Tag: ಡಿವಿ ಸದಾನಂದಗೌಡ

  • ರಾಜ್ಯದಲ್ಲಿ ಹೆಚ್ಚುತ್ತಿರುವ ಕೊಲೆ, ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕಿ – ಬಿಜೆಪಿಯಿಂದ ಡಿಜಿಪಿಗೆ ದೂರು

    ರಾಜ್ಯದಲ್ಲಿ ಹೆಚ್ಚುತ್ತಿರುವ ಕೊಲೆ, ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕಿ – ಬಿಜೆಪಿಯಿಂದ ಡಿಜಿಪಿಗೆ ದೂರು

    – ಕರ್ನಾಟಕ ʻಅಪರಾಧಗಳ ರಾಜ್ಯʼ ಎನ್ನುವಂತಾಗಿದೆ
    – ರಾಜ್ಯ ಸರ್ಕಾರದ ನಿರ್ದೇಶನದಂತೆ ಪೊಲೀಸ್ ಇಲಾಖೆ ಕೆಲಸ – ಡಿ.ವಿ ಸದಾನಂದಗೌಡ ಆರೋಪ

    ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಅಫರಾದ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ಬಿಜೆಪಿ (BJP Karnataka) ನಿಯೋಗವು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್‌ (Alok Mohan) ಅವರಿಗೆ ಮನವಿ ಸಲ್ಲಿಸಿದೆ.

    ಮಾಜಿ ಸಿಎಂ ಡಿ.ವಿ ಸದಾನಂದಗೌಡ (Sadananda Gowda) ಅವರ ನೇತೃತ್ವದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಮಾಳವಿಕ ಅವಿನಾಶ್, ರಾಜ್ಯ ಮುಖ್ಯವಕ್ತಾರ ಅಶ್ವಥ್‌ ನಾರಾಯಣ್‌, ಬೆಂಗಳೂರು ದಕ್ಷಿಣ ಕ್ಷೇತ್ರದ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ ರಾಮಮೂರ್ತಿ, ಬೆಂಗಳೂರು ಉತ್ತರ ಕ್ಷೇತ್ರದ ಜಿಲ್ಲಾಧ್ಯಕ್ಷ ಎಸ್. ಹರೀಶ್ ಅವರು ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಪ್ರಚಾರದಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಮೇಲೆ ಹಲ್ಲೆ

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸದಾನಂದಗೌಡರು, ರಾಜ್ಯದಲ್ಲಿ ಪೊಲೀಸ್ ಇಲಾಖೆಯು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳ ನಿರ್ದೇಶನದಡಿ ಕೆಲಸ ಮಾಡುತ್ತಿದೆ ಎಂಬ ಭಾವನೆ ಸಾಮಾನ್ಯ ಜನರಲ್ಲಿ ಬಂದಿದೆ. ಮಹಿಳೆಯರು ವಾಕಿಂಗ್ ಹೋಗಲೂ ಭಯಪಡುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಕ್ರಿಮಿನಲ್‌ಗಳು ಹತ್ಯೆ ಮಾಡಿ ಓಡಿ ಹೋಗ್ತಾರೆ, ಮತ್ತೊಬ್ಬರ ಮೇಲೂ ಹಲ್ಲೆ ನಡೆಸುತ್ತಿದ್ದಾರೆ. ಇಂಥವರನ್ನ ಸಾರ್ವಜನಿಕರು ಹಿಡಿದು ಕೊಡುವಂತಹ ಪರಿಸ್ಥಿತಿ ಬಂದಿದೆ. ಇಂತಹ ಸಮಸ್ಯೆಗಳ ಬಗ್ಗೆ ಪೊಲೀಸ್‌ ಮಹಾನಿರ್ದೇಶಕರಿಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.

    ಅಲ್ಲದೇ ರಾಜ್ಯದಲ್ಲಿ ನಡೆಯುತ್ತಿರುವ ಭಯಾನಕ ಕೃತ್ಯಗಳ ಬಗ್ಗೆ ಗಮನ ಸೆಳೆದಿದ್ದೇವೆ. ಪೊಲೀಸ್ ಇಲಾಖೆಯು ಆಡಳಿತ ಪಕ್ಷದ ಏಜೆಂಟರಂತೆ ಕೆಲಸ ಮಾಡುತ್ತಿರುವ ಆರೋಪಗಳಿದ್ದು, ಇದನ್ನು ತಪ್ಪಿಸಿ ಸ್ವತಂತ್ರವಾಗಿ ಕೆಲಸ ಮಾಡುವಂತೆ ಹಾಗೂ ಅಪರಾಧ ಕೃತ್ಯಗಳ ಕಡೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ನಾನು, ರಾಹುಲ್‌ ಒಟ್ಟಿಗೆ ಸ್ಪರ್ಧಿಸಿದ್ದರೆ ಬಿಜೆಪಿಗೆ ಲಾಭವಾಗ್ತಿತ್ತು – ಲೋಕಸಭೆಗೆ ಸ್ಪರ್ಧಿಸದಿರಲು ಕಾರಣ ತಿಳಿಸಿದ ಪ್ರಿಯಾಂಕಾ

    ಬಿಜೆಪಿ ನಿಯೋಗ ಸಲ್ಲಿಸಿದ ಮನವಿ ಪತ್ರದಲ್ಲಿ ಏನಿದೆ?
    ಕರ್ನಾಟಕ ರಾಜ್ಯದ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿರುವುದು ತಮಗೂ ತಿಳಿದಿದೆ. ಹಿಂದೆ ರಾಜ್ಯವು ಕಾನೂನು- ಸುವ್ಯವಸ್ಥೆ ವಿಚಾರದಲ್ಲಿ ಉತ್ತಮ ಹೆಸರು ಪಡೆದಿತ್ತು. ಅಪರಾಧಗಳನ್ನು ಕನಿಷ್ಠ ಪ್ರಮಾಣದಲ್ಲಿ ಇಡುವ ನಿಟ್ಟಿನಲ್ಲಿ ಪ್ರಸಿದ್ಧಿ ಪಡೆದಿತ್ತು. ಆದರೀಗ ಮಹಿಳೆಯರ ಮೇಲಿನ ದೌರ್ಜನ್ಯ, ಕೊಲೆ, ಸುಲಿಗೆಗಳು ಹಾಗೂ ಬಡವರು, ಶೋಷಿತರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ಈ ಮೂಲಕ ಕರ್ನಾಟಕ ʻಅಪರಾಧಗಳ ರಾಜ್ಯʼಎಂಬ ಕೆಟ್ಟ ಹೆಸರು ಪಡೆಯುವಂತಾಗಿದೆ. ಇದನ್ನೂ ಓದಿ: ದೇವರಾಜೇಗೌಡನಿಗೆ ತಲೆ ಕೆಟ್ಟಿದೆ, ನನ್ನ ಹೆಸರನ್ನು ಉಪಯೋಗಿಸಿ ಮಾರ್ಕೆಟ್‌ ಮಾಡ್ಕೊತ್ತಾರೆ: ಡಿಕೆಶಿ

    ಮಹಿಳೆಯರು, ಮಕ್ಕಳ ಮೇಲಿನ ಅಪರಾಧ ಹೆಚ್ಚಾಗಿದೆ:
    ಆರ್ಥಿಕ ಅಪರಾಧಗಳಲ್ಲಿ ಕರ್ನಾಟಕ 9ನೇ ಸ್ಥಾನಕ್ಕೆ ಬಂದಿದೆ. ಮಕ್ಕಳ ಮೇಲಿನ ಅಪರಾಧಗಳ ಪ್ರಮಾಣ ಶೇ.46 ರಷ್ಟು ಹೆಚ್ಚಳವಾಗಿದೆ. ಹಿರಿಯ ನಾಗರೀಕರ ಮೇಲಿನ ಅಪರಾಧದಲ್ಲಿ ಶೇ.86ರಷ್ಟು ಹೆಚ್ಚಳ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ ಬಂದಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಕಾನೂನು-ಸುವ್ಯವಸ್ಥೆ ಕಡೆ ಗಮನ ಕೊಡುತ್ತಿಲ್ಲ. ಅಪರಾಧ ಪ್ರಮಾಣ ಹೆಚ್ಚಳದ ವಿಚಾರದಲ್ಲೂ ಅದು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಈ ಮೂಲಕ ಸ್ಪಷ್ಟವಾಗಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರವು ಬೆಂಗಳೂರು ಗ್ರಾಮಾಂತರ ಕ್ಷೇತ್ರ ಸೇರಿದಂತೆ ವಿವಿಧೆಡೆ ಸೋಲಿನ ಭೀತಿಯಿಂದ ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳಲು ಮುಂದಾಗಿತ್ತು. ಬಿಜೆಪಿ – ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಾಗ ಪ್ರಕರಣ ದಾಖಲಿಸದೇ ಇರುವುದು, ಜೀವ ಬೆದರಿಕೆ ಹಾಕಿದರೂ ಕ್ರಮ ಕೈಗೊಳ್ಳದ ಪರಿಸ್ಥಿತಿ ನಿರ್ಮಾಣವಾಗಿತ್ತು.

    ಕಾಂಗ್ರೆಸ್ ಆಡಳಿತ ವೈಫಲ್ಯದಿಂದ ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ, ಕುಸಿದು ಅರಾಜಕತೆ ಸೃಷ್ಟಿಯಾಗಿದೆ. ಇದರಿಂದ ರಾಜ್ಯದಲ್ಲಿ ಪೊಲೀಸ್ ಇಲಾಖೆ ಇದೆಯೋ ಇಲ್ಲವೋ ಎಂಬ ಸಂದೇಹ ಬರುತ್ತಿದೆ. ಜನಸಾಮಾನ್ಯರೂ ಇದೇ ಪ್ರಶ್ನೆ ಮುಂದಿಡುತ್ತಿದ್ದಾರೆ. ಗನ್ ಹಿಡಿದು ಓಡಾಡುವ ವ್ಯಕ್ತಿ, ಮುಖ್ಯಮಂತ್ರಿಗಳಿಗೆ ಹೂವಿನ ಹಾರ ಹಾಕುವ ದುಸ್ಥಿತಿ ರಾಜ್ಯಕ್ಕೆ ಬಂದಿದೆ. ಜನರು ಆತಂಕದಿಂದ ಜೀವನ ನಡೆಸುತ್ತಿದ್ದಾರೆ. ಒಂದು ವರ್ಗಕ್ಕೆ ಬೆಣ್ಣೆ ಇನ್ನೊಂದು ವರ್ಗಕ್ಕೆ ಜೈಲುವಾಸ, ಲಾಠಿ ಏಟು ಎಂಬ ದುಸ್ಥಿತಿ ರಾಜ್ಯದ್ದಾಗಿದೆ. ಕೋಮುದ್ವೇಷ, ಹಿಂಸಾಚಾರದ ಘಟನೆಗಳು, ರಾಜಕೀಯ ಪ್ರೇರಿತ ದ್ವೇಷಭಾಷಣಗಳಿಂದ ನಾಗರೀಕರಿಗೆ ಸುರಕ್ಷತೆ ಮತ್ತು ಭದ್ರತೆ ಇಲ್ಲದೇ ಒದ್ದಾಡುತ್ತಿದ್ದಾರೆ. ಹಿಂದೂ-ಬಿಜೆಪಿ ಕಾರ್ಯಕರ್ತರ ಮೇಲೆ ಹಗೆತನ ಸಾಧಿಸುವುದು ಕಾಂಗ್ರೆಸ್‌ಗೆ ಸರ್ವೇಸಾಮಾನ್ಯವಾಗಿ ಬಿಟ್ಟಿದೆ.

    ಹಿಂದೂಗಳು 2ನೇ ದರ್ಜೆಯ ನಾಗರಿಕರಾಗಿದ್ದಾರೆ:
    ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂಬುದು ಕಾಂಗ್ರೆಸ್ ಆಡಳಿತದಲ್ಲಿ ಪದೇ-ಪದೇ ಸಾಬೀತಾಗಿದೆ. ಬೆಳಗಾವಿಯಲ್ಲಿ ನಡೆದ ಘಟನೆಯಂತೂ ಅತ್ಯಂತ ಅಮಾನವೀಯ. ಸಿದ್ದರಾಮಯ್ಯನವರು ಸೇರಿದಂತೆ ಸಂಪೂರ್ಣ ಆಡಳಿತ ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ನಡೆಸುತ್ತಿದ್ದಾಗ 42 ವರ್ಷದ ಮಹಿಳೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿ ಹಲ್ಲೆ ನಡೆಸಿದ್ದರು. ಪೊಲೀಸ್ ಇಲಾಖೆ ಇಂತಹ ದುರ್ಘಟನೆಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದರೂ ತಪ್ಪಾಗಲಾರದು. ಕಾಂಗ್ರೆಸ್ ಸರ್ಕಾರವು ಮುಸ್ಲಿಂ ಸಮುದಾಯದ ಅಪರಾಧಿಗಳು ಭಾಗಿಯಾದ ಪ್ರಕರಣಗಳಲ್ಲಿ ಕ್ರಮ ತೆಗೆದುಕೊಳ್ಳಲು ಮೀನಮೇಷ ಎಣಿಸುತ್ತದೆ. ಮುಸ್ಲಿಂ ವ್ಯಕ್ತಿಗಳ ಗುಂಪಿನಿಂದ ದಂಪತಿಗಳಿಬ್ಬರು ನೈತಿಕ ಪೊಲೀಸ್‌ಗಿರಿಗೆ ಬಲಿಯಾಗಿ, ನ್ಯಾಯಕ್ಕಾಗಿ ಸರ್ಕಾರವನ್ನು ಆಗ್ರಹಿಸಿದ್ದರು. ಆರಂಭದಲ್ಲಿ ಸಮಸ್ಯೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಮುಚ್ಚಿಹಾಕಲು ಈ ಸರ್ಕಾರ ಮುಂದಾಗಿತ್ತು. ಬೆಂಗಳೂರಿನ ನಗರ್ತಪೇಟೆಯಲ್ಲಿ ಹನುಮಾನ್ ಚಾಲೀಸ ಜೋರಾಗಿ ಹಾಕಿದ್ದಾಗಿ ಆಕ್ಷೇಪಿಸಿ ಹಿಂದೂ ಅಂಗಡಿಯವರೊಬ್ಬನ ಮೇಲೆ ಮುಸ್ಲಿಂ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಇದನ್ನು ಸಮರ್ಥನೆ ಮಾಡಿಕೊಳ್ಳೋದಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿತ್ತು. ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು 2ನೇ ದರ್ಜೆಯ ನಾಗರಿಕರಂತೆ ನೋಡುತ್ತಿದೆ ಎಂಬುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.

    ಹುಬ್ಬಳ್ಳಿಯಲ್ಲಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಹತ್ಯೆ ಪ್ರಕರಣ, ಅಂಬಿಕಾ ಎಂಬ ಯುವತಿಯ ಹತ್ಯೆ ಸೇರಿದಂತೆ ಅನೇಕ ಮಹಿಳೆಯರ ಹತ್ಯೆ ನಡೆದಿದೆ. ಅಲ್ಲದೇ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿದ್ದು, ಪೊಲೀಸ್ ಇಲಾಖೆ ಕೂಡಲೇ ನಿಷ್ಪಕ್ಷಪಾತ ಕ್ರಮ ಕೈಗೊಂಡಿಲ್ಲ ಎಂಬುದು ಸಹ ಜನಾಕ್ರೋಶಕ್ಕೆ ಕಾರಣವಾಗಿದೆ. ಆದ್ದರಿಂದ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಅಪರಾಧ ಪ್ರಮಾಣ, ಕಾನೂನು- ಸುವ್ಯವಸ್ಥೆ ಕುಸಿತವನ್ನು ತಾವು ಗಮನಿಸಿ ಪೊಲೀಸ್ ಇಲಾಖೆಗೆ ಉತ್ತಮ ಹೆಸರು ತರುವ ನಿಟ್ಟಿನಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು ಎಂದು ಬಿಜೆಪಿ ನಿಯೋಗ ಒತ್ತಾಯಿಸಿದೆ.

  • ಈಶ್ವರಪ್ಪ ಮುನಿಸು ಒಂದು ವಾರದಲ್ಲಿ ಶಮನ: ಆರ್.ಅಶೋಕ್

    ಈಶ್ವರಪ್ಪ ಮುನಿಸು ಒಂದು ವಾರದಲ್ಲಿ ಶಮನ: ಆರ್.ಅಶೋಕ್

    ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ (KS Eshwarappa) ಪಕ್ಷದ ಹಿರಿಯ ನಾಯಕರು. ಬಂಡಾಯದಂತಹ ಯಾವುದೇ ನಿರ್ಧಾರ ಅವರು ಮಾಡಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashok) ತಿಳಿಸಿದ್ದಾರೆ.

    ಈಶ್ವರಪ್ಪ ಬಂಡಾಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಶ್ವರಪ್ಪ ಅಂತಹ ಯಾವುದೇ ನಿರ್ಧಾರ ಮಾಡಲ್ಲ. ಒಂದು ವಾರ ಕಾದು ನೋಡಿ ಎಲ್ಲವೂ ಸರಿ ಆಗುತ್ತದೆ. ಈಶ್ವರಪ್ಪ ಪಕ್ಷ ಬಿಡಲ್ಲ. ಯಡಿಯೂರಪ್ಪ-ಈಶ್ವರಪ್ಪ ನಡುವೆ ಏನು ಮಾತುಕತೆ ಆಗಿದೆ ನಮಗೆ ಗೊತ್ತಿಲ್ಲ. ಯಡಿಯೂರಪ್ಪ (BS Yediyurappa) ಏನು ಮಾತು ಕೊಟ್ಟಿದ್ದಾರೋ ಗೊತ್ತಿಲ್ಲ. ಇದನ್ನು ಯಡಿಯೂರಪ್ಪ-ಈಶ್ವರಪ್ಪ ಕೂತು ಮಾತನಾಡಬೇಕು. ಹೈಕಮಾಂಡ್ ನಾಯಕರು ಇದನ್ನು ನೋಡಿಕೊಳ್ಳುತ್ತಾರೆ. ಆಕಾಂಕ್ಷಿಗಳಿಗೆ ಟಿಕೆಟ್ ಸಿಗದೇ ಇದ್ದಾಗ ಅಸಮಾಧಾನ ಸಹಜ. ಹೀಗಾಗಿ ಈಶ್ವರಪ್ಪ ಹೀಗೆ ರಿಯಾಕ್ಟ್ ಮಾಡುತ್ತಾರೆ. ಹೈಕಮಾಂಡ್ ನಾಯಕರು ಅವರ ಜೊತೆ ಮಾತನಾಡುತ್ತಾರೆ. ಅವರು ಪಕ್ಷ ಬಿಡುವುದಿಲ್ಲ, ಎಲ್ಲವೂ ಸರಿ ಆಗುತ್ತದೆ ಎಂದರು. ಇದನ್ನೂ ಓದಿ: ನಾವು ಯಾರಿಗೂ ವಿಷ ಹಾಕುವವರಲ್ಲ- ಹೆಚ್‍ಡಿಕೆಗೆ ಡಿಕೆ ಸುರೇಶ್ ತಿರುಗೇಟು

    ಸದಾನಂದಗೌಡ (DV Sadananda Gowda) ಅನ್ಯ ಪಕ್ಷ ಸೇರ್ಪಡೆ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಸದಾನಂದಗೌಡ ಅವರ ಜೊತೆ ಮಾತನಾಡಿದ್ದೇನೆ. ಅವರು ಆತುರದ ನಿರ್ಧಾರ ಮಾಡಲ್ಲ. ನಾವೆಲ್ಲರು ಸದಾನಂದಗೌಡರಿಗೆ ಟಿಕೆಟ್ ಕೊಡಬೇಕು ಎಂದು ಮನವಿ ಮಾಡಿದ್ದೇವೆ. ಆದರೆ ಹೈಕಮಾಂಡ್ ನಾಯಕರು ಟಿಕೆಟ್ ಶೋಭಾ ಅವರಿಗೆ ಕೊಟ್ಟಿದ್ದಾರೆ. ಹೈಕಮಾಂಡ್ ನಾಯಕರು ಸದಾನಂದಗೌಡರ ಜೊತೆ ಮಾತನಾಡುತ್ತಾರೆ. ಅವರು ಪಕ್ಷ ಬಿಡುವ ತೀರ್ಮಾನ ಮಾಡಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಮೈತ್ರಿ ಮುರಿಯೋಲ್ಲ, ಹಾಲು-ಜೇನು ರೀತಿ ಸಂಬಂಧ ಇರಲಿದೆ: ಆರ್.ಅಶೋಕ್

  • ರಾಮನ ಬಗ್ಗೆ ರಾಜಣ್ಣ ಅವಹೇಳನ; ಸಿಎಂ, ಸಚಿವ ಇಬ್ಬರೂ ಕ್ಷಮೆ ಕೇಳಲಿ: ಡಿವಿಎಸ್ ಆಗ್ರಹ

    ರಾಮನ ಬಗ್ಗೆ ರಾಜಣ್ಣ ಅವಹೇಳನ; ಸಿಎಂ, ಸಚಿವ ಇಬ್ಬರೂ ಕ್ಷಮೆ ಕೇಳಲಿ: ಡಿವಿಎಸ್ ಆಗ್ರಹ

    ಬೆಂಗಳೂರು: ಶ್ರೀರಾಮನ ಕುರಿತು ತಪ್ಪಾಗಿ ಮಾತನಾಡಿದ ಸಚಿವ ರಾಜಣ್ಣನ (KN Rajanna) ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಕ್ಷಮೆ ಕೇಳಬೇಕು, ಅಥವಾ ರಾಜಣ್ಣನ ಮೂಲಕ ಕ್ಷಮೆ ಕೇಳಿಸಬೇಕು ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಡಿ.ವಿ.ಸದಾನಂದಗೌಡ (DV Sadananda Gowda) ಅವರು ಆಗ್ರಹಿಸಿದರು.

    ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಲಾರದ ಮುಳಬಾಗಿಲಿನ ಬ್ಯಾನರ್ ಹರಿದರಲ್ಲವೇ? ಎಷ್ಟು ಜನರನ್ನು ಬಂಧಿಸಿದ್ದೀರಿ ಎಂದು ಪ್ರಶ್ನಿಸಿದರು. ಮುಂದೆ ಸಿದ್ದರಾಮಯ್ಯನವರ ಫೋಟೊ ಇರುವ ಬ್ಯಾನರ್‌ಗಳು ಹರಿದುಹೋಗುವ ದಿನ ಬರಲಿದೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಗೃಹಜ್ಯೋತಿ ನಿಯಮದಲ್ಲಿ ಬದಲಾವಣೆ – ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯವೇನು?

    ರಾಜಣ್ಣ ಅವರಿಗೆ ಕಾಲ ಮಿಂಚಿಲ್ಲ. ಆ ಗೊಂಬೆ ಮುಂದಿನ ದಿನಗಳಲ್ಲಿ ಉರುಳಾಗಿ ಕಾಡಲಿದೆ. ರಾಜಣ್ಣನಿಗೆ ಬೊಂಬೆ ಕಂಡಿತೇ? ಅರಶಿನ ಕಾಮಾಲೆ ರೋಗದವರಿಗೆ ಅರಶಿನವಾಗಿಯೇ ಕಾಣುತ್ತದೆ. ಸಹಕಾರ ಸಚಿವನಾಗಿ ಮಾಡಿದ್ದಾರೆ. ಛೇ, ಸಿದ್ದರಾಮಯ್ಯರಿಂದ ಕೆಟ್ಟ ಕೆಲಸವಿದು. ಸಿದ್ದರಾಮಯ್ಯರ ಓಲೈಕೆ ಮುಂದುವರಿದಿದೆ. ಈ ವ್ಯವಸ್ಥೆಯಿಂದ ಕಾಂಗ್ರೆಸ್ (Congress) 3 ಹೋಳಾಗಲಿದೆ. ಬಹಳ ದಿನ ಕಾಂಗ್ರೆಸ್ ಅಧಿಕಾರದಲ್ಲಿ ಉಳಿಯುವುದಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಫೆಬ್ರವರಿ16 ರಂದು ರಾಜ್ಯ ಬಜೆಟ್

    14 ಬಜೆಟ್ ಕೊಟ್ಟ ಸಿದ್ದರಾಮಯ್ಯನವರು ತಮ್ಮ ಸಚಿವರನ್ನು ಹೇಗೆ ತರಬೇತಿ ಮಾಡಿದ್ದಾರೆ ಎಂಬುದು ಕಾಣುತ್ತಿದೆ. ಅಯೋಧ್ಯೆಯಲ್ಲಿ ಇದೇ 22ರಂದು ಶ್ರೀರಾಮನ ಪ್ರಾಣಪ್ರತಿಷ್ಠೆ ವಿಚಾರ ಗಮನಿಸಿ ಸಿದ್ದರಾಮಯ್ಯ ಮತ್ತು ಅವರ ಸಚಿವ ಸಂಪುಟದ ಎಲ್ಲರಿಗೂ ತಲೆ ಕೆಟ್ಟಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಜ.22ರಂದು ಕೇಂದ್ರ ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ

    ನಾನು ಕೂಡ ಆ ಸ್ಥಾನದಲ್ಲಿ ಇದ್ದವ. ಅಲ್ಲಿ ಕೂತವರು ತಮ್ಮ ಬುದ್ಧಿಯನ್ನು ರಾಜ್ಯದ ಹಿತಾಸಕ್ತಿಗೆ ಮತ್ತು ಅಭಿವೃದ್ಧಿ ಕಾರ್ಯಕ್ಕೆ ಬಳಸಿಕೊಳ್ಳಬೇಕು. ಒಂದೂವರೆ ತಿಂಗಳಿನಿಂದ ಕಾಂಗ್ರೆಸ್ಸಿಗರ ಹೇಳಿಕೆ ಗಮನಿಸಿದರೆ ಹುಚ್ಚುಚ್ಚು ಮಾತುಗಳು ಕಂಡುಬರುತ್ತವೆ. ಹರಿಪ್ರಸಾದ್ ಅವರ ಗೋಧ್ರಾ ಹೇಳಿಕೆ, ರಾಜಣ್ಣನ ಹೇಳಿಕೆ ಗಮನಿಸಿದ ಜನತೆ ಇನ್ನು ಸುಮ್ಮನೆ ಇರಲಾರರು ಎಂದು ಎಚ್ಚರಿಸಿದರು. ಇದನ್ನೂ ಓದಿ: ಮಠಗಳು ಸಾಮರಸ್ಯ ಬೆಳೆಸುವ ಕೇಂದ್ರವಾಗಲಿ: ಯು.ಟಿ ಖಾದರ್

    ರಾಮ ಇಲ್ಲ ಎಂದು ಅಫಿಡವಿಟ್ ಹಾಕಿದ ಈ ಅಯೋಗ್ಯರು ಇಂಥ ಹೇಳಿಕೆ ಕೊಡುವುದು ಅಚ್ಚರಿಯ ವಿಚಾರವಲ್ಲ. ಶ್ರೀರಾಮನ ಬಗ್ಗೆ ಹೀಗೆ ಮಾತನಾಡಿದರೆ ಅದರಿಂದ ಜನರು ಎದ್ದುಬಿಡುವ ಆತಂಕ ಉಂಟಾಗಿದೆ. ಶ್ರೀರಾಮನ ಸಂಬಂಧದ ವಾಲ್ ಪೋಸ್ಟರ್, ಬ್ಯಾನರ್‌ಗಳನ್ನು ಏಜೆಂಟರ ಮೂಲಕ ಹರಿಯುತ್ತಿದ್ದಾರೆ. ಹೈಕೋರ್ಟ್ ವಕೀಲ ಒಬ್ಬರನ್ನು ನ್ಯಾಯಮೂರ್ತಿ ಆಗಲು ಶಿಫಾರಸು ಮಾಡಿದ್ದರು. ಅದು ಬೇಡ ಎಂದು ವಕೀಲರು ಹೇಳಿದ್ದರಂತೆ. ಸಿದ್ದರಾಮಯ್ಯನವರೇ ನೀವು ಇವತ್ತು ಅದೇ ಸ್ಥಾನದಲ್ಲಿ ಇರಬೇಕಿತ್ತು. ಸಿದ್ದರಾಮಯ್ಯನವರ ಪರವಾಗಿ ಕೆಲವರು, ಇನ್ನೂ ಕೆಲವರು ಡಿ.ಕೆ.ಶಿವಕುಮಾರ್ ಪರವಾಗಿ ಕೆಲಸ ಮಾಡುತ್ತಾರೆ. ಇಲ್ಲಿನ ಪರಿಸರದಲ್ಲಿ ಶ್ರೀರಾಮ ಇದ್ದಾನೆ. ಆರಾಧ್ಯ ದೈವ ಶ್ರೀರಾಮನನ್ನು ನೋಡಲು ಎಲ್ಲರೂ ಹೋಗುತ್ತಿದ್ದಾರೆ. ಫಾರೂಕ್ ಅಬ್ದುಲ್ಲ ಅವರಂಥ ವ್ಯಕ್ತಿ ಪ್ರಧಾನಿಯ ಮಾತಿಗೆ ಬೆಂಬಲ ಸೂಚಿಸಿದ್ದಾರೆ. ಆದರೆ, ಕರ್ನಾಟಕದ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜ.19ರಂದು ಬೆಂಗಳೂರಿಗೆ ಮೋದಿ – ಈ ಮಾರ್ಗಗಳಲ್ಲಿ ವಾಹನ ಸಂಚಾರ ನಿರ್ಬಂಧ

  • 13 ಬಾರಿ ಬಜೆಟ್ ಕೊಟ್ಟ ಕೂಡಲೇ ಗದ್ದೆಯಲ್ಲಿ ಭತ್ತ ಬೆಳೆದು ಅಕ್ಕಿ ಕೊಡೋಕೆ ಆಗಲ್ಲ: ಸಿದ್ದುಗೆ ಡಿವಿಎಸ್ ಟಾಂಗ್

    13 ಬಾರಿ ಬಜೆಟ್ ಕೊಟ್ಟ ಕೂಡಲೇ ಗದ್ದೆಯಲ್ಲಿ ಭತ್ತ ಬೆಳೆದು ಅಕ್ಕಿ ಕೊಡೋಕೆ ಆಗಲ್ಲ: ಸಿದ್ದುಗೆ ಡಿವಿಎಸ್ ಟಾಂಗ್

    ಚಾಮರಾಜನಗರ: 13 ಬಾರಿ ಬಜೆಟ್ ಕೊಟ್ಟ ಕೂಡಲೇ ಗದ್ದೆಯಲ್ಲಿ ಭತ್ತ ಬೆಳೆದು ಅಕ್ಕಿ (Rice) ಕೊಡಲು ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯಗೆ (Siddaramaiah) ಮಾಜಿ ಸಿಎಂ ಡಿವಿ ಸದಾನಂಗೌಡ (DV Sadananda Gowda) ಟಾಂಗ್ ನೀಡಿದ್ದಾರೆ.

    ಚಾಮರಾಜನಗರದಲ್ಲಿ (Chamarajanagar) ಮಾತನಾಡಿದ ಅವರು, ಕೇಂದ್ರ ಅಕ್ಕಿ ಕೊಡುತ್ತಿಲ್ಲವೆಂಬ ಕಾಂಗ್ರೆಸ್ (Congress) ನಾಯಕರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಕುಣಿಯಲಾರದವನು ನೆಲಡೊಂಕು ಅಂದನಂತೆ. ಹಾಗೆ ಏನೇನೋ ಸಬೂಬು ಹೇಳುತ್ತಿದ್ದಾರೆ. ಅಕ್ಕಿ ಕೊಡುತ್ತೇನೆ ಎಂದು ಹೇಳುವಾಗ ಇವರಿಗೆ ಪರಿಜ್ಞಾನ ಇರಲಿಲ್ವಾ? ನನಗೂ, ನಿಮಗೂ ನಮ್ಮ ಮನೆಯವರಿಗೂ, ನಿಮ್ಮ ಮನೆಯವರಿಗೂ ಅಕ್ಕಿ ಕೊಡುತ್ತೇನೆ ಎಂದು ಹೇಳಿದ್ದ ಸಿದ್ದರಾಮಯ್ಯ ಟವಲ್ ಹೆಗಲಿನಿಂದ ಎಲ್ಲೋಯ್ತು? ಏನಾದ್ರೂ ಆಗ್ಲಿ ಕೊಡ್ತೀನಿ ಎಂದು ದೊಂಬರ ಲಾಗ ಹಾಕಿದ್ದರು. ಒಬ್ಬ ಸಿಎಂ ಆಗುವವನಿಗೆ ಮುಂದಾಲೋಚನೆ ಇರಬೇಕು ಎಂದು ವಾಗ್ದಾಳಿ ನಡೆಸಿದರು.

    ಅಕ್ಕಿ ಮಾರಾಟ ಮಾಡಬಾರದು ಎಂಬ ನೀತಿಯನ್ನು ಕೇವಲ ಕರ್ನಾಟಕಕ್ಕೆ ಮಾತ್ರ ಮಾಡಿದ್ದಲ್ಲ. ಇದು ದೇಶದಲ್ಲಿ ಆಹಾರ ಭದ್ರತೆಗೆ ಕೇಂದ್ರ ಕೈಗೊಂಡ ನಿಲುವು. ಇದು ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನ ಕೇಂದ್ರ ಕೈಗೊಂಡ ನಿರ್ಧಾರ. ರಾಜ್ಯಕ್ಕೆ ಅಕ್ಕಿ ಕೊಡಬಾರದೆಂದು ಹೇಳುವ ನೀಚ ಬುದ್ದಿ ರಾಜ್ಯ ಬಿಜೆಪಿ ನಾಯಕರಿಗಿಲ್ಲ. ಕಾಂಗ್ರೆಸ್‌ನವರಂತೆ ಚೀಪ್ ಪಾಲಿಟಿಕ್ಸ್ ಮಾಡಿ ಬಡವರ ಹೊಟ್ಟೆಗೆ ಹೊಡೆಯುವ ಕೆಲಸ ನಾವು ಮಾಡಲ್ಲ. ಕರ್ನಾಟಕದ ಪ್ರತಿಯೊಬ್ಬ ನಾಗರಿಕನಿಗೂ ಅಕ್ಕಿ ಸಿಗಬೇಕೆಂಬುದು ಬಿಜೆಪಿ ನಿಲುವು ಎಂದು ಮಾಜಿ ಸಿಎಂ ಸದಾನಂದಗೌಡ ಹೇಳಿದರು.

    ಬಿಜೆಪಿ ಹೊಂದಾಣಿಕೆ ರಾಜಕಾರಣ ಮಾಡಿಲ್ಲ:
    ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ ಎಂಬ ಸ್ವಪಕ್ಷದ ನಾಯಕರ ಆರೋಪವನ್ನು ಸದಾನಂದಗೌಡ ಅಲ್ಲಗೆಳೆದಿದ್ದಾರೆ. ನಮ್ಮ ಪಕ್ಷದಲ್ಲಿ ಬಿಲ್‌ಕುಲ್ ಪೊಲಿಟಿಕಲ್ ಅಡ್ಜಸ್ಟ್ಮೆಂಟ್ ನಡೆದಿಲ್ಲ. ಹೊಂದಾಣಿಕೆ ರಾಜಕೀಯ ಮಾಡಿಕೊಂಡಿದ್ರೆ ಖಂಡಿತ ನಾವು ಬಹುಮತ ಪಡೆಯುತ್ತಿದ್ದೆವು ಎಂದರು. ಇದನ್ನೂ ಓದಿ: ನಾವು ಯಾರನ್ನೂ ಪುಕ್ಸಟ್ಟೆ ಅಕ್ಕಿ ಕೇಳ್ತಿಲ್ಲ; ಬೇರೆ ಆಪ್ಷನ್‌ ನೋಡ್ತಿದ್ದೇವೆ: ಡಿಕೆಶಿ

    ಗೆಲ್ಲುವ ನಿರೀಕ್ಷೆ ಇದ್ದ ಕಡೆಯು ಸಹ ನಾವು ಯಾವುದೇ ಹೊಂದಾಣಿಕೆ ಮಾಡಿಕೊಂಡಿಲ್ಲ. ಸಮಯ, ಸಂದರ್ಭ ನೋಡಿ ಪೊಲಿಟಿಕಲ್ ಸ್ಟ್ರಾಟಜಿ ಮಾಡಬೇಕು. ಅದನ್ನೆಲ್ಲಾ ಮಾಧ್ಯಮದವರ ಬಳಿ ಹೇಳಲು ಆಗಲ್ಲ. ಪೊಲಿಟಿಕಲ್ ಅಡ್ಜಸ್ಟ್ಮೆಂಟ್ ರಾಜಕಾರಣದಲ್ಲಿ ಇರಬಾರದು ಅಂತೇನೂ ಇಲ್ಲ. ಯಾವಾಗ ಅವಶ್ಯಕತೆ ಇದೆ, ಆಗ ಮಾಡಬೇಕು ಎಂದು ಅವರು ಹೇಳಿದರು.

    ಜು.3 ರೊಳಗೆ ವಿಪಕ್ಷ ನಾಯಕರ ನೇಮಕ:
    ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಜುಗಲ್ ಬಂದಿಗೆ ಸವಾಲ್ ಹಾಕುವ ವಿಪಕ್ಷ ನಾಯಕನನ್ನು ಆರಿಸ್ತೇವೆ. ಅಧಿವೇಶನ ಪ್ರಾರಂಭವಾಗುವ ಮುನ್ನವೇ ವಿರೋಧ ಪಕ್ಷದ ನಾಯಕರ ಆಯ್ಕೆ ಮಾಡಬೇಕಿತ್ತು. ಆದರೆ ಸೋಲಿನ ಪರಾಮರ್ಶೆ ಹಾಕಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬೇಕೆಂದಿರುವುದರಿಂದ ತಡವಾಗಿದೆ. ಜುಲೈ 3 ರೊಳಗೆ ಒಳ್ಳೆ ವಿಪಕ್ಷ ನಾಯಕನ ಆಯ್ಕೆ ಆಗಲಿದೆ. ನಮ್ಮ ರಾಷ್ಟ್ರೀಯ ನಾಯಕರು ಅಳೆದು ತೂಗಿ ವಿಪಕ್ಷ ನಾಯಕನ ಆಯ್ಕೆ ಮಾಡುತ್ತಾರೆ. ನಮ್ಮ ಪಕ್ಷದಲ್ಲಿ ಒಂದು ಶಿಸ್ತು ಇದೆ. ಈ ಪ್ರಕಾರ ರಾಷ್ಟ್ರೀಯ ನಾಯಕರು ವಿಪಕ್ಷ ನಾಯಕ ಯಾರಾಗಬೇಕು ಎಂದು ತೀರ್ಮಾನ ಮಾಡ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಕೇವಲ 2 ಬಲ್ಬ್ ಇದ್ದ ತಗಡಿನ ಮನೆಗೆ 1 ಲಕ್ಷ ರೂ. ಬಿಲ್ – ಶಾಕ್ ಆಗಿ ವೃದ್ಧೆ ಮನೆಗೆ ಅಧಿಕಾರಿ ದೌಡು!

  • ರಸಗೊಬ್ಬರ, ಔಷಧಿಗಳಿಗೆ ಯಾವುದೇ ತೊಂದರೆ ಇಲ್ಲ: ಡಿವಿಎಸ್

    ರಸಗೊಬ್ಬರ, ಔಷಧಿಗಳಿಗೆ ಯಾವುದೇ ತೊಂದರೆ ಇಲ್ಲ: ಡಿವಿಎಸ್

    – ಅವಶ್ಯಕತೆಗಿಂತ ಹೆಚ್ಚು ಪೂರೈಕೆ ಮಾಡ್ತಿದ್ದೇವೆ

    ನವದೆಹಲಿ: ದೆಹಲಿ, ಮಹಾರಾಷ್ಟ್ರ ತಮಿಳುನಾಡು ಸೇರಿ ಕೆಲವು ಪ್ರಮುಖ ರಾಜ್ಯಗಳಲ್ಲಿ ಹೆಚ್ಚು ಪ್ರಮಾಣದ ಕೊರೊನಾ ಸೋಂಕು ಕಂಡು ಬಂದ ಹಿನ್ನೆಲೆ ಲಾಕ್‍ಡೌನ್ ವಿಸ್ತರಣೆ ಅನಿವಾರ್ಯವಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಲಾಕ್‍ಡೌನ್ ವಿಸ್ತರಿಸಿದ್ದು ಸಮಸ್ಯೆ ಎದುರಿಸಲು ಸರ್ಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಕೇಂದ್ರ ಸಚಿವ ಡಿವಿ. ಸದಾನಂದಗೌಡ ಪ್ರತಿಕ್ರಿಯಿಸಿದ್ದಾರೆ.

    ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‍ಡೌನ್ ಸಂದರ್ಭದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದೆ. ಈಗಾಗಲೇ ಮಳೆಗಾಲ ಶುರುವಾಗಿದ್ದು ಬಿತ್ತನೆಗೆ ಬೇಕಾದ ಅವಶ್ಯಕ ವಸ್ತುಗಳು ಮತ್ತು ರಸಗೊಬ್ಬರಗಳನ್ನು ಒದಗಿಸುವ ಕೆಲಸ ಮಾಡುತ್ತಿದ್ದೇವೆ. ಎಂದಿನಂತೆ ರಸಗೊಬ್ಬರ ದೊರೆಯಲಿದ್ದು ಯಾವುದು ಕಡಿಮೆಯಾಗದಂತೆ ನೋಡಿಕೊಳ್ಳಲಾಗುವುದು ಅಗತ್ಯಕ್ಕಿಂತ ಮೂರು ಪಟ್ಟು ಹೆಚ್ಚು ಸ್ಟಾಕ್ ನೀಡಲಾಗಿದೆ ಎಂದರು.

    ಔಷಧಿಗಳನ್ನು ಇಡಿ ದೇಶಕ್ಕೆ ನಾವು ಪೂರೈಕೆ ಮಾಡುತ್ತಿದ್ದೇವೆ. ದೇಶದ ಎಲ್ಲ ರಾಜ್ಯಗಳಲ್ಲೂ ಔಷಧಿ ಕಡಿಮೆಯಾಗದಂತೆ ನೋಡಿಕೊಳ್ಳಲಾಗಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ವಾಹನ ಸಂಚಾರ ಹಾಗೂ ಕಾರ್ಮಿಕರ ಸಮಸ್ಯೆಯಿಂದ ಸಾಗಾಣಿಕೆಯಲ್ಲಿ ಸ್ವಲ್ಪ ಏರುಪೇರಾಗಿ ಔಷಧೀಯ ಕೊರತೆ ಸೃಷ್ಟಿಯಾಗಿತ್ತು. ಆದರೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು ಈಗ ಈ ಸಮಸ್ಯೆ ಬಗೆಹರಿದಿದೆ. ಈಗ ಗೂಡ್ಸ್ ಟ್ರೇನ್ ಗಳ ಮೂಲಕ ಔಷಧಿಗಳ ಸಪ್ಲೇ ಆರಂಭವಾಗಿದ್ದು ಯಾವುದಕ್ಕೂ ತೊಂದರೆ ಇಲ್ಲ. ಏಪ್ರಿಲ್ 20ರ ಬಳಿಕ ಪರಿಸ್ಥಿತಿ ಅವಲೋಕಿಸಿ ಪ್ರಧಾನ ಮಂತ್ರಿಗಳ ಸೂಕ್ತ ಕ್ರಮ ತೆಗೆದುಕೊಳ್ಳಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.

  • Exclusive: ನಾನು ಯಾರಿಗೂ ತಲೆಬಾಗಲ್ಲ – ಶೋಕಾಸ್ ನೋಟಿಸ್‍ಗೆ ಯತ್ನಾಳ್ ಕಿಡಿ

    Exclusive: ನಾನು ಯಾರಿಗೂ ತಲೆಬಾಗಲ್ಲ – ಶೋಕಾಸ್ ನೋಟಿಸ್‍ಗೆ ಯತ್ನಾಳ್ ಕಿಡಿ

    ಬೆಂಗಳೂರು: ಪ್ರವಾಹ ಸಂತ್ರಸ್ತರ ಪರವಾಗಿ ನಾನು ಗಟ್ಟಿ ಧ್ವನಿ ತೆಗೆದಿದ್ದು, ಯಾರಿಂದಲೂ ನನ್ನ ಧ್ವನಿಯನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಖಡಕ್ ಆಗಿ ಹೇಳಿದ್ದಾರೆ.

    ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿತರಣೆ ಕಾರ್ಯ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಸಂಸದರ ವಿರುದ್ಧವೇ ಅಸಮಾಧಾನ ಹೊರ ಹಾಕಿದ್ದ ಯತ್ನಾಳ್ ಅವರಿಗೆ ಬಿಜೆಪಿಯ ಕೇಂದ್ರ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಪ್ರವಾಹ ಸಂತ್ರಸ್ತರ ಪರ ಇದ್ದು, ಜನಪ್ರತಿನಿಧಿಯಾಗಿ ಮಾಡಬೇಕಾದ ಕಾರ್ಯವನ್ನು ಮಾಡುತ್ತಿದ್ದೇನೆ. ಜಗತ್ತಿನ ಯಾವ ಶಕ್ತಿಯೂ ನನ್ನ ಧ್ವನಿಯನ್ನು ಕಟ್ಟಿಹಾಕಲು ಸಾಧ್ಯವಿಲ್ಲ. ನನಗೆ ಪಕ್ಷದಲ್ಲಿ ಅಟಲ್ ಹಾಗೂ ಅಡ್ವಾಣಿ ಅವರೇ ಅದರ್ಶವಾಗಿದ್ದು, ನಾನು ಯಾರಿಗೂ ತಲೆಬಾಗುವುದಿಲ್ಲ ಎಂದರು.

    ಕಣ್ಣೀರು ಹಾಕುತ್ತಿರುವ ಜನರ ಧ್ವನಿಯಾಗಿ ನಾನು ಮಾತನಾಡಿದ್ದೇನೆ. ಯಾವುದೇ ಹುದ್ದೆ ಅಥವಾ ಅಧಿಕಾರಕ್ಕೆ ಆಸೆ ಬಿದ್ದು ಈ ರೀತಿ ಮಾತನಾಡಿಲ್ಲ. ಕನ್ನಡಿಗರ ಕಣ್ಣೀರು ದೂರ ಮಾಡಿ ಎಂದು ಪ್ರಧಾನಿಗಳ ಬಳಿ ಮನವಿ ಮಾಡಿದ್ದನ್ನು ಪಕ್ಷ ವಿರೋಧಿ ಚಟುವಟಿಕೆ ಎಂದ್ರೆ ಹೇಗೆ? ಇದು ಪಕ್ಷ ವಿರೋಧಿ ಕೆಲಸವಾಗಿದ್ದರೆ ಅದನ್ನು ನಾಡಿನ ಜನತೆಯೇ ನಿರ್ಧಾರ ಮಾಡುತ್ತಾರೆ. ಭವಿಷ್ಯದಲ್ಲಿ ಎಲ್ಲವೂ ತಿಳಿಯಲಿದ್ದು, ಅಂತಿಮವಾಗಿ ನನಗೆ ಮತದಾನ ಮಾಡುವುದು ಜನರೇ ಆಗಿದ್ದು, ಅವರೇ ತೀರ್ಮಾನಿಸುತ್ತಾರೆ ಎಂದರು.

    ನನ್ನ ಬಗ್ಗೆ ಯಾರೋ ಪ್ರಧಾನಿಗಳಿಗೆ ಹಾಗೂ ರಾಷ್ಟ್ರೀಯ ಅಧ್ಯಕ್ಷರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಅಷ್ಟೇ. ನಿನ್ನೆ ರಾತ್ರಿ ನಮ್ಮ ನಾಯಕರು ಪರಿಹಾರ ಕೇಳಲು ರಾಷ್ಟ್ರೀಯ ನಾಯಕರ ಎದುರು ತೆರಳಿದ್ದರು ಎಂದು ತಿಳಿದಿದ್ದೆ. ಆದರೆ ಯತ್ನಾಳ್ ವಿರುದ್ಧ ದೂರು ನೀಡಲು ತೆರಳಿದ್ದರು ಎಂದು ಅರ್ಥವಾಗುತ್ತಿದೆ ಎಂದು ಹೇಳಿದರು.

    ಡಿವಿಎಸ್ ಕೊಡುಗೆ ಏನು?
    ಕರ್ನಾಟಕದಲ್ಲಿ ಬಿಎಸ್ ಯಡಿಯೂರಪ್ಪ ಅವರನ್ನು ಜನನಾಯಕರಾಗಿ ಮಾಡಿದ್ದು ಜನರು. ಕನ್ನಡ ನಾಡಿನ ಜನರ ಕಷ್ಟವನ್ನು ಪಬ್ಲಿಕ್ ಟಿವಿ ಜನರ ಮುಂದಿಡುತ್ತಿದ್ದು, ಅದೇ ರೀತಿ ಜನಪ್ರತಿನಿಧಿಯಾಗಿ ನನ್ನ ಕರ್ತವ್ಯ ಮಾಡಿದ್ದೇನೆ. ಸೂಲಿಬೆಲೆ ಅವರ ವಿರುದ್ಧ ದೇಶದ್ರೋಹಿ ಎಂಬ ಪದ ಪ್ರಯೋಗ ಮಾಡಿದ ಸಚಿವ ಡಿವಿ ಸದಾನಂದ ಗೌಡರ ವಿರುದ್ಧ ಯಾವ ಕ್ರಮಕೈಗೊಂಡಿದ್ದಾರೆ. ಡಿವಿಎಸ್ ಅವರು ನಾಡಿಗೆ ಯಾವ ಕೊಡುಗೆ ನೀಡಿದ್ದಾರೆ? ಕೂಡಲೇ ಅವರನ್ನು ಸಂಪುಟದಿಂದ ಕೈ ಬಿಡುವ ಕಾರ್ಯವನ್ನು ಪಕ್ಷದ ನಾಯಕರು ಮಾಡಬೇಕಿದೆ. ಸೂಲಿಬೆಲೆ ಅವರ ತಪ್ಪಾದರೂ ಏನು ಮಾಡಿದ್ದಾರೆ. ಪಕ್ಷದ ಶಿಸ್ತು ಶಿಸ್ತು ಎಂದು ಹೇಳಿ ಜನರ ನೋವಿಗೂ ಧ್ವನಿಯಾಗದೇ ಇದ್ದಾರೆ ಹೇಗೆ ಎಂದು ಪ್ರಶ್ನಿಸಿದರು.

    ಬಿಜೆಪಿ ಪಕ್ಷದ ಕಾರ್ಯಕರ್ತರು ಬಲಿಷ್ಠವಾಗಿದ್ದು, ನನಗೆ ನೀಡಿರುವ ನೋಟಿಸ್‍ಗೆ ಸರಿಯಾದ ಉತ್ತರ ನೀಡುತ್ತೇನೆ. ವಿನಃ ಅವರು ನೀಡಿದ ನೋಟಿಸ್ ಕೂಡಲೇ ಕ್ಷಮೆ ಕೋರಿ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

  • ಉಪಚುನಾವಣೆಯಲ್ಲಿ ಸೋತಿದ್ದು ಹೇಗೆ: ಡಿವಿಎಸ್ ಆತ್ಮಾವಲೋಕನದ ಮಾತು

    ಉಪಚುನಾವಣೆಯಲ್ಲಿ ಸೋತಿದ್ದು ಹೇಗೆ: ಡಿವಿಎಸ್ ಆತ್ಮಾವಲೋಕನದ ಮಾತು

    ಬೆಂಗಳೂರು: ರಾಜ್ಯದ ಪಂಚಕ್ಷೇತ್ರಗಳ ಉಪಚುನಾವಣೆ ಫಲಿತಾಂಶದ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿಯವರ ಹೇಳಿಕೆ ಸ್ವಲ್ಪ ಮಟ್ಟಿಗೆ ನಮಗೆ ತಿರುಗುಬಾಣವಾದರೆ, ರಾಮನಗರದಲ್ಲಿ ಮಹಾ ದ್ರೋಹ ನಡೆಯಿತು ಎಂದು ಕೇಂದ್ರ ಸಚಿವ ಡಿವಿ ಸದಾನಂದಗೌಡ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವರು, ಲೋಕಸಭಾ ಚುನಾವಣೆಗೆ ಉಪಚುನಾವಣೆ ಪರೀಕ್ಷೆ ಅಲ್ಲ. ಹಾಗೆಂದು ಮೈತ್ರಿ ಪಕ್ಷದ ಸಾಧನೆ ಈ ಚುನಾವಣೆಯಲ್ಲಿ ಇಲ್ಲ. ಈ ಉಪಚುನಾವಣೆಯಲ್ಲಿ ಸರ್ಕಾರ ಆಡಳಿತ ಯಂತ್ರದ ದುರುಪಯೋಗ ಮಾಡಿಕೊಂಡರೆ ಜನರು ಸರ್ಕಾರದ ಭರವಸೆಗಳನ್ನು ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ನಂಬುತ್ತಾರೆ. ಆದರೆ ಲೋಕಸಭಾ ಚುನಾವಣೆಯ ಪರಿಸ್ಥಿತಿಗಳೇ ಬೇರೆ. ಈ ಚುನಾವಣೆಯಲ್ಲಿ ಮೈತ್ರಿ ಸರ್ಕಾರ ದೊಂಬರಾಟ ಮಾಡಿ ನಾಟಕದ ಫಲಿತಾಂಶ ಪಡೆದಿದೆ ಎಂದು ಕಿಡಿಕಾರಿದರು.

    ಉಪಚುನಾವಣೆ ಬೆನ್ನಲ್ಲೇ ಸಿಎಂ ಕುಮಾರಸ್ವಾಮಿ ಅವರು ನೀಡಿರುವ ಆಪರೇಷನ್ ಕಮಲದ ಹೇಳಿಕೆ ಅಚ್ಚರಿ ಮೂಡಿಸಿದೆ ಎಂದು ತಿಳಿಸಿದ ಡಿವಿಎಸ್, ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿದೆ. ಸರ್ಕಾರದ ಗುಪ್ತಚರ ಇಲಾಖೆ ಅವರ ಕೈಯಲ್ಲಿಯೇ ಇರುತ್ತದೆ, ಯಾವ ಶಾಸಕ ಎಲ್ಲಿ ಹೋಗುತ್ತಾರೆ? ಯಾರನ್ನು ಭೇಟಿ ಮಾಡುತ್ತಾರೆ ಎಂಬ ಸಂಪೂರ್ಣ ಮಾಹಿತಿ ಅವರಿಗೆ ಸಿಗುತ್ತದೆ. ಹಾಗಿದ್ದರೂ ಅವರ ಶಾಸಕರನ್ನು ಹಿಡಿದಿಟ್ಟುಕೊಳ್ಳಲಾಗದೇ ಬಿಜೆಪಿ ಕಡೆ ಕೈ ತೋರಿಸಿದರೆ ಏನು ಹೇಳಲು ಸಾಧ್ಯ ಎಂದು ಪ್ರಶ್ನೆ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸದಾನಂದಗೌಡ್ರು ಅದ್ಯಾವಾಗ ಜ್ಯೋತಿಷಿಯಾದ್ರು-ಡಿಕೆಶಿ ವ್ಯಂಗ್ಯ

    ಸದಾನಂದಗೌಡ್ರು ಅದ್ಯಾವಾಗ ಜ್ಯೋತಿಷಿಯಾದ್ರು-ಡಿಕೆಶಿ ವ್ಯಂಗ್ಯ

    ಹಾಸನ: ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿವಿ ಸದಾನಂದಗೌಡ ಅದ್ಯಾವಾಗ ಜ್ಯೋತಿಷಿಯಾದ್ರು ಗೊತ್ತಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

    ಸಕಲೇಶಪುರದಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಕುರಿತು ಭವಿಷ್ಯ ನುಡಿಯಲು ಸದಾನಂದಗೌಡ್ರು ಯಾವಾಗ ಜ್ಯೋತಿಷಿಯಾದ್ರು ಎಂದು ತಿರುಗೇಟು ನೀಡಿದರು. ಈಗ ಸದಾನಂದಗೌಡ್ರು ಸಂತೋಷವಾಗಿದ್ದಾರೆ. ಅವರು ಆನಂದವಾಗಿಯೇ ಇರಲಿ ಎಂದು ವ್ಯಂಗ್ಯವಾಡಿದರು.

    ರಾಜ್ಯದಲ್ಲಿ ವಿರೋಧ ಪಕ್ಷ ಮಲಗಿದೆ ಎನ್ನುತ್ತಿರುವ ಸದಾನಂದಗೌಡ್ರು ಮೊದಲು ಎಚ್ಚರವಾಗಲಿ. ನಮ್ಮ ಕರ್ತವ್ಯ ನಾವು ಮಾಡುತ್ತೇವೆ. ಬಜೆಟ್ ಬಗ್ಗೆ ಕೇವಲ ರಾಜಕೀಯ ಕಾರಣಕ್ಕಾಗಿ ಟೀಕೆ ಮಾಡಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

    ಸಮ್ಮಿಶ್ರ ಸರ್ಕಾರ ಮಂಡಿಸಿರುವ ರಾಜ್ಯ ಬಜೆಟ್ ಅತ್ಯಂತ ಶಕ್ತಿಶಾಲಿಯಾಗಿದೆ. ರೈತರ ಬೆಳೆಸಾಲ ಮನ್ನಾ ಮಾಡಿರುವುದು ಕೆಲವು ಜಿಲ್ಲೆಗೆ ಸೀಮಿತವಾಗಿರದೆ ರಾಜ್ಯದ ಎಲ್ಲ ರೈತರಿಗೂ ಅನುಕೂಲವಾಗಲಿದೆ ಎಂದರು.

    ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿವಿಎಸ್, ಯಾವುದೇ ಕ್ಷಣದಲ್ಲಿ ಸಮ್ಮಿಶ್ರ ಸರಕಾರ ಪತನವಾಗಬಹುದು. ಇವರು ಪ್ರತಿನಿತ್ಯ ಕುರ್ಚಿಗಾಗಿ ಕಚ್ಚಾಟ ನಡೆಸುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತಗೊಂಡಿದೆ. ಸಮ್ಮಿಶ್ರ ಸರಕಾರ ಯಾವಾಗ ಬೀಳುತ್ತೆ ಎಂದು ಜನ ಕಾಯುತ್ತಿದ್ದಾರೆ. ಕಾಂಗ್ರೆಸ್- ಜೆಡಿಎಸ್ ಎರಡೂ ಪಕ್ಷಗಳು ಕುರ್ಚಿ ಉಳಿಸಿಕೊಳ್ಳಲು ಹೋರಾಡುತ್ತಿವೆ. ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಅಧಿಕಾರಿಗಳು ಹಿಡಿತ ಕಳಕೊಂಡಿದ್ದು ತಮಗೆ ಇಷ್ಟ ಬಂದಂತೆ ಆಡಳಿತ ನಡೆಸುತ್ತಿದ್ದಾರೆ. ಈ ಸರಕಾರ ಹೆಚ್ಚು ಕಾಲ ಬಾಳುವುದಿಲ್ಲ ಅನ್ನೋದು ನಿಶ್ಚಿತ ಅಂತ ಡಿವಿಎಸ್ ರಾಜ್ಯ ಸರಕಾರದ ಬಗ್ಗೆ ಭವಿಷ್ಯ ನುಡಿದಿದ್ದರು.

  • ನ.2ರಂದು ನವಕರ್ನಾಟಕ ಪರಿವರ್ತನಾ ರ್ಯಾಲಿಗೆ ಮೋದಿ, ಶಾ ಚಾಲನೆ- ಬಿಜೆಪಿಯವರಿಂದ ಇಂದು ಭೂಮಿ ಪೂಜೆ

    ನ.2ರಂದು ನವಕರ್ನಾಟಕ ಪರಿವರ್ತನಾ ರ್ಯಾಲಿಗೆ ಮೋದಿ, ಶಾ ಚಾಲನೆ- ಬಿಜೆಪಿಯವರಿಂದ ಇಂದು ಭೂಮಿ ಪೂಜೆ

    ಬೆಂಗಳೂರು: ನಗರದಲ್ಲಿ ನವ ಕರ್ನಾಟಕ ಪರಿವರ್ತನಾ ರ್ಯಾಲಿಗೆ ಸಿದ್ಧವಾಗುತ್ತಿರೋ ವೇದಿಕೆಗೆ ಇಂದು ಬಿಜೆಪಿ ನಾಯಕರು ಭೂಮಿ ಪೂಜೆ ನೆರವೇರಿಸಿದ್ದಾರೆ.

    ನವೆಂಬರ್ 2 ರಂದು ನೆಲಮಂಗಲದ ಅಂತರ್ ರಾಷ್ಟ್ರೀಯ ವಸ್ತು ಪ್ರದರ್ಶನ ಆವರಣದಲ್ಲಿ ನವ ಕರ್ನಾಟಕ ಪರಿವರ್ತನಾ ಜಾಥಾಗೆ ಚಾಲನೆ ಸಿಗಲಿದೆ. ಈ ಹಿನ್ನೆಲೆಯಲ್ಲಿ ಇದೀಗ ಸಿದ್ಧವಾಗುತ್ತಿರುವ ವೇದಿಕೆಗೆ ಇಂದು ಭೂಮಿ ಪೂಜೆ ನೆರವೇರಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಂದು ಬೆಂಗಳೂರಿಗೆ ಆಗಮಿಸಲಿದ್ದು, ನವಕರ್ನಾಟಕ ಜಾಥಾಗೆ ಚಾಲನೆ ನೀಡಲಿದ್ದಾರೆ.

    ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಮಾತನಾಡಿ, ನವ ಪರಿವರ್ತನಯಾತ್ರೆ ಕಾರ್ಯಕ್ರಮದ ಉದ್ಘಾಟನಾ ಸ್ಥಳದಲ್ಲಿ ಭೂಮಿ ಪೂಜೆ ಮಾಡಿದ್ದೇವೆ. ರಾಜ್ಯದಲ್ಲಿ ಸರ್ಕಾರ ಬದಲಾವಣೆ ಮಾಡುವ ಕಾರ್ಯಕ್ರಮ ಇದು. ಸಿದ್ದರಾಮಯ್ಯ ಸರ್ಕಾರ ಹಲವು ವಿಚಾರಗಳಲ್ಲಿ ವಿಫಲವಾಗಿದೆ. ಕಮಿಷನ್ ಪಡೆಯುವುದರಲ್ಲಿ ನಿಸ್ಸೀಮರಾಗಿದ್ದಾರೆ. ಒಡೆದು ಆಳುವ ರಾಜಕಾರಣ ಮಾಡಲು ಸಿಎಂ ಮುಂದಾಗಿದ್ದಾರೆ. ಹೊಸ ರಾಜ್ಯ ಕಟ್ಟುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯ ಮಾಡಲಿದೆ. ನಾವು ಯಾವುದೇ ಒಂದು ವರ್ಗ, ಜಾತಿ ಪರ ಅಲ್ಲ ಅಂತ ತಿಳಿಸಿದ್ದಾರೆ.

    ಪರಿವರ್ತನೆ ಮಾಡುವುದು ಅಂದ್ರೆ ಪ್ಯಾಚ್ ವರ್ಕ್ ಮಾಡುವ ಕಾರ್ಯಕ್ರಮವಲ್ಲ. ಸಂಪೂರ್ಣ ಬದಲಾವಣೆಯೇ ಇದರ ಉದ್ದೇಶ. ಹೊಸದೊಂದು ರಾಜಕಾರಣದ ಪರ್ವ ನಿರ್ಮಿಸಲು ಮುಂದಾಗಿದ್ದೇವೆ. ಯಡಿಯೂರಪ್ಪ ನೇತೃತ್ವದಲ್ಲಿ ಎಲ್ಲರೂ ಒಂದಾಗಿ ಭಾಗವಹಿಸಲಿದ್ದಾರೆಂದು ಮುರಳೀಧರ್ ಹೇಳಿದರು.

    ಭೂಮಿ ಪೂಜೆಯಲ್ಲಿ ಕೇಂದ್ರ ಸಚಿವ ಡಿವಿ ಸದಾನಂದಗೌಡ, ಸಂಸದೆ ಶೋಭಾ ಕರಂದ್ಲಾಜೆ, ಆರ್ ಅಶೋಕ್, ಪರಿಷತ್ ಸದಸ್ಯ ಸೋಮಣ್ಣ, ಶಾಸಕರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

  • ಸಿದ್ದರಾಮಯ್ಯಗೆ ಡಿವಿಎಸ್ ಪುತ್ರ ಶೋಕದ ಪ್ರಶ್ನೆ

    ಸಿದ್ದರಾಮಯ್ಯಗೆ ಡಿವಿಎಸ್ ಪುತ್ರ ಶೋಕದ ಪ್ರಶ್ನೆ

    – ಇಂದು ಪೊಲೀಸ್ ಅಧಿಕಾರಿಗಳೊಂದಿಗೆ ಸಿಎಂ ಚರ್ಚೆ

    ಬೆಂಗಳೂರು: ಕರಾವಳಿಯಲ್ಲಿ ನಡೆದಿರೋ ಕೋಮು ಗಲಭೆ ಸಂಬಂಧ ರಾಜಕೀಯ ಪಕ್ಷಗಳ ನಡುವೆ ಕಚ್ಚಾಟ ನಿಂತಿಲ್ಲ. ಈಗ ತಮ್ಮ ಮತ್ತು ಸಿದ್ದರಾಮಯ್ಯರ ಪುತ್ರ ಶೋಕವನ್ನೇ ಮುಂದಿಟ್ಟುಕೊಂಡು ಕೇಂದ್ರ ಸಚಿವ ಡಿವಿ ಸದಾನಂದಗೌಡ ಸಿದ್ದರಾಮಯ್ಯಗೆ ಪ್ರಶ್ನೆ ಮಾಡಿದ್ದಾರೆ

    ಬಂಟ್ವಾಳದಲ್ಲಿ ನಡೆದಿರೋ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ವಿಚಾರದಲ್ಲಿ ಮುಖ್ಯಮಂತ್ರಿಗಳನ್ನು ಡಿವಿಎಸ್ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ.

    ನಾವು-ನೀವು ಸಮಾನ ದುಃಖಿಗಳೆಂದು ಒಂದು ಸಂದರ್ಭದಲ್ಲಿ ಹೇಳಿದ್ದೆ. ಮೃತಪಟ್ಟ ಶರತ್ ತಂದೆ ಸ್ಥಾನದಲ್ಲಿ ನಿಮ್ಮನ್ನು ನೀವು ಕಲ್ಪಿಸಿಕೊಳ್ಳಿ. ಶರತ್‍ಗೆ ನ್ಯಾಯ ದೊರಕಿಸಿ. ಶರತ್ ತಂದೆಯ ಮುಖವನ್ನು ನೆನೆಸಿಕೊಂಡರೆ ಸಂಕಟವಾಗುತ್ತಿದೆ. ಮಾನ್ಯ ಮುಖ್ಯಮಂತ್ರಿಗಳೇ ನಿಮಗೆ ಏನೂ ಅನ್ನಿಸುತ್ತಿಲ್ಲವಾದರೆ ಅದನ್ನು ಯೋಜಿತ ಕೃತ್ಯವೆಂದು ತಿಳಿಯಲಾ ಎಂದು ಪ್ರಶ್ನೆ ಹಾಕಿದ್ದಾರೆ.

    ಈ ನಡುವೆ ಸಿಎಂ ಸಿದ್ದರಾಮಯ್ಯ ಹಿರಿಯ ಪೊಲೀಸ್ ಅಧಿಕಾರಗಳ ಜೊತೆ ಇಂದು ಸಭೆ ನಡೆಸಲಿದ್ದಾರೆ. ಕಳೆದ ಒಂದೂವರೆ ತಿಂಗಳಿಂದಲೂ ಮಂಗಳೂರು, ಉಡುಪಿ ಸೇರಿದಂತೆ ಆಯಕಟ್ಟಿನ ಪ್ರದೇಶಗಳಲ್ಲಿ ಅನ್ಯಧರ್ಮಗಳ ನಡುವೆ ಮಾರಾಮಾರಿ ನಡೆಯುತ್ತಲೇ ಇದೆ. ನಿಷೇಧಾಜ್ಞೆ ಜಾರಿ ಮಾಡಿದ್ರೂ ಕೂಡ ಮೊನ್ನೆ ಮೊನ್ನೆಯಷ್ಟೇ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಕೊಲೆ ನಡೆಯಿತು. ಬಳಿಕ ಶವಯಾತ್ರೆಯಲ್ಲಿ ಕಲ್ಲು ತೂರಾಟ, ಮತ್ತದೇ ಚಾಕು ಇರಿತ ನಡೆಯುತ್ತಲೇ ಇದೆ. ಇದ್ರಿಂದ ಬೇಸತ್ತಿರೋ ಸಿಎಂ ಖಡಕ್ ಚರ್ಚೆ ನಡೆಸಲು ತಯಾರಿ ಮಾಡಿಕೊಂಡಿದ್ದಾರೆ. ಬೆಳಗ್ಗೆ 10 ರಿಂದ 12:30ರ ವರೆಗೂ ಸಭೆ ನಡೆಸಿ ಬಳಿಕ 12:30 ಕ್ಕೆ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳ ಜೊತೆ ಮಾತನಾಡಲಿದ್ದಾರೆ.