Tag: ಡಿಸ್ಕಸ್ ಥ್ರೋ

  • Paris Paralympics | ಡಿಸ್ಕಸ್ ಥ್ರೋನಲ್ಲಿ ಭಾರತದ ಯೋಗೇಶ್‌ ಕಥುನಿಯಾಗೆ ಬೆಳ್ಳಿ

    Paris Paralympics | ಡಿಸ್ಕಸ್ ಥ್ರೋನಲ್ಲಿ ಭಾರತದ ಯೋಗೇಶ್‌ ಕಥುನಿಯಾಗೆ ಬೆಳ್ಳಿ

    ಪ್ಯಾರಿಸ್‌: ಪ್ರಸ್ತುತ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ (Paris Paralympics) ಭಾರತೀಯ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ಮುಂದುವರಿಸಿದ್ದು, ಭಾರತದ ಖಾತೆಗೆ ಮತ್ತೊಂದು ಪದಕ ಬಂದಿದೆ. ಸೋಮವಾರ ಭಾರತದ ಯೋಗೇಶ್‌ ಕಥುನಿಯಾ (Yogesh Kathuniya) ಅವರು ಪುರುಷರ ಡಿಸ್ಕಸ್‌ ಥ್ರೋ ಎಫ್‌-56 ಸ್ಪರ್ಧೆಯಲ್ಲಿ 2ನೇ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ದಿದ್ದಾರೆ.

    42.22 ಮೀಟರ್‌ ಡಿಸ್ಕಸ್‌ ಎಸೆಯುವ (Discus Throw, )ಮೂಲಕ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಭಾರತದ ಭತ್ತಳಿಕೆಗೆ 8ನೇ ಪದಕ ಸೇರ್ಪಡೆಯಾಗಿದೆ. ಯೋಗೇಶ್‌ ಸತತ 2ನೇ ಬಾರಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಮೂರು ವರ್ಷಗಳ ಹಿಂದೆ ಟೋಕಿಯೋನಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಯೋಗೇಶ್‌ ಚೊಚ್ಚಲ ಆವೃತ್ತಿಯಲ್ಲೇ ಪದಕ ಗೆದ್ದ ದಾಖಲೆ ತಮ್ಮದಾಗಿಸಿಕೊಂಡಿದ್ದರು. ಇದನ್ನೂ ಓದಿ: Paris Paralympics 2024 | ಭಾರತಕ್ಕೆ ಮತ್ತೊಂದು ಪದಕ – ಕಂಚಿಗೆ ರುಬಿನಾ ಶೂಟ್‌

    27 ವರ್ಷದ ಆಟಗಾರ ಈವೆಂಟ್‌ನಲ್ಲಿ 42.22 ಮೀಟರ್ ದೂರಕ್ಕೆ ಅತ್ಯುತ್ತಮವಾಗಿ ಎಸೆದಿದ್ದಾರೆ. ಇದು ಅವರ ಋತುವಿನ ಅತ್ಯುತ್ತಮ ಪ್ರದರ್ಶನವಾಗಿತ್ತು. ಬ್ರೆಜಿಲ್‌ನ ಕ್ಲೌಡಿನಿ ಬಟಿಸ್ಟಾ ಡಾಸ್ ಸ್ಯಾಂಟೋಸ್ 46.86 ಮೀಟರ್‌ಗಳ ಪ್ಯಾರಾಲಿಂಪಿಕ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. ಗ್ರೀಸ್‌ನ ಕಾನ್‌ಸ್ಟಾಂಟಿನೋಸ್ ಝೌನಿಸ್ 41.32 ಎಸೆದು ಕಂಚಿನ ಪದಕ ಗೆದ್ದರೆ, ಸ್ಲೋವಾಕಿಯಾದ ಡುಸಾನ್ ಲಕ್ಜ್ಕೊ 41.20 ಮೀಟರ್‌ ದೂರ ಎಸೆದು 4ನೇ ಸ್ಥಾನ ಪಡೆದರು. ಸೆರ್ಬಿಯಾದ ನೆಬೊಜ್ಸಾ ಎರಿಕ್ ಅರ್ಹತೆ ಪಡೆದರೂ ಫೈನಲ್‌ನಲ್ಲಿ ಭಾಗವಹಿಸಲಿಲ್ಲ. ಇದನ್ನೂ ಓದಿ: ಅಂಡರ್ 19 ಕ್ರಿಕೆಟ್ ತಂಡಕ್ಕೆ ಆಯ್ಕೆ| ಎಲ್ಲಾ ಕನ್ನಡಿಗರಿಗೆ ನಮಸ್ಕಾರ : ಸಮಿತ್ ದ್ರಾವಿಡ್ ಮೊದಲ ಪ್ರತಿಕ್ರಿಯೆ

