Tag: ಡಿ.ಕೆ.ಶಿವಕುಮಾರ್

  • ಬಿಜೆಪಿ ಸಿಎಂಗಳು ಸಿಟಿ ರೌಂಡ್ ಮಾಡಿದ್ದು ಫೋಟೋಶೂಟಿಗಾ? – ಡಿಕೆಶಿ ಫುಲ್‌ ಗರಂ

    ಬಿಜೆಪಿ ಸಿಎಂಗಳು ಸಿಟಿ ರೌಂಡ್ ಮಾಡಿದ್ದು ಫೋಟೋಶೂಟಿಗಾ? – ಡಿಕೆಶಿ ಫುಲ್‌ ಗರಂ

    – ಬೆಂಗಳೂರಿನ ರಸ್ತೆ ಅಭಿವೃದ್ಧಿಗೆ 600 ಕೋಟಿ ಮೊತ್ತದ ಯೋಜನೆ ಹಮ್ಮಿಕೊಂಡಿದ್ದೇವೆಂದ ಡಿಸಿಎಂ

    ಬೆಂಗಳೂರು: ಈ ಹಿಂದೆ ಬಿಜೆಪಿಯ (BJP) ಮುಖ್ಯಮಂತ್ರಿಗಳು ಬೆಂಗಳೂರು ಪ್ರದಕ್ಷಿಣೆ ಹಾಕಿದ್ದು, ಫೋಟೋಶೂಟ್ ಮಾಡಲಿಕ್ಕಾ? ಆಗ ಅಶೋಕ್ ಅವರು ಬಸ್ಸಿನಲ್ಲಿ ಕೂತು ಹೋಗುತ್ತಿದ್ದರಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ತಿರುಗೇಟು ನೀಡಿದ್ದಾರೆ.

    ಸದಾಶಿವನಗರ ನಿವಾಸದ ಬಳಿ ಮಾಧ್ಯಮ ಪ್ರತಿಕ್ರಿಯೆ ನೀಡಿದ ಅವರು, ಡಿಸಿಎಂ ಬೆಂಗಳೂರು (Bengaluru) ಸಿಟಿ ರೌಂಡ್ಸನ್ನು ಅನ್ನು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಫೋಟೋ ಶೂಟ್ ಎಂದು ಟೀಕಿಸಿದ್ದಕ್ಕೆ ತಿರುಗೇಟು ನೀಡಿದ್ದಾರೆ.

    ಬಿಜೆಪಿವರು ಇರುವುದೇ ಟೀಕೆ ಮಾಡೋದಕ್ಕೆ, ಬಿಜೆಪಿಗೆ ಬೇರೇನ್‌ ಕೆಲಸ ಇದೆ. ನಾವು ನಮ್ಮ ಕರ್ತವ್ಯ ಮಾಡುತ್ತಿದ್ದೇವೆ. ಇದು ದೊಡ್ಡ ಮೊತ್ತದ ಯೋಜನೆ, ಇದರ ಗುಣಮಟ್ಟ ಸರಿಯಾಗಿದೆಯೇ? ಸದ್ಯ 150 ಕಿ.ಮೀ ಉದ್ದದ ರಸ್ತೆ ಕಾಮಗಾರಿ ನಡೆಯುತ್ತಿದೆ. 1,700 ಕೋಟಿ ಮೊತ್ತದ ಯೋಜನೆ. ಇದನ್ನು ಕಾಲಮಿತಿಯೊಳಗೆ ಮುಗಿಸುವ ಗುರಿ ಹೊಂದಿದ್ದೇವೆ. ಮುಂದೆಯೂ ಇಂತಹ ಯೋಜನೆ ಕೈಗೆತ್ತಿಕೊಳ್ಳುವ ಉದ್ದೇಶವಿದೆ. ಈ ವಿಚಾರವಾಗಿ ಸ್ಥಳೀಯ ಶಾಸಕರ ಅಭಿಪ್ರಾಯ ಏನಿದೆ ಎಂದು ಚರ್ಚೆ ಮಾಡಿದ್ದೇನೆ. ಮತ್ತೆ ಕೆಲವು ಯೋಜನೆ ಕಾಮಗಾರಿ ಆದೇಶ ಆಗಿಲ್ಲ. ಬೆಂಗಳೂರಿನ ರಸ್ತೆಗಳನ್ನು ಸುಧಾರಿಸಲು 600 ಕೋಟಿ ಮೊತ್ತದ ಯೋಜನೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

    ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಅವರು ಬೆಂಗಳೂರಿನ ಕೆಲವು ಸಂಚಾರ ಯೋಜನೆಗಳ ಬಗ್ಗೆ ಎತ್ತಿರುವ ಪ್ರಶ್ನೆಗಳು ಅವರು ಏನು ಹೇಳಿದ್ದಾರೆ ಹೆಚ್ಚಿನ ಮಾಹಿತಿ ಇಲ್ಲ. ಅವರು ಒಳ್ಳೆಯ ಸಲಹೆ ಕೊಟ್ಟಿದ್ದರೆ ತೆಗೆದುಕೊಳ್ಳುತ್ತೇವೆ. ರಾಜಕಾರಣ ಇದ್ದರೆ ನಾವು ಅದನ್ನು ನಿಭಾಯಿಸುತ್ತೇವೆ ಎಂದಿದ್ದಾರೆ.

    ಇನ್ನೂ ಕೆಲವು ತಿಂಗಳಿಂದ ಅನ್ನಭಾಗ್ಯ ಅಕ್ಕಿ ಹಣ ಹಾಗೂ ಗೃಹಲಕ್ಷ್ಮಿ ಹಣ ಬಂದಿಲ್ಲ ಮೂರು ತಿಂಗಳಿಂದ ಬಂದಿಲ್ಲ, ಈ ಹಣವನ್ನು ನಾವು ಹಾಕುತ್ತೇವೆ. ನಾವು ಕೊಟ್ಟ ಮಾತಿನಂತೆ ನಡೆಯುತ್ತೇವೆ ಎಂದು ನುಡಿದಿದ್ದಾರೆ.

    ಇನ್ನೂ ಎಐಸಿಸಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದೀರಿ ಎಂಬ ಸಚಿವ ಕೆ.ಎನ್‌ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, ಈಗ ಚರ್ಚೆ ಬೇಡ, ನಾನು ಪಕ್ಷದ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕೇರಳಕ್ಕೆ ಹೋಗುತ್ತಿದ್ದೇನೆ. ನಂತರ ರಾಜಸ್ಥಾನದಲ್ಲಿ ಸಚಿವರ ಸಭೆ ಇದ್ದು, ಅಧಿಕಾರಿಗಳ ಸಮೇತ ಪ್ರಯಾಣ ಮಾಡುತ್ತಿದ್ದೇನೆ. ಅಲ್ಲಿಂದ ಬಂದ ನಂತರ ಮಾತನಾಡುತ್ತೇನೆ ಎಂದಿದ್ದಾರೆ.

    ಡಿ.ಕೆ ಶಿವಕುಮಾರ್‌, ಆರ್‌. ಅಶೋಕ್‌, ಬೆಂಗಳೂರು, ಕಾಂಗ್ರೆಸ್‌

  • ಡಿಕೆಶಿದು ಹೇಳಿಕೆ ಅಷ್ಟೇ, ಎಚ್ಚರಿಕೆ ಗಿಚ್ಚರಿಕೆ ಯಾರು ಕೇಳ್ತಾರೆ: ರಾಜಣ್ಣ ಗುಡುಗು

    ಡಿಕೆಶಿದು ಹೇಳಿಕೆ ಅಷ್ಟೇ, ಎಚ್ಚರಿಕೆ ಗಿಚ್ಚರಿಕೆ ಯಾರು ಕೇಳ್ತಾರೆ: ರಾಜಣ್ಣ ಗುಡುಗು

    – ಯಾರಿಂದಲೂ ಶಿಸ್ತಿನ ಪಾಠ ಬೇಕಿಲ್ಲ
    – ಜಿ.ಸಿ.ಚಂದ್ರಶೇಖರ್ ಪಕ್ಷಕ್ಕೆ ಹೊರೆ

    ಬೆಂಗಳೂರು: ಸಿಎಂ ಹೆಸರು ದುರ್ಬಳಕೆ ಮಾಡಿಕೊಳ್ಳೋದು ಬೇಡ ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಹೇಳಿಕೆಗೆ ಸಚಿವ ಕೆ.ಎನ್ ರಾಜಣ್ಣ (K.N Rajanna) ತಿರುಗೇಟು ನೀಡಿದ್ದಾರೆ. ಸಿಎಂ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ಹೇಳಿಕೆ ಅಷ್ಟೇ, ಎಚ್ಚರಿಕೆ ಅಲ್ಲ. ಎಚ್ಚರಿಕೆ ಗಿಚ್ಚರಿಕೆ ಎಲ್ಲಾ ನಡೆಯಲ್ಲ, ಎಚ್ಚರಿಕೆನಾ ಯಾರು ಕೇಳ್ತಾರೆ ಎಂದು ಗುಡುಗಿದ್ದಾರೆ.

    ಬೆಂಗಳೂರಿನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ನಾವು ಯಾರ ಹೆಸರನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಅವರು ಎಐಸಿಸಿ ಹೆಸರನ್ನ ದುರ್ಬಳಕೆ ಮಾಡಿಕೊಳ್ಳುವುದು ಬೇಡ. ಎಲ್ಲದಕ್ಕೂ ಎಐಸಿಸಿ ಹೇಳಿದೆ ಎಂದು ಎಐಸಿಸಿ ಹೆಸರನ್ನ ಅವರು ದುರ್ಬಳಕೆ ಮಾಡಿಕೊಳ್ಳಬಾರದು. ಇದು ಆರೋಪ ಅಲ್ಲ ವಾಸ್ತವ. ನಾನು ಯಾರಿಂದಲೂ ಶಿಸ್ತಿನ ಪಾಠ ಮಾಡಿಸಿಕೊಳ್ಳಬೇಕಿಲ್ಲ. 50 ವರ್ಷ ಪಕ್ಷಕ್ಕೆ ಕೆಲಸ ಮಾಡಿದ್ದೇನೆ. ನಾನು ಮಾತನಾಡಿದರೆ ಸತ್ಪರಿಣಾಮ ಬೀರುವ ಮಾತನಾಡುತ್ತೇನೆಯೇ ಹೊರತು ದುಷ್ಪರಿಣಾಮ ಬೀರುವ ಮಾತನಾಡಲ್ಲ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಉಡುಪಿ| ಹಳಿಯ ಕಬ್ಬಿಣ ಕದ್ದ ಬಾಲಕರಿಗೆ ಥಳಿಸಿದ್ದಕ್ಕೆ ರೈಲ್ವೇ ಸಿಬ್ಬಂದಿ ಮೇಲೆ ಕೇಸ್‌

    ಪೂರ್ಣಾವಧಿ ಸಿಎಂ ವಿಚಾರದಲ್ಲಿ ನಾನೇನು ಹಟಕ್ಕೆ ಬಿದ್ದಿಲ್ಲ. ಅಂತಿಮ ನಿರ್ಧಾರ ಹೈಕಮಾಂಡ್ ಮಾಡಲಿದೆ. ಹೈಕಮಾಂಡ್ ಹೇಳಿದಂತೆ ಲೋಕಸಭೆ ಚುನಾವಣೆಯವರೆಗೆ ಅಧ್ಯಕ್ಷ ಅನ್ನೋ ಕಾರಣಕ್ಕೆ ಕೇಳಿದ್ದೇವೆ. ಉಪ ಮುಖ್ಯಮಂತ್ರಿ ಸ್ಥಾನ ಹೆಚ್ಚುವರಿ ಕೊಟ್ಟಿದ್ದರೆ, ಲೋಕಸಭೆ ಚುನಾವಣೆಯಲ್ಲಿ ಸಹಾಯ ಆಗುತ್ತಿತ್ತು ಈಗ ಕೇಳಲ್ಲ. ಡಿಸಿಎಂ ಸ್ಥಾನ ಅಂದರೆ ಏನು ತಲೆ ಮೇಲೆ ಹೆಚ್ಚುವರಿ ಕಿರೀಟ ಇರಲ್ಲ ಎಂದು ಕಿಡಿಕಾರಿದ್ದಾರೆ.

    ಪೂರ್ಣಾವಧಿ ಅಲ್ಪಾವಧಿ ಏನೇ ಇದ್ದರೂ ಎಲ್ಲಾ ಹೈಕಮಾಂಡ್ ತೀರ್ಮಾನ ಮಾಡಲಿದೆ. ಸಿಎಲ್‍ಪಿ ಸಭೆಯಲ್ಲೇ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅವರೇ ಹೇಳಿದ ಮೇಲೆ ನಮ್ಮದೇನು ಎಂದಿದ್ದಾರೆ.

    ನನಗೂ ಡಿ.ಕೆ.ಶಿವಕುಮಾರ್ ಅವರಿಗೂ ವೈಯುಕ್ತಿಕವಾಗಿ ಏನೂ ಇಲ್ಲ. ವಿಚಾರ ಭಿನ್ನ ಇರಬಹುದು ಅಷ್ಟೇ, ವಿಧಾನಸೌಧಕ್ಕೆ ನಾನು ಒಂದು ರಸ್ತೆಯಲ್ಲಿ ಹೋಗೋಣ ಅಂದರೆ ಅವರು ಒಂದು ರಸ್ತೆಯಲ್ಲಿ ಹೋಗೋಣ ಎನ್ನಬಹುದು. ನಾನು ಅವರು ಸಾಕಷ್ಟು ವರ್ಷದ ಸ್ನೇಹಿತರು. ಒಟ್ಟಿಗೆ ವಿದೇಶ ಪ್ರವಾಸ ಮಾಡಿದ್ದೇವೆ. ಅವರನ್ನು ಮನೆಗೆ ಒಂದು ದಿನ ಊಟಕ್ಕೆ ಕರೆಯುತ್ತೇನೆ ಎಂದಿದ್ದಾರೆ.

    ಪಕ್ಷದ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ಎಚ್ಚರಿಕೆ ವಿಚಾರವಾಗಿ, ನಮಗೆ ಎಚ್ಚರಿಕೆ ನೀಡಲು ಜಿ.ಸಿ.ಚಂದ್ರಶೇಖರ್ ಯಾರು? ಕೆಪಿಸಿಸಿ ಕಾರ್ಯಾಧ್ಯಕ್ಷರಾದರೆ ಅವರಿಗೇನು ಎರಡು ಕೊಂಬು ಇದೆಯಾ? ಶಿಶುಪಾಲ ಕೃಷ್ಣ ಪುರಾಣ ಇದೆಲ್ಲಾ ನಾನು ನಂಬಲ್ಲ. ಪುರಾಣ ಎಲ್ಲಾ ಕಟ್ಟು ಕಥೆ ಅವರೇ ಶಿಶುಪಾಲ. ಇಂತವರು ಪಕ್ಷಕ್ಕೆ ಹೊರೆ, ಅವರ ಹಿನ್ನಲೆ ಏನು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅಪಾರ್ಟ್‌ಮೆಂಟ್‌ನಲ್ಲಿ ನಾಲ್ವರ ಶವ ಪತ್ತೆ – I Am Sorry ಎಂದು ಬರೆದು ಪ್ರಾಣಬಿಟ್ಟ ಕುಟುಂಬ!

  • Invest Karnataka 2025 | ರಾಜ್ಯಕ್ಕೆ ಹರಿದುಬಂತು 10.27 ಲಕ್ಷ ಕೋಟಿ ಬಂಡವಾಳ

    Invest Karnataka 2025 | ರಾಜ್ಯಕ್ಕೆ ಹರಿದುಬಂತು 10.27 ಲಕ್ಷ ಕೋಟಿ ಬಂಡವಾಳ

    – 6 ಲಕ್ಷ ಉದ್ಯೋಗ ಸೃಷ್ಟಿ – ಎಂಬಿಪಿ ಮಾಹಿತಿ

    ಬೆಂಗಳೂರು: ಮೂರು ದಿನಗಳ ಕಾಲ ನಡೆದ ಬಂಡವಾಳ ಹೂಡಿಕೆ ಸಮಾವೇಶ 2025 (Invest Karnataka 2025) ಅತ್ಯಂತ ಯಶಸ್ವಿ ಕಂಡಿದೆ. ಸುಮಾರು 10 ಲಕ್ಷದ 27 ಸಾವಿರ 378 ಕೋಟಿ ರೂ. ಬಂಡವಾಳ ಹೂಡಿಕೆ (Investment) ಹರಿದುಬಂದಿದೆ.

    ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆಬ್ರವರಿ 11 ರಿಂದ 14ರ ವರೆಗೆ ಇನ್ವೆಸ್ಟ್ ಕರ್ನಾಟಕ ಸಮಾವೇಶ ನಡೀತು. ಜೆಎಸ್‌ಡಬ್ಲ್ಯೂ, ಲಾಮ್, ವೋಲ್ವೋ, ಹೋಂಡಾ ಹೀಗೆ ಅನೇಕ ಕಂಪನಿಗಳು ದೊಡ್ಡ ಮೊತ್ತ ಹೂಡಿಕೆ ಮಾಡಿವೆ. ಬಂಡವಾಳ ಹೂಡಿಕೆ ಸಮಾವೇಶದ ಕೊನೆಯ ದಿನ ಹಲವು ಮಹತ್ವದ ವಿಷಯಗಳ ಕುರಿತು ವಿಚಾರಗೋಷ್ಠಿಗಳು ನಡೆದವು. ಇದರಲ್ಲಿ ಸಂಸದ ಶಶಿ ತರೂರ್ ವಿಚಾರಗೋಷ್ಠಿ ಎಲ್ಲರ ಗಮನ ಸೆಳೆಯಿತು. ಗ್ರೀಸ್‌ನ ಮಾಜಿ ಪ್ರಧಾನಿ ಜಾರ್ಜ್ ಪಾಪಂಡ್ರೂ, ತಿರುವನಂತಪುರಂ ಸಂಸದ ಶಶಿ ತರೂರ್ ಗೋಷ್ಠಿಯಲ್ಲಿ ಭಾಗವಹಿಸಿದ್ರು.

