Tag: ಡಿ.ಕೆ.ಶಿವಕುಮಾರ್

  • ಶನಿವಾರ ಗುಡ್‌ನ್ಯೂಸ್‌ ಕೊಡ್ತಾರಾ ಡಿಕೆಶಿ – ಎ-ಖಾತಾ ವಿತರಣೆ ಬಗ್ಗೆ ಸುಳಿವು ಕೊಟ್ಟ ಡಿಸಿಎಂ

    ಶನಿವಾರ ಗುಡ್‌ನ್ಯೂಸ್‌ ಕೊಡ್ತಾರಾ ಡಿಕೆಶಿ – ಎ-ಖಾತಾ ವಿತರಣೆ ಬಗ್ಗೆ ಸುಳಿವು ಕೊಟ್ಟ ಡಿಸಿಎಂ

    – ಗ್ರೇಟರ್‌ ಬೆಂಗ್ಳೂರು ರದ್ದು ಮಾಡ್ತೀವಿ ಎಂದ ಅಶೋಕ್‌ ವಿರುದ್ಧ ಡಿಕೆಶಿ ಗರಂ

    ಬೆಂಗಳೂರು: ಬಿ ಖಾತಾಗಳಿಗೆ ಎ ಖಾತಾ (A Khata) ಮಾನ್ಯತೆ ಘೋಷಣೆ ಆಗಿ ತಿಂಗಳೇ ಕಳೆದ್ರೂ ಇನ್ನೂ ವಿತರಣೆ ಮಾಡಿಲ್ಲ. ಆ್ಯಪ್ ಅಭಿವೃದ್ಧಿ ಪಡಿಸುತ್ತಾ ಇದ್ದೇವೆ ಎಂಬ ಕಥೆ ಹೇಳ್ತಾ ಇದ್ರು. ಎ ಖಾತಾ ವಿತರಣೆ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಪ್ರತಿಕ್ರಿಯಿಸಿ ನಾಳೆ ಮತ್ತೊಂದು ಸುದ್ದಿಗೋಷ್ಠಿ ಮಾಡಿ ಎ ಖಾತಾ ಅಪ್ಡೇಟ್ ನೀಡೋದಾಗಿ ತಿಳಿಸಿದ್ದಾರೆ.

    ಇನ್ನೂ ಓಸಿ, ಸಿಸಿ ವಿನಾಯ್ತಿ ಕುರಿತು ಪ್ರತಿಕ್ರಿಯಿಸಿ, 30×40 ನಿವೇಶನದಲ್ಲಿ ಮನೆ ನಿರ್ಮಿಸಿರುವವರಿಗೆ ವಿದ್ಯುತ್‌ ಸಂಪರ್ಕದ ಓಸಿಗೆ ಈಗಾಗಲೇ ಅನುಮೋದನೆ ಸಿಕ್ಕಿದೆ. ಕ್ಯಾಬಿನೆಟ್‌ನಲ್ಲಿ (Cabinet) ನಿರ್ಣಯ ಕೂಡ ಆಗಿದೆ. 30×40 ಹೆಚ್ಚಿನ ನಿವೇಶನಗಳದ್ದು ಸಿಎಂ ನಿರ್ಣಯ ತಗೋಳ್ತಾರೆ. ಸುಪ್ರೀಂ ಕೋರ್ಟ್ ನಿರ್ದೇಶನ ಇರೋದ್ರಿಂದ ಒಂದಷ್ಟು ಕಾನೂನು ಸಲಹೆಗಳನ್ನ ತೆಗೆದುಕೊಳ್ಳೋದಕ್ಕೆ ಸಿಎಂ ಸೂಚನೆ ಕೊಟ್ಟಿದ್ದಾರೆ. ಸಿಎಂ ಅವರೇ ನಿರ್ಣಯ ಮಾಡ್ತಾರೆ ಅಂತ ತಿಳಿಸಿದ್ದಾರೆ. ಇದನ್ನೂ ಓದಿ: ನಕ್ಷೆ ಮಂಜೂರಾತಿ, ಟಿಡಿಆರ್ ನೀಡುವ ಅಧಿಕಾರ ಇನ್ಮುಂದೆ GBA ವ್ಯಾಪ್ತಿಗೆ – ಸಿಎಂ ನೇತೃತ್ವದ ಸಭೆಯಲ್ಲಿ ನಿರ್ಣಯ

    ಅಶೋಕ್ ವಿರುದ್ಧ ಡಿಸಿಎಂ ಗರಂ
    ಇದೇ ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಜಿಬಿಎ ರದ್ದು ಮಾಡ್ತೆವೆ ಎಂಬ ಆರ್.ಅಶೋಕ್ (R Ashoka) ವಿಚಾರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಇದು ಮೊದಲ ಮೀಟಿಂಗ್, ಮೊದಲ ಮೀಟಿಂಗ್ ನಲ್ಲಿ ಅಜೆಂಡಾ ಕೊಡಲ್ಲ. ಅವರು ಹಿರಿಯರಾಗಿ ಬೆಂಗಳೂರು ನಗರಕ್ಕೆ ವಿರುದ್ಧ ಕೆಲಸ ಮಾಡ್ತಿದ್ದಾರೆ. ಇದು ಬಿಜೆಪಿಯವರು ಬೆಂಗಳೂರು ಜನರಿಗೆ ಮಾಡಿರೋ ಮೋಸ ಜನರು ಅವರಿಗೆ ಅವಕಾಶ ನೀಡಿದ್ರೂ ಅವರು ಬಂದಿಲ್ಲ. ಈ ವಿಚಾರದಲ್ಲಿ ಬಹಳ ವಿಷಾದ ಇದೆ. ಅವರಿಗೆ ರಾಜಕಾರಣವೇ ಹೆಚ್ಚಾಗಿದೆ ವಜಾ ಮಾಡೋದು ಅವರಿಗೆ ಬಿಟ್ಟಿದ್ದು. ಕಾಂಗ್ರೆಸ್‌ ಸರ್ಕಾರ ಪಂಚ ಗ್ಯಾರಂಟಿ ಕೊಟ್ಟಿರೋದು. ಬದಲಾವಣೆ ತಂದಿರೋದು ಇವತ್ತಿನ ತನಕ ಬಿಜೆಪಿ ಮಾಡೋಕೆ ಆಗಿಲ್ಲ. ಅವರು ಹೇಳ್ತಾರೆ ಅಂತಾ ತಲೆಕೆಡಿಸಿಕೊಳ್ಳಲ್ಲ. ಅವರು ಎಲೆಕ್ಷನ್‌ಗೆ ನಿಲ್ಲಲ್ಲ ಅಂತಾ ಹೇಳಲಿ ಎಂದು ಸವಾಲ್‌ ಎಸೆದರು. ಇದನ್ನೂ ಓದಿ: ದರ್ಶನ್‌ಗೆ ಜೈಲಲ್ಲಿ ಹಾಸಿಗೆ, ದಿಂಬು ನೀಡದ ವಿಚಾರ – ‘ಜೈಲು ಪರಿಶೀಲಿಸಿ ರಿಪೋರ್ಟ್‌ ಕೊಡಿ’: ಕಾನೂನು ಪ್ರಾಧಿಕಾರಕ್ಕೆ ಕೋರ್ಟ್ ಆದೇಶ

  • ಬಿಗ್ ಬಾಸ್‌ಗೆ ಬೀಗ ಹಾಕಿದ್ದಕ್ಕೂ `ನಟ್ಟು ಬೋಲ್ಟ್’ ಹೇಳಿಕೆಗೂ ಸಂಬಂಧವಿಲ್ಲ: ಶಿವರಾಜ್ ತಂಗಡಗಿ

    ಬಿಗ್ ಬಾಸ್‌ಗೆ ಬೀಗ ಹಾಕಿದ್ದಕ್ಕೂ `ನಟ್ಟು ಬೋಲ್ಟ್’ ಹೇಳಿಕೆಗೂ ಸಂಬಂಧವಿಲ್ಲ: ಶಿವರಾಜ್ ತಂಗಡಗಿ

    – ನಾರಾಯಣಸ್ವಾಮಿ ಬಿಜೆಪಿಗೆ ಹೋಗಿ ಏನೇನೋ ಮಾತಾಡ್ತಿದ್ದಾರೆ
    – ಕ್ಯಾಬಿನೆಟ್ ಪುನರ್ ರಚನೆ ಮಾಡೋದು ಹೈಕಮಾಂಡ್ ಬಿಟ್ಟ ವಿಚಾರ

    ಬೆಂಗಳೂರು: ಬಿಗ್ ಬಾಸ್ ಮನೆಗೆ ಬೀಗ ಹಾಕಿದ್ದಕ್ಕೂ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ನಟ್ಟು ಬೋಲ್ಟ್ ಹೇಳಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಸಚಿವ ಶಿವರಾಜ್ ತಂಗಡಗಿ (Shivaraj Tangadagi) ತಿಳಿಸಿದ್ದಾರೆ.

    ಈ ವಿಚಾರವಾಗಿ ಬಿಜೆಪಿ, ಜೆಡಿಎಸ್ ಟೀಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಟ್ಟು ಬೋಲ್ಟ್ ಹೇಳಿಕೆಗೂ ಬಿಗ್ ಬಾಸ್ (Bigg Boss) ಮನೆಗೆ ಬೀಗ ಹಾಕಿದ್ದಕ್ಕೂ ಸಂಬಂಧವಿಲ್ಲ. ಬಿಜೆಪಿ, ಜೆಡಿಎಸ್ ಅವರಿಗೆ ಬೇರೆ ಕೆಲಸ ಇಲ್ಲ. ಹಾಗಾಗಿ ಆರೋಪ ಮಾಡ್ತಾರೆ. ನರೇಂದ್ರಸ್ವಾಮಿ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಮಾಲಿನ್ಯ ಮಂಡಳಿಗೆ ನಿಯಮಗಳು ಇವೆ. ಸಿಎಂ, ಸರ್ಕಾರ, ಸಚಿವರಿಗೆ ಯಾರ ಮೇಲೂ ದ್ವೇಷ ಇಲ್ಲ. ನಾವು ಯಾರ ಮೇಲೂ ದ್ವೇಷದ ರಾಜಕೀಯ ಮಾಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಛಲವಾದಿ ನಾರಾಯಣಸ್ವಾಮಿ ಕರ್ನಾಟಕದ ಅಪ್ರಬುದ್ಧ ವಿರೋಧ ಪಕ್ಷದ ನಾಯಕ: ಪ್ರದೀಪ್ ಈಶ್ವರ್

    ಮಾಲಿನ್ಯ ನಿಯಂತ್ರಣ ಬೋರ್ಡ್ ಅಧ್ಯಕ್ಷ ನರೇಂದ್ರಸ್ವಾಮಿ ಅವರು ಈಗಾಗಲೇ ಹೇಳಿದ್ದಾರೆ. ಕಾನೂನು ರೀತಿ ಕ್ರಮ ಆಗುತ್ತದೆ. ಮಾಲಿನ್ಯ ನಿಯಂತ್ರಣ ಮಂಡಳಿ ಓಪನ್ ಮಾಡಿಸೋದು ಬೇಡ ಅಂತ ಹೇಳಿದ್ದಕ್ಕೆ ನರೇಂದ್ರಸ್ವಾಮಿ ವಿವರಣೆ ಕೊಟ್ಟಿದ್ದಾರೆ. ಬಿಜೆಪಿ ಅವರು ದ್ವೇಷ ತುಂಬಿಸೋ ಕೆಲಸ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

    ನಟ ಸುದೀಪ್‌ರನ್ನ ನಾವು ಯಾಕೆ ಟಾರ್ಗೆಟ್ ಮಾಡಬೇಕು. ಶೋ ನಡೆಸೋದಕ್ಕೂ ಟಾರ್ಗೆಟ್ ಮಾಡೋದಕ್ಕೂ ಏನು ಸಂಬಂಧ? ವಾಸ್ತವ ಸತ್ಯದ ಬಗ್ಗೆ ಬಿಜೆಪಿ ಮಾತಾಡಲಿ. ಮನಸ್ಸು ಕೆಡಿಸೋದೇ ಬಿಜೆಪಿಯವರ ಕೆಲಸ. ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್‌ನಲ್ಲಿದ್ದಾಗ ಸರಿ ಇದ್ದರು. ಅಲ್ಲಿ ಹೋಗಿ ಏನೇನೋ ಮಾತಾಡ್ತಾ ಇದ್ದಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಒಂದು ಬಾರಿ ನೋಟಿಸ್ ಕೊಟ್ಟ ಮೇಲೆ ಅದು ಸರಿ ಆಗೋವರೆಗೂ ಬೀಗ ತೆಗೆಯೋದು ಸರಿಯಲ್ಲ: ರಾಮಲಿಂಗಾರೆಡ್ಡಿ

    ನವೆಂಬರ್‌ನಲ್ಲಿ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಮಾಡೋದು ಹೈಕಮಾಂಡ್ ಬಿಟ್ಟ ವಿಚಾರ. ಹೈಕಮಾಂಡ್ ಈ ಬಗ್ಗೆ ನಿರ್ಧಾರ ಮಾಡುತ್ತೆ ಎಂದಿದ್ದಾರೆ.

    ಸಿಎಂ ಡಿನ್ನರ್ (Dinner meeting) ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಯಾಕೆ ಸಿಎಂ ಊಟಕ್ಕೆ ಕರೆಯಬಾರದಾ? ಊಟಕ್ಕೂ ನವೆಂಬರ್ ಕ್ರಾಂತಿಗೂ ಏನು ಸಂಬಂಧ? ಏನು ಸಂಬಂಧವಿಲ್ಲ. ಊಟಕ್ಕೆ ಕರೆದಿದ್ದಾರೆ ಹೋಗ್ತೇವೆ ಅಷ್ಟೇ ಎಂದು ತಿಳಿಸಿದ್ದಾರೆ.

