ಸೋಶಿಯಲ್ ಮೀಡಿಯಾ (Social Media) ವೇದಿಕೆ ಉಪಯೋಗಿಸಿಕೊಂಡು ಡಿಜಿಟಲ್ ದಾಳಿಕೋರರ ಪ್ರಮಾಣ ಹೆಚ್ಚಾಗುತ್ತಿದೆ. ಸೆಲೆಬ್ರಿಟಿಗಳ ಮೇಲೆ ಇಷ್ಟ ಕಷ್ಟ ಕೋಪ ತಾಪವನ್ನ ಈ ಮೂಲಕ ಹೊರಹಾಕಲಾಗುತ್ತದೆ. ಅವರ ಕಾರ್ಯವನ್ನು ಟೀಕಿಸಲಾಗುತ್ತದೆ. ಇಂಥಹ ಟೀಕೆ ಟಿಪ್ಪಣಿಗಳಿಂದ, ಟ್ರೋಲ್ ಬ್ಯಾಡ್ ಕಾಮೆಂಟ್ಸ್‌ಗಳಿಗೆ ಮೆಗಾಸ್ಟಾರ್ ಚಿರಂಜೀವಿ (Chiranjeevi) ಕೂಡ ಹೊರತಾಗಿಲ್ಲ.
ಇದೀಗ ಹೈದ್ರಾಬಾದ್‌ನಲ್ಲಿ ‘ಬ್ಲಡ್ ಡೊನೇಷನ್ ಡ್ರೈವ್ ʼ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಚಿರಂಜೀವಿ ಸೋಶಿಯಲ್ ಮೀಡಿಯಾ ದಾಳಿಕೋರರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಮುಕ್ತ ವೇದಿಕೆಯಲ್ಲಿ ತಮ್ಮ ವಿರುದ್ಧ ಕೆಟ್ಟ ಕಾಮೆಂಟ್ ಹಾಗೂ ಟ್ರೋಲ್ ಮಾಡುವವರ ವಿರುದ್ಧ ಚಿರಂಜೀವಿ ಮುಕ್ತವಾಗಿ ಗುಡುಗಿದ್ದಾರೆ.
ಪರೋಕ್ಷವಾಗಿ ಟ್ರೋಲ್‌ಗಳಿಗೆಲ್ಲ ಹೆದರುವುದಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಅಂದಹಾಗೆ ಚಿರಂಜೀವಿಯ ಕೌಟುಂಬಿಕ ವಿಚಾರಗಳು , ರಾಜಕೀಯ ಜೀವನ ಹಾಗೂ ಸಿನಿಮಾಗಳ ವಿಚಾರ ಸದಾ ಟ್ರೋಲ್ ಆಗುತ್ತದೆ. ಇದೆಲ್ಲವೂ ತಮಗೆ ಗೊತ್ತು ಅನ್ನೋ ಅರ್ಥದಲ್ಲಿ ಮಾತನಾಡಿದ್ದಾರೆ ಮೆಗಾಸ್ಟಾರ್. ಇದನ್ನೂಓದಿ: ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ –ಕೊಪ್ಪಳ ಮೂಲದ ಓರ್ವ ವಶಕ್ಕೆ
ಮೆಗಾಸ್ಟಾರ್ ಚಿರಂಜೀವಿ ಹೇಳಿದ್ದೇನು ?
ಸೋಶಿಯಲ್ ಮೀಡಿಯಾ ಮೂಲಕ ನಮಗೆ ಅಟ್ಯಾಕ್ ಮಾಡ್ತಾನೇ ಇರ್ತಾರೆ, ಅದಕ್ಕೆಲ್ಲ ನಾನು ಪ್ರತಿಕ್ರಿಯೆ ಮಾಡಲ್ಲ. ಜನರು ನನ್ನ ಮೇಲಿಟ್ಟಿರುವ ಪ್ರೀತಿ ಅಭಿಮಾನವೇ ನನಗೆ ರಕ್ಷಾ ಕವಚ. ಇದರ ಹೊರತಾಗಿ ನಾನು ಮಾತನಾಡುವ ಅವಷ್ಯಕತೆ ಇಲ್ಲ. ನಾವು ಮಾಡುವ ಕೆಲಸವೇ ಮಾತಾಡುತ್ತೆ, ಇದೇ ಸತ್ಯ.
ಇದೇ ವೇಳೆ ರಸ್ತೆಯಲ್ಲಿ ಬರುವ ಮಹಿಳೆಯೊಬ್ಬರಿಗೆ ವಿಸಿಟಿಂಗ್ ಕಾರ್ಡ್ ನೀಡಿದಾಗ ಅವರು ಪ್ರಶ್ನೆ ಮಾಡಿದ್ದಾರೆ. ಸ್ಥಳದಲ್ಲೇ ಆ ವಿಸಿಟಿಂಗ್ ಕಾರ್ಡ್‌ನಲ್ಲಿದ್ದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ್ದಾರೆ. ಈ ವೇಳೆ ಬೈಬಲ್ ಬಗ್ಗೆ ಮಾಹಿತಿ ಮತ್ತು ಇದರ ಉಪಯೋಗದ ಮಾಹಿತಿ ಬಂದಿದೆ. ಈ ಬಗ್ಗೆ ಕಾರ್ಡ್ ಹಂಚುತ್ತಿದ್ದ ಮಹಿಳೆಯರನ್ನು ಪ್ರಶ್ನಿಸಿದಾಗ ಉತ್ತರ ನೀಡದೇ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಈ ರೀತಿಯ ಘಟನೆಗಳು ಪದೇಪದೇ ನಗರದ ಹಲವು ಕಡೆ ಮರು ಕಳುಹಿಸುತ್ತಿರುವ ಕಾರಣ ಸರ್ಕಾರದ ವಿರುದ್ಧ ಹಿಂದೂ ಸಂಘಟನೆಗಳು ಕಿಡಿಕಾರಿವೆ. ಕೂಡಲೇ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿದ್ದಾರೆ.
ಬೆಂಗಳೂರು: ಭಾರತೀಯ ಕುಶಲಕರ್ಮಿಗಳು (Handicraft) ಮತ್ತು ನೇಕಾರರು (Handloom) ತಮ್ಮ ಸಾಂಪ್ರದಾಯಿಕ ಕಲೆ ಮತ್ತು ಜೀವನೋಪಾಯವನ್ನು ಕಾಪಾಡಿಕೊಳ್ಳಲು ಭಾರೀ ಹೋರಾಟವನ್ನು ನಡೆಸುತ್ತಿದ್ದಾರೆ. ಸದ್ಯಕ್ಕೆ ತಾವು ಉತ್ಪಾದಿಸಿದ ವಸ್ತುಗಳ ಮಾರಾಟದಲ್ಲಿ ಭಾರೀ ಏರಿಕೆ ಕಾಣುತ್ತಿರುವುದಕ್ಕೆ ಆನ್‌ಲೈನ್ (Online) ಪ್ಲಾಟ್‌ಫಾರ್ಮ್‌ಗಳಿಗೆ ಋಣಿಯಾಗಿದ್ದಾರೆ.
ಉದಾಹರಣೆಗೆ, ನಶಿಸುತ್ತಿರುವ ಕರಕುಶಲ ಕಲೆಯನ್ನು ಜೀವಂತವಾಗಿ ಇರಿಸಲು ಡಿಜಿಟಲ್‌ನ (Digital) ಶಕ್ತಿಯನ್ನು ಬಳಸಿಕೊಳ್ಳಲು ಪ್ರಾರಂಭಿಸಿದ್ದಾರೆ ಸ್ಥಳೀಯ ಮಾರಾಟಗಾರ ಅದಿಲ್. ಶತಮಾನದ ಹಳೆಯ ಅವರ ಕುಟುಂಬ ನಿಯಂತ್ರಿತ ವ್ಯಾಪಾರ ಚನ್ನಪಟ್ಟಣ ಆಟಿಕೆಗಳು ಹಲವಾರು ಸ್ಥಳೀಯ ಕುಶಲಕರ್ಮಿಗಳ ಮೇಲೆ ಪರಿಣಾಮ ಬೀರುತ್ತವೆ. ನನ್ನೊಂದಿಗೆ ಸುಮಾರು 35 ಕುಶಲಕರ್ಮಿಗಳು ಕೆಲಸ ಮಾಡುತ್ತಿದ್ದಾರೆ. ಕೆಲವರು 40 ವರ್ಷಕ್ಕೂ ಹೆಚ್ಚು ಕಾಲ ಕೆಲಸ ಮಾಡುತ್ತಿದ್ದರೆ, ಇನ್ನೂ ಕೆಲವರು 60 ವರ್ಷ ವಯಸ್ಸಿನವರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಈ ಕುಶಲಕರ್ಮಿಗಳಿಗೆ ಜೀವನೋಪಾಯದ ಪ್ರಮುಖ ಮೂಲವಾಗಿವೆ. ಈ ಸೌಲಭ್ಯಗಳು ನನ್ನ ತಂದೆ ಮತ್ತು ತಾತನಿಗೆ ಇರಲಿಲ್ಲ. ಆದರೆ ಇಂದು ನಾನು ಕಡಿಮೆ ಹೂಡಿಕೆಯೊಂದಿಗೆ ಖರೀದಿದಾರರ ಜೊತೆಗೆ ತೊಡಗಿಸಿಕೊಳ್ಳಲು ಮತ್ತು ದೊಡ್ಡ ಪರಿಣಾಮ ರೂಪಿಸಲು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಶಕ್ತಿಯನ್ನು ಬಳಸಿಕೊಳ್ಳಬಹುದು. ನಮ್ಮ ಭವ್ಯವಾದ ಕರಕುಶಲ ಪರಂಪರೆ ಸಂರಕ್ಷಿಸುವ ಜೊತೆಗೆ ವ್ಯಾಪಾರವನ್ನು ಹೆಚ್ಚಿಸಲು ಮತ್ತು ಈ ವಿಶಿಷ್ಟ ಚನ್ನಪಟ್ಟಣದ ಆಟಿಕೆಗಳನ್ನು ಭಾರತದಿಂದ ಜಗತ್ತಿಗೆ ಲಭ್ಯವಾಗುವಂತೆ ಮಾಡಲು ನಾನು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.
ಆಂಧ್ರಪ್ರದೇಶ ಮೂಲದ ಆದಿಲಕ್ಷ್ಮಿ ಟಾಯ್ಸ್‌ನ ಮಾಲೀಕ ಅಡವಿ ಶ್ರೀನಿವಾಸ್ ಅವರಿಗೆ ತಮ್ಮ ಉದ್ಯಮಶೀಲತೆಯ ಕನಸನ್ನು ಉತ್ತೇಜಿಸಲು ಸಾಮಾಜಿಕ ಮಾಧ್ಯಮ ಮತ್ತು ಜಿಯೋಮಾರ್ಟ್ ಸೇರಿದಂತೆ ಹೊಸ ವಿತರಣೆ ಚಾನೆಲ್‌ಗಳತ್ತ ಮುಖ ಮಾಡಿದ್ದಾರೆ. ಜಿಯೋಮಾರ್ಟ್‌ನ ಕ್ರಾಫ್ಟ್ಸ್ ಮೇಳಗಳಂತಹ ಆನ್‌ಲೈನ್ ಮಳಿಗೆಗಳಿಂದ ಕುಶಲಕರ್ಮಿಗಳು ಮತ್ತು ಶ್ರೀನಿವಾಸ್ ಅವರಂತಹ ಉದ್ಯಮಿಗಳಿಗೆ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ದೇಶಾದ್ಯಂತದ ಹೊಸ ಗ್ರಾಹಕರಿಗೆ ತಲುಪಿಸಲು ಸಹಾಯ ಮಾಡುತ್ತವೆ.
ತಮಿಳುನಾಡಿನ ಈರೋಡ್‌ನ ಲಾವಣ್ಯಾ ಅವರು ಹೊಸ ಗ್ರಾಹಕರನ್ನು ಹುಡುಕಲು ಮತ್ತು ಕಾರ್ಯಾಚರಣೆಯನ್ನು ಹೆಚ್ಚಿಸಲು ದರ್ಭಾಯಿ ಮತ್ತು ಸಾಂಬು ನದಿ ಹುಲ್ಲಿನಿಂದ ನೇಯ್ದ ಯೋಗ ಮತ್ತು ಧ್ಯಾನ ಮ್ಯಾಟ್‌ಗಳನ್ನು ಮಾರಾಟ ಮಾಡುವ 100 ವರ್ಷಗಳ ಹಳೆಯ ಮತ್ತು ಸ್ಪಾರ್ಟಾನ್ ಕುಟುಂಬ ನಡೆಸುವ ಅಂಗಡಿಯನ್ನು ಆನ್‌ಲೈನ್‌ನಲ್ಲಿ ತಂದಿದ್ದಾರೆ. ಸಾಂಕ್ರಾಮಿಕ ಸಮಯದಲ್ಲಿ ಕೆಲಸ ಕಳೆದುಕೊಂಡ ನಂತರ ನನ್ನ ಹಳ್ಳಿಯ ಜನರು ಇತರ ನಗರಗಳಿಂದ ಮರಳಿದರು ಎಂದು 17 ವರ್ಷಗಳ ಕೆಲಸದ ಅನುಭವ ಹೊಂದಿರುವ ಸಾಫ್ಟ್‌ವೇರ್ ಎಂಜಿನಿಯರ್ ಲಾವಣ್ಯಾ ಹೇಳುತ್ತಾರೆ.
ಅವರ ಮೂರನೇ ತಲೆಮಾರಿನ ವ್ಯವಹಾರವನ್ನು ಮುಂದುವರಿಸಲು ತಮ್ಮ 9-5 ಗಂಟೆ ತನಕ ಮಾಡುವ ಕೆಲಸವನ್ನು ತೊರೆದಿದ್ದಾರೆ. ಪುರುಷ ಮತ್ತು ಸ್ತ್ರೀ ಕುಶಲಕರ್ಮಿಗಳಿಗೆ ಕೈಮಗ್ಗದ ಟವೆಲ್ ಮತ್ತು ಯೋಗ ಹಾಗೂ ಧ್ಯಾನ ಮ್ಯಾಟ್‌ಗಳನ್ನು ನೇಯಲು ತರಬೇತಿ ನೀಡುವುದಕ್ಕೆ ನಾನು ನಿರ್ಧರಿಸಿದೆ. ಅವರ ಜೀವನೋಪಾಯವು ಇದರ ಮೇಲೆ ಅವಲಂಬಿತವಾಗಿದೆ ಎಂದು ತಿಳಿಸಿದ್ದಾರೆ.
ಪ್ರಬಲವಾದ ವ್ಯಾಪಾರವನ್ನು ರೂಪಿಸುವುದಕ್ಕೆ ತನ್ನ ಹಳ್ಳಿಯಲ್ಲಿ ನೇಕಾರರ ಜೀವನೋಪಾಯವನ್ನು ಬೆಂಬಲಿಸಲು ಮತ್ತು ತನ್ನ ಸಮುದಾಯದ ಇತರ ಮಹಿಳೆಯರಿಗೆ ಮಾದರಿಯಾಗಿ, ಲಾವಣ್ಯಾ ತನ್ನದೇ ಆದ ವೆಬ್‌ಸೈಟ್ ಅನ್ನು ಪ್ರಾರಂಭಿಸಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಲು ಶುರು ಮಾಡಿದರು. ನಾನು ಜಿಯೋಮಾರ್ಟ್‌ನಂತಹ ಆನ್‌ಲೈನ್ ಮಾರ್ಕೆಟ್ ಪ್ಲೇಸ್‌ಗಳಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದೇನೆ. ಅಲ್ಲಿ ಇತ್ತೀಚೆಗೆ ನನ್ನ ಉತ್ಪನ್ನಗಳನ್ನು ಲಿಸ್ಟ್ ಮಾಡಿದ್ದೇನೆ ಮತ್ತು ಆರ್ಡರ್‌ಗಳನ್ನು ಪಡೆಯಲು ಪ್ರಾರಂಭಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಕೃಷಿ, ಜಲ ಸಂಪನ್ಮೂಲ ಅಭಿವೃದ್ಧಿಯಲ್ಲಿ ದೇಶದಲ್ಲೇ ರಾಯಚೂರಿಗೆ ಫಸ್ಟ್ ರ‍್ಯಾಂಕ್
2019 ರಲ್ಲಿ ಹೈದರಾಬಾದ್‌ನ ದಿಲ್‌ಸುಖ್ ನಗರದಲ್ಲಿ ಆದಿಲಕ್ಷ್ಮಿ ಟಾಯ್ಸ್ ಪ್ರಾರಂಭಿಸಲು 18 ವರ್ಷಗಳ ಕೆಲಸವನ್ನು ತೊರೆದ ಇನ್ನೊಬ್ಬ ಮಾರಾಟಗಾರ ಶ್ರೀನಿವಾಸ್ ಕೂಡ ಡಿಜಿಟಲ್ ವಿತರಣಾ ಚಾನೆಲ್‌ಗಳನ್ನು ಅನುಸರಿಸುವ ಮೂಲಕ ಫೇಸ್‌ಬುಕ್ ಜಾಹೀರಾತುಗಳತ್ತ ಹೊರಳಿದರು ಮತ್ತು ದೃಢವಾದ ಸಾಮಾಜಿಕ ಮಾಧ್ಯಮ ಉಪಸ್ಥಿತಿಯನ್ನು ರೂಪಿಸುವ ಮೂಲಕ ಹೆಚ್ಚಿನ ಮಾರಾಟವನ್ನು ಮಾಡುತ್ತಿದ್ದಾರೆ.
ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ನೇಕಾರರಿಗೆ ಡಿಜಿಟಲೈಸೇಷನ್ ಬಗ್ಗೆ ಸ್ವಲ್ಪವೇ ತಿಳಿದಿದೆ. ಅವರ ಕಲೆಯನ್ನು ಮುನ್ನಲೆಗೆ ತರುವುದು ಮತ್ತು ಅವರನ್ನು ಬೆಂಬಲಿಸುವುದು ಬಹಳ ಮುಖ್ಯ. ವಿಷಕಾರಿಯಲ್ಲದ, ಬಾಳಿಕೆ ಬರುವ ಮತ್ತು ಸುಸ್ಥಿರವಾಗಿರುವ ಮರದ ಆಟಿಕೆಗಳನ್ನು ಉತ್ತೇಜಿಸುವುದು ನಮ್ಮ ಗುರಿಯಾಗಿದೆ ಎಂದು ಜಿಯೋಮಾರ್ಟ್ನ ಮಾರಾಟಗಾರ ಶ್ರೀನಿವಾಸ್ ಹೇಳುತ್ತಾರೆ.
ಹಲವಾರು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಂದ ಹೆಚ್ಚುತ್ತಿರುವ ಆರ್ಡರ್‌ಗಳನ್ನು ಪಡೆಯುವುದರ ಹೊರತಾಗಿ, ಅವರು ಸದ್ಯಕ್ಕೆ ಆಟಿಕೆಗಳನ್ನು ರಫ್ತು ಮಾಡುತ್ತಿದ್ದಾರೆ. ಇನ್ನೂ ಕುತೂಹಲಕಾರಿ ಅಂಶ ಏನೆಂದರೆ, ಅವರ ಗ್ರಾಹಕರಲ್ಲಿ ಹೆಚ್ಚಿನವರು 40 ರಿಂದ 50 ವರ್ಷ ವಯಸ್ಸಿನವರಾಗಿದ್ದಾರೆ. ಇದನ್ನೂ ಓದಿ: ವಿಜಯ್ ಮಲ್ಯಗೆ ಮುಳುವಾಗಿದ್ದ ಟಿಪ್ಪು ಖಡ್ಗ 145 ಕೋಟಿಗೆ ಹರಾಜು
ಹುಬ್ಬಳ್ಳಿ: ನಗರದಲ್ಲಿ ನೂತನವಾಗಿ ನಿರ್ಮಿಸಿದ ಪ್ರಾದೇಶಿಕ ನ್ಯಾಯವಿಜ್ಞಾನ ಪ್ರಯೋಗಾಲಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಉದ್ಫಾಟಿಸಿದರು.
ಗೋಕುಲ ರಸ್ತೆಯಲ್ಲಿ ಸ್ಥಾಪಿಸಲಾಗಿರುವ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಪ್ರಾದೇಶಿಕ ನ್ಯಾಯವಿಜ್ಞಾನ ಪ್ರಯೋಗಾಲಯದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ನಗರದಲ್ಲಿ ಸ್ಥಾಪನೆಯಾಗಿರುವ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯದಲ್ಲಿ ಡಿಎನ್‍ಎ, ಸೈಬರ್, ಆಡೀಯೋ ವಿಡೀಯೋ, ಮೊಬೈಲ್ ಫಾರೆನ್ಸಿಕ್ ಹಾಗೂ ಭೌತಶಾಸ್ತ್ರ ವಿಭಾಗಗಳಿವೆ. ಶೀಘ್ರದಲ್ಲಿಯೇ ನಾರ್ಕೊಟಿಕ್ ಪತ್ತೆ ವಿಭಾಗ ಪ್ರಾರಂಭಿಸಲಾಗುವುದು ಎಂದರು. ಇದನ್ನೂ ಓದಿ: ಉಕ್ರೇನ್‍ನಿಂದ ವಾಪಸ್ಸಾದ ವಿದ್ಯಾರ್ಥಿನಿಯನ್ನು ಬರ ಮಾಡಿಕೊಂಡ ಬೊಮ್ಮಾಯಿ
ಅಪರಾಧ ಶೋಧನೆಯಲ್ಲಿ ನ್ಯಾಯವಿಜ್ಞಾನ ಪ್ರಯೋಗಾಲಯಗಳ ವರದಿಗಳು ಬಹಳ ಮಹತ್ವ ಹೊಂದಿವೆ. ಈ ಹಿಂದೆ ಬೆಂಗಳೂರಿನ ಪ್ರಯೋಗಾಲಯದಿಂದ ವರದಿಗಳು ದೊರೆಯಲು 2 ರಿಂದ ಎರಡೂವರೆ ವರ್ಷಗಳ ಕಾಲಾವಧಿ ಬೇಕಾಗುತ್ತಿತ್ತು. ಈಗ ಸೈಬರ್ ಶೋಧನೆ ವಿಭಾಗ ಅಭಿವೃದ್ಧಿಪಡಿಸಿದ ನಂತರ ಮೂರು ತಿಂಗಳೊಳಗೆ ವರದಿಗಳು ಬರುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಭಾರತಕ್ಕೆ ಗಟ್ಸ್ ಇಲ್ಲ ಅನ್ನೋರು ಮೊದಲು ಉಕ್ರೇನ್ ಗಡಿವರೆಗೆ ತಲುಪಿ ಧಮ್ ತೋರಿಸಬೇಕಿತ್ತು: ಸುಜಯ್
ಡಿಜಿಟಲ್ ಜಾಲಗಳ ಮೂಲಕ ನಡೆಯುವ ಅಪರಾಧಗಳನ್ನು ತ್ವರಿತವಾಗಿ ಪತ್ತೆ ಮಾಡಲಾಗುತ್ತಿದೆ. ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ವಂಚಿಸಲು ಯತ್ನಿಸುವ ಪ್ರಕರಣಗಳನ್ನು ರಾಜ್ಯದಲ್ಲಿ ನಿಯಂತ್ರಿಸಲಾಗಿದೆ. ಹುಬ್ಬಳ್ಳಿಯಲ್ಲಿ ಪ್ರಾರಂಭವಾಗಿರುವ ಪ್ರಾದೇಶಿಕ ನ್ಯಾಯವಿಜ್ಞಾನ ಪ್ರಯೋಗಾಲಯಲದಲ್ಲಿ ಡಿಎನ್‍ಎ, ಕಂಪ್ಯೂಟರ್, ಮೊಬೈಲ್, ಆಡೀಯೋ-ವಿಡೀಯೋ ಫಾರೆನ್ಸಿಕ್ ಹಾಗೂ ಭೌತಶಾಸ್ತ್ರ ವಿಭಾಗಗಳಿವೆ, ಶೀಘ್ರದಲ್ಲಿಯೇ ನಾರ್ಕೊಟಿಕ್ ಪತ್ತೆ ವಿಭಾಗ ಪ್ರಾರಂಭಿಸಲಾಗುವುದು. ಇದಲ್ಲದೆ ಗೋಕುಲ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣಕ್ಕೆ ವಾಕರಸಾಸಂಸ್ಥೆಯು ಅರ್ಧ ಎಕರೆ ನಿವೇಶನ ನಿಡಬೇಕು ಎಂದು ಸೂಚಿಸಿದರು.
ಬಳ್ಳಾರಿ: ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಅನ್ವಯಿಸುವ ಮೂಲಕ ಕ್ರಾಂತಿಕಾರಕ ಬದಲಾವಣೆಗಳನ್ನು ತರುತ್ತಿದ್ದು, ಮುಂಬರುವ ಮಾರ್ಚ್ ಹೊತ್ತಿಗೆ ರಾಜ್ಯದ ಇಡೀ ಶಿಕ್ಷಣ ವ್ಯವಸ್ಥೆಯನ್ನು ಡಿಜಿಟಲ್ ಆಗಿ ರೂಪಾಂತರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಮತ್ತು ನಾಸ್ಕಾಂ ನಡುವಿನ ಒಡಂಬಡಿಕೆಗೆ ಮತ್ತು ಎನ್‍ಇಪಿ ವಿಚಾರ ಸಂಕಿರ್ಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಲ್ಲಿ ಡಿಜಿಟಲಿಕರಣದಿಂದಾಗಿ ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಸ್ಕಿಲ್ಸ್ ಪಾಸ್ ಪೋರ್ಟ್, ಸ್ಕಿಲ್ಸ್ ವ್ಯಾಲೆಟ್ ಮತ್ತು ಬ್ಯಾಡ್ಜಸ್ ನಂತಹ ಜಾಗತಿಕ ಗುಣಮಟ್ಟದ ಕೌಶಲ್ಯಗಳು ಉಚಿತವಾಗಿ ಸಿಗಲಿವೆ ಎಂದರು. ಇದನ್ನೂ ಓದಿ: ಭಾರತೀಯ ಮಕ್ಕಳ ಸರ್ವಾಂಗಿಣ ಅಭಿವೃದ್ಧಿಗಾಗಿ ನೂತನ ಶಿಕ್ಷಣ ನೀತಿ ಜಾರಿ: ಬೊಮ್ಮಾಯಿ
ಶಿಕ್ಷಣದಲ್ಲಿ ಉತ್ಕೃಷ್ಟತೆ ಸಾಧಿಸದೆ ನಮಗೆ ಉಳಿಗಾಲವಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು, ನಾಸ್ಕಾಂನ `ಫ್ಯೂಚರ್ ಸ್ಕಿಲ್ಸ್ ಪ್ರೈಮ್’ ವೇದಿಕೆ ಸೇರಿದಂತೆ ಇತರ ಮೂಲಗಳಿಂದ ಈ ಶೈಕ್ಷಣಿಕ ವರ್ಷದಿಂದಲೇ 10 ಸಾವಿರ ಶಿಕ್ಷಕರಿಗೆ ಡಿಜಿಟಲ್ ತರಬೇತಿ ಕೊಡಲಾಗುವುದು. ಇನ್ಫೋಸಿಸ್ ಸಂಸ್ಥೆ ಮತ್ತು ಧಾರವಾಡದ ಉನ್ನತ ಶಿಕ್ಷಣ ಅಕಾಡೆಮಿ ಮೂಲಕವೂ 3 ಸಾವಿರ ಶಿಕ್ಷಕರಿಗೆ ಇಂತಹ ವಿಶ್ವ ಗುಣಮಟ್ಟದ ತರಬೇತಿಯನ್ನು ಒದಗಿಸಲಾಗುವುದು ಎಂದು ಮಾಹಿತಿ ಹಂಚಿಕೊಂಡರು.
ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕೇವಲ ಎರಡು ವರ್ಷಗಳಲ್ಲಿ 3.50 ಲಕ್ಷ ಕಲಿಕಾ ಸಾಮಗ್ರಿ ಸಿದ್ಧಪಡಿಸಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಎಲ್ಲಿದ್ದರೂ ನಿರಂತರವಾಗಿ ಕಲಿಯಬಹುದಾಗಿದೆ. ಬಹಳ ಉತ್ತಮವಾದ ಕಲಿಕೆಯ ಮಾದರಿಯನ್ನು ಪ್ರಪ್ರಥಮವಾಗಿ ಅಳವಡಿಸಿಕೊಂಡಿರುವ ರಾಜ್ಯದತ್ತ ಇಡೀ ಭಾರತವೇ ತಿರುಗಿ ನೋಡುತ್ತಿದೆ ಎಂದು ಸಚಿವರು ನುಡಿದರು. ಇದನ್ನೂ ಓದಿ: ಹೊಸ ಶಿಕ್ಷಣ ನೀತಿಯಲ್ಲಿ ಕಾಂಬಿನೇಶನ್‍ನಿಂದ ಕೋರ್ಸ್, ಸಬ್ಜೆಕ್ಟ್‌ಗೆ ಬದಲಾಯಿಸಲಾಗಿದೆ: ಅಶ್ವಥ್ ನಾರಾಯಣ್
NEP ಅನುಷ್ಠಾನಕ್ಕಾಗಿ ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದು, ಶೈಕ್ಷಣಿಕ ಸುಧಾರಣೆಯ ಮೂಲಕ ಸದೃಢ ಸಮಾಜ ನಿರ್ಮಾಣ ಮಾಡಲು ನೂತನ ರಾಷ್ಟ್ರೀಯ ನೀತಿ ನೆರವಾಗಲಿದೆ.#NEPKarnatakapic.twitter.com/ZshMEtTmHD
ಕರ್ನಾಟಕವೇ ಇವತ್ತು ದೇಶದ ಜ್ಞಾನ ಮತ್ತು ಆರ್ಥಿಕ ರಾಜಧಾನಿಯಾಗಿದ್ದು, ಅಮೆರಿಕದಂತೆ ಉಜ್ವಲ ಅವಕಾಶಗಳಿವೆ. ಈ ವಿಚಾರದಲ್ಲಿ ನಾವು ಮುಂಬೈಯನ್ನು ಹಿಂದಿಕ್ಕಿದ್ದೇವೆ. ಸಂಶೋಧನೆ ಮತ್ತು ಆವಿಷ್ಕಾರಗಳ ತೊಟ್ಟಿಲಾಗಿರುವ ರಾಜ್ಯದ ಶಿಕ್ಷಣ ಕ್ಷೇತ್ರದತ್ತ ಈಗ ಇಡೀ ವಿಶ್ವವೇ ನೋಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಆನ್‍ಲೈನ್ ಪಾಠ ಕೇಳಿ ಕುಗ್ಗಿದ್ದ ಮಕ್ಕಳಿಗೆ ವಿಶೇಷ ತರಬೇತಿ ನೀಡಿದ ಸುರಾನ ವಿದ್ಯಾಲಯ
ಎನ್‍ಇಪಿ ಗುರಿಯಂತೆ ಪ್ರತಿಯೊಬ್ಬ ಶಿಕ್ಷಿಕನಿಗೂ ಉದ್ಯೋಗ ಸಿಗಬೇಕು, ಇಲ್ಲವೇ ಉದ್ಯೋಗದಾತನಾಗಬೇಕು. ಈ ನಿಟ್ಟಿನಲ್ಲಿ ಕಲಿಕೆ, ಪ್ರಾಯೋಗಿಕತೆ, ನಾಯಕತ್ವ, ಕೌಶಲ್ಯ ಮತ್ತು ಪ್ರಾಜೆಕ್ಟ್ ಆಧರಿತ ಕಲಿಕೆಯನ್ನು ಜಾರಿಗೆ ತರಲಾಗಿದೆ. ಜೊತೆಗೆ ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನ ಆಯಾಯ ತರಗತಿಗಳಲ್ಲೇ ನಡೆಯಲಿದೆ ಎಂದು ವಿವರಿಸಿದರು.
– ರಾಜ್ಯದ ಕ್ರಿಕೆಟ್ ಮಂಡಳಿಗೆ ಗಂಗೂಲಿ ಪತ್ರ – ಐಸಿಸಿ ಟಿ20 ಕ್ರಿಕೆಟ್ ಮುಂದೂಡಿಕೆ ಸಾಧ್ಯತೆ
ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಕ್ರಿಕೆಟ್‌ನ್ನು ಮುಂದೂಡಲು ಐಸಿಸಿ ಚಿಂತನೆ ನಡೆಸಿದ ಬೆನ್ನಲ್ಲೇ ಬಿಸಿಸಿಐ ಐಪಿಎಲ್ ಆಡಿಸಲು ಮುಂದಾಗುತ್ತಿದೆ.
ಹೌದು, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಸಂಬಂಧ ಖಾಲಿ ಸ್ಟೇಡಿಯಂನಲ್ಲಿ ಕ್ರಿಕೆಟ್ ನಡೆಸುವ ಸಂಬಂಧ ರಾಜ್ಯದ ಕ್ರಿಕೆಟ್ ಮಂಡಳಿಗಳಿಗೆ ಪತ್ರ ಬರೆದು ನಿಮ್ಮ ಅಭಿಪ್ರಾಯ ತಿಳಿಸುವಂತೆ ಕೇಳಿಕೊಂಡಿದ್ದಾರೆ.
ಈ ವರ್ಷ ಐಪಿಎಲ್ ಆಯೋಜಿಸಲು ಬಿಸಿಸಿಐ ವಿವಿಧ ಆಯ್ಕೆಗಳನ್ನು ಹುಡುಕುತ್ತಿದೆ. ಈ ಸಂಬಂಧ ಖಾಲಿ ಸ್ಟೇಡಿಯಂನಲ್ಲೂ ನಡೆಸುವ ಬಗ್ಗೆ ಚಿಂತನೆ ನಡೆದಿದೆ. ಅಭಿಮಾನಿಗಳು, ಫ್ರಾಂಚೈಸಿಗಳು, ಆಟಗಾರರು, ಪ್ರಸಾರದ ಹಕ್ಕು ಪಡೆದುಕೊಂಡವರು, ಆಯೋಜಕರು ಸೇರಿದಂತೆ ಎಲ್ಲರೂ ಈ ವರ್ಷವೇ ಐಪಿಎಲ್ ಆಯೋಜಿಸುವ ಸಂಬಂಧ ಎದುರು ನೋಡುತ್ತಿದ್ದಾರೆ ಎಂದು ಗಂಗೂಲಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇತ್ತೀಚಿಗೆ ಭಾರತ ಸೇರಿದಂತೆ ವಿದೇಶದ ಆಟಗಾರರು ಈ ವರ್ಷ ಐಪಿಎಲ್ ಆಡಲು ಆಸಕ್ತಿ ತೋರಿಸಿದ್ದಾರೆ. ಹೀಗಾಗಿ ಶೀಘ್ರವೇ ಟೂರ್ನಿಯನ್ನು ಹೇಗೆ ಆಯೋಜಿಸಬೇಕು ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಬಿಸಿಸಿಐ ಐಪಿಎಲ್ ಆಯೋಜಿಸಲು ಸಿದ್ಧತೆ ನಡೆಸುತ್ತಿದ್ದರೂ ವಿಶ್ವಕಪ್ ಆಯೋಜನೆ ಬಗ್ಗೆ ಐಸಿಸಿ ನಿರ್ಧಾರ ಸ್ಪಷ್ಟವಾಗಿರಲಿಲ್ಲ. ಬುಧವಾರ ಐಸಿಸಿಯ ಸಭೆ ನಡೆದಿತ್ತು. ಈ ವೇಳೆ ವಿಶ್ವಕಪ್ ಆಯೋಜನೆ ಕುರಿತು ಐಸಿಸಿಯ ನಿರ್ಧಾರ ಪ್ರಕಟವಾಗುತ್ತಿದ್ದಂತೆ ಐಪಿಎಲ್ ಆಯೋಜನೆ ಕುರಿತು ಸೌರವ್ ಗಂಗೂಲಿ ಈಗ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಗಂಗೂಲಿ ಇನ್ನು ಕಡಿಮೆ ಅವಧಿ ಇರುವ ಹಿನ್ನೆಲೆಯಲ್ಲಿ ಬಿಸಿಸಿಐ ಆಯೋಜಿಸುವ ದೇಶೀಯ ಟೂರ್ನಿಯಲ್ಲೂ ಬದಲಾವಣೆ ತರಲಾಗುವುದು ಎಂದು ಹೇಳಿದ್ದಾರೆ. ಮುಂದಿನ ದಿನದಲ್ಲಿ ಈ ಬಗ್ಗೆ ಪೂರ್ಣವಾದ ವಿವರಗಳನ್ನು ನೀಡಲಾಗುವುದು ತಿಳಿಸಿದ್ದಾರೆ.
ಹೇಗೆ ಆದಾಯ ಬರುತ್ತೆ?
ಪಂದ್ಯದ ಟಿಕೆಟ್ ಮಾರಾಟದಿಂದ ಪ್ರಾಂಚೈಸಿಗಳಿಗೆ ಮತ್ತು ಬಿಸಿಸಿಐಗೆ ದುಡ್ಡು ಬರುತ್ತಿತ್ತು. ಆದರೆ ಖಾಲಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಆಯೋಜಿಸಿದರೆ ಪ್ರೇಕ್ಷಕರು ಬಾರದೇ ಇರುವ ಕಾರಣ ಈ ಹಣ ಬರುವುದಿಲ್ಲ.
ಬಿಸಿಸಿಐ ಅತಿ ಹೆಚ್ಚು ಹಣ ಟಿವಿ ಮತ್ತು ಡಿಜಿಟಲ್ ಪ್ರಸಾರದಿಂದ ಬರುತ್ತದೆ. ಇದರ ಜೊತೆ ಬೌಂಡರಿ ಬಳಿ ಇರುವ ಡಿಜಿಟಲ್ ಬೋರ್ಡ್ ಜಾಹೀರಾತು, ಬೌಂಡರಿ ಗೆರೆಯ ಲೈನ್ ಮೇಲೂ ಜಾಹೀರಾತು ಇರುತ್ತದೆ.
ಬಿಡ್ ಗೆದ್ದಿದ್ದು ಸ್ಟಾರ್ ಇಂಡಿಯಾ:
2018ರಿಂದ 2022ರವರೆಗಿನ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಜಾಗತಿಕ ಪ್ರಸಾರದ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿದೆ. 2017ರಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 16,347 ಕೋಟಿ ರೂ. ನೀಡಿ ಟಿವಿ ಮತ್ತು ಡಿಜಿಟಲ್ ಮೀಡಿಯಾದ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿತ್ತು.
ಭಾರತದಲ್ಲಿ ಪ್ರಸಾರದ ಹಕ್ಕಿಗಾಗಿ ಸೋನಿ ಪಿಕ್ಚರ್ಚ್ 11,050 ಕೋಟಿ ರೂ. ಹಣವನ್ನು ಬಿಡ್ ಮಾಡಿದ್ದರೆ ಸ್ಟಾರ್ ಇಂಡಿಯಾ 6,196.94 ಕೋಟಿ ರೂ. ಹಣವನ್ನು ಭಾರತದ ಪ್ರಸಾರಕ್ಕೆ ಬಿಡ್ ಮಾಡಿತ್ತು. ಆದರೆ ಸೋನಿ ಪಿಕ್ಚರ್ಸ್ ಇತರ ಹಕ್ಕು ಗಳಿಗೆ ಬಿಡ್ ಮಾಡದ ಕಾರಣ ಅಂತಿಮವಾಗಿ ಐಪಿಎಲ್ ಪ್ರಸಾರದ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿತ್ತು.
ಈ ಬಿಡ್ ಪ್ರಕ್ರಿಯೆಯಲ್ಲಿ ಯುಪ್ ಟಿವಿ, ಗಲ್ಫ್ ಡಿಟಿಎಚ್ ಒಎಸ್‍ಎನ್, ಪರ್‍ಫಾರ್ಮ್ ಮೀಡಿಯಾ, ಏರ್‌ಟೆಲ್ , ರಿಲಯನ್ಸ್ ಜಿಯೋ, ಟೈಮ್ಸ್ ಇಂಟರ್ ನೆಟ್, ಫೇಸ್‍ಬುಕ್, ಅಮೆಜಾನ್, ಇಎಸ್‍ಪಿಎನ್ ಡಿಜಿಟಲ್ ಮೀಡಿಯಾಗಳು ಭಾಗವಹಿಸಿತ್ತು.
ಭಾರತದಲ್ಲಿ ಡಿಜಿಟಲ್ ಪ್ರಸಾರದ ಹಕ್ಕಿಗೆ ಏರ್‌ಟೆಲ್, ರಿಲಯನ್ಸ್ ಜಿಯೋ, ಟೈಮ್ಸ್ ಇಂಟರ್ ನೆಟ್, ಫೇಸ್‍ಬುಕ್ ಬಿಡ್ ಮಾಡಿತ್ತು.
ಹಕ್ಕು ಇಷ್ಟೊಂದು ಮೊತ್ತಕ್ಕೆ ಹರಾಜು ಆದ ಕಾರಣ ಐಪಿಎಲ್ ಪ್ರತಿ ಪಂದ್ಯದ ಟಿವಿ ಶುಲ್ಕ 2018ರಿಂದ ಹೆಚ್ಚಾಗಲಿದೆ. ಈ ಹಿಂದೆ ಒಂದು ಪಂದ್ಯಕ್ಕೆ 15 ಕೋಟಿ ರೂ. ಆಗಿದ್ದರೆ, ಇನ್ನು ಮುಂದೆ ಈ ಮೌಲ್ಯ ಮೂರು ಪಟ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಈಗ ಭಾರತದ ಒಂದು ಏಕದಿನ ಪಂದ್ಯಕ್ಕೆ ಟಿವಿ ಶುಲ್ಕ 45 ಕೋಟಿ ರೂ. ಇದ್ದರೆ, ಐಪಿಎಲ್ ನಲ್ಲಿ 55 ಕೋಟಿ ರೂ.ಗೆ ಏರಿಕೆಯಾಗಬಹುದು ಎಂದು ಕ್ರಿಕೆಟ್ ಸಂಖ್ಯಾಶಾಸ್ತ್ರಜ್ಞ ಮೋಹನ್ ದಾಸ್ ಮೆನನ್ ಹೇಳಿದ್ದರು.
ಅಶ್ವಥ್ ಸಂಪಾಜೆ ಬೆಂಗಳೂರು: ಈಗ ಜಗತ್ತೇ ನಮ್ಮ ಅಂಗೈಯಲ್ಲಿ ಸಿಗುತ್ತದೆ. ಎಲ್ಲವೂ ಡಿಜಿಟಲ್ ಆಗುತ್ತಿದೆ. ಎಲ್ಲವೂ ಡಿಜಿಟಲ್ ಆಗುತ್ತಿರುವಾಗ ಕರಾವಳಿಯ ಪ್ರಸಿದ್ಧ ಕಲೆ ಯಕ್ಷಗಾನ ಪ್ರಸಂಗಗಳು ಡಿಜಿಟಲ್ ಮೂಲಕ ಅಭಿಮಾನಿಗಳನ್ನು ತಲುಪುತ್ತಿವೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಯಕ್ಷವಾಹಿನಿ ಸಂಸ್ಥೆಯು ನವೀನ ಮಾದರಿಯ ಯೋಜನೆಗಳ ಮೂಲಕ ಯಕ್ಷಲೋಕಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ.
ಯಕ್ಷಗಾನ ಪ್ರಸಂಗ ಪ್ರದರ್ಶನದಲ್ಲಿ ಕುಣಿತ, ವೇಷ, ಸಂಭಾಷಣೆಗಳ ಜೊತೆಗೆ ಪದಗಳು/ಹಾಡುಗಳು ಬಹಳ ಮುಖ್ಯಪಾತ್ರ ವಹಿಸುತ್ತದೆ. ಪ್ರಸಂಗ ಪದ್ಯಗಳು ಯಕ್ಷಗಾನ ಸಾಹಿತ್ಯದ ಜೀವಾಳ. ಭಾಗವತರು ಈ ಪದಗಳನ್ನು ಹಾಡುವ ಮೂಲಕ ಪ್ರಸಂಗವನ್ನು ಮುನ್ನಡೆಸಿಕೊಂಡು ಹೋಗುತ್ತಾರೆ. ಯಕ್ಷಾಸಕ್ತರಿಂದ ಮರೆಯಾಗುತ್ತಿರುವ ಮತ್ತು ದುರ್ಲಭವಾಗುತ್ತಿರುವ ಪ್ರಸಂಗ ಸಾಹಿತ್ಯವು ಸರ್ವರಿಗೂ ಸುಲಭವಾಗಿ ತಲುಪುವಂತೆ ಮಾಡಲು ‘ಯಕ್ಷವಾಹಿನಿ’ ಸಂಸ್ಥೆಯು ಕಳೆದ ಮೂರು ವರ್ಷಗಳಿಂದ ಯಕ್ಷಗಾನ ಪ್ರಸಂಗಗಳನ್ನು ಡಿಜಿಟಲೀಕರಣಗೊಳಿಸುವ ಕೈಂಕರ್ಯದಲ್ಲಿ ಸದ್ದಿಲ್ಲದಂತೆ ತೊಡಗಿದೆ. ಇದೇ ನಿಟ್ಟಿನಲ್ಲಿ ಯಕ್ಷಕವಿಗಳಿಂದ ರಚಿಸಲ್ಪಟ್ಟ ಹಲವಾರು ಮುದ್ರಿತ/ಹಸ್ತಪ್ರತಿಗಳ ಸಂಗ್ರಹಣೆ, ದಾಖಲೀಕರಣ ಮತ್ತು ಅವುಗಳ ವಿದ್ಯುನ್ಮಾನ ಪ್ರತಿಗಳನ್ನು ಅಂತರ್ಜಾಲದ ಸಹಾಯದಿಂದ ಆಸಕ್ತರಿಗೆ ನಿಲುಕುವಂತೆ ಮಾಡುವ ಕಾರ್ಯ ತ್ವರಿತಗತಿಯಲ್ಲಿ ಸಾಗಿದೆ. ಈಗಾಗಲೇ 600ಕ್ಕೂ ಹೆಚ್ಚಿನ ಸ್ಕ್ಯಾನ್ ಪ್ರತಿಗಳು ಸಂಗ್ರಹಗೊಂಡಿದ್ದು ಈಗ ‘ಪ್ರಸಂಗಪ್ರತಿಸಂಗ್ರಹ‘ ಎಂಬ ಜನಸ್ನೇಹಿ ಆಂಡ್ರಾಯ್ಡ್ ಅಪ್ಲಿಕೇಶನ್ ಮೂಲಕ ಬಿಡುಗಡೆ ಮಾಡಲಾಗಿದೆ.
ಯಕ್ಷವಾಹಿನಿ ಸಂಸ್ಥೆಯು ಮುಖ್ಯವಾಗಿ ಎರಡು ರೀತಿಯಲ್ಲಿ ಯಕ್ಷಗಾನ ಪ್ರಸಂಗಗಳು ಡಿಜಿಟಲೀಕರಣ ಯೋಜನೆಗಳನ್ನು ಹಮ್ಮಿಕೊಂಡಿದೆ.. ಮೊದಲನೆಯದಾಗಿ ಯಕ್ಷಪ್ರಸಂಗಕೋಶ: ಇದರಲ್ಲಿ ಪ್ರಸಂಗಳನ್ನು ಟೈಪಿಸಿ, ಛಂದಸ್ಸು, ಮಟ್ಟುಗಳನ್ನು ವಿದ್ವಾಂಸರಿಂದ ಪರಿಶೀಲಿಸಿ, ತಪ್ಪುಗಳನ್ನು ತಿದ್ದಿಸಿ ಅಪ್ಲೋಡ್ ಮಾಡಲಾಗುತ್ತದೆ. ಎರಡನೇಯದಾಗಿ ಪ್ರಸಂಗಪ್ರತಿಸಂಗ್ರಹ: ಪ್ರಸಂಗಪ್ರತಿಸಂಗ್ರಹದಲ್ಲಿ ಯಕ್ಷಗಾನ ಪ್ರಸಂಗ ಪ್ರತಿಗಳನ್ನು/ಹಸ್ತಪ್ರತಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಲಾಗುತ್ತದೆ. ಆಂಡ್ರಾಯ್ಡ್ ಅಪ್ಲಿಕೇಶನ್‍ನಲ್ಲಿ ಯಕ್ಷಪ್ರಸಂಗಕೋಶ ಮತ್ತು ಪ್ರಸಂಗಪ್ರತಿಸಂಗ್ರಹ ಈ ಎರಡೂ ಯೋಜನೆಗಳ ಪ್ರತಿಗಳು ಸಿಗುತ್ತವೆ. ಎಲ್ಲಾ ಡಿಜಿಟಲ್ ಪ್ರಸಂಗ ಪ್ರತಿಗಳು ಉಚಿತ ಪ್ರಸಾರಕ್ಕಾಗಿಯೇ ಮೀಸಲಾಗಿವೆ.
ಪ್ರಸಂಗಪ್ರತಿಸಂಗ್ರಹದಲ್ಲಿ ಇಲ್ಲಿಯವರೆಗೂ ಒಟ್ಟು 600ಕ್ಕೂ ಹೆಚ್ಚು ಪ್ರಸಂಗಗಳನ್ನು ದಾಖಲಿಸಲಾಗಿದೆ. ಬರೀ ಪದಗಳು ಮಾತ್ರ ಸಿಗದೇ ಈ ಪ್ರಸಂಗ ಬರೆದ ಕವಿಗಳು ಪರಿಚಯವಾಗಬೇಕು ಎನ್ನುವ ನಿಟ್ಟಿನಲ್ಲಿ ಕವಿಗಳ ಹೆಸರು, ಪ್ರಸಂಗವನ್ನು ಪ್ರಕಾಶಿಸಿದ ಸಂಸ್ಥೆಯ ಹೆಸರನ್ನು ಇಲ್ಲಿ ದಾಖಲಿಸಲಾಗುತ್ತದೆ. ಪ್ರಸಂಗಗಳು ಇನ್ನೂ ಪ್ರಕಾಶನವಾಗದೇ ಇದ್ದರೆ ಆ ಕವಿಯ ಹಸ್ತ ಪ್ರತಿಯ ಸ್ಕ್ಯಾನ್ ಸೇರಿಸಲಾಗುತ್ತದೆ.
ಯಾಕೆ ಈ ಯೋಜನೆ?
ಸುಮಾರು 8 ಸಾವಿರ ಯಕ್ಷಗಾನ ಪ್ರಸಂಗಗಳು ಬರೆದು ಹೋಗಿರುವ ಅಖಿಲ ಕರ್ನಾಟಕ ಸಮಗ್ರ (ಎಲ್ಲಾ ಪಾಯಗಳು ಸೇರಿ) ಯಕ್ಷಗಾನ ಸಾಹಿತ್ಯದಲ್ಲಿ ಸುಮಾರು ಅರ್ಧದಷ್ಟು ಸಂಗ್ರಹವಿಲ್ಲದೇ ಯಾ ಸಂಗ್ರಹದ ಮಾಹಿತಿ ಇಲ್ಲದೇ ನಶಿಸಿ ಹೋಗಿರುವ ಸಾಧ್ಯತೆಗಳಿವೆ. ಉಳಿದ ಸುಮಾರು 4 ಸಾವಿರ ಪ್ರಸಂಗಗಳು ಬೇರೆ ಬೇರೆ ಸಂಗ್ರಹಗಳಲ್ಲಿ ಚದುರಿ ಹೋಗಿ ಎಲ್ಲವೂ ಒಂದೇ ಸಂಗ್ರಹದಿಂದ ವಿದ್ಯುನ್ಮಾನ ಪ್ರತಿಗಳನ್ನಾಗಿ (ಸ್ಕ್ಯಾನ್ ಪ್ರತಿಗಳನ್ನಾಗಿ) ಕೊಡುತ್ತಾ ಹೋಗುವುದಲ್ಲದೇ, ವಿದ್ಯುನ್ಮಾನ ಪ್ರತಿಗಳ ರೂಪದಲ್ಲಿ ಉಳಿದು ಹೋಗಿರುವುದನ್ನು ಕಾಲಗರ್ಭದಲ್ಲಿ ನಶಿಸಿಹೋಗದಂತೆ ಕಾಪಿಡುವುದು ನಮ್ಮ ಗುರಿ ಎಂದು ಯಕ್ಷವಾಹಿನಿ ಸಂಸ್ಥೆ ಹೇಳಿಕೊಂಡಿದೆ.
ಸಾಮಾಜಿಕ ಜಾಲತಾಣದಲ್ಲಿ ಯಕ್ಷ ಪ್ರೇಮಿ ಟೆಕ್ಕಿಗಳ ಕ್ರಿಯಾಶೀಲತೆಯನ್ನು ನೋಡಿ ನಟರಾಜ ಉಪಾಧ್ಯ ಅವರು ಅಂತರ್ಜಾಲದ ಮೂಲಕ ಯಕ್ಷಗಾನದ ದಾಖಲಿಕರಣದ ಕೆಲಸಗಳಲ್ಲಿ ಉಳಿದ ಹೋಗಿರುವ ಕೆಲಸ ಮಾಡಲು ಸ್ವಯಂಸೇವಕರ ತಂಡವನ್ನು ಕಟ್ಟುವ ಪ್ರಸ್ತಾವನೆ ಮಾಡಿದರು. ಈ ಯೋಜನೆಗೆ ರವಿ ಮಡೋಡಿ, ಆನಂದರಾಮ ಉಪಾಧ್ಯ, ಡಾ. ಪ್ರದೀಪ್ ಸಾಮಗ, ಎಂ.ಎಲ್. ಸಾಮಗ, ಲ.ನಾ. ಭಟ್, ಕಜೆ ಸುಬ್ರಹ್ಮಣ್ಯ ಭಟ್, ದಿನೇಶ ಉಪ್ಪೂರ, ರಾಜಗೋಪಾಲ ಕನ್ಯಾನ, ಅಶ್ವಿನಿ ಹೊದಲ, ಶಶಿರಾಜ ಸೋಮಯಾಜಿ, ಅವಿನಾಶ್ ಬೈಪಡಿತ್ತಾಯ, ಅಶೋಕ ಮುಂಗಳೀಮನೆ, ವಸುಮತಿ ಮುಂತಾದ 25 ಕ್ಕೂ ಹೆಚ್ಚಿನ ಯಕ್ಷ ಪ್ರೇಮಿಗಳು ಕೈ ಜೋಡಿಸಿದರು. ಈ ತಂಡವನ್ನು ಶ್ರೀ ಡಿ.ಎಸ್. ಶ್ರೀಧರ ಮತ್ತು ಶ್ರೀ ಗಿಂಡೀಮನೆ ಮೃತ್ಯುಂಜಯ ಅವರು ಯಕ್ಷಗಾನ ಛಂದಸ್ಸಿನ ಕುರಿತಾದ ತಪ್ಪುಗಳನ್ನು ತಿದ್ದುವತ್ತ, ಆಚಾರ್ಯ ಸ್ಥಾನದಲ್ಲಿ ನಿಂತು ಮುನ್ನಡೆಸಿದರು. ಇನ್ನು ಆನೇಕ ಯಕ್ಷಗಾನದ ಕಲಾವಿದರು, ಪ್ರಸಂಗ ಕವಿಗಳು, ಪ್ರಸಂಗ ಸಂಗ್ರಹಕಾರರು ಮತ್ತು ಟೆಕ್ಕಿಗಳ ಸೇರುತ್ತಾ ಸುಮಾರು 100 ಮಂದಿ ಸ್ವಯಂ ಸೇವಕರ ತಂಡ ಈಗ ಈ ಯೋಜನೆಗೆ ಸಹಕಾರ ನೀಡುತ್ತಿದೆ.
ಯಾವುದೇ ಆರ್ಥಿಕ ಲಾಭದ ಉದ್ದೇಶ ಇಲ್ಲದ ಈ ಯೋಜನೆಗೆ ಅನೇಕ ಪ್ರಸಂಗ ಕವಿಗಳು, ಪ್ರಕಾಶಕರು ಸಮ್ಮತಿ ನೀಡಿ ಹರಸಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಅವರು ಪ್ರಸಂಗದ ಡಿಜಿಟಲೀಕರಕ್ಕೆ ಮುಂದಾಗಿದ್ದು, ಯಕ್ಷವಾಹಿನಿಯ ಸಹಯೋಗವನ್ನು ಪಡೆಯುತ್ತಿದ್ದಾರೆ. ಈ ಕುರಿತಾಗಿ ಅಕಾಡೆಮಿಯು ಸಂಸ್ಥೆಗೆ ನೀಡುವ ಪ್ರೋತ್ಸಾಹ ಧನದಲ್ಲಿ ಸಿಂಹಪಾಲನ್ನು ಸಮಕಾಲೀನ ಕವಿಗಳಿಗೆ ನೀಡಿ ಪ್ರೋತ್ಸಾಹಿಸುತ್ತಿದೆ.
ಪ್ರಸಂಗ ಪ್ರತಿ ಸಂಗ್ರಹ ಹೆಚ್ಚಿಸಲು ಸಾಮೂಹಿಕ ಸ್ಕ್ಯಾನಿಂಗ್ ಕಮ್ಮಟಗಳನ್ನು ಯಕ್ಷವಾಹಿನಿಯು ಆಯೋಜಿಸುತ್ತಿದೆ. ಯಕ್ಷ ಪ್ರಸಂಗ ಕೋಶಕ್ಕಾಗಿ ಆನೇಕ ಸ್ವಯಂಸೇವಕರು ಕಂಪ್ಯೂಟರಿನಲ್ಲಿ ಟೈಪಿಸಿ ಪ್ರಸಂಗಗಳನ್ನು ಕಳುಹಿಸುತ್ತಿದ್ದಾರೆ.
ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ ನಟರಾಜ ಉಪಾಧ್ಯ ಅವರು, ಯಕ್ಷಗಾನ ಮಟ್ಟುಗಳ ಯಾದಿಯನ್ನು ತಯಾರಿಸಿ, ಎಲ್ಲಾ ಪಾಯಗಳಲ್ಲಿ ಛಂದಸ್ಸಿಗೆ ಅನುಗುಣವಾದ ಈ ಮಟ್ಟುಗಳನ್ನು ಹಾಡುವ ಶೈಲಿಗಳ ವೈವಿಧ್ಯವನ್ನು ಆಡಿಯೋ, ವಿಡಿಯೋ ದಾಖಲೆ ಮಾಡಬೇಕು ಎನ್ನುವ ಚಿಂತನೆ ಇದೆ. ಇದರ ಜೊತೆಯಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದ ಎಲ್ಲ ಸಂಘ ಸಂಸ್ಥೆಗಳ ಮಾಹಿತಿಯ ಪಟ್ಟಿಯನ್ನು ಹೊರತರಲು ಉತ್ಸುಕರಾಗಿದ್ದೇವೆ. ಮೂರು ವರ್ಷಗಳ ಹಿಂದೆಯೇ ಪ್ರಕಟಿಸಿದ 5 ಸಾವಿರಕ್ಕೂ ಮಿಕ್ಕಿದ ಯಕ್ಷ ಪ್ರಸಂಗಗಳ ಯಾದಿಯನ್ನು ಮತ್ತಷ್ಟು ಪರಿಷ್ಕರಿಸಿ 6 ಸಾವಿರಕ್ಕೆ ಏರಿಸಲು ಹೊರಟಿದ್ದೇವೆ, ಅಲ್ಲದೇ ಎಲ್ಲಾ ಯಕ್ಷಗಾನಕ್ಕೆ ಕುರಿತಾದ ಪುಸ್ತಕಗಳ ಯಾದಿಯನ್ನೂ ತಯಾರಿಸಬೇಕಾಗಿದೆ ಎಂದು ತಿಳಿಸಿದರು.
ಈ ಯೋಜನೆಗಳನ್ನು ಮತ್ತಷ್ಟು ತ್ವರಿತಗೊಳಿಸಲು ಸ್ವಯಂಸೇವಕರ ಶ್ರಮದಾನ ಹಾಗೂ ದಾನಿಗಳಿಂದ ಧನ ಸಹಾಯ ಬೇಕಾಗುತ್ತದೆ. ಕಲಾಸಕ್ತರು yakshavahini@gmail.com ಮೂಲಕ ಸಂಸ್ಥೆಯನ್ನು ಸಂಪರ್ಕಿಸಬಹುದು. ನಟರಾಜ ಉಪಾಧ್ಯ ಮೊಬೈಲ್ ನಂ 96328 24391.
ವಿಜಯಪುರ: ಖಾಸಗಿ ಶಾಲೆಗಳ ಭರಾಟೆಯಲ್ಲಿ ಸರ್ಕಾರಿ ಶಾಲೆಗಳು ವಿಮುಕ ಆಗಿ ಹೊರಟಿವೆ. ಸರ್ಕಾರಿ ಶಾಲೆಗಳಿಗೆ ಜನರು ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಾರೆ. ಆದರೆ ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ಸಚಿವ ಎಂ.ಬಿ.ಪಾಟೀಲ್ ಪ್ಲಾನ್ ಮಾಡಿದ್ದಾರೆ.
ಸಾಮಾನ್ಯವಾಗಿ ಮಕ್ಕಳ ದಿನಾಚರಣೆ ಬಂದಾಗ ಜಿಲ್ಲಾ ಕೇಂದ್ರ ಮತ್ತು ತಾಲೂಕಾ ಕೇಂದ್ರಗಳಲ್ಲಿ ಶಿಕ್ಷಣ ಇಲಾಖೆ ಕಾರ್ಯಕ್ರಮ ಆಯೋಜಿಸುತ್ತದೆ. ಆದರೆ ಈ ಬಾರಿ ವಿಜಯಪುರದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್,ವಿಜಯಪುರ ತಾಲೂಕಿನ 100 ಸರ್ಕಾರಿ ಶಾಲೆಗಳನ್ನು ಡಿಜಿಟಲ್ ಮಾಡಿಸಿದ್ದಾರೆ. ಶಾಸಕರ ಅನುದಾನದಲ್ಲಿ ಒಂದು ಶಾಲೆಗೆ 1 ಲಕ್ಷ ರೂ.ಯಂತೆ ಡಿಜಿಟಲ್ ಕೋಣೆ ಮಾಡಲಾಗಿದೆ. ಕಬ್ಬಿಣದ ಕಡಲೆಯಂತಿರುವ ವಿಜ್ಞಾನ, ಗಣಿತ ಮತ್ತು ಇಂಗ್ಲೀಷ್ ಸೇರಿದಂತೆ ಕಠಿಣ ವಿಷಯಗಳು ಮಕ್ಕಳಿಗೆ ಸರಳವಾಗಿ ಅರ್ಥವಾಗಲು ಎಲ್‍ಇಡಿ ಟಿವಿ ಅಳವಡಿಸಲಾಗಿದೆ. ಎಲ್‍ಇಡಿಯಲ್ಲಿ ವಿಷಯಕ್ಕೆ ತಕ್ಕಂತೆ ವಿಡಿಯೋ ಹಾಗು ಚಿತ್ರಗಳು ಬರೋದ್ರಿಂದ ಮಕ್ಕಳ ಮನದಲ್ಲಿ ವಿಷಯಗಳು ಅಚ್ಚಳಿಯದೇ ಉಳಿಯುತ್ತದೆ.
ಈಗಾಗಲೇ ಲೋಡ್ ಶೆಡ್ಡಿಂಗ್ ಶುರುವಾಗಿದ್ದು ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ. ಹಾಗಾಗಿ ಎಲ್‍ಇಡಿ ಟಿವಿಗಳಿಗೆ ಸೋಲಾರ್ ಹಾಕಿಸಿದ್ದು, ತಡೆಯಿಲ್ಲದೆ 8 ಗಂಟೆ ನಿರಂತರ ಅಭ್ಯಾಸ ಮಾಡಬಹುದು. ಈ ಯೋಜನೆಗೆ ಟೆಲ್ಕೋ ಸೋಲಾರ್ ಕಂಪನಿ ಕೈ ಜೋಡಿಸಿದ್ದು, ಅರ್ಧದಷ್ಟು ಹಣ ಕಂಪನಿ, ಉಳಿದ ಅರ್ಧ ಹಣ ಶಾಸಕರ ಅನುದಾನದಲ್ಲಿ ಸಿಗುತ್ತದೆ.
ನವದೆಹಲಿ: 500 ಮತ್ತು 1 ಸಾವಿರ ರೂ. ನೋಟು ಬ್ಯಾನ್ ಆದ ಬಳಿಕ ಭಾರತದಲ್ಲಿ ಡಿಜಿಟಲ್ ವಹಿವಾಟು ಎಷ್ಟಾಗಿದೆ? ಪ್ರಧಾನಿ ನರೇಂದ್ರ ಮೋದಿಯ ನೋಟ್‍ಬ್ಯಾನ್‍ಗೆ ಒಂದು ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಜನ ಕೇಳುತ್ತಿರುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ(ಎನ್‍ಪಿಸಿಐ) ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ನೋಟ್ ಬ್ಯಾನ್ ಬಳಿಕ ಯುಪಿಐ ಮೂಲಕ ನಡೆಸುವ ವಹಿವಾಟು 77 ಪಟ್ಟು ಏರಿಕೆಯಾಗಿದೆ.
ನೋಟ್ ಬ್ಯಾನ್ ಮುನ್ನ ಅಕ್ಟೋಬರ್ ಅವಧಿಯಲ್ಲಿ ಯುಪಿಐ ಮೂಲಕ 1 ಲಕ್ಷ ವಹಿವಾಟು ನಡೆದಿದ್ದರೆ ಈಗ 7.6 ಕೋಟಿ ವಹಿವಾಟು ನಡೆದಿದೆ. ಸೆಪ್ಟೆಂಬರ್ 2017ರ ಅವಧಿಯಲ್ಲಿ 3 ಕೋಟಿ ವಹಿವಾಟು ನಡೆದಿದ್ದರೆ, ಅಕ್ಟೋಬರ್ ನಲ್ಲಿ ಒಂದೇ ಬಾರಿಗೆ 7.6 ಕೋಟಿಗೆ ಜಿಗಿತ ಕಂಡಿದೆ.
ಆಗಸ್ಟ್ ನಲ್ಲಿ ಒಟ್ಟು 65,149 ಕೋಟಿ ರೂ. ವಹಿವಾಟು ನಡೆದಿದ್ದರೆ, ಸೆಪ್ಟೆಂಬರ್ ನಲ್ಲಿ 71,759 ಕೋಟಿ ರೂ. ವಹಿವಾಟು ನಡೆದಿದೆ. ಆದರೆ ಅಕ್ಟೋಬರ್ ನಲ್ಲಿ 75,041 ಕೋಟಿ ರೂ. ವಹಿವಾಟು ನಡೆದಿದೆ ಎಂದು ಎನ್‍ಪಿಸಿಐ ಹೇಳಿದೆ.
ಇನ್ಫೋಸಿಸ್ ಮುಖ್ಯಸ್ಥ ನಂದನ್ ನಿಲೇಕಣಿ ಟ್ವೀಟ್ ಮಾಡಿ ಯುಪಿಐ ಸಾಧನೆಯನ್ನು ಹೊಗಳಿದ್ದು, ‘ವಾಟ್ ಎ ಸ್ಟೋರಿ’ ಎಂದು ಬರೆದು ಹೊಗಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್‍ನಲ್ಲಿ ಭಾರತ್ ಇಂಟರ್‍ಫೇಸ್ ಫಾರ್ ಮನಿ(ಭೀಮ್) ಅಪ್ಲಿಕೇಶನ್ ಬಿಡುಗಡೆ ಮಾಡಿದ್ದರು. ಭಾರತ ಸರ್ಕಾರದ ನ್ಯಾಶನಲ್ ಪೇಮೆಂಟ್ಸ್ ಕಾರ್ಪೇರೇಷನ್ ‘ಯೂನಿಫೈಡ್ ಪೇಮೆಂಟ್ಸ್ ಇಂಟರ್‍ಫೇಸ್(ಯುಪಿಐ) ಎಂಬ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆಗೆ ಸುಲಭವಾಗಿ ಹಣವನ್ನು ಪಾವತಿಸಬಹುದಾಗಿದೆ. ಪೇಟಿಎಂ, ಜಿಯೋ ಮನಿ, ಪೋನ್‍ಪೇ ಇತ್ಯಾದಿ ಅಪ್‍ಗಳು ಯುಪಿಐ ಮೂಲಕವೇ ಕಾರ್ಯನಿರ್ವಹಿಸುತ್ತದೆ.
ಬೆಂಗಳೂರು: ಜೀಪಿನ ಮೇಲೆ, ನದಿಯಲ್ಲಿ ಕುಳಿತು ಸುಲಭವಾಗಿ ಚೆನ್ನಾಗಿ ಫೋಟೋ ತೆಗೆಯುವುದು ತುಸು ಕಷ್ಟ. ಈ ಕಷ್ಟ ನಿವಾರಣೆಗಾಗಿ ವೈಲ್ಡ್ ಲೈಫ್ ಫೋಟೋಗ್ರಾಫರ್‍ಗಳಿಗಾಗಿ ವಿಲ್ಡ್‍ವೋಯಾಜರ್ ಕಂಪೆನಿ ಬೀನ್ ಬ್ಯಾಗನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ವಾಟರ್ ಪ್ರೂಫ್ ಮತ್ತು ಸ್ಪಿಲ್ ಪ್ರೂಫ್ ಬೀನ್ ಬ್ಯಾಗ್ ಇದಾಗಿದ್ದು ದೀರ್ಘ ಕಾಲ ಬಾಳಿಕೆ ಬರಲು ಮಿಲಿಟರಿ ಟೆಂಟ್ ದರ್ಜೆಯ ಕಚ್ಚಾವಸ್ತುಗಳನ್ನು ಬಳಸಿ ತಯಾರಿಸಲಾಗಿದೆ.
ಈ ಬೀನ್ ಬ್ಯಾಗ್ ಗಾತ್ರ ದೊಡ್ಡದು ಅಲ್ಲ, ತೀರಾ ಚಿಕ್ಕದೂ ಅಲ್ಲ, ಮಾಧ್ಯಮ ಗಾತ್ರವನ್ನು ಹೊಂದಿದ್ದು ಫೋಟೋಗ್ರಾಫರ್ ಗಳಿಗೆ ಹೇಳಿ ಮಾಡಿಸಿದ್ದಾಗಿದೆ ಎಂದು ಕಂಪೆನಿ ತಿಳಿಸಿದೆ.
ವಾಟರ್ ಪ್ರೂಫ್ ಬೀನ್ ಬ್ಯಾಗ್ ಹೆಸರನ್ನು ಹೇಳಿಕೊಂಡು ಕೆಲ ಬೀನ್‍ಬ್ಯಾಗ್ ಗಳು ಗ್ರಾಹಕರನ್ನು ವಂಚಿಸುತ್ತದೆ. ಆದರೆ ಇದರಲ್ಲಿ ಒಂದು ಚೂರು ನೀರು ಒಳಗಡೆ ಹೋಗುವುದಿಲ್ಲ. 400 ಎಂಎಂ, 500 ಎಂಎಂ, 600 ಎಂಎಂ ಮತ್ತು 800 ಎಂಎಂ ಕ್ಯಾಮೆರಾ ಲೆನ್ಸ್ ಬಳಸುವ ಫೋಟೋಗ್ರಾಫರ್ ಗಳಿಗೆ ಇದು ಸಹಕಾರಿಯಾಗಲಿದೆ ಎಂದು ವಿಲ್ಡ್‍ವೋಯಾಜರ್ ತಿಳಿಸಿದೆ. ಈ ಬೀನ್ ಬ್ಯಾಗ್ ಬೆಲೆ 1,100 ರೂ. ಆಗಿದ್ದು, ಖರೀದಿಸಲು ಇಲ್ಲಿ ಕ್ಲಿಕ್ ಮಾಡಬಹುದು: wildvoyager.com
ಕ್ಯಾಮೆರಾ ರೇನ್, ಡಸ್ಟ್ ಕವರ್
ಬೀನ್ ಬ್ಯಾಗ್ ಅಲ್ಲದೇ ಕ್ಯಾಮೆರಾ ರೇನ್, ಡಸ್ಟ್ ಕವರ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸ್ಮಾಲ್, ಮೀಡಿಯಂ, ಲಾರ್ಜ್, ಎಕ್ಸ್‍ಟ್ರಾ ಲಾರ್ಜ್ ಸೈಜ್‍ನಲ್ಲಿ ಲಭ್ಯವಿದೆ. ಇವುಗಳ ಬೆಲೆ 900 ರೂ.ನಿಂದ. 1,200 ರೂ. ಇದ್ದು ಖರೀದಿಸಲು ಕ್ಲಿಕ್ ಮಾಡಿ: camera rain dust cover
ಮಾಸ್ಕ್:
ಇಷ್ಟೇ ಅಲ್ಲದೇ ಮುಖವನ್ನು ಮುಚ್ಚುವ ಮಾಸ್ಕ್ ಬಿಡುಗಡೆ ಮಾಡಿದ್ದು, ಇದಕ್ಕೆ 600 ರೂ. ನಿಗದಿ ಪಡಿಸಿದೆ. ಖರೀದಿಸಲು ಕ್ಲಿಕ್ ಮಾಡಿ: camouflage face mask