Tag: ಡಿಯರ್ ವಿಕ್ರಮ್

  • ನಾಳೆ ‘ಡಿಯರ್ ವಿಕ್ರಮ್’ ಸಿನಿಮಾ ನೋಡಲಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ

    ನಾಳೆ ‘ಡಿಯರ್ ವಿಕ್ರಮ್’ ಸಿನಿಮಾ ನೋಡಲಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ

    ತೀಶ್ ನೀನಾಸಂ ನಟನೆಯ ಡಿಯರ್ ವಿಕ್ರಮ್ ಸಿನಿಮಾ ಇದೇ ಜೂನ್ 30 ರಂದು ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ಪೂರ್ವಿಭಾವಿಯಾಗಿ ಸಿನಿಮಾ ತಂಡವು ಹಲವು ಗಣ್ಯರಿಗೆ ಈ ಚಿತ್ರವನ್ನು ವೀಕ್ಷಿಸಲು ಸಿದ್ಧತೆ ಮಾಡಿಕೊಂಡಿದ್ದು ನಾಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಿನಿಮಾವನ್ನು ವೀಕ್ಷಿಸಲಿದ್ದಾರೆ. ಇದೊಂದು ಜೀವಪರ ಕಥೆಯನ್ನು ಹೊಂದಿರುವ ಚಿತ್ರವಾಗಿದೆ. ಹಾಗಾಗಿ ಸಿದ್ದರಾಮಯ್ಯ ಅವರನ್ನು ಸಿನಿಮಾ ತಂಡ ಆಹ್ವಾನಿಸಿದೆ.

    ನಿನ್ನೆಯಷ್ಟೇ ಸಿದ್ದರಾಮಯ್ಯ ಅವರನ್ನು ನಟ ಸತೀಶ್ ನೀನಾಸಂ, ನಿರ್ದೇಶಕ ನಂದೀಶ್ ಮತ್ತು ಲೇಖಕ ನಟರಾಜ್ ಹುಳಿಯಾರ್ ಭೇಟಿಯಾಗಿ ಸಿನಿಮಾ ವೀಕ್ಷಿಸುವಂತೆ ಆಹ್ವಾನಿಸಿದ್ದಾರೆ. ಈ ಕುರಿತು ಸ್ವತಃ ಸಿದ್ದರಾಮಯ್ಯ ಅವರೇ ಟ್ವೀಟ್‌ ಮಾಡಿದ್ದು, ಸಿನಿಮಾ ವೀಕ್ಷಿಸುವುದಾಗಿ ತಿಳಿಸಿದ್ದಾರೆ. ರಾಜಕೀಯ ಚಟುವಟಿಕೆಗಳ ನಡುವೆ ಅವರು ಡಿಯರ್ ವಿಕ್ರಮ್ ಸಿನಿಮಾವನ್ನು ವೀಕ್ಷಿಸಲಿದ್ದಾರೆ.  ಇದನ್ನೂ ಓದಿ:ಮಲಯಾಳಂ ನಟಿ ಅಂಬಿಕಾ ರಾವ್ ನಿಧನ

    ನಂದೀಶ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಸತೀಶ್ ನಾಯಕನಾಗಿ ನಟಿಸಿದ್ದಾರೆ. ಶ್ರದ್ಧಾ ಶ್ರೀನಾಥ್ ನಾಯಕಿ. ವಸಿಷ್ಠ ಸಿಂಹ ಸೇರಿದಂತೆ ಹಲವು ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ. ವ್ಯವಸ್ಥೆಯ ವಿರುದ್ಧದ ಹೋರಾಟಗಾರನೊಬ್ಬನ ಕಥೆಯನ್ನು ಈ ಸಿನಿಮಾ ಹೊಂದಿದೆ ಎಂದು ಹೇಳಲಾಗುತ್ತಿದೆ.

