Tag: ಡಿ.ಕೆ.ಶಿವಕುಮಾರ್

  • ಕುಮಾರಸ್ವಾಮಿ ಮಾತಿಗೆ ಹೆದರೋ ಮಗ ನಾನಲ್ಲ – ಡಿಕೆಶಿ ಕೌಂಟರ್‌

    ಕುಮಾರಸ್ವಾಮಿ ಮಾತಿಗೆ ಹೆದರೋ ಮಗ ನಾನಲ್ಲ – ಡಿಕೆಶಿ ಕೌಂಟರ್‌

    ಬೆಂಗಳೂರು: ಕೇತಗಾನಹಳ್ಳಿ ಭೂಒತ್ತುವರಿ ಪ್ರಕರಣದಿಂದ ಕೆರಳಿರುವ ಕೇಂದ್ರ ಸಚಿವ ಕುಮಾರಸ್ವಾಮಿ, ರಾಜ್ಯ ಸರ್ಕಾರದ ವಿರುದ್ಧ ವಾರ್ ಡಿಕ್ಲೇರ್ ಮಾಡಿದ್ದಾರೆ. ಸಿಎಂ-ಡಿಸಿಎಂ ನನ್ನ ಮೇಲೆ ದ್ವೇಷ ಸಾಧಿಸ್ತಿದ್ದಾರೆ. ಆದ್ರೆ ನನ್ನತ್ರ ಟನ್‌ಗಟ್ಟಲೇ ದಾಖಲೆಗಳಿವೆ.. ಹುಷಾರ್, ನನ್ನನ್ನು ಕೆಣಕಬೇಡಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.

    ಮಾಜಿ ಪ್ರಧಾನಿ ಮಗ ನಾನು.. 4 ಎಕರೆ ಭೂಮಿ ಒತ್ತುವರಿ ಮಾಡಿಕೊಳ್ಬೇಕಾ? ಅಂತ ಪ್ರಶ್ನಿಸಿದ್ರು. ಅತಿಕ್ರಮಣದ ದಾಖಲೆ ಇದ್ರೆ ಬಿಡುಗಡೆ ಮಾಡಿ ಎಂದು ಸವಾಲ್ ಹಾಕಿದ್ರು. ಮುಡಾ ಕೇಸಲ್ಲಿ ಲೋಕಾಯುಕ್ತ ತನಿಖೆಯ ಪಾರದರ್ಶಕತೆ ಬಗ್ಗೆ ಮತ್ತೆ ದನಿ ಎತ್ತಿದ್ರು. ಗ್ಯಾರಂಟಿಗಳ ವಿಚಾರದಲ್ಲಿ ಸರ್ಕಾರ ಏಪ್ರಿಲ್ ಫೂಲ್ ಮಾಡ್ತಿದೆ ಎಂದು ಲೇವಡಿ ಮಾಡಿದ್ರು. ಕಸದ ಹೆಸ್ರಲ್ಲಿ ಲೂಟಿ ಎಂಬ ಆರೋಪಕ್ಕೂ ಕೌಂಟರ್ ನೀಡಿದ್ರು.

    ಇದಕ್ಕೆ ತಿರುಗೇಟು ನೀಡಿದ ಡಿಸಿಎಂ ಡಿಕೆ ಶಿವಕುಮಾರ್‌, ಕುಮಾರಸ್ವಾಮಿ ಮಾತಿಗೆ ಹೆದರೋ ಮಗ ನಾನಲ್ಲ. ಅದೆಷ್ಟು ದಾಖಲೆ ಇದೆಯೋ ರಿಲೀಸ್ ಮಾಡ್ಲಿ ಅಂತ ಕೌಂಟರ್‌ ಕೊಟ್ಟಿದ್ದಾರೆ.

    ನಾನು ಕುಮಾರಸ್ವಾಮಿಗೆ ಹೆದರುವ ಮಗ ಅಲ್ಲ. ಟನ್ ಗಟ್ಟಲೇ ಅಲ್ಲ ಭೂಮಿಯನ್ನೇ ತರಲಿ, ನನ್ನ, ನನ್ನ ಹೆಂಡ್ತಿ ಮಕ್ಕಳ ಆಸ್ತಿ ಬಹಿರಂಗ ಮಾಡಲಿ. ನಾನು ಕುಮಾರಸ್ವಾಮಿಗೆ ಹೇಳುತ್ತೇನೆ, ನನ್ನದು ಎಷ್ಟು ವ್ಯವಹಾರ ಇದೆ ಅದರ ದಾಖಲೆ ಬಿಡುಗಡೆ ಮಾಡಲಿ, ನನಗೂ ಗೊತ್ತಿದೆ ನನ್ನ ಆಸ್ತಿ, ಮಕ್ಕಳ ಮತ್ತು ಕುಟುಂಬದ ಆಸ್ತಿ ಎಷ್ಟಿದೆ, ಅದನ್ನೆಲ್ಲಾ ತೆಗೆಸಿದ್ದಾರೆ. ಅದನ್ನು ಬಹಿರಂಗ ಮಾಡಲಿ, ಇವರಿಗೆಲ್ಲಾ ಹೆದರುವಂತಹ ಮಗ ಅಲ್ಲ ನಾನು ಅಂತ ತಿರುಗೇಟು ನೀಡಿದ್ದಾರೆ.

    ಇದೇ ವೇಳೆ ನೀರಾವರಿ ಯೋಜನೆಗಳ ಕುರಿತು ಮಾತನಾಡಿ, ಮೇಕೆದಾಟು, ಅಪ್ಪರ್ ಭದ್ರಾ, ಮಹದಾಯಿ ಎತ್ತಿನಹೊಳೆ ಯೋಜನೆ ಬಗ್ಗೆ ಮಾತನಾಡಿದ್ದೇವೆ. ಅವರಿಗೆ ಎಲ್ಲವೂ ಅರ್ಥವಾಗಿದೆ. ಆದ್ಯತೆ ಇದೆ ಅನ್ನೋದು ಅವರಿಗೆ ಗೊತ್ತಾಗಿದೆ. ಎಲ್ಲರನ್ನ ಕರೆಸಿ ಮಾತನಾಡುತ್ತೇವೆ ಅಂದಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕ್ಯಾಬಿನೆಟ್ ಗೆ ಕಳಿಸಿದ್ದೇವೆ ಅಂದಿದ್ದಾರೆ. ನೋಡೋಣ ಏನು ಮಾಡ್ತಾರೆ. ಎತ್ತಿನಹೊಳೆ ಯೋಜನೆಗೆ ಅಪ್ಲೈ ಮಾಡಿದ್ದೇವೆ ಎಂದು ಹೇಳಿದರು.

  • ಮೇಕೆದಾಟು ಯೋಜನೆಗು ಮುನ್ನ ಡಿಕೆಶಿ, ಡಿಎಂಕೆ ಅವ್ರ ಒಪ್ಪಿಗೆ ಕೊಡಿಸಲಿ: ಹೆಚ್‌ಡಿಕೆ ಸವಾಲ್

    ಮೇಕೆದಾಟು ಯೋಜನೆಗು ಮುನ್ನ ಡಿಕೆಶಿ, ಡಿಎಂಕೆ ಅವ್ರ ಒಪ್ಪಿಗೆ ಕೊಡಿಸಲಿ: ಹೆಚ್‌ಡಿಕೆ ಸವಾಲ್

    – ನೆಲ, ಜಲ, ಭಾಷೆಯ ವಿಚಾರದಲ್ಲಿ ರಾಜಕೀಯ ಬದಿಗೊತ್ತಬೇಕು; ಕೇಂದ್ರ ಸಚಿವ

    ಬೆಂಗಳೂರು: ಮೇಕೆದಾಟು ಯೋಜನೆಗೂ ಮೊದಲು ಡಿ.ಕೆ.ಶಿವಕುಮಾರ್(D K Shivakumar) ಅವರು ಮಾಡಬೇಕಾದ ಕೆಲಸ ಒಂದಿದೆ. ಅವರ ಮಿತ್ರಪಕ್ಷವೇ ಆಡಳಿತ ನಡೆಸುತ್ತಿರುವ ತಮಿಳುನಾಡಿನ ಒಪ್ಪಿಗೆ ಕೊಡಿಸಲಿ, ಆಮೇಲೆ ನಮ್ಮ ಬಗ್ಗೆ ಮಾತನಾಡಲಿ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ(H D Kumaraswamy) ಹೇಳಿದರು.

    ಬೆಂಗಳೂರಿನ ಕುವೆಂಪು ಕಲಾಕ್ಷೇತ್ರದಲ್ಲಿ ಕಾವೇರಿ ನದಿ ರಕ್ಷಣಾ ಸಮಿತಿ ಹಮ್ಮಿಕೊಂಡಿದ್ದ ಕಾವೇರಿ ನದಿ ನೀರಿನ ಹಂಚಿಕೆ ಕುರಿತ ಕಾರ್ಯಗಾರ, ವಿಚಾರ ಸಂಕಿರಣದಲ್ಲಿ ಮಾತನಾಡಿದರು. ನಮ್ಮ ನೀರು ನಮ್ಮ ಹಕ್ಕು ಎಂದು ಹೇಳುತ್ತಾ ನಮ್ಮ ತೆರಿಗೆ ಹಣದಲ್ಲಿ ಅಣೆಕಟ್ಟುಗಳನ್ನು ಕಟ್ಟಿ ತಮಿಳುನಾಡಿಗೆ(TamilNadu) ನೀರು ಹರಿಸುತ್ತಾ ನಾವು ನೀರಗಂಟಿ ಕೆಲಸ ಮಾಡುತ್ತಿದ್ದೇವೆ ಎಂದು ಅತೀವ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ರಾಜಕೀಯವಾಗಿ ಹಿನ್ನಡೆ ಆಗುತ್ತೆ ಅಂತ ವಕ್ಫ್‌ ಬಿಲ್‌ಗೆ ಕಾಂಗ್ರೆಸ್‌ ವಿರುದ್ಧ – ಜೋಶಿ ಕಿಡಿ

    ಕಾವೇರಿ ವಿಷಯದಲ್ಲಿ ನಮಗೆ ಅನ್ಯಾಯ ಆಗಿದೆ. ರಾಜ್ಯ ಬಹಳಷ್ಟು ಹಿಂದಕ್ಕೆ ಹೋಗಿದೆ. ಯಾವಾಗಲೂ ನಮ್ಮ ರಾಜ್ಯಕಿಂತ ನೆರೆ ರಾಜ್ಯಕ್ಕೆ ಅನುಕೂಲ ಆಗುತ್ತಿದೆ. ಕನ್ನಡಿಗರಲ್ಲಿ ಒಗ್ಗಟ್ಟು ಇಲ್ಲ. ನೀರಿನ ವಿಷಯದಲ್ಲಿಯೂ ಅದೇ ಆಗುತ್ತಿದೆ. ಮೇಕೆದಾಟು ಯೋಜನೆ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಟೀಕಿಸಿದರು.

    ತಮಿಳುನಾಡಿನ ಡಿಎಂಕೆ ಜತೆ ನಮ್ಮ ಸಂಬಂಧ ರಾಜಕೀಯಕ್ಕೆ ಮಾತ್ರ ಸೀಮಿತ. ಡಿಎಂಕೆ ಜತೆ ಮೇಕೆದಾಟು ವಿಷಯ ಮಾತನಾಡುವುದಕ್ಕೆ ರಾಜಕೀಯ ಒಪ್ಪಂದ ಮಾಡಿಕೊಂಡಿಲ್ಲ ಎಂದು ಉಪ ಮುಖ್ಯಮಂತ್ರಿ ಹೇಳಿದ್ದಾರೆ. ಇಲ್ಲಿ ನೋಡಿದರೆ ಮೇಕೆದಾಟು ಪಾದಯಾತ್ರೆ ಮಾಡಿ ನಮ್ಮ ನೀರು ನಮ್ಮ ಹಕ್ಕು ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು. ಇದನ್ನೂ ಓದಿ: ಹಕ್ಕಿ ಜ್ವರ ಹರಡುತ್ತಿರುವ ಹಿನ್ನೆಲೆ ಎಲ್ಲಾ ಪೌಲ್ಟ್ರಿ ಫಾರಂಗಳ ಮೇಲೆ ಕಣ್ಣಿಡಲು ಕೇಂದ್ರ ಸೂಚನೆ

    ನಮ್ಮಲ್ಲಿ ಒಗ್ಗಟ್ಟು ಬರದಿದ್ದರೆ ಕಾವೇರಿ ವಿಷಯದಲ್ಲಿ ನ್ಯಾಯ ಸಿಗಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಜನ ದಟ್ಟಣೆಯಿಂದ ಮುಂದೆ ಇಡೀ ಕನ್ನಂಬಾಡಿ ಕಟ್ಟೆಯ ಎಲ್ಲಾ ನೀರನ್ನೂ ಕೊಟ್ಟರೂ ರಾಜಧಾನಿಗೆ ಕುಡಿಯುವ ನೀರು ಸಾಕಾಗದ ಪರಿಸ್ಥಿತಿ ಬರಬಹುದೇನೋ? ಮುಂದೆ ಈ ರೀತಿಯ ನೀರಿನ ಸಂಕಷ್ಟ ಬರುತ್ತದೆ ಎನ್ನುವ ದೂರದೃಷ್ಟಿಯಿಂದ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲು ನಾವು ಮುಂದಾಗಿದ್ದೇವೆ. ಮಂಡ್ಯದಲ್ಲಿ ಗೆಲ್ಲಿಸಿದರೆ 5 ನಿಮಿಷದಲ್ಲಿ ಯೋಜನೆಗೆ ಕೇಂದ್ರದ ಅನುಮತಿ ಕೊಡಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರು. ಈಗ ಕೊಡಿಸಲಿ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಾರೆ. ಅದಕ್ಕಿಂತ ಮೊದಲು ಅವರು ಮಾಡಬೇಕಾದ ಕೆಲಸ ಒಂದಿದೆ, ಅವರ ಮಿತ್ರಪಕ್ಷವೇ ಆಡಳಿತ ನಡೆಸುತ್ತಿರುವ ತಮಿಳುನಾಡಿನ ಒಪ್ಪಿಗೆ ಕೊಡಿಸಲಿ, ಆಮೇಲೆ ನಮ್ಮ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದರು.

