Tag: ಡಿಸೈನ್

  • ಭಾರತದಲ್ಲೇ ಪ್ರಥಮ ಬಾರಿಗೆ ತಯಾರಾದ ಕ್ರಿಸ್ಟಲ್ ಶಾಗ್ಲಿಯರ್ ನಲ್ಲಿ ಅಭಿ-ಅವಿವಾ ಆರತಕ್ಷತೆ

    ಭಾರತದಲ್ಲೇ ಪ್ರಥಮ ಬಾರಿಗೆ ತಯಾರಾದ ಕ್ರಿಸ್ಟಲ್ ಶಾಗ್ಲಿಯರ್ ನಲ್ಲಿ ಅಭಿ-ಅವಿವಾ ಆರತಕ್ಷತೆ

    ಬೆಂಗಳೂರಿನ ಅರಮನೆ ಮೈದಾನದಲ್ಲಿ ಸ್ವರ್ಗವೇ ಧರೆಗಿಳಿದಿದೆ. ಇಂದು ಸಂಜೆ 7 ರಿಂದ ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ (Abhishek Ambarish) ಹಾಗೂ ಫ್ಯಾಷನ್ ಗುರು ಎಂದೇ ಖ್ಯಾತರಾದ ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ (Aviva) ಅವರ ಆರತಕ್ಷತೆ (Reception) ಕಾರ್ಯಕ್ರಮ ನಡೆಯಲಿದ್ದು, ಅದಕ್ಕಾಗಿ ಅದ್ದೂರಿ ತಯಾರಿಯನ್ನು ಮಾಡಿಕೊಳ್ಳಲಾಗಿದೆ. ಆರತಕ್ಷತೆಯ ಮಂಟಪ ಹೂವು, ತಳಿರು, ತೋರಣಗಳಿಂದ ಅಲಂಕೃತಗೊಂಡಿದೆ.

    ಸಾಮಾನ್ಯವಾಗಿ ಭಾರೀ ಬಜೆಟ್ ಸಿನಿಮಾಗಳಲ್ಲಿ ಅದ್ದೂರಿಯಾಗಿ ಮದುವೆ, ಆರತಕ್ಷತೆ ಮಾಡುವುದನ್ನು ದೃಶ್ಯವಾಗಿ ನೋಡಿದ್ದೇವೆ. ಆದರೆ, ನಟಿ ಸುಮಲತಾ ಅವರು ತಮ್ಮ ಪುತ್ರನ ಆರತಕ್ಷತೆಗಾಗಿ ಅಂಥದ್ದೊಂದು ದೃಶ್ಯ ವೈಭವವನ್ನೇ ನಿಜವಾಗಿಯೂ ಕಟ್ಟಿಕೊಟ್ಟಿದ್ದಾರೆ. ಹಾಗಾಗಿ ವೇದಿಕೆಯನ್ನು ನೋಡಲು ಎರಡು ಕಣ್ಣು ಸಾಲವು. ಇದನ್ನೂ ಓದಿ:ಮದುವೆಯಾಗಿ ಮೂರುವರೆ ತಿಂಗಳಿಗೆ ಗರ್ಭಿಣಿ: ಸ್ವರಾ ಭಾಸ್ಕರ್ ಸಿಕ್ಕಾಪಟ್ಟೆ ಟ್ರೋಲ್

    ಅದೊಂದು ಅಲಂಕೃತವಾದ ವೇದಿಕೆ. ಹೂಗಳು ಮತ್ತು ಬಣ್ಣ ಬಣ್ಣದ ಲೈಟ್ ಗಳಿಂದಾಗಿ ಅದು ಫಳಫಳ ಹೊಳೆಯುತ್ತಿದೆ. ಗೋಲಾಕಾರದಲ್ಲಿ ಅದು ಮಿರಿಮಿರಿ ಮಿಂಚುತ್ತಿದೆ. ಈ ಮಧ್ಯ ನಿಂತು ನವಜೋಡಿಗಳು ವೇದಿಕೆಗೆ ಮತ್ತಷ್ಟು ರಂಗು ತುಂಬಲಿದ್ದಾರೆ. ಅಂದಹಾಗೆ ಈ ವೇದಿಕೆಯು  ಇಂಡಿಯನ್ ಕ್ರಿಸ್ಟಲ್ ಶಾಗ್ಲಿಯರ್ ಡಿಸೈನ್ (Crystal Shaglier) ನಲ್ಲಿ ನಿರ್ಮಾಣವಾಗಿದೆ. 300 ಶಾಗ್ಲಿಯರ್ಸ್ ಜೊತೆಗೆ 72 ಅಡಿ ಅಗಲ 32 ಉದ್ದದ ಶಾಗ್ಲಿಯರ್ ಅನ್ನು ಬಳಸಿಕೊಳ್ಳಲಾಗಿದೆ.

    ಇದೇ ಮೊದಲ ಬಾರಿಗೆ ಭಾರತದಲ್ಲಿ ಈ ಡಿಸೈನ್ ನಿರ್ಮಾಣ ಮಾಡಲಾಗಿದೆ ಎನ್ನುವ ಮಾಹಿತಿಯು ಇದೆ. ದೆಹಲಿಯ ಸಮೋರದಾ ಬಾದ್ ನಿಂದ  ಇವುಗಳನ್ನು ತರಿಸಲಾಗಿದೆ ಎಂದು ಆಪ್ತರು ಮಾಹಿತಿ ಹಂಚಿಕೊಂಡಿದ್ದಾರೆ. ವೇಡಿಂಗ್ಸ್ ಬೈ ಧ್ರುವ ಎನ್ನುವ ಸಂಸ್ಥೆಯು ಇದರ ನಿರ್ಮಾಣದ ಹೊಣೆ ಹೊತ್ತಿದ್ದು, ಈ ಸಂಸ್ಥೆಯೇ ಶಿವರಾಜ್ ಕುಮಾರ್ ಮಗಳ ಮದುವೆ ಹಾಗೂ ಯಶ್ ಮದುವೆ, ಜನಾರ್ದನ ರೆಡ್ಡಿ ಮಗಳ ಮದುವೆ ಮತ್ತು ಯದುವೀರ್ ಮಹರಾಜರು ಸೇರಿದಂತೆ ಸಾಕಷ್ಟು ಗಣ್ಯರ ಮದುವೆಗೆ ವೇದಿಕೆ ರೆಡಿ ಮಾಡಿ ಕೊಟ್ಟಿದೆ.

    ಅಂದಹಾಗೆ ಇಂದು ನಡೆಯಲಿರುವ ಆರತಕ್ಷತೆಗೆ ಪರ ಭಾಷಾ ನಟ ಸೂರ್ಯ, ಕಾಶ್ಮೀರ ಮುಖ್ಯ ಮಂತ್ರಿ ಫಾರುಖ್ ಅಬ್ದುಲಾ, ಚಿರಂಜೀವಿ ಕುಟುಂಬ, ಹಿರಿಯ ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್, ನಟ ಸಿನ್ಹಾ, ಸಿ.ಎಂ ಸಿದ್ದರಾಮಯ್ಯ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರಂತೆ.

  • ಮಹಿಳೆಯರ ಲೇಟೆಸ್ಟ್ ಚೋಕರ್ ನೆಕ್ಲೆಸ್ ಡಿಸೈನ್‍ಗಳು

    ಮಹಿಳೆಯರ ಲೇಟೆಸ್ಟ್ ಚೋಕರ್ ನೆಕ್ಲೆಸ್ ಡಿಸೈನ್‍ಗಳು

    ಚೋಕರ್ ನೆಕ್ಲೆಸ್ ಒಂದು ವಿಶೇಷವಾದ ಆಭರಣವಾಗಿದ್ದು, ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಸೃಷ್ಟಿಸಿದೆ. ಎಲ್ಲಾ ಆಭರಣಗಳ ಮಧ್ಯೆ ಚೋಕರ್ ನೆಕ್ಲೆಸ್ ಎದ್ದು ಕಾಣುವಂತಹ ಅದ್ಭುತವಾದಂತಹ ಆಭರಣವಾಗಿದ್ದು, ಮದುವೆ ಸಮಯದಲ್ಲಿ ವಧುವಿಗೆ ತೊಡಿಸುವ ಆಭರಣದಲ್ಲಿ ಬಹುತೇಕ ಮಂದಿ ಚೋಕರ್ ನೆಕ್ಲೆಸ್‍ನನ್ನೇ ಮೊದಲು ಆಯ್ಕೆ ಮಾಡುತ್ತಾರೆ. ಅದರಲ್ಲಿಯೂ ಮುತ್ತು, ರತ್ನಗಳಿಂದ ಸಿದ್ದ ಪಡಿಸಿದ್ದ ಚೋಕರ್ ನೆಕ್ಲೆಸ್ ಹೆಚ್ಚು ಲುಕ್ ನೀಡುತ್ತದೆ. ಇದರಲ್ಲಿ ಹಲವು ವಿಧಗಳಿದ್ದು, ಕಪ್ಪು ಬಣ್ಣದ ಚೋಕರ್ ನೆಕ್ಲೆಸ್ ಸರ್ವೇಸಾಮಾನ್ಯವಾಗಿದೆ ಹಾಗೂ ಇತ್ತೀಚಿನ ದಿನಗಳಲ್ಲಿ ಇದು ಫ್ಯಾಶನ್ ಕೂಡ ಆಗಿದೆ. ಸದ್ಯ ಚೋಕರ್ ನೆಕ್ಲೆಸ್ ಡಿಸೈನ್ ಕುರಿತಂತೆ ಒಂದಷ್ಟು ಮಾಹಿತಿ ಈ ಕೆಳಗಿನಂತಿದೆ.

    necklace

    ವಿಶಿಷ್ಟ ಮಾದರಿಯ ಮತ್ತು ವಿಸ್ತಾರವಾದ ಈ ಸೋಗಸಾದ ಚಿನ್ನದ ಹಾರವು ನೀವು ಸಾಂಪ್ರಾದಯಿಕ ಉಡುಗೆ ತೊಟ್ಟಾಗ ಸುಂದವಾಗಿ ಕಾಣಿಸುತ್ತದೆ. ರತ್ನದ ಕಲ್ಲು ಮತ್ತು ಹೂವಿನ ಡಿಸೈನ್ ಹೊಂದಿರುವ ಈ ಚೋಕರ್ ನೆಕ್ಲೆಸ್ ಎಲ್ಲರ ಗಮನ ಸೆಳೆಯುತ್ತದೆ.

    Choker Necklace

    ಮದುವೆ ಸಮಯದಲ್ಲಿ ಚಿನ್ನದ ಚೋಕರ್ ನೆಕ್ಲೆಸ್ ಬೆರಗು ನೀಡುವುದರ ಜೊತೆಗೆ ರಾಯಲ್ ಲುಕ್ ನೀಡುತ್ತದೆ ಮತ್ತು ಆ ದಿನದಂದು ನಿಮಗೆ ಸ್ಪೆಶಲ್ ಫೀಲ್ ನೀಡುತ್ತದೆ.

    Choker Necklace

    ಕೆಂಪು ರತ್ನ ಕಲ್ಲುಗಳಿಂದ ವಿನ್ಯಾಸಗೊಳಿಸಿರುವ ಈ ಸುಂದರವಾದ ಚೋಕರ್ ನೆಕ್ಲೆಸ್ ರಾಜಮನೆತನದ ಲುಕ್ ನೀಡುತ್ತದೆ. ಈ ಚೋಕರ್ ನೆಕ್ಲೆಸ್ ಡಿಸೈನರ್ ಲೆಹೆಂಗಾ ಮತ್ತು ಸೀರೆಗೆ ಸಖತ್ ಮ್ಯಾಚ್ ಆಗುತ್ತದೆ.

    Choker Necklace

    ಈ ಅದ್ಭುತವಾದ ಚೋಕರ್ ನೆಕ್ಲೆಸ್ ನೋಡುವಾಗ ಎಲ್ಲರನ್ನು ಮಂತ್ರ ಮುಗ್ಧರನ್ನಾಗಿಸಿತ್ತದೆ ಎಂದೇ ಹೆಳಬಹುದು. ಇದು ಕುಂದನ್‍ನಿಂದ ಕೂಡಿದ ಸುಂದರವಾದ ಹೂವಿನ ವಿನ್ಯಾಸವಿರುವ ಚೋಕರ್ ನೆಕ್ಲೆಸ್ ಆಗಿದೆ.

