Tag: ಡಿಸಿ ತಮ್ಮಣ್ಣ

  • ರೌಡಿಶೀಟರ್‌ಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಜೆಡಿಎಸ್ ಶಾಸಕ

    ರೌಡಿಶೀಟರ್‌ಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಜೆಡಿಎಸ್ ಶಾಸಕ

    ಮಂಡ್ಯ: ಬಿಜೆಪಿ (BJP) ನಾಯಕರು ರೌಡಿಶೀಟರ್‌ಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದನ್ನು ತೀವ್ರವಾಗಿ ಖಂಡಿಸಿದ್ದ ಜೆಡಿಎಸ್ ನಾಯಕರು ಇದೀಗ ಮಂಡ್ಯ (Mandya) ಜಿಲ್ಲೆಯ ಮದ್ದೂರು (Madduru) ಕ್ಷೇತ್ರದ ಶಾಸಕ ಡಿ.ಸಿ.ತಮ್ಮಣ್ಣ (DC Thammanna) ಜೆಡಿಎಸ್‌ಗೆ (JDS) ಮೂವರು ರೌಡಿಶೀಟರ್‌ಗಳನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ‌.

    ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆಯೇ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಬಲವರ್ಧನೆಗೆ ಹಲವು ಸ್ಟ್ಯಾಟರ್ಜಿಗಳನ್ನು ಮಾಡುತ್ತಿವೆ‌. ಈ ಹಿಂದೆ ಬಿಜೆಪಿ ಫೈಟರ್ ರವಿ ಹಾಗೂ ಇತರ ರೌಡಿಶೀಟರ್‌ಗಳನ್ನು ಪಕ್ಷಕ್ಕೆ ಸೆರ್ಪಡೆ ಮಾಡಿಕೊಂಡ ಬೆನ್ನಲ್ಲೇ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್‌ನ ನಾಯಕರು ವಾಗ್ದಾಳಿ ನಡೆಸಿದ್ದರು. ಇದೀಗ ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರದ ಜೆಡಿಎಸ್ ಶಾಸಕ ಡಿ.ಸಿ. ತಮ್ಮಣ್ಣ ಜೆಡಿಎಸ್ ಪಕ್ಷಕ್ಕೆ ಮೂವರು ರೌಡಿಶೀಟರ್‌ಗಳನ್ನು ಸೇರ್ಪಡೆ ಮಾಡಿಕೊಳ್ಳುವುದರ ಮೂಲಕ ಸುದ್ದಿಯಾಗಿದ್ದಾರೆ. ಇದನ್ನೂ ಓದಿ: ಮೋದಿ ಭೇಟಿ ಬೆನ್ನಲ್ಲೆ ಶಿರಾದಲ್ಲಿ ಟಿಕೆಟ್ ಫೈಟ್‌ ಜೋರು

    ಮದ್ದೂರು ಪೊಲೀಸ್ ಠಾಣೆಯಲ್ಲಿ ಕೊಲೆ, ಗಲಭೆ, ಆಫ್ ಮರ್ಡರ್ ಕೇಸ್‌ಗಳಲ್ಲಿ ರೌಡಿಶೀಟರ್‌ಗಳಾಗಿರುವ ಪ್ರಶಾಂತ್@ ಕುಳ್ಳಿ, ವರುಣ್@ ಚೊತ್ತ ಹಾಗೂ ನಿತಿನ್ ಎಂಬ ಮೂವರನ್ನು ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಕಳೆದ 8 ವರ್ಷಗಳಿಂದ ಈ ಮೂವರು ರೌಡಿಜಂನಲ್ಲಿ ಆಕ್ಟೀವ್ ಆಗಿದ್ದಾರೆ‌‌. ಇಷ್ಟು ದಿನ ಬಿಜೆಪಿ ಅವರು ರೌಡಿ ರಾಜಕೀಯ ಮಾಡ್ತಾ ಇದ್ದಾರೆ ಎಂದು ಮಾತನಾಡುತ್ತಿದ್ದ ಜೆಡಿಎಸ್ ನಾಯಕರ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿವೆ. ಇದನ್ನೂ ಓದಿ: ಗ್ರಾಹಕರಿಗೆ ಮತ್ತೆ ಶಾಕ್: ರೆಪೋ ದರ ಹೆಚ್ಚಿಸಿದ RBI – ಸಾಲದ EMI ಹೆಚ್ಚಳ ಸಾಧ್ಯತೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಂಬರೀಶ್ ಸ್ಮಾರಕಕ್ಕೆ ಜಾಗ ಕೊಟ್ಟಿದ್ದೆ ಕುಮಾರಸ್ವಾಮಿ: ಡಿ.ಸಿ ತಮ್ಮಣ್ಣ

    ಅಂಬರೀಶ್ ಸ್ಮಾರಕಕ್ಕೆ ಜಾಗ ಕೊಟ್ಟಿದ್ದೆ ಕುಮಾರಸ್ವಾಮಿ: ಡಿ.ಸಿ ತಮ್ಮಣ್ಣ

    ಮಂಡ್ಯ: ಅಂಬರೀಶ್ ಅವರ ಸ್ಮಾರಕ ನಿರ್ಮಾಣ ಆಗಲು ಮೂಲ ಕಾರಣವೆ ಹೆಚ್.ಡಿ ಕುಮಾರಸ್ವಾಮಿ. ಅವರು ಜಾಗ ಕೊಟ್ಟಿದ್ದಕ್ಕೆ ಸ್ಮಾರಕ ನಿರ್ಮಾಣವಾಗಿದೆ ಎಂದು ಮದ್ದೂರು ಶಾಸಕ ಡಿ.ಸಿ ತಮ್ಮಣ್ಣ ಹೆಚ್‍ಡಿಕೆ ಪರ ಬ್ಯಾಟ್ ಬೀಸಿದ್ದಾರೆ.

    ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಸಿ ತಮ್ಮಣ್ಣ ಅವರು, ಕುಮಾರಸ್ವಾಮಿ ಅವರು ಇಲ್ಲ ಅಂದಿದ್ರೆ ಅಂಬರೀಶ್ ಅವರ ಸ್ಮಾರಕ ಆಗುತ್ತಿರಲಿಲ್ಲ. ಯಾಕೆಂದರೆ ಅಂಬರೀಶ್ ಅವರ ಆಪ್ತ ಮಿತ್ರ ನಮ್ಮ ಮಂಡ್ಯದ ವಿಷ್ಣುವರ್ಧನ್‍ಗೆ ಇದುವರೆಗೆ ಯಾವ ಸರ್ಕಾರವು ಸಹ ಸ್ಮಾರಕ ನಿರ್ಮಾಣಕ್ಕೆ ಇನ್ನೂ ಜಾಗ ನೀಡಿಲ್ಲ. ಆದರೆ ಕುಮಾರಸ್ವಾಮಿ ಅವರು ಸಿಎಂ ಆಗಿದ್ದರಿಂದಾಗಿ ಅಂಬರೀಶ್ ಅವರ ಸ್ಮಾರಕಕ್ಕೆ ಜಾಗ ನೀಡಿದ್ದಾರೆ. ನಾನು ಆಗ ಸಾರಿಗೆ ಸಚಿವನಾಗಿದ್ದೆ. ಆ ವೇಳೆ ಕೆಎಸ್‍ಆರ್‍ಟಿಸಿ ಜಾಗ ನೀಡುತ್ತೇವೆ ಎಂದು ಸಹ ಹೇಳಿದ್ದೆ. ಆ ಜಾಗ ಬೇಡಾ ಎಂದು ಹೇಳಿದಾಗ ಕುಮಾರಸ್ವಾಮಿ ಅವರು ಈಗ ಅಂಬರೀಶ್ ಸ್ಮಾರಕ ಇರುವ ಜಾಗವನ್ನು ಮಂಜೂರು ಮಾಡಿಕೊಟ್ಟಿದ್ದಾರೆ ಎಂದರು. ಇದನ್ನೂ ಓದಿ: ನಾನು ಸಿಎಂ ಆಗಿದ್ದಕ್ಕೆ ಅಂಬರೀಶ್ ಸ್ಮಾರಕ ಆಗಿದ್ದು: ಕುಮಾರಸ್ವಾಮಿ

    ಜೆಡಿಎಸ್ ನಾಯಕರು ಮತ್ತು ಸುಮಲತಾ ನಡುವಿನ ಮಾತಿನ ಸಮರದ ಬಗ್ಗೆ ಉಭಯ ನಾಯಕರುಗಳಿಗೆ ಸಲಹೆ ನೀಡಿದ ತಮ್ಮಣ್ಣ ಅವರು ಟೀಕೆಗಳು ಇರಬೇಕು ಅದು ಆರೋಗ್ಯಕರವಾಗಿ ಇರಬೇಕು, ಅಶ್ಲೀಲವಾಗಿ ಟೀಕೆ ಮಾಡಬಾರದು. ಟೀಕಾಕಾರರು ಇದ್ದರೆ ಮಾತ್ರ ನಮ್ಮ ತಪ್ಪುಗಳು ತಿಳಿಯುತ್ತವೆ. ಉಭಯನಾಯಕರು ಆರೋಗ್ಯಕರವಾಗಿ ಚರ್ಚೆ ಮಾಡಬೇಕು, ಅಶ್ಲೀಲವಾಗಿ ಟೀಕೆ ಮಾಡಬಾರದು ಎಂದು ಸಲಹೆ ನೀಡಿದರು.

  • ಪೊಲೀಸರ ಸಹಕಾರ ಇಲ್ಲದೆ ಡ್ರಗ್ಸ್ ದಂಧೆ ನಡೆಯೋದಿಲ್ಲ: ಡಿಸಿ ತಮ್ಮಣ್ಣ ಗಂಭೀರ ಆರೋಪ

    ಪೊಲೀಸರ ಸಹಕಾರ ಇಲ್ಲದೆ ಡ್ರಗ್ಸ್ ದಂಧೆ ನಡೆಯೋದಿಲ್ಲ: ಡಿಸಿ ತಮ್ಮಣ್ಣ ಗಂಭೀರ ಆರೋಪ

    ಮಂಡ್ಯ: ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆಗಳು ನಡೆಯುತ್ತಿದ್ದು, ಈ ಮಧ್ಯೆ ಶಾಸಕ ಡಿಸಿ ತಮ್ಮಣ್ಣ ಪೊಲೀಸರ ಮೇಲೆಯೇ ಗಂಭೀರ ಆರೋಪ ಮಾಡಿದ್ದಾರೆ.

    ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವಾರದಿಂದ ಮಾಧ್ಯಮದಲ್ಲಿ ಡ್ರಗ್ಸ್ ದಂಧೆ ಬಗ್ಗೆ ನೋಡುತ್ತಿದ್ದೇನೆ. ಬರೀ ಸಿನಿಮಾ ತಾರೆಯರು, ರಾಜಕಾರಣಿಗಳು, ರಾಜಕಾರಣಿ ಮಕ್ಕಳ ಬಗ್ಗೆ ಮಾತ್ರ ಬರುತ್ತಿದೆ. ಬೆಂಗಳೂರು, ಮೈಸೂರು, ಬೆಳಗಾಂ, ಇಂತಹ ದೊಡ್ಡ ದೊಡ್ಡ ನಗರಗಳಲ್ಲಿ ಮಾತ್ರ ಅಂತ ಹೇಳುತ್ತಾರೆ. ಇವಾಗ ಮದ್ದೂರಿನಲ್ಲಿ ಇಲ್ವಾ ಡ್ರಗ್ಸ್. ಮಂಡ್ಯದಲ್ಲಿ ಇಲ್ವಾ,? ಯಾವ ತಾಲೂಕಿನಲ್ಲಿ ಇಲ್ಲ,? ಹಳ್ಳಿ ಹಳ್ಳಿಯಲ್ಲಿದೆ. ಅದಕ್ಕೆ ಹೇಳಿದ್ದಿನಿ, ಒಂದು ಕಡೆ ಪೊಲೀಸರನ್ನ ಕೊರೊನಾ ಸಮಯದಲ್ಲಿ ವಾರಿಯರ್ಸ್ ಅಂತ ಸನ್ಮಾನ ಮಾಡಿದ್ದೀವಿ. ಜನತೆ ಅವರಿಗೆ ಹೂಮಳೆ ಸುರಿದು ಗೌರವಿಸಿದ್ದಾರೆ. ಅದೇ ನಾಣ್ಯದ ಪೋಲಿಸರ ಇನ್ನೊಂದು ಮುಖ ಗೊತ್ತಿಲ್ಲ ಎಂದು ಆರೋಪಿಸಿದ್ದಾರೆ.

    ಇಡೀ ರಾಜ್ಯದಲ್ಲಿ ಪೊಲೀಸ್ ಇಲಾಖೆ ಬಂದೋಬಸ್ತ್ ಮಾಡಿ. ಒಳ್ಳೆಯ ಕೆಲಸ ಮಾಡಿದವರ ಹೊಗಳ್ತೀವಿ. ಮಾಡಿಲ್ಲಾ ಅಂದ್ರೆ ತೆಗಳಕ್ಕೂ ತೆಗಳಬೇಕು, ಅವರಿಗೆ ಶಿಕ್ಷೆ ಕೊಡಬೇಕು. ಪೊಲೀಸರ ಸಹಕಾರ ಇಲ್ಲದೆ ಡ್ರಗ್ಸ್ ದಂಧೆ ನಡೆಯುವುದಿಲ್ಲ. ಪ್ರತಿ ತಾಲೂಕು, ಜಿಲ್ಲಾಮಟ್ಟದಲ್ಲಿ, ಹಳ್ಳಿ ಹಳ್ಳಿಗೂ ಕೂಡ ಡ್ರಗ್ಸ್ ಸಪ್ಲೈ ಆಗುತ್ತಿದೆ. ಇಂತಹ ಕೊಂಡಿಯನ್ನು ಬೇಧಿಸಿ. ಜನರ ದಾರಿತಪ್ಪಿಸುವ ಸಲುವಾಗಿ ಸಿನಿಮಾ ತಾರೆಯರು, ರಾಜಕಾರಣಿಗಳು, ರಾಜಕಾರಣಿ ಮಕ್ಕಳು ಅಂತ ದಾರಿ ತಪ್ಪಿಸಬೇಡಿ ಎಂದ ಅವರು ಈ ಬಗ್ಗೆ ಸಿಎಂ, ಹೋಂ ಮಿನಿಸ್ಟರ್ ಗೆ ಪತ್ರ ಬರೆಯಲಾಗಿದೆ ಅಂತ ತಿಳಿಸಿದರು.

    ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟಿ ರಾಗಿಣಿ ಆಪ್ತ ಸಿಸಿಬಿ ಪೊಲೀಸರ ವಶದಲ್ಲಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ. ಈ ಬೆನ್ನಲ್ಲೇ ರಾಗಿಣಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ನಟಿ ಸೋಮವಾರ ಹಾಜರಾಗುವುದಾಗಿ ತಿಳಿಸಿದ್ದರು. ಆದರೆ ನಾಳೆ ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗಬೇಕು ಅಂತ ರಾಗಿಣಿಗೆ ಸಿಸಿಬಿ ಅಧಿಕಾರಿಗಳು ಮತ್ತೆ ಸಮನ್ಸ್ ನೀಡಿದ್ದಾರೆ. ಇತ್ತ ನಟಿ ಸಂಜನಾ ಗಲ್ರಾಣಿ ಆಪ್ತ ಹಾಗೂ ಶರ್ಮಿಳಾ ಮಾಂಡ್ರೆ ಆಪ್ತನನ್ನು ಕೂಡ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    https://www.youtube.com/watch?v=ruRxb30Kzy8

  • ಸಚಿವ ಡಿಸಿ ತಮ್ಮಣ್ಣ ಎದುರೇ ಆಯುಕ್ತೆಗೆ ಆಯನೂರು ಅವಾಜ್

    ಸಚಿವ ಡಿಸಿ ತಮ್ಮಣ್ಣ ಎದುರೇ ಆಯುಕ್ತೆಗೆ ಆಯನೂರು ಅವಾಜ್

    ಶಿವಮೊಗ್ಗ: ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆಯ ಮಹಿಳಾ ಕಮಿಷನರ್ ನಡುವೆ ಮಾತಿನ ಚಕಮಕಿ ನಡೆದಿದೆ.

    ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್‍ಗೆ ಎಂಎಲ್‍ಸಿ ಆಯನೂರು ಮಂಜುನಾಥ್ ಅವರು ಏಕ ವಚನದಲ್ಲಿ ಗದರಿದ್ದಾರೆ. ಇದಕ್ಕೆ ಪ್ರತಿಯಾಗಿ, ನೀವು ಏಕವಚನದಲ್ಲಿ ಮಾತನಾಡಬಾರದು ಎಂದು ಆಯನೂರು ಅವರಿಗೆ ಮಹಿಳಾ ಕಮಿಷನರ್ ತಿರುಗೇಟು ನೀಡಿದರು.

    ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ. ತಮ್ಮಣ್ಣ ಎದುರೇ ಈ ಜಟಾಪಟಿ ನಡೆದಿದೆ. ಯಾವ ಕಾಮಗಾರಿ ನೋಡಿದರೂ ಆಗುತ್ತಿದೆ ಎಂದು ಹೇಳುತ್ತಿದ್ದೀರಿ. ಲೈಟ್ ಇಲ್ಲದೆ ಜನ ಕತ್ತಲಲ್ಲಿ ಇದ್ದಾರೆ. ಒಂದು ದಿನ ಅಲ್ಲಿ ಇದ್ದು ನೋಡಿ. ಜನರ ಸಮಸ್ಯೆ ಕೇಳುವವರಿಲ್ಲ. ಜನರು ಸಾಯಬೇಕಾ, ಜನರ ಸಮಸ್ಯೆ ನಿನ್ನ ಬಳಿ ಹೇಳಬಾರದಾ ಎಂದು ಮಂಜುನಾಥ್ ಗದರಿದ್ದಾರೆ. ಅಲ್ಲದೆ ಏನಮ್ಮ ನಿಮಗೆ ಮರ್ಯಾದೆ ಬೇಕು. ಅಲ್ಲಿ ಜನ ಸಾಯಬೇಕು ಅಲ್ವಾ. ನೀವು ಆಯುಕ್ತೆ ನಿನಗೆ ಹೇಗೆ ಹೇಳಬೇಕಮ್ಮ ಎಂದು ಕಿಡಿಕಾರಿದ್ದಾರೆ.

    ಈ ವೇಳೆ ತಿರುಗೇಟು ನೀಡಿದ ಆಯುಕ್ತೆ ಚಾರುಲತಾ, ನೀವು ಹೀಗೆ ಏಕವಚನದಲ್ಲಿ ಮಾತನಾಡಬಾರದು. ಸರಿಯಾಗಿ ಮಾತನಾಡಿ, ನಾವು ನಿಮಗೆ ಗೌರವ ನೀಡುತ್ತಿದ್ದೇನೆ ಎಂದು ಹೇಳಿ ನಿಮ್ಮ ವಿರುದ್ಧ ಆ್ಯಕ್ಷನ್ ತೆಗೆದುಕೊಳ್ಳುತ್ತೇನೆ ಎಂದು ಕಮಿಷನರ್ ಕೂಡ ಸಿಡಿಮಿಡಿಗೊಂಡಿದ್ದಾರೆ. ಈ ವೇಳೆ ಎಂಎಲ್‍ಸಿ, ಆಯ್ತು ತಗೋ ಆ್ಯಕ್ಷನ್, ನಾನು ನೋಡ್ತೀನಿ ಎಂದು ಮಂಜುನಾಥ್ ಮತ್ತೆ ಗದರಿದ್ದಾರೆ. ಮಾತಿನ ಚಕಮಕಿ ನಡೆಯುತ್ತಿದ್ದಂತೆಯೇ ಜಿಲ್ಲಾ ಉಸ್ತುವಾರಿ ಸಚಿವ ತಮ್ಮಣ್ಣ ಸಮಾಧಾನಪಡಿಸಿದರು.

  • ಡಿ.ಸಿ.ತಮ್ಮಣ್ಣ ವಿವಾದಾತ್ಮಕ ಹೇಳಿಕೆ-ಬೆಂಬಲಿಗರಿಂದ ಸ್ಪಷ್ಟನೆ

    ಡಿ.ಸಿ.ತಮ್ಮಣ್ಣ ವಿವಾದಾತ್ಮಕ ಹೇಳಿಕೆ-ಬೆಂಬಲಿಗರಿಂದ ಸ್ಪಷ್ಟನೆ

    ಮಂಡ್ಯ: ಮತದಾರರ ಮೇಲೆ ಅಶ್ಲೀಲ ಪದ ಬಳಕೆ ಮಾಡಿ ಸಾರ್ವಜನಿಕರ ಕೆಂಗಣ್ಣಿಗೆ ಸಚಿವ ತಮ್ಮಣ್ಣ ಗುರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವರ ಬೆಂಬಲಿಗರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮಣ್ಣರ ಹೇಳಿಕೆಗೆ ಸ್ಪಷ್ಟನೆ ನೀಡಿದರು.

    ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮದ್ದೂರು ತಾಲೂಕಿನ ಜೆಡಿಎಸ್ ಕಾರ್ಯಾಧ್ಯಕ್ಷ ದಾಸೇಗೌಡ, ನಾವು ಪ್ರತಿದಿನ ಸಚಿವರಿಗೆ ನಮಗೆ ಅದು ಬೇಕು, ಇದು ಬೇಕೆಂದು ಕೇಳುತ್ತೇವೆ. ಈ ರೀತಿ ಕೇಳುವ ನಮಗೆ ಚುನಾವಣೆ ಸಂದರ್ಭದಲ್ಲಿ ಎಲ್ಲಿ ಹೋಗಿದ್ರಿ ಎಂದು ಆಪ್ತರಿಗೆ ಸಚಿವರು ತರಾಟೆಗೆ ತೆಗೆದುಕೊಂಡರೆ ಹೊರತರೆ ಮತದಾರರನ್ನು ಉದ್ದೇಶಿಸಿ ಮಾತನಾಡಿಲ್ಲ. ಸಾವಿರಾರು ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಿದ್ದಾರೆ. ಕೆಲವು ಶಾಸಕರು ತಮಗೆ ಸಿಗುವ ಅನುದಾನದಲ್ಲಿ ಕೆಲಸ ಮಾಡುತ್ತಾರೆ. ಆದ್ರೆ ಸಚಿವ ತಮ್ಮಣ್ಣವರು ಯಾವ ಇಲಾಖೆಯಲ್ಲಿ ಏನೇನೂ ಅನುದಾನ ಸಿಗುತ್ತದೆಯೋ ಎಂದು ಹುಡುಕಿ ಕ್ಷೇತ್ರಕ್ಕೆ ತಂದಿದ್ದಾರೆ ಎಂದು ತಿಳಿಸಿದರು.

    ಕ್ಷೇತ್ರದ ಎಲ್ಲ ಕೆಲಸವನ್ನು ಓರ್ವ ಶಾಸಕ ಮಾಡಲು ಸಾಧ್ಯವಿಲ್ಲ. ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಸಹ ಅಭಿವೃದ್ಧಿ ಕೆಲಸದಲ್ಲಿ ತೊಡಗಿಕೊಳ್ಳಬೇಕು. ಗುಂಪು ಯೋಜನೆಯಲ್ಲಿ ಕಟ್ಟಿಕೊಂಡ ಮನೆಗಳು ಸೋರುತ್ತಿದ್ದವು. ಮನೆಗಳ ರಿಪೇರಿಗೆ ಶಾಸಕರ ಅನುದಾನ ಸಿಗಲ್ಲ ಎಂದು ತಿಳಿದು ವೈಯಕ್ತಿಕವಾಗಿ 2 ಲಕ್ಷ ರೂ. ನೀಡಿ ದುರಸ್ತಿ ಮಾಡಿದ್ದಾರೆ. ಅಂದು ನಡೆದ ಸಭೆಯಲ್ಲಿ ಕಾರ್ಯಕರ್ತರು ಮತ್ತು ಆಪ್ತರು ಭಾಗಿಯಾಗಿದ್ದರು. ಹಾಗಾಗಿ ನಮ್ಮೆಲ್ಲರಿಗೂ ಕ್ಲಾಸ್ ತೆಗೆದುಕೊಂಡರು. ಸಚಿವರು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದು ಹೇಳುವ ಮೂಲಕ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದರು.

  • ಬಿಜೆಪಿ ಸೇರ್ತಾರೆ ಅನ್ನೋ ಸುರೇಶ್ ಹೇಳಿಕೆಗೆ ಚಲುವರಾಯಸ್ವಾಮಿ ತಿರುಗೇಟು

    ಬಿಜೆಪಿ ಸೇರ್ತಾರೆ ಅನ್ನೋ ಸುರೇಶ್ ಹೇಳಿಕೆಗೆ ಚಲುವರಾಯಸ್ವಾಮಿ ತಿರುಗೇಟು

    – ಡಿಸಿ ತಮ್ಮಣ್ಣ ವಿರುದ್ಧ ಗರಂ
    – ಸಮ್ಮಿಶ್ರ ಸರ್ಕಾರ ಸುಭದ್ರವಾಗಿಲ್ಲ

    ಮಂಡ್ಯ: ಬಿಜೆಪಿಗೆ ಹೋಗೋದು, ಕಾಂಗ್ರೆಸ್‍ನಲ್ಲಿ ಉಳಿಯೋದು ಹೇಳೋದಕ್ಕೆ ಅವನು ಯಾರು ಎಂದು ಶಾಸಕ ಸುರೇಶ್ ಗೌಡಗೆ ಮಾಜಿ ಸಚಿವ ಚಲುವರಾಯಸ್ವಾಮಿ ಅವರು ಏಕವಚನದಲ್ಲೇ ತಿರುಗೇಟು ನೀಡಿದ್ದಾರೆ.

    ಚಲುವರಾಯಸ್ವಾಮಿ ಬಿಜೆಪಿ ಸೇರ್ತಾರೆ ಎಂಬ ಶಾಸಕ ಸುರೇಶ್ ಗೌಡ ಹೇಳಿಕೆಗೆ ಪ್ರತಿಕ್ರಿಯಿಸಿ ಗರಂ ಆದ ಅವರು, ವಿಧಾನಸಭೆ ಚುನಾವಣೆಯಲ್ಲಿ ದೇವೇಗೌಡರನ್ನು ನೋಡೋ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗ್ಲಿ ಅಂತನೇನೋ ಜಿಲ್ಲೆಯ ಜನ ತೀರ್ಮಾನ ತೆಗೆದುಕೊಂಡು ನಮ್ಮನ್ನು ಸೋಲಿಸಿದರು. ಸುರೇಶ್ ಗೌಡರು ನಾಲಿಗೆಗೂ, ಮೆದುಳಿಗೂ ಕನೆಕ್ಟ್ ಇಲ್ಲದಂಗೆ ಮಾತಾಡ್ತಾರೆ. ಬಿಜೆಪಿಗೆ ಹೋಗೋದು, ಕಾಂಗ್ರೆಸ್ ನಲ್ಲಿ ಉಳಿಯೋದು ಹೇಳೋದಕ್ಕೆ ಅವನ್ಯಾರು ಎಂದು ಪ್ರಶ್ನಿಸಿದ್ದಾರೆ.

    ಇದೇ ವೇಳೆ ಸಮಸ್ಯೆ ಹೇಳಿಕೊಳ್ಳಲು ಬಂದ ಜನರ ಮೇಲೆ ಡಿ.ಸಿ.ತಮ್ಮಣ್ಣ ದರ್ಪ ತೋರಿದ ವಿಚಾರದ ಕುರಿತು ಮಾತನಾಡಿದ ಅವರು, ಅದು ತಪ್ಪು. ಸೋತ ತಕ್ಷಣ ಹತಾಶರಾಗಿ ಮಾತನಾಡುವುದು ಸರಿಯಲ್ಲ. ಅವರನ್ನ ಗೆಲ್ಲಿಸಿದ್ದಾರೆ, ಮಂತ್ರಿಯಾಗಿದ್ದಾರೆ. ಅದಕ್ಕೆ ಕೆಲಸ ಮಾಡಬೇಕು. ಲೋಕಸಭೆ ತೀರ್ಮಾನ ಜನರಿಗೆ ಬಿಟ್ಟಿದ್ದು. ಜನರು ನಮ್ಮನ್ನ ಕೇಳಿಕೊಂಡು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳೋದಕ್ಕೆ ಆಗಲ್ಲ ಎಂದು ಗರಂ ಆದರು.

    ದೇವೇಗೌಡ್ರು ಸೋತಿಲ್ವಾ, ದೇವೇಗೌಡರಿಗಿಂತ ಬಹಳ ಪ್ರಭಾವಿನಾ ಎಂದು ಪ್ರಶ್ನಿಸಿದ ಮಾಜಿ ಸಚಿವ, ಇವರ ಕ್ಷೇತ್ರದಲ್ಲಿ ಹಿನ್ನಡೆಯಾದರೆ ಜನರನ್ನ ಗೆಟೌಟ್ ಅಂದ್ರೆ ಜನಪ್ರತಿನಿಧಿಗೆ ಗೌರವ ತರುವಂತದ್ದಲ್ಲ. ಅವರಿಗೆ ಸಿಎಂ ಎಚ್ಚರಿಕೆ ಕೊಟ್ಟಿರಬೇಕು. ಹತಾಶರಾಗಿ ಮಾತನಾಡಿದ್ದಾರೆ. ಅಷ್ಟಕ್ಕೆ ಕೈ ಬಿಡೋದು ಒಳ್ಳೆಯದು ಎಂದರು.

    ಸರ್ಕಾರ ಅಭದ್ರತೆ ಬಗ್ಗೆ ಜೆಡಿಎಸ್ ನಾಯಕರ ಗೊಂದಲ ಹೇಳಿಕೆ ವಿಚಾರದ ಕುರಿತು ಮಾತನಾಡಿ, ಸರ್ಕಾರದ ಪರಿಸ್ಥಿತಿ ಚೆನ್ನಾಗಿಲ್ಲ ಎಂದು ನಿಮಗೂ ಗೊತ್ತು, ನಮಗೂ ಗೊತ್ತು. ಚೆನ್ನಾಗಿಲ್ಲ ಎಂಬುದನ್ನ ಚರ್ಚೆ ಮಾಡುವುದಲ್ಲ. ಅದು ವಾಸ್ತವವಾಗಿ ಗೊತ್ತಿರುವ ವಿಚಾರವಾಗಿದೆ ಎಂದು ಹೇಳುವ ಮೂಲಕ ಚಲುವರಾಯಸ್ವಾಮಿ ಸಮ್ಮಿಶ್ರ ಸರ್ಕಾರ ಸುಭದ್ರವಾಗಿಲ್ಲ ಎಂದು ಮತ್ತೊಮ್ಮೆ ಹೇಳಿದರು. ಸರಿ ಪಡಿಸಿಕೊಳ್ಳುತ್ತಾರಾ, ಕ್ಲೋಸ್ ಮಾಡ್ತಾರಾ ಅಥವಾ ಬೇರೆಯವರೇ ಇವರನ್ನ ಕ್ಲೋಸ್ ಮಾಡ್ತಾರಾ ಎಂಬುದನ್ನು ನೋಡೋಣ ಎಂದು ಹೇಳಿದರು.

  • ಪಕ್ಷ ಬಯಸಿದರೆ ರಾಜೀನಾಮೆಗೆ ಸಿದ್ಧ – ಸಚಿವ ಡಿಸಿ ತಮ್ಮಣ್ಣ

    ಪಕ್ಷ ಬಯಸಿದರೆ ರಾಜೀನಾಮೆಗೆ ಸಿದ್ಧ – ಸಚಿವ ಡಿಸಿ ತಮ್ಮಣ್ಣ

    ಮಂಡ್ಯ: ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತಮ್ಮ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುತ್ತೇನೆ. ಅಲ್ಲದೇ ಪಕ್ಷ ಬಯಸಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಕೂಡ ನಾನು ಸಿದ್ಧ ಎಂದು ಸಾರಿಗೆ ಸಚಿವ ರೇವಣ್ಣ ಅವರು ಹೇಳಿದ್ದಾರೆ.

    ಮದ್ದೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಿಖಿಲ್ ಕುಮಾರಸ್ವಾಮಿ ಸೋಲಿನ ಹೊಣೆ ಹೊತ್ತ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ಸೋಲಿನ ಹೊಣೆ ಹೊತ್ತುಕೊಂಡದ್ದು ಅವರ ದೊಡ್ಡ ಗುಣ, ಅದಕ್ಕೆ ಸೋಲಿನ ಹೊಣೆ ಅವರೇ ಹೊತ್ತಿದ್ದಾರೆ. ಆದರೆ ಲೋಕಸಭಾ ಚುನಾವಣೆಯ ಸೋಲಿನ ಪರಾಮರ್ಶೆ, ಆತ್ಮಾವಲೋಕನ ಮಾಡಲು ಹೋಗಲ್ಲ. ಏಕೆಂದರೆ ರಮ್ಯಾ ಅವರು ಉಪಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಲ್ಲಿ ಇಪ್ಪತ್ತು ಸಾವಿರ ಲೀಡ್ ಪಡೆದಿದ್ದರು. ಆ ಸಂದರ್ಭದ ಅಂಶಗಳು ಚುನಾವಣೆ ಮೇಲೆ ಪ್ರಭಾವ ಬೀರುತ್ತವೆ ಅಷ್ಟೇ ಎಂದರು.

    ಇದೇ ವೇಳೆ ಮದ್ದೂರು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಮುಂದಾಗಿರುವುದಾಗಿ ತಿಳಿಸಿದ ಅವರು, ಒಳಚರಂಡಿ, ಕುಡಿಯುವ ನೀರು, ರಸ್ತೆ ಅಭಿವೃದ್ಧಿಗೆ 196 ಕೋಟಿ ರೂ. ಹಾಗೂ ರಸ್ತೆ ಅಭಿವೃದ್ಧಿ ಹೊರತುಪಡಿಸಿ 111 ಕೋಟಿ ರೂ. ಬಿಡುಗಡೆಯಾಗಿದೆ ಎಂದರು. ಅಲ್ಲದೇ ರಾಜ್ಯ ಸರ್ಕಾರದ ಮುಂದೇ ಬಸ್ ಪ್ರಯಾಣ ದರ ಏರಿಕೆ ವಿಚಾರ ಇದ್ದು, ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು ಅಂತಿಮ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು. ಇದನ್ನು ಓದಿ: ಫಲಿತಾಂಶದ ಹೊಣೆಯನ್ನು ನಾನೇ ಹೊರುತ್ತೇನೆ: ನಿಖಿಲ್ ಮೊದಲ ಪ್ರತಿಕ್ರಿಯೆ

  • ನಾವು ನಿಮ್ಮನ್ನ ಗೆಲ್ಲಿಸಿದ್ಯಾಕೆ? – ಸಚಿವ ಡಿಸಿ ತಮ್ಮಣ್ಣಗೆ ಗ್ರಾಮಸ್ಥರಿಂದ ತರಾಟೆ

    ನಾವು ನಿಮ್ಮನ್ನ ಗೆಲ್ಲಿಸಿದ್ಯಾಕೆ? – ಸಚಿವ ಡಿಸಿ ತಮ್ಮಣ್ಣಗೆ ಗ್ರಾಮಸ್ಥರಿಂದ ತರಾಟೆ

    ಮಂಡ್ಯ: ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ ಬೀಳಲಿದೆ. ಹೀಗಾಗಿ ಅಭ್ಯರ್ಥಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಹೀಗೆ ಪ್ರಚಾರ ನಡೆಸುತ್ತಿದ್ದ ವೇಳೆ ಸಚಿವ ಡಿಸಿ ತಮ್ಮಣ್ಣ ಅವರನ್ನು ಗ್ರಾಮಸ್ಥರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ಮಂಡ್ಯದ ಮದ್ದೂರಿನ ಬಿದರಹೊಸಹಳ್ಳಿ ಗ್ರಾಮದಲ್ಲಿ ಸೋಮವಾರ ಸಚಿವರು ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಮತ ಕೇಳಲು ಗ್ರಾಮಕ್ಕೆ ಭೇಟಿ ಕೊಟ್ಟಿದ್ದರು. ಈ ವೇಳೆ ಗ್ರಾಮಸ್ಥರು ಗ್ರಾಮದ ಸಮಸ್ಯೆ, ಮೈಷುಗರ್‍ಗೆ ಕಬ್ಬು ಪೂರೈಕೆ ಮಾಡಲು ಹಣ ಸಂದಾಯದ ವಿಚಾರವಾಗಿ ಸಚಿವರನ್ನು ಪ್ರಶ್ನಿಸಿದ್ದಾರೆ.

    ಕಬ್ಬಿನ ದುಡ್ಡು ಬಂದಿಲ್ಲ, ಊರು ಸಮಸ್ಯೆ ಬಗೆಹರಿದಿಲ್ಲ, ನಾವು ನಿಮ್ಮನ್ನ ಗೆಲ್ಲಿಸಿದ್ಯಾಕೆ? ಎಂದು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸಚಿವರು ಸಮಜಾಯಿಷಿ ನೀಡಲು ಮುಂದಾದ್ರು. ಆದ್ರೆ ಯುವಕನೊಬ್ಬ ಸಿಟ್ಟಿನಿಂದ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಬಳಿಕ ಗ್ರಾಮಸ್ಥರು ಯುವಕನನ್ನು ಸಮಾಧಾನಪಡಿಸಿದ ಘಟನೆಯೂ ನಡೆದಿದೆ.

  • ನಮ್ಮಲ್ಲಿ ಭಯೋತ್ಪಾದಕರಿಲ್ಲ, ಭಯ ಪಡೋ ಅಗತ್ಯವಿಲ್ಲ- ಸುಮಲತಾಗೆ ಡಿಸಿ ತಮ್ಮಣ್ಣ ಟಾಂಗ್

    ನಮ್ಮಲ್ಲಿ ಭಯೋತ್ಪಾದಕರಿಲ್ಲ, ಭಯ ಪಡೋ ಅಗತ್ಯವಿಲ್ಲ- ಸುಮಲತಾಗೆ ಡಿಸಿ ತಮ್ಮಣ್ಣ ಟಾಂಗ್

    – ನಿಖಿಲ್ ಕಿವಿಗೆ ಗಾಯ

    ಮಂಡ್ಯ: ನಮ್ಮ ಪಕ್ಷದಲ್ಲಿ ಭಯೋತ್ಪಾದಕರಿಲ್ಲ. ಹೀಗಾಗಿ ಭಯ ಪಡುವ ಅಗತ್ಯವಿಲ್ಲ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಸಚಿವ ಡಿ.ಸಿ ತಮ್ಮಣ್ಣ ಟಾಂಗ್ ನೀಡಿದ್ರು.

    ಮದ್ದೂರಿನ ಬೋರಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿಎಂ ಹೇಳಿಕೆಯಿಂದ ನನಗೆ ಭಯವಾಗುತ್ತಿದೆ ಎಂದಿದ್ದ ಸುಮಲತಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವೆಲ್ಲ ಸಭ್ಯರು. ನಮ್ಮ ನಡವಳಿಕೆ ನೋಡಿದ್ದೀರಲ್ಲ. ಅವರು ಸಂಬಂಧಿಕರೂ ಆಗಿದ್ದಾರೆ. ನಮ್ಮ ಪಕ್ಷದಲ್ಲಿ ಭಯೋತ್ಪಾದಕರು ಇಲ್ಲ. ಹಾಗಾಗಿ ನಮ್ಮನ್ನ ನೋಡಿ ಭಯ ಪಡುವ ಅಗತ್ಯ ಇಲ್ಲ ಎಂದು ಹೇಳಿದ್ರು. ಇದನ್ನೂ ಓದಿ: ಸಿಎಂ ಹೇಳಿಕೆಯಿಂದ ನನಗೆ ಭಯವಾಗ್ತಿದೆ: ಸುಮಲತಾ

    ಯಾರಿಗೆ ಯಾವ ಸಂದರ್ಭದಲ್ಲಿ ಭಯ ಆಗುತ್ತದೆ ಅನ್ನೋದು ನಮಗೆ ಗೊತ್ತಿಲ್ಲ. ಆದ್ರೆ ನಮ್ಮನ್ನ ನೋಡಿ ಭಯ ಪಡುವ ಅಗತ್ಯ ಇಲ್ಲ. ಮಂಡ್ಯದಲ್ಲಿ ವಾತಾವರಣ ಚೆನ್ನಾಗಿದೆ. ಎಲ್ಲ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸಿಎಂ ಎಚ್ ಡಿ ಕುಮಾರಸ್ವಾಮಿಯವರು ಇಂದು ಮಾತ್ರ ಮಂಡ್ಯದಲ್ಲಿ ಪ್ರಚಾರ ಮಾಡುತ್ತಾರೆ. ಮತ್ತೆ ಅವರು ಮಂಡ್ಯದಲ್ಲಿ ಪ್ರಚಾರ ಮಾಡುವುದಿಲ್ಲ ಅಂದ್ರು.

    ನಿಖಿಲ್ ಕಿವಿಗೆ ಗಾಯವಾಗಿದ್ದರಿಂದ ಶುಕ್ರವಾರ ಪ್ರಚಾರಕ್ಕೆ ಹೋಗಿಲ್ಲ. ಇಂದಿನಿಂದ ನಿಖಿಲ್ ಅವರು ಸಹ ಪ್ರಚಾರದಲ್ಲಿ ಭಾಗಿಯಾಗುತ್ತಾರೆ. ಸುಮಲತಾ ಬಗ್ಗೆ ಸಂಸದ ಎಲ್.ಆರ್ ಶಿವರಾಮೇಗೌಡ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಅವರ ವೈಯಕ್ತಿಕ ಹೇಳಿಕೆಯಾಗಿದೆ. ಆದ್ರೆ ಆ ರೀತಿ ಮಾತನಾಡಬಾರದು ಎಂದು ಪಕ್ಷ ಸೂಚನೆ ನೀಡಿದೆ. ಹೀಗಾಗಿ ಯಾರೂ ವೈಯಕ್ತಿಕವಾಗಿ ಟೀಕೆ ಮಾಡಬಾರದು ಎಂದು ಸಲಹೆಯಿತ್ತರು.  ಇದನ್ನೂ ಓದಿ: ಜಯಲಲಿತಾರನ್ನು ಮೀರಿಸುವ ಮಾಯಾಂಗನೆಯಂತೆ ಹೋರಾಟ: ಶಿವರಾಮೇಗೌಡ

  • ಮೊಸಳೆ ಕಣ್ಣೀರು ಹಾಕಿ ಏನು ಋಣ ತೀರಿಸಿದ್ದಾರೆ: ಸುಮಲತಾಗೆ ಡಿಸಿ ತಮ್ಮಣ್ಣ ಟಾಂಗ್

    ಮೊಸಳೆ ಕಣ್ಣೀರು ಹಾಕಿ ಏನು ಋಣ ತೀರಿಸಿದ್ದಾರೆ: ಸುಮಲತಾಗೆ ಡಿಸಿ ತಮ್ಮಣ್ಣ ಟಾಂಗ್

    ಮಂಡ್ಯ: ಬರೀ ಮೊಸಳೆ ಕಣ್ಣೀರು ಹಾಕಿ, ಋಣ ಇದೆ ಋಣ ಇದೆ ಎಂದು ಹೇಳುತ್ತಾರೆ. ಆದರೆ ಅವರು ಏನು ಋಣ ತೀರಿಸಿದ್ದಾರೆ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

    ಮದ್ದೂರಿನ ಹೊನ್ನಲಗೆರೆಯಲ್ಲಿ ಪ್ರಚಾರದ ವೇಳೆ ಮಾತನಾಡಿದ ಡಿಸಿ ತಮ್ಮಣ್ಣ ಅವರು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದ 9 ತಿಂಗಳಿಗೆ ಮಂಡ್ಯ ಜಿಲ್ಲೆಗೆ ಸಾವಿರಾರು ಕೋಟಿ ಅನುದಾನ ಮಾಡಿದ್ದಾರೆ. ಜೊತೆಗೆ ಮಂಡ್ಯಕ್ಕೆ ಬಂದು ಶಂಕು ಸ್ಥಾಪನೆ ಕೂಡ ಮಾಡಿದ್ದಾರೆ. ಸ್ವತಂತ್ರ ಬಂದ 80 ವರ್ಷದಲ್ಲಿ ಯಾವ ಮುಖ್ಯಮಂತ್ರಿ ಒಂದು ಜಿಲ್ಲೆಗೆ ಸಾವಿರ ಕೋಟಿ ಅನುದಾನ ನೀಡಿದ್ದಾರೆ ತೋರಿಸಿ? ಅಂತಹವರನ್ನು ನೀವು ತೋರಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದ್ದಾರೆ.

    ರೈತರ ಬಗ್ಗೆ ಯಾರಿಗೆ ಮೇಲೆ ಕಾಳಜಿ ಇದೆ. ಯಾರಿಗೆ ಇಲ್ಲ ಎನ್ನುವುದನ್ನು ಅರಿತುಕೊಳ್ಳಬೇಕು. ಬರೀ ಮೊಸಳೆ ಕಣ್ಣೀರು ಹಾಕಿ, ಋಣ ಇದೆ ಋಣ ಇದೆ ಎಂದು ಹೇಳುತ್ತಾರೆ. ಆದರೆ ಅವರು ಏನು ಋಣ ತೀರಿಸಿದ್ದಾರೆ. ಈ 70 ವರ್ಷದಲ್ಲಿ ಬಂದ ಎಲ್ಲ ರಾಜಕಾರಣಿಗಳ ಮೇಲು ನಿಮ್ಮ ಋಣ ಇದೆ. ಆದರೆ ಋಣ ತೀರಿಸುವವರು ಎಷ್ಟು ಜನರು ಇದ್ದಾರೆ ಹೇಳಿ. ಅಂತಹವರಿಗೆಲ್ಲ ನೀವು ಉತ್ತರ ಕೊಡಬೇಕು ಎಂದು ಡಿಸಿ ತಮ್ಮಣ್ಣ ಸುಮಲತಾಗೆ ಟಾಂಗ್ ಕೊಟ್ಟಿದ್ದಾರೆ.