Tag: ಡಿಸ್ಚಾರ್ಜ್

  • ಬಿಗ್ ಬಿಗೆ ಕೊರೊನಾ ನೆಗೆಟಿವ್- ಆಸ್ಪತ್ರೆಯಿಂದ ಡಿಸ್ಚಾರ್ಜ್

    ಬಿಗ್ ಬಿಗೆ ಕೊರೊನಾ ನೆಗೆಟಿವ್- ಆಸ್ಪತ್ರೆಯಿಂದ ಡಿಸ್ಚಾರ್ಜ್

    ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್‍ಗೆ ಕೊರೊನೊ ನೆಗೆಟಿವ್ ಬಂದಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಈ ಕುರಿತು ಅಮಿತಾಬ್ ಬಚ್ಚನ ಮಗ, ನಟ ಅಭಿಷೇಕ್ ಬಚ್ಚನ್ ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದು, ಇತ್ತೀಚಿನ ಕೊರೊನಾ ಪರೀಕ್ಷೆಯ ವರದಿಯಲ್ಲಿ ನಮ್ಮ ತಂದೆಗೆ ಕೊರೊನಾ ನೆಗೆಟಿವ್ ಬಂದಿದೆ. ಆಸ್ಪತ್ರೆಯಿಂದ ಅವರು ಡಿಸ್ಚಾರ್ಜ್ ಆಗಿದ್ದಾರೆ. ಇದೀಗ ಅವರು ಮನೆಯಲ್ಲೇ ಇದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ. ನಿಮ್ಮೆಲ್ಲ ಪ್ರಾರ್ಥನೆ ಹಾಗೂ ಹಾರೈಕೆಗಳಿಗೆ ಧನ್ಯವಾದಗಳು ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

    ಬಿಗ್ ಬಿಗೆ ಜುಲೈ 11ರಂದು ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ನಂತರ ಅವರು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗಿದ್ದು, ಡಿಸ್ಚಾರ್ಜ್ ಆಗಿದ್ದಾರೆ.

  • ಹಾಸನದಲ್ಲಿ ಇಂದು 142 ಮಂದಿಗೆ ಕೊರೊನಾ – ಇಬ್ಬರು ಬಲಿ

    ಹಾಸನದಲ್ಲಿ ಇಂದು 142 ಮಂದಿಗೆ ಕೊರೊನಾ – ಇಬ್ಬರು ಬಲಿ

    ಹಾಸನ: ದೇಶವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ಹಾಸನ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಪ್ರತಿ ದಿನ ನೂರಾರು ಪ್ರಕರಣ ದಾಖಲಾಗುತ್ತಿವೆ.

    ಭಾನುವಾರವಾದ ಇಂದು ಒಂದೇ ದಿನ 142 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇಂದು ಮತ್ತೆ ಎರಡು ಸಾವು ಸಂಭವಿಸಿವೆ. ಇದುವರೆಗೂ ಜಿಲ್ಲೆಯಲ್ಲಿ 65 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ|| ಸತೀಶ್ ಮಾಹಿತಿ ನೀಡಿದ್ದಾರೆ. ಇದನ್ನು ಓದಿ: ಮಾಸ್ಕ್ ಇಲ್ಲ, ಸಾಮಾಜಿಕ ಅಂತರವೂ ಇಲ್ಲ – ಮೀನಿಗಾಗಿ ಮುಗಿಬಿದ್ದ ನೂರಾರು ಜನ

    ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 2,417 ಜನರಲ್ಲಿ ಸೋಂಕು ಪತ್ತೆಯಾಗಿದ್ದು, 1,057 ಮಂದಿ ಗುಣಮುಖರಾಗಿ ವಾಪಸ್ ಮನೆಗೆ ಹೋಗಿದ್ದಾರೆ. 1,295 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಹಾಸನ ಜಿಲ್ಲೆಯಲ್ಲಿ ಭಾನುವಾರ ಎರಡು ಜನರು ಮೃತಪಟ್ಟಿದ್ದು, ಕೊರೊನಾದಿಂದ ಇದುವರೆಗೂ 65 ಜನರ ಸಾವು ಸಂಭವಿಸಿದೆ. ಇದರ ಜೊತೆಗೆ ಜಿಲ್ಲೆಯಲ್ಲಿ ಜನ ಕೊರೊನಾದ ಬಗ್ಗೆ ಅರಿವೇ ಇಲ್ಲದೇ ನಡೆದುಕೊಳ್ಳುತ್ತಿರುವುದು ಮತ್ತಷ್ಟು ಆತಂಕ ಹೆಚ್ಚುಗುವಂತೆ ಮಾಡಿದೆ.

  • ಆಸ್ಪತ್ರೆಯಿಂದ ಐದೇ ದಿನಕ್ಕೆ ಸೋಂಕಿತರು ಡಿಸ್ಚಾರ್ಜ್ – ಸಾಮಾಜಿಕ ಅಂತರ ಮರೆತು ಅವಾಂತರ

    ಆಸ್ಪತ್ರೆಯಿಂದ ಐದೇ ದಿನಕ್ಕೆ ಸೋಂಕಿತರು ಡಿಸ್ಚಾರ್ಜ್ – ಸಾಮಾಜಿಕ ಅಂತರ ಮರೆತು ಅವಾಂತರ

    – ಪಟಾಕಿ ಸಿಡಿಸಿ, ತಬ್ಬಿಕೊಂಡ ಅಭಿಮಾನಿಗಳು

    ಬಾಗಲಕೋಟೆ: ಕೊರೊನಾ ಸೋಂಕಿನಿಂದ ಬಿಡುಗಡೆಯಾದ ಬಳಿಕ ಜವಾಬ್ದಾರಿ ಮರೆತ ಸ್ಥಳೀಯ ಪತ್ರಿಕೆ ಪತ್ರಕರ್ತ ಹಾಗೂ ಪೊಲೀಸ್ ಸಿಬ್ಬಂದಿ ಹುಚ್ಚಾಟ ಮೆರೆದ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ರಾಮಪೂರದಲ್ಲಿ ನಡೆದಿದೆ.

    ಇಬ್ಬರೂ ಕೊರೊನಾ ಸೋಂಕಿನಿಂದ ಬಿಡುಗಡೆ ಆಗಿದ್ದಕ್ಕೆ ಊರಲ್ಲಿ ಅಭಿಮಾನಿಗಳಿಂದ ಸಂಭ್ರಮ ಎಂಬ ಹುಚ್ಚಾಟ ನಡೆದಿದೆ. ಕೋವಿಡ್‍ನಿಂದ ಗುಣಮುಖ ಆಗಿ ಬಂದಿದ್ದಕ್ಕೆ ಇಬ್ಬರಿಗೆ ಅದ್ಧೂರಿ ಸ್ವಾಗತ ಕೋರಿದ್ದಲ್ಲದೇ ಗುಂಪು ಗುಂಪು ಸೇರಿ ಸಂಭ್ರಮಾಚರಣೆ ಮಾಡಿದ್ದಾರೆ. ಜೊತೆಗೆ ಗಲ್ಲಿಯಲ್ಲಿ ಪಟಾಕಿ ಸಿಡಿಸಿ, ಹೂವಿನ ಮಳೆಗರೆದು ಸಾಮಾಜಿಕ ಅಂತರಕ್ಕೆ ತಿಲಾಂಜಲಿ ಹಾಡಿದ್ದಾರೆ.

    ಇದಲ್ಲದೇ ಗುಣಮುಖರಾದವರಿಗೆ ಅಪ್ಪಿಕೊಂಡು ಶುಭಾಶಯ ವಿನಿಮಯ ಮಾಡಿದ್ದಾರೆ. ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಬಳಿಕ ಗುಣಮುಖರಾದವರು ಹೋಂ ಕ್ವಾರಂಟೈನ್ ಆಗಬೇಕು. ಅಲ್ಲದೇ ಸೋಂಕು ಪತ್ತೆಯಾದ ಐದನೇ ದಿನಕ್ಕೆ ಇವರಿಬ್ಬರೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದೆಲ್ಲ ತಿಳಿದೂ ಬೆಂಬಲಿಗರು ಪಟಾಕಿ ಸಿಡಿಸಿ, ಅಪ್ಪಿಕೊಂಡು, ಸಿಹಿ ತಿನ್ನಿಸಿ ಸಂಭ್ರಮಾಚರಣೆ ಮಾಡಿದ್ದಾರೆ.

  • 24 ಗಂಟೆಯಲ್ಲಿ 5 ಬಲಿ – ಹಾಸನದಲ್ಲಿ 50ಕ್ಕೇರಿದ ಕೊರೊನಾ ಸಾವಿನ ಸಂಖ್ಯೆ

    24 ಗಂಟೆಯಲ್ಲಿ 5 ಬಲಿ – ಹಾಸನದಲ್ಲಿ 50ಕ್ಕೇರಿದ ಕೊರೊನಾ ಸಾವಿನ ಸಂಖ್ಯೆ

    ಹಾಸನ: ಹಾಸನದಲ್ಲಿ ಇಂದು ಕೊರೊನಾಗೆ ಐವರು ಬಲಿಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 50ಕ್ಕೇರಿದೆ.

    ಇಂದು ಮತ್ತೆ 104 ಕೊರೊನಾ ಪಾಸಿಟಿಸ್ ಪ್ರಕರಣಗಳು ಪತ್ತೆಯಾಗಿದ್ದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಹಾಸನ ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 1,842 ಕೊರೊನಾ ಸೋಂಕಿತರು ಕಂಡು ಬಂದಿದ್ದು, ಅದರಲ್ಲಿ 912 ಮಂದಿ ಸಕ್ರಿಯ ಸೋಂಕಿತರು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದು 33 ಮಂದಿ ಸೇರಿ 880 ಮಂದಿ ಗುಣಮುಖರಾಗಿ ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 25 ಮಂದಿ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯ ಹಾಸನ ತಾಲೂಕಿನಲ್ಲಿ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದೆ. ಇಂದಿಗೆ ಕೋವಿಡ್‍ನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 50ಕ್ಕೇರಿದ್ದು, ಜಿಲ್ಲೆಯ ಜನ ಆತಂಕದಲ್ಲಿ ಜೀವನ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

  • ಹಾಸನದಲ್ಲಿ ಇಂದು 152 ಮಂದಿಗೆ ಕೊರೊನಾ – ಇಬ್ಬರು ಸಾವು

    ಹಾಸನದಲ್ಲಿ ಇಂದು 152 ಮಂದಿಗೆ ಕೊರೊನಾ – ಇಬ್ಬರು ಸಾವು

    ಹಾಸನ: ಜಿಲ್ಲೆಯಲ್ಲಿ ಇಂದು 152 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.

    ಈವರೆಗೆ ಹಾಸನ ಜಿಲ್ಲೆಯಲ್ಲಿ ಒಟ್ಟು 1,508 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಒಟ್ಟು 41 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಮೃತಪಟ್ಟ ಎಲ್ಲರೂ ಬಹುತೇಕ 60 ವರ್ಷ ಮೇಲ್ಪಟ್ಟವರಾಗಿದ್ದು, ಇದರ ಜೊತೆಗೆ ಅನಾರೋಗ್ಯ ಪೀಡಿತರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

    ಜಿಲ್ಲೆಯಲ್ಲಿ ಇಲ್ಲಿಯವರೆಗೂ 778 ಮಂದಿ ಸೋಂಕಿತರು ಆಸ್ಪತ್ರೆಯಿಂದ ಗುಣಮುಖವಾಗಿ ಡಿಸ್ಚಾರ್ಜ್ ಆಗಿದ್ದು, ಉಳಿದ 689 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 25 ಮಂದಿ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಎಚ್‍ಓ ಸತೀಶ್ ಮಾಹಿತಿ ನೀಡಿದ್ದಾರೆ. ಹಾಸನ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.

  • ಡಿಸ್ಜಾರ್ಜ್ ದಿನವೇ ವೃದ್ಧೆ ಆತ್ಮಹತ್ಯೆ

    ಡಿಸ್ಜಾರ್ಜ್ ದಿನವೇ ವೃದ್ಧೆ ಆತ್ಮಹತ್ಯೆ

    ಬೆಂಗಳೂರು: ಇಂದು ಡಿಸ್ಜಾರ್ಜ್ ಆಗಬೇಕಿದ್ದ ವೃದ್ಧೆಯೊಬ್ಬರು ಕೋವಿಡ್ ವಾರ್ಡಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ.

    60 ವರ್ಷದ ಮರಿಯಪ್ಪನಪಾಳ್ಯ ನಿವಾಸಿ ಆತ್ಮಹತ್ಯೆ ಮಾಡಿಕೊಂಡ ವೃದ್ಧೆ. ಇಂದು ಮುಂಜಾನೆ 5.30ಕ್ಕೆ ಈ ಘಟನೆ ನಡೆದಿದೆ. ಕೊರೊನಾ ಸೋಂಕಿತ ವೃದ್ಧೆ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

    ಮೃತ ವೃದ್ಧೆ ಉಸಿರಾಟದ ಸಮಸ್ಯೆಯಿಂದ ಜುಲೈ 1 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಎರಡು ದಿನಗಳಲ್ಲಿ ಅವರ ಆರೋಗ್ಯದಲ್ಲಿ ಚೇತರಿಕೆ ಕೂಡ ಕಂಡು ಬಂದಿತ್ತು. ಹೀಗಾಗಿ ಇಂದು ಸಂಜೆಯೊಳಗೆ ವೈದ್ಯರು ಡಿಸ್ಚಾರ್ಜ್ ಮಾಡಲು ನಿರ್ಧರಿಸಿದ್ದರು. ಆದರೆ ಈ ವಿಚಾರ ವೃದ್ಧೆಗೆ ಗೊತ್ತಿರಲಿಲ್ಲ. ಅಷ್ಟರಲ್ಲಿ ವೃದ್ಧೆ ಕೋವಿಡ್ ವಾರ್ಡಿನಲ್ಲಿ ಕಾರಿಡಾರ್‌ನ ಕಿಟಕಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ವೃದ್ಧೆಯ ಮಗನಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಆ ನಂತರ ವೃದ್ಧೆಗೆ ಪಾಸಿಟಿವ್ ಬಂದಿದೆ. ಇದೇ ತಿಂಗಳ 11 ರಂದು ಮಗ ಡಿಸ್ಚಾರ್ಜ್ ಆಗಿದ್ದ. ಈ ಕೊರೊನಾದಿಂದ ವೃದ್ಧೆಯೂ ಕೂಡ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ.

  • ಚಾಮರಾಜನಗರದಲ್ಲಿ ಕೊರೊನಾಗೆ ಮೊದಲ ಬಲಿ

    ಚಾಮರಾಜನಗರದಲ್ಲಿ ಕೊರೊನಾಗೆ ಮೊದಲ ಬಲಿ

    – ಇಂದು 18 ಹೊಸ ಪ್ರಕರಣಗಳು ಪತ್ತೆ, 28 ಮಂದಿ ಡಿಸ್ಚಾರ್ಜ್

    ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ದಿನೇ ದಿನೇ ಕೊರೊನಾ ಅರ್ಭಟ ಹೆಚ್ಚಾಗುತ್ತಿದ್ದು, ಮಹಾಮಾರಿ ಜಿಲ್ಲೆಯಲ್ಲಿ ಇಂದು ಮೊದಲ ಬಲಿ ಪಡೆದಿದೆ.

    ಇಂದು ಕೂಡ ಚಾಮರಾಜನಗರದಲ್ಲಿ ಕೊರೊನಾ ಸ್ಫೋಟವಾಗಿದ್ದು, 18 ಮಂದಿಗೆ ಸೋಂಕು ತಗುಲಿದೆ. ಚಾಮರಾಜನಗರ ಜಿಲ್ಲಾಸ್ಪತ್ರೆಯ ಗ್ರೂಪ್ ಡಿ ಸಿಬ್ಬಂದಿಗೆ ಕೊರೊನಾ ಬಂದಿದ್ದು, ಜಿಲ್ಲಾಸ್ಪತ್ರೆಯಲ್ಲಿರುವ ಸಿಬ್ಬಂದಿಗೂ ಆತಂಕ ಉಂಟು ಮಾಡಿದೆ.

    ಬೆಂಗಳೂರು, ಕೊಡಗು ಸೇರಿದಂತೆ ರಾಜ್ಯದ ಇತರೆ ಜಿಲ್ಲೆಯ ಪ್ರವಾಸದಿಂದ ವಾಪಾಸಾಗಿರುವವರಿಗೆ ಕೊರೊನಾ ದೃಢಪಟ್ಟಿದೆ. ಇದರ ಮಧ್ಯೆ ಸಂತಸದ ಸುದ್ದಿ ಎಂಬಂತೆ ಗುಣಮುಖರಾಗಿರುವ 28 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಇದರ ಜೊತೆಗೆ ಆಘಾತಕಾರಿ ಸುದ್ದಿ ಎಂದರೆ ಕೊರೊನಾಗೆ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದೆ. ಕೊಳ್ಳೇಗಾಲ ತಾಲೂಕಿನ ಕಾಮಗೆರೆ ಗ್ರಾಮದ 58 ವರ್ಷದ ವ್ಯಕ್ತಿ ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದು, ಉಸಿರಾಟ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ.

    ಕಳೆದ ಎರಡು ದಿನಗಳ ಹಿಂದೆ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ದಾಖಲಾಗಿದ್ದರು. ಚಾಮರಾಜನಗರ ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ವ್ಯಕ್ತಿ ಕೊರೊನಾದಿಂದ ಸಾವನ್ನಪ್ಪಿದ್ದು, ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಸಂಖ್ಯೆ 163ಕ್ಕೆ ಹೆಚ್ಚಾಗಿದ್ದು, ಪ್ರಸ್ತುತ 86 ಸಕ್ರಿಯ ಪ್ರಕರಣಗಳಿವೆ. ಡಿಸ್ಚಾರ್ಜ್ ಆದವರ ಸಂಖ್ಯೆ 77ಕ್ಕೆ ಏರಿಕೆಯಾಗಿದೆ.

  • ಚಾಮರಾಜನಗರ ಮತ್ತೆ ಕೊರೊನಾ ಮುಕ್ತ- ಏಕೈಕ ಸೋಂಕಿತ ಇಂದು ಡಿಸ್ಚಾರ್ಜ್

    ಚಾಮರಾಜನಗರ ಮತ್ತೆ ಕೊರೊನಾ ಮುಕ್ತ- ಏಕೈಕ ಸೋಂಕಿತ ಇಂದು ಡಿಸ್ಚಾರ್ಜ್

    ಚಾಮರಾಜನಗರ: ಹಸಿರು ವಲಯಕ್ಕೆ ಕೊರೊನಾ ಹೊತ್ತು ತಂದಿದ್ದ ಮುಂಬೈನ ವೈದ್ಯಕೀಯ ವಿದ್ಯಾರ್ಥಿ ರೋಗಿ 5,919 ಗುಣಮುಖನಾಗಿ ಇಂದು ಡಿಸ್ಚಾರ್ಜ್ ಆಗುತ್ತಿದ್ದಾನೆ.

    ಕಳೆದ ಜೂನ್ 9 ರಂದು ತನ್ನ ತಾಯಿಯನ್ನು ಹನೂರು ತಾಲೂಕಿನ ಸೋದರ ಮಾವನ ಮನೆಗೆ ಬಿಡಲು ಬಂದಿದ್ದನು. ಈ ವೇಳೆ ಈತನಿಗೆ ಕೊರೊನಾ ಪತ್ತೆಯಾಗುವ ಮೂಲಕ ಹಸಿರು ವಲಯದಲ್ಲಿ ತಲ್ಲಣ ಮೂಡಿತ್ತು. ಈಗ ಆತ ಗುಣಮುಖನಾಗುವ ಮೂಲಕ ಚಾಮರಾಜನಗರ ಮತ್ತೆ ಕೊರೊನಾ ಮುಕ್ತ ಜಿಲ್ಲೆಯಾಗಿದೆ.

    ಸೋಂಕಿತನ ಸಂಪರ್ಕ ಹೊಂದಿದ್ದ 24 ಮಂದಿಯ ವರದಿಯೂ ನೆಗೆಟಿವ್ ಬಂದಿದೆ. ಸೋಂಕಿತನೊಂದಿಗೆ ಬಂದಿದ್ದ ಆತನ ತಾಯಿ ಹಾಗೂ ಸಹೋದರನ ವರದಿಯೂ ನೆಗೆಟಿವ್ ಬಂದು ಅವರೆಲ್ಲರೂ ಈಗಾಗಲೇ ಕ್ವಾರೆಂಟೈನ್‍ನಿಂದ ಬಿಡುಗಡೆಯಾಗಿದ್ದಾರೆ.

    ಇದೀಗ ಕೊರೊನಾ ಬಂದಿದ್ದ ವಿದ್ಯಾರ್ಥಿ ಕೇವಲ 10 ದಿನದಲ್ಲಿ ಗುಣಮುಖವಾಗಿದ್ದು, ಜಿಲ್ಲಾಡಳಿತ ಕೂಡ ಕೊರೊನಾ ಬಂದಿದ್ದ ವಿದ್ಯಾರ್ಥಿಯನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

  • ಕೊರೊನಾ ಗೆದ್ದ ಪೊಲೀಸ್ ಪೇದೆಗೆ ಹೂ ಮಳೆ ಸ್ವಾಗತ ಕೋರಿದ ಐಜಿಪಿ, ಎಸ್ಪಿ

    ಕೊರೊನಾ ಗೆದ್ದ ಪೊಲೀಸ್ ಪೇದೆಗೆ ಹೂ ಮಳೆ ಸ್ವಾಗತ ಕೋರಿದ ಐಜಿಪಿ, ಎಸ್ಪಿ

    ಚಿಕ್ಕಬಳ್ಳಾಪುರ: ಕೊರೊನಾ ಸೋಂಕಿನಿಂದ ಗುಣಮುಖವಾಗಿ ಮರಳಿ ಕರ್ತವ್ಯಕ್ಕೆ ಹಾಜರಾದ ಪೊಲೀಸ್ ಪೇದೆಗೆ ಚಿಕ್ಕಬಳ್ಳಾಪುರ ಎಸ್‍ಪಿ ಕಚೇರಿಯಲ್ಲಿ ಹೂ ಮಳೆ ಸ್ವಾಗತ ಕೋರಲಾಯಿತು.

    ಚಿಕ್ಕಬಳ್ಳಾಪುರ ಎಸ್‍ಪಿ ಕಚೇರಿಯ ನಿಸ್ತಂತು ಕೊಠಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಖ್ಯ ಪೊಲೀಸ್ ಪೇದೆ ಕೊರೊನಾ ಸೋಂಕಿಗೆ ಗುರಿಯಾಗಿದ್ದ. ಈಗ ಮುಖ್ಯ ಪೊಲೀಸ್ ಪೇದೆಯ ವರದಿ ನೆಗೆಟಿವ್ ಬಂದಿದ್ದು, ಪೇದೆಯನ್ನು ಸಂಭ್ರಮದಿಂದ ಕರ್ತವ್ಯಕ್ಕೆ ಬರ ಮಾಡಿಕೊಳ್ಳಲಾಯಿತು. ಸ್ವತಃ ಕೇಂದ್ರ ವಲಯ ಐಜಿಪಿ ಶರತ್ ಚಂದ್ರ ಮಾಲೆ ಹಾಕಿ ಸಹೋದ್ಯೋಗಿಗಳೆಲ್ಲ ಪುಷ್ಪವೃಷ್ಠಿ ಸುರಿಸುವ ಮೂಲಕ ತಮ್ಮ ಸಹೋದ್ಯೋಗಿಯನ್ನು ಎಸ್‍ಪಿ ಕಚೇರಿಗೆ ಬರಮಾಡಿಕೊಂಡರು.

