Tag: ಡಿಸೇಲ್

  • ಬೆಂಗಳೂರಿನಲ್ಲಿ ಸೆಂಚುರಿ ಬಾರಿಸಿದ ಪೆಟ್ರೋಲ್

    ಬೆಂಗಳೂರಿನಲ್ಲಿ ಸೆಂಚುರಿ ಬಾರಿಸಿದ ಪೆಟ್ರೋಲ್

    ಬೆಂಗಳೂರು: ದೇಶದಾದ್ಯಂತ ಪೆಟ್ರೋಲ್, ಡಿಸೇಲ್ ದರ ಏರಿಕೆ ಮತ್ತೆ ಮುಂದುವರಿದಿದೆ. ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 28 ಪೈಸೆ ಏರಿಕೆ ಕಂಡು ಸೆಂಚುರಿ ಬಾರಿಸಿದೆ. ಈ ಮೂಲಕ 1 ಲೀಟರ್ ಪೆಟ್ರೋಲ್ ಬೆಲೆ 100.23 ರೂಪಾಯಿ ತಲುಪಿದೆ.

    ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಸಾರ್ವಕಾಲಿಕ ದಾಖಲೆ ಬರೆದಿದ್ದು, 100 ರೂಪಾಯಿ ಗಡಿದಾಟಿದೆ. ಇಂದು ಪೆಟ್ರೋಲ್ ಬೆಲೆ 28 ಪೈಸೆ ಏರಿಕೆ ಕಂಡು 1 ಲೀಟರ್‍ ಗೆ 100.23 ರೂ ಆಗಿದೆ. ಡಿಸೇಲ್ ದರ 44 ಪೈಸೆ ಏರಿಕೆ ಕಂಡು ಲೀಟರ್‍ ಗೆ 93.02 ರೂಪಾಯಿ ತಲುಪಿದೆ.  ಇದನ್ನೂ ಓದಿ: SSLC ಪರೀಕ್ಷೆ ಬಗ್ಗೆ ಭಯ ಬೇಡ – ಎರಡು ದಿನ ಎರಡೇ ಪೇಪರ್

    ನಗರದಲ್ಲಿ ನಿನ್ನೆ ಪೆಟ್ರೋಲ್ ಲೀಟರ್‍ ಗೆ 99.95 ರೂಪಾಯಿ ಮತ್ತು ಡಿಸೇಲ್ ಲೀಟರ್‍ ಗೆ 92.38 ರೂಪಾಯಿ ಆಗಿತ್ತು. ಇಂದು ಮತ್ತೆ ಏರಿಕೆಯತ್ತ ಮುಖಮಾಡಿ ಪೆಟ್ರೋಲ್ ಸೆಂಚುರಿ ಬಾರಿಸಿದೆ. ಈ ಮೂಲಕ ಮತ್ತೆ ವಾಹನ ಚಾಲಕರಿಗೆ ಪೆಟ್ರೋಲ್, ಡಿಸೇಲ್ ಬರೆ ಬಿದ್ದಿದೆ. ಇದನ್ನೂ ಓದಿ:  SSLC ಪರೀಕ್ಷೆ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ

    ಕೆಲ ದಿನಗಳ ಹಿಂದೆ ಹೈದರಾಬಾದ್ ಮತ್ತು ತೆಲಂಗಾಣದಲ್ಲೂ ಪೆಟ್ರೋಲ್ ದರ ಶತಕ ತಲುಪಿತ್ತು. ಭೋಪಾಲ್‍ನಲ್ಲಿ ಲೀಟರ್‍ ಗೆ 104.53 ರೂಪಾಯಿ ತಲುಪಿತ್ತು. ಇಂದು ಡೆಲ್ಲಿಯಲ್ಲಿ ಪೆಟ್ರೋಲ್ ದರ ಲೀಟರ್‍ ಗೆ 96.93 ರೂಪಾಯಿ. ಡಿಸೇಲ್‍ಗೆ ಲೀಟರ್‍ ಗೆ 87.69 ರೂಪಾಯಿ ಆಗಿದೆ. ಮುಂಬೈನಲ್ಲಿ ಪೆಟ್ರೋಲ್ ಲೀಟರ್‍ ಗೆ 103.08 ರೂಪಾಯಿ, ಡಿಸೇಲ್ ಲೀಟರ್‍ ಗೆ 95.14 ರೂಪಾಯಿ ಆಗಿದೆ.