    ಸಂಸತ್‌ನಲ್ಲಿ ಕಾವೇರಿ ವಿಷಯ ಪ್ರಸ್ತಾಪ ಆದಾಗ ನಾನು ನೋಡುತ್ತಿದ್ದೇನೆ. ಆ ನದಿಯ ವಿಷಯ ಪ್ರಸ್ತಾಪವಾದರೆ ತಮಿಳುನಾಡಿನ ಎಲ್ಲಾ ಸಂಸದರು ರಾಜಕೀಯ ಭಿನ್ನಾಭಿಪ್ರಾಯ ಬದಿಗಿಟ್ಟು ಒಟ್ಟಾಗಿ ಬಿಡುತ್ತಾರೆ. ಆದರೆ, ನಮ್ಮಲ್ಲಿ ಏನಾಗುತ್ತಿದೆ? ಎಲ್ಲಕ್ಕೂ ರಾಜಕೀಯ ತರುತ್ತೇವೆ, ಜಾತಿ ತರುತ್ತೇವೆ. ಇದೇ ನಮಗೆ ಮುಳುವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಾಜಿ ಸಿಎಂಗಳು ಸಂಚರಿಸಿದ ಕಾರನ್ನ 2.10 ಲಕ್ಷಕ್ಕೆ ಖರೀದಿಸಿದ ಕಾಂಗ್ರೆಸ್‌ ನಾಯಕ

    ಈಗ ಡಿಸಿಎಂ ಅವರು ಉಲ್ಟಾ ಹೊಡೆಯುತ್ತಿದ್ದಾರೆ. ಡಿಎಂಕೆ ಜತೆ ಕೇವಲ ರಾಜಕೀಯ ಒಪ್ಪಂದ ಮಾತ್ರ ಮಾಡಿಕೊಂಡಿದ್ದೇವೆ ಎಂದು ಹೇಳುತ್ತಿದ್ದಾರೆ. ನಮ್ಮ ನೀತಿ, ಧೋರಣೆ ಹೀಗೆ ಇರಬಾರದು. ನೆಲ, ಜಲ, ಭಾಷೆ ವಿಷಯ ಬಂದಾಗ ರಾಜಕೀಯ, ಭಿನ್ನಾಭಿಪ್ರಾಯ ಎಲ್ಲವನ್ನೂ ಬದಿಗೊತ್ತಬೇಕು. ಇಲ್ಲವಾದರೆ ನಮ್ಮ ರಾಜ್ಯಕ್ಕೆ ನ್ಯಾಯ ಸಿಗಲ್ಲ. 93 ವರ್ಷಗಳ ಇಳಿ ವಯಸ್ಸಿನಲ್ಲಿಯೂ ದೇವೇಗೌಡರು ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಸದನದಲ್ಲಿ ವೀಲ್‌ಚೇರ್ ಮೇಲೆ ಬಂದು ಹೋರಾಟ ಮಾಡುತ್ತಿದ್ದಾರೆ ಎಂಬುದನ್ನು ಯಾರು ಮರೆಯಬಾರದು ಎಂದು ಹೇಳಿದರು.

    ಕಾವೇರಿ ಬಗ್ಗೆ ಹಿಂದೆ ರಾಜ್ಯದಲ್ಲಿ ನಡೆದಿರುವ ಹೋರಾಟ, ತ್ಯಾಗವನ್ನು ಮರೆಯುತ್ತಿದ್ದೇವೆ. ಚನ್ನಬಸಪ್ಪ, ಹೆಚ್.ಎನ್.ನಂಜೇಗೌಡ, ದೇವೇಗೌಡರು ನಡೆಸಿದ ಹೋರಾಟಗಳನ್ನು ನಾವು ನೆನಪಿಸಿಕೊಳ್ಳಬೇಕು. ಮುಂಚೂಣಿಯಲ್ಲಿ ನಿಂತು ರಾಜ್ಯಕ್ಕೆ ನ್ಯಾಯ ದೊರಕಿಸಿಕೊಟ್ಟವರು ಇವರು ಎಂದರು. ಇದನ್ನೂ ಓದಿ: ನ್ಯಾಮತಿ ಬ್ಯಾಂಕ್ ದರೋಡೆಗೂ ಮುನ್ನ ಪೂಜೆ ಸಲ್ಲಿಸಿದ್ದ ದೇವಾಲಯದಲ್ಲಿ ಕಳ್ಳತನ!

    ನಮ್ಮ ತಂದೆ ಅವರು ಯಾವಾಗಲೂ ನನಗೆ ಹೇಳುತ್ತಿರುತ್ತಾರೆ. ರಾಜ್ಯಕ್ಕೆ ಆಗಿರುವ ನೀರಾವರಿ ಅನ್ಯಾಯಕ್ಕೆ ನಿನ್ನ ಒಬ್ಬನಿಂದಲೇ ಈ ಪರಿಹಾರ, ನ್ಯಾಯ ಸಿಗುತ್ತದೆ ಎಂದು ಅನೇಕ ಸಲ ಹೇಳಿದ್ದಾರೆ. ನಾನು ದೇವರಲ್ಲಿ ಅಚಲ ನಂಬಿಕೆ ಇಟ್ಟಿದ್ದೇನೆ. ನನ್ನ ಕನಸು ಈಡೇರುತ್ತದೆ ಎಂದು ಅವರು ಯಾವಾಗಲೂ ಹೇಳುತ್ತಿರುತ್ತಾರೆ ಎಂಬ ಮಾತನ್ನೂ ಹೇಳಿದರು.

    ಕರ್ನಾಟಕದ ಮುಖ್ಯಮಂತ್ರಿ ಒಬ್ಬರು ಬಹಳ ಹಿಂದೆ ತಮಿಳುನಾಡು ಮುಖ್ಯಮಂತ್ರಿ ಆಗಿದ್ದ ಕಾಮರಾಜ್ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅಂದಿನ ಮದರಾಸ(ಇಂದಿನ ಚೆನ್ನೈ)ಗೆ ಹೋಗುತ್ತಿದ್ದರು. ಆ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಅಂದಿನ ನಮ್ಮ ಮುಖ್ಯಮಂತ್ರಿಗಳು ಕಾಮರಾಜ್ ಅವರನ್ನು ಉದ್ದೇಶಿಸಿ, ನಾವು ನಿಮಗೆ ಎಷ್ಟು ಬೇಕಾದರೂ ಕಾವೇರಿ ನೀರು ಬಿಡುತ್ತೇವೆ. ನೀವು ನಮಗೆ ಭತ್ತ ಬೆಳೆದು ಕೊಡಿ ಸಾಕು ಎಂದು ಹೇಳಿದ್ದರಂತೆ. ಇದು ನಮ್ಮ ರಾಜ್ಯದ ಉದಾರತೆಗೆ ಪ್ರತೀಕ. ಇದೇ ಇವತ್ತು ನಮಗೆ ಮುಳುವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇದನ್ನೂ ಓದಿ: ಹೆಡ್ ಕಾನ್‍ಸ್ಟೇಬಲ್ ಮನೆಗೆ ಕನ್ನ – 5 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

    ಆದರೆ ಆಗಷ್ಟೇ ಪಕ್ಷೇತರ ಶಾಸಕರಾಗಿ ವಿಧಾನಸಭೆಗೆ ಬಂದಿದ್ದ ದೇವೇಗೌಡರು, ಅಂದಿನ ಮುಖ್ಯಮಂತ್ರಿಯವರ ಹೇಳಿಕೆಯನ್ನು ಮುಲಾಜಿಲ್ಲದೇ ಖಂಡನೆ ಮಾಡಿದ್ದರು. ಸದನದಲ್ಲಿ ಖಾಸಗಿ ನಿರ್ಣಯ ಮಂಡಿಸಿ ರಾಜ್ಯಕ್ಕೆ ಕಾವೇರಿ ನೀರಿನಲ್ಲಿ ನ್ಯಾಯ ಸಿಗುವಲ್ಲಿ ಹೋರಾಟ ನಡೆಸಿದರು. ಅವರ ಹೋರಾಟದ ಫಲವೇ ಕಬಿನಿ, ಹಾರಂಗಿ ಮತ್ತು ಹೇಮಾವತಿ ಜಲಾಶಯಗಳು ನಿರ್ಮಾಣವಾದವು. ಇದನ್ನು ಯಾರೂ ಮರೆಯಬಾರದು ಎಂದು ಹೇಳಿದರು. ಇದನ್ನೂ ಓದಿ: ಅಲಹಾಬಾದ್ ಹೈಕೋರ್ಟ್‌ ನ್ಯಾಯಾಧೀಶರಾಗಿ ನ್ಯಾ. ವರ್ಮಾ ಪ್ರಮಾಣ ವಚನ ಸ್ವೀಕಾರ

    ಕಾವೇರಿ ಕೊಳಕ್ಕೆ ಮಾತ್ರವಲ್ಲ, ಕೃಷ್ಣ ಕೊಳಕ್ಕೂ ನೀರು ಒದಗಿಸಲು ದೇವೇಗೌಡರು ಕೊಡುಗೆ ಕೊಟ್ಟರು. ಪ್ರಧಾನಿಯಾಗಿ ಉತ್ತರ ಕರ್ನಾಟಕದ ಭಾಗದ ಜನರಿಗೆ ಅಪಾರ ಸೇವೆ ಸಲ್ಲಿಸಿದರು. ಆದರೆ, ಕೆಲವರು ತುಂಡು ಗುತ್ತಿಗೆ ಎಂದು ಅಸತ್ಯವನ್ನು ಹಬ್ಬಿಸಿ ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಿದರು ಕಿಡಿಕಾರಿದರು. ಇದನ್ನೂ ಓದಿ: ಪ್ರಸಿದ್ಧ ವಿದೇಶಿ ವೈದ್ಯರಂತೆ ನಟಿಸಿ ಹಾರ್ಟ್‌ ಆಪರೇಷನ್‌ – ನಕಲಿ ವೈದ್ಯನ ಹುಚ್ಚಾಟಕ್ಕೆ 7 ಜನ ಬಲಿ

    ಕಾರ್ಯಗಾರದಲ್ಲಿ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನದ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮಿ ಅವರು, ಶ್ರೀ ಸೌಮ್ಯನಾಥ ಸ್ವಾಮೀಜಿ, ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀ ನಿಶ್ಚಲಾನಂದನಂದನಾಥ ಸ್ವಾಮೀಜಿ ಅವರು ದಿವ್ಯ ಸಾನ್ನಿಧ್ಯ ವಹಿಸಿದ್ದರು.

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರಕ್ಕೆ ಮನವಿ: ಡಿಕೆಶಿ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರಕ್ಕೆ ಮನವಿ: ಡಿಕೆಶಿ

    – ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದಂತೆ 5,300 ಕೋಟಿ ಅನುದಾನ ಬಿಡುಗಡೆಗೆ ಒತ್ತಾಯ

    ನವದೆಹಲಿ: ಆಲಮಟ್ಟಿ ಅಣೆಕಟ್ಟು (Almatti Reservoir) ಎತ್ತರದ ಬಗ್ಗೆ ಗೆಜೆಟ್ ಅಧಿಸೂಚನೆ ಹೊರಡಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಕೇಂದ್ರ ಜಲಶಕ್ತಿ ಸಚಿವರು ಕೃಷ್ಣಾ ನದಿ (Krishna River) ಜಲಾನಯನ ಪ್ರದೇಶದ ರಾಜ್ಯಗಳ ಪ್ರತಿನಿಧಿಗಳನ್ನು ಕರೆಸಿ ಅಣೆಕಟ್ಟು ಎತ್ತರ ಹೆಚ್ಚಳದ ಬಗ್ಗೆ ಮುಂದಿನ 15 ದಿನಗಳಲ್ಲಿ ಸಭೆ ನಡೆಸಿ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅವರು ಹೇಳಿದರು.

