Tag: ಡಿಸಿಐಬಿ

  • ಗೂಡಂಗಡಿಗಳಲ್ಲಿ ಖೋಟಾ ನೋಟು ಚಲಾವಣೆ ಮಾಡ್ತಿದ್ದ ಇಬ್ಬರು ಅರೆಸ್ಟ್

    ಗೂಡಂಗಡಿಗಳಲ್ಲಿ ಖೋಟಾ ನೋಟು ಚಲಾವಣೆ ಮಾಡ್ತಿದ್ದ ಇಬ್ಬರು ಅರೆಸ್ಟ್

    – 2.33 ಲಕ್ಷ ರೂ. ನಕಲಿ ನೋಟು ಪತ್ತೆ

    ಬೆಳಗಾವಿ(ಚಿಕ್ಕೋಡಿ): ಡಿಸಿಐಬಿ ಹಾಗೂ ಪೊಲೀಸರ ಕಾರ್ಯಾಚರಣೆ ವೇಳೆ ಖೋಟಾ ನೋಟು ಜಾಲ ಪತ್ತೆಯಾಗಿದ್ದು, ಗೂಡಂಗಡಿಗಳಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.

    ಬೆಳಗಾವಿಯ ಗಡಿಯಲ್ಲಿ ಹಬ್ಬಿಕೊಂಡಿದ್ದ ಖೋಟಾ ನೋಟು ಜಾಲವನ್ನು ಡಿಸಿಐಬಿ ಹಾಗೂ ಪೊಲೀಸರ ಕಾರ್ಯಾಚರಣೆ ನಡೆಸಿ ಪತ್ತೆಹಚ್ಚಿದ್ದಾರೆ. ಬಂಧಿತ ಆರೋಪಿಗಳನ್ನು ಪರಶುರಾಮ್ ನಾಯ್ಕ ಹಾಗೂ ಜಲಾಲ್ ದರ್ಗಾವಾಲೇ ಎಂದು ಗುರುತಿಸಲಾಗಿದೆ. ಹಾಗೆಯೇ ಇವರಿಬ್ಬರೊಂದಿಗೆ ಕೈಜೋಡಿಸಿದ್ದ ಇನ್ನೋರ್ವ ಆರೋಪಿ ಫಾರುಖ್ ಎಸ್ಕೇಪ್ ಆಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಬಂಧಿತರಿಂದ ಪೊಲೀಸರು ಬರೋಬ್ಬರಿ 2.33 ಲಕ್ಷ ರೂ. ಖೋಟಾ ನೋಟುಗಳನ್ನು ವಶಕ್ಕೆ ಪಡೆದಿದ್ದು, ಈ ನೋಟುಗಳನ್ನು ತಯಾರಿಸಿ ಖದೀಮರು ಗೂಡಾಂಗಡಿಗಳಲ್ಲಿ ಚಲಾವಣೆ ಮಾಡ್ತಿದ್ದರು ಎಂಬುದು ಬಯಲಾಗಿದೆ. ಈ ಸಂಬಂಧ ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

  • ಪಶು ಔಷಧಿ ಖರೀದಿ ಮಾಡ್ತಿದ್ದೀರಾ? ಹಾಗಾದ್ರೆ ನೀವು ಈ ಸುದ್ದಿ ಓದ್ಲೇಬೇಕು

    ಪಶು ಔಷಧಿ ಖರೀದಿ ಮಾಡ್ತಿದ್ದೀರಾ? ಹಾಗಾದ್ರೆ ನೀವು ಈ ಸುದ್ದಿ ಓದ್ಲೇಬೇಕು

    ದಾವಣಗೆರೆ: ಬಿಹಾರದಿಂದ ಬಂದ ಅವಧಿ ಮುಗಿದ ಪಶು ಔಷಧಿಗೆ ಹೊಸ ಲೇಬಲ್ ಹಾಕಿ ಕರ್ನಾಟಕದಲ್ಲಿ ಮಾರಾಟ ಮಾಡಲಾಗುತ್ತಿರೋ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

    ದಾವಣಗೆರೆ ನಗರದ ಅಥಣಿ ಗಿರಣಿಯಲ್ಲಿ ಈ ಮೆಡಿಸಿನ್ ದಂಧೆ ನಡೆಯುತ್ತಿದೆ. ಅವಧಿ ಮುಗಿದ ಫೀಡ್ ಸಪ್ಲಿಮೆಂಟ್‍ಗೆ ಹೊಸ ಲೇಬಲ್ ಹಾಕಿ ಮಾರಾಟ ಮಾಡಲಾಗ್ತಿದೆ. ಹಸುವಿನ ಹಾಲು ಹೆಚ್ಚಾಗಲು ಈ ಔಷಧ ನೀಡಲಾಗುತ್ತದೆ.

    ದಾವಣಗೆರೆ ನಗರದ ಅಥಣಿ ಗಿರಣಿ ಕಾಂಪೌಂಡ್ ಮೇಲೆ ಅಧಿಕಾರಿಗಳು ಇಂದು ದಾಳಿ ನಡೆಸಿದ್ರು. ಡಿಸಿಐಬಿ ಸಿಪಿಐ ಬಾಲಚಂದ್ರ ನಾಯಕ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಕೋಟಿ ಕೋಟಿ ದಂಧೆಯ ವ್ಯವಸ್ಥಿತ ಜಾಲವನ್ನ ಡಿಸಿಐಬಿ ಅಧಿಕಾರಿಗಳು ಬೇಧಿಸಿದ್ದಾರೆ. ಈ ವೇಳೆ ಪವರ್ ಮಿಲ್ಕ್ ಹೆಸರಿನ ಸಾವಿರಾರು ಬಾಟಲ್‍ಗಳನ್ನ ವಶಪಡಿಸಿಕೊಂಡಿದ್ದಾರೆ.

    ಡಿಸಿಐಬಿ ರೇಡ್ ಮಾಡ್ತಿದ್ದಂತೆ ದಾವಣಗೆರೆಯ ವಿವಿಧ ಇಲಾಖೆ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಈ ಬಗ್ಗೆ ಪಶು ಇಲಾಖೆ ಹಾಗೂ ಡ್ರಗ್ ಕಂಟ್ರೋಲ್ ಅಧಿಕಾರಿಗಳು ದ್ವಂದ್ವ ಹೇಳಿಕೆ ನೀಡುತ್ತಿದ್ದು, ನಮ್ಮ ವ್ಯಾಪ್ತಿಗೆ ಬರಲ್ಲ ಎಂದು ನುಣುಚಿಕೊಳ್ತಿದ್ದಾರೆ. ಈ ದಂಧೆಯ ಹಿಂದೆ ವ್ಯವಸ್ಥಿತ ಜಾಲ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.