  • ತೈಲ ಬೆಲೆ ಏರಿಕೆ ವಿರೋಧಿಸಿ ಬೈಕ್‍ನ್ನು ಕೆರೆಗೆ ಎಸೆದು ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

    ತೈಲ ಬೆಲೆ ಏರಿಕೆ ವಿರೋಧಿಸಿ ಬೈಕ್‍ನ್ನು ಕೆರೆಗೆ ಎಸೆದು ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

    ಹೈದರಾಬಾದ್: ದೇಶಾದ್ಯಂತ ಇಂಧನ ಬೆಲೆ ಗಗನಕ್ಕೆ ಏರಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಈ ನಡುವೆ ತೆಲಂಗಾಣದಲ್ಲಿ ಬೈಕ್ ಒಂದನ್ನು ಕೆರೆಗೆ ಎಸೆದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

    ದೇಶದಲ್ಲಿ ಪ್ರತಿದಿನ ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ತೆಲಂಗಾಣದಲ್ಲಿ ಯೂತ್ ಕಾಂಗ್ರೆಸ್ ಪ್ರತಿಭಟನೆ ನಡೆಸಿ ನಗರದ ಪಕ್ಕದಲ್ಲಿದ್ದ ಹುಸೇನ್ ಸಾಗರ್ ಕೆರೆಗೆ ಬೈಕ್ ಒಂದನ್ನು ಎಸೆದು ಆಕ್ರೋಶ ಹೊರಹಾಕಿದೆ. ಇದೀಗ ಈ ಬೈಕ್ ಎಸೆಯುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ರಾತ್ರೋರಾತ್ರಿ ಕೊರೊನಾ ದೇವಿ ದೇವಸ್ಥಾನ ನಿರ್ಮಾಣ, ಬೆಳಗ್ಗೆ ನೆಲಸಮ

    ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರಾದ ಎನ್, ಉತ್ತಮ್ ಕುಮಾರ್ ರೆಡ್ಡಿ, ಎ ರೇವಂತ್ ರೆಡ್ಡಿ, ಪೊನ್ನಮ್ ಪ್ರಭಾಕರ್, ಜಯಪ್ರಕಾಶ್ ರೆಡ್ಡಿ, ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದು, ಸ್ಥಳೀಯ ಪೆಟ್ರೋಲ್ ಬಂಕ್‍ನಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದಾರೆ. ದೇಶದಲ್ಲಿ ಹೆಚ್ಚಳವಾಗಿರುವ ಪೆಟ್ರೋಲ್, ಡೀಸೆಲ್ ಸೇರಿ ತೈಲ ಬೆಲೆ ಇಳಿಕೆಯಾಗಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    ಪೆಟ್ರೋಲ್ ಬೆಲೆ ವಿರೋಧಿಸಿ ಪ್ರತಿಭಟನೆಯಲ್ಲಿ ಬೈಕ್‍ನ್ನು ಎಸೆದ ವೀಡಿಯೋ ನೋಡಿದ ಸಾವಿರಾರು ಮಂದಿ ನೆಟ್ಟಿಗರು, ಈ ಪ್ರತಿಭಟನೆಯನ್ನು ಕಂಡು ಅಚ್ಚರಿ ವ್ಯಕ್ತಪಡಿಸಿ, ವಿವಿಧ ಬಗೆಯ ಕಾಮೆಂಟ್ ಮಾಡುತ್ತಿದ್ದಾರೆ.

  • ಶತಕದ ಗಡಿ ದಾಟಿದ ಪೆಟ್ರೋಲ್ ಬೆಲೆ

    ಶತಕದ ಗಡಿ ದಾಟಿದ ಪೆಟ್ರೋಲ್ ಬೆಲೆ

    ಬೆಂಗಳೂರು: ಕೊರೊನಾ ಕೇಸ್ ಗಳು ಕಡಿಮೆಯಾಗುತ್ತೆ ಅಂತಾ ನಿಟ್ಟುಸಿರು ಬಿಡುತ್ತಿರೋ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ಪ್ರತಿ ದಿನ ತೈಲ ದರದಲ್ಲಿ ಏರಿಕೆ ಕಾಣುತ್ತಿದೆ. ದಿನವೂ ಪೈಸೆ ಪೈಸೆ ಲೆಕ್ಕದಲ್ಲಿ ಪೆಟ್ರೋಲ್, ಡಿಸೇಲ್ ರೇಟ್ ಹೆಚ್ಚಾಗುತ್ತಿದ್ದು, ಜನರ ಜೇಬಿಗೆ ಕತ್ತರಿ ಬೀಳುತ್ತಿದೆ.

