Tag: ಡಿಸಿಎಂ

  • ಡಿಕೆಶಿ ಸಿಎಂ ಆದಮೇಲೆ ಒಂದು ಡಜನ್ ಡಿಸಿಎಂ ಮಾಡಲಿ: ಶಾಸಕ ಬಸವರಾಜು ಶಿವಗಂಗಾ

    ಡಿಕೆಶಿ ಸಿಎಂ ಆದಮೇಲೆ ಒಂದು ಡಜನ್ ಡಿಸಿಎಂ ಮಾಡಲಿ: ಶಾಸಕ ಬಸವರಾಜು ಶಿವಗಂಗಾ

    ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮುಖ್ಯಮಂತ್ರಿ ಆದ ನಂತರ ಒಂದು ಡಜನ್ ಡಿಸಿಎಂ (DCM) ಮಾಡಲಿ ಎಂದು ಡಿಕೆಶಿ ಆಪ್ತ ಹಾಗೂ ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾ (Basavaraju Shivaganga) ಹೇಳಿದ್ದಾರೆ.

    ಈ ಕುರಿತು ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಹೆಚ್ಚುವರಿ ಡಿಸಿಎಂ ಚರ್ಚೆಗೆ ವಿರೋಧ ವ್ಯಕ್ತಪಡಿಸಿದ್ದು, ಡಿಕೆಶಿ ಅವರನ್ನು ಸಿಎಂ ಮಾಡಬೇಕು ಎಂದು ಹೊಸ ಕಾರ್ಡ್ ಪ್ಲೇ ಮಾಡಿದ್ದಾರೆ. ಡಿಕೆ ಶಿವಕುಮಾರ್‌ರನ್ನ ಮುಖ್ಯಮಂತ್ರಿ ಮಾಡಿ. ನಂತರ ಒಂದು ಡಜನ್ ಡಿಸಿಎಂ ಮಾಡಲಿ. ಕೆಪಿಸಿಸಿ ಅಧ್ಯಕ್ಷರಾಗಿದ್ದವರನ್ನು ಮುಖ್ಯಮಂತ್ರಿ ಮಾಡೋದು ಪದ್ಧತಿ. ಶಿವಕುಮಾರ್ ಅವರನ್ನು ಸಿಎಂ ಮಾಡಲಿ. ಲೋಕಸಭಾ ಚುನಾವಣೆಯಲ್ಲಿ ಸಚಿವರ ಕ್ಷೇತ್ರದಲ್ಲಿ ಲೀಡ್ ನೀಡದ ಸಚಿವರನ್ನು ಕೈ ಬಿಡಬೇಕು. ನಮ್ಮದೇನು ಅಭ್ಯಂತರವಿಲ್ಲ ಎಂದರು. ಇದನ್ನೂ ಓದಿ: ಜನಾಂಗೀಯ ನಿಂದನೆ ಹೇಳಿಕೆ ನೀಡಿದ್ದ ಸ್ಯಾಮ್‌ ಪಿತ್ರೋಡಾ ಈಗ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ

    ಡಿಕೆ ಶಿವಕುಮಾರ್ ಪಕ್ಷ ಸಂಘಟನೆ ಮಾಡಿ ಅಧಿಕಾರಕ್ಕೆ ತಂದಿದ್ದಾರೆ. ಒಂದು ಸಂಸದರಿದ್ದರು, ಈಗ ಒಂಬತ್ತು ಸಂಸದರಾಗಿದ್ದಾರೆ. ಕೆಲಸ ಮಾಡದ ಸಚಿವರ ಬದಲಾವಣೆ ಮಾಡಬೇಕು. ಲೋಕಸಭಾ ಚುನಾವಣೆಯಲ್ಲಿ ಲೀಡ್ ಕೊಡಿಸದ ಸಚಿವರ ಬದಲಾವಣೆ ಮಾಡಲಿ. ನಾನು ಆವತ್ತು ಹೇಳಿದ್ದೆ, ಇವತ್ತು ಹೇಳುತ್ತಿದ್ದೇನೆ. ಲೀಡ್ ಕೊಡಿಸದ ಸಚಿವರ ಬದಲಾವಣೆ ಮಾಡಿ ಹೊಸಬರಿಗೆ ಹಿರಿಯ ಶಾಸಕರಿಗೆ ಅವಕಾಶ ನೀಡಲಿ. ಕೆಲಸ ಮಾಡದ ಸಚಿವರ ಬದಲಾವಣೆ ಮಾಡಲಿ ಎಂದು ಹೇಳಿದರು. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ರೆಡ್ ಅಲರ್ಟ್ – ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಣೆ

  • ಎರಡೂವರೆ ವರ್ಷದ ಬಳಿಕ ಸಚಿವರ ಬದಲಾವಣೆ ಆಗಬೇಕು ಎಂಬ ಹೇಳಿಕೆಗೆ ಈಗಲೂ ಬದ್ಧ: ಮುನಿಯಪ್ಪ

    ಎರಡೂವರೆ ವರ್ಷದ ಬಳಿಕ ಸಚಿವರ ಬದಲಾವಣೆ ಆಗಬೇಕು ಎಂಬ ಹೇಳಿಕೆಗೆ ಈಗಲೂ ಬದ್ಧ: ಮುನಿಯಪ್ಪ

    ಬೆಂಗಳೂರು: ಎರಡೂವರೆ ವರ್ಷ ಆದ ನಂತರ ಸಚಿವರ ಬದಲಾವಣೆ ಆಗಬೇಕು ಎಂಬ ಹೇಳಿಕೆಗೆ ಈಗಲೂ ನಾನು ಬದ್ಧ ಎಂದು ಸಚಿವ ಕೆಹೆಚ್ ಮುನಿಯಪ್ಪ (KH Muniyappa) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಈ ಕುರಿತು ಮಾತನಾಡಿದ ಅವರು, ಹೆಚ್ಚುವರಿ ಡಿಸಿಎಂ (DCM) ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು. ಅವರು ತೀರ್ಮಾನ ಮಾಡಲಿ. ನಾನು ಆಕಾಂಕ್ಷಿ ಅಲ್ಲ. ನಾನು ಮಾತನಾಡಿ ಗೊಂದಲ ಮಾಡುವುದಿಲ್ಲ. ಎಲ್ಲರಿಗೂ ಜವಾಬ್ದಾರಿ ಕೊಟ್ಟಿದ್ದಾರೆ. ನಾನು ಹೈಕಮಾಂಡ್ ಕೊಟ್ಟ ಜವಾಬ್ದಾರಿ ನಿಭಾಯಿಸುತ್ತೇನೆ. ಸಚಿವರ ಹೈಕಮಾಂಡ್ ಭೇಟಿ ನನ್ನ ಗಮನಕ್ಕೆ ಬಂದಿಲ್ಲ. ನಾನು ಯಾವುದಕ್ಕೂ ಡಿಮ್ಯಾಂಡ್ ಇಟ್ಟಿಲ್ಲ. ನಮ್ಮ ಸಾಮರ್ಥ್ಯ ನೋಡಿ ಹೈಕಮಾಂಡ್ ಜವಾಬ್ದಾರಿ ಕೊಟ್ಟಿದ್ದಾರೆ. ನಾನು ಈಗಲೂ ಕೂಡ ಎರಡೂವರೆ ವರ್ಷಕ್ಕೆ ಸಚಿವರ ಬದಲಾವಣೆ ಹೇಳಿಕೆಗೆ ಬದ್ಧ. ಸದ್ಯ ಸಚಿವ ಸಂಪುಟ ಬದಲಾವಣೆ ಸದ್ಯಕ್ಕೆ ಅವಶ್ಯಕತೆ ಇಲ್ಲ ಎಂದರು. ಇದನ್ನೂ ಓದಿ: ಗಂಡ ಇಲ್ಲದೇ ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ: ರೇಣುಕಾಸ್ವಾಮಿ ಕೊಲೆ ಕೇಸ್‌ನ ಎ4 ಆರೋಪಿ ಪತ್ನಿ ಕಣ್ಣೀರು

    ನಾವು ಗುಣಮಟ್ಟದ ಅಕ್ಕಿ ಕೊಡುತ್ತಿದ್ದೇವೆ. ಡಿಬಿಟಿ ಪ್ರತಿ ತಿಂಗಳು ಕೊಡುತ್ತೇವೆ. ಜುಲೈ ತಿಂಗಳ ಹತ್ತಕ್ಕೆ ಯಾವುದೇ ಬಾಕಿ ಇರದೆ ಹಣ ಹಾಕುತ್ತೇವೆ. ಜುಲೈ ಹತ್ತಕ್ಕೆ ಒಂದು ವರ್ಷ ಕಂಪ್ಲಿಟ್ ಆಗುತ್ತೆ. ಯಾವುದೇ ಹಣ ಬಾಕಿ ಇಲ್ಲ. ಅಕ್ಕಿ ಸಕಾಲಕ್ಕೆ ನಾವು ಕೋಡುತ್ತೇವೆ. ಹಣದ ಬದಲು ಅಕ್ಕಿ ಕೊಡಲು ಚರ್ಚೆ ನಡೆದಿದೆ. ಅಕ್ಕಿ ಬದಲು ದವಸ ಧಾನ್ಯಗಳನ್ನು ಕೊಡುವ ಪ್ರಸ್ತಾವನೆ ಇದೆ. ಮತ್ತೆ ಕೇಂದ್ರದ ಬಳಿ ಅಕ್ಕಿ ಕೇಳುತ್ತೇವೆ. ಈಗ ನಮ್ಮ ರಾಜ್ಯದವರೆ ಸಚಿವರಿದ್ದಾರೆ. ಅವರ ಬಳಿ ಪ್ರಸ್ತಾವನೆ ಇಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕೈಯಲ್ಲಿ ಸಂವಿಧಾನ ಪ್ರತಿ ಹಿಡಿದು ಸಂಸದರಾಗಿ ರಾಹುಲ್‌ ಗಾಂಧಿ ಪ್ರಮಾಣ ವಚನ ಸ್ವೀಕಾರ

    ತೈಲ ಬೆಲೆ ಏರಿಕೆ ಬಗ್ಗೆಯೂ ಮಾತನಾಡಿದ ಅವರು, ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಬೆಲೆ ಕಡಿಮೆ ಇದೆ. ಬೆಲೆ ಹೆಚ್ಚಳ ಮಾಡಿದ ಮೇಲೂ ಕಡಿಮೆ ಇದೆ. ಐದಾರು ರೂ. ಈಗಲೂ ಕಡಿಮೆ ಇದೆ. ಗ್ಯಾರಂಟಿಗಳಿಗಾಗಿ ತೈಲ ಬೆಲೆ ಹೆಚ್ಚಳ ಮಾಡಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಬೆಲೆ ಏರಿಕೆ ಕೊಡುಗೆ, ಹಣದುಬ್ಬರ ಏರಿಕೆ – ಇದು ಕಾಂಗ್ರೆಸ್ ಗ್ಯಾರಂಟಿ ಎಂದ ಅಶ್ವಥ್ ನಾರಾಯಣ್

  • ಸಚಿವ ರಾಜಣ್ಣ ಹೈಕಮಾಂಡ್ ಬಳಿ ಹೋಗಿ ಸಿಎಂ ಹುದ್ದೆಯೇ ಕೇಳಲಿ: ಪ್ರಿಯಾಂಕ್ ಖರ್ಗೆ ಕಿಡಿ

    ಸಚಿವ ರಾಜಣ್ಣ ಹೈಕಮಾಂಡ್ ಬಳಿ ಹೋಗಿ ಸಿಎಂ ಹುದ್ದೆಯೇ ಕೇಳಲಿ: ಪ್ರಿಯಾಂಕ್ ಖರ್ಗೆ ಕಿಡಿ

    ಬೆಂಗಳೂರು: ಸಚಿವ ರಾಜಣ್ಣ (KN Rajanna) ಹೈಕಮಾಂಡ್ ಬಳಿ ಸಿಎಂ ಹುದ್ದೆಯೇ ಕೇಳಿಲಿ. ಬೇಡ ಅಂದೋರು ಯಾರು ಎಂದು ಸಚಿವ ರಾಜಣ್ಣ ಡಿಸಿಎಂ ಹುದ್ದೆ ಪ್ರಸ್ತಾಪಕ್ಕೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಕಿಡಿಕಾರಿದ್ದಾರೆ.

    ಮೂರು ಡಿಸಿಎಂ (DCM) ಹುದ್ದೆ ಪ್ರಸ್ತಾಪ ಮಾಡಿದ್ದ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮೂರು ಡಿಸಿಎಂ ಹುದ್ದೆ ಸೃಷ್ಟಿ ಅದು ರಾಜಣ್ಣ ಅವರ ವೈಯಕ್ತಿಕ ವಿಚಾರ. ಎಲ್ಲರಿಗೂ ಕೇಳೋಕೆ ಹಕ್ಕಿದೆ. ಹೈಕಮಾಂಡ್ ಬಳಿ ಹೋಗಿ ಕೇಳಲಿ. ಯಾರು ಬೇಡ ಅಂದಿಲ್ಲ. ಡಿಸಿಎಂ ಮಾಡುವುದರಿಂದಲೇ ಎಲ್ಲಾ ಆಗುತ್ತೆ ಅನ್ನೋದಾದರೆ ಸಿಎಂನ ಮಾತ್ರ ಬಿಟ್ಟು ಇಡೀ ಕ್ಯಾಬಿನೆಟ್ ಡಿಸಿಎಂ ಆಗಲಿ, ಆಗುತ್ತಾ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಚೀನಾದಲ್ಲಿ ʼ996 ವರ್ಕ್ ಕಲ್ಚರ್ʼ ವಿರುದ್ಧ ತಿರುಗಿ ಬಿದ್ದ ಉದ್ಯೋಗಿಗಳು- ಏನಿದು ಸಂಸ್ಕೃತಿ?

    ನಮ್ಮ ಕೆಲಸ ಏನು? ಚುನಾವಣೆಯಲ್ಲಿ ನಾಲ್ಕೈದು ಸ್ಥಾನ ಕಡಿಮೆ ಬಂದಿದೆ. ಅದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಡಿಸಿಎಂ ಹುದ್ದೆ ಯಾಕೆ, ಸಿಎಂ ಹುದ್ದೆನೂ ಹೈಕಮಾಂಡ್ ಬಳಿ ಹೋಗಿ ಕೇಳಲಿ ಯಾರು ಬೇಡ ಅಂದೋರು. ಮಾಧ್ಯಮಗಳ ಬಳಿ ಕೇಳಿದರೆ ಆಗುತ್ತಾ ಎಂದು ಹರಿಹಾಯ್ದರು. ಇದನ್ನೂ ಓದಿ: ವಕ್ಫ್ ಆಸ್ತಿ ಯತ್ನಾಳ್ ತಂದೆಯ ಆಸ್ತಿಯೂ ಅಲ್ಲ: ಜಮೀರ್ ಅಹಮ್ಮದ್

  • ಡಿಸಿಎಂ ಮಾಡೋದು ಹೈಕಮಾಂಡ್‌ಗೆ ಬಿಟ್ಟ ವಿಚಾರ, ನಮ್ಮ ಅಭಿಪ್ರಾಯ ಹೇಳಿದ್ದೇವೆ: ಜಮೀರ್

    ಡಿಸಿಎಂ ಮಾಡೋದು ಹೈಕಮಾಂಡ್‌ಗೆ ಬಿಟ್ಟ ವಿಚಾರ, ನಮ್ಮ ಅಭಿಪ್ರಾಯ ಹೇಳಿದ್ದೇವೆ: ಜಮೀರ್

    ಬೀದರ್: ನಮ್ಮ ಅಭಿಪ್ರಾಯ ನಾವು ಹೇಳಿದ್ದೇವೆ ಎಂದು ಡಿಸಿಎಂ (DCM) ಸ್ಥಾನದ ಪ್ರಬಲ ಆಕಾಂಕ್ಷಿ ವಸತಿ ಹಾಗೂ ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಪರೋಕ್ಷವಾಗಿ ಡಿಸಿಎಂ ಸ್ಥಾನದ ಇಂಗಿತ ವ್ಯಕ್ತಪಡಿಸಿದ್ದಾರೆ.

    ಬೀದರ್‌ನಲ್ಲಿ (Bidar) ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷ ಹೈಕಮಾಂಡ್ ಪಕ್ಷವಾಗಿದ್ದು ಈಗಾಗಲೇ ನಾನು ಮತ್ತು ರಹೀಂಖಾನ್ ನಮ್ಮ ಅಭಿಪ್ರಾಯ ಹೇಳಿದ್ದೇವೆ. ಇನ್ನೂ ಡಾ.ಜಿ ಪರಮೇಶ್ವರ್, ರಾಜಣ್ಣ, ಸತೀಶ್ ಜಾರಕಿಹೊಳಿ ಹಾಗೂ ಎಂ.ಬಿ ಪಾಟೀಲ್ ಕೂಡ ಅವರ ಅಭಿಪ್ರಾಯಗಳನ್ನು ಹೇಳಿದ್ದು, ಅಂತಿಮವಾಗಿ ಡಿಸಿಎಂ ಮಾಡೋದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದರು. ಇದನ್ನೂ ಓದಿ: ನನ್ನನ್ನೂ ಜೈಲಿನಲ್ಲಿಟ್ಟು ಚಿತ್ರಹಿಂಸೆ ಕೊಟ್ಟಿದ್ದರು – ತುರ್ತುಪರಿಸ್ಥಿತಿ ಕರಾಳ ದಿನಗಳನ್ನು ನೆನೆದ ಅಶೋಕ್

    ಈಗಾಗಲೇ ದರ್ಶನ್‌ಗೆ ಶಿಕ್ಷೆಯಾಗಿದ್ದು ಈಗ ಜೈಲಿನಲ್ಲಿ ಇದ್ದಾರೆ. ಹೀಗಾಗಿ ಈ ಬಗ್ಗೆ ನಾನು ಹೆಚ್ಚು ಕಾಮೆಂಟ್ ಮಾಡುವುದಿಲ್ಲ ಎಂದು ತಿಳಿಸಿದರು. ಈ ದೇಶಕ್ಕೆ ಸ್ವಾತಂತ್ರ‍್ಯ ತಂದಿದ್ದು ನಾವು. ಸ್ವಾತಂತ್ರ‍್ಯ ತರಲು ಬಿಜೆಪಿ ಏನು ಮಾಡಿದೆ? ಬಿಜೆಪಿ ಹಾಗೂ ಆರ್‌ಎಸ್‌ಎಸ್ ಯಾರ ಜೊತೆ ಇದ್ದರೂ ಇತಿಹಾಸಕ್ಕೆ ಗೊತ್ತಿದೆ. ಈ ದೇಶ ನಮ್ಮದು ರೀ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಜೈಲಲ್ಲಿ ದರ್ಶನ್‍ನನ್ನು ಭೇಟಿಯಾದ ಪುತ್ರ ವಿನೀಶ್ – ಭಾವುಕನಾಗಿ ಕಣ್ಣೀರಿಟ್ಟ ಕಾಟೇರ

  • ಜಾತಿವಾರು ಡಿಸಿಎಂ ಹುದ್ದೆ ನೀಡಿದ್ರೆ ತಪ್ಪೇನು : ಸಚಿವ ರಾಜಣ್ಣ ಪ್ರಶ್ನೆ

    ಜಾತಿವಾರು ಡಿಸಿಎಂ ಹುದ್ದೆ ನೀಡಿದ್ರೆ ತಪ್ಪೇನು : ಸಚಿವ ರಾಜಣ್ಣ ಪ್ರಶ್ನೆ

    ಬಾಗಲಕೋಟೆ: ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೊಮ್ಮೆ ಹೆಚ್ಚುವರಿ ಡಿಸಿಎಂ ಕೂಗು ಕೇಳಿಬರತೊಡಗಿದೆ. ಇಂದು ಕೂಡ, ಜಾತಿವಾರು ಡಿಸಿಎಂ ಹುದ್ದೆ (Caste Wise DCM Post) ಸೃಷ್ಟಿಗೆ ಸಹಕಾರ ಸಚಿವ ಕೆಎನ್ ರಾಜಣ್ಣ (KN Rajanna) ಆಗ್ರಹಿಸಿದ್ದಾರೆ. ಜಾತಿವಾರು ಡಿಸಿಎಂ ಹುದ್ದೆ ಸೃಷ್ಟಿಸಿದರೆ ಏನು ನಷ್ಟ ಆಗುತ್ತದೆ? ನೀಡಿದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.

    ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ (Lok Sabha Election) ಪೂರ್ವದಲ್ಲೂ ಡಿಸಿಎಂ ಹುದ್ದೆಗೆ ಬೇಡಿಕೆ ಇತ್ತು. ಬಿಜೆಪಿಯಲ್ಲಿ ಈ ತರಹ ಡಿಸಿಎಂ ಹುದ್ದೆ ನೀಡಲಾಗಿತ್ತು. ಡಿಸಿಎಂ ಹುದ್ದೆಯಿಂದ ಹೆಚ್ಚಿನದೇನು ಕೊಡಬೇಕಿಲ್ಲವಲ್ಲ. ಎಲ್ಲ ಸಮುದಾಯದವರಿಗೂ ತಮ್ಮವರಿಗೆ ಹುದ್ದೆ ಸಿಗಬೇಕು ಎನ್ನುವ ಆಸೆ ಇರುತ್ತದೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ರಾಮಮಂದಿರದಲ್ಲಿ ಭಕ್ತರೆಲ್ಲಾ ಸಮಾನರು – ಅರ್ಚಕರು ವಿಐಪಿಗಳಿಗೆ ತಿಲಕ ಇಡುವಂತಿಲ್ಲ

     

    ಸಮುದಾಯ ಆಧಾರಿತ ಡಿಸಿಎಂ ಹುದ್ದೆ ಆಗಬೇಕು. ಈ ಬಗ್ಗೆ ಬೇಡಿಕೆ ಇದ್ದೆ ಇದೆ. ಆದರೆ ನಾನು ಡಿಸಿಎಂ ಹುದ್ದೆ ಆಕಾಂಕ್ಷಿ ಅಲ್ಲ. ಮುಂದೆ ನಾನು ಚುನಾವಣೆಗೂ ನಿಲ್ಲುವುದಿಲ್ಲ ಎಂದು ಹೇಳುವ ಮೂಲಕ ಚುನಾವಣಾ ರಾಜಕೀಯಕ್ಕೆ ಕೆ.ಎನ್.ರಾಜಣ್ಣ ನಿವೃತ್ತಿ ಘೋಷಿಸಿದರು.

    ಲಿಂಗಾಯತ, ಅಲ್ಪಸಂಖ್ಯಾತ, ಎಸ್ಸಿ, ಎಸ್ಟಿ ಸಮುದಾಯಕ್ಕೆ ಡಿಸಿಎಂ ಹುದ್ದೆ ಬೇಕು ಎನ್ನುವ ಬೇಡಿಕೆ ಇದೆ. ಸಚಿವ ಜಮೀರ್ ಅಹ್ಮದ್ ಸಹ ಹೇಳಿದ್ದಾರೆ. ವಿವಿಧ ಸಮುದಾಯಗಳಿಗೆ ಡಿಸಿಎಂ ಹುದ್ದೆ ನೀಡಿದರೆ ತಪ್ಪೇನಿಲ್ಲ ಎಂದರು.

     

  • ಡಿಸಿಎಂ ಆದ ಪವನ್ ಕಲ್ಯಾಣ್‌ಗೆ ಭರ್ಜರಿ ಗಿಫ್ಟ್ ಕೊಟ್ಟ ಚಿರಂಜೀವಿ ಪತ್ನಿ

    ಡಿಸಿಎಂ ಆದ ಪವನ್ ಕಲ್ಯಾಣ್‌ಗೆ ಭರ್ಜರಿ ಗಿಫ್ಟ್ ಕೊಟ್ಟ ಚಿರಂಜೀವಿ ಪತ್ನಿ

    ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಆಗಿರುವ ಪವನ್ ಕಲ್ಯಾಣ್‌ಗೆ (Pawan Kalyan) ಇದೀಗ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಪತ್ನಿ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಅತ್ತಿಗೆ ಕೊಟ್ಟ ಗಿಫ್ಟ್‌ ನೋಡಿ ಪವನ್‌ ಕಲ್ಯಾಣ್‌ ಸಂಭ್ರಮಿಸಿದ್ದಾರೆ. ಈ ವಿಡಿಯೋವನ್ನು ಚಿರಂಜೀವಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:‘ಐ ಲವ್ ಯೂ’ ಯಾವಾಗಲೂ ನೀವೇ ನನ್ನ ಹೀರೋ ಎಂದ ದರ್ಶನ್ ಪುತ್ರ

    ಚಿರಂಜೀವಿ ಪತ್ನಿ ಸುರೇಖಾಗೆ (Surekha) ಪವನ್ ಕಲ್ಯಾಣ್ ಮೇಲೆ ವಿಶೇಷ ಪ್ರೀತಿ, ಕಾಳಜಿ ಇದೆ. ತನ್ನ ಮಗನಂತೆಯೇ ಪವನ್ ಕಲ್ಯಾಣ್‌ರನ್ನು ಸುರೇಖಾ ಕಾಣುತ್ತಾರೆ. ಸಿನಿಮಾ ಬಳಿಕ ರಾಜಕೀಯದಲ್ಲೂ ಸಾಧನೆ ಮಾಡಿರುವ ಡಿಸಿಎಂ ಪವನ್ ಕಲ್ಯಾಣ್‌ಗೆ ಅರ್ಥಪೂರ್ಣ ಉಡುಗೊರೆಯೊಂದನ್ನು ನೀಡಿದ್ದಾರೆ. ಮೌಂಟ್ ಬ್ಲಾಂಕ್ ಪೆನ್ ಅನ್ನು ಗಿಫ್ಟ್ ಮಾಡಿದ್ದಾರೆ.

