Tag: ಡಿ.ಕೆ.ಶಿವಕುಮಾರ್

  • ಡಿಕೆಶಿ, ಜಾರಕಿಹೊಳಿ ಅಲ್ಲ.. ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಸಿಎಂ ಆಗ್ತಾರೆ: ಯತ್ನಾಳ್ ಬಾಂಬ್

    ಡಿಕೆಶಿ, ಜಾರಕಿಹೊಳಿ ಅಲ್ಲ.. ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಸಿಎಂ ಆಗ್ತಾರೆ: ಯತ್ನಾಳ್ ಬಾಂಬ್

    – ವಿಜಯೇಂದ್ರ ಮತ್ತೆ ಬಿಜೆಪಿ ರಾಜ್ಯಾಧ್ಯಕ್ಷ ಆದ್ರೆ ಹೊಸ ಪಕ್ಷ ಕಟ್ತೀನಿ ಎಂದ ಶಾಸಕ

    ಬೆಳಗಾವಿ: ಡಿಕೆಶಿ, ಸತೀಶ್ ಜಾರಕಿಹೊಳಿ ಇಬ್ಬರೂ ಸಿಎಂ ಆಗಲ್ಲ. ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಬೆಳಗಾವಿಯಲ್ಲಿ ಕನೇರಿ ಮಠದ ಸ್ವಾಮೀಜಿ ಬೆಂಬಲಿಸಿ ನಡೆದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್, ಕಾಂಗ್ರೆಸ್‌ನಲ್ಲಿ ಸ್ಪರ್ಧೆಯಲ್ಲಿರುವ ಯಾವ ನಾಯಕರೂ ಸಿಎಂ ಆಗಲ್ಲ. ರಾಜ್ಯದ ಸಾರಥ್ಯ ಬ್ಲ್ಯಾಕ್ ಹಾರ್ಸ್ ಕೈಗೆ ಸಿಗಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ. ಡಿಕೆಶಿಯೂ ಸಿಎಂ ಆಗಲ್ಲ, ಸತೀಶ್ ಜಾರಕಿಹೊಳಿ ಕೂಡ ಸಿಎಂ ಆಗಲ್ಲ. ಒಮ್ಮೆ ಸಿಎಂ ಆಗಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಕಾಯುತ್ತಿದ್ದಾರೆ. ಸಿಎಂ ಪುತ್ರ ಕೂಡ ಬೆಳಗಾವಿಗೆ ಬಂದು ಸತೀಶ್ ಜಾರಕಿಹೊಳಿ ಹೆಸರು ಹೇಳಿ ಹೋಗಿದ್ದಾರೆ. ಆದರೆ, ನಾಯಕತ್ವ ಬದಲಾವಣೆ ಆಗಲಿದೆ. ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಶ್ರೀರಾಮುಲು ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟ ಹಣವನ್ನೇ ಬಿಹಾರ ಚುನಾವಣೆಗೆ ಕಳುಹಿಸಿದ್ದೇವೆ: ಡಿಕೆಶಿ ಟಾಂಗ್‌

    ಡಿಕೆಶಿಯನ್ನ ಸಿಎಂ ಮಾಡ್ತೀನಿ ಅಂತ ನೀವು ಡಿಸೈಡ್ ಮಾಡಿದ್ರೆ, ನಾನು ಸತೀಶ್ ಪರವಾಗಿ ನಿಲ್ತೀನಿ ಅಂತ ಸಿದ್ದರಾಮಯ್ಯ ಸಂದೇಶ ಕೊಟ್ಟಿದ್ದಾರೆ. ತಮ್ಮ ಮಗನನ್ನು ಕಳಿಸಿ ಸಂದೇಶ ಸಾರಿದ್ದಾರೆ ಸಿಎಂ ಸಿದ್ದರಾಮಯ್ಯ ಯತ್ನಾಳ್ ಆರೋಪ ಮಾಡಿದ್ದಾರೆ.

    ವಿಜಯೇಂದ್ರ ಮರಳಿ ರಾಜ್ಯ ಬಿಜೆಪಿ ಅಧ್ಯಕ್ಷರಾದ್ರೆ ನಾನು ಹೊಸ ಪಕ್ಷ ಕಟ್ಟುತ್ತೇನೆ. ಕರ್ನಾಟಕ ರಾಜ್ಯದಲ್ಲಿ ಜೆಸಿಬಿ ಹೆಸರಲ್ಲಿ ಹೊಸ ಪಕ್ಷ ಕಟ್ಟುತ್ತೇನೆ. ಜೆ ಅಂದ್ರೆ ಜೆಡಿಎಸ್‌ನಲ್ಲಿ, ಸಿ ಅಂದ್ರೆ ಕಾಂಗ್ರೆಸ್ ಹಾಗೂ ಬಿ ಅಂದ್ರೆ ಬಿಜೆಪಿಯಲ್ಲಿ ನೊಂದವರು ನಮ್ಮ ಪಕ್ಷ ಸೇರುತ್ತಾರೆ. ಈಗ ಬಿಜೆಪಿಯಲ್ಲಿರುವ 50 ಕ್ಕೂ ಅಧಿಕ ಶಾಸಕರ ಬೆಂಬಲ ನನಗಿದೆ. ಹೆಚ್ಚಿನ ಸಂಖ್ಯೆಯ ಸಂಸದರ ಬೆಂಬಲವೂ ನನಗಿದೆ. ಹೀಗಾಗಿ, ಯಾವುದೇ ಕಾರಣಕ್ಕೂ ಬಿಜೆಪಿ ಹೈಕಮಾಂಡ್ ವಿಜಯೇಂದ್ರರನ್ನು ಅಧ್ಯಕ್ಷ ಮಾಡಬಾರದು. ಒಂದು ವೇಳೆ ವಿಜಯೇಂದ್ರ ಅಧ್ಯಕ್ಷರಾದ್ರೆ ನಾನು ಜೆಸಿಬಿ ಪಕ್ಷ ಕಟ್ಟುವೆ. ಜೆಸಿಬಿ ಪಾರ್ಟಿ ರಚನೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿದ್ದೇವೆ. ವಿಜಯೇಂದ್ರ ನೇಮಿಸಿದ ಮರುದಿನವೇ ಪಕ್ಷ ಆ್ಯಕ್ಟಿವ್ ಆಗಲಿದೆ. ನಾನು ಹೋದ ಕಡೆಗಳಲ್ಲಿ ಜನಬೆಂಬಲ ಸಿಗ್ತಿದೆ. ಹಿಂದುತ್ವದ ಆಧಾರದ ಮೇಲೆ ಪಕ್ಷ ಕಟ್ಟುವೆ ಎಂದು ತಿಳಿಸಿದರು. ಇದನ್ನೂ ಓದಿ: ಹಣೆಯಲ್ಲಿ ಬರೆದಿದ್ದರೆ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ, ಇಲ್ಲದಿದ್ದರೆ ಇಲ್ಲ: ಡಿ.ಕೆ.ಸುರೇಶ್

    ನರೇಂದ್ರ ಮೋದಿ ಜನರಿಂದ ಆದ ನಾಯಕ. ದೇಶದಲ್ಲಿ ಒಂದು ಸಂಚಲನ ಆಯ್ತು. ಮೋದಿಯವರ ನಂತರ ಯೋಗಿ ಆದಿತ್ಯನಾಥ್ ಪಿಎಂ ಆಗಬೇಕು ಎಂದು ಜನ ಬಯಸಿದ್ದಾರೆ. ಹಾಗೆಯೇ ರಾಜ್ಯದ ಜನರ ಆಶಾವಾದವಿದೆ. ಜನರಲ್ಲಿ ಯತ್ನಾಳ್ ಸಿಎಂ ಆಗಬೇಕು ಎನ್ನುವುದಿದೆ. ಇಲ್ಲಾವಾದರೆ ನಂದು ಜೆಸಿಬಿ ಪಾರ್ಟಿ ರೆಡಿ ಇದೆ. ಮುಂದಿನ ಚುನಾವಣೆವಣೆಯೊಳಗೆ ಹೈಕಮಾಂಡ್ ಕರೆಯಲಿ. ಕರೆಯದಿದ್ದರೆ ನಂದು ಜೆಸಿಪಿ ಪಾರ್ಟಿ ರೆಡಿ ಇದೆ ಎಂದು ಹೇಳಿದರು.

