Tag: ಡಿಸೇಲ್

  • ಪೊಲೀಸ್ ಜೀಪ್‍ಗೆ ಹಾಕಿದ ಡಿಸೇಲ್ ಹಣ ಕೇಳಿದ್ದಕ್ಕೆ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಬೂಟಿನೇಟು

    ಪೊಲೀಸ್ ಜೀಪ್‍ಗೆ ಹಾಕಿದ ಡಿಸೇಲ್ ಹಣ ಕೇಳಿದ್ದಕ್ಕೆ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಬೂಟಿನೇಟು

    ಕಾರವಾರ: ಪೊಲೀಸ್ (Police) ಜೀಪ್‍ಗೆ ಡಿಸೇಲ್ (Diesel)  ಹಾಕಿಸಿ ಹಣ ನೀಡದೇ ಹೋಗಿದ್ದಕ್ಕೆ ಡಿಸೇಲ್ ಹಣ ಕೊಡುವಂತೆ ಪೆಟ್ರೋಲ್ ಬಂಕ್‍ನ (Petrol Bunk)  ಸಿಬ್ಬಂದಿ ಕೇಳಿದ ಎಂದು ಠಾಣೆಗೆ ಕರೆಸಿ ಚಿತ್ರಹಿಂಸೆ ನೀಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ನಡೆದಿದೆ.

    ರಾಘು ಎಂಬ ಯುವಕ ಪೊಲೀಸರ ದೌರ್ಜನ್ಯಕ್ಕೆ ಒಳಗಾದ ಪೆಟ್ರೋಲ್ ಬಂಕ್‍ ಸಿಬ್ಬಂದಿ. ಮಹಾದೇವ ಬಂಡಿಗೇರಿ ಚಿತ್ರಹಿಂಸೆ ನೀಡಿದ ಪೊಲೀಸ್ ಕಾನ್ಸ್‌ಟೇಬಲ್‌. ಸೋಮವಾರ ನಗರದದ ಬೆಂಡಿಗೇರಿ ಪೆಟ್ರೋಲ್ ಬಂಕ್‍ಗೆ ಡಿಸೇಲ್ ಹಾಕಿಸಲು ಮುಂಡಗೋಡು ಠಾಣೆ ಕಾನ್ಸ್‌ಟೇಬಲ್‌ ಮಹಾದೇವ ಬಂಡಿಗೇರಿ ಆಗಮಿಸಿದ್ದು, 30 ಲೀಟರ್ ಡಿಸೇಲ್ ಹಾಕಿಸಿದ್ದಾರೆ. ಈ ವೇಳೆ ರಾಘು ಡಿಸೇಲ್ ಹಣ ಕೇಳಿದ್ದಾರೆ. ಸಂಜೆ ಕೊಡುವುದಾಗಿ ಹೇಳಿ ಹೋದ ಕಾನ್ಸ್‌ಟೇಬಲ್‌ ಹಣ ನೀಡಿರಲಿಲ್ಲ. ಇದಕ್ಕಾಗಿ ಅವರಿಗೆ ಕರೆಮಾಡಿದಾಗ ಅವಾಚ್ಯ ಶಬ್ದದಿಂದ ನಿಂದಿಸಿ ಠಾಣೆಗೆ ಕರೆಸಿಕೊಂಡಿದ್ದಾರೆ. ನಂತರ ಈತನಿಗೆ ಹಣ ಕೇಳಿದ್ದಕ್ಕೆ ಬೂಟು ಕಾಲಿನಿಂದ ಒದ್ದು, ಬೆಲ್ಟ್ ನಿಂದ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿ ಕಳುಹಿಸಿದ್ದಾರೆ. ಇದನ್ನೂ ಓದಿ: ಬಂಡೇ ಮಠದ ಶ್ರೀ ಬರೆದಿದ್ದು ಒಟ್ಟು 6 ಪುಟಗಳ ಡೆತ್‍ನೋಟ್ – ಈಗಾಗಲೇ 20 ಮಂದಿಯ ವಿಚಾರಣೆ

    ಪೊಲೀಸಪ್ಪನ ಬೋಟುಗಾಲು ಹೊಡೆತಕ್ಕೆ ರಾಘು ಜರ್ಜರಿತರಾಗಿದ್ದು, ಮುಂಡಗೋಡು ಸರ್ಕಾರಿ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಠಾಣೆಗೆ ಬಂದು ಸಾರ್ವಜನಿಕರು ಪ್ರಶ್ನಿಸಿದಾಗ ರಾಜಿ ಸಂಧಾನ ಮಾಡಿ ಪ್ರಕರಣ ಇತ್ಯರ್ಥಗೊಳಿಸಿದ್ದಾರೆ. ಇದನ್ನೂ ಓದಿ: ಎತ್ತಿನಹೊಳೆ ಯೋಜನೆಗೆ ಮತ್ತಷ್ಟು ಹಣ ಬಿಡುಗಡೆ ಮಾಡಲು ಮುಂದಾದ ಸರ್ಕಾರ

