Tag: ಡಿಜಿಸಿಎ

  • ಮಧ್ಯಪ್ರಾಚ್ಯದ ಆಗಸದಲ್ಲಿ ವಿಮಾನಗಳು ಸಿಗ್ನಲ್ ಸಮಸ್ಯೆ ಎದುರಿಸುತ್ತಿರುವುದೇಕೆ? ಏನಿದು ಹೊಸ ವಿವಾದ?

    ಮಧ್ಯಪ್ರಾಚ್ಯದ ಆಗಸದಲ್ಲಿ ವಿಮಾನಗಳು ಸಿಗ್ನಲ್ ಸಮಸ್ಯೆ ಎದುರಿಸುತ್ತಿರುವುದೇಕೆ? ಏನಿದು ಹೊಸ ವಿವಾದ?

    ತ್ತೀಚಿನ ದಿನಗಳಲ್ಲಿ ನಾಗರಿಕ ವಿಮಾನಗಳು (Flights) ಮಧ್ಯಪ್ರಾಚ್ಯ (Middle East) ಭಾಗಗಳ ಮೇಲೆ ಹಾರಾಟ ನಡೆಸುವಾಗ ನ್ಯಾವಿಗೇಷನ್ ವ್ಯವಸ್ಥೆಯ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ಸಾಕಷ್ಟು ವರದಿಗಳಾಗಿವೆ. ಇದು ವಿಮಾನಗಳ ಹಾರಾಟದ ಸುರಕ್ಷತೆಗೆ ಸಮಸ್ಯೆಯೊಡ್ಡಿದೆ ಎಂದು ವಿಮಾನಯಾನ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ. ಈ ಸಮಸ್ಯೆಯನ್ನು ನಿಭಾಯಿಸುವುದು ಹೇಗೆ ಎಂಬುದರ ಬಗ್ಗೆ ಭಾರೀ ಚರ್ಚೆ ಕೂಡ ನಡೆಯುತ್ತಿದೆ.

    ಇತ್ತೀಚೆಗೆ ಅನೇಕ ವಿಮಾನಗಳು ಇರಾನ್ ಗಡಿಯಲ್ಲಿ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (GNSS) ಜಾಮಿಂಗ್ ಸಮಸ್ಯೆಯನ್ನು ಎದುರಿಸಿವೆ. ಇದೇ ಸಮಸ್ಯೆ ಎದುರಿಸಿದ ವಿಮಾನವೊಂದು ಅನುಮತಿಯಿಲ್ಲದೆ ಇರಾನ್ ವಾಯುಪ್ರದೇಶಕ್ಕೆ ಪ್ರವೇಶಿಸಿ ಬಹಳಷ್ಟು ಕಾಲ ಹಾರಾಟ ನಡೆಸಿತ್ತು. ಬಳಿಕ ಈ ವಿಚಾರ ಚರ್ಚೆಯಾದಾಗ ಅನೇಕ ಪೈಲಟ್‍ಗಳು ಈ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಕಾಫಿನಾಡಿನ ಸ್ವರ್ಗ ಮುಳ್ಳಯ್ಯನಗಿರಿ ನೀವೂ ಭೇಟಿ ಕೊಡಿ

    ಜಿಪಿಎಸ್ ವಂಚನೆ, ಜಾಮಿಂಗ್ ಎಂದರೇನು?
    ವಿಮಾನಗಳಿಗೆ ಯಾರಾದರೂ ಟ್ರಾನ್ಸ್‌ಮಿಟರ್ ಬಳಸಿ ನಕಲಿ ಜಿಪಿಎಸ್ ಸಿಗ್ನಲ್ ಕಳುಹಿಸಿದರೆ, ಅದು ಮೂಲ ಸಿಗ್ನಲ್‍ಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತದೆ. ಇದು ವಿಮಾನಗಳ ನ್ಯಾವಿಗೇಷನ್ ವ್ಯವಸ್ಥೆಯನ್ನು ಗೊಂದಲಕ್ಕೀಡು ಮಾಡುತ್ತದೆ. ಇಲ್ಲವೇ ನ್ಯಾವಿಗೇಷನ್ ಇಲ್ಲದೆಯೇ ವಿಮಾನದ ಹಾರಾಟಕ್ಕೆ ಕಾರಣವಾಗಲಿದೆ. ಇದರಿಂದ ಪೈಲಟ್‍ಗಳು ತಮ್ಮ ಉದ್ದೇಶಿತ ಮಾರ್ಗದಿಂದ ಮೈಲುಗಳಷ್ಟು ದೂರದಲ್ಲಿ ಹಾರುತ್ತಿದ್ದಾರೆ ಎಂದು ಭಾವಿಸುತ್ತಾರೆ. ಕೆಲವೊಮ್ಮೆ ನ್ಯಾವಿಗೇಷನ್ ನಾಮಥ್ರ್ಯವನ್ನು ವಿಮಾನಗಳು ಕಳೆದುಕೊಳ್ಳುತ್ತವೆ. ಇದರಿಂದ ವಿಮಾನ ಅಪಘಾತಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ.

    ವಿಮಾನಗಳು ಎಲ್ಲೆಲ್ಲಿ ಈ ಸಮಸ್ಯೆ ಎದುರಿಸುತ್ತಿವೆ?
    ಉತ್ತರ ಇರಾಕ್ ಮತ್ತು ಅಜೆರ್‍ಬೈಜಾನ್ ಮೇಲಿನ ವಾಯುಮಾರ್ಗಗಳನ್ನು ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (Global Navigation Satellite System) ಜಾಮಿಂಗ್ ಸಮಸ್ಯೆಯ ಪ್ರಾಥಮಿಕ ಪ್ರದೇಶ ಎಂದು ಗುರುತಿಸಲಾಗಿದೆ. ಅಲ್ಲದೇ ವಿಮಾನಗಳು ಇದೇ ರೀತಿಯ ಸಮಸ್ಯೆಗಳನ್ನು ಎರ್ಬಿಲ್ ಬಳಿಯೂ ಎದುರಿಸುತ್ತಿವೆ. ಈ ವರ್ಷ ಸೆಪ್ಟೆಂಬರ್ ವೇಳೆಗೆ 12 ಪ್ರತ್ಯೇಕ ಘಟನೆಗಳು ವರದಿಯಾಗಿದ್ದು, ನವೆಂಬರ್ 20 ರಂದು ಟರ್ಕಿಯ ಅಂಕಾರಾ ಬಳಿ ಇತ್ತೀಚಿನ ಘಟನೆ ವರದಿಯಾಗಿದೆ.

    ಜಾಮಿಂಗ್ ಹಿಂದೆ ಯಾರ ಕೈವಾಡವಿದೆ?
    ಇದರ ಹಿಂದೆ ಯಾರ ಕೈವಾಡವಿದೆ ಎಂದು ಈವರೆಗೂ ಅಧಿಕೃತವಾಗಿ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಈ ಪ್ರದೇಶಗಳಲ್ಲಿ ಗಡಿ ಸಮಸ್ಯೆ ಇರುವುದರಿಂದ ಮಿಲಿಟರಿ ಎಲೆಕ್ಟ್ರಾನಿಕ್ ವಾರ್‍ಫೇರ್ ಸಿಸ್ಟಮ್‍ಗಳನ್ನು (ಶತ್ರು ದೇಶಗಳ ದಾಳಿಯಿಂದ ರಕ್ಷಿಸಲು ವಿದ್ಯುತ್ಕಾಂತೀಯ ಶಕ್ತಿ ಬಳಸಿ, ಯುದ್ಧ ವಿಮಾನಗಳ, ಇನ್ನಿತರೆ ರೇಡಿಯೋ ಸಂಕೇತಗಳನ್ನು ನಿಯಂತ್ರಿಸುವುದು) ನಿಯೋಜಿಸಲಾಗಿದೆ. ಇದೇ ಕಾರಣಕ್ಕೆ ವಿಮಾನಗಳ ನ್ಯಾವಿಗೇಷನ್ ತಂತ್ರಜ್ಞಾನ ಸಮಸ್ಯೆ ಎದುರಿಸುತ್ತಿರಬಹುದು ಎಂದು ನಂಬಲಾಗಿದೆ.

    ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ ಜಾಮಿಂಗ್ ಸಮಸ್ಯೆಯನ್ನು ಎದುರಿಸಲು ಭಾರತದ ವಿಮಾನಯಾನ ನಿಯಂತ್ರಕ ಡಿಜಿಸಿಎ (DGCA)‌ ಎಲ್ಲಾ ಭಾರತದ ವಿಮಾನಯಾನ ಸಂಸ್ಥೆಗಳಿಗೆ ಸಲಹೆಯನ್ನು ನೀಡಿದೆ. ಇಂತಹ ಸಮಸ್ಯೆ ಎದುರಿಸುವ ವಿಮಾನಗಳಿಂದ ತರ್ತು ಕರೆ ಹೋಗುವಂತೆ ಮಾಡಲಾಗಿದ್ದು, ಈ ವೇಳೆ ಅಗತ್ಯ ಸಲಹೆ ನೀಡಲಾಗುತ್ತದೆ. ಈ ಸಮಸ್ಯೆಯ ಅಧ್ಯಯನಕ್ಕೆ ನುರಿತ ಪೈಲಟ್‍ಗಳ ಸಮಿತಿಯನ್ನು ತಂಡವನ್ನು ರಚಿಸಲು ಸಿದ್ಧತೆ ನಡೆಸಿಕೊಳ್ಳಲಾಗುತ್ತಿದೆ.

    ಬರ್ಮುಡಾ ಟ್ರಯಾಂಗಲ್ ಒಂದು ಮೆಲುಕು
    ಬರ್ಮುಡಾ ಟ್ರಯಾಂಗಲ್ ಪ್ರದೇಶದಲ್ಲೂ ವಿಮಾನಗಳು ಹಾಗೂ ಹಡಗುಗಳು ಸಿಗ್ನಲ್ ಹಾಗೂ ಇನ್ನಿತರೆ ಸಮಸ್ಯೆಗಳನ್ನು ಎದುರಿಸಿ ಕಣ್ಮರೆಯಾಗಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ಈ ಪ್ರದೇಶದಲ್ಲಿ ಕಣ್ಮರೆಯಾದ ಹಡಗುಗಳು ಮತ್ತು ವಿಮಾನಗಳ ನಿಖರವಾದ ಸಂಖ್ಯೆ ತಿಳಿದಿಲ್ಲ. ಸುಮಾರು 50 ಹಡಗುಗಳು ಮತ್ತು 20 ವಿಮಾನಗಳು ನಾಪತ್ತೆಯಾಗಿವೆ ಎಂದು ಅಂದಾಜಿಸಲಾಗಿದೆ. ಈ ಪ್ರದೇಶದಲ್ಲಿ ನಾಪತ್ತೆಯಾಗಿರುವ ಹಲವು ಹಡಗುಗಳು ಮತ್ತು ವಿಮಾನಗಳ ಅವಶೇಷಗಳು ಪತ್ತೆಯಾಗಿಲ್ಲ. ಬರ್ಮುಡಾ ಟ್ರಯಾಂಗಲ್ ಪ್ರದೇಶದಲ್ಲಿ ಕಣ್ಮರೆಯಾಗಿರುವುದು ಮಾನವ ದೋಷ ಅಥವಾ ಹವಾಮಾನ ವಿದ್ಯಮಾನಗಳ ಪರಿಣಾಮವಾಗಿದೆಯೇ ಎಂಬುದು ಸಹ ಇನ್ನೂ ತಿಳಿದಿಲ್ಲ. ಇದನ್ನೂ ಓದಿ: 2000 ರೂ. ಮುಖಬೆಲೆಯ 9760 ಕೋಟಿ ರೂ. ವಿನಿಮಯವಾಗಿಲ್ಲ: ಆರ್‌ಬಿಐ

  • ಪರ್ಫ್ಯೂಮ್‌ನಲ್ಲಿ ‘ಎಣ್ಣೆ’ ಘಾಟು; ಭಾರತೀಯ ವಿಮಾನಗಳ ಪೈಲಟ್‌, ಗಗನಸಖಿಯರಿಗೆ ಪರ್ಫ್ಯೂಮ್ ಬ್ಯಾನ್?

    ಪರ್ಫ್ಯೂಮ್‌ನಲ್ಲಿ ‘ಎಣ್ಣೆ’ ಘಾಟು; ಭಾರತೀಯ ವಿಮಾನಗಳ ಪೈಲಟ್‌, ಗಗನಸಖಿಯರಿಗೆ ಪರ್ಫ್ಯೂಮ್ ಬ್ಯಾನ್?

    ಫ್ಯಾಷನ್ ಯುಗದಲ್ಲಿ ಪರ್ಫ್ಯೂಮ್ (ಸುಗಂಧ ದ್ರವ್ಯ) ಜನ ಜೀವನದ ಭಾಗವಾಗಿ ಹೋಗಿದೆ. ದಿಲ್ಲಿಯಿಂದ ಹಳ್ಳಿವರೆಗೂ ಪರ್ಫ್ಯೂಮ್ (Perfume Ban) ಹಾಕಿಕೊಳ್ಳುವುದು ಸಾಮಾನ್ಯ ಎನ್ನುವಂತಾಗಿದೆ. ಪರ್ಫ್ಯೂಮ್ ಎಂದರೆ ಎಲ್ಲರಿಗೂ ಗೊತ್ತು. ಆದರೆ ಅದನ್ನು ತಯಾರಿಸಲು ಯಾವ್ಯಾವ ಪದಾರ್ಥಗಳನ್ನು ಉಪಯೋಗಿಸುತ್ತಾರೆ ಎಂಬುದು ಎಷ್ಟೋ ಮಂದಿಗೆ ತಿಳಿದಿರುವುದೇ ಇಲ್ಲ. ಪರ್ಫ್ಯೂಮ್ ತಯಾರಿಸಲು ಬಳಸುವ ಪದಾರ್ಥಗಳ ಬಗ್ಗೆ ಹೇಳಿದರೆ ಕೆಲವರಿಗೆ ಶಾಕ್ ಕೂಡ ಆಗಬಹುದು. ಶಾಕ್ ಆಗುವುದಕ್ಕೆ ಪೂರಕ ಎನ್ನುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಪ್ರಸ್ತಾಪವೊಂದನ್ನು ಪ್ರಕಟಿಸಿದೆ.

    ಎಷ್ಟೋ ಜನಕ್ಕೆ ಆಲ್ಕೋಹಾಲ್ ಎಂದರೆ ಸಾಕು ದೂರ ಓಡುತ್ತಾರೆ. ಅಂತಹ ಆಲ್ಕೋಹಾಲ್‌ನ್ನು ಪರ್ಫ್ಯೂಮ್ ತಯಾರಿಸಲು ಬಳಸುತ್ತಾರೆ ಎಂದರೆ ಶಾಕ್ ಆಗಿಬಿಡುತ್ತಾರೆ. ಇದು ಅಚ್ಚರಿ ಎನಿಸಿದರೂ ನಿಜ. ಅಂತಹ ಆಲ್ಕೋಹಾಲ್ ಅಂಶವಿರುವ ಸುಗಂಧ ದ್ರವ್ಯವನ್ನು ಪೈಲಟ್‌ಗಳು, ವಿಮಾನಗಳ ಸಿಬ್ಬಂದಿ ಬಳಸುವಂತಿಲ್ಲ ಎಂದು ನಿಯಮ ರೂಪಿಸಲು ಡಿಜಿಸಿಎ ಮುಂದಾಗಿದೆ. ಈಗಾಗಲೇ ಪೈಲಟ್‌ಗಳು (Pilots), ವಿಮಾನಗಳಿಗೆ ಸಿಬ್ಬಂದಿ ಪರ್ಫ್ಯೂಮ್ ಬ್ಯಾನ್ ಮಾಡಲು ಪ್ರಸ್ತಾಪ ಇಟ್ಟಿದೆ. ಇದನ್ನೂ ಓದಿ: PublicTV Explainer: ಚಂದ್ರ, ಸೂರ್ಯಯಾನ ಆಯ್ತು.. ಈಗ ಶುಕ್ರನ ಮೇಲೆ ಇಸ್ರೋ ಕಣ್ಣು – ಶುಕ್ರಯಾನ ಯಾವಾಗ?

    ಪೈಲಟ್‌ಗಳು, ವಿಮಾನ ಸಿಬ್ಬಂದಿಗೆ ಪರ್ಫ್ಯೂಮ್ ಬ್ಯಾನ್?
    ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಪೈಲಟ್‌ಗಳಿಗೆ ಸುಗಂಧ ದ್ರವ್ಯಗಳ ಬಳಕೆಯನ್ನು ನಿಷೇಧಿಸುವ ಹೊಸ ಕಾನೂನನ್ನು ತರಲು ಯೋಜಿಸಿದೆ. ಕಾನೂನು ವಾಯುಯಾನ ನಿಯಂತ್ರಕರ ಕಟ್ಟುನಿಟ್ಟಾದ ಆಲ್ಕೋಹಾಲ್ ನಿಯಮಗಳಿಗೆ ಇದು ಸಂಬಂಧಿಸಿದ್ದಾಗಿದೆ. ಸುರಕ್ಷತಾ ನಿಯಮಗಳಿಗೆ ಸಂಬಂಧಿಸಿದಂತೆ ವಿಮಾನ ನಿಯಮ, 1937 ರ ನಿಬಂಧನೆಗಳ ಅಡಿಯಲ್ಲಿ ನೀಡಲಾದ ನಾಗರಿಕ ವಿಮಾನಯಾನ ಅಗತ್ಯತೆಗಳನ್ನು (ಸಿಎಆರ್) ತಿದ್ದುಪಡಿ ಮಾಡುವ ಕುರಿತು ಮಧ್ಯಸ್ಥಗಾರರು ಸಲಹೆ ನೀಡುವಂತೆ ವಾಯುಯಾನ ನಿಯಂತ್ರಕರು ಕರೆ ನೀಡಿದ್ದಾರೆ.

    ಬ್ಯಾನ್‌ಗೆ ಡಿಜಿಸಿಎ ಯೋಜಿಸಿದ್ದು ಯಾಕೆ?
    ಭಾರತದ ವಾಯುಯಾನ ನಿಯಂತ್ರಕ ಇತ್ತೀಚೆಗೆ ಮದ್ಯ ಸೇವನೆಯ ಬಗ್ಗೆ ತನ್ನ ನಿಯಮಗಳನ್ನು ನವೀಕರಿಸಲು ಪ್ರಸ್ತಾಪಿಸಿದೆ. ಡಿಜಿಸಿಎ ಈಗಾಗಲೇ ಮೌತ್‌ವಾಶ್‌ನಂತಹ ಆಲ್ಕೊಹಾಲ್‌ಯುಕ್ತ ಪಾನೀಯಗಳನ್ನು ನಿಷೇಧಿಸಿದೆ. ಅದು ಉಸಿರಾಟದ ವಿಶ್ಲೇಷಣೆಯ ಪರೀಕ್ಷೆ ಮೇಲೆ ಧನಾತ್ಮಕ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ನಿಷೇಧ ವಿಧಿಸಲಾಗಿದೆ ಎಂದು ವರದಿಗಳಾಗಿವೆ.

    ನಾಗರಿಕ ವಿಮಾನಯಾನ ನಿರ್ದೇಶನಾಲಯವು ಇತ್ತೀಚೆಗೆ ತನ್ನ ವೈದ್ಯಕೀಯ ಪರೀಕ್ಷೆಯ ವಿಧಾನದಲ್ಲಿ ಬದಲಾವಣೆ ಪ್ರಸ್ತಾಪಿಸಿದೆ. ಇದು ಪೈಲಟ್‌ಗಳು ಮತ್ತು ಸಿಬ್ಬಂದಿಗೆ ಆಲ್ಕೋಹಾಲ್ ಸೇವನೆಯನ್ನು ಪರಿಶೀಲಿಸುವ ಪ್ರಕ್ರಿಯೆಯನ್ನು ಬದಲಾಯಿಸಿದೆ. ಸಿಬ್ಬಂದಿ ಅಥವಾ ಪೈಲಟ್‌ಗಳು ಆಲ್ಕೋಹಾಲ್ ಹೊಂದಿರುವ ಯಾವುದೇ ಔಷಧ, ಸುಗಂಧ ದ್ರವ್ಯ, ಡೆಂಟಲ್ ಉತ್ಪನ್ನಗಳನ್ನು ಬಳಸಬಾರದು ಎಂದು ಡಿಜಿಸಿಎ ಪ್ರಸ್ತಾವನೆಯಲ್ಲಿ ತಿಳಿಸಿದೆ. ಒಂದೊಮ್ಮೆ ಬಳಸಿದಲ್ಲಿ ಪರೀಕ್ಷೆಯ ಫಲಿತಾಂಶ ಪಾಸಿಟಿವ್ ಅಂತ ಬರಬಹುದು. ಮತ್ತು ಈ ವಸ್ತುಗಳ ಬಳಸುವ ಉದ್ಯೋಗಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗಬಹುದು ಎಂದು ಹೇಳಿದೆ. ಇದನ್ನೂ ಓದಿ: PublicTV Explainer: ನೀಲಿ ಆರ್ಥಿಕತೆ ಎಂದರೇನು? – ಭಾರತದಲ್ಲಿ ಹೇಗೆ ಕೆಲಸ ಮಾಡುತ್ತಿದೆ; ಕರ್ನಾಟಕದಲ್ಲಿ ನಿರೀಕ್ಷೆ ಏನು?

    ಯಾವುದೇ ಪೈಲಟ್‌ಗಳು, ಗಗನಸಖಿಯರು, ಸಿಬ್ಬಂದಿ ಯಾವುದೇ ಔಷಧ ಸೇವಿಸಬಾರದು, ಮೌತ್‌ವಾಶ್/ಟೂತ್ ಜೆಲ್/ಸುಗಂಧ ದ್ರವ್ಯ ಅಥವಾ ಆಲ್ಕೋಹಾಲ್‌ಯುಕ್ತ ಅಂಶವನ್ನು ಹೊಂದಿರುವ ಯಾವುದೇ ಉತ್ಪನ್ನವನ್ನು ಬಳಸಬಾರದು. ಒಂದು ವೇಳೆ ಬಳಸಿದ್ದಲ್ಲಿ, ಟೆಸ್ಟ್ ವೇಳೆ ನೀವು ಕುಡಿದಿದ್ದೀರಿ ಎಂದು ಸಿಗ್ನಲ್ ತಪ್ಪಾಗಿ ಬರಬಹುದು. ಅಂತಹ ಪೈಲಟ್, ಸಿಬ್ಬಂದಿ ವಿಮಾನದಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ನೀಡುವುದಿಲ್ಲ. ಯಾವುದೇ ಸಿಬ್ಬಂದಿ ಸದಸ್ಯರು ಫ್ಲೈಯಿಂಗ್ ನಿಯೋಜನೆಯನ್ನು ಕೈಗೊಳ್ಳುವ ಮೊದಲು ಕಂಪನಿಯ ವೈದ್ಯರನ್ನು ಸಂಪರ್ಕಿಸಬೇಕು ಎಂದು ಪ್ರಸ್ತಾವಿತ ಶಾಸನವು ಹೇಳಿದೆ.

    ಅಸ್ಪಷ್ಟ ಪ್ರಸ್ತಾವನೆ
    ಪರ್ಫ್ಯೂಮ್ ನಿಷೇಧಕ್ಕೆ ಸಂಬಂಧಿಸಿದ ಡಿಜಿಸಿಎ ಪ್ರಸ್ತಾವನೆಯು ಅಸ್ಪಷ್ಟವಾಗಿದೆ. ಸ್ವಲ್ಪ ಪ್ರಮಾಣದಲ್ಲಿ ಆಲ್ಕೋಹಾಲ್ ಅಂಶವಿರುವ ಸುಗಂಧ ದ್ರವ್ಯವನ್ನು ಪೈಲಟ್ ಅಥವಾ ಸಿಬ್ಬಂದಿ ಬಳಸಿದರೆ, ಆಗಲೂ ಉಸಿರಾಟ ವಿಶ್ಲೇಷಣೆಯ ಪರೀಕ್ಷೆಯಲ್ಲಿ ತಪ್ಪಾಗಿ ಪಾಸಿಟಿವ್ ಅಂತ ಸಿಗ್ನಲ್ ಬರುತ್ತದೆಯೇ ಎಂಬುದಕ್ಕೆ ಸ್ಪಷ್ಟನೆ ಇಲ್ಲ. ಜೊತೆಗೆ ಡಿಜಿಸಿಎ ನಿಯಮಗಳು ಭಾರತಕ್ಕೆ ಬರುವ ವಿದೇಶಿ ವಿಮಾನಗಳ ಪೈಲಟ್‌ಗಳು, ಗಗನಸಖಿಯರು, ಸಿಬ್ಬಂದಿಗೂ ಅನ್ವಯವಾಗುತ್ತದೆಯೇ ಎಂಬುದು ಪ್ರಶ್ನೆಯಾಗಿದೆ. ಇದನ್ನೂ ಓದಿ: PublicTV Explainer: ಲ್ಯಾಬ್‌ನಲ್ಲಿ DNA ಇಟ್ರೆ ಸಾಕು ನಿಮ್ಗೆ ಸಿಗುತ್ತೆ ಚಿಕನ್‌, ಮಟನ್‌, ಬೀಫ್‌, ಫೋರ್ಕ್‌ ಮಾಂಸ!

    ಪೈಲಟ್‌ಗಳಿಗೆ ಭಾರತದಲ್ಲಿರುವ ಕಾನೂನುಗಳೇನು?
    ವಿಮಾನಯಾನ ಸಿಬ್ಬಂದಿಗೆ ಭಾರತವು ತುಂಬಾ ಕಟ್ಟುನಿಟ್ಟಾದ ಆಲ್ಕೋಹಾಲ್ ನಿಯಮಗಳನ್ನು ಅಳವಡಿಸಿದೆ. ನಾಗರಿಕ ವಿಮಾನಯಾನ ಅಗತ್ಯತೆಗಳ ಮಾರ್ಗಸೂಚಿಗಳ ಪ್ರಕಾರ, ಎಲ್ಲಾ ವಿಮಾನ ಸಿಬ್ಬಂದಿ ಸದಸ್ಯರು ಮತ್ತು ಕ್ಯಾಬಿನ್ ಸಿಬ್ಬಂದಿ, ಭಾರತದಿಂದ ಕಾರ್ಯಾಚರಣೆ ಆರಂಭಿಸುವ ವಿಮಾನಗಳು ಮೊದಲ ನಿರ್ಗಮನ ವಿಮಾನ ನಿಲ್ದಾಣದಲ್ಲಿ ಉಸಿರಾಟ ವಿಶ್ಲೇಷಣೆಯ ಪರೀಕ್ಷೆಗೆ ಒಳಪಡುತ್ತಾರೆ.

    ಆಲ್ಕೋಹಾಲ್ ಸೇವಿಸಿದ್ರೆ ಪರವಾನಗಿ ಅಮಾನತು
    ಆಲ್ಕೋಹಾಲ್ ಸೇವನೆಯ ಸಣ್ಣ ಕುರುಹು ಕೂಡ ಪಾಸಿಟಿವ್ ಫಲಿತಾಂಶವೆಂದು ಪರಿಗಣಿಸಲಾಗುತ್ತದೆ. ಆಗ ತಕ್ಷಣ ಮೂರು ತಿಂಗಳವರೆಗೆ ಪರವಾನಗಿ ಅಮಾನತು ಮಾಡಲಾಗುತ್ತದೆ. ಎಲ್ಲಾ ಆಪರೇಟರ್‌ಗಳು ಉಸಿರಾಟದ ವಿಶ್ಲೇಷಕದ ಪರೀಕ್ಷೆಯನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡುತ್ತವೆ. ರೆಕಾರ್ಡಿಂಗ್‌ಗಳನ್ನು ಆರು ತಿಂಗಳವರೆಗೆ ಸಂರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ನಿಯಮಗಳು ಹೇಳುತ್ತವೆ. ಯಾವುದೇ ಸಿಬ್ಬಂದಿ ಆಲ್ಕೋಹಾಲ್ ಸೇವಿಸುವುದೇ ಆದರೆ, ಸೇವನೆಯಾದ 12 ಗಂಟೆಗಳ ಬಳಿಕ ಕರ್ತವ್ಯಕ್ಕೆ ಹಾಜರಾಗಬಹುದು ಎಂಬ ನಿಯಮವಿದೆ.

    ಕಳೆದ ವರ್ಷ ಎಷ್ಟು ಲೈಸನ್ಸ್ ಅಮಾನತಾಗಿತ್ತು?
    2022 ರಲ್ಲಿ 41 ಪೈಲಟ್‌ಗಳು ಮತ್ತು 116 ಕ್ಯಾಬಿನ್ ಸಿಬ್ಬಂದಿ ಮದ್ಯಪಾನ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದರಿಂದ ಅವರ ಪರವಾನಗಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿತ್ತು. 2021 ರಲ್ಲಿ 19 ಪೈಲಟ್‌ಗಳು ಮದ್ಯಪಾನ ಪರೀಕ್ಷೆಯಲ್ಲಿ ಪಾಸಿಟಿವ್‌ಗೆ ಒಳಗಾಗಿದ್ದರು. ಇದನ್ನೂ ಓದಿ: PublicTV Explainer: ರಕ್ಷಾ ‘ಕವಚ’ ಇದ್ದಿದ್ರೆ ಒಡಿಶಾ ರೈಲು ದುರಂತ ತಪ್ಪಿಸಬಹುದಿತ್ತೆ?

    ಮೊದಲ ಬಾರಿಗೆ ಆಲ್ಕೋಹಾಲ್ ಪರೀಕ್ಷೆಯಲ್ಲಿ ನಿಯಮ ಉಲ್ಲಂಘನೆಯಾಗಿದ್ದರೆ ಪೈಲಟ್‌ಗಳಿಗೆ ಮೂರು ತಿಂಗಳವರೆಗೆ ಕರ್ತವ್ಯಕ್ಕೆ ಹಾಜರಾಗುವುದನ್ನು ನಿರ್ಬಂಧಿಸಲಾಗುತ್ತದೆ. ಆದರೆ ಎರಡನೇ ಬಾರಿ ಅಪರಾಧ ಮಾಡಿದರೆ ಮೂರು ವರ್ಷಗಳ ವರೆಗೆ ನಿರ್ಬಂಧಿಸಲಾಗುತ್ತದೆ. ಪೈಲಟ್ ಮೂರನೇ ಬಾರಿ ನಿಯಮ ಉಲ್ಲಂಘಿಸಿದ್ದು ಕಂಡುಬಂದರೆ ಪರವಾನಗಿಯನ್ನು ಶಾಶ್ವತವಾಗಿ ರದ್ದು ಮಾಡಲಾಗುತ್ತದೆ.

    ‘ಎಣ್ಣೆ’ ಮತ್ತು ತಂದ ಕುತ್ತು
    ವಿಮಾನಯಾನ ಉದ್ಯಮದಲ್ಲಿ ಪೈಲಟ್‌ಗಳ ಕುಡಿತದ ಪ್ರಕರಣಗಳು ಆಗಾಗ ವರದಿಯಾಗುವುದುಂಟು. 2018 ರಲ್ಲಿ ವಿಮಾನ ಟೇಕಾಫ್ ಆಗುವ ಸಂದರ್ಭದಲ್ಲಿ ನಡೆಸಿದ ಉಸಿರಾಟದ ಪರೀಕ್ಷೆಯಲ್ಲಿ ಜಪಾನ್ ಏರ್‌ಲೈನ್ಸ್‌ನ ಪೈಲಟ್ ಕಟ್ಸುತೋಶಿ ಜಿತ್ಸುಕಾವಾ ಅವರ ರಕ್ತದ ಆಲ್ಕೋಹಾಲ್ ಮಟ್ಟವು ಕಾನೂನು ಮಿತಿಗಿಂತ ಒಂಬತ್ತು ಪಟ್ಟು ಹೆಚ್ಚಾಗಿತ್ತು. ಈ ಕಾರಣಕ್ಕೆ ಅವರಿಗೆ 10 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಅಲ್ಲದೇ ಅಮೆರಿಕದಲ್ಲಿ ಇದೇ ರೀತಿ ಗೇಬ್ರಿಯಲ್ ಲೈಲ್ ಸ್ಕ್ರೋಡರ್ ಎಂಬ ಪೈಲಟ್‌ರನ್ನು ಮದ್ಯದ ಅಮಲಿನಲ್ಲಿದ್ದಾರೆ ಎಂದು ಶಂಕಿಸಿ ಟೇಕಾಫ್‌ಗೂ ಮುನ್ನ ವಿಮಾನದಿಂದ ಕೆಳಗಿಳಿಸಲಾಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಕ್‍ಪಿಟ್‍ಗೆ ಸ್ನೇಹಿತೆ ಕರೆದೊಯ್ದ ಪೈಲೆಟ್ – ಏರ್ ಇಂಡಿಯಾ ಸಿಇಒಗೆ ಶೋಕಾಸ್ ನೋಟಿಸ್

    ಕಾಕ್‍ಪಿಟ್‍ಗೆ ಸ್ನೇಹಿತೆ ಕರೆದೊಯ್ದ ಪೈಲೆಟ್ – ಏರ್ ಇಂಡಿಯಾ ಸಿಇಒಗೆ ಶೋಕಾಸ್ ನೋಟಿಸ್

    ನವದೆಹಲಿ: ವಿಮಾನದ ಕಾಕ್‍ಪಿಟ್ (Cockpit) ಪ್ರವೇಶಿಸಲು ಸ್ನೇಹಿತೆಗೆ ಅನುಮತಿ ನೀಡಿದ್ದ ಪೈಲೆಟ್ ಲೋಪಕ್ಕಾಗಿ ಏರ್ ಇಂಡಿಯಾ (Air India) ಸಿಇಒ ಕ್ಯಾಂಪ್‍ಬೆಲ್ ವಿಲ್ಸನ್ ಹಾಗೂ ಭದ್ರತಾ ಮುಖ್ಯಸ್ಥ ಹೆನ್ರಿ ಡೊನೊಹೋ ಅವರಿಗೆ ಡಿಜಿಸಿಎ (DGCA) ಶೋಕಾಸ್ ನೋಟಿಸ್ ಜಾರಿ ಮಾಡಿದೆ.

    ಘಟನೆಯ ಕುರಿತು ಡಿಜಿಸಿಎಗೆ ಸಮಯೋಚಿತ ವರದಿ ಮಾಡದಿದ್ದಕ್ಕಾಗಿ ಏರ್ ಇಂಡಿಯಾ ಸಿಇಒ ಮತ್ತು ವಿಮಾನ ಸುರಕ್ಷತಾ ಮುಖ್ಯಸ್ಥರಿಗೆ ಏ.21 ರಂದು ಶೋಕಾಸ್ ನೋಟಿಸ್ ನೀಡಲಾಗಿತ್ತು. ಆದರೂ ಇಲ್ಲಿಯವರೆಗೂ ಏರ್ ಇಂಡಿಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಏರ್ ಇಂಡಿಯಾ ಸುರಕ್ಷತಾ ಸೂಚನೆಗಳನ್ನು ಉಲ್ಲಂಘಿಸಿದೆ ಎಂದು ಡಿಜಿಸಿಎಯ ಹಿರಿಯ ಅಧಿಕಾರಿ ಭಾನುವಾರ ತಿಳಿಸಿದ್ದಾರೆ. ಇದನ್ನೂ ಓದಿ: ಅಲ್‍ಖೈದಾ ಜೊತೆ ನಂಟು ಶಂಕೆ – ಶಂಕಿತ ಭಯೋತ್ಪಾದಕನ ಸೆರೆ

    ಘಟನೆಯ ತನಿಖೆಯಲ್ಲಿ ವಿಳಂಬವಾಗಿದೆ. ಶೋಕಾಸ್ ನೋಟಿಸ್‍ಗೆ ಉತ್ತರಿಸಲು ಇಬ್ಬರೂ ಕಾರ್ಯನಿರ್ವಾಹಕರಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ. ತನಿಖೆ ಪೂರ್ಣಗೊಳ್ಳುವವರೆಗೆ ದುಬೈ (Dubai), ದೆಹಲಿ (Delhi) ವಿಮಾನದ ಸಂಪೂರ್ಣ ಸಿಬ್ಬಂದಿಯನ್ನು ಡಿ ರೋಸ್ಟರ್ ಮಾಡುವಂತೆ ಡಿಜಿಸಿಎ ಏರ್ ಇಂಡಿಯಾಗೆ ನಿರ್ದೇಶನ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಫೆ.27 ರಂದು ದುಬೈ ಹಾಗೂ ದೆಹಲಿ ನಡವೆ ಸಂಚರಿಸುವ ವಿಮಾನದಲ್ಲಿ ಪೈಲಟ್ ಸ್ನೇಹಿತೆಗೆ ಕಾಕ್‍ಪಿಟ್ ಪ್ರವೇಶಕ್ಕೆ ಅನುಮತಿ ನೀಡಿ, ಒಳಗೆ ಬಿಟ್ಟಿದ್ದರು. ಈ ಬಗ್ಗೆ ವಿಮಾನದ ಕ್ಯಾಬಿನ್ ಸಿಬ್ಬಂದಿಯೊಬ್ಬರು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (Directorate General of Civil Aviation) ದೂರು ಸಲ್ಲಿಸಿದ್ದರು. ಇದನ್ನೂ ಓದಿ: ದಾಂತೇವಾಡ ಸ್ಫೋಟ ಪ್ರಕರಣ- ಮಾಸ್ಟರ್‌ಮೈಂಡ್‌ ಫೋಟೋ ರಿಲೀಸ್

  • DGCA ನಿಮಯಗಳ ಉಲ್ಲಂಘನೆ – ಏರ್‌ಏಷ್ಯಾ ಇಂಡಿಯಾಗೆ 44 ಲಕ್ಷ ದಂಡ

    DGCA ನಿಮಯಗಳ ಉಲ್ಲಂಘನೆ – ಏರ್‌ಏಷ್ಯಾ ಇಂಡಿಯಾಗೆ 44 ಲಕ್ಷ ದಂಡ

    ನವದೆಹಲಿ: ನಾಗರಿಕ ವಿಮಾನಯಾನ ಸಂಸ್ಥೆಯ ಅಗತ್ಯ ನಿಯಮಗಳ ಉಲ್ಲಂಘನೆ ಹಿನ್ನೆಲೆ ಏರ್‌ಏಷ್ಯಾ (AirAsia) ವಿಮಾನಯಾನ ಸಂಸ್ಥೆಗೆ DGCA 44 ಲಕ್ಷ ರೂ. ಆರ್ಥಿಕ ದಂಡ ವಿಧಿಸಿದೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 20 ಮತ್ತು 24 ಲಕ್ಷ ದಂಡವನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ ವಿಧಿಸಿದೆ.

    ಕಳೆದ ವರ್ಷದ ನವೆಂಬರ್ 22 -25 ವರೆಗೂ ಏರ್‌ಏಷ್ಯಾ ಲಿಮಿಟೆಡ್ ಮೇಲೆ ಕಣ್ಗಾವಲು ತಪಾಸಣೆ ನಡೆಸಿತ್ತು. ತಪಾಸಣೆ ವೇಳೆ ಏರ್ ಏಷ್ಯಾ ಪೈಲಟ್‌ಗಳು ಕಡ್ಡಾಯ ನಿಯಮಗಳನ್ನು ಪಾಲಿಸಿಲ್ಲ. ನಿಗದಿತ ವೇಳಾಪಟ್ಟಿಯಂತೆ ಪೈಲಟ್ ಪ್ರೊಫಿಷಿಯನ್ಸಿ ಚೆಕ್/ಇನ್‌ಸ್ಟ್ರುಮೆಂಟ್ ರೇಟಿಂಗ್ ಚೆಕ್ ಮಾಡಿಲ್ಲ. ಇದು ಅಂತಾರಾಷ್ಟ್ರೀಯ ಸಿವಿಲ್ ಏವಿಯೇಷನ್ ​​ಆರ್ಗನೈಸೇಶನ್ ಕಡ್ಡಾಯ ನಿಯಮವಾಗಿರುವ ಹಿನ್ನೆಲೆ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಿದೆ. ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಹಗರಣ- ಸಂಸದನ ಪುತ್ರ ಅರೆಸ್ಟ್

    ನಿಯಮಗಳ ಉಲ್ಲಂಘನೆ ಹಿನ್ನೆಲೆ ಸ್ಪಷ್ಟೀಕರಣ ನೀಡುವಂತೆ ಏರ್‌ಏಷ್ಯಾ ಲಿಮಿಟೆಡ್‌ಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ನೋಟಿಸ್‌ಗೆ ನೀಡಿದ ಉತ್ತರ ಸಮರ್ಪಕವಲ್ಲದ ಕಾರಣಕ್ಕಾಗಿ 20 ಲಕ್ಷ ಆರ್ಥಿಕ ದಂಡವನ್ನು ವಿಧಿಸಿದೆ. ಅಲ್ಲದೇ ಶಿಸ್ತು ಉಲ್ಲಂಘನೆಗಾಗಿ ತರಬೇತಿ ವಿಭಾಗದ ಮುಖ್ಯಸ್ಥರನ್ನು ಮೂರು ತಿಂಗಳು ಅಮಾನತು ಮಾಡಲು ಸೂಚಿಸಿದೆ.

    ಇದರ ಜೊತೆಗೆ DGCA ಸಿವಿಲ್ ಏವಿಯೇಷನ್ ​​ಅವಶ್ಯಕತೆಗಳ ಪ್ರಕಾರ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ವಿಫಲರಾದ ಏರ್ ಏಷ್ಯಾ (ಇಂಡಿಯಾ) ಲಿಮಿಟೆಡ್‌ನ ಎಂಟು ಗೊತ್ತುಪಡಿಸಿದ ಪರೀಕ್ಷಕರಿಗೆ ತಲಾ 3 ಆರ್ಥಿಕ ದಂಡವನ್ನು ವಿಧಿಸಿದ್ದು, ಒಟ್ಟು 44 ಲಕ್ಷವನ್ನು ದಂಡವನ್ನು ಏರ್ ಏಷ್ಯಾ ಇಂಡಿಯಾ ಮೇಲೆ ಹಾಕಲಾಗಿದೆ. ಇದನ್ನೂ ಓದಿ: ಟರ್ಕಿ ಭೂಕಂಪ – ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಟೆಕ್ಕಿ ಪಾಸ್‌ಪೋರ್ಟ್ ಪತ್ತೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿಮಾನ ನಿಲ್ದಾಣದಲ್ಲಿ 55 ಪ್ರಯಾಣಿಕರನ್ನು ಬಿಟ್ಟು ಹೋಗಿದ್ದ ʼGo First’ಗೆ 10 ಲಕ್ಷ ದಂಡ

    ವಿಮಾನ ನಿಲ್ದಾಣದಲ್ಲಿ 55 ಪ್ರಯಾಣಿಕರನ್ನು ಬಿಟ್ಟು ಹೋಗಿದ್ದ ʼGo First’ಗೆ 10 ಲಕ್ಷ ದಂಡ

    ನವದೆಹಲಿ: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru Airport) 55 ಪ್ರಯಾಣಿಕರನ್ನು ಬಿಟ್ಟು ಹೋಗಿದ್ದಕ್ಕಾಗಿ ‘ಗೋ ಫಸ್ಟ್‌’ (Go First Flight) ವಿಮಾನಯಾನ ಸಂಸ್ಥೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು (DGCA) 10 ಲಕ್ಷ ರೂ. ದಂಡವನ್ನು ವಿಧಿಸಿದೆ.

    ಈ ಅಚಾತುರ್ಯ ಸಂಭವಿಸಿದ ಬೆನ್ನಲ್ಲೇ ಗೋ ಫಸ್ಟ್‌ಗೆ ಡಿಜಿಸಿಎ ನೋಟಿಸ್‌ ನೀಡಿತ್ತು. “ಸಂವಹನ, ಸಮನ್ವಯದ ಕೊರತೆ ಮತ್ತು ದೃಢಪಡಿಸಿಕೊಳ್ಳುವಲ್ಲಿ ಆಗಿರುವ ತಪ್ಪುಗಳಿಂದ ಈ ಲೋಪ ಸಂಭವಿಸಿದೆ. ಈ ನಿರ್ಲಕ್ಷ್ಯಕ್ಕೆ ತಮ್ಮ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬಾರದು” ಎಂದು ‘ಗೋ ಫಸ್ಟ್‌’ನ ಅಕೌಂಟೆಬಲ್‌ ಮ್ಯಾನೇಜರ್‌/ ಚೀಫ್‌ ಆಪರೇಷನ್‌ ಆಫೀಸರ್‌ಗೆ ಡಿಜಿಸಿಎ ನೋಟಿಸ್‌ ನೀಡಿತ್ತು. ನೋಟಿಸ್‌ಗೆ ಉತ್ತರಿಸಲು ಎರಡು ವಾರಗಳ ಕಾಲಾವಕಾಶವನ್ನು ನೀಡಿತ್ತು. ಇದನ್ನೂ ಓದಿ: 50 ಪ್ರಯಾಣಿಕರನ್ನು ಬಿಟ್ಟುಹೋದ ವಿಮಾನ – ಗೋ ಫಸ್ಟ್‌ಗೆ DGCA ನೋಟಿಸ್

    ಏನಿದು ಘಟನೆ?
    ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಜ.9 ರಂದು ಬೆಳಗ್ಗೆ ಚಲಿಸಿದ ‘ಗೋ ಫಸ್ಟ್‌’ ಸಂಸ್ಥೆಯ ವಿಮಾನವು (ಜಿ8–116), ವಿಮಾನ ನಿಲ್ದಾಣದಲ್ಲಿ ಪ್ಯಾಸೆಂಜರ್‌ ಕೋಚ್‌ನಲ್ಲಿ (ಬಸ್‌) 55 ಪ್ರಯಾಣಿಕರನ್ನು ಬಿಟ್ಟು ಹೋಗಿತ್ತು.

    ಸಿಬ್ಬಂದಿಯಿಂದ ಆದ ಆಚಾತುರ್ಯಕ್ಕಾಗಿ ‘ಗೋ ಫಸ್ಟ್‌’ ವಿಮಾನಯಾನ ಸಂಸ್ಥೆಯು ಪ್ರಯಾಣಿಕರಲ್ಲಿ ಕ್ಷಮೆ ಕೋರಿತ್ತು. ಪ್ರಯಾಣಿಕರಿಗೆ ದೆಹಲಿ ಮತ್ತು ಇತರ ಸ್ಥಳಗಳಿಗೆ ಪರ್ಯಾಯ ವಿಮಾನಗಳಲ್ಲಿ ವ್ಯವಸ್ಥೆ ಕಲ್ಪಿಸಲಾಯಿತು ಎಂದೂ ಅದು ಹೇಳಿಕೊಂಡಿತ್ತು. ಇದನ್ನೂ ಓದಿ: ಏರ್ ಇಂಡಿಯಾದಲ್ಲಿ ಮೂತ್ರವಿಸರ್ಜನೆ ಪ್ರಕರಣ ಬಳಿಕ ಗೋ ಫಸ್ಟ್‌ನಲ್ಲಿ ಗಗನಸಖಿಗೆ ವಿದೇಶಿಗನಿಂದ ಕಿರುಕುಳ

    ಸಮಸ್ಯೆಗೆ ಒಳಗಾದ ಪ್ರಯಾಣಿಕರಿಗೆ ಮುಂದಿನ 12 ತಿಂಗಳಲ್ಲಿ ದೇಶದ ಯಾವುದೇ ಸ್ಥಳಕ್ಕೆ ಪ್ರಯಾಣಿಸಲು ಒಂದು ಉಚಿತ ಟಿಕೆಟ್ ನೀಡಲು ನಿರ್ಧರಿಸಲಾಗಿದೆ ಎಂದು ಗೋ ಫಸ್ಟ್‌ ತಿಳಿಸಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೂತ್ರ ವಿಸರ್ಜನೆ ಕೇಸ್‌ನಲ್ಲಿ ಪೈಲಟ್‌ ಬಲಿಪಶು – ಏರ್‌ ಇಂಡಿಯಾ ಪೈಲಟ್‌ ಒಕ್ಕೂಟ

    ಮೂತ್ರ ವಿಸರ್ಜನೆ ಕೇಸ್‌ನಲ್ಲಿ ಪೈಲಟ್‌ ಬಲಿಪಶು – ಏರ್‌ ಇಂಡಿಯಾ ಪೈಲಟ್‌ ಒಕ್ಕೂಟ

    ನವದೆಹಲಿ: ಮೂತ್ರ ವಿಸರ್ಜನೆ ಪ್ರಕರಣದಲ್ಲಿ ಪೈಲಟ್‌ (Pilot) ಅವರನ್ನು ಬಲಿಪಶು ಮಾಡಲಾಗಿದೆ ಎಂದು ಏರ್‌ ಇಂಡಿಯಾ (Air India) ಪೈಲಟ್‌ ಒಕ್ಕೂಟ ಹೇಳಿದೆ.

    ಕುಡಿದ ಅಮಲಿನಲ್ಲಿ ವೃದ್ಧ ಪ್ರಯಾಣಿಕರೊಬ್ಬರ ಮೇಲೆ ಶಂಕರ್ ಮಿಶ್ರಾ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ (Shankar Mishra case) ಸಂಬಂಧಿಸಿದಂತೆ ನ್ಯೂಯಾರ್ಕ್-ನವದೆಹಲಿ ವಿಮಾನದ ಪೈಲಟ್ ಅವರ ಪರವಾನಗಿಯನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (DGCA) 3 ತಿಂಗಳ ಕಾಲ ಅಮಾನತುಗೊಳಿಸಿದೆ. ಅಮಾನತುಗೊಳಿಸಿದ್ದನ್ನು ಪ್ರಶ್ನಿಸಿ ಪೈಲಟ್‌ ಒಕ್ಕೂಟ ಕಾನೂನು ಸಮರ ಆರಂಭಿಸಲು ಮುಂದಾಗಿದೆ.

    ಈ ಬಗ್ಗೆ ಸದಸ್ಯರೊಬ್ಬರು ಪ್ರತಿಕ್ರಿಯಿಸಿ, ಪೈಲಟ್ ತ್ವರಿತವಾಗಿ ಮತ್ತು ಪ್ರಬುದ್ಧವಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಘಟನೆಯ ಬಗ್ಗೆ ಅಂದೇ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಈ ಪ್ರಕರಣದಲ್ಲಿ ಯಾವುದೇ ತಪ್ಪು ಮಾಡದೇ ಇದ್ದರೂ ಪೈಲಟ್‌ ಅವರನ್ನು ಬಲಿಪಶು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಸಾಕ್ಷ್ಯಚಿತ್ರ ಭಾರತದಲ್ಲಿ ಬ್ಯಾನ್‌ – ಬಿಬಿಸಿ ವಿರುದ್ಧ 302 ಅಧಿಕಾರಿಗಳು ಆಕ್ರೋಶ

    ಈ ಘಟನೆ 2022ರ ನವೆಂಬರ್ 26ರಂದು ನಡೆದಿತ್ತು. ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರವಿಸರ್ಜನೆ ಮಾಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಡಿಜಿಸಿಎ ಏರ್ ಇಂಡಿಯಾ ಕಂಪನಿಗೆ 30 ಲಕ್ಷ ರೂ. ದಂಡ ವಿಧಿಸಿದೆ. ಅಂದು ವಿಮಾನದ ವಾಚ್‌ಡಾಗ್ (ವಿಚಕ್ಷಣಾ ವಿಭಾಗ) ತನ್ನ ಕರ್ತವ್ಯವನ್ನು ನಿರ್ವಹಿಸಲು ವಿಫಲವಾದ ಕಾರಣಕ್ಕೆ ಏರ್ ಇಂಡಿಯಾದ ಇನ್-ಫ್ಲೈಟ್ ಸೇವೆಗಳ ನಿರ್ದೇಶಕರ ಮೇಲೆ 3 ಲಕ್ಷ ರೂ. ದಂಡವನ್ನೂ ವಿಧಿಸಿದೆ.

    ಘಟನೆ ನಡೆದ ತಿಂಗಳ ಬಳಿಕ ಸಂತ್ರಸ್ತ ಮಹಿಳೆ ಏರ್ ಇಂಡಿಯಾ ಗ್ರೂಪ್ ಅಧ್ಯಕ್ಷರಿಗೆ ಘಟನೆ ಬಗ್ಗೆ ಪತ್ರ ಬರೆದಿದ್ದರು. ಬಳಿಕ ಏರ್ ಇಂಡಿಯಾ ಜನವರಿ 4 ರಂದು ಪೊಲೀಸ್ ದೂರು ದಾಖಲಿಸಿತ್ತು. ಆರೋಪಿ ಶಂಕರ್ ಮಿಶ್ರಾನನ್ನು 2 ದಿನಗಳ ಬಳಿಕ ದೆಹಲಿ ಪೊಲೀಸರು ಬಂಧಿಸಿದ್ದರು. ಆರೋಪಿಗೆ 4 ತಿಂಗಳ ಕಾಲ ವಿಮಾನ ಪ್ರಯಾಣವನ್ನು ನಿಷೇಧಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 50 ಪ್ರಯಾಣಿಕರನ್ನು ಬಿಟ್ಟುಹೋದ ವಿಮಾನ –  ಗೋ ಫಸ್ಟ್‌ಗೆ DGCA ನೋಟಿಸ್

    50 ಪ್ರಯಾಣಿಕರನ್ನು ಬಿಟ್ಟುಹೋದ ವಿಮಾನ – ಗೋ ಫಸ್ಟ್‌ಗೆ DGCA ನೋಟಿಸ್

    ನವದೆಹಲಿ: ಸೋಮವಾರ ಬೆಂಗಳೂರಿನಿಂದ (Bengaluru) ದೆಹಲಿಗೆ (Delhi) ಪ್ರಯಾಣಿಸಬೇಕಿದ್ದ ಗೋ ಫಸ್ಟ್ ವಿಮಾನ (Go First Flight) ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರನ್ನು (Passengers) ನಿಲ್ದಾಣದಲ್ಲಿಯೇ (Airport) ಬಿಟ್ಟು ಟೇಕ್ ಆಫ್ ಆಗಿತ್ತು. ಇತ್ತೀಚೆಗೆ ವಿಮಾನಯಾನ ಸಂಸ್ಥೆಯಿಂದಾಗುತ್ತಿರುವ ಹಲವು ತಪ್ಪುಗಳಿಗೆ ವಿಮಾನಯಾನ ನಿಯಂತ್ರಕ ಡಿಜಿಸಿಎ (DGCA) ನೋಟಿಸ್ ಕಳುಹಿಸಿದೆ.

    ಒಂದಾದಮೇಲೊಂದರಂತೆ ವಿಮಾನಯಾನ ಸಂಸ್ಥೆಯಿಂದಾಗುತ್ತಿರುವ ತಪ್ಪುಗಳಿಗೆ ಕಾರಣಗಳನ್ನು ನೀಡುವಂತೆ ಡಿಜಿಸಿಎ ನೋಟಿಸ್ ಕಳುಹಿಸಿದೆ. ಇದಕ್ಕೆ ಉತ್ತರಿಸಲು ಸಂಸ್ಥೆಗೆ 2 ವಾರಗಳ ಕಾಲಾವಕಾಶವನ್ನು ನೀಡಿದೆ.

    ಸೋಮವಾರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 6:30ಕ್ಕೆ ಗೋ ಫಸ್ಟ್‌ನ ಜಿ8 118 ವಿಮಾನ ದೆಹಲಿಗೆ ಟೇಕ್ ಆಫ್ ಆಗಿತ್ತು. ಆದರೆ 50ಕ್ಕೂ ಹೆಚ್ಚು ಪ್ರಯಾಣಿಕರನ್ನು ವಿಮಾನ ಹತ್ತಿಸಿಕೊಳ್ಳುವುದಕ್ಕಿಂತಲೂ ಮೊದಲೇ ಹಾರಾಟ ಪ್ರಾರಂಭಿಸಿತ್ತು. ಇದನ್ನೂ ಓದಿ: ಡೆಡ್ಲಿ ಮೆಟ್ರೋಗೆ ಇಬ್ಬರು ಬಲಿ – ಪಿಲ್ಲರ್ ದುರಂತಕ್ಕೆ ಕಾರಣಗಳೇನು?

    ವರದಿಗಳ ಪ್ರಕಾರ ಸೋಮವಾರ ಬೆಳಗ್ಗೆ ದೆಹಲಿಗೆ ಹೊರಟಿದ್ದ ವಿಮಾನಕ್ಕೆ 4 ಬಸ್‌ಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲಾಗಿತ್ತು. ಪ್ರಯಾಣಿಕರು ತಮ್ಮ ಬೋರ್ಡಿಂಗ್ ಪಾಸ್‌ಗಳನ್ನು ಪಡೆದಿದ್ದು, ತಮ್ಮ ಲಗೇಜ್‌ಗಳನ್ನೂ ಪರಿಶೀಲಿಸಲಾಗಿತ್ತು. 3 ಬಸ್‌ಗಳಲ್ಲಿ ತೆರಳಿದ್ದ ಪ್ರಯಾಣಿಕರನ್ನು ವಿಮಾನ ಹತ್ತಿಸಿಕೊಂಡು ಟೇಕ್ ಆಫ್ ಆಗಿತ್ತು. ಆದರೆ ಒಂದು ಬಸ್ ನಿಲ್ದಾಣದಲ್ಲಿಯೇ ಉಳಿದುಹೋಗಿತ್ತು. ವಿಮಾನ ತಮ್ಮನ್ನು ಬಿಟ್ಟು ಹೋಗಿದ್ದನ್ನು ತಿಳಿದ ಕೆಲ ಪ್ರಯಾಣಿಕರು ಸಾಮಾಜಿಕ ಮಾಧ್ಯಮಗಳಲ್ಲಿ ಸಂಸ್ಥೆ ನಿರ್ಲಕ್ಷ್ಯವಹಿಸಿದೆ ಎಂದು ಕಿಡಿ ಕಾರಿದ್ದಾರೆ.

    ಪ್ರಯಾಣದಿಂದ ವಂಚಿತರಾದವರಿಗೆ ಬೇರೆ ವಿಮಾನದ ವ್ಯವಸ್ಥೆ ಮಾಡಲಾಗಿತ್ತು. ಆದರೂ ಕೆಲ ಪ್ರಯಾಣಿಕರು ಇದನ್ನು ನಿರಾಕರಿಸಿ ತಮ್ಮ ಟಿಕೆಟ್‌ಗಳನ್ನು ಕ್ಯಾನ್ಸಲ್ ಮಾಡಿಸಿ ಮರುಪಾವತಿ ಮಾಡುವಂತೆ ಆಗ್ರಹಿಸಿರುವುದಾಗಿ ವರದಿಯಾಗಿದೆ. ತಮ್ಮಿಂದಾಗಿರುವ ತಪ್ಪಿಗೆ ಗೋ ಫಸ್ಟ್ ಕ್ಷಮೆ ಕೇಳಿದ್ದು, ಮುಂದಿವ ವರ್ಷದೊಳಗೆ ಪ್ರಯಾಣ ವಂಚಿತರಿಗೆ ಭಾರತದಲ್ಲಿ ಎಲ್ಲಾದರೂ ಪ್ರಯಾಣಿಸಲು ಒಂದು ಉಚಿತ ಟಿಕೆಟ್ ನೀಡುವುದಾಗಿ ಘೋಷಿಸಿದೆ. ಇದನ್ನೂ ಓದಿ: ಅಗಲಿದ ಮುದ್ದು ನಾಯಿಗೆ 47ನೇ ಅರ್ಧಶತಕವನ್ನು ಅರ್ಪಿಸಿದ ರೋಹಿತ್ ಶರ್ಮಾ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸ್ಪೈಸ್‌ಜೆಟ್‌ ಪೈಲಟ್‌ನ ಲೈಸನ್ಸ್ 6 ತಿಂಗಳು ಅಮಾನತು – DGCA ಆದೇಶ

    ಸ್ಪೈಸ್‌ಜೆಟ್‌ ಪೈಲಟ್‌ನ ಲೈಸನ್ಸ್ 6 ತಿಂಗಳು ಅಮಾನತು – DGCA ಆದೇಶ

    ನವದೆಹಲಿ: ಏವಿಯೇಷನ್ ರೆಗ್ಯುಲೇಟರ್ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ಸ್ಪೈಸ್‌ಜೆಟ್‌ ಪೈಲಟ್‌ನ ಪರವಾನಗಿಯನ್ನು 6 ತಿಂಗಳ ಕಾಲ ಅಮಾನತುಗೊಳಿಸಿರುವುದಾಗಿ ತಿಳಿಸಿದೆ.

    ಮುಂಬೈನಿಂದ ದುರ್ಗಾಪುರಕ್ಕೆ ತೆರಳುವ ಏರ್‌ಲೈನ್ಸ್ ವಿಮಾನವು ಕಳೆದ ಮೇ ತಿಂಗಳಲ್ಲಿ ತೀವ್ರ ಪ್ರಕ್ಷುಬ್ಧತೆ ಎದುರಿಸಿ ಹಲವು ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿತ್ತು. ಈ ಘಟನೆಯನ್ನಾಧರಿಸಿ ಡಿಜಿಸಿಎ, ಲೈಸನ್ಸ್ ಅಮಾನತು ಮಾಡಿದೆ. ಇದನ್ನೂ ಓದಿ: ಸ್ಪೈಸ್‍ಜೆಟ್‍ನಲ್ಲಿ ಮುಂದುವರಿದ ತಾಂತ್ರಿಕ ದೋಷ: ಕಾಂಡ್ಲಾದಿಂದ ಬಂದ ವಿಮಾನ ಮುಂಬೈನಲ್ಲಿ ತುರ್ತು ಭೂಸ್ಪರ್ಶ

    ಕಳೆದ ಮೇ 1 ರಂದು ನಡೆದ ಘಟನೆಯಲ್ಲಿ 14 ಪ್ರಯಾಣಿಕರು ಮತ್ತು 3 ಕ್ಯಾಬಿನ್ ಸಿಬ್ಬಂದಿ ಗಾಯಗೊಂಡಿದ್ದರು. ಇದರೊಂದಿಗೆ ವಿವಿಧ ನಿಯಮ ಉಲ್ಲಂಘನೆಯ ಕಾರಣಗಳಿಂದಾಗಿ ಪೈಲಟ್‌ನ ಪರವಾನಗಿಯನ್ನು 6 ತಿಂಗಳ ಕಾಲ ಅಮಾನತುಗೊಳಿಸಿದೆ ಎಂದು ಡಿಜಿಸಿಎ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

    ಅಲ್ಲದೇ ಹವಾಮಾನ ಪರಿಸ್ಥಿತಿಯನ್ನು ಪೈಲಟ್ ಉತ್ತಮ ರೀತಿಯಲ್ಲಿ ನಿಭಾಯಿಸಬಹುದಿತ್ತು ಎಂದು ಹೇಳಿದ್ದಾರೆ. ಆದರೆ ಸ್ಪೈಸ್‌ಜೆಟ್‌ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ವಿಮಾನಗಳಲ್ಲಿ ತಾಂತ್ರಿಕ ದೋಷ – ಸ್ಪೈಸ್‌ಜೆಟ್‌ಗೆ ಶೋಕಾಸ್‌ ನೋಟಿಸ್‌

    ಇದು ಗಂಭೀರ ಘಟನೆಯಾಗಿರುವುದರಿಂದ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಈ ಕುರಿತು ತನಿಖೆ ನಡೆಸುತ್ತಿದೆ. ಘಟನೆ ನಡೆದಾಗ ವಿಮಾನದಲ್ಲಿ 2 ಪೈಲಟ್‌ಗಳು ಮತ್ತು 4 ಕ್ಯಾಬಿನ್ ಸಿಬ್ಬಂದಿ ಸೇರಿ 195 ಮಂದಿ ಇದ್ದರು. ಅವರಲ್ಲಿ 14 ಪ್ರಯಾಣಿಕರು ಮತ್ತು 3 ಕ್ಯಾಬಿನ್ ಸಿಬ್ಬಂದಿಗೆ ತಲೆಯ ಭಾಗ, ಬೆನ್ನುಮೂಳೆ, ಭುಜ, ಹಣೆ ಮತ್ತು ಮುಖದ ಭಾಗಕ್ಕೆ ತೀವ್ರ ಪೆಟ್ಟಾಗಿದೆ ಎಂದು ಡಿಜಿಸಿಎ ತಿಳಿಸಿದೆ.

    ಇತ್ತೀಚೆಗೆ ಹಲವು ಸ್ಪೈಸ್‌ಜೆಟ್ ವಿಮಾನಗಳು ತಾಂತ್ರಿಕ ಸಮಸ್ಯೆ ಎದುರಿಸುತ್ತಿವೆ. ಅದಕ್ಕಾಗಿ ಗರಿಷ್ಠ 8 ವಾರಗಳ ವರೆಗೆ ತನ್ನ ಶೇ.50 ರಷ್ಟು ವಿಮಾನಗಳನ್ನು ಮಾತ್ರ ನಿರ್ವಹಿಸುವಂತೆ ಡಿಜಿಸಿಎ ಏರ್‌ಲೈನ್‌ಗೆ ಆದೇಶಿಸಿದೆ.

    Live Tv
    [brid partner=56869869 player=32851 video=960834 autoplay=true]

  • ದೇಶದಲ್ಲಿ ಕೊರೊನಾ ಏರಿಕೆ – ವಿಮಾನ ಪ್ರಯಾಣದ ವೇಳೆ ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸಿ: ಡಿಜಿಸಿಎ

    ದೇಶದಲ್ಲಿ ಕೊರೊನಾ ಏರಿಕೆ – ವಿಮಾನ ಪ್ರಯಾಣದ ವೇಳೆ ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸಿ: ಡಿಜಿಸಿಎ

    ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿದೆ. ಹಾಗಾಗಿ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್-19 ನಿಯಮ ಪಾಲನೆ ಮಾಡುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ.

    ವಿದೇಶದಿಂದ ಆಗಮಿಸುವವರು ಮತ್ತು ಭಾರತದಿಂದ ವಿದೇಶಕ್ಕೆ ತೆರಳುವವರು ವಿಮಾನದಲ್ಲಿ ಪ್ರಯಾಣಿಸುವ ಮುನ್ನ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಪ್ರತಿಯೊಬ್ಬ ಪ್ರಯಾಣಿಕರಿಗೂ ರ್‍ಯಾಂಡಮ್ ಆಗಿ ಕೊರೊನಾ ಟೆಸ್ಟ್ ಮಾಡಿ. ಮಾಸ್ಕ್‌ಗಳನ್ನು ಪ್ರಯಾಣದ ವೇಳೆ ಬಳಸುವಂತೆ ಪ್ರಯಾಣಿಕರಿಗೆ ತಿಳಿಸಿ ಎಂದು ಡಿಜಿಸಿಎ ವಿಮಾನಯಾನ ಸಂಸ್ಥೆಗಳಿಗೆ ಸ್ಪಷ್ಟವಾಗಿ ತಿಳಿಸಿದೆ. ಇದನ್ನೂ ಓದಿ: ನಮ್ಮದು ಬೆಸ್ಟ್‌ ಡೀಲ್‌ – ರಷ್ಯಾದಿಂದ ತೈಲ ಖರೀದಿಗೆ ಜೈಶಂಕರ್‌ ಸಮರ್ಥನೆ

    ದೇಶದಲ್ಲಿ ಇಂದು ಒಟ್ಟು 9,062 ಕೊರೊನಾ ಪಾಸಿಟಿವ್ ಕೇಸ್‍ಗಳು ದಾಖಲಾಗಿದೆ. ಈ ಮೂಲಕ ಈವರೆಗೆ ದೇಶದಲ್ಲಿ ಒಟ್ಟು 4,42,86,256 ಕೊರೊನಾ ಕೇಸ್ ವರದಿಯಾಗಿದೆ. ಅಲ್ಲದೇ 1,05,058 ಸಕ್ರಿಯ ಪ್ರಕರಣಗಳು ದೇಶದಲ್ಲಿದೆ ಎಂದು ಕೆಂದ್ರ ಆರೋಗ್ಯ ಸಚಿವಾಲಯ ಹೊರಡಿಸಿರುವ ಬುಲೆಟಿನ್‍ನಲ್ಲಿ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ಬಿಸಿಯೂಟ ಸೇವಿಸಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

    Live Tv
    [brid partner=56869869 player=32851 video=960834 autoplay=true]

  • ವೈದ್ಯಕೀಯ ಪರೀಕ್ಷೆ ನಡೆಸದೇ ಅಂಗವಿಕಲರ ವಿಮಾನ ಪ್ರಯಾಣವನ್ನು ರದ್ದುಗೊಳಿಸುವಂತಿಲ್ಲ: ಡಿಜಿಸಿಎ

    ವೈದ್ಯಕೀಯ ಪರೀಕ್ಷೆ ನಡೆಸದೇ ಅಂಗವಿಕಲರ ವಿಮಾನ ಪ್ರಯಾಣವನ್ನು ರದ್ದುಗೊಳಿಸುವಂತಿಲ್ಲ: ಡಿಜಿಸಿಎ

    ನವದೆಹಲಿ: ಕೆಲವು ದಿನಗಳ ಹಿಂದೆ ರಾಂಚಿ ವಿಮಾನ ನಿಲ್ದಾಣದಲ್ಲಿ ವಿಕಲಚೇತನ ಬಾಲಕನನ್ನು ತಡೆದು, ವಿಮಾನದಲ್ಲಿ ಪ್ರಯಾಣಿಸಲು ಬಿಡದೇ ಹೋದಾಗ ದೇಶಾದ್ಯಂತ ಭಾರೀ ವಿವಾದ ಉಂಟಾಗಿತ್ತು. ಈ ಹಿನ್ನೆಲೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ವಿಕಲಚೇತನರಿಗಾಗಿ ಬೋರ್ಡಿಂಗ್ ಹಾಗೂ ಪ್ರಯಾಣದ ಪ್ರವೇಶವನ್ನು ಸುಧಾರಿಸಲು ನಿಯಮಗಳನ್ನು ತಿದ್ದುಪಡಿ ಮಾಡಿದೆ.

    ಅಂಗವೈಕಲ್ಯತೆ ಅಥವಾ ಅನಾರೋಗ್ಯದ ಆಧಾರದ ಮೇಲೆ ಜನರ ಪ್ರಯಾಣವನ್ನು ನಿರಾಕರಿಸುವಂತಿಲ್ಲ. ಒಂದು ವೇಳೆ ಅವರ ಆರೋಗ್ಯ ಹದಗೆಡಬಹುದು ಎಂದು ವಿಮಾನಯಾನ ಸಂಸ್ಥೆ ಅಭಿಪ್ರಾಯಪಟ್ಟರೆ, ಅವರನ್ನು ವೈದ್ಯರು ಖುದ್ದಾಗಿ ಪರೀಕ್ಷಿಸಬೇಕಾಗುತ್ತದೆ. ಬಳಿಕ ವೈದ್ಯರು ವ್ಯಕ್ತಿ ಪ್ರಯಾಣಿಸಲು ಯೋಗ್ಯನೇ ಅಥವಾ ಇಲ್ಲವೇ ಎಂಬುದನ್ನು ಖಾತ್ರಿಪಡಿಸಿದ ಬಳಿಕ ವಿಮಾನಯಾನ ಸಂಸ್ಥೆ ನಿರ್ಧಾರ ಕೈಗೊಳ್ಳಬೇಕು ಎಂದು ಡಿಜಿಸಿಎ ಹೇಳಿದೆ. ಇದನ್ನೂ ಓದಿ: ಆ.7ರಿಂದ ಹಾರಲಿದೆ ಆಕಾಶ್‌ ಏರ್‌ – ಬೆಂಗಳೂರು ಟು ಕೊಚ್ಚಿಗೆ ಹೋಗಬಹುದು

    ವಿಮಾನಯಾನ ಸಂಸ್ಥೆ ವೈದ್ಯಕೀಯ ಅಭಿಪ್ರಾಯ ಪಡೆದ ಬಳಿಕ ವ್ಯಕ್ತಿಯ ಪ್ರಯಾಣದ ಬಗೆಗಿನ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಆದರೂ ನಿರ್ಧಾರ ಪ್ರಯಾಣದ ನಿರಾಕರಣೆಯಾದಲ್ಲಿ ತಕ್ಷಣವೇ ಪ್ರಯಾಣಿಕರಿಗೆ ಈ ಬಗ್ಗೆ ಲಿಖಿತವಾಗಿ ತಿಳಿಸಬೇಕು ಹಾಗೂ ಪ್ರಯಾಣದ ನಿರಾಕರಣೆಗೆ ಕಾರಣ ಏನೆಂಬುದನ್ನೂ ಉಲ್ಲೇಖಿಸಬೇಕು ಎಂದಿದೆ.

    ಈ ವರ್ಷದ ಮೇ ತಿಂಗಳಿನಲ್ಲಿ ರಾಂಚಿ ವಿಮಾನ ನಿಲ್ದಾಣದಲ್ಲಿ ವಿಕಲಚೇತನ ಬಾಲಕನನ್ನು ವಿಮಾನ ಹತ್ತದಂತೆ ಇಂಡಿಗೋ ಸಂಸ್ಥೆ ತಡೆದಿತ್ತು. ಈ ವೇಳೆ ಪ್ರತ್ಯಕ್ಷದರ್ಶಿಗಳು ಇದರ ವೀಡಿಯೋ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿ ಬಿಟ್ಟಿದ್ದರು. ವೀಡಿಯೋ ವೈರಲ್ ಆಗುತ್ತಿದ್ದಂತೆ ವಿಮಾನಯಾನ ಸಂಸ್ಥೆಯ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿತ್ತು. ಇದನ್ನೂ ಓದಿ: ಬ್ಯಾಗ್‍ನಲ್ಲಿ ಬಾಂಬ್ ಇದೆ ವಿಮಾನದಲ್ಲಿ ರಂಪಾಟ – ಬೆಚ್ಚಿಬಿದ್ದ ಸಹಪ್ರಯಾಣಿಕರು

    ಕೆಲವೇ ದಿನಗಳಲ್ಲಿ ಘಟನೆ ಬಗ್ಗೆ ತನಿಖೆ ನಡೆಸಿ, ಪ್ರಯಾಣಿಕರನ್ನು ಸಮರ್ಪಕವಾಗಿ ನಿರ್ವಹಿಸಲು ವಿಫಲವಾದ ಇಂಡಿಗೋ ವಿಮಾನಯಾನ ಸಂಸ್ಥೆಗೆ ಡಿಜಿಸಿಎ 5 ಲಕ್ಷ ರೂ. ದಂಡವನ್ನು ವಿಧಿಸಿತ್ತು.

    Live Tv
    [brid partner=56869869 player=32851 video=960834 autoplay=true]