    Choker Necklace

    ಈ ಚೋಕರ್ ನೆಕ್ಲೆಸ್ ರಾಜಮನೆತನದ ರಾಣಿಯರು ಧರಿಸಿದಂತೆ ಲುಕ್ ನೀಡುತ್ತದೆ. ಮದುವೆ ಮತ್ತು ಅದ್ದೂರಿ ಸಮಾರಂಭಗಳಲ್ಲಿ ಈ ಹಳದಿ ಬಣ್ಣದ ಚಿನ್ನದ ಚೋಕರ್ ನೆಕ್ಲೆಸ್ ಅದ್ಬುತವಾಗಿ ಕಾಣುತ್ತದೆ.

    Choker Necklace

  • ಟಾಪ್ 5 ಛತ್ರಿಗಳ ಡಿಸೈನ್‍ಗಳು

    ಟಾಪ್ 5 ಛತ್ರಿಗಳ ಡಿಸೈನ್‍ಗಳು

    ಭಾರತದಲ್ಲಿ ಮನ್ಸೂನ್ ಬಂದರೆ ಸಾಕು ಎಲ್ಲರಿಗೂ ತೊಂದರೆ ತಪ್ಪಿದ್ದಲ್ಲ. ಕಿರಿದಾದ ರಸ್ತೆಗಳು, ಗುಂಡಿಗಳು ಮತ್ತು ಕಷ್ಟಕರವಾದ ಹವಾಮಾನ. ಈ ವೇಳೆ ನಮ್ಮನ್ನು ಮಳೆಯಿಂದ ರಕ್ಷಿಸಿಕೊಳ್ಳಲು ಛತ್ರಿಗಳನ್ನು ಉಪಯೋಗಿಸುತ್ತೇವೆ. ಛತ್ರಿಗಳಲ್ಲಿ ನಾನಾ ರೀತಿಯ ಮುದ್ರಣ ಹಾಗೂ ಬಣ್ಣದ ಛತ್ರಿಗಳಿದೆ. ಛತ್ರಿಗಳ ಡಿಸೈನ್ ಕುರಿತಂತೆ ಕೆಲವು ಮಾಹಿತಿ ಈ ಕೆಳಗಿನಂತಿದೆ.

    ಕೆಹ್ಕ್ಲೊ ಬಣ್ಣದ ಛತ್ರಿಗಳು
    ಕಲೆಯನ್ನು ಪ್ರೀತಿಸುವವರಿಗೆ ಈ ಛತ್ರಿ ಬಹಳ ಇಷ್ಟವಾಗುತ್ತದೆ. ಈ ಛತ್ರಿ ಜನಸಂದಣಿಯ ಮಧ್ಯೆ ಎದ್ದು ಕಾಣಿಸುತ್ತದೆ. ಈ ಛತ್ರಿ ಮೇಲೆ ಮನುಷ್ಯನ ಮುಖವನ್ನು ಚಿತ್ರಿಸಲಾಗಿದೆ.

    ಸ್ಟೇಜ್ ಡೂಡಲ್ ಮುದ್ರಿತ ಬಿಳಿ ಛತ್ರಿ
    ನಿಮಗೆ ಬಿಳಿ ಬಣ್ಣ ಎಂದರೆ ಇಷ್ಟನಾ? ಹಾಗಾದರೆ ಈ ಛತ್ರಿ ನಿಮಗೆ ಬಲು ಬೇಗ ಇಷ್ಟ ಆಗುತ್ತದೆ. ಈ ಬಿಳಿ ಛತ್ರಿ ಮೇಲೆ ಹಾಸ್ಯಕರವಾದ ಕೆಲವು ಚಮತ್ಕಾರಿ ವ್ಯಂಗ್ಯ ಡೂಡಲ್‍ಗಳನ್ನು ಮುದ್ರಿಸಲಾಗಿದೆ. ಇದು ನಿಮಗೆ ದಿನವಿಡೀ ಸ್ಫೂರ್ತಿ ನೀಡುತ್ತದೆ. ಖಂಡಿತವಾಗಿಯೂ ಈ ಛತ್ರಿ ಸಹ ಪ್ರಯಾಣಿಕನಾಗಿ ನಿಮಗೆ ಕಂಪನಿ ನೀಡುತ್ತದೆ.

    ಹೆಲ್ಮೆಟ್ ಛತ್ರಿ
    ಸಾಮಾನ್ಯವಾಗಿ ಕೆಲವು ಛತ್ರಿಗಳನ್ನು ಹಿಡಿದುಕೊಂಡರೂ, ಮಳೆಯಲ್ಲಿ ನಮ್ಮ ಬಟ್ಟೆಗಳು ಒದ್ದೆಯಾಗಿ ಬಹಳ ಕಿರಿಕಿರಿಯುಂಟಾಗುತ್ತದೆ. ಆದರೆ ಹೆಲ್ಮೆಟ್ ಛತ್ರಿ ಬಳಸುವುದರಿಂದ ತಲೆ ಹಾಗೂ ಬಟ್ಟೆ ಒದ್ದೆಯಾಗುವುದನ್ನು ತಡೆಗಟ್ಟಬಹುದು. ಈ ಛತ್ರಿ ಕೈಯಲ್ಲಿ ಹಿಡಿದುಕೊಳ್ಳಲು ಬಹಳ ಸುಲಭಕರವಾಗಿದೆ ಮತ್ತು ಮಳೆ ಜೊತೆಗೆ ಗಾಳಿಯಿಂದ ಕೂಡ ನಮ್ಮನ್ನು ರಕ್ಷಿಸಿಕೊಳ್ಳಬಹುದಾಗಿದೆ.