    ನವದೆಹಲಿಯ ಕರ್ನಾಟಕ ಭವನ-1 ʻಕಾವೇರಿʼಯಲ್ಲಿ ಜಲಸಂಪನ್ಮೂಲ ಸಚಿವರೂ ಆಗಿರುವ ಡಿ.ಕೆ ಶಿವಕುಮಾರ್ ಅವರು ಮಾಧ್ಯಮಗೋಷ್ಠಿ ಉದ್ದೇಶಿಸಿ ಶುಕ್ರವಾರ ಮಾತನಾಡಿದರು. ಇದನ್ನೂ ಓದಿ: ʼರಾಜ್ಯʼದಲ್ಲೂ ಗೆದ್ದ ಮೋದಿ ಸರ್ಕಾರ – ವಕ್ಫ್ ಬಿಲ್ ಜಾರಿಗೆ ಇನ್ನೊಂದೇ ಹೆಜ್ಜೆ ಮಾತ್ರ ಬಾಕಿ

    ಕೇಂದ್ರ ಜಲಶಕ್ತಿ ಸಚಿವರಾದ ಸಿ‌.ಆರ್ ಪಾಟೀಲ್ (CR Paatil) ಅವರನ್ನು ರಾಜ್ಯಖಾತೆ ಸಚಿವರಾದ ಸೋಮಣ್ಣ ಅವರ ಜೊತೆ ಭೇಟಿ ಮಾಡಲಾಗಿತ್ತು. ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಮತ್ತು ನಮಗೆ ಎಷ್ಟು ನೀರು ಸಿಗಬೇಕು ಹಾಗೂ ಅಣೆಕಟ್ಟು ಎಷ್ಟು ಎತ್ತರ ಮಾಡಬೇಕು ಎಂದು ಹಿಂದೆಯೇ ತೀರ್ಮಾನವಾಗಿದೆ. 524 ಅಡಿ ಎತ್ತರಕ್ಕೆ ಎಷ್ಟು ಭೂಮಿ ಬೇಕಾಬಹುದು ಎಂದು ಅಂದಾಜಿಸಿ ಭೂಸ್ವಾಧೀನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕೆಲಸವನ್ನು ಬೇಗ ಮುಗಿಸುವ ಬದ್ಧತೆ ನಮ್ಮ ಸರ್ಕಾರಕ್ಕಿದೆ. ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವ ಬಗ್ಗೆಯೂ ಮನವಿ ಮಾಡಿದ್ದೇವೆ ಎಂದರು. ಇದನ್ನೂ ಓದಿ: ಸಂಸತ್‌ನಲ್ಲಿ ವಕ್ಫ್ ತಿದ್ದುಪಡಿ ಬಿಲ್ ಪಾಸ್ ಆಗಿರೋದು ಇತಿಹಾಸದಲ್ಲಿ ಕೆಟ್ಟ ದಿನ- ಬೋಸರಾಜು

    ಭದ್ರಾ ಮೇಲ್ದಂಡೆ ವಿಚಾರವಾಗಿ ಕೇಂದ್ರ ಸರ್ಕಾರ‌‌ ಕೆಲಸ ಮಾಡುತ್ತಿದೆ. ಕೇಂದ್ರದ ಕ್ಯಾಬಿನೆಟ್ ಮುಂದೆ ಈ ವಿಚಾರ ತೆಗೆದುಕೊಡು ಹೋಗಲಾಗಿದೆ ಎಂದು ಹೇಳಿದ್ದಾರೆ. ಮೇಕೆದಾಟು (Mekedatu Project) ವಿಚಾರದಲ್ಲಿ 15 ದಿನಗಳಲ್ಲಿ ಸುಪ್ರೀಂ ‌ಕೋರ್ಟ್ ಕರ್ನಾಟಕದ‌ ವಾದ ಆಲಿಸುವುದಾಗಿ ಹೇಳಿತ್ತು. ಆದರೆ ದಿನಾಂಕ ನಿಗದಿ ಮಾಡಿಲ್ಲ. ತಮಿಳುನಾಡಿನವರು ರಾಜಕೀಯವಾಗಿ ಸಹಕಾರ ನೀಡುವುದಿಲ್ಲ‌‌ ಎನ್ನುವುದು ನಮಗೆ ಅರಿವಿದೆ. ಅವರು ಸಣ್ಣಪುಟ್ಟ ಅಣೆಕಟ್ಟುಗಳನ್ನು ಅವರ ವಲಯದಲ್ಲಿ ಕಟ್ಟಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ನಾವು ತೊಂದರೆ ಕೊಡಲು ಹೋಗುವುದಿಲ್ಲ. ಈ ವಿಚಾರವನ್ನೂ ಸಚಿವರ ಗಮನಕ್ಕೆ ತರಲಾಗಿದೆ ಎಂದು ವಿವರಿಸಿದರು.

    ಕಳಸಾ ಬಂಡೂರಿ ಕಾಮಗಾರಿಗೆ ಟೆಂಡರ್
    ಕಳಸಾ ಬಂಡೂರಿ ಕಾಮಗಾರಿಗೆ ಪರಿಸರ ಇಲಾಖೆಯ ಅನುಮತಿ ಸಿಗದಿರುವ ಬಗ್ಗೆ ಗಮನಕ್ಕೆ ತರಲಾಗಿದೆ. ಈಗಾಗಲೇ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಈ ಹಿಂದೆ ಪ್ರಹ್ಲಾದ್ ಜೋಶಿ ಹಾಗೂ ಕೇಂದ್ರ ಅರಣ್ಯ ಸಚಿವರನ್ನೂ ಸಹ ಭೇಟಿ ಮಾಡಲಾಗಿತ್ತು. ಎತ್ತಿನಹೊಳೆ ಕಾಮಗಾರಿ ಕುಡಿಯುವ ನೀರಿನ ಯೋಜನೆಯಾದ ಕಾರಣ ಒಂದಷ್ಟು ಅನುದಾನ ನೀಡಬೇಕು ಎಂದು ಮನವಿ ಮಾಡಲಾಗಿದೆ. ಜೊತೆಗೆ ಅರಣ್ಯ ಭೂಮಿ ಬಳಕೆ, ಬದಲಿ ಭೂಮಿ ನೀಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಇದರ ಡಿಪಿಆರ್ ಅನ್ನು ನೋಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

    ಕಾವೇರಿ, ಕೃಷ್ಣಾ, ಗೋದಾವರಿ ನದಿ ಜೋಡಣೆ ಸಂಬಂಧ ನಮ್ಮ ರಾಜ್ಯದ ವಾದವನ್ನು ನಾನು ಹಾಗೂ ಮುಖ್ಯಮಂತ್ರಿಯವರು ಸಲ್ಲಿಸಿದ್ದೇವೆ. ಇದರ ಬಗ್ಗೆ ಧನಾತ್ಮಕವಾಗಿ ಕೇಂದ್ರ ಸಚಿವರು ಪ್ರತಿಕ್ರಿಯಿಸಿದ್ದಾರೆ. ನಮ್ಮ ಭೇಟಿ ಫಲದಾಯಕವಾಗಿದೆ ಎನ್ನುವುದು ಸಂತಸದ ವಿಚಾರ. ಕೃಷ್ಣಾ ನ್ಯಾಯಾಧೀಕರಣ ವಿಚಾರ ಸುಪ್ರೀಂ ಕೋರ್ಟಿನಲ್ಲಿ ತಡೆಯಾಜ್ಞೆ ಇರುವ ಬಗ್ಗೆ ಕೇಳಿದಾಗ, ಶೆಡ್ಯೂಲ್ 524ಕ್ಕೆ ಸೇರಿದ ವಿಚಾರವಾದ ಕಾರಣ ಈ ಬಗ್ಗೆ ಕೇಂದ್ರ ಜಲಶಕ್ತಿ ಸಚಿವರು ಆಂತರಿಕ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಇದರ ಬಗ್ಗೆ ಈಗಾಗಲೇ ಚರ್ಚೆ ಮಾಡಲಾಗಿದೆ. ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ ಎಂದರು.

    ಕಾಲುವೆ ನೀರು ಬಿಡುವಂತೆ ಕೋರ್ಟ್ ಆದೇಶದ ಬಗ್ಗೆ ಕೇಳಿದಾಗ, ಕಾಲುವೆಗಳಿಗೆ ಕೃಷ್ಣ ನದಿ ನೀರನ್ನು ಏಕಾಏಕಿ ಬಿಡಲು ಆಗುವುದಿಲ್ಲ. ಅಲ್ಲದೇ ಈ ವಿಚಾರದಲ್ಲಿ ನ್ಯಾಯಾಲಯ ಕೂಡ ಆದೇಶ ನೀಡಲು ಬರುವುದಿಲ್ಲ. ಏಕ ಸದಸ್ಯ ಪೀಠ ನೀರು ಬಿಡುವಂತೆ ಹೇಳಿತ್ತು. ದ್ವಿಸದಸ್ಯ ಪೀಠ ಆದೇಶಕ್ಕೆ ತಡೆ ನೀಡಿದೆ. ಕಾಲುವೆಗಳಿಗೆ ನೀರು ಬಿಡುವ ಬಗ್ಗೆ ನಾನೇ ತಾಂತ್ರಿಕ ವರದಿ ತರಿಸಿ ಕೊಳ್ಳುವವನಿದ್ದೆ. ಯಾದಗಿರಿ ಸೇರಿದಂತೆ ಆ ಭಾಗದ ಶಾಸಕರು ರೈತರ 2ನೇ ಬೆಳೆಗೆ ನೀರು ಬಿಡುವಂತೆ ಮನವಿ ಮಾಡಿದ್ದರು. ಈ ಮಧ್ಯೆ ಯಾರೋ ನ್ಯಾಯಾಲಯಕ್ಕೆ ಹೋಗಿದ್ದಾರೆ ಎಂದು ತಿಳಿಸಿದರು.

    ರೈತರ ಪಾಲಿನ ನೀರು ಬಿಡುತ್ತೇವೆ
    ಕಾಲುವೆಗೆ ನೀರುಬಿಟ್ಟ ಸಮಯದಲ್ಲಿ ಮಧ್ಯದಲ್ಲಿಯೇ ಪಂಪ್ ಗಳನ್ನು ಬಿಟ್ಟು ನೀರು ಎತ್ತಲಾಗುತ್ತದೆ. ಇದಕ್ಕೆಲ್ಲಾ ಅವಕಾಶ ನೀಡಬಾರದು ಎಂದು ಹೇಳಲಾಗಿದೆ. ರೈತರ ಪಾಲಿನ ನೀರು ನಾವು ನೀಡುತ್ತೇವೆ. ಆದರೆ ಕಾಲುವೆಯ ಕೊನೇ ಭಾಗಕ್ಕೆ ನೀರು ತಲುಪಬೇಕಲ್ಲವೇ? ಇದು ಆಗದೇ ಮಧ್ಯದಲ್ಲಿಯೇ ನೀರು ಎಳೆಯಲಾಗುತ್ತಿದೆ. ಹಾಗಾಗಿ ಕಾಲುವೆಯಿಂದ ನೀರು ಎತ್ತುವುದನ್ನು ತಡೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವಿದ್ಯುತ್ ಸಂಪರ್ಕಗಳನ್ನು ತಪ್ಪಿಸಿ ಹಗಲು ಹಾಗೂ ರಾತ್ರಿ ವೇಳೆ ನೀರನ್ನು ರಕ್ಷಣೆ ಮಾಡುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ರೈತರು 2ನೇ ಬೆಳೆ ಹಾಕಿಕೊಂಡಿದ್ದಾರೆ. ಆದರೆ ಕುಡಿಯುವ ನೀರು ನಮ್ಮ ಮೊದಲ ಆದ್ಯತೆ ಎಂದು ಹೇಳಿದರು.

    ನಿರುದ್ಯೋಗಿಗಳಿಗೆ ಪರಿಷತ್ ಸ್ಥಾನ ಕೊಟ್ಟಂತೆ ಆಗಬಾರದು
    ವಿಧಾನಪರಿಷತ್ ನಾಮನಿರ್ದೇಶನದ ಬಗ್ಗೆ ಕೇಳಿದಾಗ, ಪಕ್ಷದ ಕಾರ್ಯಕರ್ತರಿಗೆ ಹಾಗೂ ಪಕ್ಷದ ಪರವಾಗಿ ದನಿ ಎತ್ತುವವರಿಗೆ ನೀಡಬೇಕು ಎಂಬುದು ನನ್ನ ಅಭಿಲಾಷೆ. ಸುಮ್ಮನೆ ಇರುವ ನಿರುದ್ಯೋಗಿಗಳಿಗೆ ಕೊಟ್ಟಂತೆ ಆಗಬಾರದು. ಉತ್ತಮವಾಗಿ ಮಾತನಾಡುವಂತಹ ಪ್ರತಿನಿಧಿಗಳಿಗೆ ಸ್ಥಾನ ನೀಡಬೇಕು ಎಂಬುದು ನನ್ನ ಪ್ರಾಶಸ್ತ್ಯ. ಇದರ ಬಗ್ಗೆ ಮುಖ್ಯಮಂತ್ರಿಗಳು ನಾನು ಹೈಕಮಾಂಡ್ ಬಳಿ ಮಾತನಾಡಿದ್ದೇವೆ‌. ಹೈಕಮಾಂಡ್ ಇಬ್ಬರನ್ನು ಸಂಪರ್ಕಿಸುತ್ತದೆ ಎಂದು ಮಾಹಿತಿ ನೀಡಿದರು.

    ಮೇಕೆದಾಟು ಹಾಗೂ ಭದ್ರಾ ಮೇಲ್ದಂಡೆ ಬಗ್ಗೆ ಪ್ರತಿ ಬಾರಿ ದೆಹಲಿಗೆ ಬಂದಾಗಲೂ ಚರ್ಚೆ ಮಾಡುವ ಬಗ್ಗೆ ಕೇಳಿದಾಗ, ಇದು ಮೋದಿ ಅವರ ನಾಯಕತ್ವದ ಕೇಂದ್ರ ಸರ್ಕಾರದ ತೀರ್ಮಾನಕ್ಕೆ ಬಿಟ್ಟ ವಿಚಾರ‌. ನಿರ್ಮಲಾ ಸೀತಾರಾಮನ್ ಅವರು ಭದ್ರಾ ಯೋಜನೆಗೆ ರೂ.5,300 ಕೋಟಿ ಅನುದಾನ ನೀಡುವುದಾಗಿ ಹೇಳಿದ್ದರು. ನಾವು ಗುತ್ತಿಗೆದಾರರಿಗೆ ಹಣ ನೀಡಬೇಕಿದೆ ಎಂದು ತಿಳಿಸಿದರು.

    ಇದೇ ವೇಳೆ ಮೇಕೆದಾಟು ಬಗ್ಗೆ ಕೆಲಸಗಳೇ ನಡೆಯುತ್ತಿಲ್ಲ ಎಂದು ಕೇಳಿದಾಗ, ಈಗಾಗಲೇ ರಾಜ್ಯದಲ್ಲಿ ಕಚೇರಿಯನ್ನೂ ತೆರೆಯಲಾಗಿದೆ. ಸ್ಥಳ ಗುರುತಿಸುವಿಕೆ ಸೇರಿದಂತೆ ಅನೇಕ ಕೆಲಸಗಳು ನಡೆಯುತ್ತಿದೆ. ದೆಹಲಿಯಲ್ಲೂ ಈ ಬಗ್ಗೆ ಕೆಲಸ ಪ್ರಾರಂಭ ಮಾಡಲಾಗುವುದು ಎಂದರು‌. ಇದನ್ನೂ ಓದಿ: ಚಿಕ್ಕಮಗಳೂರು: ಪಕ್ಕದ ಊರಿಗೆ ಪಾತ್ರೆ ಕೊಟ್ಟಿದ್ದಕ್ಕೆ ಬಹಿಷ್ಕಾರ – 6,000 ರೂ. ದಂಡ!