    ಅತ್ತಿಗೆ ಕೊಟ್ಟಿರುವ ಪೆನ್ನಿನ ಬೆಲೆ ಸುಮಾರು ಒಂದು ಲಕ್ಷ ರೂ. ಮೌಲ್ಯದಾಗಿದೆ. ಮೌಂಟ್ ಬ್ಲಾಂಕ್ ಡಿಸ್ನಿ ಕ್ಯಾರೆಕ್ಟರ್ ಎಡಿಷನ್ ಪೆನ್ ಅನ್ನು ಸುರೇಖಾ, ಪವನ್ ಕಲ್ಯಾಣ್‌ಗೆ ನೀಡಿದ್ದಾರೆ. ವಿಶೇಷ ಉಡುಗೊರೆ ಸ್ವೀಕರಿಸಿದ ಪವನ್ ಕಲ್ಯಾಣ್ ಅತ್ತಿಗೆಗೆ ಧನ್ಯವಾದ ಸಹ ಹೇಳಿದ್ದಾರೆ. ಅಣ್ಣ ಚಿರಂಜೀವಿ, ಅತ್ತಿಗೆ ಜೊತೆ ಪವನ್ ಕಲ್ಯಾಣ್ ಪೆನ್ನು ಹಿಡಿದು ಫೋಸು ಕೊಟ್ಟಿದ್ದಾರೆ. ತೆಲುಗು ಜನರ ಆಕಾಂಕ್ಷೆಗಳನ್ನು ಈಡೇರಿಸುತ್ತೀಯ ಎಂಬ ಆಶಯ ಹಾಗೂ ಆಶೀರ್ವಾದ ಇದೆ ಎಂದು ಸಂದೇಶ ಕೂಡ ನೀಡಿದ್ದಾರೆ.

    ಇನ್ನೂ ರಾಜಕೀಯದ ಕೆಲಸ ನಡುವೆಯೇ ಒಪ್ಪಿಕೊಂಡಿರುವ ಹರಿಹರ ವೀರ ಮಲ್ಲು ಸಿನಿಮಾ, ಶ್ರೀಲೀಲಾ ಜೊತೆ ಉಸ್ತಾದ್‌ ಭಗತ್‌ ಸಿಂಗ್‌ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳನ್ನು ಪವನ್‌ ಕಲ್ಯಾಣ್‌ ಮುಗಿಸಿಕೊಡಬೇಕಿದೆ.

  • ಸಂವಿಧಾನದ ತಿದ್ದುಪಡಿ ಮಾಡಿ 224 ಕ್ಷೇತ್ರಗಳಲ್ಲೂ ಸಿಎಂ, ಡಿಸಿಎಂ ಘೋಷಿಸಿ – ಈಶ್ವರಪ್ಪ ಲೇವಡಿ

    ಸಂವಿಧಾನದ ತಿದ್ದುಪಡಿ ಮಾಡಿ 224 ಕ್ಷೇತ್ರಗಳಲ್ಲೂ ಸಿಎಂ, ಡಿಸಿಎಂ ಘೋಷಿಸಿ – ಈಶ್ವರಪ್ಪ ಲೇವಡಿ

    ನವದೆಹಲಿ: ಸಂವಿಧಾನದ ತಿದ್ದುಪಡಿ ಮಾಡಿ 224 ಕ್ಷೇತ್ರಗಳಲ್ಲೂ ಶಾಸಕರನ್ನೂ ಸಿಎಂ (CM) ಮತ್ತು ಡಿಸಿಎಂ (DCM) ಮಾಡಿ ಬಿಡಿ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ (KS Eshwarappa) ಕಾಂಗ್ರೆಸ್ (Congress) ನಾಯಕರಿಗೆ ವ್ಯಂಗ್ಯ ಮಾಡಿದ್ದಾರೆ.

    ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಹೆಚ್ಚುವರಿ ಡಿಸಿಎಂ ನೇಮಕ ವಿಚಾರವಾಗಿ ದೆಹಲಿಯಲ್ಲಿ (New Delhi) ಮಾತನಾಡಿದ ಅವರು, ಲೋಕಸಭೆ ಚುನಾವಣೆ (Lok Sabha Election) ಬಳಿಕ ಕಾಂಗ್ರೆಸ್ ಸರ್ಕಾರ ಇರುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್‌ನವರು ಬಹಳ ದಿನಗಳಿಂದ ಮದುವೆ ಮಾಡಿಕೊಳ್ಳಬೇಕು ಎಂದು ಯೋಚನೆ ಮಾಡುತ್ತಿದ್ದರು. ಆದರೆ ನಿರೀಕ್ಷೆಗೂ ಮೀರಿ ಅವರ ಮದುವೆ ಆಯಿತು. ಭಾರಿ ಬಹುಮತದೊಂದಿಗೆ ಅಧಿಕಾರ ಬಂತು. ಅಂದಿನಿಂದಲೇ ಸಿಎಂ, ಡಿಸಿಎಂ ವಿಚಾರದಲ್ಲಿ ಗೊಂದಲ ಸೃಷ್ಟಿಯಾಯಿತು. ಸಿಎಂ ಆಯ್ಕೆ ವೇಳೆ ಶಿವಕುಮಾರ್ ದೆಹಲಿಗೆ ಹೋಗಲಿಲ್ಲ. ಎರಡು ದಿನದ ಬಳಿಕ ದೆಹಲಿಗೆ ಹೋಗಿ ಖರ್ಗೆ ಸಿಎಂ ಆಗಲಿ ಎಂದರು. ಡಿ.ಕೆ ಶಿವಕುಮಾರ್‌ಗೆ ಏಕಾಏಕಿ ದಲಿತರ ಮೇಲೆ ಪ್ರೀತಿ ಬಂತು. ಖರ್ಗೆಯವರು ಬೇಕಾದರೆ ಸಿಎಂ ಆಗಲಿ ಎಂದರು. ಇದನ್ನೂ ಓದಿ: ರಾಮಮಂದಿರಕ್ಕಾಗಿ 30 ವರ್ಷಗಳಿಂದ ‘ಮೌನ ವ್ರತ’ – ಒಂದು ಮಾತೂ ಆಡದೇ ಇದ್ದ ಮಹಿಳೆ ಮುಖದಲ್ಲಿ ಮಂದಹಾಸ

    ಮೊನ್ನೆ ಪ್ರಧಾನಿ ಅಭ್ಯರ್ಥಿ ವಿಚಾರಕ್ಕೆ ಬಂದಾಗ ರಾಹುಲ್‌ಗಾಂಧಿ ಹೆಸರು ಡಿಕೆ ಶಿವಕುಮಾರ್ ಉಲ್ಲೇಖಿಸಿದರು. ಯಾಕೆ ಖರ್ಗೆ ಹೆಸರು ಶಿವಕುಮಾರ್ ಹೇಳಲಿಲ್ಲ? ಬರೀ ತೋರಿಕೆಗಾಗಿ ದಲಿತರ ಮೇಲೆ ಪ್ರೀತಿ ತೋರುವ ಕೆಲಸ ಮಾಡುತ್ತಿದ್ದಾರೆ. ರಾಮಮಂದಿರ, ದಲಿತರ ವಿಚಾರ ಹೀಗೆ ಎಲ್ಲಾ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಮೂರು ಜನರು ಕಾಂಗ್ರೆಸ್ ನಾಯಕರಿದ್ದರೆ, ನಾಲ್ಕು ವಿಚಾರದಲ್ಲಿ ಜಗಳ ಮಾಡುತ್ತಾರೆ. ಹಿಜಬ್ ಕೇಸ್ ವಾಪಸ್ ಪಡೆಯಲು ಯಾರು ಮನವಿ ಮಾಡಿದರು? ಮುಸ್ಲಿಂರನ್ನು ನೋಡಿದ ತಕ್ಷಣ ಸಿಎಂ ಘೋಷಣೆ ಮಾಡಿದರು. ಹಿಂದೂಗಳು ಒಟ್ಟಾಗಿದ್ದಾರೆ. ಲೋಕಸಭೆ ಚುನಾವಣೆ ಅಥವಾ ಅದರ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಇರಲ್ಲ ಎಂದು ಹೇಳಿದರು. ಇದನ್ನೂ ಓದಿ: ಮ್ಯಾನ್ಮಾರ್‌ನಲ್ಲಿರುವ ಉಗ್ರರ ಶಿಬಿರದ ಮೇಲೆ ಭಾರತದಿಂದ ಬಾಂಬ್‌ ದಾಳಿ!

    ಜಾತಿ ಸಮೀಕ್ಷೆ ವಿಚಾರದಲ್ಲಿ ತಮ್ಮನ್ನು ತಾವು ಸಿದ್ದರಾಮಯ್ಯ ಹಿಂದುಳಿದ ನಾಯಕ ಎಂದು ಕರೆದುಕೊಂಡಿದ್ದಾರೆ. ಆದರೆ ಅವಕಾಶ ಸಿಕ್ಕಾಗ ಸಮೀಕ್ಷೆ ಬಿಡುಗಡೆ ಮಾಡುವ ಪ್ರಯತ್ನ ಮಾಡಲಿಲ್ಲ. ಈಗ ಮತ್ತೆ ಸಿಎಂ ಆಗಿದ್ದಾರೆ. ಕಳೆದ ನವೆಂಬರ್‌ನಲ್ಲಿ ಸಮೀಕ್ಷೆ ಬಿಡುಗಡೆ ಎಂದಿದ್ದರು. ನವೆಂಬರ್, ಡಿಸೆಂಬರ್ ಮುಗೀತು, ಇನ್ನೂ ಜಾರಿಯಾಗಿಲ್ಲ. ಮುಸ್ಲಿಂ ಹಾಗೂ ಹಿಂದುಳಿದ ಹೆಸರಿನಲ್ಲಿ ಸಿದ್ದರಾಮಯ್ಯ ರಾಜಕೀಯ ಮಾಡುತ್ತಿದ್ದಾರೆ ಅಷ್ಟೇ ಎಂದು ಕಿಡಿಕಾರಿದರು. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ; ಮುಸ್ಲಿಮರ ಮೇಲಿನ ದ್ವೇಷ ಕೊನೆಗೊಳ್ಳುವ ವಿಶ್ವಾಸವಿದೆ: ಫಾರೂಕ್‌ ಅಬ್ದುಲ್ಲಾ

    ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗುತ್ತಿದೆ. ಪ್ರತಿ ಹಿಂದೂ ಮನೆಗೂ ಮಂತ್ರಾಕ್ಷತೆ ಕೊಟ್ಟು ಅಯೋಧ್ಯೆಗೆ ಕರೆಯುತ್ತಿದ್ದೇವೆ. ಇದು ತುಂಬಾ ಸಂತೋಷದ ವಿಚಾರ. ರಾಮಲಿಂಗಾ ರೆಡ್ಡಿ ಅವರು ಮಂದಿರದ ಪರವಾಗಿದ್ದಾರೆ. ಆದರೆ ಡಿಸಿಎಂ ಸೇರಿ ಕೆಲವು ನಾಯಕರಿಗೆ ಕೆಟ್ಟ ಕಾಯಿಲೆ ಇದೆ. ಮಂತ್ರಾಕ್ಷತೆ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಮಂತ್ರಾಕ್ಷತೆ ಅಕ್ಕಿ ಅನ್ನಭಾಗ್ಯದ್ದಲ್ಲ. ರೈತ ಬೆಳೆದಿದ್ದು. ಡಿಸಿಎಂ ದೇಶದ ಜನರಲ್ಲಿ ಕ್ಷಮೆ ಕೇಳುವುದರ ಜೊತೆಗೆ ಮಂತ್ರಾಕ್ಷತೆ ಪಡೆದು ಅಯೋಧ್ಯೆಗೆ ಬರಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: Ayodhya Ram Mandir: ಶೀಘ್ರದಲ್ಲೇ ಸಂಚರಿಸಲಿವೆ ನೋಯ್ಡಾದಿಂದ ಅಯೋಧ್ಯೆಗೆ ಡೈರೆಕ್ಟ್ ಬಸ್‌

  • ಮೂರು ಡಿಸಿಎಂ ಚರ್ಚೆ ಹೈಕಮಾಂಡ್ ಅಂಗಳಕ್ಕೆ ಬಂದಿಲ್ಲ: ಖರ್ಗೆ ಸ್ಪಷ್ಟನೆ

    ಮೂರು ಡಿಸಿಎಂ ಚರ್ಚೆ ಹೈಕಮಾಂಡ್ ಅಂಗಳಕ್ಕೆ ಬಂದಿಲ್ಲ: ಖರ್ಗೆ ಸ್ಪಷ್ಟನೆ

    ಕಲಬುರಗಿ: ಪ್ರಸ್ತುತ ಭುಗಿಲೆದ್ದ ಮೂರು ಡಿಸಿಎಂಗಳ (DCM) ಕುರಿತಾದ ಬೇಡಿಕೆಗಳ ಚರ್ಚೆ ಹೈಕಮಾಂಡ್ ಅಂಗಳಕ್ಕೆ ಬಂದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸ್ಪಷ್ಟನೆ ನೀಡಿದ್ದಾರೆ.

    ಮಂಗಳವಾರ ಕಲಬುರಗಿ (Kalaburagi) ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂವರು ಡಿಸಿಎಂ ಚರ್ಚೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರನ್ನೇ ಕೇಳಿ ಎಂದರು. ಇದನ್ನೂ ಓದಿ: ವಿಜಯಪುರ ಪಾಲಿಕೆ ಮತ್ತೆ ಕಾಂಗ್ರೆಸ್‌ ತೆಕ್ಕೆಗೆ – ಚುನಾವಣೆ ಬಹಿಷ್ಕರಿಸಿದ ಯತ್ನಾಳ್‌, ಬಿಜೆಪಿ ಸದಸ್ಯರು

    ರಾಜ್ಯದಲ್ಲಿ ಎದ್ದಿರುವ ಮೂರು ಡಿಸಿಎಂ ಚರ್ಚೆ ಕೇವಲ ಊಹಾಪೋಹ ಅಷ್ಟೇ. ಚುನಾವಣೆಯ ಸಮಯದಲ್ಲಿ ಈ ವಿಚಾರವನ್ನು ತರುವುದು ಅಪ್ರಸ್ತುತ. ಈ ಸಮಯದಲ್ಲಿ ಸರ್ಕಾರ ಸರಿಯಾಗಿ ನಡೆಸಿ ನಾವು ಕೊಟ್ಟಿರುವ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವುದು ನಮ್ಮ ಮುಖ್ಯ ಗುರಿಯಾಗಿರಬೇಕು ಎಂದು ಹೇಳಿದರು. ಇದನ್ನೂ ಓದಿ: ಮುಸ್ಲಿಮರ ಜನಸಂಖ್ಯೆ ಹೆಚ್ಚಾದ್ರೆ ಹಿಂದೂಗಳ ಪರಿಸ್ಥಿತಿ ಹೇಗಿರತ್ತೆ ಯೋಚ್ನೆ ಮಾಡಿ: ಹರೀಶ್ ಪೂಂಜಾ ಭಾಷಣ ವೈರಲ್

    ಗ್ಯಾರಂಟಿಗಳ ಅನುಷ್ಠಾನವನ್ನು ಸಿದ್ದರಾಮಯ್ಯ ಸರಿಯಾಗಿ ಮಾಡಿಕೊಂಡು ಹೋಗುತ್ತಿದ್ದಾರೆ. ನಮ್ಮ ಗುರಿ ಮುಟ್ಟುವವರೆಗೂ ಇಂತಹ ವಿಚಾರಗಳು ಯಾವುದು ತರಬಾರದು ಎಂದು ಹೇಳುವ ಮೂಲಕ ಮೂರು ಡಿಸಿಎಂ ಸ್ಥಾನಗಳ ವಿಷಯಕ್ಕೆ ಖರ್ಗೆ ತಿಲಾಂಜಲಿ ಇಟ್ಟಿದ್ದಾರೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ; ಮುಸ್ಲಿಮರ ಮೇಲಿನ ದ್ವೇಷ ಕೊನೆಗೊಳ್ಳುವ ವಿಶ್ವಾಸವಿದೆ: ಫಾರೂಕ್‌ ಅಬ್ದುಲ್ಲಾ

  • ಹೆಚ್ಚುವರಿ DCM ಹುದ್ದೆ ಸೃಷ್ಟಿಸಿದ್ರೆ ಲೋಕಸಭೆಗೆ ಅನುಕೂಲವಾಗಲಿದೆ ಅಂತ ಸಚಿವರ ಅಭಿಪ್ರಾಯ ಇದೆ: ಪರಮೇಶ್ವರ್

    ಹೆಚ್ಚುವರಿ DCM ಹುದ್ದೆ ಸೃಷ್ಟಿಸಿದ್ರೆ ಲೋಕಸಭೆಗೆ ಅನುಕೂಲವಾಗಲಿದೆ ಅಂತ ಸಚಿವರ ಅಭಿಪ್ರಾಯ ಇದೆ: ಪರಮೇಶ್ವರ್

    ಬೆಂಗಳೂರು: ಹೆಚ್ಚುವರಿ ಡಿಸಿಎಂ (DCM) ಹುದ್ದೆ ಸೃಷ್ಟಿ ಮಾಡಿದ್ರೆ ಲೋಕಸಭಾ ಚುನಾವಣೆಗೆ ಅನುಕೂಲ ಆಗಲಿದೆ ಅಂತ ಸುರ್ಜೇವಾಲ (Randeep Surjewala) ಬಳಿ ಹಲವು ಸಚಿವರು ಮನವಿ ಮಾಡಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ (G Parameshwar) ತಿಳಿಸಿದ್ದಾರೆ.

    ಸೋಮವಾರ ಸಚಿವರಿಂದ ಸುರ್ಜೇವಾಲ ಭೇಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಿನ್ನೆ ಸಭೆಯಲ್ಲಿ ಹಲವು ಸಚಿವರು ಡಿಸಿಎಂ ಹುದ್ದೆ ಬಗ್ಗೆ ಅಭಿಪ್ರಾಯ ಹೇಳಿದ್ದಾರೆ. ಮಂತ್ರಿಗಳನ್ನು ಸುರ್ಜೇವಾಲ ಕರೆದಿದ್ದರು. ಲೋಕಸಭಾ ಚುನಾವಣೆ ಬರುತ್ತಿದೆ. ನೀವು ಹಿರಿಯರು ಇದ್ದೀರಾ ಸಿರಿಯಸ್ ಆಗಿ ತಗೋಬೇಕು ಅಂತ ಚರ್ಚೆ ಮಾಡೋಕೆ ಕರೆದಿದ್ದರು. ಈ ವೇಳೆ ಕೆಲವರು ಡಿಸಿಎಂ ಮಾಡಿದರೆ ಅನುಕೂಲ ಆಗುತ್ತೆ ಅಂತ ಕೆಲ ಸಚಿವರು ಹೇಳಿದ್ರು. ಆದರೆ ಡಿಸಿಎಂ ಹುದ್ದೆ ವಿಷಯವಾಗಿಯೇ ಸಭೆ ಕರೆದಿರಲಿಲ್ಲ. ಡಿಸಿಎಂ ಮಾಡೋದು ಹೈಕಮಾಂಡ್‍ಗೆ ಬಿಟ್ಟ ವಿಚಾರ. ನಾವು ಸಲಹೆ ಮಾಡಬಹುದು. ಕೆಲವರು ಸಲಹೆ ಮಾಡಿದ್ದಾರೆ. ಸಲಹೆ ತೆಗೆದುಕೊಳ್ಳೋದು ಬಿಡೋದು ಹೈಕಮಾಂಡ್ ಬಿಟ್ಟ ವಿಚಾರ ಹೈಕಮಾಂಡ್ ಸಾಧಕ-ಬಾಧಕ ನೋಡಿ ಡಿಸಿಎಂ ಬಗ್ಗೆ ತೀರ್ಮಾನ ಮಾಡ್ತಾರೆ ಅಂತ ತಿಳಿಸಿದರು.

    ಡಿಸಿಎಂ ಹುದ್ದೆ ವಿಚಾರ ಪಕ್ಷದ ಆಂತರಿಕ ವಿಷಯ. ಹೈಕಮಾಂಡ್ ಇದೆ ಅದನ್ನ ತೀರ್ಮಾನ ಮಾಡುತ್ತದೆ. ನಿನ್ನೆ ನಾವು ಲೋಕಸಭೆ ಬಗ್ಗೆ ಚರ್ಚೆ ಮಾಡಿದ್ವಿ. ಅಭ್ಯರ್ಥಿಗಳು ಹೇಗೆ ಇರಬೇಕು. ಎಲೆಕ್ಷನ್ ತಂತ್ರಗಾರಿಕೆ ಹೇಗೆ ಮಾಡಬೇಕು ಅಂತ ಚರ್ಚೆ ಮಾಡಿದ್ವಿ. ನಮಗೆ ತಿಳಿದ ರೀತಿ ಹೇಳಿದ್ದೇನೆ.ನಾನು ಎರಡು ಬಾರಿ ಅಧ್ಯಕ್ಷನಾಗಿ ಎರಡು ಚುನಾವಣೆ ಎದುರಿಸಿದ್ದೆ. ಆ ವಿಚಾರಗಳನ್ನು ತಿಳಿಸಿದ್ದೇವೆ. ಅದು ಬಿಟ್ಟು ದೊಡ್ಡ ಪ್ರಮಾಣದ ಚರ್ಚೆ ಆಗಿಲ್ಲ ಅಂತ ಸ್ಪಷ್ಟಪಡಿಸಿದರು. ಹೆಚ್ಚು ಡಿಸಿಎಂ ಹುದ್ದೆ ಮಾಡಿದ್ರೆ ಲೋಕಸಭಾ ಚುನಾವಣೆಗೆ (Loksabha Election) ಫ್ಲಸ್ ಆಗುತ್ತದೆ. ಅದನ್ನ ನಿನ್ನೆ ಕೆಲವರು ಹೇಳಿದ್ವು. ಸುರ್ಜೇವಾಲ ಹೈಕಮಾಂಡ್ ಜೊತೆ ಚರ್ಚೆ ಮಾಡೋದಾಗ ಹೇಳಿದ್ರು ಅಂತ ತಿಳಿಸಿದರು. ಇದನ್ನೂ ಓದಿ: ಲೋಕಾ ಚುನಾವಣೆಗೆ ಬಿಜೆಪಿ ತಯಾರಿ – ಸಭೆಯಲ್ಲಿ ಏನಾಯ್ತು? ಇನ್‌ಸೈಡ್‌ ವರದಿ ಇಲ್ಲಿದೆ

  • ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ಸಚಿವರ ಡಿನ್ನರ್‌ ಪಾಲಿಟಿಕ್ಸ್‌ – ಒಂದೂವರೆಗೆ ಗಂಟೆ ಏನು ಚರ್ಚೆ ನಡೆದಿದೆ?

    ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ಸಚಿವರ ಡಿನ್ನರ್‌ ಪಾಲಿಟಿಕ್ಸ್‌ – ಒಂದೂವರೆಗೆ ಗಂಟೆ ಏನು ಚರ್ಚೆ ನಡೆದಿದೆ?

    ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ನಿವಾಸದಲ್ಲಿ ತಡರಾತ್ರಿ ಸಭೆ ಮಹತ್ವದ ಸಭೆ ನಡೆದಿದ್ದು ರಾಜ್ಯ ಕಾಂಗ್ರೆಸ್‌ನಲ್ಲಿ (Congress) ಮತ್ತೆ ಮುನ್ನಲೆಗೆ ಬರುತ್ತಾ ಹೆಚ್ಚುವರಿ ಡಿಸಿಎಂ (DCM) ಕೂಗು ಎಂಬ ಪ್ರಶ್ನೆ ಬಂದಿದೆ.

    ಸತೀಶ್ ಜಾರಕಿಹೊಳಿ, ಜಿ.ಪರಮೇಶ್ವರ್, ಹೆಚ್.ಸಿ ಮಹದೇವಪ್ಪ, ಕೆ.ಎನ್. ರಾಜಣ್ಣ, ದಿನೇಶ್ ಗುಂಡೂರಾವ್, ಕೆ.ಹೆಚ್. ಮುನಿಯಪ್ಪ ಅವರು ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಹೊತ್ತು ಚರ್ಚೆ ನಡೆಸಿದ್ದಾರೆ.

    ಈ ಆರು ಸಚಿವರ ಸಭೆಯಲ್ಲಿ ಎರಡು ಪ್ರಮುಖ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಚಿವರ ಲೋಕಸಭೆ (Lok Sabha Election) ಸ್ಪರ್ಧೆಮಾಡಿದರೆ ಗೆಲುವು ಅನಿವಾರ್ಯ. ಗೆಲುವು ಅನಿವಾರ್ಯವಾಗಬೇಕಾದರೆ ಸಮುದಾಯಗಳ ವಿಶ್ವಾಸಕ್ಕೆ ಡಿಸಿಎಂ ದಾಳ ಉರುಳಿಸುವ ಬಗ್ಗೆ ಸಭೆಯಲ್ಲಿ ಕೆಲ ಚರ್ಚೆ ನಡೆದಿದೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ರಾಮಜನ್ಮಭೂಮಿ ಹೋರಾಟ – ಉದ್ದೇಶಪೂರ್ವಕವಾಗಿ ಸರ್ಕಾರದಿಂದಲೇ ಕೇಸ್‌ಗೆ ಮರುಜೀವ?

    ದಲಿತ ಡಿಸಿಎಂ ಮಾಡಿದರೆ ಉತ್ತಮ. ಲೋಕಸಭೆಗೆ ಸಚಿವರು ಸ್ಪರ್ಧಿಸುವುದು ಅನಿವಾರ್ಯವೇ?  ಲೋಕಸಭೆ ಸ್ಪರ್ಧೆ ಹಾಗೂ ಹೆಚ್ಚುವರಿ ಜಾತಿವಾರು ಕನಿಷ್ಠ 4 ಡಿಸಿಎಂ ಹುದ್ದೆ ಬೇಡಿಕೆ ಬಗ್ಗೆಯೂ ನಾಯಕರು ಚರ್ಚೆ ಮಾಡಿದ್ದಾರೆ.

    ಜನವರಿ 10 ರ ರಾಜ್ಯ ಕಾಂಗ್ರೆಸ್ ನಾಯಕರ ಲೋಕಸಭೆ ಸಂಬಂಧಿತ ಸಭೆ ನಂತರ ತಮ್ಮ ಬೇಡಿಕೆಯನ್ನು ಬಹಿರಂಗವಾಗಿ ವ್ಯಕ್ತಪಡಿಸುವ ಬಗ್ಗೆ ಮಾತುಕತೆ ನಡೆದಿದೆ.