Tag: ಡಿಗ್ರಿ ಕಾಲೇಜ್

  • ಅಕ್ಟೋಬರ್ 1 ರಿಂದ ಆಫ್‍ಲೈನ್ ಡಿಗ್ರಿ ಕ್ಲಾಸ್‌ ಓಪನ್‌ – ಮಾರ್ಗಸೂಚಿ ಏನಿರಬಹುದು?

    ಅಕ್ಟೋಬರ್ 1 ರಿಂದ ಆಫ್‍ಲೈನ್ ಡಿಗ್ರಿ ಕ್ಲಾಸ್‌ ಓಪನ್‌ – ಮಾರ್ಗಸೂಚಿ ಏನಿರಬಹುದು?

    ಬೆಂಗಳೂರು: ಕೋವಿಡ್‌ 19ನಿಂದಾಗಿ ಸದ್ಯ ಆನ್‌ಲೈನ್‌ನಲ್ಲಿ ನಡೆಯುತ್ತಿರುವ ಡಿಗ್ರಿ ತರಗತಿಗಳು ಅಕ್ಟೋಬರ್‌ 1 ರಿಂದ ಆಫ್‍ಲೈನ್ ಆಗಲಿದೆ. ಎಂದಿನಂತೆ ತರಗತಿ ಆರಂಭಿಸುವ ಸಂಬಂಧ ಸರ್ಕಾರದ ಮಟ್ಟದಲ್ಲಿ ಸಿದ್ಧತೆಗಳು ಆರಂಭವಾಗಿದೆ.

    ಕೊರೊನಾದೊಂದಿಗೆ ಬದುಕಬೇಕಿರುವ ಕಾರಣ ಉನ್ನತ ಶಿಕ್ಷಣ ಇಲಾಖೆ ಅಕ್ಟೋಬರ್‌ ತಿಂಗಳಿನಿಂದ ಡಿಗ್ರಿ ಕಾಲೇಜು ಆರಂಭಿಸಲು ಮುಂದಾಗುತ್ತಿದೆ. ಈಗ ಹೇಗೆ ಕಚೇರಿಗಳನ್ನು ತೆರೆಯಲು ಸರ್ಕಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆಯೋ ಅದೇ ರೀತಿಯಾಗಿ ಕಾಲೇಜಿನಲ್ಲಿ ಅಳವಡಿಸಬೇಕಾದ ನಿಯಮಗಳ ಬಗ್ಗೆ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಿದೆ.

    ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಉನ್ನತ ಶಿಕ್ಷಣ ಸಚಿವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ್‌ ನಾರಾಯಣ್‌, ಸೆಪ್ಟೆಂಬರ್ 1ರಿಂದಲೇ ಪದವಿ ಕಾಲೇಜುಗಳ ಶೈಕ್ಷಣಿಕ ವರ್ಷವನ್ನು ಆನ್​​ಲೈನ್ ಮೂಲಕ ಪೂರ್ಣ ಪ್ರಮಾಣದಲ್ಲಿ ಆರಂಭ ಮಾಡಲಾಗುತ್ತಿದೆ. ಅಕ್ಟೋಬರ್ ತಿಂಗಳಿನಿಂದ ನೇರ(ಆಫ್‌ಲೈನ್) ತರಗತಿಗಳು ಶುರುವಾಗಲಿವೆ ಎಂದು ಅಧಿಕೃತವಾಗಿ ಪ್ರಕಟಿಸಿದ್ದಾರೆ.

    ಕೇಂದ್ರ ಸರಕಾರದಿಂದ ನೇರವಾಗಿ ತರಗತಿಗಳನ್ನು ಆರಂಭ ಮಾಡುವುದರ ಬಗ್ಗೆ ಮಾರ್ಗಸೂಚಿ ಬರಬೇಕಿದೆ. ತರಗತಿಗಳನ್ನು ಆರಂಭಿಸುವ ಬಗ್ಗೆ ಈಗಾಗಲೇ ಯುಜಿಸಿ ಮಾರ್ಗಸೂಚಿಯಂತೆ ರಾಜ್ಯ ಸರಕಾರ ಎಲ್ಲ ರೀತಿಯ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕೇಂದ್ರ ಸರ್ಕಾರದ ಆದೇಶ ಬರುತ್ತಿದ್ದಂತೆಯೇ ಈ ನಿಟ್ಟಿನಲ್ಲಿ ರಾಜ್ಯವು ಕಾರ್ಯೋನ್ಮುಖವಾಗಲಿದೆ ಎಂದು ತಿಳಿಸಿದರು.

    ಮಾರ್ಗಸೂಚಿ ಏನಿರಬಹುದು?
    – ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಡ್ಡಾಯ
    – ಪ್ರವೇಶದ್ವಾರದಲ್ಲಿ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ಯಾನಿಂಗ್ ಮಾಡಿ ಒಳಗಡೆ ಬಿಡಬೇಕು
    – ಸ್ಯಾನಿಟೈಸ್ ವ್ಯವಸ್ಥೆ ಮಾಡಬೇಕು
    – ಕಾಲೇಜ್ ಕ್ಯಾಂಪಸ್‍ನಲ್ಲಿ ವಿದ್ಯಾರ್ಥಿಗಳು ಗುಂಪು ಸೇರಬಾರದು


    – ತರಗತಿಗಳಲ್ಲಿ 3 ಅಡಿ ಅಂತರದಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳಬೇಕು (ಆಡಳಿತ ಮಂಡಳಿ ನೋಡಿಕೊಳ್ಳಬೇಕು.)
    – ವಿವಿ ಕ್ಯಾಂಪಸ್‍ನಲ್ಲಿ ಆರೋಗ್ಯ ತಪಾಸಣಾ ಕೇಂದ್ರ ಸ್ಥಾಪಿಸಬೇಕು
    – ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಸಹಾಯವಾಣಿ ಸ್ಥಾಪನೆ ಮಾಡಬೇಕು
    – ಪ್ರೇಕ್ಷಕರಿಲ್ಲದೇ ಕ್ರೀಡಾ ಚಟುವಟಿಕೆ ನಡೆಯಬೇಕು
    – ಗ್ರಂಥಾಲಯದಲ್ಲಿ ಹೆಚ್ಚು ವಿದ್ಯಾರ್ಥಿಗಳು ಸೇರದಂತೆ ಕ್ರಮವಹಿಸಬೇಕು

  • ಹಸಿಬಿಸಿ ದೃಶ್ಯಗಳ ಡಿಗ್ರಿ ಕಾಲೇಜ್ – ಭಾರೀ ಚರ್ಚೆಗೆ ಕಾರಣವಾಯ್ತು ಟ್ರೈಲರ್

    ಹಸಿಬಿಸಿ ದೃಶ್ಯಗಳ ಡಿಗ್ರಿ ಕಾಲೇಜ್ – ಭಾರೀ ಚರ್ಚೆಗೆ ಕಾರಣವಾಯ್ತು ಟ್ರೈಲರ್

    ಹೈದರಾಬಾದ್: ಕಾಲೇಜು ವಿದ್ಯಾರ್ಥಿಗಳ ಕಥೆಯನ್ನಾಧರಿಸಿ ಹಲವು ಚಿತ್ರಗಳು ಈಗಾಗಲೇ ಎಲ್ಲ ಭಾಷೆಗಳಲ್ಲಿ ಹಲವು ಸಿನಿಮಾಗಳು ಬಿಡುಗಡೆಗೊಂಡಿವೆ. ಬಹುತೇಕ ಸಿನಿಮಾಗಳು ಯುವ ಪೀಳಿಗೆಯ ಕಾಲೇಜು ವಿದ್ಯಾರ್ಥಿಗಳು ನೋಡಿ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಹದಿಹರೆಯದ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳ ತೆಲುಗು ಸಿನಿಮಾ ಬಿಡುಗಡೆಯಾಗಲು ಸಿದ್ಧಗೊಂಡಿದ್ದು, ಟ್ರೈಲರ್ ಸದ್ದು ಸಿಕ್ಕಾಪಟ್ಟೆ ಜೋರಾಗಿದೆ.

    ತೆಲುಗಿನ ಹೊಸ ಕಲಾವಿದರನ್ನು ಒಳಗೊಂಡ ‘ಡಿಗ್ರಿ ಕಾಲೇಜ್’ ಚಿತ್ರದ ಟ್ರೈಲರ್ ಔಟ್ ಆಗಿದ್ದು, ಹಸಿಬಿಸಿ ದೃಶ್ಯಗಳು ಪಡ್ಡೆಹುಡುಗರನ್ನ ಸೆಳೆಯುತ್ತಿವೆ. ಇದೊಂದು ನೈಜ ಕಥೆಯಾಧಾರಿತ ಸಿನಿಮಾ ಎನ್ನಲಾಗುತ್ತಿದ್ದು, ಆಕರ್ಷಣೆಯ ಪ್ರೇಮ ಸಲ್ಲಾಪ, ಭವಿಷ್ಯದ ಕಲ್ಪನೆಯಿಲ್ಲದೇ ಲವ್ ಕಥೆಯಲ್ಲಿ ಬೀಳುವ ವಿದ್ಯಾರ್ಥಿಗಳು. ಒಂದು ಜೋಡಿಯ ಸುತ್ತ ಸಾಗುವ ಕಥೆ, ಜೋಡಿಯ ಪ್ರೇಮಕ್ಕೆ ಸಾಥ್ ನೀಡುವ ಗೆಳೆಯರು, ಪೋಷಕರ ವಿರೋಧ ಹೀಗೆ ಎಲ್ಲವನ್ನು ಟ್ರೈಲರ್ ಒಳಗೊಂಡಿದೆ.

    ವರುಣ್, ಶ್ರೀ ದಿವ್ಯಾ, ದುವ್ವಸಿ ಮೋಹನ್, ಜಯವಾಣಿ, ಶ್ರೀನಿವಾಸ್ ಮದನ್ ಮತ್ತು ಆರ್‍ಕೆ ಹೀಗೆ ಹೊಸಬರನ್ನು ಒಳಗೊಂಡ ದೊಡ್ಡ ತಾರಾಗಣ ಡಿಗ್ರಿ ಕಾಲೇಜ್‍ನಲ್ಲಿದೆ. ನರಸಿಂಹ ನಂದಿ ನಿರ್ದೇಶನ, ಶ್ರೀ ಲಕ್ಷ್ಮಿ ನರಸಿಂಹ ಸಿನಿಮಾ ಬ್ಯಾನರ್ ನಲ್ಲಿ ಸಿನಿಮಾ ಮೂಡಿ ಬಂದಿದೆ.

    ಬಿಡುಗಡೆಯಾದ ಮೂರು ದಿನಗಳಲ್ಲಿ 9 ಲಕ್ಷಕ್ಕೂ ಅಧಿಕ ವ್ಯೂವ್, 7 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ. ಸಿನಿಮಾದ ಟ್ರೈಲರ್ ಟಾಲಿವುಡ್ ಅಂಗಳದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಇದೂವರೆಗೂ ಇಂತಹ ಹಾಟ್ ಸಿನಿಮಾ ಬಂದಿಲ್ಲ ಎಂಬ ಮಾತುಗಳು ತೆಲುಗು ಸಿನಿ ಅಂಗಳದಲ್ಲಿ ಕೇಳಿ ಬರುತ್ತಿವೆ.

    https://www.youtube.com/watch?v=wWWJkO8Hz9s