Tag: ಡಿನೋಟಿಫಿಕೇಷನ್

  • ಕ್ವಾರಂಟೈನ್ ನೆಪ ಹೇಳಿರೋ ಹೆಚ್‍ಡಿಕೆಗೆ ಕೋರ್ಟ್ ಚಾಟಿ – ಪ್ರಚಾರಕ್ಕೆ ಹೋದ್ರೆ ಅರೆಸ್ಟ್ ವಾರೆಂಟ್

    ಕ್ವಾರಂಟೈನ್ ನೆಪ ಹೇಳಿರೋ ಹೆಚ್‍ಡಿಕೆಗೆ ಕೋರ್ಟ್ ಚಾಟಿ – ಪ್ರಚಾರಕ್ಕೆ ಹೋದ್ರೆ ಅರೆಸ್ಟ್ ವಾರೆಂಟ್

    ಬೆಂಗಳೂರು: ಹಲಗೆ-ವಡೇರಹಳ್ಳಿ ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಗೈರು ಹಾಜರಿಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ್ಯಾಯಾಧೀಶ ಶ್ರೀಧರ್ ಗೋಪಾಲಕೃಷ್ಣ ಗರಂ ಆಗಿದ್ದಾರೆ.

    ಖುದ್ದು ಹಾಜರಿಗೆ ಸೂಚಿಸಿದರೂ, ಹೋಂ ಕ್ವಾರಂಟೈನ್ ಕಾರಣ ನೀಡಿ ಕುಮಾರಸ್ವಾಮಿ ಇಂದಿನ ವಿಚಾರಣೆಗೆ ಗೈರು ಹಾಜರಾಗಿದ್ರು. ಇದರಿಂದ ಸಿಟ್ಟಾದ ನ್ಯಾಯಾಧೀಶರು, ಮುಂದಿನ ವಿಚಾರಣೆ ನಡೆಯುವ ಏಪ್ರಿಲ್ 17ರವರೆಗೆ ಕುಮಾರಸ್ವಾಮಿ ಯಾವುದೇ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳಬಾರದು. ನಾನು ಮನೆಗೆ ಹೋಗಿ ಟಿವಿ ನೋಡುತ್ತೇನೆ, ಪತ್ರಿಕೆ ಓದುತ್ತೇನೆ. ಎಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುತ್ತೇನೆ. ಎಲ್ಲಾದ್ರೂ ಕುಮಾರಸ್ವಾಮಿ ಕಾಣಿಸಿಕೊಂಡ್ರೇ ಅರೆಸ್ಟ್ ವಾರೆಂಟ್ ಜಾರಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಖುದ್ದು ಹಾಜರಿಗೆ ಸಮನ್ಸ್ ನೀಡಿದ್ರೂ ಅವರು ಗೈರಾಗಿದ್ದಾರೆ. ಕೋರ್ಟ್ ಆದೇಶಕ್ಕೆ ಬೆಲೆ ಇಲ್ವಾ? ಗೌರವ ಕೊಡುವುದು ಬೇಡ್ವಾ ಎಂದು ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ರು. ಮಾಜಿ ಪ್ರಧಾನಿ ದೇವೇಗೌಡ ದಂಪತಿಗೆ ಕೊರೊನಾ ಹಿನ್ನೆಲೆ ಹೆಚ್‍ಡಿಕೆ ಹೋಂ ಕ್ವಾರಂಟೈನ್‍ನಲ್ಲಿದ್ದಾರೆ ಎಂದು ಕೋರ್ಟ್‍ಗೆ ವಕೀಲರು ಮಾಹಿತಿ ನೀಡಿದ್ರು. ಕೋರ್ಟ್‍ನ ಈ ಆದೇಶದಿಂದಾಗಿ ಉಪ ಚುನಾವಣೆಯ ಪ್ರಚಾರದಿಂದ ಹೆಚ್‍ಡಿಕೆ ದೂರ ಉಳಿಯಬೇಕಾಗುತ್ತದೆ.

  • 2 ಡಿನೋಟಿಫಿಕೇಷನ್‌ ಕೇಸ್‌ – ಬಿಎಸ್‌ವೈ ವಿರುದ್ಧ ತನಿಖೆ ಮುಂದುವರಿಸುವಂತೆ ಆದೇಶ

    2 ಡಿನೋಟಿಫಿಕೇಷನ್‌ ಕೇಸ್‌ – ಬಿಎಸ್‌ವೈ ವಿರುದ್ಧ ತನಿಖೆ ಮುಂದುವರಿಸುವಂತೆ ಆದೇಶ

    ಬೆಂಗಳೂರು: ಸಿಎಂ ಯಡಿಯೂರಪ್ಪ ಅವರಿಗೆ ಇಂದು ಡಿನೋಟಿಫಿಕೇಷನ್ ಭೂತ ಬೆನ್ನು ಬಿದ್ದಿದೆ. ಅದು ಕೂಡ ಒಂದೇ ದಿನ ಎರಡೆರಡು ಪ್ರಕರಣಗಳ ತನಿಖೆ ಮುಂದುವರೆಸುವಂತೆ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದೆ.

    ಬೆಂಗಳೂರಿನ ಗಂಗೇನಹಳ್ಳಿ ಬಳಿಯ ಮಠದಹಳ್ಳಿಯ 1 ಎಕರೆ 11 ಗುಂಟೆ ಜಮೀನನ್ನು ನಿಯಮ ಮೀರಿ 2007 ಡಿನೋಟಿಫಿಕೇಷನ್ ಮಾಡಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಜಯಕುಮಾರ್ ಹಿರೇಮಠ ಲೋಕಾಯಕ್ತಕ್ಕೆ ದೂರು ನೀಡಿದ್ದು ಎಫ್‌ಐಆರ್‌ ದಾಖಲಾಗಿತ್ತು. ಈ ಎಫ್‌ಐಆರ್‌  ರದ್ದು ಮಾಡುವಂತೆ ಬಿಎಸ್ ಯಡಿಯೂರಪ್ಪ ಅವರು ಹೈಕೋರ್ಟ್ ಮೊರೆ ಹೋಗಿದ್ದರು.

    ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ಏಕಸದಸ್ಯ ಪೀಠ ಅರ್ಜಿಯನ್ನು ವಜಾ ಮಾಡಿದ್ದು ಅಲ್ಲದೇ ಯಡಿಯೂರಪ್ಪ ಅವರಿಗೆ 25 ಸಾವಿರ ದಂಡ ಪಾವತಿಸುವಂತೆ ಆದೇಶ ನೀಡಿದೆ.

    ಮಠದಹಳ್ಳಿ ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕೂಡ ಎರಡನೆಯ ಆರೋಪಿಯಾಗಿದ್ದಾರೆ. ಜೊತೆಗೆ ಪ್ರಕರಣದ ತನಿಖೆ ನಡೆಸುವಂತೆ ಆದೇಶ ನೀಡಲಾಗಿದೆ.

    ನ್ನೊಂದು ಪ್ರಕರಣವಾದ ದೇವನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದಲ್ಲೂ ಕೂಡ ಯಡಿಯೂರಪ್ಪ ಅವರಿಗೆ ಹಿನ್ನಡೆಯಾಗಿದೆ. ಸಾಮಾಜಿಕ ಹೋರಾಟಗಾರ ಅಲಂಪಾಷಾ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಪರಿಶೀಲಿಸಿ ತನಿಖೆಯನ್ನು ಮುಂದುವರೆಸಲು ಆದೇಶವನ್ನು ನೀಡಿದೆ.

    2016 ರಲ್ಲಿ ಈ ಪ್ರಕರಣವನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ರದ್ದು ಪಡಿಸಿತ್ತು. ಕೆಳಹಂತದ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ಆಲಂ ಪಾಷಾ. ದೇವನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಮುರುಗೇಶ್ ನಿರಾಣಿ ಮೊದಲ ಆರೋಪಿಯಾಗಿದ್ದರೆ ಯಡಿಯೂರಪ್ಪ ಅವರು ಎರಡನೆಯ ಆರೋಪಿಯಾಗಿದ್ದಾರೆ. 26 ಎಕರೆ ಭೂಮಿಯನ್ನು ಕಾನೂನು ಬಾಹಿರವಾಗಿ ಡಿನೋಟಿಫಿಕೇಷನ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

  • ಅರ್ಕಾವತಿ ಡಿನೋಟಿಫಿಕೇಷನ್: ಸಿಎಂ ಕುಮಾರಸ್ವಾಮಿಗೆ ಬಿಗ್ ರಿಲೀಫ್

    ಅರ್ಕಾವತಿ ಡಿನೋಟಿಫಿಕೇಷನ್: ಸಿಎಂ ಕುಮಾರಸ್ವಾಮಿಗೆ ಬಿಗ್ ರಿಲೀಫ್

    ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರಿಗೆ ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಬಿಗ್ ರಿಲೀಫ್ ಸಿಕ್ಕಿದೆ. ತನಿಖೆಯಿಂದ ಹೆಸರು ಕೈಬಿಡುವಂತೆ ಕೋರಿದ್ದ ಅರ್ಜಿಯನ್ನು ಸಂಸದರು, ಶಾಸಕರ ವಿರುದ್ಧ ಪ್ರಕರಣಗಳ ವಿಶೇಷ ನ್ಯಾಯಾಲಯ ಮಾನ್ಯ ಮಾಡಿದೆ.

    ಸಿಎಂ ಕುಮಾರಸ್ವಾಮಿ, ಭೂಮಾಲೀಕರಾದ ಶ್ರೀರಾಮ್, ರವಿ ಪ್ರಕಾಶ್ ಹಾಗೂ ರಾಮಲಿಂಗಂ ಅವರನ್ನು ನ್ಯಾಯಾಧೀಶ ಬಿ.ವಿ.ಪಾಟೀಲ್ ತನಿಖೆಯಿಂದ ಮುಕ್ತ ಮಾಡಿದ್ದಾರೆ. ಮಾಜಿ ಸಚಿವ ಚೆನ್ನಿಗಪ್ಪ ತನಿಖೆಯಿಂದ ಕೈಬಿಡುವಂತೆ ಅರ್ಜಿ ಸಲ್ಲಿಸಿರಲಿಲ್ಲ, ಹೀಗಾಗಿ ಚೆನ್ನಿಗಪ್ಪ ವಿರುದ್ಧ ಮಾತ್ರ ಇದೀಗ ಪ್ರಕರಣ ಉಳಿದುಕೊಂಡಿದೆ.

    ಡಿನೋಟಿಫಿಕೇಷನ್ ಆದ 4 ವರ್ಷದ ಬಳಿಕ ದೂರು ದಾಖಲಾಗಿದೆ. ಉದ್ದೇಶ ಪೂರ್ವಕವಾಗಿ ಅಥವಾ ಲಾಭದಾಯಕವಾಗಿ ಡಿನೋಟಿಫಿಕೇಷನ್ ಮಾಡಿರೋದಕ್ಕೆ ಪೂರಕ ಸಾಕ್ಷ್ಯಾಧಾರಗಳು ಇಲ್ಲ. ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೇ ದೂರು ದಾಖಲು ಮಾಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

    ವಿಶೇಷ ನ್ಯಾಯಾಲಯ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ವಿಚಾರಣೆ ಮುಂದುವರಿಸಬೇಕೆ ಅಥವಾ ಬೇಡವೇ ಎಂಬ ಪ್ರಕರಣದ ತೀರ್ಪನ್ನು ಆಗಸ್ಟ್ 27ಕ್ಕೆ ಕಾಯ್ದಿರಿಸಿತ್ತು.

    ಏನಿದು ಪ್ರಕರಣ?
    ಅರ್ಕಾವತಿ ಬಡಾವಣೆ ಅಭಿವೃದ್ಧಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ವಶಪಡಿಸಿಕೊಂಡಿದ್ದ ಜಮೀನಿನಲ್ಲಿ 3.8ಎಕರೆಯನ್ನು 2007ರಲ್ಲಿ ಡಿನೋಟಿಫೈ ಮಾಡಿದ ಆರೋಪ ಕುಮಾರಸ್ವಾಮಿ ಅವರ ಮೇಲಿತ್ತು. ಅಂದಿನ ಜೆಡಿಎಸ್, ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಸಿ.ಚೆನ್ನಿಗಪ್ಪ ಪ್ರಕರಣದಲ್ಲಿ 2ನೇ ಆರೋಪಿಯಾಗಿದ್ದರು. ಜಮೀನಿನ ಮಾಲೀಕ ಎವಿ ರವಿಪ್ರಕಾಶ್ ಹಾಗೂ ಎವಿ ಶ್ರೀರಾಮ್ ಅವರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಅಕ್ರಮವಾಗಿ ಡಿನೋಟಿಫೈ ಮಾಡಿಕೊಡಲಾಗಿದೆ ಎಂದು ಚಾಮರಾಜನಗರದ ಮಹದೇವಸ್ವಾಮಿ ಎಂಬವರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಪ್ರಕರಣದಲ್ಲಿ ತಮ್ಮ ಹೆಸರನ್ನು ಕೈಬಿಡುವಂತೆ ಕೋರಿ ಕುಮಾರಸ್ವಾಮಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆದರೆ ಅವರ ಮನವಿ ವಜಾ ಆಗಿತ್ತು. ತನಿಖೆ ನಡೆಯುತ್ತಿರುವಾಗಲೇ ಪ್ರಕರಣವನ್ನು ಸಂಸದರು ಹಾಗೂ ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣಾ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು.

    ಈ ಪ್ರಕರಣದ ತನಿಖೆಯಿಂದ ತನ್ನನ್ನು ಕೈಬಿಡುವಂತೆ ಕೋರ್ಟ್ ಗೆ ಕುಮಾರಸ್ವಾಮಿ ಜೊತೆ ರವಿಪ್ರಕಾಶ್, ಜ್ಯೋತಿ ರಾಮಲಿಂಗಂ ಮತ್ತು ಶ್ರೀರಾಮ್ ಕೂಡ ಅರ್ಜಿ ಸಲ್ಲಿದ್ದರು. ಆದರೆ ಮಾಜಿ ಸಚಿವ ಚೆನ್ನಿಗಪ್ಪ ಆರೋಪದಿಂದ ಕೈಬಿಡುವಂತೆ ಅರ್ಜಿ ಸಲ್ಲಿಸಿರಲಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಎಸ್‍ವೈಗೆ ಮತ್ತೊಮ್ಮೆ ಬಿಗ್ ಶಾಕ್ ನೀಡಲು ಎಸಿಬಿ ತಯಾರಿ

    ಬಿಎಸ್‍ವೈಗೆ ಮತ್ತೊಮ್ಮೆ ಬಿಗ್ ಶಾಕ್ ನೀಡಲು ಎಸಿಬಿ ತಯಾರಿ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ಮತ್ತೊಮ್ಮೆ ಬಿಗ್ ಶಾಕ್ ನೀಡಲು ಎಸಿಬಿ ತಯಾರಿ ನಡೆಸುತ್ತಿದೆ.

    ಶಿವರಾಮ್‍ಕಾರಂತ್ ಬಡವಾಣೆಯ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಲು ಎಸಿಬಿ ನಿರ್ಧರಿಸಿದೆ. ಈ ಬಗ್ಗೆ ಕಾನೂನು ಅಭಿಪ್ರಾಯ ಪಡೆದಿರೋ ಎಸಿಬಿ, ಮುಖ್ಯಮಂತ್ರಿಗಳು ಮತ್ತು ಗೃಹಸಚಿವರ ಬಳಿ ಒಂದು ಸುತ್ತಿನ ಮಾತುಕತೆ ನಡೆಸಿದೆ.

    ಇದೇ ವಾರದಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧಾರ ಮಾಡಲಾಗಿದೆ. ಹೈಕೋರ್ಟ್ ನೀಡಿರೋ ತಡೆಯಾಜ್ಞೆ ತೆರವುಗೊಳಿಸುವಂತೆ ಮೇಲ್ಮನವಿ ಸಲ್ಲಿಸಲಿದೆ. ಈಗಾಗಲೇ ಒಂದು ಹಂತದಲ್ಲಿ ತನಿಖೆ ಮಾಡಲಾಗಿದೆ. ಈ ಹಂತದಲ್ಲಿ ತಡೆಯಾಜ್ಞೆ ನೀಡಿರೋದು ಸರಿಯಲ್ಲ. ಅಷ್ಟೇ ಅಲ್ಲದೆ ಆರೋಪಿತರು ತುಂಬಾ ಪ್ರಭಾವಿ ವ್ಯಕ್ತಿ. ಸಾಕ್ಷಿಗಳಿಗೆ ಬೆದರಿಕೆ ಹಾಗು ದಾಖಲಾತಿಗಳನ್ನು ನಾಶ ಮಾಡೋ ಸಾಧ್ಯತೆಯಿದೆ. ಹಾಗಾಗಿ ಹೆಚ್ಚಿನ ತನಿಖೆ ಮಾಡೋ ಅಗತ್ಯವಿದೆ. ಕೂಡಲೇ ತಡೆಯಾಜ್ಞೆ ತೆರುವುಗೊಳಿಸಬೇಕು ಅಂತ ಅರ್ಜಿ ಸಲ್ಲಿಸಲಿದೆ.

  • ಡಿನೋಟಿಫಿಕೇಷನ್ ಕೇಸಲ್ಲಿ ಬಿಎಸ್‍ವೈಗೆ ಮತ್ತೊಂದು ಶಾಕ್

    ಡಿನೋಟಿಫಿಕೇಷನ್ ಕೇಸಲ್ಲಿ ಬಿಎಸ್‍ವೈಗೆ ಮತ್ತೊಂದು ಶಾಕ್

    ಬೆಂಗಳೂರು: ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷಸ ಬಿಎಸ್ ಯಡಿಯೂರಪ್ಪಗೆ ಮತ್ತೊಂದು ಶಾಕ್ ಸಿಕ್ಕಿದೆ.

    ಬಿಎಸ್‍ವೈ ವಿರುದ್ಧದ 15 ಡಿನೋಟಿಫಿಕೇಷನ್ ಪ್ರಕರಣದಲ್ಲಿ ಸಿರಾಜಿನ್ ಬಾಷ ಕಾನೂನು ಹೋರಾಟಕ್ಕೆ ರಾಜ್ಯ ಸರ್ಕಾರ ಕೈ ಜೋಡಿಸಿದೆ. ಬಾಷಾ ಸಲ್ಲಿಸಿದ್ದ ಅರ್ಜಿ ಜೊತೆ ರಾಜ್ಯ ಸರ್ಕಾರ ಕೂಡ ಮೇಲ್ಮನವಿ ಸಲ್ಲಿಸಿದ್ದು, ಎರಡೂ ಅರ್ಜಿಗಳನ್ನ ಸುಪ್ರೀಂಕೋರ್ಟ್ ಒಟ್ಟಾಗಿ ವಿಚಾರಣೆ ನೆಡಸಲಿದೆ.

    ರಾಜ್ಯ ಸರ್ಕಾರದ ಮನವಿ ಮೇಲೆ ಸುಪ್ರೀಂಕೋರ್ಟ್ ವಿಚಾರಣೆಗೆ ಒಪ್ಪಿದೆ. ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದಿಸಲಿದ್ದಾರೆ.

    ಬಿಎಸ್‍ವೈ ವಿರುದ್ಧದ ಹದಿನೈದು ಪ್ರಕರಣಗಳನ್ನು ಹೈಕೋರ್ಟ್ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.