    Live Tv
    [brid partner=56869869 player=32851 video=960834 autoplay=true]

  • ಪಾಕ್‍ನಲ್ಲಿ ದಾಖಲೆ ಮಟ್ಟದಲ್ಲಿ ಪೆಟ್ರೋಲ್ ಬೆಲೆ ಏರಿಕೆ

    ಪಾಕ್‍ನಲ್ಲಿ ದಾಖಲೆ ಮಟ್ಟದಲ್ಲಿ ಪೆಟ್ರೋಲ್ ಬೆಲೆ ಏರಿಕೆ

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ 24.03 ರೂ. ಏರಿಕೆ ಆಗಿದ್ದು, ಈ ಹಿನ್ನೆಲೆಯಲ್ಲಿ ಇಂದಿನಿಂದ ಪ್ರತಿ ಲೀಟರ್‌ಗೆ 233.89 ರೂ. ಹೆಚ್ಚಳವಾಗಿದೆ.

    ಈ ಬಗ್ಗೆ ಪಾಕಿಸ್ತಾನದ ಫೆಡರಲ್ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ಮಾತನಾಡಿ, ಇನ್ನು ಮುಂದೆ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸಬ್ಸಿಡಿಗಳನ್ನು ಭರಿಸುವ ಸ್ಥಿತಿಯಲ್ಲಿ ಸರ್ಕಾರವಿಲ್ಲ ಎಂದು ತಿಳಿಸಿದರು.

    ಇಂದಿನಿಂದ ಪ್ರತಿ ಲೀಟರ್ ಪೆಟ್ರೋಲ್ 233.89 ರೂ., ಡೀಸೆಲ್ 263.31 ರೂ., ಸೀಮೆ ಎಣ್ಣೆ 211.43 ರೂ., ಲೈಟ್ ಡೀಸೆಲ್ ಆಯಿಲ್‌ 207.47 ರೂ. ಏರಿಕೆ ಆಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ರಷ್ಯಾ ವಿರುದ್ಧ ಹೋರಾಟಕ್ಕೆ ಉಕ್ರೇನ್‍ಗೆ ಹೋಗಿದ್ದ ಇಬ್ಬರು US ಪ್ರಜೆಗಳು ನಾಪತ್ತೆ

    ಇದೇ ವೇಳೆ ಸಚಿವರು ಹಿಂದಿನ ಸರ್ಕಾರದ ನೀತಿಗಳನ್ನು ಟೀಕಿಸಿ, ಈ ನೀತಿಗಳಿಂದ ದೇಶದ ಆರ್ಥಿಕತೆ ಹದಗೆಟ್ಟಿದೆ ಎಂದು ಕಿಡಿಕಾರಿದರು. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಸಬ್ಸಿಡಿಗಳನ್ನು ನೀಡುವ ಮೂಲಕ ಉದ್ದೇಶಪೂರ್ವಕವಾಗಿ ಪೆಟ್ರೋಲ್ ಬೆಲೆಯನ್ನು ಕಡಿಮೆ ಮಾಡಿದ್ದಾರೆ. ಅಧಿಕಾರದಲ್ಲಿರುವ ಸರ್ಕಾರವು ಆ ನಿರ್ಧಾರಗಳ ಭಾರವನ್ನು ಭರಿಸುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಯುಪಿಯಲ್ಲಿ ಬುಲ್ಡೋಜರ್ ಘರ್ಜನೆ- ಇಂದು ಸುಪ್ರೀಂ ಕೋರ್ಟ್ ವಿಚಾರಣೆ

    Live Tv

  • ಪಾಕಿಸ್ತಾನದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

    ಪಾಕಿಸ್ತಾನದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ನಡೆಯುತ್ತಿರುವ ರಾಜಕೀಯ ಗದ್ದಲದ ನಡುವೆ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀ.ಗೆ 30ರೂ. ಹೆಚ್ಚಿಸಿದೆ. ಇಂದಿನಿಂದ ಜಾರಿಯಾಗಿರುವ ಈ ದರವು ಇಸ್ಲಾಮಾಬಾದ್‍ನಲ್ಲಿ ಒಂದು ಲೀ.ಗೆ ಪೆಟ್ರೋಲ್ ಬೆಲೆ 129.86 ರೂ. ಹಾಗೂ ಡೀಸೆಲ್ ಬೆಲೆ 178.15ರೂ. ಏರಿಕೆ ಆಗಿದೆ.