    ಕೆಹ್ಕ್ಲೋ ಗೇಮ್ ಆಫ್ ಥ್ರೋನ್ಸ್ ಛತ್ರಿ
    ಈ ಛತ್ರಿಯ ಹೆಸರನ್ನು ಕೇಳಿದಾಗ ನಿಮಗೆ ನಗು ಬರಬಹುದು. ಆದರೆ ಈ ಛತ್ರಿ ಎಲ್ಲರಿಗೂ ಬಹಳ ಇಷ್ಟವಾಗುತ್ತದೆ. ಈ ಛತ್ರಿಯಲ್ಲಿ ಹಾರ್ಟ್ ಸಿಂಬಲ್ ಇದ್ದು, ಸಾಮಾನ್ಯವಾಗಿ ಕಪಲ್‍ಗಳು ಹೆಚ್ಚಾಗಿ ಬಳಸುತ್ತಾರೆ. ಮೊದಲಿಗೆ ಕಾಡ್ರ್ಸ್, ಡೈರಿ ಹಾಗೂ ಪೆನ್‍ಗಳಲ್ಲಿ ಈ ಅಕ್ಷರವನ್ನು ಮುದ್ರಿಸಲಾಗುತ್ತಿತ್ತು. ಆದರೆ ಇದೀಗ ಛತ್ರಿ ಮೇಲೆ ಕೂಡ ಮುದ್ರಿಸಲಾಗಿದೆ.

    ಬಾಳೆಹಣ್ಣು ಮಾದರಿಯ ಛತ್ರಿ
    ಈ ಛತ್ರಿ ಹಳದಿ ಬಣ್ಣವನ್ನು ಹೊಂದಿದ್ದು, ಪ್ರಕಾಶಮಾನವಾದ ಬಿಸಿಲಿನಲ್ಲಿ ಎದ್ದು ಕಾಣುತ್ತದೆ ಮತ್ತು ಈ ಛತ್ರಿಯನ್ನು ಬಾಳೆಹಣ್ಣಿನ ರೀತಿ ಇರುವ ಪೆಟ್ಟಿಗೆಯಲ್ಲಿ ಮಡಚಿ ಇಡಲಾಗುತ್ತದೆ. ಈ ಛತ್ರಿ ನೋಡಲು ಮುದ್ದಾಗಿರುವುದರಿಂದ ಚಿಕ್ಕ ಮಕ್ಕಳಿಗೆ ಬೇಗ ಇಷ್ಟವಾಗುತ್ತದೆ. ಇದನ್ನೂ ಓದಿ:ಕೇರಳದಲ್ಲಿ 20 ಸಾವಿರಕ್ಕೂ ಹೆಚ್ಚು ಕೇಸ್ – ಗಡಿ ಜಿಲ್ಲೆಗಳ ಡಿಸಿಗಳ ಜೊತೆ ಇಂದು ಸಿಎಂ ಸಭೆ

  • ಸಿಂಧೂರದ ಮಹತ್ವವೇನು..? – ಮದುವೆ ವೇಳೆ ವಧು ಧರಿಸಬಹುದಾದ ಡಿಸೈನ್‍ಗಳು ಇಲ್ಲಿವೆ

    ಸಿಂಧೂರದ ಮಹತ್ವವೇನು..? – ಮದುವೆ ವೇಳೆ ವಧು ಧರಿಸಬಹುದಾದ ಡಿಸೈನ್‍ಗಳು ಇಲ್ಲಿವೆ

    ಸಿಂಧೂರ ನಮ್ಮ ದೇಹದ ಏಳು ಚಕ್ರಗಳಲ್ಲಿ ಒಂದಾದ ಅಗ್ಯ ಚಕ್ರವಾಗಿದೆ. ಸಿಂಧೂರ ನಮ್ಮ ಮನಸ್ಸಿನ ಜೊತೆಗೆ ಹೆಚ್ಚಿನ ಸಂಪರ್ಕ ಹೊಂದಿದ್ದು, ಬುದ್ಧಿ ಮತ್ತು ಜ್ಞಾನವನ್ನು ಹೆಚ್ಚಾಗಿ ಕೇಂದ್ರೀಕರಿಸುತ್ತದೆ. ಸಿಂಧೂರಕ್ಕೆ ಅದರದ್ದೇ ಆದ ಶಕ್ತಿ ಮತ್ತು ಮಹತ್ವವಿದೆ. ಸುಳ್ಳು ಮತ್ತು ಪಕ್ಷಪಾತಕ್ಕಿಂತ ಹೆಚ್ಚಾಗಿ ಸತ್ಯಾಧಾರಿತ ವಿಚಾರಗಳನ್ನು ನೋಡಲು ಸಹಾಯಕವಾಗಿದೆ. ವಧುವಿನ ಹಣೆಯ ಮೇಲೆ ಕೆಂಪು ಬಣ್ಣದ ಸಿಂಧೂರ ಭಾರತೀಯ ನಾರಿಯ ಸಮೃದ್ಧಿ, ಪ್ರೀತಿ ಮತ್ತು ಸಹಾನುಭೂತಿಯನ್ನು ಸೂಚಿಸುತ್ತದೆ.

    ಸಿಂಧೂರವನ್ನು ನೀವು ಪ್ರತಿದಿನ ಇಟ್ಟುಕೊಳ್ಳಬೇಕೋ ಅಥವಾ ಬೇಡವೋ ಎಂಬುವುದು ನಿಮ್ಮ ವೈಯಕ್ತಿಕ ಆಯ್ಕೆ. ಆದರೆ ವಧುವಿಗೆ ಕಂಪ್ಲೀಟ್ ಲುಕ್ ನೀಡುವುದರ ಜೊತೆಗೆ ಸುಂದರವಾಗಿ ಕಾಣಿಸುವಂತೆ ಮಾಡುವುದು ಮಾತ್ರ ಸಿಂಧೂರ. ಸಿಂಧೂರ ಕುರಿತಂತೆ ಕೆಲವೊಂದು ಡಿಸೈನ್‍ಗಳ ಮಾಹಿತಿ ಈ ಕೆಳಗಿನಂತಿದೆ.