    ಬಿಜೆಪಿಗಿಂತ ಕಡಿಮೆ ಬೆಲೆ ಏರಿಕೆ ಮಾಡಿದ್ದೇವೆ
    ಬೆಲೆಏರಿಕೆ ವಿರುದ್ಧ ಬಿಜೆಪಿಯವರಿಂದ ಸಿಎಂ ಮನೆ ಮುತ್ತಿಗೆ ಬಗ್ಗೆ ಕೇಳಿದಾಗ, ಬಿಜೆಪಿಯವರ ಕಾಲದಲ್ಲಿ ಪೆಟ್ರೋಲ್‌, ಡೀಸೆಲ್, ಅಡುಗೆ ಎಣ್ಣೆಯ ಬೆಲೆ ಏರಿಕೆಯಾದಾಗ ಏಕೆ ಮನೆ ಮುತ್ತಿಗೆ ಮಾಡಿಕೊಳ್ಳಲಿಲ್ಲ? ನಾವು 100 ನಾಟ್ ಔಟ್ ಎನ್ನುವ ಹೋರಾಟ ಮಾಡಿದ್ದೆವು. ಕಬ್ಬಿಣ, ಉಕ್ಕು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಎಲ್ಲವೂ ಹೆಚ್ಚಾಯಿತು. ಕಸದ ಸಂಗ್ರಹ ಶುಲ್ಕಕ್ಕೆ ಆದೇಶ ನೀಡಿದವರೇ ಬಿಜೆಪಿಯವರು. ನಾನು ಅವರು ಮಾಡಿದ ಬೆಲೆಗಿಂತ ಕಡಿಮೆ ಮಾಡಿದ್ದೇನೆ. ದೊಡ್ಡದಾಗಿ ಹಾಕಬೇಕಾಗಿತ್ತು. ಹಳೆಯದನ್ನು ಬಿಡಿ ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ ಎಂದು ಹೇಳಿದರು.

    ಸಿದ್ದರಾಮಯ್ಯ ಅವರು ಹಾಗೂ ನೀವು ವರಿಷ್ಠರನ್ನು ಭೇಟಿಯಾಗುತ್ತಾ ಇದ್ದೀರಿ. ಸಚಿವರ ದಂಡು ಸಹ ದೆಹಲಿಯಲ್ಲಿದೆ. ಸರ್ಕಾರದಲ್ಲಿ ಬದಲಾವಣೆಯಾಗಲಿದೆಯೇ ಎಂದು ಕೇಳಿದಾಗ, ಪಕ್ಷದ ನಾಯಕರನ್ನು ನಾವು ಭೇಟಿಯಾಗುವುದು ಸಾಮಾನ್ಯ. ನಾನು ವೇಣುಗೋಪಾಲ್ ಹಾಗೂ ಸುರ್ಜೇವಾಲ ಅವರನ್ನು ಭೇಟಿಯಾಗಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಕರ್ನಾಟಕ ಭವನದಲ್ಲಿಯೇ ಭೇಟಿ ಮಾಡಲಾಯಿತು ಎಂದರು. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ನಿಮ್ಮ ನಿಲುವೇನು ಎಂದು ಪ್ರಶ್ನಿಸಿದಾಗ, ಪಕ್ಷ ಹೇಗೆ ಹೇಳುತ್ತದೆಯೋ ಆ ರೀತಿ ಮುನ್ನಡೆಯುವುದು. ಐದು ವರ್ಷ ಸೇವೆ ಸಲ್ಲಿಸಿದ್ದೇನೆ. ಪಕ್ಷಕ್ಕೆ ಒಳ್ಳೆಯದಾಗುವುದು ಮುಖ್ಯ. ವ್ಯಕ್ತಿಗಿಂತ ಪಕ್ಷ ಮುಖ್ಯ ಎಂದು ಮಾರ್ಮಿಕವಾಗಿ ನುಡಿದರು.

    ಕಳೆದ ಹಲವಾರು ದಿನಗಳಿಂದ ಸೋನಿಯಾ ಗಾಂಧಿ ಅವರನ್ನು ಶಿವಕುಮಾರ್ ಅವರು ಭೇಟಿಯಾಗಿಲ್ಲ. ಭೇಟಿಯಾದರೆ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ನಿಶ್ಚಿತ ಎನ್ನುವ ಮಾತುಗಳ ಬಗ್ಗೆ ಕೇಳಿದಾಗ, ಭೇಟಿಯಾಗಿಲ್ಲ ಎಂದು ಹೇಳಿದವರು ಯಾರು? ಸಾಕ್ಷಿಗೆ ಫೋಟೊಗಳನ್ನು ತೋರಿಸಲೇ ಎಂದಾಗ ಅಧಿಕೃತವಾಗಿ ಫೋಟೊಗಳು ದೊರೆತಿಲ್ಲ ಎಂದು ಮರುಪ್ರಶ್ನಿಸಿದಾಗ, ನಿಮಗೆ ಏಕೆ ತೋರಿಸಬೇಕು? ನನಗೆ ಬೇಕಾಗಿದ್ದು ಬಿಡುಗಡೆ ಮಾಡಲಾಗುವುದು, ಬೇಡದ್ದು ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಅತ್ಯಾಚಾರ ಆರೋಪಿಗೆ ಈಗ ಬೇಕಿದೆ ಹನುಮನ ಶ್ರೀರಕ್ಷೆ – ನಿತ್ಯ ಹನುಮಾನ್ ಚಾಲಿಸ ಪಠಿಸುತ್ತಿರೋ ಪ್ರಜ್ವಲ್ ರೇವಣ್ಣ

    ಡಿಎಂಕೆ ಜೊತೆ ರಾಜಕೀಯ ಉದ್ದೇಶದ ಮೈತ್ರಿ
    ನೀವು ಡಿಎಂಕೆ ಜೊತೆ ಉತ್ತಮ ಸಖ್ಯ ಹೊಂದಿದ್ದೀರಿ ಎನ್ನುವ ಬಗ್ಗೆ ಕೇಳಿದಾಗ, ಇದು ಕೇವಲ ರಾಜಕೀಯ ಉದ್ದೇಶದ ಮೈತ್ರಿ. ಒಟ್ಟಿಗೆ ಕೆಲಸ ಮಾಡುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದು ಹೇಳಿದರು. ಬಳಿಕ ತಮಿಳುನಾಡಿಗೆ ಶಿವಕುಮಾರ್ ಅವರು ಹೆಚ್ಚು ಭೇಟಿ ನೀಡುತ್ತಿದ್ದಾರೆ. ಇದರಿಂದ ನೀರಿನ ಸಮಸ್ಯೆ ಬಗೆಹರಿಯಲಿದೆಯೇ? ಎಂಬ ಬಿಜೆಪಿಯವರ ಹೇಳಿಕೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಅವರ ರಾಜಕಾರಣ ಅವರು ಮಾಡುತ್ತಾರೆ. ನಮ್ಮ ರಾಜಕಾರಣ ನಾವು ಮಾಡುತ್ತೇವೆ. ಅವರ ರಕ್ಷಣೆ ಅವರು ನೋಡಿಕೊಳ್ಳುತ್ತಾರೆ. ನಮ್ಮ ರಾಜ್ಯದ ಹಿತವನ್ನು ನಾವು ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.

    ನಿಯೋಗಕ್ಕೆ ಸಂಸದ ತುಕಾರಾಂ ನೇಮಕ
    ಸಂಸತ್ ಕ್ಷೇತ್ರಗಳ ಮರುವಿಂಗಡಣೆ ವಿರುದ್ಧದ ಹೋರಾಟದ ಬೆಳವಣಿಗೆಯ ಬಗ್ಗೆ ಕೇಳಿದಾಗ, ಕ್ಷೇತ್ರ ಮರುವಿಂಗಡಣೆ ಹೋರಾಟದ ನಿಯೋಗಕ್ಕೆ ಹೈಕಮಾಂಡ್ ಸೂಚನೆಯಂತೆ ನಮ್ಮ ಕರ್ನಾಟಕದಿಂದ ಸಂಸದರಾದ ತುಕಾರಾಂ ಅವರನ್ನು ನೇಮಿಸಲಾಗಿದೆ ಎಂದರು. ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ಜುಲೈಯೊಳಗೆ ಹಳದಿ ಮಾರ್ಗ ಸಂಚಾರಕ್ಕೆ ಮುಕ್ತ

    ವಕ್ಫ್ ತಿದ್ದುಪಡಿ ಮಸೂದೆಗೆ ಜೆಡಿಎಸ್, ಟಿಡಿಪಿ, ಚಂದ್ರಬಾಬು ನಾಯ್ಡು, ದೇವೇಗೌಡರು ಬೆಂಬಲ ನೀಡಿರುವ ಬಗ್ಗೆ ಕೇಳಿದಾಗ, ಎನ್‌ಡಿಎ ಮೈತ್ರಿಯಲ್ಲಿ ಇರುವ ಕಾರಣ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು. ಸಂಪುಟ ಪುನಾರಚನೆ ಬಗ್ಗೆ ಕೇಳಿದಾಗ, ಇದರ ಬಗ್ಗೆ ಮುಖ್ಯಮಂತ್ರಿಯವರನ್ನು ಕೇಳಬೇಕು ಎಂದರು. ಇನ್ನೂ ಬಿಜೆಪಿ ಕಾರ್ಯಕರ್ತ ಪೊನ್ನಣ್ಣ ಅವರ ಹೆಸರನ್ನು ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಕೇಳಿದಾಗ, ಇದರ ಬಗ್ಗೆ ಮಾಹಿತಿಯಿಲ್ಲ, ತಿಳಿದುಕೊಂಡು ಹೇಳುತ್ತೇನೆ ಎಂದರು.

  • ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡ್ತಿರೋ ಬಿಜೆಪಿಯವ್ರು ರೈತ ವಿರೋಧಿಗಳು: ಡಿಕೆಶಿ

    ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡ್ತಿರೋ ಬಿಜೆಪಿಯವ್ರು ರೈತ ವಿರೋಧಿಗಳು: ಡಿಕೆಶಿ

    ಬೆಂಗಳೂರು: ದರ ಏರಿಕೆ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಬಿಜೆಪಿಯವರು ರೈತರ ವಿರೋಧಿಗಳು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾವು ವಿದ್ಯುತ್ ಬೆಲೆ ಕಡಿಮೆ ಮಾಡಿದ್ದೇವೆ. ಅದರ ಬಗ್ಗೆ ಮಾತಾಡ್ತಿಲ್ಲ ಬಿಜೆಪಿಯವರು. ಬಿಜೆಪಿ ರೈತರ ವಿರೋಧಿ. ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲೇ ಕಡಿಮೆ ಇದೆ. ಇನ್ನೂ ಕಡಿಮೆ ಇದೆ. ಇವತ್ತು ನೀರಿನ ಬೆಲೆ ವಿಧಿ ಇಲ್ಲದೆ ಹೆಚ್ಚಿಗೆ ಮಾಡುವ ಅನಿವಾರ್ಯತೆ ಇದೆ. ತುಂಬಾ ಹೆಚ್ಚು ಮಾಡಲು ಕೂಡ ಆಗೋದಿಲ್ಲ. ಬಡವರಿಗೆ ಸಮಸ್ಯೆ ಆಗುತ್ತೆ. ಬೋರ್ಡ್ ತೀರ್ಮಾನ ತೆಗೆದುಕೊಳ್ಳುವುದಕ್ಕೆ ತಿಳಿಸಿದ್ದೇನೆ. ಒಂದು ಸಾವಿರ ಕೋಟಿ ರೂಪಾಯಿ ನೀರಿನಿಂದ ಲಾಸ್ ಆಗ್ತಿದೆ. ಮುಂದಿನ ಫೇಸ್‌ಗೆ ಅನುಕೂಲವಾಗಲು ನಾವು ಈ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾಳೆಯಿಂದ ದುನಿಯಾ ದುಬಾರಿ – ಹಾಲು, ಮೊಸರು ದುಬಾರಿ.. ಕಸಕ್ಕೂ ಕಾಸು, ಯಾವುದಕ್ಕೆ ಎಷ್ಟು ದರ ಹೆಚ್ಚಳ?

    ಕಸದ ವಿಚಾರವಾಗಿ ನಾವು ದರ ಏರಿಕೆ ಮಾಡಿಲ್ಲ. ಅವರೇ ಮಾಡಿದ್ದ ಕಾನೂನು. ಕೇಂದ್ರ ಸರ್ಕಾರ ಇಡೀ ದೇಶಕ್ಕೆ ಸೂಚನೆ ಕೊಟ್ಟಿದೆ. 2022 ರಲ್ಲಿ ಬಿಜೆಪಿಯವರು ಇದನ್ನು ಚಾಲ್ತಿಗೆ ತಂದಿದ್ದರು. ಅವರು ದರ ಏರಿಕೆ ಮಾಡಿರೋಕ್ಕಿಂತ ನಾನು ಕಡಿಮೆ ಮಾಡಿದ್ದೇನೆ. ನಮಗೂ ಜನರ ನೋವು-ನಲಿವು ಅರ್ಥವಾಗುತ್ತೆ. ಅವರು ರಾಜಕಾರಣ ಮಾಡಬೇಕು ಮಾಡುತ್ತಿದ್ದಾರೆ ಎಂದು ಬಿಜೆಪಿಗೆ ಟಾಂಗ್‌ ಕೊಟ್ಟಿದ್ದಾರೆ.

    ಸರ್ಕಾರ ಹಾಗೂ ದರ ಏರಿಕೆ ವಿರುದ್ಧ ಕುಮಾರಸ್ವಾಮಿ ಟ್ವೀಟ್‌ ವಿಚಾರ ಅವರದು ಏನೇನಿದೆ ಅಂತ ದಿನ ಮಾಡಲಿ ಬೇಕಾದರೆ. ನಾವು ಜನರಿಗೆ ಒಳ್ಳೆ ಆಡಳಿತ ಕೊಡಬೇಕು. ಸ್ಥಳೀಯ ಸಂಸ್ಥೆಗಳು ನಡೆಯಬೇಕಲ್ವಾ? ಸಂಬಳ ಕೊಟ್ಟಿಲ್ಲ ಅಂದರೆ ಸಂಬಳ ಕೊಟ್ಟಿಲ್ಲ ಅಂತಾರೆ. ಹಾಲಿನ ಯೂನಿಯನ್ ಅಧ್ಯಕ್ಷರೇ ಕುಮಾರಸ್ವಾಮಿ ಅವರ ಸಹೋದರರು ಅಲ್ವ. ಅವರ ಕೈಲಾಗುವಂತಿದ್ದರೆ ನಾಲ್ಕು ರೂಪಾಯಿ ಕಡಿಮೆ ಕೊಡುವಂತೆ ಹೇಳಿ. ರೈತರಿಗೆ ಅನುಕೂಲ ಮಾಡಲು ಅನಿವಾರ್ಯದಿಂದ ಏರಿಕೆ ಮಾಡಲಾಗಿದೆ. ನಾವು ಹಣವನ್ನು ಪಡೆದು ಸರ್ಕಾರ ಉಪಯೋಗಿಸುತ್ತಿಲ್ಲ. ರೈತರಿಗೆ ಅನುಕೂಲ ಮಾಡಬೇಕು ಎಂಬುದು ನಮ್ಮ ನಿರ್ಧಾರ ಎಂದಿದ್ದಾರೆ. ಇದನ್ನೂ ಓದಿ: ಇಂದಿನಿಂದ ಹಾಲಿನ ದರ ಏರಿಕೆ – ಬೆಳಗ್ಗೆ ಸಪ್ಲೈ ಆದ ಹಾಲಿನಲ್ಲಿ ಪರಿಷ್ಕೃತ ದರ ಜಾರಿ ಆಗಿಲ್ಲ

  • ರಮೇಶ್ ಜಾರಕಿಹೊಳಿ ಸಿಡಿ ಮಾಡಿಸಿದ್ದು ವಿಜಯೇಂದ್ರ & ಡಿಕೆಶಿ, ಹನಿಟ್ರ್ಯಾಪ್‌ ಕೇಸ್‌ನಲ್ಲೂ ಇದೇ ಟೀಂ ಇದೆ – ಯತ್ನಾಳ್‌ ಬಾಂಬ್‌

    ರಮೇಶ್ ಜಾರಕಿಹೊಳಿ ಸಿಡಿ ಮಾಡಿಸಿದ್ದು ವಿಜಯೇಂದ್ರ & ಡಿಕೆಶಿ, ಹನಿಟ್ರ್ಯಾಪ್‌ ಕೇಸ್‌ನಲ್ಲೂ ಇದೇ ಟೀಂ ಇದೆ – ಯತ್ನಾಳ್‌ ಬಾಂಬ್‌

    ಬೆಂಗಳೂರು: ಡಿಕೆ ಶಿವಕುಮಾರ್‌ ಜೊತೆ ಸೇರಿ ರಮೇಶ್‌ ಜಾರಕಿಹೊಳಿ ಅವರ ಸಿಡಿ ಮಾಡಿಸಿದ್ದೇ ವಿಜಯೇಂದ್ರ (BY Vijayendra) ಅಂತ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಹೊಸ ಬಾಂಬ್‌ ಸಿಡಿಸಿದ್ದಾರೆ.

    ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ ಅವರು, ಬಿಜೆಪಿಯಿಂದ ಉಚ್ಛಾಟನೆಗೊಂಡ ಬಳಿಕ ಮತ್ತೆ ಬಿಎಸ್‌ವೈ ಕುಟುಂಬದ ವಿರುದ್ಧ ಗುಡುಗಿದ್ದಾರೆ. ನಾನು ಮನೆಯಲ್ಲಿ ಸುಮ್ಮನೆ ಕೂರಲ್ಲ. ಬೀದರ್ ನಿಂದ ಚಾಮರಾಜನಗರ, ಕೋಲಾರದಿಂದ ಕೊಡಗಿನವರೆಗೆ ಪ್ರವಾಸ ಮಾಡ್ತೇನೆ. ಇವರ ವಿರುದ್ಧ ಹೋರಾಟ ನಿಲ್ಲಿಸಲ್ಲ, ಹಿಂದೂಗಳ ರಕ್ಷಣೆಗೆ ರಾಜ್ಯ ಪ್ರವಾಸ. ಅಪ್ಪಮಕ್ಕಳ ಕುಟುಂಬವನ್ನು ರಾಜಕೀಯದಿಂದ ದೂರ ಮಾಡ್ತೇನೆ ಶಪಥ ಮಾಡಿದ್ದಾರೆ. ಇದನ್ನೂ ಓದಿ: ರಾಜೇಂದ್ರ ಹತ್ಯೆಗೆ ಸುಪಾರಿ ಕೇಸ್ – ಪ್ರಭಾವಿಯನ್ನ ನೀವೇ ಹುಡುಕಿ, ನಿಮಗೆ ಸಿಕ್ಕೇ ಸಿಕ್ತಾರೆ: ಸತೀಶ್‌ ಜಾರಕಿಹೊಳಿ

    ದೆಹಲಿಯಲ್ಲಿ ಇರುವ ನಮ್ಮ ಸಂಸದರು ಎಲ್ರೂ ವಿಜಯೇಂದ್ರ ವಿರುದ್ಧ ಇದ್ದಾರೆ, ವಿಜಯೇಂದ್ರನನ್ನ ತೆಗೀರಿ ಅಂತಿದ್ದಾರೆ. ರಮೇಶ್ ಜಾರಕಿಹೊಳಿ ಸಿಡಿ ಹಗರಣ ಮಾಡಿದ್ದೇ ವಿಜಯೇಂದ್ರ ಮತ್ತು ಡಿಕೆಶಿ (DK Shivakumar). ಡಿಕೆಶಿ ಜೊತೆ ಸೇರಿ ವಿಜಯೇಂದ್ರ ರಮೇಶ್ ಜಾರಕಿಹೊಳಿ ಸಿಡಿ ಮಾಡಿಸಿದ್ರು. ಈಗ ಎದ್ದಿರುವ ಹನಿಟ್ರ‍್ಯಾಪ್ ಹಗರಣದಲ್ಲೂ ಇದೇ ಟೀಮ್ ಇದೆ ಅಂತ ಬಾಂಬ್‌ ಸಿಡಿಸಿದ್ದಾರೆ.  ಇದನ್ನೂ ಓದಿ: ಲಿಂಗಾಯತರು ಯಡಿಯೂರಪ್ಪ ಜೊತೆಗಿಲ್ಲ, ಜನರೇ ಹೊಸ ಪಕ್ಷ ಕಟ್ಟಲು ಸಲಹೆ ಕೊಡ್ತಿದ್ದಾರೆ – ಯತ್ನಾಳ್‌

    ನನ್ನ ಉಚ್ಛಾಟನೆಗೆ ಒತ್ತಡ ಹಾಕಿದ್ದು ವಿಜಯೇಂದ್ರ:
    ಮುಂದುವರಿದು ಮಾತನಾಡಿದ ಯತ್ನಾಳ್‌, ಯಡಿಯೂರಪ್ಪ, ಮಗ ವಿಜಯೇಂದ್ರ ಕೂಡಿ ನನ್ನ ಉಚ್ಚಾಟನೆಗೆ ಹೈಕಮಾಂಡ್ ಮೇಲೆ ಒತ್ತಡ ಹಾಕಿಸಿದ್ರು. ಉಚ್ಚಾಟನೆ ಮಾಡಿದ್ರೆ ಬಿಜೆಪಿ ಬಿಟ್ ಹೋಗ್ತಾರೆ ಅಂತ ಮಾಡಿಸಿದ್ದಾರೆ. ವೀರಶೈವ ಲಿಂಗಾಯತ ಸಮುದಾಯ ಯಡಿಯೂರಪ್ಪ, ವಿಜಯೇಂದ್ರ ಜೊತೆಯಿಲ್ಲ. ಮಹಾಭಾರತ, ರಾಮಾಯಣ ಕಾಲದಿಂದಲೂ ಈಥರದ ಅನ್ಯಾಯ ನಡೆದುಕೊಂಡು ಬರ್ತಿದೆ. ಆದ್ರೆ ನಾನು ಉಚ್ಛಾಟನೆ ಮರುಪರಿಶೀಲನೆಗೆ ಮನವಿ ಮಾಡಲ್ಲ, ನಮ್ಮ ತಂಡದವ್ರು ಮನವಿ ಮಾಡ್ತಾರೆ ಅಂತ ಹೇಳಿದ್ದಾರೆ.

    ಈ ಹಿಂದೆ ಅನಂತಕುಮಾರ್ ಹೆಗಡೆ, ಈಶ್ವರಪ್ಪಗೂ ಇದೇ ಅನ್ಯಾಯ ಆಯ್ತು. ಯಡಿಯೂರಪ್ಪ ಚೇಲಾನನ್ನ ನಿಲ್ಲಿಸಿ, ಸಿ.ಟಿ ರವಿಯನ್ನ ಸೋಲಿಸಿದ್ರು. ಈಗ ಹಿಂದೂ ನಾಯಕರನ್ನು ತುಳಿಯುವ ಕೆಲಸ ಆಗ್ತಿದೆ. ಉಚ್ಛಾಟನೆ ಯಿಂದ ಮುಜುಗರ ಆಗಿಲ್ಲ, ಹಿನ್ನಡೆ ಆಗಿಲ್ಲ. ಇದಕ್ಕೆ ಕಾರಣಕರ್ತರಾದವರು ನಾಶ ಆಗ್ತಾರೆ. ಯಾರ ಮನವರಿಕೆಯೂ ನಾನು ಮಾಡಲ್ಲ ಅಂತ ಯತ್ನಾಳ್‌ ಕೆಂಡಾಮಂಡಲವಾಗಿದ್ದಾರೆ.  ಇದನ್ನೂ ಓದಿ: ಉಚ್ಚಾಟಿತ ಶಾಸಕ ಯತ್ನಾಳ್ ರಕ್ಷಣೆಗೆ ಧಾವಿಸಿದ ಸಂಗಡಿಗರು; ಬೆಂಗಳೂರಲ್ಲಿ ಭಿನ್ನರಿಂದ ಯತ್ನಾಳ್ ಜತೆ ಹೈವೋಲ್ಟೇಜ್ ಸಭೆ

  • ಜಿಲ್ಲಾ ಅಧ್ಯಕ್ಷರಿಗೆ ಶಕ್ತಿ ತುಂಬಲು ಎಐಸಿಸಿಯಿಂದ ಕಾರ್ಯಕ್ರಮ: ಡಿ.ಕೆ ಶಿವಕುಮಾರ್

    ಜಿಲ್ಲಾ ಅಧ್ಯಕ್ಷರಿಗೆ ಶಕ್ತಿ ತುಂಬಲು ಎಐಸಿಸಿಯಿಂದ ಕಾರ್ಯಕ್ರಮ: ಡಿ.ಕೆ ಶಿವಕುಮಾರ್

    – ಕುಮಾರಸ್ವಾಮಿಗೆ ಹಾಲು ಒಕ್ಕೂಟ ವ್ಯವಸ್ಥೆ ಬಗ್ಗೆ ಗೊತ್ತಿಲ್ಲ ಎಂದ ಡಿಸಿಎಂ

    ನವದೆಹಲಿ: ಎಐಸಿಸಿಯು (AICC) ಪಕ್ಷದ ಜಿಲ್ಲಾ ಅಧ್ಯಕ್ಷರಿಗೆ ಶಕ್ತಿ ತುಂಬಿ ಸಂಘಟನೆಗೆ ಹೊಸ ಸ್ವರೂಪ ನೀಡಲು ಮುಂದಾಗಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ತಿಳಿಸಿದರು.

    ದೆಹಲಿಯಲ್ಲಿ ನಡೆಯುತ್ತಿರುವ ಜಿಲ್ಲಾಧ್ಯಕ್ಷರ ಸಭೆ ವೇಳೆ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ ಶಿವಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ (Rahul Gandhi), ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಸೇರಿ ಎಲ್ಲಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸಭೆ ನಡೆಸಿದ್ದಾರೆ. ಪಕ್ಷವು ಸರ್ಕಾರಕ್ಕಿಂತ ದೊಡ್ಡದು, ಹೀಗಾಗಿ ಹೈಕಮಾಂಡ್ ನಾಯಕರು ಜಿಲ್ಲಾ ಅಧ್ಯಕ್ಷರಿಗೆ ವಿಶೇಷ ಕಾರ್ಯಕ್ರಮ ನೀಡಿದ್ದಾರೆ ಎಂದರು.

    ಈ ಸಭೆ ವೇಳೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮಾಡುವ ಸಂದರ್ಭದಲ್ಲಿ ನಿಮ್ಮ ಅಭಿಪ್ರಾಯ ಪಡೆಯಲಾಯಿತೇ?, ನಿಮ್ಮನ್ನು ವಿಶ್ವಾಸಕ್ಕೆ ಪಡೆದರೆ ಎಂದು ಕೇಳಿದ್ದಾರೆ. ಅದಕ್ಕಾಗಿ ಜಿಲ್ಲಾ ಅಧ್ಯಕ್ಷರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ನನ್ನ ಕೊಲೆಗೆ 70 ಲಕ್ಷ ಸುಪಾರಿ ಕೊಡಲಾಗಿದೆ – ತುಮಕೂರು ಎಸ್ಪಿಗೆ ಸಚಿವ ರಾಜಣ್ಣ ಪುತ್ರ ದೂರು

    ಸದಸ್ಯತ್ವ ಅಭಿಯಾನ ಹೇಗೆ ಮಾಡಬೇಕು? ಮತದಾರರ ಪಟ್ಟಿ ಪರಿಶೀಲನೆ, ಬಿಎಲ್‌ಓಗಳ ನೇಮಕ, ಸಾಮಾಜಿಕ ಜಾಲತಾಣಗಳ ಪರಿಣಾಮ ಬಳಕೆ, ಪಕ್ಷಕ್ಕೆ ದೇಣಿಗೆ ಸಂಗ್ರಹ ಸೇರಿದಂತೆ ಅನೇಕ ಮಾರ್ಗದರ್ಶನ ನೀಡಿದರು. ಮುಂದೆ ಗುಜರಾತಿನಲ್ಲಿ ನಡೆಯಲಿರುವ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಶಕ್ತಿ ತುಂಬುವ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಸಂವಿಧಾನ ಬದಲಾವಣೆ ಮಾತು ಆಡಿರೋ ಡಿಕೆಶಿ ರಾಜೀನಾಮೆ ಕೊಡೋವರೆಗೂ ಹೋರಾಟ – ಅನ್ನದಾನಿ

    ಜಿಲ್ಲಾ ಉಸ್ತುವಾರಿ ಸಚಿವರು, ತಮ್ಮ ಉಸ್ತುವಾರಿ ಜಿಲ್ಲೆಗಳಿಗೆ ಭೇಟಿ ನೀಡಿದಾಗ ಅಲ್ಲಿನ ಕಾಂಗ್ರೆಸ್ ಕಚೇರಿಗೆ ಹೋಗಿ ಕಾರ್ಯಕರ್ತರನ್ನು ಭೇಟಿ ಮಾಡಬೇಕು. ಜಿಲ್ಲಾ ಪ್ರವಾಸ ಮಾಡುವಾಗ ಜಿಲ್ಲಾ ಅಧ್ಯಕ್ಷರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕು ಎಂದು ಸೂಚನೆ ನೀಡಿದರು. ಜಿಲ್ಲಾ ಅಧ್ಯಕ್ಷರು ಕೂಡ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದು, ನೀವು ಯಾರ ಮೇಲೂ ಅವಲಂಬಿತರಾಗಬೇಡಿ ನಾವು ನಿಮಗೆ ರಕ್ಷಣೆ ನೀಡುವುದಾಗಿ ಧೈರ್ಯ ತುಂಬಿದರು. ಪಕ್ಷ ಸಂಘಟನೆಗೆ ಹೊಸ ಸ್ವರೂಪ ನೀಡಲು ಮಲ್ಲಿಕಾರ್ಜುನ ಖರ್ಗೆ ಅವರು ಕೈಗೊಂಡಿರುವ ಹೊಸ ಕ್ರಮಗಳನ್ನು ನಾನು ಸ್ವಾಗತಿಸುತ್ತೇನೆ ಎಂದರು. ಇದನ್ನೂ ಓದಿ: ಹಾಲಿನ ದರ ಏರಿಕೆ ಸರ್ಕಾರದ ಆರನೇ ಭಾಗ್ಯ: ಮಹೇಶ್ ಟೆಂಗಿನಕಾಯಿ

    ಕುಮಾರಸ್ವಾಮಿಗೆ ಹಾಲು ಒಕ್ಕೂಟ ವ್ಯವಸ್ಥೆ ಬಗ್ಗೆ ಗೊತ್ತಿಲ್ಲ:
    ಹಾಲಿನ ದರ ಏರಿಕೆ ಹೆಚ್ಚಳ ವಿರೋಧಿಸಿ, ಇದು ಈಸ್ಟ್ ಇಂಡಿಯಾ ಸರ್ಕಾರ ಎಂಬ ಕುಮಾರಸ್ವಾಮಿ ಟೀಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಕುಮಾರಸ್ವಾಮಿ ಅವರು ಏನಾದರೂ ಟೀಕೆ ಮಾಡಲಿ. ರೈತರು ಬದುಕಬೇಕಲ್ಲವೇ? ಅವರಿಗೆ ಕಾಳಜಿ ಇದ್ದರೆ, ಹಸುಗಳ ಮೇವಿನ ಬೆಲೆ ಕಡಿಮೆ ಮಾಡಿಸಲಿ. ಜಿಎಸ್‌ಟಿ, ಇಂಧನ ತೈಲ ಬೆಲೆ ಕಡಿಮೆ ಮಾಡಿಸಲಿ ಎಂದು ತಿರುಗೇಟು ನೀಡಿದರು.

    ದರ ಹೆಚ್ಚಳದ ಹಣ ರೈತರಿಗೆ ಹೋಗುವುದಿಲ್ಲ, ಸರ್ಕಾರಕ್ಕೆ ಹೋಗಲಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಸರ್ಕಾರಕ್ಕೆ ಹೇಗೆ ಹೋಗುತ್ತದೆ? ಕುಮಾರಸ್ವಾಮಿ ಅವರಿಗೆ ಹಾಲು ಒಕ್ಕೂಟದ ವ್ಯವಸ್ಥೆ ಬಗ್ಗೆ ಗೊತ್ತೇ ಇಲ್ಲ. ಈ ಬಗ್ಗೆ ಕುಮಾರಸ್ವಾಮಿ ಅವರು ತಮ್ಮ ಸಹೋದರನ ಬಳಿ ಮಾಹಿತಿ ಪಡೆಯಲಿ ಎಂದು ಹರಿಹಾಯ್ದರು.

    ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಸಂಬಂಧಿಸಿದಂತೆ ಪ್ರಿಯಾಂಕಾ ಗಾಂಧಿ ಅವರು ಪತ್ರ ಬರೆದಿರುವ ಬಗ್ಗೆ ಕೇಳಿದಾಗ, ನಾವು ಈ ಪತ್ರ ನೋಡುತ್ತೇವೆ, ಪರಿಶೀಲನೆ ಮಾಡಿ, ಚರ್ಚಿಸುತ್ತೇವೆ. ಆನಂತರ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: 46 ವರ್ಷದ ವ್ಯಕ್ತಿಯ ಮರ್ಮಾಂಗದಲ್ಲಿ ಸಿಲುಕಿದ ವಾಷರ್ – ಅಗ್ನಿಶಾಮಕ ಸಿಬ್ಬಂದಿ ನೆರವು ಕೋರಿದ ವೈದ್ಯರು 

  • ಸಂವಿಧಾನ ಬದಲಾವಣೆ ‌ಹೇಳಿಕೆಗೆ ಡಿಕೆಶಿ ದೇಶದ, ರಾಜ್ಯದ ಕ್ಷಮೆ ಕೇಳಿ, ರಾಜೀನಾಮೆ ಕೊಡ್ಬೇಕು – ಅನ್ನದಾನಿ

    ಸಂವಿಧಾನ ಬದಲಾವಣೆ ‌ಹೇಳಿಕೆಗೆ ಡಿಕೆಶಿ ದೇಶದ, ರಾಜ್ಯದ ಕ್ಷಮೆ ಕೇಳಿ, ರಾಜೀನಾಮೆ ಕೊಡ್ಬೇಕು – ಅನ್ನದಾನಿ

    – ಕಾಂಗ್ರೆಸ್‌ನಿಂದ 99 ಬಾರಿ ಸಂವಿಧಾನ ತಿದ್ದುಪಡಿ ಆಗಿದೆ ಎಂದ ಮಾಜಿ ಶಾಸಕ

    ಬೆಂಗಳೂರು: ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ (Muslims 4% Reservation) ಕೊಡಲು ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದಿದ್ದು ಡಿಸಿಎಂ ಡಿಕೆಶಿವಕುಮಾರ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ದೇಶದ, ರಾಜ್ಯದ ಜನರ ಕ್ಷಮೆ ಕೇಳಬೇಕು ಅಂತ ಜೆಡಿಎಸ್ ಎಸ್ಸಿ ಘಟಕದ ಅಧ್ಯಕ್ಷ, ಮಾಜಿ ಶಾಸಕ ಅನ್ನದಾನಿ (K. Annadani) ಆಗ್ರಹಿಸಿದ್ದಾರೆ‌.

    ಇಲ್ಲಿನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಮಿತ್ ಶಾ (Amit Shah) ಅವರು ಅಂಬೇಡ್ಕರ್ ಬಗ್ಗೆ ಮಾತಾಡಿದ್ರು ಅಂತ ಕಾಂಗ್ರೆಸ್ (Congress) ಅವರು ದೊಡ್ಡ ಆಂದೋಲನ ಮಾಡಿದ್ರು. ಈಗ ಡಿಸಿಎಂ ಡಿಕೆ ಶಿವಕುಮಾರ್ ಅವರೇ ಸಂವಿಧಾನ ಬದಲಾವಣೆ ಮಾಡೋ ಮಾತುಗಳನ್ನಾಡಿದ್ದಾರೆ. ಯಾಕೆ ಅವರ ಮೇಲೆ ಕ್ರಮ ಇಲ್ಲ ಅಂತ ಕಾಂಗ್ರೆಸ್ ಹೈಕಮಾಂಡ್‌ಗೆ ಪ್ರಶ್ನೆ ಕೇಳಿದ್ರು. ಇದನ್ನೂ ಓದಿ: ಹನಿಟ್ರ್ಯಾಪ್‌ ಪ್ರಕರಣ ತನಿಖೆಗೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿದ ಸುಪ್ರೀಂ

    ರಾಹುಲ್‌ ಗಾಂಧಿ ಅವರು ಸಂವಿಧಾನದ ಪುಸ್ತಕ ಹಿಡಿದು ಪ್ರಮಾಣ ವಚನ ಸ್ವೀಕಾರ ಮಾಡಿದ್ರು. ಸಂವಿಧಾನ ರಕ್ಷಣೆ ನಾವೇ ಮಾಡೋದು ಅಂದರು‌. ಈಗ ಡಿಕೆ ಶಿವಕುಮಾರ್ ಸಂವಿಧಾನ ಬದಲಾವಣೆ ಮಾಡ್ತೀನಿ ಅಂದರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸುಮ್ಮನೆ ಇದ್ದಾರೆ. ಡಿಕೆಶಿ ಹೇಳಿಕೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಮಾತಾಡಬೇಕು ಅಂತ ಆಗ್ರಹ ಮಾಡಿದ್ರು. ಇದನ್ನೂ ಓದಿ: ಹಿಂದೂಗಳು ಸುರಕ್ಷಿತವಾಗಿದ್ದರೆ, ಮುಸ್ಲೀಮರೂ ಸುರಕ್ಷಿತ – ಯೋಗಿ ಆದಿತ್ಯನಾಥ್‌

    ಕಾಂಗ್ರೆಸ್ ನವರ ಮನಸು ಕೊಳಕಾಗಿದೆ. ಅಂಬೇಡ್ಕರ್ ವಿರೋಧಿಗಳು ಕಾಂಗ್ರೆಸ್ ಅವರು. ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್ ಅವರು. ಇಂದಿರಾಗಾಂಧಿ ಸಂವಿಧಾನ ವಿರೋಧಿಸಿ ತುರ್ತು ಪರಿಸ್ಥಿತಿಯ ಘೋಷಣೆ ಮಾಡಿದ್ರು ಅಂತ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ‌ನಡೆಸಿದರು. ಇದನ್ನೂ ಓದಿ: ದುಬೈ ಮರಳುಗಾಡಿನಲ್ಲಿ ನಟಿ ಫೋಟೋಶೂಟ್- ಬಾಲಿವುಡ್ ಬ್ಯೂಟಿಯಂತೆ ಮಿಂಚಿದ ಇಶಿತಾ

    ಡಿಸಿಎಂ ಆಗೋಕೆ ಸಂವಿಧಾನ ಕಾರಣ:
    ಡಿಕೆಶಿ ಡಿಸಿಎಂ ಆಗೋಕೆ ಸಂವಿಧಾನ ಕಾರಣ. 99 ಬಾರಿ ಸ್ವಾತಂತ್ರ್ಯ ಬಂದಾಗಿನಿಂದ ಸಂವಿಧಾನ ತಿದ್ದುಪಡಿ ಮಾಡಿರೋದು ಕಾಂಗ್ರೆಸ್‌ನವರು. ನರೇಂದ್ರ ಮೋದಿ ಅವರು ಒಂದೇ ಒಂದು ಅರ್ಟಿಕಲ್ ತಿದ್ದಿಲ್ಲ. ನೆಹರು, ಇಂದಿರಾಗಾಂಧಿ, ಮನಮೋಹನ್ ಸಿಂಗ್ ಸಂವಿಧಾನ ತಿದ್ದುಪಡಿ ಮಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಅವರೇ ಏನ್ ಮಾಡ್ತಿದ್ದೀರಾ? ಡಿಕೆ ಶಿವಕುಮಾರ್ ಹೇಳಿಕೆ ಬಗ್ಗೆ ಮಾತಾಡಿ, ಮುಸ್ಲಿಮರಿಗೆ ಮೀಸಲಾತಿ ‌ಕೊಡಲು ಸಂವಿಧಾನ ಬದಲಾವಣೆ ಮಾಡ್ತೀನಿ ಅಂತ ಹೇಳಿದ್ದಾರೆ. ಈ ಬಗ್ಗೆ ಮಾತಾಡಿ ಅಂತ ಪ್ರಿಯಾಂಕ್ ಖರ್ಗೆಗೆ ಆಗ್ರಹ ಮಾಡಿದ್ರು.

    ಡಿಕೆಶಿ ಹೇಳಿಕೆ‌ ಖಂಡಿಸಿ ಜೆಡಿಎಸ್ SC ಘಟಕದಿಂದ ಪ್ರತಿಭಟನೆ ಮಾಡಲಾಗುತ್ತದೆ. ಶುಕ್ರವಾರ ರಾಜ್ಯಾದ್ಯಂತ ಹೋರಾಟ ಮಾಡ್ತೀವಿ. ಡಿಕೆ ಶಿವಕುಮಾರ್ ರಾಜೀನಾಮೆ ಕೊಡಬೇಕು. ಕೂಡಲೇ ತಮ್ಮ ‌ಹೇಳಿಕೆ ವಾಪಸ್ ಪಡೆದು ರಾಜೀನಾಮೆ ಕೊಡಬೇಕು ಅಂತ ಆಗ್ರಹ ಮಾಡಿದ್ರು. ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಲಾವಣೆ ಬಗ್ಗೆ ಮಾತಾಡಿದ್ದಕ್ಕೆ ಟಿಕೆಟ್ ಬಿಜೆಪಿ ಕೊಡದೇ ಇರೋದು ನಾವು ಒಪ್ಪುತ್ತೇವೆ. ಬಿಜೆಪಿ ಶಿಸ್ತುಕ್ರಮ ನಾವು ಸ್ವಾಗತ ಮಾಡ್ತೀನಿ. ಅದೇ ರೀತಿ ಡಿಕೆಶಿವಕುಮಾರ್ ವಿರುದ್ದ ಮಲ್ಲಿಕಾರ್ಜುನ ಖರ್ಗೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಅಂತ ಆಗ್ರಹ ಮಾಡಿದ್ರು. ಇದನ್ನೂ ಓದಿ: ಮಹಾನಗರ ಪಾಲಿಕೆಯ ಗಾರ್ಬೇಜ್ ರೀತಿ ರಾಜ್ಯ ಸರ್ಕಾರದ ಆಡಳಿತ: ಛಲವಾದಿ ನಾರಾಯಣಸ್ವಾಮಿ ಕಿಡಿ

  • ಸಂವಿಧಾನ ಬದಲಾವಣೆ ಮಾಡಿದ್ರೆ ರಕ್ತಕ್ರಾಂತಿ ಅಂದಿದ್ದ ಸಿದ್ದರಾಮಯ್ಯನವರ ರಕ್ತ ಈಗ ತಣ್ಣಗೆ ಇದ್ಯಾ: ಕಾರಜೋಳ

    ಸಂವಿಧಾನ ಬದಲಾವಣೆ ಮಾಡಿದ್ರೆ ರಕ್ತಕ್ರಾಂತಿ ಅಂದಿದ್ದ ಸಿದ್ದರಾಮಯ್ಯನವರ ರಕ್ತ ಈಗ ತಣ್ಣಗೆ ಇದ್ಯಾ: ಕಾರಜೋಳ

    ನವದೆಹಲಿ: ಕಾಂಗ್ರೆಸ್ (Congress) ನಾಯಕರು ಯಾವತ್ತಿಗೂ ಸಂವಿಧಾನದ ವಿರೋಧಿಗಳು ಅವರು ಹಿಂದಿನಿಂದಲೂ ಬಾಬಾ ಸಾಹೇಬ್ ಅಂಬೇಡ್ಕರ್ ವಿರೋಧಿಗಳಾಗಿದ್ದಾರೆ. ತಮ್ಮ ಕುರ್ಚಿ ಮತ್ತು ಮತ ಬ್ಯಾಂಕ್ ಆಸೆಗೆ ಏನನ್ನು ಬೇಕಾದರೂ ತಿದ್ದುಪಡಿ ಮಾಡುತ್ತಾರೆ ಎಂದು ಸಂಸದ ಗೋವಿಂದ ಕಾರಜೋಳ (Govinda Karajola) ಆಕ್ರೋಶ ವ್ಯಕ್ತಪಡಿಸಿದರು.

    ಡಿಸಿಎಂ ಡಿ.ಕೆ.ಶಿವಕುಮಾರ್ (D K Shivakumar) ಹೇಳಿಕೆ ಬಗ್ಗೆ ನವದೆಹಲಿಯಲ್ಲಿ ಮಾತನಾಡಿದ ಅವರು, ನಾವು ದಲಿತರ ಪರ, ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ಪರ ಎಂದು ಭಾಷಣ ಮಾಡುತ್ತಾರೆ. ಆದರೆ 75 ವರ್ಷದಲ್ಲಿ ದಲಿತರು ಉದ್ಧಾರ ಆಗುವಂತ ಕೆಲಸ ಮಾಡಲಿಲ್ಲ. ಶಿಕ್ಷಣಕ್ಕೆ ಮಹತ್ವ ಕೊಡಲಿಲ್ಲ. ಅಲ್ಪಸಂಖ್ಯಾತರಿಗೆ ಉದ್ಯೋಗ ಕೊಡಲಿಲ್ಲ ಎಂದರು. ಇದನ್ನೂ ಓದಿ: ತೆಲಂಗಾಣ ಸುರಂಗ ಕುಸಿತ – ತಿಂಗಳ ಬಳಿಕ ಮತ್ತೋರ್ವ ಕಾರ್ಮಿಕನ ಶವ ಪತ್ತೆ

    ಸಿಎಂ ಸಿದ್ದರಾಮಯ್ಯ (Siddaramaiah) ಅವರ ಸರ್ಕಾರ ಬಂಡಗೆಟ್ಟ ಮತ್ತು ಲಜ್ಜೆಗೆಟ್ಟ ಸರ್ಕಾರ. ಹನಿಟ್ರ‍್ಯಾಪ್ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ಆಗಿದೆ. ಮೂವರು ಮಂತ್ರಿಗಳು ಪ್ರಸ್ತಾಪಿಸಿದಾಗ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಬರಬೇಕಾಗಿತ್ತು. ಆಡಳಿತ ಮಾಡುವ ನೈತಿಕತೆಯನ್ನು ಸಿದ್ದರಾಮಯ್ಯ ಕಳೆದುಕೊಂಡಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ತೆಲಂಗಾಣ ಸುರಂಗ ಕುಸಿತ – ತಿಂಗಳ ಬಳಿಕ ಮತ್ತೋರ್ವ ಕಾರ್ಮಿಕನ ಶವ ಪತ್ತೆ

    ಬಿಜೆಪಿ ಕಾರ್ಯಕರ್ತ ಕೊಟ್ಟ ಸಂವಿಧಾನ ಬದಲಾವಣೆ ಹೇಳಿಕೆ ಬಗ್ಗೆ ದೊಡ್ಡ ಮಟ್ಟದ ಹೋರಾಟ ಮಾಡಿದ್ದೀರಿ. ಆಗ ಸಿದ್ದರಾಮಯ್ಯ ಬಳಸಿದ ಭಾಷೆ ಏನು? ಸಂವಿಧಾನ ಬದಲಾವಣೆ ಮಾಡಿದರೆ, ರಕ್ತಕ್ರಾಂತಿ ಆಗುತ್ತದೆ ಎಂದು ಹೇಳಿದ್ದರು. ಈಗ ಸಿದ್ದರಾಮಯ್ಯ ಅವರ ರಕ್ತ ತಣ್ಣಗೆ ಆಗಿದಿಯಾ ಕುದಿಯುತ್ತಿಲ್ಲವೇ? ಶಿವಕುಮಾರ್ ಹೇಳಿಕೆಗೆ ರಕ್ತ ಕ್ರಾಂತಿ ಆಗಬೇಕಿತ್ತು. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಅವರ ಹೇಳಿಕೆಯನ್ನು ಹೇಗೆ ಸಮರ್ಥನೆ ಮಾಡುತ್ತಿದ್ದಾರೆ ಎಂದು ದೂರಿದರು. ಇದನ್ನೂ ಓದಿ: ರೀಲ್ಸ್‌ ವಿವಾದ: ಬಿಡುಗಡೆಯಾಗಿದ್ದ ರಜತ್‌, ವಿನಯ್‌ರನ್ನು ಮತ್ತೆ ಬಂಧಿಸಿದ ಪೊಲೀಸರು

    ತಮ್ಮ ಕುರ್ಚಿ ಆಸೆಗೆ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಉತ್ತರ ಕೊಟ್ಟಿದ್ದಾರೆ ಅಷ್ಟೇ. ಅವರು ಸೋನಿಯಾ, ರಾಹುಲ್ ಗಾಂಧಿ (Rahul Gandhi) ಅವರನ್ನು ಖುಷಿಪಡಿಸಲು ಮಾತನಾಡುತ್ತಾರೆ. ನಿಜವಾಗಿಯೂ ಅವರು ದಲಿತರ ಪರವಾಗಿದ್ದರೆ, ತಕ್ಷಣವೇ ಡಿಕೆಶಿ ಬಳಿ ರಾಜೀನಾಮೆ ಕೇಳಬೇಕು ಎಂದು ಆಗ್ರಹಿಸಿದರು.

  • ಸಂವಿಧಾನ ತಿದ್ದುಪಡಿ ಹೇಳಿಕೆ ಡಿಕೆಶಿ ಬಂಡವಾಳ ಬಯಲು ಮಾಡಿದೆ: ಬಿವೈವಿ

    ಸಂವಿಧಾನ ತಿದ್ದುಪಡಿ ಹೇಳಿಕೆ ಡಿಕೆಶಿ ಬಂಡವಾಳ ಬಯಲು ಮಾಡಿದೆ: ಬಿವೈವಿ

    – ಮುಸ್ಲಿಮರ ಓಲೈಕೆಗಾಗಿ ಸಂವಿಧಾನ ವಿರೋಧಿ ನೀತಿ – ವಿಜಯೇಂದ್ರ ಕಿಡಿ

    ಕಲಬುರಗಿ: ಮೀಸಲಾತಿ ಸಂಬಂಧ ಸಂವಿಧಾನಕ್ಕೆ ತಿದ್ದುಪಡಿ ಮಾಡುವುದಾಗಿ ಹೇಳಿಕೆ ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್ (D K Shivakumar) ಅವರ ಬಂಡವಾಳ ಬಯಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B Y Vijayendra) ಟೀಕಿಸಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತದೆ ಎಂದು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆಶಿ ಸಹಿತ ರಾಹುಲ್ ಗಾಂಧಿ (Rahul Gandhi) ಅಪಪ್ರಚಾರ ಮಾಡಿದ್ದರು. ಆದರೆ, ಸ್ವಾತಂತ್ರ‍್ಯ ಬಂದ ನಂತರ ಕಾಂಗ್ರೆಸ್ ಅಧಿಕಾರವಧಿಯಲ್ಲಿಯೇ ಸಂವಿಧಾನದಲ್ಲಿ ಅತೀ ಹೆಚ್ಚು ತಿದ್ದುಪಡಿ ಮಾಡಲಾಗಿದೆ ಕಿಡಿಕಾರಿದರು. ಇದನ್ನೂ ಓದಿ: 9 ತಿಂಗಳ ನಂತರ ವಿಮಾನ ಹತ್ತಿದ ದರ್ಶನ್‌

    ಕೇವಲ ಅಲ್ಪಸಂಖ್ಯಾತರ ಓಲೈಕೆಗಾಗಿ ಕಾಂಗ್ರೆಸ್(Congress) ಪಕ್ಷದ ನಾಯಕರು ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳುತ್ತಾ ಬಂದಿದ್ದಾರೆ. ಇದರಿಂದ ಅಂಬೇಡ್ಕರ್ ಅವರಿಗೆ ಇವರು ಎಷ್ಟು ಗೌರವ ಕೊಡುತ್ತಾರೆ ಎಂಬುದು ಗೊತ್ತಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹೆಣ್ಣು ಮಗುವಿನ ತಂದೆಯಾದ ಕೆ.ಎಲ್. ರಾಹುಲ್, ಅತಿಯಾ

    ಸಿಎಂ ಹಾಗೂ ಡಿಸಿಎಂ ಅವರು ಮುಸ್ಲಿಮರ ಓಲೈಕೆಗಾಗಿ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಈ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ಸಂವಿಧಾನ ಮತ್ತು ಅಂಬೇಡ್ಕರ್ ಅವರ ಕುರಿತಾಗಿ ಅಪಾರವಾದ ಗೌರವ ಇರುವ ಕಾರಣಕ್ಕಾಗಿ ಯಾವುದೇ ಕಾರಣಕ್ಕೂ ಸಂವಿಧಾನ ತಿದ್ದುಪಡಿಗೆ ಅವಕಾಶ ನೀಡುವುದಿಲ್ಲ. ಹಾಗಾಗಿ, ತಾವು ಡಿಕೆಶಿ ಹೇಳಿಕೆಯನ್ನು ಖಂಡಿಸುವುದಾಗಿ ಹೇಳಿದರು. ಇದನ್ನೂ ಓದಿ: ಅತ್ಯಾಚಾರಕ್ಕೆ ಯತ್ನ – ಕಾಮುಕನಿಂದ ತಪ್ಪಿಸಿಕೊಳ್ಳಲು ಚಲಿಸುತ್ತಿದ್ದ ರೈಲಿಂದ ಜಿಗಿದ ಮಹಿಳೆ

    ಮೊದಲಿನಿಂದಲೂ ಈ ದೇಶದ ಶೋಷಿತ ಸಮುದಾಯದ ಮತಗಳನ್ನು ಕಾಂಗ್ರೆಸ್ ದುರುಪಯೋಗ ಮಾಡಿಕೊಳ್ಳುತ್ತಲೇ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಡಿಕೆಶಿ ಅವರು ನೀಡಿರುವ ಹೇಳಿಕೆ ಅವರ ಸ್ವಂತದ್ದಂತು ಅಲ್ಲ. ಅವರು ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯನವರ ಮನಸ್ಥಿತಿಯನ್ನು ಮಾತ್ರ ಬಯಲು ಮಾಡಿದ್ದಾರೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ನಾನು ಸಿಎಂ ಆದ್ರೆ ಸಾವಿರ ಜೆಸಿಬಿ ಆರ್ಡರ್, ಪ್ರತಿ ತಾಲೂಕಿಗೆ 35 ಇಡ್ತೀನಿ: ಯತ್ನಾಳ್‌

    ಬಿಜೆಪಿ ಯಾವತ್ತೂ ಅಂಬೇಡ್ಕರ್ ಮತ್ತು ಅವರು ರಚಿಸಿರುವ ಸಂವಿಧಾನಕ್ಕೆ ಗೌರವ ಕೊಡುತ್ತದೆ. ಕಾಂಗ್ರೆಸಿನವರು ಸಂವಿಧಾನವನ್ನು ತಮ್ಮ ಚಟಕ್ಕೆ ಬದಲಾವಣೆ ಮಾಡುವುದಾಗಿ ಹೇಳುತ್ತಿದ್ದಾರೆಯೇ ಹೊರತು. ಅದು ಅಸಾಧ್ಯ. ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷದ ನಾಯಕರು ಯಾವ ಹಂತಕ್ಕೂ ಇಳಿಯಬಲ್ಲರು ಎಂಬುದನ್ನು ಇದು ಸಾಬೀತುಪಡಿಸಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ:ನ್ಯಾ.ಯಶವಂತ್ ವರ್ಮಾ ನ್ಯಾಯಾಂಗ ಕರ್ತವ್ಯ ನಿರ್ವಹಣೆ ಮಾಡುವಂತಿಲ್ಲ: ದೆಹಲಿ ಹೈಕೋರ್ಟ್

  • ಗುತ್ತಿಗೆಯಲ್ಲಿ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವೇ ಇಲ್ಲ, ಸರ್ಕಾರವೇ ರಾಜೀನಾಮೆ ನೀಡ್ಬೇಕು: ಬೊಮ್ಮಾಯಿ

    ಗುತ್ತಿಗೆಯಲ್ಲಿ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವೇ ಇಲ್ಲ, ಸರ್ಕಾರವೇ ರಾಜೀನಾಮೆ ನೀಡ್ಬೇಕು: ಬೊಮ್ಮಾಯಿ

    – ಹನಿಟ್ರ್ಯಾಪ್‌ ಪ್ರಕರಣ ಕಾಂಗ್ರೆಸ್ ಬುಡಕ್ಕೆ ಬರುತ್ತೆ
    – `ಕೈ’ ಹೈಕಮಾಂಡ್ ಸಿಎಂ ಜೊತೆ ಸೇರಿ ಪ್ರಕರಣ ಮುಚ್ಚಿ ಹಾಕಲು ನೋಡ್ತಿದೆ

    ನವದೆಹಲಿ: ಮುಸ್ಲಿಮರಿಗೆ ಗುತ್ತಿಗೆಯಲ್ಲಿ 4% ಮೀಸಲಾತಿ ನೀಡುವ ಮೂಲಕ ಈ ಸರ್ಕಾರ ಸಂವಿಧಾನ ವಿರೋಧಿ ಕೆಲಸಗಳನ್ನು ಮಾಡುತ್ತಿದೆ. ಸಂವಿಧಾನ ವಿರೋಧಿ ಸರ್ಕಾರ ಕರ್ನಾಟಕದಲ್ಲಿದ್ದು, ಈ ಸರ್ಕಾರ ಆಡಳಿತ ನಡೆಸಲು ಯಾವುದೇ ನೈತಿಕ ಹಕ್ಕಿಲ್ಲ. ಇಡೀ ಸರ್ಕಾರವೇ ರಾಜೀನಾಮೆ ನೀಡಬೇಕು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಆಗ್ರಹಿಸಿದರು.

    ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಆಂಧ್ರಪ್ರದೇಶ (Andhra Pradesh) ಹಾಗೂ ಪಶ್ಚಿಮ ಬಂಗಾಳ ಪ್ರಕರಣಗಳಲ್ಲಿ ಧರ್ಮಾಧಾರಿತ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶ ಇಲ್ಲ ಎಂದು ಸುಪ್ರೀಂಕೋರ್ಟ್ ಬಹಳ ಸ್ಪಷ್ಟವಾಗಿ ಹೇಳಿದೆ. ಆದರೂ, ಇವರು ಧರ್ಮದ ಆಧಾರದಲ್ಲಿ ಮೀಸಲಾತಿ ತರುತ್ತಿದ್ದಾರೆ. ಅದೂ ಕೂಡ ಗುತ್ತಿಗೆಯಲ್ಲಿ ಮೀಸಲಾತಿ ನೀಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಂವಿಧಾನ ತಿದ್ದುಪಡಿಯ ಅಗತ್ಯವೂ ಇಲ್ಲ, ಅನಿವಾರ್ಯತೆಯೂ ಇಲ್ಲ: ಬಿ.ಕೆ.ಹರಿಪ್ರಸಾದ್

    ಗುತ್ತಿಗೆಯಲ್ಲಿ ಮೀಸಲಾತಿ ನೀಡಲು ಸಂವಿಧಾನದಲ್ಲಿ ಯಾವುದೇ ಅವಕಾಶ ಇಲ್ಲ. ಟೆಂಡರ್‌ನಲ್ಲಿ ಪಾರದರ್ಶಕತೆ ಕಾಯ್ದೆಯನ್ನೇ ರದ್ದು ಪಡಿಸುವುದು ಒಳ್ಳೆಯದು. ಸುಮಾರು ಶೇ.30 ರಿಂದ 40ರಷ್ಟು ಮೀಸಲಾತಿ ನೀಡಿದರೆ ಪಾರದರ್ಶಕತೆಗೆ ಎಲ್ಲಿ ಗೌರವ ಇರುತ್ತದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ:  ಮುಸ್ಲಿಂ ಮೀಸಲಾತಿ ಸಮರ್ಥನೆ ಭರದಲ್ಲಿ ಡಿಕೆ ವಿವಾದ- ಸಂಸತ್‌ನ ಉಭಯ ಸದನಗಳಲ್ಲಿ ಕೋಲಾಹಲ

    ಅಲ್ಲದೇ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರು (Rahul Gandhi) ಯಾವಾಗಲೂ ಸಂವಿಧಾನವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಾರೆ. ಆದರೆ, ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ ಅವರ ಸಂವಿಧಾನದ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಈ ಬಗ್ಗೆ ಕರ್ನಾಟಕ ಡಿಸಿಎಂ ಡಿ.ಕೆ.ಶಿವಕುಮಾರ್ (D K Shivakumar) ಮಾತನಾಡಿದ್ದಾರೆ. ಮುಸಲ್ಮಾನರಿಗೆ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶ ಇಲ್ಲ ಎಂದು ಡಿಕೆಶಿ ಅವರೇ ಒಪ್ಪಿಕೊಂಡಿದ್ದಾರೆ. ಸಂವಿಧಾನ ತಿದ್ದುಪಡಿ ತರುತ್ತೇವೆ ಎಂದು ಹೇಳಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹಾಲಿನ ದರ ಏರಿಕೆಯ ಒತ್ತಡಕ್ಕೆ ಮಣಿಯದ ಸಿಎಂ – ಇಂದಿನ ಹೈವೋಲ್ಟೇಜ್ ಸಭೆಯಲ್ಲಿ ಏನಾಯ್ತು?

    ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಚುನಾವಣೆಗೂ ಮುಂಚೆ ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಹೇಳಿದ್ದರು. ಆದರೆ, ಸಂವಿಧಾನದ ಮೂಲ ಉದ್ದೇಶವನ್ನೇ ಬದಲಾವಣೆ ಮಾಡಿರುವುದು ಕಾಂಗ್ರೆಸ್ ಸರ್ಕಾರ. ಕಾಂಗ್ರೆಸ್ಸಿನ ಮುಖವಾಡ ಕಳಚಿ ಬಿದ್ದಿದೆ ಹೇಳಿದರು. ಇದನ್ನೂ ಓದಿ: 3.5 ಕೋಟಿಗೆ ಖರೀದಿಸಿದ್ದ ಅಪಾರ್ಟ್‌ಮೆಂಟ್‌ 6.6 ಕೋಟಿಗೆ ಮಾರಿದ ಅಕ್ಷಯ್ ಕುಮಾರ್

    ಸಂವಿಧಾನದ ಮೇಲೆ ಪ್ರಮಾಣವಚನ ತೆಗೆದುಕೊಂಡು ಅದರ ವಿರುದ್ಧ ಕೆಲಸ ಮಾಡುತ್ತಾರೆ ಎಂದರೆ ಇದು ಸಂವಿಧಾನ ವಿರೋಧಿ ಅಷ್ಟೇ ಅಲ್ಲ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಕ್ಕೂ ವಿರುದ್ಧವಾಗಿದೆ. ತುಷ್ಟೀಕರಣದ ಪರಾಕಾಷ್ಟೇ ಮೀರಿದೆ. ತುಷ್ಟೀಕರಣಕ್ಕಾಗಿ ದೇಶವನ್ನು ಒಡೆಯುವ ತೀರ್ಮಾನ ತೆಗೆದುಕೊಳ್ಳುವುದು ಸಂವಿಧಾನಿಕ ಹುದ್ದೆಯಲ್ಲಿರುವವರಿಗೆ ಇದು ನ್ಯಾಯಾನಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ:  ಪತ್ನಿಗೆ 9 ಕೋಟಿ ಜೀವನಾಂಶ, ತಿಂಗಳಿಗೆ 4 ಲಕ್ಷ – ಭಾರೀ ಸಂಚಲನ ಸೃಷ್ಟಿಸಿದ ಟೆಕ್ಕಿ ಪೋಸ್ಟ್

    ಸ್ವಾತಂತ್ರ‍್ಯ ಬಂದಾಗ ಕಾಂಗ್ರೆಸ್‌ನವರು ತನ್ನ ಆಡಳಿತಕ್ಕಾಗಿ ದೇಶ ವಿಭಜನೆ ಮಾಡಿದರು. ಶಾಭಾನು ಪ್ರಕರಣದಲ್ಲಿ ಕುರ್ಚಿ ಉಳಿಸಿಕೊಳ್ಳಲು ಕಾನೂನು ಬದಲಾವಣೆ ಮಾಡಿದ್ದರು. ಈಗ ಸಂವಿಧಾನವನ್ನೇ ಬದಲಾವಣೆ ಮಾಡಲು ಹೊರಟಿದ್ದಾರೆ. ರಾಹುಲ್ ಗಾಂಧಿಯವರಿಗೆ ಇನ್ನು ಮುಂದೆ ಸಂವಿಧಾನವನ್ನು ಹಿಡಿಕೊಳ್ಳುವ ಯಾವುದೇ ನೈತಿಕ ಹಕ್ಕಿಲ್ಲ. ಈ ಸರ್ಕಾರ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಸಂಸದರ ಸಂಬಳ 24% ಏರಿಕೆ – ಈಗ ಎಷ್ಟಿದೆ? ಎಷ್ಟು ಏರಿಕೆಯಾಗಿದೆ?

    ಕಾಂಗ್ರೆಸ್ ಬುಡಕ್ಕೆ ಹನಿಟ್ರ್ಯಾಪ್‌
    ಹನಿಟ್ರ‍್ಯಾಪ್ ಕುರಿತು ಪ್ರತಿಕ್ರಿಯಿಸಿದ ಅವರು, ಹನಿಟ್ರ‍್ಯಾಪ್ ವಿಚಾರದಲ್ಲಿ ಮತ್ತೆ ರಾಜಕಾರಣ ಶುರುವಾಗಿದೆ. ಸಹಕಾರ ಸಚಿವ ಕೆ.ಎನ್.ರಾಜಣ್ಣ (K N Rajanna) ಅವರು ವಿಧಾನಸಭೆಯಲ್ಲಿ ತಮ್ಮದಷ್ಟೇ ಅಲ್ಲ 48 ಜನರ ಹನಿಟ್ರ‍್ಯಾಪ್ ಆಗಿದೆ ಅಂತ ಹೇಳಿದ್ದಾರೆ. ಇದು ಬಹಳ ಗಂಭೀರ ವಿಷಯ. ಅವರು ದೂರು ಕೊಡುತ್ತೇನೆ ಅಂತ ಹೇಳಿದ್ದರು. ಇನ್ನು ದೂರು ಕೊಟ್ಟಿಲ್ಲ. ತನಿಖೆಯೂ ನಡೆಯುತ್ತಿಲ್ಲ ಎಂದರು.

    ಈಗ ಕಾಂಗ್ರೆಸ್ ಹೈಕಮಾಂಡ್ ಇದರಲ್ಲಿ ಮಧ್ಯ ಪ್ರವೇಶ ಮಾಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikharjun Kharge) ಹಾಗೂ ಸಿಎಂ ಸಿದ್ದರಾಮಯ್ಯ ಅವರ ನಡುವೆ ಈ ಪ್ರಕರಣ ಮುಚ್ಚಿಹಾಕುವ ಕುರಿತು ಚರ್ಚೆ ನಡೆದಿದೆ. ಕಾಂಗ್ರೆಸ್‌ನ ಬುಡಕ್ಕೆ ಈ ಪ್ರಕರಣ ಬರುತ್ತದೆ ಎಂದು ಅವರಿಗೆ ಗೊತ್ತಾಗಿದೆ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರೀಲ್ಸ್ ತಂದ ಆಪತ್ತು- ರಜತ್, ವಿನಯ್‌ ಅರೆಸ್ಟ್‌

    ಡಿಸಿಎಂ ಹೇಳಿಕೆಯನ್ನು ನೋಡಿದಾಗ ಇವರು ರಾಜ್ಯವನ್ನು ಆರ್ಥಿಕವಾಗಿ ಹಾಳು ಮಾಡಿದ್ದಾರೆ. ನೈತಿಕವಾಗಿಯೂ ರಾಜ್ಯವನ್ನು ಹಾಳು ಮಾಡಿದ್ದಾರೆ. ಈಗ ಸಂವಿಧಾನ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಇದು ಜನವಿರೋಧಿ ಸರ್ಕಾರ ಇದು ಎಷ್ಟು ಬೇಗ ತೊಲಗುತ್ತದೆಯೋ ಅಷ್ಟು ಕರ್ನಾಟಕಕ್ಕೆ ಒಳ್ಳೆಯದಾಗುತ್ತದೆ ಎಂದು ಹೇಳಿದರು.