Tag: ಡಿಜಿಎಂಒ

  • Operation Sindoor| ಪಾಕಿನ 100ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದಾರೆ:DGMO

    Operation Sindoor| ಪಾಕಿನ 100ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದಾರೆ:DGMO

    ನವದೆಹಲಿ: ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆಯ ಸಂದರ್ಭದಲ್ಲಿ ಪಾಕಿಸ್ತಾನದ 100ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ಸೇನೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ (DGMO) ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ (Lt Gen Rajiv Ghai) ಹೇಳಿದ್ದಾರೆ.

    ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳಿಗೆ ಸೈನ್ಯವನ್ನು ಕೊಡುಗೆ ನೀಡುವ 34 ರಾಷ್ಟ್ರಗಳ ಸೇನಾ ಮುಖ್ಯಸ್ಥರ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, ಪಾಕಿಸ್ತಾನಕ್ಕೆ ಭಾರೀ ಪ್ರಮಾಣದ ಮಿಲಿಟರಿ ನಷ್ಟವನ್ನು ಅನುಭವಿಸಿದೆ. ನಾಲ್ಕು ದಿನಗಳ ಸಂಘರ್ಷದ ಸಮಯದಲ್ಲಿ ಪಾಕಿಸ್ತಾನದ(Pakistan) ಕನಿಷ್ಠ 12 ವಿಮಾನಗಳನ್ನು ಕಳೆದುಕೊಂಡಿದೆ ಎಂದು ತಿಳಿಸಿದರು. ಇದನ್ನೂ ಓದಿ:  ಟಾಟಾ ಮೋಟಾರ್ಸ್ ಷೇರು ಮೌಲ್ಯ 40% ಕುಸಿತವಾದ್ರೂ ಆತಂಕ ಪಡೋ ಅಗತ್ಯವಿಲ್ಲ: ನಿಜವಾಗಿ ಆಗಿದ್ದೇನು?

    ಸಾವುನೋವುಗಳಿಗೆ ಸಾಕ್ಷಿಯಾಗಿ ಪಾಕಿಸ್ತಾನದ ಮರಣೋತ್ತರ ಮಿಲಿಟರಿ ಪ್ರಶಸ್ತಿಗಳ ಪಟ್ಟಿಯನ್ನು ಉಲ್ಲೇಖಿಸಿದ ಅವರು, ಆಗಸ್ಟ್ 14 ರಂದು ಪಾಕಿಸ್ತಾನವು ತಿಳಿಯದೆಯೇ ಈ ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆ ಮಾಡಿರಬಹುದು. ಅವರು ನೀಡಿದ ಮರಣೋತ್ತರ ಪ್ರಶಸ್ತಿಗಳ ಸಂಖ್ಯೆಯಿಂದ ಗಡಿಯಲ್ಲಿ ಸಾವನ್ನಪ್ಪಿದ ಸೈನಿಕರ ಸಂಖ್ಯೆ 100 ಕ್ಕಿಂತ ಹೆಚ್ಚಿವೆ ಎಂಬುದನ್ನು ಸೂಚಿಸುತ್ತಿವೆ ಎಂದರು.

    ನಾವು ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿ ದಾಳಿ ಮಾಡಿದ್ದೆವು. ಆದರೆ ಪಾಕಿಸ್ತಾನ ಈ ದಾಳಿಗೆ ಪ್ರತಿಯಾಗಿ ನಮ್ಮ ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದಕ್ಕೆ ಪ್ರತಿ ದಾಳಿ ನಡೆಸಿದೆವು. ನಾವು ಅವರ 11 ವಾಯು ನೆಲೆಗಳನ್ನು ಹೊಡೆದು ಹಾಕಿದ್ದೇವೆ. ನಾಲ್ಕು ರಾಡಾರ್‌ಗಳನ್ನು ಧ್ವಂಸ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ:  ಬಿಹಾರ ಚುನಾವಣೆಗೆ 71 ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ ಬಿಜೆಪಿ – ಸ್ಪೀಕರ್‌ಗೆ ಕೊಟ್ಟಿಲ್ಲ ಟಿಕೆಟ್