    ಬೋಲ್ಡ್ ಮತ್ತು ಬ್ಯೂಟಿಫುಲ್ ಸಿಂಧೂರ:
    ಮದುವೆಯ ದಿನ ವಧುವಿಗೆ ಸಾಂಪ್ರದಾಯಿಕ ಲುಕ್ ನೀಡುವ ಸಿಂಧೂರಗಳಲ್ಲಿ ಇದು ಕೂಡ ಒಂದು. ಈ ಸಿಂಧೂರ ವಧುವಿಗೆ ಸುಂದರವಾದ ಲುಕ್ ನೀಡುತ್ತದೆ. ನಿಮ್ಮ ಹಣೆ ಚಿಕ್ಕದಾಗಿದ್ದರೆ ಚಿಂತಿಸಬೇಡಿ, ವಾಸ್ತವವಾಗಿ ಈ ಸಿಂಧೂರ ನಿಮ್ಮ ಹಣೆಯ ಮೇಲೆ ದೊಡ್ಡದಾಗಿ ಮತ್ತು ಸರಿಯಾಗಿ ಕಾಣಿಸುವಂತೆ ಮಾಡುತ್ತದೆ ಮತ್ತು ನಿಮಗೆ ಗ್ರಾಂಡ್ ಲುಕ್ ನೀಡುತ್ತದೆ.

    ಸಿಂಧೂರದ ಸಣ್ಣ ಡಿಸೈನ್:
    ಅನೇಕ ವಧುಗಳು ಸಾಮಾನ್ಯವಾಗಿ ಮದುವೆಯ ಸಮಯದಲ್ಲಿ ಸಣ್ಣದಾಗಿರುವ ಸಿಂಧೂರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲಿಯೂ ಇಳಿಮುಖವಾಗಿ ಹಣೆಯನ್ನು ಹೊಂದಿರುವವರಿಗೆ ಮಾಂಗ್ ಟಿಕ್ಕಾ ಬಹಳ ಚೆನ್ನಾಗಿ ಸೂಟ್ ಆಗುತ್ತದೆ. ಇದು ನಿಮ್ಮ ಮುಖವನ್ನು ವಿಕಾರಗೊಳಿಸದೇ ಅಂದವನ್ನು ಹೆಚ್ಚಿಸುತ್ತದೆ. ಈ ಸಿಂಧೂರವನ್ನು ನೀವು ಯಾವುದೇ ಕಾರ್ಯಕ್ರಮಗಳಲ್ಲಿ ಕೂಡ ಧರಿಸಬಹುದು.

    ಸ್ಟಡ್/ ಸ್ಟೋನ್ ಸಿಂಧೂರ:
    ಸ್ಟಡ್ ಮತ್ತು ಸ್ಟೋನ್ ಸಿಂಧೂರಗಳ ಡಿಸೈನ್ ಗ್ಲಾಮರ್ ಲುಕ್ ನೀಡುತ್ತದೆ. ಸ್ಟೋನ್ ಸಿಂಧೂರಗಳು ವಿವಿಧ ಆಕಾರ ಮತ್ತು ಗಾತ್ರದಲ್ಲಿ ಸಿಗುತ್ತದೆ. ನಿಮ್ಮ ವಿಶೇಷ ದಿನಗಳಲ್ಲಿ ಈ ಸಿಂಧೂರವನ್ನು ಧರಿಸುವುದರಿಂದ ನಿಮಗೆ ಹೆಚ್ಚು ಸ್ಫೂರ್ತಿ ಮತ್ತು ಉತ್ಸಾಹ ತುಂಬುತ್ತದೆ.

    ಸ್ಟೋನ್ ಆವೃತ್ತಿಯ ಸಿಂಧೂರ:
    ಸ್ಟೋನ್ ಮೂಲಕ ಆವೃತ್ತಿಗೊಳಿಸಿರುವ ಅನೇಕ ಆಕಾರದಲ್ಲಿ ಸಿಂಧೂರಗಳಿದೆ. ಸಿಂಧೂರದ ಸುತ್ತ ವೃತ್ತಾಕಾರದಲ್ಲಿ ಸಣ್ಣ, ಸಣ್ಣ ಸ್ಟೋನ್‍ಗಳನ್ನು ಅಳವಡಿಸಲಾಗಿದ್ದು, ಸಿಂಧೂರ ಎದ್ದು ಕಾಣಿಸುವುದರ ಜೊತೆಗೆ ನಿಮಗೆ ಅದ್ಭುತ ಲುಕ್ ನೀಡುತ್ತದೆ.

    ಮಹಾರಾಷ್ಟ್ರ ಸಿಂಧೂರ:
    ಭಾರತದ ಪ್ರತಿಯೊಂದು ರಾಜ್ಯವು ತನ್ನದೇ ಆದ ಸಂಸ್ಕøತಿ ಮತ್ತು ಸಂಪ್ರದಾಯವನ್ನು ಹೊಂದಿದೆ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿ ವಿವಾಹದ ಪದ್ಧತಿಗಳಿದೆ. ಹಲವಾರು ರಾಜ್ಯಗಳಲ್ಲಿ ಮಹಾರಾಷ್ಟ್ರ ಕೂಡ ಒಂದು. ಮಹಾರಾಷ್ಟ್ರದ ಕಡೆ ಮದುವೆಯ ವೇಳೆ ವಧುವಿಗೆ ಚಂದ್ರನ ಆಕಾರದ ಸಿಂಧೂರ(ಚಂದ್ರ ಕೋರ್ ಬಿಂದಿ)ವನ್ನು ಇಡಲಾಗುತ್ತದೆ. ಇದನ್ನು ವಧು ಮಾತ್ರವಲ್ಲದೇ ಮಹಾರಾಷ್ಟ್ರದಲ್ಲಿರುವ ಮಹಿಳೆಯರು ಸರ್ವೇ ಸಾಮಾನ್ಯವಾಗಿ ಪ್ರತಿನಿತ್ಯ ಇಟ್ಟುಕೊಳ್ಳುತ್ತಾರೆ. ಇದನ್ನೂ ಓದಿ:ಬೆಳಗ್ಗೆ ಎದ್ದು ಬೆಚ್ಚಗಿನ ನೀರು ಕುಡಿಯಿರಿ- ಆರೋಗ್ಯ ಕಾಪಾಡಿಕೊಳ್ಳಿ

  • ಪ್ರೀತಿ ವ್ಯಕ್ತಪಡಿಸಲು 5 ಬೆಸ್ಟ್ ಕಪಲ್ ಟ್ಯಾಟೂಗಳು

    ಪ್ರೀತಿ ವ್ಯಕ್ತಪಡಿಸಲು 5 ಬೆಸ್ಟ್ ಕಪಲ್ ಟ್ಯಾಟೂಗಳು

    ನುಷ್ಯ ಸಂಘ ಜೀವಿ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರ. ಪ್ರತಿಯೊಬ್ಬ ವ್ಯಕ್ತಿಗೂ ಜೀವದಲ್ಲಿ ಸಂಗಾತಿ ಬಹಳ ಮುಖ್ಯ. ಸಂಗಾತಿ ಇಲ್ಲದೇ ಮನುಷ್ಯರ ಜೀವನ ಪೂರ್ಣವಾಗುವುದಿಲ್ಲ. ನೀವು ನಿಜವಾಗಲೂ ಯಾರನ್ನಾದರೂ ಪ್ರೀತಿಸಿದ್ದರೆ, ಅವರೊಂದಿಗೆ ಹೆಚ್ಚು ಸಮಯ ಕಳೆಯಬೇಕೆಂದು ಅನ್ನಿಸುತ್ತದೆ. ನೀವು ಯಾವುದೇ ಕೆಲಸ ಹಾಗೂ ವ್ಯಾಪಾರ ಮಾಡಿದರೂ ಅದನ್ನು ಹೊರತುಪಡಿಸಿ ನಿಮ್ಮ ಸಂಗಾತಿಗೆಂದೇ ಕೆಲವೊಂದಷ್ಟು ಸಮಯವನ್ನು ಮೀಸಲಿಡುತ್ತೀರಾ. ನಿಮ್ಮ ಸಂಗಾತಿಗೆ ನೀವು ಮತ್ತಷ್ಟು ಹತ್ತಿರವಾಗುವ ಉತ್ತಮ ಆಯ್ಕೆ ಎಂದರೆ ಅದು ಕಪಲ್ ಟ್ಯಾಟೂ.

    ನೀವು ಇಷ್ಟ ಪಡುವಂತಹ ಕಪಲ್ ಟ್ಯಾಟೂವನ್ನು ಹಾಕಿಸಿಕೊಳ್ಳಬಹುದು. ಇದರಿಂದ ನಿಮ್ಮ ಸಂಗಾತಿ ನೀವು ಎಲ್ಲೆ ಹೋದರೂ ಬಂದರೂ ನಿಮ್ಮ ಮನದಲ್ಲಿಯೇ ಇರುತ್ತಾರೆ ಹಾಗೂ ಇಬ್ಬರ ನಡುವೆ ಪ್ರೀತಿ ಕೂಡ ಹೆಚ್ಚಾಗುತ್ತದೆ. ಈ ಕೆಳಗೆ ಕೆಲವೊಂದು ಕಪಲ್ ಟ್ಯಾಟೂ ಡಿಸೈನ್‍ಗಳನ್ನು ನೀಡಲಾಗಿದ್ದು, ನಿಮಗೆ ಇಷ್ಟವಾದ ಟ್ಯಾಟೂಗಳನ್ನು ಸುಲಭವಾಗಿ ಆಯ್ಕೆ ಮಾಡಿಕೊಳ್ಳಬಹುದು.

    ಲಾಕ್ ಆ್ಯಂಡ್ ಕೀ ಟ್ಯಾಟೂ
    ಜೋಡಿಗಳು ಈ ಟ್ಯಾಟೂವನ್ನು ಸಾಮಾನ್ಯವಾಗಿ ಹಾಕಿಸಿಕೊಳ್ಳುತ್ತಾರೆ. ಈ ಟ್ಯಾಟೂ ಡಿಸೈನ್‍ನಲ್ಲಿ ಒಬ್ಬ ವ್ಯಕ್ತಿ ಲಾಕ್ ಚಿತ್ರವನ್ನು ಬರೆಸಿಕೊಂಡರೆ ಮತ್ತೊಬ್ಬರು ಕೀ ಚಿತ್ರವನ್ನು ಬರೆಸಿಕೊಂಡಿರುತ್ತಾರೆ.

    ಪದಗಳ ಟ್ಯಾಟೂ
    ಸಾಮಾನ್ಯವಾಗಿ ಜೋಡಿಗಳು ಪದಗಳ ಟ್ಯಾಟೂವನ್ನು ಹಾಕಿಸಿಕೊಳ್ಳಲು ಹೆಚ್ಚಾಗಿ ಆಯ್ಕೆ ಮಾಡುತ್ತಾರೆ. ಈ ಟ್ಯಾಟೂನಲ್ಲಿ ಒಂದು ಅರ್ಥಪೂರ್ಣವಾದ ‘ಎಂದಿಗೂ ಮುಗಿಯದ ಪ್ರೀತಿ’ ಎಂಬ ವಾಕ್ಯವಿದ್ದು, ಅದರ ಅರ್ಧ ವಾಕ್ಯವನ್ನು ಒಬ್ಬರು ಪದಗಳ ಮೂಲಕ ಹಾಕಿಸಿಕೊಂಡಿದ್ದಾರೆ. ಮತ್ತೊಬ್ಬರು ಉಳಿದ ಅರ್ಧ ಪದಗಳ ಟ್ಯಾಟೂವನ್ನು ಹಾಕಿಸಿಕೊಂಡಿರುತ್ತಾರೆ.

    ಲವ್ ಡಿಸೈನ್ ಟ್ಯಾಟೂ
    ಪ್ರಪಂಚದಲ್ಲಿ ಪ್ರತಿಯೊಬ್ಬರು ಪ್ರೀತಿಯನ್ನು ತಮ್ಮ ಸಂಗಾತಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಪ್ರೀತಿಗಿಂತ ಮಿಗಿಲಾದ ಟ್ಯಾಟೂ ಇದೆಯಾ? ಲವ್ ಎಂದು ನೂರಾರು ರೀತಿಯ ಡಿಸೈನ್‍ಗಳಲ್ಲಿ ಪದಗಳನ್ನು ಬರೆಸಿಕೊಳ್ಳಬಹುದು.

