Tag: ಡಿಪಿಆರ್

  • ಡಿಕೆಶಿ ಕನಸಿನ ಟನಲ್‌ ರೋಡ್‌ ಡಿಪಿಆರ್‌ನಲ್ಲಿ ಲೋಪದೋಷ!

    ಡಿಕೆಶಿ ಕನಸಿನ ಟನಲ್‌ ರೋಡ್‌ ಡಿಪಿಆರ್‌ನಲ್ಲಿ ಲೋಪದೋಷ!

    – ರಾಜ್ಯ ಸರ್ಕಾರವೇ ನೇಮಕ ಮಾಡಿದ ತಜ್ಞರ ಸಮಿತಿಯಿಂದ ವರದಿ

    ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರ ಕನಸಿನ ಕೂಸು ಸುರಂಗ ರಸ್ತೆ (Tunnel Road) ನಿರ್ಮಾಣ ಮಾಡಲು ಸಿದ್ಧತೆ ಮಾಡಿದ ಸಮಗ್ರ ಯೋಜನಾ ವರದಿಯಲ್ಲಿ (DPR) ಲೋಪದೋಷಗಳಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

    ಸಂಚಾರ ದಟ್ಟಣೆ ತಡೆಗಟ್ಟಲು 18 ಸಾವಿರ ಕೋಟಿ ರೂ. ವೆಚ್ಚದಲ್ಲಿ ಹೆಬ್ಬಾಳದಿಂದ (Hebbala) ಸಿಲ್ಕ್ ಬೋರ್ಡ್‌ವರೆಗೆ (Silk Board) 19 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಾಣಕ್ಕೆ ಡಿಪಿಆರ್‌ ಮಾಡಲಾಗಿದೆ.

    ಈ ಟನಲ್‌ ರಸ್ತೆಗೆ ವಿವಾದ ಜೋರಾಗುತ್ತಿದ್ದಂತೆ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಕಾರ್ಯನಿರ್ವಾಹಕ ನಿರ್ದೇಶಕ (ಸಿವಿಲ್) ಸಿದ್ದನಗೌಡ ಹೆಗರಡ್ಡಿ ನೇತೃತ್ವದಲ್ಲಿ ಐವರ ತಜ್ಞರ ಸಮಿತಿಯನ್ನು ರಚಿಸಿತ್ತು. ಈ ಸಮಿತಿ ಡಿಪಿಆರ್‌ ಅಧ್ಯಯನ ಮಾಡಿ ಹಲವು ದೋಷಗಳನ್ನು ಎತ್ತಿ ತೋರಿಸಿದೆ. ಇದನ್ನೂ ಓದಿ:  ಟ್ರಂಪ್‌ ಭಾಷಣಕ್ಕೆ ಅಡ್ಡಿ – ಇಬ್ಬರು ಇಸ್ರೇಲ್‌ ಸಂಸದರನ್ನು ಹೊರದಬ್ಬಿದ ಸಿಬ್ಬಂದಿ

    ಡಿಪಿಆರ್‌ನಲ್ಲಿರುವ ಲೋಪ ದೋಷಗಳೇನು?
    ತರಾತುರಿಯಲ್ಲಿ ಡಿಪಿಆರ್ ತಯಾರಿಕೆ ಮಾಡಲಾಗಿದೆ. ಸುರಂಗ ರಸ್ತೆ ಯೋಜನೆ ದೊಡ್ಡ ಯೋಜನೆಯಾಗಿದ್ದು 4 ಕಡೆ ಮಾತ್ರ ಮಣ್ಣಿನ ಪರೀಕ್ಷೆ ಮಾಡಲಾಗಿದೆ. 4 ಕಡೆ ಮಣ್ಣಿನ ಪರೀಕ್ಷೆ ಮಾಡಿ ಈ ಯೋಜನೆ ಮಾಡುವುದು ಸಾಧುವಲ್ಲ. ಇದನ್ನೂ ಓದಿ: ದೇಶದ ಮೊದಲ ಆದಾಯ ಸಮೀಕ್ಷೆ ಫೆಬ್ರವರಿಯಲ್ಲಿ ಆರಂಭ

    ಹೆಬ್ಬಾಳ ಟು ಸಿಲ್ಕ್ ಬೋರ್ಡ್‌ವರೆಗೆ ರೆಡ್ ಲೈನ್ ಮೆಟ್ರೋ ಮಾರ್ಗ ಬರುತ್ತಿದೆ. ಲಾಲ್‌ಬಾಗ್ ಬಳಿ ಮೆಟ್ರೋ ಮಾರ್ಗ ಬರಬೇಕಾದ್ರೆ ಟನಲ್ ಯಾಕೆ?

    ಪೀಕ್ ಅವರ್ ಟ್ರಾಫಿಕ್ ಗಣನೆಗೆ ತೆಗೆದುಕೊಂಡಿಲ್ಲ ಮತ್ತು ಹೆಬ್ಬಾಳ ನಾಲಾ ಡೈವರ್ಷನ್ ಸರಿಯಿಲ್ಲ. ಬೃಹತ್ ಯೋಜನೆಗೆ 10 ವರ್ಷ ಅಲ್ಲ 25 ವರ್ಷ ಬೇಕಾಗಬಹುದು. ಪಾದಚಾರಿ ಮಾರ್ಗ, ನೀರಿನ ಒಳಚರಂಡಿ ಸೇರಿದಂತೆ ಹೈಡ್ರಾಲಿಕ್ ವಿನ್ಯಾಸ, ವಿಪತ್ತು ನಿರ್ವಹಣೆ ಬಗ್ಗೆ ಉಲ್ಲೇಖ ಇಲ್ಲ.

    ಭೂಸ್ವಾಧಿನ ಹೇಗೆ ಎನ್ನುವುದರ ಬಗ್ಗೆ ಉಲ್ಲೇಖ ಆಗಿಲ್ಲ. ಪರಿಸರ ಕಾಳಜಿ, ಸಾರಿಗೆ ವ್ಯವಸ್ಥೆ ನಿರ್ವಹಣೆ ಮಾಹಿತಿ ಇಲ್ಲ. ಸಂಚಾರ ಸಂಬಂಧ ಮೂಲಭೂತವಾಗಿ ದೋಷಪೂರಿತವಾಗಿದೆ. ದುರ್ಬಲ ಸಂಚಾರ ಅಧ್ಯಯನ ಮತ್ತು ಪ್ರಾಥಮಿಕ ಡೇಟಾ ಕೊರತೆಯಿದೆ. ಬಿಎಂಟಿಸಿ, ಮೆಟ್ರೋ, ಉಪನಗರ ರೈಲುಗಳ ಅನುಕೂಲದ ಮಾಹಿತಿ ಉಲ್ಲೇಖಿಸಿಲ್ಲ.

  • ತುಮಕೂರಿಗೆ ಮೆಟ್ರೋ ರೈಲು‌ ಸೇವೆ ಕಲ್ಪಿಸಲು ಡಿಪಿಆರ್ ಪರಿಶೀಲನೆ ನಡೀತಿದೆ: ಪರಮೇಶ್ವರ್‌

    ತುಮಕೂರಿಗೆ ಮೆಟ್ರೋ ರೈಲು‌ ಸೇವೆ ಕಲ್ಪಿಸಲು ಡಿಪಿಆರ್ ಪರಿಶೀಲನೆ ನಡೀತಿದೆ: ಪರಮೇಶ್ವರ್‌

    -ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಬೇಕು; ಸಿಎಂ, ಡಿಸಿಎಂಗೆ ಮನವಿ

    ತುಮಕೂರು: ಜಿಲ್ಲೆಯು ಬಹಳ ವೇಗವಾಗಿ ಬೆಳೆಯಲಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಮೆಟ್ರೋ ರೈಲು (Metro Train) ಸೇವೆ ಕಲ್ಪಿಸಲು ಸಮಗ್ರ ಯೋಜನಾ ವರದಿಯ (DPR) ಪರಿಶೀಲನೆ ನಡೆಯುತ್ತಿದೆ ಎಂದು ಜಿ. ಪರಮೇಶ್ವರ್‌ (G Parameshwara) ತಿಳಿಸಿದರು.

    ತುಮಕೂರಿನಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸಾವಿರಾರು ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಪರಮೇಶ್ವರ್‌ ಮಾತನಾಡಿದರು. ತುಮಕೂರು ಜಿಲ್ಲೆಯಲ್ಲಿ ಇವತ್ತಿನ ಕಾರ್ಯಕ್ರಮ ಇತಿಹಾಸ ಸೃಷ್ಟಿ ಮಾಡಿದೆ. ಇವತ್ತು 1,250 ಕೋಟಿ ರೂ. ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. 1.5 ಲಕ್ಷ ಫಲಾನುಭವಿಗಳಿಗೆ ಸವಲತ್ತು ಹಂಚಿಕೆಯಾಗಿದೆ. ಕಂದಾಯ ಇಲಾಖೆಯಿಂದ 2 ಸಾವಿರ ಹಕ್ಕು ಪತ್ರ ಕೊಟ್ಟಿದ್ದೇವೆ. 891 ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದ್ದೇವೆ. ತುಮಕೂರು ಬೆಂಗಳೂರಿನ ಭಾಗವಾಗಿ ಅಭಿವೃದ್ಧಿಯಾಗುತ್ತಿದೆ ಎಂದು ಶ್ಲಾಘಿಸಿದರು.

    ಈಗಾಗಲೇ ಏಷ್ಯಾ ಖಂಡದಲ್ಲೇ ದೊಡ್ಡ ಕೈಗಾರಿಕಾ ಘಟಕ ಸ್ಥಾಪನೆಗೆ ಕ್ರಮ ಆಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಅಡಿಗಲ್ಲು ಹಾಕಲಾಗಿದೆ. ಈ ಮೂಲಕ ತುಮಕೂರು ವಿಶ್ವದ ಭೂಪಟದಲ್ಲಿ ಕಾಣಿಸಿಕೊಳ್ಳಲಿದೆ. ತುಮಕೂರು ಜಿಲ್ಲೆಗೆ ಕಾಯಕಲ್ಪ ಮಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಸಹಕಾರ ನೀಡುತ್ತಿದೆ. 2023 ರಲ್ಲಿ ಈ ರಾಜ್ಯದ ಜನತೆಗೆ 5 ಗ್ಯಾರಂಟಿ ಭರವಸೆ ಕೊಟ್ಟಿದ್ದೆವು. ಆ ಐದು ಗ್ಯಾರಂಟಿ ಪರಿಪೂರ್ಣವಾಗಿ ಜಾರಿ ಮಾಡಿದ್ದು ಸಿದ್ದರಾಮಯ್ಯರ ಕಾಂಗ್ರೆಸ್ ಸರ್ಕಾರ. ಆದರೆ 10 ಕೆಜಿ ಅಕ್ಕಿ ಕೊಡಲು ಆಗಿಲ್ಲ, ಬದಲಾಗಿ ದುಡ್ಡು ಕೊಟ್ಟಿದ್ದೇವೆ ಎಂದು ನುಡಿದರು. ಇದನ್ನೂ ಓದಿ: ರಾಜ್ಯದಲ್ಲಿ ಹಣ, ಹೆಂಡ ಹಂಚಿಕೆಯಲ್ಲಿ ಬಿಜೆಪಿಗೆ ಕಾಂಗ್ರೆಸ್ ಪೈಪೋಟಿ ನೀಡಿದೆ: ಚರ್ಚೆಗೆ ಗ್ರಾಸವಾಯ್ತು ಬಿಕೆ ಹರಿಪ್ರಸಾದ್ ಮಾತು

    ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆ ಬಹಳ ವೇಗವಾಗಿ ಬೆಳೆಯಲಿ. ತುಮಕೂರು ಜಿಲ್ಲೆಗೆ ಮೆಟ್ರೋ ರೈಲು ಬರುವ ಕಾಮಗಾರಿಯ ಡಿಪಿಆರ್ ನಡೀತಿದೆ ಎಂದರು. ಅಲ್ಲದೇ ತುಮಕೂರು, ಬೆಂಗಳೂರಿನಿಂದ ಕೇವಲ 65 ಕಿಮಿ ದೂರದಲ್ಲಿದೆ. ಹಾಗಾಗಿ ತುಮಕೂರಿಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗಬೇಕು. ರಾಜ್ಯದ 2ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನ ಇಲ್ಲಿಗೆ ಕೊಡಬೇಕು ಎಂದು ಸಿಎಂ, ಡಿಸಿಎಂಗೆ ವೇದಿಕೆಯಲ್ಲೇ ಮನವಿ ಮಾಡಿದರು. ಇದನ್ನೂ ಓದಿ:  ಪವನ್‌ ಕಲ್ಯಾಣ್‌ ಮನವಿ – ಆಂಧ್ರದ ಅರಣ್ಯ ಸಿಬ್ಬಂದಿಗೆ ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿ ತರಬೇತಿ

