Tag: ಡಿ.ಎಸ್ ಅರುಣ್

  • ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ ಪರಿಷತ್ ಸದಸ್ಯ

    ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ ಪರಿಷತ್ ಸದಸ್ಯ

    ಬೆಂಗಳೂರು: ಜಿಪಂ (Zilla Panchayat), ತಾಪಂ (Taluk Panchayat) ಮೀಸಲಿಟ್ಟಿದ್ದ ಬಳಕೆಯಾಗದ ಅನುದಾನ ವಾಪಸ್ ಪಡೆದು ಹಣ ಬಳಕೆ ಆರೋಪ ಮಾಡಿದ್ದು, ಎಲ್ಲಿಗೆ ಬಳಸಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ಬಿಜೆಪಿ ಪರಿಷತ್ ಸದಸ್ಯ ಡಿ.ಎಸ್.ಅರುಣ್ (D S Arun) ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

    ಸಿಎಂ ವಿರುದ್ಧ ದೂರಿನ ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ರಾಜ್ಯ ಹಣಕಾಸು ಸಚಿವರು. ಜೆಡ್‌ಪಿ-ಟಿಪಿ (ಜಿಲ್ಲಾ ಪಂಚಾಯತಿ -ತಾಲ್ಲೂಕು ಪಂಚಾಯತಿ) ಬಳಕೆ ಆಗದ ಹಣ ಎಷ್ಟು ಇದೆ ಎಂದು ಅಧಿವೇಶನದಲ್ಲಿ ಸಿದ್ದರಾಮಯ್ಯ ಅವರ ಬಳಿ ಕೇಳಿದ್ದೆ. ಆಗ ಅವರು 1,953 ಕೋಟಿ ರೂ. ಬಳಕೆ ಆಗದ ಹಣ ಇದೆ ಎಂದಿದ್ದರು. ಅದರಲ್ಲಿ 1,494 ಕೋಟಿ ರೂ. ಖಜಾನೆಗೂ ಜಮಾ ಆಗಿಲ್ಲ ಎಂದು ಪ್ರಶ್ನಿಸಿದಾಗ ನಿಯಮಿತವಾಗಿ ಪೇಮೆಂಟ್ ಜಮೆ ಆಗ್ತಾ ಇದೆ ಎಂದು ಸಿಎಂ ಸಿದ್ದರಾಮಯ್ಯ ಉತ್ತರ ನೀಡಿದ್ದರು.

    ಖರ್ಚಾಗದೇ ಇದ್ದ ಹಣ ಸಂಚಿತ ನಿಧಿ ಮೂಲಕ ಸರ್ಕಾರಕ್ಕೆ ಬರಬೇಕು. ಅಲ್ಲದೆ ಆ ಹಣ ಬಳಕೆ ಆಗುವಾಗ ಶಾಸಕರ ಅನುಮತಿ ಪಡೆಯಬೇಕು. ನಾನು ಹಣಕಾಸು ಇಲಾಖೆಗೂ ಪತ್ರ ಬರೆದಿದ್ದೆ, ಅಲ್ಲೂ ಹಣ ಜಮಾ ಆಗಿಲ್ಲ, ಆ ಹಣ ಎಲ್ಲಿಗೆ ಹೋಯ್ತು….? ಎಂದು ಪ್ರಶ್ನಿಸಿದ್ದಾರೆ.

    ಜೆಡ್‌ಪಿ-ಟಿಪಿಗೆ ಇಟ್ಟ ಹಣ ಎಲ್ಲಿಗೆ ಹೋಯ್ತು..? ಜೆಡ್‌ಪಿ-ಟಿಪಿಯಲ್ಲಿ ಹಿಂದುಳಿದ ವರ್ಗದವರೆ ಜಾಸ್ತಿ ಇದ್ದಾರೆ. ಈ ಹಣದ ಬಳಕೆ ಸಂಬಂಧಿಸಿದಂತೆ ತನಿಖೆ ಆಗಬೇಕು. ಇದಕ್ಕೆಲ್ಲಾ ಹಣಕಾಸು ಸಚಿವರೇ ಹೊಣೆ ಎಂದರು. ಅದಕ್ಕಾಗಿಯೇ ನಾನು ಸಿದ್ದರಾಮಯ್ಯ ವಿರುದ್ಧವೇ ರಾಜ್ಯಪಾಲರಿಗೆ ದೂರು ನೀಡಿದ್ದೇನೆ. ಸಾರ್ವಜನಿಕ ಖಾತೆ ಸಮಿತಿಗೂ ದೂರು ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದರು.

  • ಇಂಗ್ಲಿಷ್ ವ್ಯಾಮೋಹ ಕನ್ನಡ ಭಾಷಾಭಿವೃದ್ಧಿಗೆ ದೊಡ್ಡ ಸವಾಲು: ಡಿ.ಎಸ್.ಅರುಣ್

    ಇಂಗ್ಲಿಷ್ ವ್ಯಾಮೋಹ ಕನ್ನಡ ಭಾಷಾಭಿವೃದ್ಧಿಗೆ ದೊಡ್ಡ ಸವಾಲು: ಡಿ.ಎಸ್.ಅರುಣ್

    ಚಿತ್ರದುರ್ಗ: ಇಂಗ್ಲಿಷ್ ವ್ಯಾಮೋಹ ಕನ್ನಡ ಭಾಷಾಭಿವೃದ್ಧಿಗೆ ದೊಡ್ಡ ಸವಾಲಾಗಿದೆ ಎಂದು ಕರ್ನಾಟಕ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಿ.ಎಸ್.ಅರುಣ್ ಹೇಳಿದ್ದಾರೆ.

    ನಗರದ ವಾಸವಿ ವಿದ್ಯಾ ಸಂಸ್ಥೆ ಆವರಣದಲ್ಲಿ ಸುರೇಶ ಗುಪ್ತ ಅವರ ಕೃತಿ ‘ಪಾರಾವಾರ’ವನ್ನು ಬಿಡುಗಡೆ ಮಾಡಿ ಅರುಣ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದು, ಪೋಷಕರಲ್ಲಿ ಇಂಗ್ಲಿಷ್ ವ್ಯಾಮೋಹ ದಿನ ದಿನಕ್ಕೂ ಹೆಚ್ಚುತ್ತಿರುವುದರಿಂದ ಮಕ್ಕಳಲ್ಲಿ ಮಾತೃಭಾಷೆ, ಕನ್ನಡದ ಬಗ್ಗೆ ಪ್ರೌಢಿಮೆ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಹೀರಣ್ಯಕೇಶಿ ನದಿಯಲ್ಲಿ ಮೊಸಳೆ ಪ್ರತ್ಯಕ್ಷ – ಆತಂಕದಲ್ಲಿ ನದಿ ತೀರದ ಜನ

    ಹಲವು ವಿದೇಶಗಳಲ್ಲಿ ಮಾತೃಭಾಷೆಗೆ ನೀಡಿದಷ್ಟು ಆದ್ಯತೆ ಇಂಗ್ಲೀಷ್ ಅಥವಾ ಇತರೆ ಭಾಷೆಗಳಿಗೆ ನೀಡುವುದಿಲ್ಲ. ಆಡಳಿತ ವ್ಯವಹಾರ ಮಾತೃ ಭಾಷೆಯಲ್ಲಿಯೇ ಇರುತ್ತೆ. ಆದರೆ ನಮ್ಮ ನಾಡಲ್ಲಿ ಮಾತೃ ಭಾಷೆ ಅಭಿವೃದ್ಧಿಗೋಸ್ಕರ ಗೋಕಾಕ್ ಚಳುವಳಿ ರೀತಿಯಲ್ಲಿ ಮತ್ತೊಮ್ಮೆ ಚಳುವಳಿಯನ್ನು ಮಾಡಬೇಕಾಗಿ ಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.

    ಸಾರ್ವಜನಿಕರು ಪುಸ್ತಕಗಳನ್ನು ಕೊಂಡು, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಮಕ್ಕಳಲ್ಲಿ, ಯುವಜನರಲ್ಲಿ ಮಾತೃಭಾಷೆಯ ಬಗ್ಗೆ ಅಸಡ್ಡೆ ಹೆಚ್ಚುತ್ತಿರುವುದರಿಂದ ಉತ್ತಮವಾದ ಸಾಹಿತ್ಯ ಸೃಷ್ಟಿ ಕಷ್ಟವಾಗುತ್ತಿದೆ. ಪ್ರಪಂಚದಲ್ಲಿಯೇ ಕನ್ನಡ ಭಾಷೆ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದ್ದು, ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇದರ ಹೆಗ್ಗಳಿಕೆಯಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ದಿ. ಕಲಾಕೇಸರಿ ಉದಯಕುಮಾರ್ ಪತ್ನಿ ಸುಶೀಲಾದೇವಿ ವಿಧಿವಶ

    ನೂತನ ಶಿಕ್ಷಣ ನೀತಿ ಅನುಷ್ಠಾನದಿಂದ ಮಕ್ಕಳಲ್ಲಿ ಮಾತೃಭಾಷೆ ಒಲವು ಹೆಚ್ಚಲಿದೆ. ಎಲ್ಲಾ ವಿಷಯಗಳೂ ಸಹ ಮಾತೃ ಭಾಷೆಯಲ್ಲಿಯೇ ಬೋಧಿಸಲು ಕ್ರಮ ವಹಿಸಬೇಕಾಗಿದೆ. ಸುರೇಶಗುಪ್ತ ಅವರ ಕವನಗಳು ಎಲ್ಲರ ಮನ ಮುಟ್ಟುವಂತಿದೆ ಎಂದು ಅಭಿನಂದಿಸಿದರು.

    ಇದೇ ವೇಳೆ ‘ಪಾರಾವಾರ’ ಕೃತಿ ಬಗ್ಗೆ ಕವಿಗಳು ಹಾಗೂ ವಿಶ್ರಾಂತ ಪ್ರಾಂಶುಪಾಲರಾದ ಜಿ.ಪರಮೇಶ್ವರಪ್ಪ ಅವರು ಅವಲೋಕನ ಮಾಡುತ್ತಾ ಗುಪ್ತರ ಕವನಗಳಲ್ಲಿ ಸ್ತ್ರೀ ಸಂವೇದನಾಶೀಲತೆ, ಪ್ರಕೃತಿ ಮತ್ತು ಪರಿಸರದ ಬಗ್ಗೆ ಪ್ರೀತಿ ತೋರಿಸಿರುವುದು ಅವರ ಸಾಮಾಜಿಕ ಬದ್ಧತೆಗೆ ನಿದರ್ಶನವಾಗಿದೆ. ಕೊರೊನಾ ಸಮಸ್ಯೆಗಳು ಸವಾಲುಗಳಿಂದ ಹಿಡಿದು ಹಲವು ಹತ್ತು ಪ್ರಸ್ತುತ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಚುಟುಕು ಕವನಗಳ ಮೂಲಕ ವಿಶಾಲವಾದ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ ಎಂದರು. ಇದನ್ನೂ ಓದಿ:  ಕುಡಿದ ಮತ್ತಿನಲ್ಲಿ ಮಚ್ಚಾ ಎಂದಿದ್ದಕ್ಕೆ ಜೋಡಿ ಕೊಲೆ – ಆರೋಪಿಗಳ ಬಂಧನ

    ಈ ಸಂದರ್ಭದಲ್ಲಿ ಆರ್ಯವೈಶ್ಯ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸುಜಾತ ಪ್ರಾಣೇಶ್ ಆತ್ಮೂರಿ ಲಕ್ಷ್ಮೀ ನರಸಿಂಹ ಸೋಮಯಾಜಿ ಅವರು ಸಾಮಾಜಿಕ ಅಭಿವೃದ್ಧಿಗೆ ನೀಡಿದ ಕೊಡುಗೆ ಬಗ್ಗೆ ವಿವರಿಸಿದರು.

    ಚಿತ್ರದುರ್ಗ ನಗರದ ಕೊರೊನಾ ಸಂಕಷ್ಟದಲ್ಲಿ ಕರ್ತವ್ಯ ನಿರ್ವಹಿಸಿದ ಆರೋಗ್ಯ ಇಲಾಖೆಯ ಆರ್ಯವೈಶ್ಯ ಅಧಿಕಾರಿ ಹಾಗೂ ಸಿಬ್ಬಂದಿಗೆ ಸನ್ಮಾನಿಸಿದರು. ಈ ಕಾರ್ಯಕ್ರಮವನ್ನು ಆರ್ಯವೈಶ್ಯ ಸಂಘದ ಅಧ್ಯಕ್ಷರಾದ ಎಸ್.ಎನ್.ಕಾಶಿವಿಶ್ವನಾಥ್ ಶೆಟ್ಟಿ ಅವರು ಉದ್ಘಾಟಿಸಿದರು. ಎನ್.ಮೋಹನ್ ಕುಮಾರ್ ಗುಪ್ತ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಇದನ್ನೂ ಓದಿ: ಕರಿಯಮ್ಮದೇವಿಯ ದೇವಸ್ಥಾನದಲ್ಲಿ ಕಾಣಿಕೆ ಡಬ್ಬಿ ಹೊತ್ತೊಯ್ದ ಖದೀಮರು

    ಈ ಕಾರ್ಯಕ್ರಮದಲ್ಲಿ ಡಿ.ಆರ್.ತಿಪ್ಪೇಸ್ವಾಮಿ, ಪಿ.ಎಂ.ಶಶಿಕುಮಾರ್, ಎಂ.ಜಿ.ನಾಗೇಶ್ ಹಾಗೂ ಎಸ್. ಶೈಲಜಾ ಸುರೇಶ್ ಭಾಗವಹಿಸಿದ್ದರು.