    ಪೇದೆಗೆ ಸೋಂಕು ತಗುಲಿದ್ದರಿಂದ ಪೊಲೀಸರು ಸಹ ಆತಂಕಗೊಂಡಿದ್ದರು. ಈ ಪೊಲೀಸ್ ಪೇದೆಯ ಸಂಪರ್ಕಿತರಾಗಿದ್ದ ಕಚೇರಿಯ ಇತರೆ ಪೊಲೀಸರನ್ನು ಸಹ ಕ್ವಾರಂಟೈನ್ ಮಾಡಲಾಗಿತ್ತು, ಅವರ ವರದಿ ಸಹ ನೆಗಟಿವ್ ಆಗಿತ್ತು. ಸದ್ಯ ಮುಖ್ಯ ಪೇದೆ ಕೊರೊನಾ ಗೆದ್ದು ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದು, ಜಿಲ್ಲೆಯ ಎಲ್ಲ ಪೊಲೀಸರು ನಿರಾಳರಾಗುವಂತೆ ಮಾಡಿದೆ. ಎಸ್‍ಪಿ ಮಿಥುನ್ ಕುಮಾರ್ ಸಹ ಸಂತಸ ವ್ಯಕ್ತಪಡಿಸಿ, ಎಲ್ಲ ಪೊಲೀಸರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದಾರೆ.

  • ದಾವಣಗೆರೆಯಲ್ಲಿ ಇಂದು 10 ಜನ ಡಿಸ್ಚಾರ್ಜ್

    ದಾವಣಗೆರೆಯಲ್ಲಿ ಇಂದು 10 ಜನ ಡಿಸ್ಚಾರ್ಜ್

    – ಗುಣಮುಖವಾಗುತ್ತಿರುವವರ ಸಂಖ್ಯೆ ಹೆಚ್ಚಳ

    ದಾವಣಗೆರೆ: ಜಿಲ್ಲೆಯಲ್ಲಿ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿದ್ದರಿಂದ ಜನ ತೀವ್ರ ಆತಂಕಕ್ಕೊಳಗಾಗಿದ್ದರು. ಆದರೆ ಇದೀಗ ಗುಣಮುಖವಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಇಂದು ಒಂದೇ ದಿನ 10 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

    ದಾವಣಗೆರೆಯಲ್ಲಿ ಇಂದು 10 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಗುಣಮುಖವಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಾಗಿ ಜಿಲ್ಲೆಯ ಜನತೆ ನಿಟ್ಟುಸಿರು ಬಿಡುತ್ತಿದ್ದಾರೆ. ಜಿಲ್ಲೆಯಲ್ಲಿ ಕಾಣಿಸಿಕೊಂಡ ಒಟ್ಟು 226 ಪಾಸಿಟಿವ್ ಪ್ರಕರಣ ಪೈಕಿ 194 ಜನ ಗುಣಮುಖರಾಗಿದ್ದು, ಪ್ರಸ್ತುತ 26 ಸಕ್ರಿಯ ಪ್ರಕರಣಗಳಿವೆ. ಈ ವರೆಗೆ ಮಹಾಮಾರಿ ಕೊರೊನಾಗೆ 6 ಜನ ಮೃತಪಟ್ಟಿದ್ದಾರೆ. ಇತ್ತೀಚೆಗೆ ಸೋಂಕಿತ ಪ್ರಕರಣಗಳು ಕಡಿಮೆಯಾಗಿರುವುದು ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ.

    ದಾವಣಗೆರೆಯಲ್ಲಿ ಶುಕ್ರವಾರ 9 ಪ್ರಕರಣಗಳು ಪತ್ತೆಯಾಗಿದ್ದರೆ, ಶನಿವಾರ 3 ಪ್ರಕರಣಗಳು ಪತ್ತೆಯಾಗಿದ್ದವು. ಇಂದು ಯಾವುದೇ ಸೋಂಕಿತ ಪ್ರಕರಣಗಳು ಕಂಡುಬಂದಿಲ್ಲ. ಆದರೆ 10 ಜನ ಡಿಸ್ಚಾರ್ಜ್ ಆಗಿದ್ದಾರೆ. ಆರಂಭದಲ್ಲಿ ದಾವಣಗೆರೆಯಲ್ಲಿ ಹೆಚ್ಚು ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿದ್ದವು. ಹೀಗಾಗಿ ಜನ ಭಯಭೀತರಾಗಿದ್ದರು.