  • ಡಿಸ್ಕಸ್ ಥ್ರೋ ಬೆಳ್ಳಿ ಪದಕ ಗೆದ್ದ ಯೋಗೇಶ್ ಕಥುನಿಯಾ

    ಡಿಸ್ಕಸ್ ಥ್ರೋ ಬೆಳ್ಳಿ ಪದಕ ಗೆದ್ದ ಯೋಗೇಶ್ ಕಥುನಿಯಾ

    ಟೋಕಿಯೋ: ಪ್ಯಾರಾಲಂಪಿಕ್ಸ್ ಪುರುಷರ ಡಿಸ್ಕಸ್ ಥ್ರೋ ಎಫ್ 56 ವಿಭಾಗದಲ್ಲಿ ಭಾರತದ ಯೋಗೇಶ್ ಕಥುನಿಯಾ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ.

    24 ವರ್ಷದ ಯೋಗೇಶ್ ಕಥುನಿಯಾ ಪ್ಯಾರಾಲಂಪಿಕ್ಸ್ ಪುರುಷರ ಡಿಸ್ಕಸ್ ಥ್ರೋ ಎಫ್ 56 ವಿಭಾಗದಲ್ಲಿ 44.38 ಮೀಟರ್ ಎಸೆತದೊಂದಿಗೆ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಭಾರತಕ್ಕೆ ಐದನೇ ಪದಕ ತಂದುಕೊಟ್ಟಿದ್ದಾರೆ. ಈ ಹಿಂದೆ ದುಬೈನಲ್ಲಿ ನಡೆದಿದ್ದ ವಲ್ರ್ಡ್ ಪ್ಯಾರಾ ಅಥ್ಲಿಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಕಂಚು ಗೆದ್ದಿದ್ದರು.  ಇದನ್ನೂ ಓದಿ: ಶೂಟಿಂಗ್‍ನಲ್ಲಿ ಚಿನ್ನ ಗೆದ್ದ ಅವನಿ ಲೇಖರಾ

    ಯೋಗೇಶ್ ಕಥುನಿಯಾ ಸಾಧನೆಗೆ ಪ್ರಧಾನಿ ಮೋದಿ ಟ್ವಿಟ್ಟರ್‍ ನಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ. ನಿನ್ನೆ ವಿನೋದ್ ಕುಮಾರ್ ಡಿಸ್ಕಸ್ ಥ್ರೋನ ಎಫ್ 52 ವಿಭಾಗದಲ್ಲಿ 19.91 ಮೀಟರ್ ಎಸೆದು ಬೆಳ್ಳಿ ಪದಕ ಗೆದ್ದು ವಿಶ್ವ ದಾಖಲೆ ಸರಿದೂಗಿಸಿದ್ದರು. ಆದರೆ ಅವರ ಪದಕಕ್ಕೆ ತಡೆ ಹಿಡಿಯಲಾಗಿದ್ದು ಇಂದು ಅಧಿಕೃತ ಘೋಷಣೆ ಹೊರಬರಲಿದೆ. ಇದನ್ನೂ ಓದಿ: ಡಿಸ್ಕಸ್ ಥ್ರೋ ವಿನೋದ್ ಕುಮಾರ್ ಕಂಚಿನ ಪದಕಕ್ಕೆ ತಡೆ

    ಟೋಕಿಯೋ 2020 ಪ್ಯಾರಾಲಿಂಪಿಕ್ಸ್‍ನಲ್ಲಿ ಭಾರತವು ಇದುವರೆಗೆ 1 ಚಿನ್ನ, 3 ಬೆಳ್ಳಿ, 1 ಕಂಚಿನ ಪದಕ ಗೆದ್ದಿದೆ. ಇದನ್ನೂ ಓದಿ: ಪ್ಯಾರಾಲಂಪಿಕ್ಸ್‌ನಲ್ಲಿ ಬೆಳ್ಳಿ ಪದಕ – ಇತಿಹಾಸ ನಿರ್ಮಿಸಿದ ಭವಿನಾಬೆನ್ ಪಟೇಲ್

