Tag: ಡಿವೋರ್ಸ್ ಪಾರ್ಟಿ

  • 17 ವರ್ಷದ ದಾಂಪತ್ಯ ಅಂತ್ಯಗೊಳಿಸಿ ಡೈವೋರ್ಸ್ ಪಾರ್ಟಿ ಮಾಡಿದ ಮಹಿಳೆ

    17 ವರ್ಷದ ದಾಂಪತ್ಯ ಅಂತ್ಯಗೊಳಿಸಿ ಡೈವೋರ್ಸ್ ಪಾರ್ಟಿ ಮಾಡಿದ ಮಹಿಳೆ

    ವಾಷಿಂಗ್ಟನ್: 45 ವರ್ಷದ ಮಹಿಳೆಯೊಬ್ಬರು ತಮ್ಮ 17 ವರ್ಷದ ದಾಂಪತ್ಯ ಜೀವನವನ್ನು ಅಂತ್ಯಗೊಳಿಸಿ ಡೈವೋರ್ಸ್ ಪಾರ್ಟಿ ಮಾಡಿದ್ದಾರೆ.

    ಸೋನಿಯಾ ಗುಪ್ತಾ(45)ರವರು ಸತತ ಮೂರು ವರ್ಷಗಳ ಸುದೀರ್ಘ ಹೋರಾಟದ ನಂತರ ಪತಿಯಿಂದ ವಿಚ್ಛೇದನ ಪಡೆದು ತಮ್ಮ ಯುಕೆ ನಿವಾಸದಲ್ಲಿ ಔತಣ ಕೂಟವನ್ನು ಆಯೋಜಿಸಿ ಕುಟುಂಬ ಮತ್ತು ಸ್ನೇಹಿತರನ್ನು ಆಹ್ವಾನಿಸಿದ್ದರು. ಕಲರ್‌ಫುಲ್ ಥೀಮ್‍ನೊಂದಿಗೆ ಪಾರ್ಟಿಯನ್ನು ಆಯೋಜಿಸಿ, ವಿಚ್ಛೇದನಾ ಪಡೆದ ಖುಷಿಯಲ್ಲಿ ಮಹಿಳೆ ಬ್ರೈಟ್ ಡ್ರೆಸ್‍ನನ್ನು ಧರಿಸಿದ್ದರು ಮತ್ತು ಅವರ ಸ್ನೇಹಿತರಿಗೂ ಅವರಂತೆಯೇ ಆಕರ್ಷಕವಾದ ಉಡುಪನ್ನು ಧರಿಸುವಂತೆ ಪ್ರೋತ್ಸಾಹಿಸಿದ್ದಾರೆ. ವಿವಾಹ ದಾಂಪತ್ಯದಿಂದ ಬಿಡುಗಡೆ ಹೊಂದಿದಕ್ಕೆ ಪಾರ್ಟಿ ಮಾಡುವ ಇಚ್ಛೆಯನ್ನು ಮಹಿಳೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೀದರ್‌ನಲ್ಲಿ ಖಾಸಗಿ ಅಂಬುಲೆನ್ಸ್‌ಗಳದ್ದೇ ಕಾರ್‌ಬಾರ್ – ಬ್ರಿಮ್ಸ್ ಆಸ್ಪತ್ರೆ ಎದುರೇ ಖಾಸಗಿ ಸುಲಿಗೆ

    ಈ ವಿಚಾರವಾಗಿ ಮಹಿಳೆ ನಾನು ಥೀಮ್ ಡ್ರೆಸ್‍ನನ್ನು ಕಲರ್ ಫುಲ್, ಬ್ರೈಟ್ ಹಾಗೂ ಯುನಿಕ್ ಆಗಿ ಕಾಣಲು ಆರಿಸಿಕೊಂಡೆ. ಏಕೆಂದರೆ ನಾನು ತುಂಬಾ ಕಲರ್ ಫುಲ್ ವ್ಯಕ್ತಿ. ನನಗೆ ಥೀಮ್ ಒಂದು ರೀತಿ ಮ್ಯಾಜಿಕ್‍ನಂತೆ. ನಾನು ಬಯಸಿದಂತೆ ವಿಚ್ಛೇದನ ಪಾರ್ಟಿ ಒಂದು ರೀತಿ ಮೋಜಿನ ಸಂಗತಿಯಾಗಿದ್ದು, ಪಾರ್ಟಿಯಲ್ಲಿ ಪ್ರತಿಯೊಬ್ಬರು ಎಂಜಾಯ್ ಮಾಡಿದರು. ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ 50,000 ಪರಿಹಾರ ನೀಡಲು NDMA ಶಿಫಾರಸು

    2003ರಲ್ಲಿ ಸೋನಿಯಾ ಭಾರತದಲ್ಲಿ ವಿವಾಹವಾಗಿ ಯುಕೆಗೆ ತೆರಳಿದ್ದರು. ಆದರೆ ಎಷ್ಟೇ ಪ್ರಯತ್ನಿಸಿದರೂ ದಾಂಪತ್ಯ ಜೀವನದಲ್ಲಿ ಸುಖ ಕಾಣಲು ಸಾಧ್ಯವಾಗಲಿಲ್ಲ ಎಂದು ಮನವರಿಕೆ ಮಾಡಿಕೊಂಡೆ ಮತ್ತು ನನಗೂ, ನನ್ನ ಪತಿಗೂ ಹೊಂದಾಣಿಕೆಯಾಗುವುದಿಲ್ಲ ಎಂದು ಅರಿತುಕೊಂಡೆ. ನಾನು ನಾನಾಗಿರಬೇಕು ಎಂದು ಬಯಸಿದೆ. ಮದುವೆಗೂ ಮುನ್ನ ನಾನು ಬಹಳ ಸಕ್ರಿಯ ಮತ್ತು ಔಟ್ ಗೋಯಿಂಗ್ ವ್ಯಕ್ತಿಯಾಗಿದ್ದೆ. ಆದರೆ ಮದುವೆಯ ನಂತರ ಇದೆಲ್ಲ ನರಕದಂತೆ ಆಯಿತು. ಈ ವಿಚಾರವಾಗಿ ನಾನು ಕುಟುಂಬದೊಂದಿಗೆ ಹೇಳಿದಾಗ ನನ್ನ ಜೊತೆಗೆ ಜಗಳ ಆಡಿದರು ಮತ್ತು ಯಾರು ನನಗೆ ಬೆಂಬಲ ನೀಡಲಿಲ್ಲ. ಆದರೆ ಈ ವಿಚಾರದಲ್ಲಿ ನನ್ನ ಎರಡು ಶಕ್ತಿಗಳಂತೆ ಮಿಖಲ್ ಮತ್ತು ಶೇ ಇಬ್ಬರು ಸ್ನೇಹಿತರು ಬೆಂಬಲ ನೀಡಿದರು. ವಿಚ್ಛೇದನ ಬಳಿಕ ನಾನು ಏಷ್ಯನ್ ಸಿಂಗಲ್ ಪೇರೆಂಟ್ ಆಗಿ ನೆರವು ಪಡೆದಿದ್ದೇನೆ ಎಂದು ಹೇಳಿದ್ದಾರೆ.