    Live Tv

  • ಸತೀಶ್ ನೀನಾಸಂ ನಟನೆಯ ‘ಡಿಯರ್ ವಿಕ್ರಮ್’ ಸಿನಿಮಾ ಟ್ರೇಲರ್ ರಿಲೀಸ್ : ಓಟಿಟಿಯಲ್ಲಿ ಜೂ.30ಕ್ಕೆ ಬಿಡುಗಡೆ

    ಸತೀಶ್ ನೀನಾಸಂ ನಟನೆಯ ‘ಡಿಯರ್ ವಿಕ್ರಮ್’ ಸಿನಿಮಾ ಟ್ರೇಲರ್ ರಿಲೀಸ್ : ಓಟಿಟಿಯಲ್ಲಿ ಜೂ.30ಕ್ಕೆ ಬಿಡುಗಡೆ

    ತೀಶ್ ನೀನಾಸಂ ಮತ್ತು ಶ್ರದ್ಧಾ ಶ್ರೀನಾಥ್ ನಟನೆಯ, ಕ್ರಾಂತಿಕಾರಿಯೊಬ್ಬನ ಪ್ರೇಮಕತೆಯನ್ನೊಳಗೊಂಡ ವಿಭಿನ್ನ ಸಿನಿಮಾ ‘ಡಿಯರ್ ವಿಕ್ರಮ್’ ನ ಟ್ರೇಲರ್ ಬಿಡುಗಡೆಯಾಗಿದ್ದು, ಜೂನ್ ಮೂವತ್ತರಂದು ವೂಟ್ ಸೆಲೆಕ್ಟ್ ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.  ವಿಭಿನ್ನ ಕಥಾವಸ್ತುವನ್ನು ಹೊಂದಿರುವ ಚಲನಚಿತ್ರ ‘ಡಿಯರ್ ವಿಕ್ರಮ್’ ನಲ್ಲಿ ಹೆಸರಾಂತ ನಟ ನೀನಾಸಂ ಸತೀಶ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ . ಕೆಲದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ಚಿತ್ರದ ಟೀಸರ್ ಸಿನಿರಸಿಕರ ಗಮನ ಸೆಳೆದಿತ್ತು. ಈಗ ಬಿಡುಗಡೆಯಾಗಿರುವ ಟ್ರೇಲರ್ ಆ ಕುತೂಹಲವನ್ನು ಇಮ್ಮಡಿಗೊಳಿಸಿದೆ.

    ಬಿಗಿಯಾದ ಚಿತ್ರಕತೆ ಹಾಗೂ ಮನಮುಟ್ಟುವ ಅಭಿನಯದಿಂದಾಗಿ ಈ ಸಿನಿಮಾ ಪರಿಣಾಮಕಾರಿಯಾಗಿ ಮೂಡಿಬಂದಿದೆ ಎಂಬುದಕ್ಕೆ ಟ್ರೇಲರಿನಲ್ಲಿ ಸೂಚನೆಗಳಿವೆ. ಹಲವು ಉತ್ತಮ ಚಿತ್ರಗಳನ್ನು ನಿರ್ದೇಶಿಸಿರುವ ಜೇಕಬ್ ವರ್ಗೀಸ್ ತಂಡದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿರುವ ಕೆ ಎಸ್ ನಂದೀಶ್ ‘ಡಿಯರ್ ವಿಕ್ರಮ್’ ಸಿನಿಮಾವನ್ನು ಬರೆದು ನಿರ್ದೇಶಿಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ, ಹಾಸನ, ಭಟ್ಕಳ, ಕರ್ನೂಲ್ ಅಲ್ಲದೆ ಮಲೇಶಿಯಾದಲ್ಲೂ ಚಿತ್ರೀಕರಣ ಮಾಡಲಾಗಿದೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಪ್ರಕರಣ:ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯಗೆ ಜಾಮೀನು

    ತಮ್ಮ ಹೊಸ ಸಿನಿಮಾದ ಬಗ್ಗೆ ಉತ್ಸುಕರಾಗಿ ಮಾತಾಡಿದ ನಟ ಸತೀಶ್, ‘ಶ್ರದ್ಧಾ ಶ್ರೀನಾಥ್ ಅವರೊಂದಿಗೆ ಇದು ನನ್ನ ಮೊದಲ ಸಿನಿಮಾ. ವಸಿಷ್ಟ ಸಿಂಹ, ಸೋನು ಗೌಡ ಅಚ್ಯುತ್ ಕುಮಾರ್ ಮುಂತಾದ ಹಲವು ಹೆಸರಾಂತ ನಟ ನಟಿಯರು ಚಿತ್ರಕ್ಕೆ ತಮ್ಮ ಪ್ರತಿಭೆಯನ್ನು ಧಾರೆಯೆರೆದಿದ್ದಾರೆ ’ ಎಂದರು. ನಟಿ ಶ್ರದ್ಧಾ ಶ್ರೀನಾಥ್ ಮಾತನಾಡಿ, ‘ವಾಸ್ತವವನ್ನು ಬಣ್ಣದ ಕನ್ನಡಕದೊಳಗಿನಿಂದ ಮಾತ್ರ ನೋಡಿ ಬೆಳೆದ ಹುಡುಗಿಯ ಪಾತ್ರ ನನ್ನದು’ ಎಂದರು. ಈ ಪಾತ್ರವನ್ನು ಎಂದೂ ಮರೆಯೋಕಾಗಲ್ಲ ಎಂದೂ ಅವರು ತಿಳಿಸಿದರು.

    ನಿರ್ದೇಶಕ ನಂದೀಶ್ ಚಿತ್ರೀಕರಣದ ವೇಳೆ ನಡೆದ ಘಟನೆಯೊಂದನ್ನು ಬಿಚ್ಚಿಟ್ಟರು. ಶೂಟಿಂಗಿಗೆ ಹೋಗುವಾಗ ಮೊಣಕಾಲೆತ್ತರ ಇದ್ದ ನದಿ ನೀರು ವಾಪಾಸ್ ಬರುವಾಗ ಎದೆ ಮಟ್ಟಕ್ಕೆ ಏರಿದಾಗ ಚಿತ್ರತಂಡಕ್ಕಾದ ಆತಂಕವನ್ನು ಅವರು ನೆನಪಿಸಿಕೊಂಡರು. ಆಗ ಭಯವಾಗಿದ್ದರೂ ಈಗದು ಹಿತವಾದ ನೆನಪು ಎಂದು ಅವರು ಹೇಳಿದರು. ಈಗ ಬಿಡುಗಡೆಯಾಗಿರುವ ಟ್ರೇಲರನ್ನು ನೀವು ಸವಿದು ಮುಗಿಸುವುದರೊಳಗೇ ಡಿಯರ್ ವಿಕ್ರಮ್ ಸಿನಿಮಾ ವೂಟ್ ಸೆಲೆಕ್ಟ್  ನಲ್ಲಿ ನೇರವಾಗಿ ಇದೇ ಜೂನ್ 30ರಂದು ಬರಲಿದೆ.

    Live Tv

  • ಡಿಯರ್ ವಿಕ್ರಮ್ ಟ್ರೈಲರ್ ರಿಲೀಸ್ : ನೀನಾಸಂ ಸತೀಶ್, ಶ್ರದ್ಧಾ ಶ್ರೀನಾಥ್ ಕಾಂಬಿನೇಷನ್ ಸಿನಿಮಾ

    ಡಿಯರ್ ವಿಕ್ರಮ್ ಟ್ರೈಲರ್ ರಿಲೀಸ್ : ನೀನಾಸಂ ಸತೀಶ್, ಶ್ರದ್ಧಾ ಶ್ರೀನಾಥ್ ಕಾಂಬಿನೇಷನ್ ಸಿನಿಮಾ

    ನೀನಾಸಂ ಸತೀಶ್ ನಾಯಕನಾಗಿ ನಟಿಸಿರುವ ಡಿಯರ್ ವಿಕ್ರಮ್ ಸಿನಿಮಾದ ಟ್ರೈಲರ್ ಇಂದು ಬೆಂಗಳೂರಿನಲ್ಲಿ ಬಿಡುಗಡೆ ಆಯಿತು. ಓಟಿಟಿಯಲ್ಲಿ ಈ ಸಿನಿಮಾ ನೇರವಾಗಿ ಬಿಡುಗಡೆ ಆಗುತ್ತಿದ್ದು, ಅದಕ್ಕೂ ಮುನ್ನ ಟ್ರೈಲರ್ ಅನ್ನು ಇಂದು ಖಾಸಗಿ ಹೋಟೆಲ್ ನಲ್ಲಿ ಬಿಡುಗಡೆ ಮಾಡಲಾಯಿತು. ಪ್ರೇಮಕಥೆಯ ಜೊತೆಗೆ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಸಿನಿಮಾ ಇದಾಗಿದೆ ಎನ್ನುವುದು ಟ್ರೈಲರ್ ನೋಡುವವರಿಗೆ ಗೊತ್ತಾಗಲಿದೆ.

    ನೀನಾಸಂ ಸತೀಶ್ ಜೊತೆ ಈ ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿ ನಟಿಸಿದ್ದು, ವಸಿಷ್ಠ ಸಿಂಹ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಂದೀಶ್ ನಿರ್ದೇಶನದಲ್ಲಿ ಈ ಸಿನಿಮಾ ತಯಾರಾಗಿದೆ. ಈ ಸಿನಿಮಾಗೆ ಹಿಂದೆ ಗೋಧ್ರಾ ಎಂದು ಹೆಸರಿಡಲಾಗಿತ್ತು. ಸೆನ್ಸಾರ್ ಮಂಡಳಿಯ ಸಲಹೆ ಮೇರೆಗೆ ಡಿಯರ್ ವಿಕ್ರಮ್ ಎಂದು ಟೈಟಲ್ ಬದಲಾಯಿಸಲಾಗಿದೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿದ್ದು, ಟ್ರೈಲರ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಆಗಸ್ಟ್ 11ಕ್ಕೆ ಅಕ್ಷಯ್ ಕುಮಾರ್ ಮತ್ತು ಆಮೀರ್ ಖಾನ್ ನಡುವೆ ಬಿಗ್ ಫೈಟ್ : ಗೆಲುವು ಯಾರ ಪಾಲಿಗೆ?

    ಸತೀಶ್ ವೃತ್ತಿ ಜೀವನದ ಮಹತ್ವದ ಸಿನಿಮಾ ಇದಾಗಿದ್ದು, ಈ ಸಿನಿಮಾದಲ್ಲಿ ಸತೀಶ್ ಹೋರಾಟಗಾರನ ಪಾತ್ರ ಮಾಡಿದ್ದಾರೆ. ಉಳಿದ ಪಾತ್ರಗಳ ಹಿನ್ನೆಲೆಯಲ್ಲಿ ಗೌಪ್ಯವಾಗಿ ಇಡಲಾಗಿದೆ. ಸಮಾಜದಲ್ಲಿ ನಡೆದ ಅನೇಕ ನೈಜ ಘಟನೆಗಳಿಗೆ ಹೋಲಿಕೆ ಆಗುವಂತಹ ದೃಶ್ಯಗಳನ್ನು ಕೂಡ ಈ ಸಿನಿಮಾದಲ್ಲಿ ಹೆಣೆಯಲಾಗಿದೆಯಂತೆ.

    Live Tv

  • ನೀನಾಸಂ ಸತೀಶ್ ಹುಟ್ಟು ಹಬ್ಬ: ಅಭಿಮಾನಿಗಳಿಗೆ ಭೇಟಿಯಿಲ್ಲ. ಹಾಗಂತ, ನಿರಾಸೆನೂ ಮಾಡಿಲ್ಲ

    ನೀನಾಸಂ ಸತೀಶ್ ಹುಟ್ಟು ಹಬ್ಬ: ಅಭಿಮಾನಿಗಳಿಗೆ ಭೇಟಿಯಿಲ್ಲ. ಹಾಗಂತ, ನಿರಾಸೆನೂ ಮಾಡಿಲ್ಲ

    ಳೆದ ಬಾರಿ ಗೆಳೆಯ ಸಂಚಾರಿ ವಿಜಯ್ ನಿಧನದಿಂದಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದ ನಟ ನೀನಾಸಂ ಸತೀಶ್, ಈ ಬಾರಿಯೂ ಅದ್ಧೂರಿಯಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಿದ್ದರೂ, ಅಭಿಮಾನಿಗಳಿಗಂತೂ ಭರ್ಜರಿ ಉಡುಗೊರೆಯನ್ನೇ ನೀಡಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ಈ ಬಾರಿಯೂ ಅವರು ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಆದರೆ, ಅವರ ನಟನೆಯ ನಾನಾ ಸಿನಿಮಾಗಳ ಪೋಸ್ಟರ್ ರಿಲೀಸ್ ಆಗಿವೆ.

    ಸದ್ಯ ಸತೀಶ್ ನೀನಾಸಂ ‘ಪೆಟ್ರೊಮ್ಯಾಕ್ಸ್’, ‘ಮ್ಯಾಟ್ನಿ’, ‘ಡಿಯರ್ ವಿಕ್ರಮ್’, ‘ದಸರಾ’, ‘ಅಶೋಕ ಬ್ಲೇಡ್ ‘ ಇಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಷ್ಟೂ ಸಿನಿಮಾಗಳ ಪೋಸ್ಟರ್ ಇಂದು ರಿಲೀಸ್ ಆಗಿ ಅಭಿಮಾನಿಗಳಿಗೆ ಭರ್ಜರಿ ಸಂಭ್ರಮವನ್ನೇ ತಂದಿವೆ. ಒಂದಕ್ಕಿಂತ ಒಂದು ಪೋಸ್ಟರ್ ಕುತೂಹಲ ಮೂಡಿಸಿವೆ. ಇದನ್ನೂ ಓದಿ:ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಹಾಕಿದವರ ಲಿಸ್ಟ್ ನಲ್ಲಿ ಕರಣ್ ಜೋಹರ್

    ಈಗಾಗಲೇ ಪೆಟ್ರೊಮ್ಯಾಕ್ಸ್, ಡಿಯರ್ ವಿಕ್ರಮ್ ಸಿನಿಮಾ ರಿಲೀಸ್ ಗೆ ರೆಡಿ ಇವೆ. ಪೆಟ್ರೊಮ್ಯಾಕ್ಸ್ ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆ ಆಗುತ್ತಿದ್ದರೆ, ಡಿಯರ್ ವಿಕ್ರಮ್ ನೇರವಾಗಿ ಓಟಿಟಿಯಲ್ಲಿ ದೊಡ್ಡ ಮಟ್ಟದಲ್ಲಿ ಸ್ಟ್ರೀಮಿಂಗ್ ಆಗಲಿದೆ. ದಸರಾ ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದ್ದು, ಮ್ಯಾಟ್ನಿ ಕೂಡ ಭರದಿಂದ ಚಿತ್ರೀಕರಣ ನಡೆದಿದೆ. ಈಗಷ್ಟೇ ಅಶೋಕ ಬ್ಲೇಡ್ ಚಿತ್ರೀಕರಣ ಶುರುವಾಗಿದೆ. ಅಲ್ಲದೇ, ತಮಿಳಿನಲ್ಲೂ ಸತೀಶ್ ನಟಿಸಿದ್ದು, ಈ ಸಿನಿಮಾ ಕೂಡ ರಿಲೀಸ್ ಗೆ ರೆಡಿಯಿದೆ.

    ರಿಲೀಸ್ ಗೆ ರೆಡಿ ಇರುವ ಮತ್ತು ಶೂಟಿಂಗ್ ನಲ್ಲಿ ತೊಡಗಿರುವ ಅಷ್ಟೂ ಸಿನಿಮಾಗಳ ಪಾತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ನಿರ್ದೇಶಕರು ಕೂಡ ಈಗಾಗಲೇ ಹೊಸ ಬಗೆಯ ಸಿನಿಮಾ ಕೊಟ್ಟವರು. ಹಾಗಾಗಿ ಅಷ್ಟೂ ಸಿನಿಮಾಗಳು ನಿರೀಕ್ಷೆ ಮೂಡಿಸಿವೆ. ಸತೀಶ್ ಕೂಡ ಆಯಾ ಪಾತ್ರಗಳಿಗೆ ರೆಡಿಯಾಗಿಯೇ ಕ್ಯಾಮೆರಾ ಮುಂದೆ ನಿಂತಿರುವುದರಿಂದ ಈ ವರ್ಷ ಅವರನ್ನು ನಾನಾ ಪಾತ್ರಗಳಲ್ಲೂ ನೋಡಬಹುದು.

    Live Tv