    ವಿಚಾರಗೋಷ್ಠಿಯಲ್ಲಿ ರಾಷ್ಟ್ರಗಳು ಹೇಗೆ ಸವಾಲುಗಳನ್ನ ಎದುರಿಸುವುದು ಮತ್ತು ನಿರಂತರವಾಗಿ ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಮತ್ತು ಆರ್ಥಿಕ ಭೂದೃಶ್ಯದಲ್ಲಿ ಸ್ಥಿತಿ ಸ್ಥಾಪಕತ್ವವನ್ನು ಹೇಗೆ ನಿರ್ಮಿಸಬಹುದು ಎಂಬುದರ ಮೇಲೆ ಕೇಂದ್ರೀಕರಿಸಿತ್ತು. ಅಲ್ಲದೇ ಆಡಳಿತ, ನೀತಿ-ನಿರ್ಮಾಣ ಮತ್ತು ದೀರ್ಘಾವಧಿಯ ಸ್ಥಿರತೆಗಾಗಿ ಕಾರ್ಯತಂತ್ರಗಳ ಒಳನೋಟಗಳನ್ನು ಒಳಗೊಂಡಿತ್ತು. ಇದನ್ನೂ ಓದಿ: ಫೆ.18ಕ್ಕೆ ರಾಜೀವ್ ಕುಮಾರ್ ನಿವೃತ್ತಿ – ಯಾರಾಗ್ತಾರೆ ಮುಂದಿನ ಮುಖ್ಯ ಚುನಾವಣಾ ಆಯುಕ್ತ?

    ಇದೇ ವೇಳೆ ಮಾತನಾಡಿದ ಶಶಿ ತರೂರ್ (Shashi Tharoor), ಬಹುಧ್ರುವೀಕರಣದ ಜಗತ್ತಿನಲ್ಲಿ ವಿಶ್ವಸಂಸ್ಥೆ ಕೂಡಾ ಮೂಲ ಉದ್ದೇಶದೊಂದಿಗೆ ಕಾರ್ಯನಿರ್ವಹಿಸುತ್ತಿಲ್ಲ. ಅಸಮಾನತೆ,ತಾರತಮ್ಯಗಳು ಅಲ್ಲೂ ಇದ್ದು, ಅದನ್ನು ಅರ್ಥ ಮಾಡಿಕೊಂಡರಷ್ಟೇ ಪರ್ಯಾಯ ಜಾಗತಿಕ ವ್ಯವಸ್ಥೆಯ ಬಗ್ಗೆ ಚಿಂತಿಸಬಹುದು ಎಂದು ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಶಶಿ ತರೂರ್ ತಿಳಿಸಿದರು. ಇದನ್ನೂ ಓದಿ: ಜಯಲಲಿತಾರ 11,344 ರೇಷ್ಮೆ ಸೀರೆ, 750 ಜೋಡಿ ಚಪ್ಪಲಿ, ಆಸ್ತಿ ಪತ್ರ ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರ

    ಸಮಾವೇಶದ ನಂತರ ಸುದ್ದಿಗೋಷ್ಠಿ ನಡಸಿದ ಎಂಬಿ ಪಾಟೀಲ್, ಸಮಾವೇಶಕ್ಕೆ 6 ತಿಂಗಳಿಂದ ಸಿದ್ಧತೆ ಮಾಡಿದ್ದೆವು. ವಿಶ್ವದಾದ್ಯಂತ ಸುತ್ತಾಟ ಮಾಡಿದ್ವಿ. ಅಮೆರಿಕ, ಜಪಾನ್, ಯುರೋಪ್ ಸೇರಿ ಹಲವು ಕಡೆ ಪ್ರವಾಸ ಮಾಡಿ ಇನ್ವೆಸ್ಟ್ ಮೆಂಟ್ ಸಮಾವೇಶದ ಬಗ್ಗೆ ಮಾಹಿತಿ ಕೊಟ್ಟಿದ್ವಿ. ಸುಮಾರು 10 ಲಕ್ಷ 27 ಸಾವಿರ 378 ಕೋಟಿ ಬಂಡವಾಳ ಹೂಡಿಕೆ ಆಗಿದೆ. 6 ಲಕ್ಷ ಉದ್ಯೋಗ ಸೃಷ್ಟಿ ಆಗಲಿದೆ. 75% ಹೂಡಿಕೆ ಬಿಹಾಂಡ್ ಬೆಂಗಳೂರಿಗೆ ಹೂಡಿಕೆ ಆಗಿದೆ. ಉತ್ತರ ಕರ್ನಾಟಕ- 45% ಹೂಡಿಕೆ ಆಗಿದೆ ಅಂತಾ ತಿಳಿಸಿದ್ರು. ಇದನ್ನೂ ಓದಿ: ಜಿಯೋ ಹಾಟ್‌ಸ್ಟಾರ್‌ ವಿಲೀನ | ಇನ್ಮುಂದೆ ಐಪಿಎಲ್‌ ಉಚಿತ ವೀಕ್ಷಣೆ ಇಲ್ಲ- ಎರಡನ್ನೂ ಸಬ್‌ಸ್ಕ್ರೈಬ್‌ ಮಾಡಿದವರ ಕಥೆ ಏನು? 

  • ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಕರ್ನಾಟಕದ ಸಾಮರ್ಥ್ಯಕ್ಕೆ ಸಾಕ್ಷಿ: ಡಿಕೆಶಿ

    ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಕರ್ನಾಟಕದ ಸಾಮರ್ಥ್ಯಕ್ಕೆ ಸಾಕ್ಷಿ: ಡಿಕೆಶಿ

    ಬೆಂಗಳೂರು: ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಕರ್ನಾಟಕ (Karnataka) ರಾಜ್ಯದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಬಂಡವಾಳ ಹೂಡಿಕೆ (Investment) ವಿಚಾರದಲ್ಲಿ ಕರ್ನಾಟಕ ದೇಶದ ಇತರ ನಗರಗಳ ಜತೆ ಸ್ಪರ್ಧೆ ಮಾಡುತ್ತಿಲ್ಲ. ಬದಲಿಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ತಿಳಿಸಿದರು. ಇದನ್ನೂ ಓದಿ : ರಕ್ಷಣಾ ಒಪ್ಪಂದ – ಭಾರತಕ್ಕೆ ಅಮೆರಿಕದ F-35 ಯುದ್ಧ ವಿಮಾನ

    ಅರಮನೆ ಮೈದಾನದಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ 2025 (Invest Karnataka 2025) ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ದಿನಗಳಲ್ಲಿ ಈ ಸಮಾವೇಶದಲ್ಲಿ ಅನೇಕ ಒಪ್ಪಂದಗಳು, ಚರ್ಚೆಗಳು ನಡೆದಿವೆ. ನೀವೆಲ್ಲರೂ ಕರ್ನಾಟಕ ರಾಜ್ಯದಲ್ಲಿ ಸೋಲುವ ಮಾತಿಲ್ಲ. ಹೀಗಾಗಿ ಈ ರಾಜ್ಯದ ಮೇಲೆ ನೀವು ವಿಶ್ವಾಸವಿಡಬಹುದು. ಈ ರಾಜ್ಯಕ್ಕೆ ಬಂದವರು ಬರಿಗೈಯಲ್ಲಿ ಹೋಗುವುದಿಲ್ಲ. ಈ ಸಮಾವೇಶದಲ್ಲಿ ಭಾಗವಹಿಸಿದ ಸಜ್ಜನ್ ಜಿಂದಾಲ್, ಆನಂದ್ ಮಹೀಂದ್ರಾ ಅವರ ಮಾತು ಕೇಳಿದ್ದೀರಿ. ಅವರ ಯೋಶೋಗಾಥೆ ಕೇಳಿದ್ದೀರಿ. ಇವರ ಮಾತು ಕೇಳಿದ ನಂತರ ವಿಶ್ವ ಭಾರತವನ್ನು ಬೆಂಗಳೂರು ಹಾಗೂ ಕರ್ನಾಟಕದ ಮೂಲಕ ನೋಡುತ್ತಿದೆ ಎಂದರು.

    ನಿಮ್ಮ ಕರ್ನಾಟಕ ರಾಜ್ಯ ಹಾಗೂ ದೇಶದ ಭವಿಷ್ಯಕ್ಕಾಗಿ ನೀವು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಬೇಕು. ಇದು ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿ ಮಾತ್ರವಲ್ಲ ಬೆಂಗಳೂರಿನ ಹೊರತಾಗಿ ಪ್ರಗತಿ ಸಾಧಿಸಲು ನಾವು ಗುರಿ ಹೊಂದಿದ್ದೇವೆ. ನಮ್ಮ ರಾಜ್ಯದಲ್ಲಿ ಏರೋಸ್ಪೇಸ್ ಕ್ಷೇತ್ರದಲ್ಲಿ ನಮ್ಮ ಎಂಎಸ್‌ಎಂಇಗಳು ದೊಡ್ಡ ಶಕ್ತಿ ತುಂಬುತ್ತಿವೆ. ಬಾಹ್ಯಾಕಾಶ ಕ್ಷೇತ್ರದ ಸಾಧನೆಗೆ ರಾಕೆಟ್‌ಗಳನ್ನು ನಮ್ಮ ಪೀಣ್ಯ ಕೈಗಾರಿಕಾ ಪ್ರದೇಶದಲ್ಲೇ ತಯಾರು ಮಾಡಿದ್ದೆವು ಎಂದು ಹೇಳಿದರು.

    ನೆಹರೂ ಅವರ ಕಾಲದಿಂದ ದೊಡ್ಡ ಕೈಗಾರಿಕೆಗಳು ಆರಂಭವಾಗಿ ದೊಡ್ಡ ಮಟ್ಟಕ್ಕೆ ಬೆಳೆದಿವೆ. ದೇಶದ ದೊಡ್ಡ ಕಂಪನಿಗಳು ನಮ್ಮ ರಾಜ್ಯದ ನೀತಿಗಳು, ಸ್ನೇಹ ಸಂಬಂಧವನ್ನು ಮೆಚ್ಚಿ ನಮ್ಮ ರಾಜ್ಯಕ್ಕೆ ಬಂದಿದ್ದಾರೆ. ನಾವೆಲ್ಲರೂ ಒಟ್ಟಾಗಿ ಸೇರಿ ಭವಿಷ್ಯದತ್ತ ಹೆಜ್ಜೆ ಹಾಕೋಣ. ಈ ಸಮಾವೇಶದ ಮೂಲಕ ರಾಜ್ಯಕ್ಕೆ 10 ಲಕ್ಷ ಕೋಟಿ ರೂ. ಗುರಿ ಹೊಂದಿದೆ. ನಮ್ಮ ನೂತನ ಕೈಗಾರಿಕಾ ನೀತಿಯು ಬೆಂಗಳೂರಿನ ಹೊರತಾಗಿ ರಾಜ್ಯದ ಇತರ ಪ್ರದೇಶಗಳಲ್ಲಿ ಬಂಡವಾಳ ಹೂಡಿಕೆ ಮಾಡುವವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಿದೆ ಅಂತ ಭರವಸೆ ನೀಡಿದರು.

    ಸಚಿವ ಹೆಚ್.ಕೆ.ಪಾಟೀಲ್ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಪ್ರವಾಸೋದ್ಯಮ ನೀತಿ ಪ್ರಕಟಿಸಿದೆ. ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ನವೀನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ರಾಜ್ಯದಲ್ಲಿ 300 ಕಿ.ಮೀ ಕರಾವಳಿ ಪ್ರದೇಶವಿದ್ದು, ಈ ಭಾಗದಲ್ಲಿ ನಮ್ಮ ಐತಿಹಾಸಿಕ ಸ್ಥಳಗಳನ್ನು ಉಳಿಸಿಕೊಂಡು ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರತ್ಯೇಕ ಕಾರ್ಯಕ್ರಮ ರೂಪಿಸಲಾಗುವುದು. ಕರ್ನಾಟಕ ರಾಜ್ಯ ಕೈಗಾರಿಕೆಗಳ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮ ರೂಪಿಸಿದೆ. ಈ ಸಮಾವೇಶ ನಮ್ಮ ರಾಜ್ಯ ಜಾಗತಿಕ ಮಟ್ಟದಲ್ಲಿ ವ್ಯಾಪಾರ ವ್ಯವಹಾರ ಮಾಡುವ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ನಾವು ದೇಶದ ಇತರೆ ನಗರಗಳ ಜತೆ ಸ್ಪರ್ಧೆ ಮಾಡುತ್ತಿಲ್ಲ. ಬದಲಿಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡುತ್ತಿದ್ದೇವೆ. ಇದು ನಮ್ಮ ಸಾಮರ್ಥ್ಯ ಎಂದು ತಿಳಿಸಿದರು. ಇದನ್ನೂ ಓದಿ :ಬೆಂಗಳೂರು | 5 ಕೋಟಿ ವೆಚ್ಚದಲ್ಲಿ ಬೀದಿನಾಯಿಗಳಿಗೆ ವ್ಯಾಕ್ಸಿನ್‌ಗೆ ಬಿಬಿಎಂಪಿ ಪ್ಲ್ಯಾನ್‌!

    ಈ ದೇಶದಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಆರಂಭಿಸಿದ್ದೆ ಎಸ್.ಎಂ ಕೃಷ್ಣ ಅವರ ಸರ್ಕಾರ ಕರ್ನಾಟಕದಲ್ಲಿ. ಈ ಸಮಾವೇಶ ಕೇವಲ ಆರಂಭವಷ್ಟೇ, ಇಲ್ಲಿಂದ ನಿಮಗೆ ಅವಕಾಶಗಳು ತೆರೆದುಕೊಳ್ಳಲು ಆರಂಭವಾಗುತ್ತವೆ. ವರ್ಷದ 365 ದಿನಗಳು ಕೂಡ ನಿಮಗಾಗಿ ನಾವು ಬಾಗಿಲು ತೆರೆದಿರುತ್ತೇವೆ. ನೀವು ಯಾವಾಗ ಬಂದರೂ ನಾವು ನಿಮಗೆ ಅಗತ್ಯ ನೆರವು ನೀಡಿ ನಿಮ್ಮ ಪ್ರಗತಿ, ಕರ್ನಾಟಕ ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಸಹಕಾರ ನೀಡುತ್ತೇವೆ. ಎಂ.ಬಿ.ಪಾಟೀಲ್ ಅವರ ನೇತೃತ್ವದಲ್ಲಿ ಈ ಸಮಾವೇಶ ಯಶಸ್ವಿಯಾಗಿದ್ದು, ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ನಾನು ಅಭಿನಂದನೆ ಎಂದು ಕೃತಜ್ಞತೆ ಸಲ್ಲಿಸಿದರು.

  • ಮಹಾ ಕುಂಭಮೇಳದಲ್ಲಿ ಡಿಸಿಎಂ ಡಿಕೆಶಿ ದಂಪತಿ ಭಾಗಿ – ಸಂಗಮದಲ್ಲಿ ಪುಣ್ಯಸ್ನಾನ

    ಮಹಾ ಕುಂಭಮೇಳದಲ್ಲಿ ಡಿಸಿಎಂ ಡಿಕೆಶಿ ದಂಪತಿ ಭಾಗಿ – ಸಂಗಮದಲ್ಲಿ ಪುಣ್ಯಸ್ನಾನ

    ಪ್ರಯಾಗ್‌ರಾಜ್‌: ಇಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ (Maha Kumbh Mela) ಡಿಸಿಎಂ ಡಿ.ಕೆ.ಶಿವಕುಮಾರ್‌ (D.K.Shivakumar) ದಂಪತಿ ಪಾಲ್ಗೊಂಡು ಭಕ್ತಿಭಾವದಲ್ಲಿ ಮಿಂದೆದ್ದಿದ್ದಾರೆ.

    ಡಿ.ಕೆ.ಶಿವಕುಮಾರ್ ಅವರು ಪತ್ನಿ ಉಷಾ ಅವರ ಜೊತೆ ಕುಂಭಮೇಳದಲ್ಲಿ ಭಾಗವಹಿಸಿದ್ದಾರೆ. ಉತ್ತರ ಪ್ರದೇಶ ಕೈಗಾರಿಕಾ ಸಚಿವ ನಂದಗೋಪಾಲ ಗುಪ್ತಾ ಅವರು ಡಿಕೆಶಿ ದಂಪತಿಗೆ ಭವ್ಯ ಸ್ವಾಗತ ಕೋರಿದ್ದಾರೆ.‌ ಇದನ್ನೂ ಓದಿ: ಮೈಸೂರು | ಫೆ.10ರಿಂದ ಮೂರು ದಿನ ತ್ರಿವೇಣಿ ಸಂಗಮದಲ್ಲಿ ಕುಂಭಮೇಳ

    ತ್ರಿವೇಣಿ ಸಂಗಮದಲ್ಲಿ ಡಿಕೆಶಿ ದಂಪತಿ ಪುಣ್ಯಸ್ನಾನ ಮಾಡಿದರು. ಬಳಿಕ ನೊಣವಿಕೆರೆ ಅಜ್ಜಯ್ಯ ಆಶೀರ್ವಾದ ಪಡೆದರು. ಇದೇ ವೇಳೆ ಕುಂಭಮೇಳದಲ್ಲಿದ್ದ ಸಾಧು-ಸಂತರ ಆಶೀರ್ವಾದವನ್ನು ಡಿಕೆಶಿ ಪಡೆದುಕೊಂಡರು. ಅಧ್ಯಾತ್ಮದ ಕುರಿತು ಸಂತರೊಟ್ಟಿಗೆ ಚರ್ಚೆ ನಡೆಸಿದರು.

    144 ವರ್ಷಗಳ ಬಳಿಕ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆ. 45 ದಿನಗಳ ಕಾಲ ಕುಂಭಮೇಳ ಜರುಗಲಿದೆ. ಡಿಕೆಶಿ ದಂಪತಿ ಇಂದು ಮತ್ತು ನಾಳೆ ಕುಂಭಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಮೋದಿ ಅಮೆರಿಕ ಪ್ರವಾಸದ ಬಳಿಕವೇ ದೆಹಲಿಯಲ್ಲಿ ಸರ್ಕಾರ ರಚನೆ?

    ಇದಕ್ಕೂ ಮುನ್ನ ಡಿಕೆಶಿ ಪುತ್ರಿ ಐಶ್ವರ್ಯಾ ಅವರು ಕುಂಭಮೇಳದಲ್ಲಿ ಪಾಲ್ಗೊಂಡಿದ್ದರು. ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ, ಸಾಧು-ಸಂತರ ಆಶೀರ್ವಾದ ಪಡೆದಿದ್ದರು.

  • ಕುಂಭಮೇಳದಲ್ಲಿ ಡಿಕೆಶಿ ಪುತ್ರಿ – ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಐಶ್ವರ್ಯ

    ಕುಂಭಮೇಳದಲ್ಲಿ ಡಿಕೆಶಿ ಪುತ್ರಿ – ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಐಶ್ವರ್ಯ

    ಪ್ರಯಾಗ್‌ರಾಜ್: ಇಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ (D.K.Shivakumar) ಪುತ್ರಿ ಐಶ್ವರ್ಯ (Aisshwarya DKS Hegde) ಪಾಲ್ಗೊಂಡಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಭಕ್ತಿ-ಭಾವ ಮೆರೆದಿದ್ದಾರೆ.

    ಕುಂಭಮೇಳದಲ್ಲಿ (Kumbh Mela 2025) ಕಳೆದ ಅದ್ಭುತ ಕ್ಷಣಗಳ ವೀಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಐಶ್ವರ್ಯ ಹಂಚಿಕೊಂಡಿದ್ದಾರೆ.

    ತಂದೆ ಡಿ.ಕೆ.ಶಿವಕುಮಾರ್‌ ಕುಂಭಮೇಳಕ್ಕೆ ಹೋಗುವ ಮುನ್ನ ಐಶ್ವರ್ಯ ಭೇಟಿ ಕೊಟ್ಟಿದ್ದಾರೆ. ಇದೇ ಫೆ.9, 10 ರಂದು ಕುಂಭಮೇಳಕ್ಕೆ ತೆರಳುವುದಾಗಿ ಡಿಕೆಶಿ ಹೇಳಿದ್ದರು.

    ಜಗತ್ತಿನ ಅತಿ ದೊಡ್ಡ ಧಾರ್ಮಿಕ ಉತ್ಸವ 2025ರ ಮಹಾ ಕುಂಭಮೇಳಕ್ಕೆ ಜ.13 ರಂದು ಅದ್ದೂರಿ ಚಾಲನೆ ಸಿಕ್ಕಿದೆ. 144 ವರ್ಷಗಳ ಬಳಿಕ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆ. ಫೆ.26 ರ ವರೆಗೆ ಉತ್ಸವ ಜರುಗಲಿದೆ.

  • ಫೆ.9, 10 ಕ್ಕೆ ಕುಂಭಮೇಳದಲ್ಲಿ ಡಿ.ಕೆ.ಶಿವಕುಮಾರ್ ಭಾಗಿ

    ಫೆ.9, 10 ಕ್ಕೆ ಕುಂಭಮೇಳದಲ್ಲಿ ಡಿ.ಕೆ.ಶಿವಕುಮಾರ್ ಭಾಗಿ

    ಬೆಂಗಳೂರು: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ (Maha Kumbh Mela) ಇದೇ ಫೆ.9, 10 ರಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಪಾಲ್ಗೊಳ್ಳಲಿದ್ದಾರೆ.

    ಫೆ.9 ರ ಬೆಳಗ್ಗೆ ಡಿಕೆಶಿ ಪ್ರಯಾಗ್‌ರಾಜ್ ತಲುಪಲಿದ್ದಾರೆ. ಫೆ.10 ರ ಮಧ್ಯಾನ 1 ಗಂಟೆ ನಂತರ ಪ್ರಯಾಗ್‌ರಾಜ್‌ನಿಂದ ವಾಪಾಸ್ ಆಗಲಿದ್ದಾರೆ.

    ವಿಶ್ವದ ಅತಿ ದೊಡ್ಡ ಧಾರ್ಮಿಕ ಉತ್ಸವ ಮಹಾ ಕುಂಭಮೇಳಕ್ಕೆ ದಿನದಿಂದ ದಿನಕ್ಕೆ ಭಕ್ತಸಾಗರ ಹರಿದು ಬರುತ್ತಿದೆ. ದೇಶದ ವಿವಿಧ ಕಡೆಯಿಂದ ಭಕ್ತರು ಆಗಮಿಸುತ್ತಿದ್ದು, ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಕುಂಭಮೇಳದಲ್ಲಿ ಭಾಗಿಯಾಗಲಿದ್ದಾರೆ.

    ಡಿಕೆಶಿ ಕುಟುಂಬ ಸಮೇತರಾಗಿ ಕುಂಭಮೇಳದಲ್ಲಿ ಭಾಗಿಯಾಗಲಿದ್ದಾರೆ. ಈ ಬಗ್ಗೆ ಹಿಂದೆಯೇ ಡಿಕೆಶಿ ತಿಳಿಸಿದ್ದರು. ಉತ್ತರ ಪ್ರದೇಶದ ಮಂತ್ರಿಗಳು ನನಗೆ ಬಹಳಷ್ಟು ಆತ್ಮೀಯರಿದ್ದು, ಆಮಂತ್ರಣ ನೀಡಿದ್ದಾರೆ. ಹಾಗಾಗಿ ಕುಟುಂಬ ಸಮೇತರಾಗಿ ಭೇಟಿ ನೀಡುವುದಾಗಿ ಹೇಳಿದ್ದರು.

  • ಮೈಕ್ರೋ ಫೈನಾನ್ಸ್‌ನವರು ರೌಡಿಗಳನ್ನಿಟ್ಟುಕೊಂಡು ಹಣ ವಸೂಲಿ ಮಾಡ್ತಿದ್ದಾರೆ: ಡಿಕೆಶಿ

    ಮೈಕ್ರೋ ಫೈನಾನ್ಸ್‌ನವರು ರೌಡಿಗಳನ್ನಿಟ್ಟುಕೊಂಡು ಹಣ ವಸೂಲಿ ಮಾಡ್ತಿದ್ದಾರೆ: ಡಿಕೆಶಿ

    ಬೆಂಗಳೂರು: ಮೈಕ್ರೋ ಫೈನಾನ್ಸ್‌ (Microfinance) ಕಂಪನಿಗಳು ಕುರುಕುಳ ನೀಡದಂತೆ ಸಿಎಂ ಹಾಗೂ ಸಹಕಾರ ಸಚಿವರು ಈಗಾಗಲೇ ಆದೇಶ ಮಾಡಿದ್ದಾರೆ. ಆದ್ರೆ ಕೆಲವು ಕಡೆ ರೌಡಿಗಳನ್ನ ಬಿಟ್ಟು ಹೆದರಿಸ್ತಾರೆ, ಹಣ ವಸೂಲಿ ಮಾಡ್ತಿದ್ದಾರೆ. ಹಾಗಾಗಿ ಆದಷ್ಟು ಬೇಗ ಜಾರಿಯಾಗುತ್ತೆ ಸುಗ್ರೀವಾಜ್ಞೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar) ಹೇಳಿದರು.

    ಮೈಕ್ರೋ ಫೈನಾನ್ಸ್‌ ಮಸೂದೆ ಜಾರಿ ಬಗ್ಗೆ ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಡಿಸಿಎಂ, ನಾವು ಬಿಲ್ ತರ್ತಿದ್ದೇವೆ. ಮುಖ್ಯಮಂತ್ರಿಗಳಿಗೆ ಆರೋಗ್ಯ ಸರಿಯಿಲ್ಲ. ಒಂದೆರಡು ದಿನ ವಿರಾಮದ ನಂತರ ಬರ್ತಾರೆ. ಆಮೇಲೆ‌ ಸುಗ್ರೀವಾಜ್ಞೆ ಬಗ್ಗೆ ಕ್ರಮ ಜರುಗಿಸ್ತಾರೆ ಎಂದರು.

    ಮೈಸೂರು, ಬೆಂಗಳೂರು, ರಾಮನಗರ ಸೇರಿದಂತೆ ಎಲ್ಲೆಡೆ ಮೈಕ್ರೋ ಫೈನಾನ್ಸ್‌ ಕಿರುಕುಳ ಪ್ರಕರಣಗಳು ಬೆಳಕಿಗೆ ಬರ್ತಿದೆ. ಈಗಾಗಲೇ ಸಿಎಂ, ಸಹಕಾರ ಸಚಿವರು ಕಿರುಕುಳ ನೀಡದಂತೆ ಆದೇಶ ಮಾಡಿದ್ದಾರೆ. ಬಡವರನ್ನ ನಾವು ರಕ್ಷಣೆ ಮಾಡಬೇಕು. ಆದ್ರೆ ಕೆಲವು ಕಡೆ ರೌಡಿಗಳನ್ನ ಬಿಟ್ಟು ಹೆದರಿಸ್ತಾರೆ. ಎಲ್ಲ ಪಕ್ಷದ ಕಾರ್ಯಕರ್ತರಿಗೆ ಹೇಳ್ತೇನೆ. ಕಿರುಕುಳ ಗಮನಕ್ಕೆ ತರುವಂತೆ ಮನವಿ ಮಾಡುತ್ತೇನೆ. ಪ್ರತಿ ಜಿಲ್ಲಾ ಕಚೇರಿಗಳಿಗೂ ಈ ಬಗ್ಗೆ ಹೇಳಿದ್ದೇವೆ. ಎಸ್ಪಿಗಳೊಂದಿಗೂ ಸಭೆ ಮಾಡ್ತೇವೆ. ಸುಗ್ರೀವಾಜ್ಞೆ ಆದಷ್ಟು ಬೇಗ ಜಾರಿಯಾಗುತ್ತೆ ಎಂದು ನುಡಿದರು.

    ಇನ್ನೂ ಜೆಡಿಎಸ್ ಶಾಸಕರ ಸಂಪರ್ಕ‌ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಯಾರ ಜೊತೆಯೂ ಮಾತನಾಡಿಲ್ಲ. ಜೆಡಿಎಸ್ ಶಾಸಕರ ಜೊತೆ ಮಾತನಾಡಿಲ್ಲ. ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರಿಗೆ ನೋವಿದೆ. ಅವರು ಎಷ್ಟು ದಿನ ಅಂತ ಕಾಯ್ತಾರೆ. ನಾನು ಯಾರ ಹೆಸರನ್ನೂ ಹೇಳಲ್ಲ. ಅವರಿಗೆ ನ್ಯಾಷನಲ್ ಪಾರ್ಟಿ ಸೇರಬೇಕೆಂಬ ಆಸೆ ಇದೆ. ಅದಕ್ಕೆ ಬನ್ನಿ ಸೇರಿಕೊಳ್ಳಿ ಅಂದಿದ್ದೇನೆ. ನನ್ನ ಜೊತೆ ಯಾರು ಸಂಪರ್ಕ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

    ನವೆಂಬರ್ 15-16ರಂದು ಸಿಎಂ ಬದಲಾವಣೆ ಬಗ್ಗೆ ಅಶೋಕ್ ‌ಭವಿಷ್ಯ ನುಡಿದ ಹೇಳಿಕೆಗೆ ಪ್ರತಿಕ್ರಿಯಿಸಿ, ನನಗೂ ಶಾಸ್ತ್ರದ ಬಗ್ಗೆ ಗೊತ್ತಿದೆ. ಅವರು ಬೋರ್ಡ್ ಯಾವಾಗ ಹಾಕಿಕೊಂಡ್ರೋ ಗೊತ್ತಿಲ್ಲ. ನಾನು ಶೀಘ್ರದಲ್ಲೇ ಅವರಿಂದ ಜ್ಯೋತಿಷ್ಯ ಕೇಳ್ತೇನೆ ಎಂದು ವ್ಯಂಗ್ಯವಾಡಿದರು.

    ಇನ್ನೂ ರಾಜ್ಯ ಸರ್ಕಾರ ದಿವಾಳಿ ಆಗಿದೆ ಎಂಬ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಗೆ ತಿರುಗೇಟು ನೀಡಿದ ಡಿಸಿಎಂ, ಪ್ರಧಾನಿಯವರು ಗ್ಯಾರೆಂಟಿ ಬಗ್ಗೆ ಏನು ಹೇಳಿದ್ರು…? 5 ಗ್ಯಾರಂಟಿ ಕೊಟ್ಟಾಗ ದಿವಾಳಿ ಅಂದಿದ್ರು. ಬೆಲೆ ಏರಿಕೆಯಿಂದ ಹೆಣ್ಣುಮಕ್ಕಳು ತತ್ತರಿಸಿದ್ದಾರೆ. ಬೆಲೆ ಹೆಚ್ಚಾಗಿದೆ ಬದುಕೋಕೆ ಆಗಲ್ಲ ಅಂತಿದ್ದರು. ಅದಕ್ಕೆ ನಾವು ಗ್ಯಾರೆಂಟಿ ತಂದಿದ್ದು. ಈಗ ಅವರೇ ಎಲ್ಲಾ ಕಡೆ ಶುರು ಮಾಡಿದ್ದಾರೆ. ನಮ್ಮದು ದಿವಾಳಿ ಆಗಿದ್ಯಾ ಅನ್ನೋದನ್ನ ಅವರೇ ಹೇಳಲಿ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಘೋಷಣೆ ಮಾಡಿದ್ದರು. ಈವರೆಗೆ ಒಂದು ರೂಪಾಯಿ ಕೂಡ ಬಂದಿಲ್ಲ. ಅವರು ಮೊದಲು ಕೊಟ್ಟ ಮಾತು ಉಳಿಸಿಕೊಳ್ಳಲಿ ಎಂದು ಕುಟುಕಿದರು.

  • ಯಾರೊಬ್ಬರೂ ಒಂದು ರೂಪಾಯಿ ಲಂಚ ಕೊಡಬೇಡಿ: ಡಿ.ಕೆ ಶಿವಕುಮಾರ್

    ಯಾರೊಬ್ಬರೂ ಒಂದು ರೂಪಾಯಿ ಲಂಚ ಕೊಡಬೇಡಿ: ಡಿ.ಕೆ ಶಿವಕುಮಾರ್

    – ರಾಮನಗರ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ, ಮುಂದೆ ಬೆಂಗಳೂರಿಗೆ ಸೇರುತ್ತಿದೆ ಎಂದ ಡಿಸಿಎಂ

    ರಾಮನಗರ: ಸಾರ್ವಜನಿಕರು ಯಾರೂ ಕೂಡ ಒಂದು ರೂಪಾಯಿ ಲಂಚ ಕೊಡಬೇಡಿ. ನಿಮಗೆ ಮನೆ ಕೊಡುವ ಕೆಲಸ ನಾವು ಮಾಡ್ತೇವೆ ಎಂದು ರಾಮನಗರ ಜನತೆಗೆ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಭರವಸೆ ನೀಡಿದರು.

    ರಾಮನಗರದಲ್ಲಿ (Ramanagara) ನಡೆದ ಕಾಂಗ್ರೆಸ್ (Congress) ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ಕುಮಾರಸ್ವಾಮಿ ಎರಡು ಬಾರಿ ಇಲ್ಲಿ ಶಾಸಕರಾಗಿ ಏನು ಸಾಕ್ಷಿ ಇದೆ. ಸರ್ಕಾರಿ ಶಾಲೆಗೆ 1 ಎಕರೆ ಜಾಗ ಕೊಟ್ಟಿದ್ದೀರಾ? ನೀವು ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದೀರಿ ಎಂದು ಈಗ ನಾನು ಪ್ರಶ್ನೆ ಮಾಡಲ್ಲ. ಅದು ಜನರಿಗೆ ಗೊತ್ತಿದೆ. ಈ ಜಿಲ್ಲೆಗೆ ಸಾಕ್ಷಿ ಕೊಡುವ ಜವಾಬ್ದಾರಿ ಯೋಗೇಶ್ವರ್, ಬಾಲಕೃಷ್ಣ, ಇಕ್ಬಾಲ್ ಹುಸೇನ್ ಹಾಗೂ ನನ್ನ ಮೇಲೆ ಇದೆ. ಇದನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡಬೇಕು ಎಂದರು.

    ಗ್ಯಾರಂಟಿ ಯೋಜನೆ, ಅಭಿವೃದ್ಧಿ ಮೇಲೆ ನಂಬಿಕೆ ಇಟ್ಟು ಜನ ಅಧಿಕಾರ ಕೊಟ್ಟಿದ್ದಾರೆ. 600 ಕೋಟಿ ರೂ.ಗೂ ಅಧಿಕ ಅನುದಾನದಲ್ಲಿ ಕ್ಷೇತ್ರ ಅಭಿವೃದ್ಧಿ ಆಗುತ್ತಿದೆ. ಕಣ್ಣೀರು ಬೇಕೋ ಅಥವಾ ಅಭಿವೃದ್ಧಿ ಬೇಕೋ ಎಂದು ನಾವು ನಿಮ್ಮ ಮುಂದೆ ಬಂದಿದ್ದೆವು. ನಮಗೆ ಅಭಿವೃದ್ಧಿ ಬೇಕು, ಕಣ್ಣೀರು ಬೇಡ ಅಂತ ನೀವು ತೀರ್ಮಾನ ಮಾಡಿದ್ದೀರಿ. ಬಿಜೆಪಿ, ಜೆಡಿಎಸ್‌ನ ಬ್ಲಾಕ್ ಮೇಲ್ ರಾಜಕಾರಣಕ್ಕೆ ನೀವು ಜಗ್ಗಲಿಲ್ಲ. ನಿಮ್ಮ ತೀರ್ಪನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

    ನೀರು, ಹಾಲಿನ ಬೆಲೆ ಎರಡೂ ಒಂದೇ ಆಗಿದೆ. ಹಾಲಿನ ದರ ಏರಿಕೆ ಆಗಬೇಕು ಅಂತ ಮನವಿ ಮಾಡಿದ್ದೀರಿ. ಮುಂದಿನ ದಿನಗಳಲ್ಲಿ ಈ ಕಾರ್ಯವು ಆಗುತ್ತದೆ. ರಾಮನ ತಂದೆ ದಶರಥ. ರಾಮನ ಬಂಟ ಆಂಜನೇಯ. ದಶರಥನ ದೇವಾಲಯ ಎಲ್ಲೂ ಇಲ್ಲ. ಆದರೆ ಆಂಜನೇಯನ ದೇವಾಲಯ ಎಲ್ಲಾ ಕಡೆ ಇದೆ. ಯಾಕಂದ್ರೆ ಆಂಜನೇಯ ಪ್ರಾಮಾಣಿಕ ಸೇವಕ. ಜನರು ಸಹ ಸೇವೆ ಮಾಡುವವರನ್ನು ಗುರುತಿಸೋದು. ನಿಮ್ಮ ಸೇವೆಯನ್ನು ಮಾಡುವ ಕೆಲಸ ನಾವು ಮಾಡುತ್ತೇವೆ ಎಂದರು.

    ಇದು ಋಣ ತೀರಿಸುವ ಕಾರ್ಯಕ್ರಮವಾಗಿದೆ. ನೀವು ಕೊಟ್ಟ ಶಕ್ತಿಗೆ ಅಭಿನಂದನೆ ತಿಳಿಸುತ್ತಿದ್ದೇವೆ. 2 ಬಾರಿ ಈ ಕಾರ್ಯಕ್ರಮ ಮುಂದೂಡಲ್ಪಟ್ಟಿತ್ತು. ಇವತ್ತಿನ ಈ ಕಾರ್ಯಕ್ರಮಕ್ಕೆ ಸಿಎಂ ಬರಬೇಕಿತ್ತು. ಬೆಳಿಗ್ಗೆ ಅವರ ಕಾಲಿಗೆ ನೋವಾಗಿದೆ. ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿ ರೆಸ್ಟ್ ಮಾಡುತ್ತಿದ್ದಾರೆ. ಪಕ್ಷದ ಪರವಾಗಿ, ಜಿಲ್ಲೆಯ ಶಾಸಕನಾಗಿ ನಾನು ಕೃತಜ್ಞತೆ ಸಲ್ಲಿಸಲು ಬಂದಿದ್ದೇನೆ. ಚುನಾವಣೆ ಸಮಯದಲ್ಲಿ ಸಾಕಷ್ಟು ಸಮೀಕ್ಷೆ ಬರುತ್ತಿದ್ದವು. ನಾನು ಮೊದಲೇ 138 ನಮ್ಮ ನಂಬರ್ ಅಂತ ಹೇಳಿದ್ದೆ. ಉಪಚುನಾವಣೆಗೂ ಮುಂಚೆಯೇ ಹೇಳಿದ್ದೆ. ಮೂರು ಕ್ಷೇತ್ರದಲ್ಲೂ ಗೆಲ್ಲುತ್ತೇವೆ ಅಂದಿದ್ದೆ. ಎರಡೂ ಕಡೆ ಮಾಜಿ ಸಿಎಂ ಪುತ್ರರಿದ್ದರೂ ಸಹ ನಮ್ಮನ್ನ ಬೆಂಬಲಿಸಿದ್ದೀರಿ. ಮಾಧ್ಯಮಗಳ ಸಮೀಕ್ಷೆ ಉಲ್ಟಾ ಆಯ್ತು. ಇದು ನಿಮ್ಮ ಮೇಲೆ ನನಗಿದ್ದ ನಂಬಿಕೆ ಎಂದು ನುಡಿದರು.

    ಕಾರ್ಯಕರ್ತರು ಯಾರು ಚಿಂತೆ ಮಾಡಬೇಕಾಗಿಲ್ಲ. ನಿಮ್ಮೆಲ್ಲರನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮದು. ಮಹಿಳೆಯರು ನಮಗೆ ಹೆಚ್ಚು ಬೆಂಬಲ ಕೊಟ್ಟಿದ್ದಾರೆ. ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ. ಇದನ್ನು ಹೀಗೆ ಮುಂದುವರೆಸಿಕೊಂಡು ಹೋಗಬೇಕು, ಗೊಂದಲಕ್ಕೆ ಅವಕಾಶ ಕೊಡಬೇಡಿ. ನಾನು, ಸುರೇಶ್ ಎಲ್ಲರೂ ನಿಮ್ಮ ಜೊತೆ ಇರುತ್ತೇವೆ. ಕ್ಷೇತ್ರದ ಇತಿಹಾಸದಲ್ಲಿ ದೊಡ್ಡ ಬಹುಮತ ಕೊಟ್ಟಿದ್ದೀರಿ. ನಿಮ್ಮ ಖುಣವನ್ನ ತೀರಿಸುವ ಕೆಲಸ ಮಾಡುತ್ತೇವೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

    ಸತ್ತೆಗಾಲಕ್ಕೆ ಭೇಟಿ ಕೊಟ್ಟು ನೀರಾವರಿ ಯೋಜನೆ ಚರ್ಚೆ ಮಾಡುತ್ತಿದ್ದೇವೆ. ಹಾಲಿನ ದರ ಹೆಚ್ಚಳದ ಬಗ್ಗೆಯೂ ಚರ್ಚೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

    ಜನತಾದಳದ ಕಾರ್ಯಕರ್ತರು ಪಾಪ, ಟೈಂ ವೇಸ್ಟ್ ಮಾಡಿಕೊಳ್ಳಬೇಡಿ. ರಾಮನಗರ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಮುಂದೆ ಬೆಂಗಳೂರಿಗೆ ಸೇರುತ್ತಿದೆ. ಅಲ್ಲಿ ಒಬ್ಬ ವ್ಯಕ್ತಿಗಾಗಿ ಪಕ್ಷ ಬಲಿ ಕೊಡುವ ಕೆಲಸ ಆಗಿದೆ. ಇದರ ಬಗ್ಗೆ ಹೆಚ್ಚು ಮಾತನಾಡಲ್ಲ, ನೀವೆ ಯೋಚನೆ ಮಾಡಿ ಎಂದು ಜೆಡಿಎಸ್ ಕಾರ್ಯಕರ್ತರಿಗೆ ಬಹಿರಂಗ ಆಹ್ವಾನ ನೀಡಿದರು.

  • ನವೆಂಬರ್ ಗೂಗ್ಲಿ ಹಾಕಿದ ಆರ್.ಅಶೋಕ್; ಕಾಂಗ್ರೆಸ್ ಸಚಿವರು ಕೆಂಡ, ಇತ್ತ ದೆಹಲಿಗೆ ಹೋಗ್ತಾರಾ ಪರಂ ಟೀಂ?