    ರಾಜ್ಯೋತ್ಸವ ಪ್ರಶಸ್ತಿಗೆ ಇನ್ನು ಅರ್ಜಿ ಹಾಕೋ ಹಾಗಿಲ್ಲ

    ರಾಜ್ಯೋತ್ಸವ ಪ್ರಶಸ್ತಿಗೆ ಈ ವರ್ಷದಿಂದ ಅರ್ಜಿ ಹಾಕೋ ಹಾಗೇ ಇಲ್ಲ. ಪ್ರಶಸ್ತಿ ಕೊಡಲು ಸಮಿತಿ ಮಾಡ್ತಾ ಇದ್ದೇವೆ‌. ಸಮಿತಿ ಪ್ರಶಸ್ತಿ ಪುರಸ್ಕೃತರನ್ನ ಆಯ್ಕೆ ಮಾಡಲಿದೆ.ಈಗಾಗಲೇ ಸಮಿತಿ ರಚನೆ ಆಗಿದೆ.ಇಂದು ಆದೇಶ ಮಾಡ್ತೀವಿ. ಅ.15 ರಂದು ಸಮಿತಿ ಮೊದಲ ಸಭೆ ಮಾಡುತ್ತದೆ ಎಂದು ಹೇಳಿದ್ದಾರೆ.

    ಈ ವರ್ಷ ಅರ್ಜಿ ಹಾಕದೇ ಸಾಧಕರನ್ನ ಆಯ್ಕೆ ಮಾಡಲು ಪ್ರಯೋಗ ಮಾಡ್ತಾ ಇದ್ದೇವೆ. ಆನ್ ಲೈನ್ ಅರ್ಜಿ, ನಮ್ಮ ಬಳಿ ಬರೋ ಅರ್ಜಿ ಎಲ್ಲವನ್ನು ಸಮಿತಿಗೆ ಕೊಡ್ತೀವಿ.ಸಮಿತಿಯೂ ಪ್ರಶಸ್ತಿ ಪುರಸ್ಕೃತರನ್ನ ಆಯ್ಕೆ ಮಾಡಲಿದೆ ಎಂದು ತಿಳಿಸಿದ್ದಾರೆ.

  • ಬಿಗ್‌ಬಾಸ್‌ಗೆ ರಿಲೀಫ್‌| ಜಾಲಿವುಡ್‌ ಸ್ಟುಡಿಯೋಸ್‌ ಓಪನ್‌ಗೆ ಡಿಸಿಎಂ ಸೂಚನೆ – ಧನ್ಯವಾದ ತಿಳಿಸಿದ ಕಿಚ್ಚ ಸುದೀಪ್‌

    ಬಿಗ್‌ಬಾಸ್‌ಗೆ ರಿಲೀಫ್‌| ಜಾಲಿವುಡ್‌ ಸ್ಟುಡಿಯೋಸ್‌ ಓಪನ್‌ಗೆ ಡಿಸಿಎಂ ಸೂಚನೆ – ಧನ್ಯವಾದ ತಿಳಿಸಿದ ಕಿಚ್ಚ ಸುದೀಪ್‌

    ಜಾಲಿವುಡ್‌ ಸ್ಟುಡಿಯೋಸ್‌ ಓಪನ್‌ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಸೂಚನೆ ನೀಡಿದ್ದು, ಬಿಗ್‌ಬಾಸ್‌ಗೆ ರಿಲೀಫ್‌ ಸಿಕ್ಕಿದೆ. ಮನವಿಗೆ ಸ್ಪಂದಿಸಿದ ಡಿಸಿಎಂಗೆ ಕಿಚ್ಚ ಸುದೀಪ್‌ ಧನ್ಯವಾದ ತಿಳಿಸಿದ್ದಾರೆ.

    ಸುದೀಪ್‌ ಎಕ್ಸ್‌ ಪೋಸ್ಟ್‌ನಲ್ಲೇನಿದೆ?
    ಸಕಾಲಿಕ ಸ್ಪಂದನೆಗಾಗಿ ಡಿ.ಕೆ.ಶಿವಕುಮಾರ್ ಸರ್‌ಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ. ಇತ್ತೀಚಿನ ಅವ್ಯವಸ್ಥೆ ಅಥವಾ ಗೊಂದಲಗಳಲ್ಲಿ ಬಿಗ್‌ಬಾಸ್‌ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಕರೆಗೆ ತಕ್ಷಣ ಸ್ಪಂದಿಸಿದ್ದಕ್ಕಾಗಿ DCM ಅವರನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ. ನಲಪಾಡ್‌ ಅವರ ಸಮರ್ಪಿತ ಪ್ರಯತ್ನಗಳಿಗೆ ಧನ್ಯವಾದಗಳು. ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಇಲ್ಲಿಯೇ ಇರುತ್ತದೆ ಎಂದು ಸುದೀಪ್‌ ಸಂದೇಶ ಹಂಚಿಕೊಂಡಿದ್ದಾರೆ.

    ಪರಿಸರ ನಿಯಮ ಉಲ್ಲಂಘನೆ ಆರೋಪದಲ್ಲಿ ಜಾಲಿವುಡ್‌ ಸ್ಟುಡಿಯೋಸ್‌ ಬಂದ್‌ ಮಾಡಲಾಗಿತ್ತು. ಸ್ಟುಡಿಯೋಸ್‌ನಲ್ಲೇ ಇರುವ ಬಿಗ್‌ಬಾಸ್‌ ಮನೆಗೂ ಇದರ ಬಿಸಿ ತಟ್ಟಿತ್ತು. ಮನೆಯಲ್ಲಿದ್ದ ಎಲ್ಲಾ ಸ್ಪರ್ಧಿಗಳನ್ನು ಹೊರಗೆ ಹಾಕಲಾಗಿತ್ತು. ಇದು ಭಾರಿ ಚರ್ಚೆಗೆ ಕಾರಣವಾಗಿತ್ತು.

    ಡಿಸಿಎಂ ಡಿಕೆ ಶಿವಕುಮಾರ್‌ ಅವರ ನಟ್ಟು ಬೋಲ್ಟು ಹೇಳಿಕೆ ಇದೇ ಹೊತ್ತಲ್ಲಿ ಚರ್ಚೆಗೆ ಬಂದಿತು. ಸುದೀಪ್ ಟಾರ್ಗೆಟ್ ಬಗ್ಗೆಯೇ ಬಿಸಿಬಿಸಿ ಚರ್ಚೆಯಾಗಿತ್ತು. ಕನ್ನಡ ಇಂಡಸ್ಟ್ರಿ ಟಾರ್ಗೆಟ್ ಮಾಡಿದ್ದಾರೆಂದು ಡಿಸಿಎಂ ಡಿಕೆ ಶಿವಕುಮಾರ್ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಆರೋಪಗಳ ಸುರಿಮಳೆ ಬಂದಿತ್ತು.