  • ಡಿಸ್ಕಸ್ ಥ್ರೋ ವಿನೋದ್ ಕುಮಾರ್ ಕಂಚಿನ ಪದಕಕ್ಕೆ ತಡೆ

    ಡಿಸ್ಕಸ್ ಥ್ರೋ ವಿನೋದ್ ಕುಮಾರ್ ಕಂಚಿನ ಪದಕಕ್ಕೆ ತಡೆ

    ಟೋಕಿಯೋ: ಪ್ಯಾರಾಲಂಪಿಕ್ಸ್ ಪುರುಷರ ಡಿಸ್ಕಸ್ ಥ್ರೋ ಎಫ್ 52 ವಿಭಾಗದಲ್ಲಿ ಭಾರತದ ವಿನೋದ್ ಕುಮಾರ್ ಕಂಚಿನ ಪದಕ ಗೆದ್ದಿದ್ದಾರೆ. ಆದರೆ ಫಲಿತಾಂಶ ಘೋಷಣೆ ತಡೆ ಹಿಡಿಯಲಾಗಿದೆ.

    ವಿನೋದ್ ಕುಮಾರ್ 19.91 ಮೀಟರ್ ಅತ್ಯುತ್ತಮ ಎಸೆತದೊಂದಿಗೆ ಕಂಚಿನ ಪದಕ ಗೆದ್ದಿದ್ದರು. ಈ ಮೂಲಕ ವಿನೋದ್ ಕುಮಾರ್ ಏಷ್ಯನ್ ದಾಖಲೆಯನ್ನು ನಿರ್ಮಿಸಿದ್ದರು. ಆದರೆ ಇವರ ಪದಕದ ವಿಜಯಕ್ಕೆ ಇತರ ದೇಶದ ಸ್ಪರ್ಧಿಗಳು ಆಕ್ಷೇಪ ವ್ಯಕ್ತಪಡಿಸಿರುವುದರಿಂದಾಗಿ ಫಲಿತಾಂಶಕ್ಕೆ ತಡೆ ಬಿದ್ದಿದೆ. ಇದನ್ನೂ ಓದಿ: ಪ್ಯಾರಾಲಂಪಿಕ್ಸ್‌ನಲ್ಲಿ ಬೆಳ್ಳಿ ಪದಕ – ಇತಿಹಾಸ ನಿರ್ಮಿಸಿದ ಭವಿನಾಬೆನ್ ಪಟೇಲ್

    ಇತರ ದೇಶದ ಸ್ಪರ್ಧಿಗಳ ಆಕ್ಷೇಪದ ಪ್ರಕಾರ ವಿನೋದ್ ಎಫ್52 ವಿಭಾಗದಲ್ಲಿ ಸ್ಪರ್ಧಿಸುವ ಅವಕಾಶ ಹೊಂದಿರಲಿಲ್ಲ. ಆದರೆ ಪ್ಯಾರಾಲಂಪಿಕ್ಸ್ ಸಮಿತಿ ಹೇಳಿರುವ ಪ್ರಕಾರ ದುರ್ಬಲ ಮಾಂಸ ಖಂಡಗಳಿರುವವರು, ನಿಧಾನಗತಿಯ ಚಲನೆ ಹೊಂದಿರುವವರು ಮತ್ತು ಕಾಲಿನಲ್ಲಿ ಸಮತೋಲನ ಶಕ್ತಿ ಇಲ್ಲದವರು ಭಾಗವಹಿಸಬಹುದು ಎಂದಿತ್ತು. ಹಾಗಾಗಿ ವಿನೋದ್ ಅವರು ಸ್ಪರ್ಧಿಸಿದ್ದರು.

    ಟೋಕಿಯೋ 2020 ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತವು ಇದುವರೆಗೆ 2 ಪದಕಗಳನ್ನು ಗೆದ್ದಿದೆ. ಮೂರನೇ ಪದಕ ಗೆದ್ದಿದ್ದರೂ ಕೂಡ ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದುಕೊಂಡಿದೆ. ಇದನ್ನೂ ಓದಿ: ಪ್ಯಾರಾಲಂಪಿಕ್‍ನಲ್ಲಿ ಹೈ ಜಂಪ್‍ನಲ್ಲಿ ಗೆದ್ದ ನಿಶಾದ್ ಕುಮಾರ್‌ – ಪ್ರಧಾನಿ ಮೋದಿ ವಿಶ್

