Tag: ಡಿಜಿಟಲ್ ಪಾವತಿ

  • UPI ಸಾಧನೆ – 5 ವರ್ಷದಲ್ಲಿ 92 ಕೋಟಿಯಿಂದ 8,375 ಕೋಟಿ ವಹಿವಾಟು ಏರಿಕೆ

    UPI ಸಾಧನೆ – 5 ವರ್ಷದಲ್ಲಿ 92 ಕೋಟಿಯಿಂದ 8,375 ಕೋಟಿ ವಹಿವಾಟು ಏರಿಕೆ

    ನವದೆಹಲಿ: ಆನ್‌ಲೈನ್ ಪಾವತಿ ಕಷ್ಟ, ಗ್ರಾಮೀಣ ಭಾಗದಲ್ಲಿ ಯುಪಿಐ ಪಾವತಿ ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದ ಮಂದಿಗೆ ಭಾರತ ಜನ ತಿರುಗೇಟು ನೀಡಿದ್ದಾರೆ. ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಡಿಜಿಟಲ್ ಪಾವತಿಗಳಲ್ಲಿ ಗಣನೀಯ ಏರಿಕೆಯಾಗಿದ್ದು, ಕೇವಲ 5 ವರ್ಷದಲ್ಲಿ ವಹಿವಾಟು 92 ಕೋಟಿಯಿಂದ 8,375 ಕೋಟಿಗೆ ಏರಿಕೆಯಾಗಿದೆ ಎಂದು ಸರ್ಕಾರ ತಿಳಿಸಿದೆ.

    ಲೋಕಸಭೆಗೆ ಲಿಖಿತ ಉತ್ತರ ನೀಡಿರುವ ಕೇಂದ್ರ ಹಣಕಾಸು ಸಚಿವಾಲಯ, ಯುಪಿಐ ಪಾವತಿಗಳ ಗಣನೀಯ ವಿಸ್ತರಣೆಯಿಂದಾಗಿ ಕಳೆದ ಆರ್ಥಿಕ ವರ್ಷದಲ್ಲಿ ಚಲಾವಣೆಯಲ್ಲಿರುವ ಬ್ಯಾಂಕ್ ನೋಟುಗಳ ಬೆಳವಣಿಗೆಯನ್ನು 7.8%ಕ್ಕೆ ಇಳಿಸಲು ಸಹಾಯ ಮಾಡಿದೆ ಎಂದು ತಿಳಿಸಿದೆ.

    ಈ ಬಗ್ಗೆ ಲೋಕಸಭೆಗೆ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕೆ ಕರದ್ ಲಿಖಿತ ಉತ್ತರ ನೀಡಿದ್ದಾರೆ. ಯುಪಿಐ ವಹಿವಾಟುಗಳು ಗಣನೀಯ ಬೆಳವಣಿಗೆಯನ್ನು ಕಂಡಿದೆ. ಆರ್ಥಿಕ ವರ್ಷ 2017-18ರಲ್ಲಿ 92 ಕೋಟಿ ಇದ್ದರೆ 2022-23 ಆರ್ಥಿಕ ವರ್ಷದಲ್ಲಿ ವಹಿವಾಟು 8,375 ಕೋಟಿಗೆ ಏರಿಕೆಯಾಗಿದೆ. ಇದರಿಂದ ಸಂಯುಕ್ತ ವಾರ್ಷಿಕ ಬೆಳವಣಿಗೆಯ ದರ (CAGR) 147% ಕ್ಕೆ ಏರಿಕೆಯಾಗಿದೆ ಎಂದು ಉಲ್ಲೇಖಿಸಿದ್ದಾರೆ.

    ಅದೇ ರೀತಿಯಲ್ಲಿ ಯುಪಿಐ ವಹಿವಾಟಿನ ಮೌಲ್ಯ ಆರ್ಥಿಕ ವರ್ಷ 2017-18ರಲ್ಲಿ 1 ಲಕ್ಷ ಕೋಟಿ ರೂ. ಯಿಂದ ಆರ್ಥಿಕ ವರ್ಷ 2022-23ರಲ್ಲಿ 137 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಇದು ಸಿಎಜಿಆರ್ 168% ಏರಿಕೆಯನ್ನು ತೋರಿಸುತ್ತದೆ. ಇದನ್ನೂ ಓದಿ: ಮದ್ದೂರಿನ ವ್ಯಕ್ತಿಯೋರ್ವನಿಗೆ ಕೊರೊನಾ – ಮಂಡ್ಯದಲ್ಲಿ ವರ್ಷದ ಮೊದಲ ಕೇಸ್ ಪತ್ತೆ

    ಪ್ರಸಕ್ತ ಹಣಕಾಸು ವರ್ಷದಲ್ಲಿ ಡಿಸೆಂಬರ್ 11 ರವರೆಗೆ ಯುಪಿಐ 8,572 ಕೋಟಿ ವಹಿವಾಟುಗಳನ್ನು ಸಾಧಿಸಿದೆ. ಡಿಜಿಟಲ್ ಪಾವತಿ ವಹಿವಾಟುಗಳ ಒಟ್ಟಾರೆ ವಿಸ್ತರಣೆಗೆ ಯುಪಿಐ ಪ್ರಾಥಮಿಕ ಚಾಲಕವಾಗಿ ಹೊರಹೊಮ್ಮಿದೆ. ಆರ್ಥಿಕ ವರ್ಷ 2022-23 ರಲ್ಲಿ ಅಂತಹ ವಹಿವಾಟುಗಳಲ್ಲಿ 62% ಒಳಗೊಂಡಿದೆ. ಇದಲ್ಲದೇ ಚಲಾವಣೆಯಲ್ಲಿರುವ ಬ್ಯಾಂಕ್ ನೋಟುಗಳ ಮೌಲ್ಯದಲ್ಲಿ ವರ್ಷದಿಂದ ವರ್ಷಕ್ಕೆ ಬೆಳವಣಿಗೆಯು ಆರ್ಥಿಕ ವರ್ಷ 2021-22 ರಲ್ಲಿ 9.9% ರಿಂದ ಆರ್ಥಿಕ ವರ್ಷ 2022-23 ರಲ್ಲಿ 7.8% ಕ್ಕೆ ಇಳಿದಿದೆ.

    2016 ರಲ್ಲಿ ಪ್ರಾರಂಭವಾದ ಯುಪಿಐ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಡಿಯಲ್ಲಿ ನಿಯಂತ್ರಿತ ಘಟಕವಾದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಿMದ (NPCI) ರಚಿಸಲಾದ ತ್ವರಿತ ಪಾವತಿ ವ್ಯವಸ್ಥೆಯಾಗಿದೆ. ತಕ್ಷಣದ ಪಾವತಿ ಸೇವೆಯ ಮೂಲಸೌಕರ್ಯವನ್ನು ಹತೋಟಿಯಲ್ಲಿಟ್ಟುಕೊಂಡು, ಯಾವುದೇ 2 ಬ್ಯಾಂಕ್ ಖಾತೆಗಳ ನಡುವೆ ತಕ್ಷಣ ಹಣ ವರ್ಗಾವಣೆಯನ್ನು ಯುಪಿಐ ಸುಗಮಗೊಳಿಸುತ್ತದೆ. ಇದನ್ನೂ ಓದಿ: ಸ್ವಂತ ಮನೆಯಲ್ಲಿ ಪಿಜಿ ಮಾದರಿ ವಾಸ ಮಾಡ್ತಿದ್ದ ಮನೋರಂಜನ್

  • ಯುಪಿಐ ಪಾವತಿಗಳಿಗೆ ಯಾವುದೇ ಶುಲ್ಕ ವಿಧಿಸಲ್ಲ: ಕೇಂದ್ರ ಸರ್ಕಾರ

    ಯುಪಿಐ ಪಾವತಿಗಳಿಗೆ ಯಾವುದೇ ಶುಲ್ಕ ವಿಧಿಸಲ್ಲ: ಕೇಂದ್ರ ಸರ್ಕಾರ

    ನವದೆಹಲಿ: ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ಪಾವತಿಗಳಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

    ಕೇಂದ್ರ ಹಣಕಾಸು ಇಲಾಖೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದೆ. ಯುಪಿಐ ಡಿಜಿಟಲ್ ಪಾವತಿ ವ್ಯವಸ್ಥೆಯು ಸಾರ್ವಜನಿಕರಿಗೆ ಅಪಾರ ಅನುಕೂಲ ಹಾಗೂ ಉತ್ಪಾದಕತೆ ಲಾಭವನ್ನು ತಂದು ಕೊಡುತ್ತಿದೆ. ಯುಪಿಐ ಪಾವತಿಗಳಿಗೆ ಶುಲ್ಕ ವಿಧಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಪರಿಗಣನೆಯಲ್ಲಿ ಇಲ್ಲ ಎಂದು ತಿಳಿಸಿದೆ.

