https://youtu.be/l5-haQpJ3ZI
Tag: ಡಿ.ಕೆ.ಶಿವಕುಮಾರ್
-

ರಾಮನಗರದಲ್ಲಿ ಕನಕೋತ್ಸವಕ್ಕೆ ಅದ್ಧೂರಿ ತೆರೆ- ಉಸಿರೇ… ಉಸಿರೇ… ಹಾಡು ಹಾಡಿ ಹುಚ್ಚೆಬ್ಬಿಸಿದ ಕಿಚ್ಚ
ರಾಮನಗರ: ಜಿಲ್ಲೆಯ ಕನಕಪುರದಲ್ಲಿ ನಡೆದ ಅದ್ಧೂರಿ ಕನಕೋತ್ಸವಕ್ಕೆ ರಾತ್ರಿ ತೆರೆ ಬಿದ್ದಿದೆ. ರಾತ್ರಿ ಕನಕೋತ್ಸವದ ಮುಕ್ತಾಯ ಸಮಾರಂಭಕ್ಕೆ ಆಗಮಿಸಿದ್ದ ಸ್ಯಾಂಡಲ್‍ವುಡ್‍ನ ಚಿತ್ರತಾರೆಯರ ದಂಡು ಮೆರಗು ತಂದಿತ್ತು.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ರವರ ಮೂಸಿಕಲ್ ನೈಟ್ಸ್ ನಗರದ ಪುರಸಭೆ ಮೈದಾನದಲ್ಲಿ ನೆರೆದಿದ್ದ ಸಾವಿರಾರು ಸಾರ್ವಜನಿಕರನ್ನು ಹುಚ್ಚೆಬ್ಬಿಸಿತ್ತು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನಕೋತ್ಸವಕ್ಕೆ ಆಗಮಿಸಿ ಹುಚ್ಚ ಚಿತ್ರದ ಉಸಿರೇ… ಉಸಿರೇ… ಹಾಡು ಹಾಡುವ ಮೂಲಕ ನೆರೆದಿದ್ದವರನ್ನು ರಂಜಿಸಿದ್ರು. ಇದೇ ವೇಳೆ ಕನಕಪುರ ನಿವಾಸಿ ಪ್ರಖ್ಯಾತ್ ಅಭಿನಯದ ನಡುವೆ ಅಂತರವಿರಲಿ ಚಿತ್ರದ ಟ್ರೇಲರನ್ನು ನಟ ಸುದೀಪ್ ಬಿಡುಗಡೆ ಮಾಡಿದ್ರು. ಅಲ್ಲದೇ ಕೆಲ ಸಮಯ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಾಡಿಸಿದ್ರು.

ಇದಲ್ಲದೇ ನಟಿ ಮಾನ್ವಿತಾ, ಶಾನ್ವಿ, ರಂಜಿತಾ ಇನ್ನೂ ಅನೇಕ ಚಿತ್ರ ತಾರೆಯರು ಕನಕೋತ್ಸವದಲ್ಲಿ ಪಾಲ್ಗೊಂಡಿದ್ರು. ಅಲ್ಲದೇ ಪ್ರತಿ ತಾರೆಯರು ಸಹ ಡ್ಯಾನ್ಸ್ ಮಾಡಿ ಪ್ರೇಕ್ಷಕರನ್ನು ರಂಜಿಸಿದ್ರು. ಇದೇ ವೇಳೆ ಮಾತನಾಡಿದ ನಟ ಸುದೀಪ್ ಡಿಕೆ ಬ್ರದರ್ಸ್‍ರವರು ನಡೆಸುತ್ತಿರುವ ಕನಕೋತ್ಸವ ಕಾರ್ಯಕ್ರಮವನ್ನ ಶ್ಲಾಘಿಸಿದ್ರು.

ಸುದೀಪ್‍ರನ್ನು ಇದೇ ವೇಳೆ ಸನ್ಮಾನಿಸಿದ ಇಂಧನ ಸಚಿವ ಡಿ.ಕೆ ಶಿವಕುಮಾರ್, ಸುದೀಪ್ ರಾಜ್ಯಕ್ಕೆ ದೊಡ್ಡ ಆಸ್ತಿ. ಅವರ ಕೀರ್ತಿ ಇದೀಗ ವಿಶ್ವದೆತ್ತರಕ್ಕೆ ಪಸರಿಸ್ತಾ ಇರುವುದಕ್ಕೆ ಅಭಿನಂದಿಸಿದ್ರು.










-

ಕ್ಷೇತ್ರದ ಜನರು ಪೊರಕೆ ಏಟು ನೀಡಿದರೂ ಸ್ವೀಕರಿಸುತ್ತೇನೆ :ಡಿಕೆಶಿ
ತುಮಕೂರು: ಜನರು ಬೇಕಾದರೆ ಪೊರಕೆ ಏಟು ನೀಡಲಿ, ಅವರು ಯಾವಾಗ ಬೇಕಾದರೂ ಹೊಡೆಯಲಿ ನಾನು ತಿನ್ನುತ್ತೇನೆ. ಇದು ರಾಜಕೀಯ ಬದ್ಧತೆ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಚನ್ನಪಟ್ಟಣವನ್ನು ನಾನು ರಾಜಕೀಯವಾಗಿ ಮದುವೆಯಾಗಿದ್ದೇನೆ ಎಂದು ಬುಧವಾರ ಡಿಕೆ ಶಿವ ಕುಮಾರ್ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಟೀಕಿಸಿ ಯೋಗೇಶ್ವರ್, ಮಹಿಳೆಯಿಂದ ಪೊರಕೆಯಲ್ಲಿ ಡಿಕೆಶಿಗೆ ಹೊಡೆಸುತ್ತೇನೆ ಎಂದು ಹೇಳಿದ್ದಕ್ಕೆ ಸಚಿವರು ಈ ಮೇಲಿನಂತೆ ಪ್ರತಿಕ್ರಿಯೆ ನೀಡಿದ್ದಾರೆ.

ತುಮಕೂರಿನ ತುರುವೇಕೆರೆಯಲ್ಲಿ ಮಾತನಾಡಿದ ಅವರು, ಚನ್ನಪಟ್ಟಣದ ಒಂದು ಹೋಬಳಿಯ ಜನತೆ ನನ್ನನ್ನು ನಾಲ್ಕು ಬಾರಿ ಗೆಲ್ಲಿಸಿದ್ದಾರೆ. ಹಾಗಾಗಿ ಅಲ್ಲಿಯ ಜನರ ನಡುವೆ ಉತ್ತಮ ಬಾಂಧವ್ಯವಿದೆ. ಅದು ಭಕ್ತನಿಗೂ ಭಗವಂತನಿಗೂ ಇರುವ ಸಂಬಂಧವಾಗಿದ್ದು, ಮದುವೆ ಎಂದರೇ ರಾಜಕೀಯ ಮದುವೆ ಅವರ ಹಾಗೇ ಮದುವೆಯಲ್ಲ. ನನ್ನದು ರಾಜಕೀಯ ಬದ್ಧತೆ. ಜನರು ಬೇಕಾದರೆ ಪೊರಕೆ ಏಟು ನೀಡಲಿ ನಾನು ತಿನ್ನುತ್ತೇನೆ, ಅವರು ಯಾವಾಗ ಬೇಕಾದರೂ ಹೊಡೆಯಲಿ ಎಂದು ಹೇಳಿದರು.
ಡಿಕೆಶಿ ವಿರುದ್ಧ ಸಾಮಾನ್ಯ ಅಭ್ಯರ್ಥಿ ನಿಲ್ಲಿಸಿ ಗೆಲ್ಲಿಸಿ ತರುತ್ತೇನೆ ಎಂಬ ಸಿಪಿ ಯೋಗೇಶ್ವರ್ ಮಾತಿಗೆ ಸಿಡಿಮಿಡಿಕೊಂಡ ಅವರು, ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಮೊದಲು ಗೆಲ್ಲಲಿ. ಬಳಿಕ ನನ್ನ ವಿರುದ್ಧ ಸಾಮಾನ್ಯರನ್ನು ನಿಲ್ಲಿಸಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಮಹಿಳೆಯಿಂದ ಕೊರಳಪಟ್ಟಿ ಹಿಡಿಸಿ ಪೊರಕೆಯಲ್ಲಿ ಹೊಡೆಸ್ತೀನಿ- ಡಿಕೆಶಿ ವಿರುದ್ಧ ಶಾಸಕ ಯೋಗೇಶ್ವರ್ ವಾಗ್ದಾಳಿ
ದಲಿತರ ಹತ್ಯೆ ಕುರಿತ ಸಿಪಿ ಯೋಗೇಶ್ವರ್ ಆರೋಪಕ್ಕೆ ಕಿಡಿಕಾರಿದ ಸಚಿವರು, ದಲಿತರ ಹತ್ಯೆ ಮಾಡಿದ್ದಾರೆ ಎನ್ನುವುದಕ್ಕೆ ಅವರು ಸಾಕ್ಷ್ಯ ತೋರಿಸಲಿ, ಬೇಕಾದರೆ ಕೇಸ್ ಹಾಕಲಿ. ಏಕವಚನದಲ್ಲಿ ಮಾತನಾಡುವುದು ಅವರ ಸಂಸ್ಕøತಿಯನ್ನು ತೋರಿಸುತ್ತದೆ. ಅವರು ಸಿನಿಮಾ ನಟರು, ನಮ್ಮ ಯೋಗೀಶಣ್ಣ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಅಭ್ಯರ್ಥಿ ಇಲ್ಲಿ ನೆಪ ಮಾತ್ರ, ನಾನು-ಡಿ.ಕೆ.ಸುರೇಶ್ ಇಲ್ಲಿನ ನಿಜವಾದ ಅಭ್ಯರ್ಥಿಗಳು ನೆನಪಿರಲಿ: ಚನ್ನಪಟ್ಟಣದಲ್ಲಿ ಡಿಕೆಶಿ ಅಬ್ಬರ





