿ ರಚಿತವಾಗಿವೆ. ಹಡಗು ಹಿಡಿದು ಪಡೆಯೇ ಬರಲಿ, ಹೊಸಕಿ ಬಿಡುವೆ ಕಾಲಡಿ, ಡಿ.. ಡಿ… ಬಾ ನಾ ರೆಡಿ ಸಾಲುಗಳಿಂದ ಹಾಡು ಆರಂಭಗೊಳ್ಳುತ್ತದೆ.

    ಸಿನಿಮಾ ನಿರ್ದೇಶಕ ತರುಣ್ ಸುದೀರ್, ಇದು ಡಿ ಬಾಸ್ ಅಭಿಮಾನಿಗಳಿಗೆ ಉಡುಗೊರೆ ಆಗಲಿದೆ ಎಂದು ಫೆಬ್ರವರಿ 29ರಂದು ತಿಳಿಸಿದ್ದರು. ಟ್ವೀಟ್ ಮೂಲಕ ಹಾಡು ಬಿಡುಗಡೆಯ ಬಗ್ಗೆ ತರುಣ್ ಸುಧೀರ್ ಮಾಹಿತಿ ನೀಡಿದ್ದರು. ಮೊದಲ ಬಾರಿಗೆ ತ್ರಿಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳಲಿದ್ದಾರೆ. ತೆರೆಯ ಮೇಲೆ ಮೂರು ಪಾತ್ರಗಳನ್ನು ಕಣ್ತುಂಬಿಕೊಳ್ಳಲು ಅಭಿಮಾನಿ ಬಳಗ ಕಾಯುತ್ತಿದೆ.

    ದರ್ಶನ್ ಹುಟ್ಟುಹಬ್ಬದಂದು ಚಿತ್ರತಂಡ ಚಕ್ರವರ್ತಿಯ ಅಭಿಮಾನಿಗಳಿಗೆ ಟೀಸರ್ ಉಡುಗೊರೆಯಾಗಿ ನೀಡಿತ್ತು. ರಾಮನ ಭಂಟ ಹನುಮನ ಲುಕ್‍ನಲ್ಲಿ ಯಜಮಾನನನ್ನು ನೋಡಿದ್ದ ಫ್ಯಾನ್ಸ್ ಫಿದಾ ಆಗಿದ್ದರು. ಈ ಚಕ್ರವರ್ತಿ ಹೆಗಲ ಮೇಲೆ ಪುಟ್ಟ ರಾಮ ವಿರಾಜಮಾನವಾಗಿದ್ದನು. ಆದ್ರೆ ಚಿತ್ರತಂಡ ಪುಟ್ಟರಾಮನ ಪಾತ್ರದ ಬಗ್ಗೆ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಹೀಗೆ ಪ್ರತಿ ರಿವೀಲ್‍ನಲ್ಲಿಯೂ ಚಿತ್ರತಂಡ ಸಿನಿಮಾದ ಕಥೆಯ ರಹಸ್ಯವನ್ನು ಕಾಪಾಡಿಕೊಂಡು ಬಂದಿದೆ.

    ಸಂಜಯ್, ಅಕ್ಬರ್ ಹಾಗೂ ರಾಬರ್ಟ್ ಎಂದು ಮೂರು ಪಾತ್ರದಲ್ಲಿ ದರ್ಶನ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಶಾ ಭಟ್ ಸಿನಿಮಾದ ನಾಯಕಿಯಾಗಿದ್ದು, ಜಗಪತಿ ಬಾಬು ವಿಲನ್ ಆಗಿ ದರ್ಶನ್‍ಗೆ ಟಕ್ಕರ್ ಕೊಟ್ಟಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ಸಿನಿಮಾದ ಆ್ಯಕ್ಷನ್ ಕಟ್ ಹೇಳಿದ್ದು, ಉಮಾಪತಿ ಬಂಡವಾಳ ಹಾಕಿದ್ದಾರೆ. ಅರ್ಜುನ್ ಜನ್ಯ ಸಂಗೀತ ಹಾಗೂ ಹಿನ್ನೆಲೆ ಸಂಗೀತ ನೀಡಿದ್ದಾರೆ.

  • ಅಂಬಿ, ಡಿಬಾಸ್ ಸ್ಟೈಲ್‍ನಲ್ಲಿ ಡೈಲಾಗ್ ಹೊಡೆದ ಅಭಿಷೇಕ್

    ಅಂಬಿ, ಡಿಬಾಸ್ ಸ್ಟೈಲ್‍ನಲ್ಲಿ ಡೈಲಾಗ್ ಹೊಡೆದ ಅಭಿಷೇಕ್

    ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ತಾಯಿ ಸುಮಲತಾ ಅಂಬರೀಶ್ ಅವರ ಪರವಾಗಿ ಪ್ರಚಾರ ಮಾಡುತ್ತಿರುವ ಅಭಿಷೇಕ್, ತಂದೆ ಅಂಬರೀಶ್ ಮತ್ತು ಡಿ.ಬಾಸ್ ದರ್ಶನ್ ಸ್ಟೈಲ್‍ನಲ್ಲಿ ಡೈಲಾಗ್ ಹೊಡೆದಿದ್ದಾರೆ.

    ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪಿ.ಹೊಸಹಳ್ಳಿ ಗ್ರಾಮದಲ್ಲಿ ಸುಮಲತಾ ಅವರು ಇಂದು ಪ್ರಚಾರ ನಡೆಸಿದ್ದರು. ಈ ವೇಳೆ ಅಭಿಷೇಕ್ ಅವರು, ಮಂಡ್ಯದವರು ನಮ್ಮ ಮೇಲೆ ಇಟ್ಟಿರುವ ಪ್ರೀತಿ ಬಿಟ್ಟುಕೊಡುವ ಚಾನ್ಸೇ ಇಲ್ಲ ಎಂದು ರೆಬಲ್ ಸ್ಟಾರ್ ಅಂಬರೀಶ್ ಡೈಲಾಗ್ ಹೊಡೆದರು. ಬಳಿಕ ಡಿ ಬಾಸ್ ಡೈಲಾಗ್ ಬೇಕಾ ಎಂದು ಮತದಾರರನ್ನು ಕೇಳಿ, ಅಮ್ಮ ನಡೆದಿದ್ದೆ ದಾರಿ, ತಾಕತ್ತಿದ್ರೆ ಕಟ್ಟಾಕ್ರೋ ಎಂದು ಡೈಲಾಗ್ ಹೇಳಿದರು.

    ಅಭಿಷೇಕ್ ಮಾತನಾಡುವಾಗ ಮೈಕ್ ಕೈ ಕೊಟ್ಟಿತು. ಆಗ ಮಗನ ಕೈಯಿಂದ ಮೈಕ್ ಪಡೆದ ಸುಮಲತಾ ಅವರು, ಮೊನ್ನೆ ಕರೆಂಟ್ ತೆಗೆದರು. ಇವತ್ಯಾರು ಮೈಕ್ ಕಟ್ ಮಾಡಿದ್ದು ಎಂದು ವ್ಯಂಗ್ಯವಾಡಿದರು.