  • ಶ್ರೀರಾಮುಲು ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟ ಹಣವನ್ನೇ ಬಿಹಾರ ಚುನಾವಣೆಗೆ ಕಳುಹಿಸಿದ್ದೇವೆ: ಡಿಕೆಶಿ ಟಾಂಗ್‌

    ಶ್ರೀರಾಮುಲು ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟ ಹಣವನ್ನೇ ಬಿಹಾರ ಚುನಾವಣೆಗೆ ಕಳುಹಿಸಿದ್ದೇವೆ: ಡಿಕೆಶಿ ಟಾಂಗ್‌

    ಬೆಂಗಳೂರು: ಶ್ರೀರಾಮುಲು (Sriramulu) ಕಾಂಗ್ರೆಸ್‌ ಪಕ್ಷಕ್ಕೆ ಕೊಟ್ಟ ಹಣವನ್ನೇ ಬಿಹಾರ ಚುನಾವಣೆಗೆ ಕಳುಹಿಸಿದ್ದೇನೆ ಎಂದು ಬಿಜೆಪಿ ನಾಯಕರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ (D.K.Shivakumar) ಟಾಂಗ್‌ ಕೊಟ್ಟರು.

    ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಬಿಹಾರ ಚುನಾವಣೆಗೆ ಸಿಎಂ, ಡಿಸಿಎಂ 300 ಕೋಟಿ ರೂ. ಕಪ್ಪ ಕಾಣಿಕೆ ನೀಡಿದ್ದಾರೆ ಎಂಬ ಶ್ರೀರಾಮುಲು ಹೇಳಿಕೆ ಬಗ್ಗೆ ಕೇಳಿದಾಗ, ಶ್ರೀರಾಮುಲು ಅವರು ಕಾಂಗ್ರೆಸ್ ಪಕ್ಷಕ್ಕೆ ಹಣ ನೀಡಿದ್ದು, ಅದನ್ನೇ ನಾವು ಬಿಹಾರ ಚುನಾವಣೆಗೆ ಕಳುಹಿಸಿದ್ದೇವೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಹಣೆಯಲ್ಲಿ ಬರೆದಿದ್ದರೆ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ, ಇಲ್ಲದಿದ್ದರೆ ಇಲ್ಲ: ಡಿ.ಕೆ.ಸುರೇಶ್

    ಟನಲ್ ರಸ್ತೆ ಮಾಡಲು ಬಿಡುವುದಿಲ್ಲ ಎಂಬ ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆ ಕುರಿತು ಮಾತನಾಡಿ, ನಾನು ಈ ವಿಚಾರದಲ್ಲಿ ತಾಂತ್ರಿಕ ತಜ್ಞ ಅಲ್ಲ. ಅವರೂ ತಜ್ಞರಲ್ಲ. ಅದಕ್ಕಾಗಿಯೇ ಪ್ರತ್ಯೇಕ ತಾಂತ್ರಿಕ ತಜ್ಞರ ತಂಡವೇ ಇದೆ. ಅವರು ನಗರ ರೈಲು ಯೋಜನೆ ಮಾಡಬೇಕು ಎಂದು ಹೇಳುತ್ತಿದ್ದಾರೆ. ಅದನ್ನು ಮಾಡಲಿ, ಅದರಲ್ಲಿ ತಪ್ಪೇನು ಇಲ್ಲ. ಇದಕ್ಕೆ ಅಗತ್ಯವಾದ ಅನುದಾನವನ್ನು ಕೇಂದ್ರ ಸರ್ಕಾರದಿಂದ ಕೊಡಿಸಲಿ. ನಮ್ಮದೇ ರಾಜ್ಯದ ಸೋಮಣ್ಣ ಅವರು ಕೇಂದ್ರ ಸಚಿವರಾಗಿದ್ದಾರೆ. ಅವರ ನೆರವು ಪಡೆಯಲಿ, ಏನು ಬೇಕಾದರೂ ಮಾಡಲಿ. ಅವರು ಹೋರಾಟ ಮಾಡುವುದಾದರೆ ಮಾಡಲಿ, ಬೇಡ ಎಂದು ಹೇಳಿದವರು ಯಾರು? ಬಿಜೆಪಿಯಲ್ಲಿ ತೇಜಸ್ವಿ ಸೂರ್ಯ ಹಾಗೂ ಅಶೋಕ್ ಹೊರತಾಗಿ ಉಳಿದ ಯಾವುದೇ ನಾಯಕರು ಮಾತನಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

    ಸ್ಟೀಲ್ ಬ್ರಿಡ್ಜ್ ಮಾದರಿಯಲ್ಲೇ ಟನಲ್ ರಸ್ತೆ ಯೋಜನೆ ಮುರಿದು ಬೀಳುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾವು ನಮ್ಮ ಕೆಲಸ ಮಾಡುತ್ತೇವೆ. ನಮ್ಮ ಆಸಕ್ತಿ ನೋಡಿ ಜನರು ನಮ್ಮ ಪ್ರಯತ್ನಕ್ಕೆ ಬೆಂಬಲ ನೀಡುತ್ತಿದ್ದಾರೆ. ನಮ್ಮ ಕೆಲಸ ಅನುಷ್ಠಾನ ಆಗಲಿದೆ ಎಂಬ ವಿಶ್ವಾಸ ಇದೆ ಎಂದರು.

    ನವೆಂಬರ್ ಕ್ರಾಂತಿ, ಸಿಎಂ ಬದಲಾವಣೆ, ದಲಿತ ಸಿಎಂ ವಿಚಾರವಾಗಿ ಮಾತನಾಡಿ, ಅನಗತ್ಯ ಮಾತನಾಡಿ ದಣಿವಾಗುವುದು ಬೇಡ ಎಂದು ಮನವಿ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಕ್ವಾಂಟಮ್‌ ಸಿಟಿ ಅಭಿವೃದ್ಧಿ, ಸಹಭಾಗಿತ್ವಕ್ಕೆ ಸ್ವಿಟ್ಜರ್ಲೆಂಡ್‌ ಕಂಪನಿ, ಸಂಶೋಧನಾ ಸಂಸ್ಥೆಗಳ ಒಲವು: ಸಚಿವ ಬೋಸರಾಜು

    ವರದಿ ಬಳಿಕ ದಿನಾಂಕ ನಿಗದಿ
    ರಾಜ್ಯಕ್ಕೆ ರಾಹುಲ್‌ ಗಾಂಧಿ ಅವರ ಭೇಟಿಗೆ ಸಂಬಂಧಿಸಿದಂತೆ ಇನ್ನೂ ದಿನಾಂಕ ಅಂತಿಮವಾಗಿಲ್ಲ. ನಾನು ಮನವಿ ಸಲ್ಲಿಸಿದ್ದೇನೆ. ಕಚೇರಿ ನಿರ್ಮಾಣ ಜಾಗದ ಕಾಗದ ಪತ್ರ ಸಿದ್ಧವಾಗುತ್ತಿದೆ. ಈ ಕಚೇರಿ ನಿರ್ಮಾಣ ವಿಚಾರದಲ್ಲಿ ಸಚಿವರು, ಸಂಸದರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಯಾರ‍್ಯಾರು ಆಸಕ್ತಿ ತೋರಿದ್ದಾರೆ, ಯಾರು ತೋರಿಲ್ಲ ಎಂದು ವರದಿ ನೀಡುವಂತೆ ಹೈಕಮಾಂಡ್ ನಾಯಕರು ಕೇಳಿದ್ದಾರೆ. ನಾನು ವರದಿ ಸಿದ್ಧಪಡಿಸುತ್ತಿದ್ದು, ಅದನ್ನು ಕಳುಹಿಸಬೇಕು. ಆನಂತರ ಆವರು ದಿನಾಂಕ ನಿಗದಿ ಮಾಡುತ್ತಾರೆ ಎಂದು ವಿವರಿಸಿದರು.

    ಸಚಿವರು, ಶಾಸಕರ ಅಭಿಪ್ರಾಯ ಪಡೆದು ಅಭ್ಯರ್ಥಿ ಅಂತಿಮ
    ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಪ್ರತಿ ಕ್ಷೇತ್ರದಲ್ಲಿ ಐದಾರು ಮಂದಿ ಟಿಕೆಟ್ ಆಕಾಂಕ್ಷಿಗಳು ಇದ್ದಾರೆ. 8-10 ದಿನಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡುತ್ತೇವೆ. ಮುಂದಿನ ಸಭೆಯಲ್ಲಿ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚೆ ಮಾಡಿ ಅಭಿಪ್ರಾಯ ಪಡೆಯುತ್ತೇವೆ ಎಂದು ತಿಳಿಸಿದರು.

  • ಹಣೆಯಲ್ಲಿ ಬರೆದಿದ್ದರೆ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ, ಇಲ್ಲದಿದ್ದರೆ ಇಲ್ಲ: ಡಿ.ಕೆ.ಸುರೇಶ್

    ಹಣೆಯಲ್ಲಿ ಬರೆದಿದ್ದರೆ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ, ಇಲ್ಲದಿದ್ದರೆ ಇಲ್ಲ: ಡಿ.ಕೆ.ಸುರೇಶ್

    – 2028 ಕ್ಕೆ ಸಿದ್ದರಾಮಯ್ಯ ಅವರ ಸ್ಪರ್ಧೆ ತಪ್ಪಿಲ್ಲ ಎಂದ ಮಾಜಿ ಸಂಸದ

    ಬೆಂಗಳೂರು: ನಮ್ಮ ಸಹೋದರ ಡಿ.ಕೆ.ಶಿವಕುಮಾರ್ ಅವರ ಹಣೆಯಲ್ಲಿ ಬರೆದಿದ್ದರೆ ಸಿಎಂ ಆಗುತ್ತಾರೆ, ಇಲ್ಲದಿದ್ದರೆ ಇಲ್ಲ. ಅದಕ್ಕೆ ಏಕೆ ತಲೆಕೆಡಿಸಿಕೊಳ್ಳಬೇಕು ಎಂದು ಬಮೂಲ್ ಅಧ್ಯಕ್ಷ, ಮಾಜಿ ಸಂಸದ ಡಿ.ಕೆ.ಸುರೇಶ್ (D.K.Suresh) ಹೇಳಿದ್ದಾರೆ.

    ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಬುಧವಾರ ಮಾತನಾಡಿದ ಅವರು, ಸಹೋದರನ ರಾಜಕೀಯ ಭವಿಷ್ಯ ಬದಲಾಗಲಿದೆ ಹಾಗೂ ಅಣ್ಣನನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡುವ ಆಸೆಯಿದೆ ಎನ್ನುವ ಹಿಂದಿನ ಹೇಳಿಕೆ ಬಗ್ಗೆ ಕೇಳಿದಾಗ, ಆಸೆಯಿದೆ ಎಂದು ಹೇಳಿದ್ದೆ. ಅವರ ಹಣೆಯಲ್ಲಿ ‌ಬರೆದಿದ್ದರೆ ಅದು ಆಗುತ್ತದೆ, ಇಲ್ಲದಿದ್ದರೆ ಇಲ್ಲ. ಪಕ್ಷ ಹೇಳಿದಂತೆ ಅವರು ನಡೆದುಕೊಳ್ಳುತ್ತಾರೆ. ಪಕ್ಷದ ಅಧ್ಯಕ್ಷರಾಗಿ, ಡಿಸಿಎಂ ಆಗಿ ಪಕ್ಷದ ಏಳಿಗೆಗೆ, ಘನತೆಗೆ ಚ್ಯುತಿ ಬರದಂತೆ ಅವರು ನಡೆದುಕೊಳ್ಳುತ್ತಿದ್ದಾರೆ ಎಂದರು. ಇದನ್ನೂ ಓದಿ: ನಾವು ಮಾತಾಡಿದಷ್ಟು ಪಕ್ಷಕ್ಕೆ ಡ್ಯಾಮೇಜ್, ಸೈಲೆಂಟ್ ಆಗಿ ಇರದಿದ್ರೆ ವಿಪಕ್ಷಗಳಿಗೆ ಆಹಾರ ಆಗ್ತೀವಿ: ರಾಮಲಿಂಗಾ ರೆಡ್ಡಿ

    ಪಕ್ಷನಿಷ್ಠರಾಗಿ ಡಿ.ಕೆ.ಶಿವಕುಮಾರ್ ನಡೆದುಕೊಳ್ಳುತ್ತಿದ್ದಾರೆ. ನವೆಂಬರ್ ಕ್ರಾಂತಿ ವಿಚಾರದ ಬಗ್ಗೆ ಅವರು ಗಮನ ಹರಿಸುತ್ತಿಲ್ಲವಲ್ಲ ಎಂದು ಕೇಳಿದಾಗ, ಪಕ್ಷದ ಅಧ್ಯಕ್ಷರಾಗಿ ಎಲ್ಲರನ್ನೂ ಸಮಾನವಾಗಿ ನೋಡಬೇಕಿರುವುದು ಅವರ ಕರ್ತವ್ಯ ಎಂದು ಹೇಳಿದರು.

    ನವೆಂಬರ್ 15 ರ ನಂತರ ಏನಾದರೂ ಬದಲಾವಣೆ ಆಗುತ್ತದೆಯೇ ಎಂಬ ಪ್ರಶ್ನೆಗೆ, ನನಗೆ ನವೆಂಬರ್ ಎಂದರೆ ಕನ್ನಡ ರಾಜ್ಯೋತ್ಸವ ನೆನಪಾಗುತ್ತದೆ. ನಾವು, ನೀವೆಲ್ಲರೂ ಸೇರಿ ಈ ಹಬ್ಬವನ್ನು ಆಚರಣೆ ಮಾಡೋಣ. ಮಿಕ್ಕ ವಿಚಾರಗಳ ಬಗ್ಗೆ ನನಗೆ ತಿಳಿದಿಲ್ಲ. ಈ ಪ್ರಶ್ನೆಯನ್ನು ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿಯವರು, ಎಐಸಿಸಿ ನಾಯಕರಿಗೆ ಕೇಳಬೇಕು ಎಂದು ತಿಳಿಸಿದರು. ಇದನ್ನೂ ಓದಿ: ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಬಗ್ಗೆ ಮಾತಾಡದೇ ಬಾಯಿಮುಚ್ಚಿಕೊಂಡು ಇರ್ಬೇಕು: ಬೋಸರಾಜು

    2028 ಕ್ಕೆ ಸಿದ್ದರಾಮಯ್ಯ ಅವರ ಸ್ಪರ್ಧೆ ತಪ್ಪಿಲ್ಲ
    ರಾಜಕೀಯದಲ್ಲಿ 95-98 ವರ್ಷ ಆದವರೂ ಇದ್ದಾರೆ. ಸಿದ್ದರಾಮಯ್ಯ ಅವರು ಸ್ಪರ್ಧಿಸುತ್ತೇನೆ ಎನ್ನುವುದರಲ್ಲಿ ಯಾವ ತಪ್ಪೂ ಇಲ್ಲ.‌ ಅವರು ನಮ್ಮ ನಾಯಕರು. ಮುಂದಿನ ಚುನಾವಣೆಯನ್ನು ಅವರ ನೇತೃತ್ವದಲ್ಲಿ ಎದುರಿಸುತ್ತೇವೆ. ಒಬ್ಬ ನಾಯಕನಿಗೆ ಇರಬೇಕಾದ ಎಲ್ಲಾ ಅವಕಾಶಗಳು ಅವರಿಗಿದೆ. ಎಲ್ಲರಿಗಿಂತ ಗಟ್ಟಿಯಾಗಿ, ಚೆನ್ನಾಗಿ ಓಡಾಡುತ್ತಿದ್ದಾರೆ. ದಿನನಿತ್ಯ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಉತ್ತಮವಾಗಿ ಆಡಳಿತ ನಡೆಯುತ್ತಿದೆ. ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸುವುದರಲ್ಲಿ ತಪ್ಪೇನಿಲ್ಲ ಎಂದರು.

    2.5 ವರ್ಷದ ಬಗ್ಗೆ ಹೆಚ್ಚು ಮಾಹಿತಿಯಿಲ್ಲ. ಇದು ಎರಡೂವರೆ ವರ್ಷದ ವಿಚಾರವಲ್ಲ. ಐದು ವರ್ಷಗಳ ಕಾಲ ಕೆಲಸ ಮಾಡಿ ಎಂದು ಜನ ಆಶೀರ್ವಾದ ಮಾಡಿದ್ದಾರೆ. 140 ಸ್ಥಾನಗಳನ್ನು ಕೊಟ್ಟಿದ್ದಾರೆ. ನಾವು ಜನರ ಹಿತವನ್ನು ಕಾಯಬೇಕು. ಕೊಟ್ಟಿರುವ ಮಾತು ಉಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪಕ್ಷ ಹಾಗೂ ಸರ್ಕಾರ ಒಟ್ಟಾಗಿ ಕೆಲಸ‌ ಮಾಡುತ್ತಿವೆ ಎಂದು ತಿಳಿಸಿದರು.

    ಆರ್‌ಎಸ್‌ಎಸ್ ತನ್ನ ಕೆಲವು ಬದಲಾವಣೆ ಮಾಡಿಕೊಳ್ಳಬೇಕು
    ಆರ್‌ಎಸ್‌ಎಸ್ ಪಥಸಂಚಲ‌ನಕ್ಕೆ ಯಾವುದೇ ಕಡಿವಾಣ ಹಾಕಿಲ್ಲ. ದೊಣ್ಣೆ ಹಿಡಿದುಕೊಂಡು ಮಾಡುವ ಪಥಸಂಚಲನಕ್ಕೆ ವಿರೋಧವಿದೆ. ದೊಣ್ಣೆ ಹಿಡಿದುಕೊಂಡು ಮಾಡುವ ಪಥಸಂಚಲನ ಹಿಂದಿನ ಕಾಲದಲ್ಲಿ ಸರಿ ಎನಿಸುತ್ತಿತ್ತು. ಬೇರೆಯವರು ಇದೇ ಸಂದರ್ಭದಲ್ಲಿ ಲಾಠಿ ಹಿಡಿದು ಓಡಾಡುವುದಕ್ಕೆ ಅವಕಾಶ ನೀಡುತ್ತೀರಾ ಎನ್ನುವುದು ಇಲ್ಲಿನ ಪ್ರಶ್ನೆ. ಇವರು ದೊಣ್ಣೆ ಹಿಡಿದು ಓಡಾಡುತ್ತಾರೆ. ಬೇರೆ ಸಮುದಾಯ, ಸಂಘಟನೆಗಳು ಇದೇ ಕೆಲಸ ಮಾಡಿದರೆ ಆಗ ಏನಾಗುತ್ತದೆ ಎನ್ನುವುದನ್ನು ಚಿಂತನೆ ಮಾಡಬೇಕಾದ ಕಾಲವಿದು. ಅದರ ಬಗ್ಗೆ ಸ್ಪಷ್ಟನೆ ನೀಡಬೇಕಿದೆ. ಈ ಮೊದಲು ಆರ್‌ಎಸ್‌ಎಸ್ ನವರು ಚಡ್ಡಿ ಹಾಕುತ್ತಿದ್ದರು. ಈಗ ಪ್ಯಾಂಟ್ ಧರಿಸುತ್ತಿದ್ದಾರೆ. ಅಂದರೆ ಬದಲಾವಣೆಗಳನ್ನು ಅವರೂ ಸಹ ಮಾಡಿಕೊಳ್ಳಬೇಕು. ನಾನು ಅವರಿಗೆ ಹೇಳುವಷ್ಟು ದೊಡ್ಡವನಲ್ಲ. ಅವರೇ ಇದರ ಬಗ್ಗೆ ಅರಿತುಕೊಂಡರೆ ಒಳ್ಳೆಯದು ಎಂದರು.

  • ಬೆಂಗಳೂರು ಟನಲ್ ರಸ್ತೆ ವಿವಾದ; ಡಿಕೆಶಿ ಭೇಟಿಯಾದ ತೇಜಸ್ವಿ ಸೂರ್ಯ

    ಬೆಂಗಳೂರು ಟನಲ್ ರಸ್ತೆ ವಿವಾದ; ಡಿಕೆಶಿ ಭೇಟಿಯಾದ ತೇಜಸ್ವಿ ಸೂರ್ಯ

    – ಡಿಸಿಎಂ ನಿವಾಸದಲ್ಲಿ 1 ಗಂಟೆಗೂ ಹೆಚ್ಚು ಸಮಯ ಚರ್ಚಿಸಿದ ಸಂಸದ

    ಬೆಂಗಳೂರು: ಬೆಂಗಳೂರು ಟನಲ್ ರಸ್ತೆ ವಿವಾದಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿಯಾಗಿ ಸಂಸದ ತೇಜಸ್ವಿ ಸೂರ್ಯ ಚರ್ಚೆ ನಡೆಸಿದ್ದಾರೆ.

    ಡಿಕೆಶಿ ಅವರ ಸದಾಶಿವನಗರ ನಿವಾಸಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿದ ತೇಜಸ್ವಿ ಸೂರ್ಯ 1 ಗಂಟೆಗೂ ಹೆಚ್ಚು ಸಮಯ ಚರ್ಚೆ ಮಾಡಿದ್ದಾರೆ.

    ಬಳಿಕ ಸುದ್ದಿಗಾರರೊಂದಿಗೆ ಸಂಸದ ಮಾತನಾಡಿ, ಡಿಸಿಎಂ ಡಿಕೆಶಿ ಅವರ ಜೊತೆ 1 ಗಂಟೆಗೂ ಹೆಚ್ಚು ಕಾಲ ಚರ್ಚೆ ಆಯ್ತು. ಬೆಂಗಳೂರು ಟ್ರಾಫಿಕ್ ಸಮಸ್ಯೆ ಪರಿಹಾರದ ಬಗ್ಗೆ ಸುದೀರ್ಘ ಚರ್ಚೆ ಆಯ್ತು. ಬಹಳ ಶಾಂತವಾಗಿ ನಾನು ಕೊಟ್ಟ ಪ್ರೆಸೆಂಟೇಷನನ್ನ ಕೇಳಿದ್ರು. ಬೆಂಗಳೂರಿಗೆ ಮೆಟ್ರೋ ಬರೋದರಲ್ಲಿ ಅವರ ಪಾತ್ರ ಏನು ಎಂಬುದನ್ನ ಡಿ.ಕೆ.ಶಿವಕುಮಾರ್ ಅವರು ನನಗೆ ತಿಳಿಸಿದರು. ಎಸ್.ಎಂ.ಕೃಷ್ಣ ಅವಧಿಯಲ್ಲಿ ಅನಂತ್ ಕುಮಾರ್ ಅವರು ಬೇರೆ ದೇಶದ ವ್ಯವಸ್ಥೆ ಎಲ್ಲಾ ನೋಡಿ ಹೇಗೆ ವರದಿ ಕೊಟ್ರು ಅಂತ ಹೇಳಿದರು ಎಂದರು.

    ಟನಲ್ ರಸ್ತೆ ಕೇವಲ 30-35 ಕಿ.ಮೀ.ಗೆ 47 ಸಾವಿರ ಕೋಟಿ ಖರ್ಚು ಮಾಡುವ ಬದಲು ಬಸ್ಸು ಬೇರೆ ಬೇರೆ ಇನ್ಫಾಟ್ರಕ್ಚರ್ ಅಭಿವೃದ್ಧಿಗೆ ಬಳಸಬಹುದು. ಇವತ್ತು ಟನಲ್ ರೋಡ್‌ನ ಎಲ್ಲಾ ಸಮಸ್ಯೆ ಬಗ್ಗೆ ನಾನು ತಿಳಿಸಿದ್ದೇನೆ. ಎಲ್ಲವನ್ನೂ ಅವರು ಕೇಳಿದ್ದಾರೆ. ಅವರು ಏನೂ ತೀರ್ಮಾನ ಮಾಡ್ತಾರೆ ನೋಡಬೇಕು. ಚೀನಾ ಸೇರಿದಂತೆ ಬೇರೆ ಬೇರೆ ಕಡೆ ಫ್ಲೈಓವರ್ ಕೆಡವಿರುವ ಘಟನೆ ನಡೆದಿದೆ. ಟನಲ್ ಕೂಡ ಮಾಡದೆ ನಿಲ್ಲಿಸಿದ ಬೆಳವಣಿಗೆಯೂ ಆಗಿದೆ. ಟನಲ್ ರೋಡ್‌ನ ಕೈಬಿಡಿ, ಜಿದ್ದಿಗೆ ತಗೊಂಡು ಮಾಡೋದಲ್ಲ. ಸಬ್‌ಅರ್ಬನ್ ರೈಲು ಹಾಗೂ ಮೆಟ್ರೋ ರೈಲಿಗೆ ಹೆಚ್ಚಿನ ಆದ್ಯತೆ ಕೊಡಬೇಕು. ಟನಲ್‌ಗಿಂತ ಕಡಿಮೆ ವೆಚ್ಚದಲ್ಲಿ ಆಗುತ್ತದೆ ಎಂದು ಸಂಸದ ಸಲಹೆ ನೀಡಿದರು.

  • ಡಿಕೆಶಿ, JDS ಟ್ರಂಕ್ ವಾರ್ – ಹೆಚ್‌ಡಿಕೆ ಸಾಧನೆ ಪಟ್ಟಿ ಬಿಡುಗಡೆ ಮಾಡಿ ಟಾಂಗ್

    ಡಿಕೆಶಿ, JDS ಟ್ರಂಕ್ ವಾರ್ – ಹೆಚ್‌ಡಿಕೆ ಸಾಧನೆ ಪಟ್ಟಿ ಬಿಡುಗಡೆ ಮಾಡಿ ಟಾಂಗ್

    ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಮತ್ತು ಜೆಡಿಎಸ್ (JDS) ನಡುವೆ ಖಾಲಿ ಟ್ರಂಕ್ ವಾರ್ ಜೋರಾಗಿ ನಡೆಯುತ್ತಿದೆ. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರನ್ನ ಖಾಲಿ ಟ್ರಂಕ್ ಎಂದಿದ್ದ ಡಿಸಿಎಂ ಡಿ.ಕೆ ಶಿವಕುಮಾರ್‌ಗೆ ಜೆಡಿಎಸ್ ತಿರುಗೇಟು ಕೊಟ್ಟಿದೆ.

    ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿರೋ ಜೆಡಿಎಸ್, ಹೆಚ್‌ಡಿಕೆ ಅವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳ ಪಟ್ಟಿ ಬಿಡುಗಡೆ ಮಾಡಿ ಕುಮಾರಸ್ವಾಮಿ (HD Kumaraswamy) ಟ್ರಂಕ್‌ನಲ್ಲಿ ಅಭಿವೃದ್ಧಿ ಇದೆ ಎಂದು ಟಾಂಗ್ ಕೊಟ್ಟಿದೆ. ಡಿಕೆಶಿ ಆಸ್ತಿ ಗಳಿಕೆಯ ಪಟ್ಟಿ ಬಿಡುಗಡೆ ಮಾಡಿ ಇದು ಡಿ.ಕೆ ಶಿವಕುಮಾರ್ ಟ್ರಂಕ್ ಎಂದು ಲೇವಡಿ ಮಾಡಿದೆ. ಇದನ್ನೂ ಓದಿ: ವಿದ್ಯಾವಂತರು ʻಎ ಖಾತಾ’ ಪರಿವರ್ತನೆ ಒಪ್ಪುತ್ತಿರೋದಕ್ಕೆ ಧನ್ಯವಾದ; ಕುಮಾರಸ್ವಾಮಿ ಖಾಲಿ ಟ್ರಂಕ್ ಎಂದ ಡಿಕೆಶಿ

    ಎಕ್ಸ್‌ನಲ್ಲೇನಿದೆ?
    ಹೌದಪ್ಪ ಹೌದು. ಡಿಸಿಎಂ ಡಿಕೆಶಿವಕುಮಾರ್ ಸಾಹೇಬರೇ, ಹೆಚ್.ಡಿ.ಕುಮಾರಸ್ವಾಮಿ ಅವರು ಖಾಲಿ ಟ್ರಂಕ್ ಅನ್ನೋದು ದಿಟವೇ. ಅವರದ್ದು ಖಾಲಿ ಕೈ, ತುಂಬಿದ ಹೃದಯ. ಆದರೆ ನಿಮ್ಮದು ಹಾಗಲ್ಲವಲ್ಲ, ಹೃದಯದ ತುಂಬಾ ಕಾರ್ಕೋಟಕ ವಿಷ ಎಂದು ಆಕ್ರೋಶ ಹೊರಹಾಕಿದೆ.

    ಕಂಡೋರ ಹಣ ಮತ್ತು ಬಡವರು, ದೀನದಲಿತರು, ದುರ್ಬಲರ ಭೂಮಿಯನ್ನು ಹೆದರಿಸಿ ಬೆದರಿಸಿ ಕಿತ್ತುಕೊಂಡು ತುಂಬಿಸಿಕೊಂಡ ಪಾಪದ ಟ್ರಂಕು. ಈ ಸತ್ಯ ನಿಮಗಷ್ಟೇ ಅಲ್ಲ, ಇಡೀ ನಾಡಿಗೆ, ದೇಶಕ್ಕೇ ತಿಳಿದಿದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ ಮಿಸ್ಟರ್ ಲೂಟೇಶಿ ಎಂದು ಕಿಡಿಕಾರಿದೆ.

    ಜೆಡಿಎಸ್ ಬಿಡುಗಡೆ ಮಾಡಿದ ಟ್ರಂಕ್ ಪಟ್ಟಿ
    ಕುಮಾರಸ್ವಾಮಿ ಟ್ರಂಕ್‌ನಲ್ಲಿರುವುದೇನು?
    – 2 ಬಾರಿ ರೈತರ ಸಾಲಮನ್ನ.
    – ಸಾರಾಯಿ ಮತ್ತು ಲಾಟರಿ ನಿಷೇಧ.
    – ಗ್ರಾಮ ವಾಸ್ತವ್ಯ ಮೂಲಕ ಹಳ್ಳಿ-ಹಳ್ಳಿಗಳಿಗೆ ಸರ್ಕಾರ.
    – ಜನತಾ ದರ್ಶನ
    – ಸುವರ್ಣ ಗ್ರಾಮ ಯೋಜನೆ.
    – ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಚನೆ.
    – ನಮ್ಮ ಮೆಟ್ರೋಗೆ ಅಡಿಗಲ್ಲು.
    – ಧಾರವಾಡ ಹೈಕೋರ್ಟ್ ಪೀಠ ಸ್ಥಾಪನೆ.
    – ಬೀದಿಬದಿಯ ವ್ಯಾಪಾರಿಗಳಿಗೆ ಬಡವರ ಬಂಧು ಯೋಜನೆ.
    – ಸುವರ್ಣ ಸೌಧ ನಿರ್ಮಾಣ.
    – ರಾಜ್ಯದಲ್ಲಿ 760 ಪ್ರಾಥಮಿಕ ಶಾಲೆಗಳು, 1,000 ಪ್ರೌಢಶಾಲೆಗಳು, 260 ಪದವಿ ಕಾಲೇಜುಗಳು, 500 ಪದವಿ ಪೂರ್ವ ಕಾಲೇಜುಗಳು.
    – 7 ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, 6 ಮೆಡಿಕಲ್ ಕಾಲೇಜುಗಳ ಸ್ಥಾಪನೆ.
    – ವಿದ್ಯಾರ್ಥಿನಿಯರಿಗೆ ಉಚಿತ ಸೈಕಲ್ ವಿತರಣೆ.
    – ಭಾಗ್ಯಲಕ್ಷ್ಮಿ ಯೋಜನೆ.
    – ಪ್ರೌಢಶಾಲೆಗಳಲ್ಲಿಯೂ ಬಿಸಿಯೂಟ.
    – 1,000 ಕರ್ನಾಟಕ ಪಬ್ಲಿಕ್ ಶಾಲೆಗಳ ಘೋಷಣೆ.
    – ಸುವರ್ಣ ಗ್ರಾಮ ಯೋಜನೆ.
    – ರೈತ ಸಿರಿ ಯೋಜನ.
    – ಫೆರಿಪೆರಲ್ ರಿಂಗ್ ರೋಡ್
    – ಕಾಂಪೀಟ್ ವಿಥ್ ಚೀನಾ
    – ಸಂಧ್ಯಾ ಸುರಕ್ಷಾ ಯೋಜನೆ.
    – ರೋಶಿಣಿ ಯೋಜನೆ
    – ಮಾತೃಶ್ರೀ ಯೋಜನೆ
    – ಕಾವೇರಿ 4ನೇ ಹಂತ, ಹೊಸ ಪ್ರದೇಶಗಳಿಗೆ ಕಾವೇರಿ ನೀರು.
    – ಕೊಡಗಿನ ನೆರೆ ಸಂತ್ರಸ್ತರಿಗೆ ತಲ 10ಲಕ್ಷವೆಚ್ಚದಲ್ಲಿ ಶಾಶ್ವತ ಮನೆ

    ಡಿ.ಕೆ ಶಿವಕುಮಾರ್ ಟ್ರಂಕ್‌ನಲ್ಲಿರುವುದು?
    – ಬಡವರು, ದಲಿತರ ಭೂಮಿ ಕಬಳಿಸಿ ತುಂಬಿಸಿಕೊಂಡ ಸಾವಿರಾರು ಕೋಟಿ ಮೌಲ್ಯದ ಅಕ್ರಮ ಆಸ್ತಿಗಳ ಟ್ರಂಕು ಎಂದು ಹೇಳಿ ಚುನಾವಣಾ ಆಯೋಗಕ್ಕೆ ನೀಡಿದ ಆಸ್ತಿ ಲೆಕ್ಕವನ್ನು ಪ್ರಕಟಿಸಿ ತಿರುಗೇಟು ನೀಡಿದೆ.
    – 2004 – 8 ಕೋಟಿ ರೂ.
    – 2008 – 75 ಕೋಟಿ ರೂ.
    – 2013 – 215 ಕೋಟಿ ರೂ.
    – 2018 – 840 ಕೋಟಿ ರೂ.
    – 2023 – 1414 ಕೋಟಿ ರೂ.

  • ಟನಲ್ ರೋಡ್ ಯೋಜನೆ ಬೇಡ: ತೇಜಸ್ವಿ ಸೂರ್ಯ

    ಟನಲ್ ರೋಡ್ ಯೋಜನೆ ಬೇಡ: ತೇಜಸ್ವಿ ಸೂರ್ಯ

    – ಅರ್ಧ ಗಂಟೆ ಸಮಯ ಕೊಟ್ಟರೆ ವಿವರಿಸುತ್ತೇನೆ ಎಂದ ಬಿಜೆಪಿ ಸಂಸದ

    ಬೆಂಗಳೂರು: ಟನಲ್ ರೋಡ್ ಯೋಜನೆಗೆ ಸಂಸದ ತೇಜಸ್ವಿ ಸೂರ್ಯ ವಿರೋಧ ವ್ಯಕ್ತಪಡಿಸಿದ್ದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಸಂಸದನನ್ನು ಖಾಲಿ ಡಬ್ಬ, ಅಮಾವಸ್ಯೆ ಎಂದು ಟೀಕಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಂಸದ ತೇಜಸ್ವಿ ಸೂರ್ಯ, ಅವರು ಹಿರಿಯ ರಾಜಕಾರಣಿ. ಅನುಭವ ಇದ್ದವ್ರು. ವೈಯಕ್ತಿಕ ಟೀಕೆ ಮಾಡೋದಿಲ್ಲ ಎಂದರು.

    ಡಿಸಿಎಂ ಅವರನ್ನು ಭೇಟಿ ಮಾಡಲು ಅವರ ಕಚೇರಿಗೆ ಸಮಯ ಕೇಳಿದ್ದೇನೆ. ಅರ್ಧ ಗಂಟೆ ಸಮಯ ಕೊಟ್ಟರೆ ಟನಲ್ ಯೋಜನೆ ಯಾಕೆ ಬೇಡ? ಇದರಿಂದ ಏನು ಸಮಸ್ಯೆ ಆಗುತ್ತದೆ ಎನ್ನುವುದನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ವಿವರಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರು ಟನಲ್ ವಿರುದ್ಧ ಹೈಕೋರ್ಟ್ ಮೊರೆ – ತೇಜಸ್ವಿ ಸೂರ್ಯ, ಪ್ರಕಾಶ್ ಬೆಳವಾಡಿ ಅರ್ಜಿ

    ಈ‌ ಯೋಜನೆಯ ಬಗ್ಗೆ ಡಿಸಿಎಂ ಅವರಿಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಿಲ್ಲ ಅನಿಸುತ್ತೆ. ಈ ಯೋಜನೆಯಿಂದ ಸ್ಯಾಂಕಿ ಕೆರೆ, ಲಾಲ್ ಬಾಗ್ ಪ್ರದೇಶಕ್ಕೆ ಹಾನಿಯಾಗಲಿದೆ. ಮಾಡೇ ಮಾಡ್ತೀನಿ ಅಂತ ಜಿದ್ದಿಗೆ ಬೀಳೋದು ತಪ್ಪು. ಟನಲ್ ಯೋಜನೆ ಬೇಡ ಅಂತ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ಲೇಖಕ, ನಟ ಪ್ರಕಾಶ್ ಬೆಳವಾಡಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ಮಂಗಳವಾರ ಬರಲಿದ್ದು, ನಾನೇ ವಾದ ಮಂಡಿಸಲಿದ್ದೇನೆ ಎಂದು ಹೇಳಿದರು.

  • ಉತ್ತರಾಧಿಕಾರ ಪ್ರಶ್ನೆ ಎತ್ತಿದ ಯತೀಂದ್ರಗೆ ಫಜೀತಿ – ಹೈಕಮಾಂಡ್‌ಗೆ ಕೆಪಿಸಿಸಿ ವರದಿ ರವಾನೆ

    ಉತ್ತರಾಧಿಕಾರ ಪ್ರಶ್ನೆ ಎತ್ತಿದ ಯತೀಂದ್ರಗೆ ಫಜೀತಿ – ಹೈಕಮಾಂಡ್‌ಗೆ ಕೆಪಿಸಿಸಿ ವರದಿ ರವಾನೆ

    – ಮಗನ ಹೇಳಿಕೆ ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ಅಧಿಕಾರ ಹಂಚಿಕೆ, ಸಂಪುಟ ಸರ್ಜರಿ ಕುದಿಯಲ್ಲಿ ಬೇಯುತ್ತಿರುವ ರಾಜ್ಯ ಕಾಂಗ್ರೆಸ್‌ನಲ್ಲಿ ಉತ್ತರಾಧಿಕಾರಿ ಸಮರ ತಾರಕಕ್ಕೇರಿದೆ. ಸಿದ್ದರಾಮಯ್ಯಗೆ (Siddaramaiah) ಸತೀಶ್ ಜಾರಕಿಹೊಳಿ ಸಮರ್ಥ ಉತ್ತರಾಧಿಕಾರಿ ಎಂಬ ಸಂದೇಶ ರವಾನಿಸಿ ಯತೀಂದ್ರ ಇಕ್ಕಟ್ಟಿಗೆ ಸಿಲುಕಿದ್ದಾರೆ. ಯತೀಂದ್ರ ಹೇಳಿಕೆ ರಾಜಕೀಯ ಸಂಚಲನ ಸೃಷ್ಟಿಸುತ್ತಿದ್ದಂತೆಯೇ ಹೈಕಮಾಂಡ್‌ಗೆ ಕೆಪಿಸಿಸಿ ರಿಪೋರ್ಟ್ ಸಲ್ಲಿಸಿದೆ.

    ಈಗ ಯತೀಂದ್ರ (Yathindra Siddaramaiah) ಮೇಲೆ ಹೈಕಮಾಂಡ್ ಶಿಸ್ತುಕ್ರಮದ ತೂಗುಗತ್ತಿ ಇದೆ. ಯತೀಂದ್ರ ಮಾತಿಗೆ ಕಡಿವಾಣಕ್ಕೆ ಪಕ್ಷದ ಕೆಲ ಶಾಸಕರು ಆಗ್ರಹಿಸಿದ್ದಾರೆ. ಡಿಸಿಎಂ ಡಿಕೆಶಿ ಕೂಡ, ‘ಯಾರ ಹತ್ತಿರ.. ಏನು ಮಾತನಾಡಬೇಕೋ.. ಅಲ್ಲಿ ಮಾತನಾಡುತ್ತೇನೆ. ನಾನು ಶಿಸ್ತಿನ ಜೊತೆ ನಿಲ್ಲುತ್ತೇನೆ’ ಅಂತ ಪರೋಕ್ಷ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ಆಂತರಿಕ ಸಂಘರ್ಷ, ಅಧಿಕಾರ ಹಸ್ತಾಂತರ ಚರ್ಚೆ ಮಧ್ಯೆ ರಾಜ್ಯಕ್ಕೆ ಬರಲಿದ್ದಾರೆ ರಾಹುಲ್‌ ಗಾಂಧಿ

    ಈ ಬೆನ್ನಲ್ಲೇ ಸಿಎಂ ಪ್ರತಿಕ್ರಿಯಿಸಿದ್ದು, ಮಗನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸೈದ್ಧಾಂತಿಕವಾಗಿ ಮಾತ್ರ ಮಾತನಾಡಿದ್ದೇನೆ ಅಂತ ಹೇಳಿದ್ದಾನೆ. ಇದನ್ನು ತಿರುಚಿ ಬರೆಯಲಾಗಿದೆ ಅಂತ ವಿವಾದಕ್ಕೆ ಇತಿಶ್ರೀ ಹಾಡಿದ್ದಾರೆ.

    ಯತೀಂದ್ರ ಹೇಳಿಕೆಗೆ ಸಚಿವ ಮಹದೇವಪ್ಪ, ಮಾಜಿ ಸಚಿವ ರಾಜಣ್ಣ ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ, ಯಾರೋ ತೆವಲಿಗೆ, ತೀಟೆಗೆ ಮಾತನಾಡಿದ್ದನ್ನ ಗಣನೆಗೆ ತೆಗೆದುಳ್ಳೊಕ್ಕಾಗಲ್ಲ ಅಂತ ಮದ್ದೂರು ಶಾಸಕ ಉದಯ್ ಮಾತನಾಡಿದ್ದಾರೆ. ಇದನ್ನೂ ಓದಿ: ಒಂದು ಮತ ಕಳವಿಗೆ 80 ರೂ. ʻಕೂಲಿʼ – ಬಿಜೆಪಿ ಮೇಲೆ ಆರೋಪ ಹೊರಿಸಿದ ಈಶ್ವರ್‌ ಖಂಡ್ರೆ

  • ಅರ್ಹರಿಗೆ ಪ್ರಶಸ್ತಿ ಕೊಡ್ಬೇಕು ಅಂತ ಮಾಡಿದ್ದೇ ಮೋದಿ ಅಂತ ಜಗ್ಗೇಶ್ ಹೇಳಿದ್ರು: ‘ಪದ್ಮಭೂಷಣ’ ಬಗ್ಗೆ ಅನಂತ್ ನಾಗ್ ಮಾತು

    ಅರ್ಹರಿಗೆ ಪ್ರಶಸ್ತಿ ಕೊಡ್ಬೇಕು ಅಂತ ಮಾಡಿದ್ದೇ ಮೋದಿ ಅಂತ ಜಗ್ಗೇಶ್ ಹೇಳಿದ್ರು: ‘ಪದ್ಮಭೂಷಣ’ ಬಗ್ಗೆ ಅನಂತ್ ನಾಗ್ ಮಾತು

    ರ್ಹರಿಗೆ ಪ್ರಶಸ್ತಿ ಕೊಡ್ಬೇಕು ಅಂತ ಮಾಡಿದ್ದೇ ಪ್ರಧಾನಿ ಮೋದಿ ಅಂತ ಜಗ್ಗೇಶ್ ಹೇಳಿದ್ರು ಎಂದು ಪದ್ಮಭೂಷಣ ಪ್ರಶಸ್ತಿ ಬಗ್ಗೆ ಹಿರಿಯ ನಟ ಅನಂತ್ ನಾಗ್ ಮಾತನಾಡಿದರು.

    ಪದ್ಮ ಪ್ರಶಸ್ತಿ ಪಡೆದ ನಟರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅನಂತ್ ನಾಗ್, ಇದು ನನ್ನ ಪ್ರಶಸ್ತಿ ಅಲ್ಲ. ಕನ್ನಡ ಚಿತ್ರರಂಗಕ್ಕೆ ಈ ಪ್ರಶಸ್ತಿ ಅರ್ಪಿಸಿದ್ದೇನೆ. ಅರ್ಹರಿಗೆ ಈ ಪ್ರಶಸ್ತಿ ಕೊಡ್ಬೇಕು ಅಂತ ಮಾಡಿದ್ದೆ ನರೇಂದ್ರ ಮೋದಿ ಅವ್ರು ಅಂತ ಜಗ್ಗೇಶ್ ಅವ್ರು ಹೇಳಿದ್ರು ಎಂದು ನೆನಪಿಸಿಕೊಂಡರು.

    ನಾನು ಮೊದಲ ಸಲ ಅಸೆಂಬ್ಲಿಗೆ ಹೋಗಿದ್ದೆ, ಅಲ್ಲಿ ಮಂತ್ರಿ ಆಗಿದ್ದೆ. ಆಗ ಡಿಕೆಶಿನ ನೋಡಿ ಎಷ್ಟು ಸ್ಮಾರ್ಟ್ ಇದ್ದಾರೆ, ಇವ್ರು ರಾಜಕೀಯದಲ್ಲಿ ಏನು ಮಾಡ್ತಿದ್ದಾರೆ ಅನ್ಕೊಂಡೆ. ಅವತ್ತಿಂದ ಹೇಳ್ಬೇಕು ಅನ್ಕೋತಿದ್ದೆ. ಡಿಕೆಶಿ ಇಂಡಸ್ಟ್ರಿಗೆ ಬರ್ಬೇಕಿತ್ತು ಎಂದು ಹೇಳಿದರು.

    53 ವರ್ಷ ಸಿನಿ ಜರ್ನಿ ಮೆಲುಕು ಹಾಕಿದ ಅವರು, ನಿರ್ದೇಶಕ, ನಿರ್ಮಾಪಕರು, ಸಾಹಿತ್ಯ, ಸಂಭಾಷಣೆ ಬರೆಯುವವರಿಗೆ ಧನ್ಯವಾದ. ತಡವಾಗಿ ಶೂಟಿಂಗ್ ಮುಗಿಸಿ ಮನೆಗೆ ಹೋಗಿದ್ದೆ. ಕಾರ್ಯಕ್ರಮ ನೋಡ್ತಿದ್ದೆ. ಆಗ ಅನ್ಸಿದ್ದು ಒಂದೇ ಒಂದು ಹಾಡಿನಲ್ಲೂ ಡಾನ್ಸ್ ಮಾಡಿಲ್ಲ ನಾನು. ಎಕ್ಸ್ಪ್ರೆಷನ್ ಕೊಡ್ತಿದ್ದೆ ಅಷ್ಟೇ. ಡಾನ್ಸ್, ಫೈಟ್ ಏನು ಮಾಡಿಲ್ಲ. ಕನ್ನಡಿಗರು ನನ್ನನ್ನು ಕ್ಷಮಿಸಿದ್ದಾರೆ. 300 ಸಿನಿಮಾ ಮಾಡಿದೀನಿ ಒಪ್ಪಿಕೊಂಡಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು.

    ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಇದು ಪವಿತ್ರವಾದ ಸಂಭ್ರಮ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿAದ ಪವಿತ್ರ ಕೆಲಸ ಇದು. ನಾನು ವಾಣಿಜ್ಯ ಮಂಡಳಿಯಲ್ಲಿ ಸದಸ್ಯನಾಗಿದ್ದವನು. 35 ವರ್ಷಗಳ ಹಿಂದೆ ಡೈರೆಕ್ಟರ್ ಆಗಿದ್ದವನು. ಎಲೆಕ್ಷನ್‌ಗೂ ಮೊದಲು ಡೈರೆಕ್ಟರ್ ಆಗಿದ್ದೆ. ಅನಂತ್ ನಾಗ್‌ಗೆ ಸನ್ಮಾನ ಅಂದಿದ್ದಕ್ಕೆ ಮಾತ್ರ ಇವತ್ತು ಬಂದಿದ್ದೀನಿ. ಎಲ್ಲಿ ಮನಸ್ಸು ಇದೆಯೋ ಅಲ್ಲಿ ಮಾರ್ಗ ಇದೆ. ಭಕ್ತಿ ಇದೆಯೋ ಅಲ್ಲಿ ಭಗವಂತ ಇದ್ದಾನೆ. ನೀವೆಲ್ಲ ಬಣ್ಣ ಹಾಕ್ಕೊಂಡು ನಾಟಕ ಮಾಡ್ತಿದ್ದೀರಾ, ನಾವು ಬಣ್ಣ ಹಾಕ್ದೆ ನಾಟಕ ಮಾಡ್ತಿದ್ದೀವಿ. ಮೂರು ನಾಲ್ಕು ವರ್ಷಗಳಿಂದ ಸ್ಯಾಂಡಲ್‌ವುಡ್ ಬಾಲಿವುಡ್‌ನ ಟೇಕ್ ಓವರ್ ಮಾಡಿದೆ ಎಂದು ಬಣ್ಣಿಸಿದರು.

  • ಡಿ.ಕೆ.ಶಿವಕುಮಾರ್‌ಗೆ ಸ್ವಲ್ಪ ದಿನವಾದ್ರೂ ಕಾಂಗ್ರೆಸ್ ಹೈಕಮಾಂಡ್ ಸಿಎಂ ಸ್ಥಾನ ಕೊಡಬೇಕು: ಹೆಚ್.ವಿಶ್ವನಾಥ್

    ಡಿ.ಕೆ.ಶಿವಕುಮಾರ್‌ಗೆ ಸ್ವಲ್ಪ ದಿನವಾದ್ರೂ ಕಾಂಗ್ರೆಸ್ ಹೈಕಮಾಂಡ್ ಸಿಎಂ ಸ್ಥಾನ ಕೊಡಬೇಕು: ಹೆಚ್.ವಿಶ್ವನಾಥ್

    ಬೆಂಗಳೂರು: ಡಿ.ಕೆ.ಶಿವಕುಮಾರ್‌ಗೆ (D.K.Shivakumar) ಸ್ವಲ್ಪ ದಿನವಾದ್ರೂ ಕಾಂಗ್ರೆಸ್ ಹೈಕಮಾಂಡ್ ಸಿಎಂ ಸ್ಥಾನ ಕೊಡಬೇಕು ಎಂದು ಡಿಕೆಶಿ ಪರ ಬಿಜೆಪಿ MLC ಹೆಚ್.ವಿಶ್ವನಾಥ್ (H.Vishwanath) ಬ್ಯಾಟಿಂಗ್ ಮಾಡಿದ್ದಾರೆ.

    ಕಾಂಗ್ರೆಸ್‌ನಲ್ಲಿ ನಡೆಯುತ್ತಿರೋ ಪವರ್ ಶೇರಿಂಗ್ ಕಿತ್ತಾಟ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು,‌ ಡಿಕೆಶಿಗೆ ಸ್ವಲ್ಪ ದಿನವಾದ್ರು ಸಿಎಂ ಸ್ಥಾನವನ್ನು ಕಾಂಗ್ರೆಸ್ ಹೈಕಮಾಂಡ್ ಕೊಡಬೇಕು.136 ಸ್ಥಾನ ಕಾಂಗ್ರೆಸ್‌ಗೆ ಬಂದು ಬಹುಮತದ ಸರ್ಕಾರ ರಚನೆ ಆಗಬೇಕಾದ್ರೆ ಡಿಕೆ ಶಿವಕುಮಾರ್ ಪಾತ್ರ ಬಹಳ ಇದೆ. ಕಾಂಗ್ರೆಸ್‌ಗೆ ಒಕ್ಕಲಿಗ ಸಮುದಾಯ ಕೂಡ ಡಿಕೆಶಿ ಸಿಎಂ ಆಗ್ತಾರೆ ಅಂತ ಮತ ಹಾಕಿದ್ದಾರೆ. ಹೀಗಾಗಿ, ಅವರಿಗೆ ಸಿಎಂ ಸ್ಥಾನ ಕೊಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತಾರಕಕ್ಕೇರಿದ ಕುಸುಮಾ Vs ಮುನಿರತ್ನ ಫೈಟ್‌ – ಪಟಾಕಿ ಹಂಚಲು ಪೊಲೀಸರಿಂದ ತಡೆ

    5 ವರ್ಷ ನಾನೇ ಸಿಎಂ ಅಂತ ಸಿದ್ದರಾಮಯ್ಯ ಹೇಳೋದು ಭಂಡತನ. ಸಿದ್ದರಾಮಯ್ಯ ನಾನು ಸಿಎಂ ಅಗಿ ಇರುತ್ತೇನೆ ಅಂತ ಹೇಳಬಾರದು. ರಾಜಕೀಯ ಪಕ್ಷ ಮತ್ತು ಸರ್ಕಾರ ಎಂದರೆ ಎಲ್ಲರೂ ಒಟ್ಟಾಗಿ ಹೋಗಬೇಕು. ರಾಜಕೀಯ ಪಕ್ಷ ಎಂದರೆ ಎಲ್ಲರೂ ಶೇರ್ ಮಾಡಿಕೊಂಡು ಹೋಗಬೇಕು. 30 ಜನರಿಗೆ ಈಗ ಅಧಿಕಾರ ಕೊಟ್ಟಿಲ್ಲವಾ? ಮಂತ್ರಿಗಳು ಇಲ್ಲವೇ? ಸಿಎಂ ಕೂಡಾ ಒಬ್ಬ ಮಂತ್ರಿಯೆ. ಆದರೆ, ಅವರು ಲೀಡ್ ಮಾಡ್ತಾರೆ ಅಷ್ಟೆ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

    ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರುತ್ತಾರೆ ಎಂಬ ಪುತ್ರ ಯತೀಂದ್ರ ‌ಹೇಳಿಕೆಗೆ ತಿರುಗೇಟು ಕೊಟ್ಟ ವಿಶ್ವನಾಥ್, ಸಿದ್ದರಾಮಯ್ಯಗೆ ಬೇರೆ ಯಾರ ಸಪೋರ್ಟ್ ಇಲ್ಲ. ಅವರ ಮಗನೇ ಸಪೋರ್ಟ್. ಅಪ್ಪನಿಗೆ ಮಗನೇ ಸಪೋರ್ಟ್. ಆಪ್ತ ಸಚಿವರು ಒಂದು ತಿಂಗಳಿಂದ ಸಿದ್ದರಾಮಯ್ಯಗೆ ಬೆಂಬಲ ಕೊಡ್ತಿಲ್ಲ. ಅವರೇ ಸಿಎಂ ಅಂತ ಅವರ ಬೆಂಬಲಿಗರು ಹೇಳ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಜೊತೆ ಮುನಿರತ್ನ ಆಪ್ತ ಮಾತು – ಭಾಷಣದ ಆರಂಭದಲ್ಲೇ ನೆಚ್ಚಿನ ಸಿಎಂ ಎಂದ ಶಾಸಕ

    ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿ ಹಿಂದೆ ಇದ್ದರು. ಈಗ 2.5 ವರ್ಷ ಇದ್ದಾರೆ. ಹೈಕಮಾಂಡ್ ಡಿಕೆ ಶಿವಕುಮಾರ್‌ಗೆ ಸಿಎಂ ಸ್ಥಾನ ಖಂಡಿತ ಕೊಡಬೇಕು. ಯಾಕೆ ಕೊಡಬಾರದು? ಸಿದ್ದರಾಮಯ್ಯಗೆ 5 ವರ್ಷ ಈಗ 2.5 ಕೊಡಲಾಗಿದೆ. ಬೇರೆ ಅವರಿಗೆ ಕೊಡಿ. ಎಲ್ಲಾ ನಾನೇ ನಾನೇ ಅಂದರೆ ಹಾಗೆ ಆಗೊಲ್ಲ ಎಂದು ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂದು ಒತ್ತಾಯಿಸಿದ್ದಾರೆ.

  • ಡಿಕೆಶಿಗೆ ಹಾಸನಾಂಬೆ ಮಹಾಪ್ರಸಾದ – ಪೂಜೆ ವೇಳೆ ಬಲಗಡೆ ಹೂವು ವರ ನೀಡಿದ ದೇವಿ

    ಡಿಕೆಶಿಗೆ ಹಾಸನಾಂಬೆ ಮಹಾಪ್ರಸಾದ – ಪೂಜೆ ವೇಳೆ ಬಲಗಡೆ ಹೂವು ವರ ನೀಡಿದ ದೇವಿ

    – ಶತ್ರುವಿನ ಮೇಲೆ ವಿಜಯ ಸಾಧಿಸಲು ಖಡ್ಗಮಾಲ ಸ್ತೋತ್ರ ಪಠಿಸಿದ ಡಿಕೆಶಿ
    – ಡಿಕೆಶಿ ಭೇಟಿ ಬೆನ್ನೇ ಇಂದು ಸಿದ್ದರಾಮಯ್ಯರಿಂದ ಹಾಸನಾಂಬೆ ದರ್ಶನ

    ಹಾಸನ: ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆಗೆ ಕಸರತ್ತು ನಡೆಯುತ್ತಿರುವ ಹೊತ್ತಿನಲ್ಲೇ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರಿಗೆ ಹಾಸನಾಂಬೆ ಸನ್ನಿಧಿಯಲ್ಲಿ ಮಹಾಪ್ರಸಾದ ಸಿಕ್ಕಿದೆ.

    ಮಂಗಳವಾರ ರಾತ್ರಿ ಪತ್ನಿಯೊಂದಿಗೆ ಹಾಸನಾಂಬೆ (Hassanamba Temple) ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಡಿಸಿಎಂಗೆ ವಿಜಯೀ ಶ್ರೇಯಸ್ಸು ಲಭಿಸಲೆಂದು ನಾರಾಯಣಿ ನಮಸ್ಕಾರ ಮಂತ್ರದ ಮೂಲಕ ಪೂಜೆ. ಸಲ್ಲಿಸಲಾಯಿತು. ಸುಮಾರು ಐದು ನಿಮಿಷ ದುರ್ಗಾ ಸಪ್ತಸತಿಯ 11ನೇ ಅಧ್ಯಾಯದ ನಾರಾಯಣಿ ನಮಸ್ಕಾರ ಮಂತ್ರ ಹೇಳಿ ಅರ್ಚಕರು ಪೂಜೆ ನೆರವೇರಿಸಿದರು.

    ಪೂಜೆ ನೇರವೇರಿಸುವ ವೇಳೆ ಡಿಕೆಶಿ ʻಶತ್ರುವಿನ ಮೇಲೆ ವಿಜಯ ಸಾಧಿಸಲು ಖಡ್ಗಮಾಲ ಸ್ತೋತ್ರʼ ಪಠಿಸಿದರು. ಇದೇ ಶುಭ ಸಮಯದಲ್ಲಿ ದೇವಿಯ ಬಲಗಡೆಯಿಂದ ಹೂವು ವರದವಾಗಿ ಬಿದ್ದಿತು. 2 ಬಾರಿ ದೇವಿಯ ಬಲಭಾಗದ ಹೂವು ಬಿದ್ದಿತು.

    ಪೂಜೆ ಬಳಿಕ ಮಾತನಾಡಿದ ಡಿಕೆಶಿ, ನಾನುಂಟು.. ಆ ತಾಯಿ ಉಂಟು ನಮಗೆ, ನಿಮಗೆ, ಎಲ್ಲರಿಗೂ ಭಗವಂತ ಶಾಂತಿ, ನೆಮ್ಮದಿ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸಿದ್ದೇನೆ ಎಂದ್ರು.

    ಇಂದು ಸಿಎಂ ಭೇಟಿ
    ಮಂಗಳವಾರ ರಾತ್ರಿ ಡಿಸಿಎಂ ಭೇಟಿ ನೀಡಿದ ಪೂಜೆ ಸಲ್ಲಿಸಿದ ಬೆನ್ನಲ್ಲೇ ಇಂದು ಸಿಎಂ ಸಿದ್ದರಾಮಯ್ಯ ಹಾಸನಾಂಬ ಸನ್ನಿಧಿಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆ ಬೂವನಹಳ್ಳಿ ಹೆಲಿಪ್ಯಾಡ್‌ಗೆ ಆಗಮಿಸಲಿದ್ದು, ಅಲ್ಲಿಂದ ಹಾಸನಾಂಬೆ ದರ್ಶನಕ್ಕೆ ತೆರಳಲಿದ್ದಾರೆ. ದರ್ಶನ ಪಡೆದು ಮಧ್ಯಾಹ್ನ 12 ಗಂಟೆಗೆ ವಾಪಸ್ ಆಗಲಿದ್ದಾರೆ. ಕಳೆದ 2 ವರ್ಷಗಳಿಂದ ಸಿಎಂ ಹಾಸನಾಂಬೆ ದರ್ಶನ ಪಡೆಯುತ್ತಿರುವುದು ಗಮನಾರ್ಹ.