  • ಡಿಸ್ಕಸ್ ಥ್ರೋನಲ್ಲಿ ಕಮಲ್‍ಪ್ರೀತ್ ಅಚ್ಚರಿ- ಫೈನಲ್‍ಗೆ ಲಗ್ಗೆ

    ಡಿಸ್ಕಸ್ ಥ್ರೋನಲ್ಲಿ ಕಮಲ್‍ಪ್ರೀತ್ ಅಚ್ಚರಿ- ಫೈನಲ್‍ಗೆ ಲಗ್ಗೆ

    ಟೋಕಿಯೋ: ಒಲಿಂಪಿಕ್ಸ್ 9ನೇ ದಿನಕ್ಕೆ ಕಾಲಿಟ್ಟಿದ್ದು, ಡಿಸ್ಕಸ್ ಥ್ರೋನಲ್ಲಿ ಭಾರತದ ಕಮಲ್‍ಪ್ರೀತ್ ಕೌರ್ ಅದ್ಭುತ ಪ್ರದರ್ಶನ ನೀಡಿದ್ದು, ಫೈನಲ್ ಪ್ರವೇಶಿಸಿದ್ದಾರೆ. ಭಾರತಕ್ಕೆ ಪದಕ ತಂದುಕೊಡುವಲ್ಲಿ ಕಮಲ್‍ಪ್ರೀತ್ ಒಂದು ಹೆಜ್ಜೆ ಮಾತ್ರ ದೂರದಲ್ಲಿದ್ದಾರೆ. ಮೂರನೇ ಪ್ರಯತ್ನದಲ್ಲಿ ಕಮಲ್‍ಪ್ರೀತ್ 64 ಮೀಟರ್ ಥ್ರೋ ಮಾಡಿದ್ದಾರೆ.

    ಡಿಸ್ಕಸ್ ಥ್ರೋನ ಕ್ವಾಲಿಫಿಕೇಶನ್ ಸುತ್ತಿನಲ್ಲಿ ಇತಿಹಾಸ ಬರೆದಿರುವ ಕಮಲ್‍ಪ್ರೀತ್ ಆಗಸ್ಟ್ 2ರಂದು ಫೈನಲ್ ಆಡಲಿದ್ದಾರೆ. ಕಮಲ್‍ಪ್ರೀತ್ ಅವರಿಗೆ ಪದಕ ಗೆಲ್ಲುವ ಎಲ್ಲ ಅವಕಾಶಗಳಿವೆ. ಒಂದು ವೇಳೆ ಗೆದ್ರೆ ಡಿಸ್ಕಸ್ ಥ್ರೋನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಸ್ಥಾನಕ್ಕೆ ಪಾತ್ರವಾಗಲಿದ್ದಾರೆ.

    ಕಮಲ್‍ಪ್ರೀತ್ ಪಂಜಾಬ್ ರಾಜ್ಯದ ಮುತ್ಸರ್ ಜಿಲ್ಲೆಯ ನಿವಾಸಿಯಾಗಿದ್ದಾರೆ. ಪಟಿಯಾಲಾದಲ್ಲಿ ಆಯೋಜಿಸಲಾಗಿದ್ದ 24ನೇ ಫಡರೇಶನ್ ಕಪ್ ಸೀನಿಯರ್ ಅಥ್ಲಿಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಮೊದಲ ಪ್ರಯತ್ನದಲ್ಲಿಯೇ 65.06 ಥ್ರೋ ಮಾಡಿ ಟೀಕಿಯೋ ಟಿಕೆಟ್ ಪಡೆದಿದ್ದರು. 2012ರಲ್ಲಿ ಕೃಷ್ಣಾಪುನಿಯಾ ಅವರ 64.76 ಮೀಟರ್ ದಾಖಲೆಯನ್ನು ಕಮಲ್ ಪ್ರೀತ್ ಬ್ರೇಕ್ ಮಾಡಿದ್ದರು.

    ಇನ್ನೂ ಆರ್ಚರಿ ಮತ್ತು ಬಾಕ್ಸಿಂಗ್ ನಲ್ಲಿ ಭಾರತ ನಿರಾಸೆ ಕಂಡಿದೆ. ಅರ್ಚರಿಯಲ್ಲಿ ಅತನುದಾಸ್ ಮತ್ತು ಬಾಕ್ಸರ್ ಅಮಿತ್ ಪಂಘಲ್ ಪಂದ್ಯದಿಂದ ಹೊರ ಬಂದಿದ್ದಾರೆ. ಇಬ್ಬರು ಪ್ರೀ ಕ್ವಾರ್ಟರ್ ಪಂದ್ಯದಲ್ಲಿ ಸೋಲು ಕಂಡರು. ಇದನ್ನೂ ಓದಿ: ಬ್ಯಾಡ್ಮಿಂಟನ್ ಸೆಮಿಫೈನಲ್ ಪ್ರವೇಶಿಸಿದ ಪಿ.ವಿ ಸಿಂಧು