    ನವೆಂಬರ್ ಗೂಗ್ಲಿ ಹಾಕಿದ ಆರ್.ಅಶೋಕ್; ಕಾಂಗ್ರೆಸ್ ಸಚಿವರು ಕೆಂಡ, ಇತ್ತ ದೆಹಲಿಗೆ ಹೋಗ್ತಾರಾ ಪರಂ ಟೀಂ?

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾಲಿಗೆ ನವೆಂಬರ್ ಡೆಡ್‌ಲೈನ್ ಅಂತ ವಿಪಕ್ಷ ನಾಯಕ ಆರ್.ಅಶೋಕ್ ಸಿಡಿಸಿದ ಬಾಂಬ್‌ ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ಸಚಿವರು ಕಿಡಿಕಾರಿದ್ರೆ, ನೋಡ್ತಾ ಇರಿ ಅಂತಾ ಬಿಜೆಪಿ ರಾಜಕೀಯ ಮೇಲಾಟ ಶುರು ಮಾಡಿದೆ. ಈ ನಡುವೆ ಸಚಿವ ಜಿ. ಪರಮೇಶ್ವರ್‌ ಆಪ್ತರ ಟೀಂ ದೆಹಲಿ ಪ್ರವಾಸಕ್ಕೆ ಸಜ್ಜಾಗ್ತಿದೆ.

    ಕಾಂಗ್ರೆಸ್ ನಲ್ಲಿ ಮೊದಲೇ ಪವರ್ ಶೇರಿಂಗ್ ಫೈಟ್ ಜೋರಾಗಿದೆ. ಹೈಕಮಾಂಡ್ ಸೂಚನೆ ಬೆನ್ನಲ್ಲೇ ಎಲ್ಲವೂ ಮೇಲ್ನೋಟಕ್ಕೆ ತಣ್ಣಗಾದಂತಿದೆ. ಆದರೆ ಈಗ ಅಶೋಕ್, ಸಿದ್ದರಾಮಯ್ಯ ಸಿಎಂ ಸ್ಥಾನದ ಅವಧಿ ನವೆಂಬರ್ ವರೆಗೆ ಮಾತ್ರ ಎಂದು ಬಾಂಬ್ ಹಾಕಿದ್ದಾರೆ. ಇದನ್ನೂ ಓದಿ: ಸಿಎಂ ಬದಲಾವಣೆ| ಭವಿಷ್ಯ ಹೇಳೋದನ್ನ ಯಾವಾಗ ಕಲಿತ್ರೋ ಗೊತ್ತಿಲ್ಲ: ಅಶೋಕ್‌ಗೆ ಪರಮೇಶ್ವರ್ ಟಾಂಗ್

    ಸಿದ್ದರಾಮಯ್ಯ ಸಿಎಂ ಆಗುವಾಗಲೇ ಅವರ ಅಧಿಕಾರ ಅವದಿ 2.5 ವರ್ಷ ನಿಗದಿ ಆಗಿದೆ ಎನ್ನಲಾಗಿತ್ತು. ನವೆಂಬರ್‌ಗೆ ಸಿದ್ದರಾಮಯ್ಯ ಸಿಎಂ ಅವಧಿ ಖಚಿತವಾಗಿ ಮುಗಿಯಲಿದೆ ಎಂಬ ಅಶೋಕ್ ಹೇಳಿಕೆ ಈಗ ಹೊಸ ಚರ್ಚೆ ಹುಟ್ಟು ಹಾಕಿದೆ.‌ ಇನ್ನೂ ಹೈಕಮಾಂಡ್ ದೆಹಲಿ ಬುಲಾವ್‌ಗೆ ಮೊದಲೇ ಪರಮೇಶ್ವರ್ ಆಪ್ತ ಸಚಿವರ ದೆಹಲಿ ಚಲೋ ಕೈಗೊಳ್ಳಲು‌ ಮುಂದಾಗಿದ್ದಾರೆ. ಫೆಬ್ರವರಿ 10ರ ಒಳಗೆ ದೆಹಲಿ ತೆರಳಿ ಹೈಕಮಾಂಡ್ ಭೇಟಿಗೆ ನಾಲ್ವರು ಸಚಿವರು ಮುಂದಾಗಿದ್ದಾರೆ.

    ದಲಿತ ನಾಯಕರ ಸಭೆಗೆ ಬ್ರೇಕ್ ಹಾಕಿದ್ದನ್ನೇ ಮುಂದಿಟ್ಟುಕೊಂಡು ಹೈಕಮಾಂಡ್ ಭೇಟಿ ಮಾಡ್ತಿದ್ದಾರೆ. ಈ ಭೇಟಿ ಸಂದರ್ಭದಲ್ಲಿ ಪವರ್ ಶೇರಿಂಗ್ ಫೈಟ್, ಪವರ್ ಸೆಂಟರ್ ಪಾಲಿಟಿಕ್ಸ್ ಎಲ್ಲ ವಿಚಾರ ಹೈಕಮಾಂಡ್ ಮುಂದಿಡುವ ಲೆಕ್ಕಾಚಾರ ಇದೆ ಎನ್ನಲಾಗಿದೆ. ಆದ್ರೆ ಆರ್.ಅಶೋಕ್ ಹೇಳಿಕೆಗೆ ಕಾಂಗ್ರೆಸ್ ಸಚಿವರಾದ ಪರಮೇಶ್ವರ್, ಬೋಸರಾಜು ವಾಗ್ದಾಳಿ ನಡೆಸಿದ್ದಾರೆ.

    ಈ ನಡುವೆ ಸಿಎಂ ರಾಜಕೀಯ ಸಲಹೆಗಾರ ಹುದ್ದೆಗೆ ಬಿ.ಆರ್ ಪಾಟೀಲ್ ರಾಜೀನಾಮೆ ವಿಚಾರ ಕಾಂಗ್ರೆಸ್ ನಲ್ಲಿ ಸಾಕಷ್ಟು ಸದ್ದು ಮಾಡ್ತಿದೆ.
    ರಾಜಕೀಯ ಸಲಹೆಗಾರ ಹುದ್ದೆಗೆ ರಾಜೀನಾಮೆ ಬಳಿಕ ಇವತ್ತು ಬಿ.ಆರ್ ಪಾಟೀಲ್ ಮೊದಲ ಪ್ರತಿಕ್ರಿಯೆ ನೀಡಿದ್ದು, ನಾನು ಯಾವತ್ತೋ ರಾಜೀನಾಮೆ ಕೊಡಬೇಕು ಅಂತಾ ಇದ್ದೆ. ರಾಜ್ಯಪಾಲರ ತೂಗು ಕತ್ತಿ ಮೇಲಿತ್ತು. ಹಾಗಾಗಿ ರಾಜಿನಾಮೆ ನೀಡಿದೆ. ಆದ್ರೆ ರಾಜೀನಾಮೆ ವಾಪಸ್ ಪಡೆಯಲ್ಲ ಅನುದಾನ ಕೂಡ ಸರಿಯಾಗಿ ಬರ್ತಿಲ್ಲ, ಶಾಸಕನಾಗಿ ಅಭಿವೃದ್ಧಿ ಕೆಲಸ ಮಾಡೋಕೆ ಆಗ್ತಿಲ್ಲ, ಸಿಎಂ ಜೊತೆ ಮಾತಾಡ್ತೀನಿ ಅಂತ ಹೇಳಿದ್ದಾರೆ.

    ಕಲಬುರಗಿ ಜಿಲ್ಲಾ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, ಬಿ.ಆರ್ ಪಾಟೀಲ್ ಸಂಪರ್ಕಕ್ಕೆ ಸಿಗಲಿಲ್ಲ, ಸಿಎಂ ಮತ್ತು ಬಿ.ಆರ್ ಪಾಟೀಲ್ ಚೆನ್ನಾಗಿದ್ದಾರೆ. ಅವರೇ ಮಾತಾಡ್ತಾರೆ ಅಂತೇಳಿದ್ರು. ಇದನ್ನೂ ಓದಿ: ಬಿಹಾರ ಬಜೆಟ್ ಕನ್ನಡಿಗರಿಗೆ ಅನ್ಯಾಯ ಮಾಡಿದೆ: ಪ್ರಿಯಾಂಕ್ ಖರ್ಗೆ

    ಒಟ್ಟಿನಲ್ಲಿ ಪವರ್ ಶೇರ್ ವಾರ್ ಬೂದಿ ಮುಚ್ಚಿದ ಕೆಂಡದಂತೆ ಇರುವಾಗಲೇ ಅಶೋಕ್ ಬಾಂಬ್ ನಾನಾ ಲೆಕ್ಕಾಚಾರಗಳಿಗೆ ಕಾರಣವಾಗಿದ್ದು, ಅಡ್ಡೇಟಿನ‌ ಮೇಲೆ ಗುಡ್ಡೇಟಿನ ಹೇಳಿಕೆಯೋ? ನಿಜಕ್ಕೂ ನವೆಂಬರ್ ಡೆಡ್ ಲೈನೋ? ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.