    ಈಗಾಗಲೇ ರಾಜ್ಯದ ಕೆಲ ನಗರ ಮತ್ತು ಜಿಲ್ಲೆಗಳಲ್ಲಿ ಪೆಟ್ರೋಲ್ ದರ 100 ರೂಪಾಯಿ ಗಡಿ ದಾಟಿದೆ. ಬೆಂಗಳೂರಿನ ಎಚ್.ಪಿ (ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್) ಬಂಕ್‍ನಲ್ಲಿ, ಇಂದು ಒಂದು ಲೀಟರ್ ಪೆಟ್ರೋಲ್ ಬೆಲೆ 98 ರೂಪಾಯಿ 81 ಪೈಸೆಯಾಗಿದೆ. ಹಾಗೆಯೇ ಒಂದು ಲೀಟರ್ ಡಿಸೇಲ್ ಬೆಲೆ 91 ರೂಪಾಯಿ 73 ಪೈಸೆಗೆ ಏರಿಕೆಯಾಗಿದೆ. ಇದನ್ನೂ ಓದಿ: ರಾಜ್ಯದಲ್ಲೇ ಅತಿ ಹೆಚ್ಚು, ಶಿರಸಿಯಲ್ಲಿ ನೂರರ ಗಡಿ ದಾಟಿದ ಪೆಟ್ರೋಲ್ ಬೆಲೆ

    ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಗಳು ಏರಿಕೆಯಾಗಿರೋದೇ ರಾಜ್ಯದಲ್ಲಿ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಹಾಗೆಯೇ ತೈಲ ಬೆಲೆಗಳ ಮೇಲೆ ಟ್ಯಾಕ್ಸ್ ಹೇರಿಕೆ ಸಹ ರೇಟ್ ಹೈಕ್ ಗೆ ಕಾರಣವಾಗಿದೆ. ಉಳಿದಂತೆ ಬೆಂಗಳೂರಿನ ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಹಾಗೂ ರಿಲಯನ್ಸ್ ಬಂಕ್ ಗಳಲ್ಲಿ ಪೆಟ್ರೋಲ್, ಡಿಸೇಲ್ ಬೆಲೆಗಳಲ್ಲಿ ವ್ಯತ್ಯಾಸಗಳನ್ನು ಕಾಣಬಹುದಾಗಿದೆ.

  • ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ವಾಟಾಳ್ ಪ್ರತಿಭಟನೆ

    ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ವಾಟಾಳ್ ಪ್ರತಿಭಟನೆ

    ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್‍ರವರು ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

    ಒಂದು ಕಡೆ ಕೊರೊನಾ ಎರಡನೇಯ ಅಲೆ ಅಬ್ಬರ, ಮತ್ತೊಂದೆಡೆ ಲಾಕ್ ಡೌನ್‍ನಿಂದ ಕೆಲಸ ಕಾರ್ಯವಿಲ್ಲದೆ ಜನ ಹೊಟ್ಟೆ ತುಂಬಿಸಿಕೊಳ್ಳುವುದು ಹೇಗಪ್ಪ ಎಂದು ಯೋಚಿಸುತ್ತಿದ್ದಾರೆ. ಇತಂಹ ಸಮಯದಲ್ಲಿ ಪೆಟ್ರೋಲ್ ಡಿಸೇಲ್ ಬೆಲೆ ಗಗನಕ್ಕೇರಿದೆ. ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಶತಕ ಬಾರಿಸಲು ಮುಂದಾಗಿದೆ. ಕಳೆದ ಮೂರ್ನಾಲ್ಕು ತಿಂಗಳಿಂದ ಪ್ರತಿನಿತ್ಯ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಆಗುತ್ತಿದೆ. ಇದನ್ನು ಓದಿ: ಜಿಲ್ಲಾ ಪ್ರವಾಸಕ್ಕೂ ಮುನ್ನವೇ ಸಿಎಂ ಅನ್‍ಲಾಕ್ ಘೋಷಣೆ?

    ಬೆಲೆ ಏರುತ್ತಿದ್ದರೂ ರಾಜ್ಯ ಮತ್ತು ಕೇಂದ್ರ ಸರ್ಕಾರ ಬೆಲೆ ಏರಿಕೆಯ ಬಗ್ಗೆ ಜನರಿಗೆ ಆಗುತ್ತಿರುವ ಕಷ್ಟದ ಅರಿವೇ ಇಲ್ಲದಂತೆ ವರ್ತಿಸುತ್ತಿದೆ. ಇದನ್ನ ಖಂಡಿಸಿ ಇಂದು ಲಾಕ್ ಡೌನ್ ಇದ್ದರು ವಾಟಾಳ್ ನಾಗರಾಜ್ ಪ್ರತಿಭಟನೆ ಮಾಡಿದ್ದಾರೆ.

    ದೇಶದಲ್ಲಿ ಪೆಟ್ರೋಲ್ ಡಿಸೇಲ್ ಅನಿಲ ಬೆಲೆ ಏರಿಕೆಯ ವಿರುದ್ದ ವಾಟಾಳ್ ನಾಗರಾಜ್‍ರವರು ಇಂದು ಮೈಸೂರು ಬ್ಯಾಂಕ್ ವೃತ್ತದಲ್ಲಿ ನಡುರಸ್ತೆ ಮಧ್ಯೆ ಕುಳಿತು ಬೆಲೆ ಏರಿಕೆ ಖಂಡಿಸಿದ್ದಾರೆ. ಬೆಲೆ ಏರಿಕೆಯ ಬಿಸಿ ಸಾರ್ವಜನಿಕರ ಮೇಲೆ ಹೊರಯಾಗಲಿದೆ. ಇತಂಹ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದರು ರಾಜ್ಯ ಮತ್ತು ಕೇಂದ್ರ ಸರ್ಕಾರ ಜನರ ಹಿತ ಕಾಪಾಡುವ ಯಾವ ಲಕ್ಷಣಗಳು ಕಾಣ್ತಿಲ್ಲ ಅಂತಾ ಏಕಾಂಗಿಯಾಗಿ ವಾಟಾಳ್ ನಾಗರಾಜ್ ರಸ್ತೆಯ ಮಧ್ಯೆ ಕುಳಿತು ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ:ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ಶರಣು ಸಲಗಾರ್, ಬಸವನಗೌಡ ತುರುವಿಹಾಳ್

  • ಬೆಂಗಳೂರಿನಲ್ಲಿ ಶತಕದಂಚಿಗೆ ತಲುಪಿದ ಪೆಟ್ರೋಲ್ ಬೆಲೆ

    ಬೆಂಗಳೂರಿನಲ್ಲಿ ಶತಕದಂಚಿಗೆ ತಲುಪಿದ ಪೆಟ್ರೋಲ್ ಬೆಲೆ

    ಬೆಂಗಳೂರು: ಪೆಟ್ರೋಲ್ ಬೆಲೆ ಬೆಂಗಳೂರಿನಲ್ಲಿ ಶತಕದಂಚಿಗೆ ತಲುಪಿದೆ. ಬೆಂಗಳೂರಲ್ಲಿ ಲೀಟರ್ ಪೆಟ್ರೋಲ್ ಬರೋಬ್ಬರಿ 98 ರೂಪಾಯಿ 19 ಪೈಸೆಯಾಗಿದೆ. ಹಾಗೆಯೇ ಲೀಟರ್ ಡಿಸೇಲ್ ಗೆ 90 ರೂಪಾಯಿ 84 ಪೈಸೆಯಾಗಿದೆ. ಕಳೆದ ಒಂದು ವಾರದಿಂದ ಪೈಸೆ ಪೈಸೆ ಲೆಕ್ಕದಲ್ಲಿ ಪೆಟ್ರೋಲ್ ಮತು ಡೀಸೆಲ್ ಬೆಲೆ ಹೆಚ್ಚಾಗುತ್ತಿದೆ.