    ಮುಂದುವರಿದು… ಪಾವಗಡದಲ್ಲಿ ಭದ್ರಾದಿಂದ ಕುಡಿಯುವ ನೀರು ಬಂದಿದೆ. ಸ್ಮಾರ್ಟ್ ಸಿಟಿ ಅಡಿಯಲ್ಲಿ ಕೆಲವೇ ಕೆಲವು ವಾರ್ಡ್‌ ಅಭಿವೃದ್ಧಿ ಆಗಿದೆ. ಇನ್ನುಳಿದ ವಾರ್ಡ್‌ ಅಭಿವೃದ್ಧಿಗೆ 500 ಕೋಟಿ ರೂ. ನೀಡಬೇಕು ಎಂದು ಕೋರಿದರು. ಇದನ್ನೂ ಓದಿ: ಸಚಿವ ಸ್ಥಾನ ಉಳಿಸಿಕೊಳ್ಳಲು 1 ತಿಂಗಳ ಮೊದಲೇ ರಿಪೋರ್ಟ್‌ ಕಾರ್ಡ್‌ ಸಲ್ಲಿಸಿದ ಬೋಸರಾಜು

  • ರೋಹಿಣಿ ಸಿಂಧೂರಿಗೆ ಸಂಕಷ್ಟ – ಅಕ್ರಮ ಎಸಗಿದ್ದು ಸಾಬೀತು!

    ರೋಹಿಣಿ ಸಿಂಧೂರಿಗೆ ಸಂಕಷ್ಟ – ಅಕ್ರಮ ಎಸಗಿದ್ದು ಸಾಬೀತು!

    ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ (Rohini Sindhuri) ಸಂಕಷ್ಟ ಎದುರಾಗಿದೆ. ಮೈಸೂರು ಜಿಲ್ಲಾಧಿಕಾರಿ (Mysuru DC) ಆಗಿದ್ದ ವೇಳೆ ಡಿಸಿ ನಿವಾಸ ನವೀಕರಣ, ಬಟ್ಟೆ ಬ್ಯಾಗ್ ಖರೀದಿಯಲ್ಲಿ ನಿಯಮ ಉಲ್ಲಂಘನೆ ಆಗಿರುವುದು ಸಾಬೀತಾಗಿದೆ.

    ಸರ್ಕಾರದ ಪ್ರಾಥಮಿಕ ತನಿಖಾ ವರದಿ ಪ್ರಕಾರ ರೋಹಿಣಿ ಸಿಂಧೂರಿ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಡಿಪಿಎಆರ್ ಅಧೀನ ಕಾರ್ಯದರ್ಶಿ ಜೇಮ್ಸ್ ಥಾರಖನ್ ಪತ್ರ ಬರೆದಿದ್ದಾರೆ.  ಇದನ್ನೂ ಓದಿ: ಬಿಜೆಪಿ, ಜೆಡಿಎಸ್ ಮೈತ್ರಿ? – ಶಾ, ಹೆಚ್‌ಡಿಡಿ ಸಭೆಯ ಇನ್‌ಸೈಡ್‌ ಸ್ಟೋರಿ

    ಪತ್ರದಲ್ಲಿ ಪ್ರಾಥಮಿಕ ತನಿಖಾ ವರದಿಯ ಎಲ್ಲಾ ಅಂಶಗಳು ಉಲ್ಲೇಖ ಮಾಡಿದ್ದು, ಡಿಸಿ ನಿವಾಸ ನವೀಕರಣಕ್ಕೆ ಯಾವ ಅನುಮತಿ ಪಡೆದಿಲ್ಲ. ನವೀಕರಣಕ್ಕೆ ಬಳಸಿದ ಹಣಕ್ಕೂ ಆರ್ಥಿಕ ಇಲಾಖೆ ಅನುಮತಿ ಪಡೆದಿಲ್ಲ. ನಿಯಮ ಉಲ್ಲಂಘನೆ ಮಾಡಿದ್ದಾರೆ. ಬಟ್ಟೆ ಬ್ಯಾಗ್ ಖರೀದಿಯಲ್ಲೂ ಯಾವ ನಿಯಮಾವಳಿ ಪಾಲನೆ ಆಗಿಲ್ಲ ಎಂದು ನಮೂದು ಮಾಡಿದ್ದಾರೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹದಾಯಿ ಯೋಜನೆಗೆ ಡಿಪಿಆರ್‌ ಆಗಿದೆ; ಕಾಂಗ್ರೆಸ್‌ ಟೀಕೆಗೆ ತಲೆಕೆಡಿಸಿಕೊಳ್ಳಲ್ಲ – ಸಿಎಂ

    ಮಹದಾಯಿ ಯೋಜನೆಗೆ ಡಿಪಿಆರ್‌ ಆಗಿದೆ; ಕಾಂಗ್ರೆಸ್‌ ಟೀಕೆಗೆ ತಲೆಕೆಡಿಸಿಕೊಳ್ಳಲ್ಲ – ಸಿಎಂ

    ಹುಬ್ಬಳ್ಳಿ: ಮಹದಾಯಿ ಯೋಜನೆಗೆ (Mahadayi Project) ಡಿಪಿಆರ್‌ ಆಗಿದೆ. ಕಾಂಗ್ರೆಸ್‌ (Congress) ಟೀಕೆ-ಟಿಪ್ಪಣಿಗೆ ತಲೆಕೆಡಿಸಿಕೊಳ್ಳಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿರುಗೇಟು ನೀಡಿದ್ದಾರೆ.

    ಮಹದಾಯಿ ಯೋಜನೆಗಾಗಿ ಹುಬ್ಬಳ್ಳಿಯಲ್ಲಿ (Hubballi) ನಾಳೆ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ ಕೈಗೊಂಡಿದೆ. ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಸಿಎಂ ಬೊಮ್ಮಾಯಿ, ಮಹದಾಯಿ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ. ಗ್ರೀನ್ ಸಿಗ್ನಲ್ ಆದೇಶದಲ್ಲಿ ಕೆಳಗಡೆ ಸಹಿ ಇದೆ.‌ ಕಾಂಗ್ರೆಸ್ ಯಾವ ಉದ್ದೇಶಕ್ಕೆ ಆರೋಪಿಸುತ್ತಿದೆ ಎಂಬುದು ಗೊತ್ತಿಲ್ಲ. ಮಹದಾಯಿಗಾಗಿ ನಾವು ಹೋರಾಟ ಮಾಡಿದ್ವಿ. ಈಗ ಆ ಹೋರಾಟ ತಾರ್ಕಿಕ ಜಯ ಸಿಕ್ಕಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇನ್ನು 15 ದಿನಗಳಲ್ಲಿ ಪಕ್ಷದ ಪ್ರಣಾಳಿಕೆ ರಿಲೀಸ್ – ಜನಾರ್ದನ ರೆಡ್ಡಿ

    ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, 20-25 ವರ್ಷಗಳ ನಮ್ಮ ಹೋರಾಟಕ್ಕೆ ಫಲ ಸಿಕ್ಕಿದೆ. ಇಂತಹ ಸಂದರ್ಭಗಳಲ್ಲಿ ಲೋಪ ಹುಡುಕುವುದು ಅವರ ಮನಸ್ಥಿತಿ ಸೂಚಿಸುತ್ತೆ. ಅವರ ಟೀಕೆ-ಟಿಪ್ಪಣಿಗಳ ಬಗ್ಗೆ ತಲೆಕೆಡೆಸಿಕೊಳ್ಳುವುದಿಲ್ಲ. ಡಿಪಿಆರ್ ಆಗಿದ್ದು, ಎಂಓಎಫ್ ಕ್ಲಿಯರೆನ್ಸ್ ತೆಗೆದುಕೊಂಡು ಟೆಂಡರ್ ಕರೆದು ಕಾಮಗಾರಿ ಆರಂಭಿಸುತ್ತವೆ ಎಂದು ಹೇಳಿದ್ದಾರೆ.

    ಪಂಚಮಸಾಲಿ, ಒಕ್ಕಲಿಗ ಮೀಸಲಾತಿ ಹೆಚ್ಚಳ ವಿಚಾರವಾಗಿ ಮಾತನಾಡಿದ ಅವರು, ಮೀಸಲಾತಿ ನೀಡಲು ಸಂವಿಧಾನಾತ್ಮಕವಾಗಿ ಯಾವುದೇ ತೊಡಕು ಆಗಲ್ಲ. ಇದು‌ ಮಧ್ಯಂತರ ವರದಿ ಇದೆ. ಅಂತಿಮ ಆದೇಶದಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ. ಇದರಲ್ಲಿ ನಮ್ಮ ಸರ್ಕಾರದ ಉದ್ದೇಶ ಹೇಳಿದ್ದೇವೆ. ಅಂತಿಮ ವರದಿಯಲ್ಲಿ ಅಂಕಿಅಂಶಗಳ ಮಾಹಿತಿ ನೀಡುತ್ತೇವೆ. ಮೀಸಲಾತಿ ಜಾರಿ ವಿಚಾರದಲ್ಲಿ ಸಂಬಂಧಪಟ್ಟವರ ಜೊತೆ ಚರ್ಚಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಸಿ.ಟಿ ರವಿ ಒಬ್ಬ ಕುಡುಕ, ಗಾಂಜಾನೂ ಹೊಡಿತಾರೆ: ಬಿ.ಕೆ ಹರಿಪ್ರಸಾದ್

    ಯಾವುದೇ ಕಾರಣಕ್ಕೂ ಹಿಂದುಳಿದ ವರ್ಗದವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ. ಕೆಲ ವರ್ಗದ ಜನರಿಗೆ ಶೈಕ್ಷಣಿಕ- ಉದ್ಯೋಗದಲ್ಲಿ ಹಿನ್ನಡೆಯಾಗಿದ್ದು ನಿಜ. ಅವರಿಗೆ ನ್ಯಾಯ ಕೊಡುವ ನಿಟ್ಟಿನಲ್ಲಿ ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಇದಕ್ಕೆ ಸ್ಪಷ್ಟೀಕರಣ ಬೇಕಾದ್ರೆ ಕೊಡುತ್ತೇವೆ. ಇದರಲ್ಲಿ ಯಾರಿಗೂ ಅನ್ಯಾಯ ಮಾಡುವ ಪ್ರಶ್ನೆಯಿಲ್ಲ. ವಿರೋಧ ಪಕ್ಷದವರು ತಾವು ಅಧಿಕಾರದಲ್ಲಿ ಇದ್ದಾಗ ಈ ಬೇಡಿಕೆ ಈಡೇರಿಸಲು ಆಗಲಿಲ್ಲ. ಈಗ ನಾವು ಮಾಡುತ್ತಿರೋದ್ರಿಂದ ಸಮಸ್ಯೆಯಾಗಿದೆ ಎಂದು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಲಿಂಗನಮಕ್ಕಿಯಿಂದ ನೀರು ತರೋ ಬದಲು ಬೆಂಗಳೂರಿಗೆ ಪರ್ಯಾಯ ವ್ಯವಸ್ಥೆ ಮಾಡಿ: ಬಿಎಸ್‍ವೈ

    ಲಿಂಗನಮಕ್ಕಿಯಿಂದ ನೀರು ತರೋ ಬದಲು ಬೆಂಗಳೂರಿಗೆ ಪರ್ಯಾಯ ವ್ಯವಸ್ಥೆ ಮಾಡಿ: ಬಿಎಸ್‍ವೈ

    ಬೆಂಗಳೂರು: ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ತರುವ ಯೋಜನೆ ಕುರಿತು ವಿಸ್ತೃತ ಯೋಜನಾ ವರದಿ(ಡಿಪಿಆರ್) ತಯಾರಿಸುವುದನ್ನು ರಾಜ್ಯ ಸರ್ಕಾರ ಕೈಬಿಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.

    ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಡಾ.ಶ್ಯಾಮಪ್ರಸಾದ್ ಮುಖರ್ಜಿ ಬಲಿದಾನ ಸಂಸ್ಮರಣಾ ದಿನಾಚರಣೆ ವೇಳೆ ಮಾತನಾಡಿದ ಅವರು, ಲಿಂಗನಮಕ್ಕಿಯಿಂದ ನೀರು ಹರಿಸುವ ಯೋಜನೆ ಅಸಮಂಜಸವಾಗಿದ್ದು, ಬೆಂಗಳೂರಿಗೆ ನೀರು ತರಲು ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಬೇಕು. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸರ್ಕಾರ ವಿಶೇಷ ಗಮನ ಕೊಡಬೇಕು. ವಾಸ್ತವ ಸಮಸ್ಯೆ ಬಗೆಹರಿಸದೇ ಹಳ್ಳಿ ವಾಸ್ತವ್ಯ ಮಾಡುತ್ತೇನೆ. ಶಾಲೆಯಲ್ಲಿ ಮಲಗುತ್ತೇನೆ ಎಂಬುದು ಮೂರ್ಖತನ. ಇದು ಮುಖ್ಯಮಂತ್ರಿಗಳಿಗೆ ಶೋಭೆ ತರುವಂಥದ್ದಲ್ಲ ಎಂದು ಕಿಡಿಕಾರಿದರು.

    ಈ ಹಿಂದೆ ಮುಖ್ಯಮಂತ್ರಿಗಳು ವಾಸ್ತವ್ಯ ಮಾಡಿದ ಗ್ರಾಮಗಳ ಸ್ಥಿತಿ ಹೇಗಿದೆ ಎಂದು ತಿಳಿದಿದೆ. ನಾನು ಪ್ರವಾಸ ಕೈಗೊಂಡ ಸಂದರ್ಭದಲ್ಲಿ ವಿಪಕ್ಷ ನಾಯಕನಾಗಿಯೂ ಒಳ್ಳೆಯ ಕೆಲಸ ಮಾಡಿದ ಅಧಿಕಾರಿಗಳನ್ನು ಶ್ಲಾಘಿಸಿದ್ದೇನೆ. ಕೆಲಸ ಮಾಡದ ಕಡೆಗಳಲ್ಲಿ ಛೀಮಾರಿ ಹಾಕಿದ್ದೇನೆ. ವಿಪಕ್ಷ ನಾಯಕನಾಗಿ ನಾನು ಹೇಗೆ ಇರಬೇಕು ಎಂದು ಮುಖ್ಯಮಂತ್ರಿಗಳಿಂದ ಕಲಿಯಬೇಕಿಲ್ಲ. ಟೀಕೆ ಮಾಡುವ ಬದಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಭಿವೃದ್ಧಿ ಕೆಲಸದ ಕಡೆ ಗಮನಹರಿಸಲಿ. ಕಬ್ಬು ಬೆಲೆ ಬಾಕಿಗೆ ರೈತರು ಹೋರಾಟ ಮಾಡುತ್ತಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದ್ದು, ಇನ್ನಾದರೂ ರೈತರ ಬಾಕಿ ಕೊಟ್ಟು ರೈತರ ನೆರವಿಗೆ ಬರಲಿ ಎಂದು ಟೀಕಿಸಿದ್ದಾರೆ.

    ಖುದ್ದಾಗಿ ಮಾತನಾಡುತ್ತೇನೆ: ಜನೌಷಧಿ ಅಂಗಡಿ ಮುಂದಿದ್ದ ಬಿಜೆಪಿ ಬಾವುಟ ತೆರವುಗೊಳಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪರಮೇಶ್ವರ್ ಹಿರಿಯರು, ಅನುಭವಿಗಳು ಈ ರೀತಿ ಮಾಡಿರಲು ಸಾಧ್ಯವಿಲ್ಲ. ಒಂದು ವೇಳೆ ಮಾಡಿದ್ದರೆ ಅದು ಅಸಮಂಜಸ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು.

    ಬಿಜೆಪಿ ರಾಷ್ಟ್ರೀಯ ಪಕ್ಷ, ಪರಮೇಶ್ವರ್ ಅವರು ಆ ರೀತಿ ಹೇಳಲು ಸಾಧ್ಯವಿಲ್ಲ. ಅವರು ಹಿರಿಯ ಮತ್ತು ಅನುಭವಿ ರಾಜಕಾರಣಿ. ಒಂದು ವೇಳೆ ಈ ರೀತಿ ಮಾಡಿದ್ದರೆ ಅದು ಸಮಂಜಸವಲ್ಲ. ಈ ಕುರಿತು ನಾನೇ ಖುದ್ದಾಗಿ ಅವರೊಂದಿಗೆ ಮಾತನಾಡುತ್ತೇನೆ ಎಂದು ಯಡಿಯೂರಪ್ಪ ಪ್ರತಿಕ್ರಿಯಿಸಿದರು.

    ಕಾಂಗ್ರೆಸ್ಸಿನಿಂದ ಅವಮಾನ: ಡಾ.ಶ್ಯಾಮಪ್ರಸಾದ್ ಮುಖರ್ಜಿಯವರಿಗೆ ಕಾಂಗ್ರೆಸ್ ಎಲ್ಲ ಸಂದರ್ಭದಲ್ಲೂ ಅವಮಾನಿಸಿದೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ಸರ್ದಾರ್ ವಲ್ಲಭಬಾಯ್ ಪಟೇಲ್ ರೀತಿಯಲ್ಲೇ ಕಾಂಗ್ರೆಸ್‍ನಿಂದ ಶ್ಯಾಮಪ್ರಸಾದ್ ಮುಖರ್ಜಿಯವರಿಗೆ ಅನ್ಯಾಯ ಮಾಡಲಾಲಾಗಿದೆ ಎಂದರು.

    ಮುಖರ್ಜಿಯವರ ಅನುಮಾನಾಸ್ಪದ ಸಾವಿನ ಕುರಿತು ಅಂದಿನ ಕಾಂಗ್ರೆಸ್ ಸರ್ಕಾರ ತನಿಖೆಯನ್ನು ನಡೆಸಲಿಲ್ಲ. ನೆಹರು ಅವರಿಗೆ ಪರ್ಯಾಯ ನಾಯಕರಾಗಿ ಹೊರಹೊಮ್ಮುತ್ತಿದ್ದ ಕಾರಣ ಮುಖರ್ಜಿಯವರನ್ನು ತುಳಿಯುವ ಪ್ರಯತ್ನ ಮಾಡಲಾಯಿತು. ಜೂನ್ 23 ರಂದು ಶಾಮಪ್ರಸಾದ್ ಮುಖರ್ಜಿಯವರ ಪುಣ್ಯತಿಥಿ. ಅವರ ಜೀವನ, ಸಾಧನೆ ಹಾಗೂ ಬಲಿದಾನ ನಮ್ಮೆಲ್ಲ ಕಾರ್ಯಕರ್ತರಿಗೆ ಪ್ರೇರಣೆ. ಕಾಂಗ್ರೆಸ್‍ಗೆ ಪರ್ಯಾಯ ರಾಜಕೀಯ ಪಕ್ಷ ಕಟ್ಟಿದವರು ಶ್ಯಾಮಪ್ರಸಾದ್. ಭಾರತದ ಏಕತೆಗೆ ಪೂರಕವಲ್ಲದ 370 ವಿಧಿ ರದ್ದಾಗಬೇಕು ಎಂದು ಹೋರಾಟ ಮಾಡಿದ್ದರು. ಈಗ ಜಮ್ಮು ಕಾಶ್ಮೀರದ ಪರಿಸ್ಥಿತಿ ನೋಡಿದರೆ, ಅವರ ಹೋರಾಟದ ಮಹತ್ವ ತಿಳಿಯುತ್ತದೆ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು.

    ಜಮ್ಮು ಕಾಶ್ಮೀರಕ್ಕೆ ಆರ್ಟಿಕಲ್ 370 ಅಡಿ ನೀಡಿರುವ ವಿಶೇಷ ಸ್ಥಾನಮಾನ ರದ್ದು ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಕಾರ್ಯತತ್ಪರರಾಗಿದ್ದಾರೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡಿ, ಬದಲಾವಣೆಯ ಗಾಳಿ ಬೀಸುವಂತೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಬಿಜೆಪಿ ಉಪಾಧ್ಯಕ್ಷ ಗೋವಿಂದ ಕಾರಜೋಳ ಮಾತನಾಡಿ, ಕಾಂಗ್ರೆಸ್‍ನವರು ಅಸ್ಪೃಶ್ಯತೆಯನ್ನು ಜೀವಂತವಾಗಿಟ್ಟು ದಲಿತರನ್ನು ಮತ ಬ್ಯಾಂಕ್ ಮಾಡಿಕೊಂಡರು. ಅದರೆ ಆರ್‍ಎಸ್‍ಎಸ್ ಮತ್ತು ಬಿಜೆಪಿ ದೀನದಲಿತರ ಏಳಿಗೆಗೆ ಶ್ರಮಿಸುತ್ತಿದೆ. ಸಮಾನ ಭಾವನೆಯಿಂದ ನೋಡುತ್ತಿದೆ ಎಂದು ತಿಳಿಸಿದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]