– ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ; ಡಿಕೆಶಿ ಒತ್ತಾಸೆಯಂತೆ ಹೆಸರು ಬದಲಾವಣೆ
ಬೆಂಗಳೂರು: ರಾಮನಗರ (Ramanagara) ಜಿಲ್ಲೆ ಹೆಸರು ಇನ್ಮುಂದೆ ಬೆಂಗಳೂರು ದಕ್ಷಿಣ (Bengaluru South) ಎಂದು ಬದಲಾಗಿದೆ. ಈ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ನೆಲಮಹಡಿಯಲ್ಲೇ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳಲಿ; ಡಿಸಿಎಂ
ಬೆಂಗಳೂರು: ಕೆರೆಗಳ ಹತ್ತಿರ ಹಾಗೂ ತಗ್ಗು ಪ್ರದೇಶಗಳಲ್ಲಿ ಬೇಸ್ಮೆಂಟ್ (ಅಂಡರ್ ಗ್ರೌಂಡ್) ನಿರ್ಮಾಣ ಮಾಡಿ ವಾಹನ ಪಾರ್ಕಿಂಗ್‌ಗೆ (Basement Parking) ಅವಕಾಶ ನೀಡದಂತೆ ನೋಡಿಕೊಳ್ಳಬೇಕು. ಭವಿಷ್ಯದಲ್ಲಿ ಇದಕ್ಕೆ ಹೊಸ ಕಾನೂನು ತರುತ್ತೇನೆ. ಮಳೆ ಕಡಿಮೆಯಾದ ನಂತರ ಇದರ ಬಗ್ಗೆ ಕಾರ್ಯಸೂಚಿ ಬಿಡುಗಡೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ತಿಳಿಸಿದರು.
ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ಸುರಿದ ಮಳೆಯಿಂದ ಉಂಟಾದ ವಿದ್ಯುತ್ ಅವಘಡದಲ್ಲಿ ಬಿಟಿಎಂ 2ನೇ ಹಂತದ ಡಾಲರ್ಸ್ ಕಾಲೋನಿ ಬಳಿಯ ಎಂ.ಎಸ್ ಪಾಳ್ಯದಲ್ಲಿ ಮನಮೋಹನ್ ಕಾಮತ್ ಹಾಗೂ ದಿನೇಶ್ ಎಂಬುವವರು ಮೃತಪಟ್ಟಿದ್ದರು. ಈ ಹಿನ್ನೆಲೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿ.ಕೆ ಶಿವಕುಮಾರ್ ಅವರು ಘಟನಾ ಸ್ಥಳಕ್ಕೆ ಮಂಗಳವಾರ ಸಂಜೆ ಅಧಿಕಾರಿಗಳ ಜೊತೆ ಭೇಟಿ ನೀಡಿ, ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಇದನ್ನೂ ಓದಿ: ಭಾರತದ ದಾಳಿಗೆ ಬೆಚ್ಚಿ ಬಚ್ಚಿಟ್ಟುಕೊಂಡಿದ್ದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್‌ಗೆ ಫೀಲ್ಡ್ ಮಾರ್ಷಲ್ ಆಗಿ ಬಡ್ತಿ
ಅಂಡರ್‌ಗ್ರೌಂಡ್‌ನಲ್ಲಿ ಸಂಗ್ರಹವಾಗಿದ್ದ ನೀರನ್ನು ಪಂಪ್ ಮೂಲಕ ಖಾಲಿ ಮಾಡುವಾಗ ಅಧಿಕಾರಿಗಳು, ಪೊಲೀಸ್ ಹಾಗೂ ಸಹಾಯ ಮಾಡಲು ಬಂದ ವ್ಯಕ್ತಿಗಳಿಗೂ ವಿದ್ಯುತ್ ಶಾಕ್ ತಗುಲಿದೆ. ವೇಳೆ ಮೃತಪಟ್ಟ ನಾಗರಿಕರಿಗೆ ಪರಿಹಾರ ನೀಡಲಾಗುವುದು. ಮಳೆಯ ಅವಘಡದಿಂದ ಮೃತಪಟ್ಟವರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಜಾನುವಾರುಗಳು ಸಹ ಮೃತಪಟ್ಟಿದ್ದು ಇದಕ್ಕೂ ಪರಿಹಾರ ನೀಡಲಾಗುವುದು. ನಮ್ಮ ಅಧಿಕಾರಿಗಳಿಗೆ ದಿನಪೂರ್ತಿ ಎಚ್ಚರವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಮಳೆ ಬಂದು ಅವಘಡ ಉಂಟಾಗಿರುವ ಭಾಗದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಸಾರ್ವಜನಿಕರು ಸಹ ಸಹಕಾರ ನೀಡುತ್ತಿದ್ದಾರೆ. ವಾರ್ ರೂಮ್ ಮೂಲಕವೂ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ ಎಂದು ವಿವರಿಸಿದರು.
– ಸಮರ್ಪಣಾ ಸಮಾವೇಶದಲ್ಲಿ 1.11 ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ
– 4 ಲಕ್ಷ ಜನರಿಗೆ ಊಟದ ವ್ಯವಸ್ಥೆ, ಗ್ಯಾರಂಟಿ ನಿಲ್ಲಿಸೋದಿಲ್ಲ ಎಂದ ಡಿಸಿಎಂ
ಬಳ್ಳಾರಿ: ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರಕ್ಕೆ ಬಂದು 2 ವರ್ಷ ಪೊರೈಸಿದ ಹಿನ್ನೆಲೆ ರಾಜ್ಯ ಸರ್ಕಾರದಿಂದ ಸಮರ್ಪಣಾ ಸಮಾವೇಶದ ಹೆಸರಿನಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ 1 ಲಕ್ಷದ 11 ಸಾವಿರದ 111 ಕುಟುಂಬಗಳಿಗೆ ಹಕ್ಕು ಪತ್ರಗಳನ್ನ ನೀಡಲಾಯ್ತು.
ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಚಾಲನೆ ನೀಡಿದ್ರು. ಇದೇ ವೇಳೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮಾತನಾಡಿ, ನುಡಿದಂತೆ ನಡೆದ ಸರ್ಕಾರ ನಮ್ಮದು. ಪ್ರಣಾಳಿಕೆಯಲ್ಲಿ ಆಶ್ವಾಸನೆ ಕೊಟ್ಟಂತೆ ಈಗಾಗಲೇ ಅರ್ಧದಷ್ಟು ಈಡೇರಿಸಿದ್ದೇವೆ. ಉಳಿದ ಭರವಸೆಗಳನ್ನ ಇನ್ನೂ ಮೂರು ತಿಂಗಳಲ್ಲಿ ಈಡೇರಿಸ್ತೇವೆ ಎಂದು ಹೇಳುವ ಮೂಲಕ ಬಿಜೆಪಿ ಹಾಗೂ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ರು. ಇದನ್ನೂ ಓದಿ: 593 ಭರವಸೆ ಕೊಟ್ಟಿದ್ವಿ, 2 ವರ್ಷಗಳಲ್ಲಿ 242 ಭರವಸೆ ಈಡೇರಿಸಿದ್ದೇವೆ: ಸಿದ್ದರಾಮಯ್ಯ
ಇನ್ನೂ ಮಲ್ಲಿಕಾರ್ಜುನ ಖರ್ಗೆ ಅವರು ಪಹಲ್ಗಾಮ್ ವಿಚಾರ ಪ್ರಸ್ತಾಪಿಸಿ, ಈ ಘಟನೆಗೆ ನೇರ ಕಾರಣ ಕೇಂದ್ರ ಸರ್ಕಾರ ಎಂದು ಆರೋಪಿಸಿದ್ರು. ಪಹಲ್ಗಾಮ್ ನಲ್ಲಿ ಮೋದಿ ಸರ್ಕಾರ ಭದ್ರತೆ ಕೊಟ್ಟಿಲ್ಲ ಹೀಗಾಗಿ ಅಲ್ಲಿ ಜನರ ಕೊಲೆಯಾಯ್ತು. ಸರ್ಕಾರ, ಮಿಲಿಟರಿ ಯಾರೂ ಜನರಿಗೆ ಸಹಕಾರ ಕೊಟ್ಟಿಲ್ಲ. ಆದ್ರೂ ಮೋದಿ ಒಂದು ಮಾತು ಹೇಳಲಿಲ್ಲ. 17ನೇ ತಾರೀಖು ಮೋದಿ ಕಾಶ್ಮೀರಕ್ಕೆ ಹೋಗುವವರಿದ್ರು. ಆದ್ರೆ ಬೇಹುಗಾರಿಕೆ, ಇಂಟಲಿಜೆನ್ಸ್ ಅವರು ಹೋಗಬೇಡಿ ಎಂದ್ರು ಕ್ಯಾನ್ಸಲ್ ಮಾಡಿಸಿದ್ರು. ಹಾಗಾದ್ರೆ ಇದೆಲ್ಲಾ ಮೋದಿಗೆ ಗೊತ್ತಿತ್ತು ಅಲ್ಲವೇ? ಹಾಗಿದ್ರೂ ಮೋದಿ ಯಾಕೆ ಹೇಳಲಿಲ್ಲ ಎಂದು ಖರ್ಗೆ ವೇದಿಕೆಯಲ್ಲಿ ಮೋದಿಗೆ ಸವಾಲು ಹಾಕಿದ್ರು. ಇದನ್ನೂ ಓದಿ: ರಾಹುಲ್ ಜೆಟ್ ಪ್ರಶ್ನೆಗೆ ಬಿಜೆಪಿ ಪಾಕ್ ಪೋಸ್ಟರ್ – ಬಿರಿಯಾನಿ ತಿಂದವರು ಯಾರು? ಅಂತ ಕಾಂಗ್ರೆಸ್ ಕೌಂಟರ್
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರೋವರೆಗೆ ಗ್ಯಾರಂಟಿ ಸ್ಕೀಮ್ ನಿಲ್ಲೋದಿಲ್ಲ ಡಿಸಿಎಂ ಡಿಕೆಶಿ ಘೋಷಣೆ ಮಾಡಿದ ಅವರು ಟೀಕೆಗಳು ಸಾಯ್ತವೆ, ಕೆಲಸಗಳು ಉಳಿಯುತ್ತವೆ ವಿಪಕ್ಷಗಳಿಗೆ ತಿರುಗೇಟು ನೀಡಿದರು. 2013ರಲ್ಲಿಯೂ ಕೊಟ್ಟ ಎಲ್ಲಾ ಭರವಸೆ ಈಡೇರಿಸಿದ್ದೇವು. ಈಗ ನಮ್ಮ ಗ್ಯಾರಂಟಿ ಭರವಸೆ ಈಡೇರಿಸಿತ್ತೇವೆ. ಬಿಜೆಪಿ ತಮ್ಮ ಅವಧಿಯಲ್ಲಿ ಯಾವ ಭರವಸೆ ಈಡೇರಿಸಿಲ್ಲ. ಬಿಜೆಪಿ ಅವರು ಸುಳ್ಳು ಹೇಳುದರಲ್ಲಿ ನಿಸ್ಸೀಮರು ಈ ಬಗ್ಗೆ ನಾನು ಅವರೊಂದಿಗೆ ಬಹಿರಂಗವಾಗಿ ಚರ್ಚೆ ಮಾಡಲು ಸಿದ್ದವೆಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು.
ಇನ್ನೂ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಲಕ್ಷಾಂತರ ಜನ ಆಗಮಿಸಿದ್ರು. ಸಮಾವೇಶದಲ್ಲಿ 4 ಲಕ್ಷ ಜನಕ್ಕೆ ಊಟದ ವ್ಯವಸ್ಥೆ ಮಾಡಿ, ಅದಕ್ಕಾಗಿ 600 ಊಟದ ಕೌಂಟರ್ ತೆರೆಯಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ 4 ಸಾವಿರ ಸರ್ಕಾರಿ ಬಸ್‌ಗಳು ಸೇರಿದಂತೆ 11 ಸಾವಿರ ವಾಹನಗಳಲ್ಲಿ ಜನರು ಸಮಾವೇಶಕ್ಕೆ ಆಗಮಿಸಿದ್ರು. ಇದನ್ನೂ ಓದಿ: ಬೆಂಗ್ಳೂರಲ್ಲಿ ಮಳೆಯಿಂದ ಜನರ ಪರದಾಟ… ರಾಜ್ಯ ಸರ್ಕಾರದ ಮೋಜು – ಬಿವೈವಿ ಸಿಡಿಮಿಡಿ
ಸಮಾವೇಶದಿಂದಾಗಿ ಟ್ರಾಫಿಕ್ ಜಾಮನಿಂದ ಪ್ರಯಾಣಿಕರು ಪರದಾಡಿದರು. ಹೀಗಾಗಿ ವಿಜಯನಗರ ಎಸ್ಪಿ ಬಿ.ಎಲ್.ಶ್ರೀಹರಿಬಾಬು ಸೇರಿದಂತೆ ನಾಲ್ವರು ಎಸ್ಪಿ, 9 ಎಎಸ್ಪಿ, 20 ಡಿವೈಎಸ್ಪಿ, 57 ಸಿಪಿಐ, 144 ಪಿ.ಎಸ್.ಐ, 1968 ಹೆಡ್ ಕಾನ್ಸ್ ಟೇಬಲ್, 9,500 ಹೋಮ್ ಗಾರ್ಡ್ಸ್, 10 ಕೆಎಸ್‌ಆರ್‌ಪಿ ತುಕಡಿ, 08 ಡಿಎಆರ್, 14 ಎಎಸ್ ಟೀಂ ಹಾಗೂ 17 ಗಸ್ತು ವಾಹನ, ಚೀತಾ ಗಸ್ತು ವಾಹನ ಭದ್ರತೆಗೆ ನಿಯೋಜಿಸಲಾಗಿತ್ತು. ಇದನ್ನೂ ಓದಿ: 1,600 ಕೋಟಿ ಕಾಮಗಾರಿ ನಡೆದಿದ್ದರೆ ಬೆಂಗ್ಳೂರಿಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲ: ಆರ್. ಅಶೋಕ್
ವಿಜಯನಗರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರೋವರೆಗೂ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಸಿದ್ದರಾಮಯ್ಯ (Siddaramaiah) ನೇತೃತ್ವದ ಸರ್ಕಾರ ಅಧಿಕಾರ ಬಂದು ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ (Hosapete) ನಡೆದ ‘ಸಮರ್ಪಣೆ ಸಂಕಲ್ಪ ಸಮಾವೇಶ’ದಲ್ಲಿ ಮಾತನಾಡಿದ ಡಿಕೆಶಿ, ಎರಡು ವರ್ಷದ ಹಿಂದೆ ಸಿದ್ದರಾಮಯ್ಯ ಮತ್ತು ನನ್ನ ಮೇಲೆ ಭರವಸೆ ಇಟ್ಟು ಮತ ಹಾಕಿದ್ರಿ. 136 ಸ್ಥಾನ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಹಕ್ಕು ಪತ್ರ ನೀಡುವ ಮೂಲಕ ಆರನೇ ಗ್ಯಾರಂಟಿ ಜಾರಿ: ರಾಹುಲ್ ಗಾಂಧಿ
ಮೊದಲು ಐದು ಗ್ಯಾರಂಟಿ, ಈಗ ಹಕ್ಕು ಪತ್ರ ಮೂಲಕ ಆರನೇ ಗ್ಯಾರಂಟಿ ನೀಡಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರೋವರೆಗೆ ಗ್ಯಾರಂಟಿ ಸ್ಕೀಮ್ ನಿಲ್ಲೋದಿಲ್ಲ. ಬಡವರು ಹಕ್ಕು ಪತ್ರ ಇಲ್ಲದೇ ಪರದಾಟ ಮಾಡುವ ಜನರಿಗಾಗಿ ಈ ಕಾರ್ಯಕ್ರಮ. ಈ ಸ್ವತ್ತು ಮೂಲಕ ಏಳನೇ ಗ್ಯಾರಂಟಿ ಕೂಡ ನೀಡುತ್ತಿದ್ದೇವೆ ಎಂದು ಭರವಸೆ ನೀಡಿದ್ದಾರೆ.
ಇಂದಿರಾ ಗಾಂಧಿ ಹೊಸಪೇಟೆಯಲ್ಲಿ ಭಾಷಣ ಮಾಡಿದ್ರು. ಸೋನಿಯಾ ಗಾಂಧಿ ಬಿಟಿಪಿಎಸ್ ಘಟಕ ಸ್ಥಾಪನೆ ಮಾಡಿದ್ರು. ಭಾರತ್ ಜೋಡೋ ಯಾತ್ರೆ ಮೂಲಕ ಬಳ್ಳಾರಿ ರಾಹುಲ್ ಗಾಂಧಿ ಸಂಚಾರ ಮಾಡಿದ್ದಾರೆ. ಇದರ ಭಾಗ ಬಳ್ಳಾರಿ ಅಭಿವೃದ್ಧಿ ಹೆಚ್ಚುವರಿ ಹಣ ನೀಡಿದ್ದೇವೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಬೆಂಗ್ಳೂರು ಜನರು ಬ್ರ್ಯಾಂಡೆಡ್ ನರಕದಲ್ಲಿ ನರಳುತ್ತಿದ್ದಾರೆ – ಸರ್ಕಾರದ ವಿರುದ್ಧ ಹೆಚ್‌ಡಿಕೆ ಕಿಡಿ
ರಾಜ್ಯದಲ್ಲಿ ಬಂಡವಾಳ ಹೂಡಲು ಉದ್ಯಮಿಗಳು ಮುಂದೆ ಬರುತ್ತಿದ್ದಾರೆ. ತುಂಗಭದ್ರಾ ನದಿ ತೀರದ ನೀರಿನ ಬವಣೆ ತೀರಿಸಲು ಹೊಸ ಅಭಿವೃದ್ಧಿ ಕೆಲಸ ಮಾಡ್ತೇವೆ. ಸಮಾನಾಂತರ ಜಲಾಶಯ ಮಾಡಲು ಅಂಧ್ರ ಸರ್ಕಾರ ಅನುಮತಿ ನೀಡುತ್ತಿಲ್ಲ. ತಾಂತ್ರಿಕ ತೊಂದರೆ ಸರಿಪಡಿಸಿ ನಿರ್ಮಾಣ ಮಾಡ್ತೇವೆ. ಸರ್ಕಾರದ ಎಲ್ಲಾ ಇಲಾಖೆಯಲ್ಲಿಯೂ ಮಂತ್ರಿಗಳು ಹೊಸ ಯೋಜನೆ ತಂದು ಅಭಿವೃದ್ಧಿ ಮಾಡ್ತಿದ್ದಾರೆ. ಬಸವಣ್ಣನವರ ಮಾತಿನಂತೆ ನುಡಿದಂತೆ ನಡೆದಿದ್ದೇವೆ. ಗ್ಯಾರಂಟಿ ಮುಂದುವರಿಸಲು ರಾಹುಲ್ ಸಲಹೆ ನೀಡಿದ್ದಾರೆ. ಅದನ್ನ ಮಾಡ್ತೇವೆ ಎಂದು ಭರವಸೆ ನೀಡಿದ್ದಾರೆ.
– ಯಲಹಂಕದಲ್ಲಿ ಅಪಾರ್ಟ್‌ಮೆಂಟ್ ಮಾಲೀಕರಿಗೆ ಡಿಸಿಎಂ ವಾರ್ನಿಂಗ್
– 166 ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳ ಗುರುತು
ಬೆಂಗಳೂರು: ನಗರದಲ್ಲಿ ರಾಜಕಾಲುವೆ ಸ್ಥಳಗಳೂ ಸೇರಿದಂತೆ 4,292 ಕಡೆ ಒತ್ತುವರಿ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.
ಧಾರಕಾರ ಮಳೆಯಿಂದ ಬೆಂಗಳೂರಿನಲ್ಲಿ (Bengaluru) ಆಗಿರುವ ಅನಾಹುತಗಳ ಬಗ್ಗೆ ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್ ಗಿರಿನಾಥ್ ಅವರಿಂದ ಬಿಬಿಎಂಪಿ ವಾರ್ ರೂಮ್‌ನಲ್ಲಿ (BBMP War Room) ಮಾಹಿತಿ ಪಡೆದು, ಪರಿಹಾರೋಪಾಯಗಳ ಬಗ್ಗೆ ಸಲಹೆ, ಸೂಚನೆ ನೀಡಿದರು. ಇದೇ ವೇಳೆ ಹಾನಿಗೆ ಒಳಗಾಗಿರುವ ಪ್ರದೇಶಗಳ ಅಧಿಕಾರಿಗಳಿಗೆ ಅಗತ್ಯ ಕ್ರಮಗಳನ್ನು ಸರೋಪಾದಿಯಲ್ಲಿ ಕೈಗೊಳ್ಳುವಂತೆ ಕರೆಮಾಡಿ ತಾಕೀತು ಮಾಡಿದರು. ಈ ಸಂದರ್ಭದಲ್ಲಿ ಸಚಿವ ಕೆ.ಜೆ ಜಾರ್ಜ್, ಶಾಸಕ ಮುನಿರತ್ನ ಸಾಥ್ ನೀಡಿದರು. ಇದನ್ನೂ ಓದಿ: ಮಹಾಮಳೆಗೆ ಕಾಂಪೌಂಡ್ ಗೋಡೆ ಕುಸಿದು ಮಹಿಳೆ ಸಾವು – ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ
ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಬೆಂಗಳೂರು ನಗರದಲ್ಲಿ ರಾಜಕಾಲುವೆಗಳೂ (Rajakaluve) ಸೇರಿ ಸುಮಾರು 4,292 ಕಡೆ ಒತ್ತುವರಿ (Encroachment) ಆಗಿದೆ. ಇನ್ನೂ ಕೆಲ ರಾಜಕಾಲುವೆಗಳು ಆಳವಾಗಿಲ್ಲ, ಅದರ ಕೆಲಸ ಪ್ರಗತಿಯಲ್ಲಿದೆ. ರಾಜಕಾಲುವೆಗಳು ಪೂರ್ಣವಾಗದೇ ಇರುವುದರಿಂದ ನೀರು ಹೊರಗಡೆ ಬರುವುದನ್ನ ತಡೆಯೋದು ಕಷ್ಟ. ಸದ್ಯ 166 ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಅಂತ ಗುರುತಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 1 ವಾರ ಭಾರೀ ಮಳೆ: ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಣೆ
ಬೆಂಗಳೂರಿಗೆ ಅನಿರೀಕ್ಷಿತವಾಗಿ ಹೆಚ್ಚು ಮಳೆ ಬಿದ್ದಿದೆ. ನಿನ್ನೆ ಮಳೆಯಾಗಿದ್ದರಿಂದ ಕೆರೆಗಳು ತುಂಬಿದೆ. 104 ಮೀಮಿ ಮಳೆ ಆಗಿದೆ. ಡಿಕೆಶಿ ಕೆಲವು ಪ್ರದೇಶಕ್ಕೆ ಹೋಗ್ತಾರೆ. ಅವರಿಂದಲೂ ಮಾಹಿತಿ ಪಡೆಯುತ್ತೇನೆ. ಟ್ರಾಫಿಕ್ ಪೊಲೀಸರು 133 ಜಾಗ ಗುರುತಿಸಿದ್ದಾರೆ. ಸಿಲ್ಕ್ ಬೋರ್ಡ್ ಜಂಕ್ಷನ್, ಹೆಬ್ಬಾಳ ಕಡೆಗಳಲ್ಲಿ ರೈಲ್ವೇ ಪಾಯಿಂಟ್ ಇದ್ದು, ಕೆಲಸ ಮಾಡಲಾಗುತ್ತಿದೆ ಎಂದು ವಿವರಿಸಿದರು. ಇದನ್ನೂ ಓದಿ: ರಾಯಚೂರು | ಭಾರೀ ಮಳೆಗೆ ಟಿನ್ ಶೆಡ್ ಮನೆ ಕುಸಿದು ಮೂವರಿಗೆ ಗಾಯ
ಸಾಯಿ ಲೇಔಟ್‌ನಲ್ಲಿ ನಾಲ್ಕೂವರೆ ಅಡಿ ನೀರಿತ್ತು
ಇವತ್ತು ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲು 2 ಬಸ್ಸು ತರಿಸಿದ್ದೆ. ಅಲ್ಲಿ ಹೋದ್ರೆ ಅಧಿಕಾರಿಗಳಿಗೆ ತೊಂದ್ರೆ ಆಗುತ್ತೆ ಅಂತ ಹೋಗಿಲ್ಲ. ಸಾಯಿ ಲೇಔಟ್‌ನಲ್ಲಿ ನಾಲ್ಕುವರೆ ಅಡಿ ನೀರು ಇತ್ತು, ಎರಡು ಅಡಿ ನೀರು ಕಡಿಮೆ ಆಗಿದೆ. ಸಮಸ್ಯೆ ಸಿಲುಕಿಕೊಂಡವರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಮಳೆಹಾನಿ ಪ್ರದೇಶದಲ್ಲಿರುವ ಸ್ಥಳೀಯರಿಗೆ ಪೊಲೀಸರು ಮತ್ತು ಇತರ ಅಧಿಕಾರಿಗಳು ಊಟದ ವ್ಯವಸ್ಥೆ ಮಾಡುತ್ತಾರೆ. ಮೇ 21ಕ್ಕೆ ನಾನು, ಡಿಸಿಎಂ ಸಿಟಿ ರೌಂಡ್ಸ್ ಮಾಡಿ ಸಂಪೂರ್ಣ ವರದಿ ಪಡೆಯಲಿದ್ದೇವೆ ಎಂದು ತಿಳಿಸಿದರು.
ಇನ್ನೂ ಡಿಸಿಎಂ ಡಿಕೆಶಿ ಮಾತನಾಡಿ, ಯಲಹಂಕ ವಲಯದಲ್ಲಿ 29 ಕೆರೆ ಇದೆ. ಅಲ್ಲಿಂದ ಒವರ್ ಪ್ಲೋ ಆಗಿ ಸಮಸ್ಯೆ ಆಗುತ್ತಿದೆ. 60 ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದರಲ್ಲದೇ ಯಲಹಂಕಾದಲ್ಲಿ ಅಪಾರ್ಟ್‌ಮೆಂಟ್‌ಗಳ ಅಕ್ಕಪಕ್ಕ ಒತ್ತುವರಿಯಾಗಿರುವ ಜಾಗವನ್ನ ತೆರವು ಮಾಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೊತೆಗೆ ಗೋಡೆ ತೆರವುಗೊಳಿಸಿದ್ದರೆ ದೊಡ್ಡ ಕಟ್ಟಡವನ್ನೆ ಒಡಯಬೇಕಾಗುತ್ತದೆ ಎಂದು ಸಹ ಎಚ್ಚರಿಸಿದರು. ಇದನ್ನೂ ಓದಿ: Bengauru Rains Photo Gallery – ಮತ್ತೆ ಮಳೆಯಾಗಿದೆ…!
ನವದೆಹಲಿ: ಕೇಂದ್ರದಿಂದ ರಾಜ್ಯಕ್ಕೆ 4,195 ಕೋಟಿ ರೂ. ಅನುದಾನ ಬಾಕಿಯಿದೆ ಎನ್ನುತ್ತ ಸಿಎಂ ಸಿದ್ದರಾಮಯ್ಯ ಬೂಟಾಟಿಕೆ ಪ್ರದರ್ಶಿಸುತ್ತಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ(Prahlad Joshi) ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ(Siddaramaiah) ಅವರು ತಮ್ಮ ಸರ್ಕಾರದ ಆರ್ಥಿಕ ದುರುಪಯೋಗ, ಆಡಳಿತ ವೈಫಲ್ಯ, ಅಸಮರ್ಥತೆ ಒಪ್ಪಿಕೊಳ್ಳುವುದನ್ನು ಬಿಟ್ಟು ಕೇಂದ್ರದ ಮೇಲೆ ವೃಥಾ ಆರೋಪ ಹೊರಿಸುತ್ತಿದ್ದಾರೆ. ಜನರಿಗೆ ನೀಡಿದ ಭರವಸೆ ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: Bengauru Rains Photo Gallery – ಮತ್ತೆ ಮಳೆಯಾಗಿದೆ…!
ಕೇಂದ್ರದಿಂದ ಬಾಕಿ ಇರುವ 4,195 ಕೋಟಿ ರೂ. ಅನುದಾನದ ಬಗ್ಗೆ ದೂರು ನೀಡುವುದು ಸಿಎಂ ಅವರ ಬೂಟಾಟಿಕೆ ಪ್ರದರ್ಶನವಾಗಿದೆ ಅಷ್ಟೇ. ಪಿಎಂಎವೈ (ಗ್ರಾಮೀಣ), ಸ್ವಚ್ಛ ಭಾರತ ಮಿಷನ್ (ನಗರ), ಅಮೃತ್, ಪೋಷಣ್, ಸಮಗ್ರ ಶಿಕ್ಷಾ ಮುಂತಾದ ಅನೇಕ ಪ್ರಮುಖ ಯೋಜನೆಗಳು ಸೇರಿ ವಿವಿಧ ಕೇಂದ್ರ ಪ್ರಾಯೋಜಿತ ಯೋಜನೆಗಳ ಅಡಿಯಲ್ಲಿ 5,000 ಕೋಟಿ ರೂ.ಗೂ ಹೆಚ್ಚು ಅನುದಾನ ಇನ್ನೂ ಹಾಗೇ ಇದ್ದು, ಮೊದಲು ಇದರ ಸಮರ್ಪಕ ಬಳಕೆ ಮಾಡಿಕೊಳ್ಳಲಿ ಎಂದು ಕಿವಿ ಹಿಂಡಿದ್ದಾರೆ. ಇದನ್ನೂ ಓದಿ: ಕೊನೆ ಕ್ಷಣದವರೆಗೂ ಆಪರೇಷನ್ ಸಿಂಧೂರದ ಟಾರ್ಗೆಟ್ ಟಾಪ್ ಸೀಕ್ರೆಟ್ – ಗೊತ್ತಿದ್ದಿದ್ದು ಅಜಿತ್ ದೋವಲ್‍ಗೆ ಮಾತ್ರ!
ರಾಜ್ಯಕ್ಕೆ ಈಗಾಗಲೇ ನೀಡಿದ್ದ ಹಣ ಸಂಪೂರ್ಣ ಬಳಸಿಕೊಂಡಿದ್ದರೂ ಕೇಂದ್ರ ಅನುದಾನ ತಡೆಹಿಡಿದ ಯಾವುದಾದರೂ ನಿರ್ದಿಷ್ಟ ಯೋಜನೆಗಳಿದ್ದರೆ ಸಿಎಂ ಸ್ಪಷ್ಟಪಡಿಸಲಿ. ಅದು ಬಿಟ್ಟು ಹೋದಲ್ಲಿ, ಬಂದಲ್ಲಿ ಕೇಂದ್ರ ಸರ್ಕಾರ ಹಣ ನೀಡಿಲ್ಲ ಎನ್ನುವುದು ಸಿಎಂ ಅವರ ವಾಕ್ಚಾಳಿಯಾಗಿದೆ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ರೆಡ್ಡಿ ಮಗನ ಜೊತೆ ಶ್ರೀಲೀಲಾ ಡ್ಯುಯೆಟ್- ‘ಜೂನಿಯರ್’ ಚಿತ್ರದ ಸಾಂಗ್ ಔಟ್
ಕೇಂದ್ರದಿಂದ ಬಿಡುಗಡೆಯಾದ ಹಣವನ್ನು ಖರ್ಚು ಮಾಡುವಲ್ಲಿ ಸಹ ರಾಜ್ಯ ಸರ್ಕಾರ ವಿಫಲವಾಗಿದೆ. ಇನ್ನು, ಡಿಸಿಎಂ ಡಿ.ಕೆ ಶಿವಕುಮಾರ್(D K Shivakumar) ಅವರೇ ಈ ಹಿಂದೆ ಕಾಂಗ್ರೆಸ್‌ನ(Congress) ಜನಪ್ರಿಯ ಗ್ಯಾರಂಟಿಗಳಿಗೆ 40,000 ಕೋಟಿ ರೂ. ಮೀಸಲಿಡಬೇಕಾಗಿತ್ತು ಎಂಬುದನ್ನು ಒಪ್ಪಿಕೊಂಡಿದ್ದರು. ಇವರ ಸರ್ಕಾರದಲ್ಲಿ ಅಭಿವೃದ್ಧಿಗೆ ಯಾವುದೇ ಹಣ ಉಳಿದಿಲ್ಲ ಎಂಬುದನ್ನು ಬಹಿರಂಗವಾಗೇ ಒಪ್ಪಿಕೊಂಡರು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: 18ನೇ ಆವೃತ್ತಿ, ಮೇ 18ರಂದೇ ಪ್ಲೇ-ಆಫ್‌ಗೆ ಎಂಟ್ರಿ – 18ರ ನಂಟು ಮುಂದುವರಿಸಿದ ಆರ್‌ಸಿಬಿ
ರಾಜ್ಯ ಸರ್ಕಾರದಲ್ಲಿ ಸುಸ್ಥಿರವಲ್ಲದ ಗ್ಯಾರಂಟಿಗಳಿಗೆ 58,000 ಕೋಟಿ ರೂ. ಮೀಸಲಿಡಲಾಗಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ 2024ರ ಜನವರಿಯಲ್ಲೇ ಅಪಸ್ವರ ಎತ್ತಿದ್ದರು. ಇದು ಹಣಕಾಸಿನ ದುರುಪಯೋಗವನ್ನು ದೃಢಪಡಿಸುತ್ತದೆ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರ ಕೇಂದ್ರದ ಮೇಲೆ ಆಧಾರ ರಹಿತ ಆರೋಪ ಮಾಡುವುದನ್ನು ನಿಲ್ಲಿಸಲಿ. ಮೊದಲು ತನ್ನ ಬಳಿ ಇರುವ ಗಣನೀಯ ಪ್ರಮಾಣದ ಹಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಗಮನ ನೀಡಲಿ ಎಂದು ಸಿಎಂಗೆ ಚಾಟಿ ಬೀಸಿದ್ದಾರೆ.
ಬೆಂಗಳೂರು: ರಾತ್ರಿ ಸುರಿದ ಭಾರೀ ಮಳೆಗೆ ಬೆಂಗಳೂರು(Bengaluru) ತತ್ತರಿಸಿದ್ದು, ಜನ ಬಿಬಿಎಂಪಿ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ನಾನು ನಿಮ್ಮಲ್ಲಿ ಒಬ್ಬ, ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ ಎಂದು ವ್ಯಾಪಕ ಟೀಕೆಯ ಬೆನ್ನಲ್ಲೇ ಡಿಸಿಎಂ ಡಿ.ಕೆ ಶಿವಕುಮಾರ್(D K Shivakumar) ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
Deeply concerned by the havoc caused by relentless rains in Bengaluru.
I’ve been in continuous touch with the concerned officers and I’m closely monitoring the situation.
As always, I remain committed to Bengaluru – working round the clock to address challenges and ensure…
ಬೆಂಗಳೂರಿನಲ್ಲಿ ಮಳೆಯ ಅವಾಂತರದ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಬೆಂಗಳೂರಿನಲ್ಲಿ ನಿರಂತರ ಮಳೆಯಿಂದ ಉಂಟಾದ ಹಾನಿಯಿಂದ ತೀವ್ರ ಕಳವಳಗೊಂಡಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ ಮತ್ತು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಸವಾಲುಗಳನ್ನು ಎದುರಿಸಲು ಮತ್ತು ಪರಿಹಾರವನ್ನು ಕೈಗೊಳ್ಳುವ ದಿನದ 24 ಗಂಟೆಗಳೂ ನಾನು ಕೆಲಸ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮಳೆಯ ಅವಾಂತರ – ಸಾಯಿ ಲೇಔಟ್‌ಗೆ ಜಲದಿಗ್ಭಂದನ
ನಾನು ಬಿಬಿಎಂಪಿ(BBMP) ವಾರ್ ರೂಮ್ ಮತ್ತು ಪ್ರವಾಹ ಪೀಡಿತ ಪ್ರದೇಶಗಳಿಗೆ ವೈಯಕ್ತಿಕವಾಗಿ ಭೇಟಿ ನೀಡಿ ವಾಸ್ತವಿಕವಾಗಿ ಮಾಹಿತಿ ಪಡೆಯುತ್ತೇನೆ. ಇವತ್ತು ನಾವು ಎದುರಿಸುತ್ತಿರುವ ಸಮಸ್ಯೆಗಳು ಹೊಸದೇನಲ್ಲ. ಹಲವು ಸರ್ಕಾರಗಳ, ಹಲವು ವರ್ಷಗಳ ನಿರ್ಲಕ್ಷತನ ಈ ಸಮಸ್ಯೆ ಎದುರಿಸುತ್ತಿದ್ದೇವೆ. ಈ ಸಮಸ್ಯೆಯನ್ನು ಪರಿಹರಿಸಲು ಕೆಲಸ ಮಾಡುತ್ತಿದ್ದೇನೆ. ತಾತ್ಕಾಲಿಕ ಪರಿಹಾರ ಅಲ್ಲ, ದೀರ್ಘಕಾಲಿಕ ಪರಿಹಾರ ಕೈಗೊಳ್ಳು ಕೆಲಸ ಮಾಡ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಾನ್ಯತಾ ಟೆಕ್ ಪಾರ್ಕ್ ಜಲಾವೃತ – ಪರ್ಯಾಯ ಮಾರ್ಗ ಬಳಸುವಂತೆ ಮನವಿ
ನನ್ನೆಲ್ಲಾ ಬೆಂಗಳೂರಿಗರೇ, ನಾನು ನಿಮ್ಮಲ್ಲಿ ಒಬ್ಬ, ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ. ನಿಮ್ಮ ಕಳವಳ ಅರ್ಥಮಾಡಿಕೊಳ್ತೇನೆ. ಹತಾಶೆಯನ್ನು ಹಂಚಿಕೊಳ್ಳುತ್ತೇನೆ. ಬೆಂಗಳೂರಿನ ಈ ಸಮಸ್ಯೆಯನ್ನು ಪರಿಹರಿಸಲು ನಾನು ಬದ್ಧನಾಗಿದ್ದು, ಈ ಬಗ್ಗೆ ನಾನು ಭರವಸೆ ನೀಡುತ್ತೇನೆ. ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಸಿಸಿಬಿ ಕಚೇರಿ ಜಲಾವೃತ | ಬೊಮ್ಮನಹಳ್ಳಿ -ಸಿಲ್ಕ್ ಬೋರ್ಡ್ ರಸ್ತೆಯಲ್ಲಿ 3 ಅಡಿ ನೀರು
ರಾತ್ರಿ ಸುರಿದ ಭಾರೀ ಮಳೆಗೆ ಬೆಂಗಳೂರಿನ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಅಲ್ಲದೇ ರಸ್ತೆಗಳಲ್ಲಿ ನೀರು ತುಂಬಿದ್ದು ವಾಹನ ಸವಾರರು ಪರದಾಡುತಿದ್ದಾರೆ. ಇನ್ನು ಹಲವೆಡೆ ಮನೆಗಳಿಗೆ ನೀರು ನುಗ್ಗಿ ಜನ ಮನೆಯಿಂದ ಹೊರಬರಲಾದೆ ತೊಂದರೆ ಅನುಭವಿಸುತ್ತಿದ್ದು, ಸರ್ಕಾರ ಹಾಗೂ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಜನ ಕಿಡಿಕಾರುತ್ತಿದ್ದಾರೆ.
– ರಾಮನಗರ ಹೆಸರು ಬದಲಾವಣೆಗೆ ಶೀಘ್ರದಲೇ ಶುಭ ಮುಹೂರ್ತ ಬರುತ್ತಿದೆ
ಮೈಸೂರು: ವಿಪಕ್ಷದವರು ಗ್ರೇಟರ್ ಬೆಂಗಳೂರನ್ನ ಕ್ವಾರ್ಟರ್ ಅಲ್ಲ, ಫುಲ್ ಬಾಟಲ್ ಆದ್ರೂ ಹೇಳಲಿ. ನಾವು ತಲೆ ಕೆಡಿಸಿಕೊಳ್ಳಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್(D K Shivakumar) ಹೇಳಿದರು.
ಮೈಸೂರಿನಲ್ಲಿ(Mysuru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು(Greater Bengaluru) ವಿಚಾರವಾಗಿ ಶೀಘ್ರದಲ್ಲೇ ಸರ್ವಪಕ್ಷ ಸಭೆ ಕರೆಯುತ್ತೇನೆ. ಈಗಿನ ಬೆಂಗಳೂರು ವ್ಯಾಪ್ತಿಗೆ ಹೊಸ ಬಡಾವಣೆ ಸೇರ್ಪಡೆ ಮಾಡುವುದಿಲ್ಲ. ಇರುವ ವ್ಯಾಪ್ತಿಯಲ್ಲೇ ಗ್ರೇಟರ್ ಬೆಂಗಳೂರು ಅನುಷ್ಠಾನ ಹಾಗೂ ಇದೇ ವ್ಯಾಪ್ತಿ ಇಟ್ಟುಕೊಂಡೇ ಚುನಾವಣೆಯನ್ನ ಮಾಡುತ್ತೇವೆ. ಅತಿ ಶೀಘ್ರದಲ್ಲೇ ಚುನಾವಣೆ ಮಾಡಲೇಬೇಕಿದೆ ಮಾಡುತ್ತೇವೆ. ಮೂರು ನಾಲ್ಕು ದಿನಗಳಲ್ಲಿ ಚುನಾವಣೆ ದಿನಾಂಕ ನಿಗದಿ ಮಾಡುತ್ತೇವೆ. ಚುನಾವಣೆ ವಿಳಂಬ ಮಾಡುವುದರಲ್ಲಿ ಯಾವುದೇ ಅರ್ಥ ಇರುವುದಿಲ್ಲ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಅವಧಿಯಲ್ಲಿ ದೇಶದ ರಕ್ಷಣಾ ಕ್ಷೇತ್ರ ಬಲಪಡಿಸಿಲ್ಲ: ಶೋಭಾ ಕರಂದ್ಲಾಜೆ
ಇದು ಗ್ರೇಟರ್ ಬೆಂಗಳೂರು ಅಲ್ಲ, ಕ್ವಾರ್ಟರ್ ಬೆಂಗಳೂರು ಎಂಬ ಆರ್.ಅಶೋಕ್(R Ashok) ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಕ್ವಾರ್ಟರ್ ಆದರೂ ಹೇಳಲಿ. ಫುಲ್ ಬಾಟಲ್ ಹೇಳಲಿ ನಾವು ತಲೆ ಕಡೆಸಿಕೊಳ್ಳುವುದಿಲ್ಲ. ವಿರೋಧ ಪಕ್ಷದವರಾಗಿ ಅಷ್ಟು ವಿರೋಧ ಮಾಡದಿದ್ದರೆ ಹೇಗೆ ಹೇಳಿ. ಅವರು ನಿಜವಾಗಲೂ ವಿರೋಧ ಮಾಡಬೇಕಿದ್ದರೇ ವಿಧಾನಸಭೆಯಲ್ಲೇ ಅದನ್ನು ಹೇಳಬಹುದಿತ್ತು. ವಿಧಾನಸಭೆಯಲ್ಲಿ ಬೆಂಬಲ ಕೊಟ್ಟು ಈಗ ಈ ರೀತಿ ಹೇಳಿದರೆ ಅದರಲ್ಲಿ ಅರ್ಥ ಇದ್ಯಾ. ಅವರು ಬೆಂಗಳೂರಿನ ಒಂದು ಭಾಗ. ಅವರ ಎಲ್ಲಾ ಸಲಹೆಗಳನ್ನ ಮತ್ತೊಂದು ಬಾರಿ ಪಡೆಯುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಗಂಗಾವತಿ ಕ್ಷೇತ್ರದಲ್ಲಿ ಉಪಚುನಾವಣೆ ನಡೆದರೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ತಾರೆ – ಸಿಎಂ
ರಾಮನಗರ(Ramanagara) ಹೆಸರು ಬದಲಾವಣೆ ವಿಚಾರವಾಗಿ ಮಾತನಾಡಿ, ಈ ಪ್ರಕ್ರಿಯೆಯಲ್ಲಿ ವಿಳಂಬವೇ ಆಗಿಲ್ಲ. ಅದರ ಎಲ್ಲಾ ಪ್ರಕ್ರಿಯೆ ನಡೆಯುತ್ತಲ್ಲೇ ಇದೆ. ಶುಭಗಳಿಗೆ ಶುಭ ಮುಹೂರ್ತ ಬರಬೇಕು. ಶೀಘ್ರದಲ್ಲೇ ಶುಭ ಮುಹೂರ್ತ ಬರುತ್ತಿದೆ. ಆಗ ಅದನ್ನ ಹೇಳುತ್ತೇನೆ ಎಂದರು. ಇದನ್ನೂ ಓದಿ: ನಾಳೆ ಚಿನ್ನಸ್ವಾಮಿ ಸುತ್ತಮುತ್ತ ನೋ ಪಾರ್ಕಿಂಗ್ – ಎಲ್ಲಿ ಪಾರ್ಕ್ ಮಾಡಬಹುದು?
ಈ ಬಾರಿ ನಾನು ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಯಾರು ಹುಟ್ಟುಹಬ್ಬ ಆಚರಿಸಬಾರದು ಎಂದು ನಾನು ಹೇಳಿದ್ದೆ. ಕುಟುಂಬದ ಜೊತೆ ನಮ್ಮದೇ ಕಬಿನಿ ಕಾಡಿನಲ್ಲಿ ಕುಟುಂಬದ ಜೊತೆ ಮೂರು ದಿನ ಕಾಲ ಕಳೆದಿದ್ದೇನೆ. ಎಲ್ಲರ ಆಶೀರ್ವಾದ ನನಗೆ ಇರಲಿ ಎಂದರು.