    ಕೊರೊನಾ ಲಾಕ್‍ಡೌನ್ ನಿಂದಾಗಿ ಜನಸಾಮಾನ್ಯರು ಬದುಕೋದು ಕಷ್ಟವಾಗಿದೆ. ಸಾಕಷ್ಟು ಜನಕ್ಕೆ ಆರ್ಥಿಕ ಹೊಡೆತ ಬಿದ್ದಿದೆ. ಇದರ ನಡುವೆ ಪೆಟ್ರೋಲ್, ಡಿಸೇಲ್ ಬೆಲೆಗಳು ಗಗನಕ್ಕೇರುತ್ತಿವೆ. ಅದ್ರಲ್ಲೂ ಪೆಟ್ರೋಲ್ ಬೆಲೆಯಂತೂ ಶತಕದ ಸನಿಹದಲ್ಲಿದೆ. ಈಗಾಗಲೇ ದೇಶದ ಕೆಲ ನಗರಗಳಲ್ಲಿ ಪೆಟ್ರೋಲ್ ಬೆಲೆ 100 ರೂಪಾಯಿ ಗಡಿ ದಾಟಿದೆ.

    ದೇಶದಲ್ಲಿ ಕೊರೊನಾ ಎರಡನೇ ಅಲೆ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿದೆ. ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯಗಳು ಲಾಕ್‍ಡೌನ್ ಆಗಿದ್ದರಿಂದ ಇಂಧನ ಮಾರಾಟದಲ್ಲಿ ಇಳಿಕೆಯಾಗಿದೆ. ಕಳೆದ ಒಂದು ತಿಂಗಳಿಗೆ ಹೋಲಿಕೆ ಮಾಡಿದ್ರೆ ಶೇ.17ರಷ್ಟು ಇಂಧನ ಮಾರಾಟದಲ್ಲಿ ಇಳಿಕೆಯಾಗಿದೆ. ಮೇ ತಿಂಗಳಿನಲ್ಲಿ ಪೆಟ್ರೋಲ್ ಬರೋಬ್ಬರಿ 17.9 ಲಕ್ಷ ಟನ್ ನಷ್ಟು ಇಳಿಕೆ ಕಂಡಿದೆ.

    ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ನಿರಂತರವಾಗಿ ಏರಿಕೆಯಾಗ್ತಿದೆ. ಜನವರಿಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್ ಗೆ 54.79 ಡಾಲರ್ ನಷ್ಟಿತ್ತು. ಇದೀಗ ಶೇ.22ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರಲ್ 66.98 ಡಾಲರ್ ಗೆ ತಲುಪಿದೆ.

  • ಲಾರಿ ಮುಷ್ಕರ ಬೆಂಬಲಿಸಿ ಹೆದ್ದಾರಿಯಲ್ಲಿ ಪ್ರತಿಭಟನೆ

    ಲಾರಿ ಮುಷ್ಕರ ಬೆಂಬಲಿಸಿ ಹೆದ್ದಾರಿಯಲ್ಲಿ ಪ್ರತಿಭಟನೆ

    ಹುಬ್ಬಳ್ಳಿ: ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಕರೆ ನೀಡಿದ ಲಾರಿ ಮುಷ್ಕರಕ್ಕೆ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

    ಹುಬ್ಬಳ್ಳಿಯ ಗಬ್ಬೂರ ಟೋಲ್ ಮುಂದೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರ ಹಳೆ ಲಾರಿಗಳನ್ನು ಬಂದ್ ಮಾಡುವ ಕಾನೂನುನ್ನು ಹಿಂಪಡೆಯಬೇಕು. ಥರ್ಡ್ ಪಾರ್ಟಿ ಇನ್ಸೂರೆನ್ಸ್ ಕಡಿಮೆ ಮಾಡಬೇಕು. ಇ.ವೇ ಬಿಲ್ ಹಿಂಪಡೆಯಬೇಕು ಟೋಲ್ ದರವನ್ನು ಕಡಿಮೆ ಮಾಡಬೇಕು ಹಾಗೂ ಇತರೆ ಸಮಸ್ಯೆಗಳಾದ ಗ್ಯಾಸ್ ಡೀಸೆಲ್, ಪೆಟ್ರೋಲ್ ದರವನ್ನು ಜಿಎಸ್‍ಟಿಯಲ್ಲಿ ಒಳಪಡಿಸಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

    ರೈತರ ಕೃಷಿ ಕಾಯ್ದೆ, ವಿದ್ಯುತ್ ಕಾಯ್ದೆ ಎಪಿಎಂಸಿ ಹಿಂಪಡೆಯಬೇಕು ಎಂದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ರಸ್ತೆ ಮಧ್ಯದಲ್ಲಿಯೇ ಪ್ರತಿಭಟನೆ ನಡೆಸಿದರು. ಇನ್ನೂ ರಸ್ತೆಯ ಮೇಲೆ ಸಂಚರಿಸುತ್ತಿರುವ ಲಾರಿಗಳನ್ನು ಬಂದ್ ಮಾಡಲು ಮುಂದಾದ ಕಾರ್ಯಕರ್ತರ ಮಧ್ಯದಲ್ಲಿಯೇ ಮಾತಿನ ಚಕಮಕಿ ನಡೆಯಿತು.

  • ನವದಂಪತಿಗೆ ಉಡುಗೊರೆಯಾಗಿ ಗ್ಯಾಸ್ ಸಿಲಿಂಡರ್, ಪೆಟ್ರೋಲ್ – ವೀಡಿಯೋ ವೈರಲ್

    ನವದಂಪತಿಗೆ ಉಡುಗೊರೆಯಾಗಿ ಗ್ಯಾಸ್ ಸಿಲಿಂಡರ್, ಪೆಟ್ರೋಲ್ – ವೀಡಿಯೋ ವೈರಲ್

    ಚೆನ್ನೈ: ನೂತನ ವಿವಾಹಿತರರಿಗೆ ಉಡುಗೊರೆಯಾಗಿ ಎಲ್‍ಪಿಜಿ ಸಿಲಿಂಡರ್ ಮತ್ತು ಪೆಟ್ರೋಲ್ ನೀಡಿದ ಸ್ನೇಹಿತರ ಬಳಗದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪ್ರತಿದಿನ ಎಲ್‍ಪಿಜಿ ಗ್ಯಾಸ್ ಮತ್ತು ಪೆಟ್ರೋಲ್ ದರ ಏರಿಕೆಯ ಪರಿಣಾಮವಾಗಿ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ತಮಿಳುನಾಡಿನ ಚೆನ್ನೈನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವಧು ವರರ ಸ್ನೇಹಿತರ ತಂಡ ಎಲ್‍ಪಿಜಿ ಸಿಲಿಂಡರ್ ಮತ್ತು ಒಂದು ಕ್ಯಾನ್ ಪೆಟ್ರೋಲ್‍ನ್ನು ನೀಡುವ ಮೂಲಕ ವಿಭಿನ್ನ ಉಡುಗೊರೆ ನೀಡಿದ್ದಾರೆ. ಈ ವೀಡಿಯೋ ಇದೀಗ ನೆಟ್ಟಿಗರ ಆಹಾರವಾಗಿದೆ.

    ಸ್ನೇಹಿತರ ಬಳಗ ಮದುವೆ ಉಡುಗೊರೆಯಾಗಿ ಗ್ಯಾಸ್ ಮತ್ತು ಪೆಟ್ರೋಲ್ ಗಿಫ್ಟ್ ನೀಡುತ್ತಿದ್ದ ವೀಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಇದು ಯೋಗ್ಯವಾದ ಉಡುಗೊರೆ, ಎಂದು ಹೋಗಲಿದ್ದಾರೆ.

    ದೇಶದಲ್ಲಿ ಪ್ರತಿದಿನ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದ್ದು, 100 ಸನಿಹಕ್ಕೆ ಬಂದು ನಿಂತಿದೆ. ಗ್ಯಾಸ್ ಬೆಲೆ 800 ರೂಪಾಯಿ ಆಗಿರುದರಿಂದಾಗಿ ನೂತನ ವಿವಾಹಿತರಿಗೆ ಸ್ನೇಹಿತರು ಮೌಲ್ಯಯುತವಾದ ಉಡುಗೊರೆ ನೀಡಿ ಫೋಟೋ ತೆಗೆಸಿಕೊಂಡಿದ್ದಾರೆ.

  • ಖಾಲಿ ಸಿಲಿಂಡರ್ ಹೊತ್ತು, ಬೈಕ್ ತಳ್ಳುತ್ತಾ ಬೆಲೆ ಏರಿಕೆ ವಿರುದ್ಧ ಕರವೇ ಪ್ರತಿಭಟನೆ

    ಖಾಲಿ ಸಿಲಿಂಡರ್ ಹೊತ್ತು, ಬೈಕ್ ತಳ್ಳುತ್ತಾ ಬೆಲೆ ಏರಿಕೆ ವಿರುದ್ಧ ಕರವೇ ಪ್ರತಿಭಟನೆ

    ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯಿಂದ ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿರುವುದನ್ನು ವಿರೋಧಿಸಿ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಕಾರ್ಯಕರ್ತರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಸಿದ್ದಲಿಂಗಯ್ಯ ವೃತ್ತದಿಂದ ಬೈಕ್‍ಗಳನ್ನು ತಳ್ಳಿಕೊಂಡು ಖಾಲಿ ಸಿಲಿಂಡರ್ ತಲೆ ಮೇಲೆ ಹೊತ್ತು ಮೆರವಣಿಗೆ ಮಾಡಿ ಪ್ರತಿಭಟನೆ ನಡೆಸಿದರು.

    ಕಳೆದ ವರ್ಷದಿಂದ ಇಡೀ ಜಗತ್ತನ್ನೆ ಕಾಡಿದ ಮಹಾಮಾರಿ ಕರೊನಾ ವೈರಸ್ ಭಾರತದ ಮಧ್ಯಮ ವರ್ಗದವರ ಪಾಲಿಗೆ ಸಹಿಸಲಾರದ ಪೆಟ್ಟು ನೀಡಿತ್ತು ಹಲವಾರು ಕಂಪನಿಗಳು ಬಾಗಿಲು ಮುಚ್ಚಿದ ಪರಿಣಾಮ ಕಾರ್ಮಿಕರು ನಿರುದ್ಯೋಗಿಗಳಾದರು. ವ್ಯಾಪಾರ, ವ್ಯವಹಾರ ನೆಲ ಕಚ್ಚಿದವು, ದಿನಗೂಲಿ ನೌಕರರು ಊಟಕ್ಕೂ ಪರದಾಡುವಂತಾಗಿದೆ. ಇಂತಹ ಸಮಯದಲ್ಲಿ ಜನರ ಸಹಾಯಕ್ಕೆ ಬರಬೇಕಿದ್ದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಗಾಯದ ಮೇಲೆ ಬರೆ ಎಳೆಯುತ್ತಿದೆ. ಡಿಸೇಲ್, ಪೆಟ್ರೋಲ್ ಬೆಲೆ ಏರುತ್ತಿದ್ದು ಗ್ಯಾಸ್ ಮೇಲಿನ ಸಬ್ಸಿಡಿ ರದ್ದುಗೊಳಿಸಿದ್ದಲ್ಲದೆ, 50 ರೂ ಹೆಚ್ಚು ಮಾಡಿರುವ ಪರಿಣಾಮ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ.ಕೂಡಲೇ ಸರ್ಕಾರಗಳು ಬೆಲೆ ಏರಿಕೆಗೆ ಕಡಿವಾಣ ಹಾಕಿ ಜನರ ಮೇಲಿನ ಹೊರೆಯನ್ನು ಕಡಿಮೆ ಮಾಡಬೇಕೆಂದು ಪ್ರತಿಭಟನಕಾರರು ಒತ್ತಾಯಿಸಿದರು.

    ಕೇಂದ್ರ ಸರ್ಕಾರದ ಮೇಲಿನ ಭರವಸೆಯಿಂದ ಎರಡನೇ ಬಾರಿಗೆ ಅತಿ ಹೆಚ್ಚು ಮತಗಳನ್ನು ನೀಡಿ ಅಧಿಕಾರ ನೀಡಲಾಯಿತು. ಆದರೆ ಇತ್ತೀಚಿನ ನಡುವಳಿಕೆ ಜನರನ್ನು ಭ್ರಮನಿರಸನಗೊಳಿಸಿದೆ. ನಾವು ಕೂಡ ಮೋದಿ ಅಭಿಮಾನಿಗಳೇ. ಆದರೆ ಮಾಡಿದ್ದನ್ನೆಲ್ಲ ಸರಿ ಎನ್ನುವ ಅಂದಾಭಿಮಾನ ನಮ್ಮಲ್ಲಿ ಇಲ್ಲ. ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಹಶೀಲ್ದಾರ್ ಟಿ.ಎಸ್.ಶಿವರಾಜ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

  • ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ – ಕಟ್ಟಿಗೆ ಹೊರೆ ಹೊತ್ತು ಪ್ರತಿಭಟನೆ

    ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ – ಕಟ್ಟಿಗೆ ಹೊರೆ ಹೊತ್ತು ಪ್ರತಿಭಟನೆ

    ಧಾರವಾಡ: ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯ ಏರಿಕೆಯಾಗುತ್ತಿರುವುದನ್ನು ಖಂಡಿಸಿ ಕಟ್ಟಿಗೆ ಹೊರೆ ಹೊತ್ತು ಪ್ರತಿಭಟನೆ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

    ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆಯಾಗುತ್ತಲೇ ಇದ್ದು ಇದನ್ನು ಖಂಡಿಸಿ ಧಾರವಾಡದಲ್ಲಿ ವಿನೂತನ ಪ್ರತಿಭಟನೆ ನಡೆಸಲಾಯಿತು. ನಗರದ ವಿವೇಕಾನಂದ ವೃತ್ತದಲ್ಲಿ ಧಾರವಾಡ ಮಹಿಳಾ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಈ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ತಲೆ ಮೇಲೆ ಕಟ್ಟಿಗೆ ಹೊರೆ ಹೊತ್ತು ವಿನೂತನವಾಗಿ ಪ್ರತಿಭಟಿಸಿದ್ದಾರೆ.

    ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಿಲಿಂಡರ್ ಸಿಗಲ್ಲ, ಕಟ್ಟಿಗೆ ಖರೀದಿ ಮಾಡಿಕೊಂಡು ಇಟ್ಟುಕೊಳ್ಳಿ, ಸಿಲಿಂಡರ್ ಬೆಲೆ ಕೂಡಾ ಸಾಕಷ್ಟು ಏರಿಕೆಯಾಗಿದೆ ಎಂದು ಜನರಿಗೆ ಕಟ್ಟಿಗೆ ಕೊಟ್ಟು ಕಳಿಸಿದ್ದಾರೆ.

  • ನಮೋ ವಿರುದ್ಧ ತುಳು ನಟನ ಧ್ವನಿ- ಆಕ್ರೋಶದ ಬೆನ್ನಲ್ಲೇ ಪೋಸ್ಟ್ ಡಿಲೀಟ್

    ನಮೋ ವಿರುದ್ಧ ತುಳು ನಟನ ಧ್ವನಿ- ಆಕ್ರೋಶದ ಬೆನ್ನಲ್ಲೇ ಪೋಸ್ಟ್ ಡಿಲೀಟ್

    ಮಂಗಳೂರು: ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಪರಿಣಾಮ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧ್ವನಿ ಎತ್ತಿದ ತುಳು ಕಿರುತೆರೆ ನಟ ಮಂಗಳೂರಿನ ವಿಜಯ್ ಶೋಭರಾಜ್ ಪಾವೂರು ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ವಿಜಯ್ ಶೋಭಾರಾಜ್ ಪಾವೂರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ‘ನಮೋ ನಮಗೆ ಮೋಸ, ಪೆಟ್ರೋಲ್ ಧಗ ಧಗ, ಡೀಸೆಲ್ ಭಗ ಭಗ’ ಎಂದು ಬರೆದುಕೊಂಡಿದ್ದರು. ಇದನ್ನು ವಿರೋಧಿಸಿರುವ ನಮೋ ಅಭಿಮಾನಿಗಳು ಮೋದಿ ಬಗ್ಗೆ ಮಾತಾನಾಡಿದರೆ ನಾವು ಸುಮ್ಮನಿರುವುದಿಲ್ಲ. ನಿಮ್ಮ ನೂತನ ತುಳು ಸಿನಿಮಾವನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದರು.

    ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪೋಸ್ಟ್ ಗೆ ತೀವ್ರ ಪ್ರತಿರೋಧ ಬರುತ್ತಿದ್ದಂತೆ ಶೋಭರಾಜ್ ಪೋಸ್ಟ್ ಡಿಲೀಟ್ ಮಾಡಿ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ.

    ಶೋಭರಾಜ್ ಹಲವು ತುಳು ಸಿನಿಮಾಗಳಲ್ಲಿ ಹಾಸ್ಯ ನಟನಾಗಿ, ನಿರ್ದೇಶಕರಾಗಿ ಮಿಂಚಿದ್ದರು. ಪ್ರಸ್ತುತ ಕನ್ನಡ ಖಾಸಗಿ ಚಾನಲ್ ಒಂದರಲ್ಲಿ ಬರುವ ಸೀರಿಯಲ್‍ನಲ್ಲೂ ಶೋಭರಾಜ್ ಕಾಣಿಸಿಕೊಂಡಿದ್ದಾರೆ.