Tag: ಡಿಸಿಇಟಿ

  • ಡಿಪ್ಲೊಮಾ ಮರು ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೂ ಡಿಸಿಇಟಿಯಲ್ಲಿ ಸೀಟು – ಕೆಇಎ

    ಡಿಪ್ಲೊಮಾ ಮರು ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೂ ಡಿಸಿಇಟಿಯಲ್ಲಿ ಸೀಟು – ಕೆಇಎ

    ಬೆಂಗಳೂರು: ಪ್ರಸಕ್ತ ಸಾಲಿನ ಮರು ಪರೀಕ್ಷೆಯಲ್ಲಿ(ಮೇಕ್ ಅಪ್) ಅರ್ಹತೆ ಪಡೆದ ಡಿಪ್ಲೊಮಾ ಅಭ್ಯರ್ಥಿಗಳಿಗೆ ರ‍್ಯಾಂಕ್ ನೀಡಿ, ಡಿಸಿಇಟಿ ಅಂತಿಮ ಹಂತದ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ತಿಳಿಸಿದ್ದಾರೆ.

    ಮರು ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳ ಅಂಕಗಳ ವಿವರಗಳನ್ನು ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಪಡೆದು, ಆಗಸ್ಟ್ 13ರಂದು ರ‍್ಯಾಂಕ್ ನೀಡಲಾಗುವುದು ಎಂದಿದ್ದಾರೆ. ಇದನ್ನೂ ಓದಿ: `SIR’ ಅಭಿಯಾನ ಚರ್ಚೆಗೆ ಒತ್ತಾಯಿಸಿ ವಿಪಕ್ಷಗಳ ಪ್ರತಿಭಟನೆ – ಲೋಕಸಭೆ, ರಾಜ್ಯಸಭೆಯ ಕಲಾಪ ಮುಂದೂಡಿಕೆ

    ಇವರು ಸೇರಿದಂತೆ ಇದುವರೆಗೂ ದಾಖಲೆ ಪರಿಶೀಲನೆ ಮಾಡಿಕೊಳ್ಳದ ಅಭ್ಯರ್ಥಿಗಳು ಮೂಲ ದಾಖಲೆಗಳ ಸಮೇತ ಆಗಸ್ಟ್ 14ರ ಮಧ್ಯಾಹ್ನ 2.30ರೊಳಗೆ ಕೆಇಎ ಕಚೇರಿಗೆ ಬಂದು ಮಾಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

  • ಡಿಸಿಇಟಿ: ಅರ್ಜಿ ಸಲ್ಲಿಸಲು ಮೇ 13ರವರೆಗೆ ದಿನಾಂಕ ವಿಸ್ತರಣೆ: ಕೆಇಎ

    ಡಿಸಿಇಟಿ: ಅರ್ಜಿ ಸಲ್ಲಿಸಲು ಮೇ 13ರವರೆಗೆ ದಿನಾಂಕ ವಿಸ್ತರಣೆ: ಕೆಇಎ

    ಬೆಂಗಳೂರು: ಡಿಸಿಇಟಿ-25ಗೆ (DCET) ಅರ್ಜಿ ಸಲ್ಲಿಸಲು ಇದ್ದ ಕೊನೆ ದಿನಾಂಕವನ್ನು ಮೇ 13ರವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ತಿಳಿಸಿದ್ದಾರೆ.

    ಅಂದು ಬೆಳಿಗ್ಗೆ 11ರವರೆಗೆ ಅರ್ಜಿ ಸಲ್ಲಿಸಿ, ಅಂದೇ ಸಂಜೆ 6 ಗಂಟೆ ಒಳಗೆ ಶುಲ್ಕ ಪಾವತಿಸಬೇಕು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್ ಕದನ ವಿರಾಮ ಸ್ವಾಗತಿಸಿದ ಸಿಎಂ ಸಿದ್ದರಾಮಯ್ಯ

    ಡಿಪ್ಲೊಮಾ ಮಾಡಿದವರಿಗೆ ಎಂಜಿನಿಯರಿಂಗ್ ಕೋರ್ಸ್‌ಗೆ 3ನೇ ಸೆಮಿಸ್ಟರ್ ಅಥವಾ ಎರಡನೇ ವರ್ಷಕ್ಕೆ ನೇರ ಪ್ರವೇಶ ನೀಡಲು ಡಿಸಿಇಟಿ ನಡೆಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ಭೂ, ಜಲ, ವಾಯು ಮಿಲಿಟರಿ ಕಾರ್ಯಾಚರಣೆ ನಿಲ್ಲಿಸಿ ಕದನ ವಿರಾಮಕ್ಕೆ ಭಾರತ-ಪಾಕ್‌ ಒಪ್ಪಿಗೆ

  • ಡಿಸಿಇಟಿ ಕ್ಯಾಶುಯಲ್ ಸುತ್ತು ಆರಂಭ-ಕೆಇಎ

    ಡಿಸಿಇಟಿ ಕ್ಯಾಶುಯಲ್ ಸುತ್ತು ಆರಂಭ-ಕೆಇಎ

    ಬೆಂಗಳೂರು: ಡಿಸಿಇಟಿ-24 ಕ್ಯಾಶುಯಲ್ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಸೆಪ್ಟೆಂಬರ್ 18ರಿಂದ ಆರಂಭವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

    ಸೀಟುಗಳ ಲಭ್ಯತೆಯನ್ನು ಸೆ.18ರ ಮಧ್ಯಾಹ್ನ 2ಗಂಟೆಗೆ ಕೆಇಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಸೆ.18ರ 4ಗಂಟೆಯಿಂದ ಸೆ.20ರವರೆಗೆ ಹೊಸದಾಗಿ ಆಯ್ಕೆ ದಾಖಲಿಸಬಹುದು. ಸೆ.21ರಂದು ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗುವುದು. ಸೆ.23ರಿಂದ 25ರವರೆಗೆ ಶುಲ್ಕ ಪಾವತಿ ಮತ್ತು ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಸೆ.25ರೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಬೇಕಾಗುತ್ತದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ ಕೇಸ್‌ – ಡಿಕೆಶಿ, ಸಿಬಿಐಗೆ ಸುಪ್ರೀಂ ನೋಟಿಸ್

    ಜುಲೈನಲ್ಲಿ ನಡೆದ ಮೇಕ್ ಅಪ್ ಪರೀಕ್ಷೆಯಲ್ಲಿ ಅರ್ಹತೆ ಪಡೆದು, ಡಿಸಿಇಟಿ (DCET) ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳ ರ‍್ಯಾಂಕ್ ಅನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿ, ದಾಖಲೆಗಳ ಪರಿಶೀಲನೆ ಪೂರ್ಣಗೊಂಡಿರುವ ಅಭ್ಯರ್ಥಿಗಳು ಕೂಡ ಹೊಸದಾಗಿ ಆಯ್ಕೆ ದಾಖಲಿಸಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದರ್ಶನ್‌ಗೆ ರಾಜಾತಿಥ್ಯ – ಕಲಬುರಗಿ ಜೈಲಿಗೆ ವಿಲ್ಸನ್‌ ಗಾರ್ಡನ್‌ ನಾಗ ಶಿಫ್ಟ್‌

    ಅಲ್ಲದೆ, ಮೊದಲ ಮತ್ತು ಎರಡನೇ ಸುತ್ತಿನಲ್ಲಿ ಯಾವುದೇ ಸೀಟು ಪಡೆಯದ ಮತ್ತು ಹಂಚಿಕೆಯಾದ ಸೀಟಿಗೆ ಶುಲ್ಕ ಪಾವತಿಸದೇ ಇರುವ ಅಭ್ಯರ್ಥಿಗಳೂ ಈ ಸುತ್ತಿನಲ್ಲಿ ಹೊಸದಾಗಿ ಆಯ್ಕೆ ದಾಖಲಿಸಬಹುದು ಎಂದು ಹೇಳಿದರು. ಇದನ್ನೂ ಓದಿ: 2030 ರ ವೇಳೆಗೆ 32.5 ಲಕ್ಷ ಕೋಟಿ ರೂ. ಮೌಲ್ಯದ ಸಾಲ ನೀಡಲು ಬ್ಯಾಂಕ್‌ಗಳ ಬದ್ಧ

  • ಡಿಸಿಇಟಿ-2024ಕ್ಕೆ ಶುಲ್ಕ ಪಾವತಿಗೆ ದಿನಾಂಕ ವಿಸ್ತರಣೆ: ಕೆಇಎ

    ಡಿಸಿಇಟಿ-2024ಕ್ಕೆ ಶುಲ್ಕ ಪಾವತಿಗೆ ದಿನಾಂಕ ವಿಸ್ತರಣೆ: ಕೆಇಎ

    ಬೆಂಗಳೂರು: 2024ನೇ ಸಾಲಿನ ಎರಡನೇ ವರ್ಷದ/ಮೂರನೇ ಸೆಮಿಸ್ಟರ್‌ನ ಎಂಜಿನಿಯರಿಂಗ್ ಕೋರ್ಸುಗಳ (Engineering Course) ಪ್ರವೇಶಕ್ಕಾಗಿ ಡಿಸಿಇಟಿ-24ಕ್ಕೆ (DCET-24) ನೋಂದಣಿ ಮಾಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸದೇ ಇರುವ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸಲು ಮೇ 31ರವರೆಗೆ ಕೊನೆ ಅವಕಾಶ ನೀಡಲಾಗಿದೆ.

    ಶುಲ್ಕ ಪಾವತಿಸಿದ್ದು, ಆದರೆ ಪಾವತಿ ವಿಫಲವಾದ ಕಾರಣ ಬ್ಯಾಂಕಿನಿಂದ ಹಿಂತಿರುಗಿಸಲಾಗಿರುವ ಅಭ್ಯರ್ಥಿಗಳೂ ಸಹ ಮತ್ತೊಮ್ಮೆ ಶುಲ್ಕ ಪಾವತಿಸಬಹುದಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ  (KEA) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಅಧಿಕಾರಿ ಆತ್ಮಹತ್ಯೆ ಪ್ರಕರಣ: ನಾಗೇಂದ್ರ ರಾಜೀನಾಮೆ, ಕೇಂದ್ರ ಏಜೆನ್ಸಿಯಿಂದ ತನಿಖೆಗೆ ಗೋವಿಂದ ಕಾರಜೋಳ ಆಗ್ರಹ

    ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್ ಅನ್ನು ನೋಡಲು ಕೋರಲಾಗಿದೆ. ಇದನ್ನೂ ಓದಿ: ಮೇಲ್ಮನೆ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಕೂಟಕ್ಕೆ ಬೆಂಬಲ: ಅಶ್ವಥ್ ನಾರಾಯಣ್ ಮನವಿ

  • ಡಿಸಿಇಟಿ-ಜೂನ್ 22 ರಂದು ಆಫ್‌ಲೈನ್ ಪರೀಕ್ಷೆ: ಕೆಇಎ

    ಡಿಸಿಇಟಿ-ಜೂನ್ 22 ರಂದು ಆಫ್‌ಲೈನ್ ಪರೀಕ್ಷೆ: ಕೆಇಎ

    ಬೆಂಗಳೂರು: ಡಿಪ್ಲೊಮಾ ಅಭ್ಯರ್ಥಿಗಳಿಗೆ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಲ್ಯಾಟರಲ್ ಎಂಟ್ರಿ ಮೂಲಕ 2ನೇ ವರ್ಷದ ಅಥವಾ 3ನೇ ಸೆಮಿಸ್ಟರ್‌ನ ಕೋರ್ಸ್‌ಗಳಿಗೆ ಪ್ರವೇಶಕ್ಕೆ ಜೂ.22 ಕ್ಕೆ ನಿಗದಿಯಾಗಿರುವ ಡಿಪ್ಲೊಮಾ ಸಾಮಾನ್ಯ ಪ್ರವೇಶ ಪರೀಕ್ಷೆ-2024 (DCET) ಆನ್‌ಲೈನ್ ಬದಲು ಆಪ್‌ಲೈನ್ ಮಾದರಿಯಲ್ಲಿ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತಿಳಿಸಿದೆ.

    ಈ ಪರೀಕ್ಷೆ (ಡಿಸಿಇಟಿ-2024) ಯನ್ನು ಆನ್‌ಲೈನ್ ಮೂಲಕ ನಡೆಸಲಾಗುವುದೆಂದು ಈ ಮುಂಚೆ ತಿಳಿಸಲಾಗಿತ್ತು. ಆದರೆ, ವಿವಿಧ ಕಾರಣಗಳಿಂದಾಗಿ ಪರೀಕ್ಷೆಯನ್ನು ಆಫ್‌ಲೈನ್ ಸ್ವರೂಪದಲ್ಲಿ ಹಿಂದಿನ ವರ್ಷಗಳಲ್ಲಿ ನಡೆಸಿದಂತೆಯೇ ಓಎಂಆರ್ ಉತ್ತರ ಪತ್ರಿಕೆಯ ಮಾದರಿಯಲ್ಲಿ ನಡೆಸಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಬುಧವಾರ ಪತಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ವಿಚಾರಣೆಗೆ ಬನ್ನಿ – ಹರೀಶ್‌ ಪೂಂಜಾ ಬಂಧನ ಮಾಡದೇ ತೆರಳಿದ ಪೊಲೀಸರು

    ಪರೀಕ್ಷೆಯನ್ನು ಬಾಗಲಕೋಟೆ, ಬಳ್ಳಾರಿ, ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರ್ಗಿ, ಉಡುಪಿ, ಮೈಸೂರು, ಶಿವಮೊಗ್ಗ, ತುಮಕೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮಾತ್ರ ನಡೆಸಲಾಗುವುದು. ಡಿಸಿಇಟಿ-2024ಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಈ ಮೇಲಿನ ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಜಿಲ್ಲೆಗಳನ್ನು ಪರೀಕ್ಷಾ ಸ್ಥಳವನ್ನಾಗಿ ಆಯ್ಕೆ ಮಾಡಿಕೊಂಡಿರುವ ಅಭ್ಯರ್ಥಿಗಳು ಈ ಮೇಲಿನ ಜಿಲ್ಲೆಗಳಲ್ಲಿ ಒಂದನ್ನು ಆಯ್ಕೆ ಮಾಡಿ ಡಿಸಿಇಟಿ-2024 ಪರೀಕ್ಷೆಗೆ ಹಾಜರಾಗಬೇಕು ಎಂದು ಅವರು ಸೂಚಿಸಿದ್ದಾರೆ.

    ಈ ಮೇಲಿನ ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಜಿಲ್ಲೆಗಳನ್ನು ಪರೀಕ್ಷಾ ಸ್ಥಳವನ್ನಾಗಿ ಆಯ್ಕೆ ಮಾಡಿಕೊಂಡಿರುವ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ನಿಗದಿತ ಲಿಂಕ್ ಮೂಲಕ ಮೇ 24ರ ಬೆಳಗ್ಗೆ 11:00 ರಿಂದ 27 ರ ರಾತ್ರಿ 11:59 ರೊಳಗೆ ಬದಲಿ ಪರೀಕ್ಷಾ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ರಸ್ತೆ ಗುಂಡಿ ಮುಚ್ಚಲು ವಿಶೇಷ ನಿರ್ವಹಣೆ ವ್ಯವಸ್ಥೆ: ಸಿದ್ದರಾಮಯ್ಯ

    ಈ ಮೇಲೆ ತಿಳಿಸಿರುವ ಜಿಲ್ಲೆಗಳ ಪೈಕಿ ಯಾವುದಾದರೂ ಒಂದು ಜಿಲ್ಲೆಯನ್ನು ಪರೀಕ್ಷಾ ಕೇಂದ್ರವನ್ನಾಗಿ ಆಯ್ಕೆ ಮಾಡಿಕೊಂಡಿರುವ ಅಭ್ಯರ್ಥಿಗಳು ಮತ್ತೊಮ್ಮೆ ಪರೀಕ್ಷಾ ಕೇಂದ್ರದ ಜಿಲ್ಲೆಯನ್ನು ಆಯ್ಕೆ ಮಾಡುವ ಅಗತ್ಯ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

  • DCET-2024: ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ

    DCET-2024: ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ

    ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಎಂಜಿನಿಯರಿಂಗ್ ಎರಡನೇ ವರ್ಷಕ್ಕೆ/ ಮೂರನೇ ಸೆಮಿಸ್ಟರ್ ಗೆ ನೇರ ಪ್ರವೇಶ ಪಡೆಯಲಿಚ್ಛಿಸುವ ಅಭ್ಯರ್ಥಿಗಳಿಗೆ DCET-2024ಕ್ಕೆ ಅರ್ಜಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮೇ 20 ರಿಂದ 23 ರವರೆಗೆ ಕೊನೆಯ ಅವಕಾಶ ಕಲ್ಪಿಸಿದೆ.

    ಅಭ್ಯರ್ಥಿಗಳ ಮನವಿ ಪರಿಗಣಿಸಿ ಈ ಕಾಲಾವಕಾಶ ನೀಡಿದ್ದು, ಇದುವರೆಗೆ ನೋಂದಣಿ ಮಾಡಿಕೊಳ್ಳದಿರುವ ಅರ್ಹ ಡಿಪ್ಲೊಮಾ ಅಭ್ಯರ್ಥಿಗಳು ಮೇ 20ರ ಬೆಳಗ್ಗೆ 11ರಿಂದ ಮೇ 23ರ ರಾತ್ರಿ 11.59ರೊಳಗೆ ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಿ ಮೇ 24 ರೊಳಗೆ ಶುಲ್ಕ ಪಾವತಿಸಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

    VAO ಶುಲ್ಕ ಪಾವತಿಗೆ ಮೇ 22 ಕಡೆಯ ದಿನ: ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗಳಿಗೆ ನೇರ ನೇಮಕಾತಿಗೆ ಅರ್ಜಿ ಸಲ್ಲಿಸಲು ಮೇ 18 ಕಡೆಯ ದಿನವಾಗಿದ್ದು, ಶುಲ್ಕ ಪಾವತಿಗೆ ಮೇ 22 ರವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್ http://kea.kar.nic.in ನೋಡಲು ಸೂಚಿಸಲಾಗಿದೆ.