ಬೆಂಗಳೂರು: ರಾಜಧಾನಿ ಬೆಂಗಳೂರಿನ ಆಡಳಿತದ ಹೊಣೆ ಹೊತ್ತಿದ್ದ ʻಬಿಬಿಎಂಪಿʼ (BBMP) ಹೆಸರು ಇತಿಹಾಸ ಪುಟ ಸೇರಲಿದ್ದು, ನಾಳೆಯಿಂದ (ಮೇ 15) ಗ್ರೇಟರ್ ಬೆಂಗಳೂರು ಆಡಳಿತ ಜಾರಿಯಾಗಲಿದೆ. ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯು ʻಗ್ರೇಟರ್ ಬೆಂಗಳೂರು ಪ್ರಾಧಿಕಾರʼ (Greater Bengaluru Authority) ಆಗಿ ಬದಲಾಗಲಿದೆ. ಈ ಕುರಿತು ರಾಜ್ಯ ಸರ್ಕಾರ ಇಂದು ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಇದರೊಂದಿಗೆ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯಲ್ಲಿ (Bengaluru Administrative Act) ಸುಗಮ ಆಡಳಿತ ತರುವ ದೃಷ್ಟಿಯಿಂದ ಗರಿಷ್ಠ 7 ಪಾಲಿಕೆ ರಚನೆಗೆ ಪ್ರಸ್ತಾಪ ಮಾಡಲಾಗಿದೆ. ಈ ಕಾಯ್ದೆಗೆ ನಿಯಮಾವಳಿ ರೂಪಿಸಿದ ಬಳಿಕ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಜೊತೆಗೆ ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ಜಿಬಿಎ ಮುಖ್ಯ ಆಯುಕ್ತರು ಎಂದು ಹೆಸರು ಬದಲಾವಣೆ ಮಾಡಲಾಗಿದೆ. ಜೊತೆಗೆ ಹೊಸ ಆಡಳಿತಾಧಿಕಾರಿಯನ್ನೂ ನೇಮಕ ಮಾಡಲಾಗುತ್ತದೆ. ಇದನ್ನೂ ಓದಿ: ನಮಗೆ ಯಾರಾದ್ರು ತೊಂದರೆ ಕೊಟ್ಟರೆ, ಸುಮ್ಮನೆ ಬಿಡಲ್ಲ: ಪಾಕ್ ವಿರುದ್ಧ ಗುಡುಗಿದ ಯೋಗಿ ಆದಿತ್ಯನಾಥ್
ಕಾಯ್ದೆ ಹಾದಿ ಹೇಗೆ?
ವಿಧಾನ ಮಂಡಲದಲ್ಲಿ ಮಾರ್ಚ್ 13ರಂದು ಅಂಗೀಕಾರವಾಗಿದ್ದ ʻಗ್ರೇಟರ್ ಬೆಂಗಳೂರು ಆಡಳಿತ ಮಸೂದೆ-2024ʼಯನ್ನು ರಾಜ್ಯಪಾಲರ ಅಂಕಿತಕ್ಕಾಗಿ 2025ರ ಮಾರ್ಚ್ 17ರಂದು ಕಳುಹಿಸಲಾಗಿತ್ತು. ಮಸೂದೆಯು ಸಂವಿಧಾನದ 74ನೇʼ ತಿದ್ದುಪಡಿಗೆ ವಿರುದ್ಧವಾಗಿದೆ ಮತ್ತು ದೆಹಲಿ ಮಹಾನಗರ ಪಾಲಿಕೆಯ ವಿಭಜನೆ ಸಂದರ್ಭದಲ್ಲಿ ಆದಂತೆ ಸಮಸ್ಯೆಗಳು ಸೃಷ್ಟಿಯಾಗುತ್ತವೆʼ ಎಂದು ಬೆಂಗಳೂರು ಟೌನ್ ಹಾಲ್ ಸಂಘಟನೆ ಹಾಗೂ ಬಿಜೆಪಿ ನಾಯಕರ ನಿಯೋಗಗಳು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದವು. ಮಸೂದೆಯನ್ನು ತಡೆ ಹಿಡಿಯುವಂತೆಯೂ ಒತ್ತಾಯಿಸಿದ್ದವು. ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು – ಪಾಕ್ ಬಂಧಿಸಿದ್ದ ಬಿಎಸ್‌ಎಫ್ ಯೋಧ ತಾಯ್ನಾಡಿಗೆ ವಾಪಸ್
ಇದಕ್ಕೆ ಪ್ರತಿಕ್ರಿಯಿಸಿದ್ದ ರಾಜ್ಯಪಾಲರು ʻಎರಡೂ ಮನವಿಗಳನ್ನು ನಾನು ಪರಿಶೀಲಿಸಿದ್ದೇನೆ. ಈ ಮಸೂದೆಯು ಕಾನೂನಾತ್ಮಕ ಮತ್ತು ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಒಳಗೊಂಡಿದೆ. ಆದ್ದರಿಂದ ಎರಡೂ ಮನವಿ ಪತ್ರಗಳಲ್ಲಿ ಪ್ರಸ್ತಾಪಿಸಿರುವ ಪ್ರಮುಖ ವಿಷಯಗಳ ಕುರಿತು ಸ್ಪಷ್ಟನೆ ಅಗತ್ಯವಿದೆ’ ಎಂದು ಮಾರ್ಚ್ 25ರಂದು ಮಸೂದೆಯನ್ನು ಹಿಂದಿರುಗಿಸಿದ್ದರು. ಅದಕ್ಕೆ ಅಗತ್ಯ ಸ್ಪಷನೆಯನ್ನು ರಾಜ್ಯ ಸರ್ಕಾರ ನೀಡಿತ್ತು. ಏಪ್ರಿಲ್ 24ರಂದು ಮಸೂದೆಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದರು. ಅಂದು ಸಂಜೆಯೇ ‘ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ- 2024’ ಅನ್ನು ಅಧಿಸೂಚಿಸಿ, ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು. ಇದನ್ನೂ ಓದಿ: ನಮಗೆ ಯಾರಾದ್ರು ತೊಂದರೆ ಕೊಟ್ಟರೆ, ಸುಮ್ಮನೆ ಬಿಡಲ್ಲ: ಪಾಕ್ ವಿರುದ್ಧ ಗುಡುಗಿದ ಯೋಗಿ ಆದಿತ್ಯನಾಥ್
ಮೇ 15ರಿಂದ:
ಸದ್ಯ ಬಿಬಿಎಂಪಿಯ 225 ವಾರ್ಡ್‌ಗಳು ಜೆಬಿಎ ವ್ಯಾಪ್ತಿಯಲ್ಲಿರಲಿದೆ. ನಂತರ ಬಿಬಿಎಂಪಿ ವ್ಯಾಪ್ತಿ ಮಾತ್ರ ʻಗ್ರೇಟರ್ ಬೆಂಗಳೂರು ಪ್ರದೇಶʼ ಎಂದಾಗಲಿದ್ದರೂ ನಂತರದ ದಿನಗಳಲ್ಲಿ ವ್ಯಾಪ್ತಿ ಹಿಗ್ಗಲಿದೆ. ತಲಾ ಸುಮಾರು 125 ವಾರ್ಡ್‌ಗಳ ಮೂರು ನಗರ ಪಾಲಿಕೆಗಳನ್ನು ರಚಿಸುವ ಯೋಜನೆ ಇದ್ದು ಅದಕ್ಕೆ ತಕ್ಕಂತೆ ʻಗ್ರೇಟರ್ ಬೆಂಗಳೂರು ಪ್ರದೇಶʼದ ಗಡಿಯನ್ನು ಗುರುತಿಸಲಾಗುತ್ತದೆ. ನಗರದ ಸುತ್ತಲಿರುವ ಕೈಗಾರಿಕಾ ಪ್ರದೇಶಗಳನ್ನೂ ಒಳಗೊಂಡಂತೆ ಎಲೆಕ್ಟ್ರಾನಿಕ್ ಸಿಟಿ ಅತ್ತಿಬೆಲೆ ಜಿಗಣಿ ಕೈಗಾರಿಕೆ ಪ್ರದೇಶ ಬೊಮ್ಮಸಂದ್ರ, ಸರ್ಜಾಪುರ, ಬಾಗಲೂರು, ರಾಜಾನುಕುಂಟೆ, ಹೆಸರಘಟ್ಟ, ದಾಸನಪುರ, ಮಾಕಳಿ, ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ʻಗ್ರೇಟರ್ ಬೆಂಗಳೂರು ಪ್ರದೇಶʼಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಕಾಯ್ದೆಯಲ್ಲೇ ಇರುವಂತೆ ಎಲ್ಲ ನಗರ ಪಾಲಿಕೆಗಳ ಹೆಸರು ʻಬೆಂಗಳೂರುʼ ಎಂದೇ ಆರಂಭವಾಗಬೇಕಿದೆ. ʻಬೆಂಗಳೂರು ಕೇಂದ್ರ ನಗರ ಪಾಲಿಕೆʼ ʻಬೆಂಗಳೂರು ಉತ್ತರ ನಗರ ಪಾಲಿಕೆʼ ʻಬೆಂಗಳೂರು ದಕ್ಷಿಣ ನಗರ ಪಾಲಿಕೆʼ… ಹೀಗೆ ಹೆಸರಿಸಲಾಗುತ್ತದೆ. ʻಗ್ರೇಟರ್ ಬೆಂಗಳೂರು ಪ್ರದೇಶʼ ವ್ಯಾಪ್ತಿಯನ್ನು ಹಿಗ್ಗಿಸಿದ ಮೇಲೆ ಅದರನ್ವಯ ಮೂರು ಅಥವಾ ಐದು ನಗರಪಾಲಿಕೆಗಳನ್ನು ರಚಿಸಲಾಗುತ್ತದೆ ಎಂದು ಸರ್ಕಾರಿ ಮೂಲಗಳು ಮಾಹಿತಿ ನೀಡಿವೆ.
ಬೆಂಗಳೂರು: ಪಹಲ್ಗಾಮ್ ಉಗ್ರರ ದಾಳಿಗೆ (Pahalgam Terrorist Attack) ಭಾರತ ಮತ್ತಷ್ಟು ಸೇಡು ತೀರಿಸಿಕೊಳ್ಳಬೇಕು. ಇದಕ್ಕೆ ನಮ್ಮೆಲ್ಲರ ಬೆಂಬಲ ಇದೆ ಅಂತ ಮಾಜಿ ಸಚಿವ ಕಾಂಗ್ರೆಸ್ ನಾಯಕ ಆರ್.ವಿ ದೇಶಪಾಂಡೆ (RV Deshpande) ತಿಳಿಸಿದ್ದಾರೆ.
ಬೆಂಗಳೂರಿನ ಡಿಸಿಎಂ ಡಿಕೆಶಿ ನಿವಾಸದ ಬಳಿ ಭಾರತ-ಪಾಕಿಸ್ತಾನ (India-Pakistan) ನಡುವಿನ ಸಂಘರ್ಷದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕದನ ವಿರಾಮ ಒಪ್ಪಂದ ಆದ ನಂತರ ಪಾಕಿಸ್ತಾನ ಸೇನೆ ಗೊತ್ತಿದ್ದೂ ಉದ್ದೇಶ ಪೂರ್ವಕವಾಗಿ ಭಾರತದ ಮೇಲೆ ಫೈರಿಂಗ್ ಮಾಡಿದೆ. ಕದನ ವಿರಾಮ ಉಲ್ಲಂಘನೆ (Ceasefire Violation) ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್ ಉದ್ವಿಗ್ನತೆಯಿಂದ ಬಂದ್ ಆಗಿದ್ದ 32 ಏರ್‌ಪೋರ್ಟ್‌ಗಳು ಮತ್ತೆ ಕಾರ್ಯಾರಂಭ
ನಮ್ಮ 3 ಸೇನಾಪಡೆಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ತಕ್ಕ ಉತ್ತರ ಕೊಟ್ಟಿದೆ. ಆದರೂ ಪಾಕಿಸ್ತಾನ ಪ್ರತಿ ಬಾರಿ ಅಧಿಕಪ್ರಸಂಗ ತನ ಮಾಡ್ತಿದೆ. ಮೈಮೇಲೆ ಹಾಕಿಕೊಂಡು ಬೇರೆ ಬೇರೆ ದೇಶದ ಸಹಾಯ ಪಡೆದುಕೊಳ್ತಿದೆ. ಭಾರತ ಸರ್ಕಾರದ ನಿರ್ಣಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಕೇಂದ್ರ ಸರ್ಕಾರದ ನಿರ್ಣಯವನ್ನ ನಾನು ಮೆಚ್ಚುತ್ತೇನೆ ಎಂದು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: ಲಷ್ಕರ್ ಉಗ್ರನ ಅಂತ್ಯಕ್ರಿಯೆಯಲ್ಲಿ ಪಾಕ್ ಸೇನಾಧಿಕಾರಿಗಳು ಭಾಗಿ – ಭಾರತ ತೀವ್ರ ಆಕ್ಷೇಪ
ಮುಂದುವರಿದು… ಪಾಕಿಸ್ತಾನದ ಹೇಳಿಕೆಯನ್ನ ನಂಬೋಕೆ ಆಗೊಲ್ಲ. ಪಹಲ್ಗಾಮ್‌ನಲ್ಲಿ 28 ಜನ ಅಮಾಯಕರನ್ನ ಹತ್ಯೆ ಮಾಡಿದ್ರು. ಆ ಹತ್ಯೆಗೆ ಇನ್ನೂ ಸೇಡು ತೆಗೆದುಕೊಳ್ಳಬೇಕು. ಭಾರತ ಸರ್ಕಾರ, ಸೇನೆ ಉತ್ತಮ ಕೆಲಸ ಮಾಡ್ತಿದ್ದಾರೆ, ಅದನ್ನ ಮೆಚ್ಚಬೇಕು. ಈಗಾಗಲೇ ನಮ್ಮ ಸೇನೆ ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟಿದೆ. ನಾವೆಲ್ಲಾ ಭಾರತೀಯರು ಪಕ್ಷಾತೀತವಾಗಿ ಒಗ್ಗಟ್ಟಾಗಿ ಸೇನೆ ಹಿಂದೆ ನಿಲ್ಲಬೇಕು ಎಂದು ಕರೆ ಕೊಟ್ಟರು.
ಇನ್ನೂ 1971ರ ಮಾದರಿಯಲ್ಲಿ ಪಾಕಿಸ್ತಾನವನ್ನ 2 ಭಾಗ ಮಾಡಬೇಕು ಎಂಬ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅಂತಹ ಪರಿಸ್ಥಿತಿ ಇಲ್ಲ. ಎರಡು ಭಾಗ ಮಾಡೋ ಸಾಧ್ಯತೆ ಇಲ್ಲ. ಇದೆಲ್ಲ ಸುಳ್ಳು ಸುದ್ದಿ. ಯಾರು ಕಿವಿಗೊಡಬಾರದು ಎಂದು ಹೇಳಿದರು. ಇದನ್ನೂ ಓದಿ: ಭಾರತ-ಪಾಕ್ ʻಕದನ-ವಿರಾಮʼ ಮಾತುಕತೆ – ಇಂದು ಎರಡೂ ದೇಶಗಳ ಡಿಜಿಎಂಒಗಳ ಸಭೆ