-

ಸಚಿವ ಡಿಕೆಶಿ ಆಪ್ತ ಸಹಾಯಕ ಅಪಘಾತದಲ್ಲಿ ದುರ್ಮರಣ-ಕಾರಿನಲ್ಲಿ ಹಣ ತುಂಬಿದ್ದ 2 ಸೂಟ್ ಕೇಸ್ ಪತ್ತೆ!
ಶಿವಮೊಗ್ಗ: ಜಿಲ್ಲೆಯ ಕುಂಸಿ ಬಳಿ ನಡೆದ ಕಾರು ಅಪಘಾತದಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಆಪ್ತ ಸಹಾಯಕ ಲೋಕೇಶ್ ಮತ್ತು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.
ಲೋಕೇಶ್ ಜೊತೆ ಇದ್ದ ಮಹಿಳೆ ನೇತ್ರಾವತಿ ಎಂದು ಗುರುತಿಸಲಾಗಿದೆ. ನೇತ್ರಾವತಿ ಅವರು ವಿಧಾನಸೌಧದಲ್ಲಿ ಹಿರಿಯ ಸಹಾಯಕಿ ಎಂದು ತಿಳಿದು ಬಂದಿದೆ. ಲೋಕೇಶ್ ಮತ್ತು ನೇತ್ರಾವತಿ ಇಬ್ಬರೂ ಬೆಂಗಳೂರಿನಿಂದ ಸಾಗರ ಕಡೆ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಅಪಘಾತಗೊಂಡ ಕಾರಿನಲ್ಲಿ ಎರಡು ಸೂಟ್ ಕೇಸ್ ಗಳು ಪತ್ತೆಯಾಗಿವೆ. ಈ ಸೂಟ್ ಕೇಸ್ ಗಳಲ್ಲಿ ಹಣವಿತ್ತು ಎಂದು ಹೇಳಲಾಗುತ್ತಿದೆ. ಸದ್ಯ ಈ ಸೂಟ್ ಕೇಸ್‍ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಶಿವಮೊಗ್ಗ ಶಾಸಕ ಪ್ರಸನ್ನ ಕುಮಾರ್ ಇನ್ನಿತರರು ಶವಾಗಾರಕ್ಕೆ ಬಂದು, ಪರೀಕ್ಷೆ ನಡೆಸಿ, ಶವ ಕಳಿಸಲು ವಿಶೇಷ ಕಾಳಜಿ ತೋರಿದ್ದು, ಲೋಕೇಶ್ ಶವವನ್ನು ಅತಿ ತುರ್ತಾಗಿ ಮರಣೋತ್ತರ ಪರೀಕ್ಷೆ ಮಾಡಿಸಿ ಕಳಿಸಲಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ನೇತ್ರಾವತಿ ಸಂಬಂಧಿಗಳು ಬರದ ಕಾರಣ ಶವಪರೀಕ್ಷೆ ನಡೆದಿಲ್ಲ.
ಲೋಕೇಶ್ ಮತ್ತು ನೇತ್ರಾವತಿ ಅಪಾರ ಮೊತ್ತದ ಹಣ ಪಡೆದು ಎಲ್ಲಿಗೆ ಹೋಗುತ್ತಿದ್ದರು ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಾಗಿದೆ. ಈ ಅಪಘಾತ ಕುಂಸಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.





-

ಅಂದು ಡಿಕೆಶಿಗೆ ಐಟಿ ಶಾಕ್-ಇಂದು ಶೋಭಾ ಕರಂದ್ಲಾಜೆಗೆ ಪವರ್ ಶಾಕ್..?
ಬೆಂಗಳೂರು: ಇಂದು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಕರೆಂಟ್ ಶಾಕ್ ನೀಡಿರುವ ಸಚಿವ ಡಿ.ಕೆ ಶಿವಕುಮಾರ್ ನೇತೃತ್ವದ ಸದನ ಸಮಿತಿ ವರದಿ ಇಂದು ವಿಧಾನಸಭೆಯಲ್ಲಿ ಮಂಡನೆಯಾಗಲಿದೆ.
ಬಿ.ಎಸ್ ಯಡಿಯೂರಪ್ಪ ಆಡಳಿತಾವಧಿಯಲ್ಲಿ ಸಚಿವರಾಗಿದ್ದ ಶೋಭಾ ಕರಂದ್ಲಾಜೆ ವಿದ್ಯುತ್ ಖರೀದಿ ವೇಳೆ ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ 2014ರಲ್ಲಿ ಡಿಕೆಶಿ ನೇತೃತ್ವದಲ್ಲಿ ಸದನ ಸಮಿತಿ ರಚನೆಯಾಗಿ ವರದಿ ಸಿದ್ಧಪಡಿಸಲಾಗಿತ್ತು. ಈ ಹಗರಣದಿಂದ ಸರ್ಕಾರದ ಬೊಕ್ಕಸಕ್ಕೆ 28 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂಬ ಆರೋಪವಿದೆ.

ಈ ವರದಿವನ್ನು ಸಚಿವ ಡಿ.ಕೆ ಶಿವಕುಮಾರ್ ಇಂದು ವಿಧಾನಸಭೆಯಲ್ಲಿ ಮಂಡಿಸಲಿದ್ದಾರೆ. ಸೋಮವಾರ ಸಂಜೆ ಈ ಬಗ್ಗೆ ಸ್ಪೀಕರ್ ಕೆ.ಬಿ.ಕೊಳಿವಾಡರನ್ನು ಭೇಟಿ ಮಾಡಿ ಮಾತುಕತೆಯನ್ನು ಸಹ ನಡೆಸಿದ್ದಾರೆ. ಈ ವರದಿ ಮಂಡನೆಯಾದರೆ ಸದನದಲ್ಲಿ ದೊಡ್ಡ ಕೋಲಾಹಲ ಸೃಷ್ಟಿಯಾಗುವ ಸಾಧ್ಯತೆ ಇದೆ.
ಡಿ.ಕೆ.ಶಿವಕುಮಾರ್ ಸದನ ಸಮಿತಿ ವರದಿಯಲ್ಲಿ ಏನಿದೆ?:
* 2010-2014ರವರೆಗೆ ವಿದ್ಯುತ್ ಖರೀದಿಯಲ್ಲಿ ಅವ್ಯವಹಾರದ ಆರೋಪ.
* ಸರ್ಕಾರದ ಬೊಕ್ಕಸಕ್ಕೆ 28 ಸಾವಿರ ಕೋಟಿ ರೂಪಾಯಿ ನಷ್ಟ..!
* ಶೋಭಾ ಕರಂದ್ಲಾಜೆ ಸಚಿವೆ ಆಗಿದ್ದಾಗ ನಡೆದಿದೆ ಎಂದು ಆರೋಪ.
* ಜಿಂದಾಲ್ ಸಂಸ್ಥೆಯಿಂದ ಪ್ರತಿ ಯುನಿಟ್‍ಗೆ 3.50 ರೂ. ನೀಡಲು ಒಪ್ಪಿಗೆ ಆಗಿತ್ತು.
* ಆದರೆ ಜಿಂದಾಲ್‍ನಿಂದ 6.20 ರೂ.ಗೆ ಪ್ರತಿ ಯುನಿಟ್ ವಿದ್ಯುತ್ ಖರೀದಿ.
* ಖಾಸಗಿ ಕಂಪನಿಗೆ ಅನುಕೂಲ ಮಾಡಿಕೊಡಲು ಸರ್ಕಾರದಿಂದ ಈ ತೀರ್ಮಾನ.
* ಈ ಹಗರಣದ ತನಿಖೆಗೆ 2014ರಲ್ಲಿ 8 ಜನ ಸದಸ್ಯರ ಸದನ ಸಮಿತಿ ರಚನೆ.




-

ಡಿಕೆ ಶಿವಕುಮಾರ್‍ಗೆ ಐಟಿಯಿಂದ 7ನೇ ನೋಟಿಸ್- ಆಡಿಟರ್ ಕರೆತರದಂತೆ ಖಡಕ್ ಸೂಚನೆ
ಬೆಂಗಳೂರು: ಆದಾಯ ತೆರಿಗೆ ಇಲಾಖೆ ಪವರ್ ಮಿನಿಸ್ಟರ್ ಡಿಕೆ ಶಿವಕುಮಾರ್ ಮನೆಯ ಮೇಲೆ ನಿರಂತರವಾಗಿ 4 ದಿನಗಳ ಕಾಲ ದಾಳಿ ನಡೆಸಿ ಮಹತ್ತರ ದಾಖಲೆ ವಶಕ್ಕೆ ಪಡೆದಿತ್ತು.
ದಾಳಿ ಬಳಿಕ ನಿರಂತರ ವಿಚಾರಣೆ ನಡೆಸುತ್ತಿರುವ ಐಟಿ ಅಧಿಕಾರಿಗಳು, ಬರೋಬ್ಬರಿ 7ನೇ ಬಾರಿಗೆ ನೊಟೀಸ್ ಜಾರಿ ಮಾಡಿದ್ದಾರೆ. ಈ ಬಾರಿ ಇಡೀ ಕುಟುಂಬಕ್ಕೆ ನೋಟೀಸ್ ನೀಡಿದ್ದು, ಇಂದು ಕುಟುಂಬ ಸಮೇತ ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಬೇಕಿದೆ.

ಪ್ರತಿ ಬಾರಿಯೂ ಕೂಡ ಚಾರ್ಟೆಡ್ ಅಕೌಂಟೆಂಟ್ ಜೊತೆಯಲ್ಲಿ ವಿಚಾರಣೆಗೆ ಹಾಜರಾಗ್ತಿದ್ದ ಡಿಕೆಶಿ, ಇಂದು ಚಾರ್ಟೆಂಟ್ ಅಕೌಂಟೆಂಟ್ ಬಿಟ್ಟು ಹೆಂಡತಿ, ಮಕ್ಕಳು ಮತ್ತು ತಾಯಿಯ ಜೊತೆಯಲ್ಲಿ ವಿಚಾರಣೆ ಹಾಜರಾಗುವಂತೆ ನೋಟೀಸ್‍ನಲ್ಲಿ ತಿಳಿಸಲಾಗಿದೆ. ಇಂದು ಐಟಿ ಅಧಿಕಾರಿಗಳು ಡಿಕೆಶಿ ಕುಟುಂಬಕ್ಕೆ ಏನೇಲ್ಲಾ ಪ್ರಶ್ನೆಗಳನ್ನು ಕೇಳ್ತಾರೆ..? ಆಡಿಟರ್ ಕರೆತರದಂತೆ ಸೂಚಿಸಿರೋದು ಯಾಕೆ ಅನ್ನೋ ಕುತೂಹಲ ಎಲ್ಲರನ್ನೂ ಕಾಡ್ತಿದೆ.
ಇದನ್ನೂ ಓದಿ: ಪವರ್ ಮಿನಿಸ್ಟರ್‍ಗೆ ಮತ್ತೆ ಪವರ್ ಫುಲ್ ಶಾಕ್
ಆಗಸ್ಟ್ 2 ರಂದು ಡಿಕೆ ಶಿವಕುಮಾರ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಗುಜರಾತ್ ಕಾಂಗ್ರೆಸ್ ಶಾಸಕರು ತಂಗಿದ್ದ ಈಗಲ್ ಟನ್ ರೆಸಾರ್ಟ್ ಮೇಲೂ ದಾಳಿ ನಡೆದಿತ್ತು.
https://www.youtube.com/watch?v=1hWVXuy2xRs







-

ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಶಾಸಕ ಸಿ.ಪಿ.ಯೋಗೇಶ್ವರ್-ಡಿಕೆಶಿ ವಿರುದ್ಧ ತೀವ್ರ ವಾಗ್ದಾಳಿ
ರಾಮನಗರ: ಕಾಂಗ್ರೆಸ್ ಪಕ್ಷಕ್ಕೆ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿದ ಯೋಗೇಶ್ವರ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಹ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ವಿಚಾರವನ್ನು ತಿಳಿಸಿದರು.
ಇನ್ನು ಮುಂದೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಭಾವಚಿತ್ರ ಹೆಸರು ಬಳಸುವುದು ಬೇಡ. ಕಾಂಗ್ರೆಸ್ ಪಕ್ಷದ ವರಿಷ್ಟರು ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಸಾರ್ವಜನಿಕ ಬದುಕಿನಲ್ಲಿ ನನ್ನನ್ನು ಸರಿಯಾಗಿ ಬಳಕೆ ಮಾಡಲಿಲ್ಲ. ನಾಯಕರಿಗೆ ನನ್ನ ಅವಶ್ಯಕತೆ ಇಲ್ಲ ಎನ್ನುವುದು ನನ್ನ ಭಾವನೆ. ಜಿಲ್ಲೆಯಲ್ಲಿ ಏಳೆಂಟು ಜನ ನಾಯಕರುಗಳ ಬಲಿಷ್ಠತ್ವ ಕಾಂಗ್ರೆಸ್ ಪಕ್ಷಕ್ಕಿದೆ ಎಂದು ತಿಳಿಸಿದರು.
ಡಿಕೆಶಿ ವಿರುದ್ಧ ವಾಗ್ದಾಳಿ: ಮೊದಲನೇ ಬಾರಿ ನಾನು ಕಾಂಗ್ರೆಸ್ ನಲ್ಲಿದ್ದಾಗ ನನಗೆ ಕೊಟ್ಟಿರುವ ಟಿಕೆಟನ್ನು ಮಾನ್ಯ ಡಿ.ಕೆ.ಶಿವಕುಮಾರ್ ಅವರು ನನ್ನ ಮುಂದೆಯೇ ಹರಿದು ಹಾಕಿದರು. 20 ವರ್ಷಗಳ ನಂತರ ಮತ್ತೆ ಕಾಂಗ್ರೆಸ್ ಗೆ ಬಂದರೂ ಹಿಂದಿನ ಚುನಾವಣೆಯಲ್ಲಿ ಬೇಡ ಅಂದವರಿಗೆ ಟಿಕೆಟ್ ನೀಡಿ ನನಗೆ ನೀಡಲಾಗುತ್ತಿದ್ದ ಟಿಕೆಟ್ ನ್ನು ತಪ್ಪಿಸಿದರು. ಭಾನುವಾರ ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಶಿವಕುಮಾರ್ ಅವರು 1 ಕೋಟಿ ರೂ. ನೀಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ ಎಂದು ಆರೋಪಿಸಿದರು.

ಹಣ ಬಲವಿಲ್ಲ, ನನಗೆ ಜನಬಲ: ಡಿ.ಕೆ.ಶಿವಕುಮಾರ್ ಅವರ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದಾಗ ಅಷ್ಟು ಹಣ ಸಿಕ್ಕತ್ತು, ತೆಗೆದುಕೊಂಡು ಹೋದರು ಅಂತಾ ಹೇಳುತ್ತಿದ್ದರು. ಆದರೆ ನಾವೆಲ್ಲ ಆ ರೀತಿ ಏನು ಇಲ್ಲ ಅಂತಾ ಅನ್ನಿಸುತ್ತದೆ. ಆದರೆ ದೇಶದ ಯಾವುದೇ ಕಾನೂನುಗಳು ಶಿವಕುಮಾರ್ ಅವರನ್ನು ಅಲ್ಲಾಡಿಸಲು ಸಾಧ್ಯವಿಲ್ಲ ಎಂಬ ನಂಬಿಕೆ ನನಗೂ ಬಂದಿದೆ. ಇವತ್ತು ನಮ್ಮ ತಾಲೂಕಿನಲ್ಲಿ ಹಂಚಿಕೆ ಆಗುತ್ತಿರುವ ಹಣ ನೋಡಿದರೆ ದೇಶದಲ್ಲಿರುವ ಕಾನೂನುಗಳನ್ನು ಅವರನ್ನು ಆರ್ಥಿಕವಾಗಿ ಮುಟ್ಟಲು ಆಗುವುದಿಲ್ಲ ಎಂಬ ಆತಂಕ ನನ್ನಲ್ಲಿ ಮೂಡಿದೆ. ಶಿವಕುಮಾರ್ ಅವರಿಗೆ ಹಣಬಲ ಇರಬಹುದು, ನನಗೆ ಜನ ಬಲವಿದೆ. ಜನ ಬೆಂಬಲದ ಮೇಲೆ ನಾನು ಇವತ್ತು ಕಾಂಗ್ರೆಸ್ ಪಕ್ಷವನ್ನು ತ್ಯಜಿಸುವ ನಿರ್ಧಾರ ಮಾಡಿದ್ದೇನೆ. ನನ್ನ ದಾರಿಯನ್ನು ನಾನು ಮುಂದಿನ ದಿನಗಳಲ್ಲಿ ನೋಡಿಕೊಳ್ಳುತ್ತೇನೆ ಅಂತಾ ತಿಳಿಸಿದರು.
ನಾಯಕತ್ವದಲ್ಲಿ ಕಿತ್ತಾಟ: ಕನಕಪುರ ಕ್ಷೇತ್ರದಲ್ಲಿ ಪ್ರಬಲ ಮೂರು ಜನ ನಾಯಕರಿದ್ದಾರೆ. ರಾಮನಗರದ ಕ್ಷೇತ್ರದ ಲಿಂಗಪ್ಪ ಅವರು ಎಂಎಲ್‍ಸಿ ಆಗಿದ್ದಾರೆ. ರೇವಣ್ಣ ಅವರು ಸಹ ಎಂಎಲ್‍ಸಿ ಆಗಿ ಮಂತ್ರಿಗಳಾಗಿದ್ದಾರೆ. ಮಾಗಡಿ ಕ್ಷೇತ್ರದ ನಾಯಕರಾದ ಬಾಲಕೃಷ್ಣ ಅವರು ಪಕ್ಷಕ್ಕೆ ಬಂದಿದ್ದಾರೆ. ಇರೋದು ನಾಲ್ಕು ತಾಲೂಕಿನ ಸಣ್ಣದೊಂದು ಜಿಲ್ಲೆ ರಾಮನಗರ ಹಾಗಾಗಿ ನಾಯಕತ್ವದಲ್ಲಿ ಸಣ್ಣದೊಂದು ಕಿತ್ತಾಟವಿದೆ ಎಂದರು.

ಕ್ಷೇತ್ರಕ್ಕೆ ಅನುದಾನವಿಲ್ಲ: ಕಳೆದ ನಾಲ್ಕು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದರೂ, ತಾಲೂಕಿನ ಅಭಿವೃದ್ದಿಗೆ ಪ್ರೋತ್ಸಾಹ ದೊರಕಲಿಲ್ಲ ಹಾಗೂ ವಿಶೇಷವಾದ ಅನುದಾನ ನನ್ನ ತಾಲೂಕಿಗೆ ಸಿಗಲಿಲ್ಲ. ನಮ್ಮ ಜೊತೆ ಕೆಲಸ ಮಾಡುವ ಮುಖಂಡರಿಗೆ ಸರಿಯಾದ ಸ್ಥಾನಮಾನಗಳು ಸಿಗುತ್ತಿಲ್ಲ. ತಾಲೂಕಿನಲ್ಲಿ ಕಳೆದ ಎರಡು ಮೂರು ವರ್ಷಗಳಲ್ಲಿ ರಸ್ತೆಗಳು ಹಾಳಾಗಿವೆ. ಸರ್ಕಾರಕ್ಕೆ ಪತ್ರದ ಮೂಲಕ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ನಮ್ಮನ್ನು ಸಮಯಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿರುವುದು ನಮಗೆ ಗೊತ್ತಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದಿಂದ ದೂರ ಹೋಗಬೇಕೆಂದು ತೀರ್ಮಾನಿಸಿದ್ದೇವೆ ಎಂದರು.
ಕಾಂಗ್ರೆಸ್ ಪಕ್ಷದಿಂದ ಹೊರ ಬಂದು 22ನೇ ತಾರೀಖಿನಂದು ನಗರದ ಚೌಡೇಶ್ವರಿ ಭವನದಲ್ಲಿ ಸಭೆಯನ್ನು ಕರೆಯಲಾಗಿದ್ದು, ಸಭೆಯಲ್ಲಿ ಕ್ಷೇತ್ರದ ಮುಖಂಡರು ಭಾಗಿಯಾಗಲಿದ್ದಾರೆ. ಅಂದು ನಮ್ಮ ಸಾರ್ವಜನಿಕ ಬದುಕಿನ ಬಗೆಗಿನ ತೀರ್ಮಾನವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಲಾಗುದು ಎಂದು ಯೋಗೇಶ್ವರ್ ಹೇಳಿದರು.



-

ನಾಡದೇವತೆ ಚಾಮುಂಡಿಗೆ 31 ಕೆ.ಜಿ ತೂಕದ 2 ಬೆಳ್ಳಿ ಆನೆ ಅರ್ಪಿಸಿದ ಡಿಕೆಶಿ
ಮೈಸೂರು: ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಇಂಧನ ಸಚಿವ ಡಿಕೆ ಶಿವಕುಮಾರ್ 31 ಕೆಜಿ ತೂಕದ ಎರಡು ಬೆಳ್ಳಿ ಆನೆಗಳನ್ನ ಅರ್ಪಿಸಿದ್ದಾರೆ.