    ಇದರ ಜೊತೆಗೆ ಸೀಮೆಎಣ್ಣೆ ಕೂಡ 30 ರೂ. ಏರಿಕೆಯಾಗಿದ್ದು, ಲೀಟರ್‌ಗೆ 155.56 ರೂ.ಗೆ ಹೆಚ್ಚಳವಾಗಿದೆ. ಈ ಬಗ್ಗೆ ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ಅವರು ಮಾತನಾಡಿ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಲೀಟರ್‌ಗೆ 30 ರೂ.ಗಳಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಘೋಷಿಸಿದರು. ಈ ಹೆಚ್ಚಳವು ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ ಎಂದು ಹೇಳಿದ್ದರು.

    ಸರ್ಕಾರಕ್ಕೆ ಬೆಲೆ ಏರಿಕೆ ಬಿಟ್ಟು ಬೇರೆ ದಾರಿಯಿಲ್ಲ. ಹೊಸ ಬೆಲೆಯ ಅಡಿಯಲ್ಲಿ, ನಾವು ಇನ್ನೂ ಡೀಸೆಲ್ ಮೇಲೆ ಲೀಟರ್‌ಗೆ 56 ರೂ. ನಷ್ಟವನ್ನು ಅನುಭವಿಸುತ್ತಿದ್ದೇವೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕಾರ್ಯಕ್ರಮದ ಪುನರುಜ್ಜೀವನವನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದರು. ಇದನ್ನೂ ಓದಿ: ವೇಶ್ಯಾವಾಟಿಕೆ ಅಕ್ರಮವಲ್ಲ – ಸುಪ್ರೀಂಕೋರ್ಟ್ ಮಹತ್ವದ ತೀರ್ಪು

    ಮುಂದಿನ ತಿಂಗಳು ವಾರ್ಷಿಕ ಬಜೆಟ್ ಮಂಡಿಸುವ ಮೊದಲು ವಿತ್ತೀಯ ಕೊರತೆಯನ್ನು ಕಡಿಮೆ ಮಾಡಲು ಹಾಗೂ ತೈಲ ಮತ್ತು ವಿದ್ಯುತ್ ವಲಯಗಳಲ್ಲಿನ ಸಬ್ಸಿಡಿಗಳನ್ನು ಹಿಂತೆಗೆದುಕೊಳ್ಳುವ ಒಪ್ಪಂದದ ಭಾಗವಾಗಿ ಪಾಕಿಸ್ತಾನ ಮತ್ತು ಐಎಮ್‍ಎಫ್ ನಡುವಿನ ಪ್ರಮುಖ ವಿಷಯವೆಂದರೆ ಬೆಲೆ ಏರಿಕೆಯಾಗಿದೆ. ಇದನ್ನೂ ಓದಿ: ನಾಯಿ ವಾಕಿಂಗ್‍ಗೆ ಸ್ಟೇಡಿಯಂ ಖಾಲಿ ಮಾಡಿಸಿದ್ದ ಐಎಎಸ್ ಅಧಿಕಾರಿ ವರ್ಗಾವಣೆ

  • ಇಲ್ಲಿ ಮೊಬೈಲ್ ಬಿಡಿ ಭಾಗಗಳನ್ನು ಖರೀದಿಸಿದ್ರೆ ಸಿಗುತ್ತೆ ಉಚಿತ ಪೆಟ್ರೋಲ್, ನಿಂಬೆಹಣ್ಣು

    ಇಲ್ಲಿ ಮೊಬೈಲ್ ಬಿಡಿ ಭಾಗಗಳನ್ನು ಖರೀದಿಸಿದ್ರೆ ಸಿಗುತ್ತೆ ಉಚಿತ ಪೆಟ್ರೋಲ್, ನಿಂಬೆಹಣ್ಣು

    ನವದೆಹಲಿ: ತನ್ನ ಮಳಿಗೆಯಲ್ಲಿ 10 ರೂ. ಮೌಲ್ಯದ ಮೊಬೈಲ್ ಬಿಡಿಭಾಗಗಳನ್ನು ಖರೀದಿಸಿದರೆ ಉಚಿತವಾಗಿ ನಿಂಬೆಹಣ್ಣು ಹಾಗೂ ಪೆಟ್ರೋಲ್ ನೀಡುವುದಾಗಿ ವಾರಣಾಸಿಯ ಮಳಿಗೆದಾರರೊಬ್ಬರು ಘೋಷಿಸಿದ್ದಾರೆ.

    ಇತ್ತೀಚೆಗೆ ಪೆಟ್ರೋಲ್ ಹಾಗೂ ನಿಂಬೆಹಣ್ಣಿನ ದರ ಏಕಾ-ಏಕಿ ಏರಿಕೆಯಾಗಿದ್ದು, ಗ್ರಾಹಕರಿಗೆ ಹೊರೆಯಾಗುತ್ತಿರುವುದರಿಂದ ಈ ಆಫರ್‌ಗಳನ್ನು ನೀಡಲಾಗುತ್ತಿದೆ. ಗ್ರಾಹಕರು ಸಾಧಾರಣಾ ಮೊತ್ತಕ್ಕೆ ಮೊಬೈಲ್ ಬಿಡಿ ಭಾಗಗಳನ್ನು ಖರೀದಿಸಿದ್ರೆ 2 ರಿಂದ 4 ನಿಂಬೆಹಣ್ಣುಗಳನ್ನು ಹಾಗೂ 10,000 ರೂ. ಮೌಲ್ಯಕ್ಕೆ ಖರೀದಿಸಿದರೆ ಉಚಿತವಾಗಿ ಪೆಟ್ರೋಲ್ ನೀಡುವುದಾಗಿಯೂ ಮೊಬೈಲ್ ಮಳಿಗೆ ಮಾಲೀಕ ಹೇಳಿಕೊಂಡಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಇದನ್ನೂ ಓದಿ: 30 ಲಕ್ಷದ ಚಿನ್ನವನ್ನು ಗುದನಾಳ, ವಿಗ್‌ನಲ್ಲಿ ಬಚ್ಚಿಟ್ಟುಕೊಂಡಿದ್ದ ಕಿಲಾಡಿ ಕಳ್ಳನ ಬಂಧನ

    Lemon

    ಕೆಲದಿನಗಳಿಂದ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 105.41 ರೂ., ಮುಂಬೈನಲ್ಲಿ 120.51 ರೂ.ಗೆ ಮಾರಾಟವಾಗುತ್ತಿದೆ. ಐಒಸಿ ಮತ್ತು ಬಿಪಿಸಿಎಲ್ ನಂತಹ ರಾಜ್ಯದ ಚಿಲ್ಲರೆ ವ್ಯಾಪಾರಿಗಳು ಚುನಾವಣಾ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ತಡೆಹಿಡಿಯಲು ಸುಮಾರು 25 ಶತಕೋಟಿ ಡಾಲರ್ (19,000 ಕೋಟಿ) ಆದಾಯವನ್ನು ಕಳೆದುಕೊಂಡಿದ್ದಾರೆ ಎಂದು ಮೂಡೀಸ್ ಇನ್ವೆಸ್ಟರ್ಸ್ ಸರ್ವಿಸಸ್ ಹೇಳಿದೆ. ಇದನ್ನೂ ಓದಿ: ಗಾಂಧೀಜಿ ಆಶ್ರಮದಲ್ಲಿ ಚರಕ ಹಿಡಿದು ನೂಲು ತೆಗೆದ ಬ್ರಿಟನ್ ಪ್ರಧಾನಿ

    PETROL

    ನಿಂಬೆಹಣ್ಣು ಕೂಡ ಸಾಮಾನ್ಯರ ಜೇಬಿಗೆ ಭಾರವಾಗಿದೆ. ವಿವಿಧ ನಗರಗಳಲ್ಲಿ ಪ್ರತಿ ಕೆ.ಜಿ ನಿಂಬೆಹಣ್ಣು 400 ರೂ.ಗೆ ತಲುಪಿದೆ. ದೆಹಲಿಯಲ್ಲೂ 350 ರಿಂದ 400 ರೂ.ಗೆ ಮಾರಾಟವಾಗುತ್ತಿದೆ. ಬೆಂಗಳೂರಿನ ಎಪಿಎಂಸಿನಲ್ಲೂ ಹೋಸೆಲ್ ದರ 192 ಇದ್ದು, ರಿಟೇಲ್ ದರ 300 ರಿಂದ 350 ರೂ.ಗೆ ಮಾರಾಟವಾಗುತ್ತಿದೆ ಎನ್ನಲಾಗಿದೆ.

  • ಮದುವೆಯಲ್ಲಿ ವಧು, ವರನಿಗೆ ಪೆಟ್ರೋಲ್, ಡೀಸೆಲ್ ಗಿಫ್ಟ್ ಕೊಟ್ಟ ಸ್ನೇಹಿತರು

    ಮದುವೆಯಲ್ಲಿ ವಧು, ವರನಿಗೆ ಪೆಟ್ರೋಲ್, ಡೀಸೆಲ್ ಗಿಫ್ಟ್ ಕೊಟ್ಟ ಸ್ನೇಹಿತರು

    ಚೆನ್ನೈ: ಇಂಧನ ದರ ಗಗನಕ್ಕೇರುತ್ತಿರುವ ಹಿನ್ನೆಲೆ ಚೆಂಗಲ್ಪಟ್ಟು ಜಿಲ್ಲೆಯ ಚೆಯ್ಯೂರ್‍ನಲ್ಲಿ ನವ ವಿವಾಹಿತ ದಂಪತಿಗೆ ತಮ್ಮ ಸ್ನೇಹಿತರು ಮದುವೆಯ ಉಡುಗೊರೆಯಾಗಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

    petrol

    15 ದಿನಗಳ ಅಂತರದಲ್ಲಿ ತಮಿಳುನಾಡಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ 9 ರೂಪಾಯಿಗಿಂತೂ ಹೆಚ್ಚು ಏರಿಕೆಯಾಗಿದ್ದು, ಒಂದು ಲೀಟರ್ ಪೆಟ್ರೋಲ್‍ಗೆ 110.85 ರೂ., ಡೀಸೆಲ್ 100.94 ರೂ.ಗೆ ಮಾರಾಟವಾಗುತ್ತಿದ್ದು, ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನೂ ಓದಿ: XE ರೂಪಾಂತರಿ ಮುಂಬೈನಲ್ಲಿ ಪತ್ತೆಯಾಗಿಲ್ಲ: ಮಹಾರಾಷ್ಟ್ರ ಸ್ಪಷ್ಟನೆ

    ಇದೇ ಸಮಯವನ್ನು ಬಳಸಿಕೊಂಡು, ಇತ್ತೀಚೆಗೆ ಚೆಯ್ಯೂರಿನಲ್ಲಿ ವಿವಾಹವಾದ ಗ್ರೇಸ್ ಕುಮಾರ್ ಮತ್ತು ಕೀರ್ತನಾ ಅವರಿಗೆ ಸ್ನೇಹಿತರು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಮದುವೆಯ ಉಡುಗೊರೆಯಾಗಿ ನೀಡಿದರು. ಮೊದ ಮೊದಲು ಗಿಫ್ಟ್ ನೋಡುತ್ತಿದ್ದಂತೆಯೇ ಬೆಚ್ಚಿಬಿದ್ದ ವಧು, ವರರು, ಬಳಿಕ ಖುಷಿಯಿಂದ ಉಡುಗೊರೆ ಸ್ವೀಕರಿಸಿದರು. ಇದನ್ನೂ ಓದಿ: ಸತತ 15ನೇ ದಿನ ಏರಿಕೆ – ಪೆಟ್ರೋಲ್, ಡೀಸೆಲ್ 80 ಪೈಸೆ ಏರಿಕೆ

  • 13ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

    13ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

    ನವದೆಹಲಿ: ಪೆಟ್ರೋಲ್, ಡೀಸೆಲ್ ದರವು ಕಳೆದ 13 ದಿನ ಏರಿಕೆಯಾಗಿದ್ದು, ಭಾನುವಾರವೂ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್‍ಗೆ 80 ಪೈಸೆ ಏರಿಕೆಯಾಗಿದೆ. ಒಟ್ಟಾರೆಯಾಗಿ 13ನೇ ದಿನದಲ್ಲಿ ಲೀಟರ್‌ಗೆ 8ರೂ. ಏರಿಕೆಯಾಗಿದೆ.

    ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 107.32 ರೂ. ಇದ್ದ ಪೆಟ್ರೋಲ್ ದರ 108.99 ರೂಪಾಯಿಗೆ ಏರಿಕೆಯಾಗಿದೆ. ಪ್ರತಿ ಲೀಟರ್‌ಗೆ 91.29 ರೂ. ಇದ್ದ ಡೀಸೆಲ್ ದರ ರೂ. 92.83ಕ್ಕೆ ಏರಿಕೆಯಾಗಿದೆ.

    ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ರೂ. 103.41 ರೂಪಾಯಿಗೆ ಏರಿಕೆಯಾಗಿದೆ. ಡೀಸೆಲ್ ಬೆಲೆ ರೂ.94.67 ದಾಖಲಾಗಿದೆ. ಮುಂಬೈನಲ್ಲಿ ಲೀ. ಪೆಟ್ರೋಲ್ ದರ ರೂ. 118.41, ಡೀಸೆಲ್ ರೂ.102.64 ದಾಖಲಾಗಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 108.21 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 99.04 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಲೀಟರ್‌ಗೆ ಪೆಟ್ರೋಲ್ ಬೆಲೆ 113.03ರೂ ಹಾಗೂ ಡೀಸೆಲ್‍ಗೆ 97.02ರೂ. ದಾಖಲಾಗಿದೆ. ಇದನ್ನೂ ಓದಿ: ಗ್ರಾಮ ಪಂಚಾಯ್ತಿ ಸದಸ್ಯೆ ನೇತೃತ್ವದಲ್ಲೇ ಬಾಲ್ಯ ವಿವಾಹ – ಪ್ರಕರಣ ತಡವಾಗಿ ಬೆಳಕಿಗೆ

    ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ.  ಇದನ್ನೂ ಓದಿ: ಹರ್ಷನ ಕೊಲೆ ವೈಯಕ್ತಿಕ ಕಾರಣಗಳಿಂದಲ್ಲ: ಸಿಟಿ ರವಿ

  • ಇಂಧನ ಬೆಲೆ ಏರಿಕೆ ಖಂಡಿಸಿ ರಾಹುಲ್ ಗಾಂಧಿ ಪ್ರತಿಭಟನೆ

    ಇಂಧನ ಬೆಲೆ ಏರಿಕೆ ಖಂಡಿಸಿ ರಾಹುಲ್ ಗಾಂಧಿ ಪ್ರತಿಭಟನೆ

    ನವದೆಹಲಿ: ಕಳೆದ 10 ದಿನಗಳಿಂದ ಪೆಟ್ರೋಲ್, ಡಿಸೇಲ್ ಬೆಲೆ ತೀವ್ರವಾಗಿ ಏರಿಕೆಯಾಗುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಅವರು ಇಂದಿನಿಂದ ಪ್ರತಿಭಟನೆ ಆರಂಭಿಸಿದ್ದಾರೆ.

    ದೆಹಲಿಯ ವಿಜಯ್ ಚೌಕ್‍ನಲ್ಲಿ ಇಂದು ಮಾತನಾಡಿದ ರಾಹುಲ್ ಗಾಂಧಿ ಅವರು, ಕಳೆದ 10 ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆ ಒಂಬತ್ತು ಬಾರಿ ಏರಿಕೆಯಾಗಿದೆ. ಏರುತ್ತಿರುವ ಬೆಲೆಯನ್ನು ನಿಯಂತ್ರಣಕ್ಕೆ ತರಬೇಕು ಎಂದು ನಾವು ಒತ್ತಾಯಿಸುತ್ತೇವೆ. ಈ ವಿಷಯವಾಗಿ ಕಾಂಗ್ರೆಸ್ ಇಂದು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 10ನೇ ದಿನದಲ್ಲಿ 9ನೇ ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

    ಇದೇ ವೇಳೆ ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ, ಐದು ರಾಜ್ಯಗಳಲ್ಲಿ ಚುನಾವಣೆ ಮುಗಿದ ತಕ್ಷಣ ಇಂಧನ ಬೆಲೆ ಏರಿಕೆಯಾಗಲಿದೆ ಎಂದು ನಾವು ಭವಿಷ್ಯ ನುಡಿದಿದ್ದೇವು. ಅದರಂತೆ ಇದೀಗ ಇಂಧನ ಬೆಲೆ ಏರಿಕೆಯಾಗಿದೆ. ಹಾಗಾಗಿ ಇಂಧನ ಬೆಲೆ ಏರಿಕೆಯನ್ನು ಕಡಿತಗೊಳಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಇಂಧನ ಬೆಲೆ ಏರಿಕೆಯಿಂದ ಸಾರ್ವಜನಿಕರು ಎದುರಿಸುತ್ತಿರುವ ತೊಂದರೆಗಳನ್ನು ಸರ್ಕಾರ ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸತತ 7ನೇ ದಿನವೂ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ

    ಗುರುವಾರದ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‍ಗೆ ರೂ. 101.81 ರೂಪಾಯಿಗೆ ಏರಿಕೆಯಾಗಿದೆ. ಡೀಸೆಲ್ ಬೆಲೆ ರೂ.93.07 ದಾಖಲಾಗಿದೆ. ಮುಂಬೈನಲ್ಲಿ ಲೀ ಪೆಟ್ರೋಲ್‍ಗೆ 84 ಪೈಸೆ ಏರಿಕೆಯಾಗಿದ್ದು, ಈ ಮೂಲಕ ಲೀ. ಪೆಟ್ರೋಲ್ ದರ ರೂ. 116.72, ಡೀಸೆಲ್ ರೂ.100.94 ದಾಖಲಾಗಿದೆ. ಇದನ್ನೂ ಓದಿ: 8ನೇ ಬಾರಿ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ

  • 10ನೇ ದಿನದಲ್ಲಿ 9ನೇ ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

    10ನೇ ದಿನದಲ್ಲಿ 9ನೇ ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

    ನವದೆಹಲಿ: ಪೆಟ್ರೋಲ್, ಡೀಸೆಲ್ ದರವು ಕಳೆದ 10 ದಿನಗಳಲ್ಲಿ 9ನೇ ಬಾರಿ ಏರಿಕೆಯಾಗಿದ್ದು, ಗುರುವಾರವೂ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್‍ಗೆ 80 ಪೈಸೆ ಏರಿಕೆಯಾಗಿದೆ. ಒಟ್ಟಾರೆಯಾಗಿ ಒಂದೇ ವಾರದಲ್ಲಿ ಲೀಟರ್‌ಗೆ 6.40ರೂ. ಏರಿಕೆಯಾಗಿದೆ.

    ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 106.48 ರೂ. ಇದ್ದ ಪೆಟ್ರೋಲ್ ದರ 107.32 ರೂಪಾಯಿಗೆ ಏರಿಕೆಯಾಗಿದೆ. ಪ್ರತಿ ಲೀಟರ್‌ಗೆ 90.50 ರೂ. ಇದ್ದ ಡೀಸೆಲ್ ದರ ರೂ. 91.29ಕ್ಕೆ ಏರಿಕೆಯಾಗಿದೆ.

    ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ರೂ. 101.81 ರೂಪಾಯಿಗೆ ಏರಿಕೆಯಾಗಿದೆ. ಡೀಸೆಲ್ ಬೆಲೆ ರೂ.93.07 ದಾಖಲಾಗಿದೆ. ಮುಂಬೈನಲ್ಲಿ ಲೀ ಪೆಟ್ರೋಲ್‍ಗೆ 84 ಪೈಸೆ ಏರಿಕೆಯಾಗಿದ್ದು, ಈ ಮೂಲಕ ಲೀ. ಪೆಟ್ರೋಲ್ ದರ ರೂ. 116.72, ಡೀಸೆಲ್ ರೂ.100.94 ದಾಖಲಾಗಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 107.45 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 97.52 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಲೀಟರ್‌ಗೆ ಪೆಟ್ರೋಲ್ ಬೆಲೆ 111.35ರೂ ಹಾಗೂ ಡೀಸೆಲ್‍ಗೆ 96.22ರೂ. ದಾಖಲಾಗಿದೆ. ಇದನ್ನೂ ಓದಿ: 8ನೇ ಬಾರಿ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ

    ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇದನ್ನೂ ಓದಿ: ಸತತ 7ನೇ ದಿನವೂ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ

  • 8ನೇ ಬಾರಿ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ

    8ನೇ ಬಾರಿ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ

    ನವದೆಹಲಿ: ಪೆಟ್ರೋಲ್, ಡಿಸೇಲ್ ದರವು ಕಳೆದ 9 ದಿನಗಳಲ್ಲಿ 8ನೇ ಬಾರಿ ಏರಿಕೆಯಾಗಿದ್ದು, ಬುಧವಾರವೂ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್‍ಗೆ 80 ಪೈಸೆ ಏರಿಕೆಯಾಗಿದೆ. ಒಟ್ಟಾರೆಯಾಗಿ ಒಂದೇ ವಾರದಲ್ಲಿ ಲೀಟರ್‌ಗೆ 5.60ರೂ. ಏರಿಕೆಯಾಗಿದೆ.

    ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 105.62 ರೂ. ಇದ್ದ ಪೆಟ್ರೋಲ್ ದರ 106.46 ರೂಪಾಯಿಗೆ ಏರಿಕೆಯಾಗಿದೆ. ಪ್ರತಿ ಲೀಟರ್‌ಗೆ 89.70 ರೂ. ಇದ್ದ ಡೀಸೆಲ್ ದರ ರೂ. 90.49ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: ಒಂದೇ ವಾರದಲ್ಲಿ 6 ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ..!

    ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ರೂ. 101.01 ರೂಪಾಯಿಗೆ ಏರಿಕೆಯಾಗಿದೆ. ಡೀಸೆಲ್ ಬೆಲೆ ರೂ.92.27 ದಾಖಲಾಗಿದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 84 ಪೈಸೆ ಹೆಚ್ಚಳವಾಗಿದ್ದು, ಡೀಸೆಲ್ ಬೆಲೆಯಲ್ಲಿ 85 ಪೈಸೆ ಏರಿಕೆಯಾಗಿದೆ. ಈ ಮೂಲಕ ಲೀ. ಪೆಟ್ರೋಲ್ ದರ ರೂ. 115.88, ಡೀಸೆಲ್ ರೂ.100.10 ದಾಖಲಾಗಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 106.69 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 96.76 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಲೀಟರ್‌ಗೆ ಪೆಟ್ರೋಲ್ ಬೆಲೆ 110.52ರೂ ಹಾಗೂ ಡೀಸೆಲ್‍ಗೆ 95.82ರೂ. ದಾಖಲಾಗಿದೆ.

    ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇದನ್ನೂ ಓದಿ: ಸತತ 7ನೇ ದಿನವೂ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ

  • ಸತತ 7ನೇ ದಿನವೂ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ

    ನವದೆಹಲಿ: ಪೆಟ್ರೋಲ್, ಡೀಸೆಲ್ ದರ ಸತತ 7ನೇ ದಿನವೂ ಏರಿಕೆಯಾಗಿದ್ದು, ಮಂಗಳವಾರವೂ ಪ್ರತಿ ಲೀಟರ್ ಪೆಟ್ರೋಲ್‍ಗೆ 80 ಪೈಸೆ, ಡೀಸೆಲ್ 70 ಪೈಸೆ ಏರಿಕೆಯಾಗಿದೆ. ಒಟ್ಟಾರೆಯಾಗಿ ಒಂದೇ ವಾರದಲ್ಲಿ ಪ್ರತಿ ಲೀಟರ್  ಪೆಟ್ರೋಲ್‌, ಡೀಸೆಲ್‌ ಬೆಲೆ  4.80ರೂ. ಏರಿಕೆಯಾಗಿದೆ.

    ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 104.76 ರೂ. ಇದ್ದ ಪೆಟ್ರೋಲ್ ದರ 105.62 ರೂಪಾಯಿಗೆ ಏರಿಕೆಯಾಗಿದೆ. ಪ್ರತಿ ಲೀಟರ್‌ಗೆ 89 ರೂ. ಇದ್ದ ಡೀಸೆಲ್ ದರ ರೂ. 89.70ಗೆ ಏರಿಕೆಯಾಗಿದೆ.

    ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ರೂ. 100.21 ರೂಪಾಯಿಗೆ ಏರಿಕೆಯಾಗಿದೆ. ಡೀಸೆಲ್ ಬೆಲೆ ರೂ.91.47 ದಾಖಲಾಗಿದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 85 ಪೈಸೆ ಹೆಚ್ಚಳವಾಗಿದ್ದು, ಡೀಸೆಲ್ ಬೆಲೆಯಲ್ಲಿ 75 ಪೈಸೆ ಏರಿಕೆಯಾಗಿದೆ. ಈ ಮೂಲಕ ಲೀ. ಪೆಟ್ರೋಲ್ ದರ ರೂ. 115.04, ಡೀಸೆಲ್ ರೂ.99.25 ದಾಖಲಾಗಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 105.94 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 96 ರೂಪಾಯಿ ಇದೆ. ಹೈದರಾಬಾದ್‍ನಲ್ಲಿ ಲೀಟರ್‌ಗೆ ಪೆಟ್ರೋಲ್ ಬೆಲೆ 113.61ರೂ ಹಾಗೂ ಡೀಸೆಲ್‍ಗೆ 99.84ರೂ. ದಾಖಲಾಗಿದೆ. ಇದನ್ನೂ ಓದಿ: ಒಂದೇ ವಾರದಲ್ಲಿ 6 ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ..!

    ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇದನ್ನೂ ಓದಿ: ಒಂದೇ ವಾರದಲ್ಲಿ ಸತತ ನಾಲ್ಕನೇ ದಿನವು ಏರಿಕೆ ಕಂಡ ಪೆಟ್ರೋಲ್, ಡಿಸೇಲ್ ಬೆಲೆ