    ಭಯೋತ್ಪಾದಕ ದಾಳಿ ನಡೆದರೆ ನಿರ್ಣಾಯಕ ಪ್ರತೀಕಾರ ಇರುತ್ತದೆ. ನಾವು ಪರಮಾಣು ಬ್ಲ್ಯಾಕ್‌ಮೇಲ್‌ಗೆ ಬಲಿಯಾಗುವುದಿಲ್ಲ. ಭಯೋತ್ಪಾದಕರು ಮತ್ತು ಭಯೋತ್ಪಾದನೆಯ ಪ್ರಾಯೋಜಕರ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಮೂರು ವಿಚಾರದ ಬಗ್ಗೆ ಪ್ರಧಾನಿಯವರು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.

  • ಎರಡೂ ಕಡೆಯಿಂದ ಒಂದೇ ಒಂದು ಗುಂಡು ಹೊಡೆಯಬಾರದು: DGMO ಸಭೆಯಲ್ಲಿ ಏನಾಯ್ತು?

    ಎರಡೂ ಕಡೆಯಿಂದ ಒಂದೇ ಒಂದು ಗುಂಡು ಹೊಡೆಯಬಾರದು: DGMO ಸಭೆಯಲ್ಲಿ ಏನಾಯ್ತು?

    ನವದೆಹಲಿ: ಎರಡೂ ಕಡೆಯಿಂದ ಒಂದೇ ಒಂದು ಗುಂಡು ಹಾರಿಸಬಾರದು ಎಂಬ ಮಹತ್ವದ ನಿರ್ಧಾರವನ್ನು ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (DGMO) ನಡೆಸಿದ ಸಭೆಯಲ್ಲಿ ಕೈಗೊಳ್ಳಲಾಗಿದೆ.

    ಭಾರತ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ಪಾಕಿಸ್ತಾನದ ಡಿಜಿಎಂಒ ಮೇಜರ್ ಜನರಲ್ ಕಾಶಿಫ್ ಅಬ್ದುಲ್ಲಾ ಕದನ ವಿರಾಮ (Ceasefire) ಘೋಷಣೆಯಾದ ನಂತರ ಮೊದಲ ಬಾರಿಗೆ ಹಾಟ್‌ಲೈನ್‌ನಲ್ಲಿ ಮಾತನಾಡಿದರು. ಇದನ್ನೂ ಓದಿ: ಮೋದಿ ಭಾಷಣದ ಬೆನ್ನಲ್ಲೇ ಮತ್ತೆ ಪಾಕ್ ಡ್ರೋನ್ ದಾಳಿ

     

    ಎರಡೂ ಕಡೆಯವರು ಒಂದೇ ಒಂದು ಗುಂಡು ಹಾರಿಸಬಾರದು ಅಥವಾ ಪರಸ್ಪರ ಆಕ್ರಮಣಕಾರಿ ಕ್ರಮಗಳನ್ನು ಕೈಗೊಳ್ಳಬಾರದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಿತು ಎಂದು ಮಾಧ್ಯಮ ವರದಿ ಮಾಡಿದೆ.  ಇದನ್ನೂ ಓದಿ: ನಿಮ್ಮ ನ್ಯೂಕ್ಲಿಯರ್‌ ಬ್ಲ್ಯಾಕ್‌ಮೇಲ್‌ಗೆ ನಾವು ಬೆದರಲ್ಲ: ಪಾಕ್‌ಗೆ ಮೋದಿ ಎಚ್ಚರಿಕೆ

    ಗಡಿ ಮತ್ತು ಮುಂಚೂಣಿ ಪ್ರದೇಶಗಳಿಂದ ಸೈನಿಕರನ್ನು ತಕ್ಷಣ ಹಿಂದಕ್ಕೆ ಕರೆಸಿಕೊಳ್ಳಲು ಭಾರತ ಮತ್ತು ಪಾಕಿಸ್ತಾನ ಒಪ್ಪಿಕೊಂಡಿದೆ.

    ಇಂದು ಮಧ್ಯಾಹ್ನ 12 ಗಂಟೆಗೆ ಡಿಜಿಎಂಒ ಸಭೆ ನಿಗದಿಯಾಗಿತ್ತು. ನಂತರ ಇದು ಸಂಜೆ 5 ಗಂಟೆಗೆ ನಡೆಯಿತು.

  • ಪಾಕ್‌ನ 35-40 ಸೈನಿಕರು ಬಲಿ – ಆಪರೇಷನ್‌ ಸಿಂಧೂರ ಬಗ್ಗೆ ಇಂಚಿಂಚು ಮಾಹಿತಿ ಕೊಟ್ಟ ಇಂಡಿಯನ್‌ ಆರ್ಮಿ

    ಪಾಕ್‌ನ 35-40 ಸೈನಿಕರು ಬಲಿ – ಆಪರೇಷನ್‌ ಸಿಂಧೂರ ಬಗ್ಗೆ ಇಂಚಿಂಚು ಮಾಹಿತಿ ಕೊಟ್ಟ ಇಂಡಿಯನ್‌ ಆರ್ಮಿ

    – ಫೋಟೊ, ವೀಡಿಯೋ ಸಾಕ್ಷಿ ಮುಂದಿಟ್ಟು ಸುಳ್ಳುಗಾರ ಪಾಕ್‌ಗೆ ತಿರುಗೇಟು

    ನವದೆಹಲಿ: ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆ ಮೂಲಕ ಪಾಕಿಸ್ತಾನ ಮತ್ತು ಉಗ್ರರಿಗೆ ಕೊಟ್ಟ ಏಟಿನ ಬಗ್ಗೆ ಫೋಟೊ ಸಾಕ್ಷಿಗಳ ಮೂಲಕ ಭಾರತೀಯ ಸೇನೆ (Indian Army) ಇಂಚಿಂಚು ಮಾಹಿತಿಯನ್ನು ಹಂಚಿಕೊಂಡಿದೆ.

    ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್‌ನಲ್ಲಿ ಪಾಕಿಸ್ತಾನ ಸೇನೆಯು ಸುಮಾರು 35ರಿಂದ 40 ಸಿಬ್ಬಂದಿಯನ್ನು ಕಳೆದುಕೊಂಡಿದೆ. ಮೇ 7ರಿಂದ 10ರ ವರೆಗೆ ಈ ಕಾರ್ಯಾಚರಣೆ ನಡೆಯಿತು ಎಂದು ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ (DGMO) ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಶನಿವಾರ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್ ಜೊತೆಗಿನ ಸಂಘರ್ಷದಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ: ಭಾರತೀಯ ಸೇನೆ

    ಪಾಕಿಸ್ತಾನಿ ನಾಗರಿಕರು ಅಥವಾ ಮಿಲಿಟರಿ ಸ್ಥಾಪನೆಗಳ ಮೇಲೆ ನಮ್ಮ ಸೇನೆ ದಾಳಿ ಮಾಡಿಲ್ಲ. ಭಯೋತ್ಪಾದಕರು ಮತ್ತು ಅವರ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದು ನಮ್ಮ ಗುರಿಯಾಗಿತ್ತು ಎಂದು ಸೇನೆ ಸ್ಪಷ್ಟಪಡಿಸಿದೆ.

    ಉಗ್ರರ ನೆಲೆಗಳನ್ನು ಟಾರ್ಗೆಟ್‌ ಮಾಡಿ ಹೊಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಇದರ ಬೆನ್ನಲ್ಲೇ, ಮೇ 7 ರಂದು ಸಂಜೆ ಭಾರತದ ನಮ್ಮ ನಾಗರಿಕ ಮತ್ತು ಮಿಲಿಟರಿ ಪ್ರದೇಶಗಳನ್ನು ಗುರಿಯಾಗಿಸಿ ಪಾಕಿಸ್ತಾನ ಮಾನವರಹಿತ ವೈಮಾನಿಕ ವಾಹನಗಳು (UAV), ಸಣ್ಣ ಡ್ರೋನ್‌ಗಳ ದಾಳಿ ನಡೆಸಿತು. ಅವುಗಳನ್ನು ಭಾರತೀಯ ಸೇನೆ ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ. ಮೂರು ಡ್ರೋನ್‌ಗಳು ದಾಳಿ ಮಾಡುವಲ್ಲಿ ಯಶಸ್ವಿಯಾದರೂ ಕಡಿಮೆ ಹಾನಿಯನ್ನುಂಟು ಮಾಡಿವೆ ಎಂದು ಸೇನೆ ತಿಳಿಸಿದೆ. ಇದನ್ನೂ ಓದಿ: ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ 100 ಕ್ಕೂ ಹೆಚ್ಚು ಉಗ್ರರ ಹತ್ಯೆ: ಭಾರತೀಯ ಸೇನೆ

    ನಾವು ಭಯೋತ್ಪಾದಕರನ್ನು ಮಾತ್ರ ಗುರಿಯಾಗಿಸಿದ್ದೆವು. ಆದರೆ, ಭಾರತದ ನಾಗರಿಕರು ಮತ್ತು ಮಿಲಿಟರಿ ಮೂಲಸೌಕರ್ಯಗಳನ್ನು ಪಾಕಿಸ್ತಾನ ಗುರಿಯಾಗಿಸಿ ದಾಳಿ ನಡೆಸಿತ್ತು. ಅದಕ್ಕೆ ತಕ್ಕ ಪ್ರತ್ಯುತ್ತರ ನಮ್ಮ ಸೇನೆ ನೀಡಿದೆ. ಪ್ರತೀಕಾರವಾಗಿ ನಾವು ಲಾಹೋರ್‌ ಬಳಿ ಮತ್ತು ಗುಜ್ರಾನ್‌ವಾಲಾ ಬಳಿ ರೆಡಾರ್‌ ಸ್ಥಾಪನೆಗಳ ಮೇಲೆ ದಾಳಿ ಮಾಡಿದ್ದೇವೆ ಎಂದು ಮಾಹಿತಿ ನೀಡಿದೆ.

    ಭಾರತದ ಕಾರ್ಯಾಚರಣೆ ಏನಿದ್ದರೂ ಭಯೋತ್ಪಾದಕರ ವಿರುದ್ಧವಷ್ಟೇ. ಪಾಕ್‌ ಜನರು ಮತ್ತು ಮಿಲಿಟರಿ ನೆಲೆ ನಮ್ಮ ದಾಳಿ ಉದ್ದೇಶ ಅಲ್ಲವೇ ಅಲ್ಲ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಪಾಕ್ ದಾಳಿ ಮಾಡಿದರೆ ನಾವು ಭೀಕರ ದಾಳಿ ಮಾಡುತ್ತೇವೆ: ಮೋದಿ ಎಚ್ಚರಿಕೆ

  • 2016ಕ್ಕೂ ಮುನ್ನ ಯಾವುದೇ ಸರ್ಜಿಕಲ್ ಸ್ಟ್ರೈಕ್ ನಡೆದಿಲ್ಲ – ಭಾರತೀಯ ಸೇನೆ

    2016ಕ್ಕೂ ಮುನ್ನ ಯಾವುದೇ ಸರ್ಜಿಕಲ್ ಸ್ಟ್ರೈಕ್ ನಡೆದಿಲ್ಲ – ಭಾರತೀಯ ಸೇನೆ

    ನವದೆಹಲಿ: 2016ರ ಸೆಪ್ಟೆಂಬರ್‍ನಲ್ಲಿ ಉರಿಯಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್‍ನ್ನು ಬಿಟ್ಟರೆ ಅದಕ್ಕೂ ಮುನ್ನ ಯಾವುದೇ ಸರ್ಜಿಕಲ್ ಸ್ಟ್ರೈಕ್ ನಡೆದಿಲ್ಲ ಎಂದು ಭಾರತೀಯ ಸೇನೆ ಹೇಳಿದೆ.

    2016 ಕ್ಕೂ ಮುನ್ನ ಯಾವುದೇ ಸರ್ಜಿಕಲ್ ಸ್ಟ್ರೈಕ್ ನಡೆದಿಲ್ಲ. 2016ರ ಸೆಪ್ಟೆಂಬರ್ ನಲ್ಲಿ ಮೊದಲ ಸರ್ಜಿಕಲ್ ಸ್ಟ್ರೈಕ್ ನಡೆದಿದೆ ಎಂದು ಭಾರತೀಯ ಸೇನೆಯ ಉತ್ತರ ಕಮಾಂಡಿನ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.

    ಸುದ್ದಿಗೋಷ್ಠಿ ವೇಳೆ ಮಾಧ್ಯಮಗಳು ಯುಪಿಎ ಅವಧಿಯಲ್ಲಿ 6 ಸರ್ಜಿಕಲ್ ಸ್ಟ್ರೈಕ್ ನಡೆದಿದ್ಯಾ ಎನ್ನುವ ಪ್ರಶ್ನೆ ಕೇಳಿದ್ದಕ್ಕೆ ಅವರು, ಕೆಲ ದಿನಗಳ ಹಿಂದೆ ಮಾಹಿತಿ ಹಕ್ಕು ಕಾಯಿದೆ (ಆರ್ ಟಿ ಐ) ಅಡಿಯಲ್ಲಿ ಬಂದ ಅರ್ಜಿಯೊಂದಕ್ಕೆ ಡೈರೆಕ್ಟರ್ ಆಫ್ ಜನರಲ್ ಮಿಲಿಟರಿ ಆಪರೇಷನ್ (ಡಿಜಿಎಂಒ) ಈ ಪ್ರಶ್ನೆಗೆ ಉತ್ತರ ನೀಡಿದೆ. ರಾಜಕೀಯ ಪಕ್ಷಗಳು ಏನು ಹೇಳಿದೆಯೋ ಅದು ನನಗೆ ಸಂಬಂಧಿಸಿದ ವಿಚಾರವಲ್ಲ. ಡಿಜಿಎಂಒ ಏನು ಉತ್ತರ ನೀಡಿದೆಯೋ ಅದನ್ನು ಹೇಳುತ್ತಿದ್ದೇನೆ ಎಂದು ತಿಳಿಸಿದರು.

    ಜಮ್ಮು- ಕಾಶ್ಮೀರದ ಮಾಹಿತಿ ಹಕ್ಕು ಕಾರ್ಯಕರ್ತ ರೋಹಿತ್ ಚೌಧರಿ ಯುಪಿಎ ಆಡಳಿದ ಅವಧಿಯಲ್ಲಿ(2004 ರಿಂದ 2014) ಗಡಿ ದಾಟಿ ಉಗ್ರರ ಮೇಲೆ ಸರ್ಜಿಕಲ್ ದಾಳಿ ನಡೆಸಲಾಗಿತ್ತೆ? ದಾಳಿ ನಡೆದಿದ್ದರೆ ಈ ಬಗ್ಗೆ ಮಾಹಿತಿ ನೀಡಿ ಎಂದು ಕೇಳಿದ್ದರು. ಈ ಪ್ರಶ್ನೆಗೆ ಡಿಜಿಎಂಒ ಲಭ್ಯವಿರುವ ದಾಖಲೆಗಳ ಪ್ರಕಾರ 2016ರ ಸೆ.29ಕ್ಕೂ ಮೊದಲು ಸರ್ಜಿಕಲ್ ದಾಳಿ ನಡೆದಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಉತ್ತರಿಸಿತ್ತು.

    ಮೇ 2 ರಂದು ಕಾಂಗ್ರೆಸ್ ಸಂಸದ ರಾಜೀವ್ ಶುಕ್ಲಾ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆಸಿದ 6 ಸರ್ಜಿಕಲ್ ಸ್ಟ್ರೈಕ್ ನಡೆದಿದೆ. ಈ ಮೂಲಕ ನಮ್ಮ ಸರ್ಕಾರದ ಕಾಲದಲ್ಲೂ ಉಗ್ರರ ಮರಣಹೋಮ ಮಾಡಿದ್ದೇವೆ. ಈ ದಾಳಿಯನ್ನು ನಾವು ರಾಜಕೀಯವಾಗಿ ಪ್ರಚಾರಕ್ಕೆ ಬಳಸಿಕೊಂಡಿಲ್ಲ. ಅದರೆ ಮೋದಿ ಅವರ ಸರ್ಕಾರವು ಸೈನ್ಯದ ಶೌರ್ಯವನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡಿದೆ ಎಂದು ದೂರಿದ್ದರು.

    2008 ರಿಂದ 2014ರ ವರೆಗೆ ನಡೆದಿರುವ 6 ಸರ್ಜಿಕಲ್ ಸ್ಟ್ರೈಕ್‍ಗಳ ವಿವರಗಳನ್ನು ಚಿತ್ರಗಳ ಸಮೇತ ಮಾಧ್ಯಮಗಳ ಮುಂದೆ ರಾಜೀವ್ ಶುಕ್ಲಾ ಬಿಡುಗಡೆ ಮಾಡಿದ್ದರು.

    ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪ್ರತಿಕ್ರಿಯಿಸಿ, ಮೋದಿ ದೇಶದಲ್ಲಿ ಆಗಿರುವ ಆರ್ಥಿಕ ಹಿನ್ನಡೆಯನ್ನು ಮರೆಮಾಚಲು ಸೇನೆಯ ಶೌರ್ಯದ ಕಾರ್ಯಗಳ ಬಗ್ಗೆ ಭಾಷಣ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದರು.

    ಜಮ್ಮು ಕಾಶ್ಮೀರದಲ್ಲಿರುವ ಉರಿ ಸೇನಾ ನೆಲೆಯ ಮೇಲಿನ ಉಗ್ರರ ದಾಳಿ ವೇಳೆ 19 ಯೋಧರು ಹುತಾತ್ಮರಾಗಿದ್ದರು. ಈ ದಾಳಿಗೆ ಪ್ರತೀಕಾರ ಎಂಬಂತೆ ಭಾರತೀಯ ಸೇನೆ ಸೆ.29 ರಂದು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ಶಿಬಿರಗಳನ್ನು ಧ್ವಂಸ ಮಾಡಿ ಬಂದಿತ್ತು.

  • ಈ ಹಿಂದೆ ಸರ್ಜಿಕಲ್ ಸ್ಟ್ರೈಕ್ ನಡೆದ ಬಗ್ಗೆ ದಾಖಲೆಗಳಿಲ್ಲ: ಡಿಜಿಎಂಒ

    ಈ ಹಿಂದೆ ಸರ್ಜಿಕಲ್ ಸ್ಟ್ರೈಕ್ ನಡೆದ ಬಗ್ಗೆ ದಾಖಲೆಗಳಿಲ್ಲ: ಡಿಜಿಎಂಒ

    ನವದೆಹಲಿ: ಸೆಪ್ಟೆಂಬರ್ 29, 2016ಕ್ಕೂ ಮೊದಲು ಸರ್ಜಿಕಲ್ ದಾಳಿ ನಡೆದ ಬಗ್ಗೆ ದಾಖಲೆಗಳಿಲ್ಲ ಎಂದು ಮಿಲಿಟರಿ ಕಾರ್ಯಾಚರಣೆಗಳ ಮಹಾ ನಿರ್ದೇಶನಾಲಯ (ಡಿಜಿಎಂಒ) ತಿಳಿಸಿದೆ.

    2016ರ ಸೆಪ್ಟೆಂಬರ್‍ನಲ್ಲಿ ನಡೆದ ದಾಳಿಗೂ ಮುನ್ನ ಈ ಹಿಂದೆ ಭಾರತೀಯ ಸೇನೆ ಸರ್ಜಿಕಲ್ ದಾಳಿ ನಡೆಸಿತ್ತಾ ಎನ್ನುವ ಪ್ರಶ್ನೆಯನ್ನು ಮಾಹಿತಿ ಹಕ್ಕಿನ ಅಡಿ ಕೇಳಲಾಗಿತ್ತು. ಈ ಪ್ರಶ್ನೆಗೆ ಡಿಜಿಎಂಒ ಈ ಹಿಂದೆ ಸರ್ಜಿಕಲ್ ಸ್ಟೈಕ್ ರೀತಿಯ ದಾಳಿ ನಡೆದ ಬಗ್ಗೆ ನಮ್ಮಲ್ಲಿ ಯಾವುದೇ ದಾಖಲೆಗಳು ಇಲ್ಲ ಎಂದು ಉತ್ತರಿಸಿದೆ.

    2004ರಿಂದ 2014ರಂದು ಸೇನೆಯು ಯಾವುದಾದರೂ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದರೆ ಅದರ ಮಾಹಿತಿ ತಿಳಿಸಿ. ಅಷ್ಟೇ ಅಲ್ಲದೇ ನಿಮ್ಮ ಪ್ರಕಾರ ಸರ್ಜಿಕಲ್ ಸ್ಟ್ರೈಕ್ ಎಂದರೆ ಏನು ಅದರ ವ್ಯಾಖ್ಯೆಯನ್ನು ತಿಳಿಸಿ ಎಂದು ಪ್ರಶ್ನೆ ಕೇಳಲಾಗಿತ್ತು.

    ಈ ಪ್ರಶ್ನೆಗೆ, ಓಪನ್ ಸೋರ್ಸ್ ಪ್ರಕಾರ ಪೂರ್ವಭಾವಿ ಸಿದ್ಧತೆಯೊಂದಿಗೆ ಒಂದು ಶತ್ರು ನೆಲೆಗೆ ನುಗ್ಗಿ ಹೆಚ್ಚು ಹಾನಿಯಾಗದಂತೆ ನಿರ್ಧಿಷ್ಟ ಪ್ರದೇಶದಲ್ಲಿ ದಾಳಿ ನಡೆಸಿ ಸುರಕ್ಷಿತವಾಗಿ ಸೇನೆ ಹಿಂದಿರುಗಿ ಬರುವುದು ಎಂದು ಉತ್ತರಿಸಿದೆ.

    ಸಪ್ಟೆಂಬರ್ 28, 29ರ ಮಧ್ಯರಾತ್ರಿ ವೇಳೆ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಪ್ರವೇಶಿಸಿ ಸರ್ಜಿಕಲ್ ದಾಳಿ ನಡೆಸಿ 20ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಿತ್ತು. ಈ ಕಾರ್ಯಾಚರಣೆ ಬಳಿಕ ಸುದ್ದಿಗೋಷ್ಠಿ ನಡೆಸಿ ಡಿಜಿಎಂಒ ಅಧಿಕಾರಿ ಕಾರ್ಯಾಚರಣೆಯ ವಿವರವನ್ನು ನೀಡಿದ್ದರು.