ಪತ್ನಿ ಜೊತೆ ದೇವಸ್ಥಾನಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ್, ಎರಡು ದೊಡ್ಡ ಬೆಳ್ಳಿ ಆನೆಗಳನ್ನ ದೇವಿಗೆ ಸಲ್ಲಿಸಿದ್ರು. ಆದಾಯ ತೆರಿಗೆ ಇಲಾಖೆ ದಾಳಿ ನಂತರ ದೇವಸ್ಥಾನಕ್ಕೆ ಆಗಮಿಸಿ ಡಿಕೆಶಿ ಹರಕೆ ಕಟ್ಟಿಕೊಂಡಿದ್ದರು. ಹೀಗಾಗಿ ಇವತ್ತು ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ಬೆಳ್ಳಿ ಆನೆ ಸಮರ್ಪಣೆ ಮಾಡಿದ್ದಾರೆ. ಭಾನುವಾರದಂದು ಡಿಕೆಶಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ತುಲಾಭಾರ ನೆರವೇರಿಸಿ ಸುಬ್ರಹ್ಮಣ್ಯ ಸ್ವಾಮಿಗೆ ಹರಕೆ ತೀರಿಸಿದ್ದರು.

ಹರಕೆ ತೀರಿಸಿದ ನಂತರ ಮಾತನಾಡಿದ ಡಿಕೆಶಿ, ಹಿಂದೆ ನೀಡಿದ್ದ ಬೆಳ್ಳಿ ಆನೆ ಸರಿ ಇರಲಿಲ್ಲ. ಹೀಗಾಗಿ ಈಗ ಹೊಸ ಬೆಳ್ಳಿ ಆನೆ ನೀಡಿದ್ದೇನೆ. ಅಂದುಕೊಂಡಿದ್ದು ಈಡೇರಿದೆ. ಇದರಿಂದ ಹರಕೆ ತೀರಿಸಿದ್ದೇನೆ. ಏನು ಅಂದುಕೊಂಡಿದ್ದೆ. ಏನು ಆಯಿತು ಎನ್ನುವುದು ಭಕ್ತನಿಗೂ ದೇವರಿಗೂ ಬಿಟ್ಟ ವಿಚಾರ. ಇದನ್ನು ಸಾರ್ವಜನಿಕವಾಗಿ ಹೇಳಲು ಆಗುವುದಿಲ್ಲ. ಮನಸ್ಸಿನಲ್ಲಿ ಏನೋ ಇಟ್ಟುಕೊಂಡಿದ್ದೇನೆ. ಮುಂದೆ ಇನ್ನೇನೂ ಇಟ್ಟುಕೊಂಡಿರುತ್ತೇವೆ. ಹೀಗಾಗಿ ಇಂತಹ ಭಕ್ತಿ ಸಮರ್ಪಣೆ ಅಂತ ಹೇಳಿದ್ರು.

ನಾನು ಯಾವತ್ತೂ ತಪ್ಪು ಮಾಡಿಲ್ಲ. ಮೋಸ ಮಾಡಿಲ್ಲ. ದಗಲ್‍ಬಾಜಿ ಮಾಡಿಲ್ಲ. ಇದರಿಂದ ದೇವಿ ನನಗೆ ಸದಾ ರಕ್ಷಣೆ ಮಾಡುತ್ತಾಳೆ. ಕಳ್ಳತನ ಮಾಡಿದವರಿಗೆ, ಮೋಸ ಮಾಡಿದವರಿಗೆ ಭಯ ಇರಬೇಕು. ನನಗೆ ಅಂತಹ ಭಯ ಇಲ್ಲ. ಕುಕ್ಕೆಯಲ್ಲಿ ನನ್ನ ಅಭಿಮಾನಿಗಳ ಹರಕೆಯಂತೆ ನಿನ್ನೆ ತುಲಾಭಾರ ಮಾಡಿಸಿದ್ದೇನೆ. ಆದಾಯ ತೆರಿಗೆ ಇಲಾಖೆ ದಾಳಿಗೂ ಇದಕ್ಕೂ ಸಂಬಂಧ ಇಲ್ಲ ಅಂದ್ರು.









-

ಸಿಎಂ ವಿರುದ್ಧ ಕಿಡಿಕಾರಿದ ಡಿಕೆ ಶಿವಕುಮಾರ್ ತಾಯಿ
ಮಂಡ್ಯ: ನನ್ನ ಮಕ್ಕಳು ಜನಸೇವೆಯನ್ನು ಮಾಡುತ್ತಿದ್ದಾರೆ. ಅವರೂ ಯಾರಿಗೂ ಮೋಸ ಮಾಡಿಲ್ಲ. ನಮ್ಮ ಮನೆ ಮತ್ತು ಮಕ್ಕಳು ಮನೆ ಮೇಲೆ ದಾಳಿ ಮಾಡುವಂತಹದ್ದು ಏನೂ ಇರಲಿಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ತಾಯಿ ಗೌರಮ್ಮ ಹೇಳಿದ್ದಾರೆ.
ಐಟಿ ಅಧಿಕಾರಿಗಳು ಮನೆಗ ಬಂದರು, ಮನೆಯ ಗೇಟ್‍ನ ಬೀಗ ಹಾಕಿದರು. ಇದ್ಯಾವುದಕ್ಕೂ ನನಗೆ ಬೇಸರವಿಲ್ಲ. ಅವರ ಮನೆಯ ಒಳಗಡೆ ಬಂದು ತಮ್ಮ ಕೆಲಸವನ್ನು ಮಾಡುತ್ತಿದ್ದರು. ನನ್ನಿಂದ ಅವರ ಕೆಲಸಕ್ಕೆ ಯಾವುದೇ ತೊಂದರೆಯಾಗಿಲ್ಲ. ನನ್ನ ಮಕ್ಕಳೂ ಎಂದೂ ತಪ್ಪು ಮಾಡಲ್ಲ, ಹಾಗಾಗಿ ನಾನು ಭಯಗೊಂಡಿಲ್ಲ ಎಂದು ಗೌರಮ್ಮ ಹೇಳಿದರು.

ಸಿಎಂ ವಿರುದ್ಧ ಕಿಡಿ: ಸಿಎಂ ಸಿದ್ದರಾಮಯ್ಯ ನನ್ನ ಮಗನಿಂದ ಮುಂದೆ ಬಂದಿದ್ದಾರೆ. ಸಿದ್ದರಾಮಯ್ಯ ನಂಬಿಸಿ ಕತ್ತು ಕುಯ್ಯುತ್ತಿದ್ದಾರೆ. ನನ್ನ ಮಕ್ಕಳನ್ನು ಕಂಡ್ರೆ ಅವರಿಗೆ ಆಗಿ ಬರೋದಿಲ್ಲ. ಅಕ್ಕಿ ಕೊಟ್ಟೆ, ಅದು ಕೊಟ್ಟೆ ಎಲ್ಲಾ ಕೊಟ್ರೂ ಅದೇನು ಅವರ ಮನೆಯಿಂದ ಕೊಟ್ಟಿಲ್ಲ. ರೈತರು ಬೆಳೆದಿದ್ದ ಅಕ್ಕಿಯನ್ನು ಕೊಟ್ಟಿದ್ದಾರೆ. ನನ್ನ ಮಕ್ಕಳ ಮನೆ ಮೇಲೆ ದಾಳಿ ನಡೆದರೂ ಸಿದ್ದರಾಮಯ್ಯ ಯಾಕೆ ಸುಮ್ಮನಿದ್ದಾರೆ? ಸಿದ್ದರಾಮಯ್ಯ ನನ್ನ ಮಕ್ಕಳ ಮೇಲೆ ಕತ್ತಿ ಮಸಿಯುತ್ತಿದ್ದಾರೆ. ಅವರಿಗೆ ಅಧಿಕಾರಿಗಳನ್ನು ಪ್ರಶ್ನಿಸುವ ಹಕ್ಕಿದ್ದರೂ ಸುಮ್ಮನಿದ್ದಾರೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದರು.

ರಾಜಕೀಯ ಎನ್ನುವುದೇ ತುಂಬಾ ಕೆಟ್ಟದ್ದು, ಇದರಲ್ಲಿ ಜನ ನಾವುಗಳು ಮುಂದೆ ಬರೋದನ್ನು ಸಹಿಸಲ್ಲ. ಹೀಗಾಗಿ ದ್ವೇಷವನ್ನು ಸಾಧಿಸುತ್ತಾರೆ. ನಮ್ಮ ಮನೆಯ ಮೇಲೆ ಐಟಿ ದಾಳಿ ನಡೆಯೋದಕ್ಕೆ ಪ್ರಧಾನ ಮಂತ್ರಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇರ ಹೊಣೆ ಆಗುತ್ತಾರೆ. ಇದರ ಪ್ರತಿಫಲವನ್ನು ಮುಂದೊಂದು ದಿನ ಅನುಭವಿಸುತ್ತಾರೆ. ಈ ರೀತಿಯ ದ್ವೇಷ ಮಾಡುವರು ಹುಚ್ಚರು, ಮುಟ್ಟಾಳರು ಎಂದು ಕಿಡಿಕಾರಿದರು.
ರಾಜ್ಯದ್ಯಾಂತ ನನ್ನ ಮಕ್ಕಳ ಪರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಅವರಿಗೆಲ್ಲ ನನ್ನ ಧನ್ಯವಾದಗಳು. ರಾಜ್ಯದ ಬಿಜೆಪಿ, ಜನತಾದಳ ಎಲ್ಲಾ ಪಕ್ಷದವರು ನಮಗೆ ಸಹಾಯ ಮಾಡಿದ್ದಾರೆ. ಮುಂದೊಂದು ದಿನ ನನ್ನ ಮಕ್ಕಳು ನಿಮ್ಮ ಋಣ ತೀರುಸ್ತಾರೆ. ನನ್ನ ಮಕ್ಕಳು ತುಂಬಾ ಪವಿತ್ರವಾದವರು. ಅವರಿಗೆ ಮೋಸ ಮಾಡಬೇಕು ಎಂಬ ಮನಸ್ಸಿಲ್ಲ. ತಪ್ಪು ಮಾಡುವ ಮಕ್ಕಳನ್ನು ನಾನು ಹೆತ್ತಿಲ್ಲ ಎಂದು ಹೇಳಿದರು.















