Tag: ಡಿಜಿಟಲ್ ತಂತ್ರಜ್ಞಾನ

  • ಪ್ರಧಾನಿ ಮೋದಿ ಸಿಂಗಾಪುರ ಭೇಟಿ – ಮಹತ್ವದ 4 ಒಪ್ಪಂದಗಳಿಗೆ ಸಹಿ

    ಪ್ರಧಾನಿ ಮೋದಿ ಸಿಂಗಾಪುರ ಭೇಟಿ – ಮಹತ್ವದ 4 ಒಪ್ಪಂದಗಳಿಗೆ ಸಹಿ

    ನವದೆಹಲಿ: ಸಿಂಗಾಪುರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ತಮ್ಮ ಸಹವರ್ತಿ ಲಾರೆನ್ಸ್ ವಾಂಗ್ (Lawrence Wong) ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಡಿಜಿಟಲ್ ತಂತ್ರಜ್ಞಾನ, ಆರೋಗ್ಯ ಸಹಕಾರ, ಕೌಶಲ್ಯ ಸೇರಿ ಪ್ರಮುಖ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

    ಡಿಜಿಟಲ್ ತಂತ್ರಜ್ಞಾನಗಳಲ್ಲಿ (Digital Tech) ಸಹಕರಿಸಲು ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಸಿಂಗಾಪುರದ ಡಿಜಿಟಲ್ ಅಭಿವೃದ್ಧಿ ಮತ್ತು ಮಾಹಿತಿ ಸಚಿವಾಲಯದ ನಡುವೆ ಮೊದಲ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದನ್ನೂ ಓದಿ: Bigg Boss Tamil 8: ದೊಡ್ಮನೆ ಆಟಕ್ಕೆ ವಿಜಯ್ ಸೇತುಪತಿ ಹೋಸ್ಟ್- ಪ್ರೋಮೋ ಔಟ್

    ಈ ಒಪ್ಪಂದವು ಡಿಜಿಟಲ್ ತಂತ್ರಜ್ಞಾನಗಳಾದ ಡಿಪಿಐ, ಸೈಬರ್-ಸೆಕ್ಯುರಿಟಿ, ಸೂಪರ್-ಕಂಪ್ಯೂಟಿಂಗ್, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಕೃತಕ ಬುದ್ಧಿಮತ್ತೆಯಂತಹ ಉದಯೋನ್ಮುಖ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಇದು ಉಭಯ ದೇಶಗಳ ನಡುವೆ ನಿಕಟ ಸಹಕಾರವನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಕೊಲೆಗೂ ಮುನ್ನ ದರ್ಶನ್‌ ಪಾರ್ಟಿ ಮಾಡಿದ್ದ ಸ್ಟೋನಿ ಬ್ರೂಕ್‌ ಪಬ್‌ನಲ್ಲಿ ಸ್ಥಳ ಮಹಜರು; ಫೋಟೊ ರಿವೀಲ್‌

    ಭಾರತ-ಸಿಂಗಪುರ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯ ಪಾಲುದಾರಿಕೆಯ ಕುರಿತಾದ ತಿಳುವಳಿಕಾ ಒಪ್ಪಂದಕ್ಕೆ ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಸಿಂಗಾಪುರದ ವ್ಯಾಪಾರ ಮತ್ತು ಕೈಗಾರಿಕಾ ಸಚಿವಾಲಯ ಸಹಿ ಮಾಡಿದೆ. ಈ ಒಪ್ಪಂದದ ಅಡಿಯಲ್ಲಿ, ಭಾರತ ಮತ್ತು ಸಿಂಗಾಪುರಗಳು ಸೆಮಿಕಂಡಕ್ಟರ್ (Semiconductor) ಕ್ಲಸ್ಟರ್ ಅನ್ನು ಅಭಿವೃದ್ಧಿಪಡಿಸಲು ಮತ್ತು ಸೆಮಿಕಂಡಕ್ಟರ್ ವಿನ್ಯಾಸ ಮತ್ತು ಉತ್ಪಾದನೆಯಲ್ಲಿ ಪ್ರತಿಭೆಯನ್ನು ಬೆಳೆಸುವಲ್ಲಿ ಸಹಕರಿಸುತ್ತವೆ.

    ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಭಾರತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಸಿಂಗಾಪುರದ ಆರೋಗ್ಯ ಸಚಿವಾಲಯವು ಮತ್ತೊಂದು ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದವು ಪರಸ್ಪರ ಆರೋಗ್ಯ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗಳ ಜಂಟಿ ಪ್ರಯತ್ನಗಳನ್ನು ಸುಗಮಗೊಳಿಸುತ್ತದೆ. ಆರೋಗ್ಯ ಮತ್ತು ಔಷಧೀಯ ಕ್ಷೇತ್ರಗಳಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ನಿಕಟ ಸಹಕಾರವನ್ನು ಉತ್ತೇಜಿಸುತ್ತದೆ. ಈ ಒಪ್ಪಂದವು ಸಿಂಗಾಪುರದಲ್ಲಿ ಭಾರತೀಯ ಆರೋಗ್ಯ ವೃತ್ತಿಪರರನ್ನು ಉತ್ತೇಜಿಸುವ ಪ್ರಯತ್ನಗಳಿಗೆ ಪೂರಕವಾಗಲಿದೆ.

    ಶೈಕ್ಷಣಿಕ ಸಹಕಾರ ಮತ್ತು ಕೌಶಲ್ಯ ಅಭಿವೃದ್ಧಿಯ ಅಂತಿಮ ಒಪ್ಪಂದಕ್ಕೆ ಭಾರತದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಮತ್ತು ಸಿಂಗಾಪುರದ ಶಿಕ್ಷಣ ಸಚಿವಾಲಯ ಸಹಿ ಮಾಡಿದೆ. ಈ ಒಪ್ಪಂದವು ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ಮತ್ತು ತರಬೇತಿಯ ಕ್ಷೇತ್ರಗಳಲ್ಲಿ ನಿಕಟ ಸಹಕಾರವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ನಡೆಯುತ್ತಿರುವ ಸಕ್ರಿಯ ಸಹಯೋಗಕ್ಕೆ ಪೂರಕವಾಗಿರುತ್ತದೆ. ಇದನ್ನೂ ಓದಿ: ಅಗ್ನಿಪಥ್‌ನಲ್ಲಿ ಬದಲಾವಣೆ? – ಯೋಜನೆ ಪರಿಷ್ಕರಣೆಗೆ ರಕ್ಷಣಾ ಇಲಾಖೆ ಶಿಫಾರಸು

  • ಬಿಎಂಟಿಸಿ ಶೀಘ್ರ ಆಗಲಿದೆ ಕಂಡಕ್ಟರ್ ಲೆಸ್ – ಡಿಜಿಟಲ್ ತಂತ್ರಜ್ಞಾನದಿಂದ ಟಿಕೆಟ್ ಕಲೆಕ್ಷನ್

    ಬಿಎಂಟಿಸಿ ಶೀಘ್ರ ಆಗಲಿದೆ ಕಂಡಕ್ಟರ್ ಲೆಸ್ – ಡಿಜಿಟಲ್ ತಂತ್ರಜ್ಞಾನದಿಂದ ಟಿಕೆಟ್ ಕಲೆಕ್ಷನ್

    ಬೆಂಗಳೂರು: ಬಿಎಂಟಿಸಿ (BMTC) ಸದ್ಯ ಮುಳುಗೋ ಹಡಗು. ಇರುವ ನೌಕರರಿಗೆ ಸಂಬಳ ಕೊಡಲಾಗದೇ ನಿಗಮ ಹೆಣಗಾಡುತ್ತಿದೆ. ಹೀಗಿರುವಾಗ ನಷ್ಟದ ಸುಳಿಯಿಂದ ಬಿಎಂಟಿಸಿಯನ್ನು ಮೇಲೆತ್ತಲು ಮಾಸ್ಟರ್ ಪ್ಲಾನ್ ರೆಡಿಯಾಗಿದೆ. ಹೊಸ ಪ್ಲಾನ್ ಪ್ರಕಾರ ಬಸ್ ಓಡಿದರೆ, ಡ್ರೈವರ್ ಇರುತ್ತಾರೆ. ಆದರೆ ನಿರ್ವಾಹಕ ಮಾತ್ರ ಇರುವುದಿಲ್ಲ. ಏನಿದು ಹೊಸ ಪ್ಲಾನ್? ನಿರ್ವಾಹಕ ಇಲ್ಲದೇ ಟಿಕೆಟ್ ಕಲೆಕ್ಷನ್ ಹೇಗೆ? ಈ ಎಲ್ಲದರ ಕುರಿತಂತೆ ಮಾಹಿತಿ ಈ ಕೆಳಗಿನಂತಿದೆ.

    ಹೌದು, ಬಿಎಂಟಿಸಿ ಬಸ್ ಹತ್ತುತ್ತಿದ್ದಂತೆ ನಿಮ್ಮನ್ನ ಸ್ವಾಗತಿಸುವುದೇ ನಿರ್ವಾಹಕ. ಆದರೆ ಇನ್ಮುಂದೆ ಬಿಎಂಟಿಸಿಯಲ್ಲಿ ಈ ನಿರ್ವಾಹಕರು ಕಾಣುವುದು ಡೌಟ್. ನಿರ್ವಾಹಕರಿಲ್ಲದೇ ಟಿಕೆಟ್ ಕಲೆಕ್ಷನ್ ಟಿಕೆಟ್ ಕಲೆಕ್ಷನ್ ಹೇಗೆ ಮಾಡುವುದು ಎಂಬುವುದರ ಬಗ್ಗೆ ಬಿಎಂಟಿಸಿ ಪ್ಲಾನ್ ಮಾಡಿಕೊಂಡಿದೆ. ಸದ್ಯ ನಿಗಮ ಆರ್ಥಿಕ ಹೊರೆ ಎದುರಿಸುತ್ತಿದೆ. ಜೊತೆಗೆ ಡ್ರೈವರ್ ಕೊರತೆಯೂ ಕಾಡುತ್ತಿದೆ. ಹೊಸ ನೇಮಕಾತಿಗೂ ಸರ್ಕಾರ ಒಪ್ಪಿಗೆ ಸೂಚಿಸುತ್ತಿಲ್ಲ. ಹೀಗಾಗಿ ನಿರ್ವಾಹಕ ಪೋಸ್ಟ್‌ಗಳನ್ನೇ ಎತ್ತಂಗಡಿ ಮಾಡಲು ನಿಗಮ ಪ್ಲಾನ್ ಮಾಡಿದೆ. ಇದನ್ನೂ ಓದಿ: ರಾಜ್ಯದಲ್ಲಿ ಬಲವಂತದ ಮತಾಂತರ ಹಾವಳಿ – ವಿವಾಹಿತನನ್ನು ಮತಾಂತರಗೊಳಿಸಿದ ಮುಸ್ಲಿಂ ನಾರಿ

    ಬಿಎಂಟಿಸಿಯಲ್ಲಿ ಡಿಜಿಟಲ್ ತಂತ್ರಜ್ಞಾನ (Digital Technology) ಅಳವಡಿಸುವ ಪ್ರಯತ್ನವನ್ನು ಆರಂಭಿಸಲಾಗಿದೆ. ಕಾಮನ್ ಮೊಬಿಲಿಟಿ ಕಾರ್ಡ್, ಇ ಪಾಸ್, ಸೇರಿ ಹಲವು ಡಿಜಿಟಲ್ ಸೌಲಭ್ಯವನ್ನು ಜಾರಿಗೆ ತಂದು ಟಿಕೆಟ್ ಕಲೆಕ್ಷನನ್ನು ಸಂಪೂರ್ಣ ಡಿಜಿಟಲೈಸ್ ಮಾಡಲು ಬಿಎಂಟಿಸಿ ತೀರ್ಮಾನಿಸಿದೆ. ಈ ಮೂಲಕ ನಿಗಮದಲ್ಲಿರುವ ಎಲ್ಲಾ ನಿರ್ವಾಹಕರನ್ನು ಕೆಲಸದಿಂದ ಮುಕ್ತರಾಗಲಿದ್ದಾರೆ. ಸದ್ಯ ಇರುವ ಪ್ರತಿಯೊಬ್ಬ ನಿರ್ವಾಹಕರು ಕಂಡಕ್ಟರ್ ಕಂ ಡ್ರೈವರ್ ಆದವರೇ. ಹೀಗಾಗಿ ಈ ಎಲ್ಲಾ ನಿರ್ವಾಹಕರನ್ನು ಡ್ರೈವಿಂಗ್‍ಗೆ ನಿಯೋಜಿಸಲು ಬಿಎಂಟಿಸಿ ತೀರ್ಮಾನಿಸಿದೆ. ಈ ಮೂಲಕ ಹೊಸ ನೇಮಕಾತಿ ಇಲ್ಲದೇ ಹೆಚ್ಚುವರಿ ಬಸ್‍ಗಳನ್ನು ರಸ್ತೆಗಿಳಿಸಲು ಬಿಎಂಟಿಸಿ ಪ್ಲಾನ್ ಮಾಡಿದೆ. ಆದರೆ ಇದಕ್ಕೆ ಕಾರ್ಮಿಕ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ.

    ಇದು ಕಾರ್ಮಿಕರ ಹೊಟ್ಟೆ ಮೇಲೆ ಹೊಡೆಯುವ ಹುನ್ನಾರ. ಮುಂದೆ ಬಿಎಂಟಿಸಿಯನ್ನು ಖಾಸಗೀಕರಣ ಮಾಡುವ ನಿಟ್ಟಿನ ಕೊನೆಯ ಮಳೆಯಾಗಿದೆ. ಬಿಎಂಟಿಸಿ ಸಂಸ್ಥೆಯ ನೌಕರರು ಬೀದಿಗೆ ಬರುತ್ತಾರೆ. ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು ಎಂದು ಕಾರ್ಮಿಕ ಮುಖಂಡ ಆನಂದ್ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಚಾಲಕನ ಯಡವಟ್ಟು – ಖಾಸಗಿ ಬಸ್ ಪಲ್ಟಿ, 30ಕ್ಕೂ ಹೆಚ್ಚು ಮಂದಿಗೆ ಗಾಯ

    ಸದ್ಯದ ಪರಿಸ್ಥಿತಿಯಲ್ಲಿ ನಿರ್ವಾಹಕರಿಲ್ಲದೇ ಬಸ್ ಊಹಿಸುವುದು ಅಸಾಧ್ಯ, ಹೆಚ್ಚಿನ ಮಂದಿಗೆ ಡಿಜಿಟಲ್ ತಂತ್ರಜ್ಞಾನ ಒಪ್ಪಿಕೊಳ್ಳುವುದಕ್ಕೆ ಸಮಯ ಬೇಕಾಗಲಿದೆ. ಆದರೂ ಬಿಎಂಟಿಸಿ ಸಿಬ್ಬಂದಿ ಹೊರೆ ತಪ್ಪಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ಮುಂದಾಗಿದೆ.

    Live Tv
    [brid partner=56869869 player=32851 video=960834 autoplay=true]