    ಈಗ ಸ್ಟುಡಿಯೋಸ್‌ ಓಪನ್‌ಗೆ ಡಿಸಿಎಂ ಸೂಚನೆ ಕೊಟ್ಟಿದ್ದಾರೆ. ಅದಕ್ಕೆ, Thank U sir ಅಂತಾ ಸ್ವತಃ ಕಿಚ್ಚ ಸುದೀಪ್ ಡಿಸಿಎಂ ಡಿಕೆಶಿಗೆ ಧನ್ಯವಾದ ತಿಳಿಸಿದ್ದಾರೆ.

  • ಕಂಡಕಂಡಲ್ಲಿ ಕಸ ಬಿಸಾಡಿದ್ರೆ ಕೇಸ್ ಹಾಕ್ತೇವೆ: ಡಿಸಿಎಂ

    ಕಂಡಕಂಡಲ್ಲಿ ಕಸ ಬಿಸಾಡಿದ್ರೆ ಕೇಸ್ ಹಾಕ್ತೇವೆ: ಡಿಸಿಎಂ

    ಬೆಂಗಳೂರು: ದಸರಾ ಹಿನ್ನೆಲೆ ಕಸ ಜಾಸ್ತಿ ಬಂದಿದೆ. ಕಂಡಕಂಡಲ್ಲಿ ಯಾರು ಕಸ ಹಾಕಿದ್ರು ಅಂತ ಪರಿಶೀಲಿಸಿ ಅವರ ವಿರುದ್ಧ ಕೇಸ್ ಹಾಕುತ್ತೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

    ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಡಿಸಿಎಂ ನೇತೃತ್ವದಲ್ಲಿ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆದಿತ್ತು. ಈ ವೇಳೆ ಮಾತನಾಡಿದ ಅವರು ದಸರಾ ಹಬ್ಬ ಇದ್ದಿದ್ದರಿಂದ ಜಾಸ್ತಿ ಕಸ ಬಂದಿದೆ. ಕಸ ಎತ್ತಲು ಡ್ರೈವ್ ಮಾಡಲು ಸೂಚನೆ ನೀಡಲಾಗಿದೆ. ಎಲ್ಲೆಲ್ಲಿ ಸಾರ್ವಜನಿಕರು ಕಸ ಹಾಕಿದ್ದಾರೆ ಎಂಬುದನ್ನು ಟ್ರಾಫಿಕ್ ಪೊಲೀಸ್, ಸಿಸಿ ಕ್ಯಾಮರಾಗಳ ಮೂಲಕ ಪರಿಶೀಲಿಸಿ, ಕಸ ಹಾಕಿದವರ ವಿರುದ್ಧ ಕೇಸ್ ಹಾಕಿ ಎಂದು ಸೂಚನೆ ನೀಡಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಪ್ರಶ್ನೆ ಸಿಂಪಲ್ ಇರಬೇಕು ಇದು ಟೂ ಮಚ್ – ಜಾತಿಗಣತಿ ವೇಳೆ ಡಿ.ಕೆ ಶಿವಕುಮಾರ್‌ ಅಸಮಾಧಾನ

    ಈಗ ಇರುವ ಕಸವನ್ನು ಸ್ವಚ್ಛ ಮಾಡಲು ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಬೆಂಗಳೂರು ಸುಂದರವಾಗಿ ಇರಬೇಕು. ಕಸದ ಬಗ್ಗೆ ಮ್ಯಾಸೀವ್ ಡ್ರೈವ್ ಮಾಡೋ ಪ್ಲ್ಯಾನ್ ಮಾಡಿದ್ದೇವೆ. ಯಾರಾದ್ರು ಕಸ ಹಾಕಿದ್ರೆ, ಅದರ ಬಗ್ಗೆ ಸಾರ್ವಜನಿಕರು ಪಾಲಿಕೆಗೆ ಮಾಹಿತಿ ಕೊಡುವ ಬಗ್ಗೆ ನಿರ್ಧಾರ ಮಾಡಿದ್ದೇವೆ. ಕಸ ಹಾಕಿದವರಿಗೆ ದಂಡ ವಿಧಿಸಿ ಈಗಾಗಲೇ 1 ಕೋಟಿ ರೂ. ಫೈನ್ ಸಂಗ್ರಹ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಕಸ ವಿಲೇವಾರಿಯ ಡ್ರೈವ್‌ಗಳನ್ನು ಮತ್ತಷ್ಟು ಜಾಸ್ತಿ ಮಾಡುತ್ತೇವೆ. ಬೆಂಗಳೂರು ಹೊರವಲಯದ ಕಸವನ್ನು ನನ್ನ ಇಲಾಖೆಗೆ ಸೇರಿಸಿಕೊಂಡಿದ್ದೇವೆ. ಇದನ್ನು ಸ್ವಚ್ಛ ಮಾಡೋ ಕೆಲಸ ಮಾಡುತ್ತೇವೆ. ಮುಂದಿನ ವಾರ ಈ ಬಗ್ಗೆಯೂ ಈ ಸಭೆ ಮಾಡ್ತೇವೆ ಎಂದು ಹೇಳಿದ್ದಾರೆ.

    ಬಿ ಖಾತಾದರರಿಗೆ ಎ ಖಾತಾ ನೀಡುವ ವಿಚಾರವಾಗಿ ಮಾತನಾಡಿದ ಅವರು, ಎ ಖಾತಾ ಹಾಗೂ ಬಿ ಖಾತಾದ ಬಗ್ಗೆ ಮಹತ್ವದ ವಿಷಯ ಇದೆ. ಮುಂದಿನ ವಾರ ಈ ಬಗ್ಗೆ ಸಭೆ ಮಾಡಿ, ವಿವರವಾದ ಮಾಹಿತಿಯನ್ನು ಕೊಡುತ್ತೇನೆ. ಎ ಖಾತಾ ಮತ್ತು ಬಿ ಖಾತಾ ಬಗ್ಗೆ ನಾನು ತೆಗೆದುಕೊಂಡಿರುವುದು ರೆವಲ್ಯೂಷನ್ ತೀರ್ಮಾನವಾಗಿದೆ. ಇದೆಲ್ಲ ಟೀಕೆ ಮಾಡೋರಿಗೂ ಗೊತ್ತಾಗಬೇಕು. ಟೀಕೆ ಮಾಡೋರು ಹುಡುಕಿ ಟೀಕೆ ಮಾಡಬೇಕು. ಮುಂದಿನ ವಾರ ಈ ಬಗ್ಗೆ ಮಾಹಿತಿ ಕೊಡ್ತೀನಿ ಎಂದು ತಿಳಿಸಿದ್ದಾರೆ.

  • ಮುಂದಿನ ಪೀಳಿಗೆಗೆ ನ್ಯಾಯ ಒದಗಿಸಲು ಸಮೀಕ್ಷೆಯಲ್ಲಿ ಭಾಗವಹಿಸಿ: ಡಿಕೆಶಿ ಮನವಿ

    ಮುಂದಿನ ಪೀಳಿಗೆಗೆ ನ್ಯಾಯ ಒದಗಿಸಲು ಸಮೀಕ್ಷೆಯಲ್ಲಿ ಭಾಗವಹಿಸಿ: ಡಿಕೆಶಿ ಮನವಿ

    ಬೆಂಗಳೂರು: ಎಲ್ಲಾ ಸಮಾಜದ ಮುಂದಿನ ಪೀಳಿಗೆಗೆ ನ್ಯಾಯ ಒದಗಿಸಲು ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾಗುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸಿ ಅಗತ್ಯ ಮಾಹಿತಿಗಳನ್ನು ನೀಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಸಾರ್ವಜನಕರಲ್ಲಿ ಮನವಿ ಮಾಡಿದ್ದಾರೆ.

    ಜಿಬಿಎ (Greater Bengaluru Authority) ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಸಮೀಕ್ಷೆಗೆ ಚಾಲನೆ ನೀಡಿದರು. ಬಳಿಕ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಇಂದಿನಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (Caste Census Survey) ಆರಂಭವಾಗುತ್ತಿದ್ದು, ನನ್ನ ಮನೆಯಲ್ಲೂ ಸಮೀಕ್ಷೆ ನಡೆಸಿದ್ದಾರೆ. ನಾನು ಎಲ್ಲಾ ಮಾಹಿತಿ ನೀಡಿದ್ದೇನೆ. ಸಾರ್ವಜನಿಕರು ಕೂಡ ತಾಳ್ಮೆಯಿಂದ ನಿಮ್ಮ ಮಾಹಿತಿ ಒದಗಿಸಿಕೊಡಬೇಕು. ಈ ಸಮೀಕ್ಷೆಗೆ ಎಲ್ಲಾ ಜಾತಿ ಸಮುದಾಯದವರು ಸಹಕಾರ ನೀಡಬೇಕು ಎಂದು ಮನವಿ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಇಂದಿನಿಂದ ಜಾತಿಗಣತಿ ಸಮೀಕ್ಷೆ – 32 ಲಕ್ಷ ಮನೆ, ಎರಡು ವಾರಗಳ ಟಾರ್ಗೆಟ್

    ಹೆಚ್ಚು ಪ್ರಶ್ನೆಗಳಿದ್ದು ಸರಳೀಕರಣ ಮಾಡಬೇಕಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಕೂಡ ಇಂದೇ ಈ ಪ್ರಶ್ನೆಗಳನ್ನು ನೋಡಿದೆ. ಇವುಗಳನ್ನು ಸರಳೀಕರಣ ಮಾಡಬೇಕಿತ್ತು. ನಗರ ಪ್ರದೇಶದಲ್ಲಿ ಜನರಿಗೆ ತಾಳ್ಮೆ ಕಡಿಮೆಯಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮುಜರಾಯಿಂದ ಬಿಗ್‌ಶಾಕ್ – 40 ವರ್ಷಗಳಿಂದ ಬೆಂಗ್ಳೂರಲ್ಲಿದ್ದ 10ಕ್ಕೂ ಹೆಚ್ಚು ಅಂಗಡಿಗಳು ಜಪ್ತಿ

    ವೈಯಕ್ತಿಕ ಮಾಹಿತಿಯ ಪ್ರಶ್ನೆಗಳಿಗೆ ಉತ್ತರ ನೀಡಲು ಬಲವಂತ ಮಾಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಸಮೀಕ್ಷೆದಾರರು ಈ ಪ್ರಶ್ನೆಗಳನ್ನು ಕೇಳುತ್ತಾರೆ. ಉತ್ತರ ನೀಡುವುದು ಜನರಿಗೆ ಬಿಟ್ಟ ವಿಚಾರ. ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು. ಬೆಂಗಳೂರು ನಗರದಲ್ಲಿ ಸಮೀಕ್ಷೆ ಮಾಡುವಾಗ ಸೂಕ್ಷ್ಮತೆಯಿಂದ ಮಾಡಬೇಕು ಎಂದು ಸಮೀಕ್ಷೆದಾರರಿಗೂ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.

    ಅನೇಕರು ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸುತ್ತಿರುವ ಬಗ್ಗೆ ಮಾತನಾಡಿದ ಅವರು, ಜನರಿಗೆ ತಿಳುವಳಿಕೆ ನೀಡಬೇಕಾದದ್ದು ನಮ್ಮ ಕರ್ತವ್ಯ. ನಾವು ಅದನ್ನು ಮಾಡುತ್ತೇವೆ ಎಂದರಲ್ಲದೇ ಸರ್ವರ್ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿ, ಈ ಸಮಸ್ಯೆ ಸರಿಪಡಿಸ್ತಾರೆ. ಆನ್‌ಲೈನ್‌ನಲ್ಲಿ ಕೂಡ ಸಮೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗುವುದು. ಅಲ್ಲಿಯೂ ನೀವು ಮಾಹಿತಿ ನೀಡಬೇಕು ಎಂದು ತಿಳಿಸಿದ್ದಾರೆ.

    ಸಮೀಕ್ಷೆಯಲ್ಲಿ ಮಾಹಿತಿ ನೀಡಿದರೆ ಮತಾಂತರಕ್ಕೆ ಕಾರಣವಾಗಲಿದೆ ಎಂಬ ಬಿಜೆಪಿ ಹೇಳಿಕೆ ಬಗ್ಗೆ ಮಾತನಾಡಿದ ಅವರು, ದೊಡ್ಡವರ ಬಗ್ಗೆ ನಾವೇನು ಹೇಳೋಣ? ಎನ್ನುವ ಮೂಲಕ ತಿರುಗೇಟು ನೀಡಿದ್ದಾರೆ.

    ರಾಜ್ಯಕ್ಕಾಗುತ್ತಿರುವ ತೆರಿಗೆ ಅನ್ಯಾಯದ ಬಗ್ಗೆ ಅಗತ್ಯ ಬಿದ್ದರೆ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದ ಸಿಎಂ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದರು. ನಮ್ಮ ತೆರಿಗೆ, ನಮ್ಮ ಹಕ್ಕು. ನಮಗೆ ಈಗ 15 ರಿಂದ 20 ಸಾವಿರ ಕೋಟಿ ರೂ. ನಷ್ಟವಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

  • ಒಕ್ಕಲಿಗ ಸಭೆಯಲ್ಲಿ ಹೆಚ್‌ಡಿಕೆ-ಡಿಕೆಶಿ ಮುಖಾಮುಖಿ

    ಒಕ್ಕಲಿಗ ಸಭೆಯಲ್ಲಿ ಹೆಚ್‌ಡಿಕೆ-ಡಿಕೆಶಿ ಮುಖಾಮುಖಿ

    ಬೆಂಗಳೂರು: ಜಾತಿಗಣತಿ ಗೊಂದಲ ಸಂಬಂಧ ಶನಿವಾರ ನಡೆದ ಒಕ್ಕಲಿಗ ಸಮುದಾಯದ ಸಭೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಮುಖಾಮುಖಿಯಾಗಿದ್ದಾರೆ.

