Tag: ಡಿಸಿಪಿ ರವಿ ಚನ್ನಣ್ಣವರ್

  • ತಡರಾತ್ರಿ ರೌಡಿಗಳ ಚಳಿ ಬಿಡಿಸಿದ ಡಿಸಿಪಿ ರವಿ ಚೆನ್ನಣ್ಣವರ್

    ತಡರಾತ್ರಿ ರೌಡಿಗಳ ಚಳಿ ಬಿಡಿಸಿದ ಡಿಸಿಪಿ ರವಿ ಚೆನ್ನಣ್ಣವರ್

    ಬೆಂಗಳೂರು: ತಡರಾತ್ರಿ ಬೆಂಗಳೂರಿನ ಪಶ್ಚಿಮ ವಿಭಾಗದ ಡಿಸಿಪಿ ರವಿ ಚೆನ್ನಣ್ಣವರ್ ನೇತೃತ್ವದಲ್ಲಿ ಪೊಲೀಸರು ರೌಡಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.

    ಕಲಾಸಿಪಾಳ್ಯ ಕಾಟನ್‍ಪೇಟೆ, ಸಿಟಿ ಮಾರ್ಕೆಟ್ ಸೇರಿದಂತೆ ಮೂರ್ನಾಲ್ಕು ಠಾಣೆಗಳ ವ್ಯಾಪ್ತಿಯ ಮಾರ್ಕೆಟ್ ವೇಡಿ, ಜಾನ್ಸನ್, ರವಿ ಅಲಿಯಾಸ್ ಬಾಬಿ ರವಿ ಸೇರಿ 10ಕ್ಕೂ ಹೆಚ್ಚು ರೌಡಿಶೀಟರ್ ಮನೆಗಳ ಮೇಲೆ ದಾಳಿ ನಡೆಸಿ ವಿಚಾರಣೆ ನಡೆಸಿದ್ದಾರೆ.

    ವಾರೆಂಟ್ ಬಾಕಿ ಇದ್ದವರು, ನ್ಯಾಯಾಲಯಕ್ಕೆ ಹಾಜರಾಗದವರಿಗೆ ವಾರ್ನಿಂಗ್ ನೀಡಿದ್ದಾರೆ. ಅಲ್ಲದೇ ರೌಡಿ ಶೀಟರ್ ಗಳ ಮನೆಯಲ್ಲಿ ಮಾರಕಾಯುಧ ಇದೆಯೇ ಎಂದು ಪರಿಶೀಲನೆ ನಡೆಸಿದ್ದಾರೆ. ರವಿ ಅಲಿಯಾಸ್ ಬಾಬಿ ರವಿ ಮನೆಯಲ್ಲಿ ಒಂದು ಡ್ರಾಗರ್ ಪತ್ತೆಯಾಗಿದ್ದು, ಅದನ್ನು ವಶಕ್ಕೆ ಪಡೆದಿದ್ದಾರೆ.

    ಇತ್ತೀಚೆಗೆ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರು ಕೂಡ ಬೆಳ್ಳಂಬೆಳ್ಳಗೆ ರೌಡಿಶೀಟರ್‍ಗಳಿಗೆ ಬಿಸಿ ಮುಟ್ಟಿಸಿದ್ದು, ಮನೆ ಮೇಲೆ ದಾಳಿ ಮಾಡಿದ್ದರು. ದಕ್ಷಿಣ ವಿಭಾಗ ಡಿಸಿಪಿ ಅಣ್ಣಾಮಲೈ ಹಾಗೂ ಎಸಿಪಿ ನೇತೃತ್ವದಲ್ಲಿ ಈ ದಾಳಿ ನಡೆದಿತ್ತು. ಸುಬ್ರಮಣ್ಯಪುರ ಉಪ ವಿಭಾಗದ 5 ಸ್ಟೇಷನ್ ಪೊಲೀಸರು ದಾಳಿ ನಡೆಸಿದ್ದರು. ಕುಖ್ಯಾತ ರೌಡಿಶೀಟರ್ ಗಳ ಮನೆ ಮೇಲೆ ಪೊಲೀಸರು ರೇಡ್ ನಡೆಸಿದ್ದರು.

    ಕೊಲೆ, ಕೊಲೆ ಯತ್ನ, ರಾಬರಿ, ಡಕಾಯಿತಿ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿಗಳ ಮನೆ ಮೇಲೆ ದಾಳಿ ನಡೆದಿತ್ತು. ಬಳಿಕ ಡಿಸಿಪಿ ಅಣ್ಣಾಮಲೈ ಅಪರಾಧ ಕೃತ್ಯದಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv