Tag: ಡಿಜಿಟಲೀಕರಣ

  • ಬೆಂಗಳೂರಿನ ಪೋಸ್ಟ್ ಮಾಸ್ಟರ್ ಕೆಲಸಕ್ಕೆ ಬಿಲ್ ಗೇಟ್ಸ್ ಫಿದಾ – ಡಿಜಿಟಲೀಕರಣಕ್ಕೆ ಮನಸೋತ ಪೋಸ್ಟ್ ವೈರಲ್

    ಬೆಂಗಳೂರಿನ ಪೋಸ್ಟ್ ಮಾಸ್ಟರ್ ಕೆಲಸಕ್ಕೆ ಬಿಲ್ ಗೇಟ್ಸ್ ಫಿದಾ – ಡಿಜಿಟಲೀಕರಣಕ್ಕೆ ಮನಸೋತ ಪೋಸ್ಟ್ ವೈರಲ್

    ಬೆಂಗಳೂರು: ಸಿಲಿಕಾನ್ ಸಿಟಿ ಪೋಸ್ಟ್ ಮಾಸ್ಟರ್ (Post Master) ಕೆಲಸಕ್ಕೆ ಮೈಕ್ರೋಸಾಫ್ಟ್ (Microsoft) ಸಹಸ್ಥಾಪಕ ಬಿಲ್‌ಗೇಟ್ಸ್ (Bill Gates) ಫಿದಾ ಆಗಿದ್ದು, ಭಾರತದ ಡಿಜಿಟಲೀಕರಣಕ್ಕೆ (Digitization) ಮನಸೋತು ಪೋಸ್ಟ್‌ವೊಂದನ್ನು ಹಾಕಿದ್ದಾರೆ. ಸದ್ಯ ಈ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ.

    ಈ ಪೋಸ್ಟ್‌ನಲ್ಲಿ ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ಕುಸುಮಾರನ್ನು ಬಿಲ್ ಗೇಟ್ಸ್ ಹಾಡಿಹೊಗಳಿದ್ದು, ಆಕೆಯ ಜೊತೆ ನಗುನಗುತ್ತಾ ಮಾತನಾಡುತ್ತಿರುವ ಬಿಲ್ ಗೇಟ್ಸ್ ಆಕೆಯ ಕೆಲಸದ ಬಗ್ಗೆ ಲಿಂಕ್ಡ್ ಇನ್ ಅಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಕುಸುಮಾ ಮಾಡುವ ಕೆಲಸದ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಸಲುವಾಗಿ ಒಂದು ಲಿಂಕ್ ಅನ್ನು ಸಹಾ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:‌ ‘ಶಕ್ತಿ’ ವಿರೋಧಿಸಿ ಕರ್ನಾಟಕ ಬಂದ್ – ಖಾಸಗಿ ಸಾರಿಗೆ ಒಕ್ಕೂಟದ ಜೊತೆಗಿನ ಸಭೆ ವಿಫಲ

    ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್‌ನ ವೆಬ್‌ಸೈಟ್ ಲಿಂಕ್‌ನಲ್ಲಿ ವಿಡಿಯೋ ಪ್ರಕಟ ಮಾಡಿದ್ದು, ಭಾರತದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಕಥೆ ಮತ್ತು ಯುವತಿಯ ವೃತ್ತಿಜೀವನದ ಹಾದಿ ಎಂಬ ಶೀರ್ಷಿಕೆಯಡಿ ಮಾಹಿತಿ ಪ್ರಕಟಿಸಲಾಗಿದೆ. ಭಾರತದಲ್ಲಿ ಅಳವಡಿಸಿರುವ ಡಿಜಿಟಲೀಕರಣಕ್ಕೆ ಬಿಲ್ ಗೇಟ್ಸ್ ಮನಸೋತಿದ್ದಾರೆ. ಇದನ್ನೂ ಓದಿ: ಬುಧವಾರ ಆಗದಿದ್ರೆ ಆ.27ಕ್ಕೆ ಚಂದ್ರಯಾನ-3 ಲ್ಯಾಂಡಿಂಗ್

    ಪೋಸ್ಟ್‌ನಲ್ಲಿ ಏನಿದೆ?
    ನನ್ನ ಭಾರತ ಪ್ರವಾಸದಲ್ಲಿ ನಾನು ನಂಬಲಾಗದ ಶಕ್ತಿಯೊಂದನ್ನು ಭೇಟಿಯಾದೆ. ಆ ಶಕ್ತಿಯೇ ಕುಸುಮಾ. ತನ್ನ ಸ್ಥಳೀಯ ಅಂಚೆ ಇಲಾಖೆಯಲ್ಲಿ ಅದ್ಭುತ ಕೆಲಸ ಮಾಡುತ್ತಿರುವ ಗಮನಾರ್ಹ ಯುವತಿ ಈಕೆ. ಹಣಕಾಸು ಅಭಿವೃದ್ಧಿಯನ್ನು ವೇಗಗೊಳಿಸಲು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಭಾರತವು ಮುಂಚೂಣಿಯಲ್ಲಿದೆ. ಇದನ್ನೂ ಓದಿ: ಇನ್ಮುಂದೆ ಲಗೇಜ್‌ಗಳನ್ನು ಸಾಗಿಸಲು ರಸ್ತೆಗಿಳಿಯಲಿದೆ KSRTC ಲಾರಿ

    ಕುಸುಮಾರಂತಹ ಅಂಚೆ ಕಚೇರಿ ಪೋಸ್ಟ್ಮಾಸ್ಟರ್‌ಗಳು ಭಾರತದಾದ್ಯಂತ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳನ್ನು ನೀಡಲು ಸ್ಮಾರ್ಟ್‌ಫೋನ್ ಸಾಧನಗಳು ಮತ್ತು ಬಯೋಮೆಟ್ರಿಕ್‌ಗಳನ್ನು ಬಳಕೆ ಮಾಡುತ್ತಿರುವುದು ಗಮನಾರ್ಹ. ಆಕೆ ಕೇವಲ ಹಣಕಾಸು ಸೇವೆಗಳನ್ನು ಒದಗಿಸುತ್ತಿಲ್ಲ, ಬದಲಾಗಿ ತನ್ನ ಸಮುದಾಯಕ್ಕೆ ಭರವಸೆ ಮತ್ತು ಆರ್ಥಿಕ ಸಬಲೀಕರಣವನ್ನು ನೀಡುತ್ತಿದ್ದಾಳೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರು ಉತ್ತರ ಗೆಲ್ಲಲು ಡಿಕೆಶಿ ರಣತಂತ್ರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೆಚ್ಚುತ್ತಿದೆ ಸೈಬರ್ ಕ್ರೈಮ್, ಎಚ್ಚರಿಕೆ ಇರಲಿ – ಯಾವ ರೀತಿ ಅಪರಾಧ ಎಸಗುತ್ತಾರೆ?

    ಹೆಚ್ಚುತ್ತಿದೆ ಸೈಬರ್ ಕ್ರೈಮ್, ಎಚ್ಚರಿಕೆ ಇರಲಿ – ಯಾವ ರೀತಿ ಅಪರಾಧ ಎಸಗುತ್ತಾರೆ?

    ತಂತ್ರಜ್ಞಾನ ಕ್ಷೇತ್ರ ಮುಂದುವರಿದಂತೆ ಅದರಿಂದ ಅನುಕೂಲತೆಗಳು ಹುಟ್ಟಿಕೊಳ್ಳುತ್ತಿವೆ. ಎಲ್ಲಾ ವ್ಯವಹಾರಗಳೂ ಡಿಜಿಟಲೀಕರಣಗೊಳ್ಳುತ್ತಿರುವ ಈ ಸಮಯದಲ್ಲಿ ಕಿಡಿಗೇಡಿಗಳು ತಂತ್ರಜ್ಞಾನ ಕ್ಷೇತ್ರದಲ್ಲೂ ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಮನೆ ದರೋಡೆ, ಕಳ್ಳತನಕ್ಕಿಂತ ಹೆಚ್ಚಾಗಿ ಸೈಬರ್ ಮೂಲಕವೇ ಈಗ ಹೆಚ್ಚಿನ ವಂಚನೆಗಳು ನಡೆಯುತ್ತಿದೆ. ಅಲ್ಲದೇ ಇನ್ನೂ ಅನೇಕ ರೀತಿಯ ಅಪರಾಧಗಳು ಇಂಟರ್‌ನೆಟ್ (Internet) ಮುಖಾಂತರವೇ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಇದು ಹೆಚ್ಚಾಗುವ ಆತಂಕ ಕೂಡ ಇದೆ.

    ಕಳೆದ 2021-2022 ರ ಅವಧಿಯಲ್ಲಿ ಭಾರತದಲ್ಲಿ 8,84,863 ಸೈಬರ್ ಕ್ರೈಮ್‌ (Cybercrime )ಪ್ರಕರಣಗಳು ನಡೆದಿದ್ದು, 1,376 ಮಕ್ಕಳ ವಿರುದ್ಧದ ಸೈಬರ್ ಕ್ರೈಮ್ ಪ್ರಕರಣಗಳು ನಡೆದಿವೆ. 2023ರಲ್ಲಿ ಪ್ರತಿ ಗಂಟೆಗೆ 97 ಸೈಬರ್ ಅಪರಾಧಗಳು ಜರಗುತ್ತಿವೆ. ಅಂದರೆ ದಿನಕ್ಕೆ 2,328 ಪ್ರಕರಣಗಳು ನಡೆಯುತ್ತಿದ್ದು, ಅದರಲ್ಲಿ ಕೋಲ್ಕತ್ತಾ, ತೆಲಂಗಾಣ ಹಾಗೂ ಕರ್ನಾಟಕ ಮುಂಚೂಣಿಯಲ್ಲಿವೆ. ಇದನ್ನೂ ಓದಿ: ಹಿರಿಯ ವಕೀಲ ಮುಕುಲ್ ರೋಹಟಗಿ ಭೇಟಿಯಾದ ಡಿಸಿಎಂ

    ರಾಜ್ಯದಲ್ಲಿ ಸೈಬರ್ ಕ್ರೈಮ್‍ಗಳನ್ನು ತಡೆಗಟ್ಟುವ ಉದ್ದೇಶದಿಂದ 2001ರಲ್ಲೇ ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ಸೈಬರ್ ಪೊಲೀಸ್ ಘಟಕವನ್ನು ಸ್ಥಾಪಿಸಲಾಗಿದೆ. ಅಲ್ಲದೇ ರಾಜ್ಯದ ಇತರ ಜಿಲ್ಲೆಗಳಲ್ಲೂ ಜನರಿಗೆ ಎದುರಾಗುವ ಸಮಸ್ಯೆಗಳನ್ನು ಅರಿತು ಜಿಲ್ಲಾ ಕೇಂದ್ರಗಳಲ್ಲೂ ಸೈಬರ್ ಪೊಲೀಸ್ ಘಟಕಗಳನ್ನು ಸ್ಥಾಪಿಸಲಾಗಿದೆ. ಅಲ್ಲದೇ ದೇಶಾದ್ಯಂತ ಸೈಬರ್ ಅಪರಾಧಗಳ ತಡೆಗೆ ಜಾಗೃತಿ ಮೂಡಿಸುವ ಕೆಲಸಗಳನ್ನು ಸರ್ಕಾರ ಮಾಡಿದೆ. ಈ ರೀತಿಯಾಗಿ ಸೈಬರ್ ಕ್ರೈಮ್ ತಡೆಯಲು ಕ್ರಮ ಕೈಗೊಂಡರು ಸಹ ಸಾರ್ವಜನಿಕರು ತಿಳುವಳಿಕೆಯ ಕೊರತೆಯಿಂದ ಸೈಬರ್ ಸುಲಿಗೆಗೆ ಒಳಗಾಗುತ್ತಿದ್ದಾರೆ.

    ನಕಲಿ ಸಂದೇಶಗಳು
    ವ್ಯಕ್ತಿಗೆ ಇ-ಮೇಲ್ ಅಥವಾ ಎಸ್‍ಎಂಎಸ್ ಕಳುಹಿಸಿ ನಿಮಗೆ ನಮ್ಮ ಸಂಸ್ಥೆಯಿಂದ ಉಡುಗೊರೆ ನೀಡುತ್ತೇವೆ. ಅದರ ಕೊರಿಯರ್ ವೆಚ್ಚವನ್ನು ನೀವೇ ನೀಡಬೇಕು ಎಂದು ಹಣ ವಸೂಲಿ ಮಾಡುವುದು. ಆನ್‍ಲೈನ್ ಮೂಲಕ ಹಣ ಪಾವತಿಸಿದ ಮೇಲೆ ಖಾತೆಗೆ ಕನ್ನ ಹಾಕುವುದು. ಇಂತಹ ಜಾಲದಲ್ಲಿ ಅನೇಕ ಅಮಾಯಕರು ಸಿಕ್ಕಿ ಹಣ ಕಳೆದುಕೊಳ್ಳುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ ಆರೋಪಿಗಳು ಪತ್ತೆಯಾದರೆ, ಇನ್ನೂ ಕೆಲವು ಪ್ರಕರಣಗಳಲ್ಲಿ ಆರೋಪಿಗಳ ಪತ್ತೆ ಕಠಿಣವಾಗಿರುತ್ತದೆ.

    ಸಾಲದ ವಂಚನೆ
    ಸಾಲದ ಬಗ್ಗೆ ಹುಡುಕಾಟದಲ್ಲಿರುವವರನ್ನು ಕಡಿಮೆ ಬಡ್ಡಿ ದರದಲ್ಲಿ ಭಾರೀ ಮೊತ್ತದ ಸಾಲ ಕೊಡಿಸುವುದಾಗಿ ವಂಚಕರು ಆಮಿಷವೊಡ್ಡುತ್ತಾರೆ. ಬಳಿಕ ಮೊಬೈಲ್ ಅಥವಾ ಇಮೇಲ್‍ಗಳ ಮೂಲಕ ಬ್ಯಾಂಕ್ ಹಾಗೂ ದಾಖಲೆಗಳ ವಿವರ ಪಡೆದು ವಂಚಿಸುತ್ತಾರೆ. ಇಲ್ಲವೇ ಒಟಿಪಿ ಕಳುಹಿಸಿ ತಿಳಿಸುವಂತೆ ಹೇಳಿ ಈ ಮೂಲಕ ಈಗಾಗಲೇ ಬ್ಯಾಂಕ್‍ನಲ್ಲಿ ಇರುವ ಹಣವನ್ನು ದೋಚುತ್ತಾರೆ.

    ಒಟಿಪಿ ವಂಚನೆಗಳು
    ವಂಚಕರು ಕರೆ ಮಾಡಿ ಬ್ಯಾಂಕ್‍ನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ, ಈ ವೇಳೆ ಮೊಬೈಲ್‍ಗೆ ಬಂದಿರುವ ಒಟಿಪಿಯನ್ನು (OTP) ತಿಳಿಸುವಂತೆ ಸೂಚಿಸುತ್ತಾರೆ. ಈ ವೇಳೆ ಒಟಿಪಿ ಹಂಚಿಕೊಂಡರೆ ಖಾತೆಯಲ್ಲಿರುವ ಹಣ ಕ್ಷಣಾರ್ಧದಲ್ಲಿ ವಂಚಕರ ಜೇಬು ಸೇರಲಿದೆ. ಇಂಥ ಕರೆಗಳು ಬಂದಾಗ ಯಾರಿಗೂ ಒಟಿಪಿ, ಎಟಿಎಂ ಪಿನ್ ನಂಬರ್‍ಗಳನ್ನು ತಿಳಿಸಬಾರದು. ಯಾವುದೇ ಬ್ಯಾಂಕ್ ತನ್ನ ಖಾತೆದಾರರಿಗೆ ಸಿವಿವಿ, ಒಟಿಪಿ, ಎಟಿಎಂ ಪಿನ್ ಇವ್ಯಾವುದನ್ನೂ ಕೇಳುವುದಿಲ್ಲ. ಆ ರೀತಿ ಕೇಳಿ ಕರೆ ಬಂದರೆ ಅದು ವಂಚನೆಯ ಕರೆ ಎಂದು ತಿಳಿಯಬೇಕು.

    ಆನ್‍ಲೈನ್ ಜಾಹಿರಾತುಗಳ ವಂಚನೆ
    ಇದರಲ್ಲಿ ವಂಚಕರು ಅಸ್ತಿತ್ವದಲ್ಲೇ ಇರದ ವಾಹನ, ಆಸ್ತಿ ಮಾರಾಟಕ್ಕಿದೆ ಎಂದು ವೆಬ್‍ಸೈಟ್‍ನಲ್ಲಿ ಪ್ರಕಟಿಸಿ ಗ್ರಾಹಕರಿಂದ ಹಣ ಪಡೆದು ವಂಚನೆ ನಡೆಸುತ್ತಾರೆ. ಅಲ್ಲದೇ ಜಾಹಿರಾತನ್ನು ವಿಶ್ವಾಸಾರ್ಹ ಎಂದು ನಂಬಿಸಿ ಹಣ ಕೂಡ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಬಳಿಕ ನಾಪತ್ತೆಯಾಗುತ್ತಾರೆ. ಇದಾದ ಮೇಲೆ ಯಾವ ಪ್ರತಿಕ್ರಿಯೆಯೂ ಇಲ್ಲದ ಬಳಿಕ ಗ್ರಾಹಕನಿಗೆ ವಂಚನೆಗೊಳಗಾಗಿರುವುದು ತಿಳಿಯುತ್ತದೆ.

    ಕ್ರಿಪ್ಟೋ ಕರೆನ್ಸಿ ವಂಚನೆ
    ಇದರಲ್ಲಿ ಬಿಟ್ ಕಾಯಿನ್ ರೂಪದಲ್ಲಿ ಹಣ ದ್ವಿಗುಣಗೊಳಿಸುವುದಾಗಿ ಆಮಿಷವೊಡ್ಡಲಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ಯಾರಿಗೂ ಯಾವುದೇ ಸಂಸ್ಥೆಗೂ ವರ್ಚುವಲ್ ಕರೆನ್ಸಿಯ ರೂಪದಲ್ಲಿ ಹಣ ದ್ವಿಗುಣಗೊಳಿಸುವ ವ್ಯವಹಾರಕ್ಕೆ ಲೈಸೆನ್ಸ್ ನೀಡಿಲ್ಲ.

    ಹನಿಟ್ರ್ಯಾಪ್/ ಬ್ಲಾಕ್‍ಮೇಲ್ ಪ್ರಕರಣ
    ಇತ್ತೀಚೆಗೆ ನಗ್ನ ಚಿತ್ರಗಳನ್ನು ಬಳಸಿ ಕಿಡಿಗೇಡಿಗಳು ವ್ಯುಕ್ತಿಗಳನ್ನು ಬ್ಲಾಕ್‍ಮೇಲ್ ಮಾಡಿ ವಂಚಿಸುವ ಹೆಚ್ಚಿನ ಪ್ರಕರಣಗಳು ನಡೆಯುತ್ತಿವೆ. ಡೇಟಿಂಗ್ ಆಪ್‍ಗಳ ಮೂಲಕ ಮಹಿಳೆಯರಿಂದ ವ್ಯಕ್ತಿಗಳಿಗೆ ವಿಡಿಯೋ ಕರೆ ಮಾಡಿ ಅದನ್ನು ಬೇಕಾದಂತೆ ತಿರುಚಿ ಹಣಕ್ಕೆ ಬೇಡಿಕೆ ಇಡುವ ಎಷ್ಟೋ ಪ್ರಕರಣಗಳು ವರದಿಯಾಗಿವೆ.

    ಹ್ಯಾಕಿಂಗ್
    ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ಹ್ಯಾಕ್ (Hacking) ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹ್ಯಾಕ್ ಮಾಡಿ ಕಿಡಿಗೇಡಿಗಳು ತಮ್ಮ ದುರುದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆ ಸಾಮಾಜಿಕ ಜಾಲತಾಣದ ಸಂಪರ್ಕದಲ್ಲಿರುವವರಿಂದ ಹಣಕ್ಕೆ ಬೇಡಿಕೆ ಇಡುವುದು, ಅಲ್ಲದೇ ನಿಗದಿತ ದುರುದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ನಕಲಿ ಖಾತೆಗಳನ್ನು ಸೃಷ್ಟಿಸಿ ಕಿಡಿಗೇಡಿಗಳು ಇದೇ ರೀತಿಯಾಗಿ ಬಳಕೆ ಮಾಡಿಕೊಳ್ಳುತ್ತಾರೆ.

    ಆನ್‍ಲೈನ್ ವಂಚನೆಯಾಗದಂತೆ ಸುರಕ್ಷಿತವಾಗಿ ಇಂಟರ್‌ನೆಟ್ ಬಳಕೆ ಮಾಡುವುದು ಈ ದಿನಗಳಲ್ಲಿ ಸವಾಲಾಗಿದೆ. ಆದರೂ ಸೂಕ್ತ ಮುನ್ನೆಚ್ಚರಿಕೆಯಿಂದಾಗಿ ಸೈಬರ್ ವಂಚನೆಯಿಂದ ಪಾರಾಗಲು ಅವಕಾಶವಿದೆ. ಇಂಟರ್‌ನೆಟ್ ಸಂಬಂಧಿತ ವ್ಯವಹಾರಗಳ ಪಾಸ್‍ವರ್ಡ್ ಯಾರಿಗೂ ನೀಡದಿರುವುದು, ಹಾಗೂ ಕ್ಲಿಷ್ಟಕರವಾದ ಪಾಸ್‍ವರ್ಡ್ ಇಟ್ಟುಕೊಳ್ಳುವುದು. ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರೊಂದಿಗೆ ವ್ಯವಹರಿಸದಿರುವುದು, ಆಧಿಕೃತವಲ್ಲದ ಆಪ್‍ಗಳನ್ನು ಡೌನ್‍ಲೋಡ್ ಮಾಡದೇ ಇರುವುದು ಸೈಬರ್ ವಂಚನೆಗೆ ಒಳಗಾಗದಂತೆ ಇರುವ ಮಾರ್ಗಗಳು.

    ಇದಾಗಿಯೂ ವಂಚನೆಗೆ ಒಳಗಾದರೆ ಸೈಬರ್ ಕ್ರೈಮ್ ದೂರು ದಾಖಲಿಸಿ ಪರಿಹಾರ ಪಡೆಯಲು ಅವಕಾಶ ಇದೆ. ಆದರೆ ಪ್ರಪಂಚದ ಯಾವುದೋ ಮೂಲೆಯಲ್ಲಿಂದ ನಿಮಗೆ ಅನ್ಯಾಯವಾಗಿದ್ದರೆ ಅದಕ್ಕೆ ನ್ಯಾಯ ಒದಗಿಸಲು ಸಾಧ್ಯವೇ? ಇದರಿಂದ ಸೈಬರ್ ವಿಚಾರದಲ್ಲಿ ಜಾಗ್ರತೆ ವಹಿಸುವುದೊಂದೆ ಮೊದಲ ಪರಿಹಾರವಾಗಿ ಕಾಣುತ್ತದೆ.

    ಪಿಂಕ್ ವಾಟ್ಸಾಪ್ ಬಳಕೆ ಸೈಬರ್ ವಂಚನೆಗೆ ಆಹ್ವಾನ ಕೊಟ್ಟಂತೆ ಎಂದು ಆಂಡ್ರಾಯ್ಡ್ ಬಳಕೆದಾರರಿಗೆ ಮುಂಬೈ ಪೊಲೀಸರು ಇತ್ತೀಚೆಗೆ ಎಚ್ಚರಿಕೆ ನಿಡಿರುವುದನ್ನು ನಾವಿಲ್ಲಿ ಗಮನಿಸಬಹುದು. ಅಲ್ಲದೇ ಪ್ರಕರಣವೊಂದರ ತನಿಖೆ ವೇಳೆ ಫೇಸ್‍ಬುಕ್ ಖಾತೆಗಳನ್ನು ಹ್ಯಾಕ್ ಮಾಡಿ ಅವಹೇಳನಕಾರಿ ಮತ್ತು ನಿಂದನಾತ್ಮಕ ಬರಹಗಳನ್ನು ಬಿತ್ತರಿಸುವ ದೊಡ್ಡ ಜಾಲವೇ ಕೆಲಸ ಮಾಡುತ್ತಿರುವಂತಿದೆ ಎಂದು ಕರ್ನಾಟಕ ಹೈಕೋರ್ಟ್ ಶಂಕೆ ವ್ಯಕ್ತಪಡಿಸಿದ್ದು ಇಲ್ಲಿ ಗಮನಾರ್ಹ ವಿಚಾರವಾಗಿದೆ. ಇದನ್ನೂ ಓದಿ: ಅನ್ನಭಾಗ್ಯದ ದುಡ್ಡಿಗಾಗಿ ಬ್ಯಾಂಕ್ ಖಾತೆ ಜೊತೆ ಆಧಾರ್ ಲಿಂಕ್ ಕಡ್ಡಾಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಗದ ರಹಿತವಾದ ಕೇರಳದ 3 ಕೋರ್ಟ್‌ – ಆ.1ರಿಂದ ಕೇರಳ ಹೈಕೋರ್ಟ್‌ನಲ್ಲೂ ಚಾಲನೆ

    ಕಾಗದ ರಹಿತವಾದ ಕೇರಳದ 3 ಕೋರ್ಟ್‌ – ಆ.1ರಿಂದ ಕೇರಳ ಹೈಕೋರ್ಟ್‌ನಲ್ಲೂ ಚಾಲನೆ

    ತಿರುವನಂತಪುರಂ: ತಂತ್ರಜ್ಞಾನ ಬೆಳೆದಂತೆ ಈಗ ಪ್ರತಿಯೊಬ್ಬರ ಕೈಯಲ್ಲೂ ಟಚ್‌ಸ್ಕ್ರೀನ್‌ ಮೊಬೈಲ್‌ಗಳಿವೆ. ಕಂಪ್ಯೂಟರ್‌ ಬಳಕೆಯೂ ಹೆಚ್ಚಾಗಿದೆ. ಡಿಜಿಟಲೀಕರಣ ಹಾಗೂ ಪರಿಸರ ಕಾಳಜಿ ಪ್ರೋತ್ಸಾಹಕ್ಕೆ ಕೇರಳದ ಮೂರು ಕೋರ್ಟ್‌ಗಳು ಮುಂದಾಗಿದ್ದು, ಕೋರ್ಟ್‌ಗಳಲ್ಲಿ ಕಾಗದ ರಹಿತ ನ್ಯಾಯಾಂಗ ವ್ಯವಸ್ಥೆ ಜಾರಿಗೆ ಮುನ್ನುಡಿ ಬರೆದಿವೆ.

    ಕೇರಳದ 3 ಕೋರ್ಟ್‌ಗಳಲ್ಲಿ ಕಾಗರ ರಹಿತ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದೆ. ಕೇರಳ ಹೈಕೋರ್ಟ್ ಆ.1ರಿಂದ ಇದನ್ನು ಅಳವಡಿಸಿಕೊಂಡಿದೆ. ನ್ಯಾಯಾಂಗ ವ್ಯವಸ್ಥೆಯ ಯಾವುದೇ ಕಾರ್ಯ ಹಾಗೂ ಪ್ರಕ್ರಿಯೆಗಳು ಕಾಗದ ರಹಿತವಾಗಿ ನಡೆಯಲಿವೆ. ಇದನ್ನೂ ಓದಿ: ಇಂದು ಮಾಲ್ಡೀವ್ಸ್ ಅಧ್ಯಕ್ಷರನ್ನು ಭೇಟಿಯಾಗಲಿರುವ ಮೋದಿ

    ಈ ಕ್ರಮ ಪರಿಸರ ಸ್ನೇಹಿಯಾಗಿದೆ. ಸಮಯ ಉಳಿತಾಯ ಮತ್ತು ವೆಚ್ಚ ಕಡಿಮೆಗೊಳಿಸಲು ಸಹಕಾರಿಯಾಗಿದೆ. ದೊಡ್ಡ ದೊಡ್ಡ ಫೈಲ್‌ಗಳನ್ನು ಸಾಗಿಸುವ ಪರಿಪಾಠವೂ ತಪ್ಪುತ್ತದೆ ಎಂದು ಹೈಕೋರ್ಟ್‌ನ ಕ್ರಮವನ್ನು ವಕೀಲರು ಸ್ವಾಗತಿಸಿದ್ದಾರೆ.

    ಈ ಕ್ರಮದ ಬಗ್ಗೆ ಕೆಲವರು ಪ್ರಶ್ನಾರ್ಥಕವಾಗಿ ನೋಡುತ್ತಿದ್ದಾರೆ. ದಶಕಗಳಿಂದ ಪ್ರಕರಣಗಳ ಭೌತಿಕ ಫೈಲ್‌ಗಳಿಂದ ವಾದಿಸುತ್ತಿದ್ದವರಿಗೆ ಹೊಸ ವ್ಯವಸ್ಥೆಯು ಎಷ್ಟು ಸಹಾಯಕವಾಗಬಹುದು ಎಂದು ಕೇಳುತ್ತಿದ್ದಾರೆ. ಇದನ್ನೂ ಓದಿ: ಆಗಸ್ಟ್‌ 2 ವಿಶೇಷ ದಿನ; ನಾನು DP ಬದಲಾಯಿಸಿದ್ದೇನೆ, ನೀವೂ ಬದಲಾಯಿಸಿ – ಜನತೆಗೆ ಮೋದಿ ಕರೆ

    2017 ರಲ್ಲಿ ನಟಿಯೊಬ್ಬರ ಮೇಲಿನ ಹಲ್ಲೆ ಪ್ರಕರಣದಲ್ಲಿ ನಟ ದಿಲೀಪ್ ಅವರ ಪರ ವಾದ ಮಂಡಿಸುತ್ತಿರುವ ವಕೀಲ ಫಿಲಿಪ್ ಟಿ ವರ್ಗೀಸ್, ಹೈಕೋರ್ಟ್‌ ಕ್ರಮವನ್ನು ಸ್ವಾಗತಿಸಿದ್ದಾರೆ. ʻಈ ಕ್ರಮ ಕಾಗದ ಅಥವಾ ಭೌತಿಕ ಫೈಲ್‌ಗಳ ಬಳಕೆಯ ಮೇಲೆ ಸಂಪೂರ್ಣ ನಿಷೇಧವನ್ನು ಅರ್ಥೈಸುವುದಿಲ್ಲ. ಕಂಪ್ಯೂಟರ್ ಅಥವಾ ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಲು ಆಗದವರು ಭೌತಿಕ ಫೈಲ್‌ಗಳನ್ನು ಬಳಸುವ ಆಯ್ಕೆಯನ್ನು ಹೊಂದಿರುತ್ತಾರೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿವಿಗಳಲ್ಲಿ ಇ-ಆಫೀಸ್ ಕಡ್ಡಾಯ, ಮಾರ್ಚ್ 1ರವರೆಗೆ ಡೆಡ್‍ಲೈನ್: ಅಶ್ವತ್ಥ ನಾರಾಯಣ

    ವಿವಿಗಳಲ್ಲಿ ಇ-ಆಫೀಸ್ ಕಡ್ಡಾಯ, ಮಾರ್ಚ್ 1ರವರೆಗೆ ಡೆಡ್‍ಲೈನ್: ಅಶ್ವತ್ಥ ನಾರಾಯಣ

    ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ವಿಶ್ವವಿದ್ಯಾಲಯಗಳು ಮಾರ್ಚ್ 1ರಿಂದ ತನ್ನ ಎಲ್ಲ ಕಡತಗಳನ್ನು ಇ-ಕಚೇರಿ ಮೂಲಕವೇ ಅನ್‍ಲೈನ್‍ನಲ್ಲಿ ಕಳುಹಿಸುವುದನ್ನು ಕಡ್ಡಾಯ ಮಾಡಲಾಗಿದೆ. ಈ ಗಡುವಿನ ನಂತರ ಭೌತಿಕವಾಗಿ ಬರುವ ಎಲ್ಲ ಕಡತಗಳನ್ನು ವಾಪಸ್ ಕಳುಹಿಸುವಂತೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಈ ಬಗ್ಗೆ ತಮ್ಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ಇ-ಆಫೀಸ್ ತಂತ್ರಾಂಶದ ಮೂಲಕವೇ ಕಡತಗಳನ್ನು ಕಳುಹಿಸಲು ವಿ.ವಿ.ಗಳಿಗೆ ಈ ಹಿಂದೆಯೇ ಸೂಚಿಸಲಾಗಿತ್ತು. ಆದರೂ ಕೆಲ ವಿ.ವಿ.ಗಳಲ್ಲಿ ಈ ಕೆಲಸ ಆಗಿಲ್ಲದಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ:  ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ ಉಕ್ರೇನ್ ಕರೆ!

    ತಮ್ಮ ಕಚೇರಿಯು ಈಗಾಗಲೇ ಸಂಪೂರ್ಣವಾಗಿ ಇ-ಆಫೀಸ್ ತಂತ್ರಾಂಶದ ಮೇಲೆಯೇ ಕೆಲಸ ಮಾಡುತ್ತಿದೆ. ಆದರೆ ಇಲಾಖೆಗೆ ವಿ.ವಿ.ಗಳಿಂದ ಎಲ್ಲ ಪತ್ರಗಳು, ಕಡತಗಳು ಮತ್ತು ಪ್ರಸ್ತಾವನೆಗಳು ಭೌತಿಕ ರೂಪದಲ್ಲಿ ಬರುತ್ತಿವೆ. ಇದರಿಂದಾಗಿ ಇ-ಆಫೀಸ್ ತಂತ್ರಾಂಶ ಅಳವಡಿಕೆಯ ಮೂಲ ಉದ್ದೇಶವೇ ವಿಫಲವಾದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ಉಕ್ರೇನ್‍ನಲ್ಲಿ ಸಿಲುಕಿದ್ದಾರೆ 10 ಮಂದಿ ಕರ್ನಾಟಕ ವಿದ್ಯಾರ್ಥಿಗಳು!

    ವಿ.ವಿ.ಗಳ ಆಡಳಿತವೂ ಸೇರಿದಂತೆ ಪ್ರತಿಯೊಂದು ಕೆಲಸವೂ ತ್ವರಿತವಾಗಿ ಮತ್ತು ಪಾರದರ್ಶಕವಾಗಿ ನಡೆಯುವಂತೆ ಮಾಡಬೇಕೆನ್ನುವುದು ಇ-ಆಫೀಸ್ ತಂತ್ರಾಂಶದ ಗುರಿಯಾಗಿದೆ. ವಿ.ವಿ.ಗಳು ಸಮಕಾಲೀನ ಶೈಲಿಯನ್ನು ಅಳವಡಿಸಿಕೊಳ್ಳದಿದ್ದರೆ ಅಪ್ರಸ್ತುತವಾಗಲಿವೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

    ಎನ್‍ಇಪಿ ಅನುಸಾರ ವಿ.ವಿ.ಗಳಲ್ಲಿ ನಡೆಯುತ್ತಿರುವ ಡಿಜಿಟಲೀಕರಣ, ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಅಳವಡಿಕೆ, ರಾಷ್ಟ್ರೀಯ ಶೈಕ್ಷಣಿಕ ಕೋಶ (ಎನ್‍ಎಡಿ), ಇ-ಆಫೀಸ್ ಬಳಕೆಗೆ ವಿ.ವಿ.ಗಳಲ್ಲಿನ ಸಿಬ್ಬಂದಿಯನ್ನು ಹೇಗೆ ಸಿದ್ಧಗೊಳಿಸಲಾಗಿದೆ ಎನ್ನುವುದನ್ನು ಪರಿಶೀಲಿಸಲು ಒಂದು ಸಮಿತಿಯನ್ನು ರಚಿಸಿ, 15 ದಿನಗಳಲ್ಲಿ ತಮಗೆ ವರದಿ ನೀಡುವಂತೆಯೂ ಸೂಚಿಸಿದ್ದಾರೆ.

  • ಭಾರತದ UPI ವ್ಯವಸ್ಥೆ ಅಳವಡಿಸಿಕೊಂಡ ನೇಪಾಳ

    ಕಠ್ಮಂಡು: ಭಾರತದ UPI ವ್ಯವಸ್ಥೆಯನ್ನು ನೇಪಾಳ ಅಳವಡಿಸಿಕೊಳ್ಳುತ್ತಿದ್ದು, ಮೊದಲ ದೇಶ ಎನಿಸಿಕೊಳ್ಳುತ್ತಿದೆ. ಇದು ನೆರೆಯ ದೇಶದ ಡಿಜಿಟಲ್ ಆರ್ಥಿಕತೆಯನ್ನು ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ(NPCI) ತಿಳಿಸಿದೆ.

    NPCI ಇಂಟರ್‌ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್(NIPL) NPCIಯ ಅಂತರಾಷ್ಟ್ರೀಯ ಅಂಗವಾಗಿದ್ದು, ನೇಪಾಳದಲ್ಲಿ ಸೇವೆಗಳನ್ನು ಒದಗಿಸಲು ಗೇಟ್‍ವೇ ಪೇಮೆಂಟ್ ಸರ್ವಿಸ್(GPS) ಹಾಗೂ ಮನಮ್ ಇನ್ಫೋಟೆಕ್‍ನೊಂದಿಗೆ ಕೈಜೋಡಿಸಿದೆ. ಇದನ್ನೂ ಓದಿ: ಸಂಜ್ಞಾ ಭಾಷೆ ಅರ್ಥಮಾಡಿಕೊಳ್ಳುವ ಎಐ ಮಾದರಿಯನ್ನು ಅಭಿವೃದ್ಧಿ ಪಡಿಸಿದ 20ರ ಯುವತಿ

    ಈ ಸಹಯೋಗದಿಂದ ನೇಪಾಳದಲ್ಲಿ ದೊಡ್ಡ ಡಿಜಿಟಲ್ ಸಾರ್ವಜನಿಕ ಸೇವೆ ಪೂರೈಕೆಯಾಗಲಿದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ(P2P) ಹಾಗೂ ವ್ಯಕ್ತಿಯಿಂದ ವ್ಯಾಪಾರಿ(P2M) ವಹಿವಾಟುಗಳನ್ನು ಉತ್ತೇಜಿಸುತ್ತದೆ ಎಂದು ಎನ್‍ಪಿಸಿಐ ತಿಳಿಸಿದೆ. ಇದನ್ನೂ ಓದಿ: ವಿರಾಟ್ ಅಭಿಮಾನಿಗಳಿಗಿಲ್ಲ ಗಡಿರೇಖೆ – ಪಾಕ್ ಕ್ರಿಕೆಟ್ ಲೀಗ್‍ನಲ್ಲಿ ರಾರಾಜಿಸಿದ ಕೊಹ್ಲಿ ಪೋಸ್ಟರ್

    ಭಾರತದ UPI ವ್ಯವಸ್ಥೆಯನ್ನು ಅಳವಡಿಸಿಕೊಂಡು ನಗದು ವಹಿವಾಟುಗಳನ್ನು ಡಿಜಿಟಲೀಕರಣವಾಗಿ ಬದಲಾವಣೆ ಮಾಡುತ್ತಿರುವ ಮೊದಲ ದೇಶ ನೇಪಾಳ ಎಂದು ತಿಳಿಸಿದೆ.

  • ಡಿಜಿಟಲೀಕರಣದಲ್ಲಿ ಭಾರತ ಅಮೆರಿಕಕ್ಕೂ ಮಾದರಿ: ಅಶ್ವತ್ಥನಾರಾಯಣ

    ಡಿಜಿಟಲೀಕರಣದಲ್ಲಿ ಭಾರತ ಅಮೆರಿಕಕ್ಕೂ ಮಾದರಿ: ಅಶ್ವತ್ಥನಾರಾಯಣ

    ಬೆಂಗಳೂರು: ಹಲವು ಇತಿಮಿತಿಗಳ ನಡುವೆಯೂ ಭಾರತದಲ್ಲಿ ಆಗಿರುವಷ್ಟು ಡಿಜಿಟಲೀಕರಣ ಪ್ರಪಂಚದ ಬೇರಾವ ದೇಶದಲ್ಲೂ ಆಗಿಲ್ಲ. ಈ ವಿಷಯದಲ್ಲಿ ದೇಶವು ಅಮೆರಿಕದಂತಹ ದೈತ್ಯರಾಷ್ಟ್ರಕ್ಕೂ ಮಾದರಿಯಾಗಿದ್ದು, ಇವತ್ತು ಇಡೀ ವಿಶ್ವವೇ ನಮ್ಮನ್ನು ಅನುಸರಿಸುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

    ಎಫ್‌.ಕೆ.ಸಿ.ಸಿ.ಐ ಏರ್ಪಡಿಸಿದ್ದ 14ನೇ ವರ್ಷದ ಮಂಥನ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದ ಅವರು, ದೇಶದಲ್ಲಿ ಅನಕ್ಷರತೆ, ಬಡತನ ಮತ್ತು ಮೂಲಸೌಲಭ್ಯಗಳ ಕೊರತೆ ಇನ್ನೂ ಇದೆ. ಇವೆಲ್ಲವನ್ನೂ ಕಿತ್ತೊಗೆಯಬೇಕೆಂದರೆ ತಂತ್ರಜ್ಞಾನಕ್ಕಿಂತ ಅತ್ಯುತ್ತಮ ಸಾಧನ ಇನ್ನೊಂದಿಲ್ಲ. ಇದನ್ನು ಅರಿತಿರುವ ಪ್ರಧಾನಿ ನರೇಂದ್ರ ಮೋದಿ, ಡಿಜಿಟಲೀಕರಣದ ಕ್ರಾಂತಿಯನ್ನೇ ಸಾಧಿಸುತ್ತಿದ್ದಾರೆ ಎಂದರು. ಇದನ್ನೂ ಓದಿ: ಸಮವಸ್ತ್ರ ಜಾರಿ ಸಿ.ಡಿ.ಸಿ ನಿರ್ಧಾರ ಅಂದ್ರು ಎಜಿ- ಸೋಮವಾರ ಹೈಕೋರ್ಟ್‍ಗೆ ಮಧ್ಯಂತರ ಅರ್ಜಿ

    ಇಂದು ಬೆಂಗಳೂರು ಉದ್ಯಮಶೀಲತೆ, ತಂತ್ರಜ್ಞಾನ, ನವೋದ್ಯಮ, ನಾವೀನ್ಯತೆ, ಆವಿಷ್ಕಾರ ರಂಗಗಳಲ್ಲಿ ಜಗತ್ತಿನ ಅಗ್ರಮಾನ್ಯ 30 ನಗರಗಳಲ್ಲಿ ಒಂದಾಗಿದೆ. ದೇಶದಲ್ಲಂತೂ ಬೆಂಗಳೂರನ್ನು ಉಳಿದ ನಗರಗಳು ಅನುಸರಿಸುತ್ತಿವೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರವು ನಾವೀನ್ಯತಾ ಪ್ರಾಧಿಕಾರ ರಚನೆ ಸೇರಿದಂತೆ ಹತ್ತು‌ ಹಲವು ಉಪಕ್ರಮಗಳನ್ನು ಜಾರಿಗೆ ತಂದಿದ್ದು, ಉದ್ದಿಮೆಗಳ ಬೆಳವಣಿಗೆಗೆ ನಿರ್ಣಾಯಕ ಸಹಕಾರ ನೀಡುತ್ತಿದೆ ಎಂದರು. ಇದನ್ನೂ ಓದಿ: ವಿದ್ಯಾರ್ಥಿನಿಗೆ ಶರ್ಟ್ ಬಿಚ್ಚಿಕೊಡಲು ಮುಂದಾದ ಕಾಫಿನಾಡಿನ ಸರ್ಕಲ್ ಇನ್ಸ್‌ಪೆಕ್ಟರ್

    ಸಬ್ಸಿಡಿ, ಸಾಲ, ರಿಯಾಯಿತಿ ಮತ್ತು ವಿನಾಯಿತಿಗಳ ಆಧಾರದ ಮೇಲೆ ಉದ್ದಿಮೆಗಳನ್ನು ಬೆಳೆಸಲು ಸಾಧ್ಯವಿಲ್ಲ. ಜಾಗತಿಕ ಸ್ಪರ್ಧೆಯ ಈ ದಿನಮಾನದಲ್ಲಿ ಅತ್ಯುತ್ತಮ ಗುಣಮಟ್ಟವೊಂದೇ ನಮ್ಮ ಅಸ್ತಿತ್ವಕ್ಕೆ ಆಧಾರವಾಗಿದೆ. ಈಗ ಜಾರಿಗೆ ಬರುತ್ತಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಈ ನಿಟ್ಟಿನಲ್ಲಿ ದಾರಿದೀಪವಾಗಿದೆ ಎಂದು ತಿಳಿಸಿದರು.

  • ನೆಟ್ ಇಲ್ಲದೇ ಮೊಬೈಲಿನಿಂದ ಹಣ ಪಾವತಿಸಿ – ಏನಿದು ಇ-ರುಪೀ?

    ನೆಟ್ ಇಲ್ಲದೇ ಮೊಬೈಲಿನಿಂದ ಹಣ ಪಾವತಿಸಿ – ಏನಿದು ಇ-ರುಪೀ?

    – ಚಾಲನೆ ನೀಡಿದ ಪ್ರಧಾನಿ ಮೋದಿ

    ನವದೆಹಲಿ: ದೇಶದಲ್ಲಿ ಡಿಜಿಟಲೀಕರಣ ಅತೀ ವೇಗವಾಗಿ ಹಬ್ಬುತ್ತಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ಪಾವತಿಗೆ ಹೊಸ ಸ್ಪರ್ಶ ನೀಡಲು ಮುಂದಾಗಿದ್ದು, ಇ-ರುಪೀಗೆ ಪ್ರಧಾನಿ  ಚಾಲನೆ ನೀಡಿದ್ದಾರೆ.

    ದೇಶದಲ್ಲಿ ಈಗಾಗಲೇ ಪ್ರತಿ ಕ್ಷೇತ್ರದಲ್ಲಿ ಡಿಜಿಟಲೀಕರಣ ವೇಗ ಪಡೆದುಕೊಂಡಿದೆ. ನೋಟು ಅಮಾನ್ಯದ ಬಳಿಕ ಡಿಜಿಟಲ್ ಪೇಮೆಂಟ್ ಭಾರತದಲ್ಲಿ ಹೊಸ ಬದಲಾವಣೆಯನ್ನು ತಂದಿದೆ. ದೊಡ್ಡ ದೊಡ್ಡ ವ್ಯಾಪಾರಿಯಿಂದ ಹಿಡಿದು ಸಣ್ಣ ವ್ಯಾಪಾರಿ ಕೂಡ ಕ್ಯೂಆರ್ ಕೋಡ್ ಬಳಸಿ ನಗದು ರಹಿತ ವ್ಯವಹಾರ ನಡೆಸುತ್ತಿದ್ದಾರೆ. ಈಗ ಇಂಟರ್‍ ನೆಟ್ ಸಂಪರ್ಕ ಇಲ್ಲದೇ ಹಣವನ್ನು ಕಳುಹಿಸಬಹುದಾದ ಸೇವೆಗೆ ಮೋದಿ ಚಾಲನೆ ನೀಡಿದರು.

    ಏನಿದು ಇ-ರುಪೀ?
    ಡಿಜಿಟಲ್ ಪಾವತಿಯನ್ನು ಸರಳಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಹೊಸ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದೆ. ಇದು ನಗದು ರಹಿತವಾಗಿ, ಇಂಟರ್‍ ನೆಟ್ ಸಂಪರ್ಕವಿಲ್ಲದೆ, ಕ್ಯೂಆರ್ ಕೋಡ್ ಅಥವಾ ಎಸ್‍ಎಂಎಸ್ ಆಧಾರಿತ ಇ-ವೋಚರ್‍ ನ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದೆ. ಇದನ್ನೂ ಓದಿ: ಠಾಣೆಗೆ ಮುತ್ತಿಗೆ ಹಾಕಿದ ಆಫ್ರಿಕಾ ಪ್ರಜೆಗಳ ವಿರುದ್ಧ ಲಾಠಿಚಾರ್ಜ್

    ಯಾರು ಇ-ರುಪೀ ಫಲಾನುಭವಿಗಳಿರುತ್ತಾರೋ ಅವರ ಮೊಬೈಲ್‍ಗೆ ಸಂದೇಶದ ಮೂಲಕ ಕಳುಹಿಸಬಹುದು. ಕಾರ್ಡ್, ಡಿಜಿಟಲ್ ಪಾವತಿ ತಂತ್ರಾಂಶ ಅಥವಾ ಇಂಟರ್ನೆಟ್ ಬ್ಯಾಕಿಂಗ್ ಬಳಸದೇ ಇ-ರುಪೀ ಸಂದೇಶದ ಮೂಲಕ ವೋಚರ್ ಬಳಸಬಹುದಾಗಿದೆ.

    ಹಣಕಾಸು ಸೇವೆಗಳ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಯೋಗದೊಂದಿಗೆ ಈ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ.

    ದೇಶದಲ್ಲಿ ಈಗಾಗಲೇ ಕೊರೊನಾದಿಂದಾಗಿ ಶಿಕ್ಷಣ ಕ್ಷೇತ್ರದಲ್ಲೂ ಡಿಜಿಟಲ್ ಬದಲಾವಣೆಗಳು ನಡೆಯುತ್ತಿವೆ. ಇದರೊಂದಿಗೆ ಇದೀಗ ಡಿಜಿಟಲ್ ಕ್ಷೇತ್ರಕ್ಕೆ ಇ-ರುಪೀ ಕಾಲಿಡುತ್ತಿದೆ.