    ಆದಿಚುಂಚಗಿರಿ ಶ್ರೀಗಳಾದ ನಿರ್ಮಲಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಡಿಕೆಶಿ ಮತ್ತು ಹೆಚ್‌ಡಿಕೆ ಇಬ್ಬರೂ ಮುಖಾಮುಖಿಯಾದರು. ಈ ವೇಳೆ ಕುರ್ಚಿಯಲ್ಲಿ ಕುಳಿತಿದ್ದ ಡಿಕೆಶಿಗೆ ಕೈಮುಗಿದು ಹೆಚ್‌ಡಿಕೆ ನಮಸ್ಕರಿಸಿದರು. ಡಿಸಿಎಂ ಕೂಡ ಪ್ರತಿಯಾಗಿ ನಮಸ್ಕರಿಸಿದರು. ಬಳಿಕ ಸ್ವಾಮೀಜಿ ಪಕ್ಕದಲ್ಲಿ ಹೆಚ್‌ಡಿಕೆ ಕೂರುವುದಕ್ಕೆ ಜಾಗ ಮಾಡಿಕೊಟ್ಟರು. ಇಬ್ಬರೂ ನಾಯಕರು ಸ್ವಾಮೀಜಿ ಮುಂದೆ ಮಾತನಾಡಿದರು.

    ಜಾತಿಗಣತಿ ಸಂಬಂಧ ಒಕ್ಕಲಿಗರ ಸಭೆಯಲ್ಲಿ ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. 60 ದಿನ ಜಾತಿಗಣತಿ ಮುಂದೂಡಿ, 15 ದಿನ ಕಾಲಮಿತಿಯನ್ನು ಹೆಚ್ಚು ಮಾಡಿ ಅಂತಾ ಸರ್ಕಾರಕ್ಕೆ ಒತ್ತಾಯಿಸಿ ನಿರ್ಣಯ ಮಾಡಲಾಗಿದೆ.

    ಗಣತಿ ವೇಳೆ ತಮ್ಮ ಸಮುದಾಯದವರು ಒಕ್ಕಲಿಗ ಎಂದೇ ಬರೆಸುವಂತೆ ಸಭೆಯಲ್ಲಿ ಸಲಹೆ ನೀಡಲಾಗಿದೆ. ಕುಂಚಟಿಗ ಒಕ್ಕಲಿಗ ಪ್ರತ್ಯೇಕ ಗುರುತಿಸಿಕೊಳ್ಳದಂತೆ ತೀರ್ಮಾನಿಸಲಾಗಿದೆ. ಯಾರೇ ಆಗಲಿ ಒಕ್ಕಲಿಗ ಸಮುದಾಯದಲ್ಲಿ ಒಗ್ಗಟ್ಟು ಇರಲಿ ಎಂದು ತಿಳಿಸಲಾಗಿದೆ. ಸರ್ವೆ ಮುಂದೂಡಿದರೆ ಒಳ್ಳೆಯದು ಎಂದು ಸಭೆ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಗಿದೆ.

  • ನಮ್ಮಪ್ಪನಿಗೆ ನನ್ನನ್ನು ಇಂಜಿನಿಯರ್ ಮಾಡುವ ಆಸೆಯಿತ್ತು – ಡಿಸಿಎಂ ಡಿಕೆಶಿ

    ನಮ್ಮಪ್ಪನಿಗೆ ನನ್ನನ್ನು ಇಂಜಿನಿಯರ್ ಮಾಡುವ ಆಸೆಯಿತ್ತು – ಡಿಸಿಎಂ ಡಿಕೆಶಿ

    ಬೆಂಗಳೂರು: ನಮ್ಮಪ್ಪನಿಗೆ ನನ್ನನ್ನು ಇಂಜಿನಿಯರ್ ಮಾಡುವ ಆಸೆಯಿತ್ತು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ

    ಇಂಜಿನಿಯರ್ಸ್ ದಿನದ ಹಿನ್ನೆಲೆ ಕೆ.ಆರ್.ಸರ್ಕಲ್‌ನಲ್ಲಿರುವ ವಿಶ್ವೇಶ್ವರಯ್ಯ ಪ್ರತಿಮೆಗೆ ಕ್ರೇನ್‌ನಲ್ಲಿ ಮೇಲಕ್ಕೆ ತೆರಳಿ ಡಿಕೆಶಿ ಮಾಲಾರ್ಪಣೆ ಮಾಡಿದರು. ಎರಡೆರಡು ಬಾರಿ ತಪ್ಪಿ ಹೋಗಿ ಮೂರನೇ ಪ್ರಯತ್ನಕ್ಕೆ ಹಾರಹಾಕಿದರು.ಇದನ್ನೂ ಓದಿ: ಸಂವಿಧಾನದ ರಕ್ಷಣೆ ಎಲ್ಲ ನಾಗರಿಕರ ಜವಾಬ್ದಾರಿ: ಸಿದ್ದರಾಮಯ್ಯ

    ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮಪ್ಪನಿಗೆ ನಾನು ಇಂಜಿನಿಯರ್ ಆಗಬೇಕು ಅಂತ ಆಸೆಯಿತ್ತು, ಆದರೆ ನನಗೆ ಇಂಜಿನಿಯರಿಂಗ್ ಕೋರ್ಸ್ ಮಾಡೋಕೆ ಆಗಲಿಲ್ಲ. ಆದರೆ ಇಂಜಿನಿಯರ್‌ಗಳನ್ನು ತಯಾರು ಮಾಡುವ ಕಾಲೇಜು ಸ್ಥಾಪಿಸಿದ್ದೇನೆ. ನನ್ನ ಇಬ್ಬರು ಮಕ್ಕಳು ಇಂಜಿನಿಯರ್ಸ್. ನಾನು ಜಲಸಂಪನ್ಮೂಲ, ಇಂಧನ ಇಲಾಖೆಯಲ್ಲಿ ಇಂಜಿನಿಯರ್ಸ್ ಜೊತೆ ಕೆಲಸ ಮಾಡಿದ್ದೇನೆ. ಅವರ ಕೆಲಸ, ಕಾರ್ಯಗಳ ಬಗ್ಗೆ ನನಗೆ ಅರಿವು ಇದೆ ಎಂದರು.

  • ಉಪರಾಷ್ಟ್ರಪತಿ ಚುನಾವಣೆ | ನಮ್ಮ ಅಭ್ಯರ್ಥಿ ಪರ ಆತ್ಮಸಾಕ್ಷಿಯ ಮತಗಳನ್ನು ಕೇಳಿದ್ದೇವೆ: ಡಿಕೆಶಿ

    ಉಪರಾಷ್ಟ್ರಪತಿ ಚುನಾವಣೆ | ನಮ್ಮ ಅಭ್ಯರ್ಥಿ ಪರ ಆತ್ಮಸಾಕ್ಷಿಯ ಮತಗಳನ್ನು ಕೇಳಿದ್ದೇವೆ: ಡಿಕೆಶಿ

    ಚೆನ್ನೈ: ಇಂಡಿಯಾ (INDIA) ಒಕ್ಕೂಟ ಒಟ್ಟಾಗಿ ಉಪರಾಷ್ಟ್ರಪತಿ ಚುನಾವಣೆ ಎದುರಿಸಲಿದೆ. ನಾವು ಆತ್ಮಸಾಕ್ಷಿಯ ಮತಗಳನ್ನು ಕೋರಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಎಂದು ಹೇಳಿದರು.

