Tag: ಡಿಜೆ ಪಾರ್ಟಿ

  • ಡ್ರಗ್ಸ್ ಕೇಸ್: ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಸಹೋದರ, ನಟ ಸಿದ್ಧಾಂತ್ ಕಪೂರ್ ಬಂಧನ

    ಡ್ರಗ್ಸ್ ಕೇಸ್: ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಸಹೋದರ, ನಟ ಸಿದ್ಧಾಂತ್ ಕಪೂರ್ ಬಂಧನ

    ಬೆಂಗಳೂರು: ಬಾಲಿವುಡ್ ಖ್ಯಾತ ನಟಿ ಶ್ರದ್ಧಾ ಕಪೂರ್ ಸಹೋದರ ಮತ್ತು ಬಾಲಿವುಡ್ ನಟ, ಡಿಜೆ ಸಿದ್ಧಾಂತ್ ಕಪೂರ್ ಅವರನ್ನು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ.

    ಎಂ.ಜಿ ರಸ್ತೆಯ ಟ್ರಿನಿಟಿ ಸರ್ಕಲ್‍ನಲ್ಲಿ ಪ್ರತಿಷ್ಠಿತ 5 ಸ್ಟಾರ್ ದಿ ಪಾರ್ಕ್ ಹೋಟೆಲ್ ಮೇಲೆ ಹಲಸೂರು ಪೊಲೀಸರು ದಾಳಿ ಮಾಡಿದ್ದಾರೆ. ಪಾರ್ಟಿಯಲ್ಲಿ ತೊಡಗಿದ್ದ ಯುವಕ ಯುವತಿ ಸೇರಿ ಒಟ್ಟು 50 ಜನರನ್ನ ವಶಕ್ಕೆ ಪಡೆದಿದ್ದರು. ಈ ಗುಂಪಿನಲ್ಲಿದ್ದ 35 ಜನರಿಗೆ ಮೆಡಿಕಲ್ ಟೆಸ್ಟ್ ಮಾಡಿಸಿದ್ದು, ಐವರು ಮಾದಕವಸ್ತು ಸೇವನೆ ಮಾಡಿರೋದು ದೃಢವಾಗಿದೆ. ಈ ಗುಂಪಿನಲ್ಲಿ ಸಿದ್ಧಾಂತ್ ಕಪೂರ್ ಸಹ ಇರುವುದು ಖಚಿತವಾಗಿದೆ. ಈ ಪರಿಣಾಮ ಸಿದ್ಧಾಂತ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಭರ್ಜರಿ ಡ್ರಗ್ಸ್ ಪಾರ್ಟಿ – ಬಾಲಿವುಡ್ ನಟನ ಪುತ್ರ ಸೇರಿ 50ಕ್ಕೂ ಹೆಚ್ಚು ಮಂದಿ ವಶ

    ಸಿದ್ಧಾಂತ್  ಹೋಟೆಲ್‍ನಲ್ಲಿ ಡಿಜೆ ಪ್ಲೈಯರ್ ಆಗಿದ್ದು, ಡ್ರಗ್ಸ್ ಸೇವನೆ ಮಾಡಿರೋದು ದೃಢವಾಗಿದೆ. ಸಿದ್ಧಾಂತ್ ಬಾಲಿವುಡ್ ಹಿರಿಯ ನಟ ಶಕ್ತಿ ಕಪೂರ್ ಮಗ ಆಗಿದ್ದು, ಶ್ರದ್ಧಾ ಕಪೂರ್ ಸಹೋದರ ಆಗಿದ್ದಾರೆ.

    ಅಖೀಲ್ ಸೋನಿ, ಅಜೋದ್ ಸಿಂಗ್ ಪಂಜಾಬ್, ಅಖೀಲ್, ಅನಿ, ದರ್ಶನ್ ಸುರೇಶ್ ಬಂಧಿತ ಆರೋಪಿಗಳು. ಆರೋಪಿಗಳೇಲ್ಲರು ಟೆಕ್ಕಿಗಳಾಗಿದ್ದು, ರಾತ್ರಿ ಪಾರ್ಟಿ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಂದ ಸ್ಪಷ್ಟನೆ ಕೊಟ್ಟಿದ್ದಾರೆ.

  • ಬೆಂಗ್ಳೂರಲ್ಲಿ ತಡರಾತ್ರಿವರೆಗೂ ಡಿಜೆ ಪಾರ್ಟಿ- ರಸ್ತೆಯಲ್ಲೇ ತೂರಾಡಿದ ಯುವಕ-ಯುವತಿಯರು

    ಬೆಂಗ್ಳೂರಲ್ಲಿ ತಡರಾತ್ರಿವರೆಗೂ ಡಿಜೆ ಪಾರ್ಟಿ- ರಸ್ತೆಯಲ್ಲೇ ತೂರಾಡಿದ ಯುವಕ-ಯುವತಿಯರು

    ಬೆಂಗಳೂರು: ಆಸ್ಪತ್ರೆ ಮುಂಭಾಗದಲ್ಲೇ ತಡರಾತ್ರಿ ಎರಡು ಗಂಟೆವರೆಗೂ ಭರ್ಜರಿ ಡಿಜೆ ಪಾರ್ಟಿ ನಡೆಸಿದ ಘಟನೆ ಬೆಂಗಳೂರಿನ ಕ್ರಸೆಂಟ್ ರಸ್ತೆಯಲ್ಲಿ ನಡೆದಿದೆ.

    ನಗರದ ಮಲ್ಲಿಗೆ ಆಸ್ಪತ್ರೆ ಮುಂಭಾಗದ ಶ್ರೀ ಚನ್ನಮ್ಮ ವಿಲಾಸ್ ಹೆಸರಿನ ಬಂಗಲೆಯಲ್ಲಿ ಈ ಪಾರ್ಟಿ ಆಯೋಜಿಸಲಾಗಿತ್ತು. ಪಾರ್ಟಿಯಲ್ಲಿನ ಮ್ಯೂಸಿಕ್ ಸುಮಾರು ಎರಡು ಕಿಲೋಮಿಟರ್ ವರೆಗೆ ಕೇಳಿಸುತ್ತಿತ್ತು. ಇದರಿಂದಾಗಿ ಮಲ್ಲಿಗೆ ಆಸ್ಪತ್ರೆಯಲ್ಲಿನ ರೋಗಿಗಳು ಹಾಗೂ ಅಕ್ಕಪಕ್ಕದವರು ಈ ಸೌಂಡ್ ಕೇಳಿ ತಡರಾತ್ರಿವರೆಗೆ ಕಿರಿಕಿರಿ ಅನುಭವಿಸಿದ್ದಾರೆ.

    ಕೊನೆಗೆ ಈ ಬಗ್ಗೆ ಮಾಹಿತಿ ತಿಳಿದ ಹೈಗ್ರೌಂಡ್ಸ್ ಪೊಲೀಸರು ಸ್ಥಳಕ್ಕೆ ಬಂದು ಪಾರ್ಟಿ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಆದರೂ ಕೂಡ ಪಾರ್ಟಿ ಮಾಡೋರು ಮಾತ್ರ ಪೊಲೀಸರಿಗೂ ಡೋಂಟ್ ಕೇರ್ ಅನ್ನೋ ರೀತಿ ವರ್ತಿಸಿದ್ದಾರೆ. ನೂರಕ್ಕೂ ಹೆಚ್ಚು ಯುವಕ ಯುವತಿಯರೇ ತುಂಬಿದ್ದ ಡಿಜೆ ಪಾರ್ಟಿ ತಡರಾತ್ರಿ ಎರಡು ಗಂಟೆವರೆಗೂ ನಡಿದಿದೆ. ಕುಡಿದ ಮತ್ತಿನಲ್ಲಿ ತೇಲಾಡುತ್ತಿದ್ದ ಯುವಕ-ಯುವತಿಯರು ನಡುರಸ್ತೆಯಲ್ಲೇ ತೂರಾಡಿ ಮೋಜು ಮಸ್ತಿ ಮಾಡಿದ್ದಾರೆ.