Tag: ಡಿನ್ನರ್

  • ಐಫೋನ್ ತಯಾರಕ ಫಾಕ್ಸ್‌ಕಾನ್ ಕಂಪನಿ ಮುಖ್ಯಸ್ಥನ ಜೊತೆ ಸಿಎಂ, ಡಿಸಿಎಂ ಡಿನ್ನರ್

    ಐಫೋನ್ ತಯಾರಕ ಫಾಕ್ಸ್‌ಕಾನ್ ಕಂಪನಿ ಮುಖ್ಯಸ್ಥನ ಜೊತೆ ಸಿಎಂ, ಡಿಸಿಎಂ ಡಿನ್ನರ್

    ಬೆಂಗಳೂರು: ತೈವಾನ್ ಮೂಲದ ಆಪಲ್ ಫೋನ್ (Apple Phone) ತಯಾರಿಸುವ ಫಾಕ್ಸ್‌ಕಾನ್ (Foxconn) ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಅಧ್ಯಕ್ಷ ಯಂಗ್ ಲಿಯು (Young Liu) ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಚರ್ಚೆ ನಡೆಸಿದರು.

    ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಭೋಜನ ಕೂಟದ ವೇಳೆ ಫಾಕ್ಸ್‌ಕಾನ್ ಕಂಪನಿಗೆ ರಾಜ್ಯದಲ್ಲಿ ಕಾರ್ಯನಿರ್ವಹಿಸಲು ಅಗತ್ಯವಾದ ಎಲ್ಲಾ ರೀತಿಯ ಸಹಕಾರ, ನೆರವು ಒದಗಿಸಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ. ಸಾಂಸ್ಕೃತಿಕವಾಗಿ ಉನ್ನತ ಮೌಲ್ಯಗಳನ್ನು ಆಚರಿಸುತ್ತಿರುವ ರಾಜ್ಯದಲ್ಲಿ ಕೈಗಾರಿಕೆಗಳಿಗೆ ಅತ್ಯಗತ್ಯವಾದ ಕಾನೂನು ಮತ್ತು ಸುವ್ಯವಸ್ಥೆಯೂ ಉತ್ತಮವಾಗಿದೆ ಎಂದರು. ಇದನ್ನೂ ಓದಿ: ರಾಜ್ಯದ 2 ಮೆಟ್ರೋ ಕಾರಿಡಾರ್‌ಗಳಿಗೆ ಕೇಂದ್ರ ಅನುಮೋದನೆ: ಪ್ರಹ್ಲಾದ್ ಜೋಶಿ

    ಡಿಸಿಎಂ ಡಿ.ಕೆ.ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಎಲ್.ಕೆ.ಅತೀಕ್, ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಏಕ್ ರೂಪ್ ಕೌರ್ ಸೇರಿದಂತೆ ಕೈಗಾರಿಕೆ ಮತ್ತು ಐಟಿ ಬಿಟಿ ಇಲಾಖೆಯ ಹಿರಿಯ ಅಧಿಕಾರಿಗಳು ಭೋಜನ ಕೂಟದಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: TB Dam| ಮೊದಲ ಎಲಿಮೆಂಟ್ ಅಳವಡಿಸುವ ಕಾರ್ಯ ಯಶಸ್ವಿ

    ಫಾಕ್ಸ್ಕಾನ್ ಕಂಪನಿಗೆ ದೇವನಹಳ್ಳಿ ತಾಲೂಕು, ಕುಂದಾಣ ಹೋಬಳಿಗೆ ಸೇರಿದ ದೊಡ್ಡಗೊಲ್ಲಹಳ್ಳಿ ಮತ್ತು ಚಪ್ಪರದಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಕೈಗಾರಿಕೆ ಸ್ಥಾಪನೆಗಾಗಿ 300 ಎಕರೆ ಜಾಗ ಮಂಜೂರಾಗಿದ್ದು, ರಾಜ್ಯದಲ್ಲಿ ದೊಡ್ಡ ಮಟ್ಟದ ಹೂಡಿಕೆಗೆ ಮುಂದಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಜವಾಹರಲಾಲ್ ನೆಹರು ತಾರಾಲಯ ಆಧುನಿಕರಣಕ್ಕೆ ಅಗತ್ಯ ಪ್ರಸ್ತಾವನೆ ಸಲ್ಲಿಸಿ: ಬೋಸರಾಜು ಸೂಚನೆ

  • ವಿಜಯ್ ದೇವರಕೊಂಡ ಫ್ಯಾಮಿಲಿ ಜೊತೆ ರಶ್ಮಿಕಾ ಡಿನ್ನರ್: ಏನಿದು ಎಂದ ಫ್ಯಾನ್ಸ್

    ವಿಜಯ್ ದೇವರಕೊಂಡ ಫ್ಯಾಮಿಲಿ ಜೊತೆ ರಶ್ಮಿಕಾ ಡಿನ್ನರ್: ಏನಿದು ಎಂದ ಫ್ಯಾನ್ಸ್

    ಶ್ಮಿಕಾ (Rashmika Mandanna) ಅಂತೂ ಬಾಲಿವುಡ್‌ನಲ್ಲಿ ಸೆಟ್ಲ್ ಆಗಿದ್ದಾರೆ. ಈಗಷ್ಟೇ ಆನಿಮಲ್ ಸಿನಿಮಾ ಮುಗಿಸಿದ್ದಾರೆ, ಇನ್ನು ವಿಜಯ್ ದೇವರಕೊಂಡ (Vijay Devarakonda) ಟರ್ಕಿಯಲ್ಲಿ ಶೂಟಿಂಗ್ ಮುಗಿಸಿ ಬಂದಿದ್ದಾರೆ. ಇಬ್ಬರೂ ಒಂದು ರಿಲ್ಯಾಕ್ಸ್ ಡಿನ್ನರ್ ಮಾಡಿದ್ದಾರೆ. ವಿಶೇಷ ಅಂದ್ರೆ ಡಿನ್ನರ್‌ಲ್ಲಿ ವಿಜಯ್ ಕುಟುಂಬಸ್ಥರೂ ಇದ್ದಾರೆ. ಮೊಬೈಲ್‌ನಲ್ಲಿ ಸೆರೆಯಾಗಿದ್ದಾರೆ. ಈ ಮೀಟಿಂಗ್ ರಹಸ್ಯ ಏನು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

    ಕೆಲವೊಮ್ಮೆ ನೇರವಾಗಿ, ಇನ್ನೊಮ್ಮೆ ಸೀಕ್ರೇಟಾಗಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಜೊತೆ ಜೊತೆಯಾಗಿ ಕಾಣಿಸ್ಕೊಳ್ತಾರೆ. ಇದುವೇ ಅಭಿಮಾನಿಗಳಿಗೆ ಸಾಕಷ್ಟು ತಲೆನೋವು ಆಗಿರುವ ವಿಷಯ. ಕೋಸ್ಟಾರ್‌ಗಳು ಸಿನಿಮಾ ಮಾಡ್ತಿರುವಾಗ ಒಟ್ಟಿಗೆ ಕಾಣಿಸ್ಕೊಳ್ಳೋದೆಲ್ಲಾ ಸಾಮಾನ್ಯ. ಆದರೆ ಮುಗಿದ್ಮೇಲೂ ಜೊತೆಯಾಗಿ ಹಿತವಾಗಿ ಎಂದು ಸುತ್ತಾಡಿದ್ರೆ ಏನನ್ನೋದು? ಅದೇ ಆಗ್ಬಿಟ್ಟಿದೆ ಈಗ. ಹೈದ್ರಾಬಾದ್‌ನಲ್ಲಿ ರಶ್ಮಿಕಾ ಜೊತೆ ವಿಜಯ್ ದೇವರಕೊಂಡ ಫ್ಯಾಮಿಲಿ (Family) ಸಮೇತ ಡಿನ್ನರ್ ಮಾಡುವ ವೀಡಿಯೋ ವೈರಲ್ ಆಗಿದೆ. ಇದನ್ನೂ ಓದಿ:ಕೆಂಪು ಬಣ್ಣದ ಸೀರೆಯಲ್ಲಿ ಗ್ಲ್ಯಾಮರಸ್ ಆಗಿ ಮಿಂಚಿದ ಮಾನ್ವಿತಾ

    ರಶ್ಮಿಕಾ ನಿಂತಲ್ಲಿ ನಿಲ್ಲಲ್ಲ ಕೂತಲ್ಲಿ ಕೂರಲ್ಲ. ಹೀಗಾಗೇ ಈಗ ತಗ್ಲಾಕ್ಕೊಂಡಿದ್ದಾರೆ. ಊಟ (Dinner) ಮಾಡ್ತಾ ಕುರ್ಚಿಯಿಂದ ಎದ್ದು ನಿಂತಲ್ಲೇ ಸಣ್ಣದೊಂದು ಸ್ಟೆಪ್ ಹಾಕಿದ್ದಾರೆ. ಆಗಲೇ ದೂರದ ಟೇಬಲ್‌ನಲ್ಲಿದ್ದ ಹುಡುಗರ ಮೊಬೈನಲ್‌ನಲ್ಲಿ ಸೆರೆಯಾಗಿದ್ದು. ಪಕ್ಕದಲ್ಲಿ ನೋಡಿದ್ರೆ ಇದ್ದಿದ್ದು ವಿಜಯ್ ದೇವರಕೊಂಡ. ಅವರ ಪಕ್ಕದಲ್ಲಿ ಇಡೀ ದೇವರಕೊಂಡ ಫ್ಯಾಮಿಲಿ.

    ಅದೇನೇ ಇದ್ರೂ ರಶ್ಮಿಕಾ ಹಾಗೂ ವಿಜಯ್ ಬಗ್ಗೆ ಗುಸುಗುಸು ಹೆಚ್ಚಾಗೋದಕ್ಕೂ ಹೀಗೆ ಕಾಣಿಸ್ಕೊಂಡಿದ್ದಕ್ಕೂ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಆದರೂ ಫ್ಯಾನ್ಸ್ ಕೇಳ್ತಿದ್ದಾರೆ. ಬೆಸ್ಟ್ ಫ್ರೆಂಡ್ಸ್ ಜೊತೆಯಾಗಿ ಊಟ ಮಾಡಿದ್ರೂ ತಪ್ಪೇನ್ರಪ್ಪಾ ಎಂದು. ಇದಕ್ಕೆ ರಶ್ಮಿಮಾ ಮತ್ತು ವಿಜಯ್ ದೇವರಕೊಂಡ ಅಷ್ಟೇ ಉತ್ತರ ನೀಡಬೇಕಿದೆ.

  • ಬಾಯ್ ಫ್ರೆಂಡ್ ಜೊತೆ ಕ್ಯಾಮೆರಾ ಕಣ್ಣಿಗೆ ಬಿದ್ದ ಶೃತಿ ಹಾಸನ್

    ಬಾಯ್ ಫ್ರೆಂಡ್ ಜೊತೆ ಕ್ಯಾಮೆರಾ ಕಣ್ಣಿಗೆ ಬಿದ್ದ ಶೃತಿ ಹಾಸನ್

    ಮುಂಬೈ: ಕಾಲಿವುಡ್ ನಟ ಕಮಲ್ ಹಾಸನ್ ಪುತ್ರಿ ನಟಿ ಶೃತಿ ಹಾಸನ್ ತಮ್ಮ ಬಾಯ್ ಫ್ರೆಂಡ್ ಸಂತನು ಜೊತೆ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.

    ಸದಾ ಡೇಟಿಂಗ್, ಔಟಿಂಗ್, ಶಾಪಿಂಗ್, ಪಾರ್ಟಿ ಎಂದು ಸುತ್ತಾಡುತ್ತಾ ಬಾಯ್ ಫ್ರೆಂಡ್ ಸಂತನು ಜೊತೆ ಸಖತ್ ಎಂಜಾಯ್ ಮಾಡುತ್ತಿರುವ ಶೃತಿ ಹಾಸನ್ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಅ.2ರಂದು ಗಾಂಧಿ ನಡಿಗೆ ಕೃಷ್ಣೆಯ ಕಡೆಗೆ ನಿರ್ಣಾಯಕ ಪಾದಾಯಾತ್ರೆ- ಎಸ್‍ಆರ್ ಪಾಟೀಲ್

    shruthi hassan

    ಹೌದು ಶೃತಿ ಹಾಸನ್ ಹಾಗೂ ಸಂತನು ಮುಂಬೈನ ಬಾಸ್ತಿನದ ಬಳಿ ಬಾಂದ್ರದಲ್ಲಿ ಡಿನ್ನರ್‌ಗೆ ಬಂದಿದ್ದಾರೆ. ಈ ವೇಳೆ ಕಾರಿನಿಂದ ಇಳಿದ ಶೃತಿ ಹಾಸನ್ ಬ್ಲಾಕ್ ಆ್ಯಂಡ್ ಬ್ಲಾಕ್ ಕಲರ್ ಡ್ರೆಸ್ ತೊಟ್ಟು ಮಿಂಚಿದ್ದರೆ, ಸಂತನು ಬ್ಲಾಕ್ ಕಲರ್ ಪ್ಯಾಂಟ್ ಹಾಗೂ ಟೀ ಶರ್ಟ್ ಧರಿಸಿದ್ದರು. ಇದನ್ನೂ ಓದಿ: ಅಡವಿಡುವಾಗ ಅಸಲಿ, ತೆಗೆಯುವಾಗ ನಕಲಿ – ಗ್ರಾಮಸ್ಥರಿಂದ ಬ್ಯಾಂಕಿಗೆ ಮುತ್ತಿಗೆ

    shruthi hassan

    ಕೈಯಲ್ಲಿ ವ್ಯಾನಿಟಿ ಬ್ಯಾಗ್ ಹಿಡಿದು ಸಂತುನು ಜೊತೆ ಬಂದ ಶೃತಿ ಹಾಸನ್ ರೆಸ್ಟೋರೆಂಟ್ ಮುಂಭಾಗ ಕ್ಯಾಮೆರಾಗೆ ತಮ್ಮ ಬಾಯ್ ಫ್ರೆಂಡ್ ಜೊತೆ ಪೋಸ್ ನೀಡಿದ್ದಾರೆ. ಅಲ್ಲದೇ ಕ್ಯಾಮೆರಾದತ್ತ ಕೈ ಬೀಸಿ ಮುಂದೆ ಹೋಗುತ್ತಿದ್ದ ಶೃತಿ ಹಾಸನ್ ಮತ್ತೆ ಸಿಂಗಲ್ ಆಗಿ ನಿಂತು ಸೊಂಟದ ಮೇಲೆ ಕೈ ಇರಿಸಿಕೊಂಡು ಫೋಟೋಗೆ ಪೋಸ್ ನೀಡಿದರು. ಇದನ್ನೂ ಓದಿ:  ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತನ್ನಿ: ಪೇಜಾವರ ಶ್ರೀ ಒತ್ತಾಯ

    shruthi hassan

    ನಂತರ ಕೈ ಮುಗಿದು ಧನ್ಯವಾದ ತಿಳಿಸಿ ಸಂತನು ಅವರೊಂದಿಗೆ ರೆಸ್ಟೋರೆಂಟ್ ಒಳಗೆ ಹೋದರು. ಸಂತನು ಹಜರಿಕ್ ಒಬ್ಬ ಡೂಡಲ್ ಆರ್ಟಿಸ್ಟ್ ಮತ್ತು ಚಿತ್ರಗಾರ ಆಗಿದ್ದು, ಶೃತಿ ಹಲವು ತಿಂಗಳಿನಿಂದ ಡೇಟಿಂಗ್‍ನಲ್ಲಿದ್ದಾರೆ. ಕೆಲವು ತಿಂಗಳ ಹಿಂದೆಯಷ್ಟೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದ ಶೃತಿ ಹಾಸನ್ ಈ ವೇಳೆ ಬಾಯ್ ಫ್ರೆಂಡ್ ಸಂತನುಗೆ ಇಟ್ಟಿದ್ದ ಆಲೂಗಡ್ಡೆ ಎಂಬ ನಿಕ್ ನೇಮ್ ಅನ್ನು ರಿವೀಲ್ ಮಾಡಿದ್ದರು.

  • ವಿಜಯ್ ಜೊತೆ ಡಿನ್ನರ್‌ಗೆ ‘ಓಕೆ’, ಆದ್ರೆ ಕಂಡಿಷನ್ಸ್ ಅಪ್ಲೈ ಎಂದ ಎಲ್ಲಿಸ್ ಪೆರ್ರಿ

    ವಿಜಯ್ ಜೊತೆ ಡಿನ್ನರ್‌ಗೆ ‘ಓಕೆ’, ಆದ್ರೆ ಕಂಡಿಷನ್ಸ್ ಅಪ್ಲೈ ಎಂದ ಎಲ್ಲಿಸ್ ಪೆರ್ರಿ

    ನವದೆಹಲಿ: ಕೆಲ ದಿನಗಳ ಹಿಂದೆ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ಆಲ್‍ರೌಂಡರ್ ಎಲ್ಲಿಸ್ ಪೆರ್ರಿ ಅವರೊಂದಿಗೆ ಡಿನ್ನರ್ ಮಾಡಬೇಕು ಎಂದು ಟೀಂ ಇಂಡಿಯಾ ಆಟಗಾರ ಮುರಳಿ ವಿಜಯ್ ತಮ್ಮ ಮನಸ್ಸಿನ ಮಾತನ್ನು ಬಿಚ್ಚಿಟ್ಟಿದ್ದರು. ಸದ್ಯ ಮುರಳಿ ಮಾತಿಗೆ ಪ್ರತಿಕ್ರಿಯೆ ನೀಡಿರುವ ಎಲ್ಲಿಸ್ ಪೆರ್ರಿ, ಡಿನ್ನರ್‌ಗೆ ಸಮ್ಮತಿ ಸೂಚಿಸಿದ್ದಾರೆ.

    ಖಾಸಗಿ ಮಾಧ್ಯಮವೊಂದಕ್ಕೆ ಎಲ್ಲಿಸ್ ಪೆರಿ ಸಂದರ್ಶನದಲ್ಲಿ ಮುರಳಿ ವಿಜಯ್ ಡಿನ್ನರ್ ಪ್ರಶ್ನೆ ಅವರಿಗೆ ಎದುರಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿರುವ ಪೆರ್ರಿ, ವಿಜಯ್ ಜೊತೆ ಡಿನ್ನರ್ ಮಾಡಲು ಯಾವುದೇ ಅಭ್ಯಂತರವಿಲ್ಲ. ಆದರೆ ಡಿನ್ನರ್ ಬಿಲ್ ಮಾತ್ರ ಅವರೇ ಕಟ್ಟಬೇಕು ಎಂಬ ಷರತ್ತನ್ನು ವಿಧಿಸಿದ್ದಾರೆ.

    ಕೊರೊನಾ ಲಾಕ್‍ಡೌನ್ ಸಮಸ್ಯೆಯಿಂದ 60 ವರ್ಷಗಳ ಬಳಿಕ ವಿಶ್ವ ಕ್ರಿಕೆಟ್ ತನ್ನೆಲ್ಲ ಚುಟುವಟಿಗಳನ್ನು ನಿಲ್ಲಿಸಿದೆ. ಹೀಗಾಗಿ ಮನೆಯಲ್ಲೇ ಉಳಿದಿರುವ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಇದ್ದು, ಕೊರೊನಾ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಇನ್ನೂ ಕೆಲವರು ಇನ್‍ಸ್ಟಾ, ಫೇಸ್‍ಬುಕ್‍ಗಳಲ್ಲಿ ಲೈವ್ ಬಂದು ತಮ್ಮ ಅಭಿಮಾನಿಗಳ ಜೊತೆ ಮಾತನಾಡುತ್ತಿದ್ದಾರೆ. ಮುರಳಿ ವಿಜಯ್ ಕೂಡ ಸಾಮಾಜಿಕ ಜಾಲತಾನದಲ್ಲಿ ಲೈವ್ ಆಗಮಿಸಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದರು. ಈ ವೇಳೆ ನೀವು ಯಾರಿಬ್ಬರ ಜೊತೆ ಡಿನ್ನರ್ ಹೋಗಲು ಇಷ್ಟಪಡುತ್ತೀರಾ ಎಂದು ಅಭಿಮಾನಿಗೆ ಉತ್ತರಿಸಿ, ನಾನು ಆಸ್ಟ್ರೇಲಿಯಾದ ಎಲ್ಲಿಸ್ ಪೆರ್ರಿ ಮತ್ತು ಭಾರತದ ಆಟಗಾರ ಶಿಖರ್ ಧವನ್ ಅವರ ಜೊತೆ ಊಟಕ್ಕೆ ಹೋಗಲು ಬಯಸುತ್ತೇನೆ. ಎಲ್ಲಿಸ್ ಪೆರ್ರಿ ಅವರು ನೋಡಲು ಬಹಳ ಸುಂದರವಾಗಿ ಇದ್ದಾರೆ ಅವರ ಜೊತೆ ಡಿನ್ನರ್ ಗೆ ಹೋಗಲು ಬಯಸುತ್ತೇನೆ. ಧವನ್ ಅವರೊಂದಿಗೆ ಡಿನ್ನರ್ ಗೆ ಹೋಗುವುದು ಇಷ್ಟ. ಏಕೆಂದರೆ ನನಗೆ ಧವನ್ ಒಳ್ಳೆಯ ಸ್ನೇಹಿತ ಹಾಗೂ ಬಹಳ ತಮಾಷೆ ಮಾಡುತ್ತಾರೆ. ಈ ಕಾರಣಕ್ಕೆ ಈ ಇಬ್ಬರ ಜೊತೆ ಡಿನ್ನರ್ ಗೆ ಹೋಗಲು ಇಷ್ಟ ಪಡುವುದಾಗಿ ಹೇಳಿದ್ದರು.

    ಉಳಿದಂತೆ 2018 ಡಿಸೆಂಬರ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಕೊನೆಯ ಬಾರಿಗೆ ಭಾರತದ ಪರ ಆಡಿದ್ದ ಮುರಳಿ ವಿಜಯ್, ಆ ಬಳಿಕ ತಂಡದ ರೆಗ್ಯುಲರ್ ಆಟಗಾರರಾಗಿ ಸ್ಥಾನ ಪಡೆದಿಲ್ಲ. ಟೆಸ್ಟ್ ಆರಂಭಿಕರಾಗಿ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಅವರೊಂದಿಗೆ ರೋಹಿತ್ ಶರ್ಮಾ ಕೂಡ ತಂಡಕ್ಕೆ ಲಭ್ಯವಿರುವುದರಿಂದ ಮುರಳಿ ವಿಜಯ್ ಆಯ್ಕೆಯ ಅವಕಾಶಗಳು ಇಲ್ಲ ಎನ್ನಬಹುದು. ಆದರೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ವಿಜಯ್, ನಾನು ಕ್ರಿಕೆಟ್ ಮೇಲಿರುವ ಫ್ಯಾಷನ್ ಕಾರಣದಿಂದ ಮಾತ್ರ ಆಡುತ್ತಿದ್ದು, ದೇಶದ ಪರ ಆಡಬೇಕೆಂದಿಲ್ಲ ಎಂದು ತಮ್ಮ ಮನಸ್ಸಿನ ಮಾತನ್ನು ಹೇಳಿದ್ದರು. ಐಪಿಎಲ್‍ನಲ್ಲಿ ಕಳೆದ ಎರಡು ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಪರ ಮುರಳಿ ವಿಜಯ್ ಆಡುತ್ತಿದ್ದಾರೆ.

  • ಪೆರ್ರಿ ತುಂಬ ಚೆನ್ನಾಗಿದ್ದಾರೆ, ಅವ್ರ ಜೊತೆ ಡಿನ್ನರ್ ಹೋಗಬೇಕು: ಮುರಳಿ ವಿಜಯ್

    ಪೆರ್ರಿ ತುಂಬ ಚೆನ್ನಾಗಿದ್ದಾರೆ, ಅವ್ರ ಜೊತೆ ಡಿನ್ನರ್ ಹೋಗಬೇಕು: ಮುರಳಿ ವಿಜಯ್

    ಮುಂಬೈ: ಭಾರತದ ಕ್ರಿಕೆಟ್ ಆಟಗಾರ ಮುರಳಿ ವಿಜಯ್ ಅವರು ಆಸ್ಟ್ರೇಲಿಯಾದ ಮಹಿಳಾ ಆಟಗಾರ್ತಿ ಎಲ್ಲಿಸ್ ಪೆರ್ರಿ ಅವರು ನೋಡಲು ಬಹಳ ಸುಂದರವಾಗಿ ಇದ್ದಾರೆ ಅವರ ಜೊತೆ ಡಿನ್ನರ್ ಗೆ ಹೋಗಲು ಬಯಸುತ್ತೇನೆ ಎಂದು ಹೇಳಿದ್ದಾರೆ.

    ಕೊರೊನಾ ಭಯದಿಂದ 60 ವರ್ಷದ ನಂತರ ಕ್ರಿಕೆಟ್ ತನ್ನೆಲ್ಲ ಚುಟುವಟಿಗಳನ್ನು ನಿಲ್ಲಿಸಿದೆ. ಹೀಗಾಗಿ ಮನೆಯಲ್ಲೇ ಉಳಿದಿರುವ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಇದ್ದು, ಕೊರೊನಾ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಇನ್ನೂ ಕೆಲವರು ಇನ್‍ಸ್ಟಾ, ಫೇಸ್‍ಬುಕ್‍ಗಳಲ್ಲಿ ಲೈವ್ ಬಂದು ತಮ್ಮ ಅಭಿಮಾನಿಗಳ ಜೊತೆ ಮಾತನಾಡುತ್ತಿದ್ದಾರೆ.

    https://www.instagram.com/p/BqG-b4GBeQQ/

    ಸದ್ಯ ಮನೆಯಲ್ಲೇ ಇರುವ ಮುರಳಿ ವಿಜಯ್ ಕೂಡ ಲೈವ್ ಬಂದಿದ್ದು, ತಮ್ಮ ಅಭಿಮಾನಿಗಳ ಜೊತೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ನೀವು ಯಾರಿಬ್ಬರ ಜೊತೆ ಡಿನ್ನರ್ ಹೋಗಲು ಇಷ್ಟಪಡುತ್ತೀರಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಆಸ್ಟ್ರೇಲಿಯಾದ ಎಲ್ಲಿಸ್ ಪೆರ್ರಿ ಮತ್ತು ಭಾರತದ ಆಟಗಾರ ಶಿಖರ್ ಧವನ್ ಅವರ ಜೊತೆ ಊಟಕ್ಕೆ ಹೋಗಲು ಬಯಸುತ್ತೇನೆ ಎಂದು ಹೇಳಿದ್ದಾರೆ.

    ಈ ವೇಳೆ ಅಭಿಮಾನಿಯೋರ್ವ ಯಾಕೆ ಈ ಇಬ್ಬರರನ್ನು ಆಯ್ಕೆ ಮಾಡಿಕೊಂಡ್ರಿ ಎಂದು ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಉತ್ತರಿಸಿದ ವಿಜಯ್ ಎಲ್ಲಿಸ್ ಪೆರ್ರಿ ಅವರು ನೋಡಲು ಬಹಳ ಸುಂದರವಾಗಿ ಇದ್ದಾರೆ. ಜೊತೆಗೆ ಅವರು ಎಂದರೆ ನನಗೆ ತುಂಬ ಇಷ್ಟ ಅದಕ್ಕೆ ಅವರ ಜೊತೆ ಹೋಗಬೇಕು ಎಂದು ಹೇಳಿದೆ. ಜೊತೆಗೆ ಶಿಖರ್ ಧವನ್ ಅವರು ನನಗೆ ಒಳ್ಳೆಯ ಸ್ನೇಹಿತ ಮತ್ತು ಬಹಳ ತಮಾಷೆ ಮಾಡುತ್ತಾರೆ ಈ ಕಾರಣಕ್ಕೆ ಈ ಇಬ್ಬರ ಜೊತೆ ಹೋಗಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

    https://www.instagram.com/p/Bmx4j84n1eC/

    ಈ ವೇಳೆ ತಾವು ಐಪಿಎಲ್ ಆಡುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಗ್ಗೆ ಮಾತನಾಡಿದ ಮುರುಳಿ ವಿಜಯ್, ಸಿಎಸ್‍ಕೆ ಒಂದು ಉತ್ತಮ ತಂಡ. ಈ ತಂಡದಲ್ಲಿ ಇರುವ ಕೆಲ ಆಟಗಾರರು ಮೊದಲಿನಿಂದಲೂ ಇದೇ ತಂಡಕ್ಕಾಗಿ ಆಡಿದ್ದಾರೆ. ಅವರೆಲ್ಲರು ಕ್ರಿಕೆಟಿನ ದಂತಕಥೆಗಳು. ಅವರು ಯುವ ಆಟಗಾರರನ್ನು ಡ್ರೆಸ್ಸಿಂಗ್ ರೂಮ್‍ನಲ್ಲಿ ಹುರಿದುಂಬಿಸುತ್ತಾರೆ. ಅವರನ್ನು ನೋಡಿ ಕಲಿಯುವುದೇ ನಮಗೆ ಬೇಕಾದಷ್ಟು ಇದೆ ಎಂದು ಮುರಳಿ ವಿಜಯ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    https://www.instagram.com/p/BhqnWYlg2D_/

    ಒಂದು ಕಾಲದಲ್ಲಿ ಟೀಂ ಇಂಡಿಯಾ ಟೆಸ್ಟ್ ತಂಡದ ಖಾಯಂ ಆರಂಭಿಕ ಆಟಗಾರನಾಗಿದ್ದ ವಿಜಯ್, ಇದ್ದಕ್ಕಿದಂತೆ ಫಾರ್ಮ್ ಕಳೆದುಕೊಂಡ ಕಾರಣ ಟೀಂ ಇಂಡಿಯಾದಿಂದ ಹೊರಗೆ ಉಳಿದಿದ್ದಾರೆ. ಆದರೆ ಐಪಿಎಲ್ 13ನೇ ಅವೃತ್ತಿಯಲ್ಲಿ ಚೆನ್ನೈ ತಂಡದ ಪರ ಆಡಲು ಮುರಳಿ ವಿಜಯ್ ಅವರು ಸಕಲ ಸಿದ್ಧತೆಗಳನ್ನು ನಡೆಸಿದ್ದರು. ಆದರೆ ಕೊರೊನಾ ವೈರಸ್ ಭೀತಿಯಿಂದ ಮುಂದೂಡಿಕೆಯಾಗಿದೆ.

  • ಡಿನ್ನರಿಗೆ ಅರೆ ಬೆಂದ ಹೆಣದ ಕೈ, ಬೆರಳನ್ನು ಫ್ರೈ ಮಾಡ್ತಿದ್ದ ವ್ಯಕ್ತಿ ವಶಕ್ಕೆ

    ಡಿನ್ನರಿಗೆ ಅರೆ ಬೆಂದ ಹೆಣದ ಕೈ, ಬೆರಳನ್ನು ಫ್ರೈ ಮಾಡ್ತಿದ್ದ ವ್ಯಕ್ತಿ ವಶಕ್ಕೆ

    – ಗಾಬರಿಗೊಂಡು ಮನೆಯಿಂದ ಓಡಿ ಹೋದ ಪತ್ನಿ
    – ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

    ಲಕ್ನೋ: ಅರೆ ಬೆಂದ ಹೆಣದ ಮಾಂಸದಿಂದ ಅಡುಗೆ ಮಾಡುತ್ತಿದ್ದ ಪತಿಯನ್ನು ಪೊಲೀಸರು ಬಂಧಿಸಿದ ಘಟನೆ ಸೋಮವಾರ ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿ ನಡೆದಿದೆ.

    32 ವರ್ಷದ ಪತಿ ಸಂಜಯ್‍ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಟಿಕ್ಕೋಪುರ ಗ್ರಾಮದ ನಿವಾಸಿಯಾಗಿರುವ ಸಂಜಯ್ ಅರೆ ಬೆಂದ ಹೆಣದ ಮಾಂಸದಿಂದ ಅಡುಗೆ ಮಾಡುತ್ತಿದ್ದನು. ಈ ವೇಳೆ ಮಾರ್ಕೆಟ್‍ಗೆ ಹೋಗಿದ್ದ ಆತನ ಪತ್ನಿ ಅಡುಗೆ ಮನೆಗೆ ಹೋಗಿದ್ದಾಳೆ. ಆಗ ಪತಿ ಹೆಣದ ಮಾಂಸದಿಂದ ಅಡುಗೆ ಮಾಡುತ್ತಿರುವುದನ್ನು ನೋಡಿ ಗಾಬರಿಯಿಂದ ಅಲ್ಲಿಂದ ಓಡಿ ಹೋಗಿದ್ದಾಳೆ. ಈ ಎಲ್ಲಾ ಘಟನೆಯಿಂದ ಪತ್ನಿ ತನ್ನ ಪತಿಯ ಮನೆಗೆ ಹಿಂದಿರುಗಲು ನಿರಾಕರಿಸುತ್ತಿದ್ದಾಳೆ.

    ವರದಿಗಳ ಪ್ರಕಾರ, ಸಂಜಯ್ ಕುಡಿದ ನಶೆಯಲ್ಲಿ ಸ್ಮಶಾನಕ್ಕೆ ಹೋಗಿದ್ದನು. ಈ ವೇಳೆ ಅಲ್ಲಿ ಅರೆ ಬೆಂದಿದ್ದ ಹೆಣದ ದೇಹವನ್ನು ಬ್ಯಾಗಿನಲ್ಲಿ ಹಾಕಿಕೊಂಡಿದ್ದಾನೆ. ಬಳಿಕ ಮನೆಗೆ ಬಂದು ತವಾದಲ್ಲಿ ಫ್ರೈ ಮಾಡುತ್ತಿದ್ದನು. ಈ ವೇಳೆ ಅಡುಗೆ ಮನೆಗೆ ಬಂದ ಪತ್ನಿ ಅಲ್ಲಿ ತವಾದಲ್ಲಿ ಮನುಷ್ಯನ ಕೈ ಹಾಗೂ ಬೆರಳುಗಳನ್ನು ನೋಡಿ ಅಲ್ಲಿಂದ ಓಡಿ ಹೋಗಿ ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾಳೆ. ವಿಷಯ ತಿಳಿದ ಸ್ಥಳೀಯರು ಸಂಜಯ್‍ನನ್ನು ಮನೆಯೊಳಗೆ ಕೂಡಿ ಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್‍ಎನ್‍ಒ ಆರ್.ಸಿ ಶರ್ಮಾ, ಮಾಹಿತಿ ತಿಳಿದ ತಕ್ಷಣ ನಾವು ಸ್ಥಳಕ್ಕೆ ಭೇಟಿ ನೀಡಿದ್ದೇವು. ಆಗ ಮನುಷ್ಯನ ಮಾಂಸ ಪತ್ತೆಯಾಗಿತ್ತು. ಸದ್ಯ ಆರೋಪಿಯನ್ನು ನಾವು ವಶಕ್ಕೆ ಪಡೆದುಕೊಂಡಿದ್ದೇವೆ. ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಗಂಗಾ ನದಿಯ ದಡದಲ್ಲಿ ಶವವನ್ನು ಸುಡಲಾಗಿತ್ತು. ಅಲ್ಲಿಂದ ತಂದಿರುವುದಾಗಿ ಸಂಜಯ್ ಹೇಳಿದ್ದಾನೆ. ಇದೇ ವೇಳೆ ಸಂಜಯ್ ಕೆಲವು ದಿನಗಳ ಹಿಂದೆ ತನ್ನ ತಂದೆ ಮೇಲೆ ಹಲ್ಲೆ ಮಾಡಿದ್ದನು ಎಂಬುದು ತಿಳಿಯಿತು ಎಂದರು.

  • ಜಾಲಿ ರೈಡ್ ಕರೆದುಕೊಂಡು ಹೋಗಿ ಪತ್ನಿಯನ್ನೇ ಕೊಂದ

    ಜಾಲಿ ರೈಡ್ ಕರೆದುಕೊಂಡು ಹೋಗಿ ಪತ್ನಿಯನ್ನೇ ಕೊಂದ

    ಬೆಂಗಳೂರು: ಪತಿಯೊಬ್ಬ ತನ್ನ ಪತ್ನಿಯನ್ನು ಜಾಲಿ ರೈಡ್‍ಗೆ ಕರೆದುಕೊಂಡು ಹೋಗಿ ಕೊಲೆ ಮಾಡಿರುವ ಘಟನೆ ನವೆಂಬರ್ 16ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ತೇಜ್ ಸಿಂಗ್ ಅರೆಸ್ಟ್ ಆದ ಪತಿ. ಆರೋಪಿ ತೇಜ್ ಸಿಂಗ್ ಹಾಗೂ ಆತನ ಪತ್ನಿ ದೀಪಲ್ ಕಂವಾರ್ ಮೂಲತಃ ರಾಜಸ್ಥಾನದವರಾಗಿದ್ದು, ಹುಣಿಸೇಮಾರನಹಳ್ಳಿ ಬಳಿಯ ಜನತಾ ಕಾಲೋನಿಯಲ್ಲಿ ವಾಸವಿದ್ದರು. ಈ ದಂಪತಿ ಚಿಕ್ಕ ಚಿನ್ನದ ಮಳಿಗೆ ಹೊಂದಿದ್ದರು.

    ಇಬ್ಬರ ನಡುವೆ ಮನಸ್ಥಾಪವಿದ್ದ ಹಿನ್ನೆಲೆಯಲ್ಲಿ ಮನೆಯಲ್ಲಿ ದಿನ ನಿತ್ಯ ಜಗಳ ನಡೆಯುತ್ತಿತ್ತು. ಇದರಿಂದ ರೋಸಿ ಹೋಗಿದ್ದ ಪತಿ ತೇಜ್ ತನ್ನ ಪತ್ನಿ ದೀಪಲ್‍ಳನ್ನು ಕೊಲೆ ಮಾಡಲು ಸಂಚು ರೂಪಿಸಿದ್ದನು. ನ. 16ರಂದು ಸ್ನೇಹಿತನ ಹೆಸರಲ್ಲಿ ಕಾರು ಬುಕ್ ಮಾಡಿ ಪತ್ನಿ ಮತ್ತು ಸ್ನೇಹಿತರನ್ನು ಡಿನ್ನರ್ ಪಾರ್ಟಿಗೆ ಕರೆದುಕೊಂಡು ಹೋಗಿದ್ದನು. ಇದನ್ನೂ ಓದಿ: ಸೆಕ್ಸ್ ಫೋಟೋ ನೋಡಿ ಪತ್ನಿಯನ್ನು ಗುಂಡಿಕ್ಕಿ ಕೊಂದ

    ತೇಜ್ ಸಿಂಗ್ ಸ್ನೇಹಿತರ ಜೊತೆ ಪತ್ನಿಗೂ ಮದ್ಯಪಾನ ಮಾಡಿಸಿದ್ದಾನೆ ಎಂದು ಶಂಕಿಸಲಾಗಿದೆ. ಡಿನ್ನರ್ ನಂತರ ಸ್ನೇಹಿತರನ್ನು ವಾಪಸ್ ಮನೆಗೆ ಬಿಟ್ಟು, ಮಧ್ಯರಾತ್ರಿ ಪತ್ನಿಯನ್ನು ನಂದಿ ಬೆಟ್ಟದ ರಸ್ತೆಗೆ ಕರೆದುಕೊಂಡು ಹೋಗಿ ಕಾರಿನಿಂದ ಕೆಳಗೆ ತಳ್ಳಿದ್ದಾನೆ.

    ಕೆಳಗೆ ಬಿದ್ದು ಓದ್ದಾಡ್ತಿದ್ದ ಪತ್ನಿ ಮೇಲೆ ತೇಜ್ ಸಿಂಗ್ ಕಾರು ಹತ್ತಿಸಿ ಕೊಲೆ ಮಾಡಿದ್ದಾನೆ. ಬಳಿಕ ಅಪರಿಚಿತ ವಾಹನದಿಂದ ಅಪಘಾತವಾಗಿದೆ ಎಂದು ದೂರು ನೀಡಿದ್ದನು. ದೂರು ದಾಖಲಿಸಿಕೊಂಡ ಪೊಲೀಸರು ಕಾರಿನ ಜಿಪಿಎಸ್ ಪರಿಶೀಲಿಸಿದಾಗ ಅಪಘಾತ ಸ್ಥಳದಲ್ಲಿ ಹಿಂದೆ ಮುಂದೆ ಚಲಿಸುವ ಮಾಹಿತಿ ದೊರೆಯಿತು.

    ಬಳಿಕ ಪೊಲೀಸರು ತೇಜ್ ಸಿಂಗ್‍ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸರು ಆರೋಪಿ ತೇಜ್ ಸಿಂಗ್‍ನನ್ನು ಬಂಧಿಸಿದ್ದಾರೆ.

  • ಅಯೋಧ್ಯೆ ಐತಿಹಾಸಿಕ ತೀರ್ಪು – ನಾಲ್ವರು ನ್ಯಾಯಾಧೀಶರಿಗೆ ಸಿಜೆಐ ಡಿನ್ನರ್

    ಅಯೋಧ್ಯೆ ಐತಿಹಾಸಿಕ ತೀರ್ಪು – ನಾಲ್ವರು ನ್ಯಾಯಾಧೀಶರಿಗೆ ಸಿಜೆಐ ಡಿನ್ನರ್

    ನವದೆಹಲಿ: ಅಯೋಧ್ಯ ಪ್ರಕರಣದ ವಿಚಾರಣೆ ನಡೆಸಿ ಐತಿಹಾಸಿಕ ತೀರ್ಪ ಬರಲು ಕಾರಣರಾದ ಸಂವಿಧಾನ ಪೀಠದ ಎಲ್ಲ ನ್ಯಾಯಾಧೀಶರಿಗೆ ಮುಖ್ಯ ನ್ಯಾ. ರಂಜನ್ ಗೊಗೋಯ್ ರಾತ್ರಿ ಔತಣಕೂಟ ಆಯೋಜಿಸಿದ್ದಾರೆ.

    ಮುಖ್ಯ ನ್ಯಾಯಮೂರ್ತಿಗಳ ಜೊತೆ ನ್ಯಾಯಮೂರ್ತಿಗಳಾದ ಎಸ್ ಎ ಬೋಬ್ಡೆ, ಡಿವೈ ಚಂದ್ರಚೂಡ್, ಅಶೋಕ್ ಭೂಷಣ್ ಹಾಗೂ ಅಬ್ದುಲ್ ನಝೀರ್ ಸತತ 40 ದಿನಗಳ ಕಾಲ ವಿಚಾರಣೆ ನಡೆಸಿ ಶನಿವಾರ ಬೆಳಗ್ಗೆ 10:30ಕ್ಕೆ ತೀರ್ಪು ಪ್ರಕಟಿಸಿದರು.

    ತೀರ್ಪು ಪ್ರಕಟಿಸಿದ ಬೆನ್ನಲ್ಲೇ ಇಂದು ರಾತ್ರಿ ತಾಜ್ ಮನ್ ಸಿಂಗ್ ಹೋಟೆಲಿನಲ್ಲಿ ಔತಣಕೂಟ ಆಯೋಜಿಸಿದ್ದಾರೆ ಎಂದು ಮಾಧ್ಯಮವೊಂದು ಸುದ್ದಿ ಪ್ರಕಟಿಸಿದೆ.

    ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ಆಗಸ್ಟ್ 6ರಿಂದ 40 ದಿನಗಳ ಕಾಲ ನಿತ್ಯ ವಿಚಾರಣೆ ನಡೆಸಿದ ಪೀಠ, ಅಕ್ಟೋಬರ್ 17ರಂದು ತೀರ್ಪು ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸುವ ಮೂಲಕ ದಶಕಗಳ ವಿವಾದಕ್ಕೆ ತೆರೆ ಎಳೆದಿದೆ.

    ಸುಪ್ರೀಂ ತೀರ್ಪಿನ ಮುಖ್ಯಾಂಶಗಳು:
    ರಾಮ ಜನಿಸಿದ್ದು ಅಯೋಧ್ಯೆಯಲ್ಲೇ ಅನ್ನೋ ನಂಬಿಕೆ ಇದ್ದು ವಿವಾದಿತ 2.77 ಎಕ್ರೆ ರಾಮಲಲ್ಲಾಗೆ ಸೇರಿದ್ದಾಗಿದೆ. ಮಂದಿರ ನಿರ್ಮಾಣಕ್ಕೆ ನಿಯಮ ರೂಪಿಸಬೇಕು. 3 ತಿಂಗಳಲ್ಲಿ ಟ್ರಸ್ಟ್ ಮೂಲಕವೇ ಕೇಂದ್ರ ಸರ್ಕಾರವೇ ರಾಮಮಂದಿರದ ನಿರ್ಮಿಸಬೇಕು.

    ಮಸೀದಿಯನ್ನು ಕೆಡವಿದ್ದು ಕಾನೂನು ಉಲ್ಲಂಘನೆಯಾಗಿದೆ. ಸುನ್ನಿ ವಕ್ಫ್ ಬೋರ್ಡಿಗೆ ಅಯೋಧ್ಯೆಯಲ್ಲೇ 5 ಎಕ್ರೆ ಪರ್ಯಾಯ ಭೂಮಿಯನ್ನು ನೀಡಬೇಕು. ವಿಶೇಷಾಧಿಕಾರ ಬಳಸಿ ನೀಡುವ ಪರ್ಯಾಯ ಭೂಮಿ 3 ತಿಂಗಳಲ್ಲಿ ನಿರ್ಧರಿಸಬೇಕು.

    ಯಾತ್ರಿಗಳ ಅಭಿಪ್ರಾಯ, ಪುರಾತತ್ವ ಸಾಕ್ಷ್ಯ ಹಿಂದೂಗಳ ಪರವಾಗಿದೆ. ಮಸೀದಿಯ ಒಳಭಾಗದಲ್ಲಿ ಹಿಂದೂಗಳ ಪೂಜೆ ನಡೆಯುತಿತ್ತು. ಬ್ರಿಟಿಷರಿಂದಾಗಿ ಹಿಂದೂಗಳಿಗೆ ಪೂಜೆ ಕೈತಪ್ಪಿತ್ತು. 1856-1857ರವರೆಗೆ ನಮಾಜ್ ಬಗ್ಗೆ ದಾಖಲೆ ಇಲ್ಲ.

    ಬಾಬ್ರಿ ಮಸೀದಿ ಭೂಮಿ ಮಾಲೀಕತ್ವ ಶಿಯಾ ವಕ್ಫ್ ಬೋರ್ಡಿಗೆ ಒಳಪಟ್ಟಿದ್ದಲ್ಲ ಮತ್ತು ಹಕ್ಕಿಲ್ಲ. ಬಾಬರ್ ಕಮಾಂಡರ್ ಮೀರ್ ಬಾಕಿ ಬಾಬ್ರಿ ಮಸೀದಿ ನಿರ್ಮಿಸಿದ್ದಾನೆ. ಜನರ ಧಾರ್ಮಿಕ ನಂಬಿಕೆಗಳನ್ನು ಗೌರವಿಸ್ತೇವೆ. ಪೂಜೆ ಮಾಡುವವರ ಹಕ್ಕನ್ನು ಮಾನ್ಯ ಮಾಡಿದ್ದೇವೆ.

    ಮಸೀದಿಯ ಒಳಭಾಗದ ಬಗ್ಗೆಯೂ ವಿವಾದವಿದೆ. ಭೂ ಮಾಲೀಕತ್ವ ನಂಬಿಕೆ ಮೇಲೆ ಆಗುವುದಿಲ್ಲ. ಬಾಬ್ರಿ ಮಸೀದಿ ಧ್ವಂಸ ಮಾಡಿದ್ದು ಪ್ರಾರ್ಥನೆ ಹಕ್ಕಿನ ಉಲ್ಲಂಘನೆ. ಅಲಹಾಬಾದ್ ಕೋರ್ಟ್ ಮೂವರು ಅರ್ಜಿದಾರರಿಗೆ ಸಮಾನವಾಗಿ ಮೂರು ಭಾಗವಾಗಿ ಹಂಚಿಕೆ ಮಾಡಿ ತೀರ್ಪು ನೀಡಿದ್ದು ತಪ್ಪು. ಸಂವಿಧಾನದ ಮುಂದೆ ಎಲ್ಲಾ ಧರ್ಮಗಳೂ ಒಂದೇ. ಜಡ್ಜ್ ಗಳಿಗೆ ಎಲ್ಲಾ ಧರ್ಮಗಳು ಒಂದೇ. ನಿರ್ಮೋಹಿ ಅಖಾಡದ ಅರ್ಜಿಯನ್ನು ನಾವು ಪರಿಗಣಿಸುವುದಿಲ್ಲ. ಆದರೆ ಕೇಂದ್ರ ಸರ್ಕಾರ ದೇವಾಲಯ ನಿರ್ಮಾಣ ಮಾಡುವ ಟ್ರಸ್ಟ್ ನಲ್ಲಿ ನಿರ್ಮೋಹಿ ಅಖಾಡಕ್ಕೆ ಪ್ರತಿನಿಧ್ಯ ನೀಡಬೇಕು.

  • ಡಿನ್ನರ್​ಗೆ ಕರೆದು ರೇಪ್-ಟೆಕ್ಕಿ ಅರೆಸ್ಟ್

    ಡಿನ್ನರ್​ಗೆ ಕರೆದು ರೇಪ್-ಟೆಕ್ಕಿ ಅರೆಸ್ಟ್

    ಬೆಂಗಳೂರು: ಯುವತಿಗೆ ಡಿನ್ನರಿಗೆ ಕರೆದು ಆಕೆಯ ಮೇಲೆ ಅತ್ಯಾಚಾರ ಎಸಗಿದ ಟೆಕ್ಕಿಯನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.

    ದೆಹಲಿ ಮೂಲದ ಮೈಕೆಲ್ ಸೊರೆಂಗ್(23) ಬಂಧಿತ ಸಾಫ್ಟ್ ವೇರ್ ಉದ್ಯೋಗಿ. ನಿದ್ರೆ ಮಾತ್ರೆ ಬೆರೆಸಿದ ಜ್ಯೂಸ್ ಕುಡಿಸಿ 32 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

    ಮೈಕಲ್ ಜಾರ್ಖಾಂಡ್ ನ ರಾಂಚಿ ಮೂಲದ ಯುವತಿಯನ್ನು ಸೆಪ್ಟಂಬರ್ 8ರಂದು ಊಟಕ್ಕೆಂದು ಮನೆಗೆ ಆಹ್ವಾನಿಸಿ ಅತ್ಯಾಚಾರವೆಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಬಳಿಕ ಸಂತ್ರಸ್ತೆ ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಮೈಕಲ್ ಮದುವೆಯಾಗುತ್ತೇನೆಂದು ನಂಬಿಸಿದ್ದಾನೆ. ನಂತರ ಕೆಲ ದಿನಗಳ ಬಳಿಕ ಸಂತ್ರಸ್ತೆ ಮೈಕಲ್ ನನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಆತ ಫ್ಲಾಟ್ ಖಾಲಿ ಮಾಡಿ ಎಸ್ಕೇಪ್ ಆಗಿದ್ದಾನೆ. ಬಳಿಕ ನೊಂದ ಸಂತ್ರಸ್ತೆ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಯುವತಿ ದೂರು ದಾಖಲಿಸಿಕೊಂಡ ಬೆಳ್ಳಂದೂರು ಪೊಲೀಸರು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376, 420 ಅಡಿ ಎಫ್‍ಐಆರ್ ದಾಖಲಿಸಿದ್ದಾರೆ. ಯುವತಿ ಮೇಲೆ ಅತ್ಯಾಚಾರವೆಸಗಿದ್ದಕ್ಕೆ ಪೊಲೀಸರು ಟೆಕ್ಕಿಯನ್ನು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂದಿರಾ ಕ್ಯಾಂಟೀನ್‍ನಲ್ಲಿ ಕ್ಯಾಂಡಲ್ ಲೈಟ್ ಡಿನ್ನರ್…!

    ಇಂದಿರಾ ಕ್ಯಾಂಟೀನ್‍ನಲ್ಲಿ ಕ್ಯಾಂಡಲ್ ಲೈಟ್ ಡಿನ್ನರ್…!

    ಮೈಸೂರು: ಕನಸಿನ ಯೋಜನೆಯಾಗಿದ್ದ ಇಂದಿರಾ ಕ್ಯಾಂಟೀನ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದೇ ತವರು ಜಿಲ್ಲೆಯಲ್ಲಿ ಯಾವ ಸ್ಥಿತಿಯಲ್ಲಿದೆ ಅಂತಾ ನೋಡಿದರೆ ನಿಮಗೆ ಅಯ್ಯೋ ಎನ್ನಿಸೋದು ಖಚಿತ. ಮೈಸೂರಿನ ಕನಕಗಿರಿಯಲ್ಲಿ ಇಂದಿರಾ ಕ್ಯಾಂಟೀನ್ ಇದೆ. ಈ ಕ್ಯಾಂಟೀನ್ ನಲ್ಲಿ ಪ್ರತಿ ದಿನ ರಾತ್ರಿ ಕ್ಯಾಂಡಲ್ ಲೈಟ್ ಡಿನ್ನರ್ ನಡೆಯುತ್ತದೆ.

    ಇಂದಿರಾ ಕ್ಯಾಂಟೀನ್ ನಲ್ಲಿ ವಿದ್ಯುತ್ ಇಲ್ಲ. ಇಂದಿರಾ ಕ್ಯಾಂಟೀನ್ ಗೆ ಇದ್ದ ವಿದ್ಯುತ್ ಸರಬರಾಜು ಕಟ್ ಆಗಿ 15 ದಿನವಾಗಿದೆ. ಆದರೂ ಸಂಬಂಧಪಟ್ಟವರು ಇದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿಲ್ಲ. ಪರಿಣಾಮ ಜನರು ರಾತ್ರಿ ವೇಳೆ ಕ್ಯಾಂಡಲ್ ಇಟ್ಟುಕೊಂಡು ಊಟ ಮಾಡುತ್ತಿದ್ದಾರೆ.

    ಊಟ ಕೊಡುವವರು ಸಹಿತ ಕ್ಯಾಂಡಲ್ ಹಚ್ಚಿಕೊಂಡು ಊಟ ಕೊಡುತ್ತಿದ್ದಾರೆ. ಇಂದಿರಾ ಕ್ಯಾಂಟೀನಿನ ಉಸ್ತುವಾರಿಯನ್ನು ಮೈಸೂರು ಮಹಾನಗರ ಪಾಲಿಕೆ ಹೊತ್ತಿದೆ. ಮೈಸೂರು ಪಾಲಿಕೆಯಲ್ಲೂ ಕಾಂಗ್ರೆಸ್ ಆಡಳಿತದಲ್ಲಿದೆ. ಆದರೂ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಯೋಜನೆ ವಿಚಾರದಲ್ಲಿ ಈ ರೀತಿಯ ಅಸಡ್ಡೆ ಮುಂದುವರಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv