Tag: ಡಿಪೋ

  • ಕಾರವಾರ ಡಿಪೋಗೆ ನುಗ್ಗಿದ ನೀರು – 50ಕ್ಕೂ ಹೆಚ್ಚು ಬಸ್ಸುಗಳು ಜಲಾವೃತ

    ಕಾರವಾರ ಡಿಪೋಗೆ ನುಗ್ಗಿದ ನೀರು – 50ಕ್ಕೂ ಹೆಚ್ಚು ಬಸ್ಸುಗಳು ಜಲಾವೃತ

    ಕಾರವಾರ: ಉತ್ತರ ಕನ್ನಡದಲ್ಲಿ (Uttara Kannada) ಭಾರೀ ಮಳೆಯಾಗುತ್ತಿದ್ದು (Rain) ನಗರದಲ್ಲಿರುವ ಕೆಎಸ್‌ಆರ್‌ಟಿಸಿ (KSRTC) ಬಸ್‌ ಡಿಪೋ (Bus Depot) ಜಲಾವೃತವಾಗಿದೆ.

    50ಕ್ಕೂ ಹೆಚ್ಚು ಬಸ್ಸುಗಳು ನೀರಿನಲ್ಲಿ ಜಲಾವೃತವಾಗಿದ್ದು ವಿವಿಧ ಭಾಗಗಳಿಗೆ ತೆರಳುವ ಬಸ್ಸುಗಳ ಸೇವೆಯಲ್ಲಿ ವ್ಯತ್ಯಯವಾಗಿದೆ.  ಇದನ್ನೂ ಓದಿ: ಕಬಿನಿ ಡ್ಯಾಂ ಭರ್ತಿ – 25 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ

    ಹಬ್ಬುವಾಡ ರಸ್ತೆಯಲ್ಲಿ ಡಿಪೋ ಇದ್ದು ಬಸ್ಸುಗಳನ್ನು ಹೊರ ತೆಗೆಯಲು ಚಾಲಕರು ಹರಸಾಹಸ ಪಡುತ್ತಿದ್ದಾರೆ. ಮೂರು ದಿನಗಳಿಂದ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದು, ಚರಂಡಿ ನೀರು ಡಿಪೋಗೆ ನುಗ್ಗಿದ ಪರಿಣಾಮ ಸಮಸ್ಯೆಯಾಗಿದೆ.

    ಹೊನ್ನಾವರ ಭಾಸ್ಕೇರಿ ವರ್ನಕೇರಿ ಬಳಿ ಮತ್ತೆ ಗುಡ್ಡ ಕುಸಿತವಾಗಿದ್ದು ರಾಷ್ಟ್ರೀಯ ಹೆದ್ದಾರಿ 69 ಸಂಚಾರ ತಾತ್ಕಾಲಿಕ ಬಂದ್‌ ಆಗಿತ್ತು. ಹೊನ್ನಾವರ -ಬೆಂಗಳೂರು ರಸ್ತೆಯಲ್ಲಿ ನೂರಾರು ವಾಹನಗಳು ಬೆಳಗ್ಗೆ ನಿಂತಿದ್ದವು. ಗುಡ್ಡ ತೆರವು ಮಾಡಿದ ಬಳಿಕ ಈಗ ವಾಹನಗಳು ಸಂಚರಿಸುತ್ತಿವೆ.

  • ಬ್ರೇಕ್ ಫೇಲ್- ಡಿಪೋದಿಂದ ಹೊರ ನುಗ್ಗಿದ ಬಸ್

    ಬ್ರೇಕ್ ಫೇಲ್- ಡಿಪೋದಿಂದ ಹೊರ ನುಗ್ಗಿದ ಬಸ್

    – ಸ್ವಲ್ಪದ್ರಲ್ಲೇ ಚಾಲಕ ಪಾರು

    ಬೆಂಗಳೂರು: ಬ್ರೇಕ್ ಫೇಲ್‍ನಿಂದಾಗಿ ಬಸ್‍ ಒಂದು ಡಿಪೋದಿಂದ ಹೊರ ನುಗ್ಗಿದ ಘಟನೆ ಪೂರ್ಣಪ್ರಜ್ಞಾ ನಗರದಲ್ಲಿ ನಡೆದಿದ್ದು, ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಪೂರ್ಣಪ್ರಜ್ಞಾ ನಗರದ ಡಿಪೋ 33ರಲ್ಲಿ ಇಂದು ಬೆಳಗ್ಗೆ 10:45 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಸಿಬ್ಬಂದಿ ನಿಲ್ಲಿಸಿದ್ದ 2 ಬೈಕ್, ಒಂದು ಸೈಕಲ್‍ಗೆ ಜಖಂಗೊಡಿವೆ. ಬಸ್ ಏನಾದ್ರು ಇನ್ನು ಸ್ವಲ್ಪ ಮುಂದೆ ಬಂದಿದ್ದರೆ ದೊಡ್ಡ ಹಳ್ಳಕ್ಕೆ ಬೀಳುತ್ತಿತ್ತು.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಪೋ 33ರ ಮ್ಯಾನೇಜರ್, ಅಪಘಾತ ಸಂಭವಿಸಿದ ಬಸ್ ರೂಟ್‍ನಲ್ಲಿ ಸಂಚಾರ ಮಾಡುವುದಿಲ್ಲ. ಡಿಪೋದಲ್ಲಿ ಇದ್ದ ಬಸ್ ಅನ್ನು ಟೆಸ್ಟಿಂಗ್ ನಡೆಸುತ್ತಿದ್ದಾಗ ಈ ಘಟನೆಯಾಗಿದೆ. ಬಸ್ ಚಾಲಕನಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.