Tag: ಡಿಸಿ ಆರ್.ಗಿರೀಶ್

  • ಕಾಣೆಯಾಗಿರುವ ಮಗಳನ್ನು ಹುಡುಕಿಕೊಡುವಂತೆ ಜಿಲ್ಲಾಧಿಕಾರಿ ಮುಂದೆ ತಾಯಿ ಕಣ್ಣೀರು

    ಕಾಣೆಯಾಗಿರುವ ಮಗಳನ್ನು ಹುಡುಕಿಕೊಡುವಂತೆ ಜಿಲ್ಲಾಧಿಕಾರಿ ಮುಂದೆ ತಾಯಿ ಕಣ್ಣೀರು

    ಹಾಸನ: ಕಾಣೆಯಾಗಿರುವ ಮಗಳನ್ನು ಹುಡುಕಿಕೊಡುವಂತೆ ಕೋರಿ ತಾಯಿಯೊಬ್ಬರು ಜಿಲ್ಲಾಧಿಕಾರಿ ಮುಂದೆ ಕಣ್ಣೀರು ಹಾಕಿದ ಘಟನೆ ಹಾಸನದಲ್ಲಿ ನಡೆದಿದೆ.

    ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ, ಗ್ರಾಮವೊಂದರ ಸೋಮಶೇಖರ್-ಪುಷ್ಪಾ ದಂಪತಿಯ ಪುತ್ರಿ ಒಂದೂವರೆ ತಿಂಗಳ ಹಿಂದೆ ಕಾಣಿಯಾಗಿದ್ದು, ಇದುವರೆಗೂ ಪತ್ತೆಯಾಗಿಲ್ಲ. ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ಇವರ ಮಗಳು ಕಾಣೆಯಾಗಿರುವ ಬಗ್ಗೆ, ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಅಷ್ಟೇ ಅಲ್ಲದೇ ತಮ್ಮ ಮಗಳನ್ನು, ಚನ್ನರಾಯಪಟ್ಟಣದ ಪವನ್‍ಶೆಟ್ಟಿ ಕಿಡ್ನಾಪ್ ಮಾಡಿದ್ದಾನೆ ಎಂದು ದಂಪತಿ ಆರೋಪ ಮಾಡುತ್ತಿದ್ದಾರೆ. ಆದರೆ ದೂರು ನೀಡಿ ಒಂದೂವರೆ ತಿಂಗಳು ಕಳೆದರು ಪೊಲೀಸರು ಮಗಳನ್ನು ಹುಡುಕಿಕೊಟ್ಟಿಲ್ಲ ಎಂದು ತಾಯಿ ಪುಷ್ಪಾ ಜಿಲ್ಲಾಧಿಕಾರಿ ಆರ್.ಗಿರೀಶ್ ಭೇಟಿ ಮಾಡಿ ಕಣ್ಣೀರು ಹಾಕಿದ್ದಾರೆ.

    ತಾಯಿ ಪುಷ್ಪಾ ಡಿಸಿ ಭೇಟಿ ಮಾಡಿದ ವೇಳೆ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಬಾಲಕೃಷ್ಣ ಹಾಗೂ ಮಾಜಿ ಶಾಸಕ ಪುಟ್ಟೇಗೌಡರು ಕೂಡ ಅಲ್ಲಿಯೇ ಇದ್ದರು. ಈ ವೇಳೆ ಪುಷ್ಪಾ ಇಬ್ಬರಿಗೂ ತಮ್ಮ ಮಗಳನ್ನು ಹುಡುಕಿಕೊಡಲು ಪೊಲೀಸರಿಗೆ ಸೂಚಿಸಲು ಮನವಿ ಮಾಡಿದ್ದಾರೆ. ಇಬ್ಬರೂ ಕೂಡ ಪೊಲೀಸರ ಜೊತೆ ಮಾತನಾಡಿ ಕಾಣೆಯಾದ ಮಗಳನ್ನು ಹುಡುಕಿಕೊಡಲು ಸೂಚಿಸಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಪೊಲೀಸರೊಬ್ಬರು, ಮಗಳಿಗಾಗಿ ಹುಡುಕುತ್ತಿರುವ ತಾಯಿ ಪುಷ್ಪಾ ಬ್ಯಾಗಿನಲ್ಲಿ ವಿಷದ ಬಾಟಲ್ ಬಗ್ಗೆ ಬಾಲಕೃಷ್ಣ ಅವರಿಗೆ ತಿಳಿಸಿದ್ದಾರೆ. ತಕ್ಷಣ ವಿಷದ ಬಾಟಲ್ ಕಿತ್ತುಕೊಂಡ ಶಾಸಕರು, ದುಡುಕಿನ ನಿರ್ಧಾರ ಕೈಗೊಳ್ಳದಂತೆ ಸೂಚಿಸಿದ್ದಾರೆ.

    ಕಾಲೇಜಿಗೆ ಹೋಗುತ್ತಿದ್ದ ಮಗಳು ಕಾಣೆಯಾಗಿರುವುದರಿಂದ ನೊಂದ ತಂದೆ, ತಾಯಿ ನ್ಯಾಯಕ್ಕಾಗಿ ಡಿಸಿ ಕಚೇರಿ ಮೆಟ್ಟಿಲೇರುವಂತಾಗಿದೆ. ಇನ್ನಾದರೂ ಚನ್ನರಾಯಪಟ್ಟಣ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬಾಲಕಿಯನ್ನು ಪತ್ತೆಹಚ್ಚಬೇಕಾಗಿದೆ. ಇದರಿಂದ ಮುಂದಾಗುವ ಅನಾಹುತ ತಪ್ಪಿಸಬೇಕಿದೆ. ಇದನ್ನೂ ಓದಿ: ಕೇಜ್ರಿವಾಲ್ ಓರ್ವ ಅರಾಜಕತೆ ಸೃಷ್ಟಿ ಮಾಡುವ ನಾಯಕ: ಸಂದೀಪ್ ಪಾಟೀಲ್

  • ಕೊರೊನಾ ಹಾಸನ ಜಿಲ್ಲೆಯಲ್ಲಿ ಸಮುದಾಯಕ್ಕೆ ಹರಡಿರುವ ಲಕ್ಷಣ ಕಾಣಿಸುತ್ತಿದೆ: ಡಿಸಿ

    ಕೊರೊನಾ ಹಾಸನ ಜಿಲ್ಲೆಯಲ್ಲಿ ಸಮುದಾಯಕ್ಕೆ ಹರಡಿರುವ ಲಕ್ಷಣ ಕಾಣಿಸುತ್ತಿದೆ: ಡಿಸಿ

    – ಇಂದು ಓರ್ವ ಸಾವು, 28 ಸೋಂಕಿತರು ಪತ್ತೆ

    ಹಾಸನ: ಕೊರೊನಾ ಹಾಸನ ಜಿಲ್ಲೆಯಲ್ಲಿ ಸಮುದಾಯಕ್ಕೆ ಹರಡಿರುವ ಲಕ್ಷಣಗಳು ಕಾಣಿಸುತ್ತಿವೆ ಎಂದು ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಕಳವಳ ವ್ಯಕ್ತಪಡಿಸಿದ್ದಾರೆ.

    ಇಂದು ಕೊರೊನಾ ವಿಚಾರವಾಗಿ ಸುದ್ದಿಗಾರರರೊಂದಿಗೆ ಮಾತಾನಾಡಿದ ಅವರು, ಇಂದು ಹಾಸನ ಜಿಲ್ಲೆಯಲ್ಲಿ 28 ಹೊಸ ಕೋವಿಡ್ ಪ್ರಕರಣ ಬೆಳಕಿಗೆ ಬಂದಿದೆ. ಜೊತೆಗೆ ಹಾಸನ ತಾಲೂಕಿನ 30 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಈತ ಬೆಂಗಳೂರಿನಿಂದ ಬಂದಿದ್ದು, ಉಸಿರಾಟದ ತೊಂದರೆ ಮತ್ತು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಎಂದು ಮಾಹಿತಿ ನೀಡಿದ್ದಾರೆ.

    ಇದುವರೆಗೂ ಹಾಸನದಲ್ಲಿ 58 ಕಂಟೋನ್ಮೆಂಟ್ ಜೋನ್ ಇದೆ. ಅದರ ಜೊತೆಗೆ ಇಂದು 13 ಹೊಸ ಕಂಟೋನ್ಮೆಂಟ್ ಜೋನ್ ಮಾಡಬೇಕಿದೆ. ಇದರಲ್ಲಿ 11 ಕಂಟೋನ್ಮೆಂಟ್ ಜೋನ್‍ಗಳ ನಿಗದಿತ ದಿನ ಈಗಾಗಲೇ ಮುಗಿದಿದೆ. ನಮ್ಮ ನಿಮ್ಮ ಸುತ್ತಮುತ್ತ ಪಾಸಿಟಿವ್ ಇರುವವರು ಇರಬಹುದು ಎಚ್ಚರದಿಂದಿರಿ. ಹೆಚ್ಚು ಹೆಚ್ಚು ಪರೀಕ್ಷೆ ಮಾಡಿದಾಗ ಕೊರೊನಾ ಪಾಸಿಟಿವ್ ಬರುತ್ತಿರುವುದು ಇದಕ್ಕೆ ಉತ್ತಮ ಉದಾಹರಣೆ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಇಡೀ ರಾಜ್ಯದಲ್ಲಿ ಕೊರೊನಾ ಸೋಂಕು ಜಾಸ್ತಿಯಾಗುತ್ತಿರುವ ಕಾರಣ, ನಾವೇ ಎಲ್ಲರಿಂದ ದೂರ ಇರಬೇಕಾಗುತ್ತೆ. ಜಿಲ್ಲೆಯಲ್ಲಿ ನಿಯಮ ಮೀರಿದರೆ ಮುಲಾಜಿಲ್ಲದೆ ದಂಡ ವಿಧಿಸಲಾಗುತ್ತದೆ. ಇದರ ಜೊತೆಗೆ ಕೋವಿಡ್ ಪ್ರಕರಣ ಹಾಸನದಲ್ಲಿ ಕೊರೊನಾ ಸಮುದಾಯಕ್ಕೆ ಹರಡಿರುವ ಲಕ್ಷಣ ಕಾಣಿಸುತ್ತಿದೆ ಎಂದು ಹೇಳಿದರು.

  • ಚನ್ನರಾಯಪಟ್ಟಣದಲ್ಲಿ 16 ಮಂದಿಗೆ ಕೊರೊನಾ – ಹಾಸನದಲ್ಲಿ 53ಕ್ಕೇರಿದ ಸೋಂಕಿತರ ಸಂಖ್ಯೆ

    ಚನ್ನರಾಯಪಟ್ಟಣದಲ್ಲಿ 16 ಮಂದಿಗೆ ಕೊರೊನಾ – ಹಾಸನದಲ್ಲಿ 53ಕ್ಕೇರಿದ ಸೋಂಕಿತರ ಸಂಖ್ಯೆ

    – ಇಂದು ಒಂದೇ ದಿನ 21 ಕೊರೊನಾ ಪಾಸಿಟಿವ್

    ಹಾಸನ: ಜಿಲ್ಲೆಯಲ್ಲಿ ಇಂದು ಒಂದೇ ದಿನ 21 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 53ಕ್ಕೇರಿಕೆಯಾಗಿದೆ.

    ಇತ್ತ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕು ಕೊರೊನಾ ಹಾಸನದ ಕೊರೊನಾ ಹಾಟ್‍ಸ್ಟಾಟ್ ಆಗಿದೆ. ಇಂದು ಈ ತಾಲೂಕಿನಲ್ಲೇ ಬರೋಬ್ಬರಿ 16 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಇದನ್ನು ಬಿಟ್ಟರೇ ಹೊಳೆನರಸೀಪುರ ಮೂಲದ ಇಬ್ಬರು ಮತ್ತು ಹಾಸನ ಮೂಲದ ಮೂವರಿಗೆ ಸೋಂಕು ತಗುಲಿದೆ.

    ಈ ವಿಚಾರದ ಬಗ್ಗೆ ಇಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಮಾತನಾಡಿ, ಈಗ ಪಾಸಿಟಿವ್ ಬಂದಿರುವ 21 ಕೇಸ್‍ಗಳಲ್ಲಿ 2 ಕೇಸ್ ತಮಿಳುನಾಡಿನಿಂದ ಬಂದ ಟ್ರಾವೆಲ್ ಹಿಸ್ಟರಿ ಹೊಂದಿದ್ದಾರೆ. ಉಳಿದವರು ಮುಂಬೈನಿಂದ ಬಂದ ಟ್ರಾವೆಲ್ ಹಿಸ್ಟರಿ ಹೊಂದಿದ್ದಾರೆ. ಈ ಎಲ್ಲರೂ ಕ್ವಾರಂಟೈನ್ ಕೇಂದ್ರದಲ್ಲಿ ಇದ್ದವರೇ ಆಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಜೊತೆಗೆ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಎಂದಿದ್ದಾರೆ.

    ಹಾಸನದಲ್ಲಿ ಇನ್ನೂ 400 ಟೆಸ್ಟ್‍ಗಳ ರಿಸಲ್ಟ್ ಬಾಕಿ ಇದೆ. ಬಹುತೇಕ ಎಲ್ಲರೂ ಮುಂಬೈನಿಂದ ವಾಪಸ್ಸಾದವರಾಗಿದ್ದಾರೆ. ಬಾಂಬೆಯಿಂದ ವಾಪಸ್ಸಾದ ಹಲವರು ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಸನದಲ್ಲಿ ಕೊರೊನಾ ಪಾಸಿಟಿವ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದುವರೆಗೂ 1549 ಜನ ಹಾಸನಕ್ಕೆ ಹೊರರಾಜ್ಯದಿಂದ ಬಂದಿದ್ದಾರೆ. 1200 ಜನ ಹೊರರಾಜ್ಯದಿಂದ ಹಾಸನಕ್ಕೆ ಬರಲು ಸೇವಾಸಿಂಧು ಆಪ್‍ನಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಈಗಾಗಲೇ ಯಾರು ಹೊರರಾಜ್ಯದಿಂದ ಬರಲು ಪಾಸ್ ತೆಗೆದುಕೊಂಡಿದ್ದಾರೆ ಅವರಿಗಷ್ಟೇ ಜಿಲ್ಲೆಗೆ ಬರಲು ಅವಕಾಶ ಎಂದು ಜಿಲ್ಲಾಧಿಕಾರಿ ಗಿರೀಶ್ ತಿಳಿಸಿದ್ದಾರೆ.