    ಕಳೆದ ವರ್ಷ ಡಿಜಿಟಲ್ ಪಾವತಿ ವ್ಯವಸ್ಥೆಗೆ ಸರ್ಕಾರ ಹಣಕಾಸಿನ ನೆರವನ್ನು ನೀಡಿದೆ. ಈ ಸಾಲಿನಲ್ಲೂ ಬಳಕೆದಾರ ಸ್ನೇಹಿ ಡಿಜಿಟಲ್ ಪಾವತಿ ಉತ್ತೇಜಿಸಲು ಮತ್ತಷ್ಟು ನೆರವನ್ನು ಘೋಷಣೆ ಮಾಡಲಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಕೇಜ್ರಿವಾಲ್ ಅವರೇ ದೆಹಲಿ ಮದ್ಯ ಅಕ್ರಮದ ಕಿಂಗ್‌ಪಿನ್, ಬಂಧನ ಹತ್ತಿರದಲ್ಲೇ ಇದೆ: ಬಿಜೆಪಿ

    ಸ್ಪಷ್ಟನೆ ನೀಡಿದ್ದು ಯಾಕೆ?
    ದೇಶದಲ್ಲಿ ಅತಿ ಹೆಚ್ಚು ಜನಪ್ರಿಯವಾಗಿರುವ ಯುಪಿಐ ಪಾವತಿಗಳಿಗೆ ಆರ್‌ಬಿಐ ಶುಲ್ಕ ವಿಧಿಸಲಿದೆ ಎಂದು ವರದಿಯಾಗಿತ್ತು. ಕೆಲ ದಿನಗಳ ಹಿಂದೆ ಆರ್‌ಬಿಐ ಬಿಡುಗಡೆ ಮಾಡಿದ್ದ ಸಲಹಾ ಪತ್ರದಲ್ಲಿ ಯುಪಿಐ ಸೇರಿದಂತೆ ಆನ್‌ಲೈನ್‌ ವ್ಯವಸ್ಥೆಗಳ ಮೂಲಕ ನಡೆಸುವ ವಹಿವಾಟಿಗೆ ಶುಲ್ಕ ವಿಧಿಸುವ ಬಗ್ಗೆ ಸಾರ್ವಜನಿಕರಿಂದ ಸಲಹೆ ಕೋರಿತ್ತು. ಈ ಹಿನ್ನೆಲೆಯಲ್ಲಿ ಯುಪಿಐ ವಹಿವಾಟಿಗೂ ಶುಲ್ಕ ವಿಧಿಸಲು ಸರ್ಕಾರ ಮುಂದಾಗಿದ್ಯಾ ಎಂಬ ಪ್ರಶ್ನೆ ಎದ್ದಿತ್ತು.

    ಎಷ್ಟು ವಹಿವಾಟು ನಡೆಯುತ್ತಿದೆ?
    ಪ್ರತಿ ತಿಂಗಳು ಡಿಜಿಟಲ್‌ ಪಾವತಿ ಮೂಲಕ ನಡೆಯುವ ವ್ಯವಹಾರ ಹೆಚ್ಚಾಗುತ್ತಿದೆ. ಜೂನ್‌ ತಿಂಗಳಿನಲ್ಲಿ 5.86 ಶತಕೋಟಿ ವ್ಯವಹಾರ ನಡೆದರೆ ಜುಲೈನಲ್ಲಿ 6.28 ಶತಕೋಟಿ ವ್ಯವಹಾರ ನಡೆದಿತ್ತು.

    Live Tv
    [brid partner=56869869 player=32851 video=960834 autoplay=true]

  • Paytm ನಲ್ಲಿ ಸಮಸ್ಯೆ – ಪಾವತಿ ಕಷ್ಟವಾಗುತ್ತಿದೆ ಎನ್ನುತ್ತಿದ್ದಾರೆ ಬಳಕೆದಾರರು

    Paytm ನಲ್ಲಿ ಸಮಸ್ಯೆ – ಪಾವತಿ ಕಷ್ಟವಾಗುತ್ತಿದೆ ಎನ್ನುತ್ತಿದ್ದಾರೆ ಬಳಕೆದಾರರು

    ನವದೆಹಲಿ: ಡಿಜಿಟಲ್ ಪಾವತಿ ಅಪ್ಲಿಕೇಶನ್ ಪೇಟಿಎಂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಹಲವು ಬಳಕೆದಾರರು ದೂರು ನೀಡಿದ್ದಾರೆ. ಅಪ್ಲಿಕೇಶನ್‌ನಲ್ಲಿ ಲಾಗ್‌ಇನ್ ಹಾಗೂ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ವರದಿಯಾಗಿದೆ. ಈ ಸಮಸ್ಯೆಯನ್ನು ಪೇಟಿಎಂ ಕೂಡಾ ಒಪ್ಪಿಕೊಂಡಿದ್ದು, ದೋಷವನ್ನು ಸರಿಪಡಿಸುವುದಾಗಿ ತಿಳಿಸಿದೆ.

    ಪೇಟಿಎಂನ ಸಮಸ್ಯೆ ಬೆಂಗಳೂರು ಸೇರಿದಂತೆ ದೆಹಲಿ, ಮುಂಬೈ, ಅಹಮದಾಬಾದ್, ಚೆನ್ನೈನಂತಹ ಹಲವಾರು ನಗರಗಳಲ್ಲಿ ಬಳಕೆದಾರರು ಎದುರಿಸಿರುವುದಾಗಿ ವರದಿಯಾಗಿದೆ. ದೂರು ನೀಡಿರುವ ಬಳಕೆದಾರರ ಪೈಕಿ ಶೇ.66 ರಷ್ಟು ಜನರು ಲಾಗ್‌ಇನ್ ಸಮಸ್ಯೆಯನ್ನು ಎದುರಿಸಿದ್ದಾರೆ. ಶೇ.5 ರಷ್ಟು ಜನರು ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಉಳಿದ ಶೇ.29 ರಷ್ಟು ಬಳಕೆದಾರರು ಇತರ ಸಮಸ್ಯೆಗಳನ್ನು ಎದುರಿಸಿದ್ದಾರೆ. ಇದನ್ನೂ ಓದಿ: ಜಾಹೀರಾತುಗಳಲ್ಲಿ ಮಹಿಳೆಯರು ಕಾಣಿಸಿಕೊಳ್ಳುವಂತಿಲ್ಲ- ಇರಾನ್‌ನಲ್ಲಿ ಆದೇಶ

    ಬಳಕೆದಾರರು ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ಒಪ್ಪಿಕೊಂಡಿರುವ ಪೇಟಿಎಂ, ಅದನ್ನು ಸರಿಪಡಿಸಲು ಕೆಲಸ ಮಾಡುತ್ತಿದೆ ಎಂದಿದೆ. ಪೇಟಿಎಂ ಅಪ್ಲಿಕೇಶನ್‌ನಲ್ಲಿ ಕೆಲವು ಬಳಕೆದಾರರು ಲಾಗ್‌ಇನ್ ಮಾಡುವಲ್ಲಿ ಸಮಸ್ಯೆ ಎದುರಿಸುತ್ತಿರಬಹುದು. ನಾವು ಈಗಾಗಲೇ ಈ ಸಮಸ್ಯೆಯನ್ನು ಶೀಘ್ರವಾಗಿ ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ. ಅದನ್ನು ಸರಿಪಡಿಸಿದ ತಕ್ಷಣವೇ ಅದರ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ಟ್ವೀಟ್‌ನಲ್ಲಿ ತಿಳಿಸಿದೆ. ಇದನ್ನೂ ಓದಿ: ಅಮೃತ ಮಹೋತ್ಸವಕ್ಕೆ 750 ಗ್ರಾಮೀಣ ಹೆಣ್ಣುಮಕ್ಕಳೇ ತಯಾರಿಸಿದ ಆಜಾದಿ ಉಪಗ್ರಹ ಉಡಾವಣೆ – ಏನಿದರ ವಿಶೇಷತೆ?

    Live Tv
    [brid partner=56869869 player=32851 video=960834 autoplay=true]

  • ಇಂಟರ್​ನೆಟ್ ಇಲ್ಲದೆ ಆನ್‍ಲೈನ್‍ನಲ್ಲಿ ಹಣ ಕಳುಹಿಸಿ!

    ಇಂಟರ್​ನೆಟ್ ಇಲ್ಲದೆ ಆನ್‍ಲೈನ್‍ನಲ್ಲಿ ಹಣ ಕಳುಹಿಸಿ!

    ಮುಂಬೈ: ಅಂತರ್ಜಾಲ ಸಂಪರ್ಕ ಇಲ್ಲದೆಡೆ ಫೀಚರ್ ಫೋನ್‍ಗಳ ಮೂಲಕವೇ, ಆನ್‍ಲೈನ್ ಹಣ ವರ್ಗಾವಣೆಗೆ ಅವಕಾಶ ಕಲ್ಪಿಸುವ ಆಫ್‍ಲೈನ್ ಟಿಜಿಟಲ್ ಪೇಮೆಂಟ್ ವ್ಯವಸ್ಥೆ ಜಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್(RBI) ಅನುಮೋದನೆ ನೀಡಿದೆ.

    ಈಗಿರುವ ಯುಪಿಐ, ಆರ್‌ಟಿಜಿಸಿ, ನೆಫ್ಟ್ ಸೇರಿದಂತೆ ಇನ್ನಿತರೆ ಮಾರ್ಗಗಳಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಮೊಬೈಲ್ ಬಳಸಿ ಆನ್‍ಲೈನ್ ಮೂಲಕ ಹಣವರ್ಗಾವಣೆ ಮಾಡಲು ಇಂಟರ್​ನೆಟ್ ಸಂಪರ್ಕ ಅವಶ್ಯಕವಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ ಅಂತರ್ಜಾಲ ಸಂಪರ್ಕ ಇಲ್ಲದ ಕಾರಣ, ಆ ಭಾಗದ ಜನತೆ ಡಿಜಿಟಲ್ ಪಾವತಿಯಿಂದ ವಂಚಿತರಾಗಿದ್ದಾರೆ. ಹೀಗಾಗಿ ಗ್ರಾಮೀಣ ಜನರನ್ನೂ ಡಿಜಿಟಲ್ ಪಾವತಿ ವ್ಯವಸ್ಥೆಗೆ ತರಲು ಈ ಯೋಜನೆ ರೂಪಿಸಲಾಗಿದೆ. ಇದನ್ನೂ ಓದಿ: ಸ್ಕಾರ್ಫ್ ವಿವಾದ, ಕಾಲೇಜಿಗೆ ಕೇಸರಿ ಶಲ್ಯ ಹಾಕಿಕೊಂಡು ಬಂದ ವಿದ್ಯಾರ್ಥಿಗಳು

    ಇಂಟರ್​ನೆಟ್ ಬೇಕಿಲ್ಲ: ಈ ಯೋಜನೆಯಡಿ ಅಗ್ಗದ ಮೊಬೈಲ್ ಅಂದರೆ ಫೀಚರ್ ಫೋನ್, ಕಾರ್ಡ್, ವ್ಯಾಲೆಟ್ ಬಳಸಿ ಒಂದು ಬಾರಿಗೆ ಗರಿಷ್ಟ 200 ರೂಪಾಯಿನಂತೆ ಒಂದು ದಿನಕ್ಕೆ ಗರಿಷ್ಟ 2000 ರೂಪಾಯಿ ಹಣವನ್ನು ವರ್ಗಾವಣೆ ಮಾಡಬಹದು. ಎಸ್‍ಎಂಎಸ್, ಕ್ಯು ಆರ್ ಕೋಡ್ ಬಳಸಿ ಈ ರೀತಿ ಹಣ ವರ್ಗಾವಣೆ ಮಾಡಬಹದು. ಹೆಚ್ಚುವರಿ ಖಾತ್ರಿಯ ಅವಶ್ಯಕತೆಯೂ ಇರುವುದಿಲ್ಲ.

  • UPI :  ಸೆಪ್ಟೆಂಬರ್​ನಲ್ಲಿ 6.54 ಲಕ್ಷ ಕೋಟಿ ರೂ. ವಹಿವಾಟು

    UPI : ಸೆಪ್ಟೆಂಬರ್​ನಲ್ಲಿ 6.54 ಲಕ್ಷ ಕೋಟಿ ರೂ. ವಹಿವಾಟು

    ಬೆಂಗಳೂರು : ಯುಪಿಐ (Unified Payments Interface – UPI) ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್​ ತಿಂಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಕೇಂದ್ರದ ಎಲೆಕ್ಟ್ರಾನಿಕ್ಸ್​ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ಕೂ ಮೂಲಕ ಹಂಚಿಕೊಂಡಿದ್ದಾರೆ.

    2021ರ ಜನವರಿಯಿಂದ ಸೆಪ್ಟೆಂಬರ್ ಅವಧಿಯ ಪ್ರತಿ ತಿಂಗಳ ಯುಪಿಐ ವಹಿವಾಟು ಅಂಕಿಅಂಶವನ್ನು ಕೂ ಮಾಡಿರುವ ಸಚಿವರು, ತಿಂಗಳಿನಿಂದ ತಿಂಗಳಿಗೆ ವಹಿವಾಟಿನ ಗಾತ್ರ ಗಮನಾರ್ಹ ಪ್ರಮಾಣದಲ್ಲಿ ವೃದ್ಧಿಯಾಗಿರುವುದನ್ನು ತೋರಿಸಿದ್ದಾರೆ. ಜನವರಿ 2021ರಲ್ಲಿ   4.31 ಲಕ್ಷ ಕೋಟಿ ರೂ., ಮೊತ್ತದ ವಹಿವಾಟು ಯುಪಿಐ ಮೂಲಕ ನಡೆದಿದ್ದರೆ, ಸೆಪ್ಟೆಂಬರ್​ ತಿಂಗಳಲ್ಲಿ ಈ ಮೊತ್ತವು  6.54 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.

    ಅಮೆರಿಕ ಡಾಲರ್​ ಎದುರಿನ ಭಾರತೀಯ ರೂಪಾಯಿ ಮೌಲ್ಯದ ಲೆಕ್ಕಾಚಾರದಲ್ಲಿ ಕಳೆದ ಆಗಸ್ಟ್​ನಲ್ಲಿ ನಡೆದಿರುವ ಯುಪಿಐ ವಹಿವಾಟಿನ ಮೊತ್ತ 86.19 ಶತಕೋಟಿ ಡಾಲರ್. ಸೆಪ್ಟೆಂಬರ್ ತಿಂಗಳಲ್ಲಿ ಇದು 88.25 ಶತಕೋಟಿ ಡಾಲರ್​ಗೆ ಮುಟ್ಟಿದೆ. ಇದನ್ನೂ ಓದಿ: ಬ್ರಾಡ್‍ಬ್ಯಾಂಡ್ ಉತ್ತೇಜಿಸಲು ಜನರಿಗೆ ಪ್ರತಿ ತಿಂಗಳು 200 ರೂ. ಕ್ಯಾಶ್‍ಬ್ಯಾಕ್ ನೀಡಿ – ಟ್ರಾಯ್ ಶಿಫಾರಸು


    ಅಶ್ವಿನಿ ವೈಷ್ಣವ್ ಸಹ ತಾವು ಮಾಡಿರುವ ಕೂನಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ. #UPIChalega ಹ್ಯಾಷ್​ಟ್ಯಾಗ್​ನೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ‘ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಭಾರತದ ಯುಪಿಐ ವಹಿವಾಟು ಗಾತ್ರವು ಪ್ರತಿವರ್ಷ 1 ಲಕ್ಷ ಕೋಟಿ ಡಾಲರ್ ಆರ್ಥಿಕ ಪ್ರಗತಿ ಸಾಧಿಸಲು ಅಗತ್ಯ ವೇಗ ಸಿಗುತ್ತಿರುವ ಉದಾಹರಣೆ’ ಎಂದು ವಿವರಿಸಿದ್ದಾರೆ.

  • ಡಿಜಿಟಲ್ ಪಾವತಿ – ವಿಶ್ವದಲ್ಲೇ ಭಾರತ ಈಗ ನಂಬರ್ 1

    ಡಿಜಿಟಲ್ ಪಾವತಿ – ವಿಶ್ವದಲ್ಲೇ ಭಾರತ ಈಗ ನಂಬರ್ 1

    ನವದೆಹಲಿ: ಡಿಜಿಟಲ್ ಪಾವತಿಯಲ್ಲಿ ಭಾರತ ಈಗ ವಿಶ್ವದಲ್ಲೇ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

    ಹೌದು. ಕೋವಿಡ್ 19 ಸಮಯದಲ್ಲಿ ಭಾರೀ ಪ್ರಮಾಣದಲ್ಲಿ ಡಿಜಿಟಲ್ ವ್ಯವಹಾರ ನಡೆದಿದೆ. ಪರಿಣಾಮ ಅಮೆರಿಕ, ಚೀನಾವನ್ನು ಹಿಂದಿಕ್ಕಿ ಭಾರತ 2020ರ ಅವಧಿಯಲ್ಲಿ ಅಗ್ರ ಸ್ಥಾನವನ್ನು ಸಂಪಾದಿಸಿದೆ.

    ಯುನೈಟೆಡ್ ಕಿಂಗ್‍ಡಮ್‍ನ ಎಸಿಐ ವರ್ಲ್ಡ್ ಈ ವರದಿ ನೀಡಿದ್ದು, 2020ರಲ್ಲಿ 25.5 ಶತಕೋಟಿ ರಿಯಲ್ ಟ್ರೈಮ್ ಆನ್‍ಲೈನ್ ವ್ಯವಹಾರ ನಡೆದಿದೆ. ಭೀಮ್ ಆಪ್, ಗೂಗಲ್ ಪೇ, ಪೇಟಿಂಎ, ಫೋನ್ ಪೇ ಸೇರಿದಂತೆ ಹಲವು ಆಪ್‍ಗಳಿಂದ ವ್ಯವಹಾರ ನಡೆಸಿದ ಪರಿಣಾಮ ಭಾರತಕ್ಕೆ ಮೊದಲ ಸ್ಥಾನ ಸಿಕ್ಕಿದೆ ಎಂದು ಹೇಳಿದೆ.

    ಯಾವ ದೇಶದಲ್ಲಿ ಎಷ್ಟು?
    ಚೀನಾ 15.7 ಶತಕೋಟಿ, ದಕ್ಷಿಣ ಕೊರಿಯಾ 6 ಶತಕೋಟಿ, ಥಾಯ್ಲೆಂಡ್ 5.2 ಶತಕೋಟಿ, ಇಂಗ್ಲೆಂಡ್ 2.8 ಶತಕೋಟಿ, ಅಮೆರಿಕ 1.2 ಶತಕೋಟಿ ವ್ಯವಹಾರ ನಡೆಸಿದೆ.

    ಭಾರತದಲ್ಲಿ ರಿಯಲ್ ಟೈಂ ವ್ಯವಹಾರ ಪಾಲು ಶೇ.15.6ರಷ್ಟು ಇದ್ದರೆ ಎಲೆಕ್ಟ್ರಾನಿಕ್ ಪಾವತಿ ಪಾಲು ಶೇ.22.9 ರಷ್ಟು ಇದೆ. ನಗದು ಮೂಲಕ ದೇಶದಲ್ಲಿ ಶೇ.61.4 ರಷ್ಟು ವ್ಯವಹಾರ ನಡೆದಿದೆ ಎಂದು ಅಧ್ಯಯನ ತಿಳಿಸಿದೆ.

    2025ರ ವೇಳೆ ರಿಯಲ್ ಟೈಂ ಮತ್ತು ಇತರ ಎಲೆಕ್ಟ್ರಾನಿಕ್ ಪಾವತಿ ವ್ಯವಸ್ಥೆಗಳು ಕ್ರಮವಾಗಿ ಶೇ.37.1 ಮತ್ತು ಶೇ.34.6ಕ್ಕೆ ಏರಿಕೆಯಾಗಲಿದೆ. ನಗದು ಮೂಲಕ ನಡೆಸುವ ವ್ಯವಹಾರ ಶೇ.28.3ಕ್ಕೆ ಕುಸಿಯಬಹುದು. 2024ರ ವೇಳೆಗೆ ರಿಯಲ್‍ಟೈಂ ಪೇಮೆಂಟ್ ವ್ಯವಸ್ಥೆ ಭಾರತದಲ್ಲಿ ಶೇ.50ಕ್ಕಿಂತ ಹೆಚ್ಚಾಗಲಿದೆ ಎಂದು ವರದಿ ಅಂದಾಜಿಸಿದೆ.

    ಪೇಟಿಎಂ, ಫೋನ್‍ಪೇ, ಪೈನ್ ಲ್ಯಾಬ್ಸ್, ರಾಝರ್ ಪೇ, ಭಾರತ್ ಪೇ ಸೇರಿದಂತೆ ಇನ್ನಿತರ ಸಂಸ್ಥೆಗಳು ಕೋವಿಡ್ 19 ಅವಧಿಯಲ್ಲಿ ಬೆಳವಣಿಗೆ ಸಾಧಿಸಿದೆ. ಕ್ಯಾಶ್‍ಬ್ಯಾಕ್, ಕೊಡುಗೆಗಳನ್ನು ಪ್ರಕಟಿಸಿದರಿಂದ ಗ್ರಾಹಕರು ಈ ಸೇವೆಯತ್ತ ಹೆಚ್ಚು ಆಕರ್ಷಿತರಾಗಿದ್ದಾರೆ.

    ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ(ಎನ್‍ಪಿಸಿಐ) ಆರಂಭಿಸಿದ ಪ್ರಿ ಪೇಯ್ಡ್ ಇನ್‍ಸ್ಟ್ರುಮೆಂಟ್ಸ್(ಪಿಪಿಐ), ಯುನಿವರ್ಸಲ್ ಪೇಮೆಂಟ್ ಇಂಟರ್‍ಫೇಸ್(ಯುಪಿಐ) ಅಲ್ಲದೇ ಭೀಮ್ ಆಪ್‍ನಿಂದಾಗಿ ಕೆಲ ವರ್ಷದಲ್ಲಿ ಹಣಕಾಸು ವ್ಯವಹಾರದಲ್ಲಿ ಭಾರೀ ಬದಲಾವಣೆಯಾಗಿದೆ ಎಂದು ಹೇಳಿದೆ.

     

    ಯರ್ನೆಸ್ಟ್ ಯಂಗ್ ಸಂಸ್ಥೆಯ ಪ್ರಕಾರ 2020 ರಿಂದ 25ರ ಹಣಕಾಸು ವರ್ಷದಲ್ಲಿ ಶೇ.27 ರಷ್ಟು ಡಿಜಿಟಲ್ ಬೆಳವಣಿಗೆಯಾಗಬಹುದು. 2020ರಲ್ಲಿ 2,153 ಲಕ್ಷ ಕೋಟಿ ರೂ. ವ್ಯವಹಾರ ನಡೆದಿದ್ದರೆ 2025ರ ವೇಳೆಗೆ ಇದು 7,092 ಲಕ್ಷ ಕೋಟಿ ರೂ.ಗೆ ಏರಿಕೆಯಾಗಬಹುದು ಎಂದು ಹೇಳಿದೆ.

    ಪ್ರತಿ ತಿಂಗಳು ಯುಪಿಐ ವ್ಯವಹಾರ ಶೇ.18.7ರಷ್ಟು ಏರಿಕೆ ಕಾಣುತ್ತಿದೆ ಎಂದು ಎನ್‍ಪಿಸಿಐ ಹೇಳಿದೆ. 2021ರ ಫೆಬ್ರವರಿ 4.25 ಲಕ್ಷ ಕೋಟಿ ರೂ. ವ್ಯವಹಾರ ನಡೆದಿದ್ದರೆ ಮಾರ್ಚ್ ನಲ್ಲಿ 5.05 ಲಕ್ಷ ಕೋಟಿ ರೂ. ವ್ಯವಹಾರ ನಡೆದಿದೆ. ಈ ಅವಧಿಯಲ್ಲಿ 2,292.90 ದಶಲಕ್ಷದಿಂದ 2,731.68 ದಶಲಕ್ಷಕ್ಕೆ ವ್ಯವಹಾರ ಏರಿಕೆಯಾಗಿದೆ ಎಂದು ಅದು ತಿಳಿಸಿದೆ.