Tag: ಡಿಸಿಪಿ ಅಣ್ಣಾಮಲೈ

  • ಚುನಾವಣೆಯ ಹೀರೋಗಳನ್ನು ಪರಿಚಯಿಸಿದ ಡಿಸಿಪಿ ಅಣ್ಣಾಮಲೈ

    ಚುನಾವಣೆಯ ಹೀರೋಗಳನ್ನು ಪರಿಚಯಿಸಿದ ಡಿಸಿಪಿ ಅಣ್ಣಾಮಲೈ

    ಬೆಂಗಳೂರು: ನಗರದ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರು ಚುನಾವಣೆಯ ಹೀರೋಗಳನ್ನು ಪರಿಚಯಿಸಿದ್ದಾರೆ. ಅಣ್ಣಮಲೈ ಅವರು ತಮ್ಮ ಹೀರೋಗಳ ಫೋಟೋವನ್ನು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ.

    ಅಣ್ಣಾಮಲೈ ಅವರು ತಮ್ಮ ಜೊತೆ ಕೆಲಸ ಮಾಡುವ ಹೋಂ ಗಾರ್ಡ್‌ಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿ ಅದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಇವರು ಈ ಚುನಾವಣೆ ಹಾಗೂ ಪ್ರತಿ ಚುನಾವಣೆಯ ನನ್ನ ಹೀರೋಗಳು ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ನನಗೆ ಈ ಚುನಾವಣೆ ಹಾಗೂ ಪ್ರತಿ ಚುನಾವಣೆಯ ನಿಜವಾದ ಹೀರೋಗಳೆಂದರೆ ನನ್ನ ಜೊತೆ ಕೆಲಸ ಮಾಡುವ ಹೋಂ ಗಾರ್ಡ್‌ಗಳು. ಈ ಚಿಕ್ಕ ಗುಂಪಿನಲ್ಲಿ ದಣಿವರಿಯದ ಯೋಧರು ಎಂದರೆ ಅದು ಕಾರ್ಪೆಂಟರ್ಸ್, ಕೂಲಿ ಕಾರ್ಮಿಕರು, ಡ್ರೈವರ್ ಇತ್ಯಾದಿ. ಈ ಎಲ್ಲಗಿಂತ ದೊಡ್ಡ ಮಿಗಿಲಾದ ಕೆಲಸವೆಂದರೆ ಅದು ಹೋಂ ಗಾರ್ಡ್ ಕೆಲಸ ಎಂದು ಟ್ವೀಟ್ ಮಾಡಿದ್ದಾರೆ.

    ಅಣ್ಣಾಮಲೈ ಅವರು ಹೋಂ ಗಾರ್ಡ್‌ಗಳ ಜೊತೆ ತೆಗೆದುಕೊಂಡ ಸೆಲ್ಫಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ಈ ಫೋಟೋ ನೋಡಿದ ಜನರು ಅಣ್ಣಮಲೈ ಅವರ ಸರಳತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಮಾನವೀಯತೆ ಮೆರೆದ ಪೊಲೀಸ್ ಇನ್ಸ್‌ಪೆಕ್ಟರ್ – ಶಹಬ್ಬಾಶ್‍ಗಿರಿ ಕೊಟ್ಟ ಡಿಸಿಪಿ ಅಣ್ಣಾಮಲೈ

    ಮಾನವೀಯತೆ ಮೆರೆದ ಪೊಲೀಸ್ ಇನ್ಸ್‌ಪೆಕ್ಟರ್ – ಶಹಬ್ಬಾಶ್‍ಗಿರಿ ಕೊಟ್ಟ ಡಿಸಿಪಿ ಅಣ್ಣಾಮಲೈ

    ಬೆಂಗಳೂರು: ದುಷ್ಕರ್ಮಿಯಿಂದ ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾಗಿದ್ದ ಶಿಕ್ಷಕಿಗೆ ರಕ್ತದಾನ ಮಾಡುವ ಮೂಲಕ ಪೊಲೀಸ್ ಇನ್ಸ್‌ಪೆಕ್ಟರ್ ಮಾನವೀಯತೆಯ ಮೆರೆದಿದ್ದಾರೆ.

    ಸಿದ್ದಲಿಂಗಯ್ಯ ಗಿರಿನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದು, ಶಿಕ್ಷಕಿಗೆ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಶಿಕ್ಷಕಿ ತನುಜಾರನ್ನು ದುಷ್ಕರ್ಮಿಯೊಬ್ಬ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ. ಪರಿಣಾಮ ತನುಜಾ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು. ಈ ವೇಳೆ ಸಿದ್ದಲಿಂಗಯ್ಯ ಗಾಯಾಳು ತನುಜಾರಿಗೆ ರಕ್ತ ಕೊಟ್ಟು ಜೀವ ಉಳಿಸಿದ್ದಾರೆ.

    ನಡೆದಿದ್ದು ಏನು?
    ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ತನುಜಾರಿಗೆ ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದನು. ಇದರಿಂದ ತನುಜ ನಡುರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಬಳಿಕ ಮಾಹಿತಿ ಸಿಕ್ಕಿದ ತಕ್ಷಣ ಸಿದ್ದಲಿಂಗಯ್ಯ ಸ್ಥಳಕ್ಕೆ ದಾವಿಸಿ ಕೂಡಲೇ ತನುಜಾರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು.

    ಹೆಚ್ಚಿನ ಚಿಕಿತ್ಸೆಗೆಂದು ತನುಜಾರನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆಯಿಂದ ತನುಜಾ ತೀವ್ರ ರಕ್ತಸ್ರಾವದಿಂದ ನಿತ್ರಾಣಗೊಂಡಿದ್ದರು. ಆಗ ವೈದ್ಯರು ಹೆಚ್ಚುವರಿ ರಕ್ತದ ಅವಶ್ಯಕತೆ ಇದೆ ತುರ್ತು ರಕ್ತ ಬೇಕು ಎಂದು ಸೂಚಿಸಿದ್ದರು. ತಕ್ಷಣವೇ ಸಿದ್ದಲಿಂಗಯ್ಯ ಗಾಯಾಳು ತನುಜಾರಿಗೆ ರಕ್ತ ನೀಡಿ ಪ್ರಾಣ ಉಳಿಸಿದ್ದರು.

    ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತನುಜ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ತನುಜಾ ಹೊಸಕೆರೆಹಳ್ಳಿಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಸುತ್ತಿದ್ದರು. ಸಿದ್ದಲಿಂಗಯ್ಯ ಕೆಲಸಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ. ದಕ್ಷಿಣ ವಿಭಾಗ ಡಿಸಿಪಿ ಅಣ್ಣಾಮಲೈ ಅವರು ಕೂಡ ಸಿದ್ದಲಿಂಗಯ್ಯ ಅವರಿಗೆ ಶಹಬ್ಬಾಶ್ ಗಿರಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡಿಸಿಪಿ ಅಣ್ಣಾಮಲೈ ವರ್ಗಾವಣೆ ಆದೇಶ ರದ್ದು

    ಡಿಸಿಪಿ ಅಣ್ಣಾಮಲೈ ವರ್ಗಾವಣೆ ಆದೇಶ ರದ್ದು

    ಬೆಂಗಳೂರು: ನಗರದ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರನ್ನು ವರ್ಗಾವಣೆ ಮಾಡಲ್ಲ ಎಂದು ಸರ್ಕಾರ ಹೇಳಿದೆ.

    ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿಯಲ್ಲಿ ಅಣ್ಣಾಮಲೈ ಹೆಸರಿತ್ತು. ವರ್ಗಾವಣೆಯಾದ ಬಳಿಕ ಅವರಿಗೆ ಯಾವುದೇ ಹುದ್ದೆ ನೀಡಿರಲಿಲ್ಲ. ಹೀಗಾಗಿ ಅಣ್ಣಾಮಲೈ ವರ್ಗಾವಣೆ ವಿಚಾರದ ಚರ್ಚೆಗೆ ಗ್ರಾಸವಾಗಿತ್ತು.

    ಚರ್ಚೆಯಾದ ಕೂಡಲೇ ಎಚ್ಚೆತ್ತುಕೊಂಡ ಸರ್ಕಾರ ಅಣ್ಣಾಮಲೈ ವರ್ಗಾವಣೆಯನ್ನು ರದ್ದು ಮಾಡಿದೆ. ಅಧಿಕಾರಿಗಳ ಹೆಸರನ್ನು ಟೈಪ್ ಮಾಡುವ ವೇಳೆ ಸಿಬ್ಬಂದಿ ಎಡವಟ್ಟಿನಿಂದಾಗಿ ಅಣ್ಣಾಮಲೈ ಹೆಸರು ನಮೂದಾಗಿದ್ದರಿಂದ ಈ ಗೊಂದಲ ಸೃಷ್ಟಿಯಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

    ಸಿಲಿಕಾನ್ ಸಿಟಿಯಲ್ಲಿ ಭೂ ಮಾಫಿಯಾ ಮಟ್ಟಹಾಕಲು ಸರ್ಕಾರ ಚಿಕ್ಕಮಗಳೂರಿನಲ್ಲಿ ಎಸ್‍ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಣ್ಣಾಮಲೈ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿಸಿತ್ತು.

    ಕಳೆದ ತಿಂಗಳು ಜನವರಿಯಲ್ಲಿ ಅಣ್ಣಾಮಲೈ ಅವರು ಬೆಳ್ಳಂಬೆಳಗ್ಗೆ ರೌಡಿಶೀಟರ್‍ಗಳ ಮನೆ ಮೇಲೆ ದಾಳಿ ಮಾಡಿ ಬಿಸಿ ಮುಟ್ಟಿಸಿದ್ದರು. ಕೋಣನಕುಂಟೆ, ಸುಬ್ರಮಣ್ಯಪುರ, ಕುಮಾರಸ್ವಾಮಿ ಲೇಔಟ್, ತಲ್ಲಘಟ್ಟಪುರ ಹಾಗೂ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಗಳ ಮನೆ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಮಾರಕಾಸ್ತ್ರಗಳು ಹಾಗೂ ದಾಖಲೆ ಇಲ್ಲದ ನೂರಾರು ವಾಹನಗಳನ್ನು ಜಪ್ತಿ ಮಾಡಿಕೊಂಡಿದ್ದರು. ರೌಡಿಗಳು ಕೊಲೆ, ಕೊಲೆ ಯತ್ನ, ರಾಬರಿ, ಡಕಾಯಿತಿ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದರು. ದಾಳಿ ನಡೆಸಿದ ಬಳಿಕ ಅಣ್ಣಾಮಲೈ ಅಪರಾಧ ಕೃತ್ಯದಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಎಸ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಹೊಸ ಚಾರ್ಮ್ – ಹೊಸ ಸಿಬ್ಬಂದಿ ಡ್ಯೂಟಿ ರಿಪೋರ್ಟ್

    ಕೆಎಸ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಹೊಸ ಚಾರ್ಮ್ – ಹೊಸ ಸಿಬ್ಬಂದಿ ಡ್ಯೂಟಿ ರಿಪೋರ್ಟ್

    ಬೆಂಗಳೂರು: ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ಕಳೆದ ದಿನಗಳಿಂದ ಭಾರೀ ಸುದ್ದಿಯಲ್ಲಿತ್ತು. ದಕ್ಷಿಣ ವಲಯದ ಡಿಸಿಪಿ ಅಣ್ಣಾಮಲೈ ಮೂವರನ್ನ ಬಿಟ್ಟು ಎಲ್ಲರನ್ನ ಎತ್ತಂಗಡಿ ಮಾಡಿದ್ದರು. ಈಗ ಹೊಸ ಸಿಬ್ಬಂದಿ ಡ್ಯೂಟಿಗೆ ರಿಪೋರ್ಟ್ ಮಾಡಿಕೊಂಡಿದ್ದಾರೆ.

    ಡಿಸಿಪಿ ಅಣ್ಣಾಮಲೈ ಅವರಿಗೆ ಕೆ.ಎಸ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎರಡು ಬಣವಿದೆ ಎನ್ನುವುದು ಗೊತ್ತಾಗಿದೆ ತಡ ಠಾಣೆಯಲ್ಲಿದ್ದ ಮೂರು ಪಿಎಸ್‍ಐಗಳನ್ನ ಬಿಟ್ಟು ಪೊಲೀಸ್ ಇನ್ಸ್ ಪೆಕ್ಟರ್ ಸೇರಿ 71 ಸಿಬ್ಬಂದಿಯನ್ನ ಎತ್ತಂಗಡಿ ಮಾಡಿಸಿದ್ದರು. ಇದನ್ನೂ ಓದಿ: ಪೊಲೀಸ್ ಇತಿಹಾಸದಲ್ಲಿ ಫಸ್ಟ್ ಟೈಂ – ಠಾಣೆಯ 71 ಸಿಬ್ಬಂದಿ ಒಂದೇ ಬಾರಿಗೆ ವರ್ಗಾವಣೆ!

    ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಶನಿವಾರ ಇನ್ಸ್ ಪೆಕ್ಟರ್ ಅಜ್ರೇಶ್ ಸೇರಿ ಹೊಸ ಸಿಬ್ಬಂದಿ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಡ್ಯೂಟಿ ರಿಪೋರ್ಟ್ ಮಾಡಿಕೊಂಡಿದ್ದಾರೆ. ಇಲ್ಲಿವರೆಗೂ ಸುಮಾರು 20 ಮಂದಿ ಹೊಸದಾಗಿ ನಿಯೋಜನೆ ಆಗಿದ್ದಾರೆ. ಇನ್ನು ಮೂವತ್ತರಿಂದ ನಲ್ವತ್ತು ಸಿಬ್ಬಂದಿ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಬೇಕಾಗಿದೆ.

    ವಿವಾದದ ಕೇಂದ್ರ ಬಿಂದುವಾಗಿದ್ದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಹೊಸ ವಾತಾವರಣ ಕಳೆಕಟ್ಟಿದೆ. ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದ ಮಹಿಳೆ ಜೊತೆ ಎಎಸ್‍ಐ ಹೀನಾಯವಾಗಿ ನಡೆದುಕೊಂಡಿದ್ದರು. ಈ ಘಟನೆ ಸಿಲಿಕಾನ್ ಸಿಟಿ ಪೊಲೀಸರಿಗೆ ಮುಜುಗರ ಉಂಟು ಮಾಡಿತ್ತು. ಬಳಿಕ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಎಎಸ್‍ಐ ರೇಣುಕಯ್ಯರನ್ನ ಅಮಾನತು ಮಾಡಿದ್ದರು.

    ಠಾಣೆಯಲ್ಲಿ ಬಣ ರಾಜಕೀಯ ಮಾಡಿಕೊಂಡು ನ್ಯೂಸ್‍ಸೆನ್ಸ್ ಕ್ರಿಯೆಟ್ ಮಾಡಿ ಸುದ್ದಿಯಾಗುತ್ತಿದ್ದ ಸಿಬ್ಬಂದಿಯನ್ನ ಎತ್ತಂಗಡಿ ಮಾಡಿದ ಅಣ್ಣಾಮಲೈ ನಿಜವಾಗಿಯೂ ಸಿಂಗಂ ಆಗಿದ್ದಾರೆ ಎಂದು ಸಾರ್ವಜನಿಕರು ಈಗ ಮಾತನಾಡಿಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಹೆತ್ತಮ್ಮನಿಗೆ ಪೊರಕೆಯಲ್ಲಿ ಹೊಡೆದ ಮಗ- ಡಿಸಿಪಿ ಅಣ್ಣಾಮಲೈ ಪ್ರತಿಕ್ರಿಯೆ

    ಹೆತ್ತಮ್ಮನಿಗೆ ಪೊರಕೆಯಲ್ಲಿ ಹೊಡೆದ ಮಗ- ಡಿಸಿಪಿ ಅಣ್ಣಾಮಲೈ ಪ್ರತಿಕ್ರಿಯೆ

    ಬೆಂಗಳೂರು: ಬುದ್ಧಿವಾದ ಹೇಳಿದ್ದಕ್ಕೆ ಮಗನೊಬ್ಬ ತನ್ನ ಹೆತ್ತಮ್ಮನಿಗೆ ಪೊರಕೆಯಿಂದ ಹೊಡೆದು ಕ್ಲಾಸ್ ತೆಗೆದುಕೊಂಡ ಪ್ರಕರಣಕ್ಕೆ ಡಿಸಿಪಿ ಅಣ್ಣಾಮಲೈ ಪ್ರತಿಕ್ರಿಯಿಸಿದ್ದಾರೆ.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಡಿಸಿಪಿ ಅಣ್ಣಾಮಲೈ, “ನಾನು ಈ ಪ್ರಕರಣದ ದೃಶ್ಯಗಳನ್ನು ಪಬ್ಲಿಕ್ ಟಿವಿಯಲ್ಲಿ ನೋಡಿದೆ. ನಂತರ ಈ ಪ್ರಕರಣದ ಬಗ್ಗೆ ಪರಿಶೀಲಿಸಿದಾಗ ಜೆ.ಪಿ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಸುದ್ದಿ ನೋಡಿದ ತಕ್ಷಣ ಪೊಲೀಸರು ಸುಮೋಟೋ ಕೇಸ್ ದಾಖಲಿಸಿ ಕಾನೂನು ಪ್ರಕಾರ ಕ್ರಮಕೈಗೊಳ್ಳುತ್ತೇವೆ” ಎಂದರು. ಇದನ್ನೂ ಓದಿ: ಹೆತ್ತಮ್ಮನಿಗೆ ಪೊರಕೆಯಲ್ಲಿ ಹೊಡೆದು ಮಗನಿಂದ ಕ್ಲಾಸ್..!

    ಈ ಮೊದಲು ಜೀವನ್ ತಾಯಿಯ ಬಳಿ ಮಾತನಾಡಿ ಅವರಿಗೆ ಹಲ್ಲೆಯಿಂದ ಗಾಯಗಾಳಾಗಿದ್ದೀಯಾ ಎಂಬುದು ಪರಿಶೀಲಿಸಬೇಕು. ನಂತರ ಸೂಕ್ತ ಕ್ರಮಕೈಗೊಳ್ಳುತ್ತೇವೆ. ಈ ಪ್ರಕರಣದಲ್ಲಿ ತಾಯಿಯೇ ದೂರು ನೀಡಬೇಕಾಗುತ್ತೆ. ಆದರೆ ಸ್ವಂತ ಮಗನ ವಿರುದ್ಧ ಏಕೆ ದೂರು ನೀಡಬೇಕು ಎಂದು ತಾಯಿ ಹಿಂಜರಿಯುತ್ತಾರೆ. ಕುಟುಂಬದವರು ಯಾರೂ ದೂರು ನೀಡದ ಕಾರಣ ನಾವೇ ಸ್ವತಃ ದೂರು ದಾಖಲಿಸಿಕೊಳ್ಳುತ್ತಿದ್ದೇವೆ ಎಂದರು.

    ಏನಿದು ಪ್ರಕರಣ?
    ಬುದ್ಧಿವಾದ ಹೇಳಿದ್ದಕ್ಕೆ ಜೀವನ್ ತನ್ನ ತಾಯಿಗೆ ಪೊರಕೆಯಿಂದ ಹೊಡೆದು ಕ್ಲಾಸ್ ತೆಗೆದುಕೊಂಡಿದ್ದಾನೆ. ಅಲ್ಲದೇ ಹೊರಗಡೆ ನನ್ನ ವಿಚಾರ ಮಾತಾಡಿದರೆ, ಇದೇ ರೀತಿ ಟ್ರೀಟ್‍ಮೆಂಟ್ ಇರುತ್ತೆ ಎಂದು ಜೀವನ್ ತಾಯಿಗೆ ಧಮ್ಕಿ ಹಾಕಿದ್ದಾನೆ. ತಾಯಿ ತನ್ನ ಮಗನ ಮುಂದೆ ಕೈ ಮುಗಿದರೂ ಜೀವನ್ ಕರುಣೆ ತೋರಲಿಲ್ಲ. ಅಲ್ಲದೇ ತಾಯಿ ಎದುರಲ್ಲೇ ಸಿಗರೇಟ್ ಸೇದಿ ಅಸಭ್ಯವಾಗಿ ವರ್ತಿಸಿದ್ದಾನೆ. ಹಾಗಾಗಿ ತಾಯಿ ಮಗನಿಗೆ ಬುದ್ಧಿವಾದ ಹೇಳುವಂತೆ ಪೊಲೀಸರ ಮೊರೆ ಹೋಗಿದ್ದರು ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡಿಸಿಪಿ ಅಣ್ಣಾಮಲೈ ಮುಂದೆ ಹಾಜರಾಗಿ ಹೇಳಿಕೆ ಕೊಟ್ಟ ದುನಿಯಾ ವಿಜಿ ಕುಟುಂಬ

    ಡಿಸಿಪಿ ಅಣ್ಣಾಮಲೈ ಮುಂದೆ ಹಾಜರಾಗಿ ಹೇಳಿಕೆ ಕೊಟ್ಟ ದುನಿಯಾ ವಿಜಿ ಕುಟುಂಬ

    ಬೆಂಗಳೂರು: ದುನಿಯಾ ವಿಜಿ ಕುಟುಂಬ ಇಂದು ಬೆಂಗಳೂರು ದಕ್ಷಿಣ ಡಿಸಿಪಿ ಅಣ್ಣಾಮಲೈ ಎದುರು ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದೆ.

    ಪದೇ ಪದೇ ಗಲಾಟೆ ಮಾಡಿಕೊಂಡು ಕಾನೂನು ಸುವ್ಯವಸ್ಥೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿ ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 107ರ ಅಡಿ ಗಿರಿನಗರ ಪೊಲೀಸರು ದುನಿಯಾ ವಿಜಿ, ನಾಗರತ್ನ ಸೇರಿದಂತೆ 7 ಮಂದಿಯ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿದ್ದರು.

    ಈ ಪ್ರಕರರಣಕ್ಕೆ ಸಂಬಂಧಿಸಿದಂತೆ ವಿಜಯ್ ಹಾಗೂ ಕುಟುಂಬ ಸದಸ್ಯರು ಇಂದು ವಿಚಾರಣೆಗೆ ಹಾಜರಾಗಿದ್ದರು. ವಿಜಯ್, 2ನೇ ಪತ್ನಿ ಕೀರ್ತಿಗೌಡ ಹಾಗೂ ಕುಟುಂಬಸ್ಥರ ಹೇಳಿಕೆಯನ್ನು ಪೊಲೀಸರು ಪಡೆದುಕೊಂಡಿದ್ದಾರೆ.

    ಈ ವೇಳೆ ಮಾತನಾಡಿದ ವಿಜಯ್, ಎಲ್ಲರು ನಮ್ಮ ಹೇಳಿಕೆ ನೀಡಿದ್ದೇವೆ. ಪ್ರಕರಣ ವಿಚಾರಣೆ ಹಂತದಲ್ಲಿದೆ. ನಾನು ಯಾವುದೇ ಕಾರಣಕ್ಕೂ ಸಾರ್ವಜನಿಕರಿಗಾಗಲಿ, ಕಾನೂನಿಗಾಗಲಿ ಧಕ್ಕೆ ತರಲ್ಲ. ಶಾಂತಿ ಕದಡುವ ಪ್ರಯತ್ನ ಮಾಡಲ್ಲ. ಪೊಲೀಸರು ಅವರು ತಮ್ಮ ಕರ್ತವ್ಯವನ್ನು ಮಾಡುತ್ತಿದ್ದಾರೆ ಎಂದು ಹೇಳಿ ಕೈ ಮುಗಿದು ಎಲ್ಲರಿಗೂ ಒಳ್ಳೆದಾಗಲಿ ಎಂದು ಹೇಳಿದರು.

    ಇನ್ನು ದುನಿಯಾ ವಿಜಿ ಎರಡನೇ ಪತ್ನಿ ಕೀರ್ತಿಗೌಡ ಮೇಲೆ ಹಲ್ಲೆ ಸಂಬಂಧ ಈಗಾಗಲೇ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದುಕೊಂಡಿರುವ ನಾಗರತ್ನ ಸದ್ಯಕ್ಕೆ ರಿಲ್ಯಾಕ್ಸ್ ಆಗುವ ಹಾಗಿಲ್ಲ. ಯಾಕಂದ್ರೆ ನಾಗರತ್ನ ಮೇಲೆ ಕೂಡ ಗಿರಿನಗರ ಪೊಲೀಸರು ಸಿಆರ್‍ಪಿಸಿ ಸೆಕ್ಷನ್ 107 ಹಾಕಿದ್ದಾರೆ. ಹೀಗಾಗಿ ಇದಕ್ಕೆ ಸಂಬಂಧಿಸಿದಂತೆ ನಾಗರತ್ನ ಕೂಡ ಅಣ್ಣಾಮಲೈ ಮುಂದೆ ಹಾಜರಾಗಿ ಬಾಂಡ್ ನೀಡಿ ಮುಚ್ಚಳಿಕೆ ಬರೆದು ಕೊಡಬೇಕು. ಇಷ್ಟು ದಿನ ನಾಪತ್ತೆಯಾಗಿದ್ದ ನಾಗರತ್ನಗೆ ಮಧ್ಯಂತರ ಜಾಮೀನು ಸಿಕ್ಕಿರುವುದರಿಂದ ಶೀಘ್ರದಲ್ಲೇ ಪೊಲೀಸರು ಅವರನ್ನು ಡಿಸಿಪಿ ಎದುರು ಹಾಜರಾಗಲು ನೋಟೀಸ್ ನೀಡಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv