Tag: ಡಿ ಡಿ ಢಿಕ್ಕಿ

  • ಪ್ರೇಮ್, ಗೋಲ್ಡನ್ ಸ್ಟಾರ್ ಗಣೇಶ್ ಪುತ್ರನಿಗೆ ರಂಜನಿ ರಾಘವನ್ ಆ್ಯಕ್ಷನ್ ಕಟ್

    ಪ್ರೇಮ್, ಗೋಲ್ಡನ್ ಸ್ಟಾರ್ ಗಣೇಶ್ ಪುತ್ರನಿಗೆ ರಂಜನಿ ರಾಘವನ್ ಆ್ಯಕ್ಷನ್ ಕಟ್

    ಕಿರುತೆರೆ ಫೇಮಸ್ ನಟಿ ರಂಜನಿ ರಾಘವನ್ (Ranjani Raghavan) ಅವರು ನಿರ್ದೇಶಕಿಯಾಗಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡ್ತಿದ್ದಾರೆ. ನಟಿಯ ನಿರ್ದೇಶನದ ಸಿನಿಮಾದಲ್ಲಿ ಲವ್ಲಿ ಸ್ಟಾರ್ ಪ್ರೇಮ್ (Lovely Star Prem) ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಪುತ್ರ ವಿಹಾನ್ (Vihaan) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:ಇಬ್ರು ಹುಡ್ಗೀರು ನನ್ನ ಮಗಳ ಜೀವನ ಸರಿ ಮಾಡಿದ್ದಾರೆ: ವೈಷ್ಣವಿ ಗೌಡ ತಾಯಿ

    ರಂಜನಿ ರಾಘವನ್ ಅವರು ಕಿರುತೆರೆ ಮತ್ತು ಹಿರಿತೆರೆಯಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಮೊದಲ ಬಾರಿಗೆ ನಿರ್ದೇಶನ ಮಾಡಿದ್ರೂ ಕೂಡ ಭಿನ್ನವಾಗಿರೋ ಕಥೆಯನ್ನೇ ಬರೆದಿದ್ದಾರೆ. ತಂದೆ ಹಾಗೂ ಮಗನ ಬಾಂಧವ್ಯದ ಮನಮುಟ್ಟುವ ಕಥೆ ಹೇಳೋಕೆ ಬರುತ್ತಿದ್ದಾರೆ. ಚಿತ್ರದ ಟೈಟಲ್ ಮತ್ತು ಪೋಸ್ಟರ್‌ ಸದ್ಯ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

    ಚೊಚ್ಚಲ ಚಿತ್ರಕ್ಕೆ ವಿಭಿನ್ನವಾಗಿರೋ ಹೆಸರನ್ನೇ ನಟಿ ಆಯ್ಕೆ ಮಾಡಿದ್ದಾರೆ. ‘ಡಿ ಡಿ ಢಿಕ್ಕಿ’ ಎಂದು ಹೆಸರಿಟ್ಟಿದ್ದಾರೆ. ಪ್ರೇಮ್ ಮತ್ತು ಗಣೇಶ್ ಪುತ್ರ ವಿಹಾನ್ ಸಿನಿಮಾದಲ್ಲಿ ತಂದೆ ಮತ್ತು ಮಗನಾಗಿ ನಟಿಸಿದ್ದಾರೆ. ಈಗಾಗಲೇ ಶೇ.60ರಷ್ಟು ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ‘ಕಾಟೇರ’ ರೈಟರ್ ಜಡೇಶ್ ಅವರು ಹಂಪಿ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣಕ್ಕಿಳಿದಿದ್ದಾರೆ. ರಾಮಕೃಷ್ಣ ಹಾಗೂ ಆನಂದ್ ಕುಮಾರ್ ಜೊತೆ ನಿರ್ಮಾಣಕ್ಕೆ ಜಡೇಶ್ ಕೈಜೋಡಿಸಿದ್ದಾರೆ. ಇದನ್ನೂ ಓದಿ:ಮೊದಲ ನಿರ್ದೇಶನದ ಸಿನಿಮಾ ಬಗ್ಗೆ ಗುಡ್‌ ನ್ಯೂಸ್‌ ಕೊಟ್ರು ರಂಜನಿ ರಾಘವನ್

    ರಂಜನಿ ಬರೆದ ಕಥೆ ಇಷ್ಟವಾಗಿ ತಂಡದ ಜೊತೆ ಪ್ರೇಮ್ ಕೈಜೋಡಿಸಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರಕ್ಕೆ ಇಳಯರಾಜ ಸಂಗೀತ ಸಂಯೋಜನೆಗೆ ಸಾಥ್‌ ನೀಡಿದ್ದಾರೆ. ಈ ಮೂವರ ಕಾಂಬಿನೇಷನ್‌ನಲ್ಲಿ ಸಿನಿಮಾ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.