Tag: ಡಿವೋರ್ಸ್

  • ಟೀಕೆಯಿಂದ ಖಿನ್ನತೆಗೆ ಜಾರಿದ್ದೆ, ಆತ್ಮಹತ್ಯೆಗೆ ಯೋಚಿಸಿದ್ದೆ – ಮೌನ ಮುರಿದ ಚಹಲ್‌

    ಟೀಕೆಯಿಂದ ಖಿನ್ನತೆಗೆ ಜಾರಿದ್ದೆ, ಆತ್ಮಹತ್ಯೆಗೆ ಯೋಚಿಸಿದ್ದೆ – ಮೌನ ಮುರಿದ ಚಹಲ್‌

    – ಪತ್ನಿಗೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗುತ್ತಿರಲಿಲ್ಲ
    – ಎಸಿ ಆನ್‌ ಆಗಿದ್ದರೂ ನಾನು ಬೆವರುತ್ತಿದ್ದೆ

    ಮುಂಬೈ: ನಮ್ಮ ದಾಂಪತ್ಯದ ಕುರಿತ ಸುದ್ದಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ, ಟೀಕೆ ನೋಡಿ ಖಿನ್ನತೆಗೆ ಜಾರಿದ್ದೆ. ಈ ಸಂದರ್ಭದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆಯೂ ಯೋಚಿಸಿದ್ದೆ ಎಂದು ಟೀಂ ಇಂಡಿಯಾ ಸ್ಪಿನ್ನರ್‌ ಯಜುವೇಂದ್ರ ಚಹಲ್‌ (Yuzvendra Chahal) ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಧನಶ್ರೀ ವರ್ಮಾಗೆ (Dhanashree Verma) ವಿಚ್ಛೇದನ (Divorce) ನೀಡಿದ ವಿಚಾರದ ಬಗ್ಗೆ ಇದೇ ಮೊದಲ ಬಾರಿಗೆ ಚಹಲ್‌ ಮೌನ ಮುರಿದಿದ್ದಾರೆ. ರಾಜ್ ಶಮಾನಿ ಯೂಟ್ಯೂಬ್ ಚಾನಲ್‌ನಲ್ಲಿ ವಿಚ್ಛೇದನದ ಬಗ್ಗೆ ಸಾಕಷ್ಟು ವಿಚಾರ ತಿಳಿಸಿದ್ದಾರೆ.

    ಸುಮಾರು 5 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದ ಯಜುವೇಂದ್ರ ಮತ್ತು ಧನಶ್ರೀ ಅವರಿಗೆ ಈ ವರ್ಷದ ಮಾರ್ಚ್ 20 ರಂದು ಬಾಂಬೆ ಹೈಕೋರ್ಟ್ ವಿಚ್ಛೇದನ ನೀಡಿತ್ತು. ಡಿವೋರ್ಸ್‌ ಪಡೆಯುವ ಕೆಲ ತಿಂಗಳ ಮೊದಲು ಆತ್ಮಹತ್ಯೆಯ ಆಲೋಚನೆಗಳು ಬರುತ್ತಿದ್ದವು ಎಂದು ಚಹಲ್‌ ಹೇಳಿದರು.

    ಚಹಲ್‌ ಹೇಳಿದ್ದೇನು?
    ಡಿಸೆಂಬರ್-ಜನವರಿ (2024–25) ತಿಂಗಳುಗಳಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯ ಸಮಯದಲ್ಲಿ ನಾನು ರಾಜ್ಯ ಕ್ರಿಕೆಟ್‌ ತಂಡದಿಂದ ವಿರಾಮ ಕೇಳಿದ್ದೆ. ನಮ್ಮಿಬ್ಬರ ಮಧ್ಯೆ ಹೊಂದಾಣಿಕೆಯಾಗದ ಕಾರಣ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದೆ.  ಇದನ್ನೂ ಓದಿ: 5 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್‌ಬೈ ಹೇಳಿದ ಚಹಲ್‌, ಧನಶ್ರೀ – ಮುಂಬೈ ಕೋರ್ಟ್‌ನಲ್ಲಿ ಏನಾಯ್ತು?

    ಈ ಸುದ್ದಿ ಪ್ರಕಟವಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ (Social Media) ಬರುತ್ತಿದ್ದ ಚರ್ಚೆ, ಟೀಕೆಗಳನ್ನು ನೋಡಿ ಖಿನ್ನತೆಗೆ ಜಾರಿದ್ದೆ. ಕ್ರಿಕೆಟಿನಿಂದ ವಿರಾಮ ಪಡೆದರೂ ನಾನು ನಡುಗುತ್ತಿದ್ದೆ. ಎಸಿ ಆನ್‌ ಆಗಿದ್ದರೂ ಬೆವರುತ್ತಿದ್ದೆ. ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ. ಆದರೆ ಸ್ನೇಹಿತ ನನ್ನನ್ನು ತಡೆದ. ಈ ಸಮಯದಲ್ಲಿ ಎರಡೇ ಗಂಟೆ ಮಲಗುತ್ತಿದ್ದೆ.

    ಮದುವೆಯಾದ ಕೆಲ ಸಮಯದ ನಂತರ ನಮ್ಮ ನಡುವೆ ಹೊಂದಾಣಿಕೆ ಸಮಸ್ಯೆ ಕಾಣಿಸತೊಡಗಿತು. ಕ್ರಿಕೆಟ್‌ ಆಡುತ್ತಿದ್ದ ಕಾರಣ ಪತ್ನಿಗೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗುತ್ತಿರಲಿಲ್ಲ. ಅವಳು ಕೂಡ ತನ್ನ ಕೆಲಸವನ್ನು ಮಾಡುತ್ತಿದ್ದಳು, ನಮಗೆ ಹೆಚ್ಚು ಭೇಟಿಯಾಗಲು ಸಾಧ್ಯವಾಗಲಿಲ್ಲ. ಇದು 1-2 ವರ್ಷಗಳಿಂದ ಈ ರೀತಿ ನಡೆಯುತ್ತಿತ್ತು. ಇದರಿಂದಾಗಿ ಜಗಳ ಆಗುತ್ತಿತ್ತು. ಇದನ್ನೂ ಓದಿ: ಹೆಣ್ಣನ್ನ ದೂಷಿಸುವುದು ಫ್ಯಾಷನ್‌ ಆಗಿದೆ – ಬ್ಯೂಟಿ ಜೊತೆ ಚಹಲ್‌ ಡೇಟಿಂಗ್‌ ವಂದತಿ ಬೆನ್ನಲ್ಲೇ ಧನಶ್ರೀ ರಿಯಾಕ್ಷನ್‌

    ಈ ಸಂದರ್ಭದಲ್ಲಿ ನನ್ನ ಕೆಲಸದ ಸಮಯವನ್ನು ವಿಭಜಿಸಲು ಮುಂದಾದೆ. ಸಂಬಂಧದ ಬಗ್ಗೆ ಯೋಚಿಸಲು ನನಗೆ ಸಾಧ್ಯವಾಗಲಿಲ್ಲ. ನೀವು 18-20 ವರ್ಷಗಳಿಂದ ಯಾವುದನ್ನಾದರೂ ಕೆಲಸ ಮಾಡುತ್ತಿದ್ದರೆ ಅದನ್ನು ಸಂಬಂಧಕ್ಕಾಗಿ ಬಿಡಲು ಸಾಧ್ಯವಿಲ್ಲ.

    ಮದುವೆಯಾಗಿ ಮೂರು ವರ್ಷದ ನಂತರ ಪರಸ್ಪರ ಚರ್ಚಿಸಿ ವಿಚ್ಛೇದನ ನಿರ್ಧಾರ ಕೈಗೊಳ್ಳಲಾಯಿತು. ಆದರೆ ಈ ವಿಚಾರವನ್ನು ಬಹಿರಂಗ ಮಾಡುವುದು ಬೇಡ ಎಂದು ತೀರ್ಮಾನ ತೆಗೆದುಕೊಂಡಿದ್ದೆವು. ಎರಡು ವರ್ಷ ಮುಂದುವರೆಸಿಕೊಂಡು ಬಂದಿದ್ದೆವು.