    ತಮಿಳುನಾಡಿನ (Tamilnadu) ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ಉಪರಾಷ್ಟ್ರಪತಿ ಚುನಾವಣೆಯ ಕುರಿತಾಗಿ ಮಾತನಾಡಿದ ಅವರು, ಇಂಡಿಯಾ ಒಕ್ಕೂಟ ಮತ್ತು ವಿರೋಧ ಪಕ್ಷಗಳು ಎನ್‌ಡಿ ಅಭ್ಯರ್ಥಿ ಸಿ.ಪಿ ರಾಧಾಕೃಷ್ಣನ್ ವಿರುದ್ಧ ಮತ ಚಲಾಯಿಸುತ್ತವೆ. ಅಡ್ಡ ಮತದಾನವಾಗುವ ಸಾಧ್ಯತೆ ಇರುತ್ತೆ. ಆದರೆ ನಾನು ಆತ್ಮಸಾಕ್ಷಿಯ ಮತಗಳ ಬಗ್ಗೆ ನಂಬಿಕೆಯಿಟ್ಟಿದ್ದೇನೆ. ಅಡ್ಡ ಮತದಾನದ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ ಎಂದರು.ಇದನ್ನೂ ಓದಿ: ಇಂದು ಉಪರಾಷ್ಟ್ರಪತಿ ಚುನಾವಣೆ – ಸಂಜೆ ಫಲಿತಾಂಶ ಪ್ರಕಟ

    ಸುಪ್ರೀಂ ಕೋರ್ಟ್ ಆಧಾರ್ ಗುರುತಿನ ಚೀಟಿಯನ್ನು 12ನೇ ದಾಖಲೆ ಎಂದು ಪರಿಗಣಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆಧಾರ್ ಗುರುತಿನ ಚೀಟಿ ಪ್ರತಿಯೊಬ್ಬ ಭಾರತೀಯರಿಗೂ ಅತ್ಯವಶ್ಯವಾದ ದಾಖಲೆ. ಈ ಹಿಂದಿನ ಯುಪಿಎ ಸರ್ಕಾರ ಜಾರಿಗೆ ತಂದ ಈ ಯೋಜನೆ ಪ್ರತಿಯೊಬ್ಬ ನಾಗರಿಕರಿಗೂ ಅನುಕೂಲ ಮಾಡಿದೆ ಎಂದು ತಿಳಿಸಿದರು.

  • ತುಳು ರಾಜ್ಯದ 2ನೇ ಅಧಿಕೃತ ಭಾಷೆ ಬೇಡಿಕೆ ಬಗ್ಗೆ ಸಂಪುಟದಲ್ಲಿ ಚರ್ಚೆ: ಡಿಕೆಶಿ

    ತುಳು ರಾಜ್ಯದ 2ನೇ ಅಧಿಕೃತ ಭಾಷೆ ಬೇಡಿಕೆ ಬಗ್ಗೆ ಸಂಪುಟದಲ್ಲಿ ಚರ್ಚೆ: ಡಿಕೆಶಿ

    – ನಿಮ್ಮ ಜೊತೆ ನಾನಿದ್ದೇನೆ, ನಿಮ್ಮ ಆಶೀರ್ವಾದ ನನ್ನ ಮೇಲಿರಲಿ

    ಬೆಂಗಳೂರು: ತುಳು ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ಘೋಷಿಸಬೇಕು ಎಂಬ ನಿಮ್ಮ ಬೇಡಿಕೆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅವರು ಭರವಸೆ ನೀಡಿದರು.

    ಬೆಂಗಳೂರಿನಲ್ಲಿ ಭಾನುವಾರ ಏರ್ಪಡಿಸಿದ್ದ ʻಅಷ್ಟೆಮಿದ ಐಸಿರಿ ತುಳುವ ತರ್ಲ್ ಸಾಸಿರಿʼ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.

    ಇತ್ತೀಚೆಗೆ ಕುಂದಾಪುರದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಆ ಕಾರ್ಯಕ್ರಮ ಈ ಕಾರ್ಯಕ್ರಮದಲ್ಲಿ ಸೇರಿರುವ ಜನ ನೋಡಿದರೆ ಮುಂದೆ ನೀವೆಲ್ಲರೂ ನಮ್ಮನ್ನು ಬೆಂಗಳೂರಿನಿಂದ ಖಾಲಿ ಮಾಡಿಸುತ್ತೀರೇನೋ ಎಂದು ಭಯವಾಗುತ್ತಿದೆ. ನಿಮ್ಮ ಈ ಶಕ್ತಿ, ಉತ್ಸಾಹ ನೋಡಿ ನನಗೆ ಈ ಅನುಮಾನ ಕಾಡುತ್ತಿದೆ ಎಂದು ಚಟಾಕಿ ಹಾರಿಸಿದರು.

    ಇಡೀ ದೇಶಕ್ಕೆ ಕರ್ನಾಟಕದ ಮೂಲಕ ಸಂಸ್ಕೃತಿ ಹಾಗೂ ಶಿಕ್ಷಣ ಕೊಟ್ಟವರು, ಧಾರ್ಮಿಕ ಶಕ್ತಿ ಕೊಟ್ಟವರು, ಬ್ಯಾಂಕ್ ವ್ಯವಸ್ಥೆ ಕೊಟ್ಟವರು ಈ ಕರಾವಳಿ ಜನ. ಆರೋಗ್ಯ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ನೀವು ಮುಂದೆ ಇದ್ದೀರಿ. ಕರಾವಳಿ ಭಾಗ, ದಕ್ಷಿಣ ಕನ್ನಡದ ಜನ ವಿದ್ಯಾವಂತರು, ಬುದ್ಧಿವಂತರು, ಪ್ರಜ್ಞಾವಂತರು. ನಿಮ್ಮ ಜೊತೆ ನಾನು ಇದ್ದೇನೆ ಎಂದು ಹೇಳಲು ಇಲ್ಲಿಗೆ ಬಂದಿದ್ದೇನೆ. ಈ ಡಿಕೆ ಶಿವಕುಮಾರ್ ನಿಮ್ಮವ ಎಂದು ಭಾವಿಸಿ. ನಾನು ನಿಮ್ಮ ಪರವಾಗಿದ್ದೇನೆ. ನೀವು ನನಗೆ ಬೆಂಬಲವಾಗಿರಿ. ನಾನು ನಿಮ್ಮ ಆಶೀರ್ವಾದವನ್ನಷ್ಟೇ ಕೇಳುತ್ತಿದ್ದೇನೆ. ನಿಮ್ಮ ಸಂಸ್ಕೃತಿ, ಇತಿಹಾಸ ದೇಶದ ಯಾವುದೇ ಭಾಗದಲ್ಲೂ ಇಲ್ಲ. ನೀವೆಲ್ಲರೂ ಕರ್ನಾಟಕ ರಾಜ್ಯದ ಆಸ್ತಿ ಎಂದು ಗುಣಗಾನ ಮಾಡಿದರು.

    ಮಂಗಳೂರು, ಉಡುಪಿ ಸೇರಿದಂತೆ ಕರಾವಳಿ ಭಾಗದ ಜನ ಉದ್ಯೋಗಕ್ಕಾಗಿ ವಲಸೆ ಹೋಗದಂತೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಲು ನಾನು ನಿಮ್ಮ ಭಾಗದ ಶಾಸಕರು, ಸ್ಪೀಕರ್ ಖಾದರ್ ಅವರ ಜೊತೆಗೆ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದರು.

  • ಪ್ರತಾಪ್ ಸಿಂಹನನ್ನ ಬಿಜೆಪಿ ಕಿತ್ತು ಬಿಸಾಕಿದೆ, ಬದುಕಿದ್ದೀನಿ ಅಂತ ತೋರಿಸಿಕೊಳ್ಳೋಕೆ ಪ್ರಯತ್ನ: ಡಿಕೆಶಿ ಟಾಂಗ್

    ಪ್ರತಾಪ್ ಸಿಂಹನನ್ನ ಬಿಜೆಪಿ ಕಿತ್ತು ಬಿಸಾಕಿದೆ, ಬದುಕಿದ್ದೀನಿ ಅಂತ ತೋರಿಸಿಕೊಳ್ಳೋಕೆ ಪ್ರಯತ್ನ: ಡಿಕೆಶಿ ಟಾಂಗ್

    – ಬಿಜೆಪಿ ನಾಯಕರು, ಸಂಘಟನೆಯಿಂದಲೇ ಧರ್ಮಸ್ಥಳಕ್ಕೆ ಅವಮಾನ, ಅನ್ಯಾಯ ಆಗಿದೆ
    – ಆ ಬುರುಡೆ ಗಿರಾಕಿ ಯಾರವನು ಎಂದು ಪ್ರಶ್ನಿಸಿದ ಡಿಸಿಎಂ

    ಬೆಂಗಳೂರು: ಪ್ರತಾಪ್ ಸಿಂಹನನ್ನು ಬಿಜೆಪಿಯವರು ಕಿತ್ತು ಬಿಸಾಕಿದ್ದಾರೆ. ಬದುಕಿದ್ದೀನಿ ಅಂತ ತೋರಿಸಿಕೊಳ್ಳೋಕೆ ಪ್ರಯತ್ನ ಪಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಟಾಂಗ್ ಕೊಟ್ಟರು.

    ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ತಡೆ ಕೋರಿ ಹೈಕೋರ್ಟ್ಗೆ ಅರ್ಜಿ ವಿಚಾರವಾಗಿ ಮಾತನಾಡಿದ ಡಿಕೆಶಿ, ಪಾಪ ಅವರದ್ದು ರಾಜಕೀಯ. ಬಿಜೆಪಿಯವರು ಪ್ರತಾಪ್ ಸಿಂಹನನ್ನು (Pratap Simha) ಕಿತ್ತು ಬಿಸಾಕಿದ್ದಾರೆ. ನಾನು ಬದುಕಿದ್ದೀನಿ ಅಂತಾ ತೋರಿಸಿಕೊಳ್ಳಬೇಕು. ಅದಕ್ಕೆ ಪಾಪ ಪ್ರಯತ್ನ ಪಡ್ತಿದ್ದಾರೆ. ಬಿಜೆಪಿವರಿಗೆ ಬೇರೆ ಏನೂ ವಿಚಾರ ಇಲ್ಲ. ಮಹದಾಯಿ, ಮೇಕೆದಾಟಿಗೆ ಪರ್ಮಿಷನ್ ಕೊಡಿಸಲಿ. ಕೃಷ್ಣ ಯೋಜನೆಗೆ ಪರ್ಮಿಶನ್ ಕೊಡಿಸಲಿ. ದೆಹಲಿಗೆ ಹೋಗಿ ಅನುದಾನ ಕೊಡಿಸಲಿ. ಕೇವಲ ಪ್ರಚಾರಕ್ಕೋಸ್ಕರ ಮಾಡ್ತಿದ್ದಾರೆ, ಬಾಯಿ ಮುಚ್ಕೊಂಡು ಇರಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ಗೆ ಆಹ್ವಾನ – ಹೈಕೋರ್ಟ್ ಮೆಟ್ಟಿಲೇರಿದ ಪ್ರತಾಪ್ ಸಿಂಹ

    ಧರ್ಮಸ್ಥಳಕ್ಕೆ ನ್ಯಾಯ ಒದಗಿಸಿಕೊಡ್ತಿರೋದು ನಾವು. ಧರ್ಮಸ್ಥಳದಲ್ಲಿ ಅವರದ್ದು ಎರಡು ಗುಂಪು ಇವೆ. ಅವರಿಂದಲೇ ಇದೆಲ್ಲಾ ಆಗ್ತಿರೋದು. ಆ ಬುರುಡೆ ಗಿರಾಕಿ ಯಾರವನು? ಅವರು ಯಾರು ಅಂತಾ ಬಿಜೆಪಿಯವರು ಹೇಳಿಕೊಳ್ಳೋಕೆ ಆಗ್ತಿಲ್ಲ. ಅವರೆಲ್ಲಾ ಬಿಜೆಪಿಯವರು. ಧರ್ಮಸ್ಥಳಕ್ಕೆ ಅವಮಾನ, ಅನ್ಯಾಯ ಆಗಿದೆಯಂದ್ರೆ ಬಿಜೆಪಿಯ ನಾಯಕರಿಂದ, ಅವರ ಸಂಘಟನೆಯಿಂದ ಎಂದು ಆರೋಪಿಸಿದರು.

    ಸ್ಥಳೀಯ ಸಂಸ್ಥೆ ಎಲೆಕ್ಷನ್‌ನಲ್ಲಿ ಬ್ಯಾಲೆಟ್ ವಿಚಾರವಾಗಿ ಮಾತನಾಡಿ, ನಾಳೆ-ನಾಡಿದ್ದು ನಾನು ಕಾನೂನು ತಂದು ತೋರಿಸ್ತೀನಿ. ಅವರೇ ಮಾಡಿರುವ ಕಾನೂನು ತಂದು ತೋರಿಸ್ತೀನಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಧರ್ಮಸ್ಥಳವನ್ನು ಕಬಳಿಸಲು ಸರ್ಕಾರ ಈಗ ಸಾಕ್ಷಿ ಹುಡುಕುತ್ತಿದೆ: ಪ್ರತಾಪ್‌ ಸಿಂಹ

    ಯುವ ಕಾಂಗ್ರೆಸ್ ಕಾರ್ಯಕ್ರಮಕ್ಕಾಗಿ ಸದಾಶಿವನಗರ ನಿವಾಸದಿಂದ ಕೆಪಿಸಿಸಿ ಕಚೇರಿ ವರೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬೈಕ್ ರೈಡ್ ಮಾಡಿದ್ದಾರೆ. ಬಳಿಕ ಕೆಪಿಸಿಸಿ ಯುವ ಕಾಂಗ್ರೆಸ್‌ನ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದರು.