Tag: ಡಿಯಾಗೋ ಮರಡೋನಾ

  • ಫುಟ್‍ಬಾಲ್ ದಂತಕಥೆ ಡಿಯಾಗೋ ಮರಡೋನಾ ಇನ್ನಿಲ್ಲ

    ಫುಟ್‍ಬಾಲ್ ದಂತಕಥೆ ಡಿಯಾಗೋ ಮರಡೋನಾ ಇನ್ನಿಲ್ಲ

    ಬ್ಯೂನಸ್ ಐರಿಸ್: ಅರ್ಜೆಂಟೀನಾದ ಫುಟ್‍ಬಾಲ್ ದಂತಕಥೆ ಡಿಯಾಗೋ ಮರಡೋನಾ ಅವರು ಇಂದು ನಿಧನವಾಗಿದ್ದಾರೆ.

    ನಿನ್ನೆ ತಾನೇ ತನ್ನ 60 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಡಿಯಾಗೋ ಮರಡೋನಾ ಇಂದು ಹೃದಯಘಾತದಿಂದ ತಮ್ಮ ನಿವಾಸದಲ್ಲೇ ಸಾವನ್ನಪ್ಪಿದ್ದಾರೆ. ಡಿಯಾಗೋ ಮರಡೋನಾ ಅವರು ಮೂರು ವಾರದ ಹಿಂದೆಯಷ್ಟೆ ಮೆದುಳಿನಲ್ಲಿ ರಕ್ತಹೆಪ್ಪುಗಟ್ಟಿದ್ದರಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು.

    ಅರ್ಜೆಂಟೀನಾದ ಫುಟ್‍ಬಾಲ್ ಇತಿಹಾಸದಲ್ಲಿ ತನ್ನದೇ ಆದ ದಾಖಲೆಗಳನ್ನು ನಿರ್ಮಿಸಿರುವ ಡಿಯಾಗೋ ಮರಡೋನಾ ವಿಶ್ವದದ್ಯಾಂತ ಅಭಿಮಾನಿಗಳನ್ನು ಹೊಂದಿದ್ದರು. ಜೊತೆಗೆ ಡ್ರಗ್ಸ್ ಮತ್ತು ಮದ್ಯವೆಸನಿಯಾಗಿದ್ದರು.