    ನನ್ನ ಬಗ್ಗೆ ಯಾರು ಏನು ಬೇಕಾದರೂ ಹೇಳಬಹುದು. ನಾನು ಇಬ್ಬರು ಸಹೋದರಿಯರ ಜೊತೆಗೆ ಬೆಳೆದಿದ್ದೇನೆ. ಹೆಣ್ಣು ಮಕ್ಕಳನ್ನು ಗೌರವಿಸುವುದು ನನಗೆ ತಿಳಿದಿದೆ. ದೇವರ ದಯೆಯಿಂದ ನಾನು ಬದುಕಿದ್ದೇನೆ. ವಿಚ್ಛೇದನ ಪಡೆದ ನಂತರ ಜನರು ನನ್ನನ್ನು ಮೋಸಗಾರ ಎಂದು ಆರೋಪಿಸಿದರು. ನಾನು ನನ್ನ ಜೀವನದಲ್ಲಿ ಎಂದಿಗೂ ಮೋಸ ಮಾಡಿಲ್ಲ. ನಾನು ಆ ರೀತಿಯ ವ್ಯಕ್ತಿಯಲ್ಲ. ಜನರಿಗೆ ಏನೂ ತಿಳಿಯದ ಕಾರಣ ಅವರು ನನ್ನನ್ನು ದೂಷಿಸುತ್ತಿದ್ದರು ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ:ಬ್ಯೂಟಿ ಜೊತೆ ಚಹಲ್‌ ಫೈನಲ್‌ ಪಂದ್ಯ ವೀಕ್ಷಣೆ – ಯಾರಿದು ಯುವತಿ?

    ಭಾರತದ ಖ್ಯಾತ ಜೋಡಿಗಳಲ್ಲಿ ಒಬ್ಬರಾಗಿದ್ದ ಚಹಲ್ ಮತ್ತು ಧನಶ್ರೀ 2020ರ ಡಿಸೆಂಬರ್‌ನಲ್ಲಿ ಮದುವೆಯಾಗಿದ್ದರು. ಆ ಬಳಿಕ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಬ್ರೇಕ್ ಅಪ್‍ಗೆ ಮುಂದಾಗಿದ್ದಾರೆ ಎಂದು 2023 ರಲ್ಲಿ ಸುದ್ದಿ ಪ್ರಕಟವಾಗಿತ್ತು. ನಂತರ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ವದಂತಿಗೆ ತೆರೆ ಎಳೆದಿದ್ದರು. ಕೊರೋನಾ ಕಾಲದ ಲಾಕ್‌ಡೌನ್ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು ಧನಶ್ರೀ ಎಂದು ಹೇಳಿದ್ದರು.

    ಇಬ್ಬರೂ ಇನ್‌ಸ್ಟಾದಲ್ಲಿ ಪರಸ್ಪರ ಅನ್‌ಫಾಲೋ ಆಗಿದ್ದರು. ಆಗಲೇ ಇಬ್ಬರ ಮಧ್ಯೆ ಬಿರುಕು ಮೂಡಿದೆ ಎಂದು ವರದಿಯಾಗಿತ್ತು. ಇನ್‌ಸ್ಟಾದಲ್ಲಿ ಚಹಲ್‌ ಅವರು ಧನಶ್ರೀ ಜೊತೆಗಿನ ಫೋಟೋ ಡಿಲೀಟ್‌ ಮಾಡಿದ್ದರೆ ಧನಶ್ರೀ ಚಹಲ್‌ ಅವರೊಂದಿಗೆ ಫೋಟೋ ಡಿಲೀಟ್‌ ಮಾಡಿಲ್ಲ. ಈಗಲೂ ಧನಶ್ರೀ ಇನ್‌ಸ್ಟಾದಲ್ಲಿ ಇಬ್ಬರು ಜೊತೆಯಲ್ಲಿರುವ ಫೋಟೋಗಳನ್ನು ನೋಡಬಹುದಾಗಿದೆ.

  • ಈ ಸಲ ಆರ್‌ಸಿಬಿ ಕಪ್‌ ಗೆಲ್ಲದಿದ್ರೆ ಪತಿಗೆ ಡಿವೋರ್ಸ್‌ – ವೈರಲ್‌ ಆಯ್ತು ಅಭಿಮಾನಿಯ ಪೋಸ್ಟರ್‌

    ಈ ಸಲ ಆರ್‌ಸಿಬಿ ಕಪ್‌ ಗೆಲ್ಲದಿದ್ರೆ ಪತಿಗೆ ಡಿವೋರ್ಸ್‌ – ವೈರಲ್‌ ಆಯ್ತು ಅಭಿಮಾನಿಯ ಪೋಸ್ಟರ್‌

    ಚಂಡೀಗಢ: ಪಂಜಾಬ್‌ ಕಿಂಗ್ಸ್‌ (Punjab Kings) ವಿರುದ್ಧ ನಡೆದ 18ನೇ ಆವೃತ್ತಿಯ ಕ್ವಾಲಿಫೈಯರ್‌-1 ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಭರ್ಜರಿ ಗೆಲುವು ಕಂಡಿದೆ. ಆರಂಭದಿಂದಲೇ ಸಿಕ್ಸರ್‌, ಬೌಂಡರಿ ಬಾರಿಸುತ್ತಾ ರನ್‌ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದ ಆರ್‌ಸಿಬಿ ಇನ್ನೂ 10 ಓವರ್‌ಗಳು ಬಾಕಿಯಿರುವಾಗಲೇ ಗೆದ್ದು, ಫೈನಲ್‌ ತಲುಪಿತು.

    ಈ ನಡುವೆ ಮಹಿಳಾ ಅಭಿಮಾನಿಯೊಬ್ಬರು (RCB Women Fan) ವಿಚ್ಛೇದನದ ಕುರಿತು ವಿಶೇಷ ಭಿತ್ತಿಪತ್ರ ಪ್ರದರ್ಶಿಸಿರುವುದು ಗಮನಸೆಳೆದಿದೆ. ಹೌದು. 17 ಆವೃತ್ತಿ ಕಳೆದರೂ ಒಮ್ಮೆಯೂ ಪ್ರಶಸ್ತಿ ಗೆಲ್ಲದ ಆರ್‌ಸಿಬಿಗೆ ಅಭಿಮಾನಿಗಳ ಕೊರತೆಯಂತೂ ಆಗಿಲ್ಲ. ಆದರೀಗ ತಂಡ ಫೈನಲ್‌ಗೆ ತಲುಪಿದ್ದು, ಈ ಸಲವೂ ಟ್ರೋಫಿ ಗೆಲ್ಲದಿದ್ದರೆ ಪತಿಗೆ ವಿಚ್ಛೇದನ (Devorce) ನೀಡುವುದಾಗಿ ಮಹಿಳೆಯೊಬ್ಬರು ಸ್ಟೇಡಿಯಂನಲ್ಲಿ ಭಿತ್ತಿಪತ್ರ ಪ್ರದರ್ಶನ ಮಾಡಿರುವುದು ಕಂಡುಬಂದಿದೆ. ಇದು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಪಾದ ಮುಟ್ಟಿ ನಮಸ್ಕರಿಸಿದ ವೈಭವ್ ಸೂರ್ಯವಂಶಿ

    ಇತ್ತೀಚೆಗೆ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ನಡೆದ ಪಂದ್ಯದ ವೇಳೆಯೂ ಅಭಿಮಾನಿಯೊಬ್ಬರು ನಾನು, ಆರ್‌ಸಿಬಿ ಕಪ್‌ ಗೆಲ್ಲುವವರೆಗೆ ಮದುವೆಯಾಗೋದಿಲ್ಲ ಅಂತ ಪೋಸ್ಟರ್‌ ಹಿಡಿದುಕೊಂಡಿದ್ದರು. ಇದಕ್ಕೂ ಮುನ್ನ 2022 ಐಪಿಎಲ್‌ ಟೂರ್ನಿ ವೇಳೆಯೂ ಮಹಿಳಾ ಅಭಿಮಾನಿಯೊಬ್ಬರು ಆರ್‌ಸಿಬಿ ಕಪ್‌ ಗೆಲ್ಲೋವರೆಗೆ ನಾನು ಮದುವೆಯಾಗಲ್ಲ ಅಂತ ಪೋಸ್ಟರ್‌ ಹಿಡುಕೊಂಡಿದ್ದರು. ಆಗ ಇದು ಭಾರೀ ಟ್ರೆಂಡ್‌ ಕ್ರೆಯೆಟ್‌ ಮಾಡಿತ್ತು. ಇದನ್ನೂ ಓದಿ: RCB ಟ್ರೋಫಿ ಗೆದ್ದರೆ ಆ ದಿನವನ್ನ ʻಆರ್‌ಸಿಬಿ ಫ್ಯಾನ್ಸ್‌ ಹಬ್ಬʼದ ದಿನವನ್ನಾಗಿ ಘೋಷಿಸಿ – ಸಿಎಂಗೆ ವಿಶೇಷ ಪತ್ರ!

    ಚಂಡೀಗಢದ ಮುಲ್ಲನಪುರದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತ ಪಂಜಾಬ್‌ ಮೊದಲು ಕ್ರೀಸ್‌ಗಿಳಿದು 101 ರನ್‌ಗಳಿಗೆ ಆಲೌಟ್‌ ಆಯಿತು. 102 ರನ್‌ಗಳ ಸುಲಭಗುರಿ ಬೆನ್ನಟ್ಟಿದ ಆರ್‌ಸಿಬಿ 10 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ 106 ರನ್‌ ಬಾರಿಸಿ ಫೈನಲ್‌ಗೆ ಲಗ್ಗೆಯಿಟ್ಟಿತು. ಇದನ್ನೂ ಓದಿ: IPL: ದೊಡ್ಡ ಅಂತರದ ಗೆಲುವು ಸಾಧಿಸಿ ಇತಿಹಾಸ ಬರೆದ ಆರ್‌ಸಿಬಿ – ಕೆಕೆಆರ್‌ ರೆಕಾರ್ಡ್‌ ಉಡೀಸ್‌

  • ಕ್ರಿಕೆಟಿಗ ಚಾಹಲ್‌, ಧನಶ್ರೀ ವರ್ಮಾಗೆ ವಿಚ್ಛೇದನ ಮಂಜೂರು

    ಕ್ರಿಕೆಟಿಗ ಚಾಹಲ್‌, ಧನಶ್ರೀ ವರ್ಮಾಗೆ ವಿಚ್ಛೇದನ ಮಂಜೂರು

    – 4.75 ಕೋಟಿ ಜೀವನಾಂಶ ಕೊಡಲು ಒಪ್ಪಿದ ಕ್ರಿಕೆಟಿಗ

    ಮುಂಬೈ: ಸುದೀರ್ಘ ಕಾನೂನು ಹೋರಾಟದ ಬಳಿಕ ನೃತ್ಯ ಸಂಯೋಜಕಿ ಧನಶ್ರೀ ವರ್ಮಾ (Dhanashree Verma) ಮತ್ತು ಕ್ರಿಕೆಟಿಗ ಯಜುವೇಂದ್ರ ಚಾಹಲ್‌ (Yuzvendra Chahal) ವಿಚ್ಛೇದನ ಪಡೆದುಕೊಂಡಿದ್ದಾರೆ. ಇವರಿಬ್ಬರು ಪರಸ್ಪರ ಒಪ್ಪಿಗೆಯಿಂದ ಸಲ್ಲಿಸಿದ್ದ ವಿಚ್ಛೇದನ ಕೋರಿ ಸಲ್ಲಿಸಿದ್ದ ಜಂಟಿ ಅರ್ಜಿಯನ್ನು ಗುರುವಾರ ಬಾಂದ್ರಾ ಕೌಟುಂಬಿಕ ನ್ಯಾಯಾಲಯ ಪುರಸ್ಕರಿಸಿದೆ.

    ಇಬ್ಬರೂ ಗುರುವಾರ ಬಾಂದ್ರಾ ಕೌಟುಂಬಿಕ ನ್ಯಾಯಾಲಯದ (Bandra family court) ಮುಂದೆ ಹಾಜರಾಗಿದ್ದರು. ಈ ವೇಳೆ ಅರ್ಜಿ ಪುರಸ್ಕರಿಸಿದ ಕೋರ್ಟ್‌ ವಿಚ್ಛೇದನ ಮಂಜೂರು ಮಾಡಿ ತೀರ್ಪು ಪ್ರಕಟಿಸಿದೆ ಎಂದು ಚಾಹಲ್‌ ಪರ ವಕೀಲ ನಿತಿನ್‌ ಗುಪ್ತಾ ತಿಳಿಸಿದ್ದಾರೆ. ಇದನ್ನೂ ಓದಿ: ಐಪಿಎಲ್ 2025: ಮೊದಲ 3 ಪಂದ್ಯಗಳಿಗೆ ರಾಜಸ್ಥಾನ ರಾಯಲ್ಸ್‌ಗೆ ರಿಯಾನ್ ಪರಾಗ್ ಕ್ಯಾಪ್ಟನ್

    ಚಾಹಲ್‌ ಮತ್ತು ಧನಶ್ರೀ 2020ರ ಡಿಸೆಂಬರ್‌ನಲ್ಲಿ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2022ರ ಜೂನ್‌ನಿಂದಲೇ ಅವರು ಬೇರ್ಪಟ್ಟಿದ್ದರು. ಈ ವರ್ಷದ ಫೆ.5ರಂದು ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

    ಇದೇ ಮಾ.22ರಿಂದ ಚಾಹಲ್‌ ಅವರು ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಭಾಗವಹಿಸುತ್ತಿರುವ ಕಾರಣದಿಂದಾಗಿ ಗುರುವಾರದ ಒಳಗೆ ಅರ್ಜಿ ವಿಚಾರಣೆ ಮುಗಿಸುವಂತೆ ಬಾಂಬೆ ಹೈಕೋರ್ಟ್‌ ಬುಧವಾರ ಕೌಟುಂಬಿಕ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು. ಅದಂತೆ ಇಂದು ವಿಚ್ಛೇದನ ಅಂತಿಮಗೊಳಿಸಲಾಗಿದೆ. ಇದನ್ನೂ ಓದಿ: IPl 2025 | ರನ್‌ ಹೊಳೆ, ದಾಖಲೆಗಳ ಸುರಿಮಳೆ – ಇಲ್ಲಿದೆ ಐತಿಹಾಸಿಕ ದಾಖಲೆಗಳ ಪಟ್ಟಿ

    ಧನಶ್ರೀಗೆ ಸಿಗುವ ಜೀವನಾಂಶ ಎಷ್ಟು?
    ವಿಚ್ಛೇದನ ಬಳಿಕ ಧನಶ್ರೀ ಅವರು ಚಾಹಲ್‌ರಿಂದ ಒಟ್ಟು 4.75 ಕೋಟಿ ಜೀವನಾಂಶ ಪಡೆಯಲಿದ್ದಾರೆ. ಈಗಾಗಲೇ ಮೊದಲ ಕಂತಿನಲ್ಲಿ 2.37 ಕೋಟಿ ರೂ.ಗಳನ್ನ ಪಾವತಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಈ ಬಾರಿಯೂ ಆರ್‌ಸಿಬಿ ಬೆಂಗಳೂರು ಪಂದ್ಯಗಳ ಟಿಕೆಟ್‌ ದರ ದುಬಾರಿ

  • ಅಡ್ಡದಾರಿಯಲ್ಲಿ ನಡೆಯುವ ಬದಲು ಮೌಲ್ಯಗಳಿಗೆ ಬದ್ಧನಾಗಿರುತ್ತೇನೆ – ಡಿವೋರ್ಸ್‌ ವದಂತಿ ಬಗ್ಗೆ ಚಾಹಲ್‌ ಫಸ್ಟ್‌ ರಿಯಾಕ್ಷನ್‌

    ಅಡ್ಡದಾರಿಯಲ್ಲಿ ನಡೆಯುವ ಬದಲು ಮೌಲ್ಯಗಳಿಗೆ ಬದ್ಧನಾಗಿರುತ್ತೇನೆ – ಡಿವೋರ್ಸ್‌ ವದಂತಿ ಬಗ್ಗೆ ಚಾಹಲ್‌ ಫಸ್ಟ್‌ ರಿಯಾಕ್ಷನ್‌

    ‌ಮುಂಬೈ: ಟೀಂ ಇಂಡಿಯಾದ ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ (Yuzvendra Chahal) ಅವರು ಪತ್ನಿ ಧನಶ್ರೀ ವರ್ಮಾಗೆ (Dhanashree Verma) ಡಿವೋರ್ಸ್‌ ಕೊಡಲಿದ್ದಾರೆ ಎಂಬ ವದಂತಿ ಬಗ್ಗೆ ಧನಶ್ರೀ ವರ್ಮಾ ಅವರು ಪೋಸ್ಟ್‌ ಹಂಚಿಕೊಂಡ ಬೆನ್ನಲ್ಲೇ ಪತಿ ಚಾಹಲ್‌ ಸಹ ಮೌನ ಮುರಿದಿದ್ದಾರೆ.

    ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಚಾಹಲ್‌ ಊಹಾಪೋಹ ಹರಡದಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ – ಡಿವೋರ್ಸ್‌ ವದಂತಿ ಬೆನ್ನಲ್ಲೇ ಮೌನ ಮುರಿದ ಧನಶ್ರೀ

    ಚಾಹಲ್‌ ಇನ್‌ಸ್ಟಾದಲ್ಲಿ ಏನಿದೆ?
    ನನ್ನ ಎಲ್ಲಾ ಅಭಿಮಾನಿಗಳ ಅಚಲ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಅಭಿಮಾನಿಗಳ ಬೆಂಬಲ ಇಲ್ಲದೇ ಇದ್ದಿದ್ದರೆ ನಾನು ಇಲ್ಲಿಯವರೆಗೆ ಬರುತ್ತಿರಲಿಲ್ಲ. ಆದ್ರೆ ಪ್ರಯಾಣ ಇಲ್ಲಿಗೇ ಮುಗಿಯುವುದಿಲ್ಲ. ಒಬ್ಬ ಕ್ರೀಡಾಪಟುವಾಗಿ ಇನ್ನೂ ನನ್ನ ದೇಶ, ನನ್ನ ತಂಡ ಹಾಗೂ ನನ್ನ ಎಲ್ಲ ಅಭಿಮಾನಿಗಳಿಗಾಗಿ ಅದ್ಭುತ ಓವರ್‌ಗಳು ಬಾಕಿ ಉಳಿದಿವೆ. ಆದ್ರೆ ಇತ್ತೀಚೆಗೆ ನಡೆಯುತ್ತಿರುವ ಘಟನೆಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಅದರಲ್ಲೂ ನನ್ನ ವೈಯಕ್ತಿಕ ಜೀವನದ ಬಗ್ಗೆ ಜಾಲತಾಣದಲ್ಲಿ ಕಾಮೆಂಟ್‌ಗಳು ಹರಿದಾಡುತ್ತಿವೆ. ಅದರಲ್ಲಿ ಸತ್ಯವಾಗಿರಬಹುದಾದ ಮತ್ತು ಸತ್ಯವಲ್ಲದ ವಿಷಯಗಳ ವದಂತಿ ಹರಿದಾಡುತ್ತಿರುವುದನ್ನು ನಾನು ಗಮನಿಸಿದ್ದೇನೆ. ಇದನ್ನೂ ಓದಿ:  ಕೊಡಗಿನಲ್ಲಿ ತಲೆ ಎತ್ತಲಿದೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ

    ನಾನು ಒಬ್ಬ ಮಗ, ಸಹೋದರ ಹಾಗೂ ಸ್ನೇಹಿತನಾಗಿ ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಯಾರೂ ಊಹಾಪೋಹಗಳಲ್ಲಿ ತೊಡಗಬೇಡಿ. ಇಂತಹ ಊಹಾಪೋಹಳಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ತುಂಬಾನೆ ನೋವಾಗಿದೆ. ನನ್ನ ಕುಟುಂಬ ಎಲ್ಲರಿಗೂ ಒಳ್ಳೆಯದನ್ನೇ ಬಯಸಲು ಕಲಿಸಿದೆ, ಕಠಿಣ ಪರಿಶ್ರಮದಿಂದ ಯಶಸ್ಸು ಗಳಿಸುವುದನ್ನೇ ಕಲಿಸಿದೆ. ಹಾಗಾಗಿ ಜೀವನದಲ್ಲಿ ಅಡ್ಡದಾರಿಯಲ್ಲಿ ಸಾಗುವ ಬದಲು ನಾನು ನನ್ನ ಮೌಲ್ಯಗಳಿಗೆ ಬದ್ಧನಾಗಿರುತ್ತೇನೆ. ದೇವರ ಆಶೀರ್ವಾದದೊಂದಿಗೆ ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲ ಪಡೆಯಲು ನಾನು ಶಾಶ್ವತವಾಗಿ ಶ್ರಮಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಧನಶ್ರೀ ವರ್ಮಾ ಹೇಳಿದ್ದೇನು?
    ನಾನು, ನನ್ನ ಕುಟುಂಬದ ಸದಸ್ಯರು ಕಳೆದ ಕೆಲ ದಿನಗಳಿಂದ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಕೆಲವರು ಸತ್ಯ ತಿಳಿಯದೇ ಸುಳ್ಳು ಸುಳ್ಳನ್ನೇ ಬರೆಯುತ್ತಿದ್ದಾರೆ. ನನ್ನ ಖ್ಯಾತಿಗೆ ಕಳಂಕ ತರಲು ಆಧಾರರಹಿತ ಬರವಣಿಗೆ, ಸತ್ಯ-ಪರಿಶೋಧವಿಲ್ಲದ ಬರಹಗಳು ಮತ್ತು ದ್ವೇಷ ಹರಡುವ ಟ್ರೋಲ್‌ಗಳನ್ನು ಮಾಡುತ್ತಿದ್ದಾರೆ. ಹಲವು ವರ್ಷಗಳ ಕಾಲ ಶ್ರಮಿಸಿದ ನಂತರವೇ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ನಾನು ಮೌನವಾಗಿದ್ದ ಮಾತ್ರಕ್ಕೆ, ಅದು ನನ್ನ ದೌರ್ಬಲ್ಯ ಎಂದು ಭಾವಿಸಬೇಡಿ ಎಂದಿದ್ದರು.

    ಮುಂದುವರಿದು… ಇತರರಿಗೆ ಸಹಾನುಭೂತಿ ತೋರಿಸಲು ಧೈರ್ಯ ಬೇಕು. ನೈಜ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಮೌಲ್ಯಗಳೊಂದಿಗೆ ಮುಂದುವರಿಯುವುದರಲ್ಲಿ ನಾನು ನಂಬಿಕೆ ಇಡುತ್ತೇನೆ. ಇಲ್ಲಿ ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ. ನಾನು ನನ್ನ ಸತ್ಯದ ಮೇಲೆ ಕೇಂದ್ರೀಕರಿಸಲು ಮತ್ತು ನನ್ನ ಮೌಲ್ಯಗಳನ್ನು ಹಿಡಿದಿಟ್ಟುಕೊಂಡು ಮುಂದುವರಿಯುವುದನ್ನು ಆಯ್ಕೆ ಮಾಡುತ್ತೇನೆ. ಯಾವುದೇ ಸಾಕ್ಷ್ಯಗಳಿಲ್ಲಿದ್ರೂ ಸತ್ಯವು ಅದರ ಸ್ಥಾನದಲ್ಲಿ ದೃಢವಾಗಿ ನಿಂತಿದೆ. ಓಂ ನಮಃ ಶಿವಾಯ ಎಂದು ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು.

    ಸದ್ಯ ಚಾಹಲ್‌ ಹಾಗೂ ಧನಶ್ರೀ ಇಬ್ಬರೂ ವದಂತಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆಯೇ ಹೊರತು, ವೈವಾಹಿಕ ಜೀವನದಲ್ಲಿ ಜೊತೆಗೆ ಮುಂದುವರಿಯುವ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಹಾಗಾಗಿ ಚಹಲ್‌-ಧನಶ್ರೀ ಅವರ ಈ ಪೋಸ್ಟ್‌ ಮತ್ತಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ.

  • ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ – ಡಿವೋರ್ಸ್‌ ವದಂತಿ ಬೆನ್ನಲ್ಲೇ ಮೌನ ಮುರಿದ ಧನಶ್ರೀ

    ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ – ಡಿವೋರ್ಸ್‌ ವದಂತಿ ಬೆನ್ನಲ್ಲೇ ಮೌನ ಮುರಿದ ಧನಶ್ರೀ

    ಮುಂಬೈ: ಟೀಂ ಇಂಡಿಯಾ ಸ್ಟಾರ್ ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಹಲ್‌ (Yuzvendra Chahal) ಅವರು ಪತ್ನಿ ಧನಶ್ರೀ ವರ್ಮಾಗೆ (Dhanashree Verma) ಡಿವೋರ್ಸ್‌ ಕೊಡಲಿದ್ದಾರೆ ಎಂಬ ವದಂತಿ ಬಗ್ಗೆ ಧನಶ್ರೀ ಮೌನ ಮುರಿದಿದ್ದಾರೆ.

    2020ರ ಡಿಸೆಂಬರ್‌ 22ರಂದು ಉತ್ತರ ಪ್ರದೇಶದ ಗುರುಗ್ರಾಮ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಚಹಲ್‌-ಧನಶ್ರೀ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ವದಂತಿ ಜಾಲತಾಣದಲ್ಲಿ ಸದ್ದು ಮಾಡುತ್ತಲೇ ಇತ್ತು. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಧನಶ್ರೀ ವಂದತಿ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಡಿವೋರ್ಸ್‌ ಆದ್ರೆ ಚಹಲ್‌ ಧನಶ್ರೀಗೆ ಎಷ್ಟು ಜೀವನಾಂಶ ಕೊಡಬೇಕು? ಇಬ್ಬರ ಸಂಪತ್ತು ಎಷ್ಟಿದೆ?

    ನಾನು, ನನ್ನ ಕುಟುಂಬದ ಸದಸ್ಯರು ಕಳೆದ ಕೆಲ ದಿನಗಳಿಂದ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಕೆಲವರು ಸತ್ಯ ತಿಳಿಯದೇ ಸುಳ್ಳು ಸುಳ್ಳನ್ನೇ ಬರೆಯುತ್ತಿದ್ದಾರೆ. ನನ್ನ ಖ್ಯಾತಿಗೆ ಕಳಂಕ ತರಲು ಆಧಾರರಹಿತ ಬರವಣಿಗೆ, ಸತ್ಯ-ಪರಿಶೋಧವಿಲ್ಲದ ಬರಹಗಳು ಮತ್ತು ದ್ವೇಷ ಹರಡುವ ಟ್ರೋಲ್‌ಗಳನ್ನು ಮಾಡುತ್ತಿದ್ದಾರೆ. ಹಲವು ವರ್ಷಗಳ ಕಾಲ ಶ್ರಮಿಸಿದ ನಂತರವೇ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ನಾನು ಮೌನವಾಗಿದ್ದ ಮಾತ್ರಕ್ಕೆ, ಅದು ನನ್ನ ದೌರ್ಬಲ್ಯ ಎಂದು ಭಾವಿಸಬೇಡಿ ಎಂದಿದ್ದಾರೆ. ಇದನ್ನೂ ಓದಿ: ಚಹಲ್‌, ಧನಶ್ರೀ ದಾಂಪತ್ಯದಲ್ಲಿ ಬಿರುಕು – ಮದ್ವೆಯಾಗಿ 4 ವರ್ಷದ ಬಳಿಕ ಡಿವೋರ್ಸ್?

    ಮುಂದುವರಿದು… ಇತರರಿಗೆ ಸಹಾನುಭೂತಿ ತೋರಿಸಲು ಧೈರ್ಯ ಬೇಕು. ನೈಜ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಮೌಲ್ಯಗಳೊಂದಿಗೆ ಮುಂದುವರಿಯುವುದರಲ್ಲಿ ನಾನು ನಂಬಿಕೆ ಇಡುತ್ತೇನೆ. ಇಲ್ಲಿ ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ. ನಾನು ನನ್ನ ಸತ್ಯದ ಮೇಲೆ ಕೇಂದ್ರೀಕರಿಸಲು ಮತ್ತು ನನ್ನ ಮೌಲ್ಯಗಳನ್ನು ಹಿಡಿದಿಟ್ಟುಕೊಂಡು ಮುಂದುವರಿಯುವುದನ್ನು ಆಯ್ಕೆ ಮಾಡುತ್ತೇನೆ. ಯಾವುದೇ ಸಾಕ್ಷ್ಯಗಳಿಲ್ಲಿದ್ರೂ ಸತ್ಯವು ಅದರ ಸ್ಥಾನದಲ್ಲಿ ದೃಢವಾಗಿ ನಿಂತಿದೆ. ಓಂ ನಮಃ ಶಿವಾಯ ಎಂದು ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

    ಧನಶ್ರೀ ಅವರ ಈ ಪೋಸ್ಟ್‌ ಬಳಿಕ ಇನ್ನಷ್ಟು ಚರ್ಚೆಗಳು ಹುಟ್ಟಿಕೊಂಡಿವೆ. ಏಕೆಂದರೆ ಈ ಪೋಸ್ಟ್‌ನಲ್ಲಿ ಚಹಲ್‌ ಜೊತೆಗಿನ ಸಂಬಂಧ ಮುಂದುವರಿಸುವುದಾಗಿ ಅವರು ಸ್ಪಷ್ಟನೆ ನೀಡಿಲ್ಲ. ಚಹಲ್‌ ಹೆಸರನ್ನೂ ಪ್ರಸ್ತಾಪಿಸಿಲ್ಲ ಎಂದು ನೆಟ್ಟಿಗರು ಚರ್ಚಿಸಿದ್ದಾರೆ.

  • ಡಿವೋರ್ಸ್‌ ಆದ್ರೆ ಚಹಲ್‌ ಧನಶ್ರೀಗೆ ಎಷ್ಟು ಜೀವನಾಂಶ ಕೊಡಬೇಕು? ಇಬ್ಬರ ಸಂಪತ್ತು ಎಷ್ಟಿದೆ?

    ಡಿವೋರ್ಸ್‌ ಆದ್ರೆ ಚಹಲ್‌ ಧನಶ್ರೀಗೆ ಎಷ್ಟು ಜೀವನಾಂಶ ಕೊಡಬೇಕು? ಇಬ್ಬರ ಸಂಪತ್ತು ಎಷ್ಟಿದೆ?

    ಮುಂಬೈ: ಭಾರತ ಖ್ಯಾತ ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಹಲ್‌ (Yuzvendra Chahal) ಅವರು ಪತ್ನಿ ಧನಶ್ರೀ ವರ್ಮಾಗೆ (Dhanashree Verma) ಡಿವೋರ್ಸ್‌ ಕೊಡಲಿದ್ದಾರೆ ಎಂಬ ವದಂತಿ ಸುದ್ದಿಗಳು ಪ್ರಕಟವಾಗುತ್ತಿದೆ. ಈ ಸುದ್ದಿ ಒಂದು ವೇಳೆ ನಿಜವಾಗಿ ಕೋರ್ಟ್‌ ಮೂಲಕ ವಿಚ್ಛೇದನ (Divorce) ಪಡೆದರೆ ಚಹಲ್‌ ಧನಶ್ರೀ ಅವರಿಗೆ ಭಾರೀ ಜೀವನಾಂಶ (Alimony) ನೀಡಬೇಕಾಗುತ್ತದೆ.

    ಚಹಲ್‌ ಆಸ್ತಿ ಎಷ್ಟಿದೆ?
    ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ ದೇಶಕ್ಕಾಗಿ 200 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವ ಚಹಲ್‌ ಟೀಂ ಇಂಡಿಯಾದ ಟಾಪ್‌ ಬೌಲರ್‌ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಚಹಲ್‌ 160 ಐಪಿಎಲ್‌ (IPL) ಪಂದ್ಯವಾಡಿ 22.44 ರ ಸರಾಸರಿಯಲ್ಲಿ 205 ವಿಕೆಟ್ ಪಡೆದಿದ್ದಾರೆ.

    2024ರ ಆವೃತ್ತಿಯಲ್ಲಿ ಚಹಲ್‌ ರಾಜಸ್ಥಾನ ರಾಯಲ್ಸ್‌ ಪರ ಆಡಿದ್ದರು. ಈ ವೇಳೆ ಅವರಿಗೆ 6.5 ಕೋಟಿ ರೂ. ನೀಡಿತ್ತು. ಐಪಿಎಲ್ 2025 ರ ಮೆಗಾ ಹರಾಜಿಗೆ ಮೊದಲು ಚಹಲ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡ ಕೈಬಿಟ್ಟಿತ್ತು. ನಂತರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಪಂಜಾಬ್‌ ಕಿಂಗ್ಸ್‌ 18 ಕೋಟಿ ರೂ. ನೀಡಿ ಚಹಲ್‌ ಅವರನ್ನು ಖರೀದಿಸಿತ್ತು.

    ಚಾಹಲ್ ಅವರು 2019 ರಲ್ಲಿ ಜೀವನಶೈಲಿ ಬ್ರ್ಯಾಂಡ್ ‘ಚೆಕ್ಮೇಟ್’ ಅನ್ನು ಪ್ರಾರಂಭಿಸಿದ್ದರು. ಅಷ್ಟೇ ಅಲ್ಲದೇ ಅವರು ಫಿಟ್‌ನೆಸ್ ಅಪ್ಲಿಕೇಶನ್ ʼಗ್ರಿಪ್ʼ ಮತ್ತು ʼYUZOʼ ಬಟ್ಟೆ ಲೈನ್‌ನಲ್ಲಿ ಪಾಲನ್ನು ಹೊಂದಿದ್ದಾರೆ. ಚಹಲ್‌ ಪೋರ್ಷೆ ಕೆಯೆನ್ನೆ ಎಸ್, ಮರ್ಸಿಡಿಸ್ ಬೆಂಜ್ ಸಿ-ಕ್ಲಾಸ್, ಲಂಬೋರ್ಘಿನಿ ಸೆಂಟೆನಾರಿಯೊ ಮತ್ತು ರೋಲ್ಸ್ ರಾಯ್ಸ್ ಸೇರಿದಂತೆ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

    ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳಿಂದ ಉತ್ತಮ ಮೊತ್ತವನ್ನು ಪಡೆಯುತ್ತಿರುವ ಚಹಲ್‌ ಅವರ ನಿವ್ವಳ ಮೌಲ್ಯ ಸುಮಾರು 45 ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ:ಚಹಲ್‌, ಧನಶ್ರೀ ದಾಂಪತ್ಯದಲ್ಲಿ ಬಿರುಕು – ಮದ್ವೆಯಾಗಿ 4 ವರ್ಷದ ಬಳಿಕ ಡಿವೋರ್ಸ್?

    ಒಂದು ವೇಳೆ ಅಧಿಕೃತವಾಗಿ ಕೋರ್ಟ್‌ ಮೂಲಕ ಧನಶ್ರೀಗೆ ಡಿವೋರ್ಸ್‌ ನೀಡಿದರೆ ಚಹಲ್‌ ಅವರು ತಮ್ಮ ಸಂಪತ್ತಿನ 20% ರಿಂದ 30% ವರೆಗಿನ ಪಾಲನ್ನು ನೀಡಬೇಕಾಗಬಹುದು. ಎಷ್ಟು ಜೀವನಾಂಶ ನೀಡಬೇಕು ಎಂಬುದನ್ನು ಕೋರ್ಟ್‌ ನಿರ್ಧರಿಸಲಿದೆ.

    ಧನಶ್ರೀ ಅಸ್ತಿ ಎಷ್ಟಿದೆ?
    ನೃತ್ಯ ಸಂಯೋಜನೆ, ಬ್ರಾಂಡ್ ಪ್ರಚಾರ, ಸೋಶಿಯಲ್‌ ಮೀಡಿಯಾಗಳಿಂದ ಧನಶ್ರೀ ಆದಾಯ ಸಂಪಾದಿಸುತ್ತಿದ್ದಾರೆ. ಮಾಧ್ಯಮವೊಂದರ ಪ್ರಕಾರ ಧನಶ್ರೀ ಅವರು ಅಂದಾಜು 25 ಕೋಟಿ ರೂ. ಮೌಲ್ಯದ ಸಂಪತ್ತು ಹೊಂದಿದ್ದಾರೆ.

  • ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು: ಡಿವೋರ್ಸ್ ಬಗ್ಗೆ ಎ.ಆರ್. ರೆಹಮಾನ್ ರಿಯಾಕ್ಷನ್

    ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು: ಡಿವೋರ್ಸ್ ಬಗ್ಗೆ ಎ.ಆರ್. ರೆಹಮಾನ್ ರಿಯಾಕ್ಷನ್

    ಖ್ಯಾತ ಸಂಗೀತ ಸಂಯೋಜಕ, ಗಾಯಕ ಎ.ಆರ್. ರೆಹಮಾನ್ (A.R. Rahman) ಮತ್ತು ಸಾಯಿರಾ ಬಾನು (Saira Banu) 29 ವರ್ಷಗಳ ದಾಂಪತ್ಯಕ್ಕೆ (Divorce) ಅಂತ್ಯ ಹಾಡಿದ್ದಾರೆ. ಡಿವೋರ್ಸ್ ಕುರಿತು ನಿನ್ನೆ (ನ.19) ಅಧಿಕೃತವಾಗಿ ಸಾಯಿರಾ ಖಚಿತಪಡಿಸಿದ್ದರು. ಇದೀಗ ಎ.ಆರ್. ರೆಹಮಾನ್ ಅವರು ವಿಚ್ಛೇದನ ಕುರಿತು ಮೌನ ಮುರಿದ್ದಾರೆ.  ಇದನ್ನೂ ಓದಿ:ಬಹುಕಾಲದ ಗೆಳೆಯನ ಜೊತೆ ಮದುವೆಗೆ ರೆಡಿಯಾದ್ರಾ ಕೀರ್ತಿ ಸುರೇಶ್?- ಫೋಟೋ ವೈರಲ್

    ಸೋಶಿಯಲ್ ಮೀಡಿಯಾದಲ್ಲಿ ಎ.ಆರ್. ರೆಹಮಾನ್ ಪ್ರತಿಕ್ರಿಯಿಸಿ, ನಾವು ಇನ್ನೇನು 30 ವರ್ಷಗಳ ದಾಂಪತ್ಯಕ್ಕೆ ಕಾಲಿಡಬೇಕಿತ್ತು. ಆದರೆ, ಯಾರೂ ಊಹಿಸದ ಅಂತ್ಯ ಸಿಕ್ಕಿದೆ. ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು. ಆದರೂ, ಈ ಚೂರಾದ ಸಂಬಂಧದಲ್ಲೂ ನಾವು ಅರ್ಥವನ್ನು ಹುಡುಕುತ್ತೇವೆ. ಒಡೆದ ತುಣುಕುಗಳು ಮತ್ತೆ ಎಂದಿಗೂ ಒಂದಾಗಲಾರದು. ನಮ್ಮ ಖಾಸಗಿತನ ಗೌರವಿಸಿದ ಗೆಳೆಯರಿಗೆ ಧನ್ಯವಾದ ಎಂದಿದ್ದಾರೆ.

    ಅಂದಹಾಗೆ, ಈ ನಿರ್ಧಾರವು ಅವರ ಸಂಬಂಧದಲ್ಲಿ ಗಮನಾರ್ಹವಾದ ಭಾವನಾತ್ಮಕ ಒತ್ತಡದ ನಂತರ ಬಂದಿದೆ. ಒಬ್ಬರಿಗೊಬ್ಬರು ಆಳವಾದ ಪ್ರೀತಿಯ ಹೊರತಾಗಿಯೂ, ಉದ್ವಿಗ್ನತೆ ಮತ್ತು ತೊಂದರೆಗಳು ತಮ್ಮ ನಡುವೆ ದುಸ್ತರವಾದ ಅಂತರವನ್ನು ಸೃಷ್ಟಿಸಿವೆ ಎಂದು ಸಾಯಿರಾ ಬಾನು ಅವರು ದಾಂಪತ್ಯ ಅಂತ್ಯವಾಗಿರುವ ಬಗ್ಗೆ ಖಚಿತಪಡಿಸಿದ್ದರು.

    ಎ.ಆರ್.ರೆಹಮಾನ್ ಅವರು 1995ರಲ್ಲಿ ಸಾಯಿರಾ ಬಾನು ಅವರೊಂದಿಗೆ ವಿವಾಹವಾಗಿದ್ದರು. ದಂಪತಿಗೆ ಖತೀಜಾ, ರಹೀಮಾ ಮತ್ತು ಅಮೀನ್ ಎಂಬ ಮೂವರು ಮಕ್ಕಳಿದ್ದಾರೆ.

  • ಗಾಯಕಿ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದಾರಾ ಜಯಂ ರವಿ?- ಸ್ಪಷ್ಟನೆ ನೀಡಿದ ನಟ

    ಗಾಯಕಿ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದಾರಾ ಜಯಂ ರವಿ?- ಸ್ಪಷ್ಟನೆ ನೀಡಿದ ನಟ

    ಮಿಳು ನಟ ಜಯಂ ರವಿ (Jayam Ravi) ಇತ್ತೀಚೆಗೆ ಆರತಿ (Aarati) ಜೊತೆಗಿನ 15 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದರು. ಈ ಬೆನ್ನಲ್ಲೇ ಅವರ ಡಿವೋರ್ಸ್‌ಗೆ ಕಾರಣವೇನು ಎಂಬುದರ ಬಗ್ಗೆ ಫ್ಯಾನ್ಸ್‌ ತಲೆಕೆಡಿಸಿಕೊಂಡಿದ್ದರು. ಗಾಯಕಿ ಕೆನಿಷಾ (Kenishaa Francis) ಜೊತೆ ಜಯಂ ರವಿ ಸಂಬಂಧದಲ್ಲಿದ್ದಾರೆ ಎಂದು ಗುಸು ಗುಸು ಶುರುವಾಗಿತ್ತು. ಇದಕ್ಕೆ ನಟ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಡಿವೋರ್ಸ್ ವಿಚಾರದಲ್ಲಿ ಕೆನಿಷಾರನ್ನು ಎಳೆಯಬೇಡಿ ಎಂದು ಜಯಂ ರವಿ ಗರಂ ಆಗಿದ್ದಾರೆ.

    ಸಿನಿಮಾವೊಂದರ ಪ್ರಚಾರ ಕಾರ್ಯದಲ್ಲಿ ಜಯಂ ರವಿ ಅವರು ಕೆನಿಷಾ ಜೊತೆಗಿನ ರಿಲೇಷನ್‌ಶಿಪ್ ಕುರಿತು ಪ್ರತಿಕ್ರಿಯಿಸಿ, ಬದುಕಿ ಮತ್ತು ಬದಕಲು ಬಿಡಿ. ನನ್ನ ಡಿವೋರ್ಸ್ ವಿಚಾರದಲ್ಲಿ ಅವರನ್ನು ಎಳೆಯಬೇಡಿ. ವೈಯಕ್ತಿಕ ಬದುಕು ವೈಯಕ್ತಿಕವಾಗಿಯೇ ಇರಲಿ, ಕೆನಿಷಾ ವೃತ್ತಿರಂಗದಲ್ಲಿ ಕಷ್ಟಪಟ್ಟು ಮೇಲಕ್ಕೆ ಬಂದಿದ್ದಾರೆ. ಅವರು 600ಕ್ಕೂ ಹೆಚ್ಚು ಸ್ಟೇಜ್‌ ಶೋ ನೀಡಿದ್ದಾರೆ ಎಂದರು. ಇದನ್ನೂ ಓದಿ:ಹರ್ಷಿಕಾ ಬೇಬಿ ಶವರ್ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ಸೆಲೆಬ್ರಿಟಿಸ್

    ಕೆನಿಷಾ ಮನೋವೈದ್ಯೆ ಕೂಡ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಅವರೊಂದಿಗೆ ಹೀಲಿಂಗ್ ಸೆಂಟರ್ ಆರಂಭಿಸುವ ಯೋಜನೆಯಿದೆ ಎಂದು ಹೇಳಿದ್ದಾರೆ. ಅದನ್ನು ತಡೆಯಲು ಯಾರೋ ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದರು. ಆದರೆ ಹಾಗೆ ಮಾಡುವುದು ತಪ್ಪು. ಇದಕ್ಕೆ ಕಾನೂನು ಹೋರಾಟದ ಮೂಲಕ ಸೂಕ್ತ ನ್ಯಾಯ ಸಿಗುತ್ತದೆ ಎಂದು ನಂಬಿದ್ದೇನೆ ಎಂದು ಜಯಂ ರವಿ ಮಾತನಾಡಿದರು.

    ಆರತಿಗೆ ಡಿವೋರ್ಸ್ ವಿಚಾರ ಗೊತ್ತಿರಲಿಲ್ಲ ಎಂಬುದಕ್ಕೆ ಲಾಜಿಕ್ ಇಲ್ಲ, ನಾನು ಈಗಾಗಲೇ 2 ಬಾರಿ ಅವರಿಗೆ ನೋಟಿಸ್ ಕಳುಹಿಸಿದ್ದೇನೆ. ಅದಕ್ಕೆ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಇಷ್ಟೇಲ್ಲಾ ಆದ್ಮೇಲೆ ನನಗೆ ಗೊತ್ತಿಲ್ಲ ಎಂದು ಹೇಳಿರುವುದು ನನಗೆ ಅಚ್ಚರಿ ಮೂಡಿಸಿದೆ ಎಂದಿದ್ದಾರೆ. ಮಕ್ಕಳಿಗಾಗಿ ಶಾಂತವಾಗಿದ್ದೇನೆ. ಕಾನೂನುಬದ್ಧವಾಗಿ ಹೋಗುತ್ತೇನೆ ಎಂದು ನಟ ಮಾತನಾಡಿದ್ದಾರೆ.

  • ಇನ್‌ಸ್ಟಾದಲ್ಲಿ ತಲಾಕ್ ಕೊಟ್ಟಿದ್ದ ದುಬೈ ರಾಜಕುಮಾರಿಯಿಂದ `ಡಿವೋರ್ಸ್’ ಪರ್ಫ್ಯೂಮ್ ಬಿಡುಗಡೆ

    ಇನ್‌ಸ್ಟಾದಲ್ಲಿ ತಲಾಕ್ ಕೊಟ್ಟಿದ್ದ ದುಬೈ ರಾಜಕುಮಾರಿಯಿಂದ `ಡಿವೋರ್ಸ್’ ಪರ್ಫ್ಯೂಮ್ ಬಿಡುಗಡೆ

    ಅಬುಧಾಬಿ: ಗಂಡನಿಗೆ ಇನ್‌ಸ್ಟಾಗ್ರಾಂನಲ್ಲೇ ವಿಚ್ಛೇದನ ನೀಡಿದ್ದ ದುಬೈ(Dubai) ರಾಜಕುಮಾರಿ ಶೇಖ್ ಮಹ್ರಾ ಅಲ್ಮ್ ಮಕ್ತೌಮ್ (Sheikha Mahra Al Maktoum) ಈಗ ಸುಗಂಧ ದ್ರವ್ಯ (Perfume) ಬಿಡುಗಡೆ ಮಾಡಿ ಸುದ್ದಿಯಾಗಿದ್ದಾರೆ.

    ದುಬೈ ರಾಜಕುಮಾರಿ ಶೇಖ್ ಮಹ್ರಾ ತನ್ನ ಗಂಡ ಶೇಖ್ ಮನ ಅಲ್ ಮಕ್ತೌಮ್ (Sheikh Mana Al Maktoum) ಅವರಿಗೆ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ತ್ರಿವಳಿ ತಲಾಖ್ ಹೇಳಿದ್ದರು. ಗಂಡನ ದಾಂಪತ್ಯ ದ್ರೋಹವೇ ವಿಚ್ಛೇದನ ನೀಡಲು ಕಾರಣ ಎಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದರು. ಇದನ್ನೂ ಓದಿ: Mysuru| ಕಲುಷಿತ ನೀರು ಸೇವನೆ ಶಂಕೆ- ಓರ್ವ ಸಾವು, 12 ಜನ ಅಸ್ವಸ್ಥ

    ಪೋಸ್ಟ್ ನಲ್ಲಿ, ಆತ್ಮೀಯ ಪತಿ, ನೀವು ಬೇರೆ ಸಂಬಂಧ ಹೊಂದಿರುವುದರಿಂದ ನಾನು ನಿಮಗೆ ವಿಚ್ಛೇದನ ನೀಡುತ್ತಿದ್ದೇನೆ ಇಂತಿ ನಿಮ್ಮ ಮಾಜಿ ಹೆಂಡತಿ ಎಂದು ಬರೆದುಕೊಂಡಿದ್ದು, ಇದೀಗ ರಾಜಕುಮಾರಿ ಹೊಸ ಪರ್ಫ್ಯೂಮ್ ಒಂದನ್ನು ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಕೇಸ್‌ – ಪ್ರಜ್ವಲ್‌ ರೇವಣ್ಣಗೆ ಸೀರೆ ಸಂಕಷ್ಟ!

    `ಡಿವೋರ್ಸ್’ (Divorce) ಹೆಸರಿನ ಸುಗಂಧ ದ್ರವ್ಯ ಬಾಟಲಿ ಚಿತ್ರ ಹಾಕಿ ವಿಡಿಯೋ ಹಂಚಿಕೊಂಡಿದ್ದಾರೆ.

    2023ರಲ್ಲಿ ಇವರಿಗೆ ವಿವಾಹವಾಗಿದ್ದು, ಒಂದು ವರ್ಷದ ಬಳಿಕ ಹೆಣ್ಣು ಮಗುವಿಗೆ ಜನ್ಮ ನೀಡಿ ಮಗು ಹುಟ್ಟಿದ 2 ತಿಂಗಳ ಬಳಿಕ ಗಂಡನಿಗೆ ವಿಚ್ಛೇದನ ನೀಡಿದ್ದಾರೆ. ಇದನ್ನೂ ಓದಿ: ರಾಯಚೂರು| ತರಗತಿಯಲ್ಲಿ ಲೋ ಬಿಪಿಯಿಂದ ಕುಸಿದು ಬಿದ್ದ ವಿದ್ಯಾರ್ಥಿ – ಹೃದಯಾಘಾತದಿಂದ ಸಾವು

  • 15 ವರ್ಷಗಳ ದಾಂಪತ್ಯಕ್ಕೆ ಅಂತ್ಯ- ಡಿವೋರ್ಸ್ ಬಗ್ಗೆ ಅಧಿಕೃತವಾಗಿ ತಿಳಿಸಿದ ಜಯಂ ರವಿ

    15 ವರ್ಷಗಳ ದಾಂಪತ್ಯಕ್ಕೆ ಅಂತ್ಯ- ಡಿವೋರ್ಸ್ ಬಗ್ಗೆ ಅಧಿಕೃತವಾಗಿ ತಿಳಿಸಿದ ಜಯಂ ರವಿ

    ಕಾಲಿವುಡ್ ನಟ ಜಯಂ ರವಿ (Actor Jayam Ravi) ಅವರ ವೈವಾಹಿಕ ಬದುಕಿನಲ್ಲಿ ಬಿರುಕಾಗಿದೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಚರ್ಚೆ ಗ್ರಾಸವಾಗಿತ್ತು. ಇದೀಗ 15 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿರೋದಾಗಿ ಇಂದು (ಸೆ.9) ಸ್ವತಃ ನಟ ಜಯಂ ರವಿ ಸೋಶಿಯಲ್‌ ಮೀಡಿಯಾದಲ್ಲಿ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ:‘ಭೂತ್ ಬಂಗ್ಲಾ’ ಕಥೆ ಹೇಳಲು ಸಜ್ಜಾದ ಅಕ್ಷಯ್ ಕುಮಾರ್

    ಬಹಳ ಯೋಚನೆ ಮತ್ತು ಚರ್ಚೆಗಳ ನಂತರ ಆರತಿ (Aarati) ಜೊತೆಗಿನ ನನ್ನ ವಿವಾಹ ಸಂಬಂಧಕ್ಕೆ ಡಿವೋರ್ಸ್ ನೀಡುವ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಈ ನಿರ್ಧಾರವನ್ನು ತರಾತುರಿಯಿಂದ ಮಾಡಿಲ್ಲ ಎಂದು ನಟ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಈ ಸಮಯದಲ್ಲಿ ನಮ್ಮ ಮತ್ತು ಕುಟುಂಬದ ಗೌಪ್ಯತೆಯನ್ನು ಗೌರವಿಸಲು ನಾನು ನಿಮ್ಮೆಲ್ಲರನ್ನು ಕೇಳಿಕೊಳ್ಳುತ್ತೇನೆ. ಈ ನಿಟ್ಟಿನಲ್ಲಿ ಯಾವುದೇ ಊಹೆಗಳು, ವದಂತಿಗಳು, ಅಥವಾ ಆರೋಪಗಳನ್ನು ಮಾಡದಂತೆ ನಿಮ್ಮೆಲ್ಲರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಜೊತೆಗೆ ಈ ವಿಷಯವು ಖಾಸಗಿಯಾಗಿ ಉಳಿಯಲಿ ಎಂದು ನಟ ತಿಳಿಸಿದ್ದಾರೆ.

    ನನ್ನ ಆದ್ಯತೆ ಯಾವಾಗಲೂ ಒಂದೇ ಆಗಿರುತ್ತದೆ. ನನ್ನ ಪ್ರೀತಿಯ ಪ್ರೇಕ್ಷಕರಿಗೆ ಸಿನಿಮಾಗಳ ಮೂಲಕ ಮನರಂಜನೆ ನೀಡಿವುದನ್ನು ಮುಂದುವರೆಸುವುದು ಎಂದು ಜಯಂ ರವಿ ಬರೆದುಕೊಂಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಡಿವೋರ್ಸ್ ಕುರಿತು ಅಧಿಕೃತವಾಗಿ ತಿಳಿಸಿದ್ದಾರೆ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಜೊತೆಗಾಗಿ ಇರಿ ಎಂದೆಲ್ಲಾ ಫ್ಯಾನ್ಸ್‌ ನಟನಿಗೆ ಮನವಿ ಮಾಡಿದ್ದಾರೆ.

    ಅಂದಹಾಗೆ, ಆರತಿ ಮತ್ತು ಜಯಂ ರವಿ 2009ರಲ್ಲಿ ಮದುವೆಯಾಗಿದ್ದರು. ಇವರ ದಾಂಪತ್ಯಕ್ಕೆ ಇಬ್ಬರು ಗಂಡು ಮಕ್ಕಳು ಸಾಕ್ಷಿಯಾಗಿದ್ದಾರೆ.