    ಮಿಕ್ಕಿ ಮಿನ್ನಿ ಟ್ಯಾಟೂ
    ಮಿಕ್ಕಿ ಮಿನ್ನಿ ಟ್ಯಾಟೂ ಕಪಲ್ ಟ್ಯಾಟೂಗೆ ಫೇಮಸ್. ಈ ಟ್ಯಾಟೂನಲ್ಲಿ ಮಿಕ್ಕಿ ಡಿಸೈನ್‍ನನ್ನು ಪುರುಷನ ಕೈಗೆ ಹಾಗೂ ಮಿನ್ನಿ ಡಿಸೈನ್‍ನನ್ನು ಮಹಿಳೆಯ ಕೈ ಮೇಲೆ ಹಾಕಿಸಲಾಗಿದೆ ಹಾಗೂ ಈ ಟ್ಯಾಟೂವನ್ನು ನಿಮ್ಮ ದೇಹದಲ್ಲಿ ಎಲ್ಲಿ ಬೇಕಾದರೂ ಹಾಕಿಸಿಕೊಳ್ಳಬಹುದು.

    ಸನ್ ಹಾಗೂ ಮೂನ್ ಟ್ಯಾಟೂ
    ಪ್ರೀತಿಯನ್ನು ವ್ಯಕ್ತಪಡಿಸಲು ಕಪಲ್‍ಗಳಿಗೆ ಸೂರ್ಯ ಹಾಗೂ ಚಂದ್ರ ಚಿಹ್ನೆಯ ಟ್ಯಾಟೂ ಬಹಳ ಉತ್ತಮ. ಈ ಟ್ಯಾಟೂ ಡಿಸೈನಲ್ಲಿ ಸೂರ್ಯ ಚಿಹ್ನೆಯನ್ನು ಪುರುಷ ಹಾಕಿಸಿಕೊಂಡಿದ್ದರೆ, ಚಂದ್ರ ಚಿಹ್ನೆಯನ್ನು ಮಹಿಳೆ ಹಾಕಿಸಿಕೊಂಡಿರುತ್ತಾರೆ.

    ಬಾಣ ಹಾಗೂ ಹಾರ್ಟ್
    ಬಾಣ ಹಾಗೂ ಹೃದಯ ಚಿಹ್ನೆಯ ಟ್ಯಾಟೂ ಜೋಡಿಗಳ ಕೈ ಮೇಲೆ ಬಹಳ ರೊಮ್ಯಾಟಿಂಕ್ ಆಗಿ ಕಾಣಿಸುತ್ತದೆ. ಇದರಲ್ಲಿ ಒಬ್ಬರು ಬಾಣದ ಚಿಹ್ನೆಯನ್ನು ಹಾಕಿಸಿಕೊಂಡಿದ್ದರೆ ಮತ್ತೊಬ್ಬರು ಹೃದಯದ ಚಿಹ್ನೆಯನ್ನು ಕೈ ಮೇಲೆ ಹಾಕಿಸಿಕೊಂಡಿದ್ದಾರೆ.

  • ಮದುವೆ ವೇಳೆ ವಧುವಿಗೆ ಯಾವ ಮೆಹಂದಿ ಡಿಸೈನ್ ಸೂಟ್ ಆಗುತ್ತೆ ಗೊತ್ತಾ?

    ಮದುವೆ ವೇಳೆ ವಧುವಿಗೆ ಯಾವ ಮೆಹಂದಿ ಡಿಸೈನ್ ಸೂಟ್ ಆಗುತ್ತೆ ಗೊತ್ತಾ?

    ಮದುವೆ ಸಮಾರಂಭ ಅಂದರೆ ಸಾಕು. ಹೆಣ್ಣು ಮಕ್ಕಳಿಗೆ ಮೆಹಂದಿ ಇರಲೇ ಬೇಕು. ಚಿಕ್ಕ-ಮಕ್ಕಳಿಂದ ದೊಡ್ಡವರವರೆಗೂ ಮೆಹಂದಿ ಎಂದರೆ ಎಲ್ಲರಿಗೂ ಅಚ್ಚು-ಮೆಚ್ಚು. ಮದುವೆ ಸಮಾರಂಭಗಳಲ್ಲಂತೂ ಮದುಮಗಳು ಮೆಹಂದಿ ಹಾಕದೇ ಇದ್ದರೆ ಮದುವೆ ಕಂಪ್ಲೀಟ್ ಆಗಿದೆ ಎಂದು ಎನಿಸುವುದೇ ಇಲ್ಲ. ನಿಜವಾಗಿ ಹೇಳಬೇಕೆಂದರೆ ವಧುವಿನ ಮಹೆಂದಿ ಭಾರತ ಹಳೆಯ ಸಂಸ್ಕøತಿ ಮತ್ತು ಸಾಂಪ್ರದಾಯವನ್ನು ಸೂಚಿಸುತ್ತದೆ.

    ಮದುವೆ ಸಮಾರಂಭಗಳಲ್ಲಿ ವಧುವಿನ ಎರಡು ಕೈಗಳು ಮತ್ತಷ್ಟು ಸುಂದರ ಹಾಗೂ ಆಕರ್ಷಕವಾಗಿ ಎದ್ದು ಕಾಣಿಸಲು ಮೆಹಂದಿಯನ್ನು ಬಳಸಲಾಗುತ್ತದೆ. ಅಲ್ಲದೆ ಮದುವೆ ಸಂದರ್ಭದಲ್ಲಿ ವಧುವಿಗಷ್ಟೇ ಅಲ್ಲದೆ ವರನಿಗೂ ಮೆಹಂದಿ ಹಚ್ಚಲಾಗುತ್ತದೆ. ಹಿಂದಿನಿಂದಲೂ ಮದುವೆಯ ಎಲ್ಲ ಶಾಸ್ತ್ರಗಳಲ್ಲಿ ಮೆಹಂದಿ ಶಾಸ್ತ್ರ ಕೂಡ ಒಂದಾಗಿದೆ. ಮದುವೆ ಸಮಯದಲ್ಲಿ ವಧು-ವರನ ಕುಟುಂಬದವರು ಮೆಹಂದಿ ಶಾಸ್ತ್ರವನ್ನು ಆಯೋಜಿಸಿ ಮೆಹಂದಿ ಹಾಕಿಸಿಕೊಳ್ಳುವ ಹಳೆಯ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ.

