Tag: ಡಿ.ಕೆ.ಶಿವಕುಮಾರ್

  • ಸಂವಿಧಾನ ತಿದ್ದುಪಡಿಯ ಅಗತ್ಯವೂ ಇಲ್ಲ, ಅನಿವಾರ್ಯತೆಯೂ ಇಲ್ಲ: ಬಿ.ಕೆ.ಹರಿಪ್ರಸಾದ್

    ಸಂವಿಧಾನ ತಿದ್ದುಪಡಿಯ ಅಗತ್ಯವೂ ಇಲ್ಲ, ಅನಿವಾರ್ಯತೆಯೂ ಇಲ್ಲ: ಬಿ.ಕೆ.ಹರಿಪ್ರಸಾದ್

    – ತಿದ್ದುಪಡಿಯ ಬದಲು ಬದಲಾವಣೆ ಎಂದು ಹೇಳಿರಬಹುದು ಡಿಕೆಶಿ ಪರ ಬ್ಯಾಟಿಂಗ್
    – ಹನಿಟ್ರ್ಯಾಪ್‌ ಮೋದಿ ಗುಜರಾತ್ ಸಿಎಂ ಆಗಿದ್ದಾಗಿನಿಂದಲೂ ಇದೆ

    ನವದೆಹಲಿ: ಅಲ್ಪಸಂಖ್ಯಾತ ಸಮುದಾಯಗಳಿಗೆ ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿ ನೀಡಲು ಸಂವಿಧಾನದ ತಿದ್ದುಪಡಿಯ ಅಗತ್ಯವೂ ಇಲ್ಲ. ಬದಲಾವಣೆಯ ಅನಿವಾರ್ಯತೆಯೂ ಇಲ್ಲ. ಸಂವಿಧಾನದ ಚೌಕಟ್ಟಿನಲ್ಲಿಯೇ ಮೀಸಲಾತಿ ನೀಡಿರುವುದು ಎಂದು ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ (B K Hariprasad) ಸ್ಪಷ್ಟನೆ ನೀಡಿದರು.

    ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂವಿಧಾನವನ್ನು ತಿದ್ದುಪಡಿ ತರಲು ಅವಕಾಶವಿದೆಯೇ ಹೊರತು ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಬದಲಾವಣೆ ಮಾಡಲು ಬಿಡುವುದೂ ಇಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D K Shivakumar) ಅವರು ತಿದ್ದುಪಡಿಯ ಬದಲು ಬದಲಾವಣೆ ಎಂದು ಹೇಳಿರಬಹುದು ಎಂದರು. ಇದನ್ನೂ ಓದಿ: ಹಾಲಿನ ದರ ಏರಿಕೆಯ ಒತ್ತಡಕ್ಕೆ ಮಣಿಯದ ಸಿಎಂ – ಇಂದಿನ ಹೈವೋಲ್ಟೇಜ್ ಸಭೆಯಲ್ಲಿ ಏನಾಯ್ತು?

    ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರನ್ನ ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುವುದೇ ಸಂವಿಧಾನದ ಮುಖ್ಯ ಆಶಯ. ಸಂವಿಧಾನದ ಆಶಯದಂತೆಯೇ ರಾಜ್ಯದ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತ ಸಮುದಾಯಗಳಿಗೆ ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿ ನೀಡಿದೆ. ಸಂವಿಧಾನ ಅನುಚ್ಛೇದ 14, 15(4), 16(4) ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಲು ಅವಕಾಶವಿದೆ ಎಂದು ಹೇಳಿದರು. ಇದನ್ನೂ ಓದಿ: 3.5 ಕೋಟಿಗೆ ಖರೀದಿಸಿದ್ದ ಅಪಾರ್ಟ್‌ಮೆಂಟ್‌ 6.6 ಕೋಟಿಗೆ ಮಾರಿದ ಅಕ್ಷಯ್ ಕುಮಾರ್

    ಧರ್ಮದ ಆಧಾರದಲ್ಲಿ ಎಲ್ಲಿಯೂ ಕೂಡ ಮೀಸಲಾತಿ ನೀಡಿಲ್ಲ. 1977ರಿಂದ 1993ರವರೆಗೂ 4 ಹಿಂದುಳಿದ ಆಯೋಗಗಳ ವರದಿ ನೀಡಿದೆ. ಹಾವನೂರು ಆಯೋಗ, ಚಿನ್ನಪ್ಪ ರೆಡ್ಡಿ ಆಯೋಗ ಸೇರಿದಂತೆ 4 ಆಯೋಗಗಳು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರೆಲ್ಲರೂ ಹಿಂದುಳಿದ ವರ್ಗಕ್ಕೆ ಸೇರಿಸಬಹುದು ಎಂದು ವರದಿ ನೀಡಿದೆ. ಮುಖ್ಯವಾಗಿ 1993ರ ಇಂದಿರಾ ಸಹಾನಿ ವರ್ಸಸ್ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಪ್ರತಿ ರಾಜ್ಯದಲ್ಲಿ ಹಿಂದುಳಿದವರ ಆಯೋಗ ರಚಿಸಿ, ಕುಲಶಾಸ್ತ್ರ ಅಧ್ಯಯನ (Ethnology Study) ನಡೆಸಿ, ಸಮುದಾಯಗಳ ಸಬಲೀಕರಣಕ್ಕೆ ಮೀಸಲಾತಿ ನೀಡಬಹುದು ಎಂದು ಸ್ಪಷ್ಟಪಡಿಸಿದೆ ಎಂದು ನುಡಿದರು. ಇದನ್ನೂ ಓದಿ: ಪತ್ನಿಗೆ 9 ಕೋಟಿ ಜೀವನಾಂಶ, ತಿಂಗಳಿಗೆ 4 ಲಕ್ಷ – ಭಾರೀ ಸಂಚಲನ ಸೃಷ್ಟಿಸಿದ ಟೆಕ್ಕಿ ಪೋಸ್ಟ್

    ಮುಸ್ಲಿಂ ಸಮುದಾಯಗಳಿಗೆ ಮೀಸಲಾತಿ ಕೇವಲ ನಮ್ಮ ರಾಜ್ಯದಲ್ಲಿ ಮಾತ್ರವಿಲ್ಲ. ಗುಜರಾತ್‌ನಲ್ಲೂ (Gujarat) ಕೂಡ ಮೀಸಲಾತಿ ನೀಡಿದೆ. ಕೇಂದ್ರ ಸರ್ಕಾರದಲ್ಲಿಯೂ ಕೂಡ 4 ಪಂಗಡಗಳನ್ನು ಹೊರತುಪಡಿಸಿ ಉಳಿದವರಿಗೆ ಮೀಸಲಾತಿ ನೀಡಿದೆ. ಗುಜರಾತ್‌ನಲ್ಲಿ 101 ಸಮುದಾಯಗಳಲ್ಲಿ 23 ಮುಸ್ಲಿಂ ಒಳ ಪಂಗಡಗಳಿಗೆ ಮೀಸಲಾತಿ ನೀಡಲಾಗಿದೆ. ಮುಸ್ಲಿಂ ಸಮುದಾಯಗಳು ಹಿಂದುಳಿದಿವೆ ಎಂದು ಕೆಲವು ಆಯೋಗಗಳು ಕೂಡ ವರದಿ ನೀಡಿದೆ ಎಂದು ಹೇಳಿದರು. ಇದನ್ನೂ ಓದಿ: ಸಂಸದರ ಸಂಬಳ 24% ಏರಿಕೆ – ಈಗ ಎಷ್ಟಿದೆ? ಎಷ್ಟು ಏರಿಕೆಯಾಗಿದೆ?

    ಹನಿಟ್ರ್ಯಾಪ್‌ ರಾಜ ಮಹಾರಾಜರ ಕಾಲದಿಂದ ಹಿಡಿದು, ನರೇಂದ್ರ ಮೋದಿ (Narendra Modi) ಅವರು ಗುಜರಾತ್‌ನ ಮುಖ್ಯಮಂತ್ರಿಯಾದ ಕಾಲದಿಂದ ಮಾನ್ಯ ಬಿಜೆಪಿ ಅಧ್ಯಕ್ಷನಿಂದಾಗಿ ಕರ್ನಾಟಕದ ಬಾಂಬೆ ಬಾಯ್ಸ್‌ಗಳು ಕೋರ್ಟ್‌ನಿಂದ ಇಂಜೆಕ್ಷನ್ ಆರ್ಡರ್ ವರೆಗೂ ಬಂದು, ಈಗ ಇಲ್ಲಿಗೆ ಬಂದು ನಿಂತಿದೆ. ಮಾಡುವುದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನದಂತೆ ಬಿಜೆಪಿಯವರು ಮಾತಾನಾಡುವುದು ಬೇಡ. ಹನಿಟ್ರ್ಯಾಪ್‌ ಈಗ ಆಗಿ ಹೋಗಿದೆ. ಅದರ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಗೃಹ ಸಚಿವರು ಹೇಳಿದ್ದಾರೆ. ಅದರ ಬಗ್ಗೆ ಚರ್ಚೆ ಬೇಡ ವಾಗ್ದಾಳಿ ನಡೆಸಿದರು.

  • ಡಿಕೆಶಿ ವಿರುದ್ಧ ಹೈಕಮಾಂಡ್ ಕ್ರಮ ತೆಗೆದುಕೊಳ್ಳುತ್ತಾ: ಛಲವಾದಿ ನಾರಾಯಣಸ್ವಾಮಿ

    ಡಿಕೆಶಿ ವಿರುದ್ಧ ಹೈಕಮಾಂಡ್ ಕ್ರಮ ತೆಗೆದುಕೊಳ್ಳುತ್ತಾ: ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರು: ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್ (D K Shivakumar) ವಿರುದ್ಧ ಕಾಂಗ್ರೆಸ್ (Congress) ಹೈಕಮಾಂಡ್ ಕ್ರಮ ತೆಗೆದುಕೊಳ್ಳುತ್ತಾ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalawadi Narayanaswamy) ಪ್ರಶ್ನಿಸಿದರು.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಡಿಕೆಶಿ ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿದ್ದಾರೆ. ಮುಸ್ಲಿಮರಿಗೆ ಮೀಸಲಾತಿ ಕೊಡಲು ಸಾಧ್ಯವಿಲ್ಲ ಎಂದು ಗೊತ್ತಿದ್ದರೂ ವೋಟ್ ಬ್ಯಾಂಕ್‌ಗಾಗಿ ಬಿಲ್ ತಂದಿದ್ದಾರೆ. ಕಾಂಗ್ರೆಸ್ ಮುಸ್ಲಿಮರಿಗೆ ಅನ್ಯಾಯ ಮಾಡುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಂವಿಧಾನ ಬದಲಾವಣೆ ಹೇಳಿಕೆ ನೀಡಿದ್ದ ಡಿಕೆಶಿ ರಾಜೀನಾಮೆ ನೀಡಬೇಕು: ಆರ್.ಅಶೋಕ್

    ನಮ್ಮಲ್ಲಿ ಸಂವಿಧಾನ ಬದಲಾವಣೆ ಮಾಡುತ್ತೇವೆ ಅಂದವರಿಗೆ ನಾವು ಟಿಕೆಟ್ ಕೊಟ್ಟಿಲ್ಲ. ಈಗ ಡಿಕೆಶಿ ವಿರುದ್ಧ ಕ್ರಮ ಆಗಬೇಕು ಕಾಂಗ್ರೆಸ್ ಹೈಕಮಾಂಡ್‌ಗೆ ಆಗ್ರಹಿಸಿದರು. ಇದನ್ನೂ ಓದಿ: ನನ್ನ, ಹೆಚ್‌ಡಿಕೆ ಫೋನ್ ಟ್ಯಾಪಿಂಗ್ ಈಗಲೂ ನಡೆಯುತ್ತಿದೆ: ಅಶೋಕ್ ಬಾಂಬ್

    ಸಂವಿಧಾನ ಬದಲಾವಣೆ ಮಾಡುತ್ತೇನೆ ಎಂದು ಹೇಳಿ, ಈಗ ನಾನು ಹಾಗೆ ಹೇಳೇ ಇಲ್ಲ ಎನ್ನುತ್ತಿದ್ದಾರೆ. ಮಾಧ್ಯಮದಲ್ಲಿ ಎಲ್ಲರೂ ನೋಡಿದ್ದಾರೆ. ಅವರು ಸಂವಿಧಾನ ಬದಲಾವಣೆ ಬಗ್ಗೆ ಮಾತಾಡಿದ್ದಾರೆ. ಮಾತಾಡಿದರು ಈಗ ಬಿಜೆಪಿ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜೈ ಭೀಮ್, ಜೈ ಬಾಪು, ಜೈ ಸಂವಿಧಾನ ಕಾಂಗ್ರೆಸ್ ಪಕ್ಷದ ನಿರ್ಣಯ: ಪರಮೇಶ್ವರ್

  • ಸಂವಿಧಾನ ಬದಲಾವಣೆ ಹೇಳಿಕೆ ನೀಡಿದ್ದ ಡಿಕೆಶಿ ರಾಜೀನಾಮೆ ನೀಡಬೇಕು: ಆರ್.ಅಶೋಕ್

    ಸಂವಿಧಾನ ಬದಲಾವಣೆ ಹೇಳಿಕೆ ನೀಡಿದ್ದ ಡಿಕೆಶಿ ರಾಜೀನಾಮೆ ನೀಡಬೇಕು: ಆರ್.ಅಶೋಕ್

    ಬೆಂಗಳೂರು: ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ ಕೊಡಲು ಅಗತ್ಯ ಬಿದ್ದರೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ವಿಪಕ್ಷ ನಾಯಕ ಆರ್.ಅಶೋಕ್ (R Ashok) ಕಿಡಿಕಾರಿದರು. ಕೂಡಲೇ ಡಿ.ಕೆ.ಶಿವಕುಮಾರ್ (D K Shivakumar) ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿ ಈಗ ಯೂಟರ್ನ್ ಹೊಡೆದಿದ್ದಾರೆ. ಈಗಿನ ಕಾಲದಲ್ಲಿ ಯೂಟರ್ನ್, ಬ್ಯಾಕ್ ಟರ್ನ್ ಯಾವುದು ನಡೆಯುವುದಿಲ್ಲ. ಬಿಜೆಪಿ (BJP) ಅವರು ಸಂವಿಧಾನ ಬಗ್ಗೆ ಮಾತಾಡಿದರು ಎಂದು ಕಾಂಗ್ರೆಸ್ (Congress) ಅವರು ಏನೇನು ಮಾತಾಡಿದರು. ಈಗ ಡಿ.ಕೆ.ಶಿವಕುಮಾರ್ ಸಂವಿಧಾನ ಬದಲಾವಣೆ ಬಗ್ಗೆ ಮಾತಾಡಿದ್ದಾರೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರು ಇದನ್ನ ಪ್ರಸ್ತಾಪ ಮಾಡಿದ್ದಾರೆ ಎಂದರು. ಇದನ್ನೂ ಓದಿ: ನನ್ನ, ಕುಮಾರಸ್ವಾಮಿ ಫೋನ್ ಟ್ಯಾಪಿಂಗ್ ಈಗಲೂ ನಡೆಯುತ್ತಿದೆ: ಆರ್.ಅಶೋಕ್

    ಅತೀ ಹೆಚ್ಚು ಬಾರಿ ಸಂವಿಧಾನ ಬದಲಾವಣೆ ಮಾಡಿದ್ದು ಕಾಂಗ್ರೆಸ್ ಪಕ್ಷ. ಡಿ.ಕೆ.ಶಿವಕುಮಾರ್ ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿದ್ದು ತಪ್ಪು. ಕೂಡಲೇ ಅವರು ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಒಳಮೀಸಲಾತಿ, ವಾರದೊಳಗೆ ನಾಗಮೋಹನ್ ದಾಸ್ ಮಧ್ಯಂತರ ವರದಿ: ಮಹದೇವಪ್ಪ

  • ಜೈ ಭೀಮ್, ಜೈ ಬಾಪು, ಜೈ ಸಂವಿಧಾನ ಕಾಂಗ್ರೆಸ್ ಪಕ್ಷದ ನಿರ್ಣಯ: ಪರಮೇಶ್ವರ್

    ಜೈ ಭೀಮ್, ಜೈ ಬಾಪು, ಜೈ ಸಂವಿಧಾನ ಕಾಂಗ್ರೆಸ್ ಪಕ್ಷದ ನಿರ್ಣಯ: ಪರಮೇಶ್ವರ್

    ಬೆಂಗಳೂರು: ಕಾಂಗ್ರೆಸ್ ಪಕ್ಷದ ನಿರ್ಣಯವೇ ಜೈ ಭೀಮ್, ಜೈ ಬಾಪು, ಜೈ ಸಂವಿಧಾನ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G Parameshwar) ಹೇಳಿದರು.

    ಡಿಕೆಶಿಯಿಂದ ಸಂವಿಧಾನ ಬದಲಾವಣೆ ಬಗ್ಗೆ ವಿವಾದಾತ್ಮಕ ಹೇಳಿಕೆ ಎಂಬ ಬಿಜೆಪಿ (BJP) ಆರೋಪದ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದರು. ಸಂವಿಧಾನಕ್ಕೆ ನಾವು ಬದ್ಧರಾಗಿದ್ದೇವೆ. ಸಂವಿಧಾನದ ರಕ್ಷಣೆಗೂ ಕಾಂಗ್ರೆಸ್ ಬದ್ಧವಾಗಿದೆ. ಡಿಕೆಶಿ ಹೇಳಿಕೆ ನಾನು ನೋಡಿಲ್ಲ. ನೀವು ಹೇಳಿದ ಮೇಲೆ ಗೊತ್ತಾಗಿದ್ದು ಎಂದರು. ಇದನ್ನೂ ಓದಿ: ಮುಸ್ಲಿಮರ ತುಷ್ಟಿಕರಣಕ್ಕೆ ಕಾಂಗ್ರೆಸ್‌ನಿಂದ ಸಂವಿಧಾನ ಬದಲಾವಣೆ – ಇದು ನಮ್ಮ ದೇಶದ ದುರಂತ: ಸಿಟಿ ರವಿ

    ಈ ಬಗ್ಗೆ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ (H C Mahadevappa) ಪ್ರತಿಕ್ರಿಯಿಸಿ, ಡಿಕೆಶಿ ಏನು ಹೇಳಿದ್ದಾರೋ ಗೊತ್ತಿಲ್ಲ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಘೋಷಣೆ, ನಿರ್ಣಯವೇ ಜೈ ಬಾಪು, ಜೈ ಭೀಮ್, ಜೈ ಸಂವಿಧಾನವಾಗಿದೆ. ಹಾಗಾಗಿ ಸಂವಿಧಾನ ಬದಲಾವಣೆ ಪ್ರಶ್ನೆ ಎಲ್ಲಿ ಬರುತ್ತದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಜೆ.ಪಿ ನಡ್ಡಾ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡ್ತೀನಿ: ಡಿಕೆಶಿ

  • ಹನಿಟ್ರ್ಯಾಪ್‌ ಹೈಡ್ರಾಮಾ | ಎಲ್ಲವನ್ನೂ ನಿಮ್ಮ ಬಳಿ ಬಿಚ್ಚಿಡೋಕೆ ಆಗಲ್ಲ ಎಂದ ಡಿಕೆಶಿ

    ಹನಿಟ್ರ್ಯಾಪ್‌ ಹೈಡ್ರಾಮಾ | ಎಲ್ಲವನ್ನೂ ನಿಮ್ಮ ಬಳಿ ಬಿಚ್ಚಿಡೋಕೆ ಆಗಲ್ಲ ಎಂದ ಡಿಕೆಶಿ

    ಬೆಂಗಳೂರು: ಹನಿಟ್ರ್ಯಾಪ್‌ (Honey Trap) ಬಗ್ಗೆ ರಾಜಣ್ಣ ನನ್ನ ಬಳಿಯೂ ಕೆಲವೊಂದು ವಿಚಾರ ಹೇಳಿಕೊಂಡಿದ್ದಾರೆ. ಎಲ್ಲವನ್ನೂ ನಿಮ್ಮ ಬಳಿ ಬಿಚ್ಚಿಡಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಹೇಳಿದ್ದಾರೆ.

    ದೆಹಲಿಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ರಾಜಣ್ಣ (KN Rajanna) ನನ್ನನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಕೆಲವೊಂದು ವಿಚಾರವನ್ನು ನನ್ನ ಬಳಿಯೂ ಹೇಳಿದರು. ನಾನು ದೂರು ಕೊಡಲು ಹೇಳಿದೆ, ಅವರು ಏನು ಮಾತನಾಡಿದರು ಎಂಬುದನ್ನ ಎಲ್ಲವನ್ನೂ ನಿಮ್ಮ ಬಳಿ ಬಿಚ್ಚಿ ಇಡೋಕೆ ಆಗಲ್ಲ ಎಂದರು. ಇದನ್ನೂ ಓದಿ: ತೊಗರಿ ಹೊಟ್ಟಿನಲ್ಲಿ ಬಚ್ಚಿಟ್ಟಿದ್ದ 7 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ಪತ್ತೆ ಹಚ್ಚಿದ ಶ್ವಾನ

    ಇದೇ ವೇಳೆ ರಾಜೇಂದ್ರ ರಾಜಣ್ಣ ಸಿಎಂ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ನನ್ನತ್ರ ಯಾರ ಬಗ್ಗೆಯೂ ಕೇಳಬೇಡಿ. ನನ್ನ ಇಲಾಖೆಯದ್ದು ಇದ್ರೆ ಕೇಳಿ. ಸಿಎಂ ಅಂದಾಗ ಎಲ್ಲರೂ ಭೇಟಿ ಮಾಡ್ತಾರೆ. ಸದನದಲ್ಲಿ ಗರಂ ಆದ್ರೆ ಅದನ್ನ ನಿಮ್ಮಬಳಿ ಇಟ್ಟುಕೊಳ್ಳಿ, ಎಲ್ಲಾ ವಿಚಾರ ಬೋಗಸ್. ಸುಮ್ಮನೆ ಸೃಷ್ಟಿ ಮಾಡ್ತಿದ್ದಾರೆ ಇದೆಲ್ಲಾ ಅನಗತ್ಯ ವಿಚಾರ ಎಂದಿದ್ದಾರೆ. ಇದನ್ನೂ ಓದಿ: ಪೈಲಟ್‌ಗಳಿಲ್ಲದ ವಿಮಾನಕ್ಕೆ ಏಕೆ ಹತ್ತಿಸುತ್ತೀರಿ – ಏರ್‌ ಇಂಡಿಯಾ ವಿರುದ್ಧ ಡೇವಿಡ್‌ ವಾರ್ನರ್‌ ಗರಂ!

    ರಾಜೇಂದ್ರ, ರಾಜಣ್ಣ ದೂರು ಕೊಡದ ಬಗ್ಗೆ ಮಾತನಾಡಿದ ಡಿಸಿಎಂ, ಸಿಎಂ ಅವರನ್ನೇ ಕೇಳಿ, ಅವರೇ ಹೇಳ್ತಾರೆ. ನಾನು ಕೆಪಿಸಿಸಿ ಅಧ್ಯಕ್ಷ ಆಗಿ ಅವರನ್ನ ಕೇಳಿದೆ. ನನ್ನ ಬಳಿ ಏನೂ ಇಲ್ಲ ಅಂತ ಹೇಳಿದ್ದಾರೆ. ನಮ್ಮಿಬ್ಬರ ನಡುವಿನ ಚರ್ಚೆ ಬಿಚ್ಚಿ ಹೇಳಲು ಆಗಲ್ಲ. ಅವರದ್ದೇನೋ ಇದರ ಮೇಲೆ ಹೇಳಿದ್ದಾರೆ. ಏನಾದ್ರೂ ಇದ್ರೆ ಕಂಪ್ಲೆಂಟ್ ಕೊಡಪ್ಪ ಅಂತ ಹೇಳಿದ್ದೇನೆ. ನಿನ್ನೆ ಮಾಧ್ಯಮದಲ್ಲಿ ಏನೋ ಹೇಳಿದ್ದಾರೆ. ಇದರ ಮೇಲೆ ನಾನು ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ನುಡಿದಿದ್ದಾರೆ. ಇದನ್ನೂ ಓದಿ: ತಮನ್ನಾ ಜೊತೆ ವಸಿಷ್ಠ ಸಿಂಹ ಸಿನಿಮಾ- ‘ಒಡೆಲಾ 2’ ಬಗ್ಗೆ‌ ಹೊರಬಿತ್ತು ಬಿಗ್‌ ಅಪ್‌ಡೇಟ್

    ಸಚಿವ ರಾಜಣ್ಣ ಪುತ್ರ ಹೇಳಿದ್ದೇನು?
    ಇನ್ನೂ ಹನಿಟ್ರ್ಯಾಪ್‌ ವಿಚಾರವಾಗಿ `ಪಬ್ಲಿಕ್ ಟಿವಿ’ ಜೊತೆಗೆ ಮಾತನಾಡಿದ ಎಂಎಲ್‌ಸಿ ರಾಜೇಂದ್ರ ರಾಜಣ್ಣ, ಈ ಬಗ್ಗೆ ಹೈಕಮಾಂಡ್‌ಗೆ ದೂರು ಕೊಡುತ್ತೇನೆ. 3-4 ದಿನ ಬಿಟ್ಟು ದೆಹಲಿಗೆ ಹೋಗಿ ಹೈಕಮಾಂಡ್‌ಗೆ ಹೇಳುತ್ತೇವೆ. ನನಗೂ ಫೋನ್ ಕಾಲ್ ಹಾಗೂ ವೀಡಿಯೋ ಕಾಲ್ ಮೂಲಕ ಟ್ರ‍್ಯಾಪ್ ಮಾಡಲು ಪ್ರಯತ್ನ ಮಾಡಿದ್ದರು. ಆ ಎಲ್ಲಾ ನಂಬರ್ ಹಾಗೂ ಕಾಲ್ ಡೀಟೆಲ್ಸ್ ನನ್ನ ಬಳಿ ಇದೆ. ಡಿಜಿಗೆ ಈ ಮೂಲಕ ದೂರು ಕೊಡುತ್ತೇನೆ. ಜೊತೆಗೆ ರಾಜಣ್ಣರಿಗೆ ಲೇಡಿ ಸಹಿತ ಮೂರ್ನಾಲ್ಕು ಜನ ಬಂದು ಬಲೆಗೆ ಬೀಳಿಸಲು ಪ್ರಯತ್ನ ಮಾಡಿದ್ದಾರೆ ಎಂದು ಬಾಂಬ್ ಸಿಡಿಸಿದ್ರು.

  • ಬೆಂಗಳೂರಿನಲ್ಲಿ ಕಾವೇರಿ ಆರತಿ ಪ್ರಯುಕ್ತ ಶುಕ್ರವಾರ ಡಿಕೆಶಿಯಿಂದ ತಲಕಾವೇರಿಯಲ್ಲಿ ವಿಶೇಷ ಪೂಜೆ

    ಬೆಂಗಳೂರಿನಲ್ಲಿ ಕಾವೇರಿ ಆರತಿ ಪ್ರಯುಕ್ತ ಶುಕ್ರವಾರ ಡಿಕೆಶಿಯಿಂದ ತಲಕಾವೇರಿಯಲ್ಲಿ ವಿಶೇಷ ಪೂಜೆ

    ಮಡಿಕೇರಿ: ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆಯುವ ಗಂಗಾ ಆರತಿ ವಿಶ್ವದೆಲ್ಲೆಡೆ ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ಅದೇ ರೀತಿಯಲ್ಲಿ ಬೆಂಗಳೂರಿನ ಮಲ್ಲೇಶ್ವರದ ಸ್ಯಾಂಕಿ ಟ್ಯಾಂಕ್‌ ಕೆರೆಯಲ್ಲಿ ಕಾವೇರಿ ಆರತಿ (Cauvery Aarti) ಮಾಡುವ ಕಾರ್ಯಕ್ರಮ ಆಯೋಜಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮುಂದಾಗಿದೆ. ಈ ನಡುವೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಕಾವೇರಿ ಉಗಮಸ್ಥಾನ ತಲಕಾವೇರಿಗೆ ಅಗಮಿಸಿ ವಿಶೇಷ ಪೂಜೆ ನೇರವೇರಿಸಿ ನಂತರ ಕಾವೇರಿ ತೀರ್ಥವನ್ನು ನೇರವಾಗಿ ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಕಾವೇರಿಗೆ ಆರತಿ ಮಾಡಲ್ಲಿದ್ದಾರೆ.

    ಹೌದು. ಉತ್ತರ ಪ್ರದೇಶದ (Uttar Pradesh) ವಾರಣಾಸಿಯಲ್ಲಿ ನಡೆಯುವ ಗಂಗಾ ಆರತಿ ಮಾದರಿಯಲ್ಲೇ ಕನ್ನಡ ನಾಡಿನ‌ ಜೀವ ನದಿ ಕಾವೇರಿ ನದಿಗೂ ಅರತಿ ಮಾಡಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ ಕಾವೇರಿ ನದಿಗೆ ಗೌರವ ಸಲ್ಲಿಸುವ ಕ್ರಮವಾಗಿ ಬೆಂಗಳೂರಿನ (Bengaluru) ಸ್ಯಾಂಕಿ ಟ್ಯಾಂಕ್‌ ಕೆರೆಯಲ್ಲಿ ಪೂಜೆಗೆ ಪೂರ್ವ ತಯಾರಿ ನಡೆದಿದೆ. ಅಲ್ಲದೇ ಈ ಕಾರ್ಯಕ್ರಮ ಗಿನ್ನಿಸ್‌ ದಾಖಲೆ ಮಾಡುವ ನಿಟ್ಟಿನಲ್ಲಿ ಜಲಮಂಡಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲು ಮುಂದಾಗಿದೆ.

    ಕಾವೇರಿ ಆರತಿ ಮಾಡುವ ಬಗ್ಗೆ ಇತ್ತೀಚೆಗೆ ವಾರಣಾಸಿಗೆ ತೆರಳಿ ಸಚಿವ ಚಲುವರಾಯಸ್ವಾಮಿ ನೇತೃತ್ವದ ತಂಡ ಅಧ್ಯಯನ ನಡೆಸಿತ್ತು. ಈ ವಿಶೇಷ ಸಂಭ್ರಮಕ್ಕೆ ಉತ್ತರ ಪ್ರದೇಶದಿಂದ ವಿಮಾನದಲ್ಲಿ ಪುರೋಹಿತರನ್ನು ಕರೆಸಲಾಗಿದೆ. ಅದರಂತೆ ಬೆಂಗಳೂರಿನಲ್ಲೂ ಕಾವೇರಿ ಆರತಿ ಕೈಗೊಳ್ಳಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಜಲಮಂಡಲಿಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಮತ್ತವರ ಕುಟುಂಬ ಸೇರಿ ಹತ್ತು ಸಾವಿರ ಜನರು ಭಾಗಿಯಾಗುವ ನಿರೀಕ್ಷೆಯಿದೆ.

    ಇನ್ನೂ ಕಾವೇರಿ ಅರತಿ ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕಾವೇರಿಯ ಉಗಮ ಸ್ಥಾನಕ್ಕೆ ಶುಕ್ರವಾರ (ಮಾ.21) ಬೆಳಿಗ್ಗೆ 8 ಗಂಟೆಗೆ ತಲಕಾವೇರಿ ಸನ್ನಿಧಿಗೆ ಆಗಮಿಸಲಿದ್ದಾರೆ. ಬೆಳಗ್ಗೆ ನೇರವಾಗಿ ‌ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ತಲಕಾವೇರಿಗೆ ಆಗಮಿಸಲಿದ್ದಾರೆ. ಈ ವೇಳೆ ಮುಖ್ಯಮಂತ್ರಿಗಳ ಕಾನೂನು ಸಲಹಾಗಾರ ಎ.ಎಸ್ ಪೊನ್ನಣ್ಣ ಹಾಗೂ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿರಲಿದ್ದಾರೆ.

    ಕಾವೇರಿ ತಾಯಿ ಸನ್ನಿಧಿಯಲ್ಲಿ, ಕಾವೇರಿ ಆರತಿ ಕಾರ್ಯಕ್ರಮದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿ, ತಾಯಿ ಕಾವೇರಿಯ ಪವಿತ್ರ ತೀರ್ಥದೊಂದಿಗೆ ರಾಜಧಾನಿಗೆ ಮರಳಲಿದ್ದಾರೆ.

  • ಬೆಂಗಳೂರಿನಲ್ಲಿ ಪಬ್‌ಗಳಿಗೆ ಮಧ್ಯರಾತ್ರಿ 1 ಗಂಟೆವರೆಗೂ ಅವಕಾಶ? – ಡಿಕೆಶಿ ಸುಳಿವು

    ಬೆಂಗಳೂರಿನಲ್ಲಿ ಪಬ್‌ಗಳಿಗೆ ಮಧ್ಯರಾತ್ರಿ 1 ಗಂಟೆವರೆಗೂ ಅವಕಾಶ? – ಡಿಕೆಶಿ ಸುಳಿವು

    ಬೆಂಗಳೂರು: ನಗರದಲ್ಲಿ ಪಬ್‌ಗಳಿಗೆ (Pub) ಮಧ್ಯರಾತ್ರಿ 1 ಗಂಟೆವರೆಗೂ ಅನುಮತಿ ‌ಕೊಡೋ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಪರೋಕ್ಷ ಸುಳಿವು ಕೊಟ್ಟಿದ್ದಾರೆ‌. ಆದಷ್ಟು ಬೇಗ ಈ ಬಗ್ಗೆ ನಿರ್ಧಾರ ಮಾಡೋದಾಗಿ ತಿಳಿಸಿದ್ದಾರೆ.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಸದಸ್ಯ ಗೋಪಿನಾಥ್ ಪ್ರಶ್ನೆ ಕೇಳಿದ್ರು. ಬೆಂಗಳೂರಿನಲ್ಲಿ (Bengaluru) ಪಬ್‌ಗಳು ರಾತ್ರಿ 11.30ಕ್ಕೆ ಮುಚ್ಚುವ ನಿಯಮ ಇದೆ. ಆದ್ರೆ ಮಧ್ಯರಾತ್ರಿವರೆಗೂ ಪಬ್ ಗಳು ನಡೆಯುತ್ತಿವೆ. ಇಂದಿರಾ‌ನಗರ ಸೇರಿ ಅನೇಕ ಕಡೆ ನಿಯಮ ಮೀರಿ ಪಬ್ ನಡೆಯುತ್ತಿವೆ. ಇದನ್ನೇ ನೆಪ ಇಟ್ಟುಕೊಂಡು ಪೊಲೀಸರು ಪಬ್ ಅವರಿಗೆ ಕಿರುಕುಳಕೊಡುವ ಕೆಲಸ ಮಾಡ್ತಿದ್ದಾರೆ. ರೆಸ್ಟೋರೆಂಟ್‌ಗಳಿಗೆ ರಾತ್ರಿ 1 ಗಂಟೆವರೆಗೂ ಸರ್ಕಾರ ಅವಕಾಶ ಕೊಟ್ಟಿದೆ. ಅದರಂತೆ ಬೆಂಗಳೂರಿನಲ್ಲಿ ಪಬ್ ಗಳಿಗೂ ರಾತ್ರಿ 1 ಗಂಟೆವರೆಗೂ ಅವಕಾಶ ಕೊಡಿ ಎಂದು ಮನವಿ ಮಾಡಿದರು.‌ ಇದನ್ನೂ ಓದಿ: ಅಪ್ಪ-ಮಗನ ಮೇಲೆ ಹನಿಟ್ರ್ಯಾಪ್‌ ಯತ್ನ – ಸಿಎಂಗೆ ದೂರು ನೀಡಿದ ಸಚಿವ ರಾಜಣ್ಣ ಪುತ್ರ

    ಇದಕ್ಕೆ ಅಬಕಾರಿ ಸಚಿವ ತಿಮ್ಮಾಪುರ್ ಉತ್ತರ ನೀಡಿ, ಅಬಕಾರಿ ಇಲಾಖೆಯಲ್ಲಿ ಎರಡು ರೀತಿ ಪಬ್ ಗಳಿಗೆ ನಾವು ಅನುಮತಿ ಕೊಡ್ತೀವಿ. ಸ್ವತಂತ್ರ ಪಬ್ ಗಳಿಗೆ ರಾತ್ರಿ 11.30ವರೆಗೆ ಅವಕಾಶ ಇದೆ‌. CL9 ಜೊತೆ ಹೊಂದುಕೊಂಡಿರೋ ಪಬ್ ಗಳಿಗೆ ಮಧ್ಯರಾತ್ರಿ 1 ಗಂಟೆ ಒಳಗೆ ಅವಕಾಶ ಕೊಡಲಾಗಿದೆ. ಒಂದು ವೇಳೆ ನಿಯಮ ಮೀರಿ ಪಬ್ ನಡೆಸುತ್ತಿದ್ದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು‌. ಇದನ್ನೂ ಓದಿ: ನನ್ನ ಮೇಲೆ ಹನಿಟ್ರ್ಯಾಪ್‌ಗೆ ಯತ್ನ ಆಗಿದೆ – ಸದನದಲ್ಲೇ ಸಚಿವ ಕೆ.ಎನ್‌ ರಾಜಣ್ಣ ಬಾಂಬ್‌

    ಸಚಿವ ತಿಮ್ಮಾಪುರ್ ಮಾತಿಗೆ ಡಿಸಿಎಂ ಡಿಕೆಶಿವಕುಮಾರ್ ಮಧ್ಯ ಪ್ರವೇಶ ಮಾಡಿ ಮಾತನಾಡಿದರು. ಅಬಕಾರಿ ಸಚಿವರು ಅಬಕಾರಿ ನಿಯಮದ ಆದೇಶದ ಬಗ್ಗೆ ಮಾತಾಡ್ತಿದ್ದಾರೆ. ಸಚಿವರು ಹೇಳಿದಂತೆ ಈಗ ಯಾರು ರಾತ್ರಿ 11.30ಕ್ಕೆ ಪಬ್ ಕ್ಲೋಸ್ ಮಾಡೊಲ್ಲ. ಇದನ್ನೇ ಪೊಲೀಸರು ಬಂಡವಾಳ ಮಾಡಿಕೊಂಡು ಕಿರುಕುಳ ‌ಕೊಡ್ತಿದ್ದಾರೆ‌. ಬೆಂಗಳೂರು ಇಂಟರ್ ನ್ಯಾಷನಲ್ ಸಿಟಿ. ಬೆಂಗಳೂರನ್ನ ಲೈವ್ ಆಗಿ ಇಡಬೇಕು. ನನಗೂ ಕೂಡ ಪಬ್ ಅವಧಿ ವಿಸ್ತರಣೆ ಮಾಡೊ ಬಗ್ಗೆ ಡಿಮ್ಯಾಂಡ್ ಬಂದಿವೆ. ರಾತ್ರಿ ಒಂದು ಗಂಟೆವರೆಗೂ ಪಬ್‌ಗಳಿಗೆ ಅವಕಾಶ ಕೊಡುವ ಗೋಪಿನಾಥ್ ಸಲಹೆ ಕರೆಕ್ಟ್ ಇದೆ. ನಾನು ಅದನ್ನ ಒಪ್ಪುತ್ತೇನೆ. ನಾನು, ಗೃಹ ಸಚಿವರು ಅಬಕಾರಿ ಸಚಿವರು ಸಭೆ ಮಾಡಿ ಇದಕ್ಕೆ ಒಂದು ಪರಿಹಾರ ಮಾಡ್ತೀವಿ ಅನ್ನೋ ಮೂಲಕ ಪಬ್ ಗಳ ಅವಧಿ ವಿಸ್ತರಣೆ ಮಾಡೋ ಬಗ್ಗೆ ಪರೋಕ್ಷ ಸುಳಿವು ಕೊಟ್ಟರು. ಇದನ್ನೂ ಓದಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ವೈಟಿಪಿಎಸ್‌ನ 1,500 ಗುತ್ತಿಗೆ ನೌಕರರಿಂದ ಉಗ್ರ ಹೋರಾಟ

  • ಅಪ್ಪ-ಮಗನ ಮೇಲೆ ಹನಿಟ್ರ್ಯಾಪ್‌ ಯತ್ನ – ಸಿಎಂಗೆ ದೂರು ನೀಡಿದ ಸಚಿವ ರಾಜಣ್ಣ ಪುತ್ರ

    ಅಪ್ಪ-ಮಗನ ಮೇಲೆ ಹನಿಟ್ರ್ಯಾಪ್‌ ಯತ್ನ – ಸಿಎಂಗೆ ದೂರು ನೀಡಿದ ಸಚಿವ ರಾಜಣ್ಣ ಪುತ್ರ

    ಬೆಂಗಳೂರು: ನನ್ನ ಮತ್ತು ನನ್ನ ತಂದೆ ಮೇಲೆ ಹನಿಟ್ರ್ಯಾಪ್‌ ಯತ್ನ ನಡೆದಿರುವುದಾಗಿ ಸಚಿವ ಕೆ.ಎನ್‌ ರಾಜಣ್ಣ (KN Rajanna) ಪುತ್ರ ರಾಜೇಂದ್ರ ರಾಜಣ್ಣ ಹೊಸ ಬಾಂಬ್‌ ಸಿಡಿಸಿದ್ದಾರೆ.

    ವಿಧಾನಸಭೆಯ ಅಧಿವೇಶನದಲ್ಲಿಂದು ತಮ್ಮ ವಿರುದ್ಧ ಹನಿಟ್ರ್ಯಾಪ್‌ ಯತ್ನ ನಡೆದಿರುವುದಾಗಿ ಸಚಿವ ರಾಜಣ್ಣ ಬಹಿರಂಗಪಡಿಸಿದ್ರು. ಈ ಬೆನ್ನಲ್ಲೇ ಪಬ್ಲಿಕ್‌ ಟಿವಿ ಜೊತೆಗೆ ಮಾತನಾಡಿದ ಸಚಿವ ರಾಜಣ್ಣ ಪುತ್ರ, ನನ್ನ ತಂದೆ, ನನ್ನ ಮೇಲೆ ಹನಿಟ್ರ‍್ಯಾಪ್ ಯತ್ನ ನಡೆದಿದೆ. ನನಗೆ ಈಗಲೂ ಕರೆಗಳು ಬರ್ತಿವೆ. ನಾನು ದೂರು ಕೊಡ್ತೀನಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ನನ್ನ ಮೇಲೆ ಹನಿಟ್ರ್ಯಾಪ್‌ಗೆ ಯತ್ನ ಆಗಿದೆ – ಸದನದಲ್ಲೇ ಸಚಿವ ಕೆ.ಎನ್‌ ರಾಜಣ್ಣ ಬಾಂಬ್‌

    ನನ್ನ ತಂದೆ ಮೇಲೆ ಎರಡು ಸಲ ಹನಿಟ್ರ‍್ಯಾಪ್ ಯತ್ನ ಆಗಿದೆ. ಸರ್ಕಾರಿ ನಿವಾಸಕ್ಕೆ ಹೋಗಿದ್ದಾರೆ. ಈ ಬಗ್ಗೆ ಹೈಕಮಾಂಡ್‌ಗೂ ದೂರು ಕೊಡ್ತೀವಿ, ಆದಷ್ಟು ಬೇಗ ತನಿಖೆ ಆದ್ರೆ ಒಳ್ಳೆಯದು. ಯಾವ ಪಕ್ಷದವರು ಅನ್ನೋದು ತನಿಖೆಯಿಂದ ಗೊತ್ತಾಗುತ್ತೆ. ಸಿಎಂಗೂ ಕೂಡ ನಾನು ದೂರು ಕೊಡ್ತೀನಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ವೈಟಿಪಿಎಸ್‌ನ 1,500 ಗುತ್ತಿಗೆ ನೌಕರರಿಂದ ಉಗ್ರ ಹೋರಾಟ

    ಸಿಎಂ ಭೇಟಿಯಾದ ರಾಜಣ್ಣ ಪುತ್ರ:
    ತಮ್ಮ ವಿರುದ್ಧ ಹನಿಟ್ರ್ಯಾಪ್‌ ರಹಸ್ಯ ಬಹಿರಂಗಪಡಿಸಿದ ಬೆನ್ನಲ್ಲೇ ಸಚಿವ ರಾಜಣ್ಣ ಪುತ್ರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ವಿಧಾನಸಭೆ ಮೊಗಸಾಲೆಯಲ್ಲಿ ಸಿಎಂ ಕೊಠಡಿಯಲ್ಲಿ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ಹನಿಟ್ರ‍್ಯಾಪ್ ಯತ್ನ ನಡೆದಿರುವ ಬಗ್ಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಹೇಗೆ ಮಾಡಬೇಕು ಅನ್ನೋದು ನನಗೆ ಗೊತ್ತಿದೆ: ಡಿಕೆಶಿ

  • ನನ್ನ ಮೇಲೆ ಹನಿಟ್ರ್ಯಾಪ್‌ಗೆ ಯತ್ನ ಆಗಿದೆ – ಸದನದಲ್ಲೇ ಸಚಿವ ಕೆ.ಎನ್‌ ರಾಜಣ್ಣ ಬಾಂಬ್‌

    ನನ್ನ ಮೇಲೆ ಹನಿಟ್ರ್ಯಾಪ್‌ಗೆ ಯತ್ನ ಆಗಿದೆ – ಸದನದಲ್ಲೇ ಸಚಿವ ಕೆ.ಎನ್‌ ರಾಜಣ್ಣ ಬಾಂಬ್‌

    – 48 ಜನರ ಮೇಲೆ ಸಿ.ಡಿ ಪೆನ್‌ಡ್ರೈವ್‌ ಮಾಡಲಾಗಿದೆ ಎಂದು ಬಾಂಬ್‌

    ಬೆಂಗಳೂರು: ರಾಜ್ಯದ 48 ರಾಜಕೀಯ ಮುಖಂಡರ ಸಿ.ಡಿ, ಪೆನ್‌ಡ್ರೈವ್‌ ತಯಾರಾಗಿದೆ. ನನ್ನ ಮೇಲೂ ಹನಿಟ್ರ್ಯಾಪ್‌ (Honeytrap) ಯತ್ನ ನಡೆದಿದೆ ಎಂದು ಸಹಕಾರಿ ಸಚಿವ ಕೆ ಎನ್ ರಾಜಣ್ಣ (KN Rajanna) ಸ್ಫೋಟಕ ಮಾಹಿತಿ ನೀಡಿದರು.

    ವಿಧಾನಸಭೆಯಲ್ಲಿ (Vidhan Sabha) ಗುರುವಾರ ಮಾತನಾಡಿದ ಅವರು, ಇದರ ಬಗ್ಗೆ ದೂರು ಕೊಡುತ್ತೇನೆ. ಗೃಹ ಸಚಿವರು ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು. ಬಜೆಟ್ ಭಾಷಣದ (Budget Speech) ಮೇಲಿನ ಚರ್ಚೆಯ ಸಂದರ್ಭದಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ ಯತ್ನಾಳ್, ರಾಜ್ಯದಲ್ಲಿ ಸಹಕಾರಿ ಸಚಿವರ ಮೇಲೆ ಹನಿಟ್ರ್ಯಾಪ್ ಮಾಡುವ ಪ್ರಯತ್ನ ಮಾಡಲಾಗಿದೆ. ಇದೊಂದು ಕೆಟ್ಟ ಸಂಸ್ಕೃತಿ. ಜನ ಪ್ರತಿನಿಧಿಗಳನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಪ್ರಸ್ತಾಪಿಸಿದರು.

    ಕೆಲವರು ತಮ್ಮ ಹಾಗೂ ತಮ್ಮ ಕುಟುಂಬದ ಭವಿಷ್ಯದ ಸಲುವಾಗಿ, ತಾವು ಮುಂದಿನ ಸಿಎಂ ಆಗಲು ಹನಿಟ್ರ‍್ಯಾಪ್ ಮಾಡ್ತಿದ್ದಾರೆ. ಈಗ ರಾಜಣ್ಣ ಮೇಲೆ ನಾಳೆ ಮತ್ತೊಬ್ಬರ ಮೇಲೆ ಆಗುತ್ತೆ ಅಂತ ಪ್ರಸ್ತಾಪಿಸಿದ್ರು. ಈ ವೇಳೆ ಎದ್ದು ನಿಂತ ಸಚಿವ ಕೆ.ಎನ್ ರಾಜಣ್ಣ, ಹನಿಟ್ರ‍್ಯಾಪ್ ಆರೋಪದ ಬಗ್ಗೆ ಸ್ಪಷ್ಟೀಕರಣ ಕೊಟ್ರು. ಯತ್ನಾಳ್ (Basanagouda Patil Yatnal) ನನ್ನ ಹೆಸರು ಪ್ರಸ್ತಾಪ ಮಾಡಿದ್ದಾರೆ ಅಂತ ಮಾತು ಶುರು ಮಾಡಿದರು.

    ಕರ್ನಾಟಕ ಸಿ.ಡಿ, ಪೆನ್‌ಡ್ರೈವ್‌ಗೆ ಫ್ಯಾಕ್ಟರಿ ಆಗಿದೆ ಅಂತ ಬಹಳ ಜನ ಹೇಳ್ತಾರೆ. ಬಹಳ ಗುರುತರ ಆರೋಪ ಇದು. ತುಮಕೂರಿನ ಇಬ್ಬರು ಪ್ರಭಾವಿ ಸಚಿವರು ಹನಿಟ್ರ‍್ಯಾಪ್ ನಲ್ಲಿ ಸಿಕ್ಕಿಕೊಂಡಿದ್ದಾರೆ ಅಂತ ಸುದ್ದಿಗಳು ಬರ್ತಿವೆ. ತುಮಕೂರಿನಲ್ಲಿ ಇರೋರು ನಾನು ಮತ್ತು ಪರಮೇಶ್ವರ್ ಮಾತ್ರ. ಸಿಡಿ, ಪೆನ್‌ಡ್ರೈವ್ 48 ಜನರ ಮೇಲೆ ಮಾಡಲಾಗಿದೆ. ಎಲ್ಲ ಪಕ್ಷದವರ ಮೇಲೂ ಸಿಡಿ, ಪೆನ್‌ಡ್ರೈವ್ ಇದೆ. ಕೆಲವರು ಈಗಾಗಲೇ ಸ್ಟೇ ತಗೊಂಡಿದ್ದಾರೆ. ಇದು ನಮ್ಮ ರಾಜ್ಯಕ್ಕೆ ಸೀಮಿತ ಆಗಿಲ್ಲ. ರಾಷ್ಟ್ರದ ಎಲ್ಲ ಪಕ್ಷಗಳ ಮುಖಂಡರ ಹನಿಟ್ರ‍್ಯಾಪ್ ಪೆನ್‌ಡ್ರೈವ್‌ಗಳಿವೆ. ನಾನು ಗೃಹ ಸಚಿವರಿಗೆ ಲಿಖಿತ ದೂರು ಕೊಡ್ತೇನೆ. ಈ ದೂರು ಆಧರಿಸಿ ಪರಮೇಶ್ವರ್ ತನಿಖೆ ಮಾಡಿಸಲಿ. ಇದರ ಹಿಂದೆ ಯಾರಿದ್ದಾರೆ, ಯಾರೆಲ್ಲ ಪ್ರೊಡ್ಯೂಸರ್‌ಗಳು, ಡೈರೆಕ್ಟರ್ ಗಳು ಇದ್ದಾರೆ ಅಂತ ಹೊರಗೆ ಬರಲಿ. ಜನಕ್ಕೆ ಗೊತ್ತಾಗಲಿ ಅಂತ ಒತ್ತಾಯಿಸಿದ್ರು.

    ಸುಮಾರು 48 ಜನರ ವಿರುದ್ಧ ಸಿ.ಡಿ ಪೆನ್‌ಡ್ರೈವ್ ಮಾಡಲಾಗಿದೆ. ಇದೊಂದು ಪಿಡುಗು. ಸಾರ್ವಜನಿಕ ಜೀವನದಲ್ಲಿ ಇರೋರಿಗೆ ಗೌರವ ಬರಬೇಕು. ಹೀಗಾಗಿ ಲಿಖಿತ ದೂರು ಕೊಡ್ತೇನೆ. ಸೂಕ್ತ ತನಿಖೆ ಮಾಡಿಸಲಿ, ಇದರ ಹಿಂದೆ ಯಾರಿದ್ದಾರೆ ಅವರ ಹೆಸರು ಹೊರಗೆ ಬರಲಿ. ನನ್ನ ಮೇಲೂ ಹನಿಟ್ರ‍್ಯಾಪ್ ಪ್ರಯತ್ನ ಮಾಡಿರುವ ಬಗ್ಗೆ ಪುರಾವೆ ಇಟ್ಕೊಂಡಿದ್ದೇನೆ. ಪರಮೇಶ್ವರ್ ವಿಶೇಷ ತನಿಖೆ ಮಾಡಿ, ಇದರ ಹಿಂದೆ ಯಾರಿದ್ದಾರೆ ಅಂತ ಬಹಿರಂಗ ಮಾಡಲಿ ಅಂತ ಆಗ್ರಹಿಸಿದರು.

  • ಜೋರಾಯ್ತು ಛತ್ರಿ ಪಾಲಿಟಿಕ್ಸ್ – ನನಗೆ ಅಧಿಕಾರದ ಮದ, ಕಮ್ಮಿ ಮಾಡಲಿ : ಡಿಕೆಶಿ ತಿರುಗೇಟು

    ಜೋರಾಯ್ತು ಛತ್ರಿ ಪಾಲಿಟಿಕ್ಸ್ – ನನಗೆ ಅಧಿಕಾರದ ಮದ, ಕಮ್ಮಿ ಮಾಡಲಿ : ಡಿಕೆಶಿ ತಿರುಗೇಟು

    ಬೆಂಗಳೂರು: ರಾಜ್ಯ ರಾಜಕಾರಣದಲ್ಲೀಗ ಛತ್ರಿಯದ್ದೇ ಸದ್ದು. ಮಂಡ್ಯದವರ ಛತ್ರಿ ಬುದ್ಧಿ ಬೇಡ ಎಂದಿದ್ದ ಡಿಕೆಶಿ ವಿರುದ್ಧ ಕೆಲವರು ಸಿಡಿದೆದ್ದಿದ್ದಾರೆ. ಹೌದು, ನನಗೆ ಮದ ಇದೆ. ಏನೀಗ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D K Shivakumar) ತಿರುಗೇಟು ನೀಡಿದ್ದಾರೆ.

    ಮಾ. 17ರಂದು ಯೂತ್ ಕಾಂಗ್ರೆಸ್ ಅಧ್ಯಕ್ಷರ ಅಧಿಕಾರ ಸ್ವೀಕಾರ ಕಾರ್ಯಕ್ರಮದಂದು ನೇಗಿಲು ಹಿಡಿದುಕೊಂಡು ಬಂದಿದ್ದ ಯುವ ಕಾಂಗ್ರೆಸ್ ಕಾರ್ಯಕರಿಂದ ವೇದಿಕೆ ಮೇಲೆ ನೂಕು ನುಗ್ಗಲು ಹೆಚ್ಚಾಗಿತ್ತು. ನೇಗಿಲು ಕೊಡಲು ಹೋದಾಗ ಡಿಕೆಶಿ ಗದರಿದ್ದರು. ಮಂಡ್ಯದವರ ಛತ್ರಿ ಬುದ್ಧಿ ಎಲ್ಲ ಬೇಡ ಇಲ್ಲಿ ಎಂದು ಹೇಳಿದ್ದರು. ಈಗ ಅದೇ ಛತ್ರಿ ಬುದ್ಧಿ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ. ಡಿಕೆಶಿ ವಿರುದ್ಧ ಮಂಡ್ಯದಲ್ಲಿ ಪ್ರತಿಭಟನೆ ಕೂಗು ವ್ಯಕ್ತವಾಗಿದೆ. ಡಿಕೆಶಿ ಅವರಿಗೆ ಅಧಿಕಾರದ ಮದ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಛತ್ರಿಗಳು ಎಂದ ಡಿಕೆಶಿ ವಿರುದ್ಧ ಸಿಡಿದೆದ್ದ ಮಂಡ್ಯದ ಜನ!

    ವಿಧಾನಸೌಧದಲ್ಲಿ ವಿಜಯೇಂದ್ರ ವಿರುದ್ಧ ಏಕವಚನದಲ್ಲೇ ಕಿಡಿಕಾರಿದ ಡಿಕೆಶಿ ಅವರು, ನನಗೆ ಮದ ಜಾಸ್ತಿ ಇದೆ, ನನಗೆ ಮದ ಇದ್ರೆ ಕಡಿಮೆ ಮಾಡಲಿ. ನಾನು ಹೇಳಿರುವುದನ್ನ ಇವನು ನೋಡಿದ್ದಾನಾ. ಪ್ರೀತಿ ಪಾತ್ರರಿಗೆ ಹೇಳ್ತೀನಿ. ಅದೆಲ್ಲ ಸುಳ್ಳು, ಯಾವ ಛತ್ರಿನೂ ಇಲ್ಲ. ಛತ್ರಿ ಅಂತಾ ನಾನು ಯಾರಿಗೆ ಅಂದಿದ್ದೀನಿ? ಕಳ್ ನನ್ ಮಗ ಅಂತಾರೆ. ಸುಳ್ ನನ್ ಮಗಾ ಅಂತಾರೆ. ನನಗೆ ಬೇಕಾದವರಿಗೆ ಹೇಳುತ್ತೇನೆ ಎಂದು ಮಂಡ್ಯದವರ ಛತ್ರಿ ಬುದ್ಧಿ ಗೊತ್ತು ಎಂಬ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ದೇಶದ ಶ್ರೀಮಂತ ಶಾಸಕರ ಪೈಕಿ ಡಿಕೆಶಿ ಟಾಪ್ 2 – ಮೊದಲ 10 ಸ್ಥಾನಗಳಲ್ಲಿ ಕರ್ನಾಟಕದ ನಾಲ್ವರು

    ಒಟ್ಟಿನಲ್ಲಿ ಭಲೇ ಛತ್ರಿ ಇವನು. ಛತ್ರಿ ಬುದ್ಧಿ ನಮಗೆ ಗೊತ್ತಿಲ್ಲವಾ ಈ ರೀತಿ ಭಾಷೆ ಬಳಕೆ ಹಳೆಯದಾದರೂ ಜಿಲ್ಲೆಯ ಜನರನ್ನ ಅವಮಾನಿಸಿದ್ದಾರೆ ಎಂಬ ಆರೋಪ ಡಿಕೆಶಿ ಅವರ ಮೇಲಿದೆ. ಆದರೆ ವಿಪಕ್ಷಗಳ ಛತ್ರಿ ಟೀಕೆಗೆ ಕೇರ್ ಮಾಡದ ಡಿಕೆಶಿ ಅವರು, ನಾನು ಅರಗಿಸಿಕೊಳ್ಳುತ್ತೇನೆ ಎಂದು ಎದುರು ನಿಂತಿದ್ದು, ಇದು ಡಿಕೆಶಿಯವರ ಪ್ರೀತಿಯೋ, ಕೋಪವೋ ಜನರೇ ತೀರ್ಮಾನಿಸಬೇಕಿದೆ. ಇದನ್ನೂ ಓದಿ: ಬಾಲಿವುಡ್‌ನಲ್ಲಿ ಮತ್ತೊಂದು ಬಂಪರ್‌ ಅವಕಾಶ ಬಾಚಿಕೊಂಡ ಕೀರ್ತಿ ಸುರೇಶ್