    ಕೆಲವರು ಮೆಹಂದಿ ಹಾಕಿಸಿಕೊಂಡ ಬಳಿಕ ಅದು ಅತಿಯಾದ ಬಣ್ಣ ನೀಡಿದರೆ ತಮ್ಮ ಜೀವನ ಸಂಗಾತಿ ನಿಮ್ಮನ್ನು ಹೆಚ್ಚು ಪ್ರೀತಿಸುತ್ತಾರೆ ಎಂದು ಹೇಳುತ್ತಾರೆ. ಇನ್ನೂ ಕೆಲವರು ನಿಮ್ಮ ದೇಹದಲ್ಲಿ ಉಷ್ಣಾಂಶ ಅಧಿಕವಾಗಿದ್ದರೆ ಮೆಹಂದಿ ಹೆಚ್ಚು ಬಣ್ಣ ಕೊಡುತ್ತದೆ ಎಂದು ಕೂಡ ಹೇಳುತ್ತಾರೆ. ಇಷ್ಟೆಲ್ಲಾ ಗಾಢವಾದ ಪ್ರಾಮುಖ್ಯತೆ ಇರುವ ಮೆಹಂದಿ ಬಗ್ಗೆ ತಿಳಿದಿದ್ದು, ಸಮಾರಂಭಗಳಲ್ಲಿ ಯಾವ ಮೆಹಂದಿ ಡಿಸೈನ್ಸ್ ಹಾಕಿಕೊಳ್ಳಬೇಕೆಂದು ತಿಳಿಯದೇ ಇರುವವರಿಗೆ ಒಂದಷ್ಟು ಮೆಹಂದಿ ಡಿಸೈನ್ಸ್ ಈ ಕೆಳಗಿನಂತಿವೆ.

    ನವಿಲು ಡಿಸೈನ್ಸ್
    ಈ ಸುಂದರವಾದ ಮೆಹಂದಿ ಡಿಸೈನ್‍ನಲ್ಲಿ ಕೈನ ಮೇಲಿನ ತುದಿಯಲ್ಲಿ ಎರಡು ನವಿಲುಗಳು ಅದಲು-ಬದಲಾಗಿ ತಲೆ ಬಾಗಿಸಿಕೊಂಡಿದ್ದು, ಕೈನ ಮಧ್ಯದಲ್ಲಿ ವಧು-ವರನನ್ನು ಮಂಟಪಕ್ಕೆ ಕರೆದೊಯ್ಯಲಾಗುತ್ತಿರುವಂತೆ ಚಿತ್ರ ಬಿಡಿಸಲಾಗಿದೆ. ಜೊತೆಗೆ ವಧು-ವರ ಇಬ್ಬರು ಹಾರ ಬದಲಿಸಿಕೊಳ್ಳುವಂತಿದ್ದು ಒಂದು ಸುಂದರ ಮದುವೆ ಕಥೆ ಹೇಳುವಂತೆ ತೋರುತ್ತದೆ.

    ಮಿಕ್ಕಿ ಮೌಸ್ ಡಿಸೈನ್
    ಈ ಮೆಹಂದಿ ಡಿಸೈನ್‍ನಲ್ಲಿ ವಧು ಬಹಳ ಸಿಂಪಲ್ ಹಾಗೂ ಡಿಫರೆಂಟ್ ಆಗಿರುವ ಮಿಕ್ಕಿಮೌಸ್‍ನ ಚಿತ್ರವನ್ನು ಕೈ ಮೇಲೆ ಬರೆಸಿಕೊಂಡಿದ್ದಾರೆ. ಈ ಡಿಸೈನ್ ಒಂದು ರೀತಿ ಮಹಿಳೆಯರಿಗೆ ಯುನಿಕ್ ಲುಕ್ ನೀಡುತ್ತದೆ.

    ಹೂವಿನ ರಾಶಿ ಡಿಸೈನ್
    ಇದೊಂದು ಯುನಿಕ್ ಮೆಹಂದಿ ಡಿಸೈನ್ ಆಗಿದ್ದು, ಹಲವಾರು ಮೆಹಂದಿ ಡಿಸೈನ್‍ಗಳ ಮಧ್ಯೆ ಒನ್ ಆಫ್ ದಿ ಬೆಸ್ಟ್ ಡಿಸೈನ್ ಎಂದೇ ಹೇಳಬಹುದು. ಕೈ ತುಂಬಾ ಹೂವಿನ ರಾಶಿಗಳಿಂದ ತುಂಬಿಕೊಂಡಿರುವ ಈ ಡಿಸೈನ್ ನೋಡಲು ಅತ್ಯಂತ ಆಕರ್ಷಕವಾಗಿದ್ದು, ಬಹಳ ಸುಂದರವಾಗಿ ಕಾಣಿಸುತ್ತದೆ.

    ವಧು-ವರ ಡಿಸೈನ್
    ವಧು ವರನ ಚಿತ್ರ ಹೊಂದಿರುವ ಈ ಮೆಹಂದಿ ಕಲಾ ವಿನ್ಯಾಸದಲ್ಲಿ, ನವಿಲು, ಕಮಲ, ಹೂಗಳಿದೆ ಹಾಗೂ ಇವೆಲ್ಲವೂ ವಧು-ವರರನ್ನು ಮದುವೆಗೆ ಸ್ವಾಗತ ಕೋರುವ ರೀತಿಯಲ್ಲಿದ್ದು, ಈ ಡಿಸೈನ್ ನೋಡಲು ಎರಡು ಕಣ್ಣುಗಳು ಸಾಲದು ಎಂದು ಹೇಳಿದರೆ ತಪ್ಪಾಗಲಾರದು.

    ರಾಧಾ-ಕೃಷ್ಣ ಡಿಸೈನ್
    ಒಂದು ಕೈನಲ್ಲಿ ರಾಧಾ-ಕೃಷ್ಣನೊಂದಿಗೆ ಒಟ್ಟಾಗಿ ಕಾಣಿಸಿಕೊಂಡಿದ್ದು, ಕೃಷ್ಣನ ಜೊತೆ ರಾಧೆ ಕೊಳಲನ್ನು ಹಿಡಿದುಕೊಂಡಿರುವಂತೆ ಚಿತ್ರವನ್ನು ಬಿಡಿಸಲಾಗಿದೆ. ಮತ್ತೊಂದು ಕೈ ಮೇಲೆ ದೇವಾಲಯ, ಮಕ್ಕಳು, ಓಂ, ಸ್ವಸ್ತಿಕ್ ಚಿತ್ರದ ಜೊತೆ ದಿನಾಂಕ, ವರ್ಷವನ್ನು ಬರೆಯಲಾಗಿದೆ.